Thursday, 7 December 2017

ಗುರುಗ್ರಹ ಅಸ್ತದ ಪರಿಣಾಮ

ಗ್ರಹಗಳಲ್ಲಿ ಗುರುಗ್ರಹವು ಎಲ್ಲಾ ಕಾರ‍್ಯಕ್ಕೆ ಶುಭಗ್ರಹ, ಈ ಶುಭಗ್ರಹವು ಅಸ್ತನಾಗಿದ್ದರೆ ಆಗ ಶುಭ ಕೆಲಸಗಳನ್ನು ಮಾಡುವುದಕ್ಕಾಗುವುದಿಲ್ಲ. ದಿನಾಂಕ 16-10-2017ರಿಂದ 8-11-2017ರ ವರೆಗೆ ಗುರುಗ್ರಹ ಅಸ್ತನಾಗಿರುತ್ತಾನೆ. ಸೀಮಂತ ಜಾತಕರ್ಮ, ಅನ್ನದಾನ ನಿತ್ಯ ನಡೆಯುವ ಕಾರ‍್ಯಗಳನ್ನು ಗುರು ಶುಕ್ರರು ಅಸ್ತ ಇರುವಾಗ ಮಾಡಬಹುದು. ತೀರ್ಥಯಾತ್ರೆ ಮಾಡುವುದನ್ನು ಮಾಡಬಹುದು. ಗೋದಾವರಿ ತೀರದ ಪ್ರದೇಶದಲ್ಲಿ ಗಯೆಯಲ್ಲಿ ಶ್ರೀಶೈಲದಲ್ಲಿ ಗುರು-ಶುಕ್ರರ ಮೌಡ್ಯದ ದೋಷ ಇಲ್ಲವೆಂದು ಹೇಳುತ್ತಾರೆ. ವೇದಾಧಿಕಾರವಿಲ್ಲದ ಜನಾಂಗಕ್ಕೆ ಗುರು ಅಸ್ತನಾಗಿದ್ದು ಶುಕ್ರ ಅಸ್ತನಾಗಿಲ್ಲದೆ ಇದ್ದರೆ ಶುಭಕಾರ‍್ಯ ಮಾಡಬಹುದೆಂದು ಹೇಳುತ್ತಾರೆ. ಬೇರೆ ಮಹೂರ್ತ ಶುಭವಾಗಿದ್ದು ಗುರು ಶುಕ್ರರಲ್ಲಿ ಒಬ್ಬರ ಅಸ್ತ ಒಬ್ಬರ ಉದಯ ಇದ್ದರೆ ಶುಭ ಕೆಲಸ ಮಾಡಬಹುದೆಂದು ಇದೆ. ಅನಿವಾರ‍್ಯ ಸಮಯದಲ್ಲಿ ಅಗತ್ಯವಾಗಿ ಮಾಡಬೇಕಾದ ವಿವಾಹ ಕಾರ‍್ಯವನ್ನು ಗ್ರಹ ಅಸ್ತಕ್ಕೆ ಶಾಂತಿ ಮಾಡಿ ಮಾಡಬಹುದೆಂದು ಹೇಳಿದ್ದಾರೆ. ಕಟ್ಟಡಕ್ಕೆ ಶಿಲಾನ್ಯಾಸ, ಪ್ರತಿಷ್ಠೆ, ಗ್ರಹ ಪ್ರವೇಶ, ಬಾವಿ ತೊಡುವುದು, ಮದುವೆ ಉಪನಯನಗಳು, ತೀರ್ಥಯಾತ್ರೆ ಕರ್ಣವೇದ ಇದನ್ನು ಗುರು ಮೌಡ್ಯ ಇರುವ ಕಾಲದಲ್ಲಿ ಮಾಡಬಾರದೆಂದು ಇದೆ. ಸುದರ್ಶನ ಹೋಮ, ಅಘೋರ ಹೋಮ, ಪ್ರಾಯಶ್ಚಿತ್ತಗಳನ್ನು ಗುರು ಶುಕ್ರ ಮೌಡ್ಯ ಇದ್ದರೂ ಮಾಡಬಹುದೆಂದು ಹೇಳುತ್ತಾರೆ ಆದರೆ ಕೆಲವು ಹಿರಿಯ ಅನುಭವಿಗಳು ಪ್ರಾಯಶ್ಚಿತ್ತ ಕರ್ಮಗಳನ್ನು ಸಮಯ ಸಂದರ್ಭ ನೋಡಿ ಮಾಡಬೇಕು ಎನ್ನುತ್ತಾರೆ.

No comments:

Post a Comment