Monday 29 July 2019

ಕುಜ ದೋಷ ಎಂದರೇನು? ಪರಿಹಾರ ಮಾರ್ಗಗಳೇನು?

ಕುಜ ದೋಷ ಎಂದರೇನು? ಪರಿಹಾರ ಮಾರ್ಗಗಳೇನು? ಕುಜ ಅಂದರೆ ಅಗ್ನಿ ತತ್ವದ ಗ್ರಹ. ಜನ್ಮ ಜಾತಕದಲ್ಲಿ ಯಾವ ಸ್ಥಾನಗಳಲ್ಲಿ ಕುಜ ಗ್ರಹ ಇದ್ದರೆ ದೋಷಪೂರಿತ ಆಗುತ್ತದೆ ಎಂಬುದನ್ನು ಮುಖ್ಯವಾಗಿ ತಿಳಿದುಕೊಳ್ಳಬೇಕು. ಅದಕ್ಕೆ ಮುನ್ನ ಕುಜ ದೋಷ ಇದೆ ಎಂದಾಕ್ಷಣ ಭಯ ಪಡುವ ಅಗತ್ಯ ಇಲ್ಲ ಎಂಬುದನ್ನು ನೆನಪಿಟ್ಟುಕೊಳ್ಳಿ. ಧೈರ್ಯಗೆಡಬೇಡಿ. ಭಾರತದಲ್ಲಿ ಜನಿಸುವವರ ಪೈಕಿ ಶೇಕಡಾ ಅರವತ್ತರಿಂದ ಎಪ್ಪತ್ತರಷ್ಟು ಮಂದಿಗೆ ಕುಜ ದೋಷಕಾರಿಯಾಗಿ ಇದ್ದೇ ಇರುತ್ತದೆ. ಅದೇ ರೀತಿಯಾಗಿ ದೋಷವು ಪರಿಹಾರ ಕೂಡ ಆಗಿರುತ್ತದೆ. ಆದರೆ ಆ ದೋಷ ಪರಿಹಾರ ಆಗಿದೆಯಾ ಇಲ್ಲವಾ ಎಂಬುದನ್ನು ತಿಳಿದುಕೊಂಡರೆ ಆಯಿತು. ದೋಷಕಾರಿ ಹೌದು ಎಂದಾದರೆ ಅದನ್ನು ಪರಿಹರಿಸಿಕೊಂಡು ಮುಂದುವರಿದರೆ ಜೀವನದಲ್ಲಿ ಯಶಸ್ಸು ಸಿಗುತ್ತದೆ. ಕುಜ ದೋಷ ಎಂದರೇನು? ಕುಜ ದೋಷವನ್ನು ಜನ್ಮ ಕುಂಡಲಿಯಲ್ಲಿನ ಲಗ್ನದಿಂದ ನೋಡಬೇಕು. ಲಗ್ನದಿಂದ ೨, ೪, ೭, ೮ ಅಥವಾ ೧೨ನೇ ಸ್ಥಾನಗಳ ಪೈಕಿ ಯಾವುದೇ ಮನೆಯಲ್ಲಿ ಕುಜ ಗ್ರಹ ಇದ್ದರೆ ಅದು ದೋಷವಾಗಿ ಮಾರ್ಪಾಡಾಗುತ್ತದೆ. ಈ ರೀತಿ ದೋಷ ಇರುವವರಿಗೆ ಕುಜ ದೋಷ ಇರುವವರ ಜತೆಗೇ ವಿವಾಹ ಮಾಡಬೇಕು. ಆಗ ಅವರ ಜೀವನ ಚೆನ್ನಾಗಿರುತ್ತದೆ. ಸಂತಾನದಲ್ಲಿ ಸಮಸ್ಯೆಗಳಾಗುವುದಿಲ್ಲ. ಯಾವುದೇ ಸಮಸ್ಯೆಗಳಾಗುವುದಿಲ್ಲ. ಪುರುಷರ ಜಾತಕದಲ್ಲಿ ಲಗ್ನದಿಂದ ಎರಡು, ಏಳು ಅಥವಾ ಎಂಟರಲ್ಲಿ ಇರುವ ಕುಜ ಉಗ್ರ ಸ್ವರೂಪದ ದೋಷವನ್ನು ನೀಡಿದರೆ, ಸ್ತ್ರೀಯರಿಗೆ ಏಳು, ಎಂಟು ಹಾಗೂ ಹನ್ನೆರಡು ಕುಜ ದೋಷ ಉಗ್ರವಾದ ಸ್ಥಾನ. ಆದರೆ ಇದಕ್ಕೆ ಸ್ವಾಭಾವಿಕವಾಗಿಯೇ ಪರಿಹಾರಗಳಿರುತ್ತವೆ. ಸ್ವಾಭಾವಿಕ ಪರಿಹಾರಗಳೇನು? ನಿಮ್ಮ ಜನ್ಮ ಜಾತಕದಲ್ಲಿ ಮೇಷ, ಸಿಂಹ, ವೃಶ್ಚಿಕ, ಮಕರ, ಕುಂಭ ರಾಶಿಗಳಲ್ಲಿ ಕುಜ ಗ್ರಹ ಇದ್ದರೆ, ಅದು ಲಗ್ನದಿಂದ 1, 4, 7, 8, 12ನೇ ಸ್ಥಾನಗಳೇ ಆಗಿದ್ದರೂ ದೋಷವು ಸ್ವಾಭಾವಿಕವಾಗಿಯೇ ನಿವಾರಣೆ ಆಗುತ್ತದೆ. ಅಂಥ ಸಂದರ್ಭದಲ್ಲಿ ಪ್ರತ್ಯೇಕವಾಗಿ ದೋಷ ಪರಿಹಾರ ಪೂಜೆಗಳನ್ನೇನೂ ಮಾಡುವ ಅಗತ್ಯವಿಲ್ಲ. ಕರ್ಕಾಟಕ, ಸಿಂಹ ಲಗ್ನದಲ್ಲಿ ಹುಟ್ಟಿದವರಿಗೆ ಕುಜ ದೋಷ ಇಲ್ಲ. ವೃಶ್ಚಿಕ, ಮಿಥುನ ಲಗ್ನದವರಿಗೆ ಹನ್ನೆರಡನೇ ಸ್ಥಾನದಲ್ಲಿ ಕುಜನಿದ್ದರೂ ದೋಷವಿಲ್ಲ. ಪರಿಹಾರ ಮಾಡಿಕೊಳ್ಳಲಿಲ್ಲ ಅಂದರೆ ಏನಾಗುತ್ತದೆ? ವಿವಾಹದಲ್ಲಿ ಸಮಸ್ಯೆಗಳಾಗುತ್ತವೆ. ವಿವಾಹ ವಿಚ್ಛೇದನ ಆಗಬಹುದು. ದಂಪತಿ ಮಧ್ಯೆ ಮನಸ್ತಾಪ ಆಗುತ್ತದೆ. ಒಂದೇ ಮನೆಯಲ್ಲಿದ್ದರೂ ವೈವಾಹಿಕ ಸುಖ ಅನುಭವಿಸಲು ಆಗುವುದಿಲ್ಲ. ಸಂತಾನ ಸಮಸ್ಯೆಗಳಾಗುತ್ತವೆ. ಇನ್ನು ಕುಜನನ್ನು ಭೂಮಿ ಪುತ್ರ ಎನ್ನುತ್ತಾರೆ. ಭೂಮಿಗೆ ಸಂಬಂಧಿಸಿದ ಯಾವುದೇ ಕೆಲಸ ಕೈ ಹಿಡಿಯುವುದಿಲ್ಲ. ರಿಯಲ್ ಎಸ್ಟೇಟ್, ಕೃಷಿ ಪ್ರಗತಿ ಆಗುವುದಿಲ್ಲ. ಆದ್ದರಿಂದ ಕುಜ ದೋಷವುಳ್ಳವರ ಹೆಸರಲ್ಲಿ ಭೂಮಿ ನೋಂದಣಿ ಮಾಡಿಕೊಂಡರೆ ಅದು ಉಳಿಯದೆ, ಮಾರಾಟ ಆಗಿಬಿಡುತ್ತದೆ. ಕಾಯಿಲೆ ಕಾಣಿಸಿಕೊಂಡು, ಅದರ ನಿವಾರಣೆಗಾಗಿ ಹಣಕಾಸಿನ ಅಗತ್ಯ ಕಂಡುಬಂದು, ಆ ಭೂಮಿ ಮಾರಾಟ ಮಾಡಬೇಕಾದ ಸಂದರ್ಭ ಬರುತ್ತದೆ. ಯಾವ ನಕ್ಷತ್ರಗಳಿಗೆ ಕುಜ ದೋಷ ಇರುವುದಿಲ್ಲ? ಅಶ್ವಿನಿ, ಮೃಗಶಿರಾ, ಪುನರ್ವಸು, ಪುಷ್ಯ, ಆಶ್ಲೇಷಾ, ಉತ್ತರಾ, ಸ್ವಾತಿ, ಅನೂರಾಧ, ಪೂರ್ವಾಷಾಢ, ಉತ್ತರಾಷಾಢ, ಶ್ರವಣ, ಉತ್ತರಾಭಾದ್ರಾ ನಕ್ಷತ್ರದವರಿಗೆ ಕುಜ ದೋಷವಿದ್ದರೂ ಶಾಂತಿ ಮಾಡಿಕೊಳ್ಳುವ ಅಗತ್ಯವಿಲ್ಲ. ಕೆಲವರು ವಿವಾಹ ಜೀವನದಲ್ಲಿ ತೊಂದರೆ ಅನುಭವಿಸುತ್ತಲೇ ಇರುತ್ತಾರೆ. ಕೆಲವರು ನಲವತ್ತು-ಐವತ್ತನೇ ವರ್ಷದಲ್ಲಿ ವಿವಾಹ ವಿಚ್ಛೇದನ ತೆಗೆದುಕೊಳ್ಳುವ ನಿರ್ಧಾರ ಮಾಡುತ್ತಾರೆ. ಹಾಗಂತ ಕುಜ ದೋಷದ ಪರಿಣಾಮ ಕುಜ ದಶೆ, ಕುಜ ಭುಕ್ತಿ, ಗೋಚಾರದಲ್ಲಿ ನಿಮ್ಮ ನಕ್ಷತ್ರಕ್ಕೆ ಕುಜ ಪರಿಣಾಮ ಬೀರುವ ಸ್ಥಿತಿಯಲ್ಲಿ ಬಂದಾಗ ತೊಂದರೆ ಆಗುತ್ತದೆ. ಕುಜ ದೋಷದ ಪರಿಹಾರ ಮಾರ್ಗಗಳೇನು? ಕುಜನ ಗಾಯತ್ರಿ ಮಂತ್ರವಾದ ಧರುಸುತಾಯ ವಿದ್ಮಹೇ ಋಣಹರಾಯ ಧೀಮಹಿ ತನ್ನಃ ಕುಜಃ ಪ್ರಚೋದಯಾತ್ ಅನ್ನು ನಿತ್ಯವೂ ಹೇಳಿಕೊಂಡರೆ ಕುಜ ದೋಷದ ಪ್ರಭಾವ ಕಡಿಮೆ ಆಗುತ್ತದೆ. ಕೆಂಪು ವಸ್ತ್ರ ದಾನ ಮಾಡುವುದರಿಂದ, ಯಥಾ ಶಕ್ತಿ ತೊಗರಿಬೇಳೆ ಧಾನ್ಯ ಮಾಡುವುದರಿಂದ, ಸುಬ್ರಹ್ಮಣ್ಯ ಸ್ವಾಮಿ ಕ್ಷೇತ್ರದ ದರ್ಶನ ಹಾಗೂ ಅಲ್ಲಿ ಸೇವೆ ಮಾಡುವುದರಿಂದ, ಲಕ್ಷ್ಮಿ ನರಸಿಂಹ ಸ್ವಾಮಿ ಆರಾಧನೆ ಮಾಡುವುದರಿಂದ ಹಾಗೂ ಮಹಾವಿಷ್ಣುವಿನ ಕಲ್ಯಾಣೋತ್ಸವ ಮಾಡಿಸುವುದರಿಂದ ಕೂಡ ಕುಜ ದೋಷ ಪ್ರಭಾವ ಕಡಿಮೆ ಆಗುತ್ತದೆ. ಆದರೆ ಸ್ವಯಂ ವೈದ್ಯ ಹೇಗೆ ಅಪಾಯಕಾರಿ ಹಾಗೂ ನಿರುಪಯೋಗಿಯೋ ಸ್ವಯಂ ಜ್ಯೋತಿಷ್ಯವೂ ಹಾಗೆಯೇ. ಆದ್ದರಿಂದ ನಿಮ್ಮ ಜಾತಕವನ್ನು ಒಮ್ಮೆ ತಜ್ಞ ಜ್ಯೋತಿಷಿಗಳಲ್ಲಿ ತೋರಿಸಿ. ಯೋಗ-ದೋಷಗಳ ಬಗ್ಗೆ ತಿಳಿದುಕೊಳ್ಳಿ. ಯೋಗವನ್ನು ಸರಿಯಾದ ಸಮಯಕ್ಕೆ ಬಳಸಿಕೊಳ್ಳಿ. ದೋಷ ಪರಿಹಾರ ಮಾಡಿಸಿಕೊಳ್ಳಿ ಕುಜ ದೋಷ ಪರಿಹಾರ ಸೂತ್ರಗಳು ಪೌರ್ಣಮಿ ಅಮಾವಾಸ್ಯೆ, ಗ್ರಹಣ ಕಾಲದಲ್ಲಿ ಸೂರ್ಯೋದಯ-ಸೂರ್ಯಾಸ್ತಮ ಜನಿಸಿದರೆ ಕುಜ ದೋಷ ಮದುವೆ ಎಂಬುದು ಮನುಷ್ಯನ ಜೀವನವನ್ನೇ ಬದಲಿಸುವ ಕಾಲ ಘಟ್ಟ. ಇದು ಎರಡು ಜೀವಗಳು ಸಮ್ಮಿಳಿತಗೊಳ್ಳುವ ಸೂಕಾರ್ಯ. ಇಲ್ಲಿ ಸ್ವಲ್ಪ ಎಡವಿದರೂ ಜೀವನ ಪರ್ಯಂತ ದುಃಖ ಪಡಬೇಕಾಗುತ್ತದೆ. ಇಂಥದರಲ್ಲಿ ಕುಜದೋಷ ಎಷ್ಟಿದೆ ಎಂದು ಇಬ್ಬರ ಜಾತಕವನ್ನು (ವಧು-ವರ) ಕೂಲಂಕಷವಾಗಿ ಪರಿಶೀಲಿಸಿ ವಿವಾಹ ಮಾಡುವುದರಿಂದ ದಾಂಪತ್ಯ ಜೀವನ ಸುಖವಾಗಿರಲು ಸಹಾಯವಾಗುತ್ತದೆ. ದಾಂಪತ್ಯ ಯೋಗ ನಿರ್ಧರಿಸುವಾಗ ವಧು-ವರರ ದಿನಾದಿಕೂಟಗಳನ್ನು ಸೂಕ್ತವಾಗಿ ಪರಿಶೀಲಿಸುವುದರೊಂದಿಗೆ, ಜನ್ಮ ಜಾತಕದಲ್ಲಿ ಬರುವ ಕುಜದೋಷ, ವಿಷಕನ್ಯಾಯೋಗವನ್ನು ಪರಿಶೀಲಿಸಿ ವಿವಾಹವನ್ನು ನಿರ್ಧರಿಸಬೇಕಾಗಿರುವುದರಿಂದ ಈ ಕುಜದೋಷ ನೋಡಬೇಕು. ಕುಜ ದೋಷಗಳು ಬರಲು ಕಾರಣ: ಜನನ ಕಾಲದಲ್ಲಿ ಗ್ರಹಗಳು, ಉಪಗ್ರಹಗಳು, ಉಲ್ಕಶಿಲೆಗಳು, ಧೂಮಕೇತುಗಳು ಮತ್ತು ಯಾವುದಾದರೊಂದು ಕ್ಷುದ್ರವಸ್ತು ಸೂರ್ಯನಿಗೆ ಅಡ್ಡಬಂದಾಗ ಸಂಕ್ರಮಣ ಏರ್ಪಟ್ಟು ಸೂರ್ಯನಿಂದ ಎರಕ ಹೊಯ್ಯುವ ನಭೋಕಿರಣಗಳು ವಕ್ರಸ್ಥಿತಿಯಲ್ಲಿ ಪೃಥ್ವಿಯ ಮೇಲೆ ಬಿದ್ದಾಗ, ಜ್ಯೋತಿಷ್ಯಶಾಸ್ತ್ರದ ರೀತ್ಯ ತನ್ನ ಜನ್ಮಕುಂಡಲಿಯಲ್ಲಿ ಕುಜ (ಅಂಗಾರಕ) ಮತ್ತು ಶನಿಗ್ರಹಗಳು ಅಷ್ಟಮ ಸ್ಥಾನಕ್ಕೆ ಬಂದಾಗ, ನಿವಾಸ ಮತ್ತು ಪರಿಸರದ ನೈರ್ಮಲ್ಯ ಕೆಟ್ಟು ವಾಸ್ತು ದೋಷಗಳು ಉದ್ಭವಿಸಿದರೆ, ಕುಲದೇವರನ್ನು ಪೂಜಿಸುವುದು ಮರೆತರೆ, ಪೌರ್ಣಮಿ ಅಮಾವಾಸ್ಯೆ ಮತ್ತು ಗ್ರಹಣ ಕಾಲದಲ್ಲಿ ಸೂರ್ಯೋದಯ ಮತ್ತು ಸೂರ್ಯಾಸ್ತಮ ಸಮಯದಲ್ಲಿ ಜನಿಸಿದವರು ಕುಜ ದೋಷಕ್ಕೆ ತುತ್ತಾಗುತ್ತಾರೆ. ಯಾವಾಗ ಹೇಗೆ? ಮೊದಲನೆಯದಾಗಿ ಜನ್ಮ ಜಾತಕದಲ್ಲಿ ಬರುವ ಕುಜದೋಷ ಹಾಗೂ ಎರಡನೆಯದಾಗಿ ವಿವಾಹ ಸಮಯದ ಲಗ್ನಕುಂಡಲಿಯಲ್ಲಿ ದೋಷಯುತ ಮಂಗಳನಿರದಂತೆ ಎಚ್ಚರವಹಿಸಬೇಕು. ಮೂರನೆಯದಾಗಿ ಸ್ತ್ರೀಯ ಪ್ರಥಮ ರಜೋದರ್ಶನ ಕಾಲದಲ್ಲಿ ಸ್ಪಷ್ಟ ಲಗ್ನ ಕುಂಡಲಿಯಲ್ಲಿ ಕುಜದೋಷ ಅತಿ ಮಹತ್ವದ್ದು. ಕುಜದೋಷ, ಮಂಗಳ ದೋಷ, ಅಂಗಾರಕ ದೋಷ ಎಂದರೆ ಎಲ್ಲವೂ ಒಂದೇ ಅರ್ಥ. ಕುಜನು ಲಗ್ನ ದ್ವಿತೀಯ, ಚತುರ್ಥ, ಸಪ್ತಮ, ಅಷ್ಟಮ ಮತ್ತು ವ್ಯಯ ಅಂದರೆ ಕುಜನ 1,2,4,5,7,8,12ನೇ ಭಾವಗಳಲ್ಲಿ ಸ್ಥಿತನಾಗಿದ್ದರೆ ಹಾಗೂ ಈ ದೋಷವನ್ನು ಲಗ್ನದಿಂದ, ಚಂದ್ರನಿಂದ ಹಾಗೂ ಶುಕ್ರನಿಂದ ಸಹ ನೋಡಲಾಗುತ್ತದೆ. ಲಗ್ನವು ನಿರ್ದಿಷ್ಟ ಸಮಯದ, ವಿಶೇಷ ನಿರ್ದಿಷ್ಟ ಬಿಂದುವಾಗಿರುವುದರಿಂದ ಲಗ್ನದಿಂದ ನೋಡಬೇಕು. ಚಂದ್ರನು ಮನೋಕಾರಕನಾದ್ದರಿಂದ ಮತ್ತು ಲಗ್ನದ ನಂತರ ಇದನ್ನು ವಿಚಾರಿಸುವುದರಿಂದ ಚಂದ್ರನಿಂದ ನೋಡಲಾಗುತ್ತದೆ ಮತ್ತು ಶುಕ್ರನು ವೀರ್ಯ ಮತ್ತು ಕಳತ್ರ ಕಾರಕನಾದ್ದರಿಂದ ಆತನಿಂದ ಕುಜದೋಷ ಅವಲೋಕಿಸುವುದು ಯುಕ್ತಿಕರ. ಆದರೆ, ಲಗ್ನಕ್ಕೆ ವಿಶೇಷ ಬಲವಿರುವುದರಿಂದ ಮಂಗಳ ದೋಷವನ್ನು ಲಗ್ನದಿಂದ ನೋಡುವುದು ಹೆಚ್ಚು ಫಲದಾಯಕ. ಸೂಕ್ತ ಸಮಯ ಈ ಕುಜದೋಷ ಉಂಟಾಗುವುದಕ್ಕೂ ಸಮಯವುಂಟು. ಕುಜ ಬಲಿಷ್ಠನಿದ್ದರೆ ಅಥವಾ ಮಾರಕನಾಗಿದ್ದರೆ 28ನೇ ವಯಸ್ಸಿನಿಂದ 32ನೇ ವಯೋಧರ್ವುದವರೆಗೆ ತನ್ನ ಇಷ್ಟ- ಅನಿಷ್ಟಾದಿ ಫಲಗಳನ್ನು ಕೊಡುವನು. ಅಂದಿನ ಗೋಚಾರ ಸ್ಥಾನ ಮತ್ತು ಅಷ್ಟಕವರ್ಗ ಬಿಂದುಗಳನ್ನು ಗಮನಿಸಬೇಕು. ಇದರೊಂದಿಗೆ ದಶಾಕಾಲ ಬಹಳ ಮಹತ್ವದಾಗಿದೆ. ಈ ಅನಿಷ್ಟ ಫಲಗಳು ದಶಾಕಾಲದಲ್ಲೇ ಹೆಚ್ಚಾಗಿ ನೀಡುತ್ತಾನೆ. ಒಬ್ಬೊಬ್ಬರ ಜಾತಕದಲ್ಲಿ ಕುಜದಶಾ ಬರದೇ ಹೋಗಬಹುದುದು. ಆಗ ಕುಜನ ಅನಿಷ್ಟ ಫಲಗಳು ಕಡಿಮೆಯಾಗುತ್ತದೆ. ವಿವಾಹ ಸಮಯದಲ್ಲಿ ವಧು- ವರರ ಸಾಲಾವಳಿಗೆ ತೆಗೆದುಕೊಂಡಾಗ ಗಂಡಿನ ಜಾತಕದಲ್ಲಿ (ವರ) ಕುಜನ 2,5,7ನೇ ಭಾವಗಳಲ್ಲಿ ಕುಜನಿದ್ದರೆ ಬಲಿಷ್ಠ ಕುಜದೋಷ. ಗಂಡಿನ ಜಾತಕದಲ್ಲಿ ಹೆಚ್ಚು ಕುಜದೋಷವಿದ್ದು, ಹೆಣ್ಣಿನ ಜಾತಕದಲ್ಲಿ ಕಡಿಮೆ ಕುಜದೋಷವಿದ್ದರೆ ವಿವಾಹ ಮಾಡಬಹುದು. ಆದರೆ, ಗಂಡಿನ ಜಾತಕದಲ್ಲಿ ಕಡಿಮೆ ಕುಜದೋಷವಿದ್ದು, ಹೆಣ್ಣಿನ ಜಾತಕದಲ್ಲಿ ಹೆಚ್ಚಿನ ಕುಜದೋಷವಿದ್ದರೆ ವಿವಾಹ ಮಾಡಬಾರದು. ಕುಜದೋಷ ಯಾವಾಗ ಇಲ್ಲ? ಕಟಕ ಮತ್ತು ಸಿಂಹ ಲಗ್ನದವರಿಗೆ ಕುಜದೋಷವಿಲ್ಲ. ಅಶ್ವಿನಿ, ಮೃಗಶಿರ, ಪುನರ್ವಸು, ಪುಷ್ಯ, ಆಶ್ಲೇಷಾ, ಸ್ವಾತಿ, ಅನುರಾಧ, ಪೂರ್ವಷಾಢಾ, ಉತ್ತರಾಷಾಢಾ, ಶ್ರವಣ, ಉತ್ತರಾಭಾದ್ರ, ರೇವತಿ ಈ ನಕ್ಷತ್ರಗಳಲ್ಲಿ ಜನಿಸಿದವರಿಗೆ ಕುಜದೋಷವಿಲ್ಲ. ವಧು-ವರರಿಬ್ಬರ ಜಾತಕದಲ್ಲಿ ಕುಜದೋಷವಿದ್ದರೆ ಕುಜದೋಷ ಪರಿಹಾರವಾಗುತ್ತದೆ. ಶನಿ 4,6,8,12ನೇ ಭಾವಗಳಲ್ಲಿ ಸ್ಥಿತನಾಗಿದ್ದರೆ ಕುಜ ದೋಷ ಬರುವುದಿಲ್ಲ. ಪಂಚಮಹಾಪುರುಷ ಯೋಗದಲ್ಲಿ ರುಚಿಕಯೋಗವಿದ್ದರೆ ಕುಜದೋಷವಿಲ್ಲ. ರವಿ, ಚಂದ್ರ, ಕುಜ ಉಚ್ಚರಾಶಿಗಳಲ್ಲಿದ್ದರೆ ಹಾಗೂ ಕುಜನು ಶನಿರಾಹು, ರವಿಯ ಯುತಿಯಲ್ಲಿದ್ದರೂ ಕುಜದೋಷವಿಲ್ಲ. ದೋಷ ಪರಿಹಾರ * ಶುದ್ಧ ಪಾತ್ರೆಯಲ್ಲಿ ನೀರನ್ನು ಕಾಯಿಸಿ ಪೌರ್ಣಮಿಯ ಪ್ರಾತಃಕಾಲ 8-15 ರಿಂದ 8-45 ನಿಮಿಷಗಳ ಕಾಲಮಾನದಲ್ಲಿ ಸೂರ್ಯನ ಕಿರಣಗಳು ಬೀಳುವಂತೆ ಹೊರಗಿನ ವರಾಂಡದಲ್ಲಿ ಇಟ್ಟು ತಣ್ಣಗಾದ ನಂತರ ಶುದ್ಧ ಪಾತ್ರೆಯಲ್ಲಿ ಶೇಖರಿಸಿ 9 ದಿನಗಳ ಕಾಲ ದಿನಕ್ಕೆ ಮೂರು ಹೊತ್ತು ಒಂದು ಗ್ಲಾಸ್ ನೀರನ್ನು ಸೇವಿಸಿ ಒಂದು ಬಾಳೆಹಣ್ಣು ತಿನ್ನುವುದು. ಅದೇ ನೀರಿನಿಂದ ಸಂಜ್ಞಾ ಸಮಯದಲ್ಲಿ ನಿವಾಸದಲ್ಲಿ ಬೇವಿನ ಸೊಪ್ಪಿನಿಂದ ಪ್ರೋಕ್ಷ ಮಾಡುವುದು. * ಮನೆಯ ಯಜಮಾನ ಮತ್ತು ನೂತನ ದಂಪತಿಯು ನಿವಾಸದಲ್ಲಿ 3 ಪೌರ್ಣಮಿಗಳಂದು ಮಲಗಬಾರದು.ಈ ಪರ್ವಕಾಲದಲ್ಲಿ ಮದ್ಯಪಾನ ಮತ್ತು ಮಾಂಸಾಹಾರ ಸೇವಿಸಬಾರದು. ನಿವಾಸದಲ್ಲಿ ಹಬ್ಬದ ವಾತಾವರಣ ಇರಬೇಕು. * ಪ್ರಾತಃಕಾಲ ನಿವಾಸದ ಪ್ರಧಾನ ಬಾಗಿಲನ್ನು ಕೆಂಪು ಗುಲಾಬಿ ಹೂವುಗಳಿಂದ ಪೂಜಿಸಿ; ನಂತರ ಹಲವು ಹೂವುಗಳ ದಳಗಳನ್ನು ಬಿಡಿಸಿ ತಮ್ಮ ಶುದ್ಧ ಕೈಯಲ್ಲಿ ಇಟ್ಟು ಸೂರ್ಯನ ಕಿರಣಗಳನ್ನು ಬೀಳಿಸಿ ನಂತರ ತಮ್ಮ ದೇವರ ಮೇಲೆ ಹಾಕುವುದು. 4) ಮೂರು ಶನಿವಾರ ಅಥವಾ ಮಂಗಳವಾರದಂದು ಪ್ರಾತಃಕಾಲ 7.45ಕ್ಕೆ ದೇವರ ಕೋಣೆಯಲ್ಲಿ ಎರಡು ದೀಪಗಳನ್ನು ಬೆಳಗಿಸಿ ನಂತರ ಸೂರ್ಯನಿಗೆ ನಮಸ್ಕರಿ ಸೂರ್ಯನು ಕೆಂಪು ವರ್ಣಕ್ಕೆ ಬರುವವರೆಗೆ ನೋಡಿ ನಂತರ ದೇವರ ಕೋಣೆಯಲ್ಲಿರುವ ದೀಪಗಳ ಪ್ರಜ್ವಲನಾ ಕಿರಣಗಳನ್ನು ನೋಡಿದಾಗ ಕಂಡರಿಯದ ಕೆಂಪು ವರ್ಣಕ್ಕೆ ತಿರುಗುತ್ತವೆ. ಹಲವು ಸಲ ಪ್ರಯತ್ನಿಸುವುದು ನಂತರ ಹತ್ತಿರದಲ್ಲಿರುವ ನವಗ್ರಹಗಳಿಗೆ ಪೂಜೆ ಸಲ್ಲಿಸಿ ಅಂದು ಸಂಜೆ ಉಪವಾಸ ವ್ರತ ಆಚರಿಸಿ, ವಸ್ತ್ರದಾನ ಮಾಡುವುದು. ಜಾತಕದಲ್ಲಿ ಮಾಂಗಲಿಕ ದೋಷವಿದ್ದರೆ- ಮದುವೆಯ ಸಂದರ್ಭದಲ್ಲಿ ಸಮಸ್ಯೆ ಬರಲಿದೆ!! ಭಾರತವು ಮೂಢನಂಬಿಕೆಗಳ ತವರು ಎಂದರೆ ತಪ್ಪಾಗದು. ಯಾಕೆಂದರೆ ಭಾರತವು ವಿವಿಧ ಧರ್ಮಗಳಲ್ಲಿ ಹಲವಾರು ರೀತಿಯ ಮೂಢನಂಬಿಕೆಗಳು ಇವೆ. ಇಂದಿಗೂ ಕೆಲವೊಂದು ನಂಬಿಕೆಗಳು ಹಾಗೆ ಉಳಿದುಕೊಂಡಿದೆ. ಇದರಲ್ಲಿ ಕೆಲವು ವೈಜ್ಞಾನಿಕ ಕಾರಣಗಳು ಇರುವಂತಹ ನಂಬಿಕೆಗಳು. ಆದರೆ ಇನ್ನು ಕೆಲವು ನಂಬಿಕೆಗಳಿಗೆ ಯಾವುದೇ ತಲೆಬುಡವೇ ಇರಲ್ಲ. ಉದಾಹರಣೆಗೆ ಮಾಂಗಲಿಕ ಇರುವಂತಹ ಮಹಿಳೆ ಅಥವಾ ಪುರುಷರು ಮಾಂಗಲಿಕ ಇಲ್ಲದೆ ಇರುವಂತವರನ್ನು ಮದುವೆಯಾದರೆ ಆಗ ಕೆಲವೇ ದಿನಗಳಲ್ಲಿ ಸಂಗಾತಿಯು ಮರಣವನ್ನಪ್ಪುವರು ಎಂದು ಹೇಳಲಾಗುತ್ತದೆ. ಅದರಲ್ಲೂ ಪುರುಷ ಪ್ರಧಾನವಾಗಿರುವಂತಹ ನಮ್ಮ ದೇಶದಲ್ಲಿ ಮಹಿಳೆಯ ಜಾತಕದಲ್ಲಿ ಮಾಂಗಲಿಕ ದೋಷವಿದ್ದರೆ (ಕುಜ ದೋಷ) ಆಗ ಆಕೆಗೆ ಮದುವೆಯೆನ್ನುವುದು ಕನಸಿನ ಮಾತೇ ಸರಿ. ವೈದಿಕ ಜ್ಯೋತಿಷ್ಯದ ಪ್ರಕಾರ ಮಂಗಲಿಕ ದೋಷವನ್ನು ಜ್ಯೋತಿಷ್ಯದಲ್ಲಿ ತುಂಬಾ ಗಂಭೀರ ದೋಷವೆಂದು ಪರಿಗಣಿಸಲಾಗಿದೆ. ಇದು ಒಬ್ಬ ವ್ಯಕ್ತಿಯ ಜೀವನ, ಮದುವೆ ಮೇಲೆ ಪರಿಣಾಮ ಬೀರುವುದು ಮತ್ತು ಆತನಿಗೆ ದುರಾದೃಷ್ಟವನ್ನೇ ಉಂಟು ಮಾಡುವುದು. ಮಾಂಗಲಿಕ ದೋಷವನ್ನು ಕುಜ ದೋಷ, ಭೋಮ ದೋಷ ಅಥವಾ ಅಂಗಾರಖ ದೋಷವೆಂದು ಕರೆಯಲಾಗುವುದು. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಮಂಗಳ ಗ್ರಹವು ವ್ಯಕ್ತಿಯ ಕುಂಡಲಿಯ 1,2,4,7,8 ಮತ್ತು 12ನೇ ಮನೆಯಲ್ಲಿ ಕುಳಿತಿರುವುದು. 12 ಮನೆಗಳಲ್ಲಿ ಈ ಮೇಲಿನ ಯಾವುದಾದರೂ ಒಂದು ಮನೆಯಲ್ಲಿ ಮಂಗಳ ಗ್ರಹವು ಇದ್ದರೆ ಆಗ ಮಾಂಗಲಿಕ ದೋಷವಿದೆ ಎಂದು ಹೇಳಬಹುದು. ಬಾಲಿವುಡ್ ನಟಿ ಐಶ್ವರ್ಯ ರೈಗೆ ಮಾಂಗಲಿಕ ದೋಷವಿತ್ತು ಎಂದು ಹೇಳಲಾಗಿತ್ತು. ಆಕೆ ಅಭಿಷೇಕ್ ಬಚ್ಚನ್ ನ್ನು ಮದುವೆಯಾಗುವ ಮೊದಲು ಒಂದು ಬಾಳೆಗಿಡಕ್ಕೆ ಮದುವೆ ಮಾಡಿಕೊಡಲಾಗಿತ್ತು. ಇದರಿಂದ ಮಾಂಗಲಿಕ ದೋಷವು ಕಡಿಮೆಯಾಗುವುದು. ಮಾಂಗಲಿಕ ದೋಷದ ಬಗ್ಗೆ ತಿಳಿಯಬೇಕಾದರೆ ನಾವು ಇದರ ಬಗ್ಗೆ ಸಂಪೂರ್ಣವಾಗಿ ಅರ್ಥ ಮಾಡಿಕೊಂಡು ಅದಕ್ಕೆ ಇರುವಂತಹ ಪರಿಹಾರಗಳನ್ನು ಈ ಲೇಖನದಲ್ಲಿ ನೀಡಲಾಗಿದೆ. ಮಾಂಗಲಿಕ ದೋಷ ವೆಂದರೇನು? ಕುಂಡಲಿಯಲ್ಲಿ 12 ಮನೆಗಳು ಇರುವುದು. ಜನ್ಮ ಕುಂಡಲಿಯಲ್ಲಿ ಮಂಗಳ ಗ್ರಹವು 1,2,4,7, 8 ಮತ್ತು 12ನೇ ಮನೆಯಲ್ಲಿ ಇದ್ದರೆ ಆಗ ಆ ವ್ಯಕ್ತಿಗೆ ಮಾಂಗಲಿಕ ದೋಷವಿದೆ ಎಂದು ಹೇಳಬಹುದು. ಮಾಂಗಲಿಕ ದೋಷವಿರುವ ವ್ಯಕ್ತಿಗೆ ಮಂಗಳ ಗ್ರಹದ ನಕಾರಾತ್ಮಕ ಪರಿಣಾಮವು ಇರುವುದು. ಇದು ಮದುವೆ ವಿಚಾರದಲ್ಲಿ ಹೆಚ್ಚಿನ ಪ್ರಭಾವ ಬೀರುವುದು. ಯಾಕೆಂದರೆ ಮದುವೆ ಸಂದರ್ಭದಲ್ಲಿ ಹುಡುಗ ಹಾಗೂ ಹುಡುಗಿಯ ಕುಂಡಲಿಯು ಹೊಂದಾಣಿಕೆಯಾಗಬೇಕು. ಮದುವೆಗೆ ಮೊದಲು ಜ್ಯೋತಿಷಿಗಳು ಕುಂಡಲಿಯಲ್ಲಿ ಮಂಗಳ ದೋಷವಿದೆಯಾ ಎಂದು ನೋಡುವರು ಮತ್ತು ಇದರ ಬಳಿಕ ಮದುವೆ ಹೊಂದಾಣಿಕೆಯಾಗುವುದೇ ಎಂದು ತಿಳಿಸುವರು. ಮಾಂಗಲಿಕ ದೋಷದ ಗುಣಲಕ್ಷಣಗಳು ಕುಂಡಲಿಯಲ್ಲಿ ಎರಡೂ ಲಿಂಗದವರಿಗೆ ಮಾಂಗಲಿಕ ದೋಷವು ಕಾಣಿಸಬಹುದು. ಮಂಗಳ ಗ್ರಹವು ತುಂಬಾ ಆಕ್ರಮಣಕಾರಿ ಎಂದು ಹೇಳಲಾಗುತ್ತದೆ. ಇದರಿಂದ ಮಾಂಗಲಿಕ ದೋಷವಿರುವ ವ್ಯಕ್ತಿಗಳು ಬೇಗನೆ ತಾಳ್ಮೆ ಕಳೆದುಕೊಳ್ಳುವರು. ಯಾವುದೇ ಸಮಸ್ಯೆಯನ್ನು ತಡೆಯಲು ಮಾಂಗಲಿಕ ದೋಷವಿರುವವರು ತಮ್ಮಲ್ಲಿರುವ ಬೆಂಕಿಯಂತಹ ಶಕ್ತಿಯನ್ನು ಸರಿಯಾಗಿ ಬಳಸಿಕೊಳ್ಳಬೇಕು. ಮಾಂಗಲಿಕ ದೋಷದಿಂದಾಗಿ ಮದುವೆಯಲ್ಲಿ ವಿಳಂಬವಾಗಬಹುದು. ಮಾಂಗಲಿಕ ದೋಷವು ಮದುವೆಯಲ್ಲಿ ಒತ್ತಡ ಮತ್ತು ಅಪಸ್ವರ ಕಾಣಿಸುವಂತೆ ಮಾಡುವುದು. ಮಾಂಗಲಿಕ ದೋಷವಿರುವಂತಹ ಇಬ್ಬರು ಮದುವೆಯಾದರೆ ಗ್ರಹ ಪ್ರಭಾವ ತಗ್ಗಿಸಬಹುದು. ಹಿಂದಿನ ಜನ್ಮದಲ್ಲಿ ಸಂಗಾತಿಯೊಂದಿಗೆ ಸರಿಯಾಗಿ ವರ್ತಿಸದೆ ಇರುವಂತಹ ವ್ಯಕ್ತಿಗಳಿಗೆ ಮಾಂಗಲಿಕ ದೋಷವು ಬರುವುದು. ಸಮಸ್ಯೆಯುಂಟು ಮಾಡುವನು? ಮಂಗಳನು ಮೊದಲ ಮನೆಯಲ್ಲಿ ಇರುವಾಗ ವೈವಾಹಿಕ ಜೀವನದಲ್ಲಿ ಜಗಳ ಹಾಗು ಹಿಂಸೆಯು ಉಂಟಾಗುವುದು. ಎರಡನೇ ಮನೆಯಲ್ಲಿ ಮಂಗಳನಿದ್ದರೆ ಆಗ ವ್ಯಕ್ತಿಯ ಮದುವೆಯಲ್ಲಿ ಹಾಗೂ ವೃತ್ತಿ ಜೀವನದಲ್ಲಿ ಸಮಸ್ಯೆಯಾಗಬಹುದು. ನಾಲ್ಕನೇ ಮನೆಯಲ್ಲಿ ಮಂಗಳನಿದ್ದರೆ ಆಗ ವೃತ್ತಿಯಲ್ಲಿ ಆ ವ್ಯಕ್ತಿಗೆ ಯಶಸ್ಸು ಸಿಗದು. ಉದ್ಯೋಗವನ್ನು ಪದೇ ಪದೇ ಬದಲಿಸುತ್ತಿರುತ್ತಾನೆ ಮಂಗಳನು 7ನೇ ಮನೆಯಲ್ಲಿ ಇದ್ದರೆ ಮಂಗಳನು 7ನೇ ಮನೆಯಲ್ಲಿ ಇದ್ದರೆ ಆ ವ್ಯಕ್ತಿಯಲ್ಲಿನ ಶಕ್ತಿಯು ಕ್ರೋಧದಲ್ಲಿ ವ್ಯಯವಾಗುವುದು. ತನ್ನಲ್ಲಿರುವಂತಹ ಅಧಿಕಾರ ಸ್ಥಾಪಿಸುವ ಗುಣದಿಂದಾಗಿ ಕುಟುಂಬದವರೊಂದಿಗೆ ಸರಿಯಾದ ಹೊಂದಾಣಿಕೆಯಾಗದು. 