Thursday, 7 December 2017

ಮನೆಯ ವಾಸ್ತು ವಿಚಾರ

ಮನೆ ಕೊಳ್ಳುವಾಗ, ಬಾಡಿಗೆಗೆ ಹೋಗುವಾಗ ವಾಸ್ತುವಿನ ಬಗ್ಗೆ ತಲೆ ಕೆಡಿಸಿಕೊಳ್ಳುವವರು ಅನೇಕರು. ಯಾವ ಕೋಣೆ ಯಾವ ದಿಕ್ಕಿಗೆ ಇರಬೇಕು, ಗೃಹ ಪ್ರವೇಶ ಯಾವ ದಿಕ್ಕಿನಲ್ಲಾಗಬೇಕು ಇತ್ಯಾದಿ ಹಲವು ಪ್ರಶ್ನೆಗಳು ಅನೇರಲ್ಲಿವೆ. ಇಂತಹ ಸಂದೇಹಗಳಿಗೆ ಇಲ್ಲಿದೆ ಉತ್ತರ. ಎಲ್ಲರಿಗೂ ಸೈಟು, ಮನೆಗಳು ಬೇಕೇ ಬೇಕು. ತಾವೇ ಮನೆ ಕಟ್ಟಿಸಿಕೊಳ್ಳಲು ಸಾಧ್ಯವಾಗದಿದ್ದರೆ ಕಟ್ಟಿಸಿದ ಮನೆಯನ್ನು ಕೊಳ್ಳುವವರೂ ಉಂಟು. ಇದಲ್ಲದೆ ಬಾಡಿಗೆಗೆ ಮನೆ ಪಡೆಯುವುದಂತೂ ಸಾಮಾನ್ಯ. ಈ ಎಲ್ಲ ಸಂದರ್ಭಗಳಲ್ಲಿ ಯಾವ ದಿಕ್ಕಿನಲ್ಲಿ ಪ್ರವೇಶ ದ್ವಾರ ಇರಬೇಕು, ಎಲ್ಲೆಲ್ಲಿ ಯಾವ್ಯಾವ ಕೋಣೆ ಇರಬೇಕು ಎಂಬಂತಹ ಜಿಜ್ಞಾಸೆಗಳು ಮೂಡುವುದು ಸಹಜ. ಬೆಂಗಳೂರು ನಗರದಲ್ಲಿ ಎಲ್ಲರಿಗೂ ಬೇಕು ಪೂರ್ವ ಉತ್ತರ ಮತ್ತು ಈಶಾನ್ಯ ದಿಕ್ಕುಗಳ ನಿವೇಶನ ಮತ್ತು ಮನೆ ಗಳು ಇದಕ್ಕೆ ಬೆಲೆ ದುಬಾರಿ ಆದರೂ ಖರೀದಿ ಮಾಡುವರು. ಆದರೆ ಎಲ್ಲರಿಗೂ ಈ ನಿವೇಶನ ಮನೆ ಆಗುವುದಿಲ್ಲ ಎಂದು ತಿಳಿದುಕೊಳ್ಳುವುದು ಉತ್ತಮ. ಮೇಷ ರಾಶಿಯವರಿಗೆ ಪೂರ್ವ ದಿಕ್ಕು ಉತ್ತಮವಾದರೆ ವೃಷಭ ರಾಶಿಯವರಿಗೆ ದಕ್ಷಿಣ ದಿಕ್ಕು ಸೂಕ್ತ. ಮಿಥುನ ರಾಶಿಯವರಿಗೆ ಪಶ್ಚಿಮ ದಿಕ್ಕು, ಕಟಕ ರಾಶಿಯವರಿಗೆ ಉತ್ತರ ದಿಕ್ಕು ಉತ್ತಮ. ಸಿ0ಹ/ಧನು ರಾಶಿಯವರಿಗೆ ಪೂರ್ವ ಆಗ್ನೇಯ, ಕನ್ಯಾ/ಮಕರ ರಾಶಿಯವರಿಗೆ ಪಶ್ಚಿಮ ನೈಋುತ್ಯ, ತುಲಾ/ಕುಂಭ ರಾಶಿಯವರಿಗೆ ಪಶ್ಚಿಮ ವಾಯುವ್ಯ ದಿಕ್ಕುಗಳು ಉತ್ತಮ. ಮನೆಯ ಪ್ರವೇಶ ಮನೆಯ ಆರಂಭ ಈಶಾನ್ಯ ದಿಕ್ಕಿನಿಂದ ಆಗಬೇಕು. ಮನೆಗೆ ಬೇಕಾದ ಸಾಮಗ್ರಿಗಳನ್ನು ಪಶ್ಚಿಮ ಮತ್ತು ದಕ್ಷಿಣ ದಿಕ್ಕುಗಳಲ್ಲಿ ಇಡಬೇಕು. ಪೂರ್ವ ಮತ್ತು ಉತ್ತರ ಬೇಡ. ಬೇಗನೆ ತಡೆ ಇಲ್ಲದೆ ಆಗುವುದು. ಮನೆಗೆ ಪೂರ್ವ ಉತ್ತರ ಪ್ರವೇಶ ಆದರೆ ಮೆಟ್ಟಿಲು ಗಳು ಕನಿಷ್ಠ 3 ಗರಿಷ್ಟ 9 ಇರಬೇಕು. ಉಳಿದ ಮನೆಗಳಿಗೆ ಹೆಚ್ಚು ಮೆಟ್ಟಲುಗಳು ಇದ್ದಷ್ಟು ಉತ್ತಮ. ಆದರೆ ಬೆಸ ಸಂಖ್ಯೆ ಇರಬೇಕು 9 11 15 17 19 ಇತ್ಯಾದಿ. ಫ್ಲಾಟ್‌ ಆದರೆ ಪೂರ್ವ ಉತ್ತರ ಈಶಾನ್ಯಗಳಾದರೆ ಗರಿಷ್ಟ 4 ಮಹಡಿಗಳ ಕೆಳಗೆ ಇರಬೇಕು. ಉಳಿದವು ಎಷ್ಟು ಎತ್ತರ ಇದ್ದಷ್ಟು ಉತ್ತಮ. ಗಗನ ಚುಂಬಿ ಕಟ್ಟಡಗಳಿಗಳಾದರೆ ಆಗ್ನೇಯ ದಕ್ಷಿಣ ಭಾಗಗಳಲ್ಲಿ ತುದಿಗಳಲ್ಲಿ ಬೆದರು ಬೊಂಬೆ ಇರಬೇಕು. ಇಲ್ಲದಿದ್ದರೆ ಜನರ ಕೆಟ್ಟ ದೃಷ್ಟಿಯಿಂದಾಗಿ ಕೆಲವರು ಮೇಲಿಂದ ಬೀಳುವ ಸಾಧ್ಯತೆ ಇದೆ. ಇದು ಮೂಢನಂಬಿಕೆ ಎಂದು ಮೂದಲಿಸುವವರೂ ಇದ್ದಾರೆ ಆದರೆ ಇದು ಸತ್ಯ. ಟಿವಿ ಆನ್‌ ಮಾಡಲು ರಿಮೋಟ್‌ ಬಳಸುತ್ತೀರಿ. ಕೆಲವೊಮ್ಮೆ ಒತ್ತಿದರೂ ಟಿವಿ ಆನ್‌ ಆಗುವುದಿಲ್ಲ ಎಂದರೆ ಬ್ಯಾಟರಿ ವೀಕ್‌ ಆಗಿದೆ ಎಂದು ಅರ್ಥ. ಅದೇ ರೀತಿ ಕೆಲವರು ಏನು ಹೇಳಿದರೂ ಆಗುವುದಿಲ್ಲ. ಆದರೆ ಕೆಲವರ ದೃಷ್ಟಿ ತುಂಬಾ ಬಲಯುತವಾಗಿ ದೃಷ್ಟಿ ತಾಗುವುದು. ಮನೆ ಯಾವುದೇ ದಿಕ್ಕಿನಲ್ಲಿರಲಿ, ನಾವು ಪರಿಹಾರ ಮಂತ್ರ ಪಠಿಸಿದರೆ ದೋಷ ಬರಬಾರದು. ಎಲ್ಲರಿಗೂ ವಿವಿಧ ದೋಷಗಳಿಗೆ ತಕ್ಕಂತೆ ಪಠಿಸಲು ಮಂತ್ರಗಳಿವೆ. ಮನೆಯ ಮಧ್ಯ ಭಾಗದಲ್ಲಿ, ಪೂರ್ವ ದಿಕ್ಕಿನಲ್ಲಿ, ಆಗ್ನೇಯ, ಪಶ್ಚಿಮ, ದಕ್ಷಿಣ ಹೀಗೆ ವಿವಿಧ ದಿಕ್ಕುಗಳಲ್ಲಿ ಇರುವ ದೋಷ ನಿವಾರಣೆಗೆ ಪ್ರತ್ಯೇಕ ಮಂತ್ರಗಳಿವೆ. ದೋಷಗಳನ್ನು ತಿಳಿದು ಸೂಕ್ತ ಮಂತ್ರಗಳನ್ನು ಪಠಿಸಿದರೆ ಅವು ನಿವಾರಣೆಯಾಗುತ್ತವೆ. ನಂಬಿಕೆ ಇದ್ದು ಪಠಿಸಿದರೆ ಶ್ಮಶಾನದಲ್ಲಿ ಮನೆ ಇದ್ದರೂ ಸಹ ಉತ್ತಮ ಫಲ ಸಿಗುವುದು. ವಾಸ್ತು ಸಂಬಂಧ ಮಾಹಿತಿ ವಿಚಾರ ಮನೆಯ ಪೂರ್ವ-ಉತ್ತರ ಭಾಗಗಳಲ್ಲಿ ಭಾರವಾದ ಯಾವುದೇ ವಸ್ತುಗಳನ್ನು ಇಡಬಾರದು. ಆದರೆ ದಕ್ಷಿಣ ಪಶ್ಚಿಮ ನೈಋುತ್ಯ ಭಾಗಗಳಲ್ಲಿ ಭಾರವಾದ ವಸ್ತುಗಳು ಎಷ್ಟು ಇದ್ದರೂ ಒಳ್ಳೆಯದು. ಅಡುಗೆ ಮನೆ ಆಗ್ನೇಯ ಭಾಗದಲ್ಲಿ ಇದ್ದರೆ ಅತ್ಯುತ್ತಮ. ಜಾಗ ಇಲ್ಲದಿದ್ದರೆ ವಾಯುವ್ಯ ಭಾಗದಲ್ಲಿ ಇದ್ದರೂ ಆಗಬಹುದು. ಆದರೆ ಬಾಗಿಲು ಇರಬಾರದು. ಓಪನ್‌ ಕಿಚನ್‌ ಇರಬೇಕು. ಯಜಮಾನನು ಮಲಗುವ ಕೋಣೆ ನೈಋುತ್ಯ ಭಾಗದಲ್ಲಿ ಇದ್ದು ಎಲ್ಲಾ ಕೋಣೆಗಳಿಗಿಂತಲೂ ದೊಡ್ಡದು ಇರಬೇಕು. ದೇವರ ಕೋಣೆ ಈಶಾನ್ಯದಲ್ಲಿದ್ದು ದೇವರ ಮುಖ ಪೂರ್ವ ಅಭಿಮುಖವಾಗಿ ಇರತಕ್ಕದ್ದು. ಸೂರ್ಯನ ಕಿರಣಗಳು ದೇವರ ಕೋಣೆಗೆ ಬಿದ್ದರೆ ಅತ್ಯುತ್ತಮ. ಮಲಗುವ ಕೋಣೆಯಲ್ಲಿ ಮಂಚದ ಎದುರು ಕನ್ನಡಿ ಇರಬಾರದು. ಕನ್ನಡಿ ಯಾವಾಗಲೂ ಪೂರ್ವ ಗೋಡೆಯಲ್ಲಿ ಪಶ್ಚಿಮಕ್ಕೆ ಎದುರಾಗಿ ಇರಬೇಕು. ಉತ್ತರ ದಿಕ್ಕಿನಲ್ಲಿ ದಕ್ಷಿಣ ಅಭಿಮುಖವಾಗಿ ಇಡುವುದು ಉತ್ತಮ. ಸಾಧ್ಯತೆ ಗಳಿದ್ದರೆ ಮನೆಯ ಮುಖ್ಯ ಬಾಗಿಲಿನ ಎಡಬಲಭಾಗಗಳಲ್ಲಿ ಕಿಟಿಕಿಗಳಿದ್ದರೆ ಉತ್ತಮ. ಇವು ಎರಡು ಕಣ್ಣುಗಳು ಎಂಬ ಭಾವನೆ ಉಂಟಾಗುವುದು. ಇದಲ್ಲದೆ ಮನೆಯ ಸುತ್ತ ಮುತ್ತ ಸಾಕಷ್ಟು ಜಾಗ ಇದ್ದರೆ ಉತ್ತಮ. ಅಕ್ಕಪಕ್ಕದ ಮನೆಗಳು ಒಂದಕ್ಕೊಂದು ಅಂಟಿಕೊಂಡು ಇರುವ ಬದಲು ಜಾಗವಿದ್ದಲ್ಲಿ ವಾಸ್ತು ದೇವತೆಗೆ ಓಡಾಡಲು ಅನುಕೂಲ ಎನ್ನಲಾಗುತ್ತದೆ. ------- ಹೊಸದಾಗಿ ಮನೆ ಕಟ್ಟಿಸಿದಾಗ ಮೊದಲಾಗಿ ಸ್ಥಳ ಶುದ್ಧಿಗೆ ಪಂಚಗವ್ಯ ಹೋಮ ಮಾಡಲಾಗುತ್ತದೆ. ಇದಲ್ಲದೆ ಅನೇಕರು ಗೋ ಪ್ರವೇಶ ಮಾಡಿಸುತ್ತಾರೆ. ಮನೆ ಪ್ರವೇಶಕ್ಕೆ ಮುನ್ನ ವಾಸ್ತು ಪ್ರತಿಷ್ಠೆ, ವಾಸ್ತು ಹೋಮ ಮಾಡುತ್ತಾರೆ. ಗ್ರಹಶಾಂತಿ ಕೂಡ ಇದ್ದೇ ಇರುತ್ತದೆ. ಹಾಲು ಉಕ್ಕಿಸುವ ಶಾಸ್ತ್ರವಂತೂ ಇದ್ದೇ ಇರುತ್ತದೆ. ಇದಲ್ಲದೆ ಮನೆ ಬಾಡಿಗೆಗೆ ಕೊಡುವಾಗ ಮನೆಯ ಮಾಲೀಕರು ಹೇಗಿದ್ದರೂ ಅದಕ್ಕೆ ಸೂಕ್ತ ಸಂಸ್ಕಾರಗಳನ್ನು ಮಾಡಿಯೇ ಕೊಡುತ್ತಾರಾದ್ದರಿಂದ ಈ ಬಗ್ಗೆ ಬಾಡಿಗೆದಾರರು ಹೆಚ್ಚು ಚಿಂತೆ ಮಾಡಬೇಕಿಲ್ಲ. -ಎಂ.ವಿ.ಶರ್ಮಾ ತದ್ದಲಸೆ, ಶಾಸ್ತ್ರಕಾರರು. sangraha

No comments:

Post a Comment