Thursday, 7 December 2017
ಮಹಿಳೆಯ ಜಾತಕದಲ್ಲಿ ಗ್ರಹಯೋಗ
ಪಿ. ಹರಿಶ್ಚಂದ್ರ ಸಾಲಿಯಾನ್ ಮೂಲ್ಕಿ
ಪುರುಷ ಮತ್ತು ಸ್ತ್ರೀ ಜಾತಕದಲ್ಲಿ ಭಿನ್ನ ಫಲಗಳಿರುತ್ತದೆ. ಸ್ತ್ರೀಯರ ಜಾತಕದಲ್ಲಿ ಪ್ರಥಮ ಚತುರ್ಥ ಪಂಚಮ ಸಪ್ತಮ ಮತ್ತು ದಶಮ ಸ್ಥಾನಗಳು ಬಹಳ ಮಹತ್ವದಾಗಿರುತ್ತದೆ. ಗ್ರಹಗಳ ಚಲನೆಯಿಂದ ಈ ಸ್ಥಾನಗಳು ಅವರ ಜೀವನದಲ್ಲಿ ಕಷ್ಟ ನಷ್ಟಗಳನ್ನು ನಿರ್ಣಯ ಮಾಡಬಹುದು. ಸ್ತ್ರೀಯ ಜಾತಕ ಬಲಿಷ್ಠವಾಗಿದ್ದರೆ ಅವಳ ಕೈ ಹಿಡಿಯುವ ಗಂಡನ ಜಾತಕದಲ್ಲಿ ಅನಿಷ್ಟ ಯೋಗ ಇದ್ದರೆ ಅದು ಕಡಿಮೆಯಾಗುತ್ತದೆ. ಎಷ್ಟೋ ಮಂದಿ ಗಂಡಸರು ಮದುವೆಯಾದ ನಂತರ ಅನುಕೂಲಸ್ಥರಾದವರು ಇದ್ದಾರೆ. ಸ್ತ್ರೀಯ ಜಾತಕದಲ್ಲಿ ಚಂದ್ರನು ಬಲಿಷ್ಠವಾಗಿ ಯಾವುದೇ ಪಾಪಗ್ರಹದೊಂದಿಗೆ ಇರುವುದು ಅಥವಾ ಪಾಪಗ್ರಹದ ದೃಷ್ಟಿ ಇದ್ದರೆ - ಇದು ಬಹಳ ಶುಭಫಲ ಕೊಡುವುದು. ಇಂತವರ ಜೀವನ ಸುಖದಲ್ಲಿಯೇ ಸಾಗುವುದು. ತೃತೀಯ ಷಷ್ಟ ಇಲ್ಲವೆ ಏಕಾದಶ ಸ್ಥಾನದಲ್ಲಿ ರವಿ ಇಲ್ಲವೆ ಮಂಗಳ ಬಲಿಷ್ಠನಾಗಿದ್ದರೆ ಇವಳನ್ನು ಮದುವೆಯಾಗುವ ಗಂಡನು ದರಿದ್ರನಾಗಿದ್ದರೂ ನಂತರ ಸಂಪತ್ತು ಕೂಡಿ ಸುಖವನ್ನು ಅನುಭವಿಸುತ್ತಾನೆ.
ಸ್ತ್ರೀಯರ ಲಗ್ನ ಇಲ್ಲವೆ ಸಪ್ತಮದಲ್ಲಿ ಪ್ರಬಲ ಶುಭಗ್ರಹ ಇದ್ದರೆ ಅಥವಾ ಆ ಸ್ಥಾನಗಳ ಅಧಿಪತಿಗಳು ಶುಭಗ್ರಹ ದೊಂದಿಗೆ ಇದ್ದರೆ ಇವರು ಜೀವನದಲ್ಲಿ ಸುಖವಂತರಾಗಿರುತ್ತಾರೆ. ಸ್ತ್ರೀಯರ ಜಾತಕದಲ್ಲಿ ತೃತೀಯಾ ಷಷ್ಟ, ಸಪ್ತಮ ನವಮ, ದಶಮ ಮತ್ತು ಏಕಾದಶ ಸ್ಥಾನದಲ್ಲಿ ಯಾವುದಾದರೂ ಸ್ಥಾನದಲ್ಲಿ ಗುರು ಶುಕ್ರ ಇಲ್ಲವೆ ಚಂದ್ರ ಬಲಿಷ್ಠವಾಗಿದ್ದರೆ ಮತ್ತು ಆ ಗ್ರಹಗಳ ಮೇಲೆ ಗೋಚರದಲ್ಲಿ ಗುರು ಶುಕ್ರ ಇಲ್ಲವೆ ಬುಧ ಗ್ರಹಗಳು ಬರುವ ಕಾಲಕ್ಕೆ ಅನುಕೂಲವಂತರಾಗುತ್ತಾರೆ.
ತೃತೀಯಾ ಪಂಚಮ ನವಮ ಹಾಗೂ ಏಕಾದಶ ಸ್ಥಾನದಲ್ಲಿ ಶುಭಗ್ರಹ ಇದ್ದರೆ ಆ ಸ್ಥಾನಗಳಲ್ಲಿ ಬಲಿಷ್ಠವಾದ ಬುಧ ಶುಕ್ರ ಗುರು ಇಲ್ಲವೆ ಚಂದ್ರ ಇರಬೇಕು. ಇಂತಹ ಯೋಗ ಇದ್ದ ಸ್ತ್ರೀಯ ಬುದ್ಧಿ ಬಹಳ ತೀಕ್ಷ್ಣವಾಗಿರುತ್ತದೆ. ಈ ಯೋಗದಿಂದ ಕೂಡಿದ ಸ್ತ್ರೀಯ ಲಗ್ನದಲ್ಲಿ ಇಲ್ಲದ ಸಪ್ತಮ ಸ್ಥಾನದಲ್ಲಿ ಶುಭಗ್ರಹ ಇದ್ದರೆ ಅವಳು ವಿದ್ಯೆಯಲ್ಲಿ ಪ್ರವೀಣಳಾಗುತ್ತಾಳೆ. ಈ ಸ್ಥಾನದಲ್ಲಿ ಶನಿ, ಮಂಗಳ, ರಾಹು, ಕೇತು ಈ ಗ್ರಹಗಳಲ್ಲಿ ಯಾವುದೇ ಗ್ರಹ ಇದ್ದರೂ ಸಾಮಾನ್ಯ ಬುದ್ಧಿವಂತಳಾಗುತ್ತಾಳೆ. ಕುಟುಂಬ ಸ್ಥಾನದ ಸುಖವನ್ನು ದ್ವಿತೀಯ ಸ್ಥಾನವು ತೋರಿಸುವುದು ಈ ಸ್ಥಾನದಲ್ಲಿ ಶುಭ ಗ್ರಹ ಇದ್ದರೆ ಕುಟುಂಬ ಸುಖ ದೊರೆಯುವುದು.
ಗಂಡಸರ ಜಾತಕದಲ್ಲಿ ಗ್ರಹಗಳು ಇಲ್ಲದ ಪಕ್ಷ ದಲ್ಲಿ ಚಂದ್ರನು ಯಾವ ರಾಶಿಯಲ್ಲಿರುವನೋ ಆ ರಾಶಿಯ ಗುಣ ಧರ್ಮದಂತೆ ಪತ್ನಿಯು ಸಿಗುತ್ತಾಳೆ. ಸ್ತ್ರೀಯ ಜಾತಕದಲ್ಲಿ ಸಪ್ತಮ ಸ್ಥಾನದಲ್ಲಿ ಗ್ರಹಗಳಲ್ಲದಿದ್ದರೆ ರವಿ ಇದ್ದ ರಾಶಿಯ ಅಧಿಪತಿಯ ಗ್ರಹದ ಗುಣ ಧರ್ಮದಂತೆ ಗಂಡನು ಸಿಗುತ್ತಾನೆ.
sangraha
Subscribe to:
Post Comments (Atom)
No comments:
Post a Comment