8ನೇ ಮನೆಯಲ್ಲಿ ಮಂಗಳನು ಕುಳಿತಿದ್ದರೆ ಆಗ ವ್ಯಕ್ತಿಯ ಷೋಷಕರಿಂದ ದೂರವಾಗುವನು ಮತ್ತು ಪಿತ್ರಾರ್ಜಿತ ಆಸ್ತಿ ಕಳೆದುಕೊಳ್ಳುವನು. ಮಂಗಳನು 12ನೇ ಮನೆಯಲ್ಲಿ ಇದ್ದರೆ ಆಗ ವ್ಯಕ್ತಿ ಮಾನಸಿಕ ಸಮಸ್ಯೆ, ಆರ್ಥಿಕ ನಷ್ಟ ಮತ್ತು ಶತ್ರುಗಳು ಹೆಚ್ಚಾಗುವರು. ಮಾಂಗಲಿಕ ದೋಷ ನಿವಾರಣೆಗೆ ಕೆಲವು ವಿಧಾನಗಳು ಮಾಂಗಲಿಕ ದೋಷವಿರುವ ಹುಡುಗ ಮತ್ತು ಹುಡುಗಿ ಮದುವೆಯಾದರೆ ದೋಷವು ದೂರವಾಗುವುದು. ಮಾಂಗಲಿಕ ದೋಷ ನಿವಾರಣೆ ಮಾಡಲು ಕುಂಭ ವಿವಾಹವಾದರೆ ಸಾಧ್ಯವಾಗುವುದು. ಈ ವಿಧದ ಮದುವೆಯಲ್ಲಿ ಮಾಂಗಲಿಕ ದೋಷವಿರುವ ವ್ಯಕ್ತಿಗೆ ಮರದೊಂದಿಗೆ ಮದುವೆ ಮಾಡಿ ದೋಷ ದೂರ ಮಾಡಲಾಗುವುದು. ಮಾಂಗಲಿಕ ದೋಷ ನಿವಾರಣೆ ಮಾಡಲು ಪ್ರತೀ ಮಂಗಳವಾರ ಉಪವಾಸ ಮಾಡಬೇಕು. ಉಪವಾಸದ ವೇಳೆ ಮಾಂಗಲಿಕ ದೋಷವಿರುವವರು ಕೇವಲ ತೊಗರಿ ಬೇಳೆ ಮಾತ್ರ ಸೇವಿಸಬೇಕು. ನವಗ್ರಹ ಮಂತ್ರ ಅಥವಾ ಹನುಮಾನ್ ಚಾಲೀಸ ಪಠಿಸಿ ಮಾಂಗಲಿಕ ಇರುವವರು ಮಂಗಳವಾರದಂದು ನವಗ್ರಹ ಮಂತ್ರ ಅಥವಾ ಹನುಮಾನ್ ಚಾಲೀಸ ಪಠಿಸಿದರೆ ದೋಷ ದೂರವಾಗುವುದು. ಮಂಗಳವಾರದಂದು ಪೂಜೆಗಳನ್ನು ಮಾಡುವುದು ಮತ್ತು ಆಂಜನೇಯ ದೇವಸ್ಥಾನಕ್ಕೆ ಹೋಗುವುದರಿಂದ ಮಾಂಗಲಿಕ ದೋಷವನ್ನು ಕಡಿಮೆ ಮಾಡಿಕೊಳ್ಳಬಹುದು. ಜ್ಯೋತಿಷಿಗಳ ಪ್ರಕಾರ ಮಾಂಗಲಿಕ ದೋಷವಿರುವ ವ್ಯಕ್ತಿಗಳು ಕೆಂಪು ಹವಳವಿರುವ ಬಂಗಾರದ ಉಂಗುರವನ್ನು ಬಲಗೈಯ ಉಂಗುರದ ಬೆರಳಿಗೆ ಧರಿಸಬೇಕು. ಮಾಂಗಲಿಕ ದೋಷವಿರುವಂತಹ ವ್ಯಕ್ತಿಗಳು 28ರ ಹರೆಯದ ಬಳಿಕ ಮದುವೆಯಾಗಬೇಕು. ಯಾಕೆಂದರೆ ವಯಸ್ಸಾದಂತೆ ದೋಷದ ಪ್ರಭಾವ ಕೂಡ ತಗ್ಗುವುದು. ಜಾತಕದಲ್ಲಿ ಕಾಡುವ ಕುಜ ದೋಷ! ಹೀಗೂ ಸಮಸ್ಯೆ ಬರಬಹುದು! ಜಾತಕದಲ್ಲಿ ಕೆಲವೊಂದು ದೋಷಗಳು ಇದ್ದರೆ ಮದುವೆಯಾಗಲು ಹಿಂಜರಿಯುತ್ತಾರೆ. ಅದರಲ್ಲೂ ಮಂಗಳಿಕ ದೋಷ ಪ್ರಮುಖವಾಗಿರುವಂತದ್ದು. ಸಂಸ್ಕೃತದಲ್ಲಿ ಮಂಗಳ ಗ್ರಹಕ್ಕೆ ಮಂಗಳವೆಂದು ಕರೆಯಲಾಗುತ್ತದೆ. ಜಾತಕದಲ್ಲಿ ಮಂಗಳವು 1, 2, 4, 7, 8 ಮತ್ತು 12ನೇ ಮನೆಯಲ್ಲಿದ್ದಾಗ ಇದನ್ನು ಮಂಗಳ ದೋಷವೆಂದು ಕರೆಯಲಾಗುವುದು ಮತ್ತು ಜನರು ಇದನ್ನು ಮಂಗಳಿಕ ಎಂದು ಕರೆಯುತ್ತಾರೆ. ಈ ದೋಷವು ಯಾರಿಗೂ ಬರಬಹುದು. ಗೌರವ, ಅಹಂ, ಸ್ವಾಭಿಮಾನ ಮತ್ತು ಶಕ್ತಿಯ ಸಂಕೇತವೇ ಮಂಗಳ. ಆದರೆ ಮಂಗಳ ದೋಷದಲ್ಲಿ ಸಂಬಂಧವು ದುರ್ಬಲವಾಗುವ ಸಾಧ್ಯತೆಗಳು ಹೆಚ್ಚಿರುವುದು. ಇದನ್ನು ಸರಿಯಾಗಿ ಬಳಸಿಕೊಂಡರೆ ಮಂಗಳ ದೋಷವು ಶಕ್ತಿಯನ್ನು ನೀಡುವುದು. ಜಾತಕದಲ್ಲಿ ಮಂಗಳ ದೋಷವಿದ್ದರೆ ಅದರಿಂದ ವೈವಾಹಿಕ ಜೀವನ, ಮಾನಸಿಕ ಆರೋಗ್ಯ ಮತ್ತು ಹಣಕಾಸಿನ ಮೇಲೆ ಪರಿಣಾಮ ಉಂಟಾಗಬಹುದು. ಮಂಗಳ ದೋಷದ ಪರಿಣಾಮ ಜನ್ಮ ಜಾತಕದಲ್ಲಿ ಮಂಗಳಗ್ರಹ ಯಾವ ಮನೆಯಲ್ಲಿದೆ ಎಂದು ಅರ್ಥಮಾಡಿಕೊಂಡರೆ ಮಂಗಳ ದೋಷದ ಪರಿಣಾಮವು ತಿಳಿದುಬರುವುದು. 12ರಲ್ಲಿ ಆರು ಮನೆಗಳಲ್ಲಿ ಮಂಗಳವಿದ್ದರೆ ಆಗ ಅದು ಮಂಗಳನ ಕೆಟ್ಟ ಪ್ರಭಾವವೆಂದು ಭಾವಿಸಲಾಗುತ್ತದೆ. ಒಂದನೇ ಮನೆಯಲ್ಲಿ ಮಂಗಳ ಗ್ರಹವಿದ್ದರೆ ಜಾತಕದಲ್ಲಿ ಒಂದನೇ ಮನೆಯಲ್ಲಿ ಮಂಗಳ ಗ್ರಹವಿರುವವರು ತುಂಬಾ ಕ್ಷೋಬೆಗೊಳಗಾದವರು, ಆಕ್ರಮಣಕಾರಿಗಳು ಮತ್ತು ಅಸಭ್ಯರಾಗಿರುವರು. ಜೀವನದಲ್ಲಿ ಸಂತೋಷ ಕಳೆದುಕೊಳ್ಳುವುದು 1ನೇ ಮನೆಯಲ್ಲಿ ಮಂಗಳವಿರುವ 4ನೇ ಅಂಶದ ಲಕ್ಷಣ. ಇದರ 7ನೇ ಅಂಶವೆಂದರೆ ಚಿಂತೆ ಹಾಗೂ ತೊಂದರೆಯುಂಟು ಮಾಡಿ ಪತಿ ಮತ್ತು ಪತ್ನಿ ಮಧ್ಯೆ ಭಿನ್ನಾಭಿಪ್ರಾಯ ಉಂಟು ಮಾಡಬಹುದು. 8ನೇ ಅಂಶವೆಂದರೆ ನಿಮ್ಮ ಸುಖ ಜೀವನದ ಮೇಲೆ ಅಪಾಯದ ಸಂಭವವಿದೆ ಎನ್ನುವ ಸೂಚನೆ. 2ನೇ ಮನೆಯಲ್ಲಿ ಮಂಗಳನ ದೋಷ ಎರಡನೇ ಮನೆಯು ಸಂಪತ್ತು ಮತ್ತು ಕುಟುಂಬದ ಮನೆಯಾಗಿದೆ. ಮಂಗಳವು ಈ ಗ್ರಹದಲ್ಲಿ ಇದ್ದರೆ ಅದರಿಂದ ಆ ವ್ಯಕ್ತಿಯ ಕುಟುಂಬದೊಂದಿಗೆ ಸಂಬಂಧದ ಮೇಲೆ ಪರಿಣಾಮ ಬೀರುವುದು. ಇದು ಸಂಗಾತಿಗಳನ್ನು ಬೇರ್ಪಡಿಸಬಹುದು ಅಥವಾ ಪದೇ ಪದೇ ಜಗಳ ಮತ್ತು ಆತಂಕ ಉಂಟು ಮಾಡಬಹುದು. 2ನೇ ಮನೆಯಲ್ಲಿರುವ ಮಂಗಳನು ವ್ಯಕ್ತಿಯ ಕುಂಡಲಿಯಲ್ಲಿ 5, 8 ಮತ್ತು 9ನೇ ಮನೆಯ ಮೇಲೂ ಪ್ರಭಾವ ಬೀರಬಹುದು. ಮಂಗಳಿಕ ಹೊಂದಿರುವ ವ್ಯಕ್ತಿಯ ಮಕ್ಕಳ ಮೇಲೂ ಇದರ ಪರಿಣಾಮವಾಗಬಹುದು. 4ನೇ ಮನೆಯಲ್ಲಿ ಮಂಗಳ ಮಂಗಳವು ನಾಲ್ಕನೇ ಮನೆಯಲ್ಲಿದ್ದರೆ ಅದರ ಅಂಶವು ಕುಂಡಲಿಯ 7, 10 ಮತ್ತು 11ನೇ ಮನೆಯಲ್ಲಿರುವುದು. ಮಂಗಳವು ನಾಲ್ಕನೇ ಮನೆಯಲ್ಲಿ ಇದ್ದರೆ ಅದರಿಂದ ಸ್ಥಿರ ಸಂಪತ್ತು ಮತ್ತು ಸಮೃದ್ಧಿ ಸಿಗುವುದು. ಆದರೆ ವೈವಾಹಿಕ ಜೀವನದಲ್ಲಿ ತೊಂದರೆ ಕಾಣಿಸುವುದು. ಕುಂಡಲಿಯ ವ್ಯಕ್ತಿಯು ಹೊಂದಾಣಿಕೆ ಮಾಡಿಕೊಳ್ಳದೆ ಇರುವುದರಿಂದ ಹೀಗೆ ಆಗುವುದು. ಆದರೆ ಇದರಿಂದ ಸಂಬಂಧಿಗಳಿಗೆ ಯಾವುದೇ ಅಪಾಯವಿಲ್ಲ. 7ನೇ ಮನೆಯಲ್ಲಿ ಮಂಗಳ ದೋಷ ಇದು ಮದುವೆ ಮತ್ತು ಜತೆಗಾರಿಕೆಯ ಮನೆಯಾಗಿದೆ. 7ನೇ ಮನೆಯಲ್ಲಿ ಮಂಗಳ ದೋಷವಿದ್ದರೆ ಅದರಿಂದ ಮದುವೆಗೆ ಹಾನಿಯಾಗಬಹುದು. ಈ ದೋಷವಿರುವವರು ಅನಾರೋಗ್ಯ ಹೊಂದಿರುವ ಪತ್ನಿಯನ್ನು ಪಡೆಯಬಹುದು ಅಥವಾ ಮಹಿಳೆಯರಿಗೆ ತುಂಬಾ ಕೋಪಿಷ್ಠ ಪತಿ ಸಿಗಬಹುದು. 8ನೇ ಮನೆಯಲ್ಲಿ ಮಂಗಳ ದೋಷ ಇದು ಜೀವನದಲ್ಲಿ ಸುಖದುಃಖ ಮತ್ತು ಪರಿಸ್ಥಿತಿಯ ಸಂಕೇತ. ಈ ಮನೆಯಲ್ಲಿ ಮಂಗಳ ದೋಷವಿದ್ದರೆ ಅದು ತುಂಬಾ ಕೆಟ್ಟದು. ಇದು ವೈವಾಹಿಕ ಜೀವನದಲ್ಲಿ ಖಿನ್ನತೆ ಉಂಟು ಮಾಡಬಹುದು. ಆರ್ಥಿಕ ಪರಿಸ್ಥಿತಿ, ಸಂಗಾತಿಯ ಅನಾರೋಗ್ಯ ಮತ್ತು ಇತರ ಕೆಲವೊಂದು ಕಾರಣಗಳಿಂದ ಖಿನ್ನತೆ ಉಂಟಾಗಬಹುದು. ಕವಚಮ್: ನೀಲಾಂಬರಶ್ಮಿರಃ ಪಾತು ಲಲಾಟಂ ಲೋಕವಂದಿತಃ | ಚಕ್ಷುಷೀ ಪಾತು ಮೇ ರಾಹುಃ ಶ್ರೋತ್ರಮರ್ಧಶರೀರವಾನ್|| ನಾಸಿಕೇ ಮೇ ಕರಾಳಸ್ಯ ಶ್ಯೂಲಪಾಣಿರ್ಮುಖಂ ಮಮ | ಜಿಹ್ವಾಂ ಮೇ ಸಿಂಹಿಕಾಸೂನುಃ ಕಣ್ಠಂಮೇ ಕಷ್ಟನಾಶನಃ|| ಫಲ ಶೃತಿಃ ಯ ಇದಂ ಕವಚಂ ದಿವ್ಯಂ ಸರ್ವಶತೃವಿನಾಶನಮ್| ಭೂತಪ್ರೇತಪಿಶಾಚಾನಾಂ ನಾಶನಂ ಸರ್ವ ಸಿದ್ದಿದಮ್|| ಸರ್ವ ರೋಗ ಹರಂಚೈವ ಸರ್ವ ಸಂಪತ್ಪದಂ ಶುಭಮ್| ಭುಕ್ತಿ ಮುಕ್ತಿಪ್ರದಂ ನೃಣಾಂ ಸರ್ವಸೌಭಾಗ್ಯವರ್ಧನಮ್|| "ಧರ ಸುತಾಯ ವಿದ್ಮಹೇ | ಋಣ ಹರಾಯ ಧೀಮಹೀ | ತನ್ನೋ ಕುಜಃ ಪ್ರಚೋದಯಾತ್" *ಸಕಲ ರೀತಿಯ ಸರ್ಪದೋಷಕ್ಕೆ(ಕಾಳಸರ್ಪ ದೋಷಕ್ಕೆ ಈ ಸಣ್ಣ ಪ್ರಯೋಗ ಮಾಡಿದರೆ ಖಚಿತ ವಾಗಿ ಎಲ್ಲಾ ರೀತಿಯ ದೋಷಗಳು ಪರಿಹಾರವಾಗುತ್ತವೆ* ಹುಣ್ಣಿಮೆಯಂದು ಬೆಳಗ್ಗೆ ಸ್ನಾನಾ ನಂತರ ನಾಲ್ಕು ಬಾವಿಗಳಿಂದ ಬೇರೆ ಬೇರೆ ಪಾತ್ರೆ ಅಥವ ಬಿಂದಿಗೆಗಳಲ್ಲಿ ನೀರನ್ನು ತರಬೇಕು ತಂದು ಯಾವುದಾದರು ಮೃತ್ತಿಕೆಯ ಬಳಿ ಈ ನಾಲ್ಕು ಕೊಡ ನೀರಿನೊಂದಿಗೆ ಮೃತ್ತಿಕೆಗೆ ಪೂಜಿಸಬೇಕು ಈ ಮಂತ್ರ ಹೇಳುತ್ತಾ ೨೧ ಪ್ರದಕ್ಷಿಣೆ ಹಾಕಿ ನೀರಿನೊಂದಿಗೆ ಮನೆಗೆ ಹಿಂತಿರುಗುಗಬೇಕು ಈ ಕಾರ್ಯ ಬೆಳಗ್ಗೆ ೭ಗಂಟೆಯೊಳಗೆ ಆಗಬೇಕು ಪೂಜಾ ನಂತರ ಮೃತ್ತಿಕೆಯಿಂದ ಸ್ವಲ್ಪ ಮಣ್ಣನ್ನು ಜೊತೆಯಲ್ಲಿ ತರಬೇಕು.ಮನೆಗೆ ಬಂದು ಆದಿನ ಸಂಜೆ ವರೆಗೂ ಉಪವಾಸ ಮಾಡಬೇಕು (ಹಾಲನ್ನು ಸೇವಿಸ ಬಹುದು ಆದರೆ ಬೇರೆ ಏನನ್ನೂ ಅದಕ್ಕೆ ಸೇರಿಸಿ ಸೇವಿಸಬಾರದು.) ಸಂಜೆ ನೀವು ತಂದಿರುವ ಮಣ್ಣನ್ನು ನೀವು ಪೂಜಿಸಿ ತಂದಿರುವ ಸ್ವಲ್ಪನೀರಿನಲ್ಲಿ ಬೆರೆಸಿ ನಿಮ್ಮ ಮೈಮೇಲಿರುವ ಎಲ್ಲಾ ಬಟ್ಟೆಯನ್ನು ತೆಗೆದಿಟ್ಟು ದೇಹದ ಎಲ್ಲಾ ಬಾಗಕ್ಕೂ ಈ ಮಣ್ಣಿನಿಂದ ಲೇಪನ ಮಾಡಿಕೊಳ್ಳಬೇಕು ಈಗ ನಿರ್ವಾಣದಲ್ಲೇ ಇರುವಂತೆಯೇ ಮಣ್ಣನ್ನು ಹಚ್ಚಿಕೊಂಡಮೇಲೆ ಕುಳಿತುಕೊಂಡು ಈ ಕೆಳಗಿನ ಮಂತ್ರವನ್ನು ೧೦೮ ಸಲ ಜಪಿಸಿ ನನ್ನ ಸಕಲ ಸರ್ಪದೋಷವು ನಿವಾರಣೆಯಾಗಲಿ ಎಂದು ಪ್ರಾಥನೆ ಮಾಡಿಕೊಂಡು ನೀವು ಪೂಜೆಮಾಡಿತಂದ ನಾಲ್ಕು ಬಾವಿಯ ನೀರನ್ನು ಉಪಯೋಗಿಸಿ ಸ್ನಾನ ಮಾಡುವುದು. ಆನಂತರ ನಿಮ್ಮ ಕುಲದೇವತಾರಾಧನೆ ಮಾಡಿ ಬೇಳೆಯಿಂದ ಮಾಡಿದ ಊಟವನ್ನು ಸೇವಿಸಬೇಕು.ಅನಾಥರಿಗೆ,ಬಡವರಿಗೆ ಯತಾ ಶಕ್ತಿದಾನ ಮಾಡುವುದು. ಓಂ ನಮೋ ಭಗವತೇ ಕಾಮರೂಪಿಣೇ ಮಹಾಬಲಾಯ ನಾಗಾಧಿಪತಯೇ ಸ್ವಾಹಾಃ ಅಶ್ವತ್ಥ ಮರವನ್ನು ಪೂಜಿಸಿದರೆ ಕಾಲಸರ್ಪ ದೋಷ ನಿವಾರಣೆಯಾಗುವುದು. ಹಿಂದೂ ಧರ್ಮಿಯರಿಗೆ ಅಶ್ವತ್ಥ ಮರವೆಂದರೆ ತುಂಬಾ ಪೂಜ್ಯನೀಯವಾಗಿದೆ. ಅಶ್ವತ್ಥ ಮರದ ಎಲೆ ಹಾಗೂ ಕಡ್ಡಿಗಳನ್ನು ವಿವಿಧ ರೀತಿಯ ಪೂಜೆ ಹಾಗೂ ಹವನಗಳಿಗೂ ಬಳಸಲಾಗುತ್ತದೆ. ಶನಿವಾರದಂದು ಅಶ್ವತ್ಥ ಮರಕ್ಕೆ ಸುತ್ತು ಬಂದರೆ ಅದರಿಂದ ತುಂಬಾ ಒಳ್ಳೆಯದಾಗುತ್ತದೆ ಎನ್ನಲಾಗುತ್ತದೆ. ಅಶ್ವತ್ಥ ಮರದಲ್ಲಿ ಶನಿವಾರದಂದು ವಿಷ್ಣುವಿನ ಜತೆಗೆ ಲಕ್ಷ್ಮೀಯು ನೆಲೆಸಿರುತ್ತಾಳೆ ಎಂದು ಪುರಾಣಗಳು ಹೇಳುತ್ತವೆ. -Sangraha mahiti(krupe F B)

Wednesday 3 July 2019

ಕನ್ನಡ ಜ್ಯೋತಿಷ್ಯ ಲೇಖನಗಳು ಡಾ : ಶೈಲಜಾ ರಮೇಶ್ Off pH no 7337786451

ಮನುಜನ ವಿವಿಧ ಮಾನಸಿಕ ವರ್ತನೆಗಳು *********************************** ಗ್ರಹಗಳ ಚಲನವಲನದಿಂದ ಮನುಜನ ಮೇಲೆ ಉಂಟಾಗುವ ವಿವಿಧ ಮಾನಸಿಕ ವರ್ತನೆಗಳು, ದೈಹಿಕವಾಗಿ ಯಾವ ರೀತಿಯ ಪರಿಣಾಮವನ್ನು ಬೀರುವುದು ಎಂಬ ಸೂಕ್ಷ್ಮ ವಿಚಾರವನ್ನು ಅವಲೋಕಿಸಿದಾಗ, ಮೊದಲು ಈ ಮಾನಸಿಕ ವರ್ತನೆಗೆ ಪ್ರಮುಖ ಕಾರಣ ಚಂದ್ರಗ್ರಹ ಎಂಬ ಅರಿವು ಮೂಡುತ್ತದೆ, ಚಂದ್ರ ಶೀಘ್ರ ಸಂಚಾರಿ, ಹಾಗೂ ಮನಸ್ಸಿನ ಕಾರಕನೂ ಆಗಿರುವುದರಿಂದ ಈ ಚಂದ್ರ ಗ್ರಹ ಇತರ ಗ್ರಹಗಳ ಜೊತೆ ಸೇರಿ ಉಂಟು ಮಾಡುವ ಮಾನಸಿಕ ಪರಿವರ್ತನೆ ಗಳನ್ನು ಗಮನಿಸೋಣ.... *ಚಂದ್ರನು ರವಿಯ ಜೊತೆಯಲ್ಲಿದ್ದರೆ* ಆ ವ್ಯಕ್ತಿಗೆ ಸಾಮಾಜಿಕ ಕಾರ್ಯಗಳಲ್ಲಿ ವಿಶೇಷ ಆಸ್ಥೆ, ಕೀರ್ತಿ ಗಳಿಸಬೇಕೆಂಬ ಅಭಿಲಾಷೆ ಇರುತ್ತದೆ. ರಜೋಗುಣ, ಗಂಭೀರವ್ಯಕ್ತಿ, ಠೀವಿ, ಸಮಾಜಕ್ಕೆ ಕೈಲಾದ ಸೇವೆ ಸಲ್ಲಿಸುವ ಮನಸ್ಸು ಇರುತ್ತದೆ. ರವಿ ಚಂದ್ರರ ಯುತಿ, ಸಮಸಪ್ತಕ, ರವಿಯಿಂದ ಚಂದ್ರನು ಕೇಂದ್ರದಲ್ಲಿದ್ದರೆ, ಜಾತಕರು ಹುಟ್ಟಿದಾಗಿನಿಂದ ಮಾತಾಪಿತರು ಕಷ್ಟಜೀವಿಗಳು, ದಂಪತಿಗಳಲ್ಲಿ ಭಿನ್ನಾಭಿಪ್ರಾಯ, ವೈಮನಸ್ಯ, ಅಸಮಾಧಾನ ತಲೆದೋರುವುದು. *ಚಂದ್ರನು ಬುಧನ ಜೊತೆಯಲ್ಲಿದ್ದರೆ,* ಆ ವ್ಯಕ್ತಿ ಬುದ್ಧಿವಂತ, ವಿವೇಚನೆ - ತಿಳುವಳಿಕೆಯಲ್ಲಿ ಬಲವುಳ್ಳವನು, ಪ್ರಕೃತಿ ಪ್ರೇಮಿ, ಸ0ಚಾರಪ್ರಿಯ, ಒಂದು ಕೆಲಸಕ್ಕೆ ಹಲವಾರು ಬಾರಿ ಓಡಾಡುವುದು, ಯಾವುದಾದರೂ ವಸ್ತುವನ್ನು ಕೊಳ್ಳಲು ಇತರರನ್ನು ಪ್ರೇರೇಪಿಸುವುದು, ತನ್ನ ಬುದ್ಧಿಮತ್ತೆಯ ಮೇಲಿಂದ ಇತರರನ್ನು ಆಕರ್ಷಿಸುವುದು, ಹಾಸ್ಯಯುಕ್ತ ಮಾತಿನ ಮೋಡಿಯಿಂದ ಇತರರನ್ನು ತನ್ನೆಡೆಗೆ ಸೆಳೆದು ತನ್ನ ಕಾರ್ಯ ಮಾಡಿಕೊಳ್ಳುವುದು. ತನ್ನ ಬುದ್ಧಿ ಪ್ರದರ್ಶನದಿಂದ ಲಾಭ ಮಾಡಿಕೊಳ್ಳುವುದು, ಆಗಾಗ ಜಿಪುಣರು, ದೊಡ್ಡಸ್ತಿಕೆಗೋಸ್ಕರ ಖರ್ಚು ಮಾಡುವರು. ಆದರೂ ಇವರು ಕೃಪಣರು, ಒಂದ್ತರಹ ವೈಶ್ಯ ಬುದ್ಧಿ, ಕಾಸಿಗೆ ಕಾಸು ಕೂಡಿಡುವುದು, ಕೂಡಿಟ್ಟ ಹಣವನ್ನು ಆಗಾಗ ನೋಡುತ್ತಿರುವುದು, ಇವರು ಸಾಧಾರಣವಾಗಿ ಯಾರನ್ನೂ ನಂಬುವುದಿಲ್ಲ. ಚಂದ್ರ, ಬುಧ ಎರಡೂ ವೈಶ್ಯಗ್ರಹ,ಹಾಗಾಗಿ ಜಾತಕರು ಜಿಪುಣರು, ಇವರಿಗೆ ಜಾನಪದ ಸಾಹಿತ್ಯ ಇಷ್ಟ ಆಗುತ್ತೆ. ಚಂದ್ರ ಬುಧರ ಯುತಿ, ಸಮಸಪ್ತಕವಿದ್ದರೆ ಈ ಯೋಗವಿರುತ್ತದೆ. ಬುದ ಅಸ್ತನಾಗಿರಬಾರದು, ಪೂರ್ಣ ಚಂದ್ರನಾದರೆ 100 ರಷ್ಟು ಫಲ, ಕ್ಷೀಣ ಚಂದ್ರನಾದರೆ 50 ರಷ್ಟು ಫಲ. ಚಂದ್ರ - ಬುಧನಿಂದ ಕೇಂದ್ರದಲ್ಲಿದ್ದರೆ ಅಲ್ಪ ಫಲ. ಕ್ಷೇತ್ರ ಪರಿವರ್ತನೆ ಯಾದರೆ 75 ಫಲ. ವಿದ್ಯಾಭ್ಯಾಸ ವಿದ್ಯಾರ್ಜನೆಗೆ ಲಗ್ನದಿಂದ ಚತುರ್ಥ ಸ್ಥಾನವನ್ನೂ, ಜ್ಞಾನಾರ್ಜನೆಗೆ ಪಂಚಮ ಸ್ಥಾನವನ್ನೂ ಪರಿಶೀಲಿಸಬೇಕು. ಆದ್ರೆ ಯಾವುದೇ ವಿದ್ಯೆಗೆ ಪ್ರಾಥಮಿಕ ವಿದ್ಯಾರ್ಜನೆಗೆ 2ನೇ ಮನೆಯನ್ನು ನೋಡಬೇಕು. ಏಕೆಂದರೆ ವಾಕ್ ಸ್ಥಾನವಾದ ಧನಸ್ಥಾನವು ಮಗುವಿನ ತೊದಲ್ನುಡಿಗಳಿಂದಿಡಿದು ಹೇಳಿಕೊಟ್ಟದ್ದನ್ನು ಕಲಿತು ಮತ್ತೆ ನೆನಪಿಸಿಕೊಂಡು ಹೇಳುವುದನ್ನು ಸೂಚಿಸುತ್ತೆ. ಎಲ್ಲಾ ವಿದ್ಯೆಗೂ ಮೂಲ ಸ್ಥಾನ ಧನಭಾವ ( 2ನೇ ಮನೆ ) ವೇ ಆಗಿದೆ. ಅಕ್ಷರದ ಪರಿಚಯವಿಲ್ಲದೆ ವಿದ್ಯಾವಂತನಾಗಲು ಸಾಧ್ಯವಿಲ್ಲ. ಧನಭಾವ ಚನ್ನಾಗಿದ್ದರೆ ಅಕ್ಷರಜ್ಞಾನ ಹೊಂದಿ ಪ್ರಾಥಮಿಕ ಶಿಕ್ಷಣವನ್ನು ಗಳಿಸಿರುತ್ತಾನೆ. ಧನಭಾವ ಬಲವಿಲ್ಲದೆ 5, 9 ನೇ ಸ್ಥಾನಗಳು ಪ್ರಭಲವಾಗಿದ್ದರೂ ವಿದ್ಯಾವಂತರಾಗಲಾರರು, ಧನಭಾವ ಪ್ರಬಲವಾಗಿದ್ದು 5, 9th ಬಲಹೀನವಾಗಿದ್ರೆ ಪೂರ್ಣಪ್ರಮಾಣದಲ್ಲಿ ವಿದ್ಯಾವಂತನಾಗದಿದ್ದರೂ, ಅಕ್ಷರಸ್ಥರಾಗಿ ವ್ಯಾವಹಾರಿಕ ಜ್ಞಾನವನ್ನು ಪಡೆಯಬಹುದು. ಹಾಗಾಗಿ ಜಾತಕದಲ್ಲಿ ವಿದ್ಯಾಭ್ಯಾಸವನ್ನು ಪರಿಶೀಲಿಸಬೇಕಾದರೆ... ಮೊದಲು 2, 5 ನೇ ಭಾವಗಳನ್ನು, ಅದರ ಭಾವಾಧಿಪತಿಗಳನ್ನ, ಮತ್ತವುಗಳ ಬಲಾಬಲಗಳನ್ನು ತಿಳಿಯಬೇಕಾಗುತ್ತದೆ. ■ ಬುಧ, ಗುರು, ಶುಕ್ರರು ವಿದ್ಯಾಕಾರಕರು. ■ ಬುಧ ---- ವಿದ್ಯಾಗ್ರಹಣ ಶಕ್ತಿ ■ ಗುರು ---- ಜ್ಞಾನಾರ್ಜನಾ ಶಕ್ತಿ ■ ಶುಕ್ರ ---- ಮೇಧಾ ಶಕ್ತಿ. ಜಾತಕದಲ್ಲಿ ಈ ವಿದ್ಯಾಸಂಬಂಧ ಗ್ರಹಗಳಾದ ಬುಧ , ಗುರು, ಶುಕ್ರರು ಪೀಡಿತರಾದಾಗ ವಿದ್ಯಾರ್ಜನಗೆ ಅಡಚಣೆ, ತೊಂದರೆಗಳಾಗುತ್ತವೆ. ★ ಧನ,(೨) ಚತುರ್ಥ(೪), ಪಂಚಮಭಾವಗಳು(೫) --- ವಿದ್ಯಾಭಾವಗಳು. ★ ಧನಭಾವ ---- ಗ್ರಹಣಶಕ್ತಿ, ಬರವಣಿಗೆ. ★ ಚತುರ್ಥ ಭಾವ ---- ಮನಸ್ಸಿಟ್ಟು ಕಲಿಕೆ, ಮಧ್ಯಮ ಹಾಗೂ ಉನ್ನತ ಶಿಕ್ಷಣ ★ ಪಂಚಮಭಾವ ---- ಬುದ್ಧಿಶಕ್ತಿ, ಜ್ಞಾನ ಸಂಪಾದನಾ ದಾಹ. ★ ನವಮಭಾವ --- ಉನ್ನತವಿದ್ಯೆ. ★ ದಶಮ ಭಾವ ---- ವಿದ್ಯಾವರ್ಗ ( ಶ್ರೇಣಿ). ***************************** ವಿದ್ಯೆಗೆ ತೊಂದರೆ ಮಾಡುವ ಗ್ರಹಗಳು ★ ಕುಜ, ರವಿ, ಶನಿ, ರಾಹು, ಕೇತು ಮತ್ತು ಬಲಹೀನ ಶುಕ್ರ, ಪೀಡಿತ ಬುಧ. ★ ಕುಜ -- ಮರೆವು ★ ರವಿ -- ವಿದ್ಯಾಕಾಲದಲ್ಲಿ ದೈಹಿಕ ತೊಂದರೆ ★ ಶುಕ್ರ ಹಾಗೂ ಪೀಡಿತ ಬುಧ -- ಬುದ್ಧಿ ಮಾಂದ್ಯತೆ, ಅಲ್ಪಗ್ರಹಣಶಕ್ತಿ. ★ ಶನಿ -- ಸೋಮಾರಿತನ, ನಿಧಾನ, ಗಮನ ನೀಡದೆ ಇರುವುದು. ★ ರಾಹು - ಕೇತುಗಳು -- ವಿಷಯದಲ್ಲಿ ಅಲ್ಪಜ್ಞಾನ ವಿದ್ಯೆ ಪರಿಶೀಲನೆಗೆ ನಿಯಮಗಳು ***************************** ◆ 2, 5 ನೇ ಅಧಿಪತಿಗಳು ವಕ್ರೀ, ಅಸ್ತ, ನೀಚ, ಪಾಪಕರ್ತರಿ, ಪಾಪಗ್ರಹ ಯುತಿ, ದೃಷ್ಟಿ, ಹಾಗೂ ದುಸ್ಥಾನ ಗಳಲ್ಲಿ ಸ್ಥಿತರಾದಲ್ಲಿ ವಿದ್ಯಾದೋಷ. ◆ ವಿದ್ಯಾಕಾರಕ ಬುಧ, ಗುರುಗಳು ದುಸ್ಥಾನ ಸ್ಥಿತ, ಬಲಹೀನ, ಪಾಪಗ್ರಹಗಳಿಂದ ಪೀಡಿತರಾದಾಗ ವಿದ್ಯೆಯಲ್ಲಿ ಕುಂಠಿತ ( ಬುಧ - ಗ್ರಹಣಶಕ್ತಿ, ಗುರು - ಶ್ರದ್ಧೆ ). ,◆ ವಿದ್ಯಾಸ್ಥಾನದಲ್ಲಿ ರಾಹುಕೇತುಗಳು ಸ್ಥಿತರಾಗಿ ಪಾಪಗ್ರಹಗಳ ಸಂಬಂಧ ಬಂದಾಗ ವಿದ್ಯಾಹೀನ. ◆ ಕೇಂದ್ರಾದಿಪತ್ಯ ದೋಷ, ದುಸ್ಥಾನಾಧಿಪತ್ಯ, ವಕ್ರ, ನೀಚ, ಅಸ್ತ, ರಾಶಿ - ಭಾವ ಸಂಧಿಸ್ಥಿತ ನೈಸರ್ಗಿಕ ಶುಭಗ್ರಹಗಳಾದರೂ ವಿದ್ಯೆಗೆ ಅಡಚಣೆ. ◆ ನೈಸರ್ಗಿಕ ಪಾಪಗ್ರಹನಾದರೂ ಯೋಗಕಾರಕನು ವಿದ್ಯಾಸ್ಥಾನದಲ್ಲಿದ್ದಾಗ ವಿದ್ಯಾಭಿವೃದ್ಧಿ. ಪ್ರಸವ ಮತ್ತು ಆರೋಗ್ಯ ******************** ನಭೋಮಂಡಲದಲ್ಲಿ ಸಂಚರಿಸುತ್ತಿರುವ ಗ್ರಹಗಳ ಶಕ್ತಿಯು ಭೂಮಿಯನ್ನು ಸ್ಪರ್ಶಿಸಿ, ಜೀವಿಗಳ ಜೀವನದಲ್ಲಿ ವ್ಯತ್ಯಾಸವನ್ನು ತರುತ್ತದೆ. ಈ ಗ್ರಹಗಳು ಜನ್ಮಸ್ಥಳದ ಅಕ್ಷಾಂಶ ರೇಖಾಂಶ ಗಳಿಗೆ ತಕ್ಕಂತೆ ಉದಯವಾಗುವ ಲಗ್ನ ಬಿಂದುವಿಗೆ ಯಾವ ಭಾವದಲ್ಲಿ ಸ್ಥಿತರಾಗಿರುತ್ತಾರೋ ಅದರಂತೆ ಶುಭಾಶುಭ ಫಲಗಳನ್ನು ಕೊಡುತ್ತಾರೆ. ಈ ಗ್ರಹಗಳು ಭಚಕ್ರದ ಯಾವ ಯಾವ ರಾಶಿಯಲ್ಲಿ, ಯಾವ ನಕ್ಷತ್ರ ದಲ್ಲಿ, ಸ್ಥಿತರಾಗಿರುತ್ತಾರೋ ಅದರಂತೆ ಫಲಗಳಲ್ಲಿ ವ್ಯತ್ಯಾಸವುಂಟಾಗುತ್ತದೆ. ಪ್ರತಿಯೊಬ್ಬ ವ್ಯಕ್ತಿಯೂ ತನ್ನ ಪೂರ್ವಜನ್ಮ ಕೃತ ಫಲದಂತೆ ಈ ಜನ್ಮವನ್ನು ಪಡೆಯುತ್ತಾರೆ, ಪೂರ್ವಜನ್ಮ ದಲ್ಲಿ ಮಾಡಿದ ಕರ್ಮಫಲವನ್ನು ಈ ಜನ್ಮದಲ್ಲಿ ಅನುಭವಿಸುವುದನ್ನು ಪ್ರಸವಕಾಲದ ಕುಂಡಲಿಯಲ್ಲಿ ನವಗ್ರಹರು ಸ್ಥಿತರಾದ ರೀತಿಯಲ್ಲಿ ತಿಳಿಯಬಹುದು. ಪೂರ್ವಜನ್ಮದ ಪಾಪ ಅಥವಾ ಪುಣ್ಯಫಲದಂತೆ ಮನುಷ್ಯಜನ್ಮ ಪಡೆದಮೇಲೆ ಅತ್ಯಂತ ದುಃಖ, ಸುಖ, ಕಷ್ಟಗಳನ್ನು ಅನುಭವಿಸುತ್ತೇವೆ. ಅದರೆ ಕೆಲವುವೇಳೆ ಜನ್ಮ ತಾಳುವುದಕ್ಕೆ ಅನೇಕ ಕಷ್ಟಗಳನ್ನು ಅನುಭವಿಸುವುದು ಮಾತೃ ಗರ್ಭದಿಂದಲೇ ಪ್ರಾರಂಭವಾಗುತ್ತದೆ. ಪ್ರಸವ ಕಾಲದಲ್ಲಿ ಬದುಕುಳಿದರೆ ಅದು ನಮ್ಮ ಜನ್ಮ, ಜನ್ಮಕೊಟ್ಟ ತಾಯಿ ಬದುಕುಳಿದರೆ ಅದು ಅವರ ಪುನರ್ಜನ್ಮ. ಗರ್ಭಧಾರಣೆಯ ನಂತರ ಗರ್ಭಸ್ರಾವ, ಗರ್ಭದಲ್ಲೇ ಮರಣ (ಮೃತ ಶಿಶು ಜನನ) ಅವಧಿಗೆ ಮೊದಲೇ ಜನನ, ಕಷ್ಟಪ್ರಸವ ಇವು ಜನನ ಪೂರ್ವ ಸಂಕಟಗಳು. ಗುರು, ಶುಕ್ರ, ಚಂದ್ರ, ಬುಧರು ಸುಖ (ಶುಭ) ಪ್ರಸವವನ್ನು ಸೂಚಿಸುತ್ತಾರೆ. ರವಿ, ಶನಿ, ಕುಜ, ರಾಹು ಕೇತುಗಳು ಕಷ್ಟ ( ಅಶುಭ ) ಪ್ರಸವವನ್ನು ಸೂಚಿಸುತ್ತಾರೆ. ರಕ್ತ ಅಥವಾ ಜಲಸ್ರಾವ, ಶಸ್ತ್ರ ಚಿಕಿತ್ಸೆಯ ಮೂಲಕ ಪ್ರಸವವನ್ನು ಕುಜನಿಂದಲೂ, ತಡೆಗಳನ್ನು ಶನಿಯಿಂದಲೂ, ರಕ್ತಸ್ರಾವವನ್ನು ರಾಹುವಿನಿಂದಲೂ ತಿಳಿಯಬಹುದು. ಯಾವುದೇ ಜಾತಕದಲ್ಲಿ ಮುಖ್ಯವಾಗಿ ಕುಜ, ಶನಿಯಿಂದ ನಂತರ ರವಿ ಕೇತುಗಳಿಂದ ಕಷ್ಟಪ್ರಸವವನ್ನು ನಿರ್ಣಯಿಸಬಹುದು. ಯಾವುದೇ ಜಾತಕದಲ್ಲಿ ರವಿ ಚಂದ್ರರು, ಲಗ್ನ, ಲಗ್ನಾಧಿಪತಿ, ಷಷ್ಟ, ಷಷ್ಟಾಧಿಪತಿ, ಅಷ್ಟಮ, ಅಷ್ಠಮಾಧಿಪತಿ, ಪೀಡಿತ - ಪಾಪಕರ್ತರಿಯೋಗ - ನೀಚ - ಅಸ್ತ - ಪಾಪಗ್ರಹಗಳ ಯುತಿ - ದೃಷ್ಟಿಯಿದ್ದರೆ ಆರೋಗ್ಯ ಕೆಡುತ್ತದೆ. ಈ ಭಾವ - ಭಾವಾಧಿಪತಿ ಗಳು ಬಲವಾಗಿದ್ದು, ಸುಸ್ಥಿಯಲ್ಲಿದ್ದರೆ ಜಾತಕರು ಆರೋಗ್ಯವಾಗಿರುತ್ತಾರೆ. ಪುರುಷರ ಆರೋಗ್ಯವನ್ನು ರವಿಯಿಂದಲೂ, ಸ್ತ್ರೀಯರ ಆರೋಗ್ಯವನ್ನು ಚಂದ್ರನಿಂದಲೂ ಅವರುಗಳ ಬಲಾಬಲದಿಂದ ತಿಳಿಯಬಹುದು. ಜಾತಕದಲ್ಲಿ ರವಿ ಪೀಡಿತನಾದ್ರೆ ಪ್ರಕೃತಿದತ್ತವಾದ ರೋಗಗಳು, ಚಂದ್ರನು ಪೀಡಿತನಾಗಿದ್ದರೆ, ಬಲಹೀನನಾಗಿದ್ದರೆ ಮಾನಸಿಕ ರೋಗಿಯಾಗುತ್ತಾರೆ. ಲಗ್ನ - ಲಗ್ನಾಧಿಪತಿ ಪೀಡಿತನಾಗಿದ್ದರೆ ಸದಾ ರೋಗಿಯಾಗಿದ್ದು ಸಣ್ಣಪುಟ್ಟ ರೋಗಗಳು ಕಾಡುತ್ತಿರುತ್ತವೆ. ಷಷ್ಟ - ಷಷ್ಟಾಧಿಪತಿ ಗಳು ಪೀಡಿತರಾಗಿದ್ದರೆ, ಅತೀವ ಬಾಧೆಯ ರೋಗಗಳು ಮೇಲಿಂದ ಮೇಲೆ ಬರುತ್ತಿರುತ್ತದೆ. ಅಷ್ಟಮ - ಅಷ್ಟಮಾಧಿಪತಿಗಳು ಪೀಡಿತರಾಗಿದ್ರೆ ತೀವ್ರ ಮರಣ ಸೂಚಕ ರೋಗಗಳು - ಸಾಂಕ್ರಾಮಿಕ ರೋಗಗಳು, ಭಯಂಕರ ವ್ಯಾಧಿಗಳು, ದುರ್ಮರಣಗಳು ಉಂಟಾಗುತ್ತದೆ. ದ್ವಾದಶ - ದ್ವಾದಶಾಧಿಪತಿಗಳು ಪೀಡಿತರಾದ್ರೆ ಸದಾ ಆಸ್ಪತ್ರೆ ವಾಸ, ಹಾಸಿಗೆ ಹಿಡಿಯುವ ವ್ಯಾಧಿಗಳು ಬರುತ್ತವೆ. ಹೋರಾ ಕುಂಡಲಿಯಲ್ಲಿ ಧನಯೋಗ ****************************** 30° ಯ ರಾಶಿಯನ್ನು ಸಮಭಾಗ ಮಾಡಿದಾಗ ಪ್ರತಿ ಭಾಗ ಒಂದೊಂದು ಹೋರೆಯಾಗುತ್ತದೆ. ಅಂದರೆ ಒಂದು ರಾಶಿಯಲ್ಲಿ ಎರಡು ಹೋರೆಗಳು. ಸಮರಾಶಿಯಲ್ಲಿ ಮೊದಲ 15° ಯ ವರೆಗಿನದ್ಧು ಚಂದ್ರಹೋರೆ, ನಂತರದ 15° (15° -30°) ವರೆಗೆ ರವಿಹೋರೆ. ಬೆಸರಾಶಿಗಳಲ್ಲಿ ಮೊದಲ 15° ಯವರೆಗೆ ರವಿ ಹೋರೆ, ನಂತರದ 15° (15° -30°) ವರೆಗೆ ಚಂದ್ರ ಹೋರೆ. ಚಂದ್ರ ಹೋರೆಯಲ್ಲಿ ಜಾಸ್ತಿ ಗ್ರಹಗಳಿದ್ದರೆ, ಕಡಿಮೆ ಪ್ರಯತ್ನ ಕ್ಕೇ ಹೆಚ್ಚು ಸಂಪಾದನೆ. ರವಿ ಹೋರೆಯಲ್ಲಿ ಜಾಸ್ತಿ ಗ್ರಹಗಳಿದ್ದರೆ ಪ್ರಯತ್ನಕ್ಕೆ ತಕ್ಕಂತೆ ಫಲ. ಒಳ್ಳೇ ಗ್ರಹಗಳಿದ್ದರೆ ಒಳ್ಳೇ ದಾರಿಯಲ್ಲಿ ಸಂಪಾದನೆ. ಇದು ಮೇಲ್ನೋಟಕ್ಕೆ ಕಾಣುವ ವಿಚಾರ, ಆಳ ಅಧ್ಯಯನದ ಮೂಲಕ ಯಾವ ಪ್ರಮಾಣದಲ್ಲಿ ಧನ ಸಂಪಾದನೆ ಅಥವಾ ಧನಲಾಭ ಅನ್ನುವ ವಿಚಾರವನ್ಮು ತಿಳಿಯಬಹುದು.. ಅವುಗಳೆಂದರೆ.... ★ ಪುರುಷ ರಾಶಿಯಲ್ಲಿನ ಪುರುಷ ಗ್ರಹಗಳು ರವಿ ಹೋರೆಯಲ್ಲಿದ್ದರೆ.... ★ ಸ್ತ್ರೀ ರಾಶಿಯಲ್ಲಿನ ಸ್ರೀಗ್ರಹಗಳು ಚಂದ್ರಹೋರೆಯಲ್ಲಿದ್ದರೆ 100% ಶುಭಫಲ ( ಅನಾಯಾಸ ಧನಲಾಭ ). ★ ಸ್ತ್ರೀ ರಾಶಿಯಲ್ಲಿನ ಪುರುಷ ಗ್ರಹಗಳು ರವಿ ಹೋರೆಯಲ್ಲಿದ್ದರೆ... ★ ಪುರುಷ ರಾಶಿಯಲ್ಲಿನ ಸ್ತ್ರೀ ಗ್ರಹಗಳು ಚಂದ್ರ ಹೋರೆ ಯಲ್ಲಿದ್ದರೆ..75% ಫಲ ( ಕಡಿಮೆ ಪರಿಶ್ರಮದಿಂದ ಅಧಿಕ ಧನಲಾಭ ). ★ ಪುರುಷ ರಾಶಿಯಲ್ಲಿನ ಪುರುಷ ಗ್ರಹ ಚಂದ್ರ ಹೋರೆ ಯಲ್ಲಿದ್ದರೆ... ★ ಸ್ತ್ರೀ ರಾಶಿಯಲ್ಲಿನ ಸ್ತ್ರೀ ಗ್ರಹ ರವಿ ಹೋರೆ ಯಲ್ಲಿದ್ದರೆ.. 50% ಫಲ ( ಶ್ರಮಕ್ಕೆ ತಕ್ಕಂತೆ ಧನಲಾಭ ). ★ ಸ್ತ್ರೀ ರಾಶಿಯಲ್ಲಿನ ಪುರುಷ ಗ್ರಹಗಳು ರವಿ ಹೋರೆಯಲ್ಲಿದ್ದರೆ ... ★ ಪುರುಶ ರಾಶಿಯಲ್ಲಿನ ಸ್ತ್ರೀ ಗ್ರಹಗಳು ಚಂದ್ರ ಹೋರೆ ಯಲ್ಲಿದ್ದರೆ..25% ಫಲ ( ಅಧಿಕ ಶ್ರಮ ಅಲ್ಪಲಾಭ ). ಜಾತಕದಲ್ಲಿ ಈ ರೀತಿಯ ಗ್ರಹ ಸಂಯೋಜನೆ ಯಿಂದ ನಮ್ಮ ಧನ ಸಂಪಾದನೆಯನ್ನು ನಿರ್ಧರಿಸಬಹುದು. ಧನಯೋಗ *********** ಮೊದಲನೆಯದಾಗಿ... 1) ಭಾವ 2) ಭಾವಾಧಿಪತಿ 3) ಭಾವಾಧಿಪತಿ ಸ್ಥಿತ ಸ್ಥಾನ 4) ಭಾವಾಧಿಪತಿಯನ್ನು ದೃಷ್ಟಿಸುವ ಗ್ರಹ 5) ಯುತಿ 6) ಧನಕಾರಕ 7) ಧನಯೋಗ... ಇವಿಷ್ಟನ್ನೂ ಪರಿಶೀಲಿಸಬೇಕಾಗುತ್ತದೆ. 2ನೇ ಭಾವಕ್ಕೆ ಅತೀ ಹೆಚ್ಚಿನ ಪ್ರಾಮುಖ್ಯತೆ .. ಏಕೆಂದರೆ 80% ರಿಸಲ್ಟ್ ಬಾವದಿಂದ ಸಿಗುತ್ತೆ. ನಂತರ ಧನಕಾರಕ(ಗುರು) ವನ್ನು ನೋಡಬೇಕು, ಗುರು ಉತ್ತಮ ಸ್ಥಾನದಲ್ಲಿ ಸ್ಥಿತನಾಗಿದ್ರೆ ಒಳ್ಳೆಯ ಫಲ... ಇಲ್ಲದಿದ್ದರೆ ಫಲದಲ್ಲಿ ವ್ಯತ್ಯಾಸ. ನಂತರ ಧನಭಾವ ಯಾವ ಸ್ವಭಾವ ಅನ್ನೋದನ್ನ ತಿಳಿಬೇಕು. ಧನಭಾವ ಚರರಾಶಿಯಾದರೆ.. ಒಮ್ಮೆಗೇ ಧಿಡೀರ್ ಹಣದ ಹರಿವು, ಉತ್ತಮ ಸಂಪಾದನೆ. ಧನಭಾವ ಸ್ಥಿರರಾಶಿಯದರೆ..ಜೀವನ ಪೂರ್ತಿ ನಿಶ್ಚಿತ ಹಣದ ಹರಿವು . ದ್ವಿಸ್ವಭಾವ ರಾಶಿಯಾದರೆ.. ಧನದ ಹರಿವಿನಲ್ಲಿ ಏರಿಳಿತವಿರುತ್ತದೆ. ನಂತರ ಧನಸ್ಥಾನ ಅಥವಾ ಧನಾಧಿಪತಿ ಇರುವ ದಿಕ್ಕು.. ತತ್ವ.. ಇವುಗಳ ಆಧಾರದ ಮೇಲೆ ಧನದ ಮೂಲ ಯಾವುದರಿಂದ ಅನ್ನುವುದನ್ನು ತಿಳಿಯಬಹುದು. 12 ಭಾವಗಳಿಂದಲೂ ಹಣದ ಹರಿವನ್ನು ತಿಳಿಯಬಹುದು. ಆದ್ರೆ 1, 2, 9, 10, 11 , 12 ನೇ ಭಾವಗಳು ಮುಖ್ಯ. ದಾರಿದ್ರ್ಯಭಾವ.. 3, 6, 8, 12. ಇಲ್ಲಿ ..ಧನ - ಹಾಗೂ ದಾರಿದ್ರ್ಯಭಾವಗಳೆರದರಲ್ಲೂ 12 ಮನೆಯನ್ನು ಪರಿಗಣಿಸಬೇಕು. 12ನೇ ಮನೆ ಧನಭಾವಗಳ ಜೊತೆ ಸಂಬಂಧ ಬಂದರೆ ಧನಭಾವ... 12ನೇ ಮನೆ ದರಿದ್ರಭಾವಗಳ ಜೊತೆ ಸಂಬಂಧ ಬಂದರೆ ದರಿದ್ರಭಾವ. ( 12 ನೇ ಭಾವ ದೂರಪ್ರಯಾಣ - ವಿದೇಶಿಪ್ರಯಾಣವನ್ನು ಸೂಚಿಸುತ್ತೇ) ನಕ್ಷತ್ರ ಗಳೂ... ಎಷ್ಟು ಪ್ರಮಾಣದಲ್ಲಿ ಧನಲಾಭವಾಗುತ್ತೆ ಅನ್ನುವುದನ್ನು ತಿಳಿಸುತ್ತೆ, ಯಾವರೀತಿಯ ಧನಾಗಮ... ಶೀಘ್ರ, ಲಘು, ಚರ, ಸ್ಥಿರ ಫಲಗಳು ..ಯಾವ ಸಮಯದಲ್ಲಿ ಅನ್ನುವುದನ್ನು ನಕ್ಷತ್ರ ಗಳಿಂದಲೂ ತಿಯಬಹುದು. ಧನಭಾವಾಧಿಪತಿಗಳು ಕೆಲವೊಮ್ಮೆ ಎರಡು ರೀತಿಯಲ್ಲಿ ವರ್ತಿಸುತ್ತೆ ಉತ್ಪತ್ತಿ ಇಲ್ಲ ಉತ್ಪತ್ತಿ ನಿಲ್ಲುತ್ತಿಲ್ಲ.. ಧನಭಾವಾಧಿಪತಿಗಳು ದಾರಿದ್ರ್ಯ ಭಾವದಲ್ಲಿದ್ದರೆ. ಅಥವಾ ದಾರಿದ್ರ್ಯಭಾವಾಧಿಪತಿಗಳು ಧನಭಾವದಲ್ಲಿದ್ದರೆ, ಹಣದ ಹರಿವು ಇರೋಲ್ಲ. ಧನಭಾವಾಧಿಪತಿಗಳ ಸಂಬಂಧ ಧನಭಾವದಲ್ಲೇ ಇದ್ದರೆ ಹಣದ ಉತ್ಪತ್ತಿ ಚೆನ್ನಾಗಿರುತ್ತೆ ಭಾಗ್ಯಾಧಿಪತಿ 12ನೇ ಭಾವಕ್ಕೆ ಹೋಗಬಹುದು. ಆದರೆ 3, 6, 8 ಕ್ಕೆ ಹೋಗಬಾರದು. ದುಸ್ಥಾನಾಧಿಪತಿಗಳು ದುಸ್ಥಾನದಲ್ಲೇ ಇದ್ದರೂ ಸಹ ಧನಲಾಭವಿರುತ್ತೆ( ವಿಪರೀತ ರಾಜಯೋಗ). ಧನದ ಅಭಾವ :-- ೧). ಜಾತಕದಲ್ಲಿ ಲಗ್ನಾಧಿಪತಿ ದ್ವಾದಶದಲ್ಲಿದ್ದು, ದ್ವಾದಶಾಧಿಪತಿ ಲಗ್ನದಲ್ಲಿದ್ದರೆ... 2). ಧನಾಧಿಪತಿ ವ್ಯಯದಲ್ಲಿದ್ದು, ದ್ವಾದಶಾಧಿಪತಿ ಧನಭಾವದಲ್ಲಿದ್ದರೆ... 3). ದುರ್ಬಲ ನಾದ ದ್ವಿತೀಯಾಧಿಪತಿ ಪಾಪಮಧ್ಯದಲ್ಲಿದ್ದರೆ... 3). ದ್ವಿತೀಯ ಹಾಗೂ ಲಾಭಾಧಿಪತಿಗಳು, ಷಷ್ಟ , ಅಷ್ಟಮದಲ್ಲಿದ್ದರೆ... 4). ಲಗ್ನಾಧಿಪತಿ ವ್ಯಯಭಾವದಲ್ಲಿದ್ದು ಮಾರಕಾಧಿಪತಿಯ ದೃಷ್ಟಿ ಯಲ್ಲಿದ್ದರೆ... 5). 6, 8, 12 ನೇ ಭಾವಾಧಿಪತಿಗಳು ಧನಸ್ಥಾನದಲ್ಲಿದ್ದರೆ... 6). ಧನ, ಸುಖ, ಪೂರ್ವಪುಣ್ಯಾಧಿಪತಿ, ಭಾಗ್ಯಾಧಿಪತಿ, ದಶಮಾಧಿಪಗಳು 6 ಅಥವಾ 12 ನೇ ಭಾವದಲ್ಲಿದ್ದರೆ... 7). ಜಾತಕರು ಕೆಮದೃಮ ಹಾಗೂ ಶಟಕ ಯೋಗಗಳಲ್ಲಿ ಜನಿಸಿದ್ದರೆ... 8). ಲಗ್ನಾಧಿಪತಿ 6.8.12 ರಲ್ಲಿ ಪಾಪಗ್ರಹಗಳ ಯುತಿಯಲ್ಲಿದ್ದು, ಅಷ್ಟಮಾಧಿಪತಿಯಿಂದ ವೀಕ್ಷಿಸಲ್ಪಟ್ಟರೆ.. ಜಾತಕರು ಶ್ರೀಮಂತ ಕುಟುಂಬದಲ್ಲಿ ಜನಿಸಿದ್ದರೂ ಬಡತನದಲ್ಲಿ ನರಳುತ್ತಾರೆ. ಜನ್ಮ ಜಾತಕದ ಶುಕ್ರನಿದ್ದ ರಾಶಿಗೆ ಗೋಚರದ ಕೇತು ಸಂಚಾರಕಾಲದಲ್ಲಿ, ಜಾತಕನ ಹೆಂಡತಿ/ ಸಹೋದರಿ ಇವರಿಗೆಲ್ಲಾ ದುಃಖ, ಹಣಕಾಸಿನ ತೊಂದರೆ, ಬರಬೇಕಾಗಿರುವ ಹಣದ ಹರಿವೂ ನಿಂತುಹೋಗುತ್ತೆ, ಹೊಂಗಸರಿಂದ ತೊಂದರೆ, ದಾಂಪತ್ಯದಲ್ಲಿ ಬಿರುಕು, separation / divorce ಆಗಬಹುದು, ಕೋರ್ಟ್ ಕಚೇರಿ ವಿವಾದ, ಕುಟುಂಬದಲ್ಲಿ ವಿವಾದ, ಪತ್ನಿಗೆ ಆರೋಗ್ಯದಲ್ಲಿ ಏರುಪೇರು, restless ಜೀವನ. ಮನುಜನ ವಿವಿಧ ಮಾನಸಿಕ ಅವಸ್ಥೆಗಳು ******************************** *ಚಂದ್ರ - ರಾಹು ಸಂಯೋಗ : --* ಈ ಸಂಯೋಗ ಇರುವ ಜಾತಕರದು ಸ್ವಾರ್ಥ ಪರತೆ, ಹಠ, ಛಲ, ಯಾವುದೇ ವ್ಯವಹಾರವಾಗಲಿ ತಮಗೇ ಮೊದಲು ಸಿಗಬೇಕು, ಅಗಣಿತ ಲಾಭವಾಗಬೇಕು ಎಂಬಾಸೆಯುಳ್ಳವರು. ರಾಹುವಿನಿಂದ ಪೈಶಾಚಿಕ ಮನಸ್ಸು, ಇವರನ್ನು ಸುಮ್ಮನಿರಲೂ ಬಿಡುವುದಿಲ್ಲ. ಸದಾ ಗ್ರಹಬಡಿದವರಂತೆ ಕಾಣುತ್ತಾರೆ. ಶಕ್ತಿ ದೇವಸ್ಥಾನಗಳಿಗೆ ಹೋಗುತ್ತಾರೆ, ನಿಂಬೆ ಹಣ್ಣಿನ ದೀಪ ಹಚ್ಚುವುದು, ದೇವಿಯ ಅಖಂಡ ಪೂಜೆ, ಮೈಮೇಲೆ.ದೇವರು ಬಂದಂತೆ ಕುಣಿಯುವುದು, ಹರಿಸಿನ - ಕುಂಕುಮ - ವಿಧವಿಧವಾದ ಎಲೆ, ಕಾಯಿಗಳನ್ನು ಅಗಿದು ತಿನ್ನುವುದು, ಮೈಕೈಗೆಲ್ಲಾ ಶಸ್ತ್ರಗಳಿಂದ ಚುಚ್ಚಿಕೊಂಡು, ಕುಣಿದು ಭಕ್ತಿ ಪ್ರದರ್ಶನ ಮಾಡುವುದು, ಕೆಲವೊಮ್ಮೆ ಮೈಮೇಲಿನ ಬಟ್ಟೆಯ ಪರಿವೆಯೂ ಇರುವುದಿಲ್ಲ. ಇವರುಗಳು ಪ್ರೇತ, ಭೂತ, ಭಾನಾಮತಿ ಮುಂತಾದುವುಗಳ ವಶಕ್ಕೆ ಬೇಗ ಒಳಗಾಗುತ್ತಾರೆ, ಗಾಳಿ ಸಂಬಂಧ, ಪ್ರೇತ ಸಂಭಂದ ಗ್ರಹಗಳು ಇವರ ಶರೀರದಲ್ಲಿ ಸೇರಿ ಇವರ ಬುದ್ಧಿ, ಮನಸ್ಸು, ಶರೀರ, ನರಗಳನ್ನು ದೌರ್ಬಲ್ಯ ಮಾಡಿ ಯಾವ ಕೆಲಸಕ್ಕೂ ಬರದವರಂತೆ ಮಾಡುತ್ತವೆ. ಇದರಿಂದಲೇ ದೇವರು ಮೈಮೇಲೆ ಬಂದವರಂತೆ ಕುಣಿದು, ದಣಿದು ನೆಲಕ್ಕೆ ಬೀಳುತ್ತಾರೆ. ಈ ಸಂಯೋಗಕ್ಕೆ ಕುಜನ ಸಂಬಂದ ಬಂದರೆ ಪರಿಸ್ಥಿತಿ ಕ್ರೂರವಾಗಿ ಶರೀರಕ್ಕೆ ಹಾನಿ ಮಾಡಿಕೊಳ್ಳುತ್ತಾರೆ. ಶನಿ ಸಂಬಂದ ಬಂದ್ರೆ ಮಂಕಾಗಿ, ಮನೋರೋಗದವರ ಹಾಗೆ ಮೂಲೆಯಲ್ಲಿ ಕುಳಿತುಬಿಡುತ್ತಾರೆ, ಇಲ್ಲವೇ ಮನೆ ಬಿಟ್ಟು ಹೋಗುತ್ತಾರೆ. ಚಂದ್ರನು ಬಲಿಷ್ಠ ನಾಗಿದ್ದರೆ ಇಂತಹ ಪರಿಸ್ಥಿತಿ ಬರುವುದಿಲ್ಲ, ಬಂದರೂ ಶಾಂತರಾಗಿರುತ್ತಾರೆ, ಪರಿಸ್ಥಿತಿ ವಿಕೋಪಕ್ಕೆ ಹೋಗದಿದ್ದರೂ, ಆ ಛಾಯೆ ಹೋಗುವುದಿಲ್ಲ, ಒಂದಲ್ಲ ಒಂದು ದಿನ ಮನೋರೋಗಕ್ಕೆ ತುತ್ತಾಗುತ್ತಾರೆ. ರಾಹು ಬಲಿಷ್ಟ ನಾದರೆ ಒಂದು ರೀತಿಯ ಗ್ರಹಣಯೋಗವುಂಟಾಗಿ ಬಳಲುವರು. ರಾಹು - ಸರ್ಪ, ಬಾಯಿ. ಚಂದ್ರನನ್ನು ನುಂಗಿ ತನ್ನ ಹೊಟ್ಟೆಯಲ್ಲಿ ಸೇರಿಸಿಕೊಳ್ಳುವನು, ಹಾಗಾಗಿ ಮನಸ್ಸೂ, ಜೀವನ ಎರಡೂ ಕಾಣದೆ, ಸಂಘರ್ಷದ ಜೀವನದಿಂದ ತೊಳಲಾಡುವರು. ಕಷ್ಟಗಳಿಗೆ ಹೆದರಿ , ಜೀವನವೇ ಬೇಡ ಎನ್ನುವ ನಿರ್ಧಾರಕ್ಕೆ ಬಂದು ವಿಷಪ್ರಾಶನದಿಂದ ಆತ್ಮಹತ್ಯೆ ಮಾಡಿಕೊಳ್ಳುವರು. ರಾಹು - ಚಂದ್ರನ ಸಂಯೋಗ, ನೀಚ ರಾಶಿ - ನವಾಂಶ, ಪಾಪ ರಾಶಿ -ನವಾಂಶ, ಕ್ರೂರ ರಾಶಿ - ನಮಾಂಶ ದಲ್ಲಿದ್ದು ಕುಜನ ಸಂಪರ್ಕ ದಲ್ಲಿದ್ದರೆ, ನೀಚರ ಸಹವಾಸದಿಂದ ಜೀವನ ಹಾಳು ಮಾಡಿಕೊಳ್ಳುವರು. ಈ ಮೂರರ ಸಂಯೋಗದ ಜೊತೆ ಶುಕ್ರನೇನಾದರೂ ಸೇರಿದರೆ, ಅತ್ಯಾಚಾರ - ಕೊಲೆಗೀಡಾಗುವರು. ದೇಹದ ಅಂಗಗಳನ್ನು ಕತ್ತರಿಸಿಕೊಳ್ಳೋದು, ವಾಹಣಗಳಡಿಗೆ ತಲೆ ಕೊಟ್ಟು ಸಾಯೋದು, ಉದ್ದೇಶಪೂರ್ವಕವಾಗೇ ಅಪಘಾತ ಮಾಡುವುದು. ಜೈಲುವಾಸ, ಅಲೆಮಾರಿ ಜೀವನ, ಎಲ್ಲವನ್ನೂ ಕಳೆದುಕೊಂಡು ಆತ್ಮಹತ್ಯಾ ನಿರ್ಧಾರ ಮಾಡುವುದು. ದುಶ್ಚಟಗಳಿಗೆ ಬಲಿಯಾಗುವುದು. ಅಫೀಮು, ಗಾಂಜಾ, ಡ್ರಗ್ಸ್ ತೆಗೆದುಕೊಳ್ಳುವುದು ಮಾಡುತ್ತಾರೆ. ಇಂತಹವರಿಗೆ ಶನಿ ಸಂಪರ್ಕ ಬಂದರೆ ಎತ್ತರದಿಂದ ಬಿದ್ದು ಆತ್ಮಹತ್ಯೆ ಮಾಡಿಕೊಳ್ಳುವುದು, ಅಂಗಾ0ಗಗಳಿಗೆ ಊನ ಮಾಡಿಕೊಳ್ಳುವುದು, ಹಿರಿಯರು - ಕಿರಿಯರು, ಬಂಧುಗಳು ಎಂಬ ತಾರತಮ್ಯವೂ ಇಲ್ಲದೆ ಎಲ್ಲರನ್ನೂ ಹೆದ್ರಿಸಿ, ಬೆದರಿಸಿ ಕೊಲೆ ಮಾಡಲು ಸಜ್ಜಾಗುವುದು. ಒಟ್ಟಿನಲ್ಲಿ... ಭಯಂಕರ, ವಿಕೃತ ಮನಸ್ಸಿನವರಾಗಿರುತ್ತಾರೆ. ಚಂದ್ರ ಬಲವಾಗಿ ಶುಭದೃಷ್ಟಿಇದ್ದರೆ ಫಲಗಳಲ್ಲಿ ವ್ಯತ್ಯಾಸವಿರುತ್ತೆ... ಇದು, ಸುಮಾರು ಜಾತಕಗಳಲ್ಲಿ ಈ ಮೇಲಿನ ಗ್ರಹ ಸಂಯೋಗವಿದ್ದಾಗ ನಾನು ಮನಗಂಡ ವಿಶಯ. 💥 *ಹರಿಃ ಓಂ* 💥 *ಶ್ರೀ ಗಣೇಶಾಯ ನಮಃ* *ಶ್ರೀ ಗುರುಭ್ಯೋನಮಃ* *ಜಾತಕನ ಕುಂಡಲಿಯಲ್ಲಿ ಗ್ರಹಗಳು ಬಲಹೀನರಾಗಿದ್ದರೆ ಉಂಟಾಗುವ ತೊಂದರೆಗಳು* *ಮತ್ತು ಇವುಗಳ ಪರಿಹಾರಗಳು* ( ಲಾಲ್ ಕಿತಾಬ್ ಪರಿಹಾರಗಳು) *ಗ್ರಹಗಳು* ೧)ನೀಚತ್ವದಲ್ಲಿ ೨)ಶತೃಕ್ಷೇತ್ರಗಳಲ್ಲಿ ೩)ದುಸ್ಥಾನಗಳಲ್ಲಿ ಅಶುಭರ ಸಂಪರ್ಕದಲ್ಲಿದ್ದರೆ ೪)ಅಸ್ತಂಗತ 5) ೬, ೮೧೨ನೇ ಸ್ಥಾನಗಳಲ್ಲಿದ್ದರೆ. ೬)ಕೇಂದ್ರಾದಿಪತಿಯಾಗಿ ತನ್ನದಲ್ಲದ ಮತ್ತೊಂದು ಕೇಂದ್ರದಲ್ಲಿದ್ದರೆ. ೭)ಗ್ರಹ ಯುದ್ದದಲ್ಲಿ ಪರಾಜಿತ ಈ ರೀತಿ ಇದ್ದಾಗ ಗ್ರಹಗಳು ಬಲಹೀನರೆಂದು ಪರಿಗಣಿಸಲಾಗುತ್ತದೆ. *ರವಿಯಿಂದ ಉಂಟಾಗುವ ತೊದರೆಗಳು ಮತ್ತು ಅದಕ್ಕೆ ಪರಿಹಾರಗಳು* *ತೊಂದರೆಗಳು* :- ಆತ್ಮ ವಿಶ್ವಾಸದ ಗೌರವದ ಕೊರತೆ,ದೈರ್ಯ,ಉತ್ಸಾಹಗಳು ಇಲ್ಲದಿರುವಿಕೆ,ಇತರರ ಬಗ್ಗೆ ಹೆದರಿಕೆ. ಮುನ್ನುಗ್ಗುವವರಲ್ಲ. ಎಲ್ಲದಕ್ಕೂ ಇತರರ ಮೇಲೆ ಸದಾ ಅವಲಂಬನೆ ಜೀವನದಲ್ಲಿ ಸೋಲು,ಮೇಲಾಧಿಕಾರಿಗಳಲ್ಲಿ ಸದಾವಿರಸ,ತಂದೆಯ ಅಸಹಕಾರ,ಮಗನಿಂದ ಮಾನಸಿಕ ಹಿಂಸೆ,ಬಲಗಣ್ಣಿನಲ್ಲಿ ತೊಂದರೆ,ಜೀವನದಲ್ಲಿ ಸಮಸ್ಯೆಗಳಿಂದ ನೊಂದು ಸಂಸಾರದಲ್ಲಿ ಯಾರಾದರು ಸನ್ಯಾಸಿಯಾಗುತ್ತಾರೆ,ಕಳ್ಳ ತನ ಅಥವ ಸರ್ಕಾರದಿಂದ ಶಿಕ್ಷೆ, ಪತ್ನಿಯ ಸಮಸ್ಯೆ,ಇದರಿಂದಾಗಿ ಮಾನಸಿಕನೋವು, ಉತ್ಸಾಹಹೀನತೆ,ಅಶಕ್ತತೆ, ಹಸಿವು ಇಲ್ಲದಿರುವಿಕೆ,ಹಾಗು ಅಜೀರ್ಣತೆ ಕ್ಷೀಣನಾಡಿಬಡಿತ,ಹೃದಯದೌರ್ಬಲ್ಯತೆ,ರಕ್ತ ಚಲನೆಯಲ್ಲಿ ಕೊರತೆ,ನರದೌರ್ಬಲ್ಯ,ದೃಷ್ಟಿದೋಷ,ಸಂದಿವಾತ ಮತ್ತು ಮೂಳೆಗಳು ದುರ್ಬಲವಾಗಿರುತ್ತವೆ. *ಪರಿಹಾರಗಳು:-* ಶಿವಮತ್ತು ರವಿಯನ್ನು ಆರಾಧಿಸಿ, ೨೩ರಿಂದ೨೪ನೇ ವಯಸ್ಸಿನೊಳಗೆ ವಿವಾಹವಾಗಿ, ರವಿಗೆ ಸಂಬಂದಿಸಿದ ಇತರರು ನೀಡಿದ ವಸ್ತುಗಳನ್ನು ದೇವಸ್ಥಾನಕ್ಕೆ ದಾನಮಾಡಿ, ಬಿಳಿ ಅಥವ ಗುಲಾಬಿಬಣ್ಣದ ವಸ್ತುಗಳನ್ನು ಉಪಯೋಗಿಸಿ, ಸಕ್ಕರೆನೀರನ್ನು ಗುಲಾಬಿ ಪುಷ್ಪಗಳೊಂದಿಗೆ ಉದಯಿಸುತ್ತಿರುವ ರವಿಗೆ ಅರ್ಪಿಸಿ. ಸರ್ಕಾರದಲ್ಲಿನ ಉದ್ಯೋಗಿಯನ್ನು ಅಥವ ವೈದ್ಯರನ್ನು ಆದರಿಸಿ. ಕುರುಡರಿಗೆ,ಕೋತಿ,ಅಥವ ಹುಂಜಕ್ಕೆ ಆಹಾರವನ್ನು ನೀಡಿ. ಸಂಜೆ ಇರುವೆಗಳಿಗೆ ಅಕ್ಕಿ,ಸಕ್ಕರೆ ಎಳ್ಲನ್ನು ಕೊಡಿ. ಆಹಾರ ತೆಗೆದುಕೊಳ್ಲುವುದಕ್ಕೆ ಮುಂಚೆ ಅಗ್ನಿಗೆ ಸ್ವಲ್ಪ ಅರ್ಪಿಸಿ. ಬೆಲ್ಲ,ತಾಮ್ರ,ಚಿನ್ನವನ್ನು ದಾನಮಾಡಿ. ತಾಮ್ರದ ಅಥವ ಲೋಹದ ನಾಣ್ಯವನ್ನು ಹರಿಯುವ ನೀರಿನಲ್ಲಿ ಹಾಕಿ ಸೂರ್ಯಗ್ರಹಣದ ದಿನ ಹರಿಯುವ ನೀರಲ್ಲಿ ಇದ್ದಿಲು,ಸಾಸಿವೆಕಾಳು ಅಥವ ಬಾರ್ಲಿಯನ್ನು ಹಾಕಿ. ಕೆಲಸವನ್ನು ಆರಂಬಿಸುವ ಮೊದಲು ಸ್ವಲ್ಪ ಸಿಹಿಯನ್ನು ತಿಂದು ನೀರುಕುಡಿಯಿರಿ. ಮನೆಯಲ್ಲಿ ಅಡುಗೆ ಮನೆ ಪೂರ್ವದ ಗೋಡೆಯ ಕಡೆ ಇರಲಿ. ಸುಳ್ಳು ಸಕ್ಷ್ಯ ಹೇಳದಿರಿ,ಮಾಂಸ ಮತ್ತು ಮದ್ಯಗಳನ್ನು ಬಿಡಿ. ಉಪ್ಪನ್ನು ಕಡಿಮೆ ಉಪಯೋಗಿಸಿ ಮತ್ತು ಭಾನುವಾರಗಳಂದು ಉಪವಾಸಮಾಡಿ. ವಿಷ್ಣುವನ್ನು ಆರಾಧಿಸಿ ಮತ್ತು ಹರಿವಂಶವನ್ನು ಓದಿ. ದಗ್ಧ ತಿಥಿ (ಯೋಗ) ***************** ದಗ್ಧ ದಿನ, ದಗ್ಧ ತಿಥಿ, ದಗ್ಧ ಯೋಗ ಈ ಮೂರೂ ಪದಗಳು ಒಂದೇ ಅರ್ಥವನ್ನು ಕೊಡುವುವು. ತಿಥಿ, ವಾರಗಳು ಸೇರುವುದರಿಂದ ಉಂಟಾಗುವ ಒಂದು ಅಶುಭ ಯೋಗವಿದು. ಭಾನುವಾರ. : . ದ್ವಾದಶಿ ತಿಥಿ ಸೋಮವಾರ : ಏಕಾದಶಿ ಮಂಗಳವಾರ : ಪಂಚಮಿ ಬುಧವಾರ : ತೃತೀಯ ಗುರುವಾರ : ಷಷ್ಠಿ ಶುಕ್ರವಾರ : ಅಷ್ಟಮಿ ಶನಿವಾರ : ನವಮಿ ಈ ತಿಥಿ - ವಾರಗಳು ಸೇರಿದಾಗ ದಗ್ಧ ಯೋಗ ಉಂಟಾಗುವುದು. ದಗ್ದ ಎಂದರೆ ದಹಿಸುವುದು - ಸುಡುವುದು ಎಂದರ್ಥ, ಅಂದರೆ ಈ ಯೋಗದಲ್ಲಿ ಮಾಡಿದ ಕಾರ್ಯಗಳು ನಾಶವಾಗುವುವು. ಶುಭ ಕಾರ್ಯಗಳಾದ ಮದುವೆ, ಉಪನಯನ, ಗೃಹಪ್ರವೇಶ ಮುಂತಾದ ಕಾರ್ಯಗಳನ್ನು ಈ ಯೋಗದಲ್ಲಿ ಮಾಡಿದ್ದೇ ಆದರೆ ಉತ್ತಮ ಫಲವಿಲ್ಲದೆ ಕಷ್ಟ - ನೋವು ಅನುಭವಿಸಬೇಕಾಗುತ್ತದೆ. ಅಭಿಜಿನ್ಮಹೂರ್ತ ************** 1, *ನಕ್ಷತ್ರ ದೋಷಮ್ ತಿಥಿವಾರ ದೋಷಮ್ ಗಂಡಾಂತ ದೋಷಮ್ ಕುಮುಹೂರ್ತ ದೋಷಮ್ ಲಗ್ನಾದಿ ಪಂಚಾಂಗ ವಿರುದ್ಧ ದೋಷಮ್ ನಿಹಂತ್ಯ ದೋಷಾಮ್ ಅಭಿಜಿನ್ಮಹೂರ್ತಮ್* 2. ಅವಗಣ ಶತ ದೋಷಮ್ ಲಕ್ಷಕೋಟಿ ಪ್ರದೋಷಮ್ ಆಯುತ ವಿಯುತ ದೋಷಮ್ ಶಂಖಪದ್ಮಾದಿದೋಷಮ್ ರವಿ ಶನಿ ಕುಜ ದೋಷಮ್ ಹರತು ಸಕಲ ದೋಷಮ್ ಅಂತ್ಯ ಮಧ್ಯಾಹ್ನ ಲಗ್ನಮ್ 3. *ವಿಷ ವ್ಯತೀಪಾತ ಕುಜಾರ್ಥ ದೋಷಮ್ ಏಕಾರ್ಗಳಾವೀನ ಭವ ಸಂಭವಾಶ್ಚ ಖಮದ್ಯದೋಷಮ್ ಮಪಿ ಚಂಡರಶ್ಮಿ ನಿಹಂತ್ಯ ದೋಷಾಮ್ ಅಭಿಜಿನ್ಮಹೂರ್ತಮ್* ಇವು ಜ್ಯೋತಿಷ್ಯ ನಿಘಂಟು ವಿನಲ್ಲಿ ಇರುವ ಶ್ಲೋಕಗಳು ಈ ಮೇಲಿನ ಶ್ಲೋಕಗಳೆಲ್ಲಾ ಅಭಿಜಿನ್ಮಹೂರ್ತದ ಮಹತ್ವವನ್ನು ಸಾರುತ್ತಾ ಇವೆ. ಎಷ್ಟೆಲ್ಲಾ ದೋಷಗಳು ಅಭಿಜಿನ್ ಮಹೂರ್ತದಿಂದ ನಾಶವಾಗುತ್ತೆ ಅಂದಾಗ ಈ ಅಭಿಜಿನ್ ಮಹೂರ್ತ ಎಂದರೇನು ಅನ್ನೋ ಪ್ರಶ್ನೆ ಹುಟ್ಟಿಕೊಳ್ಳುತ್ತೆ ಅಲ್ವಾ...? ಈ ಅಭಿಜಿನ್ಮಹೂರ್ತ ಪ್ರತಿದಿನವೂ ಬರುತ್ತೆ. ಪ್ರತಿದಿನ ಮಧ್ಯಾಹ್ನ 12 ರಿಂದ 12 - 30 ರ ಒಳಗಿನ ಈ 20 ರಿಂದ 30 ನಿಮಿಷಗಳ ಕಾಲವನ್ನ ಅಭಿಜಿನ್ಮಹೂರ್ತ ಅನ್ನುತ್ತಾರೆ. ಈ ಮಹೂರ್ತ ಲಗ್ನಕ್ಕೆ ದಶಮದಲ್ಲಿ ಸೂರ್ಯ ಬರುವುದರಿಂದ, ಸೂರ್ಯನು ದಶಮದಲ್ಲಿ ದಿಗ್ಬಲನಾಗಿರುವುದರಿಂದ ಈ ಅಭಿಜಿನ್ಮಹೂರ್ತಕ್ಕೆ ಬಲವಿರುವುದು. ಹಾಗಾಗಿ ಈ ಮಹೂರ್ತ ಶ್ರೇಷ್ಠ ಎನ್ನಲಾಗಿದೆ. ಆದ್ರೆ ಸೂರ್ಯ ನೀಚನಾಗಿರಬಾರದು, ಮತ್ತು ಪಾಪಗ್ರಹಗಳ ಸಂಬಂಧ ಬರಬಾರದು ಹಾಗೂ ಮೂಲ ಜಾತಕದ ಸೂರ್ಯ ನೀಚನಾಗಿರಬಾರದು. *ಕರಣದಿಂದ ಕಾರ್ಯಸಿದ್ಧಿ.