Wednesday 29 May 2019

Jyotishya Vishaya Amruta saara Sangraha

ಸಮಾಜದಲ್ಲಿ ಕೆಲ ಸ್ತರದ ಉದ್ಯೋಗಗಳನ್ನು ಮಾಡುತ್ತಿರುವವರೆಲ್ಲರೂ ಆರ್ಥಿಕವಾಗಿ ಹಿಂದುಳಿದವರೆಂದು ಭಾವಿಸಬೇಕಾಗಿರುವುದಿಲ್ಲ. ಅನೇಕರು ಕೆಳ ದರ್ಜೆಯ ಉದ್ಯೋಗಗಳಲ್ಲಿದ್ದರೂ ಶ್ರೀಮಂತರಾಗಿ ಬದುಕಿನ ಎಲ್ಲಾ ಬಗೆಯ ಅನುಕೂಲಗಳನ್ನು ಅನುಭವಿಸುತ್ತಿರುತ್ತಾರೆ. ಇದಕ್ಕೆ ಕಾರಣ ಅವರ ಜಾತಕದಲ್ಲಿ ದ್ವಿತೀಯ, ಚತುರ್ಥ, ನವಮ, ಏಕಾದಶ ಸ್ಥಾನಗಳು ಮತ್ತು ಈ ಸ್ಥಾನಾಧಿಪತಿಗಳು ಬಲಯುತರಾಗಿರುತ್ತಾರೆ. ಜಾತಕದಲ್ಲಿ ಚಂದ್ರನಿಗೆ ಅಕ್ಕಪಕ್ಕದಲ್ಲಿ ಯಾವುದೇ ಗ್ರಹಗಳಿಲ್ಲದೆ ಇರುವಾಗ ಅಥವಾ ಚಂದ್ರನನ್ನು ಯಾವುದೇ ಗ್ರಹವು ವೀಕ್ಷಿಸದಿದ್ದಾಗ, ಇಲ್ಲವೇ ಚಂದ್ರನಿಗೆ ಕೇಂದ್ರ ಸ್ಥಾನದಲ್ಲಿ ಯಾವುದೇ ಶುಭ ಗ್ರಹಗಳು ಇಲ್ಲದೆ ಹೋದಾಗ ಜಾತಕನಿಗೆ ಧನ ಪ್ರಾಪ್ತಿಯಾಗುವುದಿಲ್ಲ, ಒಂದು ವೇಳೆ ಹಣ ಬಂದರು ಅದು ಯಾವುದಾದರೊಂದು ಕಾರಣದಿಂದ ಖಾಲಿಯಾಗಿಹೋಗುತ್ತದೆ. ಅನೇಕರು ಅನುಭವಿಸುತ್ತಿರುವ ಕಷ್ಟ ಕೋಟಲೆಗಳಿಗೆ ಹಿಂದೆ ಅವರು ಮಾಡಿರುವ ಪಾಪಗಳೇ ಕಾರಣವಾಗಿರುತ್ತದೆ. ಅಂತಹ ಮಹಾ ಪಾತಕಗಳಲ್ಲಿ ವೃಕ್ಷಚ್ಛೇದನ ಕ್ರಿಯೆಯು ಒಂದು. ಮನುಷ್ಯರು, ಪ್ರಾಣಿ, ಪಶು, ಪಕ್ಷಿಗಳಿಗೆ ಆಶ್ರಯ ನೀಡುವ ಅಶ್ವತ್ಥ, ಅತ್ತಿ, ಆಲ ಮುಂತಾದ ವೃಕ್ಷಗಳನ್ನು, ಹಣ್ಣುಗಳನ್ನು ನೀಡುವ ಮಾವು, ನೇರಳೆ, ಹಲಸು ಇತ್ಯಾದಿ ಮರಗಳನ್ನು ವಿನಾ ಕಾರಣ ಕತ್ತರಿಸಿ ತುಂಡು ಮಾಡಿದಲ್ಲಿ ವೃಕ್ಷಚ್ಛೇದನ ದೋಷಕ್ಕೆ ಗುರಿಯಾಗುತ್ತಾರೆ. ಈ ಪರಿಯ ದೋಷಕ್ಕೆ ತುತ್ತಾಗಿರುವವರು ತೀವ್ರ ರೀತಿಯ ಅನಾರೋಗ್ಯ ಹಾಗು ಮಾನಸಿಕ ಭಾದೆಗಳನ್ನು ಅನುಭವಿಸಬೇಕಾಗಿಬರುತ್ತದೆ. ಇಂತಹ ಪಾತಕಕ್ಕೆ ಪರಿಹಾರವೆಂದರೆ, ಒಂದು ಶುಭ ದಿನದಲ್ಲಿ ಬೆಳಿಗ್ಗೆ ಸ್ನಾನಾದಿಗಳನ್ನು ಮುಗಿಸಿ ಗಣಪತಿ ಪೂಜೆ, ಪುಣ್ಯಾಹ, ಮಾತೃಕಾ ಪೂಜೆಗಳನ್ನು ಮುಗಿಸಿದ ನಂತರ ಅಗ್ನಿಯನ್ನು ಪ್ರತಿಷ್ಠಾಪಿಸಿ ವನಸ್ಪತಿ ಸೂಕ್ತ ಹೋಮ ,ಪ್ರಾಯಶ್ಚಿತ್ತ ಹೋಮವನ್ನು ಮಾಡಬೇಕು. ಅದೇ ದಿನದಲ್ಲಿ ಎರಡು ಬಗೆಯ ಮರಗಳನ್ನು ನೆಟ್ಟು ಅದು ಚೆನ್ನಾಗಿ ಚಿಗುರುವರೆಗೂ ನೋಡಿಕೊಳ್ಳಬೇಕು. ಜಾತಕದ ಅಷ್ಟಮ ಸ್ಥಾನದಲ್ಲಿ ಶನಿ ಹಾಗು ಕುಜರಿದ್ದ ಜಾತಕದವರು, ತನಗೆ ಸರಿಹೊಂದುವ ಜೊತೆ ಸಿಕ್ಕಿದ ಕೂಡಲೇ ಉಳಿದ ಯಾವ ವಿಷಯವನ್ನು ಗಮನಿಸದೆ ಮದುವೆಯಾಗಬೇಕು. ಮದುವೆಯಾದ ನಂತರ ಪರಸ್ಪರ ಹೊಂದಿಕೊಂಡು ಬಾಳಬೇಕು. ಭಿನ್ನಾಭಿಪ್ರಾಯಗಳು ಬಂದರೆ ಅದನ್ನು ತಾಳ್ಮೆಯಿಂದ ಕುಳಿತು ಬಗೆಹರಿಸಿಕೊಳ್ಳಬೇಕು. ಇವುಗಳನ್ನು ಗಮನಿಸದೆ ಅಲಕ್ಷಿಸಿ ಮದುವೆಯಾಗುವುದನ್ನು ತಡ ಮಾಡುವುದು, ಅಥವಾ ಸಣ್ಣ ಪುಟ್ಟ ವಿಷಯಗಳಿಗೂ ಜಗಳ ಮಾಡುವುದನ್ನು ಬೆಳೆಸಿಕೊಂಡರೆ,ಮದುವೆಯೇ ಆಗದಿರುವ ಮತ್ತು ಒಂಟಿತನವನ್ನು ಅನುಭವಿಸುವ ಸಾಧ್ಯತೆಗಳು ಹೆಚ್ಚಾಗಿರುತ್ತದೆ. ಜನ್ಮ ರಾಶಿಯ ಮೇಲೆ ಕುಜ ಸಂಚಾರವಿದ್ದಾಗ ಹಣಕಾಸಿನ ವಿಷಯದಲ್ಲಿ ಸಮಸ್ಯೆಗಳು, ಮನೆಯವರೊಡನೆ ತೀವ್ರವಾದ ಭಿನ್ನಾಭಿಪ್ರಾಯಗಳು, ಕೈಗೆ ತೆಗೆದುಕೊಂಡಿರುವ ಯೋಜನೆಗಳು ತಡವಾಗುವುದು, ಜ್ವರ ಇಲ್ಲವೇ ವ್ರಣದಿಂದ ಬಳಲುವುದು, ಮೋಸ, ವಂಚನೆಗಳಿಗೆ ತುತ್ತಾಗುವುದು ಇತ್ಯಾದಿ ಅಶುಭ ಫಲಗಳನ್ನು ಎದುರಿಸಬೇಕಾಗಿ ಬರುವುದು. ಯಾವುದಾದರೂ ವಿಶೇಷ ಕಾರ್ಯಕ್ಕೆಂದು ಹೊರಟಾಗ ಬೆಕ್ಕು ಅಡ್ಡಲಾಗಿ ಬಂದರೆ ಹೊರಟಿರುವ ಕಾರ್ಯವು ಆಗುವುದಿಲ್ಲ ಅಥವಾ ನಿರೀಕ್ಷೆಯಂತೆ ನಡೆಯುವುದಿಲ್ಲ. ಅದೇನಾದರೂ ಬಲದಿಂದ ಎಡಕ್ಕೆ ಹೊರಟರೆ, ಕಾರ್ಯ ಭಂಗ. ಬೆಳಿಗ್ಗೆ ಎದ್ದ ಕೂಡಲೇ ಬೆಕ್ಕಿನ ದರ್ಶನವಾದರೆ ಆ ದಿನ ಯಾವ ಕೆಲಸವೂ ಸರಿಯಾಗಿ ನಡೆಯುವುದಿಲ್ಲ. ಮನೆಯಿಂದ ಹೊರಟಾಗ ಬೆಕ್ಕು ಜೊತೆಯಲ್ಲಿಯೇ ಮನೆಯಿಂದ ಹೊರಗೆ ಬಂದರೆ ಕಾರ್ಯ ಸಿದ್ಧಿ, ಎರಡು ಬೆಕ್ಕುಗಳು ಜಗಳವಾಡುತ್ತಿದ್ದರೆ ಮನಸ್ತಾಪ . ಬಾವಿ, ಕೆರೆ , ಕುಂಟೆ , ನಾಲೆ, ಕಲ್ಯಾಣಿ ಮುಂತಾದವುಗಳನ್ನು ತೊಡಿಸುವುದರ ಮೂಲಕ ನೀರಿಗೆ ಅನುಕೂಲಗಳನ್ನು ಮಾಡಿಕೊಡುವುದು, ಉದ್ಯಾನವನ, ಗೋಮಾಳ, ನೆಡುತೋಪು, ರಸ್ತೆಗಳ ಬದುವಿನಲ್ಲಿ ಮರ ಗಿಡಗಳನ್ನು ನೆಟ್ಟು ಜನರಿಗೆ ತಂಪು ವಾತಾವರಣವನ್ನು ಸೃಷ್ಟಿಸುವುದು, ಇತ್ಯಾದಿ ಕೆಲಸಗಳು ಧ್ರುವ ದಾನಗಳೆನಿಸಿಕೊಳ್ಳುತ್ತದೆ. ಈ ಬಗೆಯ ದಾನಗಳನ್ನು ಮಾಡಿದವರಿಗೆ ಜನ್ಮ ಜನ್ಮಾಂತರದಲ್ಲಿ ಅಧಿಕಾರ ಯೋಗವು ಸಿದ್ಧಿಸುತ್ತದೆ. ಶಾಸ್ತ್ರಾಧ್ಯಯನ, ಜ್ಞಾನ, ಸಾಧನೆಗಳಿಲ್ಲದ ಬ್ರಾಹ್ಮಣನು ತೇಜೋಹೀನನಾಗಿರುತ್ತಾನೆ. ಬ್ರಾಹ್ಮನಾಗಿ ಜನಿಸಿದರೂ ಜಾತಕರ್ಮ, ಚೌಲ, ಉಪನಯನ ಮುಂತಾದ ಬ್ರಾಹ್ಮಣೋಚಿತ ಸಂಸ್ಕಾರಗಳು ಆಗಿಲ್ಲದಿದ್ದರೆ ಅಥವಾ ಚೌಲ ಉಪನಯನಗಳು ಆಗಿದ್ದರೂ ಸಂಧ್ಯಾವಂದನೆ, ವೇದ ಪಾರಾಯಣ ಮುಂತಾದ ಬ್ರಾಹ್ಮಣ ಕರ್ಮಗಳನ್ನು ಆಚರಿಸದಿದ್ದವರಿಗೆ ದಾನವನ್ನು ಸ್ವೀಕರಿಸುವ ಅಧಿಕಾರವಿರುವುದಿಲ್ಲ. ಕೇವಲ ಬ್ರಾಹ್ಮಣ ಕುಲದಲ್ಲಿ ಜನಿಸಿದ ಮಾತ್ರಕ್ಕೆ ಯೋಗ್ಯತೆ ಬರುವುದಿಲ್ಲ. ಬ್ರಾಹ್ಮಣೋಚಿತ ಕರ್ಮಾಚರಣೆಗಳನ್ನು ಶ್ರದ್ಧೆಯಿಂದ ಮಾಡುವ ಶ್ರೋತಿಯ ಬ್ರಾಹ್ಮಣನಿಗೆ ದಾನವನ್ನು ಸ್ವೀಕರಿಸುವ ಅಧಿಕಾರವಿರುತ್ತದೆ. ವಧು-ವರರ ಜನ್ಮ ನಕ್ಷತ್ರಗಳಲ್ಲಿ ಯಾರಾದರೊಬ್ಬರ ನಕ್ಷತ್ರವು ಮೃಗಶಿರಾ, ಮಖ, ಸ್ವಾತಿ, ಅಥವಾ ಅನುರಾಧ ಆಗಿದ್ದರೆ ವಿವಾಹ ಘಟಿತಾರ್ಥ ಕೂಟ ಸಾಲಾವಳಿಯನ್ನು ಗಮನಿಸದೆ ಮುಂದುವರಿಯಬಹುದೆಂದು ಕೆಲವು ಜ್ಯೋತಿಷ್ಯ ಗ್ರಂಥಗಳಲ್ಲಿ ಹೇಳಲ್ಪಟ್ಟಿರುತ್ತದೆ. ಈ ನಾಲ್ಕು ಮಹಾ ನಕ್ಷತ್ರಗಳು. ಈ ಹೇಳಿಕೆಯನ್ನು ಕೂಟ ಸಾಲಾವಳಿಯ ವಿಷಯಕ್ಕೆ ಮಾತ್ರ ಸೀಮಿತಗೊಳಿಸಬೇಕು. ಉಳಿದಂತೆ ಜಾತಕದಲ್ಲಿರುವ ಗ್ರಹದೋಷಗಳನ್ನು ಅವಶ್ಯವಾಗಿ ಪರಿಶೀಲಿಸುವುದು ಅತ್ಯಗತ್ಯ. ಜನ್ಮ ನಕ್ಷತ್ರವು ಮಹಾ ನಕ್ಷತ್ರವಾಗಿರುವುದನ್ನೇ ಪ್ರಧಾನವಾಗಿ ಪರಿಗಣಿಸಿ, ಉಳಿದ ವಿಷಯಗಳನ್ನು ನಿರ್ಲಕ್ಷಿಸಿ ವಿವಾಹವನ್ನು ನಿಶ್ಚಯಗೊಳಿಸುವುದು ಸರಿಯಾದ ಕ್ರಮವಾಗಿರುವುದಿಲ್ಲ. ಶಾಕ್ತ ಸಂಪ್ರದಾಯದಲ್ಲಿ ಜಗನ್ಮಾತೆಯನ್ನು ತಾಂತ್ರಿಕ ರೀತಿಯಲ್ಲಿ ಪೂಜಿಸಲಾಗುತ್ತದೆ. ಇದರಲ್ಲಿ ಭೈರವ ದೇವರಿಗೆ ಹೆಚ್ಚು ಪ್ರಾಶಸ್ತ್ಯ. ಪೂಜಾ ಪ್ರಾರಂಭದಲ್ಲಿ ಗಣಪತಿಯನ್ನು ಪೂಜಿಸಿ ಪ್ರಾರ್ಥಿಸಿದ ನಂತರ ಭೈರವ ದೇವರನ್ನು ಪೂಜಿಸಿ ಸಾಧನೆಯನ್ನು ಮುಂದುವರಿಸುವುದು ಶಾಕ್ತ ಸಂಪ್ರದಾಯ. ತಾಯಿ ಜಗನ್ಮಾತೆಯ ವಿವಿಧ ಸ್ವರೂಪಗಳನ್ನು ವರ್ಣಿಸುವಾಗ ಆಯಾ ರೂಪ, ಗುಣ ಹಾಗು ಕ್ಷೇತ್ರಗಳಿಗೆ ಸಂಭಂದಿಸಿದಂತೆ ಭೈರವ ಸ್ವರೂಪಗಳು ಬೇರೆ ಬೇರೆ ಬಗೆಗಳಲ್ಲಿ ಪ್ರಕಟಗೊಂಡಿರುತ್ತದೆ. ಈ ಕಾರಣದಿಂದ ಭಿನ್ನ ಭಿನ್ನ ರೂಪಗಳಲ್ಲಿ ಭೈರವಾರಾಧನೆಗಳು ಆಚರಣೆಯಲ್ಲಿರುತ್ತದೆ. ಭಾರತ, ಚೀನಾ, ಟಿಬೆಟ್, ನೇಪಾಳ, ಶ್ರೀಲಂಕಾ, ಭೂತಾನ್ ಮುಂತಾದ ರಾಷ್ಟ್ರಗಳಲ್ಲಿ ಆಚರಿಸಲ್ಪಡುವ ತಾಂತ್ರಿಕ ಪೂಜೆಗಳಲ್ಲಿ ಭೈರವ ದೇವರನ್ನು ನಾನಾ ಹೆಸರುಗಳಿಂದ ಅರ್ಚಿಸುತ್ತಾರೆ. ನಿತ್ಯಾದೇವಿಯರು, ದಶ ಮಹಾವಿದ್ಯೆಯರು, ಸಪ್ತ ಮಾತೃಕೆಯರು, ಅಪಸ್ಮಾರ ದೇವತೆಗಳು, ನವ ದುರ್ಗೆಯರು ಹೀಗೆ ಜಗನ್ಮಾತೆಯ ಯಾವುದೇ ಸ್ವರೂಪವನ್ನು ಸಾಕ್ಷಾತ್ಕರಿಸಿಕೊಳ್ಳಲು ಭೈರವ ದೇವರ ಅನುಗ್ರಹ ಅಗತ್ಯ. ಉಪನಯನದಲ್ಲಿ ಶುಭ ಲಗ್ನವನ್ನು ಆಯ್ಕೆ ಮಾಡಿಕೊಳ್ಳಬೇಕಾಗಿರುವುದು ಅತಿ ಮುಖ್ಯ. ಉಪನಯನ ಲಗ್ನದಲ್ಲಿ ಶುಕ್ರ, ದಶಮದಲ್ಲಿ ಗುರು, ಶುಭ ನವಾಂಶದಲ್ಲಿ ಸೂರ್ಯ ಮತ್ತು ಚಂದ್ರ ಇದ್ದರೆ , ಅಂತಹ ಶುಭ ಮುಹೂರ್ತದಲ್ಲಿ ನಡೆಸಿದ ಉಪನಯನ ಮುಹೂರ್ತ ಬಲದಿಂದ ವಟುವು ಸಕಲ ಶಾಸ್ತ್ರಗಳಲ್ಲಿ ಪ್ರಾವೀಣ್ಯತೆಯನ್ನು ಪಡೆಯುತ್ತಾನೆ. ಅದೇ ರೀತಿಯಲ್ಲಿ ಉಪನಯನ ಲಗ್ನಕ್ಕೆ ಗುರುವು ಕೇಂದ್ರ ಸ್ಥಾನದಲ್ಲಿದ್ದು , ಸೂರ್ಯನು ಉಪನಯನ ಲಗ್ನದಲ್ಲಿದ್ದರೂ, ಚಂದ್ರನು ಶುಭ ನವಾಂಶೆಯಿಂದ ತೃತೀಯದಲ್ಲಿದ್ದರೂ ವಿದ್ಯಾ ಯೋಗವು ಪ್ರಾಪ್ತಿಯಾಗುತ್ತದೆ. ವಶೀಕರಣ ವಿದ್ಯೆಯು ಅತ್ಯಂತ ಪ್ರಾಚೀನ ಕಾಲದಿಂದ ಆಚರಣೆಯಲ್ಲಿರುತ್ತದೆ. ಹಿಂದೆ ಈ ವಿದ್ಯೆಯು ಋಷಿ ಮುನಿಗಳಲ್ಲಿ ಕೇಂದ್ರೀಕೃತಗೊಂಡಿತ್ತು, ಆದರೆ ನಾಗರಿಕತೆಯು ಬೆಳೆದಂತೆ ಈ ವಿದ್ಯೆಯನ್ನು ಆಸಕ್ತಿಯುಳ್ಳ ಜನ ಸಾಮಾನ್ಯರು ಕಲಿಯುವಂತಾಗಿದೆ. ವಶೀಕರಣ ವಿದ್ಯೆಗೆ ಸರಸ್ವತಿಯು ಅಧಿಷ್ಠಾತ್ರಿ. ತಿಳಿಗೆಂಪು, ಗುಲಾಬಿ, ಕೇಸರಿ ಬಣ್ಣಗಳು ವಶೀಕರಣ ವಿದ್ಯಾ ಪ್ರಯೋಗಗಳಿಗೆ ಸಹಕಾರಿ. ಸೋಮವಾರ ಇಲ್ಲವೇ ಶುಕ್ರವಾರ ವಶೀಕರಣ ಪ್ರಯೋಗಗಳನ್ನು ಮಾಡಲು ಇಲ್ಲವೇ ನಿವಾರಿಸಿಕೊಳ್ಳಲು ಉತ್ತಮವಾಗಿರುವ ದಿವಸ. ಉತ್ತರ ದಿಕ್ಕು ಅನುಕೂಲಕರ. ಶ್ರೀ ದುರ್ಗಾ ಮತ್ತು ಗಣಪತಿಯ ಆರಾಧನೆಗಳಿಂದ ವಶೀಕರಣದಿಂದ ಉಂಟಾಗಿರುವ ಸಮಸ್ಯೆಗಳನ್ನು ಬಗೆ ಹರಿಸಿಕೊಳ್ಳಬಹುದು. ಚಂದ್ರ ಪ್ರಾರ್ಥನೆ : ಸೋಮಂ ಚತುರ್ಭುಜಂ ದೇವಂ ಕೇಯೂರ ಮುಕುಟೋಜ್ವಲಂ | ವಾಸುದೇವಸ್ಯ ನಯನಂ ಶಂಕರಸ್ಯ ಚ ಭೂಷಣಂ | ಧ್ಯಾಯೇತ್ ಅಮೃತಸಂಭೂತಂ ಸವಿಷ್ಯಾಮ ಫಲಪ್ರದಂ || ಓಂ ಕ್ಷೀರ ಪುತ್ರಾಯ ವಿದ್ಮಹೇ | ಅಮೃತ ತತ್ವಾಯ ಧೀಮಹಿ | ತನ್ನೊಶ್ಚಂದ್ರ ಪ್ರಚೋದಯಾತ್ || ಅತಿಯಾದ ಚಂಚಲ ಮನಸ್ಸಿರುವವರು, ಮರುಕವೇ ಬಾರದಿರುವವರು, ಜಾತಕದಲ್ಲಿ ಚಂದ್ರ ನಿರ್ಬಲನಾಗಿರುವುದು ಮುಂತಾದವರು ಪ್ರತಿದಿನ ರಾತ್ರಿ ಚಂದ್ರ ಪ್ರಾರ್ಥನೆಗಳನ್ನು ಮಾಡುತ್ತಿದ್ದರೆ ಅನುಕೂಲಗಳನ್ನು ಕಾಣಬಹುದಾಗಿರುತ್ತದೆ. ಜಾತಕದಲ್ಲಿ ಸೂರ್ಯ, ಮಂಗಳ ಮತ್ತು ಗುರು ಪ್ರಬಲರಾಗಿದ್ದು ಭಾಗ್ಯ ಸ್ಥಾನಕ್ಕೆ ಸಂಬಂಧಿಸಿದ್ದರೆ,ಅಂತಹ ಜಾತಕದ ಯುವಕರು ಐ ಏ ಎಸ್ ಅಥವಾ ಕೆ ಏ ಎಸ್ ಮುಂತಾದ ಆಡಳಿತಕ್ಕೆ ಸಂಭಂದಿಸಿದ ಪರೀಕ್ಷೆಗಳನ್ನು ತೆಗೆದುಕೊಳ್ಳುವುದು ಉಚಿತವಾಗಿರುತ್ತದೆ. ಚಂದ್ರನು ಮನುಷ್ಯನ ಮನಸ್ಸಿಗೆ ಕಾರಕನಾಗಿರುತ್ತಾನೆ. ಜಾತಕದಲ್ಲಿ ಎಂಥಹ ಮಹಾಯೋಗಗಳಿದ್ದರೂ, ಚಂದ್ರನ ಸ್ಥಿತಿ ಚೆನ್ನಾಗಿಲ್ಲದಿದ್ದರೆ ಏನಾದರೊಂದು ಸಮಸ್ಯೆಗಳು ಬರುತ್ತಲೇ ಇರುತ್ತದೆ. ಚಂದ್ರನ ಪರಿಸ್ಥಿತಿಯು ಚೆನ್ನಾಗಿದ್ದರೆ ದುರ್ವಿಧಿಗಳು ಬಂದರೂ, ಅವುಗಳನ್ನು ಮೆಟ್ಟಿ ನಿಲ್ಲುವ ಎದೆಗಾರಿಕೆಯಿರುತ್ತದೆ. ವಶೀಕರಣ ಪ್ರಯೋಗಗಳು ಒಂದು ರೀತಿಯಲ್ಲಿ ಆಕ್ರಮಣಕಾರಿ ನಡುವಳಿಕೆ. ಬೇರೆಯವರ ಮನಸ್ಸನ್ನು ಕೈ ವಶ ಮಾಡಿಕೊಂಡು ಅವರಿಗೆ ಇಚ್ಛೆಯಿರಲಿ, ಇಲ್ಲದಿರಲಿ ಅವರಿಂದ ಬೇಕಾದ ಕೆಲಸವನ್ನು ಮಾಡಿಸಲು ಪ್ರಯತ್ನಿಸುವ ಕೆಟ್ಟ ಪ್ರವೃತ್ತಿ. ಇದರಿಂದ ವಶೀಕರಣಕ್ಕೊಳಗಾದ ವ್ಯಕ್ತಿಯು ಏನು ಮಾಡಬೇಕೆಂಬುದು ತೋಚದೆ ಖಿನ್ನತೆಗೆ ಗುರಿಯಾಗುತ್ತಾರೆ. ಭಯ ಹಾಗು ಆತಂಕಗಳಿಂದ ತಮ್ಮ ಸ್ವಂತಿಕೆಯನ್ನು ಕಳೆದುಕೊಂಡು ಪರಾಧೀನರಾಗುತ್ತಾರೆ. ವಶೀಕರಣ ವಿದ್ಯೆಯನ್ನು ಕಲಿತಿರುವವರು ಸಮಾಜಮುಖಿಯಾಗಿ ಕಾರ್ಯ ನಿರ್ವಹಿಸಿದಲ್ಲಿ ಅವರು ಅತಿ ಉತ್ತಮವಾಗಿರುವ ಕೆಲಸಗಳನ್ನು ಮಾಡಬಹುದು. ಮನಸ್ಸಿನಲ್ಲಿ ಹುದುಗಿ ಕಾಡುವ ಮಾನಸಿಕ ನೋವು ಸಂಕಟಗಳನ್ನು ಪರಿಹರಿಸಬಹುದು. ಅದನ್ನು ಬಿಟ್ಟು ಅನ್ಯರ ವೈಯಕ್ತಿಕ ವಿಷಯಗಳ ಅತಿಕ್ರಮಣ ಮಾಡಿದಾಗ ಅಪರಾಧವಾಗುತ್ತದೆ. ಸಕಲ ಚರಾಚರ ಜೀವರಾಶಿಗಳಿಗೆ , ಸಕಲ ಗ್ರಹಗಳಿಗೆ ಪ್ರಕಾಶ, ತೇಜಸ್ಸು ಮತ್ತು ಚೈತನ್ಯಗಳನ್ನೀಯುವ ಸೂರ್ಯ ದೇವನು ಪ್ರಪಂಚದ ಕಣ್ಣು. ಅಂತಹ ಸೂರ್ಯ ಭಗವಾನನನ್ನು ಬೆಳಿಗ್ಗೆ ಸೂರ್ಯೋದಯ ಸಮಯದಲ್ಲಿ ಸ್ನಾನ ಮುಗಿಸಿ ,ಸೂರ್ಯನಿಗೆ ಅರ್ಘ್ಯವನ್ನು ನೀಡಿ, ಸೂರ್ಯ ಮಂತ್ರಗಳಿಂದ ದಿವಾಕರನನ್ನು ಪ್ರಾರ್ಥಿಸಿ ಪೂಜಿಸಿದಲ್ಲಿ ಸಕಲ ಅರಿಷ್ಟಗಳು ಪರಿಹಾರವಾಗುತ್ತದೆ. ಓಂ ಭಾಸ್ಕರಾಯ ವಿಧ್ಮಹೇ | ಮಹಾ ತೇಜಾಯ ಧೀಮಹಿ | ತನ್ನೋ ದಿವಾಕರ: ಪ್ರಚೋದಯಾತ್ || ಈ ಮಂತ್ರವನ್ನು ಕನಿಷ್ಠ 108 ಬಾರಿ ಸೂರ್ಯನಿಗೆ ಅಭಿಮುಖವಾಗಿ ನಿಂತು ಏಕಾಗ್ರತೆಯಿಂದ ಜಪಿಸಬೇಕು. ವಶೀಕರಣವನ್ನು ಯಾರ ಮೇಲೆ ಬೇಕಾದರೂ ಪ್ರಯೋಗಿಸಬಹುದು, ಆದರೆ ಮಾನಸಿಕವಾಗಿ ಬಲಿಷ್ಠರಾಗಿರುವವರಿಗೆ, ಯಾರ ಅಂತರ್ಮನಸ್ಸು ಹಾಗು ಬಹಿರ್ಮನಸ್ಸು ಎರಡು ಜಾಗೃತಾವಸ್ಥೆಯಲ್ಲಿರುವುದೋ, ಯಾರು ದೈವ ಭಕ್ತರಾಗಿದ್ದು ಸದಾಕಾಲ ಶಾಂತಿ ನೆಮ್ಮದಿಗಳಿಂದ ಬದುಕುತ್ತಿರುತ್ತಾರೋ ಅಂತಹವರಿಗೆ ವಶೀಕರಣ ಪ್ರಯೋಗವು ನಾಟುವುದಿಲ್ಲ. ಅವರ ಮೇಲೆ ಎಷ್ಟೇ ತೀವ್ರ ಪ್ರಯೋಗಗಳನ್ನು ನಡೆಸಿದರು ಏನೂ ಪ್ರಯೋಜನವಾಗುವುದಿಲ್ಲ. ದುರ್ಬಲವಾಗಿರುವ ಮನಸ್ಸಿನವರು , ವಿಪರೀತವಾದ ಚಂಚಲ ಮನಸ್ಸು ಹೊಂದಿರುವವರು , ಗ್ರಹ ಗೋಚಾರ ಫಲಗಳು ಸರಿಯಿಲ್ಲದಿದ್ದವರು ವಶೀಕರಣ ಕ್ರಿಯೆಗೆ ಸುಲಭವಾಗಿ ಸ್ಪಂದಿಸುತ್ತಾರೆ. ವಶಿkaranakke ಒಳಗಾದವರ ನಡುವಳಿಕೆ ವಿಚಿತ್ರವಾಗಿರುತ್ತದೆ, ಹಾಗು ಸಹಜವಾಗಿರುವುದಿಲ್ಲ.ಉಚ್ಛ್ವಾಸ ನಿಶ್ವಾಸಗಳು ತೀವ್ರ ಗತಿಯಲ್ಲಿರುತ್ತವೆ. ಸ್ವಲ್ಪ ಹೆಚ್ಚೇ ಅನ್ನಿಸುವಂತೆ ಬೆವರುತ್ತಿರುತ್ತಾರೆ. ಅವರ ನಾಡಿ ಮಿಡಿತ ಅಧಿಕವಾಗಿರುತ್ತದೆ. ವಶೀಕರಣ ಕ್ರಿಯೆಯು ಮತ್ತೊಬ್ಬರ ಮನಸ್ಸನ್ನು ಅಧೀನದಲ್ಲಿಟ್ಟುಕೊಂಡು ಹೇಳಿದ ಹಾಗೆ ಕೇಳುವಂತೆ ಮತ್ತು ಅದರ ಪ್ರಕಾರ ನಡೆದುಕೊಳ್ಳುವಂತೆ ಪ್ರೇರೇಪಿಸುತ್ತದೆ. ವಶೀಕರಣ ಕ್ರಿಯಾ ಯಂತ್ರ ಮಂತ್ರ ಪ್ರಯೋಗಗಳು ಪ್ರಾಚೀನ ಕಾಲದಿಂದಲೂ ಆಚರಣೆಯಲ್ಲಿರುತ್ತದೆ. ವಶೀಕರಣದಲ್ಲಿ ಸ್ತ್ರೀವಶ್ಯ,ಪುರುಷ ವೈಶ್ಯ, ರಾಜವಶ್ಯ, ಅಧಿಕಾರಿ ವೈಶ್ಯ, ಪ್ರಾಣಿವಶ್ಯ, ಪ್ರೇತ ವೈಶ್ಯ, ಬೇತಾಳ ವೈಶ್ಯ, ದೇವವಶ್ಯ ಮುಂತಾದ ಅನೇಕ ಬಗೆಯ ವಶೀಕರಣ ಪ್ರಯೋಗಗಳಿರುತ್ತವೆ. ಪ್ರತಿಯೊಬ್ಬ ಮನುಷ್ಯನಲ್ಲೂ ಚೈತನ್ಯ,ಉತ್ಸಾಹ,ಕ್ರಿಯಾಶೀಲತೆಗಳಿದ್ದಂತೆ ನಿರುತ್ಸಾಹ ನಿಷ್ಕ್ರಿಯತೆಗಳು ಜೊತೆಯಲ್ಲಿಯೇ ಇರುತ್ತವೆ. ಮನಸ್ಸು ಹೀಗೆಯೇ ಇರುತ್ತದೆ ಎಂದು ಹೇಳಲಾಗುವುದಿಲ್ಲ. ಆಯಾ ಸಂದರ್ಭಕ್ಕೆ ತಕ್ಕಂತೆ ಬದಲಾಗುತ್ತಿರುತ್ತದೆ. ಬದುಕಿನಲ್ಲಿ ಬರುವ ಸಮಸ್ಯೆಗಳು ಮನಸ್ಸನ್ನು ಹಣ್ಣು ಮಾಡಿ ಕುಗ್ಗಿಸಿ ನಿಷ್ಕ್ರಿಯತೆಗೆ ದಾರಿ ಮಾಡಿಕೊಡುತ್ತದೆ. ಇಂತಹ ಸಮಯದಲ್ಲಿ ದೇವರ ಧ್ಯಾನ, ಗುರುಹಿರಿಯರ ಹಿತವಚನ, ಸ್ನೇಹಿತರ ಒಡನಾಟ ರಾಮ ಬಾಣದಂತೆ ಕಾರ್ಯ ನಿರ್ವಹಿಸಿ ಮನಸ್ಸನ್ನು ಚೈತನ್ಯದತ್ತ ಬಡಿದೆಬ್ಬಿಸುತ್ತದೆ. ಸಂತಾನವಿಲ್ಲದಿರುವುದು, ಮಕ್ಕಳ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಲು ಅಶ್ವತ್ಥ ವೃಕ್ಷವನ್ನು ಬೆಳೆಸುವುದು, ಅಶ್ವತ್ಥ ವೃಕ್ಷ ಪ್ರದಕ್ಷಿಣೆ, ಹರಿ ವಂಶ ಪುರಾಣ ಪಾರಾಯಣೆ, ಸರ್ಪ ಸಂಸ್ಕಾರ, ನಾಗಬಲಿ, ನಾಗಪ್ರತಿಷ್ಠೆ ಮುಂತಾದ ಆಚರಣೆಗಳು ಸಹಕಾರಿಯಾಗುತ್ತವೆ. ಭಾರತದ ಪ್ರಾಚೀನ ಋಷಿ ಮುನಿಗಳು ಕಾಲಗಣನೆಯನ್ನು ಚೈತ್ರ ಶುಕ್ಲ ಪಾಡ್ಯಮಿ ಭಾನುವಾರ ಶ್ರೀ ಲಂಕಾ ದಲ್ಲಿನ ಸೂರ್ಯೋದಯದಿಂದ ಪ್ರಾರಂಭಿಸಿದರು. ಕೃತ, ತ್ರೇತಾ, ದ್ವಾಪರ ಮತ್ತು ಕಲಿ ಹೀಗೆ ನಾಲ್ಕು ಯುಗಗಳು ಸೇರಿ ಒಂದು ಮಹಾ ಯುಗವಾಗುತ್ತದೆ. ಇಂತಹ ನಾಲ್ಕು ಮಹಾಯುಗಗಳು ಸೇರಿದರೆ ಒಂದು ಕಲ್ಪ, ನಾಲ್ಕು ಕಲ್ಪಗಳಿಂದ ಒಂದು ಚತುರ್ಯುಗ, ಎಪ್ಪತ್ತೊಂದು ಮಹಾಯುಗಗಳಿಗೆ ಒಂದು ಮನ್ವಂತರ, ಇಂತಹ ಹದಿನಾಲ್ಕು ಮನ್ವಂತರಗಳಿಂದ ಬ್ರಹ್ಮದೇವರ ಒಂದು ದಿವಸ. ಈಗ ಆರು ಮನ್ವಂತರಗಳು ಕಳೆದು ಏಳನೆಯದಾದ ವೈವಸ್ವತ ಮನ್ವಂತರ ಕಲಿಯುಗ ನಡೆಯುತ್ತಲಿದೆ. ಪ್ರಯಾಣ ಕಾಲದಲ್ಲಿ ಹೊರಳಾಡುತ್ತಿರುವ ಹಾವನ್ನು ಕಂಡರೆ ಕಾರ್ಯ ಸಿದ್ಧಿಯಾಗುತ್ತದೆ. ತನ್ನನ್ನು ನೋಡಿದೊಡನೆ ಹೆಡೆಯೆತ್ತಿ ಆಡತೊಡಗಿದರೆ ಸಂಪತ್ತು ವೃದ್ಧಿಸುತ್ತದೆ. ಹಚ್ಚ ಹಸಿರಾಗಿರುವ ಗಿಡವನ್ನು ಹತ್ತುತ್ತಿರುವ ಹಾವನ್ನು ಕಂಡರೆ ಶುಭ ಫಲಗಳು, ಹಾವು ತನ್ನ ಮನೆಯ ಅಂಗಳದಲ್ಲಿ ಹೋಗುತ್ತಿರುವುದನ್ನು ಕಂಡರೆ ಸಂಪತ್ತು ಹೆಚ್ಚುತ್ತದೆ. ಮಿಲನಗೊಂಡಿರುವ ಹಾವುಗಳನ್ನು ಕಂಡರೆ ಸೌಖ್ಯ.ಹೊಲ,ಗದ್ದೆ,ತೋಟಗಳಿಗೆ ಬಂದಾಗ ತಲೆ ಎತ್ತಿ ಆಡುತ್ತಿರುವ ಹಾವನ್ನು ಕಂಡರೆ ಫಸಲು ಜಾಸ್ತಿಯಾಗುವ ಸೂಚಕ. ಯಾರಿಂದಲಾದರೂ ದಾನ ಪಡೆಯಬೇಕೆಂದರೆ ಅದಕ್ಕೆ ತಕ್ಕ ಅರ್ಹತೆಗಳಿರಬೇಕು. ಅನರ್ಹ ವ್ಯಕ್ತಿಗಳಿಗೆ ದಾನ ನೀಡುವುದರಿಂದ ದಾನಿಗಳ ಮನಸ್ಸಿನ ಸದುದ್ದೇಶವು ಈಡೇರುವುದಿಲ್ಲ. ಆದುದರಿಂದ ದಾನ ನೀಡುವಾಗ ಆ ವ್ಯಕ್ತಿಯು ದಾನ ಪಡೆಯಲು ಅರ್ಹನೇ ಎಂಬುದನ್ನು ಗಮನಿಸಬೇಕು. ಅಪಾತ್ರ ದಾನದಿಂದ ಯಾವ ಪ್ರಯೋಜನವೂ ಆಗುವುದಿಲ್ಲ. ದಾನವನ್ನು ಸ್ವೀಕರಿಸಲು ಅಪಾತ್ರರು ಯಾರೆಂದರೆ, ತಾನೇ ಮಹಾ ಮೇಧಾವಿ ಎಂಬ ಭ್ರಮೆಯಲ್ಲಿರುವವರು, ಸದಾ ಕಾಲ ಎಲ್ಲರೆದರು ತನ್ನ ಆತ್ಮ ಪ್ರಶಂಸೆಯಲ್ಲಿ ನಿರತರಾಗಿರುವವರು, ಸುಳ್ಳು ಹೇಳುವವರು, ವಂಚಕರು, ಮತ್ತೊಬ್ಬರನ್ನು ಹಿಂಸಿಸಿ ಆನಂದ ಪಡೆಯುವವರು, ಕ್ರೂರ ಕೃತ್ಯಗಳನ್ನು ಆಚರಿಸುವವರು, ಪ್ರಾಣಿ ಹಿಂಸಕರು, ಪರ ನಿಂದಕರು, ಚಾಡಿಕೋರರು, ಅತಿಯಾದ ಜಿಪುಣರು, ಪರ ಸ್ತ್ರೀಯರನ್ನು ಬಯಸುವವರು, ಬಡ್ಡಿಗಾಗಿ ಹಣವನ್ನು ನೀಡುವವರು, ವಾಣಿಜ್ಯ ವ್ಯವಹಾರಗಳಲ್ಲಿ ತೊಡಗಿರುವವರು, ಜೂಜುಕೋರರು, ಶಾಸ್ತ್ರ ಜ್ಞಾನವಿಲ್ಲದವರು, ವ್ಯಭಿಚಾರಿಗಳು, ಕರುಣೆಯೇ ಇಲ್ಲದವರು, ನಿರ್ದಾಕ್ಷಿಣ್ಯವಾಗಿ ಮುಖಕ್ಕೆ ಹೊಡೆದಂತೆ ಮಾತನಾಡುವವರು, ಕಂಡವರ ಹಣಕ್ಕಾಗಿ ಅಸೆ ಪಡುವವರು, ಕಪಟಿಗಳು, ಕೊಲೆಗಡುಕರು, ಅಹಂಕಾರಿಗಳು, ಘಾತುಕರು ಮುಂತಾದವರೆಲ್ಲರೂ ದಾನವನ್ನು ಪಡೆಯಲು ಅನರ್ಹರಾಗಿರುತ್ತಾರೆ. ಇಂತಹ ಜನರಿಗೆ ತಿಳಿದೋ ಅಥವಾ ತಿಳಿಯದೆಯೋ ದಾನ ನೀಡುವುದು ಅಪಾತ್ರ ದಾನವೆನಿಸಿಕೊಳ್ಳುತ್ತದೆ. ಜಾತಕದಲ್ಲಿ ಕುಜನು ಯೋಗಕಾರಕನಾಗಿದ್ದು ಮೇಷ ರಾಶಿಯಲ್ಲಿದ್ದರೆ , ಅಂತಹವರು ಸರಕಾರದಿಂದ ಸನ್ಮಾನಿತರಾಗುವ ಅವಕಾಶ ಪಡೆಯುತ್ತಾರೆ. ಇವರು ಉತ್ತಮ ಮಾತುಗಾರರು, ಎಂಥಹ ವಿಷಯವಿದ್ದರೂ ಅದನ್ನು ಸಮರ್ಥವಾಗಿ ಮಂಡಿಸಬಲ್ಲವರು, ಎಲ್ಲರಿಂದ ಗೌರವ ಪಡೆಯುವವರು, ಸ್ವಂತ ಸಂಪಾದಿಸಿ ಶ್ರೀಮಂತರಾಗುವ ಯೋಗವಿರುತ್ತದೆ. ಮನೆಯಲ್ಲಿ ಸಾಕಿರುವ ನಾಯಿಯು ಕಣ್ಣುಗಳಲ್ಲಿ ನೀರು ಸುರಿಸುತ್ತಾ ಯಾವುದೇ ಆಹಾರವನ್ನು ತೆಗೆದುಕೊಳ್ಳದೆ ಉಪವಾಸ ಮಾಡುತ್ತಿರುವುದು, ಆ ಮನೆಯವರಿಗೆ ದುಃಖ ಸಂಭವಿಸುವ ಸೂಚಕ. ತನ್ನ ಜೊತೆಯಲ್ಲಿಯೇ ಬರುತ್ತಿದ್ದ ನಾಯಿಯು ಮುಂದೆ ಓಡಿಹೋಗಿ ಹಿಂದಕ್ಕೆ ತಿರುಗಿ ಓಡಿಬಂದರೆ ಏನಾದರೊಂದು ಅತಿಶಯ ವಿಷಯವಿರುವುದು ಕಂಡುಬರುತ್ತದೆ. ಕೆಲವರಿಗೆ ಎಲ್ಲ ಬಗೆಯ ಯೋಗ್ಯತೆಗಳಿದ್ದರೂ ಅಧಿಕಾರ ದೊರೆಯುವುದಿಲ್ಲ. ಇದಕ್ಕೆ ಹಲವಾರು ಕಾರಣಗಳಿರುತ್ತವೆ. ಗ್ರಹ ಗತಿಗಳ ಕಾರಣದಿಂದಾಗಿ ಅಧಿಕಾರ ಸಿಗದಿದ್ದಾಗ ರಾಷ್ಟ್ರಸೂಕ್ತ ಹೋಮ, ಮಹಾ ನಾರಾಯಣ ಹೋಮ, ಆರುಣ ಹೋಮ, ರಾಕ್ಷೋಘ್ನ ಹೋಮ ಮತ್ತು ಗ್ರಹ ಗೋಚಾರದಲ್ಲಿ ಅಶುಭಕರವಾಗಿರುವ ಗ್ರಹಶಾಂತಿ ಹೋಮಗಳನ್ನು ಮಾಡಿಸಿ ತತ್ಸಂಭಂದ ವಸ್ತುಗಳನ್ನು ದಾನವಾಗಿ ನೀಡಿದಲ್ಲಿ ಅನುಕೂಲಕರ ಪರಿಸ್ಥಿತಿ ನಿರ್ಮಾಣವಾಗುತ್ತದೆ ತಡ ವಿವಾಹ ದೋಷ ವಿವಾಹವು ನಿಧಾನವಾಗಲು ಅನೇಕ ಕಾರಣಗಳಿರುತ್ತವೆ. ಜಾತಕದಲ್ಲಿರುವ ಗ್ರಹಗತಿಗಳಿಗನುಸಾರವಾಗಿ ತಡ ವಿವಾಹ ಯೋಗ ಕೆಲವರಿಗಿದ್ದರೆ, ಮತ್ತೆ ಕೆಲವರಿಗೆ ಸಾಮಾಜಿಕ ಅಥವಾ ಆರ್ಥಿಕ ಕಾರಣಗಳಿರುತ್ತವೆ. ಮತ್ತೆ ಕೆಲವರಿಗೆ ಎಲ್ಲವು ಸರಿಯಾಗಿರುತ್ತದೆ ಆದರೆ ಅವರೇ ಮಾಡಿಕೊಳ್ಳುವ ಸ್ವಯಂಕೃತಾಪರಾಧದಿಂದ ವಿವಾಹವು ವಿಳಂಬವಾಗುತ್ತದೆ. ಇಂದಿನ ಸಾಮಾಜಿಕ ಪರಿಸ್ಥಿತಿಯಲ್ಲಿ 30 ರೊಳಗೆ ಮದುವೆಯಾಗದಿದ್ದರೆ ಅದನ್ನು ತಡ ವಿವಾಹವೆಂದು ಪರಿಗಣಿಸಬಹುದು. ಜಾತಕದಲ್ಲಿ ತಡ ವಿವಾಹ ದೋಷವಿರುವವರು ತತ್ಸಂಭಂದಿತ ಗ್ರಹಶಾಂತಿ, ಕುಂಭ ವಿವಾಹ, ಗಿರಿಜಾ ಕಲ್ಯಾಣ, ಮುಂತಾದ ಶಾಂತಿ ಕ್ರಿಯೆಗಳನ್ನು ಆಚರಿಸಿದಲ್ಲಿ ವಿವಾಹ ದೋಷವು ನಿವಾರಣೆಗೊಂಡು ಮದುವೆಯಾಗುತ್ತದೆ. ಅತಿಯಾದ ಅಸೆ, ನಿರೀಕ್ಷೆಗಳು ಸಕಾಲದಲ್ಲಿ ಮದುವೆಯಾಗುವುದನ್ನು ತಪ್ಪಿಸುತ್ತದೆ ಅಲ್ಲದೆ ಮನಸ್ಸಿನ ನೆಮ್ಮದಿಯನ್ನು ಹಾಳುಮಾಡುತ್ತದೆ. ಕುಂಭ ವಿವಾಹವು ಅಕಾಲ ವೈಧವ್ಯವನ್ನು ತಪ್ಪಿಸುತ್ತದೆ. ದಾನವನ್ನು ಸ್ವೀಕರಿಸುವ ಮನಸ್ಸಿರುವವರಿಗೆ , ಧನಿಕರು ನೀಡುವ ದಾನಗಳು ಹೆಚ್ಚು ಆಕರ್ಷಕವಾಗಿ ಕಾಣುತ್ತವೆ. ದಾನವನ್ನು ನೀಡಿದ ಧನಿಕನು ಅನ್ಯಾಯ ಅಕ್ರಮಗಳಿಂದ ಸಂಪಾದಿಸಿದ ಹಣವನ್ನು ತನ್ನ ಪಾಪಗಳನ್ನು ಕಳೆದುಕೊಳ್ಳಲು ನೀಡಿದ್ದರೆ, ಅದನ್ನು ಪಡೆದಿರುವವರಿಗೆ ಅಕ್ರಮ ಹಣದಿಂದ ಬಂದಿರುವ ಸಮಸ್ಯೆಗಳು ವರ್ಗಾಯಿಸಲ್ಪಡುತ್ತದೆ. ಹೀಗೆ ಸ್ವೀಕರಿಸಿದ ದಾನದಿಂದ ಅನೇಕ ರೀತಿಯ ದುಷ್ಪರಿಣಾಮಗಳು ದಾನ ಸ್ವೀಕರಿಸಿದವರನ್ನು ಆವರಿಸಿಕೊಂಡು ಬಹು ಕಾಲದವರೆಗೆ ಬಾಧಿಸುತ್ತಿರುತ್ತದೆ. ಆದುದರಿಂದ ದಾನಗಳನ್ನು ಸ್ವೀಕರಿಸುವವರು ಬಹಳ ಎಚ್ಚರಿಕೆಗಳಿಂದ ದಾನವನ್ನು ಪಡೆಯಬೇಕು, ಒಂದು ವೇಳೆ ತಿಳಿಯದೆ ಪಡೆದಿರುವ ದಾನಗಳನ್ನು ಜೀರ್ಣಿಸಿಕೊಳ್ಳಲು ಸೂಕ್ತವಾಗಿರುವ ಪ್ರಾಯಶ್ಚಿತ್ತ ಕರ್ಮಾಚರಣೆಗಳನ್ನು ಮಾಡಿಕೊಳ್ಳಬೇಕು. ಮನುಷ್ಯನು ಮೃತ್ಯಿಸಿದ ಹನ್ನೊಂದು ಅಥವಾ ಹನ್ನೆರಡೆಯ ದಿನದಿಂದ ಪ್ರೇತತ್ವವನ್ನು ಪಡೆದಿರುವ ಮೃತಾತ್ಮನು ಪ್ರೇತ ಮಾರ್ಗದಲ್ಲಿ ಸಾಗುತ್ತಾನೆ ಎಂಬ ನಂಬಿಕೆಯಿರುತ್ತದೆ. ಅವನು ಸಾಗುವ ಹಾದಿಯಲ್ಲಿ ಯಾವುದೇ ತರಹದ ಬಾಧೆಗಳು ಆಗದಿರಲಿ ಹಾಗು ಸುಖವಾಗಿ ಸಂಚರಿಸಲಿ ಎಂಬ ಒಳ್ಳೆಯ ಭಾವನೆಗಳಿಂದ ಆಸನ, ಪಾದರಕ್ಷೆ, ಛತ್ರಿ, ದಂಡ, ನೀರು ತುಂಬಿಸಿದ ಪಾತ್ರೆ, ವಸ್ತ್ರಗಳು, ಹಾಸಿಗೆ, ದೀಪ, ಇತ್ಯಾದಿ ವಸ್ತುಗಳನ್ನು ದಾನವಾಗಿ ನೀಡುವ ಸಂಪ್ರದಾಯವು ಬೆಳೆದು ಬಂದಿರುತ್ತದೆ. ಮಾರಣಾಂತಿಕ ಖಾಯಿಲೆಗಳಿಂದ ನರಳುತ್ತಿರುವವರ ತೊಂದರೆಗಳ ನಿವಾರಣೆಗಾಗಿ ಶ್ರೀ ಮಹಾ ಮೃತ್ಯುಂಜಯ ಹೋಮ, ಅಭಯಂಕರ ಹೋಮ, ನವಗ್ರಹ ಶಾಂತಿ ಹೋಮ, ರುದ್ರ ಹೋಮ, ಜನ್ಮ ನಕ್ಷತ್ರ ಶಾಂತಿ ಹೋಮ, ಹಾಗು ತತ್ಸಂಭಂದಿತ ಜಪ, ದಾನಾದಿಗಳನ್ನು ನಡೆಸಬೇಕು. ಶುಕ್ರಾದಿತ್ಯ, ಕುಜರಾಹು, ಇಲ್ಲವೇ ರಾಹುಗುರು ದಶಾ ಸಂಧಿ ಕಾಲವಿದ್ದರೆ ,ದಶಾ ಸಂಧಿ ಶಾಂತಿಗಳನ್ನು ನಡೆಸಬೇಕು. ಕನಸಿನಲ್ಲಿ ಫಲ ಪುಷ್ಪಗಳನ್ನು ನೋಡುವುದು ಸಂತೋಷದ ಸಂಗತಿಗಳು ನಡೆಯುವುದನ್ನು ಸೂಚಿಸುತ್ತದೆ. ಸತ್ತ ಹೆಣವನ್ನು ಕಂಡರೆ ಆಯಸ್ಸು ಹೆಚ್ಚಾಗುತ್ತದೆ. ಹುಲುಸಾದ ಬೆಳೆಯನ್ನು ಕಂಡರೆ ಅಭಿವೃದ್ಧಿ, ಕನ್ನಡಿಯನ್ನು ಕಂಡರೆ ಶುಭಕರ, ನಾಯಿಗಳು ಹತ್ತಿರ ಬರುತ್ತಿರುವಂತೆ ಕನಸಾದರೆ ಆಪ್ತ ಸ್ನೇಹಿತರ ಬಳಗ ವೃದ್ಧಿಸುವುದು. ಕನಸಿನಲ್ಲಿ ಹಾಲು ಕರೆಯುತ್ತಿದ್ದರೆ ಖಾಯಿಲೆ ಬರುವ ಸೂಚಕ.ಎತ್ತು ತಿವಿದಂತೆ ಅಥವಾ ಒದ್ದಂತೆ ಕನಸಾದರೆ ಪರಿಸ್ಥಿತಿ ಕೆಡುವ ಸೂಚನೆ, ಕೋತಿಗಳನ್ನು ಕಂಡರೆ ಜಗಳ, ನಾಯಿಗಳು ತನ್ನನ್ನು ನೋಡಿ ಬೊಗಳುತ್ತಿದ್ದಂತೆ ಕಂಡರೆ ಆಪ್ತ ಮಿತ್ರರು ದೊರವಾಗುವರು. ಗೂಬೆಯು ಶನಿಯ ಪ್ರತಿರೂಪ. ಇದು ರಾತ್ರಿಯಲ್ಲಿ ಸಂಚರಿಸುವ ಪಕ್ಷಿ. ರಾತ್ರಿ ವೇಳೆಯಲ್ಲಿ ಸಂಚರಿಸುತ್ತಿರುವಾಗ ಕೆಲವರ ಮನೆಗಳ ಮೇಲೆ ಕುಳಿತುಕೊಳ್ಳುವುದು ಉಂಟು . ಗೂಬೆಯು ಯಾರ ಮನೆಯ ಮೇಲೆ ಕುಳಿತುಕೊಳ್ಳುವುದೋ, ಆ ಮನೆಯವರಿಗೆ ಲತ್ತೆ ಬಡಿಯುವುದೆಂಬುದು ಜನರ ಅಭಿಪ್ರ್ರಾಯ. ಆದರೆ ಇದು ಎಲ್ಲರಿಗು ಅನ್ವಯವಾಗುವುದಿಲ್ಲ. ಯಾರಿಗೆ ಶನಿ ಮಹಾನುಭಾವನು ಯೋಗಕಾರಕನೋ, ಅಂತಹವರಿಗೆ ಗೂಬೆಯ ಆಗಮನದಿಂದ ಅದೃಷ್ಟ ಸಿದ್ಧಿಸುತ್ತದೆ. ಇದು ಅನುಭವದ ಮಾತು. ನಾಯಿ ಭೈರವದೇವರ ಅನುಯಾಯಿ. ಪಾಂಡವರು ಮಹಾ ಪ್ರಸ್ಥಾನಕ್ಕೆ ತೆರಳಿದಾಗ ಧರ್ಮ ದೇವತೆಯು ನಾಯಿಯ ರೂಪದಲ್ಲಿ ಧರ್ಮರಾಯನನ್ನು ಹಿಂಬಾಲಿಸಿತೆಂದು ಹೇಳಲ್ಪಟ್ಟಿರುತ್ತದೆ. ಇಂತಹ ನಾಯಿಯು ಪಾದರಕ್ಷೆಗಳನ್ನು ಕಚ್ಚಿಕೊಂಡು ಹತ್ತಿರ ಬಂದರೆ ಕಾರ್ಯ ಸಿದ್ಧಿಯಾಗುತ್ತದೆ. ಮಾಂಸವನ್ನು ಕಚ್ಚಿಕೊಂಡು ಹತ್ತಿರ ಬಂದರೆ ಧನ ಪ್ರಾಪ್ತಿಯಾಗುತ್ತದೆ. ಪ್ರಯಾಣ ಮಾಡಲು ಹೊರಟವರಿಗೆ ನಾಯಿಯು ತಲೆ, ಹೊಟ್ಟೆ, ಭುಜ, ಕತ್ತು, ಮೂಗು, ಎದೆ, ಬೆನ್ನು ಇವುಗಳನ್ನು ಬಲಗಾಲಿನಲ್ಲಿ ಕೆರೆದುಕೊಳ್ಳುತ್ತಿರುವುದನ್ನು ಕಂಡರೆ ಕ್ಷೇಮ ಲಾಭ ಮತ್ತು ಶುಭ ಉಂಟಾಗುತ್ತದೆ . ಮನೆಯ ಮುಖ್ಯ ಬಾಗಿಲನ್ನು ರೋಹಿಣಿ, ಪುನರ್ವಸು, ಪುಷ್ಯ, ಉತ್ತರ, ಅನುರಾಧ, ಮೂಲ, ಉತ್ತರಾಷಾಢ, ಉತ್ತರಾಭಾದ್ರ ಅಥವಾ ರೇವತಿ ನಕ್ಷತ್ರಗಳಿರುವ ಸೋಮವಾರ, ಬುಧವಾರ, ಗುರುವಾರ ಅಥವಾ ಶುಕ್ರವಾರಗಳಂದು ಸ್ಥಿರ ರಾಶಿಗಳಲ್ಲಿ ಶುಭ ಗ್ರಹಗಳಿರುವಾಗ ಇಡುವುದು ಸರ್ವ ಶ್ರೇಷ್ಠ. ಮನೆಯ ಮುಖ್ಯ ಬಾಗಿಲಿಗೆ ಒಂದೇ ಹಲಿಗೆಯಿದ್ದರೆ ಮನೆಯಲ್ಲಿ ವಾಸಿಸುವವರಿಗೆ ಅಧಿಕಾರದಿಂದ ಮಾತನಾಡುವ ಪ್ರೇರಣೆಯು ಸಿದ್ಧಿಸುತ್ತದೆ.ಎರಡು ಹಲಿಗೆಗಳಿರುವ ಮತ್ತು ನಾಲ್ಕು ಹಲಿಗೆಗಳಿರುವ ಬಾಗಿಲಿನ ಮನೆಯವರು ಎಷ್ಟೇ ಸಂಪಾದಿಸಿದರೂ, ಯಾವುದಾದರೊಂದು ಕಾರಣದಿಂದ ಹಣ ಉಳಿಯುವುದಿಲ್ಲ. ಮೂರು ಮತ್ತು ಐದು ಹಲಿಗೆಗಳ ಬಾಗಿಲಿದ್ದರೆ ಸಂಪಾದಿಸಿದ ಹಣವು ಸದ್ವಿನಿಯೋಗವಾಗುವುದಲ್ಲದೆ ವೃದ್ಧಿಯುಂಟಾಗುತ್ತದೆ. ಸ್ತ್ರೀಯು ಮೇಷ, ಮಿಥುನ,ಕಟಕ, ಸಿಂಹ, ತುಲಾ, ಧನಸ್ಸು, ಅಥವಾ ಕುಂಭ ಲಗ್ನದಲ್ಲಿ ಜನಿಸಿದ್ದು, ಅವರ ಜಾತಕದಲ್ಲಿ ಗುರುವು ಕಟಕ, ಸಿಂಹ, ಧನಸ್ಸು, ಅಥವಾ ಮೀನ ರಾಶಿಯಲ್ಲಿದ್ದರೆ, ಕುಜನು ಮೇಷ, ಸಿಂಹ, ವೃಶ್ಚಿಕ, ಧನಸ್ಸು, ಮಕರ, ಅಥವಾ ಮೀನ ರಾಶಿಯಲ್ಲಿದ್ದರೆ ಮತ್ತು ಸೂರ್ಯನು ಮೇಷ, ಸಿಂಹ, ವೃಶ್ಚಿಕ, ಧನಸ್ಸು ಅಥವಾ ಮೀನ ಈ ರಾಶಿಗಳಲ್ಲಿ ಯಾವುದಾದರೊಂದು ರಾಶಿಯಲ್ಲಿದ್ದು, ಲಗ್ನದ ಅಧಿಪತಿಯು ಪ್ರಬಲನಾಗಿದ್ದರೆ ಅಂತಹ ಸ್ತ್ರೀಯು ನಾಯಕತ್ವದ ಗುಣಗಳನ್ನು ಪಡೆದಿರುತ್ತಾಳೆ . ಇಂತಹ ಯೋಗವಿರುವವರಿಗೆ ಸರಿಯಾದ ಶಿಕ್ಷಣ ನೀಡಿ ಹುರಿದುಂಬಿಸಿದಲ್ಲಿ ಸಮಾಜವನ್ನು ಸರಿದಾರಿಯಲ್ಲಿ ನಡೆಸುವ ಉತ್ತಮ ನಾಯಕತ್ವವನ್ನು ನೀಡಬಲ್ಲರು ಸ್ತ್ರೀ ಅಥವಾ ಪುರುಷ ಜಾತಕದಲ್ಲಿ ಬುಧ ಅಥವಾ ಶನಿ ಸಪ್ತಮ ಸ್ಥಾನದಲ್ಲಿದ್ದರೆ , ಅಂತಹ ಜಾತಕದವರಿಗೆ ವಿವಾಹವನ್ನು ನಡೆಸಲು ವರ ಅಥವಾ ವಧುವನ್ನು ಆಯ್ಕೆ ಮಾಡುವಾಗ ,ಅವರ ಜಾತಕದಲ್ಲಿ ಕುಜನು ಚತುರ್ಥದಲ್ಲಿರುವುದು ಇಲ್ಲವೇ ಕುಜನು ಚತುರ್ಥವನ್ನು ಪ್ರಬಲವಾಗಿ ವೀಕ್ಷಿಸುವುದು ಅಪೇಕ್ಷಣೀಯ. ಇದರಿಂದ ಅವರಿಬ್ಬರ ಸಾಂಸಾರಿಕ ಬದುಕಿನಲ್ಲಿ ಹೆಚ್ಚಿನ ಸಮಸ್ಯೆಗಳು ಬರುವುದಿಲ್ಲ.