Friday, 8 December 2017
ವಿವಾಹವಾಗುವ ಸ್ತ್ರೀ ಲಕ್ಷಣಗಳು ಹೀಗಿರಬೇಕೆನ್ನುತ್ತದೆ ಭವಿಷ್ಯ ಪುರಾಣ
ವಿರುದ್ಧ ಸ್ವಭಾವ ಇರುವ ಇಬ್ಬರು ವ್ಯಕ್ತಿಗಳನ್ನು ಮದುವೆ ಒಂದು ಮಾಡುತ್ತದೆ. ಹಿಂದೂ ವಿವಾಹ ಪದ್ಧತಿಯಲ್ಲಿ ಜಾತಕಕ್ಕೆ ಬಹಳಷ್ಟು ಪ್ರಾಮುಖ್ಯತೆ ಇದೆ. ಇವುಗಳ ಪ್ರಕಾರ ಯುವಕ ಯುವತಿಯ ಗುಣಾಗುಣಗಳನ್ನು ತಾಳೆಹಾಕಲಾಗುತ್ತದೆ. ಜಾತಕದಲ್ಲಿನ ಗ್ರಹ ಸ್ಥಿತಿ, ಅವುಗಳ ಸಂಚಾರದ ಮೇಲೆ ಭವಿಷ್ಯ ಆಧಾರಪಟ್ಟಿರುತ್ತದೆಂಬುದು ಭಾರತೀಯರ, ಮುಖ್ಯವಾಗಿ ಹಿಂದೂಗಳ ನಂಬಿಕೆ.
ಕೇವಲ ಜಾತಕಗಳಲ್ಲಷ್ಟೇ ಅಲ್ಲ ಸ್ತ್ರೀಯ ದೈಹಿಕ ಲಕ್ಷಣಗಳೂ ಸಹ ಭವಿಷ್ಯದಲ್ಲಿ ಪ್ರಭಾವ ಬೀರುತ್ತವೆ ಎಂಬುದು ಕೆಲವರ ವಾದ. ಪುರಾತನ ಗ್ರಂಥವಾದ ಭವಿಷ್ಯ ಪುರಾಣದಲ್ಲಿ ವಿವಾಹ ಮಾಡಿಕೊಳ್ಳುವ ಮಹಿಳೆಯರಿಗೆ ಇರಬೇಕಾದ ದೈಹಿಕ ಲಕ್ಷಣಗಳ ಬಗ್ಗೆ ತಿಳಿಸಲಾಗಿದೆ. ಸ್ತ್ರೀಯರಿಗೆ ಈ ರೀತಿಯ ಲಕ್ಷಣಗಳಿದ್ದರೆ ವಿವಾಹದ ಬಳಿಕ ಗಂಡನಿಗೆ ಅಪಾರವಾದ ಅದೃಷ್ಟ, ಸಂಪತ್ತು ಸಿದ್ಧಿಸುತ್ತದಂತೆ. ದಂತಪಂಕ್ತಿ ವಕ್ರವಾಗಿ, ಅಡ್ಡದಿಡ್ಡಿಯಾಗಿ ಇಲ್ಲದ ಮಹಿಳೆಯರು ವಿವಾಹದ ಬಳಿಕ ಜೀವನ ಸಂಗಾತಿಗೆ ಅನುಕೂಲವಾಗಿ, ಸಮಚಿತ್ತದಿಂದ ಇರುತ್ತಾರೆ. ಒಂದು ವೇಳೆ ಹಲ್ಲುಗಳ ನಡುವೆ ಖಾಲಿ ಜಾಗ ಇದ್ದರೆ ನಿರಂತರ ಕಲಹ ತಪ್ಪಿದ್ದಲ್ಲ ಎನ್ನುತ್ತದೆ ಭವಿಷ್ಯ ಪುರಾಣ.