* ********************* ನಾವು ಮಾಡುವ ಪ್ರತಿ ಶುಭ ಕಾರ್ಯಕ್ಕೆ ಗುರುಬಲ, ತಾರಾಬಲ, ಚಂದ್ರಬಲ, ಪಂಚಾಂಗ ಶುದ್ಧಿ ನೋಡಿ ಕಾರ್ಯ ಶುರು ಮಾಡುತ್ತೇವೆ. ಹಾಗೆಯೇ ಪ್ರತಿ ಹೊಸ ಕೆಲಸ ಪ್ರಾರಂಭಿಸುವಾಗ ಗುರುಬಲದ ಹೊರತಾಗಿಯೂ ತಾರಾಬಲ ಚಂದ್ರಬಲ ನೋಡಿ ಕಾರ್ಯಾರಂಭ ಮಾಡುತ್ತೇವೆ.. ಆದರೂ ಒಮ್ಮೊಮ್ಮೆ ಕಾರ್ಯವಿಘ್ನವಾಗಿ ಮಾನಸಿಕವಾಗಿ ಬಳಲುತ್ತೇವೆ. ಕೆಲವು ವೇಳೆ ಶತ್ರುಗಳಿಂದ ಮಾಂತ್ರಿಕ ರೀತಿಯಿಂದಲೂ ಅಡ್ಡಿ ಆತಂಕಗಳು ಬರಬಹುದು ನಮ್ಮ ಪ್ರಯತ್ನ ವಿಫಲವಾದಾಗ, ನಮ್ಮ ಏಳಿಗೆಗೆ ಅಡ್ಡಿ ಆತಂಕಗಳು ಬಂದಾಗ ಜ್ಯೋತಿಷ್ಯ ಶಾಸ್ತ್ರದ ಬಗ್ಗೆ ನಂಬಿಕೆ ಕಳೆದುಕೊಳ್ಳುವುದು ಸಹಜ. ಕೇವಲ ತಾರಾಬಲ, ಚಂದ್ರಬಲ, ತಿಥಿವಾರ ನಕ್ಷತ್ರ ಗಳಷ್ಟೇ ಅಲ್ಲ ನಾವು ಕರಣಗಳಿಗೂ ಪ್ರಾಮುಖ್ಯತೆ ಕೊಡಬೇಕಾಗುತ್ತದೆ. ಯಾವ ಯಾವ ಕರಣಗಳಲ್ಲಿ ಯಾವ ಕೆಲಸ ಶುಭವಾಗುವುದೆಂದು ನೋಡೋಣ. ಕರಣಗಳು ಒಟ್ಟು ಹನ್ನೊಂದು ಅವುಗಳೆಂದರೆ 1, ಭವ. 2, ಬಾಲವ. 3, ಕೌಲವ. 4, ತೈತುಲ. 5, ಗರಜ. 6, ವಣಿಜ. 7, ಭದ್ರ. 8, ಶಕುನಿ. 9, ಚತುಶ್ಮಾನ್. 10 ನಾಗವಾನ್. 11, ಕಿಂಸ್ತುಜ್ಞ ಯಾವ ಕರಣಗಳಲ್ಲಿ ಯಾವ ಕಾರ್ಯ ಮಾಡಬಹುದು, ಫಲಗಳೇನೆಂದು ತಿಳಿಯೋಣ. *1. ಭವ* ಈ ಕರಣದಲ್ಲಿ ಯಾವುದೇ ಹೊಸ ಕೆಲಸ ಪ್ರಾರಂಭಿಸಿದರೆ ಶುಭ. ಉತ್ತಮ ಫಲಿತಾಂಶ ವನ್ನು ನಿರೀಕ್ಷಿಸಬಹುದು. *2, ಬಾಲವ : ಈ ಕರಣದಲ್ಲಿ ಬ್ಯಾಂಕು, ವಿದ್ಯಾಸಂಸ್ಥೆ, ಒಪ್ಪಂದ ಮುಂತಾದ ಕೆಲಸಗಳು ಪ್ರಾರಂಭಿಸಬಹುದು. ಶುಭ *3, ಕೌಲವ: ಸರಕಾರದ ಕೆಲಸ, ಪಾರ್ಟ್ನರ್ಶಿಪ್ ವ್ಯಾಪಾರ, ಹೊಸ ವ್ಯವಹಾರಕ್ಕೆ ಮಾತುಕತೆಗೆ ಉತ್ತಮ. *4, ತೈತುಲ : ಶುಭಕಾರ್ಯಕ್ಕೆ ಅಷ್ಟು ಸಮಂಜಸವಲ್ಲ ಯಾವುದೇ ಸಂಸ್ಥೆ ಯಾಗಲೀ, ಮನೆ ಕಟ್ಟಡ ನಿರ್ಮಾಣ, ಭೂಮಿ ಅಗೆಯುವ ಕೆಲಸ ಮಾಡಬಾರದು. ಮಿಶ್ರಫಲ. *5, ಗರಜ:* ಭೂಮಿ ಕ್ರಯ - ವಿಕ್ರಯ, ರಸ್ತೆ ನಿರ್ಮಾಣ, ಮನೆ ಕಟ್ಟಲು ಭೂಮಿ ಅಗೆಯುವುದು, ಕಟ್ಟಡ ನಿರ್ಮಾಣಕ್ಕೆ, ಫ್ಯಾಕ್ಟರಿ ನಿರ್ಮಾಣಕ್ಕೆ ಉತ್ತಮವಾದುದು.. ಶುಭ. *6, ವಣಿಜ : ಹೊಸ ವ್ಯಾಪಾರ - ವ್ಯವಹಾರ ಪ್ರಾರಂಭ, ಅಂಗಡಿ ಪ್ರಾರಂಭ, ಬ್ಯಾಂಕಿನ ವಹಿವಾಟು, ಸಾಲ ಕೊಡುವುದು - ಪಡೆಯುವುದು, ಬಂಡವಾಳ ಹೂಡುವುದು, ಹಣ ಶೇಖರಣೆ ಮುಂತಾಡುವಕ್ಕೆ ಈ ಕರಣವು ಸೂಕ್ತ. ಶುಭ. *7, ಭದ್ರ : ಯಾವುದೇ ಕೆಲಸವಾದರೂ ಪೂರ್ತಿ ಆಗುವುದಿಲ್ಲ, ಅರ್ಧಕ್ಕೇ ನಿಲ್ಲುವುದು, ನ್ಯಾಯಾಲಯದ ಮೆಟ್ಟಲೇರಬೇಕಾಗುವುದು, ನೆರೆಹೊರೆಯರಲ್ಲಿ ಜಗಳ ಆಗುವುದು, ಒಂದುವೇಳೆ ಬಲವಂತವಾಗಿ ಕಾರ್ಯ ಸಾಧಿಸಿದರೆ ಮರಣದಲ್ಲಿ ಪರ್ಯಾವಸಾನವಾಗುವುದು. ವಿವಾಹವಾದರೆ ನೆಮ್ಮದಿ ಜೀವನವಿಲ್ಲ, ಗೃಹಾರಂಭ, ಗೃಹಪ್ರವೇಶ ಮಾಡಿದರೆ ಆ ಮನೆಯು ಅನ್ಯರ ವಶವಾಗುವುದು, ದೇವತಾ ಪ್ರತಿಷ್ಟಾಪನೆ ಮಾಡಿದರೆ ಮಾಡಿದ ವ್ಯಕ್ತಿಗೆ ತೊಂದರೆ. ಅಶುಭ. *8, ಶಕುನಿ : ಈ ಕರಣದಲ್ಲಿ ಪ್ರಾರಂಭಿಸಿದ ಯಾವುದೇ ಕೆಲಸವು ಪುನಃ ಪುನಃ ಪ್ರಾರಂಭಿಸುವ ಹಾಗೆ ಆಗುತ್ತದೆ , ಕೆಲಸ ಪೂರ್ತಿಯಾಗುವುದಿಲ್ಲ, ವಿಪರೀತ ಖರ್ಚು, ಮನಃಶಾಂತಿ ಇರುವುದಿಲ್ಲ. ಅಶುಭ. *9, ಚತುಶ್ಮಾನ್ : ಇದೊಂದು ಕ್ರೂರ ಕರಣ, ಅಶಾಂತಿಯ ವಾತಾವರಣ ನಿರ್ಮಾಣ ವಾಗುತ್ತದೆ, ವಿಪರೀತ ಧನಹಾನಿ, ಕೋರ್ಟು ವ್ಯವಹಾರದಲ್ಲಿ ಅಪಜಯ, ದುಷ್ಟ ಜನರಿಂದ.ಮಾನಸಿಕ ಹಿಂಸೆ, ಚಿಂತೆ. ಅಶುಭ. *10, ನಾಗವಾನ್*: ಈ ಕರಣದಲ್ಲಿ ಯಾವ ಕೆಲಸ ಮಾಡಿದರೂ ಜಗಳ, ಕದನ, ಅಪಘಾತ, ಕಾರ್ಯವಿಘ್ನ, ಶತ್ರುಭಯ, ಅಶಾಂತಿಯ ವಾತಾವರಣ, ಮಾಂತ್ರಿಕ ಭಾಧೆ ಉಂಟಾಗುತ್ತದೆ. *11, ಕಿಂಸ್ತುಜ್ಞ : ಈ ಕರಣದಲ್ಲಿ ಪ್ರಾರಂಭಿಸಿದ ಯಾವುದೇ ಕೆಲಸವು ಪರರ ಪಾಲಾಗುತ್ತದೆ, ಸ್ವಾತಂತ್ರ್ಯ ದಿಂದ ವಂಚಿತರಾಗುತ್ತಾರೆ, ಭ್ರಮಾಜೀವನ. ಅಶುಭ. ಆದಕಾರಣ ಯಾವುದೇ ಕೆಲಸ ಪ್ರಾರಂಭಿಸುವಾಗ ತಾರಾಬಲ, ಚಂದ್ರಬಲ, ದಿನಶುದ್ಧಿಯ ಜೊತೆಗೆ ಕರಣ ಶುದ್ಧಿಯೂ ನೋಡಿ ಮಾಡಿದರೆ ಒಳಿತು. ಕಛೇರಿ ವಾಸ್ತು :-- ನಿಮ್ಮ ಕೆಲಸದ ಟೇಬಲ್ ಮೇಲೆ ದೇವರ ಮೂರ್ತಿ ಯನ್ನಾಗಲೀ , ಫೋಟೋವನ್ನಾಗಲೀ ಇಡಬಾರದು. ನೀವು ಕೆಲಸ ಮಾಡುವ ಟೇಬಲ್ ಮೇಲೆ ಊಟ ಮಾಡುವುದು ಒಳ್ಳೆಯದಲ್ಲ. ಕೆಲಸ ಮಾಡುವ ಟೇಬಲ್ ಮೇಲೆ ಯಾವುದೇ ರೀತಿಯ ಮನರಂಜನಾ ಕೆಲಸಗಳನ್ನು ಮಾಡಬಾರದು. ಕಚೇರಿಯ ಕೆಲಸಕ್ಕಷ್ಟೇ ಟೇಬಲ್ ಮೀಸಲಾಗಿರಬೇಕು. ಜನ್ಮಜಾತಕದ ಶುಕ್ರನಿದ್ದ ರಾಶಿಗೆ ಗೋಚರದ ರಾಹು ಬಂದಾಗ, ಹಣದ ತೊಂದರೆ,ವಾಹನ - ಆಸ್ತಿ ಪ್ರಾಪ್ತಿ, ಆರೋಗ್ಯ ಸಮಸ್ಯೆ, ಹೆಂಡತಿ ಅಥವಾ ಸಹೋದರಿಯ ಜೊತೆ ಮನಸ್ತಾಪ, ತಪ್ಪು ತಿಳುವಳಿಕೆ. ಶುಕ್ರ - ಸ್ತ್ರೀ ರಾಹು - ಸೀಕ್ರೆಟ್ ರಹಸ್ಯವಾಗಿ ಸ್ತ್ರೀಯ ಸಂಗ ಶುಕ್ರ - ಸ್ತ್ರೀ ರಾಹು ಮಾಯಾಜಾಲ ಸ್ತ್ರೀಯ ಮಾಯಾಬಲೆಯಲ್ಲಿ ಸಿಲುಕುವ ಸಂಭವ. ಕಚೇರಿ ವಾಸ್ತು :--- ಕಚೇರಿಯಲ್ಲಿ ಉಪಯೋಗಿಸುವ ಟೇಬಲ್ ಚೌಕಾಕಾರ ಅಥವಾ ಆಯತಾಕಾರ L " ಆಕಾರದ ಟೇಬಲ್ ಸರಿಯಾಗಲಾರದು, ನಾಲ್ಕು ಮೂಲೆಗಳಿರುವ ಟೇಬಲ್ ಉತ್ತಮವೆನಿಸುತ್ತದೆ. ಜನ್ಮ ಜಾತಕದ ಶುಕ್ರನಿದ್ದ ರಾಶಿಗೆ ಗೋಚರದ ಶನಿ ಬಂದಾಗ, ಹೆಂಡತಿಯಿಂದ ಲಾಭ, ಆಕಸ್ಮಿಕ ದ್ರವ್ಯಲಾಭ, ಪತ್ನಿಗೆ ಸೋಮಾರಿತನ, ಮನೆ ಅಥವಾ ಆಸ್ತಿ ಖರೀದಿ ಅಥವಾ ಮಾರಾಟ, ವಾಹನ ಖರೀದಿ( ಹಳೆಯದು) , ಅಭಿವೃದ್ಧಿ. ಹೆಂಡತಿಗೆ ಗ್ಯಾಸ್ಟ್ರಿಕ್ ಆಗುವ ಸಾಧ್ಯತೆ. ಕಛೇರಿ ವಾಸ್ತು:--- ಕಚೇರಿಯಲ್ಲಿ ಕುಳಿತುಕೊಳ್ಳುವ ದಿಕ್ಕು ಪೂರ್ವಮುಖವಾಗಿದ್ದರೆ ... ಬಲಬದಿಗೆ ಭಾರವಾದ ಟೇಬಲ್ ಇರಿಸಿ, ಅದರ ಮೇಲೆ ಫೈಲ್, ಫೋಲ್ಡರ್, ಎಲೆಕ್ಟ್ರಾನಿಕ ಪರಿಕರಗಳಾದ ಕಂಪ್ಯೂಟರ್ ಇತ್ಯಾದಿಗಳನ್ನಿರಿಸಿ. ಒಂದುವೇಳೆ ಮುಖ ಉತ್ತರದ ದಿಕ್ಕಿಗೆ ಬರುವಂತೆ ಕುಳಿತುಕೊಳ್ಳುವಂತಿದ್ದರೆ, ಎಡಬದಿಗೆ ಭಾರವಾದ ಟೇಬಲ್ಲನ್ನು ಇರಿಸಿ. ಜನ್ಮ ಜಾತಕದ ಶುಕ್ರನಿದ್ದ ರಾಶಿಗೆ ಗೋಚರದ ಶುಕ್ರ ಬಂದಾಗ, ಅದೃಷ್ಟ ಒಲಿದು ಬರುತ್ತೆ, ಧನಲಾಭ, ದ್ರವ್ಯಲಾಭ, ಶುಭಯೋಗ, ಕಲೆಗಳಲ್ಲಿ ಆಸಕ್ತಿ, ವೈಭವ ಯುತ ಜೀವನ. ಕಚೇರಿ ವಾಸ್ತು :-- ಕಚೇರಿಯ (office) , ಮೇಜು ಹಾಗೂ ಕುರ್ಜಿಗಳು ಇರುವ ಜಾಗದಲ್ಲಿ ಸರಿಯಾಗಿ ವಾಸ್ತು ಅನುಸರಿಸಲ್ಪಟ್ಟಲ್ಲಿ ಆಗ ಆ ಕಾರ್ಯಕ್ಷೇತ್ರವು ಅಭಿವೃದ್ಧಿ ಹೊಂದುವುದರಲ್ಲಿ ಯಾವ ಸಂಶಯವೂ ಇಲ್ಲ, ಜೊತೆಗೇ ಅಲ್ಲಿ ಕೆಲಸ ಮಾಡುವವರ ಕಾರ್ಯಕ್ಷಮತೆಯಲ್ಲಿಯೂ ಅಪಾರ ಪ್ರಗತಿ ಕಂಡುಬರಬಲ್ಲದು. ಕೆಲಸ ಮಾಡುವಾಗ ಮುಖವು ಪೂರ್ವ ಅಥವಾ ಉತ್ತರ ದಿಕ್ಕಿಗೆ ಬರುವಂತೆ ಕುಳಿತಾಗ ಮನುಷ್ಯನಿಗೆ ಒಂದು ರೀತಿಯ ತಾಜಾತನ ಉಂಟಾಗುತ್ತದೆ, ಹೆಚ್ಚು ಮನಸ್ಸಿಟ್ಟು ಕೆಲಸ ಮಾಡಲು ಸಾಧ್ಯವಾಗುತ್ತದೆ. ಮುಂದುವರೆಯುವುದು... ಜನ್ಮ ಜಾತಕದ ಶುಕ್ರನಿದ್ದ ರಾಶಿಗೆ ಗೋಚರದ ಗುರು ಬಂದಾಗ ಜಾತಕನ ಪತ್ನಿಗೆ ಶುಭಯೋಗ, ಪುತ್ರಿಗೆ ಯೋಗವೃದ್ಧಿ, ಸ್ತ್ರೀ ಸಂಬಂಧದಿಂದ ಗೃಹವೃದ್ಧಿ ಹಾಗೂ ದ್ರವ್ಯಲಾಭ, ಶುಭಕಾರ್ಯಗಳು ಜರುಗುವುದು. ವಿವಾಹವಾಗದವರಿಗೆ ವಿವಾಹಯೋಗ, ಸ್ತ್ರೀ ಸಂತಾನಯೋಗ, ಹಣದ ತೊಂದರೆ ನಿವಾರಣೆ, ಸ್ತ್ರೀಯರಿಂದ ಸಹಾಯ. ವಾಸ್ತು :-- ಮನೆಯ ಆವರಣ ಗೋಡೆಯ(ಕಾಂಪೌಂಡ್) ಮುಖ್ಯದ್ವಾರ (ಗೇಟ್) ಯಾವುದೇ ದಿಕ್ಕಿಗೆ ಇದ್ದರೂ ಕೂಡ, ಆ ದ್ವಾರದ ಎರಡೂ ಕಂಬಗಳ ಮೇಲೆ... ಮೇಲಿನಿಂದ ಆರು ಅಂಗುಲವನ್ನು ಬಿಟ್ಟು ಕೆಳಬಾಗಕ್ಕೆ, ಸ್ವಸ್ತಿಕದ ಚಿಹ್ನೆಗಳನ್ನು ಸ್ಥಾಪಿಸಬೇಕು. ಮನೆಯ ಆವರಣದ ಗೋಡೆಯ ಮುಖ್ಯದ್ವಾರ ದ ಒಳಗೆ ಎರಡೂ ಬದಿಯಲ್ಲಿ ತುಳಸಿಗಿಡಗಳನ್ನು ನೆಡುವುದು ಅಥವಾ ತುಳಸೀ ಗಿಡವಿರುವ ಕುಂಡಗಳನ್ನು ಸ್ಥಾಪಿಸುವುದು ಒಳ್ಳೆಯದು, ಇದರಿಂದ ಪ್ರವೇಶದ್ವಾರ ಯಾವುದೇ ದಿಕ್ಕಿನಲ್ಲಿದ್ದರೂ ಶುಭ ಪರಿಣಾಮ ಬೀರುತ್ತದೆ. ಜನ್ಮ ಜಾತಕದ ಶುಕ್ರನಿದ್ದ ರಾಶಿಗೆ ಗೋಚರದ ಬುಧ ಬಂದಾಗ, ಭೂಲಾಭ, ಗೃಹಲಾಭ, ಭೂಮಿಯಿಂದ ದ್ರವ್ಯಲಾಭ, ಆತ್ಮೀಯರ ಭೇಟಿ, ಸುಖ, ಶುಭ ವಾಸ್ತು :-- ಮನೆಯಲ್ಲಿ ಅಡಿಗೆಮನೆಗೆ ವಿಶೇಷ ಸ್ಥಾನವಿದೆ, ಅಡಿಗೆ ಮನೆಯ ಆಜ್ಞೆಯ ಭಾಗದಲ್ಲಿ, ಸ್ಟೌವ್ ಬರುವಂತೆಯೂ, ಈಶಾನ್ಯದಲ್ಲಿ ಸಿಂಕ್ ಬರುವಂತೆಯೂ, ದಕ್ಷಿಣ ಹಾಗೂ ಪಶ್ಚಿಮದ ದಿಕ್ಕಿನಲ್ಲಿ ಭಾರವಾಗಿರುವಂತೆ ಅಲ್ಮೇರಾವನ್ನು ಇಡಬೇಕು ಅಡುಗೆಮನೆಯ ಬಾಗಿಲು ಉತ್ತರ ದಿಕ್ಕಿನ ಕಡೆಯಿಂದ ತೆರೆಯುವಂತಿರಬೇಕು. ಅಡುಗೆ ಮನೆಗೆ ಗಾಢ ಬಣ್ಣಗಳಾದ ಕೆಂಪು, ಕಿತ್ತಳೆ, ಕಂದು, ಹಳದಿ ಬಣ್ಣಗಳು ಇದ್ದಲ್ಲಿ ಉತ್ತಮ. ಯಾವುದೇ ಕಾರಣಕ್ಕೂ ಕಪ್ಪು ಬಣ್ಣವನ್ನು ಬಳಸಲೇಬಾರದು. ಎಲೆಕ್ಟ್ರಿಕ್, ಎಲೆಕ್ಟ್ರಾನಿಕ್ ಪರಿಕರಗಳಾದ ಫ್ರಿಡ್ಜ್, ಮೈಕ್ರೋಒವೆನ್, ಮಿಕ್ಸಿ, ಗ್ರಾಯಿಂಡರ್ ಇವುಗಳನ್ನು ಅಡುಗೆಮನೆಯ ದಕ್ಷಿಣದ ದಿಕ್ಕಿನಲ್ಲಿ, ನೈರುತ್ಯ ಭಾಗಗಲ್ಲಿ ಇಡುವುದು ಒಳಿತು. ಜನ್ಮ ಜಾತಕದ ಶುಕ್ರನಿದ್ದ ರಾಶಿಗೆ ಗೋಚರದ ಕುಜ ಬಂದಾಗ, ರಕ್ತ ಸಂಬಂಧಿಗಳ ಭೇಟಿ, ಗಂಡನಿಗೆ ದ್ರವ್ಯಲಾಭ, ಪುರುಷ /ಸ್ತ್ರೀಯರ ಭೇಟಿ. ವಾಸ್ತು :-- ********** ಮನೆಯ ಬಾಗಿಲುಗಳ ಮೇಲೆ ಶುಭ ಪ್ರತೀಕಗಳಾದ, ಕಲಶದಂತಹ ಚಿತ್ರ, ಲಕ್ಷ್ಮೀ ದೇವಿಯ ಪಾದಗಳು, ಸ್ವಸ್ತಿಕದ ಚಿನ್ಹೆ ಹಾಕಬೇಕು. ಸ್ವಸ್ತಿಕದ ಎರಡೂ ಕಡೆಗಳಲ್ಲಿ ಸಿದ್ಧಿಬುದ್ಧಿಗಳಿದ್ದು, ಶುಭ ಲಾಭ ಎಂದು ಬರೆದಿರುವ ಚಿತ್ರವನ್ನು ಹಾಕಬೇಕು. ಸ್ವಸ್ತಿಕವನ್ನು ಗಣೇಶನ ಪ್ರತೀಕವೆಂದೂ, ಸಿದ್ಧಿ - ಬುದ್ಧಿಯರು ಆತನ ಪತ್ನಿಯರೆಂದೂ, ಶುಭ - ಲಾಭವನ್ನು ಆತನ ಮಕ್ಕಳೆಂದೂ ನಂಬಲಾಗಿದೆ. ಮುಖ್ಯ ದ್ವಾರದ ಮೇಲೆ ಈ ಶುಭ ಚಿಹ್ನೆಗಳಿದ್ದರೆ ಕೆಟ್ಟ ಶಕ್ತಿಗಳು ಒಳಗೆ ಬರದಂತೆ ತಡೆ ಹಿಡಿಯಬಲ್ಲದು ಎಂದು ನಂಬಲಾಗಿದೆ. ಜನ್ಮ ಜಾತಕದ ಶುಕ್ರನಿದ್ದ ರಾಶಿಗೆ ಗೋಚರದ ಚಂದ್ರ ಬಂದಾಗ, ಸಾಲ ಮಾಡುವ ಪರಿಸ್ಥಿತಿ ಒದಗಬಹುದು, ಹಣದಿಂದ ನಿಷ್ಟೂರ, ಅನಾರೋಗ್ಯ, ಮೋಸಹೋಗುವ ಸನ್ನಿವೇಶ ಎದುರಾಗಬಹುದು, ಜನ್ಮ ಜಾತಕದ ಶುಕ್ರನಿದ್ದ ರಾಶಿಗೆ ಗೋಚರದ ಸೂರ್ಯ ಬಂದಾಗ ಹೆಂಡತಿಗೆ ಅನಾರೋಗ್ಯ, ಹಣಕಾಸಿನ ಮುಗ್ಗಟ್ಟು ವಾಸ್ತು :--- ********* ಬೆಡ್ರೂಮ್ನಲ್ಲಿ ಜಲತತ್ವ :--- ********************** ನೀರು ಒಂದು ಅಸ್ಥಿರ ತತ್ವ, ಆದ್ದರಿಂದಲೇ ನೀರಿನ ಸೆಲೆ ಬೆಡ್ರೂಮ್ನಲ್ಲಿ ದ್ದರೆ ಅಸ್ಥಿರತೆ ಉಂಟಾಗುತ್ತದೆ. ವಾಸ್ತು ಶಾಸ್ತ್ರದ ಪ್ರಕಾರ ಬೆಡ್‌ರೂಮ್‌ನಲ್ಲಿ ಅಕ್ವೇರಿಯಂ ಇರಿಸುವುದನ್ನು ತಪ್ಪಿಸುವುದು ಒಳ್ಳೆಯದು. ಅಕ್ವೇರಿಯಂನಲ್ಲಿ ಈಜುತ್ತಿರುವ ಮೀನುಗಳನ್ನು ನೋಡುವುದರಿಂದ ಒತ್ತಡದಿಂದ ರಿಲೀಫ್ ದೊರೆತರೂ ಕೂಡ, ಅದನ್ನು ಬೆಡ್‌ರೂಮ್‌ನಲ್ಲಿ ಇರಿಸುವುದು, ದಂಪತಿಯ ನಡುವೆ ವಿರಸಕ್ಕೆ ಮೂಲವಾಗುತ್ತದೆ. ಬೆಡ್‌ರೂಮ್‌ನಲ್ಲಿ ನೀರಿನ ಪೋಸ್ಟರ್‌ಗಳನ್ನು ಸಹ ಇರಿಸಬಾರದು. ಜನ್ಮ ಜಾತಕದ ಗುರುವಿದ್ದ ರಾಶಿಗೆ ಗೋಚಾರದ ಗುರು ಬಂದಾಗ ಶುಭ, ಮನೆಯಲ್ಲಿ ಶುಭಕಾರ್ಯಗಳು, Name & fame ಎಲ್ಲಾ ಸಿಗುತ್ತೆ, ಪುತ್ರ ಸಂತಾನ ಯೋಗವುಂಟಾಗುತ್ತದೆ. ಡಾ : ಶೈಲಜಾ ರಮೇಶ್ ಜನ್ಮ ಜಾತಕದ ಗುರುವಿದ್ದ ರಾಶಿಗೆ ಗೋಚರದ ಕೇತು ಬಂದಾಗ, ಜಾತಕರಿಗೆ ಆಧ್ಯಾತ್ಮಿಕ ಬಾವ ಬರುತ್ತೆ, ಯಾವುದರಲ್ಲೂ ಆಸಕ್ತಿ ಇರಲ್ಲ, ವೈರಾಗ್ಯ ಭಾವ, ಗುರು ಶುಭ್ರತೆಯನ್ನು ಪ್ರತಿಬಿಂಬಿಸಿದ್ರೆ... ಕೇತು ಕೊಳಕನ್ನು ಪ್ರತಿಬಿಂಬಿಸ್ತಾನೆ.. ಹಾಗಾಗಿ ಆ ಸಮಯದಲ್ಲಿ ಜಾತಕರು ಕೊಳಕು ಬಟ್ಟೆಯನ್ನ ಧರಿಸ್ತಾರೆ ಮೋಕ್ಷ ಕಾರ್ಯ, ಸ್ವಜನರ ಭೇಟಿ, ನರ್ವಸ್ ಪ್ರಾಬ್ಲಮ್ ಬರುತ್ತೆ. ಬೆಡ್ರೂಮ್ ವಾಸ್ತು :--- ****************** ದಾಂಪತ್ಯ ಜೀವನ ಸುಖಮಯವಾಗಿರಲು ಪ್ರೀತಿ, ವಿಶ್ವಾಸದ ಜೊತೆ ಇಬ್ಬರ ನಡುವೆ ಹೊಂದಾಣಿಕೆ ಇರಲೇಬೇಕಾಗುತ್ತದೆ. ಆದರೆ ಇದರ ಜೊತೆಗೆ ಕೆಲವೊಂದು ವಾಸ್ತು ಟಿಪ್ಸ್ಗಳನ್ನು ಪಾಲಿಸಿದರೆ ವೈವಾಹಿಕ ಜೀವನ ಹೆಚ್ಚು ಸಂತೋಷವಾಗಿರಲು ಸಾಧ್ಯವಾಗುತ್ತದೆ. 1, ಬೆಡ್‌‌ರೂಮ್‌ನಲ್ಲಿ ರಾಧಾ ಕೃಷ್ಣರ ಫೋಟೊವನ್ನು ಇಡಿ. ಇದರಿಂದ ಪ್ರೀತಿ ಹೆಚ್ಚಾಗುತ್ತದೆ. 2, ದಂಪತಿಗಳು ತಮ್ಮ ಬೆಡ್‌‌ರೂಮ್‌ನಲ್ಲಿ ಪ್ರತ್ಯೇಕವಾಗಿ ಎರಡು ಸುಂದರ ಹೂದಾನಿ ಇಡಿ. 3, ಪ್ರೀತಿಯ ಸಂಕೇತ ಬೀರುವ ಲವ್‌ಬರ್ಡ್ಸ್‌‌ಗಳ ಫೋಟೊವನ್ನು ಬೆಡ್‌’‌ರೂಮ್‌ನಲ್ಲಿಡಿ. 4, ದಂಪತಿಗಳ ನಡುವೆ ಪ್ರೀತಿ ‌ ಹೆಚ್ಚಲು ಬೆಡ್‌‌ರೂಮ್‌ನಲ್ಲಿ ಹೃದಯ ಆಕಾರದ ಯಾವುದಾದರು ವಸ್ತುವನ್ನು ಇಡಿ. 5, ಗುಲಾಬಿ ಬಣ್ಣ ಪ್ರೀತಿಯ ಸಂಕೇತವಾಗಿದೆ. ಬೆಡ್ ರೂಮ್ ಬಣ್ಣ ಈ ಬಣ್ಣದಲ್ಲಿದ್ದರೆ ಉತ್ತಮ. 6, ಬೆಡ್ ರೂಮಿನಲ್ಲಿ ಕೆಂಪು ಬಣ್ಣದ ಗೂಲಾಬಿ ಹೂವು ಇಟ್ಟರೆ ಉತ್ತಮ. ವಾಸ್ತು :-- ಮಲಗುವ ಕೋಣೆಯಲ್ಲಿ ಕನ್ನಡಿಯನ್ನು ಇರಿಸಬಾರದು, ಇದರಿಂದ ದಂಪತಿಗಳಲ್ಲಿ ಮನಸ್ಥಾಪಕ್ಕೆ ಕಾರಣವಾಗುತ್ತದೆ. ಇಡಲೇ ಬೇಕಾಗಿ ಬಂದಲ್ಲಿ, ಮಲಗಿದ್ದಾಗ ನಿಮ್ಮ ನೆರಳು ಕನ್ನಡಿಯ ಮೇಲೆ ಬೀಳದಂತಹ ಜಾಗದಲ್ಲಿರಿಸಿ. ಜನ್ಮ ಜಾತಕದ ಗುರುವಿದ್ದ ರಾಶಿಗೆ ಗೋಚರದ ರಾಹು ಬಂದಾಗ, ಜೀವ ಭಯ, ಭ್ರಮೆ, ಅನಾರೋಗ್ಯ, ಮನಕ್ಕೆ ಮಂಕುಕವಿದಂತೆ ಕಾಣುವುದು, ಧನುರ್ವಾಯು ಹಾಗೂ ಶ್ರಮ. ವಾಸ್ತು :-- ಬೆಡ್ ರೂಮ್ನಲ್ಲಿ ದುಃಖವನ್ನು ಪ್ರದರ್ಶಿಸುವ, ಯುದ್ಧದ ಚಿತ್ರ, ಕಾಡುಮೃಗಗಳ , ಒಂಟಿ ಪ್ರಾಣಿಯ, ಪಕ್ಷಿಯ ಚಿತ್ರಗಳನ್ನು ಹಾಕಬಾರದು. ಜನ್ಮ ಜಾತಕದ ಗುರುವಿದ್ದ ರಾಶಿಗೆ ಗೋಚರದ ಶನಿ ಬಂದಾಗ ಗೌರವ, ಅಧಿಕಾರಲಾಭ, ಗಣ್ಯರ ಜೊತೆ ಕೆಲಸಮಾಡುವ ಯೋಗ, ಕೆಲಸದಲ್ಲಿ ಬದಲಾವಣೆ, ಪ್ರೊಮೋಷನ್ ಸಿಗುವ ಯೋಗ, ಗ್ಯಾಸ್ಟ್ರಿಕ್ ಬರುವ ಸಾಧ್ಯತೆ. ವಾಸ್ತು :- ಬೆಡ್ರೂಮ್ ನಲ್ಲಿ ಬೆಡ್ ನ ಹಿಂದಕ್ಕೆ ಬಲಿಷ್ಠವಾದ ಗೋಡೆಯಿರಬೇಕು, ಬೆಡ್ ನ ಹಿಂಬಾಗ ಕಿಟಕಿಯಿದ್ದರೆ ಅಸ್ಥಿರತೆ ಉಂಟಾಗುತ್ತದೆ. ಟಾಯ್ಲೆಟ್ ಗೋಡೆಗೇ ಬೆಡ್ ಹೊಂದಿಕೊಂಡಿದ್ದರೆ ನಕಾರಾತ್ಮಕ ಶಕ್ತಿ ಪ್ರವಹಿಸುತ್ತದೆ. ಜನ್ಮ ಜಾತಕದ ಗುರುವಿದ್ದ ರಾಶಿಗೆ ಗೋಚರದ ಶುಕ್ರ ಬಂದಾಗ, ದೈವಿಕ ಕಾರ್ಯಾನುಕೂಲ, ಸೌಂದರ್ಯ ವಸ್ತುಗಳ ಲಾಭ, ಉತ್ತಮ ರೀತಿಯಿಂದ ಧನ-ದ್ರವ್ಯಲಾಭ, ಶ್ರೀಮತಿಗೆ ಗುರುದರ್ಶನದ ಯೋಗವುಂಟಾಗುತ್ತದೆ ವಾಸ್ತು :-- ಉತ್ತರ ದಿಕ್ಕಿನಲ್ಲಿ ಉತ್ಪನ್ನವಾಗುವ ಎಲೆಕ್ಟೋ ಮ್ಯಾಗ್ನೆಟಿಕ್ ವೇವ್ಸ್ ( ವಿದ್ಯುತ್ ಆಯಸ್ಕಾಂತೀಯ ತರಂಗಗಳು) ಉತ್ತರದಿಂದ ದಕ್ಷಿಣದ ದಿಕ್ಕಿನತ್ತ ಚಲಿಸುತ್ತವೆ, ನಾವು ಮಲಗುವ ವೇಳೆ ಉತ್ತರ ದಿಕ್ಕಿನತ್ತ ತಲೆ ಇಟ್ಟು ಮಲಗಿದಾಗ ವಿದ್ಯುತ್ ಅಯಸ್ಕಾಂತೀಯ ತರಂಗಗಳ ಕಾರಣದಿಂದ ಸಮಸ್ಯೆ ಉಂಟಾಗುತ್ತದೆ, ತಲೆ ಹಾಗೂ ದೇಹದಲ್ಲಿ ನೋವು ಕಾಣಿಸಿಕೊಳ್ಳಬಹುದು, ಹಾಗಾಗಿ ಉತ್ತರದ ದಿಕ್ಕಿನತ್ತ ತಲೆ ಇಟ್ಟು ಮಲಗುವುದು ಬೇಡ. ದಕ್ಷಿಣದ ದಿಕ್ಕಿನತ್ತ ತಲೆ ಇಟ್ಟು ಮಲಗುವುದರಿಂದ ಆರಾಮದಾಯಕ ನಿದ್ರೆ ಬರುತ್ತದೆ. ಕೋಣೆಯ ಬಾಗಿಲಿನತ್ತ ಕಾಲನ್ನು.ಹಾಕಿ ಮಲಗುವುದೂ ಕೂಡ ಅಶುಭ, ಇದರಿಂದ ಯಾವಾಗಲೂ ಅನಾರೋಗ್ಯಕರ ಸಮಸ್ಯೆ ಗಳು ಉಂಟಾಗುತ್ತದೆ. ಜನ್ಮ ಜಾತಕದ ಗುರುವಿದ್ದ ರಾಶಿಗೆ ಗೋಚರದ ಬುಧ ಬಂದಾಗ, ಜಾತಕರಿಗೆ ಆಧ್ಯಾತ್ಮಿಕ ಮನಸ್ಸು ,ಹೊಸ ಅನುಭವ,ಬುದ್ಧಿ - ಜ್ಞಾನದ ಮಿಳಿತದಿಂದ ವಿವೇಕೋದಯ, ಗಣ್ಯವ್ಯಕ್ತಿಗಳನ್ನು ಭೇಟಿಯಾಗುವ ಯೋಗ, ಯುವಕರಿಗೆ ಅಭಿವೃದ್ಧಿ, ಸ್ತ್ರೀ ಜಾತಕವಾದರೆ ಪತಿಗಿಂತಲೂ ಬೇರೆಯವರು ಇಷ್ಟಆಗ್ತಾರೆ. ವಾಸ್ತು :-- ಅವಿಭಕ್ತ ಕುಟುಂಬವಾಗಿ ಮನೆಯಲ್ಲಿ ಅನ್ಯೋನ್ಯತೆ ಇದ್ದು ಸುಖ ಸಂಸಾರವಾಗಿದ್ದಾಗ ನವ ವಿವಾಹಿತರನ್ನು ನೈಋತ್ಯ ( ದಕ್ಷಿಣ - ಪಶ್ಚಿಮ) ದಿಕ್ಕಿನಲ್ಲಿರುವ ಬೆಡ್ ರೂಮ್ ನಲ್ಲಿ ಮಲಗಲು ಬಿಡಬಾರದು, ಏಕೆಂದ್ರೆ ಅವರುಗಳಲ್ಲಿ ನಾವೇ ಮನೆಯ ಅಧಿಪತಿಯಾಗಬೇಕೆಂಬ ಭಾವನೆ ಮೂಡಿ ಮತಬೇಧ ಉಂಟಾಗಲು ಕಾರಣವಾಗಬಲ್ಲದು. ಗರ್ಭಿಣಿ ಸ್ತ್ರೀಯರು ಉತ್ತರ - ಪೂರ್ವ ದಿಕ್ಕಿನಲ್ಲಿ ಮಲಗಬಾರದು, ಗರ್ಭಪಾತ ವಾಗುವ ಸಾಧ್ಯತೆ ಹೆಚ್ಚು. ಜನ್ಮ ಜಾತಕದ ಗುರುವಿದ್ದ ರಾಶಿಗೆ ಗೋಚರದ ಕುಜ ಬಂದಾಗ ರಕ್ತ ಸಂಬಂಧಿಗಳ ಭೇಟಿ, ಮಾಡುತ್ತಿರುವ ವೃತ್ತಿಯಲ್ಲಿ ಆಲಸ್ಯ, ಹಿತ ಶತ್ರುಗಳ ಕಾಟ, ಹಠದ ಸ್ವಭಾವ, ಬೆಂಕಿಯಿಂದ ತೊಂದರೆ, B P, ಪೈಲ್ಸ್ ಬರುವ ಸಾಧ್ಯತೆ. ಸ್ತ್ರೀ ಜಾತಕವಾದರೆ, ಪತಿಯ ನಡವಳಿಕೆಯಲ್ಲಿ ವ್ಯತ್ಯಾಸ, ಪತಿಗೆ ಸ್ಥಳ ಬದಲಾವಣೆಯಿಂದ ಶುಭ ಹಾಗೂ ಗೌರವ. ವಾಸ್ತು :--- ಮನೆಯೆಂದ ಮೇಲೆ ಲಿವಿಂಗ್ ರೂಮ್, ಡೈನಿಂಗ್ ಹಾಲ್, ಪೂಜಾ ಕೊಠಡಿ, ಅಡುಗೆ ಮನೆಗೆ ಎಷ್ಟು ಪ್ರಾಮುಖ್ಯತೆ ಇದೆಯೋ ಅಷ್ಟೇ ಮಹತ್ವ ಮಲಗುವ ಕೋಣೆಗೆ ಇದೆ. ಮಲಗುವ ಕೋಣೆಯಲ್ಲಿ ದಿನದ ಬಹಳ ಕಾಲವನ್ನು ಇಲ್ಲೇ ಕಳೆಯುತ್ತೇವೆ. ಯಾವಾಗಲೂ ಮಾಸ್ಟರ್ ಬೆಡ್ ರೂಂ ಅನ್ನು ದಕ್ಷಿಣ - ಪಶ್ಚಿಮದ ( ನೈಋತ್ಯ) ದಿಕ್ಕಿಗೇ ನಿರ್ಮಿಸಬೇಕು, ಮನೆಯ ಮಾಲೀಕನ ವಿಶ್ರಾಂತಿಗೆ ಈ ದಿಕ್ಕು ಎಲ್ಲದಿಕ್ಕಿಗಿಂತಲೂ ಅತೀ ಹೆಚ್ಚು ಆರಾಮದಾಯಕ ಹಾಗೂ ಶಕ್ತಿ ಶಾಲಿ ಪ್ರದೇಶವಾಗಿದೆ. ಜನ್ಮ ಜಾತಕದ ಗುರುವಿದ್ದ ಮನೆಗೆ ಗೋಚರದ ಚಂದ್ರ ಬಂದಾಗ, ಸಂಚಾರ, ಸ್ತ್ರೀಯರ ಭೇಟಿ, ಮೃಷ್ಟಾನ್ನ ಭೋಜನ ವಾಸ್ತು :--- ಡೈನಿಂಗ್ ಟೇಬಲ್ ಮೇಲೆ ಸದಾ ತಾಜಾ ಹಣ್ಣುಗಳನ್ನು ಇರಿಸಿ, ಡೈನಿಂಗ್ ಹಾಲ್ ನ ಉತ್ತರದ ಗೋಡೆಗೆ ಕನ್ನಡಿಯನ್ನು ಹಣ್ಣುಗಳು ಪ್ರತಿಬಿಂಬಿಸುವಂತೆ ಹಾಕಬೇಕು, ಡೈನಿಂಗ್ ಟೇಬಲ್ ಮೇಲೆ ಉಪ್ಪಿನಕಾಯಿ ಇರಿಸಬೇಡಿ. ಡೈನಿಂಗ್ ಟೇಬಲ್ ಮೇಲೆ ಕಟ್ಲರಿ ಗಳನ್ನಿಡಬಾರದು ಅದರಲ್ಲೂ ವಿಶೇಷವಾಗಿ ಚಾಕು , ಚೂರಿ, ಔಷಧಿ ಗಳನ್ನಿಡಬಾರದು. ಇವೆಲ್ಲಾ ನಕಾರಾತ್ಮಕ ವಾಗಿ ಕೆಲಸ ಮಾಡುತ್ತವೆ. ಜನ್ಮ ಜಾತಕದ ಗುರುವಿದ್ದ ರಾಶಿಗೆ ಗೋಚರದ ರವಿ ಬಂದಾಗ ವಿಶೇಷ ಗೌರವಾದರಗಳು, ಗಣ್ಯರ ಸಹಕಾರ, ರಾಜ ಸಮಾನರ ದರ್ಶನ ಹಾಗೂ ಸಹಾಯ ವಾಸ್ತು :-- ಉತ್ತರ ಹಾಗೂ ಪೂರ್ವ ದಿಕ್ಕಿನ ಗೋಡೆಗಳಿಗೆ ದೊಡ್ಡ ದೊಡ್ಡ ಗಾಜುಗಳನ್ನು ಹಾಕುವುದರಿಂದ ಆ ಗೋಡೆಗಳ ಪ್ರಭಾವ ಉತ್ತಮವಾಗಿರುತ್ತೆ, ಆ ಗೋಡೆಗಳನ್ನು ಅಲಂಕರಿಸಿದ್ದಲ್ಲಿ, ಆ ಮನೆಯಲ್ಲಿ ನೆಲೆಸಿರುವವರ ಆರೋಗ್ಯ ಉತ್ತಮವಾಗಿದ್ದು ಪ್ರಸನ್ನತೆಯಿಂದಿರುತ್ತಾರೆ. ಪೂರ್ವ ಅಥವಾ ಉತ್ತರ ದಿಕ್ಕಿಗೆ ಲಿವಿಂಗ್ ರೂಮ್ ಇದ್ದಲ್ಲಿ ಆ ಕೊಠಡಿಯ ಗೋಡೆಯ ಬಣ್ಣ ಬಿಳಿ ಅಥವಾ ತಿಳಿ ಹಸಿರು ಇದ್ದರೆ ಅತಿಥಿಗಳು ಮತ್ತು ನಿವಾಸಿಗಳ ಮಧ್ಯೆ ಸೌಹಾರ್ದ ಸಂಬಂಧ ಏರ್ಪಡುತ್ತದೆ. ಜನ್ಮ ಜಾತಕದ ಬುಧನಿದ್ದ ರಾಶಿಗೆ ಗೋಚರದ ಕೇತು ಬಂದಾಗ, ಮೋಕ್ಷ ವಿಷಯದ ಅನುಭವ, ಗ್ರಹಣ ಶಕ್ತಿಯಲ್ಲಿ ವ್ಯತ್ಯಾಸ, ಕಿರಿಯ ಸೋದರನಿಗೆ ದೋಷ ವಾಸ್ತು ಟಿಪ್ಸ್ :-- ಲಿವಿಂಗ್ ರೂಮ್ ಹಾಗೂ ಡೈನಿಂಗ್ ರೂಮ್ಗಳಲ್ಲಿ ಹೇರಳವಾಗಿ ಬೆಳಕು ಬೀಳುತ್ತಿರಬೇಕು, ಸ್ವಲ್ಪವೂ ಕತ್ತಲೆಯಿರಬಾರದು, ಈ ಭಾಗದ ಗೋಡೆಗಳಿಗೆ ಹಸಿರು ಬಣ್ಣವನ್ನು ಪ್ರಯೋಗಿಸಿ ನೋಡಿ. ಉತ್ತರ ಹಾಗೂ ಪೂರ್ವ ದಿಕ್ಕಿನ ಕಡೆಯ ಗೋಡೆಗಳತ್ತ ಹಗುರವಾದ ಫರ್ನಿಚರ್ ಗಳನ್ನಿರಿಸಿ, ಈ ಭಾಗದಲ್ಲಿ ಭಾರವನ್ನು ಹೇರಬಾರದು. ಜನ್ಮ ಜಾತಕದ ಬುಧನಿದ್ದ ರಾಶಿಗೆ ಗೋಚರದ ರಾಹು ಬಂದಾಗ, ಜಾತಕರು ಎಷ್ಟೇ ಬುದ್ಧಿವಂತ ರಾದಾಗ್ಯೂ, ಭ್ರಮೆ - ಭಯ ಇರುತ್ತದೆ, ಮಂಕುಹಿಡಿದಂತೆ ಇರುತ್ತಾರೆ, ಚರ್ಮವ್ಯಾಧಿ ಕೂಡ ಬರುತ್ತದೆ. ಜನ್ಮ ಜಾತಕದ ಕುಜ ಗ್ರಹದ ಮೇಲೆ ಗೋಚರದ ಗ್ರಹಗಳ ಪ್ರಭಾವ :---- ಜನ್ಮ ಜಾತಕದ ಕುಜನಿದ್ದ ರಾಶಿಗೆ ಗೋಚರದ ರವಿ ಬಂದಾಗ, ತಂದೆಗೆ ಸಹೋದರರಿಂದ ತಡೆ, ರಕ್ತದೋಷ ಉಂಟಾಗುತ್ತದೆ. ಜನ್ಮ ಜಾತಕದ ಕುಜನಿದ್ದ ರಾಶಿಗೆ ಗೋಚರದ ಚಂದ್ರ ಬಂದಾಗ.. ಬೇಸರ, ಅಶಾಂತಿ, ಸೋದರನಿಗೆ, ಪತ್ನಿಗೆ ಪ್ರಯಾಣ, ತಾಯಿಗೆ ಹಠ ಉಂಟಾಗುತ್ತದೆ. ಜನ್ಮ ಜಾತಕದ ಕುಜನಿದ್ದ ರಾಶಿಗೆ ಗೋಚರದ ಬುಧ ಬಂದಾಗ, ಮಿತ್ರರು ಹಾಗೂ ಬ್ರಾತೃಗಳೊಂದಿಗೆ ವಿವಾದ,ಸೋದರಮಾವ ನೊಂದಿಗೆ ವೈಮನಸ್ಯ, ಮೂಳೆ ಹಾಗೂ ಚರ್ಮದ ತೊಂದರೆಗಳುಂಟಾಗುತ್ತದೇ. ಜನ್ಮ ಜಾತಕದ ಕುಜನಿದ್ದ ರಾಶಿಗೆ ಗೋಚರದ ಗುರು ಬಂದಾಗ ಜಾತಕರಿಗೆ ನಾನೇ ಹೆಚ್ಚುಎಂಬ ಪ್ರತಿಷ್ಠೆಯ ಗುಣ,ಅಹಂ -ಆತುರ - ಹಠದಿಂದ ಆಪ್ತರನ್ನು ದೂರಮಾಡಿಕೊಳ್ಳುತ್ತಾರೆ. ಜನ್ಮ ಜಾತಕದ ಕುಜನಿದ್ದ ರಾಶಿಗೆ ಗೋಚರದ ಶುಕ್ರ ಬಂದಾಗ, ಜಾತಕನ ಸೋದರನಿಗೆ ದ್ರವ್ಯಲಾಭ, ಜಾತಕನ ದ್ರವ್ಯಲಾಭಕ್ಕೆ ಮಧ್ಯಸ್ಥಿಕೆ ಯಿಂದ ತಡೆ. ಜನ್ಮ ಜಾತಕದ ಕುಜನಿದ್ದ ರಾಶಿಗೆ ಗೋಚರದ ಶನಿ ಬಂದಾಗ,ಅಥವಾ ತ್ರಿಕೋಣ ದಲ್ಲಿದ್ದಾಗ, ಜಾತಕರಿಗೆ ವೃತ್ತಿಯಲ್ಲಿ ಕಿರುಕುಳ, ಅಶಾಂತಿ, ಜಗಳ.ಸ್ತ್ರೀ ಜಾತಕವಾದರೆ,ಆಕೆಗೂ ಆಕೆಯ ಪತಿಗೂ ಇದೇ ರೀತಿಯ ತೊಂದರೆಗಳು. ಜನ್ಮ ಜಾತಕದ ಕುಜನಿದ್ದ ರಾಶಿಗೆ ಗೋಚರದ ರಾಹು ಬಂದಾಗ, ಜಾತಕನಿಗೆ ಶಸ್ತ್ರಗಳಿಂದ ತೊಂದರೆ, ರಕ್ತದೋಷ, ಕಂಟಕ. ಸೋದರನಿಗೆ ಕಷ್ಟ, ಸ್ರೀಜಾತಕವಾದರೆ ಪತಿಗೆ ಶತ್ರುಬಾಧೆ, ವಾಹನಗಳಿಂದ ತೊಂದರೆ. ಜನ್ಮ ಜಾತಕದ ಕುಜನಿದ್ದ ರಾಶಿಗೆ ಗೋಚರದ ಕೇತು ಬಂದಾಗ, ಜಾತಕನಿಗೆ ಶಕ್ತಿಹೀನತ್ವ, ಸೋದರನ ಬಂಧನ, ಸ್ರೀಜಾತಕ ವಾದ್ರೆ ಪತಿಗೆ ವೃತ್ತಿ ಯಲ್ಲಿ ಕಿರುಕುಳ. ""ಕುಜ,ಪತಿಕಾರಕ ಗ್ರಹ, ಸ್ತ್ರೀಯ ಜಾತಕದಲ್ಲಿ ಕುಜ ಉಚ್ಚತ್ವ ಹೊಂದಿದ್ದರೆ, ಆಕೆಗೆ ಸಿಗುವ ಪತಿಯು ಪ್ರಭಲನು, ಬಲಶಾಲಿ,ದುಡುಕು, ವಿವೇಚನೆಯಿಲ್ಲದೆ ಮುನ್ನುಗ್ಗುವ ಸ್ವಭಾವದವನಾಗಿರುತ್ತಾನೆ. ಸ್ತ್ರೀ ಜಾತಕದಲ್ಲಿ ಕುಜನು ನೀಚನಾಗಿದ್ದರೆ, ಆಕೆಯ ಪತಿಯು ನೀಚನು, ದುರ್ವ್ಯವಹಾರವುಳ್ಳವನೂ ಆಗಿರುತ್ತಾನೆ."" ಜನ್ಮ ಜಾತಕದ ಚಂದ್ರನ ಮೇಲೆ ಗೋಚರದ ಗ್ರಹಗಳ ಪ್ರಭಾವ :---- ಜನ್ಮ ಜಾತಕದ ಚಂದ್ರನಿದ್ದ ರಾಶಿಗೆ ಗೋಚರದ ರವಿ ಬಂದಾಗ, ತಂದೆಗೆ ಪ್ರಯಾಣ, ಹಾಗೂ ತಂದೆಯು ತಾನಾಗಿ ನಿಂದನೆಗೆ ಒಳಗಾಗುವರು. ಜನ್ಮ ಜಾತಕದ ಚಂದ್ರನಿದ್ದ ರಾಶಿಗೆ ಗೋಚರದ ಕುಜ ಬಂದಾಗ ಜಾತಕರಿಗೆ ಚಂಚಲತೆ ಹಾಗೂ ಆತುರತೆ, ಮಾತೆಗೆ ಅನಾರೋಗ್ಯ, ಬ್ರಾತೃ ವಿಗೆ ಸಂಚಾರ ಜನ್ಮ ಜಾತಕದ ಚಂದ್ರನಿದ್ದ ರಾಶಿಗೆ ಗೋಚರದ ಬುಧ ಬಂದಾಗ, ಜಾತಕನಿಗೆ ಅಪವಾದ, ಸ್ತ್ರೀಯರಿಂದ ಬೇಸರ, ಕಲಾವಿಷಯಾಸಕ್ತಿ ಉಂಟಾಗುತ್ತದೆ. ಜನ್ಮ ಜಾತಕದ ಚಂದ್ರನಿದ್ದ ರಾಶಿಗೆ ಗೋಚರದ ಗುರು ಬಂದಾಗ, ಸ್ಥಳಬದಲಾವಣಾ ಯೋಗ, ಮಾತೃವಿಗೆ ದೈವಚಿಂತನೆ, ಕಫದಿಂದ ಅನಾರೋಗ್ಯ ಉಂಟಾಗುತ್ತದೇ. ಜನ್ಮ ಜಾತಕದ ಚಂದ್ರನಿರುವ ರಾಶಿಗೆ ಗೋಚರದ ಶುಕ್ರ ಬಂದಾಗ,ಪತ್ನಿ ಅಥವಾ ಮಗಳಿಗೆ ಅನಾರೋಗ್ಯ, ಮನೆಯ ಸ್ತ್ರೀಯರ ಮಧ್ಯೆ ವೈಮನಸ್ಯ, ಅಶಾಂತಿಯ ವಾತಾವರಣ, ಹಣ ವ್ಯಯವಾಗುತ್ತದೆ. ಜನ್ಮ ಜಾತಕದ ಚಂದ್ರನಿದ್ದ ರಾಶಿಗೆ ಗೋಚರದ ಶನಿ ಬಂದಾಗ, ಮಾಡುತ್ತಿದ್ದ ವೃತ್ತಿಯಲ್ಲಿ ಬದಲಾವಣೆ ಹಾಗೂ ಅವಹೇಳನಕ್ಕೆ ಗುರಿಯಾಗುವ ಸಂಭವ. ಜನ್ಮ ಜಾತಕದ ಚಂದ್ರನಿದ್ದ ರಾಶಿಗೆ ಗೋಚರದ ರಾಹು ಬಂದಾಗ ಮಾತೃವಿಗೆ ಅರಿಷ್ಠ, ಜಾತಕರಿಗೆ ಭಯ ಭೀತಿಯ ವಾತಾವರಣ. ಜನ್ಮ ಜಾತಕದ ಚಂದ್ರನಿದ್ದ ರಾಶಿಗೆ ಗೋಚರದ ಕೇತು ಬಂದಾಗ, ಮೋಕ್ಷ ಚಿಂತನೆ,ಪುಣ್ಯ ತೀರ್ಥಸ್ನಾನ, ಮಾತೃವಿಗೆ ಅನಾರೋಗ್ಯ. ವಾಸ್ತುಶಾಸ್ತ್ರ ದ ಪ್ರಕಾರ ಮುಖ್ಯದ್ವಾರ ನಿರ್ಣಯ **************************************** ದಕ್ಷಿಣ ಆಗ್ನೇಯ ದಿಕ್ಕು ******************* ಈ ದಿಕ್ಕಿಗೆ ಅಧಿಪತಿ ಶುಕ್ರ, ದಿಕ್ಪಾಲಕ ಅಗ್ನಿ, ದಕ್ಷಿಣ ಆಗ್ನೇಯ ದಿಕ್ಕಿಗೆ ಕುಜ ಶುಕ್ರರ ಸಂಬಂಧ ಉಂಟಾಗುತ್ತದೆ ( ದಕ್ಷಿಣದ ದಿಕ್ಕಿಗೆ ಕುಜ ಅಧಿಪತಿ ) , ಕುಜ ಶುಕ್ರರು ಸಮಗ್ರಹರು, ದಂಪತಿಗಳಲ್ಲಿ ಅನ್ಯೋನ್ಯತೆ, ಪರಸ್ಪರರಲ್ಲಿ ಪ್ರೀತಿಯನ್ನೂ ಸೌಹಾರ್ದತೆ ಯನ್ನೂ ಸೂಚಿಸುವ ಗ್ರಹಗಳು ಕುಜ ಶುಕ್ರರು, ಹಾಗಾಗಿ ದಕ್ಷಿಣಾಜ್ಞೆಯದಲ್ಲಿ ಮುಖ್ಯದ್ವಾರ ಸ್ಥಾಪಿಸಬಹುದು. ಈ ದಿಕ್ಕಿನಲ್ಲಿ ಯಾವುದೇ ರೀತಿಯ ತಗ್ಗು, ಹಳ್ಳ ಭಾವಿ, ನೀರಿನ ಸಂಪು ಮುಂತಾದುವಿದ್ದರೆ ದೋಷವಾಗಿ ಪರಿಣಮಿಸುತ್ತದೆ, ಆಗ ದಂಪತಿ ಗಳಲ್ಲಿ ಅನ್ಯೋನ್ಯತೆ ಗೆ ಧಕ್ಕೆ ಬರುತ್ತದೆ, ಮನೆಯ ಸ್ತ್ರೀಯರ ಆರೋಗ್ಯ ಕೆಡುತ್ತದೆ. ಜನ್ಮ ಜಾತಕದ ಗ್ರಹಗಳ ಮೇಲೆ ಗೋಚರದ ಗ್ರಹಗಳ ಪ್ರಭಾವ :---- ಜನ್ಮ ಜಾತಕದ ರವಿ ಇದ್ದ ಮನೆಗೆ ಗೋಚರದ ಚಂದ್ರ ಬಂದಾಗ ತಂದೆಗೆ ಸಂಚಾರಯೋಗ, ಪ್ರಯಾಣ, ವಿಷಯ ಲಾಭವಿರುತ್ತದೆ. ಜನ್ಮ ಜಾತಕದ ರವಿ ಇದ್ದ ಮನೆಗೆ ಗೋಚರದ ಕುಜ ಸಂಚಾರ ಕಾಲದಲ್ಲಿ ವ್ಯಕ್ತಿಗೆ ಉದ್ವೇಗ, ವೃತ್ತಿಗೆ ಶತ್ರುಗಳಿಂದ ಶ್ರಮ, ಕಿರುಕಳ, ತಂದೆಗೆ ಹಿತಶತ್ರುಗಳಿಂದ ತೊಂದ್ರೆ, ಮಗನಿಗೆ ಆಯುಧಗಳಿಂದ ಗಾಯ. ಜನ್ಮ ಜಾತಕದ ರವಿ ಇದ್ದ ಮನೆಗೆ ಗೋಚರದ ಬುಧ ಬಂದಾಗ ತಂದೆಗೆ ಮಿತ್ರರಿಂದ ಸಹಾಯ, ಭೂ ಅಭಿವೃದ್ಧಿಯಾಗುತ್ತದೆ. ಜನ್ಮ ಜಾತಕದ ರವಿ ಇದ್ದ ಮನೆಗೆ ಗೋಚರದ ಗುರು ಬಂದಾಗ ತಂದೆಗೆ ಗುರುಗಳ ಭೇಟಿ, ಆಪ್ತ ಮಿತ್ರರು ಹಾಗೂ ಗಣ್ಯರ ಸಹಕಾರ ಸಿಗುತ್ತದೆ. ಜನ್ಮ ಜಾತಕದ ರವಿ ಇದ್ದ ಮನೆಗೆ ಗೋಚರದ ಶುಕ್ರ ಬಂದಾಗ ಪಿತೃವಿಗೆ ಸುಂದರ ವಸ್ತುಗಳ ಲಾಭ, ದ್ರವ್ಯಲಾಭ ಹಾಗೂ ಸ್ತ್ರೀಯರ ಭೇಟಿಯಾಗುತ್ತದೆ. ಜನ್ಮ ಜಾತಕದ ರವಿ ಇದ್ದ ರಾಶಿಗೆ ಗೋಚರದ ಶನಿ ಬಂದಾಗ , ತಂದೆಗೆ ವೃತ್ತಿಯಲ್ಲಿ ಶ್ರಮ, ಬೇಸರ ಉಂಟಾಗುತ್ತದೆ, ತಂದೆ ಮಕ್ಕಳಲ್ಲಿ ಮನಸ್ತಾಪಗಳು ಉಂಟಾಗುತ್ತದೆ. ಜನ್ಮ ಜಾತಕದ ರವಿ ಇದ್ದ ಮನೆಗೆ ಗೋಚರದ ರಾಹು ಬಂದಾಗ ಪಿತೃವು ತೇಜೋರಹಿತರಾಗಿರುತ್ತಾರೆ, ಸೋಮಾರಿತನ, ಕೆಟ್ಟಸಮಾಚಾರವನ್ನು ಕೇಳುವ ಯೋಗ. ಜನ್ಮ ಜಾತಕದ ರವಿ ಇದ್ದ ಮನಗೆ ಗೋಚರದ ಕೇತು ಬಂದಾಗ ತಂದೆಗೆ ಸಂತರ ಭೇಟಿ, ವೈರಾಗ್ಯ ಹಾಗೂ ಮೋಕ್ಷ ಚಿಂತನೆ ಮೂಡುತ್ತೆ. ವಾಸ್ತು ಶಾಸ್ತ್ರದ ಪ್ರಕಾರ ಮುಖ್ಯದ್ವಾರ ನಿರ್ಣಯ :-- ******************************************* ಪೂರ್ವ ಆಗ್ನೇಯ ದಿಕ್ಕು :--- * *********************** ಆಗ್ನೇಯ ದಿಕ್ಕಿನ ಆಧಿಪತಿ ಶುಕ್ರ, ದಿಕ್ಪಾಲಕ ಅಗ್ನಿ, ಪೂರ್ವ ಆಗ್ನೇಯ ಕ್ಕೆ ಮುಖ್ಯದ್ವಾರ ಉತ್ತಮವಲ್ಲ, ಕಾರಣ ಪೂರ್ವ ಆಗ್ನೇಯಕ್ಕೆ ರವಿ ಶುಕ್ರರ ಸಂಬಂಧ ಉಂಟಾಗುತ್ತದೆ, ಇವರಿಬ್ಬರೂ ಪರಮ ವೈರಿಗಳು, ಈ ದಿಕ್ಕಿನಲ್ಲಿ ಶುಕ್ರನು ಉಚ್ಚತ್ವವನ್ನು ಪಡೆದು ಸೂರ್ಯನು ನೀಚನಾಗುತ್ತಾನೆ, ಶುಕ್ರನು ಉಚ್ಚನಾಗುವ ಕಾರಣ ಮನೆಗೆ ಸ್ತ್ರೀ ಪ್ರಾಭಲ್ಯ ಹೆಚ್ಚಾಗಿ ಮನೆಯ ಯಜಮಾನನು ಬಲಹೀನನಾಗುತ್ತಾನೆ, ಹಾಗೂ ತೊಂದರೆಗೆ ಒಳಗಾಗುತ್ತಾನೆ, ಆದ್ದರಿಂದ ಪೂರ್ವಾಜ್ಞೆಯದ ಮುಖ್ಯದ್ವಾರ ಉತ್ತಮವಲ್ಲ ನಿಷಿದ್ಧ ಎಂದು ವಾಸ್ತುಶಾಸ್ತ್ರ ಹೇಳುತ್ತದೆ. ವಾಸ್ತು ಶಾಸ್ತ್ರ ದ ಪ್ರಕಾರ ಮುಖ್ಯದ್ವಾರ ನಿರ್ಣಯ :--- ವಾಸ್ತುಶಾಸ್ತ್ರವು ವೇದ ವಿಜ್ಞಾನದ ಒಂದು ಅವಿಭಾಜ್ಯ ಅಂಗ. ಪಂಚಭೂತ ಶಕ್ತಿಗಳ ಬಗ್ಗೆ ಆಳವಾಗಿ ಅಧ್ಯಯನ ನಡೆಸಿ, ಮಾನವ ಕಲ್ಯಾಣಕ್ಕೆ ಈ ಶಕ್ತಿಗಳನ್ನು ಹೇಗೆ ಸದುಪಯೋಗ ಪಡಿಸಿ ಕೊಳ್ಳಬಹುದು ಎಂಬುದನ್ನು ವಾಸ್ತು ವಿಜ್ಞಾನ ತಿಳಿಸುತ್ತದೆ. ಸಾಮಾನ್ಯವಾಗಿ ಮನೆ ನಿರ್ಮಾಣ ಮಾಡುವಾಗ ಮುಖ್ಯದ್ವಾರವನ್ನು ಯಾವ ದಿಕ್ಕಿಗೆ ಸ್ಥಾಪಿಸಿದರೆ ಸೂಕ್ತ, ಆ ದಿಕ್ಕಿನ ಫಲಾಫಲಗಳೇನು ಎಂಬ ಆಲೋಚನೆ ಮೂಡುವುದು ಸಹಜ. ಪೂರ್ವದ ದಿಕ್ಕು ಹಾಗೂ ಉತ್ತರದ ದಿಕ್ಕು ಮುಖ್ಯದ್ವಾರ ನಿರ್ಮಾಣಕ್ಕೆ ಅತ್ಯಂತ ಸೂಕ್ತ ಎಂಬುವುದು ಎಲ್ಲರಿಗೂ ಗೊತ್ತಿರುವ ವಿಷಯವೇ ಆಗಿದೆ, ಆದರೆ ಇನ್ನುಳಿದ ದಿಕ್ಕುಗಳಲ್ಲಿ ಬಾಗಿಲಿಡ ಬೇಕಾದ ಸಂದರ್ಭ ಬಂದಲ್ಲಿ ಅದರ ಫಲಾಫಲಗಳೇನು ಎಂಬುವುದನ್ನು ಅರಿಯುವುದು ಸೂಕ್ತ. ಯಾವ ಯಾವ.ದಿಕ್ಕಿನಲ್ಲಿ ಮುಖ್ಯದ್ವಾರ ವಿದ್ದರೆ ಯಾವ ರೀತಿಯ ಫಲಗಳು ಎಂಬುದನ್ನು ತಿಳಿಯೋಣ. ಪೂರ್ವದಿಕ್ಕು :--- ಪೂರ್ವ ದಿಕ್ಕಿಗೆ ಅಧಿಪತಿ ಸೂರ್ಯ, ಸೌರವ್ಯೂಹದ ಕೇಂದ್ರ ಬಿಂದುವೇ ಸೂರ್ಯ. ಸೂರ್ಯ ಅಗಾಧ ಶಕ್ತಿಯ ಕಣಜ ಎಂಬ ಅಂಶವನ್ನು ವಾಸ್ತು ತಜ್ಞರು ಸಹಸ್ರಾರು ವರ್ಷಗಳ ಹಿಂದೆಯೇ ಹೇಳಿದ್ದಾರೆ. ಸೂರ್ಯನಲ್ಲಿರುವ ಸಪ್ತವರ್ಣಗಳು ಹಾಗೂ ಸೂರ್ಯ ಕಿರಣಗಳು ಹೊರಸೂಸುವ ಅತಿ ನೇರಳೆ ಕಿರಣಗಳು, ಅವುಗಳಿಂದಾಗುವ ಒಳಿತು-ಕೆಡಕುಗಳು ಹಾಗೂ ಅವುಗಳನ್ನು ಸದುಪಯೋಗ ಪಡಿಸಿಕೊಳ್ಳುವ ಬಗೆಯನ್ನು ವಾಸ್ತು ವಿಜ್ಞಾನ ಬಹಳ ಹಿಂದೆಯೇ ತಿಳಿಸಿದೆ. ಆದ್ದರಿಂದಲೇ ವಾಸ್ತು ಪೂರ್ವ ದಿಕ್ಕಿಗೆ ಎಲ್ಲಿಲ್ಲದ ಪ್ರಾಮುಖ್ಯತೆ ನೀಡಿದೆ. ಪೂರ್ವ ದಿಕ್ಕು ಹಾಗೂ ಸೂರ್ಯನ ಶಕ್ತಿಯನ್ನು ಸದ್ಬಳಕೆ ಮಾಡಿಕೊಳ್ಳುವ ಮೂಲಕ ಪ್ರತಿಯೊಬ್ಬರು ಹೇಗೆ ಪ್ರಯೋಜನವನ್ನು ಪಡೆಯಬಹುದು ಎಂಬುದನ್ನು ತಿಳಿಯೋಣ. ಪೂರ್ವ ದಿಕ್ಕಿಗೆ ರವಿಯ ಉಚ್ಚಸ್ಥಾನವಾದ ಮಧ್ಯದಲ್ಲಿ ಮುಖ್ಯದ್ವಾರ ಇಡುವುದರಿಂದ ಉತ್ತಮ ಮತ್ತು ಅನುಕೂಲ. ಪೂರ್ವದ್ವಾರದ ಮುಂಬಾಗದಲ್ಲಿ ಖಾಲಿ ಜಾಗ ಹೆಚ್ಚಿದ್ದು ತಗ್ಗಾಗಿದ್ದರೆ ಮನೆಯ ಯಜಮಾನನು ಆರೋಗ್ಯವಂತನೂ, ಎಲ್ಲಾ ಕಾರ್ಯಗಳಲ್ಲಿ ಯಶಸ್ಸು, ಅಭಿವೃದ್ಧಿ , ಉನ್ನತ ಪದವಿ, ನಾಯಕತ್ವ ಗುಣ, ಕೀರ್ತಿ ಗೌರವಗಳು ಲಭಿಸುತ್ತದೆ. ಅಕ್ಷಯ ತೃತೀಯ ಕುರಿತು ಶ್ರೀಮಾನ್ ರತ್ನರಾಜ್ ಜೈನ್ ರವರ ಅದ್ಭುತ ಲೇಖನ ಅಕ್ಷಯ ತೃತೀಯ ಉತ್ತಮ ದಿನವೇ? ======================+ ಬಹಳ ಜನ ನನಗೆ ದೂರವಾಣಿ ಕರೆ ಮಾಡಿ ಅಕ್ಷಯ ತೃತೀಯ ಈ ವರ್ಷ ಉತ್ತಮ ಅಲ್ಲ. ಕಾರಣ ಕೃತಿಕೆ ನಕ್ಷತ್ರ ಇದೆ ಎಂದರು. ಆದರೆ ಜ್ಯೋತಿಷ್ಯ ಆಧಾರದಲ್ಲಿ ಪರಿಶೀಲನೆ ಮಾಡಿದಾಗ ಖಂಡಿತ ಉತ್ತಮ ದಿನ. ವಿವರಣೆ ನೀಡುವೆನು. ಕೇಳಿ. ಕೃತಿಕೆ ನಕ್ಷತ್ರ ಬುಧವಾರ ಬಂದರೆ ಅಮೃತಸಿದ್ಧಿ ಯೋಗ. ಇದರ ಫಲದ೦ತೆ ಕೃಷಿ ವರ್ಗದವರಿಗೆ ಸಂತಸ ತರುವ ಕಾಲ. ಅಲ್ಲದೆ ಗುರುವಿನ ದೃಷ್ಟಿ ಮೇಷ ರಾಶಿಗೆ ಎಂದರೆ ಗಜಕೇಸರಿ ಯೋಗ. ಈ ದಿನ ಪಚ್ಚೆ ರತ್ನ (Green emerald) ಧರಿಸಲು ಉತ್ತಮ ದಿನ. ಗಜಕೇಸರಿ ಯೋಗ ಇದ್ದವರು ಈ ದಿನ ಕನಕಪುಷ್ಯರಾಗ ಜೊತೆಗೆ ಮುತ್ತು ರತ್ನ ಸೇರಿಸಿ ತೋರು ಬೆರಳು ಇದರಲ್ಲಿ ಧರಿಸುವುದು. ಕಾರಣ ಗುರು ದೃಷ್ಟಿಯಿಂದ ಶುಭ ದಿನ ಆಗಿದೆ. ಭರಣಿ ಹುಬ್ಬ ಮತ್ತು ಪೂರ್ವ ಆಷಾಢ ನಕ್ಷತ್ರ ದವರಿಗೆ ಸಂಪತ್ತು ತಾರೆ. ಧನ ಪ್ರಾಪ್ತಿ ಯೋಗ.ರೇವತೀ ಆಶ್ಲೇಷ ಮತ್ತು ಜ್ಯೇಷ್ಠ ನಕ್ಷತ್ರ ದವರಿಗೆ ಕ್ಷೇಮ ತಾರೆ ಯಲ್ಲಿ ಗಜಕೇಸರಿ ಯೋಗ. ಮನೆ ವಾಹನ ನಿವೇಶನ ಖರೀದಿ ಯೋಗ. ವಿವಾಹ ಭಾಗ್ಯ ಯೋಗ. ಪೂರ್ವ ಬಾದ್ರ ಪುನರ್ವಸು ಮತ್ತು ವಿಶಾಖಾ ದವರಿಗೆ ಸಾದಕ ತಾರೆ ಎಂದರೆ ಎನಿಸಿದ ಕಾರ್ಯ ಆಗುವುದು. ರಾಜಕಾರಣಿಗಳಿಗೆ ಅಧಿಕಾರ ಪ್ರಾಪ್ತಿ ಯೋಗ. ಹಾಗಾಗಿ ಈ ದಿನ ಮೇಲೆ ಸೂಚಿಸಿದ ಎಲ್ಲಾ ನಕ್ಷತ್ರ ದವರಿಗೆ ಶುಭೋದಯಕ. ಈ ದಿನ ಹಿಂದು ಧರ್ಮದ ಜನ ಆದರೆ ಈ ಮ೦ತ್ರ ಹೇಳಿ ಆಭರಣ ಧರಿಸಿ. ಓಂ ಹ್ರೀಂಶ್ರೀ ಸುಭ್ರಮಣ್ಯ ದೇವಾಯ ಆಭರಣ ಧಾರಣ೦ ಕರೋಮಿ ಸ್ವಾಹ ಎ೦ದು ಹೇಳಿ ಧರಿಸಿರಿ. ಕೃಷಿ ವರ್ಗ ದವರಿಗೆ ಈ ಮ೦ತ್ರ. ಓಂ ಹ್ರೀಂಶ್ರೀ ಸುಭ್ರಮಣ್ಯ ದೇವ ನಮಸ್ತುಭ್ಯಂ ವರದೇ ಕಾಮರೂಪಿಣಿ ಕೃಷಿ ಕಾರ್ಯಾರಂಭಂ ಕರಿಷ್ಯಾಮಿ ಸಿದ್ಧೀರ್ಭವತು ಮೇ ಸದಾ ಎಂದು ಹೇಳಿ. ಜೈನರು ಆದರೆ ಈ ಮ೦ತ್ರ ಪಠಣ ಮಾಡಿ. ಓಂ ಹ್ರೀಂಶ್ರೀ ಮೇಷ ಲಾ೦ಛನ ಸ್ಥಿತಃ ಶ್ರೀ ಕು೦ಥುನಾಥ ಸ್ವಾಮಿ ಜಿನೇ೦ದ್ರಾಯ ಹ್ರೀಂಶ್ರಿ ಗಂಧರ್ವ ಯಕ್ಷ ಜಯದೇವಿ ಯಕ್ಷಿಣಿ ಸಹಿತಾಯ ಮಮ ಶಾಂತಿಂ ಕುರು ಕುರು ಕಾಂತಿಂ ಕುರು ಕುರು ಪುಷ್ಟೀಂ ಕುರು ಕುರು ಸರ್ವ ವಿಘ್ನ ವಿನಾಶನಂ ಕುರು ಕುರು ಆಯುರಾರೋಗ್ಯ ಸ೦ಪತ್ ಕೀರ್ತಿ ಕುರು ಕುರು ಸ್ವಾಹ ಎಂದು ಹೇಳಿ ನಿಮ್ಮ ಕಾರ್ಯ ಮುಂದುವರಿಸಿ. ತರ್ಕ ಮಾಡುವವರು ಮಾತಾಡಿ ಸ್ವಾಗತ.... ರತ್ನರಾಜ ಜೈನ್ ಶ್ರೀಮುಖ ಬೆಂಗಳೂರು ೯೯೪೫೩ ೫೦೫೮೬

ಅಭೀಂದ್ರ ರಾಮಮೂರ್ತಿ 9845347963 9341035841 Naadi Astrologer