ಬುಧ ಅಥವಾ ಶನಿಯ ಜೊತೆಯಲ್ಲಿ ಅನ್ಯ ಗ್ರಹಗಳಿದ್ದರೆ ಈ ಅಂಶವನ್ನು ನೋಡಬೇಕಾಗಿರುವ ಅವಶ್ಯಕತೆ ಇರುವುದಿಲ್ಲ. ಬಹಳ ಮುಖ್ಯವಾಗಿರುವ ಕೆಲಸಗಳಿಗೆ ತೆರಳುವಾಗ ಎದುರಿಗೆ ಹೂವು ಹಣ್ಣುಗಳನ್ನು ಹಿಡಿದು ಬರುತ್ತಿರುವ ಮುತ್ತೈದೆಯರು, ಜೋಡಿ ಬ್ರಾಹ್ಮಣರು, ಕನ್ಯೆಯರು, ವೈಶ್ಯಾ ಸ್ತ್ರೀಯರು, ಆನೆ, ಎತ್ತುಗಳು, ಕುದುರೆಗಳು, ಒಂಟಿ ಸೈನಿಕ, ಭರ್ತಿಯಾಗಿರುವ ಟಿಫನ್ ಬಾಕ್ಸ್, ಹಾಲು ತರುತ್ತಿರುವವರು, ಕಬ್ಬಿಣ ಜಲ್ಲೆ, ಮುಂತಾದವುಗಳು ಬಂದರೆ ಶುಭ ಫಲಗಳು ಸಿದ್ಧಿಸುತ್ತವೆ. ರಾಜಗೃಹಗಳನ್ನು ಕಟ್ಟಲಾರಂಭಿಸಲು ಮಾಘಮಾಸ, ಚೈತ್ರಮಾಸ, ಜ್ಯೇಷ್ಠಮಾಸ , ಆಶ್ವಯುಜಮಾಸ, ಮತ್ತು ಕಾರ್ತಿಕಮಾಸಗಳು ಅತ್ಯಂತ ಶುಭಕರವಾಗಿರುತ್ತದೆ. ಉಳಿದ ಫಾಲ್ಗುಣಮಾಸ, ವೈಶಾಖಮಾಸ, ಶ್ರಾವಣಮಾಸಗಳಲ್ಲಿ ಎಲ್ಲಾ ತರಹದ ಮನೆಗಳನ್ನು ಕಟ್ಟಲಾರಂಭಿಸಬಹುದು. ಕನಸಿನಲಿ ಆನೆಗಳನ್ನು, ಕುದುರೆಗಳನ್ನು, ಕುರಿ, ಮೇಕೆಗಳನ್ನು, ನಾಯಿಗಳನ್ನು ಕಾಣುವುದು ಶುಭ ಸಂತೋಷಕ್ಕೆ ಕಾರಣವಾಗುತ್ತದೆ.ಆನೆಯ ಮೇಲೆ ಕುಳಿತು ಸವಾರಿ ಮಾಡಿದಂತೆ ಕನಸು ಕಂಡರೆ ಮಕ್ಕಳಿಂದ ಗೌರವ, ಕೀರ್ತಿಗಳು ಸಿದ್ಧಿಸುತ್ತವೆ. ಬಿಳಿ ಹಸುವಿನ ಕನಸು ಶುಭಪ್ರದ. ಪಕ್ಷಿಗಳನ್ನು ಬಂಧನದಿಂದ ಬಿಡಿಸಿದಂತೆ ಕನಸು ಕಂಡರೆ ಸಕಲ ಕಾರ್ಯಗಳಲ್ಲೂ ಲಾಭವಾಗುತ್ತದೆ. ಭಾನುವಾರದಂದು ಜನ್ಮ ನಕ್ಷತ್ರವಿದ್ದರೆ ಕೆಲಸ ಕಾರ್ಯಗಳಲ್ಲಿ ಹೆಚ್ಚು ಉತ್ಸಾಹವಿರುವುದಿಲ್ಲ, ಬದಲಿಗೆ ಒಂದು ರೀತಿಯ ಆಲಸ್ಯ, ಮನರಂಜನಾ ಚಟುವಟಿಕೆಗಳಲ್ಲಿ ಆಸಕ್ತಿ, ಮಜವಾಗಿ ಕಾಲ ಕಳೆಯುವ ಆಸೆಯು ಅಧಿಕವಾಗಿರುತ್ತದೆ. ಸೋಮವಾರದಂದು ಜನ್ಮ ನಕ್ಷತ್ರವಿದ್ದಾಗ ಉತ್ಸಾಹ ಚಟುವಟಿಕೆಗಳು ಹೆಚ್ಚಾಗಿದ್ದು, ಸಂಜೆಯ ವೇಳೆ ರುಚಿಯಾಗಿ ಏನನ್ನಾದರೂ ತಿನ್ನಬೇಕೆಂಬ ಬಯಕೆ ಉಂಟಾಗುತ್ತದೆ. ಮಂಗಳವಾರದಂದು ಜನ್ಮ ನಕ್ಷತ್ರವಿದ್ದಾಗ ಕೆಲಸ ಕಾರ್ಯಗಳ ಒತ್ತಡದಿಂದಾಗಿ ಆಲಸ್ಯ ಹೆಚ್ಚಾಗಿ, ಸ್ವಲ್ಪ ಬಿಡುವು ದೊರೆತರೂ, ವಿಶ್ರಾಂತಿ ಪಡೆಯಬೇಕೆನಿಸುತ್ತದೆ. ಬುಧವಾರ ಜನ್ಮ ನಕ್ಷತ್ರವಿದ್ದರೆ ಹೊಸ ವಿಷಯಗಳ ಬಗೆಗಿನ ಆಸಕ್ತಿ ಹೆಚ್ಚುತ್ತದೆ. ಗುರುವಾರ ಜನ್ಮ ನಕ್ಷತ್ರವಿದ್ದರೆ ಮನಸ್ಸಿಗೆ ಮುದ ನೀಡುವಂತಹ ವಿಷಯಗಳ ಬಗ್ಗೆ ಹೆಚ್ಚು ಆಸಕ್ತಿ ಉಂಟಾಗುತ್ತದೆ. ಶುಕ್ರವಾರದಂದು ಜನ್ಮ ನಕ್ಷತ್ರವಿದ್ದರೆ ಸಂಪಾದನೆಯ ಕಡೆ ಮನಸ್ಸು ಮೂಡಿ, ಹಣ ಗಳಿಸುವ ವಿವಿಧ ಮಾರ್ಗಗಳ ಕಡೆ ಮುನ್ನಡೆಯುತ್ತಾರೆ. ಶನಿವಾರ ಜನ್ಮ ನಕ್ಷತ್ರವಿದ್ದರೆ ಉತ್ಸಾಹವಿರುವುದಿಲ್ಲ. ಇಂದು ಮಾಡುವ ಕೆಲಸವನ್ನು ನಾಳೆ ಮಾಡಿದರಾಯಿತು ಎಂಬ ಮನೋಭಾವ. ಸುಸ್ತು ಸಂಕಟ ಅಧಿಕ. ಸಿಂಹ ಲಗ್ನದಲ್ಲಿ ಜನಿಸಿದವರಿಗೆ ಕುಜನು ಚತುರ್ಥ ಮತ್ತು ನವಮ ಸ್ಥಾನಗಳ ಅಧಿಪತಿಯಾಗುವುದರಿಂದ , ಅವನ ದಶೆಯು ಉತ್ತಮವಾಗಿ ನಡೆಯುವುದು. ಇದೇ ರೀತಿಯಲ್ಲಿ ಲಗ್ನಕ್ಕೆ ಆಧಿಪತಿ ಯಾದ ರವಿಯ ದಶೆಯಲ್ಲಿ ಯೋಗ ಫಲಗಳು ಸಿದ್ಧಿಸುವುದು. ಜಾತಕದಲ್ಲಿ ಅವರುಗಳು ಯಾವ ಭಾವಗಳಲ್ಲಿ ಸ್ಥಿತಗೊಂಡಿರುವರೋ ಅದರಂತೆ ಫಲ ವಿಶೇಷತೆಗಳನ್ನು ಕಾಣಬಹುದು. ಉತ್ತಮ ರಾಜಕಾರಣಿಗಳಿಂದ ರಾಜ್ಯದಲ್ಲಿ ಶಾಂತಿ ಸ್ಥಾಪನೆಯಾಗುತ್ತದೆ. ಜನರು ನೆಮ್ಮದಿಯಿಂದ ತಮ್ಮ ತಮ್ಮ ವೃತ್ತಿಗಳಲ್ಲಿ ನಿರತರಾಗಿ ಭಯವಿಲ್ಲದೆ ಬದುಕು ನಡೆಸುತ್ತಾರೆ. ಧರ್ಮ ಮಾರ್ಗದಿಂದ ಎಲ್ಲರು ನಡೆಯುತ್ತಾರೆ. ಯಜ್ಞ ಯಾಗಾದಿಗಳು ನಡೆದು ಕಾಲ ಕಾಲಕ್ಕೆ ಸರಿಯಾಗಿ ಮಳೆ ಬೆಳೆಗಳಾಗುತ್ತದೆ. ಜನರ ಸುಖ ಬದುಕಿಗೆ ಉತ್ತಮ ರಾಜಕಾರಣಿಗಳೇ ಕಾರಣರಾಗುತ್ತಾರೆ. ರಾಜಕಾರಣಿಗಳು ಭ್ರಷ್ಠರಾಗಿದ್ದರೆ ರಾಜ್ಯದಲ್ಲಿ ಚೋರರ ಭಯ ಹೆಚ್ಚುತ್ತದೆ. ಯಾರಿಗೂ ಕಾನೂನಿನ ಭಯವೇ ಇರುವುದಿಲ್ಲ. ಜನರು ಗೌರವದಿಂದ ಬದುಕಲಾಗದೆ ಅಡ್ಡಹಾದಿ ಹಿಡಿಯಲಾರಂಭಿಸುತ್ತಾರೆ. ಒಟ್ಟಿನಲ್ಲಿ ಅಂತಹ ರಾಜ್ಯವು ವಿನಾಶದ ಹಾದಿ ತಲುಪಿ ಅವನತಿ ಹೊಂದುತ್ತದೆ. ಸೂರ್ಯ, ಆದಿತ್ಯ, ಅರ್ಕ, ರವಿ, ಭಾನು, ಭಾಸ್ಕರ, ದಿವಾಕರ, ಮಾರ್ತಾಂಡ, ಸವಿತಾ, ಹೇಳಿ, ತೀಕ್ಷಾಂಶು, ಮಿಹಿರ ಈ ಹನ್ನೆರಡು ಸೂರ್ಯದೇವನ ಹೆಸರುಗಳು. ಗ್ರಹ ನಿಘಂಟು.. ವಿವಾಹ ನಿಮಿತ್ತ ಕೂಟ ಸಾಲಾವಳಿಯನ್ನು ಪರಿಶೀಲಿಸುವಾಗ ವಿದ್ಯಾವಂತರು, ಬುದ್ದಿವಂತರು, ವಿಜ್ಞಾನಿಗಳು, ಸಂಶೋಧನಾ ಕಾರ್ಯದಲ್ಲಿ ನಿರತರಾಗಿರುವವರು, ಬೋಧಕರು, ಉಪನ್ಯಾಸಕರು, ಉಪಾದ್ಯಾಯರು, ಕಾನೂನು ಪಂಡಿತರು, ವೈದ್ಯರು, ಸಾಹಿತಿಗಳು, ಮುಂತಾದವರೆಲ್ಲರಿಗೂ ದ್ವಾದಶ ಕೂಟಗಳಲ್ಲಿ ಗ್ರಹ ಮೈತ್ರವನ್ನು ಬಹು ಮುಖ್ಯವಾಗಿ ಗಮನಿಸಬೇಕು. ಋತುಮತಿಯಾದ ನಂತರ ಪರಿಶುದ್ಧಗೊಂಡಿರುವ ಸ್ತ್ರೀಯು ಸಂತಾನವನ್ನು ಅಪೇಕ್ಷಿಸಿ ತನ್ನ ಗಂಡನ ಬಳಿ ಬಂದಾಗ ಅವಳ ಮನೋಬಯಕೆಯನ್ನು ಪೂರೈಸಬೇಕಾಗಿರುವುದು ಗಂಡನ ಆದ್ಯ ಕರ್ತವ್ಯ. ಒಂದು ವೇಳೆ ಅವಳ ಬಯಕೆಯನ್ನು ಗಂಡನು ಪೂರೈಸದಿದ್ದರೆ , ಅಂತಹ ಪುರುಷನಿಗೆ ಭ್ರೂಣ ಹತ್ಯೆ ಮಾಡಿದ ದೋಷವುಂಟಾಗುತ್ತದೆ. ಶೋಕವೆಂಬುದು ಮನುಷ್ಯನ ಶತ್ರು, ಯಾವ ಕಾರಣದಿಂದಲೂ ಮನುಷ್ಯನು ಶೋಕ ಪಡಬಾರದು. ಶೋಕದಿಂದ ಕೂಡಿರುವವರ ಕೈನಿಂದ ಯಾವ ಕಾರ್ಯವು ಸಾಧ್ಯವಾಗುವುದಿಲ್ಲ. ಶೋಕಿಸುತ್ತಿರುವವರನ್ನು ನೋಡಿ ಅವರಿಗಾಗದವರು ಹಿರಿಹಿರಿ ಹಿಗ್ಗುತ್ತಾರೆ. ಶೋಕಿಸುತ್ತಿರುವವರ ಸಮೀಪ ಬಂಧುಗಳು ಸಂಕಟಪಡುತ್ತಾರೆ. ಶೋಕದಿಂದಲೇ ಮನುಷ್ಯನು ಕ್ಷಯಿಸುತ್ತಾನೆ ಮಹಾಭಾರತ..... ದಿನಾಂಕ 1, .10, 19, ಮತ್ತು 28 ರಂದು ಜನಿಸಿದವರು ದಿನಾಂಕ 1, 2, 3, 5, 9, 10, 11, 12, 14, 18, 19, 20, 21, 23, 27, 28, 29 ಮತ್ತು 30 ರಂದು ಜನಿಸಿದವರೊಡನೆ ಕೂಡಿ ವ್ಯಾಪಾರ ವ್ಯವಹಾರಗಳನ್ನು ನಡೆಸಬಹುದು. ಇವರಿಬ್ಬರ ನಡುವೆ ಸಾಮರಸ್ಯವಿರುತ್ತದೆ ಭಿನ್ನಾಭಿಪ್ರಾಯಗಳು ಬಂದರೂ, ಅದು ವಿಕೋಪಕ್ಕೆ ಹೋಗುವುದಿಲ್ಲ. ಅಂತಹ ಸಂದರ್ಭಗಳು ಬಂದಾಗ ಯಾರಾದರೂ ಹಿರಿಯರು ಮಧ್ಯೆ ಕುಳಿತು ಸರಿಪಡಿಸಬಹುದು. ದಿನಾಂಕ 4, 6, 7, 8, 13, 15, 16, 17, 22, 24, 25, 26, ಮತ್ತು 31 ರಂದು ಜನಿಸಿದವರೊಡನೆ ತಾತ್ಕಾಲಿಕ ವ್ಯವಹಾರಗಳನ್ನು ಮಾಡಬಹುದು. ಇವರಿಬ್ಬರ ನಡುವೆ ನಡುವೆ ಭಿನ್ನಾಭಿಪ್ರಾಯಗಳು ಮೂಡಿದಾಗ ಅವುಗಳನ್ನು ಮುಂದುವರಿಯಲು ಬಿಡದೆ ಅಲ್ಲಿಯೇ ಸರಿಪಡಿಸಿಕೊಂಡು ಮುಂದುವರಿಯಬೇಕು. ಯಾವುದೇ ಕಾರಣದಿಂದಲೂ ಅದನ್ನು ಕಡೆಗಣಿಸಬಾರದು. ಜಾತಕದಲ್ಲಿ ಒಂದು ಗ್ರಹದಿಂದ ಮತ್ತೊಂದು ಗ್ರಹವು ಪಂಚಮ ಇಲ್ಲವೇ ನವಮ ಸ್ಥಾನಗಳಲ್ಲಿದ್ದರೆ, ನವ-ಪಂಚಮ ಯೋಗವು ಸಿದ್ಧಿಸುತ್ತದೆ. ಈ ಬಗೆಯ ಗ್ರಹಯೋಗದಲ್ಲಿ ಆಯಾ ಗ್ರಹಗಳ ದಶಾ ಭುಕ್ತಿ ಸಮಯದಲ್ಲಿ ಶುಭ ಯೋಗಗಳನ್ನು ಅನುಭವಿಸುತ್ತಾರೆ. ಜಾತಕದಲ್ಲಿ ಯಾವುದೇ ಗ್ರಹವು ಮತ್ತೊಂದು ಗ್ರಹದಿಂದ ತೃತೀಯ ಇಲ್ಲವೇ ಏಕಾದಶ ಸ್ಥಾನದಲ್ಲಿದ್ದರೆ ತ್ರೀರೇಖಾದಶ ಎಂಬ ಯೋಗ ಉಂಟಾಗುವುದು. ಈ ಯೋಗವು ಶುಭದಾಯಕವೂ ಹಾಗೂ ಬದುಕಿನಲ್ಲಿ ಮುಂದೆ ಬರುವ ಅವಕಾಶಗಳನ್ನು ಸೃಸ್ಟಿಸುವುದು. ಶಕಟ ಯೋಗ :- ಜಾತಕದಲ್ಲಿ ಚಂದ್ರನಿಂದ ಷಷ್ಟ ಅಥವಾ ಆಸ್ಟಮ ಸ್ಥಾನದಲ್ಲಿ ಗುರುವಿರಬೇಕು. ಈ ಷಷ್ಟ ಅಥವಾ ಆಸ್ಟಮ ಸ್ಥಾನವು ಲಗ್ನದಿಂದ ಕೇಂದ್ರ ಅಥವಾ ಕೋನ ಸ್ಥಾನಗಳಾಗಿರಬಾರದು. ಶಕಟ ಯೋಗವು ಜಾತಕದಲ್ಲಿದ್ದರೆ, ಎಸ್ಟೇ ಕಸ್ಟ ಪಟ್ಟು ದುಡಿದು ಶ್ರೀಮಂತರಾದರೂ, ಅವಶ್ಯಕತೆ ಇರುವಾಗ ಹಣದ ಕೊರತೆಯುಂಟಾಗಿ ಅವರಿವರ ಬಳಿ ಹಣ ಬೇಕೆಂದು ಕೇಳುವ ಪರಿಸ್ಥಿತಿ ಬರುತ್ತದೆ ಹಾಗೂ ಜಾತಕದಲ್ಲಿ ಲಗ್ನಾಧಿಪತಿ ಬಲಹೀನನಾಗಿದ್ದಾಗ, ಮನಸ್ಸು ಕುಗ್ಗಿಹೋಗುತ್ತದೆ. ಸಿಟ್ರಿನ್ ರತ್ನಗಳು :- ಸಿಟ್ರಿನ್ಗಳು ಹಳದಿ ಬಣ್ಣದ ಸ್ಪಟಿಕ ಶಿಲೆಗಳಾಗಿದ್ದು ಸಿಲಿಕಾನ್ ಡೈ ಅಕ್ಷೈಡ್‌ಗಳಿಂದ ರಚನೆಗೊಂಡಿರುತ್ತದೆ. ಈ ರತ್ನವು ಪರಿಶುದ್ಧವಾಗಿದ್ದಾರೆ ಬೆಲೆಯೂ ಹೆಚ್ಚಾಗಿರುತ್ತದೆ. ಇದನ್ನು ಕನಕ ಪುಷ್ಯರಾಗದ ಬದಲಿ ರತ್ನವಾಗಿ ಉಪಯೋಗಿಸಬಹುದು. ಉತ್ತಮ ಗುಣಮಟ್ಟದ ಸಿಟ್ರಿನ್ಗಳು ದೊರೆಯುವುದು ಅಪರೂಪ, ಆದುದರಿಂದ ಮಾರುಕಟ್ಟೆಯ ಬೇಡಿಕೆಯನ್ನು ಸರಿದೂಗಿಸಲು ಕಡಿಮೆ ಬೆಲೆಯ ಅಮೇಥಿಸ್ಟ್ಗಳನ್ನು ಒಂದು ಗೊತ್ತಾದ ಉಷ್ಣಾಂಶದಲ್ಲಿ ಕಾಯಿಸಿ ಹಳದಿ ಬಣ್ಣ ಬರುವಂತೆ ಮಾಡಿ ಅದನ್ನೇ ಸಿಟ್ರಿನ್ ಗಳೆಂದು ಮಾರುತ್ತಾರೆ. ಸಿಟ್ರಿನ್ಗಳನ್ನು ಉಪಯೋಗಿಸುವುದರಿಂದ ಶರೀರದ ಕಾಂತಿ ಅಧಿಕವಾಗುತ್ತದೆ, ಜ್ಞಾಪಕ ಶಕ್ತಿ ಹಾಗೂ ಬುದ್ದಿವಂತಿಕೆ ಹೆಚ್ಚುತ್ತದೆ. ಜಾತಕದಲ್ಲಿ ಎಲ್ಲಾ ಗ್ರಹಗಳೂ ದ್ವಿಸ್ವಭಾವ ರಾಶಿಗಳಲ್ಲಿದ್ದರೆ, ನಳವೆಂಬ ಯೋಗವುಂಟಾಗುತ್ತದೆ. ಈ ಯೋಗವು ಜಾತಕನನ್ನು ಬುದ್ದಿವಂತನನ್ನಾಗಿಸಿದರೂ, ತಾನು ಹೇಳಿದ್ದೆ ಆಗಬೇಕೆನ್ನುವ ಮನಃಸ್ಥಿತಿ ಉಂಟಾಗುತ್ತದೆ. ಇದರ ಜೊತೆಯಲ್ಲಿ ಯಾವುದಾದರೊಂದು ಕಾರಣಗಳಿಂದ ಅಂಗ ವೈಕಲ್ಯಗಳುಂಟಾಗುವ ಸಾಧ್ಯತೆಗಳು ಹೆಚ್ಚಾಗಿರುತ್ತದೆ. ಸತ್ಯಾಚಾರ್ಯ ಪ್ರಣೀತ ಜಾತಕ ಯೋಗ ಆಷಾಢ, ಶ್ರಾವಣ ಮಾಸಗಳು ಸರ್ಪಗಳ ಸಂತಾನೋತ್ಪತ್ತಿ ಕಾಲ. ಈ ಸಮಯದಲ್ಲಿ ಸರ್ಪಗಳು ಸಂತೋಷ ಸಂಭ್ರಮಗಳಿಂದ ಸಂಗಾತಿಯನ್ನು ಹುಡುಕಿಕೊಂಡು ಹರಿದಾಡುತ್ತಿರುತ್ತವೆ. ಅವುಗಳ ಜೀವನೋತ್ಸಾಹ ಹೇಳತೀರದು. ಶ್ರಾವಣದ ಸೋನೆ ಮಳೆ, ತಣ್ಣನೆಯ ಗಾಳಿ, ತಂಪಾಗಿರುವ ಭೂಮಿ ಇಂತಹ ಸುಂದರ ವಾತಾವರಣದಲ್ಲಿ ಕಾಮಪೀಡಿತರಾಗಿರುವ ಸರ್ಪಗಳು ಮೈಥುನ ಕ್ರಿಯೆಯಲ್ಲಿ ತೊಡಗಿರುತ್ತವೆ. ತಿಳುವಳಿಕೆಗಳಿಲ್ಲದೆ, ಸಹಜ ಸಂತೋಷಗಳಿಂದ ಮೈಮರೆತಿರುವ ಸರ್ಪಗಳನ್ನು ಬೇರ್ಪಡಿಸಿ ಅಟ್ಟಾಡಿಸಿಕೊಂಡು ಹತ್ಯೆಗೈಯುವವರನ್ನು ಸರ್ಪದೋಷವು ಆವರಿಸಿಕೊಳ್ಳುತ್ತದೆ. ಜೀವನ ಪರ್ಯಂತ ಸರ್ಪದೋಷವು ಅವರನ್ನು ಕಾಡುತ್ತಿರುತ್ತದೆ. ಅವರಿಂದ ಜನಿಸಿದ ಮಕ್ಕಳು, ಅವರ ಮುಂದಿನ ಪೀಳಿಗೆಯರೆಲ್ಲರೂ ಸರ್ಪದೋಷದ ಪರಿಣಾಮವನ್ನು ಅನುಭವಿಸಬೇಕಾಗಿ ಬರುತ್ತದೆ. ಜಾತಕದಲ್ಲಿ ಚಂದ್ರನು ಶನಿಯಿಂದ ಬಾಧಿತನಾಗಿದ್ದಾರೆ, ಅಥವಾ ಕುಜ ಇಲ್ಲವೇ ರಾಹು ಕೇತುಗಳ ಜೊತೆಯಲ್ಲಿದ್ದರೆ ಯಾವುದಾದರೊಂದು ರೀತಿಯಲ್ಲಿ ಮಾನಸಿಕ ಉದ್ವೇಗಗಳಿಗೆ ಈಡಾಗುತ್ತಾ ತೊಂದರೆಗಳನ್ನು ಅನುಭವಿಸುತ್ತಲೇ ಇರಬೇಕಾಗಿ ಬರುತ್ತದೆ. ಚಂದ್ರ ದಶಾ ಭುಕ್ತಿಯ ಸಮಯದಲ್ಲಿ ಚಂದ್ರನ ಸ್ಥಿತಿ ಕೆಟ್ಟು ಹೋಗಿದ್ದರೆ, ಶರೀರದ ಜಲಧಾತುಗಳು ವ್ಯತ್ಯಯಗೊಂಡು ಹಲವಾರು ಸಮಸ್ಯೆಗಳು ಎದುರಾಗುತ್ತವೆ. ಇಂತಹ ಪರಿಸ್ಥಿತಿಯಲ್ಲಿ ಚಂದ್ರನಿಗೆ ಹೇಳಿರುವ ಪರಿಹಾರ ಕ್ರಮಗಳನ್ನು ಆಚರಿಸುವುದರ ಮೂಲಕ ತೊಂದರೆಗಳನ್ನು ಪರಿಹರಿಸಿಕೊಳ್ಳಬಹುದು. ಜಾತಕದಲ್ಲಿ ಪಂಚಮಾಧಿಪತಿಯು ಲಗ್ನದಲ್ಲಿ ಮತ್ತು ಲಗ್ನಾಧಿಪತಿಯು ಪಂಚಮದಲ್ಲಿದ್ದರೆ , ಅಂತಹವರು ಹಲವಾರು ಮಕ್ಕಳಿಗೆ ಅಶ್ರಯದಾತರಾಗುತ್ತಾರೆ, ಅನ್ಯ ಮಕ್ಕಳನ್ನೂ ಸ್ವಂತ ಮಕ್ಕಳಂತೆ ಪ್ರೀತಿ ವಾತ್ಸಲ್ಯಗಳಿಂದ ನೋಡಿಕೊಳ್ಳುವ ಹೃದಯ ಶ್ರೀಮಂತಿಕೆ ಬೆಳೆದಿರುತ್ತದೆ. ಭಾನುವಾರ, ಶ್ರವಣ ನಕ್ಷತ್ರ ಮತ್ತು ವ್ಯತೀಪಾತ ಯೋಗ ಈ ಮೂರೂ ಮೇಳೈಸಿರುವ ಸಮಯದಲ್ಲಿ ಯಾವುದೇ ವಸ್ತುವನ್ನು ಕಸ್ಟದಲ್ಲಿರುವ ಯೋಗ್ಯರಿಗೆ ದಾನವಾಗಿ ನೀಡಿದಲ್ಲಿ ಪ್ರಾಚೀನ ಕರ್ಮಗಳಿಂದ ಉಂಟಾಗಿರುವ ದುರ್ವಿಧಿಗಳು ಪರಿಹಾರಗೊಳ್ಳುತ್ತವೆ. ಬೆಳಿಗ್ಗೆ 11 ರಿಂದ 1 ರೊಳಗೆ ( ದಿನ ವಾರ ತಿಂಗಳು ಹೀಗೆ ಯಾವುದೇ ಆಗಿದ್ದರೂ ) ಜನಿಸಿದವರು ಸದಾ ಕಾಲ ಎಲ್ಲರೊಡನೆ ನಗುನಗುತ್ತಾ ಸುಖವಾಗಿರಲು ಬಯಸುತ್ತಿರುತ್ತಾರೆ. ಇವರ ನಡೆನುಡಿಗಳಿಂದ ಅನ್ಯರಿಗೆ ಸಮಯ ಹೋಗುವುದೇ ಗೊತ್ತಾಗುವುದಿಲ್ಲ. ಇವರಿರುವ ಸ್ಥಳವು ಚೈತನ್ಯತೆಗಳಿಂದ ಕೂಡಿರುತ್ತದೆ. ಜೀವನದಲ್ಲಿ ಬಹಳ ಕಸ್ಟಪಟ್ಟು ಮುಂದೆ ಬರುತ್ತಾರೆ. ಇವರ ಪ್ರಮುಖ ಸಮಸ್ಯೆ ಏನೆಂದರೆ ತಮ್ಮದೇ ಆಗಿರುವ ಭ್ರಮಾಲೋಕದಲ್ಲಿರುವುದು. ಇವರು ಬಯಸಿದ ವಿಷಯಗಳು ಸುಲಭವಾಗಿ ದೊರಕುವುದಿಲ್ಲ, ಅದಕ್ಕಾಗಿ ಹೋರಾಟ ಮಾಡಬೇಕಾಗಿ ಬರುತ್ತದೆ. ತಾವೇ ಸಂಪಾದಿಸಿದ ಸ್ವತ್ತುಗಳ ಬಗ್ಗೆ ಚಿಂತಿಸುವ ಪರಿಸ್ಥಿತಿಗೆ ಈಡಾಗುತ್ತಾರೆ. ಕೆಟ್ಟ ಮಾತುಗಳಿಂದ ಅಥವಾ ಚುಚ್ಚು ಮಾತುಗಳಿಂದ ಮತ್ತೊಬ್ಬರ ಮನಸ್ಸನ್ನು ನೋಯಿಸುವವರು, ನಮ್ಮ ಅಭಿಪ್ರಾಯಗಳನ್ನು ಒಪ್ಪದಿರುವವರನ್ನು ಹೀನ ಕೃತ್ಯಗಳಿಂದ ಹಿಂಸಿಸುವವರು, ಇತರರ ಮನಸ್ಸನ್ನು ಉದ್ವೇಗಗಳಿಗೆ ಈಡು ಮಾಡುವವರು ಮತ್ತು ಅನ್ಯರಿಗೆ ಸದಾ ಕೇಡು ಬಗೆಯುವವರ ಜೀವನಾಂತ್ಯವು ಅತ್ಯಂತ ದಾರುಣವಾಗಿರುತ್ತದೆ. ಮಹಾಭಾರತ..... ಬೆಳಿಗ್ಗೆ 9 ರಿಂದ 11 ಗಂಟೆಯೊಳಗೆ ಜನಿಸಿದ್ದವರು ( ಜನಿಸಿದ ದಿನ, ವಾರ, ವರ್ಷ ಯಾವುದೇ ಆಗಿದ್ದರೂ ) ಧೈರ್ಯಶಾಲಿಗಳು, ಇವರಿದ್ದೆಡೆ ನಾಲ್ಕು ಜನರಿರುವರು. ತಮ್ಮ ಪರಿಶ್ರಮ, ತೀಕ್ಷ್ಣ ಬುದ್ಧಿ, ಚತುರತೆಗಳಿಂದ ಯಾವುದೇ ವೃತ್ತಿಯಲ್ಲಿದ್ದರೂ, ಸಾಕಸ್ಟು ಹಣ ಸಂಪಾದಿಸಿ ಶ್ರೀಮಂತರಾಗುವರು. ತಾವು ಇರುವ ಸ್ಥಳದಲ್ಲಿ ಹಾಗೂ ತಮ್ಮ ಸಮಾಜದಲ್ಲಿ ಗೌರವಾದರಗಳನ್ನು ಸಂಪಾದಿಸುವ ಮೂಲಕ ಹೆಸರುವಾಸಿಯಾಗುತ್ತಾರೆ. ಇವರು ಅಣ್ಣ ತಮ್ಮಂದಿರು, ಅಕ್ಕ ತಂಗಿಯರು ಹಾಗೂ ಬಂಧು ಬಳಗದವರಿಗೆ ಸಹಾಯ ಮಾಡುತ್ತಾರೆ ಹಾಗೂ ಅವರಿಂದ ಮೆಚ್ಚುಗೆಯನ್ನು ನಿರೀಕ್ಷಿಸುತ್ತಾರೆ. ಆದರೆ ಅವರು ನಿರೀಕ್ಷಿಸಿದ ರೀತಿಯಲ್ಲಿ ಪ್ರತಿಕ್ರಿಯೆಗಳು ವ್ಯೆಕ್ತವಾಗದಿರುವ ಕಾರಣ ನಿರಾಶರಾಗುವ ಸಂಭವ ಹೆಚ್ಚಾಗಿರುತ್ತದೆ. ಬೆಳಿಗ್ಗೆ 8 ರಿಂದ 10 ಗಂಟೆಯೊಳಗೆ ಜನಿಸಿದವರು ( ದಿನ, ವಾರ, ಇಸುವಿ ಹೀಗೆ ಯಾವುದೇ ಆಗಿದ್ದರೂ) ಪ್ರತಿ ತಿಂಗಳಿಗೊಮ್ಮೆ ಶುಕ್ಲ ಸಪ್ತಮಿಯಂದು ಮನಸ್ಸಿಗೆ ಇಷ್ಟವಾದ ದೇವರ ಆಲಯಕ್ಕೆ ತೆಂಗಿನಕಾಯಿ, ಎಣ್ಣೆ, ಮತ್ತು ಆರು ಸಂಖ್ಯೆಯ ಬಾದಾಮಿ ಬೀಜಗಳನ್ನು ನೀಡುತ್ತಿದ್ದಲ್ಲಿ, ಅವರ ಬದುಕಿನಲ್ಲಿ ಬರುವ ಸಮಸ್ಯೆಗಳು ಬಹಳ ಸುಲಭವಾಗಿ ಪರಿಹಾರಗೊಳ್ಳುತ್ತದೆ. ಬೆಳಿಗ್ಗೆ 7 ರಿಂದ 9 ರೊಳಗೆ ಜನಿಸಿದವರು ( ಯಾವುದೇ ವರ್ಷ,ತಿಂಗಳು ಅಥವಾ ದಿನ ಆಗಿದ್ದರೂ ಪರವಾಗಿಲ್ಲ ) ತಮ್ಮ ಬುದ್ದಿ ಶಕ್ತಿಗಳಿಂದ ವ್ಯಾಪಾರ ವ್ಯವಹಾರಗಳಲ್ಲಿ ಮುಂದೆ ಬಂದು ಶ್ರೀಮಂತರಾಗುತ್ತಾರೆ. ಉದ್ಯೋಗದಲ್ಲಿದ್ದರೂ ಕಸ್ಟ ಪಟ್ಟು ದುಡಿಯುವುದರ ಮೂಲಕ ಮುಂದೆ ಬರುತ್ತಾರೆ. ಆದರೆ ಇವರ ಪ್ರಮುಖ ಸಮಸ್ಯೆಯೆಂದರೆ ಇವರು ಮಾತನಾಡುವ ದಾಟಿ ಬೇರೆಯವರಿಗೆ ಸಹ್ಯವಾಗುವುದಿಲ್ಲ. ಕಡ್ಡಿ ಮುರಿದಂತೆ ನೇರವಾಗಿ ಹೇಳುವ ಸ್ವಭಾವದಿಂದಾಗಿ, ಜನರಲ್ಲಿ ವಿರೋಧಗಳನ್ನು ಸೃಷ್ಟಿಸಿಕೊಳ್ಳುತ್ತಾರೆ. ಮನೆಯಲ್ಲಿ ಉಂಟಾಗುವ ಅಶಾಂತಿ ಅವರ ಚೈತನ್ಯವನ್ನು ಕಡಿಮೆಗೊಳಿಸುವ ಸಾಧ್ಯತೆಗಳು ಹೆಚ್ಚಾಗಿರುತ್ತದೆ. ಯಾರು ಬೆಳಿಗ್ಗೆ 6 ಘಂಟೆಯಿಂದ 8 ರೊಳಗೆ ಜನಿಸಿರುತ್ತಾರೋ, ಅಂತಹವರು ಬಾಯಾರಿ ಬಳಲಿ ಬರುವ ಮನುಷ್ಯ,ಪ್ರಾಣಿ,ಇತ್ಯಾದಿ ಸಕಲ ಜೀವ ಜಂತುಗಳಿಗೂ ನೀರನ್ನು ನೀಡುತ್ತಿರಬೇಕು. ಅವರು ನೀರು ನೀಡುವುದಿಲ್ಲವೆಂದು ಯಾರಿಗೂ ಹೇಳಬಾರದು. ಅವರು ನೀಡುವ ಜಲದಾನವು ಅನೇಕ ಸಮಸ್ಯೆಗಳನ್ನು ಬಹಳ ಸುಲಭವಾಗಿ ಪರಿಹರಿಸಿಕೊಳ್ಳಲು ನೆರವಾಗುತ್ತದೆ. ಯಾವುದೇ ದಿನ, ತಿಂಗಳು, ಅಥವಾ ವರ್ಷವಾಗಿದ್ದು ಜನಿಸಿದ ಸಮಯ ಬೆಳಗಿನ 5 ರಿಂದ 7 ರೊಳಗಿದ್ದರೆ, ಅಂತಹವರಿಗೆ ಉತ್ತಮ ಯೋಗಗಳು ಸಿದ್ಧಿಸುತ್ತದೆ. ತಮಗಿರುವ ದೈವದತ್ತ ಪ್ರತಿಭೆಯನ್ನು ಸರಿಯಾದ ರೀತಿಯಲ್ಲಿ ಉಪಯೋಗಿಸಿಕೊಂಡು ಕಸ್ಟಪಟ್ಟು ದುಡಿಯುವುದರ ಮೂಲಕ ಅಮೋಘ ಸಾಧನೆಯನ್ನು ಮಾಡುವ ಶಕ್ತಿಯು ಅವರಿಗಿರುತ್ತದೆ. ಸಭಾ ಕಂಪನ ಮತ್ತು ಸ್ವಂತದವರೊಂದಿಗಿನ ಭಿನ್ನಾಭಿಪ್ರಾಯ ಇವೆರಡೂ ಇವರ ಪ್ರಮುಖ ದೌರ್ಬಲ್ಯಗಳು. ಇವುಗಳನ್ನು ಪರಿಹರಿಸಿಕೊಂಡು ಮುಂದೆ ಸಾಗುವುದು ಅತ್ಯಂತ ಅಗತ್ಯ. ಶ್ರೀ ಮೃತ್ಯುಂಜಯ ಮಹಾ ಮಂತ್ರ ಓಂ ಜೂಮ್ ಸಹ | ಭೋರ್ಭೂತ್ಸುವಃ | ತ್ರಯಮ್ಭಕಮ್ ಯಜಾಮಹೇ ಸುಗಂಧಿಂ ಪುಷ್ಟಿವರ್ಧನಂ ಉರ್ವಾರುಕಮಿವ ಬಂಧನಾತ್ ಮೃತ್ಯೋರ್‌ಮಕ್ಷೀಯ ಮಾಮೃತಾತ್| ಭೋರ್ಭೂತ್ಸುವಃ | ಓಂ ಜೂಮ್ ಸಹ || ಶ್ರೀ ಮೃತ್ಯುಂಜಯ ಮಹಾ ಮಂತ್ರವು ಅಕಾಲ ಮೃತ್ಯುವನ್ನು ಪರಿಹರಿಸಿ ಶರೀರದ ಸುತ್ತಲೂ ಒಂದು ರಕ್ಷಾ ಕವಚವನ್ನು ನಿರ್ಮಿಸುತ್ತದೆ. ಆದುದರಿಂದ ತೀವ್ರವಾದ ಖಾಯಿಲೆಗಳಿಂದ ಬಳಲುತ್ತಿರುವವರ ತಲೆಯ ಬಳಿ ಕುಳಿತು ಶ್ರೀ ಮೃತ್ಯುಂಜಯ ಮಹಾ ಮನ್ತ್ರವನ್ನು ಜಪಿಸುತ್ತಾ, ಸೂಕ್ತ ವೈದ್ಯೋಪಚಾರಗಳನ್ನು ನಡೆಸುತ್ತಿದ್ದರೆ, ಅಪಮೃತ್ಯುವು ನಿವಾರಣೆಯಾಗುತ್ತದೆ ಹಾಗೂ ಶೀಘ್ರ ಗುಣಮುಖರಾಗುತ್ತಾರೆ. ಕಾಲ ನಿರ್ಣಯದಂತೆ ಸಾತ್ವಿಕ, ರಾಜಸಿಕ, ಮತ್ತು ತಾಮಸಿಕ ಶಕ್ತಿಗಳು ಪ್ರಕೃತಿಯಲ್ಲಿ ಅಂತರ್ಗತವಾಗಿ ನೆಲೆಸ್ಸಿದ್ದು, ದಿನದ 24 ಘಂಟೆಗಳಲ್ಲಿ ಒಂದರ ನಂತರ ಮತ್ತೊಂದರಂತೆ ಬದಲಾಗುತ್ತಿರುತ್ತದೆ. ಬೆಳಗಿನ ಜಾವ 4 ರಿಂದ ಬೆಳಿಗ್ಗೆ 8 ರವರೆಗೆ ಮತ್ತು ಸಂಜೆ 4 ರಿಂದ ರಾತ್ರಿ 8 ರವರೆಗೆ ......ಸಾತ್ವಿಕ ಕಾಲ ಬೆಳಿಗ್ಗೆ 8 ರಿಂದ ಮಧ್ಯಾನ್ಹ 12 ರವರೆಗೆ ಮತ್ತು ರಾತ್ರಿ 8 ರಿಂದ ಮಧ್ಯರಾತ್ರಿ 12 ರವರೆಗೆ......ರಾಜಸಿಕ ಕಾಲ ಮಧ್ಯಾನ್ಹ 12 ರಿಂದ ಸಂಜೆ 4 ರವರೆಗೆ ಮತ್ತು ಮಧ್ಯರಾತ್ರಿ 12 ರಿಂದ ಬೆಳಗಿನ ಜಾವ 4 ರವರೆಗೆ....ತಾಮಸಿಕ ಕಾಲ. ಸಾತ್ವಿಕ ಕಾಲವು ಸತ್ವ ಗುಣ ಪ್ರಧಾನವಾದುದರಿಂದ ಧ್ಯಾನ, ತಪಸ್ಸು, ಅಧ್ಯಯನ, ಉಪಾಸನಾದಿಗಳಿಗೆ ಅತ್ಯಂತ ಉತ್ತಮವಾದುದು. ರಾಜಸಿಕ ಕಾಲವು ಸಾರ್ವಜನಿಕ ಕಾರ್ಯಕ್ರಮಗಳು, ಆಢಳಿತ ಮತ್ತು ರಾಜಕೀಯ ನಿರ್ಣಯಗಳಿಗೆ ಅತ್ಯಂತ ಪ್ರಶಸ್ತವಾದುದು. ತಾಮಸಿಕ ಕಾಲವು ವಾಮಾಚಾರ, ವಶೀಕರಣ, ಕ್ಷುದ್ರ ದೇವತೋಪಾಸನೆ, ತಂತ್ರ ಪ್ರತಿತಂತ್ರ ಇತ್ಯಾದಿಗಳಿಗೆ ಉತ್ತಮವಾದುದು. ಜಾತಕದಲ್ಲಿ ಚಂದ್ರ ಮತ್ತು ಇತರ ಗ್ರಹಗಳಿರುವ ಪರಿಸ್ಥಿತಿಗನುಸಾರವಾಗಿ ಕೆಲವು ವಿಶಿಷ್ಟ ಯೋಗಗಳು ರಚನೆಗೊಳ್ಳುತ್ತವೆ. ಅವುಗಳಲ್ಲಿ ಕೆಲವು ಪ್ರಮುಖ ಯೋಗಗಳು ಹೀಗಿರುತ್ತವೆ:- 1) ಸುನಫ ಯೋಗ 2) ಅನಫ ಯೋಗ 3) ಗಜಕೇಸರಿ ಯೋಗ 4) ದುರ್ದರ ಯೋಗ 5) ಅಮಲ ಯೋಗ 6) ಶಕಟ ಯೋಗ 7) ವಸುಮತಿ ಯೋಗ 8) ಚಂದ್ರಾಧಿ ಯೋಗ 9) ಅಧಮ ಯೋಗ 10) ಸಮ ಯೋಗ 11) ವರಿಷ್ಟ ಯೋಗ 12) ಶಕ್ತಿ ಯೋಗ 13) ಕೇಮದ್ರುಮ ಯೋಗ 14) ದರಿದ್ರ ಯೋಗ 15) ಮತಿಭ್ರಮಣ ಯೋಗ . ಜಾತಕ ಫಲಗಳನ್ನು ನಿರ್ಣಯಿಸುವಾಗ ಚಂದ್ರ ಯೋಗಗಳನ್ನು ಅವಶ್ಯವಾಗಿ ಗಮನಿಸಬೇಕು, ವಿಶೇಷವಾಗಿ ಸಾರ್ವಜನಿಕ ಬದುಕಿನಲ್ಲಿರುವವರಿಗೆ ಈ ಯೋಗಗಳು ಹೆಚ್ಚು ಪ್ರಸ್ತುತವಾಗುತ್ತದೆ. ದುಕಿನಲ್ಲಿ ಯಾರು ತಮ್ಮ ಪಾಲಿಗೆ ಬಂದ ಕೆಲಸವನ್ನು ಶ್ರದ್ಧೆಯಿಂದ ಸರಿಯಾದ ಕ್ರಮದಲ್ಲಿ ನಿರ್ವಹಿಸುವರೋ, ಅಂತಹವರು ಒಂದಲ್ಲಾ ಒಂದು ದಿನ ಖ್ಯಾತಿ ಹಾಗೂ ಜನ ಮನ್ನಣೆ ಪಡದೇ ಪಡೆಯುತ್ತಾರೆ. ಯಾರು ತಮ್ಮ ಪಾಲಿಗೆ ಬಂದ ಕೆಲಸವನ್ನು ಸರಿಯಾಗಿ ನಿರ್ವಹಿಸದೇ ಸುಮ್ಮನೆ ಕಾಲಹರಣ ಮಾಡುವರೋ , ಅಂತಹವರು ತಮ್ಮ ಅಮೂಲ್ಯ ಬದುಕನ್ನು ಹಾಲು ಮಾಡಿಕೊಳ್ಳುತ್ತಾರೆ. ಮಹಾಭಾರತ....... ಸರ್ವಶಕ್ತನೂ ಸರ್ವವ್ಯಾಪ್ತನು ಆದ ಶ್ರೀಹರಿಯು ಬುಧನ ಅಭಿಮಾನಿ ದೇವತೆ. ಬುಧವಾರದಂದು ಶ್ರೀಹರಿಯನ್ನು ಅರ್ಚಿಸಿ ಆರಾಧಿಸುವುದರಿಂದ ಬುಧನ ಅಶುಭ ಫಲಗಳನ್ನು ನಿವಾರಿಸಿಕೊಳ್ಳಬಹುದು. ಶ್ರೀ ಕೃಷ್ಣ, ಶ್ರೀರಾಮ, ಶ್ರೀ ನರಸಿಂಹ, ಶ್ರೀನಿವಾಸ, ವೆಂಕಟರಮಣ ಇತ್ಯಾದಿ ಯಾವುದಾದರೊಂದು ರೂಪವನ್ನು ಭಕ್ತಿಯಿಂದ ಪೂಜಿಸುತ್ತಾ ಬಂದಲ್ಲಿ ಜಾತಕದಲ್ಲಿನ ನಿ:ಶಕ್ತ ಬುಧನಿಂದ ಉಂಟಾಗುವ ಅಶುಭ ಫಲಗಳು ನಿವಾರಣೆಯಾಗುತ್ತದೆ. ಜನ್ಮ ರಾಶಿಯ ಮೇಲೆ ಸೂರ್ಯ ಬಂದಾಗ ಕೆಲಸ ಕಾರ್ಯಗಳಲ್ಲಿ ಅಡೆತಡೆಗಳು ಅತಿಯಾಗಿ ಕಂಡುಬರುತ್ತದೆ. ಪಿತ್ರಾರ್ಜಿತ ಆಸ್ತಿಪಾಸ್ತಿಗಳ ಬಗ್ಗೆ ವಿವಾದಗಳು ಹೆಚ್ಚುತ್ತವೆ. ಮನಸ್ಸಿನಲ್ಲಿ ಆತಂಕ,ಭಿನ್ನಾಭಿಪ್ರಾಯ ಮುಂತಾದವುಗಳು ಹೆಚ್ಚಾಗಿ ಕಂಡುಬರುತ್ತವೆ. ಸೂರ್ಯ ದಶಾ ಸಮಯದಲ್ಲಿ ಸ್ಪಟಿಕ ಮಾಲೆ ಮತ್ತು ರುದ್ರಾಕ್ಷಿ ಮಾಲೆಗಳನ್ನು ಧರಿಸುವುದರಿಂದ ಬಹಳ ಅನುಕೂಲತೆಗಳನ್ನು ಕಾಣಬಹುದು. ಇದರ ಜೊತೆಯಲ್ಲಿ ಪ್ರತಿದಿನ ಬೆಳಿಗ್ಗೆ ಸೂರ್ಯದೇವರಿಗೆ ಅರ್ಘ್ಯ ನೀಡಿ ಸೂರ್ಯ ಜಪವನ್ನು ಮಾಡುವುದರಿಂದ ಶುಭ ಫಲಗಳು ವೃದ್ಧಿಸುತ್ತವೆ. ಅಧಿಕಾರ ಪಡೆಯಲು ಬಯಸುವವರು ಜನರೊಡನೆ ಸೌಹಾರ್ದ ಸಂಭಂದ ಬೆಳೆಸಿಕೊಳ್ಳುವುದರ ಜೊತೆಯಲ್ಲಿ, ಹಸ್ತಾ ನಕ್ಷತ್ರವಿರುವ ಭಾನುವಾರ ಮತ್ತು ಶುಕ್ಲ ಸಪ್ತಮಿ ದಿನದಂದು ರೋಹಿಣಿ ನಕ್ಷತ್ರವಿರುವ ಭಾನುವಾರ, ಈ ಎರಡೂ ದಿನಗಳಲ್ಲಿ ಭಕ್ತಿ ಶ್ರದ್ಧೆಗಳಿಂದ ಸೂರ್ಯ ದೇವರ ಆರಾಧನೆಗಳನ್ನು ನಡೆಸುತ್ತಾ ಬಂದಲ್ಲಿ, ಕ್ಷಿಪ್ರವಾಗಿ ಮನೋಬಯಕೆಗಳನ್ನು ಈಡೇರಿಸಿಕೊಳ್ಳಬಹುದು. ಬುಧನು ಗೋಚಾರದಲ್ಲಿ ಜನ್ಮ ರಾಶಿಯ ಮೇಲೆ ಸಂಚರಿಸುತ್ತಿರುವಾಗ ಯಾವುದಾದರೊಂದು ಕಾರಣದಿಂದ ಮನಸ್ಸಿಗೆ ನೆಮ್ಮದಿಯಿರುವುದಿಲ್ಲ. ಸರಿಯಾದ ದಿಕ್ಕಿನಲ್ಲಿ ಯೋಚಿಸದೇ ಇರುವುದರಿಂದ ಹಾಗೂ ತಪ್ಪು ಕ್ರಮಗಳನ್ನು ತೆಗೆದುಕೊಳ್ಳುವುದರಿಂದ ವಿವಾದಗಳು ಹುಟ್ಟುವ ಸಾಧ್ಯತೆಗಳು ಹೆಚ್ಚಾಗಿರುತ್ತದೆ. ಜಾತಕದಲ್ಲಿ ಯೋಗಕಾರಕನಾಗಿರುವ ಬುಧನು ಶಕ್ತಿಹೀನನಾಗಿದ್ದಾರೆ, ಜಾತಕನಿಗೆ ಸಣ್ಣಪುಟ್ಟ ಅಡಚಣೆಗಳೇ ಬಹಳ ದೊಡ್ಡದಾಗಿ ಗೋಚರಿಸುತ್ತದೆ. ಇದರ ಪರಿಣಾಮದಿಂದ ಹತ್ತಿರಕ್ಕೆ ಬಂದಿರುವ ಅನುಕೂಲಗಳ ಕಡೆ ಗಮನ ಹರಿಸುವುದು ಕಡಿಮೆಯಾಗಿ,ವೃಥಾ ಚಿಂತಿಸುವುದು ಹೆಚ್ಚಾಗಿರುತ್ತದೆ. ಇಂತಹ ಮಾನಸಿಕ ಸ್ಥಿತಿಯಿಂದ ಹೊರಬರಲು ಪರಿಹಾರ ಕ್ರಿಯೆಗಳನ್ನು ಮಾಡಿಕೊಳ್ಳಬೇಕು. ಬುಧನು ವಾಣಿಗೆ ಅಧಿಪತಿ. ಜಾತಕದಲ್ಲಿ ಬಲಿಷ್ಟನಾಗಿರುವ ಬುಧನು ವಾಕ್ಚಾತುರ್ಯವನ್ನು ನೀಡುತ್ತಾನೆ. ಬುಧನು ಬಂಧು ಬಳಗದವರಿಗೆ, ವಿದ್ಯೆ, ಗಣಿತ, ವಿವೇಕ, ಲಿಪಿ, ಶಿಲ್ಪಕಲೆ, ಜ್ಯೋತಿಷ್ಯ, ವ್ಯಾಪಾರ ವ್ಯವಹಾರ, ಜಾಹೀರಾತು, ಹಾಸ್ಯಪ್ರವೃತ್ತಿ, ಲೆಕ್ಕಪತ್ರಗಳು, ಆಡಿಟಿಂಗ್, ಬರವಣಿಗೆ, ವೃತ್ತಪತ್ರಿಕೆಗಳು, ಮುದ್ರಣ, ಮಧ್ಯಸ್ತಿಕೆ, ಅಂತರ್ಜಾಲ, ದೂರಸಂಪರ್ಕ, ಮನರಂಜನಾ ಸ್ಥಳಗಳು, ಶಿಕ್ಷಕರು, ಶಿಕ್ಷಣ ಸಂಸ್ಥೆಗಳು, ನರಮಂಡಲ ಮುಂತಾದ ವಿಷಯಗಳಿಗೆ ಕಾರಕನಾಗಿರುತ್ತಾನೆಂದು ಜ್ಯೋತಿಷ್ಯ ಗ್ರಂಥಗಳಲ್ಲಿ ಹೇಳಲ್ಪಟ್ಟಿರುತ್ತದೆ. ವೃಷಭ, ಮಿಥುನ, ಕನ್ಯಾ, ತುಲಾ, ಮಕರ, ಕುಂಭ ಲಗ್ನಗಳಲ್ಲಿ ಜನಿಸಿದವರಿಗೆ ಬುಧನು ಯೋಗಕಾರಕನಾಗಿರುತ್ತಾನೆ. ಅವನ ದಶಾ ಸಮಯದಲ್ಲಿ ಜಾತಕನಿಗೆ ನಾನಾ ರೀತಿಯ ಅನುಕೂಲಗಳು, ಉದ್ಯೋಗದಲ್ಲಿ ಬಡ್ತಿ, ವ್ಯಾಪಾರ ವ್ಯವಹಾರಗಳಲ್ಲಿ ಪ್ರಗತಿಯುಂಟಾಗುತ್ತದೆ. ಗ್ರಹ ಗೋಚಾರ ಸಮಯದಲ್ಲಿ ಬುಧನು ರವಿ, ಶುಕ್ರ, ಗುರು ಇವರುಗಳಿರುವ ರಾಶಿಗಳ ಮೇಲೆ ಸಂಚರಿಸುತ್ತಿರುವಾಗ ಶುಭ ಫಲದಾಯಕನಾಗುತ್ತಾನೆ. ಜನ್ಮ ರಾಶಿಯಿಂದ ಬುಧನು ಜನ್ಮ ರಾಶಿ, ತೃತೀಯ, ಪಂಚಮ, ಸಪ್ತಮ, ನವಮ, ದಶಮ, ಮತ್ತು ದ್ವಾದಶ ರಾಶಿಗಳಲ್ಲಿ ಸಂಚರಿಸುತ್ತಿರುವಾಗ ಶುಭಫಲಗಳನ್ನು ನೀಡುತ್ತಾನೆ. ವೇದೋಕ್ತ ಕರ್ಮ ನಿರತರಾಗಿರುವ ಬ್ರಾಂಹಣರು ತಮ್ಮ ಜ್ಞಾನ, ತಿಳುವಳಿಕೆಗಳನ್ನು ಅನವರತ ಅನ್ಯರಿಗೆ ಧಾರೆಯೆರೆಯುತ್ತಾ ಮತ್ತೊಬ್ಬರಿಗೆ ತೊಂದರೆ ನೀಡದೆ ಅವರ ಪಾಡಿಗೆ ಉಪವಾಸ, ವನವಾಸ, ನೇಮ, ನಿಯಮಗಳಿಗನುಸಾರವಾಗಿ ಸರ್ವರಿಗೂ ಒಳಿತಾಗಲೆಂದು ಬಯಸುತ್ತಿರುತ್ತಾರೆ. ಇಂತಹ ಸಾತ್ವಿಕರನ್ನು ನೋಯಿಸಿ ಹಿಂಸಿಸುವುದರಿಂದ ಬ್ರಂಹಶಾಪ ದೋಷಕ್ಕೆ ಗುರಿಯಾಗಬೇಕಾಗಿ ಬರುತ್ತದೆ. ಇದರ ಪರಿಣಾಮದಿಂದ ಎಲ್ಲಾ ಯೋಗ್ಯತೆಗಳನ್ನು ಪಡೆದಿದ್ದರೂ ನ್ಯಾಯವಾಗಿ ದೊರಕಬೇಕಾಗಿರುವ ಸ್ಥಾನಮಾನಗಳು ದೊರಕದೆ ತೊಳಲಾಡುವ ಪರಿಸ್ಥಿತಿಗಳು ಬರುತ್ತವೆ. ದೇಶದಲ್ಲಿ ಅರಾಜಕತೆ, ಕ್ರಾಂತಿ, ದಂಗೆ, ದೊಂಬಿ, ಲೂಟಿ, ಮುಂತಾದ ವಿಪ್ಲವಗಳು ನಡೆದಿರುವ ಸಮಯದಲ್ಲಿ ನೊಂದು ಬೆಂದು ತಮ್ಮ ಬಳಿಯಿರುವುದೆಲ್ಲವನ್ನು ಕಳೆದುಕೊಂಡಿರುವವರು ಯಾರೇ ಆಗಿದ್ದರೂ, ಅಂತಹವರಿಗೆ ಸಾಂತ್ವನ ಹೇಳುತ್ತಾ ತಮ್ಮ ಕೈಲಾದ ನೆರವನ್ನೀಯುವವರಿಗೆ ಮಹಾ ಪುಣ್ಯ ಫಲವು ಪ್ರಾಪ್ತಿಯಾಗುತ್ತದೆ. ಅನ್ನದಾನವನ್ನು ಮಾಡಲು ತಿಥಿ, ವಾರ, ನಕ್ಷತ್ರ, ಇತ್ಯಾದಿ ಯಾವುದನ್ನೂ ನೋಡಬೇಕಾಗಿರುವುದಿಲ್ಲ. ಆಸ್ಪತ್ರೆಗಳಲ್ಲಿರುವ ಬಡ ರೋಗಿಗಳಿಗೆ ಹಾಲು ಹಣ್ಣು ನೀಡುವುದು, ಬಡ ವಿಧ್ಯಾರ್ಥಿಗಳಿಗೆ ಆಹಾರ ನೀಡುವುದು, ರಥೋತ್ಸವ, ಜಾತ್ರೆ, ಹಬ್ಬ, ಹರಿದಿನಗಳಲ್ಲಿ ಸೇರುವ ಭಕ್ತಾದಿಗಳಿಗೆ ಪ್ರಸಾದವನ್ನು ಹಂಚುವುದು, ಬಿಸಿಲಿನಲ್ಲಿ ಬಾಡಿ ಬರುವ ದಾರಿಹೋಕರಿಗೆ ತಿನ್ನಲು, ಕುಡಿಯಲು ನೀಡುವುದು ಇತ್ಯಾದಿಗಳೆಲ್ಲವೂ ಅನ್ನದಾನವೇ ಆಗಿರುವುದರಿಂದ, ತಮ್ಮ ಕೈಲಿ ಯಾವುದು ಸಾಧ್ಯವೋ ಅದನ್ನು ಮಾಡಿದರೆ ಸಾಕು ಅನಂತ ಪುಣ್ಯ ಪ್ರಾಪ್ತವಾಗುತ್ತದೆ. ಶ್ರಾವಣ ಮಾಸದಿಂದ ಭಾದ್ರಪದ, ಅಶ್ವಯಿಜ, ಕಾರ್ತಿಕ, ಮಾರ್ಗಶಿರ ಮಾಸಗಳು ಸರ್ಪಾರಾಧನೆಗಳಿಗೆ ಸರಿಯಾದ ಸಮಯ. ಶ್ರಾವಣದಲ್ಲಿ ನಾಗ ಪಂಚಮಿಯಿದ್ದರೆ, ಮಾರ್ಗಶಿರದಲ್ಲಿ ಸ್ಕಂದ ಷಷ್ಟಿ ಬರುತ್ತದೆ. ಶ್ರಾವಣ ಮತ್ತು ಮಾರ್ಗಶಿರ ಎರಡೂ ಮಾಸಗಳ ಪಂಚಮಿಯಂದು ನಾಗಪೂಜೆಯ ದಿನ. ಈ ಐದು ತಿಂಗಳುಗಳ ಕಾಲದಲ್ಲಿ ಆಶ್ಲೇಷ ಬಲಿ, ಸರ್ಪ ಸಂಸ್ಕಾರ ಮುಂತಾದ ಸರ್ಪ ಸಂಭಂದಿತ ಕ್ರಿಯೆಗಳಿಗೆ ಉತ್ತಮ ಸಮಯವಾಗಿರುತ್ತದೆ. ಜನ್ಮ ಸಂಖ್ಯೆ ....5 ದಿನಾಂಕ 5, 14, 23 ರಂದು ಜನಿಸಿದವರೆಲ್ಲರ ಜನ್ಮ ಸಂಖ್ಯೆ 5 ಆಗಿರುತ್ತದೆ. ಸಂಖ್ಯೆ 5 ಅಧಿಪತಿ ಬುಧ, ಅವನು ಸೂರ್ಯನಿಗೆ ಅತ್ಯಂತ ಸಮೀಪದಲ್ಲಿರುವ ಗ್ರಹ. ಸೌರ ಮಂಡಲ ರಚನೆಯ ಸಮಯದಲ್ಲಿ ಚಂದ್ರನಿಂದ ಸಿಡಿದು ದೂರ ಹೋಗಿ ರಚನೆಗೊಂಡಿರುತ್ತದೆಂಬುದು ಪ್ರಾಚೀನ ಗ್ರಂಥಗಳಲ್ಲಿನ ಉಲ್ಲೇಖ. ಜನ್ಮ ಸಂಖ್ಯೆ 5ರವರು ವಯಸ್ಸಾದರೂ ಯುವಕರಂತೆ ಜೀವನಾಂತ್ಯದವರೆಗೂ ಚಟುವಟಿಕೆಗಳಿಂದ ಬಾಳುತ್ತಾರೆ. ವಯಸ್ಸಾದ ನಂತರ ಸುಸ್ತು ಸಂಕಟಗಳೆಂದರೆ, ಅವರಲ್ಲಿ ಯಾವುದೋ ಶಾರೀರಿಕ ತೊಂದರೆ ಇರುವುದು ಖಂಡಿತವೆಂದು ಹೇಳಬಹುದು. ಎಂತಹ ಪ್ರಸಂಗಗಳಿದ್ದರೂ ಅವುಗಳನ್ನು ಸರಳವಾಗಿ ನಿಭಾಯಿಸಬಲ್ಲರು. ಇವರನ್ನು ಒಪ್ಪಿಸುವುದು ಬಹಳ ಸುಲಭ, ತತ್ವ ಸಿದ್ಧಾಂತಗಳಿಗೆ ಬಲವಾಗಿ ಜೋತುಬೀಳುವ ಸ್ವಭಾವ ಇವರಿಗಿರುವುದಿಲ್ಲ. ಸಮಯ ಸಂದರ್ಭಗಳನ್ನು ನೋಡಿಕೊಂಡು ತಮ್ಮ ನಿಲುವುಗಳನ್ನು ವ್ಯಕ್ತ ಪಡಿಸುವುದು ಇವರ ಜಾಣ್ಮೆಯ ನಡೆ. ಯಾರ ಜೊತೆ ಬೇಕಾದರೂ ಸುಲಭವಾಗಿ ಹೊಂದಿಕೊಂಡು ಹೋಗುತ್ತಾರೆ. ಇವರು ಪ್ರಾಮಾಣಿಕರು, ಬಹುವಾಗಿ ಕಸ್ಟಪಡುವ ಕೆಲಸಗಳನ್ನು ಇಸ್ಟಪಡುವುದಿಲ್ಲ, ಬದಲಿಗೆ ಸುಲಭವಾಗಿರುವ ಕೆಲಸವನ್ನು ಆಯ್ದುಕೊಳ್ಳುತ್ತಾರೆ. ಶಾರೀರಿಕವಾಗಿ ಶ್ರಮ ಪಡುವ ಉದ್ಯೋಗಗಳಿಗೆ ಇವರು ಸೂಕ್ತವಾಗಿರುವುದಿಲ್ಲ. ವಿಷಯಗಳನ್ನು ಸಮರ್ಥವಾಗಿ ಮಂಡಿಸಿ ಜನರನ್ನು ಒಪ್ಪಿಸಬಲ್ಲರು, ಆದರೆ ತಾವಾಗಿಯೇ ಮುಂದೆ ನುಗ್ಗಿ ಮಾಡಲು ಬಯಸರು ದಿನಾಂಕ 5, 14, ಮತ್ತು 23, ರಂದು ಜನಿಸಿದವರೆಲ್ಲರ ಜನ್ಮ ಸಂಖ್ಯೆ 5 ಆಗಿದ್ದರೂ, ದಿನಾಂಕ 14, ಮತ್ತು 23 ರಂದು ಜನಿಸಿದವರ ಗುಣ ಸ್ವಭಾವಗಳಲ್ಲಿ ಸ್ವಲ್ಪ ವ್ಯತ್ಯಾಸಗಳಿರುತ್ತವೆ. ಇದೆ ಅಲ್ಲದೆ ಅವರು ಹುಟ್ಟಿದ ವಾರದನುಸಾರವಾಗಿಯೂ ಕೆಲವು ಬದಲಾವಣೆಗಳಿರುತ್ತವೆ. ಜನ್ಮ ಸಂಖ್ಯೆ 5 ರ ಮುಂದುವರೆದ ಭಾಗ..... ದಿನಾಂಕ 14ರಂದು ಜನಿಸಿದವರು ಸುಮ್ಮನೆ ಕೂಡುವ ವ್ಯೆಕ್ತಿಯಾಗಿರುವುದಿಲ್ಲ, ಬದಲಿಗೆ ಸದಾ ಯಾವುದಾದರೊಂದು ಚಟುವಟಿಕೆಗಳಲ್ಲಿ ಭಾಗಿಯಾಗುತ್ತಿರುತ್ತಾರೆ. ಇವರು ಚಿಕ್ಕ ವಯಸ್ಸಿನಲ್ಲಿ ಆಟ ಪಾಟ ಮತ್ತು ಓದಿನಲ್ಲಿ ಮುಂದಿರುತ್ತಾರೆ. ಇವರಿಗೆ ನಾಯಕತ್ವದ ಗುಣಗಳಿರುತ್ತದೆ. ಯಾವುದೇ ಕಾರ್ಯವಾಗಿದ್ದರೂ ತಾಳ್ಮೆ ಸಮಾಧಾನಗಳಿಂದ ಮಾಡುತ್ತಾರೆ. ಇವರು ಮಧ್ಯ ವಯಸ್ಸು ತಲುಪುತ್ತಿದ್ದಂತೆ, ಮಾನಸಿಕವಾಗಿ ಹಲವಾರು ಬದಲಾವಣೆಗಳು ಉಂಟಾಗುತ್ತದೆ. ಒತ್ತಡಗಳಿಗೆ ಗುರಿಯಾದಾಗ ಉದ್ವೇಗ ಆತಂಕಗಳಿಗೆ ಒಳಗಾಗುತ್ತಾರೆ. ದಿನಾಂಕ 23 ರಂದು ಜನಿಸಿದವರು ಪ್ರತಿಯೊಂದು ವಿಷಯವನ್ನೂ ಮಾನವೀಯಾಟೆಗಳಿಂದ ನೋಡುತ್ತಾರೆ. ಇವರಲ್ಲಿ ಅತಿಯಾದ ವ್ಯಾಪಾರಿ ಬುದ್ದಿಯಿರುವುದಿಲ್ಲ. ಇವರಿಗೆ ಆರ್ಥಿಕವಾಗಿ ಜೀವನ ಪರ್ಯಂತ ಅನುಕೂಲಗಳು ಸಿದ್ಧಿಸುತ್ತವೆ. ವಯಸ್ಸಾಗುತ್ತಿದ್ದಂತೆ ಜ್ಞಾನಿಗಳಾಗಿದ್ದರು ಒಂದು ರೀತಿಯ ಉದ್ವೇಗವು ಅವರನ್ನು ಬಾಧಿಸುತ್ತಿರುತ್ತದೆ. ಸಂಖ್ಯೆ 5 ರಲ್ಲಿ ಜನಿಸಿದವರು ವಾತ, ಪಿತ್ತ, ಕಫ ಹೀಗೆ ಮೂರು ವಿಧದ ತೊಂದರೆಗಳಿಗೆ ಗುರಿಯಾಗುತ್ತಿರುತ್ತಾರೆ. ಯಾವುದು ಅತಿಯಾದರೂ ಸಹಿಸಲಾರರು. ವಯಸ್ಸಾಗುತ್ತಿದ್ದಂತೆ ಶಾರೀರಿಕ ಸಮಸ್ಯೆಗಳು, ನರಗಳ ದೌರ್ಬಲ್ಯ, ಉಸಿರಾಟಕ್ಕೆ ಸಂಭಂದಿಸಿದ ತೊಂದರೆಗಳು ಇತ್ಯಾದಿಗಳು ಬಾಧಿಸುವ ಸಾಧ್ಯತೆಗಳು ಹೆಚ್ಚಾಗಿರುತ್ತವೆ. ಇವರಿಗೆ ವ್ಯಾಪಾರಿ ಮನೋಭಾವವು ಹುಟ್ಟಿನಿಂದಲೇ ಬರುವುದರಿಂದ ಸ್ವಲ್ಪ ತರಪೇತಿ ನೀಡಿದರೆ ಸಾಕು, ಮಿಕ್ಕವುಗಳನ್ನು ತಾವೇ ಸಿದ್ಧಪಡಿಸಿಕೊಂಡು ಅಭಿವೃದ್ಧಿ ಹೊಂದುತ್ತಾರೆ. ಚಂಚಲ ಮನಸ್ಸಿಗೆ ಕಡಿವಾಣ ಹಾಕಿಕೊಂಡು ಎಕಚಿತ್ತತೆಇಂದ ದುಡಿದರೆ ಅದ್ಭುತವಾದುದನ್ನೇ ಸಾಧಿಸಬಹುದು. ಜಾತಕದಲ್ಲಿ ಕುಜದೋಷವಿರುವ ಯುವಕ ಅಥವಾ ಯುವತಿಯರು ಗಾಬರಿಗೊಳ್ಳಬೇಕಾದ ಅವಶ್ಯಕತೆಯಿರುವುದಿಲ್ಲ. ಭಗವಂತನು ಅನ್ಯರಿಗೆ ಇಲ್ಲದಂತಿರುವ ಒಂದು ಬಗೆಯ ವಿಶೇಷ ಶಕ್ತಿಯನ್ನು ಅವರಿಗೆ ದಯ ಪಾಲಿಸಿರುತ್ತಾನೆ. ತಮಗೆ ಲಭಿಸಿರುವ ಅಂತಹ ವಿಶೇಷತೆಯನ್ನು ಅರಿತು ಅದನ್ನು ಸದುಪಯೋಗಪಡಿಸಿಕೊಳ್ಳಬೇಕು. ವಜ್ರವು ಅತ್ಯಂತ ಬೆಲೆಬಾಳುವ ರತ್ನವಾಗಿರುವುದರಿಂದ ಅವುಗಳನ್ನು ಕೊಳ್ಳುವಾಗ ಎಚ್ಚರಿಕೆ ವಹಿಸಬೇಕು. ಇಲ್ಲವಾದರೆ ವಜ್ರಗಳಂತೆಯೇ ಕಾಣುವ ಇತರೆ ರತ್ನಗಳನ್ನಾಗಲಿ ಅಥವಾ ಕೃತಕ ರೀತಿಯಲ್ಲಿ ತಯಾರಿಸಿದ ನಕಲಿ ವಜ್ರಗಳನ್ನು ಕೊಂಡು ಮೋಸ ಹೋಗುವ ಸಾಧ್ಯತೆಗಳಿರುತ್ತದೆ. ಆದುದರಿಂದ ಗೊತ್ತಿರುವ ಇಲ್ಲವೇ ಹೆಸರಾಂತ ಹಾಗೂ ನಂಬಿಕೆಗೆ ಅರ್ಹರಾದ ರತ್ನಪಡಿ ವ್ಯಾಪಾರಿಗಳ ಬಳಿ ವಜ್ರಗಳನ್ನು ಕೊಳ್ಳುವುದು ಒಳ್ಳೆಯದು. ವಜ್ರವನ್ನು ಕೊಳ್ಳುವಾಗ ಮಾರಾಟದ ಬಿಲ್ ಜೊತೆಗೆ ಗ್ಯಾರಂಟಿ ಸರ್ಟಿಫಿಕೇಟ್ಗಳನ್ನು ಪಡೆದುಕೊಳ್ಳಬೇಕು. ವಜ್ರಗಳು :- ಭೂಗರ್ಭದಲ್ಲಿ ಇಲ್ಲಿಯವರೆಗೂ 84 ವಿವಿಧ ಬಗೆಯ ರತ್ನಗಳನ್ನು ಗುರುತಿಸಿ ಹೊರ ತೆಗೆಯಲಾಗಿದೆ. ಅವುಗಳಲ್ಲಿ ವಜ್ರವು ಅತ್ಯಂತ ಶ್ರೇಷ್ಟವಾದುದದೆಂದು ಹೇಳಲ್ಪಟ್ಟಿರುತ್ತದೆ. ವಜ್ರಗಳಲ್ಲಿ ಕಂಡುಬರುವ ವಿಶೇಷ ಗುಣವೆಂದರೆ ಅದರ ಗಟ್ಟಿತನ, ಸ್ಥಿರತ್ವ, ಹೊಳಪು, ಮತ್ತು ವಿರಳತೆ. ಚೆನ್ನಾಗಿ ಸಾಣೆ ಹಿಡಿದು ಪಟ್ಟಿಗಳನ್ನು ಕಟ್ಟಿ ಮೆರಗು ಕೊಟ್ಟಾಗ, ಬೆಳಕಿನ ಪ್ರತಿಫಲನೆಗಳಿಂದ ಬಣ್ಣಗಳು ವಿಭಜನೆಗೊಂಡು ಅಪ್ರತಿಮ ಪ್ರಕಾಶದಿಂದ ಕಂಗೊಳಿಸುತ್ತದೆ. ಬೇರೆ ಯಾವುದೇ ರತ್ನಗಳಿಗೆ ಎಸ್ಟೇ ಪಾಲಿಶ್ ಮಾಡಿ ಮೆರಗು ನೀಡಿದರೂ, ವಜ್ರದ ಹಾಗೆ ಹೊಳೆಯುವುದಿಲ್ಲ ವಜ್ರಗಳು ಸುಲಭವಾಗಿ ಸಿಗುವುದಿಲ್ಲ. ಬಹುಶಃ 300 ವರ್ಷಗಳ ಹಿಂದಿನವರೆಗೂ ವಜ್ರಗಳು ಭಾರತದಲ್ಲಿ ಮಾತ್ರ ದೊರೆಯುತ್ತಿದ್ದವು. ಇಲ್ಲಿಯವರೆಗೂ ದೊರೆತಿರುವ ಹಲವಾರು ಅಮೂಲ್ಯ ವಜ್ರಗಳು ಭಾರತದ ಅದರಲ್ಲಿಯೂ ಗೋಲ್ಕಂಡ ಗಣಿಗಳಲ್ಲಿ ದೊರೆತಿರುವುದೇ ಆಗಿರುತ್ತದೆಂಬುದನ್ನು ಇತಿಹಾಸವು ದಾಖಲಿಸಿದೆ. ವಿಜಯನಗರ ಸಾಮ್ರಾಜ್ಯದಲ್ಲಿ ವಜ್ರ ಮುತ್ತು ರತ್ನಗಳನ್ನು ಬೀದಿಗಳಲ್ಲಿ ರಾಶಿಯಾಗಿ ಹಾಕಿಕೊಂಡು ಮಾರುತ್ತಿದ್ದಾರೆಂಬುದು ಸರ್ವವಿಧಿತ. ಈಗ ಪ್ರಪಂಚದಾದ್ಯಂತ ಹಲವಾರು ದೇಶಗಳಲ್ಲಿ ವಜ್ರಗಳು ದೊರೆಯುತ್ತಿದ್ದು, ಅವುಗಳಲ್ಲಿ ದಕ್ಷಿಣ ಆಫ್ರಿಕಾ ಗಣಿಗಳು ಈಗ ಹೆಸರುವಾಸಿಯಾಗಿರುತ್ತವೆ. ಸಾಮಾನ್ಯವಾಗಿ ವಜ್ರಗಳು ಬಣ್ಣರಹಿತವಾಗಿರುತ್ತದೆ. ಕೆಲವೆಡೆಗಳಲ್ಲಿ ಸಿಗುವ ವಜ್ರಗಳು ತಿಳಿ ಗುಲಾಬಿ, ತಿಳಿ ಹಳದಿ, ತಿಳಿ ನೀಲಿ ಇತ್ಯಾದಿಗಳಲ್ಲಿ ದೊರಕುತ್ತವೆ. ಮತ್ತೆ ಕೆಲವು ಕಡೆಗಳಲ್ಲಿ ಕಪ್ಪು ವಜ್ರವೂ ದೊರೆಯುವುದುಂಟು. ವಜ್ರವನ್ನು ಬೇರೆ ಯಾವುದರಿಂದಲೂ ಕತ್ತರಿಸಲು ಸಾಧ್ಯವಿಲ್ಲ, ವಜ್ರವನ್ನು ವಜ್ರದಿಂದಲೇ ಕತ್ತರಿಸಬೇಕು. ವಜ್ರವನ್ನು ಗುರಿತಿಸುವ ಸುಲಭದ ಕ್ರಮವೇನೆಂದರೆ, ವಜ್ರವನ್ನು ಗಾಜಿನ ಮೇಲೆ ಗೀಚಿದಾಗ ,ಗಾಜು ಆ ರೇಖೆಗೆ ಸರಿಯಾಗಿ ಸೀಳುತ್ತದೆ. ಪ್ರಯೋಗ ಶಾಲೆಗಳಲ್ಲಿ ಗುರುತ್ವಾಕರ್ಷಣೆ ಮತ್ತು ಅದರ ಹಾರ್ಡ್ನೆಸ್ ಗಳಿಂದ ವಜ್ರವನ್ನು ಗುರುತಿಸಲಾಗುತ್ತದೆ. ವಜ್ರವು ಶುಕ್ರ ಗ್ರಹಕ್ಕೆ ಸೇರಿರುವ ರತ್ನ. ಇದು ಎಲ್ಲರಿಗೂ ಹೊಂದುವುದಿಲ್ಲ. ಹಿಂದೆ ಮುಂದೆ ನೋಡದೆ ಪ್ರತಿಷ್ಟೆಗಾಗಿ ವಜ್ರವನ್ನು ಧರಿಸಿದ ಅನೇಕ ಉನ್ನತ ವ್ಯಕ್ತಿಗಳು ಅತ್ಯಂತ ಕಸ್ಟಗಳನ್ನು ಅನುಭವಿಸಿದ ಉದಾಹರಣೆಗಳಿರುತ್ತದೆ, ಆದುದರಿಂದ ವಜ್ರವು ತನಗೆ ಹೊಂದುತ್ತದೋ ಅಥವಾ ಇಲ್ಲವೋ ಎಂಬುದನ್ನು ನೋಡಿಕೊಳ್ಳಬೇಕು. ವಜ್ರಗಳು :- ವಜ್ರಗಳು ಇಂಗಾಲದ ಪ್ರತಿರೂಪ, ಇದ್ದಿಲಿಗೂ ವಜ್ರಕ್ಕೂ ಮೂಲದಲ್ಲಿ ಯಾವುದೇ ಭೇದವಿರುವುದಿಲ್ಲ. ಅವೆರಡರ ಮೂಲ ವಸ್ತು ಒಂದೇ , ಅದೇ ಇಂಗಾಲ. ಕಲ್ಮಶಗಳಿಂದ ಕೂಡಿರುವ ಇಂಗಾಲವು ಇದ್ದಲಿನಲ್ಲಿರುತ್ತದೆ. ಆದರೆ ವಜ್ರದಲ್ಲಿರುವ ಇಂಗಾಲವು ನೈಸರ್ಗಿಕವಾಗಿ ಗಟ್ಟಿಗೊಂಡು ಹರಳುಗಳಾಗಿ ರೂಪಾಂತರಗೊಂಡಿರುತ್ತದೆ. ವಜ್ರಗಳನ್ನು ಅವುಗಳ ಶುಭ್ರತೆ ಮತ್ತು ಬಣ್ಣಗಳಿಗನುಸಾರವಾಗಿ ವಿಂಗಡಿಸುತ್ತಾರೆ. ಅವುಗಳ ವಿಂಗಡಣೆಯ ಕ್ರಮ ಹೀಗಿರುತ್ತದೆ :- ಡಿ ಈ ಎಫ್.................. ಸಂಪೂರ್ಣ ಪಾರದರ್ಶಕ ಮತ್ತು ವರ್ಣರಹಿತ ಶ್ರೇಷ್ಟ ವಜ್ರಗಳು. ಜಿ ಏಚ್........................ ಸ್ವಚ್ಚವಾಗಿರುವ ಬಿಳಿಯ ವಜ್ರಗಳು. ಐ ಜೆ............................ ತಿಳಿ ಬಣ್ಣಗಳಿರುವ ವಜ್ರಗಳು ಕೆ ಎಲ್......................... ಬಿಳಿಯದಾಗಿ ಕಾಣುವ ವಜ್ರಗಳು. ನೈಸರ್ಗಿಕವಾಗಿ ಭೂಮಿಯಲ್ಲಿ ದೊರೆತ ವಜ್ರಗಳು ಎಂದಿಗೂ ಸವೆಯುವುದಿಲ್ಲ ಮತ್ತು ಉಕ್ಕಿನ ವಸ್ತುವನ್ನು ವಜ್ರವು ಪುಡಿ ಪುಡಿ ಮಾಡಬಲ್ಲದು. ಆಯುರ್ವೇದ ವೈದ್ಯ ಪದ್ಧತಿಯಲ್ಲಿ ವಜ್ರಗಳಿಂದ ಭಸ್ಮವನ್ನು ತಯಾರಿಸಿ ಅದರಿಂದ ವಿವಿಧ ಖಾಯಿಲೆಗಳನ್ನು ನಿವಾರಿಸುತ್ತಾರೆ. ವಜ್ರವನ್ನು ಧರಿಸುವ ಮೊದಲು ಅದನ್ನು ಒಂದು ವಾರ ಪರ್ಯಂತ ರಾತ್ರಿಯಲ್ಲಿ ತಲೆ ದಿಂಬಿನಡಿ ಇಟ್ಟುಕೊಂಡು ಮಲಗಿ ನಿದ್ರಿಸಬೇಕು. ರಾತ್ರಿಯ ಹೊತ್ತು ನಿದ್ರೆ ಮಾಡುವಾಗ ಯಾವ ಸಮಸ್ಯೆಯೂ ಉಂಟಾಗದೆ ಚೆನ್ನಾಗಿ ಮಲಗಿ ನಿದ್ರಿಸಿದರೆ ಅಂತಹವರಿಗೆ ವಜ್ರ ಆಗಿಬರುತ್ತದೆ. ಅದಿಲ್ಲದೆ ಸರಿಯಾಗಿ ನಿದ್ರೆ ಬಾರದೆ, ದುಃಸ್ವಪ್ನಗಳು ಬಾಧಿಸಿದರೆ ವಜ್ರವನ್ನು ಧರಿಸುವುದು ಸೂಕ್ತವಾಗಿರುವುದಿಲ್ಲ. ಕೋಹಿನೂರ್ ವಜ್ರ :- ಕೋಹಿನೂರ್ ವಜ್ರವು ಭಾರತದ ಹೈದರಾಬಾದ್‌ನ ಗೋಲ್ಕಂಡ ವಜ್ರದ ಗಣಿಯಲ್ಲಿ ಸಿಕ್ಕಿರುವ, ಬೆಳಕಿನ ಗೋಳದಂತೆ ಅತ್ಯಾಕರ್ಷಕವಾಗಿ ಕಂಗೊಳಿಸುವ ಅಪರೂಪದ ವಜ್ರ. ಈ ವಜ್ರವು ಹಲವಾರು ರಾಜ ಮಹಾರಾಜರುಗಳನ್ನು ಸೇರಿ,ಅನೇಕರು ಇದರಿಂದ ಕಸ್ಟ ನಸ್ಟಗಳನ್ನು ಅನುಭವಿಸಿದರು. ಕೋಹಿನೂರ್ ವಜ್ರದ ಖ್ಯಾತಿ ಎಲ್ಲೆಡೆ ಹರಡಿ ಮೊಗಲ್ ದೊರೆ ಅಕ್ಬರನನ್ನು ಆಕರ್ಷಿಸಿತು. ಬಹಳವಾಗಿ ಪ್ರಯತ್ನಿಸಿ ಇದನ್ನು ಪಡೆದ ಅಕ್ಬರ್ ಬಾದಷಹನು, ತನ್ನ ಬಳಿಯೇ ಇಟ್ಟುಕೊಂಡಿದ್ದನು. ಅದು ಅಕ್ಬರನಿಗೆ ಯೋಗದಾಯಕವಾಗಿ ಲೋಕವಿಖ್ಯಾತನಾದ. ಮುಂದೆ ಅವನ ಸಂತತಿಯವರಿಗೆ ಇದು ಹೊಂದಲಿಲ್ಲ. 1739 ರಲ್ಲಿ ನಾದಿರ್ ಷಹ, ಮೊಗಲ್ ಚಕ್ರವರ್ತಿಯನ್ನು ಸೋಲಿಸಿ ಕೋಹಿನೂರ್ ವಜ್ರವನ್ನು ಅಫ್ಘಾನಿಸ್ಥಾನ್ಗೆ ಕೊಂಡೊಯ್ದನು .ಪಂಜಾಬಿನ ಸಿಂಹ ರಣಜಿತ್‌ಸಿಂಘ್ ಮುಂದೆ ಕಾಬೂಲನ್ನು ವಶಪಡಿಸಿಕೊಂಡಾಗ ಕೋಹಿನೂರ್ ಅವನ ವಶವಾಯಿತು. ಕೋಹಿನೂರ್ ವಜ್ರವು ಮಹಾರಾಜ ರಣಜಿತ್‌ಸಿಂಗ್ನಿಗೆ ಶುಭಕಾರಿಯಾಗಿ ಅವನು ಬದುಕಿರುವವರೆಗೂ ಯೋಗವನ್ನುಂಟುಮಾಡಿತು. ಮಹಾರಾಜನು ಕಾಲವಾದ ನಂತರ ಬ್ರಿಟಿಷರು ಪಂಜಾಬನ್ನು ಹಿಡಿದಾಗ ವಜ್ರವು ಅವರ ಕೈವಶವಾಗಿ ಮಹಾರಾಣಿ ವಿಕ್ಟೋರಿಯಾ ಬಳಿ ಬಂದಿತು. ಇದರ ಬೆಳಕಿನ ಪ್ರಭಾವಳಿ ಮತ್ತು ಕಂಪನ ತರಂಗಾಂತರಗಳು ಬ್ರಿಟಿಷ್ ಅರಸೊತ್ತಿಗೆಗೆ ಅಪಾರ ಶುಭಯೋಗವನ್ನುಂಟು ಮಾಡಿತು. ಈಗಲೂ ಅದು ಬ್ರಿಟಿಷ್ ರಾಜಮನೆತನದ ಸೊತ್ತಾಗಿದ್ದು, ಅದನ್ನು ವಿಂಡ್ಸರ್ ಅರಮನೆಯಲ್ಲಿ ಭದ್ರವಾಗಿ ಕಾಪಾಡಿದ್ದಾರೆ. ಇದರ ತೂಕ 106 ಕ್ಯಾರೇಟ್‌ಗಳು. ಗದೇವತೆಗಳ ಆರಾಧನೆ :- ಕದ್ರುವಿನ ಪ್ರೀತಿ ಪಾತ್ರ ಪುತ್ರ ಶಂಖಪಾಲ. ಸರ್ಪರಾಜ ವಾಸುಕಿಯ ಆಜ್ಞೆಯಂತೆ ಅಧೋಲೋಕಗಳನ್ನು ಪಾಲಿಸುತ್ತಿರುವ ಸರ್ಪ ಪ್ರಮುಖರಲ್ಲಿ ಒಬ್ಬನು. ಜಾತಕದಲ್ಲಿ ಅಧಿಕಾರ ಯೋಗವಿದ್ದರೂ, ಅನೇಕ ಇತರೇ ಕಾರಣಗಳಿಂದ ಸರಿಯಾದ ಹುದ್ದೆ ದೊರೆಯುವುದಿಲ್ಲದಿರುವುದು, ರಾಜಕೀಯ ಅಧಿಕಾರಗಳನ್ನು ಗಳಿಸುವ ಕಿತ್ತಾಟದಲ್ಲಿ ನಡೆಸುವ ಕ್ಷುದ್ರ ವಿದ್ಯಾ ಪ್ರಯೋಗಗಳು ಮತ್ತು ಅವುಗಳ ಪರಿಣಾಮದಿಂದ ಉಂಟಾಗುವ ಸಮಸ್ಯೆಗಳು ಇತ್ಯಾದಿಗಳನ್ನು ಶಂಖಪಾಲ ಸರ್ಪಾದೇವರ ಆರಾಧನೆಗಳಿಂದ ನಿವಾರಿಸಿಕೊಳ್ಳಬಹುದು. ಶ್ರೀ ಮಹಾಲಕ್ಷ್ಮಿಗೆ ಹತ್ತಿರದವನೂ, ಶ್ರೀಮನ್ನಾರಾಯಣನ ಪರಮಾಪ್ತನು ಆಗಿರುವ ಮಹಾಪದ್ಮ ಸರ್ಪವು ಭಗವಂತನ ಸೂಚನೆಯಂತೆ ಕುಭೇರನ ಭಂಡಾರವನ್ನು ಅನವರತ ರಕ್ಷಿಸುತ್ತಿರುವನು. ಭೂಮಿಯಲ್ಲಿ ಹುದುಗಿರುವ ನಿಧಿಯನ್ನು ಮಹಾಪದ್ಮ ಸಂತತಿಯವರು ಕಾಪಾಡುವ ಹೊಣೆಯನ್ನು ಹೊತ್ತಿರುತ್ತಾರೆ. ನೈಜ ವಾರಸುದಾರರು ಬರುವವರೆಗೂ ಅವುಗಳನ್ನು ಕಾಪಾಡಿ, ಅವರು ಬಂದ ಕೂಡಲೇ ತಮ್ಮ ಕಾರ್ಯವಾಯಿತೆಂದು ಭಾವಿಸಿ ತಮ್ಮ ಮೂಲ ನೆಲೆಗೆ ವಾಪಸಾಗುತ್ತಾರೆ. ಐಹಿಕ ಸುಖ ಭೋಗ ಭಾಗ್ಯಗಳನ್ನು ಯಥೇಚ್ಛವಾಗಿ ಅನುಭವಿಸಬೇಕೆಂಬ ಬಯಕೆ ಹೊಂದಿದ್ದು, ಅದಕ್ಕನುಗುಣವಾಗಿ ಕಸ್ಟಪಟ್ಟು ದುಡಿದರೂ ಸಿಗದಿದ್ದಾಗ ಮಹಾಪದ್ಮ ಸರ್ಪಾರಾಧನೆಗಳಿಂದ ಅನುಕೂಲಗಳನ್ನು ಕಾಣಬಹುದಾಗಿರುತ್ತದೆ. ಸತ್ಪಾತ್ರನಾದ ಬಾಲಕನಿಗೆ ವಿದ್ಯಾದಾನ ಮಾಡಿದವರು, ಧನಹೀನ ಬಡ ವಿಧ್ಯಾರ್ಥಿಗಳಿಗೆ ಹಣಕಾಸಿನ ನೆರವನ್ನಿತ್ತು ಅವರು ವಿದ್ಯಾವಂತರಾಗುವಂತೆ ಮಾಡುವವರು, ಯೋಗ್ಯನಾದ ಶಿಷ್ಯನಿಗೆ ವಿದ್ಯೆಯನ್ನು ಹೇಳಿಕೊಡುವವರು, ಅಂತಹವರೆಲ್ಲರೂ ಮರಣಾನಂತರ ಪುನಃ ವಿದ್ಯಾ ಬುದ್ದಿ ಜ್ಞಾನವುಳ್ಳ ಮನುಷ್ಯರಾಗಿ ಜನಿಸಿ ಉತ್ತಮ ಜೀವನ ನಡೆಸುತ್ತಾರೆ. ಮಹಾಭಾರತ...... ಗೋವುಗಳು ಬಾಲವನ್ನು ಎತ್ತಿಕೊಂಡು ಅರಚಾಡುತ್ತಾ ಕೊಟ್ಟಿಗೆಯಿಂದ ಹೊರಗೆ ಓಡಿದರೆ, ಅದರ ಯಜಮಾನನಿಗೆ ಸಮಸ್ಯೆಗಳು ಉಂಟಾಗುತ್ತದೆ ಎಂಬುದು ಅನುಭವದ ಶಕುನ. ಇದಕ್ಕೆ ಬುಧವಾರದಂದು ಮೊಸರು ಮತ್ತು ಜೇನು ದಾನ ಪರಿಹಾರ. ಸಾವಿತ್ರಿ ವ್ರತ :- ಕನ್ಯೆಯ ಜಾತಕದಲ್ಲಿ ವೈಧವ್ಯ ಯೋಗ ಅಥವಾ ಗಂಡನಿಂದ ದೂರವಾಗಿ ಬಾಳುವ ಅನಿಸ್ಟ ಯೋಗಗಳು ಕಂಡುಬಂದರೆ, ಆ ಕನ್ಯೆಯಿಂದ ಏಕಾಂತದಲ್ಲಿ ಸಾವಿತ್ರಿ ವ್ರತವನ್ನು ಮಾಡಿಸಿ ನಂತರ ವಿವಾಹವನ್ನು ನಡೆಸುವುದು ಪ್ರಾಚೀನ ಸಂಪ್ರದಾಯ. ಈ ವ್ರತವನ್ನು ಶುಭ ತಿಥಿ ಇರುವ ಗುರುವಾರ, ವಟ ವೃಕ್ಷದ ಅಡಿಯಲ್ಲಿ ನವಧಾನ್ಯಗಳನ್ನು ಹರಡಿ, ಅದರ ಮೇಲೆ ಸಾವಿತ್ರಿ ಪ್ರತಿಮೆಯನ್ನು ಸ್ಥಾಪಿಸಿ ಷೋಡಶೋಪಚಾರ ಪೂಜೆಗಳನ್ನು ಮಾಡಿ, ವಟ ವೃಕ್ಷವನ್ನು ಸೂತ್ರದಿಂದ ಬಂಧಿಸಿ ಪಂಚೋಪಚಾರ ಪೂಜೆಯನ್ನು ಸಲ್ಲಿಸಬೇಕಾಗಿರುವುದು ಆಚರಣೆಯಲ್ಲಿನ ಪ್ರಮುಖ ಪೂಜಾವಿಧಿ. ಮಮ ವೈಧವ್ಯಾದಿ ಸಕಲ ದೋಷ ಪೀಡಾ ಪರಿಹಾರಾರ್ಥಂ, ಸರ್ವ ಶಾಪ ನಿವಾರಣಾರ್ಥಂ, ಪೂರ್ವ ಜನ್ಮಾರ್ಜಿತ ದೋಷ ನಿವಾರಣಾರ್ಥಂ ಬ್ರಮ್ಹ ಸಾವಿತ್ರಿ ವ್ರತಮಹಂ ಕರಿಷ್ಯೇ || ಇದು ಸಂಕಲ್ಪ. ಈ ವ್ರತವನ್ನು ಆಚರಿಸುವವರು ಸಾತ್ವಿಕ ಆಹಾರ, ಉಪವಾಸ ಹಾಗೂ ಶ್ರದ್ಧಾ ಭಕ್ತಿಗಳಿಂದ, ಪುರೋಹಿತರ ಮೂಲಕ ಸಾಂಗವಾಗಿ ಪೂರೈಸಿದಲ್ಲಿ ಸಕಲ ದೋಷಗಳು ನಿವಾರಣೆಯಾಗಿ ಶುಭ ಫಲಗಳು ಸಿದ್ಧಿಸುತ್ತದೆಂಬುದು ಅನುಭವದ ನುಡಿ. ಗುರುವು ಧನಕಾರಕ ಗ್ರಹವೆಂದು ಜ್ಯೋತಿಷ್ಯದಲ್ಲಿ ವರ್ಣಿಸಲ್ಪಟ್ಟಿದೆ. ಗುರುವಿನ ದಯೆಯಿಲ್ಲದೆ ಯಾರೂ ಶ್ರೀಮಂತರಾಗಲಾರರು. ಮನುಷ್ಯನು ಯಾವುದೇ ವೃತ್ತಿಯನ್ನು ಮಾಡಿದರೂ ಅದರಲ್ಲಿ ಹೆಸರು ಮಾಡಿ ಹತ್ತಾರು ಜನರ ಮೆಚ್ಚುಗೆ ಸಂಪಾದಿಸಬಹುದು. ಆದರೆ ಅದರಲ್ಲಿ ದುಡ್ಡು ಮಾಡುವುದು ಮತ್ತು ಮಾಡಿದ ದುಡ್ಡನ್ನು ಇಟ್ಟುಕೊಳ್ಳುವುದಕ್ಕೆ ಗುರುವಿನ ಅನುಗ್ರಹ ಬೇಕೇ ಬೇಕು. ಜಾತಕದಲ್ಲಿ ಗುರುವು ಯೋಗಕಾರಕನಾಗಿದ್ದಾಗ, ಅಥವಾ ಯೋಗಕಾರಾಕರಾಗಿರುವ ಅನ್ಯ ಗ್ರಹಗಳನ್ನು ಗುರುವು ವೀಕ್ಷಿಸಿದಾಗ, ಇಲ್ಲವೇ ಗುರುವಿನ ನಕ್ಷತ್ರಗಳಲ್ಲಿ ಯೋಗವನ್ನೀಯುವ ಗ್ರಹಗಳಿದ್ದಾಗ ಹೀಗೆ ಯಾವುದೋ ಒಂದು ರೀತಿಯಲ್ಲಿ ಗುರುವಿನ ಸಂಭಂದ ಪಡೆದಿದ್ದಾಗ ಹಣಕಾಸಿನ ಅನುಕೂಲಗಳು ಸಿದ್ಧಿಸುತ್ತವೆ. ನಾಗದೇವತೆಗಳ ಆರಾಧನೆ :- ಕಾರ್ಕೋಟಕ ಮಹಾಸರ್ಪವು, ಆಸ್ಟ ನಾಗ ಪ್ರಮುಖರಲ್ಲಿಯೇ ಅತ್ಯಂತ ಘೋರ ವಿಷಪೂರಿತವಾದುದು. ಈತನು ನಳ ಮಹಾರಾಜನ್ನು ಕಚ್ಚಿದಾದುದರಿಂದ, ನಳನ ಶರೀರದಲ್ಲಿ ಆವಾಹನೆಗೊಂಡಿದ್ದ ಕಲಿಯು ವಿಷಾದ ಪ್ರಭಾವವನ್ನು ಭರಿಸಲಾರದೆ ನಳನ ಶರೀರದಿಂದ ಹೊರಬಂದನು. ನಳನ ಶರೀರದ ಮೂಲಕ ಸೇವಿಸಿದ್ದ ಘೋರ ವಿಷವನ್ನು ಕಕ್ಕಿ ನೆಮ್ಮದಿಯಿಂದ ಉಸಿರನ್ನು ಬಿಟ್ಟು, ನಳನ ಸಹವಾಸವೇ ಬೇಡವೆಂದು ಅಲ್ಲಿಂದ ಹೊರಟುಬಿಟ್ಟನು. ಕಲಿಯು ನಲನಿಂದ ದೂರವಾದ ಮೇಲೆ ಅವನ ಸಂಕಟಗಳು,ದುಖ: ದುಮ್ಮಾನಗಳೆಲ್ಲವೂ ದೂರವಾಗಿತು. ಅವನ ಕಸ್ಟಗಳೆಲ್ಲವೂ ನಿವಾರಣೆಗೊಂಡು ಪುನಃ ರಾಜನಾಗಿ ಪಟ್ಟಾಭಿಷಿಕ್ತನಾದನು. ಕಾರ್ಕೋಟಕ ಸರ್ಪ ದೇವತೆಯನ್ನು ಪೂಜಿಸಿ ಪ್ರಾರ್ಥಿಸುವುದರಿಂದ ಬುದ್ದಿ ಶಕ್ತಿಯು ಚುರುಕಾಗುತ್ತದೆ. ವ್ಯಾಪಾರ ವ್ಯವಹಾರಗಳಲ್ಲಿನ ತೊಂದರೆಗಳು ಪರಿಹಾರವಾಗುತ್ತದೆ. ತೊದಲುವಿಕೆ,ಸರಿಯಾಗಿ ಮಾತನಾಡಲು ಆಗದಿರುವುದು, ಬಿಕ್ಕಲು, ಜ್ಞಾಪಕ ಶಕ್ತಿ ಕಡಿಮೆಯಿರುವುದು, ಎಸ್ಟೇ ಮೇಧಾವಿಯಾಗಿದ್ದರೂ ಹತ್ತು ಜನರ ನಡುವೆ ನಿಂತು ಮಾತನಾಡುವಾಗ ಬೆವರಿ ಬೆನ್ದಾಗುವುದು ಮುಂತಾದ ತೊಂದರೆಗಳೆಲ್ಲವೂ ಪರಿಹಾರವಾಗುತ್ತವೆ. ನಾಗದೇವತೆಗಳ ಆರಾಧನೆ :- ತೀಕ್ಷ್ನ ವಿಷವನ್ನು ಪಡೆದಿರುವ ತಕ್ಷಕನು ದೇವರಾಜ ಸ್ವರ್ಗಾಧಿಪತಿ ಇಂದ್ರನ ಪರಮಾಪ್ತ ಮಿತ್ರ. ಶೃಂಗಿಯ ಶಾಪವನ್ನು ಕಾರ್ಯಗತಗೊಳಿಸಲು ವಿಧಿಯಿಂದ ನಿಯುಕ್ತಿಗೊಂಡು ತನಗೆ ವಹಿಸಿದ ಕೆಲಸವನ್ನು ಯಾವುದೇ ರಾಗ ದ್ವೇಷ ಭಯವಿಲ್ಲದೆ ನಿರ್ವಹಿಸಿ ಜನಮೇಜಯನ ಕೋಪಾಗ್ನಿಗೆ ಒಳಗಾದವನು. ಸರ್ಪಯಾಗದಲ್ಲಿ ತಕ್ಷಕನನ್ನೇ ಗುರಿಯಾಗಿಸಿಕೊಂಡು ತಕ್ಷಕಾಯ ಸರ್ಪಾಯ ಸ್ವಾಹಾ ಎಂಬ ಆಹುತಿ ಮಂತ್ರದಿಂದ ಮಂತ್ರ ದ್ರಷ್ಟಾರರಾದ ಬ್ರಾಂಹಣರು ಎಷ್ಟೇ ಗಟ್ಟಿಯಾಗಿ ಮಂತ್ರ ಘೋಷ ಮಾಡಿದರೂ, ವಿಧಿಯು ತಕ್ಷಕನಿಗೆ ಸಹಾಯ ಮಾಡಿ ಅವನನ್ನು ಉಳಿಸಿಕೊಂಡಿತು, ಅದರ ಪ್ರಯುಕ್ತ ತಕ್ಷಕನು ಅಗ್ನಿಕುಂಡಕ್ಕೆ ಬೀಳಲಿಲ್ಲ. ಅಷ್ಟರೊಳಗೆ ಆಸ್ತಿಕ ನೆಂಬ ಬ್ರಾಂಹಣ ವಟುವಿನಿಂದ ಸರ್ಪಯಾಗವೇ ನಿಂತುಹೋಯಿತು. ಎರಡನೆಯ ಬಾರಿ ಖಾಂಡವ ವನವನ್ನು ಕೃಷ್ಣಾರ್ಜುನರು ದಹಿಸಿದಾಗಲೂ ವಿಧಿಯು ಸಹಕರಿಸುದದರ ಪ್ರಯುಕ್ತ ಅಗ್ನಿ ದುರಂತಕ್ಕೆ ಸಿಲುಕದೆ ಕ್ಷೇಮದಿಂದ ಪಾರಾದನು. ದೇವತೆಗಳ ಪರಮಾಪ್ತ ತಕ್ಷಕನನ್ನು ಧ್ಯಾನಿಸಿ ಪೂಜಿಸುವುದರಿಂದ ಮುನ್ನುಗ್ಗಿ ಕೆಲಸ ಮಾಡುವ ಸ್ವಭಾವ ಹೆಚ್ಚಾಗುತ್ತದೆ. ಯಾರಿಗೆ ಭಯ,ನಾಚಿಕೆ,ಸಂಕೋಚ ಸ್ವಭಾವಗಳು ಅತಿಯಾಗಿದ್ದು ಹಿಂಜರಿಕೆಯಿಂದ ಯಾವ ಕಾರ್ಯವನ್ನು ಮಾಡಲಾರರೋ, ಅಂತಹವರು ತಕ್ಷಕ ನಾಗಸರ್ಪವನ್ನು ಧ್ಯಾನಿಸುವುದರಿಂದ ಅನುಕೂಲವಾಗುತ್ತದೆ. ನಾಗದೇವತೆಗಳ ಆರಾಧನೆ :- ನಾಗಸರ್ಪಗಳಲ್ಲಿ ಹಿರಿಯವನಾದ ಆದಿಶೇಷನು ಶ್ರೀ ಹರಿಯ ಇಚ್ಛೆಯಂತೆ ಭೂಮಿಯನ್ನು ಹೊತ್ತು ನಿಂತನು. ಇನ್ನು ಎರಡನೆಯವನಾದ ಅನಂತನು ಶ್ರೀ ಹರಿಗೆ ಶೇಷಶಯನನಾದನು. ಮೂರನೆಯವನಾದ ವಾಸುಕಿ ಸರ್ಪಶ್ರೇಷ್ಟನು ಸರ್ಪರಾಜನಾಗಿ ನಿಯುಕ್ತಿಗೊಂಡನು. ದೇವ ದಾನವರ ನಡುವೆ ನಡೆದ ಘನಘೋರ ಕಾಳಗದಲ್ಲಿ ದಾನವರ ಕೈ ಮೇಲಾಯಿತು, ಇದರಿಂದ ಬೆದರಿದ ದೇವತೆಗಳು ಶ್ರೀ ಹರಿಯ ಮೊರೆಹೋದರು. ದಾನವರ ಆಕ್ರಮಣವನ್ನು ಎದುರಿಸಲು ದೇವತೆಗಳನ್ನು ಬಲಪಡಿಸಲೇಬೇಕೆಂದು ತೀರ್ಮಾನಿಸಿದ ಶ್ರೀ ಹರಿಯು ಸಮುದ್ರಮಂಥನ ಕಾರ್ಯವನ್ನು ನಡೆಸಲು ದೇವ ದಾನವರಿಬ್ಬರನ್ನು ಪ್ರಚೋದಿಸಿದನು. ಅದರಿಂದ ಬರುವ ಅಮೃತವನ್ನು ಅವರಿಬ್ಬರೂ ಸಮವಾಗಿ ಹಂಚಿಕೊಳ್ಳುವ ಒಪ್ಪಂದವಾಯಿತು. ಈ ಕಾರ್ಯಕ್ಕೆ ಸರ್ಪರಾಜನಾದ ವಾಸುಕಿಯು ಕಡೆಗೋಲು ಹಗ್ಗವಾಗಿ ಸಹಕರಿಸಿದ. ಶ್ರೀ ಹರಿಯ ಪರಮ ಭಕ್ತನಾದ ವಾಸುಕಿಯ ಆರಾಧನೆಗಳಿಂದ ಮಾನಸಿಕ ಸಮಸ್ಯೆಗಳು ದೂರವಾಗುತ್ತವೆ. ಉನ್ಮಾದ,ಹುಚ್ಚು,ಬೆಪ್ಪು,ಸದಾ ಕಾಲ ಯೋಚಿಸುತ್ತಿರುವುದು,ಯಾವಾಗಲೂ ಮಂಕಾಗಿ ಕುಳಿತಿರುವುದು,ಏಕಾಂತದಲ್ಲಿರಲು ಬಯಸುವುದು ಇತ್ಯಾದಿಗಳನ್ನು ಪರಿಹರಿಸಿಕೊಳ್ಳಬಹುದು. ನಾಗದೇವತೆಗಳ ಆರಾಧನೆ :- ಕ್ಷೀರ ಸಾಗರದ ಮಧ್ಯೆ ಅಖಿಲಾಂಡ ಕೋಟಿ ಬ್ರಮ್ಹಾಂಡ ನಾಯಕ ಶ್ರೀ ಮಹಾವಿಷ್ಣುವು ಜಗನ್ಮಾತೆ ಶ್ರೀ ಲಕ್ಷ್ಮಿಯೊಡನೆ ಅನಂತ ಸರ್ಪ ಶ್ರೇಷ್ಟನ ಮೇಲೆ ಪವಡಿಸಿರುತ್ತಾನೆಂದರೆ, ಅನಂತ ಸರ್ಪಾದೇವರ ಮಹಿಮೆ ಅಪಾರವಾದುದೆಂಬುದನ್ನು ಬಿಡಿಸಿ ಹೇಳಬೇಕಾಗಿರುವುದಿಲ್ಲ. ಅಂತಹ ಮಹಾನುಭಾವನನ್ನು ಭಕ್ತಿ ಶ್ರದ್ಧೆಗಳಿಂದ ಅನವರತ ಪೂಜಿಸುತ್ತಿದ್ದರೆ ನ್ಯಾಯಯುತವಾಗಿರುವ ಎಲ್ಲಾ ಬೇಡಿಕೆಗಳೂ ತಪ್ಪದೆ ಈಡೇರುತ್ತವೆ. ಪುಣ್ಯಕಾರ್ಯಗಳಿಗೆ ಸಿಗಬೇಕಾಗಿರುವ ಪ್ರತಿಫಲವು ಯಾವುದೇ ಲೋಪವಿಲ್ಲದೆ ಪರಿಪೂರ್ಣವಾಗಿ ಸಿದ್ಧಿಸುತ್ತದೆ. ಅನಂತ ಸರ್ಪ ದೇವರನ್ನು ಪೂಜಿಸುತ್ತಿದ್ದರೆ ಕಾಲಕಾಲಕ್ಕೆ ಮಳೆ ಬೆಳೆಗಳು ಬೆಳೆದು ಸುಭಿಕ್ಷೆ ಮೂಡುತ್ತದೆ. ರಾಜ್ಯಾಡಳಿತವು ಸ್ಥಿರವಾಗಿರುತ್ತದೆ. ಅಧಿಕಾರವು ಪ್ರಾಪ್ತವಾಗಿ ನೆಮ್ಮದಿ ಮೂಡುತ್ತದೆ. ಸರ್ಕಾರಿ ಅಧಿಕಾರಿಗಳು, ಆಡಳಿತವನ್ನು ನಡೆಸುತ್ತಿರುವವರು, ವಿವಿಧ ಸಂಘ ಸಂಸ್ತೆಗಳ ಮುಖ್ಯಸ್ಥರು,ಅಧ್ಯಕ್ಷರು,ಮಂತ್ರಿಗಳು,ಜನಪ್ರತಿನಿಧಿಗಳು ಅನಂತ ಸರ್ಪ ದೇವತೆಯನ್ನು ನಿರಂತರವಾಗಿ ಪೂಜಿಸುವುದರಿಂದ ತಾವು ಅಭಿವೃದ್ಧಿಗೊಂಡು ತಮ್ಮನ್ನು ನಂಬಿದವರನ್ನೂ ಉದ್ಧಾರ ಮಾಡುವುದರ ಮೂಲಕ ಅಪರಿಮಿತ ಯಶಸನ್ನು ಗಳಿಸಬಹುದು. ನಾಗದೇವತೆಗಳ ಆರಾಧನೆ....2 ಕಶ್ಯಪ,ಕದ್ರುವಿನ ಹಿರಿಯ ಮಗನಾದ ಆದಿಶೇಷನು ಸಾತ್ವಿಕ. ಸರ್ಪಗಳ ವಿಷದ ಪ್ರಭಾವ ಮತ್ತು ಅದರಿಂದ ಜೀವಿಗಳಲ್ಲಿ ಉಂಟಾದ ಅಸ್ಥಿರತೆಗಳನ್ನು ಕಂಡು ಸಂಕಟಪಟ್ಟ ಮಹಾನುಭಾವ. ಕೆಲವು ದುಸ್ಟ ಸರ್ಪಗಳು ನಡೆಸಿದ ಅವಾಂತರಗಳಿಂದ ಬೇಸರಗೊಂಡು, ಸರ್ಪಕುಲದಿಂದ ದೂರವಾಗಿ ಬ್ರಂಹ ದೇವರನ್ನು ಕುರಿತು ಅಖಂಡ ತಪಸ್ಸನ್ನು ಮಾಡಿದನು. ಬ್ರಮ್ಹ ದೇವರ ಆದೇಶದಂತೆ ಶ್ರೀ ಹರಿಯ ಬಳಿ ಧಾವಿಸಿದವನಿಗೆ , ಭೂಮಿಯನ್ನು ತನ್ನ ಸಹಸ್ರ ಹೆಡೆಗಳ ಮೇಲೆ ಹೊತ್ತು ನಿಲ್ಲುವಂತೆ ಶ್ರೀಮನ್ನಾರಾಯಣನು ಸೂಚಿಸಿದನು. ಆದಿಶೇಷನು ಅದನ್ನು ಶಿರಸಾವಹಿಸಿ ಪಾಲಿಸಿ ಭೂಮಿಯನ್ನು ತನ್ನ ಶಿರಗಳ ಮೇಲೆ ಹೊತ್ತು ನಿಂತನು. ಇದೇ ಅಲ್ಲದೆ ದುಸ್ಟ ಶಿಕ್ಷಣ ಮತ್ತು ಶಿಷ್ಟ ರಕ್ಷಣ ಕಾರ್ಯದಲ್ಲಿ ಶ್ರೀ ಮಹಾವಿಷ್ಣುವಿಗೆ ನೆರವಾಗಿ ನಿಂತನು. ರಾಮಾವತಾರದಲ್ಲಿ ಲಕ್ಷ್ಮಣನಾಗಿ ಮತ್ತು ಕೃಷ್ಣಾವತಾರದಲ್ಲಿ ಬಲರಾಮನಾಗಿ ಅವತರಿಸಿ ಭಗವಂತನಿಗೆ ನೆರವಾದ. ಹೀಗೆ ಸೃಷ್ಟಿಯ ಅನಂತಪಾಲನೆಯ ಕ್ರಿಯೆಯಲ್ಲಿ ಪರಮಾತ್ಮನಿಗೆ ನೆರವು ನೀಡಿದ ಆದಿಶೇಷನ ಮಹಿಮೆ ಅಪಾರ. ಸರ್ಪಗಳಿಗೆ ಅಧಿಪತಿಯಾಗಿ ವೈಭೋಗ ಜೀವನ ನಡೆಸಬಹುದಾಗಿದ್ದ ಶ್ರೀ ಆದಿಶೇಷನು ಅವೆಲ್ಲವನ್ನೂ ತೃಣವಾಗಿ ಕಂಡು ಶ್ರೀ ಹರಿಯ ಪಾದಸೇವಕನಾದ. ಯಾರಿಗೆ ಐಹಿಕ ಸುಖ ಭೋಗಗಳಿಗಿಂತ ಪರಮಾತ್ಮನ ದರ್ಶನ ಮತ್ತು ಅವನ ಆಡಿದಾವರೆಗಳಲ್ಲಿ ಸೇರಬೇಕೆಂಬ ಬಯಕೆ ಆದಮ್ಯವಾಗಿರುವುದೋ ಬ್ರಮ್ಹ ಜ್ಞಾನ ಪಡೆಯಲು ಮತ್ತು ಮೋಕ್ಷ ಮಾರ್ಗದಲ್ಲಿ ಸಾಗಲು ಇಚ್ಚಿಸುವರೋ ಅಂತಹವರಿಗೆಲ್ಲರಿಗೂ ಆದಿಶೇಷನ ಅನುಗ್ರಹವು ಅತ್ಯಂತ ಫಲದಾಯಕವಾಗಿರುತ್ತದೆ. ಗಂಗಾ,ಯಮುನಾ,ಕಾವೇರಿ ಮುಂತಾದ ಪುಣ್ಯ ನದಿಗಳಲ್ಲಿ ಸ್ನಾನ ಮಾಡುವಾಗ ಆದಿಶೇಷನ ಧ್ಯಾನ ಕ್ಷಿಪ್ರ ಫಲಗಳನ್ನಿಯುತ್ತದೆ. ಮಂತ್ರ,ತಂತ್ರ ಸಿದ್ಧಿ ಶೀಘ್ರವಾಗುತ್ತದೆ. ನಾಗದೇವತೆಗಳ ಆರಾಧನೆ :- ಕಶ್ಯಪ ಮಹರ್ಷಿಗಳಿಂದ ನಾಗಮಾತೆಯಾದ ಕದ್ರುವಿನ ಉದರದಲ್ಲಿ ವಿವಿಧ ಜಾತಿಯ ನಾಗಗಳು ಮತ್ತು ಸರ್ಪಗಳ ಜನನವಾಯಿತು. ಇವುಗಳಲ್ಲಿ ಕೆಲವು ನಾಗಸರ್ಪಗಳು ಅತ್ಯಂತ ವಿಷಪೂರಿತವಾಗಿದ್ದರೆ ಮತ್ತೆ ಕೆಲವು ಮಧ್ಯಮ ವಿಷವುಳ್ಳದ್ದಾಗಿರುತ್ತದೆ. ಬಹುಪಾಲು ಸರ್ಪಗಳು ಸಂಪೂರ್ಣವಾಗಿ ವಿಷರಹಿತ ಹಾವುಗಳಾಗಿರುತ್ತವೆ. ಇವುಗಳಲ್ಲಿ ನವನಾಗ ಸರ್ಪಗಳು ಪ್ರಮುಖವಾಗಿದ್ದು, ನಾಗಲೋಕವನ್ನು ಮತ್ತು ಸರ್ಪ ಸಂಭಂದಿತ ವಿಷಯಗಳನ್ನು ನಿಯಂತ್ರಿಸುತ್ತಿರುತ್ತಾರೆ, ಇದೇ ಅಲ್ಲದೆ ಮನುಷ್ಯರು ಮತ್ತು ದೇವತೆಗಳ ನಡುವೆ ನಾಗಗಳ ಜೊತೆಯ ಸಮನ್ವಯವನ್ನು ಸಾಧಿಸುವುದರಲ್ಲಿ ಮುಖ್ಯರಾಗಿರುತ್ತಾರೆ.. ಇವರುಗಳ ಜೊತೆಯಲ್ಲಿ ಮಾನಸಾದೇವಿ, ವಿರುಥ ನಾರಾಯಣಿ, ನಾಗೇಶ್ವರಿ, ಕುಬ್ಜಿಕಾದೇವಿ ಮುಂತಾದವರು ನಾಗಮಾತೆಯರಾಗಿದ್ದು ನವನಾಗ ಪ್ರಮುಖರಂತೆ ಲೋಕ ಪಾಲನೆಯಲ್ಲಿ ಶ್ರೀಹರಿಗೆ ವಿವಿಧ ರೂಪಗಳಲ್ಲಿ ನೆರವಾಗುತ್ತಿರುತ್ತಾರೆ ಅಲ್ಲದೆ ಮಾನವರಿಂದ ಪೂಜಿಸಲ್ಪಡುತ್ತಿದ್ದಾರೆ. ನವನಾಗದೇವತೆಗಳು ....1) ಆದಿಶೇಷ ೨) ಅನಂತ 3) ವಾಸುಕಿ 4) ತಕ್ಷಕ 5) ಕಾರ್ಕೋಟಕ 6) ಶಂಖಪಾಲ 7) ಮಹಾಪದ್ಮ 8) ಕುಲಿಕ 9) ಐರಾವತ. ಕನ್ಯಾ ಲಗ್ನದಲ್ಲಿ ಜನಿಸಿದವರಿಗೆ ಶುಕ್ರನು ದ್ವಿತೀಯ ಮತ್ತು ನವಮ ಸ್ಥಾನಗಳಿಗೆ ಅಧಿಪತಿಯಾಗಿರುತ್ತಾನೆ. ನವಮಾಧಿಪತಿಯಾಗಿ ಯೋಗಕಾರಕನಾಗುವುದರಿಂದ ಕನ್ಯಾ ಲಗ್ನದಲ್ಲಿ ಜನಿಸಿದವರು ವಜ್ರವನ್ನು ಧರಿಸಬಹುದು. ವಜ್ರದ ಜೊತೆಯಲ್ಲಿ ಪಚ್ಚೆಯನ್ನು ಧರಿಸಿದಲ್ಲಿ ಹೆಚ್ಚಿನ ಅನುಕೂಲವುಂಟಾಗುತ್ತದೆ. ತುಲಾ ಲಗ್ನದಲ್ಲಿ ಜನಿಸಿದವರಿಗೆ ಶುಕ್ರನು ಲಗ್ನ ಮತ್ತು ಆಸ್ಟಮ ಸ್ಥಾನಗಳಿಗೆ ಅಧಿಪತಿಯಾಗಿದ್ದು ಲಗ್ನಾಧಿಪತಿಯಾಗಿ ಯೋಗಕಾರಕನಾಗುತ್ತಾನೆ. ಆದುದರಿಂದ ತುಲಾ ಲಗ್ನದಲ್ಲಿ ಜನಿಸಿದವರು ವಜ್ರವನ್ನು ಧರಿಸಬಹುದು. ವಜ್ರದ ಜೊತೆಯಲ್ಲಿ ನೀಲ ಮತ್ತು ಪಚ್ಚೆಗಳನ್ನು ಧರಿಸುವುದರಿಂದ ಹೆಚ್ಚು ಅನುಕೂಲವಾಗುತ್ತದೆ. ಸರ್ಪಾರಾಧನೆ ಅಥವಾ ನಾಗಪೂಜೆಯನ್ನು ಶುಕ್ಲಪಕ್ಷದ ದ್ವಿತೀಯ,ತೃತೀಯ,ಚೌತಿ,ಪಂಚಮಿ,ಷಷ್ಟಿ,ಸಪ್ತಮಿ,ಆಸ್ಟಮೀ,ಅಥವಾ ಹುಣ್ಣಿಮೆ ದಿನಗಳ ಸೋಮವಾರ,ಮಂಗಳವಾರ,ಗುರುವಾರ,ಶುಕ್ರವಾರದಂದು ನಡೆಸುವುದು ಸೂಕ್ತವಾಗಿರುತ್ತದೆ. ಈ ದಿನಗಳಲ್ಲಿ ಆರಿದ್ರಾ ಅಥವಾ ಆಶ್ಲೇಷಾ ನಕ್ಷತ್ರಗಳು ಬಂದರೆ ಇನ್ನೂ ವಿಶೇಷ ಫಲದಾಯಕವಾಗಿರುತ್ತದೆ. ತಿಳಿದೋ ತಿಳಿಯದೆಯೋ ಮಾಡಿರಬಹುದಾಗಿರುವ ಸರ್ಪ ನಿಂದನೆ,ಸರ್ಪ ಹತ್ಯೆ ಮೊದಲಾದ ಅಪಚಾರಗಳಿಂದ ಉಂಟಾಗಿರುವ ತೊಂದರೆಗಳನ್ನು ಹಾಗೂ ಅಡೆತಡೆಗಳನ್ನು ಪರಿಹರಿಸಿಕೊಳ್ಳಲು ನಾಗಪೂಜೆಯು ಅತ್ಯಂತ ಸುಲಭದ ಮಾರ್ಗ. ಭಕ್ತಿ ಶ್ರದ್ಧೆಗಳಿಂದ ಸರ್ಪಾರಾಧನೆಗಳನ್ನು ಆಚರಿಸಿ ನಾಗದೇವತೆಗಳ ಕೃಪೆಗೆ ಪಾತ್ರರಾಗಬಹುದು. ಮೇಷ ಲಗ್ನದಲ್ಲಿ ಜನಿಸಿದವರಿಗೆ ಶುಕ್ರನು ದ್ವಿತೀಯ ಮತ್ತು ಸಪ್ತಮ ಸ್ಥಾನಗಳಿಗೆ ಅಧಿಪತಿಯಾಗಿರುವುದರಿಂದ ಮಾರಕನಾಗುತ್ತಾನೆ. ಆದುದರಿಂದ ಮೇಷ ಲಗ್ನದಲ್ಲಿ ಜನಿಸಿದವರು ವಜ್ರವನ್ನು ಧರಿಸುವುದು ಸೂಕ್ತವಾಗಿರುವುದಿಲ್ಲ, ಒಂದು ವೇಳೆ ಮದುವೆಯಾಗುವುದು ನಿಧಾನಗೊಂಡು ಕಸ್ಟವಾಗುತ್ತಿದ್ದರೆ, ಆಗ ಸ್ವಲ್ಪ ಸಮಯದ ಮಟ್ಟಿಗೆ ಅಂದರೆ ಮದುವೆಯಾಗುವವರೆಗೂ ವಜ್ರವನ್ನು ಧರಿಸಿ ಮದುವೆಯಾದ ಕೂಡಲೇ ಅದನ್ನು ತೆಗೆದು ಬಿಡಬೇಕು. ಮೇಷ ಲಗ್ನದಲ್ಲಿ ಜನಿಸಿದವರಿಗೆ ಕುಜ ದಶಾ ಸಮಯದಲ್ಲಿ ಮೊದಲ 4 ವರ್ಷಗಳು ಯೋಗದಾಯಕವಾಗಿರುತ್ತದೆ. ನಂತರದ 3 ವರ್ಷಗಳಲ್ಲಿ ಅನುಕೂಲಗಳ ಜೊತೆಯಲ್ಲಿ ಆರೋಗ್ಯದ ಸಮಸ್ಯೆಗಳು,ಅಪಘಾತ,ಜಗಳ,ಮನಸ್ಥಾಪ,ಕಾನೂನಿನ ತೊಂದರೆಗಳನ್ನು ಅನುಭವಿಸುವುದು ಹೀಗೆ ಹಲವಾರು ರೀತಿಯಲ್ಲಿ ತೊಂದರೆಗಳು ಬರುತ್ತವೆ. ವೃಷಭ ಲಗ್ನದಲ್ಲಿ ಜನಿಸಿದವರಿಗೆ ಶುಕ್ರನು ಲಗ್ನ ಮತ್ತು ಷಷ್ಟ ಸ್ಥಾನಗಳಿಗೆ ಅಧಿಪತಿಯಾಗಿರುತ್ತಾನೆ. ಲಗ್ನಾಧಿಪತಿಯಾಗಿ ಪ್ರಬಲ ಯೋಗಕಾರಕನಾಗುವುದರಿಂದ, ವೃಷಭ ಲಗ್ನದಲ್ಲಿ ಜನಿಸಿದವರಿಗೆ ವಜ್ರವು ಅನುಕೂಲವನ್ನೀಯುವ ರತ್ನವಾಗಿರುತ್ತದೆ. ಮಿಥುನ ಲಗ್ನದಲ್ಲಿ ಜನಿಸಿದವರಿಗೆ ಶುಕ್ರನು ಪಂಚಮ ಮತ್ತು ದ್ವಾದಶ ಸ್ಥಾನಗಳಿಗೆ ಅಧಿಪತಿಯಾಗಿದ್ದು, ಪಂಚಮಾಧಿಪತಿಯಾಗಿ ಯೋಗಕಾರಕನಾಗುತ್ತಾನೆ. ಆದುದರಿಂದ ಅವರು ವಜ್ರವನ್ನು ಧರಿಸಬಹುದು, ವಜ್ರದ ಜೊತೆಯಲ್ಲಿ ಪಚ್ಚೆಯನ್ನು ಧರಿಸುವುದರಿಂದ ಇನ್ನೂ ಹೆಚ್ಚಿನ ಅನುಕೂಲಗಳನ್ನು ಕಾಣಬಹುದು. ಕಟಕ ಲಗ್ನದಲ್ಲಿ ಜನಿಸಿದವರಿಗೆ ಶುಕ್ರನು ಚತುರ್ಥ ಮತ್ತು ಏಕಾದಶ ಸ್ಥಾನಗಳಿಗೆ ಅಧಿಪತಿಯಾಗಿರುತ್ತಾನೆ. ಏಕಾದಶಾಧಿಪತಿಯಾದ ಶುಕ್ರನು ಬಾಧಕನಾಗುವುದರಿನ್ದ ಶುಕ್ರ ರತ್ನ ವಜ್ರವನ್ನು ಸದಾಕಾಲ ಧರಿಸುವುದು ಒಳ್ಳೆಯದಲ್ಲ, ಬದಲಿಗೆ ಶುಕ್ರ ದಶಾ ಸಮಯದಲ್ಲಿ ಧರಿಸಬಹುದು. ಸಿಂಹ ಲಗ್ನದಲ್ಲಿ ಜನಿಸಿದವರಿಗೆ ಶುಕ್ರನು ತೃತೀಯಾ ಮತ್ತು ದಶಮ ಸ್ಥಾನಗಳಿಗೆ ಅಧಿಪತಿಯಾಗಿರುತ್ತಾನೆ. ತೃತಿಯಾಧಿಪತಿಯಾಗಿ ಶುಕ್ರನು ಮಾರಕ, ಆದುದರಿಂದ ವಜ್ರವನ್ನು ಧರಿಸಬಾರದು. ಆದರೆ ವ್ಯಾಪಾರ,ವ್ಯವಹಾರ,ಉದ್ಯೋಗ ಇತ್ಯಾದಿಗಳಲ್ಲಿ ತೊಂದರೆಗಳು ಎದುರಾದಾಗ ಸ್ವಲ್ಪ ಕಾಲದ ಮಟ್ಟಿಗೆ ಅಂದರೆ ತೊಂದರೆಗಳು ಕಡಿಮೆಯಾಗುವವರೆಗೆ ಮಾತ್ರ ಧರಿಸಿ ನಂತರ ತೆಗೆದು ಬಿಡಬೇಕು. ವೃಶ್ಚಿಕ ಲಗ್ನದಲ್ಲಿ ಜನಿಸಿದವರಿಗೆ ಶುಕ್ರನು ಸಪ್ತಮ ಮತ್ತು ದ್ವಾದಶ ಸ್ಥಾನಗಳಿಗೆ ಅಧಿಪತಿಯಾಗಿದ್ದು ಮಾರಕನಾಗುತ್ತಾನೆ. ಆದುದರಿಂದ ವೃಶ್ಚಿಕ ಲಗ್ನದಲ್ಲಿ ಜನಿಸಿದವರು ವಜ್ರವನ್ನು ಧರಿಸುವುದು ಒಳ್ಳೆಯದಲ್ಲ, ಆದರೆ ವಿವಾಹವಾಗುವುದು ತಡವಾಗುವುದು ಅಥವಾ ಮದುವೆಯೇ ಆಗದಿರುವ ಸಂದರ್ಭದಲ್ಲಿ ಸ್ವಲ್ಪ ಕಾಲದ ಮಟ್ಟಿಗೆ ವಜ್ರವನ್ನು ಧರಿಸಿ ಮದುವೆಯಾದ ನಂತರ ಅದನ್ನು ತೆಗೆದಿಡಬೇಕು. ಧನುರ್ ಲಗ್ನದಲ್ಲಿ ಜನಿಸಿದವರಿಗೆ ಶುಕ್ರನು ಷಷ್ಟ ಮತ್ತು ಏಕಾದಶ ಸ್ಥಾನಗಳಿಗೆ ಅಧಿಪತಿಯಾಗುವುದರಿಂದ ಮಾರಕನಾಗುತ್ತಾನೆ. ಆದುದರಿಂದ ಧನುರ್ ಲಗ್ನದವರು ವಜ್ರವನ್ನು ನಿರಂತರವಾಗಿ ಧರಿಸಬಾರದು. ಮೀನ ಲಗ್ನದಲ್ಲಿ ಜನಿಸಿದವರಿಗೆ ಶುಕ್ರನು ತೃತೀಯ ಮತ್ತು ಆಸ್ಟಮ ಸ್ಥಾನಗಳಿಗೆ ಅಧಿಪತಿಯಾಗುವುದರಿಂದ ಮಾರಕನಾಗುತ್ತಾನೆ. ಆದುದರಿಂದ ಮೀನ ಲಗ್ನದಲ್ಲಿ ಜನಿಸಿದವರು ವಜ್ರವನ್ನು ನಿರಂತರವಾಗಿ ಧರಿಸಬಾರದು. ಜಾತಕದಲ್ಲಿ ಕುಜದೋಷವಿದ್ದರೂ ದ್ವಿತೀಯಾಧಿಪತಿ ದ್ವಿತೀಯದಲ್ಲಿದ್ದರೆ ಅಥವಾ ದ್ವಿತೀಯವನ್ನು ಪ್ರಬಲವಾಗಿ ವೀಕ್ಷಿಸುತ್ತಿದ್ದರೆ ಕುಜದೋಷದ ತೊಂದರೆಗಳು ಕೆಲವೇ ದಿನಗಳಲ್ಲಿ ಪರಿಹಾರಗೊಂಡು ಸುಖಜೀವನ ಪ್ರಾಪ್ತವಾಗುತ್ತದೆ. ಇದೆ ರೀತಿಯಲ್ಲಿ ಗುರು ದ್ವಿತೀಯದಲ್ಲಿದ್ದರೆ ಅಥವಾ ದ್ವಿತೀಯವನ್ನು ನೋಡಿದರೆ ಕುಜದೋಷದಿಂದ ಉಂಟಾಗುವ ವೈವಾಹಿಕ ಸಮಸ್ಯೆಗಳಿಗೆ ಪರಿಹಾರ ದೊರೆತು ಅನುಕೂಲವಾಗುತ್ತದೆ. ಸನ್ನಡತೆ, ಸದಾಚಾರ, ಅಹಿಂಸೆ, ಸತ್ಯ ನಿಷ್ಟೆ, ದಯೆ, ಕರುಣೆ, ಸರಳಜೀವನ, ಅಧ್ಯಯನ, ಅಧ್ಯಾಪನ, ಧರ್ಮ ಪಾರಾಯಣರಾಗಿರುವ ಮಹನೀಯರನ್ನೂ ಹುಡುಕಿಕೊಂಡು ಹೋಗಿ ಅವರಿಗೆ ಅವಶ್ಯಕತೆ ಇರುವ ವಸ್ತುಗಳನ್ನು ಅಮಾವಾಸ್ಯೆಯ ದಿನದಂದು ನೀಡಿದಲ್ಲಿ ಮಹತ್ತರವಾದ ಪುಣ್ಯ ಪ್ರಾಪ್ತವಾಗುತ್ತದೆ. ಪ್ರಯೋಜನಕ್ಕೆ ಬರುವ ವಸ್ತುಗಳನ್ನೇ ದಾನವಾಗಿ ನೀಡಿ, ಕಸ್ಟದಲ್ಲಿರುವವರಿಗೆ ಸಹಾಯವಾಗಲೆಂದು ಮುಕ್ತ ಮನಸ್ಸಿನಿಂದ ದಾನ ನೀಡಿ, ನಿಮ್ಮ ಶಕ್ತಿಗೆ ಮೀರಿ ದಾನ ಮಾಡಬೇಡಿ ಮಹಾಭಾರತ.... ನೆಮ್ಮದಿಯಿಲ್ಲದೆ ಚಡಪಡಿಸುವ ಮನಸ್ಸುಳ್ಳವರು, ಬಹಳವಾಗಿ ಕಸ್ಟಗಳನ್ನು ಅನುಭವಿಸುತ್ತಿರುವವರು, ಶಿವರಾತ್ರಿಯಂದು ಶಿವಲಿಂಗಕ್ಕೆ ಜಲಾಭಿಷೇಕವನ್ನು ( ರಾತ್ರಿ ) ಮಾಡುತ್ತಾ ಶಿವ ಪಂಚಾಕ್ಷರಿ ಮನ್ತ್ರವನ್ನು ಜಪಿಸುತ್ತಿದ್ದರೆ ಅವರ ಸಮಸ್ಯೆಗಳೆಲ್ಲವೂ ಬೇಗನೆ ನಿವಾರಣೆಯಾಗುತ್ತದೆ. ವಿವಾಹವನ್ನು ನಿಶ್ಚಯಿಸುವ ಮೊದಲು ವಧು-ವರರಿಬ್ಬರ ಜಾತಕಗಳನ್ನು ಪರಿಶೀಲಿಸುವುದು ವಾಡಿಕೆ. ಕೆಲವರು ಮದುವೆಯನ್ನು ತೀರ್ಮಾನಿಸಿದ ನಂತರ ಜಾತಕಗಳ ಬಗ್ಗೆ ತಲೆ ಕೆಡಿಸಿಕೊಂಡು ಅವುಗಳು ಹೊಂದಿಕೊಳ್ಳದಿದ್ದಾಗ ಆತಂಕ ಪಟ್ಟುಕೊಳ್ಳುತ್ತಾರೆ. ಇಂತಹ ಪರಿಸ್ಥಿತಿಗಳು ಬಂದಾಗ ಮಾಡುವ ಉತ್ತಮ ಉಪಾಯವೆಂದರೆ ಶುಭ ಮುಹೂರ್ತದಲ್ಲಿ ಶುಭ ಯೋಗ,ಶುಭ ವಾರ,ಶುಭ ಲಗ್ನದಲ್ಲಿ ವಿವಾಹವನ್ನು ನಡೆಸುವುದು. ಇದರಿಂದ ಬದುಕಿನಲ್ಲಿ ಬರುವ ಬಹುಪಾಲು ಸಮಸ್ಯೆಗಳು ಬಹಳ ಸುಲಭವಾಗಿ ಪರಿಹಾರಗೊಳ್ಳುತ್ತವೆ. ಯಾರು ಶ್ರದ್ಧೆಯಿಂದ ಕಸ್ಟಪಟ್ಟು ದುಡಿಯುತ್ತಾರೋ ಅವರಿಗೆ ಒಂದಲ್ಲಾ ಒಂದು ದಿನ ಐಶ್ವರ್ಯವೆಂಬುದು ಬಂದೇಬರುತ್ತದೆ. ಅಲ್ಲಿಯವರೆಗೂ ಅವರು ಮಾಡಿರುವ ಕೆಲಸಕ್ಕೆ ಸೂಕ್ತ ಪ್ರತಿಫಲಗಳು ಇದ್ದೇ ಇರುತ್ತವೆ. ಸಂಪಾದನೆ ಸಾಲದೆಂಬ ಕಾರಣಕ್ಕೆ ಮದುವೆಯನ್ನು ಮುಂದೂಡುವುದು, ಅಥವಾ ಮದುವೆಯನ್ನೇ ಮಾಡಿಕೊಳ್ಳದಿರುವುದು ಸರಿಯಲ್ಲ. ಅದರ ಬದಲು ಸಂಪಾದನೆಯನ್ನು ಹೆಚ್ಚು ಮಾಡಿಕೊಳ್ಳಬೇಕು. ಬಡತನವೆಂಬುದು ಮೈಗಳ್ಳರು ಮತ್ತು ಸೋಮಾರಿಗಳ ಆಸ್ತಿ. ಜನ್ಮಲಗ್ನ ಅಥವಾ ಜನ್ಮರಾಶಿ ಇಂದ ಏಕಾದಶ ಸ್ಥಾನದಲ್ಲಿ ಅಂಗಾರಕನಿದ್ದರೆ, ಯಾವುದೇ ದೋಷವಿರುವುದಿಲ್ಲ ಬದಲಿಗೆ ಯಾವುದೇ ವಿಷಯವಿದ್ದರೂ ಅದನ್ನು ಚೆನ್ನಾಗಿ ಎಲ್ಲರಿಗೂ ಅರ್ಥವಾಗುವಂತೆ ವಿಷಯಗಳನ್ನು ಮಂಡಿಸಬಲ್ಲ ಶಕ್ತಿಯಿರುತ್ತದೆ. ಆದರೆ ವಿವಾಹವಾದ ನಂತರ ನೆಮ್ಮದಿಯ ಬದುಕು ಅವರವರ ನಡೆ ನುಡಿಯನ್ನು ಅವಲಂಬಿಸಿರುತ್ತದೆ. ಮಕರ ಲಗ್ನದಲ್ಲಿ ಜನಿಸಿದವರಿಗೆ ಶನಿಯು ಲಗ್ನಾಧಿಪ ಮತ್ತು ದ್ವಿತೀಯ ಸ್ಥಾನಾಧಿಪ. ಲಗ್ನಾಧಿಪತಿಯಾಗಿ ಯೋಗಕಾರಕನಾಗುವುದರಿಂದ ಶನಿಯ ರತ್ನ ನೀಲವನ್ನು ಧರಿಸುವುದರಿಂದ ಅನುಕೂಲವಾಗುತ್ತದೆ. ಇದೆ ರೀತಿಯಲ್ಲಿ ಕುಂಭ ಲಗ್ನದಲ್ಲಿ ಜನಿಸಿದವರಿಗೆ ಶನಿಯು ಲಗ್ನ ಮತ್ತು ವ್ಯಯ ಭಾವಾಧಿಪನಾಗುತ್ತಾನೆ. ಲಗ್ನಾಧಿಪನಾಗಿ ಯೋಗಕಾರಕನಾಗುವುದರಿಂದ ನೀಲ ರತ್ನವು ಅನುಕೂಲವನ್ನಿಯುತ್ತದೆ. ಮೀನ ಲಗ್ನದಲ್ಲಿ ಜನಿಸಿದವರಿಗೆ ಶನಿಯು ಏಕಾದಶ ಮತ್ತು ದ್ವಾದಶ ಗಳಿಗೆ ಅಧಿಪತಿಯಾಗಿರುವುದರಿಂದ ನೀಲ ರತ್ನವು ಅನುಕೂಲವನ್ನೀಯುವುದಿಲ್ಲ. ಶನಿ ದಶೆಯ ಪ್ರಾರಂಭದಲ್ಲಿ ಕನಕಪುಷ್ಯರಾಗ ರತ್ನದ ಜೊತೆಯಲ್ಲಿ ಧರಿಸುವುದರಿಂದ ಸ್ವಲ್ಪ ಮಟ್ಟಿನ ಅನುಕೂಲತೆಗಳನ್ನು ಕಾಣಬಹುದು. ಎಳ್ಳನ್ನು ,ಎಳ್ಳಿನ ಎಣ್ಣೆಯನ್ನು, ತುಪ್ಪವನ್ನು, ಅಥವಾ ಯಾವುದೇ ಬಗೆಯ ಎಣ್ಣೆಯನ್ನು ದಾನವಾಗಿ ಪಡೆದವರು ಗಾಯತ್ರಿ ಮಂತ್ರದಿಂದ ಅರಳೀ ಸಮಿತ್ತಿನ ಹೋಮ ಮಾಡಿ ಪ್ರಾಯಶ್ಚಿತ್ತ ಮಾಡಿಕೊಳ್ಳಬೇಕು. ಕಳ್ಳತನ, ವಂಚನೆ, ದ್ರೋಹ, ಸುಲಿಗೆ, ದರೋಡೆ ಮುಂತಾದ ಕೃತ್ಯಗಳಿಂದ ಸಂಪಾದಿಸಿದ ಹಣವನ್ನು ದಾನವಾಗಿ ಪಡೆಯಬಾರದು. ಒಂದು ವೇಳೆ ದಾನವನ್ನು ಸ್ವೀಕರಿಸಿದ ನಂತರ ಅದರ ಬಗ್ಗೆ ತಿಳಿದರೆ, ದಾನ ಪಡೆದವರು ಮೂರು ಸಾವಿರಕ್ಕಿಂತ ಕಡಿಮೆಯಿಲ್ಲದೆ ಗಾಯತ್ರಿ ಜಪವನ್ನು ಮಾಡಬೇಕು. ಸಮಾಜ ಸೇವೆಗಾಗಿ, ಬಡಜನರ ಏಳಿಗೆಗಾಗಿ, ಅನಾಥರು, ವೃದ್ಧರು, ಪುಟ್ಟ ಮಕ್ಕಳನ್ನು ಸಲಹಲು, ವಿದ್ಯಾ ಸಂಸ್ಥೆಗಳಿಗೆ, ದೇಶ ರಕ್ಷಣೆಗೆ ಯಾವುದೇ ಹಣವನ್ನು ಎಷ್ಟು ಬೇಕಾದರೂ ದಾನವಾಗಿ ಪಡೆಯಬಹುದು, ಇಂತಹ ಧರ್ಮಾರ್ಥ ಕಾರ್ಯಗಳಿಗೆ ಬಿಳಿ ಹಣ, ಕಪ್ಪು ಹಣ ಇತ್ಯಾದಿಗಳನ್ನು ನೋಡಬೇಕಾಗಿರುವುದಿಲ್ಲ. ದಾನ ನೀಡುವುದು ಮಹಾ ಪುಣ್ಯಕರವಾಗಿರುವ ಕಾರ್ಯ. ದಾನ ಮಾಡಬೇಕೆಂಬ ಮನಸ್ಸು ಬಂದ ಕೂಡಲೇ ಅದನ್ನು ಕಾರ್ಯರೂಪಕ್ಕೆ ತಂದುಬಿಡಬೇಕು, ಇಲ್ಲವಾದರೆ ಹಾಳು ಚಂಚಲ ಮನಸ್ಸು, ಏನಾದರೊಂದು ಕಾರಣಗಳನ್ನು ಹುಡುಕಿಕೊಂಡು ಹಿಂದೆ ಸರಿದುಬಿಡುತ್ತದೆ. ನಮ್ಮ ಇತಿ ಮಿತಿಗಳನ್ನು ಗಮನದಲ್ಲಿಟ್ಟುಕೊಂಡು ಮುಂದುವರಿಯಬೇಕು. ದಾನವನ್ನು ಒಬ್ಬರೇ ನೀಡಬಾರದೆಂದು ಶಾಸ್ತ್ರಗಳು ಸಾರಿ ಹೇಳುತ್ತವೆ. ಗೃಹಸ್ಥರಾಗಿರುವವರಿಗೆ ಹೆಂಡತಿಯ ಸಮ್ಮತಿಯೂ ಅತ್ಯಗತ್ಯ. ಪತ್ನಿಯ ಒಪ್ಪಿಗೆಯಿಲ್ಲದೆ ಮಾಡುವ ಯಾವ ದಾನವೂ ಕ್ರಮಬದ್ದವಾಗಿರುವುದಿಲ್ಲ. ಅಗ್ನಿಸಾಕ್ಷಿಯಾಗಿ ಕೈಹಿಡಿದು ಕಾಯಾ,ವಾಚಾ,ಮನಸಾ ಜೀವನ ಪೂರ್ತಿ ಜೊತೆಯಾಗಿ ಕಸ್ಟ ಸುಖಗಳಲ್ಲಿ ಅರ್ಧಭಾಗಿನಿಯಾದ ಅರ್ಧಾಂಗಿಯನ್ನು ಬಿಟ್ಟು ಮಾಡುವ ಯಾವ ದಾನಗಳೂ ಧರ್ಮ ಸಮ್ಮತವಾಗಿರುವುದಿಲ್ಲ. ಧರ್ಮ,ಅರ್ಥ,ಕಾಮ,ಮೋಕ್ಷಗಳಲ್ಲಿ ಸಮಭಾಗಿಯಾಗಿರುವ ಹೆಂಡತಿಯನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಲೇಬೇಕೆಂಬುದು ಧರ್ಮಶಾಸ್ತ್ರಗಳ ಆಶಯ. ಅದಕ್ಕಾಗಿ ದಾನ ನೀಡುವಾಗ ಕೈನಲ್ಲಿ ತುಳಸೀ ದಳವನ್ನು ಹಿಡಿದು ಪತ್ನಿಯಿಂದ ನೀರು ಹಾಕಿಸಿದ ನಂತರವೇ ದಾನ ನೀಡಬೇಕೆಂದು ಹೇಳಿರುವುದು. ವೃಶ್ಚಿಕ ಲಗ್ನದಲ್ಲಿ ಜನಿಸಿದವರಿಗೆ ಶನಿಯು ತೃತೀಯಾ ಮತ್ತು ಚತುರ್ಥ ಸ್ಥಾನಗಳಿಗೆ ಅಧಿಪತಿಯಾಗಿರುವುದರಿಂದ ಶನಿಯ ರತ್ನ ನೀಲ ಮಣಿಯನ್ನು ಸದಾ ಕಾಲ ಧರಿಸಬಾರದು, ಶನಿದಶೆ ನಡೆಯುತ್ತಿರುವಾಗ ಅದರ ಅರ್ಧ ಭಾಗ ಕಳೆದ ನಂತರ ಧರಿಸಬಹುದು, ಮಿಕ್ಕಂತೆ ಧರಿಸುವುದು ಹಿತಕಾರಿಯಾಗಿರುವುದಿಲ್ಲ. ಇದೇ ರೀತಿಯಲ್ಲಿ ಧನುರ್ ಲಗ್ನದಲ್ಲಿ ಜನಿಸಿದವರಿಗೆ ಶನಿಯು ದ್ವಿತೀಯ ಮತ್ತು ತೃತೀಯ ಸ್ಥಾನಗಳಿಗೆ ಅಧಿಪತಿಯಾಗುವುದರಿಂದ ಶನಿಯು ಅಶುಭಕಾರಿಯಾಗುತ್ತಾನೆ. ಆದುದರಿಂದ ಧನುರ್ ಲಗ್ನದಲ್ಲಿ ಜನಿಸಿದವರು ಶನಿಯ ರತ್ನ ನೀಲವನ್ನು ನಿರಂತರವಾಗಿ ಎಂದಿಗೂ ಧರಿಸಬಾರದು. ಜನ್ಮ ಸಂಖ್ಯೆ 4....... ದಿನಾಂಕ 13 ರಂದು ಜನಿಸಿದವರು ಚಿಕ್ಕ ವಯಸ್ಸಿನಲ್ಲಿ ಅನೇಕ ರೀತಿಯ ಪ್ರತಿಕೂಲ ಪರಿಸ್ಥಿತಿಗೆ ಗುರಿಯಾಗುತ್ತಾರೆ, ಇದರ ಪರಿಣಾಮದಿಂದ ವಿದ್ಯಾವಂತರಾಗಲು ಕಸ್ಟಪಡಬೇಕಾಗಿ ಬರುತ್ತದೆ. ಇವರಿಗೆ 35 ವರ್ಷಗಳ ನಂತರವೇ ಅನುಕೂಲವಾಗುವುದು, ಅಲ್ಲಿಯವರೆಗೂ ಸ್ಥಿರತೆಯಿರುವುದಿಲ್ಲ. ದಿನಾಂಕ 31 ರಲ್ಲಿ ಜನಿಸಿದವರಿಗೆ ಪ್ರಾರಂಭದಲ್ಲಿ ಎಲಾ ರೀತಿಯ ಅನುಕೂಲಗಳಿರುತ್ತವೆ, ಅವರಿಗೆ 45 ವರ್ಷಗಳ ನಂತರ ಸಮಸ್ಯೆಗಳು ತೀವ್ರವಾಗುತ್ತವೆ. ದಿನಾಂಕ 22 ರಂದು ಜನಿಸಿದವರು ಉತ್ತಮ ಚಿಂತಕರಾಗಬಲ್ಲರೂ. ತಾಯಿಯ ಪ್ರೀತಿ ವಾತ್ಸಲ್ಯಗಳು ಅವರ ಬದುಕಿನಲ್ಲಿ ಮಹತ್ವದ ಪಾತ್ರ ವಹಿಸುತ್ತದೆ. ಇವರಿಗೆ ಸ್ವಲ್ಪ ಕಸ್ಟ ಬಂದರೂ ತಡೆಯಲಾರರು. ಇವರ ಬಳಿ ಹಣ ನಿಲ್ಲುವುದು ಕಸ್ಟ. ವಯಸ್ಸಾದ ನಂತರ ನಿದ್ರಾಹೀನತೆಗಳಿಂದ ಬಳಲುತ್ತಾರೆ. ಸಂಖ್ಯೆ 4 ರಲ್ಲಿ ಜನಿಸಿದವರು ನಿಧಾನ ಹಾಗೂ ಮನಸ್ಸಿನಲ್ಲಿ ರಹಸ್ಯಗಳನ್ನು ಇಟ್ಟುಕೊಂಡಿರುವರಾಡುದರಿಂದ ಇವರ ಮನಸ್ಸಿಗೆ ಸರಿಹೊಂದುವ ಬಾಲ ಸಂಗಾತಿಯನ್ನು ಪಡೆಯುವುದು ಮುಖ್ಯ. ಜನ್ಮಸಂಖ್ಯೆ 4...... ಜನ್ಮಸಂಖ್ಯೆ 4 ರಲ್ಲಿ ಜನಿಸಿದವರನ್ನು ದಿನಾಂಕ 1, 2, 