ಮಹಿಳೆ ಪಾದಗಳಿಗೆ, ಜೀವನ ಸಂಗಾತಿಯ ಯಶಸ್ಸಿಗೆ ಸಂಬಂಧ ಇರುತ್ತದಂತೆ. ಪಾದಗಳು ಪೇಲವ ಬಣ್ಣದಲ್ಲಿದ್ದರೆ ಹೆಚ್ಚು ಕಷ್ಟಗಳಿಗೆ ಅದು ಸಂಕೇತ. ಪಾದ ಕೆಂಪು ಅಥವಾ ಗುಲಾಬಿ ಬಣ್ಣದಲ್ಲಿದ್ದರೆ ಗಂಡನಿಗೆ ಸಂಪತ್ತು, ಸ್ಥಾನಮಾನಗಳು ಹೆಚ್ಚುತ್ತವಂತೆ.ಹಣೆಯ ಮೇಲೆ ಮೂರು ಗೆರೆಗಳು ಇರುವ ಮಹಿಳೆಯನ್ನು ಮದುವೆಯಾದರೆ ಸಂಗಾತಿಗೆ ಅದು ದೊಡ್ಡ ಅದೃಷ್ಟ ಎಂದು ನಂಬುತ್ತಾರೆ. ಇವರಿಗೆ ಶಿವನ ಆಶೀರ್ವಾದ ಇರುವುದರಿಂದ ಈ ರೀತಿ ನಡೆಯುತ್ತದಂತೆ.
ಕಾಂತಿಯುತವಾದ, ಮೃದುವಾದ ಚರ್ಮ ಇರುವ ಮಹಿಳೆಯರು ಅನುಕೂಲಸ್ಥರಾಗಿ ಬದುಕುತ್ತಾರೆ. ಈ ರೀತಿ ಇರುವವರು ಗಂಡನಿಗೆ ಯಾವಾಗಲೂ ಒತ್ತಾಸೆಯಾಗಿ ನಿಲ್ಲುತ್ತಾರಂತೆ. ಚರ್ಮದ ಮೇಲೆ ಗೆರೆಗಳು, ಸುಕ್ಕುಗಳು ಇದ್ದರೆ ಗಂಡನಿಗೆ ಕಷ್ಟಗಳು ತಪ್ಪಿದ್ದಲ್ಲ, ದುರದೃಷ್ಟ ಅವರನ್ನು ಕಾಡುತ್ತಿರುತ್ತದೆ. ಅಷ್ಟೇ ಅಲ್ಲದೆ ಇವರು ಸದಾ ಗಲಾಟೆಯಲ್ಲೇ ಕಾಲ ತಳ್ಳುತ್ತಾರಂತೆ.
ಚಿಕ್ಕದಾಗಿರುವಂತಹ ಕುತ್ತಿಗೆ ಆನಂದಕ್ಕೆ, ಕಾರ್ಪಣ್ಯಕ್ಕೆ ಚಿನ್ಹೆ ಇದ್ದಂತೆ. ಮಹಿಳೆಯರ ಕುತ್ತಿಗೆ ಮೇಲೆ ಗೆರೆಗಳು ಸ್ಪಷ್ಟವಾಗಿ ಕಾಣಿಸುತ್ತಿದ್ದರೆ ಅದೃಷ್ಟಕ್ಕೆ ಸಂಕೇತವಂತೆ.
ಮದುವೆ ಎಂಬ ಅಂಶದಲ್ಲಿ ಮಹಿಳೆಯರ ಹುಬ್ಬುಗಳಿಗೆ ಅಧಿಕ ಪ್ರಾಧಾನ್ಯತೆ ಇರುತ್ತದೆ. ಮಹಿಳೆಯರ ಹುಬ್ಬುಗಳು ಬಿಲ್ಲಿನ ಆಕಾರದಲ್ಲಿ ಬಾಗಿದ್ದರೆ ಅವು ಜೀವನದಲ್ಲಿ ಲಕ್ಷ್ಮಿ ಕೃಪಾಕಟಾಕ್ಷ, ಯಶಸ್ಸಿನ ಸಂಕೇತಗಳು.
ಮೃದುವಾದ ಧ್ವನಿ ಇರುವ ಮಹಿಳೆಯರು ಚಿತ್ತಸ್ತಿಮಿತದಿಂದ ಇರುತ್ತಾರೆ. ಇಂತಹವರೊಂದಿಗೆ ಜೀವನ ಆನಂದಕರವಾಗಿ ಸಾಗುತ್ತದೆ ಎನ್ನುತ್ತದೆ ಭವಿಷ್ಯ ಪುರಾಣ. ಇದು ಈ ಕಾಲಕ್ಕೆ ಎಷ್ಟರ ಮಟ್ಟಿಗೆ ಅನ್ವಯಿಸುತ್ತದೋ ಗೊತ್ತಿಲ್ಲ!
Subscribe to:
Post Comments (Atom)
No comments:
Post a Comment