ಶುಕ್ರ ಮತ್ತು ಚಂದ್ರನ ಯುತಿಯು ಜಾತಕನನ್ನು ಮೇಲಿನಿಂದ ಒಮ್ಮೆಗೆ ಕೆಳಗೆ ತಳ್ಳಿ ಬಿಡುತ್ತದೆ . ಚಂದ್ರನು ಶುಕ್ರನ ಮನೆ ಅಥವಾ ಶುಕ್ರನ ನಕ್ಷತ್ರಗಳಲ್ಲಿ ಸ್ಥಿತವಾಗಿದ್ರೆ ಅಥವಾ ಶುಕ್ರನು ಚಂದ್ರನ ನಕ್ಷತ್ರ ಅಥವಾ ಚಂದ್ರನ ಮನೆಯಲ್ಲಿ ಇರುವುದು , ಇಲ್ಲಾ ಶುಕ್ರ ಚಂದ್ರರಿಗೆ ಪರಿವರ್ತನಾ ಯೋಗ ಜಾತಕದಲ್ಲಿದ್ರೆ , ಅವರು ತಮಗೆ ಗೊತ್ತಿಲ್ಲದೇ ಸಾಲದ ಸುಳಿಯಲ್ಲಿ ಸಿಕ್ಕಿ ಹಾಕಿಕೊಳ್ಳುತ್ತಾರೆ . ಸಾಲವನ್ನು ಏಕೆ ಮಾಡಿದೆ ಎಂಬುದು ಗೊತ್ತಾಗುವ ಹೊತ್ತಿಗೆ ಹೊರಗೆ ಬಾರದ ಹಾಗೇ ಆಗಿರುತ್ತಾರೆ . ಇಲ್ಲಿ ಒಂದು ಮುಖ್ಯವಾಗಿರುವ ಪಾಯಿಂಟ್ ಶುಕ್ರ ಚಂದ್ರ ಯೋಗದವರು ಎಲ್ಲಿಯೇ ಹೋದ್ರು ಇವರಿಗೆ ಕರೆದು ಹಣ ಕೊಡುವವರು ಸಿಕ್ಕುತ್ತಾರೆ . ಅದರಿಂದ ಇವರು ಒಬ್ಬರಾದ ಮೇಲೆ ಒಬ್ಬರು ಅಂತ ಎಲ್ಲಿಯೆಲ್ಲಿ ಹಣ ಸಿಕ್ಕುತ್ತೆ ಅಲ್ಲೆಲ್ಲ ಹಣವನ್ನು ಪಡೆದು ಕೊಂಡು ಸಾಲಗಾರರಾಗುತ್ತಾರೆ . ಎಷ್ಟೋ ಸಾರಿ ಈ ಯೋಗದವರು ಯಾರಿಗೋ ಶೂರಿಟಿ ಹಾಕಿ ತಮ್ಮೆಲ್ಲ ಆಸ್ತಿಯನ್ನು ಕಳೆದು ಕೊಳ್ಳೋದೇ ಹೆಚ್ಚು . ಯಾರಮನೆಯಲ್ಲಿ ನೀರು ಹೆಚ್ಚಾಗಿ ಸೋರಿಹೋಗುತ್ತೋ ಅವರಿಗೆ ಶುಕ್ರ ಚಂದ್ರ ಯೋಗವಿರುತ್ತೆ . ಇಲ್ಲಾ ಅಗ್ನಿ ಮೂಲೆಯಲ್ಲಿ ನೀರಿನ ಟ್ಯಾಪ್ ಇರಬಹುದು . ಅಥವಾ ನೈರುತ್ಯದಲ್ಲಿ ಬಚ್ಚಲು ಇರುತ್ತೆ ಇಂದಿನ ಪ್ರಶ್ನೆ , ಹಿತಶತ್ರುಗಳು . ಮುಖ್ಯವಾಗಿ ಪರಾಶರ ಪದ್ಧತಿ ಪ್ರಕಾರ 6 ನೇ ಅಧಿಪತಿ ಮತ್ತು 6 ನೇ ಭಾವ ಶತ್ರುವನ್ನು ಸೂಚಿಸುತ್ತಾರೆ . 6 ನೇ ಅಧಿಪತಿಯ ಸ್ಥಿತಿಯನ್ನು ನೋಡಿ ಯಾವ ರೀತಿಯ ಶತೃ ಅಂತ ತಿಳಿಯಬೇಕು . ಲಗ್ನಾಧಿಪತಿ 6 ನೇ ಭಾವದಲ್ಲಿದ್ರೆ ಜಾತಕನು ತನಗೆ ತಾನೇ ಶತೃವಾಗುತ್ತಾನೆ . ಅಂದ್ರೆ ಜಾತಕನು ಮಾಡುವ ಯಡವಟ್ಟೇ ಅವನಿಗೆ ಶತ್ರುವಾಗುತ್ತೆ . ರವಿ 6 ರಾಲಿದ್ರೆ ತಂದೆಯೇ ಶತ್ರುವಾಗುತ್ತಾರೆ . ಚಂದ್ರನಿದ್ರೆ ಅಮ್ಮ , ಶುಕ್ರನಿದ್ರೆ ಹೆಂಡತಿ ಮತ್ತು ಮಗಳು , ಶನಿ ಆದ್ರೆ ಕೆಲಸಗಾರರು , ರವಿಯಿದ್ರೆ ಮೇಲಾಧಿಕಾರಿಯೂ ಶತೃ ಆಗುತ್ತಾರೆ . ಹೀಗೇ ಯಾರು ಶತೃ ಅಂತ ನೋಡಬೇಕು . ನಾಡಿ ಪ್ರಕಾರ ಕುಜನು ಗುರುವಿನ ಜ್ಯೋತೆ ಇದ್ರೆ ಇವರಿಗೆ ಹಿತಾ ಶತ್ರುಗಳು ಜಾಸ್ತಿ . ಕುಜನ ಜ್ಯೋತೆ ಬುಧನಿದ್ರೆ ಬಂದುಗಳು ಶತ್ರುಗಳು , ಕುಜನ ಜ್ಯೋತೆ ಶುಕ್ರನಿದ್ರೆ ಗಂಡನಿಗೆ ಹೆಂಡತಿ ಹೆಂಡತಿಗೆ ಗಂಡ ಶತೃ ಆಗುತ್ತಾರೆ . ಕುಜನ ಜ್ಯೋತೆ ಶನಿ ಇದ್ರೆ ಜ್ಯೋತೆಯಲ್ಲಿ ಕೆಲಸ ಮಾಡುವವರು ಶತ್ರುವಾಗಿರುತ್ತಾರೆ ಸ್ನೇಹಿತರೇ , ಜಿಪುಣ ಗ್ರಹ ಅಂದ್ರೆ ಶನಿ ಮಹಾರಾಜ್ . ಶನಿ ಲಗ್ನದಲ್ಲಿದ್ರೆ ಜಾತಕನು ಜಿಪುಣ , ಶನಿ ಪಂಚಮ ಮಕ್ಕಳು ಜಿಪುಣರು , ಚತುರ್ಥ ಅಮ್ಮ , ನವಮ ತಂದೆ , ಸಪ್ತಮ ಹೆಂಡತಿ , ಹೀಗೆ ಜಿಪುಣತನವನ್ನು ಶನಿ ಕೊಡುತ್ತಾನೆ . ಗುರುವಿನ ಜ್ಯೋತೆ ಇದ್ರೆ ಜಾತಕನು ಜಿಪುಣ ಆಗಿರುತ್ತಾನೆ ಇಲಂದ್ರೆ ಅವನ ಹತ್ರ ಕೊಡೋಕೆ ಹಣವಿರೋದಿಲ್ಲ . ಹಾಗೆಯೇ ಶುಕ್ರನ ಜ್ಯೋತೆ ಶನಿ ಇದ್ರೆ ಹೆಂಡತಿ ಅಥವಾ ಮಗಳು ಜಿಪುಣಿ . ಶನಿ ಚಂದ್ರನ ಜ್ಯೋತೆ ಇದ್ರೆ ಅಮ್ಮ ಜಿಪುಣಿ ಆಗಿರುತ್ತಾಳೆ ಯಾರದೇ ಜಾತಕದಲ್ಲಿ ಕುಜ ಮತ್ತು ಚಂದ್ರರು ಸೇರಿದರೆ ಅಥವಾ ಚಂದ್ರನ ನಕ್ಶತ್ರದಲ್ಲಿ ಕುಜನಿದ್ರೆ , ಅಥವಾ ಕುಜನ ನಕ್ಷತ್ರದಲ್ಲಿ ಚಂದ್ರನಿದ್ರೆ ಅಥವಾ ಕುಜನು ಚಂದ್ರನ ಮನೆಯಲ್ಲಿದ್ರೆ ಅಥವಾ ಚಂದ್ರನು ಕುಜನ ಮನೆಯಲ್ಲಿದ್ರೆ ಶಶಿ ಮಂಗಳ ಯೋಗವಾಗುತ್ತೆ . ಹಾಗೆಯೆ ಆ ಜಾತಕನ ಹಸ್ತದಲ್ಲಿ ಎಮ್ ಮಾರ್ಕ್ ಇರುತ್ತೆ . ಅಂದ್ರೆ ಇವರು ಯಾವಾಗ ದುಡ್ಡಿನ ಬಗ್ಗೆ ಹೆಚ್ಚಾಗಿ ಚಿಂತೆ ಮಾಡುತ್ತಾರೆ ಆಗ ಅವರಿಗೆ ಹಣ ಒದಗಿ ಬರುತ್ತೆ . ಸಮಯಕ್ಕೆ ಸರಿಯಾಗಿ ಹಣ ಬರುತ್ತೆ . ಜಾತಕನಿಗೆ ಲಗ್ನ , ಪಂಚಮ ಮತ್ತು ನವಮ ಭಾವದಲ್ಲಿ ಸ್ಥಿತ ಗ್ರಹ ಯಾವುದೇ ಇರಬಹುದು ಅಂದ್ರೆ ಬಾಧಕಾಧಿಪತಿ ಇರಬಹುದು , ಮಾರಕಾಧಿಪತಿ ಇರಬಹುದು ಅಥವಾ ಯೋಗ ಕಾರಕ ಗ್ರಹವೇ ಇರಬಹುದು ಅವರ ಭುಕ್ತಿಯಲ್ಲಿ ಜಾತಕನಿಗೆ ಅರೋಗ್ಯ ತೊಂದ್ರೆ ಬರುವುದಿಲ್ಲ . ಒಂದುವೇಳೆ ಹಳೆಯ ಯಾವುದೇ ಖಾಯಿಲೆ ಇದ್ದರು ಕೂಡ ಅದು ವಾಸಿಯಾಗುತ್ತೆ . ಆದ್ರೆ ಈ ಭುಕ್ತಿ ನಡೆಯುವಾಗ ಜಾತಕನಿಗೆ ಹಣಕಾಸಿನ ತೊಂದ್ರೆ ಮಾತ್ರ ಜಾಸ್ತಿ ಇರುತ್ತೆ ಹಾಗೆಯೇ ಮಾನಸಿಕ ಟೆನ್ಷನ್ ಇರುತ್ತೆ . ರಾಹು ಕೇತು ಬಗ್ಗೆ ಹೇಳಬೇಕಂದ್ರೆ , ಯಾರಿಗೆ ಮೋಕ್ಷದ ಕಡೆ ಹೆಚ್ಚು ಒಲವು ಇರುತ್ತೋ ಅವರಿಗೆ ಕೇತು ಗ್ರಹವು ಬೆನೆಫಿಕ್ ಗ್ರಹವಾಗಿ ಕಾಣುತ್ತಾನೆ ಯಾಕಂದ್ರೆ ಕೇತುವು ಜಾತಕನ ಆಸೆಗಳನ್ನು ಆದಷ್ಟು ಕಟ್ ಮಾಡಿ ಅವನನ್ನು ಮೋಕ್ಷದ ದಾರಿಯಲ್ಲಿ ಕರೆದು ಕೊಂಡು ಹೋಗುತ್ತಾನೆ . ಕೇತುವಿಗೆ ಗುರುವಿನ ಸಂಬಂಧ ಇದ್ರೆ ಇನ್ನು ಸುಲಭವಾಗಿ ಮೋಕ್ಷದ ದಾರಿಯಲ್ಲಿ ಕರೆದೊಯುತ್ತಾನೆ . ಗುರು ಕೇತು ಒಟ್ಟಿಗೆ ಇದ್ದಾಗ ಜಾತಕನನ್ನು ಬಲವಂತವಾಗಿ ಮೋಕ್ಷದ ಕಡೆಗೆ ಕರೆದೊಯುತ್ತಾರೆ . ಆಗ ನಮಗೆ ಕೇತು ಗ್ರಹವು ಪಾಪ ಗ್ರಹವಾಗಿ ಕಾಣುತ್ತದೆ . ಶುಭೋಧಯ ಸ್ನೇಹಿತರೇ , ನಾನೂ ಇಂದು ನಿಮಗೆ ಹೇಳಹೊರಟಿರೋದು ಜಾತಕದಲ್ಲಿಯ ವಿಷ ಯೋಗದ ಬಗ್ಯೆ . ನಾನು ಪಾಠಮಾಡುವಾಗ ನನಗೆ ಮೊದಲು ನೆನಪಿಗೆ ಬರೋದೇ ಶನಿ ಚಂದ್ರ ಯೋಗ . ಇದು ಒಂದು ವಿಷ ಯೋಗ . ನನ್ನ ಹಿಂದಿನಿಂದ ನನ್ನ ಶಿಷ್ಯರು ಮಾತಾಡಿದು ಕೇಳಿಸಿ ಕೊಂಡಿದ್ದೇನೆ , ಅದು ನಮ್ಮ ಗುರುಗಳಿಗೆ ಶನಿ ಚಂದ್ರ ಯೋಗ ಬಿಟ್ರೆ ಬೇರೆ ಮಾತಾಡೋದಿಲ್ಲ ಅಂತ . ಅದು ಕೂಡ ಸರಿ . ಯಾಕಂದ್ರೆ ಎಲ್ಲಾ ಯೋಗಗಳನ್ನು ತುಳಿದು ಮೇಲೆ ನಿಲ್ಲುವ ಯೋಗವೇ ಈ ವಿಷ ಯೋಗ . ನನ್ನ ಪ್ರತಿ ಕ್ಲಾಸ್ ನಲ್ಲಿ ಇದನ್ನು ಹೇಳುತ್ತೇನೆ . ನನ್ನ ಹದಿನೈದು ವರುಷದ ಜ್ಯೋತಿಷ್ಯ ಶಾಸ್ತ್ರದ ಅನುಭವ ಕೂಡ ಆಗಿದೆ . ಹಾಗಾದ್ರೆ ಏನು ಇದು ವಿಷ ಯೋಗ ಮತ್ತು ಹೇಗೆ ನಮ್ಮಗಳ ಮೇಲೆ ಹೇಗೆ ಪರಿಣಾಮ ಉಂಟಾಗುತ್ತೆ ನೋಡೋಣ ಅಲ್ವ? . ಶನಿ ಮತ್ತು ಚಂದ್ರರ ಯುತಿಯೇ ಶನಿ ಚಂದ್ರ ಯೋಗ ಅಥವಾ ವಿಷ ಯೋಗ . ಬೇರೆ ಬೇರೆ ರೀತಿಯಲ್ಲಿ ಈ ಯೋಗ ಉಂಟಾಗುತ್ತೆ ಹಾಗಾಗಿ ಇದರ ಪರಿಣಾಮ ಕೂಡ ಬೇರೆ ಬೇರೆ ತರಹ ಇರುತ್ತೆ . ಶನಿ ಚಂದ್ರನ ನಕ್ಷತ್ರದಲ್ಲಿ ಇದ್ರೆ ಅಥವಾ ಚಂದ್ರ ಶನಿ ನಕ್ಷತ್ರದಲ್ಲಿದ್ರೆ , ಶನಿ ಚಂದ್ರನ ಮನೇಲಿದ್ರೆ ಅಥವಾ ಚಂದ್ರ ಶನಿ ಮನೇಲಿದ್ರೆ . ಶನಿ ಮತ್ತು ಚಂದ್ರನಿಗೆ ಪರಿವರ್ತನಾ ಯೋಗವಿದ್ರೆ , ಶನಿಯ ದೃಷ್ಟಿಯು ಚಂದ್ರನ ಮೇಲಿದ್ರೆ ಹೀಗೆ ಅನೇಕ ರೀತಿಯ ಶನಿ ಚಂದ್ರ ಯೋಗ ಜಾತಕದಲ್ಲಿ ಉಂಟಾಗುತ್ತೆ . ಈ ಯೋಗವು ಗಂಡನ ಜಾತಕದಲ್ಲೇ ಇರಲಿ ಅಥವಾ ಹೆಂಡತಿಯ ಜಾತಕದಲ್ಲೇ ಇರಲಿ ಒಟ್ಟಾರೆಯಾಗಿ ಹೆಂಡತಿಯು ದಿನ ಕಣ್ಣೀರಿನಲ್ಲಿ ಕೈ ತೊಳೆಯುತ್ತಾಳೆ . ಈ ಯೋಗವು ಪೂರ್ತಿ ಕುಟುಂಬವನ್ನೇ ದುಃಖಕ್ಕೆ ಗುರಿ ಮಾಡುತ್ತೆ . ಈ ಯೋಗವಿರುವ ಕುಟುಂಬಕ್ಕೆ ಹೆಣ್ಣು ಕೊಟ್ಟ ತಂದೆ ತಾಯಿಯರು ತಮ್ಮ ಮಗಳ ಮದುವೆಯಾದ ಮೇಲೆ ಬೀಗರ ಮನೆಗೆ ಹೋಗುವುದೇ ಕಮ್ಮಿ ಕಾರಣ ಹೆಣ್ಣಿನ ಮಾತಾ ಪಿತೃಗಳಿಗೆ ಅಲ್ಲಿ ಗೌರವ ಕಮ್ಮಿ , ಹಾಗಾಗಿ ಅವರು ಮಗಳ ಅಳಿಯನ ಮನೆಗೆ ಹೋಗೋದು ಕಮ್ಮಿ ಮಾಡುತ್ತಾರೆ . ಎಷ್ಟೋ ಸಾರಿ ಮಗಳೇ ಅಪ್ಪ ಅಮ್ಮನಿಗೆ ನಮ್ಮ ಮನೆಗೆ ಬರಬೇಡಿ ಅಂತ ಹೇಳುವ ಸಂಭವ ಕೂಡ ಜಾಸ್ತಿ ಇರುತ್ತೆ . ಈ ಯೋಗವಿದ್ರೆ ಆ ಮನೆಯ ಸ್ತ್ರೀಯರಿಗೆ ಮಂಡಿ ನೋವು ಹೆಚ್ಚಾಗಿ ಕಾಡಿಸುತ್ತೆ . ಸೊಸೆ ಕೊಟ್ಟ ಯಾವುದೇ ತೀರ್ಥ ಪ್ರಸಾದವಾಗಲಿ ಅತ್ತೆ ಮಾವ ತಿನ್ನೋದಿಲ್ಲ . ಎಷ್ಟೋಸಾರಿ ಸೊಸೆ ಅವರ ತಂದೆ ಮನೆಯಿಂದ ತಂದ ಪದಾರ್ಥಗಳನ್ನು ಹಾಗೇ ಹಾಳುಮಾಡಿ ಸೊಸೆಯ ಕಣ್ಣು ಮುಂದೆಯೇ ಎಸೆಯುತ್ತಾರೆ . ಈ ಯೋಗವಿದ್ರೆ ಗಂಡನು ತನ್ನ ಅಕ್ಕ ತಂಗಿಯರು ಮತ್ತು ಅಮ್ಮನ ಮಾತಿಗೆ ಹೆಚ್ಚಿನ ಬೆಲೆಯನ್ನು ಕೊಟ್ಟು ಹೆಂಡತಿಯನ್ನು ತಿರಸ್ಕಾರ ವಾಗಿ ನೋಡುತ್ತಾರೆ . ಎಷ್ಟೋ ಸಾರಿ ಸೊಸೆಯು ಬೇಜಾರಾಗಿ ಉಪವಾಸ ಮಲುಗೋದೇ ಹೆಚ್ಚು ಇರುತ್ತೆ . ಸರಿಯಾಗಿ ಹೇಳಬೇಕಂದ್ರೆ ಅತ್ತೆಗೆ ಸೊಸೆ ಮತ್ತು ಸೊಸೆಯ ಮನೆಯವರನ್ನು ದೂರೋದೇ ಹೆಚ್ಚಾಗಿರುತ್ತೆ . ಈ ಯೋಗವಿರುವ ಗಂಡಂದಿರು ತಮ್ಮ ಹೆಂಡತಿಯನ್ನು ಕೆಲಸಕ್ಕೆ ಕಳಿಸೋದಿಲ್ಲ ಅವರಿಗೆ ತುಂಬಾ ಅನುಮಾನದ ಮನಸು . ಹೆಂಡತಿಯನ್ನು ಹೊರಗಡೆ ಕಳಿಸಲ್ಲ . ತವರು ಮನೆಗೆ ಕೂಡ . ಇವರಿಗೆ ಫ್ಯೂಚರ್ ಅಂದ್ರೆ ಭಯ ಜಾಸ್ತಿ . ಹೆಚ್ಚಾಗಿ ಈ ಯೋಗವಿರುವ ಸ್ತ್ರೀಯರು ಗಂಡನ ಮನೆಯಿಂದ ಒಂದು ಸಾರಿ ತಪ್ಪಿಸಿ ಕೊಂಡ್ರೆ ಸಾಕು ಅನ್ನುವ ರೀತಿಯಲ್ಲಿ ಇರುತ್ತಾರೆ . ತಂದೆಯ ಮನೆಯಲ್ಲಿ ಸ್ವಲ್ಪ ಅನುಕೂಲವಿದ್ರೆ ತವರಿಗೆ ಬಂದ ಹೆಣ್ಣು ಮಗಳು ವಾಪಸು ಗಂಡನ ಮನೆಗೆ ಹೋಗೋದಿಲ್ಲ . ಅವರು ನೆಕ್ಸ್ಟ್ ಹೋಗೋದು ಕೋರ್ಟಿಗೆ . ಈ ಯೋಗವಿರುವವರು ಧರಿಸುವ ಚಪ್ಪಲಿಯಲ್ಲಿ ಎಡಗಾಲಿನ ಚಪ್ಪಲಿಯೂ ಹೆಚ್ಚಾಗಿ ಸವೆದಿರುತ್ತೆ ಅಂದ್ರೆ ಚಪ್ಪಲಿಯನ್ನು ನೋಡಿಯೂ ಕೂಡ ನಾವು ಇವರಿಗೆ ವಿಷ ಯೋಗವಿದೆಯೇ ಅಂತ ಹೇಳಬಹುದು . ಶನಿ ಚಂದ್ರ ಯೋಗವನ್ನು ಬೇರೆ ರೀತಿಯಲ್ಲೂ ಕೂಡ ವಿವರಣೆ ಕೊಡಬಹುದು . ನಾನು ನೋಡಿರುವ ಬಹುತೇಕ ಯೋಗಿಗಳ , ಸನ್ಯಾಸಿಗಳ ಮತ್ತು ಯತಿಗಳ ಕುಂಡಲಿಯಲ್ಲಿ ಈ ಯೋಗವು ತುಂಭಾ ಸ್ಟ್ರಾಂಗ್ ಆಗಿ ಕಂಡು ಬಂದಿರುತ್ತೆ . ಈ ಯೋಗವು ಯಾವುದೇ ಸನ್ಯಾಸಿ ಅಥವಾ ಯತಿಗಳಿಗೆ ಕೆಟ್ಟದನ್ನು ಮಾಡುವುದಿಲ್ಲ . ಶನಿ ಚಂದ್ರ ಯೋಗವೇ ಒಂದು ಸನ್ಯಾಸಿ ಯೋಗ . ಹಾಗಾಗಿ ಇದು ಸಂಸಾರಿಗಳಿಗೆ ದುಃಖವನ್ನು ಕೊಡುತ್ತೆ . ಕಾರಣಗಳನ್ನು ಮುಂದಿನ ದಿನಗಳಲ್ಲಿ ತಿಳಿಸುತ್ತೇನೆ . ಕರ್ಮಕಾರಕ ಶನಿಯೇ ಆದ್ರೂ ಕೂಡ ನಮ್ಮ ಕರ್ಮಗಳನ್ನು ಮುಂದಿನ ಜನ್ಮಕ್ಕೆ ತೆಗೆದು ಕೊಂಡು ಹೋಗುವವನು ಚಂದ್ರನೇ ಆಗಿದ್ದಾನೆ . ಶನಿ ಚಂದ್ರ ಯೋಗಕ್ಕೆ ಪರಿಹಾರಗಳು . ಶನಿ ದೇವರು ತಾಯಿಯನ್ನು ಹೆಚ್ಚಾಗಿ ಪ್ರೀತಿಸುತ್ತಾರೆ ಆದ್ದರಿಂದ ತಾಯಿ ಅಥವಾ ತಾಯಿಸಮಾನರಾದ ಸ್ತ್ರೀಗೆ ಪಾದ ಮುಟ್ಟಿ ನಮಸ್ಕಾರ ಮಾಡಿ ಆಶೀರ್ವಾದ ಪಡೆಯುವುದು . ಚಂದ್ರ ಅಂದ್ರೆ ಹಾಲು , ಮೊಸರು , ಉಪ್ಪು , ಬೆಳ್ಳಿ , ನೀರು ಹೀಗೆ , ನೀರನ್ನು ಬೆಳ್ಳಿ ಲೋಟದಲ್ಲಿ ಕುಡಿಯುವುದು , ಚಂದ್ರಮಣಿ ಉಂಗುರ ದರಿಸೋದು , ಶನಿವಾರದ ದಿವಸ ಸ್ನಾನ ಮಾಡೋ ನೀರಿಗೆ ಸ್ವಲ್ಪ ಕಲ್ಲುಪ್ಪು ಹಾಕಿಕೊಂಡು ಸ್ನಾನ ಮಾಡೋದು . ಶನಿ ದೇವರು ಈಶ್ವರನ ಅಂಶ ಚಂದ್ರನ ವಾರ ಸೋಮವಾರ ಹಾಗಾಗಿ ಸೋಮವಾರದ ದಿವಸ ಈಶ್ವರನಿಗೆ ಹಾಲು ಮೊಸರು ರುದ್ರಾಭಿಷೇಕ ಮಾಡಿಸೋದು . ಚಂದ್ರನು ಮುಖ್ಯವಾಗಿ ಮನಸ್ಸಿಗೆ ಕಾರಕ ಆದ್ದರಿಂದ ಮನಸ್ಸನ್ನು ಶುದ್ಧವಾಗಿಟ್ಟು ಕೊಳ್ಳೋದು , ಹಾಗೆ ಶನಿಯು ಹಳೆಯ ಮತ್ತು ಕಳೆದು ಹೋದ ವಿಚಾರಗಳಿಗೆ ಕಾರಕ ಆದ್ದರಿಂದ ನಾವು ಮುಗಿದು ಹೋದ ಘಟನೆಗಳನ್ನು ನೆನಪು ಮಾಡಿಕೊಂಡು ದುಃಖ ಪಡಬಾರದು . ಶನಿಯು ಮನೆಯಲ್ಲಿಯ ಬೇಡವಾದ ವಸ್ತುಗಳಿಗೆ ಕಾರಕನು ಆದ್ದರಿಂದ ಬೇಡವಾದ ವಸ್ತುಗಳನ್ನು ಮನೆಯಿಂದ ಹೊರಗೆ ಹಾಕುವುದು , ಹೀಗೆ ಅನೇಕ ಪರಿಹಾರಗಳು ಇವೆ . ಮಾಡಿ ನೋಡಿ , ಎಲ್ಲರಿಗೂ ಒಳ್ಳೆಯದಾಗಲಿ ಒಂಬತ್ತನೇ ಅಧಿಪತಿ ಲಗ್ನದಲ್ಲಿ ಅಥವಾ ಲಗ್ನಾಧಿಪತಿ ಒಂಬತ್ತನೇ ಮನೆಯಲ್ಲಿ ಇದ್ದರೆ ಅಥವಾ ಒಂಬತ್ತನೇ ಅಧಿಪತಿ ಲಗ್ನ ಅಥವಾ ಲಗ್ನಾಧಿಪತಿಯನ್ನು ನೋಡಿದ್ರೆ , ಜಾತಕನಿಗೆ ಜೀವದಲ್ಲಿ ಸುಖಕ್ಕಿಂತ ದುಃಖವೇ ಜಾಸ್ತಿ ಇರುತ್ತೆ . ಜಾತಕನಿಗೆ ಮೋಕ್ಷ ಯೋಗವಿರುತ್ತೆ ಸ್ತ್ರೀ ಜಾತಕದಲ್ಲಿ ಶನಿಯು ಕುಜನನ್ನು ನೋಡಿದ್ರೆ ಮತ್ತು ಗಂಡನ ಜಾತಕದಲ್ಲಿ ಶನಿಯು ಶುಕ್ರನನ್ನು ನೋಡಿದ್ರೆ ಅವಳ ಗಂಡನಿಗೆ ಎರಡನೇ ಸಂಬಂಧವಿರುವ ಸಾಧ್ಯತೆ ಹೆಚ್ಚು ಇರುತ್ತೆ ಸ್ತ್ರೀ ಜಾತಕದಲ್ಲಿ ಕುಜನು ರಾಹುವಿನ ಸಂಬಂಧ ಹೊಂದಿದ್ದು ಶನಿಯಿಂದ ನೋಡಲ್ಪಟ್ಟರೆ , ಜಾತಕಳಿಗೆ ಗಂಡನಿಂದ ಸಂಸಾರ ಸುಖ ಕಮ್ಮಿ ಇರುತ್ತೆ . ಅದೇ ಕುಜನಿಗೆ ಗುರು ಅಥವಾ ಬುಧನ ಸಂಬಂಧ ಬಂದಾಗ ಜಾತಕಿಯು ಮನೆಯಲ್ಲಿ ಸಿಗದ ಸುಖವನ್ನು ಬೇರೆಕಡೆಯಿಂದ ಪಡೆದು ಕೊಳ್ಳುತ್ತಾಳೆ . ಆದ್ರೆ ಕುಜನಿಗೆ ರಾಹು ಸಂಬಂಧ ಬಂದಾಗ ಗಂಡನು ಹೆಂಡತಿಯನ್ನು ನಂಬುವುದು ಕಮ್ಮಿಯಾಗುತ್ತೆ . ಯಾವಾಗಲು ಅನುಮಾನ ಪಡುತ್ತಾನೆ . ಒಂದು ವೇಳೆ ಕುಜನಿಗೆ ರಾಹು ಸಂಬಂಧ ಇದ್ದು ಅದಕ್ಕೆ ಶನಿ ಚಂದ್ರರ ಸಂಬಂಧವು ಬಂದಾಗ ಹೆಂಡತಿಯನ್ನು ತುಂಭಾ ಕೀಳಾಗಿ ಕಾಣುತ್ತಾರೆ . ರಾಹು ನಕ್ಷತ್ರ ಮತ್ತು ಕೇತು ನಕ್ಷತ್ರ ದವರು ಹೆಚ್ಚಿನ ಆಯಸ್ಸು ಹೊಂದಿರುತ್ತಾರೆ . ಕಾರಣ ಅವರುಗಳು ತಮ್ಮ ಹಿಂದಿನ ಜನುಮದಲ್ಲಿ ತಮ್ಮ ಕರ್ಮಗಳನ್ನು ಮುಗಿಸಿರೋದಿಲ್ಲ . ಅವರುಗಳು ಆಕ್ಸಿಡೆಂಟಲ್ ಡೆತ್ ಆಗಿರುತ್ತಾರೆ . ಈ ಜನುಮದಲ್ಲಿಯೂ ಕೂಡ ಅವರುಗಳು ತಮ್ಮ ಸಂತಾನ ತಮ್ಮ ಕಣ್ಣೆದಿರಿಗೆ ಹಾಳಾಗುವುದನ್ನು ಕಂಡು ಕೊರಗುತ್ತಾರೆ . ಅಥವಾ ಎಷ್ಟೋ ಸಾರಿ ಮಕ್ಕಳು ಅಪಘಾತವಾಗುವುದು ಕೂಡ ಅವರ ಕಣ್ಣೆದಿರಿಗೆ ನಡೆಯುತ್ತೆ . ಆ ನೋವ್ವು ಅವರಿಗೆ ಮಾತ್ರವೇ ಗೊತ್ತಿರುತ್ತೆ . ಅಂದ್ರೆ ನಾನು ಹೇಳ ಹೊರಟಿರೋದು ಯಾರೇ ಆಗಲಿ ಸುಯಿಸೈಡ್ ಮಾಡಿಕೊಂಡ್ರೆ ಅವರು ಮುಂದಿನ ಜನುಮದಲ್ಲಿ ರಾಹು ಕೇತು ನಕ್ಷತ್ರದಲ್ಲಿ ಹುಟ್ಟುತ್ತಾರೆ ಮತ್ತು ಜೀವನವೆಲ್ಲ ದುಃಖ ಪಡುತ್ತಾರೆ . 4 - 13 - 22 - 31 ತಾರೀಕು ರಾಹು ಗ್ರಹವನ್ನು ಸೂಚಿಸುತ್ತೆ . ರಾಹು ಗ್ರಹವು ನಮಗೆ ಬ್ರಮೆಯನ್ನುಂಟು ಮಾಡುತ್ತೆ . ಆದ್ದರಿಂದ ಯಾವುದೇ ಶುಭ ಕಾರ್ಯಗಳಿಗೆ ಈ ಸಂಖ್ಯೆ ಒಳ್ಳೆಯದಲ್ಲ . ರಾಹುವೆಂದ್ರೆ ಊಹಾಪೋಹ ಅಂದ್ರೆ ಮೋಸ ಹೋಗುವ ಸಂಭವವೇ ಹೆಚ್ಚು . ಆದ್ದರಿಂದಲೇ ಹಿರಿಯರು ರಾಹುಕಾಲದಲ್ಲಿ ಯಾವುದೇ ಶುಭ ಕಾರ್ಯವನ್ನು ಮಾಡುತ್ತಿರಲಿಲ್ಲ . ರಾಹುವಿನ ಸಂಖ್ಯೆಯಾದ 4 - 13 - 22 - 31 ತಾರೀಕಿನಂದು ಒಂದಲ್ಲ ಒಂದು ಘಟನೆಗಳು ನಡೆದೇ ನಡೆಯುತ್ತೆ . ಬಸ್ ಬಂದು , ರಸ್ತೆ ಬಂದು , ಸ್ಟ್ರೈಕ್ , ಯಾರೋ ಸತ್ತಿರೋ ಸುದ್ದಿಗಳಿಂದ ಕಾರ್ಯಕ್ರಮ ನಿಲ್ಲೋದು , ಅಂದ್ರೆ ಒಂದಲ್ಲ ಒಂದು ಭಯದ ವಾತಾವರಣ ಇರುತ್ತೆ . ಈ ರಾಹುವಿನ ಸಂಖ್ಯೆಯಲ್ಲಿ ಮದುವೆ ಮಾಡಿಕೊಂಡ್ರೆ ಅನಾರೋಗ್ಯವೇ ಹೆಚ್ಚು . ಇವರು ಹೆಚ್ಚಾಗಿ ಆಸ್ಪತ್ರೆಗಳಿಗೆ ಅಲೆಯುವ ಪರಿಸ್ಥಿತಿ ಬರುತ್ತೆ . ರಾಹು ಕಾಲ ಇರಬಹುದು ಅಥವಾ ರಾಹುವಿನ ತಾರೀಕು ಇರಬಹುದು ಆ ವೇಳೆಯಲ್ಲಿ ಋಣಾತ್ಮಕ ಶಕ್ತಿ ಸಂಚಾರ ಹೆಚ್ಚು ಇರುತ್ತೆ . ಆದ್ದರಿಂದಲೇ ಈ ಋಣಾತ್ಮಕ ಶಕ್ತಿಯನ್ನು ಹೋಗಲಾಡಿಸಲು ರಾಹುಕಾಲದಲ್ಲಿ ದೇವಿ ಪೂಜೆ ಮಾಡೋದು ಒಂದು ಕಾರಣ . 14 ತಾರೀಕು ಅಂದ್ರೆ ರವಿ ಮತ್ತು ರಾಹು , ಇಲ್ಲಿ ತಂದೆಯು ಅನಾವಶ್ಯಕವಾಗಿ ಕೆಲಸವಿಲ್ಲದೇ ಓಡಾಡೋದು ಹೆಳ್ಳುತ್ತೆ . ಇಲ್ಲಾಂದ್ರೆ ತಂದೆಯು ಸ್ವಲ್ಪ ದೊಡ್ಡ ಬಾಯಿಯವರು , ರೌಡಿ ಹಾಗೆ ಮಾತು ಅಂತ . 24 ಅಂದ್ರೆ ಚಂದ್ರ ಮತ್ತು ರಾಹು , ಇಲ್ಲಿ ಜಾತಕನು ಅಮಾವಾಸ್ಯೆ ಹುಣ್ಣಿಮೆ ಬಂದಾಗ ತುಂಭಾ ಕೋಪಮಾಡಿಕೊಳ್ಳೋದು , ತಲೆಕೆಡಿಸಿಕೊಂಡು ಕೂರೋದು ಇಲ್ಲಾ ಸುಮ್ಮನೆ ಮಂಕಾಗಿ ಇರೋದು ಮಾಡುತ್ತಾರೆ . ತಾಯಿ ಯಾವಾಗಲು ಕಿರಿಕಿರಿ ಮಾತು , ಅರೋಗ್ಯ ಸರಿಯಿರೋಲ್ಲ ಗಂಡ ಮತ್ತು ಹೆಂಡತಿಯ ಜಾತಕದಲ್ಲಿ ಶುಕ್ರನು ಒಂದೇ ತತ್ವದಲ್ಲಿ ಇದ್ರೆ ಅವರಲ್ಲಿ ಸಾಮರಸ್ಯವಿರುತ್ತೆ . ಯಾವತ್ತೂ ಅಗ್ನಿ ತತ್ವದಲ್ಲಿ ಶುಕ್ರನಿದ್ರೆ ಅವರಿಗೆ ಅಗ್ನಿತತ್ವದ ಸುಕ್ರನ್ನೇ ಮದುವೆ ಮಾಡಿದ್ರೆ ಗಂಡ ಹೆಂಡತಿ ಒಬ್ಬರನ್ನು ಒಬ್ಬರು ಬಿಟ್ಟು ಇರೋದಿಲ್ಲ . ಇತ್ತೀಚಿನ ದಿನಗಳಲ್ಲಿ ಮನೆಗೆ ಹೋದ್ರೆ ನೆಮ್ಮದಿನೇ ಇಲ್ಲ . ಹೊರಗಡೆ ಇದ್ದಷ್ಟು ಹೊತ್ತು ನೆಮ್ಮದಿ ಇರುತ್ತೆ ಅನ್ನೋರೆ ಜಾಸ್ತಿ ಆಗಿದ್ದಾರೆ . ಇದಕ್ಕೆಲ್ಲ ಕಾರಣ ಏನಿರಬಹುದು . ಯೋಚಿಸಿ ನೋಡಿ . ಜಾತಕ ಸರಿ ಇಲ್ಲಾಂದ್ರೆ ಎಲ್ಲಿ ಹೋದ್ರು ನೆಮ್ಮದಿ ಇರೋಲ್ಲ ಮನೇಲಿದ್ರು ನೆಮ್ಮದಿ ಇರೋಲ್ಲ . ಹಾಗಾದ್ರೆ ಏಕೆ ಹೀಗೆ ? ವಾಸ್ತು ದೋಷ ಇರಬಹುದಾ ಅಂತ ಒಂದು ಸಾರಿ ಯೋಚಿಸಿ ನೋಡಿ . ಇತೀಚಿನ ದಿನಗಳಲ್ಲಿ ಮನೆಯಲ್ಲಿ ಬೇಡವಾದ ವಸ್ತುಗಳನ್ನು ತುಂಬಿಕೊಂಡಿರುವುದೇ ಹೆಚ್ಚಾಗಿದೆ . ಮನೆ ತುಂಬಾ ಹಳೆ ಬಟ್ಟೆಗಳು , ಚಪ್ಪಲಿಗಳು , ಹಳೆ ಪಾತ್ರೆ , ಖಾಲಿ ಡಬ್ಬಗಳು , ಗುಜರಿ ಸಾಮಾನು , ಕೆಟ್ಟು ಹೋಗಿರುವ ವಾಚುಗಳು , ಕೆಟ್ಟಿರುವ ಇಲೆಕ್ಟ್ರಾನಿಕ್ ವಸ್ತುಗಳು ಹೀಗೆ ಹಲವು , ಇವುಗಳು ನೆಗೆಟಿವ್ ಎನೆರ್ಜಿಸ್ . ಇದರಿಂದ ಮನೆಯಲ್ಲಿ ಯಾವಾಗಲು ಕಿರಿಕಿರಿ ಇರುತ್ತೆ . ಆದ್ದರಿಂದ ಮನೆಯನ್ನು ಮೊದಲು ಸ್ವಚ್ಛವಾಗಿಡಿ . ಆದಷ್ಟು ಹಸಿರು ಗಿಡಗಳನ್ನು ಇಡಿ . ವಾಸ್ತು ಕರೆಕ್ಷನ್ ಬೇಕಿದ್ರೆ ತಿಳಿಸಿ . ಹೆಚ್ಚಿನ ದೇವರ ಫೋಟೋಗಳನ್ನು ಮನೆಯಲ್ಲಿ ಇಡಬೇಡಿ . ಮನೆಯ ಗೋಡೆಗಳ ಮೇಲೆ ದೇವರ ಕ್ಯಾಲೆಂಡರ್ ಹೆಚ್ಚಾಗಿ ಹಾಕಬೇಡಿ . ಯಾರಿಗೆ ಗುರು ಗ್ರಹ ವಕ್ರೀ ಇರುತ್ತಾರೆ ಅವರು ಮನೆಯಲ್ಲಿ ಎಲ್ಲಾದೇವರ ಫೋಟೋ ತೂಗು ಹಾಕಿರುತ್ತಾರೆ . ಇದು ಬೇಡ . ಮನೆಯನ್ನು ದೇವಸ್ಥಾನ ಮಾಡಬಾರದು . ಪ್ರಶ್ನೆಯನ್ನು ಕೇಳುವಾಗ ಯಾವ ಭಾವಗಳು ಕೆಲಸ ಮಾಡುತ್ತಿವೆ ನೋಡಬೇಕು . ಆರನೇ ಭಾವವು ಸಾಲಮಾಡುವುದನ್ನು ಮತ್ತು ಹನ್ನೆರಡನೇ ಭಾವವು ಸಾಲವನ್ನು ಹಿಂದಿರುಗಿಸುವುದನ್ನು ಸೂಚಿಸುತ್ತೆ . 3-5-10 ಯಾವುದೇ ಸ್ವತ್ತನ್ನು ಮಾರುವುದನ್ನು ಸೂಚಿಸುತ್ತೆ . ಹಾಗೂ ಒಳ್ಳೆಯ ಬೆಲೆಯೂ ಕೂಡ ಬರುತ್ತೆ . 5-9-11 ಭಾವಕ್ಕೆ ಸಂಬಂಧ ಬಂದ್ರೆ ಜಾತಕನು ಒಂದು ಸ್ಥಳವನ್ನು ಬಿಟ್ಟು ಬೇರೊಂದು ಸ್ಥಳದಲ್ಲಿ ಕೆಲಸ ಮಾಡುವ ಸ್ಥಿತಿಯನ್ನು ಸೂಚಿಸುತ್ತೆ . ಹನ್ನೆರಡನೇ ಅಧಿಪತಿಯು ಶುಭನಾಗಿದ್ರೆ ಅನೇಕ ಕಡೆ ಅಸ್ತಿ ಮಾಡುವ ಯೋಗವಿರುತ್ತೆ . ಹನ್ನೆರಡನೇ ಭಾವದಲ್ಲಿ ಗ್ರಹ ಸಂಚಾರ ಮಾಡುವಾಗ ಸ್ಥಿರ ಆಸ್ತಿಯನ್ನು ಮಾಡುತ್ತಾರೆ . 