10, 11, 14, 19, 21, 23, 28, ಮತ್ತು 29 ರಂದು ಜನಿಸಿದವರೊಡನೆ ವಿವಾಹವಾಗಿದ್ದರೆ, ದಂಪತಿಗಳಿಬ್ಬರೂ ಯಾವುದೇ ಕಾರಣದಿಂದಲೂ ಉದ್ವೇಗಕ್ಕೆ ವಶರಾಗಬಾರದು. ಸಣ್ಣ ಪುಟ್ಟ ಸಮಸ್ಯೆಗಳನ್ನು ಉದಾಸೀನ ಮಾಡದೆ ಸರಿಪಡಿಸಿಕೊಳ್ಳಬೇಕು. ಸಂಖ್ಯೆ 4 ರಲ್ಲಿ ಜನಿಸಿದವರು ವಾತ ಮತ್ತು ಕಫ ಪ್ರಕೃತಿಯವರಾಗಿರುತ್ತಾರೆ, ಇವರು ವಯಸ್ಸಾದ ನಂತರ ಆರೋಗ್ಯದ ಬಗ್ಗೆ ಎಚ್ಚರಿಕೆ ವಹಿಸುವುದು ಅತ್ಯಗತ್ಯ. ಪ್ರತಿಯೊಂದನ್ನೂ ಆಲಕ್ಷಿಸುವುದು ಹಾಗೂ ಅದನ್ನು ಗುಟ್ಟಾಗಿಡುವುದು ಇವರ ಸ್ವಭಾವ. ಅವುಗಳು ಉಲ್ಬಣಗೊಂಡ ನಂತರವೇ ಇವರು ಎಚ್ಚೆತ್ತುಕೊಳ್ಳುವುದು. ಅಲ್ಲಿಯವರೆಗೂ ತಲೆಗೆ ಹಾಕಿಕೊಳ್ಳುವುದೇ ಇಲ್ಲ. ಸಂಖ್ಯೆ 4 ರಲ್ಲಿ ಜನಿಸಿದವರು ಫೆಬ್ರವರಿ, ಜುಲೈ, ಆಗಸ್ಟ್, ಅಕ್ಟೋಬರ್ ತಿಂಗಳುಗಳಲ್ಲಿ ಆರೋಗ್ಯದ ಕಡೆ ಗಮನ ನೀಡಲೇಬೇಕಾಗಿರುತ್ತದೆ. ಅವರ 59, 64, 65, 68, 73, 74, 77, ರಲ್ಲಿ ಅನಾರೋಗ್ಯ ಉಂಟಾಗದಂತೆ ನೋಡಿಕೊಳ್ಳಬೇಕು. ಜನ್ಮಸಂಖ್ಯೆ 4, ರಲ್ಲಿ ಜನಿಸಿದವರು ರಾಜಕೀಯ ನಾಯಕತ್ವ, ರಾಜಕೀಯ ಪಕ್ಷದ ಪದಾಧಿಕಾರಿ, ಚುನಾವಣೆಗೆ ಸಂಭಂದಿಸಿದ ಕೆಲಸಗಳು, ಪೌರಾಡಳಿತಕ್ಕೆ ಸೇರಿದ ವಿವಿಧ ಹುದ್ದೆಗಳು, ಅಲ್ಪ ಸಂಖ್ಯಾತರಿಗೆ ಸೇರಿದ ವಿವಿಧ ಕೆಲಸಗಳು, ಗ್ರಾಮ ಪಂಚಾಯ್ತಿ, ಜಿಲ್ಲಾ ಪರಿಷತ್, ಹೋಬಳಿ,ತಾಲೋಕು ಸ್ಥಳೀಯ ನಾಯಕತ್ವ, ಮದ್ಯ ವ್ಯಾಪಾರ, ನಶೆ ತರಿಸುವ ವಸ್ತುಗಳು, ರಹಸ್ಯವಾಗಿ ತನಿಖೆ ನಡೆಸುವುದು, ಭದ್ರತಾ ವ್ಯವಸ್ಥೆ, ಗೊಬ್ಬರ, ರೇಷ್ಮೆ, ಚರ್ಮದ ವಸ್ತುಗಳ ವ್ಯವಹಾರ, ಕಾರಾಗೃಹ ಇಲಾಖೆಗೆ ಬೇಕಾಗಿರುವ ವಸ್ತುಗಳು, ಜಾದೂ, ಯಕ್ಷಿಣಿ, ಯಂತ್ರ, ಮಂತ್ರ, ತನ್ತ್ರ ಮುಂತಾದ ವಿಷಯಗಳನ್ನು ವೃತ್ತಿಯನ್ನಾಗಿ ಸ್ವೀಕರಿಸಬಹುದು. ಜನ್ಮ ಸಂಖ್ಯೆ....4 ದಿನಾಂಕ 4, 13, 22, ಮತ್ತು 31 ರಂದು ಜನಿಸಿದವರೆಲ್ಲರ ಜನ್ಮ ಸಂಖ್ಯೆ 4 ಆಗಿರುತ್ತದೆ. ಸಂಖ್ಯೆ 4 ರ ಅಧಿಪತಿ ರಾಹು. ಸಂಖ್ಯೆ 4 ರಲ್ಲಿ ಜನಿಸಿದವರು ರಹಸ್ಯಮಯ ಸ್ವಭಾವದವರು. ಇವರು ತಮ್ಮ ಮನಸ್ಸಿನಲ್ಲಿರುವುದನ್ನು ಸುಲಭವಾಗಿ ಯಾರ ಬಳಿಯೂ ಬಿಟ್ಟುಕೊಡುವುದಿಲ್ಲ. ಸದಾ ಕಾಲ ಯಾವುದಾದರೊಂದು ವಿಷಯದ ಬಗ್ಗೆ ಯೋಚಿಸುತ್ತಲೇ ಇರುವುದು ಇವರ ವಿಶೇಷ. ಇವರಿಗೆ ಗೂಢ ವಿದ್ಯೆಗಳಲ್ಲಿ ಹೆಚ್ಚು ಆಸಕ್ತಿ, ಯಾರಾದರೂ ಇವರನ್ನು ಉತ್ತೇಜಿಸಿದಲ್ಲಿ ಅವುಗಳನ್ನು ಕಲಿತುಕೊಳ್ಳಲು ಪ್ರಯತ್ನಿಸಿ ಯಶಸ್ವಿಯಾಗುತ್ತಾರೆ. ಸಂಖ್ಯೆ 4 ರಲ್ಲಿ ಜನಿಸಿದವರು ರಾಜಕೀಯವಾಗಿ ಉತ್ತಮ ಜ್ಞಾನ ಪಡೆದಿರುತ್ತಾರೆ, ಇವರಿಗೆ ಸರಿಯಾದ ಮಾರ್ಗದರ್ಶನ ದೊರೆತಲ್ಲಿ ಉತ್ತಮ ರಾಜಕಾರಣಿಯಾಗಿ ಸಮರ್ಥ ಆಡಳಿತವನ್ನು ನೀಡಬಲ್ಲವರಾಗುತ್ತಾರೆ. ಒಬಾ ತತ್ವಜ್ಞಾನಿಯ ಜೊತೆಗೆ ಸೇರಿದಾಗ ತತ್ವಜ್ಞಾನದ ರಹಸ್ಯಗಳನ್ನು ಬಗೆದು ಶೋಧಿಸುವ ಬುದ್ದಿಯಿರುತ್ತದೆ. ಆದರೆ ಇವರದು ನಿಧಾನ ಸ್ವಭಾವ, ಆತುರದಲ್ಲಿ ಏನನ್ನು ಮಾಡರು. ಇವರ ಬಳಿ ಪ್ರತಿಯೊಂದು ಸಮಸ್ಯೆಗೂ ಪರಿಹಾರ ದೊರಕುವುದೊಂದು ವಿಶೇಷ. ಮೇಷ ಲಗ್ನಕ್ಕೆ ಶನಿಯು ದಶಮ ಮತ್ತು ಏಕಾದಶ ಸ್ಥಾನಗಳಿಗೆ ಅಧಿಪತಿಯಾಗಿರುತಾನೆ. ದಶಮ ಕೇಂದ್ರಾಧಿಪತಿಯಾಗಿ ಯೋಗಕಾರಕನಾದರೂ ಏಕಾದಶಾಧಿಪತಿಯಾಗಿ ಬಾಧಕನಾಗುತ್ತಾನೆ. ಆದುದರಿಂದ ಮೇಷ ಲಗ್ನದಲ್ಲಿ ಜನಿಸಿದವರು ನೀಲ ಮಣಿ ರತ್ನವನ್ನು ಸದಾ ಕಾಲ ಧರಿಸಬಾರದು. ವ್ಯಾಪಾರ ಉದ್ಯೋಗ ವ್ಯವಹಾರಗಳಲ್ಲಿ ಏನಾದರೂ ತೊಂದರೆಗಳು ಕಂಡಾಗ ಸ್ವಲ್ಪ ಕಾಲದವರೆಗೆ ಮಾತ್ರ ಧರಿಸಿ ನಂತರ ಅದನ್ನು ತೆಗೆದಿಡಬೇಕು. ವೃಷಭ ಲಗ್ನದಲ್ಲಿ ಜನಿಸಿದವರಿಗೆ ಶನಿಯು ನವಮ ಮತ್ತು ದಶಮ ಸ್ಥಾನಗಳಿಗೆ ಅಧಿಪತಿಯಾಗಿರುವುದರಿಂದ ರಾಜಯೋಗಕಾರಕನಾಗುತ್ತಾನೆ. ಆದುದರಿಂದ ವೃಷಭ ಲಗ್ನದಲ್ಲಿ ಜನಿಸಿದವರು ಶನಿಯ ರತ್ನ ನೀಲ ಮಣಿಯನ್ನು ಧರಿಸಿದಲ್ಲಿ ಅನುಕೂಲವಾಗುತ್ತದೆ. ನೀಲ ಮಣಿಯ ಜೊತೆಯಲ್ಲಿ ವಜ್ರವನ್ನು ಧರಿಸಿದಲ್ಲಿ ಸುಖ, ಸಂತೋಷ, ಸಂಪತ್ತುಗಳು ವೃದ್ಧಿಸುತ್ತದೆ. ವೃಷಭ ಲಗ್ನದವರಿಗೆ ನೀಲ ಮಣಿಯು ಯೋಗವನ್ನುಂಟು ಮಾಡುತ್ತದೆ. ಕನ್ಯಾ ಲಗ್ನದಲ್ಲಿ ಜನಿಸಿದವರಿಗೆ ಶನಿಯು ಪಂಚಮ ಮತ್ತು ಷಷ್ಟ ಸ್ಥಾನಗಳಿಗೆ ಅಧಿಪತಿಯಾಗುವುದರಿಂದ, ಶನಿಯ ರತ್ನ ನೀಲ ಮಣಿಯನ್ನು ನಿರಂತರವಾಗಿ ಧರಿಸಬಾರದು. ಶನಿ ದಶೆಯ ಮೊದಲರ್ಧ ಭಾಗದಲ್ಲಿ ಪಚ್ಚೆಯ ಜೊತೆಯಲ್ಲಿ ಧಾರಣೆ ಮಾಡುವುದರಿಂದ ಸ್ವಲ್ಪ ಮಟ್ಟಿನ ಅನುಕೂಲತೆಗಳನ್ನು ಕಾಣಬಹುದು. ತುಲಾ ಲಗ್ನದಲ್ಲಿ ಜನಿಸಿದವರಿಗೆ ಶನಿಯು ಚತುರ್ಥ ಮತ್ತು ಪಂಚಮ ಸ್ಥಾನಗಳಿಗೆ ಅಧಿಪತಿಯಾಗಿ ರಾಜಯೋಗಕಾರಕನಾಗುತ್ತಾನೆ. ಆದುದರಿಂದ ತುಲಾ ಲಗ್ನದಲ್ಲಿ ಜನಿಸಿದವರಿಗೆ ನೀಲಮಣಿ ರತ್ನವು ಯೋಗವನ್ನುಂಟುಮಾಡುತ್ತದೆ. ಇವರು ನೀಲವನ್ನು ನಿರಂತರವಾಗಿ ಧರಿಸಬಹುದು, ನೀಲದ ಜೊತೆಯಲ್ಲಿ ವಜ್ರವನ್ನು ಧರಿಸುವುದರಿಂದ ಶುಭ ಯೋಗವು ವೃದ್ಧಿಸುತ್ತದೆ. ಕಟಕ ಲಗ್ನದಲ್ಲಿ ಜನಿಸಿದವರಿಗೆ ಶನಿಯು ಸಪ್ತಮ ಮತ್ತು ಆಸ್ಟಮ ಸ್ಥಾನಾಧಿಪನಾಗುತ್ತಾನೆ. ಆಸ್ಟಮಾಾಧಿಪತಿಯಾಗಿ ಶನಿಯು ಮಾರಕನಾಗುವುದರಿಂದ ನೀಲ ಮಣಿಯು ಆಗಿಬರುವುದಿಲ್ಲ ಆದರೆ ಮದುವೆಯಾಗುವುದು ತಡವಾದರೆ ಕೇವಲ ಮದುವೆಯಾಗುವ ಸಲುವಾಗಿ ಸ್ವಲ್ಪ ದಿನದ ಮಟ್ಟಿಗೆ ನೀಲ ಮಣಿಯನ್ನು ಧರಿಸಿ ವಿವಾಹವಾದ ಕೂಡಲೇ ಅದನ್ನು ತೆಗೆದಿಡಬೇಕು. ಇದೆ ತತ್ವವು ಸಿಂಹ ಲಗ್ನದಲ್ಲಿ ಜನಿಸಿದವರಿಗೂ ಅನ್ವಯವಾಗುತ್ತದೆ. ಮಿಥುನ ಲಗ್ನದಲ್ಲಿ ಜನಿಸಿದವರಿಗೆ ಶನಿಯು ಆಸ್ಟಮ ಮತ್ತು ನವಮ ಸ್ಥಾನಗಳಿಗೆ ಅಧಿಪತಿಯಾಗಿರುತ್ತಾನೆ. ಆಸ್ಟಮ ಸ್ಥಾನಾಧಿಪತಿಯಾಗಿ ಶನಿಯು ಮಾರಕನಾಗುವುದರಿಂದ , ಮಿಥುನ ಲಗ್ನದವರು ನೀಲ ಮಣಿಯನ್ನು ಸದಾ ಕಾಲ ನಿರಂತರವಾಗಿ ಧರಿಸಬಾರದು. ನವಮ ಸ್ಥಾನಕ್ಕೆ ಅಧಿಪತಿಯಾಗಿ ಭಾಗ್ಯಕಾರಕನಾಗುವುದರಿಂದ ಕೇವಲ ಶನಿದಶೆಯ ದ್ವಿತೀಯಾರ್ಧ ಭಾಗದಲ್ಲಿ ಶನಿಯ ರತ್ನ ನೀಲ ಮಣಿಯನ್ನು ಧರಿಸಬಹುದು. ನೀಲ ಮಣಿಯ ಜೊತೆಯಲ್ಲಿ ಹಸಿರು ಪಚ್ಚೆಯನ್ನು ಧರಿಸಬೇಕು. ಪರರ ಪಾಲಾಗಿರುವ ತಮ್ಮ ಆಸ್ತಿಗಾಗಿ ಕೋರ್ಟುಗಳಲ್ಲಿ ಅಥವಾ ಇನ್ನಿತರ ಹಾದಿಗಳಲ್ಲಿ ಹೋರಾಟ ನಡೆಸುತ್ತಿರುವವರು, ನಿಧಿ ಶೋಧಕರು, ಹೊಸದಾಗಿರುವ ವಿಷಯಗಳ ಬಗ್ಗೆ ಸಂಶೋಧನೆಗಳನ್ನು ನಡೆಸುತ್ತಿರುವವರು ಕನಕ ಪುಷ್ಯರಾಗ ಮತ್ತು ಗೋಮೇಧಿಕಾ ರತ್ನಗಳನ್ನು ಧರಿಸುವುದರಿಂದ ಅನುಕೂಲಗಳನ್ನು ಕಾಣಬಹುದು. ಇವೆರಡೂ ರತ್ನಗಳನ್ನು ಕೆಲದಿನಗಳ ಮಟ್ಟಿಗೆ ಮಾತ್ರ ಧರಿಸಬಹುದು, ನಿರಂತರವಾಗಿ ಬೇಡ, ತಮ್ಮ ಕಾರ್ಯವಾದ ನಂತರ ತೆಗೆದುಬಿಡಬೇಕು. ಧೀರ್ಘ ಕಾಲ ಇವೆರಡನ್ನೂ ಒಟ್ಟಿಗೆ ಧರಿಸುವುದು ಸೂಕ್ತವಾಗಿರುವುದಿಲ್ಲ. ದಾನವನ್ನು ಸ್ವೀಕರಿಸಲು ಯಾರು ಅರ್ಹರು :- ಉಪನಯನವಾದ ನಂತರ ಪರಂಪರಾಗತವಾಗಿ ಬಂದಿರುವ ವೇದದ ಶಾಖೆಯನ್ನು ಮತ್ತು ಶಿಕ್ಷಾ,ಕಲ್ಪ,ನಿರುಕ್ತಾ,ವ್ಯಾಕರಣ,ಛಂದಸ್ಸು ಮತ್ತು ಜ್ಯೋತಿಷ್ಯ ಇವುಗಳನ್ನು ಅಧ್ಯಯನ ಮಾಡಿ ಅಧ್ಯಾಪನ,ದಾನ,ಪರಿಗ್ರಹ ಮುಂತಾದ ಕರ್ಮಾಚರಣೆಗಳನ್ನು ಶ್ರದ್ಧೆಯಿಂದ ಮಾಡುವ, ಎಲ್ಲರಿಗೂ ಒಳ್ಳೆಯದನ್ನೇ ಬಯಸುತ್ತ ಸರ್ವರಿಗೂ ಮಾರ್ಗದರ್ಶಕರಾಗಿ ಸಮಾಜದ ಎಲ್ಲಾ ವರ್ಗದವರೊಡನೆ ಮಧುರ ಬಾಂಧವ್ಯ ಹೊಂದಿರುವ, ಬಡವ ಬಲ್ಲಿದರೆಂದು ನೋಡದೆ ಎಲ್ಲರೊಂದಿಗೆ ಸಮವಾಗಿ ಬೆರೆಯುವ ಶ್ರೋತಿಯ ಬ್ರಾಂಹಣನಿಗೆ ದಾನವನ್ನು ಸ್ವೀಕರಿಸುವ ಅಧಿಕಾರವಿರುತ್ತದೆ. , ಮಕರ ಲಗ್ನದಲ್ಲಿ ಜನಿಸಿದವರಿಗೆ ಶುಕ್ರನು ಪಂಚಮ ಮತ್ತು ದಶಮ ಸ್ಥಾನಾಧಿಪತಿಯಾಗಿ ಯೋಗಕಾರಕನಾಗುತ್ತಾನೆ. ಆದುದರಿಂದ ಮಕರ ಲಗ್ನದಲ್ಲಿ ಜನಿಸಿದವರು ವಜ್ರವನ್ನು ಧರಿಸುವುದರಿಂದ ಶುಭ ಯೋಗವು ಹೆಚ್ಚಾಗುತ್ತದೆ. ವಜ್ರದ ಜೊತೆಯಲ್ಲಿ ನೀಲ ಮಣಿಯನ್ನು ಧರಿಸಿ ಇನ್ನೂ ಹೆಚ್ಚು ಅನುಕೂಲಗಳನ್ನು ಕಾಣಬಹುದು. ಕನಕಪುಷ್ಯರಾಗ ರತ್ನದ ಜೊತೆಯಲ್ಲಿ ವೈಡೂರ್ಯವನ್ನು ಧರಿಸುವ ಮೊದಲು ಸಾಕಷ್ಟು ಪರೀಕ್ಷಿಸಬೇಕು. ಸಾಧು ಸಂತರು, ಆಧ್ಯಾತ್ಮಿಕ ಚಿಂತಕರು, ಸನ್ಯಾಸ ಬಯಸುವವರು, ಮೋಕ್ಷ ಮಾರ್ಗದಲ್ಲಿ ಮುನ್ನಡೆಯಲು ಇಚ್ಛಿಸುವವರು ಇವೆರಡನ್ನೂ ಜೊತೆಯಾಗಿ ಸೇರಿಸಿ ಧರಿಸುವುದರಿಂದ ಅವರ ಆಧ್ಯಾತ್ಮಿಕ ಸಾಧನೆಗೆ ನೆರವಾಗುತ್ತದೆ. ಲೌಕೀಕ ಮಾರ್ಗದಲ್ಲಿದ್ದು ಹಣ ಸಂಪಾದನೆ ಇಲ್ಲವೇ ಅಧಿಕಾರಕ್ಕಾಗಿ ಪ್ರಯತ್ನಿಸುವವರು ಇವೆರಡನ್ನೂ ಜೊತೆಯಾಗಿ ಧರಿಸುವುದರಿಂದ ಅಡಚಣೆಗಳು ಅತಿಯಾಗಿ ಎದುರಾಗುತ್ತಿರುತ್ತವೆ. ಜೀವನದಲ್ಲಿ ಸುಖ ಭೋಗವನ್ನು ಅನುಭವಿಸಲು ಬಯಸುವವರು, ವೈಡೂರ್ಯದ ಜೊತೆಯಲ್ಲಿ ವಜ್ರವನ್ನಾಗಲೀ ಅಥವಾ ಪಚ್ಚೆಯನ್ನಾಗಲೀ ಒಟ್ಟಿಗೆ ಧರಿಸಬಾರದು. ತಾಯಿ ಜಗನ್ಮಾತೆಗೆ ಮಾಡುವ ದೀಪಾರಾಧನೆ. ಬದುಕಿನಲ್ಲಿ ಬರುವ ಹಲವಾರು ತೊಂದರೆಗಳಿಗೆ ಏನು ಮಾಡಿದರೂ ಪರಿಹಾರವೂ ದೊರೆಯುವುದೇ ಇಲ್ಲ, ತೀವ್ರತರವಾಗಿರುವ ಖಾಯಿಲೆಗಳು, ವೃಥಾ ಅಪವಾದಗಳು, ವೈವಾಹಿಕ ಬದುಕಿನಲ್ಲಿ ಅಸಂತೃಪ್ತಿ, ಅತ್ಯಂತ ಭಯದ ವಾತಾವರಣ, ಅಪಘಾತ ಮುಂತಾದ ಸಮಸ್ಯೆಗಳಿದ್ದಾಗ ಅವುಗಳನ್ನು ನಿವಾರಿಸಿಕೊಳ್ಳುವ ಪ್ರಯತ್ನಗಳು ಅಗತ್ಯ, ಅದರ ಜೊತೆಯಲ್ಲಿ ತಾಯಿಯ ಅನುಗ್ರಹವಿದ್ದರೆ ಶಾಶ್ವತ ಪರಿಹಾರ ಖಂಡಿತ. ದಿಪಾರಾಧನೆಯನ್ನು ಪ್ರಾರಂಭಿಸುವ ಮುನ್ನ ತಾಯಿಯ ಎದುರು ಅಂಜಲೀಬದ್ಧವಾಗಿ ನಿಂತು " ತಾಯಿ ಅಮ್ಮಾ ಜಗನ್ಮಾತೆ ನಾನು ಅರಿತೋ ಅರಿಯದೆಯೋ ಮಾಡಿರುವ ಸಕಲ ಅಪರಾಧಗಳನ್ನು ಮನ್ನಿಸು. ನಿನಗೆ ಶರಣಾಗತನಾಗಿ ಬಂದಿದ್ದೇನೆ, ನನ್ನ ಸಕಲ ತೊಂದರೆಗಳಿಗೆ ಪರಿಹಾರವನ್ನು ತೋರಿಸು, ಎಂದು ಭಕ್ತಿಯಿಂದ ಬೇಡಿಕೊಳ್ಳಬೇಕು. ದೇವಿಯ ಎದುರು ನಾಚಿಕೆ ಸಂಕೋಚಗಳು ಬೇಡ, ಕಪಟವಿಲ್ಲದೆ ತಾಯಿಯ ಬಳಿ ಪುಟ್ಟ ಮಗುವಿನಂತೆ ಹೇಳಿಕೊಳ್ಳಬೇಕು. ನೀವು ಹೇಳುವುದನ್ನು ತಾಯಿ ಜಗನ್ಮಾತೆಯು ಕೇಳಿಸಿಕೊಳ್ಳುತ್ತಾಳೆ, ಅವಳ ಮಾತೃ ಹೃದಯ ನಿಮಗಾಗಿ ಮಿಡಿಯುತ್ತದೆ, ನಿಮ್ಮ ಸಮಸ್ಯೆಯು ನ್ಯಾಯಬದ್ಧವಾಗಿದ್ದು ನೈಜವಾಗಿದ್ದಾರೆ ಒಂದು ತಿಂಗಳ ಒಳಗೆ ಸೂಕ್ತ ಪರಿಹಾರಗಳು ಗೋಚರಿಸುತ್ತದೆ ದೀಪಾರಾಧನೆಯನ್ನು ಪ್ರತಿ ಮಂಗಳವಾರ ಅಥವಾ ಶುಕ್ರವಾರ ಸಂಜೆ ದೀಪ ಹಚ್ಚುವ ಸಮಯದಲ್ಲಿ ಮಾಡಬೇಕು. ನಿಗೂಢ ಖಾಯಿಲೆಗಳಿಂದ ನರಳುತ್ತಿರುವವರು, ಕ್ಯಾನ್ಸರ್ನಂತಹ ಮಾರಕ ಸಮಸ್ಯೆಗಳಿಗೆ ಗುರಿಯಾಗಿರುವವರು, ಗುಪ್ತ ಚಟುವಟಿಕೆಗಳಲ್ಲಿ ತೊಡಗಿರುವವರು, ಸಮಾಜಕ್ಕೆ ವಿರುದ್ದವಾಗಿರುವ ಯೋಚನೆ ಮಾಡುವವರು, ಜನರ ಜೊತೆಯಲ್ಲಿ ಬೇರೆಯದಿರುವವರು, ಏಕಾಂತವಾಗಿರಲು ಬಯಸುವವರು, ರಹಸ್ಯ ಕಾರ್ಯಾಚರಣೆಗಳಲ್ಲಿ ತೊಡಗಿರುವವರು, ವಾಮಾಚಾರ,ವಶೀಕರಣ ಪ್ರಯೋಗಿಸುವವರು, ಪ್ರೇತ ಪಿಶಾಚಿಗಳನ್ನು ವಶ ಪಡಿಸಿಕೊಳ್ಳಲು ಯತ್ನಿಸುವವರು, ಮುಂತಾದವರು ಗೋಮೇಧಿಕಾ ರತ್ನವನ್ನು ಎಂದಿಗೂ ಧರಿಸಬಾರದು. ಜಾತಕದಲ್ಲಿ ರಾಹುವು ದ್ವಿತೀಯಾ, ಸಪ್ತಮ, ಆಸ್ಟಮ ಅಥವಾ ದ್ವಾದಶದಲ್ಲಿ ದಲ್ಲಿರುವವರು ಗೋಮೇಧಿಕಾ ರತ್ನವನ್ನು ಧರಿಸಬಾರದು. ಮನೆಯ ಹೆಂಗಸರು ಸಂತೋಷಗಳಿಂದ ಸಂಭ್ರಮಿಸುತ್ತಿದ್ದರೆ, ಇಡೀ ಕುಲವೇ ಅವಳಿಂದ ಅನಂದಗೊಳ್ಳುತ್ತದೆ. ಮನೆಯ ಹೆಂಗಸರು ಅತೃಪ್ತರಾಗಿ ಸಮಾಧಾನಗಳಿಲ್ಲದೆ ಬಳಲುತ್ತಿದ್ದರೆ, ಇಡೀ ಮನೆಯೇ ನೆಮ್ಮದಿಯಿಲ್ಲದೆ ಚಡಪಡಿಸುತ್ತಿರುತ್ತದೆ. ಮನು ಸ್ಮೃತಿ..... ವ್ಯೆಕ್ತಿಯು ತನ್ನಲ್ಲಿ ಸುಪ್ತವಾಗಿರುವ ಕೆಟ್ಟ ಗುಣಗಳನ್ನು ಅರಿತರೇ ಅಥವಾ ತನ್ನ ದೌರ್ಬಲ್ಯಗಳನ್ನು ಅರ್ಥ ಮಾಡಿಕೊಂಡಿದ್ದರೆ, ಅವನ ಬದುಕಿನಲ್ಲಿ ಬರಬಹುದಾಗಿರುವ ಎಲ್ಲಾ ಬಗೆಯ ವಿಪತ್ತುಗಳಿಂದ ಸುಲಭವಾಗಿ ಪಾರಾಗಬಹುದು , ಹಾಗೂ ತೊಂದರೆಗಳಿಗೆ ಸಿಲುಕದಂತೆ ಎಚ್ಚರಿಕೆ ವಹಿಸಬಹುದು. ನೀತಿ ಶತಕ.... ಶೀಘ್ರ ವಿವಾಹ ಪ್ರಾಪ್ತಿಗಾಗಿ ಗಿರಿಜಾ ಕಲ್ಯಾಣ ಮಹೋತ್ಸವ:- ಕಾರಣಗಳೇ ಇಲ್ಲದೆ ಮದುವೆಯಾಗುವುದು ನಿಧಾನವಾಗುತ್ತಿದ್ದರೆ ಮನಸ್ಸು ಆತಂಕಕ್ಕೆ ಗುರಿಯಾಗುವುದು ಸಹಜ. ಇಂತಹ ಸಮಯದಲ್ಲಿ ಶ್ರೀ ಗಿರಿಜಾ ಕಲ್ಯಾಣವನ್ನು ಮಾಡಿಸುವುದರಿಂದ ಇರುವ ಅಡೆತಡೆಗಳು ಪರಿಹಾರಗೊಂಡು ಬೇಗ ಮದುವೆಯಾಗುತ್ತದೆ, ಇದು ಅನುಭವದಿಂದ ಕಂಡುಕೊಂಡಿರುವ ಸತ್ಯಸಂಗತಿ. ಶುಭವಾರ, ಶುಭ ನಕ್ಷತ್ರ, ಶುಭ ತಿಥಿ ಗಳಿರುವ ದಿನದಂದು ಅನುದಿನವೂ ಪೂಜಾದಿಗಳು ನಡೆಯುವ ಶಿವ ದೇವಾಲಯದಲ್ಲಿ ಶ್ರೀ ಗಿರಿಜಾ ಕಲ್ಯಾಣ ವನ್ನು ಏರ್ಪಡಿಸಬೇಕು. ವಧು ಅಥವಾ ವರ ಮತ್ತು ಅವರ ಪಾಲಕರು ಬೆಳಗಿನ ಜಾವದಲ್ಲೆದ್ದು ಸ್ನಾನಾದಿಗಳನ್ನು ಮುಗಿಸಿ, ಪುರೋಹಿತರ ಮಾರ್ಗದರ್ಶನದಂತೆ ಭಕ್ತಿಯಿಂದ ಕಾರ್ಯಗಳನ್ನು ನಡೆಸಬೇಕು. ಎಲ್ಲವೂ ಪಾಂಗೀತವಾಗಿ ನಡೆದರೆ 6 ತಿಂಗಳಿನಲ್ಲಿ ಎಲ್ಲಾ ಬಗೆಯ ತೊಂದರೆಗಳೂ ನಿವಾರಣೆಯಾಗಿ ಮದುವೆಯಾಗುತ್ತದೆ.