2-6-10 ಭಾವವು ಜಾತಕನ ವೃತ್ತಿಯ ಬಗ್ಯೆ ಹೇಳುತ್ತೆ ಹಾಗೆಯೇ 1-5-9 ವೃತ್ತಿಯನ್ನು ಬಿಡುವ ಬಗ್ಯೆ ತಿಳಿಸುತ್ತೆ . 2-6-10-11 ಭಾವಗಳು ಸೇರಿದಾಗ ಪ್ರಮೋಷನ್ ಬಗ್ಯೆ ಸೂಚಿಸುತ್ತೆ . ಶನಿ ರಾಹು ಚಂದ್ರ ವಿದೇಶ ಪ್ರಯಾಣ ಸೂಚಿಸುವ ಗ್ರಹರು ಹಾಗೆಯೆ 3-7-9-12 ಭಾವವು ವಿದೇಶ ಪ್ರಯಾಣವನ್ನು ಸೂಚಿಸುತ್ತೆ . 8-12 ಭಾವಗಳು ವಿದೇಶದಲ್ಲಿ ತಂಗುವ ವಿಚಾರವನ್ನು ತಿಳಿಸುತ್ತೆ . 12 ನೇ ಭಾವವು ವಿದೇಶ ಪ್ರಯಾಣ ಮತ್ತು ಸುಖವನ್ನು ಸೂಚಿಸುತ್ತೆ . ಶನಿಯ ನಕ್ಷತ್ರಗಳಾದ ಪುಷ್ಯ , ಅನುರಾಧ ಮತ್ತು ಉತ್ತರಾಭಾದ್ರ ನಕ್ಷತ್ರದಲ್ಲಿ ಜನಿಸಿದವರು ತಮ್ಮ ಅರ್ಧ ಆಯಸ್ಸು ಮುಗಿದ ಮೇಲೆ ಹೆಸರು , ಕೀರ್ತಿ ಮತ್ತು ಸಂಪತ್ತು ಗಳಿಸುತ್ತಾರೆ . ಆದ್ರೆ ಇವರಿಗೆ ಸಂಸಾರ ಸುಖ ಕಮ್ಮಿ . ಇವರಿಗೆ ಹೊರಗಡೆ ಸಿಕ್ಕುವ ಗೌರವ ಪ್ರೀತಿ ಇವರ ಗಂಡ ಅಥವಾ ಹೆಂಡತಿ , ಮಕ್ಕಳು ಕೊಡುವುದಿಲ್ಲ . ಇವರಿಗೆ ಆಡಂಬರದ ಪ್ರೀತಿ ಗೊತ್ತಿರುವುದಿಲ್ಲ , ಏನೆ ಇದ್ದರು ಇವರು ತಮ್ಮ ಪ್ರೀತಿಯನ್ನು ಹೃದಯದಿಂದ ಮಾತ್ರ ತೋರ್ಪಡಿಸುತ್ತಾರೆ ಹೊರತು ಹಾವಭಾವದಿಂದಲ್ಲ , ಇವರ ನೇರನುಡಿಯಿಂದಗಿ ಇವರಿಗೆ ಶತ್ರುಗಳೇ ಹೆಚ್ಚು . ಇವರು ಹೆಚ್ಚಾಗಿ ದೇವರ ಮೇಲೆ ನಂಬಿಕೆ ಇಟ್ಟವರು . ಎಷ್ಟೋಸಾರಿ ಇವರಿಗೆ ಸ್ನೇಹಿತರೆ ಸಹಾಯ ಮಾಡುತ್ತಾರೆ ಹೊರತು ಕುಟುಂಬದರು ಇವರನ್ನು ಕೀಳಾಗಿ ನೋಡುತ್ತಾರೆ . ಶನಿಯ ನಕ್ಷತ್ರ ವದರಿಂದ ಇವರಿಗೆ ಸಂಸಾರದಲ್ಲಿ ದುಃಖವೇ ಹೆಚ್ಚು . ಸ್ನೇಹಿತರೆ ನಿಮ್ಮ ಅಭಿಪ್ರಾಯ ತಿಳಿಸಿ . ಉದಾಹರಣೆ ಮೋದಿಜಿಯವರ ಜಾತಕ ನೋಡಿ . ಮೋದಿಜಿಯವರಿಗೆ ಹೊರದೇಶದಲ್ಲಿ ಎಷ್ಟೊಂದು ಹೆಸರು ಇದೆ , ಎಲ್ಲಾ ದೇಶದವರು ಮೋದಿಜಿಯವರನ್ನು ಮೆಚ್ಚಿ ಕೊಂಡಿದ್ದಾರೆ ಆದ್ರೆ ನಮ್ಮ ದೇಶದವರು ಮೋದಿಜಿಯವರನ್ನು ದೂರುತ್ತಾರೆ ಅಲ್ವಾ . ಮೋದಿಯವರದು ಕೂಡ ಅನುರಾಧ ನಕ್ಷತ್ರ . ಕುಜ ಚಂದ್ರ ಶುಕ್ರ ಒಟ್ಟಿಗೆ ಇದ್ರೆ ಹೆಂಡತಿಯು ಲಕ್ಷಣವಾಗಿರುತ್ತಾಳೆ . ಕೋಪದಿಂದ ಮಾತನಾಡುತ್ತಲೇ . ಹಣ ಬರುತ್ತೆ ಹೋಗುತ್ತೆ . ಪ್ರತಿಯೊಂದು ಕೆಲಸವನ್ನು ಹಟದಿಂದ ಸಾದಿಸುತ್ತಾಳೆ . ಯಾವಾಗಲು ಸುತ್ತಾಡಲು ಇಷ್ಟಪಡುತ್ತಾಳೆ . ಗಂಡನು ಕೂಡ ಸುತ್ತಾಡುತ್ತಾರೆ ಗುರುವಿಗೆ ಸಂಬಂಧ ಇರುವಷ್ಟು ಅಣ್ಣ ತಮ್ಮ ಅಕ್ಕ ತಂಗಿಯರು ಇರುತ್ತಾರೆ . ಅಂದ್ರೆ ಗುರುವಿನ ಯುತಿಯಲ್ಲಿ , ಗುರುವಿನ ದೃಷ್ಟಿಯಲ್ಲಿ . ಹಾಗೇಯೇ ಕುಜನ ಸಂಬಂಧ ಇರುವಷ್ಟು ಗಂಡಂದಿರು ಅಥವಾ ಶುಕ್ರನ ಸಂಬಂಧ ಇರುವಷ್ಟು ಹೆಂಡತಿಯರು ಇರುತ್ತಾರೆ . ಇರಲೇ ಬೇಕು ಅಂತ ಇಲ್ಲ . ಆದ್ರೆ ಅವರ ಮನಸಿನಲ್ಲಿ ಅವರುಗಳು ಬಂದು ಹೋಗುತ್ತಾರೆ . ಅಥವಾ ತಮ್ಮ ಜೀವನದಲ್ಲಿ ಅವರಿಗೆ ಒಂದು ಸ್ಥಾನ ಕೊಟ್ಟಿರುತ್ತಾರೆ . ಪುರುಷ ಜಾತಕದಲ್ಲಿ ಶುಕ್ರನಿಂದ ಎರಡನೇ ಮನೆಯಲ್ಲಿ ಕುಜ ಇದ್ರೆ ಅಥವಾ ಶುಕ್ರನ ಜ್ಯೋತೆ ಕುಜ ಇದ್ರೆ ಜಾತಕನ ಹೆಂಡತಿಯು ತುಂಭಾ ಗರ್ವ ಮತ್ತು ದಬ್ಬಾಳಿಕೆ ಮಾಡುವವಳು ಆಗಿರುತ್ತಾಳೆ . ಇದರಿಂದ ಸಂಸಾರ ಬೇಗ ಕೆಟ್ಟು ಹೋಗುತ್ತೆ ಹುಡುಗನ ಶುಕ್ರನಿಂದ ಹುಡುಗಿ ಶುಕ್ರನು 1-5-9 ಅಥವಾ 3-11 ನಲ್ಲಿದ್ರೆ ಆವರಿಬ್ಬರು ತಮ್ಮೆಲ್ಲ ಗುಪ್ತ ವಿಚಾರಗಳನ್ನು ಮನಸು ಬಿಚ್ಚಿ ಮಾತನಾಡುತ್ತಾರೆ ಜಾತಕದಲ್ಲಿ ಪಂಚಮಾಧಿಪತಿಯು ಜ್ಯೋತೆ ರವಿ ಸ್ಥಿತವಿದ್ರೆ ತಂದೆಯು ಲವ್ ಮ್ಯಾರೇಜ್ ಆಗಿರುತ್ತಾರೆ . ಪಂಚಮಾಧಿಪತಿಯು ಕುಜನ ಯುತಿಯಲ್ಲಿದ್ರೆ ತಮ್ಮನು ಲವ್ ಮ್ಯಾರೇಜ್ ಆಗಿರುತ್ತಾರೆ . ಪಂಚಮಾಧಿಪತಿಯು ಶನಿಯ ಯುತಿಯಲ್ಲಿದ್ರೆ ಅಣ್ಣನು ಲವ್ ಮ್ಯಾರೇಜ್ ಆಗಿರುತ್ತಾರೆ . ಶುಕ್ರನು ಪಂಚಮಾಧಿಪತಿಯು ಒಟ್ಟಿಗೆಯಿದ್ರೆ ತಂಗಿ ಅಥವಾ ಮಗಳು ಲವ್ ಮ್ಯಾರೇಜ್ ಆಗಿರುತ್ತಾರೆ . ಅಥವಾ ಪಂಚಮದಲ್ಲಿ ರವಿ ತಂದೆಯು ಲವ್ ಮ್ಯಾರೀಡ್ , ಪಂಚಮದಲ್ಲಿ ಚಂದ್ರ ಅಮ್ಮ , ಪಂಚಮದಲ್ಲಿ ಬುಧ ಅಥವಾ ಕುಜ ತಂಗಿ ಅಥವಾ ತಮ್ಮ ಹೀಗೆ ಜಾತಕವನ್ನು ವಿಮರ್ಶಿಸ ಬಹುದು . ಬುಧ ಕೇತು ಸಂಬಂಧ ಇದ್ರೆ ಜಾತಕನು ತಾನು ಮಾಡುತ್ತಿರುವ ವೃತ್ತಿಯ ಜ್ಯೋತೆಗೆ ಪಾರ್ಟ್ ಟೈಮ್ ವೃತ್ತಿಯನ್ನು ಕೂಡ ಮಾಡುತ್ತಾನೆ . ಕಾಲಾನಂತರ ತನ್ನ ಉದ್ಯೋಗವನ್ನು ಬಿಟ್ಟು ಪಾರ್ಟ್ ಟೈಮ್ ವೃತ್ತಿಯನ್ನು ಫುಲ್ ಟೈಮ್ ವೃತ್ತಿಯಾಗಿ ಮಾಡುತ್ತಾನೆ . ಬುಧ ಕೇತು ಇದ್ರೆ ಜಾತಕನು ಎಲ್ಲಾ ತರದ ವೃತ್ತಿಯಲ್ಲಿ ಪಳಗಿರುತ್ತಾನೆ . ಬುಧಕೇತು - ಕೋರ್ಟ್ ನಲ್ಲಿ ಗುಮಾಸ್ತನಾಗಿರಬಹುದು , ಟೈಪಿಸ್ಟ್ ಆಗಿರಬಹುದು , ಲಾಯರ್ ಆಗಿರಬಹುದು , ಜಿರಾಕ್ಸ್ ಅಂಗಡಿ ಇರಬಹುದು , ಸ್ಟೇಷನರಿ ಅಂಗಡಿ ಇರಬಹುದು , ಟೈಲರ್ ಆಗಿರಬಹುದು ಅಥವಾ ಬುಧ ಕೇತುವಿಗೆ ಕುಜನ ಸಂಬಂಧ ಬಂದ್ರೆ ಕಟಿಂಗ್ ಶಾಪ್ ಇರಬಹುದು ಹೀಗೆ ಅನೇಕ ವೃತ್ತಿಗಳು . ಲವ್ ಕೇಸ್ ಫೇಲ್ ಕೂಡ ಆಗಿರಬಹುದು ಲಗ್ನಾಧಿಪತಿ ಲಗ್ನದಲ್ಲಿ ಇದ್ರೆ ಜಾತಕನು ಇವತ್ತಿನ ಬಗ್ಯೆ ಮಾತ್ರ ಚಿಂತೆ ಮಾಡುತ್ತಾನೆ , ನಿನ್ನೆಯದು ಅಥವಾ ನಾಳೆಯ ಚಿಂತೆ ಮಾಡುವುದಿಲ್ಲ . ಹಾಗೇ ಲಗ್ನಾದಿಪತಿಯು ಪಂಚಮದಲ್ಲಿದ್ರೆ ನಾಳೆಯ ಚಿಂತೆ ಮಾಡುತ್ತಾನೆ ಮತ್ತು ಲಗ್ನಾಧಿಪತಿ ನವಮದಲ್ಲಿದ್ರೆ ಹಳೆಯದನ್ನು ಚಿಂತೆ ಮಾಡುತ್ತಾನೆ ಹೊರತು ಇಂದಿನ ಅಥವಾ ನಾಳೆಯ ಚಿಂತೆ ಮಾಡುವುದಿಲ್ಲ . ಈಗ ಹೇಳಿ ನಿಮಲ್ಲಿ ಎಷ್ಟು ಜನರಿಗೆ ಇದು ಸರಿ ಅನ್ನಿಸುತ್ತಿದೆ . ಜಾತಕದಲ್ಲಿ ಶನಿಯು ಯಾರ ಯುತಿಯಲ್ಲಿ ಇರುತನ್ನೂ ಆ ಗ್ರಹಕ್ಕೆ ಸಂಬಂಧ ಪಟ್ಟ ಕಾರಕತ್ವದಿಂದ ದುಃಖವನ್ನು ಪಡುತ್ತಾನೆ . ಶನಿಯು ಶುಕ್ರನ ಯುತಿಯಲ್ಲಿ ಇದ್ದಾಗ ಶುಕ್ರನು ಹಣಕ್ಕೆ ಕಾರಕ , ಆಸ್ತಿಗೆ ಕಾರಕ , ಮನೆಗೆ ಕಾರಕ , ಸ್ತ್ರೀ ಕಾರಕ , ಸೊಸೆಗೆ ಕಾರಕ , ಅಕ್ಕ ತಂಗಿಯರಿಗೆ ಕಾರಕ , ಹೀಗೆ ಶನಿಯು ಶುಕ್ರನ ಜ್ಯೋತೆ ಅಥವಾ ಶುಕ್ರನಿಂದ ೧-೫-೯ ರಲ್ಲಿ ಶನಿ ಇದ್ರೆ ಅಥವಾ ಶುಕ್ರನು ಶನಿಯ ನಕ್ಷತ್ರವಾದ ಪುಷ್ಯ , ಅನುರಾಧ , ಉತ್ತರಭಾದ್ರ ನಕ್ಷತ್ರ ದಲ್ಲಿ ಇದ್ರೆ ಅಗಾ ಜಾತಕನು ಶುಕ್ರನವಿಚಾರವಾಗಿ ದುಃಖವನ್ನು ಪಡುತ್ತಾನೆ . ರವಿ ಕುಜ ಶನಿ ಮತ್ತು ಚಂದ್ರರು ಲಗ್ನದಲ್ಲಿಸ್ತಿತವಾಗಿದ್ರೆ ವ್ಯಕ್ತಿಯನ್ನು ಕೊಲೆಗಾರನ್ನಾಗಿ ಮಾಡಿ ಜೈಲು ಶಿಕ್ಷೆಗೆ ಗುರಿ ಮಾಡುತ್ತಾರೆ . ಇವರಿಗೆ ಶುಭಗ್ರಹರ ದೃಷ್ಟಿ ಇದ್ದಾಗ ತೊಂದ್ರೆ ಸ್ವಲ್ಪ ಕಮ್ಮಿಯಾಗುತ್ತೆ . ಈ ಗ್ರಹರು ದ್ವಿತೀಯದಲ್ಲಿ ಇದ್ದಾಗ ಸಂಪತ್ತನ್ನು ಕ್ಷೀಣಿಸುವಂತೆ ಮಾಡುತ್ತಾರೆ . ಇವರು ಮೂರನೇ ಭಾವದಲ್ಲಿದ್ರೆ ಒಳ್ಳೆಯಫಲವನ್ನು ಕೊಡುತ್ತಾರೆ . ಅಂದ್ರೆ ವ್ಯಕ್ತಿಗೆ ಧೈರ್ಯ ಮತ್ತು ಕೀರ್ತಿಯನ್ನು ಕೊಡುತ್ತಾರೆ . ನಾಲ್ಕನೇ ಭಾವದಲ್ಲಿದ್ರೆ ಮಿತ್ರರಿಂದ ಮತ್ತು ವಾಹನದಿಂದ ಹಾನಿಯಾಗುತ್ತೆ ಅಥವಾ ಮಿತ್ರರು ನಮ್ಮಿಂದ ದೂರ ಸರಿಯುತ್ತಾರೆ . ಪಂಚಮದಲ್ಲಿದ್ರೆ ಜಾತಕನ ಗುಪ್ತಾ ವಿಚಾರಗಳು ಹೊರಗೆ ಬಂದು ಅವಮಾನವಾಗುತ್ತೆ . ಷಷ್ಠ ಭಾವದಲ್ಲಿದ್ರೆ ಶುಭ ಫಲಗಳನ್ನು ಕೊಡುತ್ತಾರೆ . ಪಾಪ ಗ್ರಹರು ಸಪ್ತಮದಲ್ಲಿದ್ರೆ ಕಳತ್ರ ಸುಖ ನಾಶವಾಗುತ್ತೆ . ಶುಭ ಗ್ರಹವಾದ ಶುಕ್ರ ಸಪ್ತಮದಲ್ಲಿದ್ರು ಕೂಡ ಕಳತ್ರ ಸುಖ ನಾಶವಾಗುತ್ತೆ . ಅಷ್ಟಮದಲ್ಲಿದ್ರೆ ವ್ಯಕ್ತಿಯು ಚಿಕ್ಕವಯಸ್ಸಿನಲ್ಲಿಯೇ ಮರಣ ಅಥವಾ ಮರಣಕ್ಕೆ ಸಮಾನವಾದ ದುಃಖವನ್ನು ಅನುಭವಿಸುತ್ತಾರೆ . ಭಾಗ್ಯದಲ್ಲಿದ್ರೆ ತಂದೆ ಅಥವಾ ತಂದೆ ಸಮಾನರಾದವರು ದುಃಖವನ್ನು ಅನುಭವಿಸುತ್ತಾರೆ ಮತ್ತು ಜಾತಕನು ಪಿತ್ರಾರ್ಜಿತ ಆಸ್ತಿಯನ್ನು ಕಳೆದು ಕೊಳ್ಳುತ್ತಾನೆ . ದಶಮದಲ್ಲಿ ರವಿ ಕುಜರು ಒಳ್ಳೆಯ ಉನ್ನತಿಯನ್ನು ಹಾಗೇ ಶನಿಯು ಜಾತಕನು ತನ್ನ ಉಸಿರಿರುವವರೆಗೆ ಕಷ್ಟ ಪಟ್ಟು ದುಡಿದು ತಿನ್ನುವಂತೆ ಮಾಡುತ್ತಾನೆ . ಶನಿಯು ದುಡಿಮೆಗೆ ತಕ್ಕ ಫಲವನ್ನು ಕೊಡುತ್ತಾನೆ . ಲಾಭಸ್ಥಿತ ಪಾಪಗ್ರಹರು ಮತ್ತು ಶುಭಗ್ರಹರು ಜಾತಕನಿಗೆ ಅಭಿವೃದ್ಧಿಯನ್ನು ಕೊಡುತ್ತಾರೆ . ಹನ್ನೆರಡನೇ ಭಾವಸ್ಥಿತ ಪಾಪಗ್ರಹರು ಜೈಲುವಾಸ , ಚಿಂತೆ ಮತ್ತು ದುಃಖ ಮರಣವನ್ನು ನೀಡುತ್ತಾರೆ . ಅಶ್ವಿನಿ ಮಖ ಮೂಲ ನಕ್ಷತ್ರದವರಿಗೆ ರಾಹು ದೆಶೆಯು ಮಾರಕವಾಗುತ್ತೆ . ಭರಣಿ ಮತ್ತು ಧನಿಷ್ಠ ನಕ್ಷತ್ರದವರಿಗೆ ಗುರು ಮತ್ತು ರವಿ ದೆಶೆಯು ಮಾರಕವಾಗುತ್ತೆ . ಕೃತ್ತಿಕಾ , ಮೃಗಶಿರ , ಉತ್ತರ ೧ ಇವರಿಗೆ ಶನಿದೆಶೆಯು ಮಾರಕವಾಗುತ್ತೆ . ರೋಹಿಣಿ , ಪುಬ್ಬ , ಹಸ್ತ , ಪೂರ್ವಭಾದ್ರ 123 ಇವರಿಗೆ ಬುಧ ದೆಶೆಯು ಮಾರಕವಾಗುತ್ತೆ . ಪುನರ್ವಸು ನಕ್ಷತ್ರದವರಿಗೆ ಬುಧ ಅಥವಾ ಶುಕ್ರ ದೆಶೆಯು ಮಾರಕವಾಗುತ್ತೆ . ಪುಷ್ಯ ನಕ್ಷತ್ರದವರಿಗೆ ಶುಕ್ರ ಅಥವಾ ಚಂದ್ರ ದೆಶೆಯು ಮಾರಕವಾಗುತ್ತೆ . ಆಶ್ಲೇಷ ನಕ್ಷತ್ರಕ್ಕೆ ರಾಹುದೆಶೆಯು ಒಳ್ಳೆಯದಲ್ಲ . ಉತ್ತರಾ 123 ನಕ್ಷತ್ರದವರಿಗೆ ಗುರು ಅಥವಾ ಬುಧ ದೆಶೆಯು ಮಾರಕವಾಗುತ್ತೆ . ಚಿತ್ತಾ ನಕ್ಷತ್ರದವರಿಗೆ ಗುರುದೆಶೆ ಅಥವಾ ಶನಿದೆಸೆ ಅಥವಾ ಬುಧ ದೆಸೆಯು ಮಾರಕವಾಗುತ್ತೆ . ಸ್ವಾತಿಗೆ ಬುಧ ಅಥವಾ ರವಿದೆಶೆಯು ಮಾರಕ . ವಿಶಾಖ ನಕ್ಷತ್ರಕೆ ಕೇತು ಅಥವಾ ರವಿದೆಶೆಯು ಮಾರಕ . ಅನುರಾದಕ್ಕೆ ಬುಧ ಚಂದ್ರ ಕುಜ ದೆಸೆಯು ಆಗಿಬರೋದಿಲ್ಲ . ಜೇಷ್ಠ ನಕ್ಷತ್ರಕ್ಕೆ ರವಿ ಅಥವಾ ಚಂದ್ರ ಅಥವಾ ರಾಹು ದೆಸೆಯು ಮಾರಕವಾಗುತ್ತೆ . ಪೂರ್ವಾಷಾಢಕ್ಕೆ ರವಿ ಅಥವಾ ಚಂದ್ರ ಅಥವಾ ಶನಿ ದೆಶೆಯು ಒಳ್ಳೆಯದಲ್ಲ . ಉತ್ತರಾಷಾಡಕ್ಕೆ ಶನಿ ಅಥವಾ ಬುಧ ದೆಶೆಯು ಮಾರಕ . ಶ್ರಾವಣಕ್ಕೆ ರಾಹು ಅಥವಾ ಗುರು ಅಥವಾ ಬುಧ ದೆಶೆಯು ಕೆಟ್ಟದು . ಪೂರ್ವಬಾದ್ರ 4 ರವಿದೆಸೆಯು ಕೆಟ್ಟದು . ಉತ್ತರಾಭಾದ್ರಕ್ಕೆ ಶುಕ್ರ ದೆಶೆಯು ಕೆಟ್ಟದು . ರೇವತಿಗೆ ಶುಕ್ರ ಅಥವಾ ರಾಹುದೆಶೆಯು ಮಾರಕ . ರಾಹು ಗ್ರಹವು ಆಸೆಯನ್ನು ಹುಟ್ಟಿಸುವ ಗ್ರಹವಾಗಿದೆ . ರಾಹು ಶುಕ್ರನ ಜೊತೆ ಹೆಚ್ಚಿನ ಬಾಂಧವ್ಯವನ್ನು ಹೊಂದಿದ್ದು ಆಸೆಯನ್ನು ಹೆಚ್ಚು ಮಾಡುತ್ತಾನೆ . ಆದ್ರೆ ಕೇತು ಶನಿಯ ಜೊತೆ ಹೆಚ್ಚಿನ ಬಾಂದವ್ಯ ಹೊಂದಿದ್ದಾನೆ . ರಾಹು ಬದುಕಬೇಕು ಅಂದ್ರೆ ಕೇತು ಜೀವನ ಸಾಕು ಅನಿಸುತ್ತಾನೆ . ರಾಹು ಕೇತು ಇಬ್ಬರು ರಾತ್ರಿಯಲ್ಲಿ ಬಲಾಢ್ಯರು . ಸೂರ್ಯಾಸ್ತದಿಂದ ಮಧ್ಯರಾತ್ರಿಯವರೆಗೆ ರಾಹು ಕೆಲಸ ಮಾಡುತ್ತಾನೆ . ಹಾಗಾಗಿ ರಾತ್ರಿಯವೇಳೆನೇ ಬಾರು ಪಬ್ಬು ಡಾನ್ಸ್ ಸೆಕ್ಸ್ ವರ್ಕ್ಸ್ ರಾತ್ರಿ ಹೆಚ್ಚಾಗಿರುತ್ತೆ . ಗುರುವಿಗೆ ರಾಹು ಸಂಬಂಧ ಇದ್ರೆ ಮತ್ತೆ ನಾವು ಹುಟ್ಟಬೇಕಾಗುತ್ತೆ . ರಾಹು ಕರ್ಮ ಕಳೆಯಲು ಬಿಡುವುದಿಲ್ಲ . ಮೂಲ ಜಾತಕದಲ್ಲಿ ಶನೈಶ್ಚರನು ಲಗ್ನದಲ್ಲಿ ಸ್ಥಿತನಿದ್ರೆ ಜಾತಕನು ಅನುಭದ ಮಾತುಗಳನ್ನೇ ಆಡುತ್ತಾನೆ . ಯಾವಾಗಲು ಕಳೆದು ಹೋದ ವಿಚಾರಗಳನ್ನೇ ಮತ್ತೆ ಮತ್ತೆ ಹೇಳಿ ಸಂಸಾರದಲ್ಲಿ ಕಿರಿಕಿರಿ ಉಂಟು ಮಾಡುತ್ತಾನೆ . ದ್ವಿತೀಯದಲ್ಲಿ ಶನಿ ಇದ್ರೆ ಕುಟುಂಬದವರು , ಚತುರ್ಥದಲ್ಲಿ ತಾಯಿಯು , ಪಂಚಮದಲ್ಲಿ ಮಕ್ಕಳು , ಸಪ್ತಮದಲ್ಲಿ ಹೆಂಡತಿಯು ಅಥವಾ ಗಂಡನು , ನವಮದಲ್ಲಿ ತಂದೆಯು ಮೇಲಿನಂತೆ ಮಾತನಾಡುತ್ತಾರೆ . ಸ್ನೇಹಿತರೇ , ಅಮೃತಬಳ್ಳಿ ಎಲ್ಲರಿಗೂ ಗೊತ್ತಿರೋ ಔಷಧಿ ಸಸ್ಯ ಅಲ್ವಾ . ತುಂಭಾ ಜನರು ಇದನ್ನು ಮನೆಯಲ್ಲಿ ಬೆಳೆಸಿರುತ್ತಾರೆ . ಇನ್ನೂ ಕೆಲವರು ಇದನ್ನು ತಮ್ಮ ಮನೆಯ ಮೇಲೆಯೇ ಹಬ್ಬಿಸಿರುತ್ತಾರೆ . ಯಾರೆಲ್ಲ ಅಮೃತ ಬಳ್ಳಿಯನ್ನು ಮನೆಮೇಲೆ ಹಬ್ಬಿಸಿದ್ದಾರೆ ಅವರ ಮನೆಗೆ ಒಮ್ಮೆ ಹೋಗಿ ನೋಡಿಬನ್ನಿ . ಚೆನ್ನಾಗಿ ಇದ್ದ ಮನೆಯವರು ಬಳ್ಳಿಯನ್ನು ಹಬ್ಬಿಸಿದ ಮೇಲೆ ಅಭಿವೃದ್ಧಿ ಇರುವುದಿಲ್ಲ . ಕೊನೆಗೆ ಮನೆಗೆ ಬಣ್ಣ ಹೊಡಿಸೋದು ಕಷ್ಟವಾಗುತ್ತೆ . ಮನೆ ಮಾರಾಟಕ್ಕೆ ಬರುತ್ತೆ . ಮನೆಯಲ್ಲಿ ಯಾವುದೇ ಶುಭ ಕಾರ್ಯಾ ನಡೆಯುವುದಿಲ್ಲ . ಇದನ್ನು ನೀವು ಗಮನಿಸಿ ನನಗೆ ತಿಳಿಸಿ . ಯಾವುದೇ ಕಾರಣದಿಂದ ಮನೆಯ ಮೇಲೆ ಅಮೃತ ಬಳ್ಳಿ ಬೆಳೆಸಬೇಡಿ . ವಾಸ್ತು ದೋಷವಾಗುತ್ತೆ . ನೈರುತ್ಯದಲ್ಲಿ ಬಚ್ಚಲು ಮನೆ ಇದ್ದರೆ ಅವರಿಗೆ ಯಾವಾಗಲು ಹಣದ ಕೊರತೆ ಉಂಟಾಗುತ್ತೆ . ಸಾಲಗಾರ ಆಗುತ್ತಾರೆ . ಇದು ವಾಸ್ತು ದೋಷವಾಗುತ್ತೆ . ಮನೆಯಲ್ಲಿ ಸೋರುವ ನಲ್ಲಿಗಳೂ ಇದ್ದರೆ ಅವರಿಗೆ ಹಣದ ಕೊರತೆ ಉಂಟಾಗುತ್ತೆ . ಜಾತಕದಲ್ಲಿ ಶುಕ್ರನಿಗೆ ಚಂದ್ರನ ಸಂಬಂಧ ಇದ್ದರೆ ಸಾಲಗಾರರಾಗುತ್ತಾರೆ ಜನ್ಮ ಲಗ್ನದಿಂದ ಜಾತಕನ ಆಗುಹೋಗುಗಳನ್ನು , ರವಿ ಲಗ್ನದಿಂದ ತಂದೆಯ ಉನ್ನತಿಯನ್ನು , ಚಂದ್ರ ಲಗ್ನದಿಂದ ತಾಯಿಯ ಸ್ಥಿತಿಗತಿಯನ್ನು , ಕುಜನ ಲಗ್ನದಿಂದ ಅಣ್ಣತಮ್ಮಂದಿರ ಅಕ್ಕತಂಗಿಯರ ವಿಚಾರವನ್ನು . ಶುಕ್ರನಿಂದ ಹೆಂಡತಿಯ ವಿಚಾರವನ್ನು , ಬುಧನಿಂದ ಬಂದುಗಳ ವಿಚಾರವನ್ನು , ಗುರುವಿನಿಂದ ಜಾತಕನ ಅಭಿವೃದ್ಧಿಯನ್ನು ಮತ್ತು ಶನಿ ಲಗ್ನದಿಂದ ಸೇವಕರ ವಿಚಾರವನ್ನು ತಿಳಿಯಬಹುದು . ಶುಕ್ರನಿಂದ ಹಿಂದಿನ ಡಿಗ್ರಿ ಅಥವಾ ಹಿಂದಿನ ರಾಶಿಯಲ್ಲಿ ಕುಜನಿದ್ರೆ , ಹಿಂದಿನ ಜನ್ಮದ ಗಂಡನೇ ಈ ಜನ್ಮದಲ್ಲಿಯೂ ಸಿಕ್ಕುತ್ತಾನೆ . ಹಾಗೇ ಶುಕ್ರನ ಮುಂದಿನ ಡಿಗ್ರಿ ಅಥವಾ ಮುಂದಿನ ರಾಶಿಯಲ್ಲಿ ಕುಜನಿದ್ರೆ ಈಗಿನ ಗಂಡನೇ ಮುಂದಿನ ಜನ್ಮಕ್ಕೂ ಸಿಕ್ಕುತ್ತಾನೆ . ಜಾತಕದಲ್ಲಿ ಶುಕ್ರನು ಗುರುವಿನ ಹಿಂದಿನ ಡಿಗ್ರಿ ಅಥವಾ ಹಿಂದಿನ ಮನೆಯಲ್ಲಿದ್ರೆ , ಹಿಂದಿನ ಜನ್ಮದ ಹೆಂಡತಿಯೇ ಈ ಜನ್ಮದಲ್ಲಿಯೂ ಇರುತ್ತಾಳೆ . ಹಾಗೇ ಗುರುವಿಗೆ ಮುಂದಿನ ಡಿಗ್ರಿ ಅಥವಾ ಮುಂದಿನ ರಾಶಿಯಲ್ಲಿ ಶುಕ್ರನಿದ್ರೆ , ಈ ಜನ್ಮದ ಹೆಂಡತಿಯೇ ಮುಂದಿನ ಜನ್ಮಕ್ಕೂ ಬರುತ್ತಾಳೆ . ಗುರು ಶನಿ ಯುತಿ ಇದ್ರೆ ಅಥವಾ ಗುರು ಶನಿ ಮನೆಯಲ್ಲಿ ಇದ್ರು ಅಥವಾ ಶನಿ ಗುರುವಿನ ಮನೆಯಲ್ಲಿದ್ರು ಅಥವಾ ಶನಿ ನಕ್ಷತ್ರದಲ್ಲಿ ಗುರು , ಗುರು ನಕ್ಷತ್ರದಲ್ಲಿ ಶನಿ ಇದ್ರು ಕೂಡ ಜಾತಕನು ಕಷ್ಟಪಟ್ಟು ಜೀವನದಲ್ಲಿ ಅಭಿವೃದ್ಧಿ ಹೊಂದುತ್ತಾನೆ ಮತ್ತು ತನಗೆ ಏನು ಅನಿಸುತ್ತದೆಯೋ ಅದನ್ನೇ ಮಾಡುತ್ತಾನೆ . ಇವರು ಯಾವುದೇ ತಂಟೆ ತಕರಾರು ಗಳಿಗೆ ಸಿಕ್ಕಿ ಹಾಕಿಕೊಳ್ಳಲು ಇಷ್ಟಪಡುವುದಿಲ್ಲ ಬುಧ ಅಂದ್ರೆ ವಿದ್ಯೆ , ಕೇತು ಅಂದ್ರೆ ಅಂತರಜಾಲ , ಬುಧ ಮತ್ತು ಕೇತು ಸೇರಿದ್ರೆ ಜಾತಕನು ಅಂತರಜಾಲ ವಿದ್ಯೆ ಪರಿಣಿತನಾಗುತ್ತಾನೆ . ಬುಧಕೇತು ಜಾತಕನಿಗೆ ಸಿಕ್ಸ್ತ್ ಸೆನ್ಸ್ ಇರುತ್ತೆ . ತಂತ್ರಾಜ್ಞಾನ ವಿದ್ಯೆ , ಕಂಪ್ಯೂಟರ್ ವಿದ್ಯೆ , ಟೈಪಿಂಗ್ ಕಲಿತವ , ಬುಧ ಭೂಮಿ ಕಾರಕ ಕೇತು ಲಿಟಿಗೇಷನ್ ಅಂದ್ರೆ ಬುಧ ಕೇತು ಸೇರಿದ್ರೆ ಭೂಮಿ ವಿಚಾರದಲ್ಲಿ ಲಿಟಿಗೇಷನ್ ಆಗುತ್ತೆ . ಬುಧ ವಿದ್ಯೆ ಕೇತು ದಾರದ ಉಂಡೆ ಅಂದ್ರೆ ಇವರಲ್ಲಿ ಎಳೆದಷ್ಟು ಎಳೆದಷ್ಟು ಜ್ಞಾನ ವಿರುತ್ತೆ . ಯಾವ ವಿದ್ಯೆ ಗೊತ್ತಿಲ್ಲಾಂತ ಇಲ್ಲ . ಶನಿಯು ರವಿಯ ಸಂಭಂದ ಹೊಂದಿದ್ರೆ ಜಾತಕನು 35 ವರ್ಷಗಳ ನಂತ್ರ ಆತ್ಮ ಜ್ಞಾನವನ್ನು ಹೊಂದುತ್ತಾನೆ . ಶನಿ ಮತ್ತು ರವಿಯ ಜ್ಯೋತೆಗೆ ಗುರುವಿನ ಸಂಭಂದವಿದ್ರೆ ಜಾತಕನು ಆಧ್ಯಾತ್ಮಿಕ ಜ್ಞಾನವನ್ನು ಹೊಂದುತ್ತಾನೆ . ಶನಿ ರವಿ ಗುರು ಜ್ಯೋತೆಗೆ ಕುಜನ ಸಂಬಂಧ ಇದ್ರೆ ಜಾತಕನು ತನ್ನ ಹಠದಿಂದ ಜೀವನದಲ್ಲಿ ಜಯವನ್ನು ಸಾಧಿಸುತ್ತಾನೆ ಮತ್ತು ದೇವರನ್ನು ಕಾಣಲು ಹಂಬಲಿಸುತ್ತಾನೆ . ಶನಿ ರವಿ ಗುರು ಕುಜನ ಜ್ಯೋತೆಗೆ ಚಂದ್ರ ಸಂಬಂಧ ಉಂಟಾದ್ರೆ ಮನಸ್ಸು ಆತ್ಮ ಒಟ್ಟಿಗೆ ಸೇರಿದಾಗ ದೇವರು ಕಾಣಿಸುತ್ತಾನೆ . ಇವರ ಜ್ಯೋತೆಗೆ ಕೇತು ಸೇರಿದ್ರೆ ಮೋಕ್ಷ ಕಾಣುತ್ತಾನೆ , ಮುಂದಿನ ಜನ್ಮ ಇರೋದು ಕಮ್ಮಿ . ಶನಿ ಕುಜ ಯುತಿಯಿಂದ ಯಾವಾಗಲು ವೃತ್ತಿಯಲ್ಲಿ ಚಿಂತೆ ಕಾಡುತ್ತೆ . ಯಾವ ಕೆಲಸದಲ್ಲಿಯೂ ಕೂಡ ನೆಮ್ಮದಿ ಇರೋಲ್ಲ . ಇದು ಶನಿ ಕುಜ ಒಟ್ಟಿಗೆ ಇದ್ರು ಅಥವಾ ಶನಿಯು ಕುಜನ ಮನೆಯಲ್ಲಿದ್ರು ಅಥವಾ ಶನಿ ಕುಜ ೧-೫-೯ ನಲ್ಲಿದ್ರು ಒಂದೇ ರಿಸಲ್ಟ್ಸ್. ಇವರು ಟೆಕ್ನಿಕಲ್ ಜಾಬ್ ಮಾಡಿದ್ರೆ ಅಥವಾ ಸಿವಿಲ್ ಇಂಜಿನಿಯರ್ ಆದ್ರೆ ಅಥವಾ ಮೆಕ್ಯಾನಿಕ್ ಆದ್ರೆ ಸ್ವಲ್ಪ ನೆಮ್ಮದಿ ಇರುತ್ತೆ . ಕುಜ ಅಂದ್ರೆ ಗಂಡ ಶನಿ ಅಂದ್ರೆ ಸೋಮಾರಿ ಅಥವಾ ಯಾವಾಗಲು ಹಳೆಯ ವಿಚಾರವನ್ನೇ ಮಾತನಾಡುವವ ಆಗಿರುತ್ತಾರೆ . ಏನೇ ಆಗಲಿ ಗಂಡನಿಂದ ದುಃಖ . ನಿಖರವಾದ ಕೆಲಸ ವಿರೋಲ್ಲ . ಶನಿ ಕೆಲಸದವರು ಕುಜ ದರ್ಪ - ಕೆಲಸದವರು ಯಾವಾಗಲು ಜೋರಾಗಿರುತ್ತಾರೆ . ಅವರು ಹೇಳಿದ ಹಾಗೇ ಇವರು ಕೇಳಬೇಕು . ಕುಜ ಶನಿ ಸಂಬಂಧ ಇದ್ರೆ ಹೆಂಡತಿಗೆ ಗಂಡನ ಸುಖ ಕಮ್ಮಿ . ಶನಿ ಅಂದ್ರೆ ಕೆಲಸ ಕುಜ ಮೆಶಿನರಿ ಜಾಬ್ . ಶನಿಯು ಚಂದ್ರನ ಜ್ಯೋತೆ ಇದ್ರೆ , ತಾಯಿಗೆ ಯಾವಾಗಲು ದುಃಖ . ಚಂದ್ರ ಅಂದ್ರೆ ಮನಸ್ಸು ಜಾತಕನು ಯಾವಾಗಲು ಮನಸ್ಸಿಗೆ ಹುಳಬಿಟ್ಟುಕೊಂಡ ಹಾಗೆ ಚಿಂತೆ ಕಾಡುತ್ತೆ . ಶನಿ ಅಂದ್ರೆ ಪಾಸ್ಟ್ ವಿಚಾರಗಳು , ಹಾಗೆ ಜಾತಕನು ಯಾವಾಗಲು ಹಳೆಯ ವಿಚಾರವನ್ನು ಮಾತನಾಡುತ್ತಾನೆ . ಜಾತಕನಿಗೆ ಫ್ಯೂಚರ್ ಅಂದ್ರೆ ಭಯ ಪಡುತ್ತಾರೆ . ಶನಿ ಅಂದ್ರೆ ಮೊಣಕಾಲು ಜಾತಕನ ತಾಯಿಗೆ ಯಾವಾಗಲು ಮಂಡಿ ನೋವ್ವು ಇರುತ್ತೆ . ಶನಿ ಅಂದ್ರೆ ದೊಡ್ಡ ಮಗ , ಚಂದ್ರ ಅಂದ್ರೆ ತಾಯಿ ಹಾಗಾಗಿ ತಾಯಿ ಯಾವಾಗಲು ದೊಡ್ಡ ಮಗನನ್ನು ಹೆಚ್ಚಾಗಿ ಪ್ರೀತಿ ಮಾಡುತ್ತಾಳೆ . ಶನಿ ಚಂದ್ರ ಯುತಿ ಇದ್ರೆ ಅತ್ತೆ ಸೊಸೆಗೆ ಆಗೋದಿಲ್ಲ . ಸೊಸೆ ತನ್ನ ತವರು ಮನೆಗೆ ಹೋದ್ರೆ ವಾಪಸ್ಸು ಬರೋದಿಲ್ಲ . ಶನಿ ಚಂದ್ರ ಯೋಗದವರು ಸ್ವಾರ್ಥಿಗಳು ಆಗಿರುತ್ತಾರೆ . ಶನಿ ಅಂದ್ರೆ ಜಿಪುಣ ಹಾಗೆ ಜಾತಕನು ಮತ್ತು ಅವನ ಅಮ್ಮ ಕೂಡ ಜಿಪುಣರು . ಶನಿ ಚಂದ್ರ ಯೋಗದವರು ಯಾರನ್ನು ನಂಬೋದಿಲ್ಲ . ಶನಿ ಚಂದ್ರ ಯುತಿ ಇದ್ರೆ ಅವರಿಗೆ ಯಾವ ಹೋಟೆಲ್ನಲ್ಲಿ ಏನೇನು ಸ್ಪೆಷಲ್ ಸಿಕುತ್ತೆ ಅಂತ ಗೊತ್ತಿರುತ್ತೆ . ಶನಿಯು ರವಿಯ ಜ್ಯೋತೆ ಇದ್ರೆ , ರವಿ ತಂದೆ ಶನಿ ಮಗ , ತಂದೆ ಮಗನಿಗೆ ಆಗೋದಿಲ್ಲ , ಯಾವಾಗಲು ಕಿರಿಕಿರಿ . ಇಬ್ಬರಿಗೂ ಅಭಿವೃದ್ಧಿ ಇರೋದಿಲ್ಲ . ತಂದೆ ಯಾವಾಗಲು ಬುದ್ದಿವಾದ ಹೇಳುತ್ತಾರೆ ಮಗನಿಗೆ ಹಿಡಿಸೋದಿಲ್ಲ . ಇವರು ಬೇರೆಬೇರೆ ಇದ್ರೆ ಒಳ್ಳೆಯದು . ಶನಿ ಅಂದ್ರೆ ಅಣ್ಣ , ರವಿ ಸರ್ಕಾರ ಅಣ್ಣನಿಗೆ ಸರ್ಕಾರೀ ಉದ್ಯೋಗ . ಜಾತಕದವನು ತುಂಬಾ ಕಷ್ಟ ಪಟ್ಟು ಮೇಲೆ ಬರುತ್ತಾನೆ ಮತ್ತು ತನ್ನ ಕಾಲಮೇಲೆ ನಿಂತುಕೊಳ್ಳುತ್ತಾನೆ . ಜಾತಕನನ್ನು ಮೊದಲು ನಿಂದಿಸಿದ ಜನರೇ ಇವನನ್ನು ಗೌರವಿಸುತ್ತಾರೆ . ಗೌರವ ಅಂದ್ರೆ ರವಿ . ತಂದೆಯಿಂದ ಮಗನಿಗೆ ದುಃಖ , ಮಗನಿಂದ ತಂದೆಗೆ ದುಃಖವಾಗುತ್ತೆ . ರವಿ ಶಾಂತಿ ಮತ್ತು ಶನಿ ಶಾಂತಿ ಮಾಡಬೇಕು . ತಂದೆ ಯಾವಾಗಲು ಆಕ್ಟಿವ್ ಮಗ ಸೋಮಾರಿ . ಜಾತಕದ ಶುಕ್ರನಿಗೆ ಗೋಚಾರದ ಶನಿಯು 11-1-3ರಲ್ಲಿ ಬಂದಾಗ ಜಾತಕನು ವಾಹನವನ್ನು ಕೊಂಡುಕೊಳ್ಳುತ್ತಾನೆ ಅಥವಾ ಮನೆಯನ್ನು ಕೊಂಡುಕೊಳ್ಳುತಾನೆ ಅಥವಾ ಮನೆಯನ್ನು ಕಟ್ಟಿಸುತ್ತಾನೆ . ಸ್ನೇಹಿತರೇ ಪ್ರಪಂಚದಲ್ಲಿ ಪ್ರತಿಯೊಬ್ಬರ ಗುಣಗಳು ವಿಭಿನ್ನವಾಗಿರುತ್ತೆ ಅಲ್ವಾ . ಯಾಕೇ ಈರೀತಿ ಅಂತ ನೋಡಿದಾಗ , ಪ್ರತಿಯೊಬ್ಬರ ಗುಣಗಳು ಅವರು ಜನಿಸಿದ ನಕ್ಷತ್ರದ ಮೇಲೆ ನಿರ್ಧಾರವಾಗುತ್ತೆ ನೋಡಿ . ಅಶ್ವಿನಿ , ಪುಷ್ಯ , ಆಶ್ಲೇಷ , ವಿಶಾಖ , ಅನುರಾಧ , ಧನಿಷ್ಠ , ಶತಭಿಷಾ ನಕ್ಷತ್ರದಲ್ಲಿ ಜನಿಸಿದವರು ಧರ್ಮದ ಬಗ್ಯೆ ಹೆಚ್ಚು ಒಲವು . ಇವರು ಯಾವುದೇ ಕೆಟ್ಟ ಕೆಲಸ ಮಾಡುವುದಕ್ಕೂ ಹೆದರುತ್ತಾರೆ . ದೇವರ ಬಗ್ಯೆ ಹೆಚ್ಚು ಭಯ ಮತ್ತು ಭಕ್ತಿ ಇರುತ್ತದೆ . ಕೃತಿಕಾ , ಆರಿದ್ರಾ , ಪುಬ್ಬಾ , ಚಿತ್ತಾ , ಮೂಲ , ಉತ್ತರಾಭಾದ್ರ ನಕ್ಷತ್ರದಲ್ಲಿ ಜನಿಸಿದವರು ತಾವಾಯಿತು ತಮ್ಮ ಕೆಲಸವಾಯಿತು ಅನ್ನುವವರು. ಮತ್ತು ಅತಿಯಾದ ಆಸೆ ಉಳ್ಳವರು ಆಗಿರುತ್ತಾರೆ . ತಮಗೆ ಬೇಕಾಗಿದ್ದನ್ನು ಪಡಿಯಲು ಹೆಣಗುತ್ತಾರೆ . ಅಲ್ವಾ ? ಭರಣಿ , ಮಖಾ , ಸ್ವಾತಿ , ಜ್ಯೇಷ್ಠ , ಶ್ರವಣ , ಪೂರ್ವಭಾದ್ರ ನಕ್ಷತ್ರದಲ್ಲಿ ಜನಿಸಿದವರು ಯಾವಾಗಲು ಹಣಕಾಸಿನ ಬಗ್ಯೆನೆ ಚಿಂತೆ ಮಾಡುತ್ತಾರೆ . ತಾನು ಎಲ್ಲರಿಗಿಂತ ಚೆನ್ನಾಗಿರಬೇಕು ಅಂತ . ಬೇರೆಯವರ ಬಗ್ಯೆ ಕಾಳಜಿ ಕಮ್ಮಿ . ಯಾರು ಏನಾದ್ರು ನನಗೇನೂ , ನಾನು ಚೆನ್ನಾಗಿರಬೇಕು ಅನ್ನುವವರು . ಅಲ್ವಾ ? ರೋಹಿಣಿ , ಮೃಗಶಿರಾ , ಉತ್ತರ ಪಲ್ಗುಣಿ ಹಸ್ತಾ , ಪೂರ್ವಾಷಾಢ , ಉತ್ತರಾಷಾಡ , ರೇವತಿ ನಕ್ಷತ್ರದಲ್ಲಿ ಜನಿಸಿದವರು ಹೆಚ್ಚಾಗಿ ಮೋಕ್ಷ ಚಿಂತನೆ ಮಾಡುತ್ತಾರೆ . ಯಾರ ಹಂಗು ತಮಗೆ ಬೇಡ ಅನ್ನುವವರು ಆಗಿರುತ್ತಾರೆ .ಜಾತಕದಲ್ಲಿ ಗುರು ಮತ್ತು ಕುಜನ ಸಂಬಂಧವಿರುವವರು ತುಂಭಾ ಹಠವಾದಿಗಳು ಮತ್ತು ದೇವರನ್ನು ಕೂಡ ಒಲಿಸಿಕೊಳ್ಳುವ ಶಕ್ತಿವಂತರು ಆಗಿರುತ್ತಾರೆ . ಜಾತಕದಲ್ಲಿ ಕುಜ ಮತ್ತು ಚಂದ್ರನ ಸಂಬಂಧ ಇದ್ರೆ , ಜಾತಕನ್ನು ತನ್ನ ಜೀವನವನ್ನು ತಾನೇ ರೂಪಿಸಿಕೊಳ್ಳುತ್ತಾನೆ . ಜಾತಕದ ಶನಿಯಿರುವ ನಕ್ಷತ್ರಾಧಿಪತಿಯ ಯಾವುದೇ ನಕ್ಷತ್ರದಲ್ಲಿ ಗೋಚಾರದ ಕೇತು ಬಂದಾಗ ಉದ್ಯೋಗದಲ್ಲಿ ಅಡೆ ತಡೆ ಉಂಟಾಗುತ್ತೆ . ಚಂದ್ರ ಮತ್ತು ಕುಜ ಸಂಬಂಧ ಇರುವವರು ಅಸಾಧ್ಯವಾದದ್ದನ್ನು ಮಾಡಿ ತೋರಿಸುವ ಗುಣ ಹೊಂದಿರುತ್ತಾರೆ . ಇವರು ಜೀವನದಲ್ಲಿ ಏನಾದ್ರು ಸಾಧನೆ ಮಾಡಲೇ ಬೇಕು ಎನ್ನುವ ಆಸೆ ಉಳ್ಳವರು . ಇವರು ಯಾವುದೇ ಒಂದು ವಿಚಾರವನ್ನು ಮನಸ್ಸಿನಲ್ಲಿ ಪದೇ ಪದೇ ಮೇಲಕು ಹಾಕಿದಾಗ ಅದು ಕಾರ್ಯಗತವಾಗುತ್ತೆ . ಇವರಿಗೆ ಹಣಕಾಸಿನ ವಿಚಾರದಲ್ಲಿಯೂ ಕೂಡ ಅನುಕೂಲವಾಗುತ್ತೆ . ದೇವಿ ಆರಾಧನೆ ಇಂದ ಅನುಕೂಲ ಹೆಚ್ಚು . ಮದುವೆಯಾ ವಿಚಾರದಲ್ಲಿ ಒಂದು ಪ್ರಶ್ನೆ ? ನಮ್ಮ ಅಕ್ಕಪಕ್ಕದ ಮನೆಯವರನ್ನೆ ಮದುವೆಯಾಗುತೇವೆ ಅಂತ ಹೇಗೆ ಹೇಳೋದು . ಜಾತಕದಲ್ಲಿ ಮೂರನೇ ಅಧಿಪತಿಯೂ ಏಳನೇ ಅಧಿಪತಿಯ ಜೋತೆ ಪರಿವರ್ತನೆ ಇದ್ದರೆ ಅಥವಾ 3 ಅಧಿಪತಿ 7 ನೇ ಮನೆಯಲ್ಲಿ ಇದ್ದರೆ ಅಥವಾ 7 ನೇ ಅಧಿಪತಿ 3 ನೇ ಮನೆಯನ್ನು ನೋಡಿದರೆ , ಜಾತಕನು ತನಗೆ ಗೊತ್ತಿರುವವರನ್ನೇ ಮದುವೆ ಆಗುತ್ತಾರೆ . ಶನಿಯು ದುಃಖ ಕಾರಕನು . ಶನಿಯು ಯಾವಗ್ರಹದ ಸಂಬಂಧ ಹೊಂದುತ್ತಾನೋ , ಆ ಗ್ರಹ ದಿಂದ ಅಥವಾ ಆ ಗ್ರಹಕ್ಕೆ ಸಂಬಂಧ ಪಟ್ಟ ಕಾರಕತ್ವದಿಂದ ಜಾತಕನು ದುಃಖ ಪಡುತ್ತಾನೆ . ರವಿ ಜ್ಯೋತೆ ಇದ್ರೆ ತಂದೆ ಅಥವಾ ಮಗನಿಂದ ದುಃಖ . ಚಂದ್ರನ ಜ್ಯೋತೆ ಇದ್ರೆ ತಾಯೀ ಅಥವಾ ಅತ್ತೆಯಿಂದ ದುಃಖ . ಗುರುವಿನ ಜ್ಯೋತೆ ಇದ್ರೆ ಹಳೆಯದನ್ನು ಯೋಚಿಸುತ್ತಾ ತನಗೆ ತಾನೇ ದುಃಖ ಪಡುತ್ತಾನೆ . ಶುಕ್ರನ ಜ್ಯೋತೆ ಇದ್ರೆ ಹೆಂಡತಿಯಿಂದ ಇಲ್ಲ ಮಗಳಿಂದ ಅಥವಾ ಮನೆಯ ತೊಂದ್ರೆಯಿಂದ ದುಃಖವಾಗುತ್ತೆ . ಬುಧನ ಜ್ಯೋತೆ ಇದ್ರೆ ಬಂದುಗಳಿಂದ ಅಥವಾ ಸ್ನೇಹಿತರಿಂದ ದುಃಖವಾಗುತ್ತೆ. ಕುಜನ ಜ್ಯೋತೆ ಇದ್ರೆ ಗಂಡನಿಂದ ಅಥವಾ ಒಡಹುಟ್ಟಿದವರಿಂದ ದುಃಖವಾಗುತ್ತೆ . ಶನಿಯು ಕೇತುವಿನ ಜ್ಯೋತೆ ಇದ್ರೆ ಕೆಲಸಮಾಡುವ ವಿಚಾರದಿಂದ ದುಃಖ ಪಡುತ್ತಾನೆ . ಯಾವ ನಕ್ಷತ್ರದ ಹುಡುಗ ಹುಡುಗಿ ಆಗಿ ಬರುತ್ತಾರೆ ಅಂತ . ಈಗ ನೋಡೋಣ ಯಾರು ಆಗೋಲ್ಲ ಅಂತ . ರವಿ ನಕ್ಷತ್ರದಲ್ಲಿ ಜನಿಸಿದವರಿಗೆ ಶನಿ , ರಾಹು ಮತ್ತು ಕೇತು ನಕ್ಷತ್ರ ಒಳ್ಳೆಯದಲ್ಲ . ಚಂದ್ರ ನಕ್ಷತ್ರದಲ್ಲಿ ಜನಿಸಿದವರಿಗೆ ಎಲ್ಲಾ ನಕ್ಷತ್ರದವರು ಆಗುತ್ತಾರೆ ಅದ್ರೆ ಶನಿ ನಕ್ಷತ್ರ ಸ್ವಲ್ಪ ಮಧ್ಯಮ . ಕುಜನ ನಕ್ಷತ್ರದಲ್ಲಿ ಜನಿಸಿದವರಿಗೆ ಶುಕ್ರ , ರಾಹು ಮತ್ತು ಕೇತು ಅಶುಭವಾಗುತ್ತೆ . ಬುಧನ ನಕ್ಷತ್ರದಲ್ಲಿ ಹುಟ್ಟಿದವರಿಗೆ ಗುರು ಮತ್ತು ಕುಜನ ನಕ್ಷತ್ರ ಅಶುಭ . ಗುರುವಿನ ನಕ್ಷತ್ರದಲ್ಲಿ ಜನಿಸಿದವರಿಗೆ ಬುಧನ ಮತ್ತು ಶುಕ್ರನ ನಕ್ಷತ್ರ ಆಗೋಲ್ಲ . ಶುಕ್ರನ ನಕ್ಷತ್ರದಲ್ಲಿ ಹುಟ್ಟಿದವರಿಗೆ ರವಿ , ಗುರು ಮತ್ತು ಶುಕ್ರನ ನಕ್ಷತ್ರ ಆಗೋಲ್ಲ . ಶನಿಯ ನಕ್ಷತ್ರದಲ್ಲಿ ಜನಿಸಿದವರಿಗೆ ಎಲ್ಲಾ ನಕ್ಷತ್ರವು ಆಗುತ್ತೆ ಅದ್ರೆ ರವಿ ಮತ್ತು ಕುಜ ಮಧ್ಯಮ . ರಾಹು ನಕ್ಷತ್ರದಲ್ಲಿ ಹುಟ್ಟಿದವರಿಗೆ ರವಿ , ಕುಜ ಮತ್ತು ಶನಿ ಅಶುಭ . ಕೇತುವಿನ ನಕ್ಷತ್ರದವರಿಗೆ ರವಿ ಮತ್ತು ಕುಜ ಆಗೋಲ್ಲ . ರವಿಯ ಗುಣಗಳಲ್ಲಿ ಒಂದು ಮುಖ್ಯವಾದ ಗುಣ ಅಂದ್ರೆ ಬೇರ್ಪಡಿಸೋದು . ರವಿಯು ಲಗ್ನದಲ್ಲಿದ್ರೆ ಜಾತಕನು ತಾನು ಎಲ್ಲರಿಂದ ಬೇರೆಯಾಗಿರೋದಕ್ಕೆ ಇಷ್ಟಪಡುತ್ತಾನೆ . ಕುಟುಂಭ ಭಾವದಲ್ಲಿದ್ರೆ ಜಾತಕನು ಮನೆಯರಿಂದ್ರ ದೂರ ವಿರುತ್ತಾನೆ . ನಾಲ್ಕನೇ ಭಾವದಲ್ಲಿ ರವಿಯಿದ್ರೆ ತಾಯಿಯಿಂದ ದೂರವಿರುತ್ತಾನೆ . ಐದನೇ ಮನೆಯಲ್ಲಿ ರವಿಯಿದ್ರೆ ಮಕ್ಕಳಿಂದ ದೂರವಿರುತ್ತಾನೆ . ಸಪ್ತಮದಲ್ಲಿ ರವಿಯಿದ್ರೆ ಮದುಯಾಗಿದ್ರು ಗಂಡ ಒಂದು ಕಡೆ ಹೆಂಡತಿ ಒಂದು ಕಡೆ ಇರುತ್ತಾರೆ . ಒಂದೇ ಮನೆಯಲ್ಲಿದ್ರು ಗಂಡ ಒಂದು ಕಡೆ ಹೆಂಡತಿ ಒಂದು ಕಡೆ ಮಲಗುತ್ತಾರೆ . ನವಮದಲ್ಲಿ ರವಿಯಿದ್ರೆ ಹೆಂಡತಿ ಮಕ್ಕಳಿಂದ ದೂರವಾಗುತ್ತಾನೆ ಅಪ್ಪ ಆರನೇಯ ಅಧಿಪತಿಯನ್ನು ಅಥವಾ 6 ನೇ ಭಾವವನ್ನು ಶತ್ರು ಸೂಚಕರು ಅನ್ನುತ್ತೇವೆ . ಹಾಗೇ ೬ನೇ ಅಧಿಪತಿಯು ಲಗ್ನದಲ್ಲಿದ್ರೆ ಅಥವಾ ಲಗ್ನಾದಿಪತಿಯು 6 ನೇ ಭಾವದಲ್ಲಿದ್ರೆ ಹಿತ ಶತ್ರುಗಳು ಜಾಸ್ತಿ . 4 ನೇ ಭಾವದಲ್ಲಿದ್ರೆ ತಾಯಿ ಶತ್ರು . 9 ನೇ ಭಾವದಲ್ಲಿದ್ರೆ ತಂದೆ ಶತ್ರು . ಕುಟುಂಭ ಭಾವದಲ್ಲಿದ್ರೆ ಕುಟುಂಬದವರು ಶತ್ರುಗಳು . ೬ನೇ ಅಧಿಪತಿಯು 7 ರಲ್ಲಿ ಅಥವಾ 7 ರ ಅಧಿಪತಿಯು 6 ರಲ್ಲಿ ಇದ್ರೆ ಹೆಂಡತಿಯು ಶತ್ರು . ಶುಕ್ರನು ರಸಿಕತೆಗೆ ಕಾರಕನು . ಶುಕ್ರನು ಲಗ್ನದಲ್ಲಿ ಇದ್ದರೆ ಅಥವಾ ಲಗ್ನಾದಿಪತಿಯ ಜ್ಯೋತೆ ಇದ್ದರು ಜಾತಕನು ರಸಿಕನೂ . ಚತುರ್ಥದಲ್ಲಿ ಇದ್ದರೆ ತಾಯಿ ರಸಿಕಳು . ಸಪ್ತಮದಲ್ಲಿ ಇದ್ದರೆ ಹೆಂಡತಿಯು ರಸಿಕಳು . ಲಗ್ನಾಧಿಪತಿ ಮತ್ತು ಸಪ್ತಮಾಧಿಪತಿಯ ಒಟ್ಟಿಗೆ ಶುಕ್ರ ಇದ್ದರೆ ಗಂಡ ಹೆಂಡತಿ ಇಬ್ಬರು ರಸಿಕರು . ನವಮದಲ್ಲಿದ್ದರೆ ತಂದೆ ರಸಿಕ . ದ್ವಿತಿಯಾದಲ್ಲಿದ್ದರೆ ಕುಟುಂಬದ ಎಲ್ಲರೂ ರಸಿಕರೇ . ಚಂದ್ರ ಶುಕ್ರ ಒಟ್ಟಿಗೆ ಇದ್ರೆ ಹಣಕಾಸಿಗೆ ಕೊರತೆ ಆದ್ರೆ ರಸಿಕತೆಗೆ ಕೊರತೆ ಇಲ್ಲ . ಯಾರ ಜಾತಕದಲ್ಲಿ ಶುಕ್ರನು ಶನಿಯಿಂದ 1-5-9-7-3-11-2-12 ಈ ಭಾವದಲ್ಲಿದ್ರೆ ಆತನು ಸ್ವಂತ ಮನೆಯನ್ನು ಹೊಂದಿರುತ್ತಾನೆ . ಇಲ್ಲ ಸ್ವಂತ ಮನೆ ಮಾಡುವ ಯೋಗ ಉಂಟಾಗುತ್ತದೆ . ಯಾರಿಗೆಲ್ಲ ಲಗ್ನಾಧಿಪತಿ ಆರನೇ ಭಾವದಲ್ಲಿ ಅಥವಾ ಆರನೇ ಭಾವಾಧಿಪತಿ ಲಗ್ನದಲ್ಲಿ ಇದ್ರೆ ಅವರು ಸಾಲಮಾಡಿಯೇ ವಾಹನ ಕೊಳ್ಳಬೇಕು ಅಥವಾ ಸಾಲಮಾಡಿಯೇ ಮನೆ ಕಟ್ಟಬೇಕು . ಯಾವುದೇ ವಸ್ತು ಕೊಳ್ಳಬೇಕಾದ್ರು ಹಾಗೇ ಮಾಡಿದ್ರೇನೇ ಅವರು ಅಭಿವೃದ್ಧಿ ಆಗೋದು . ಶುಕ್ರ ರಾಹು ಯೋಗ : ಯಾರಿಗೆ ಶುಕ್ರ ರಾಹುವಿನ ನಕ್ಶತ್ರದಲ್ಲಿ ಇರೋದು ಅಥವಾ ರಾಹು ಶುಕ್ರನ ನಕ್ಶತ್ರದಲ್ಲಿ ಇರೋದು ಅಥವಾ ಶುಕ್ರಾರಾಹು ಒಟ್ಟಿಗೆ ಇರೋದು ಅಥವಾ ಶುಕ್ರಾರಾಹು 1-5-9 ನಲ್ಲಿ ಇರೋದು ಆದ್ರೆ ಇದು ಶುಕ್ರಾರಾಹು ಯೋಗವಾಗುತ್ತೆ . ಇವರು ಎಂದಿಗೂ ಗ್ರೌಂಡ್ ಫ್ಲೋರ್ ನಲ್ಲಿ ವಾಸಮಾಡಬಾರದು . ಗ್ರೌಂಡ್ ಫ್ಲೋರ್ ನಲ್ಲಿ ಇದ್ರೆ ಇವರಿಗೆ ಅಭಿರುದ್ದಿ ಕಮ್ಮಿ ಮತ್ತು ಹಣಕಾಸಿನ ಮುಗ್ಗಟ್ಟು ಉಂಟಾಗುತ್ತೆ . ಇವರು ಸೆಕೆಂಡ್ ಫ್ಲೋರ್ ನಲ್ಲಿ ವಾಸಮಾಡಿದ್ರೆ ತುಂಬಾ ಚೆನ್ನಾಗಿ ಅಭಿವೃದ್ಧಿ ಆಗುತ್ತಾರೆ . ಆಗ ಹಣ ತಾನಾಗಿಯೇ ಹರಿದು ಬರುತ್ತದೆ. ಒಂದು ಪದದ ಜ್ಯೋತಿಷ್ಯ . ಲಗ್ನದಲ್ಲಿ ಸ್ಥಿತವಿರುವ ಗ್ರಹಗಳು . ರವಿ - ಅಧಿಕಾರಿ ಮನೋಭಾವನೆ . ಚಂದ್ರ - ಅನುಮಾನ ಪಡುವ ಸ್ವಭಾವ . ಬುಧ - ಯಾವಾಗಲು ತಮಾಸೆ ಮಾಡುವವ . ಗುರು - ನಾನು ಹೇಳಿದ್ದು ಮಾಡು ಎನ್ನುವವ . ಶುಕ್ರ - ನಾನು ಬಯಸಿದ್ದೆ ಬೇಕು ಎನ್ನುವವ . ಶನಿ - ತನಗೆ ಎಲ್ಲಾ ತಿಳಿದಿದೆ ಎನ್ನುವವ . ರಾಹು - ಅಸೆ ಪಡುವವ . ಕೇತು - ಬೇರೆಯವರ ಹುಳುಕು ಹುಡುಕುವವ . ನಾಡಿ ಜ್ಯೋತಿಷ್ಯ ಮತ್ತು ಸಂಖ್ಯಾ ಶಾಸ್ತ್ರ . ದಿನಾಂಕ 1-10-19-28. ತಾರೀಖಿನಂದು ಹುಟ್ಟಿದವರ ಗುಣಗಳು . ಈ ತಾರೀಖಿನವರು ಸೂರ್ಯನ ಗುಣಗಳನ್ನು ಹೊಂದಿರುತ್ತಾರೆ . ನಾನು ಎಂಬಾ ಅಹಂ ಜಾಸ್ತಿ , ಯಾವುದೇ ಗುಟ್ಟಿನ ವಿಚಾರ ಇವರಲ್ಲಿ ಗೌಪ್ಯವಾಗಿರೋಲ್ಲ . ಆಡಳಿತ ಬೇಕು ಅನ್ನುವ ಭಾವನೆ ಹೆಚ್ಚು . ಯಾರ ಕೈಯ ಕೆಳಗೆ ಕೆಲಸ ಮಾಡೋದು ಕಷ್ಟ . 6 ಮತ್ತು 8 ತಾರೀಖಿನವರ ಜ್ಯೋತೆ ಹೊಂದಾಣಿಕೆ ಕಷ್ಟವಾಗುತ್ತೆ . ಇವರಿಗೆ ಬೇರೆಯವರು ಹೇಳೋದನ್ನು ಕೇಳಿಸಿಕೊಳ್ಳೋ ತಾಳ್ಮೆ ಕಮ್ಮಿ . ಇವರು ನವಿಲು ಗರಿಯನ್ನು ತಮ್ಮ ಹತ್ತಿರ ಇಟ್ಟುಕೊಂಡ್ರೆ ಅದೃಷ್ಟ ಬರುತ್ತೆ .ಭಾನುವಾರಗಳಲ್ಲಿ ಗೋಧಿ ದಾನ ಮಾಡುವುದರಿಂದ ಒಳ್ಳೆಯದಾಗುತ್ತೆ . ಆದಿತ್ಯ ಹೃದಯ ಪಠನೆ ಮಾಡುವುದು ತುಂಬಾ ಒಳ್ಳೆಯದಾಗುತ್ತೆ . 1-10-19-28 ದಿನಾಂಕ ದಂದು ಹುಟ್ಟಿರುವವರು , ಭಾನುವಾರ , ಬುಧವಾರ ಅಥವಾ ಗುರುವಾರಗಳಲ್ಲಿ ಆರಂಭಿಸುವ ಕೆಲಸಗಳು ಸುಗಮವಾಗುತ್ತೆ . ಇವರಿಗೆ ಕೇಸರಿ , ಅರೇಂಜ್ , ಹಳದಿ ಕಲ್ಲರ್ ಒಳ್ಳೆಯದು . ಇವರು ಅರುಣೋದಯದ ಫೋಟೋವನ್ನು ತಮ್ಮ ಮನೆ ಅಥವಾ ಆಫೀಸ್ನಲ್ಲಿ ಹಾಕೋದು ಒಳ್ಳೆಯದು . ಈಶ್ವರನ ಪೂಜೇ , ಅಶ್ವಥ ಮರದ ಪೂಜೇ ಒಳ್ಳೆಯ ಫಲ ಕೊಡುತ್ತದೆ . 1-10-19-28 ತಾರೀಕಿನಂದು ಹುಟ್ಟಿದವರ ನೆಗಿಟಿವ್ ಗುಣಗಳು ಅಂದ್ರೆ ಯಾರು ಹೇಳಿದ್ದು ಕೇಳಿಸಿಕೊಳ್ಳೋ ಮನಸ್ಥಿತಿ ಕಮ್ಮಿ . ನಾನು ಹೇಳಿದ್ದೆ ನಡೆಯಬೇಕು ಅನ್ನೋದು . ಯಾವುದೇ ಕೆಲಸ ಮಾಡಿದ್ರು ಅಲ್ಲಿ ನಾನೇ ಲೀಡರ್ ಅನ್ನೋದು , ಯಾವಾಗಲು ಅಧಿಕಾರಿಗೆ ಎದಿರು ಮಾತಾಡೋದು , ಯಾವುದೇ ವಿಚಾರವನ್ನು ಗೌಪ್ಯವಾಗಿ ಇಟ್ಟುಕೊಳ್ಳಲು ಆಗದೆ ಇರೋದು , ಮುಖದ ಮೇಲೆ ಹೊಡೆದ ಹಾಗೇ ಮಾತಾಡೋದು , ಸಹಾಯ ಮಾಡಿದವರನ್ನು ತಕ್ಷಣವೇ ಮರೆತು ಬಿಡೋದು ಇವರ ಮೈನಸ್ ಪಾಯಿಂಟ್ಸ್ . ಇವುಗಳನ್ನು ಸರಿ ಪಡಿಸಿಕೊಂಡ್ರೆ ಇವರ ಜೀವನ ಸುಗಮವಾಗುತ್ತೆ . ವಾಸ್ತು ದೋಷಗಳು . ನಿಮ್ಮ ಮನೆಯ ಅಡಿಗೆ ಮನೆ ಬೇಡದ ವಸ್ತುಗಳಿಂದ ತುಂಬಿದ್ರೆ ಅಥವಾ ರಾತ್ರಿ ಊಟ ಮಾಡಿದ ಪಾತ್ರೆಗಳು ತೊಳೆಯದೆ ಹಾಗೇ ಇದ್ರೆ ಅಥವಾ ಅಡಿಗೆ ಮನೆಯಲ್ಲಿ ಒಗ್ಗರೆಣೆ ಡಬ್ಬ ಖಾಲಿ ಖಾಲಿ ಇದ್ರೆ , ಆ ಮನೆಯಲ್ಲಿ ಹಣಕಾಸಿನ ಮುಗ್ಗಟ್ಟು ಉಂಟಾಗುತ್ತೆ ಅಥವಾ ಮನೆಯ ಸ್ತ್ರೀಯರು ಕಾಯಿಲೆಯಿಂದ ಬಳಲುತ್ತಾರೆ ವಾಸ್ತು ದೋಷ ಕಾರಣದಿಂದ ನೀವು ಹಣಕಾಸಿನ ತೊಂದ್ರೆ ಅನುಭವಿಸಿದ್ದೀರಾ , ಹಾಗಾದ್ರೆ ನಿಮ್ಮ ಜಾತಕದಲ್ಲಿ ಶುಕ್ರನಿಗೆ ಯಾರ ಸಂಬಂಧ ಇದೆ ನೋಡಿ . ಶುಕ್ರ ಏನಾದ್ರು ರಾಹುವಿನ ನಕ್ಷತ್ರದಲ್ಲಿ ಇದ್ರೆ ಅಥವಾ ರಾಹುವಿನ ಯುತಿಯಲ್ಲಿದ್ರೆ ನೀವು ಏನಾದ್ರು ಗ್ರೌಂಡ್ ಫ್ಲೋರ್ ನಲ್ಲಿ ವಾಸಮಾಡಿದ್ರೆ ಸಾಲಗಾರಗುವುದು ಗ್ಯಾರಂಟಿ . ಮಹಡಿ ಮನೆಯಲ್ಲಿ ವಾಸಮಾಡಿದ್ರೆ ಈ ದೋಷಾ ಪರಿಹಾರವಾಗುತ್ತೆ ಸ್ತ್ರೀ ಜಾತಕದಲ್ಲಿ ರಾಹು ಏನಾದ್ರು ಕುಜನ್ನ ನೋಡಿದ್ರೆ , ಮದುವೆ ನಿಧಾನವಾಗಬಹುದು ಅಥವಾ ಮದುವೆ ಆಗದೆ ಇರಬಹುದು . ಒಂದು ವೇಳೆ ಮದುವೆ ಆದ್ರೂ ಸಹ ಅವಳು ತನ್ನ ಗಂಡನನ್ನು ಇಷ್ಟಪಡೋದಿಲ್ಲ . ಶುಕ್ರನು ಮೇಷದಲ್ಲಿ ಗುರುವಿನ ಜ್ಯೋತೆ ಇದ್ದಾಗ , ಹೆಂಡತಿಯು ನೋಡಲು ಸುಂದರಳು ಮತ್ತು ಎಲ್ಲರಿಗೂ ಗೊತ್ತಿರುವ ಲೇಡಿ ಆಗಿರುತ್ತಾಳೆ . ತುಂಬಾ ದೈರ್ಯವಂತಳು ಆಗಿರುತ್ತಾಳೆ . ಸ್ಪಷ್ಟವಾಗಿ ಮಾತನಾಡುತ್ತಾಳೆ . ಕಣ್ಣಿನಲ್ಲೇ ಹೆದರಿಸುವವಳು . ಔಷದಿಬಲ್ಲವಳು ಆಗಿರುತ್ತಾಳೆ . ಜಿಪುಣತನವನ್ನು ಸೂಚಿಸುವ ಗ್ರಹ ಶನಿ . ಯಾರಿಗಾದರೂ ಮೇಷ , ತುಲಾ , ಮಕರ ಅಥವಾ ಕುಂಭ ದಲ್ಲಿ ಶನಿ ಇದ್ದರೆ ಅವರು ತುಂಬಾ ಜಿಪುಣರು . ಲಗ್ನ ಅಥವಾ ದ್ವಿತೀಯದಲ್ಲಿ ಶನಿಯಿದ್ದರೂ ಕೂಡ ಜಿಪುಣರಾಗಿರುತ್ತಾರೆ . ನಿಮ್ಮ ಮಗಳ ಅಥವಾ ಮಗನ ಜಾತಕದಲ್ಲಿ ಶುಕ್ರಚಂದ್ರರ ಯುತಿ ಇದ್ರೆ , ಆ ಮಗುವಿನ ಜನನವಾದ ಮೇಲೆ ತಂದೆತಾಯೀ ಸಾಲಗಾರರಾಗುವ ಸಂಭವ ಜಾಸ್ತಿ ಇರುತ್ತೆ . ಒಂದು ವೇಳೆ ಸ್ತ್ರೀ ಜಾತಕದಲ್ಲಿ ಶುಕ್ರನು ಚಂದ್ರನ ನಕ್ಷತ್ರದಲ್ಲಿ ಇದ್ರೆ ಅಥವಾ ಶುಕ್ರಾಚಂದ್ರ ಯುತಿ ಇದ್ರೆ , ಆ ಸ್ತ್ರೀ ಯಾ ಮದುವೆಯ ನಂತರ , ಅವಳ ಪತಿಯು ತನ್ನೆಲ್ಲ ಆಸ್ತಿಯನ್ನು ಮೋಸದಿಂದ ಕಳೆದುಕೊಳ್ಳುತಾನೆ. ಮೋಸಹೋಗುವುದು ಗೊತ್ತಾಗುವುದಿಲ್ಲ . ಗೊತ್ತಾಗುವ ಹೊತ್ತಿಗೆ ಕೈ ಮೀರಿಹೋಗಿರುತ್ತೆ . ಡಾ .ರಾಮಮೂರ್ತಿ . ಬೃಹಸ್ಪತಿ ನಕ್ಷತ್ರ ನಾಡಿ . ಗೋಚರ ರವಿಯು ಜಾತಕದ ರವಿಯ ಮೇಲೆ ೧-೫-೯-೭ ರಲ್ಲಿ ಸಂಚರಿಸುವಾಗ ಜಾತಕದವರಿಗೆ ಜ್ವರ , ಸುಸ್ತು , ಪಿತ್ತ ಜಾಸ್ತಿಯಾಗಿ ತಲೆ ಸುತ್ತೋದು ಮತ್ತು ಎಲ್ಲಾ ವಿಚಾರದಲ್ಲಿ ಕೋಪ ಬರುತ್ತೆ . ನಿಮ್ಮ ಜಾತಕದ ಶನಿಯ ಮೇಲೆ ಗೋಚರ ಕುಜ ಏನಾದ್ರು 1-5-9-7 ನಲ್ಲಿ ಇದ್ರೆ ನಿಮಗೆ ಹಲ್ಲು ನೋವ್ವು ಕಂಡಿತಾ . ನೀವು ಎಷ್ಟೇ ದೊಡಿದ್ರು ಸಾಲಗಾರರೇ ಹಾಗಾದ್ರೆ ನಿಮ್ಮ ಜಾತಕದಲ್ಲಿ ಶುಕ್ರನು ಚಂದ್ರ ಸಂಬಂಧದಲ್ಲಿ ಇರಬಹುದು .ಚೆಕ್ ಮಾಡಿ ಗುರುವಿಗೆ ಕುಜನ ಸಂಬಂಧವಿದ್ದವರಿಗೆ ಹಣ ಕಾಯಲ್ಲಿರುವಾಗ ನಿದ್ರೇನೇ ಬರೋಲ್ಲ . ನಿಜಾನಾ ? ಏನು ಮಾಡಬೇಕು ಅನ್ನೋ ಚಿಂತೆ ಶುಕ್ರ ರಾಹು ಸಂಬಂಧ ಇದ್ರೆ ವೈವಾಯಿಕ ಜೀವನ ಚೆನ್ನಾಗಿರೋದಿಲ್ಲ . ಹೆಂಡತಿ ತುಂಬಾ ಮಾತನಾಡುವವಳು ಆಗಿರುತ್ತಾಳೆ ಇಲ್ಲ ಹೇಳಿದ್ದೆ ಹೇಳುತ್ತಾಳೆ ಕುಜ ರಾಹು ಸಂಬಂಧ ಬಂದ್ರೆ ಮಾತುಮಾತಿಗೂ ಪ್ರಮಾಣ ಮಾಡುತ್ತೇನೆ ಅಂತ ಹೇಳೋದು . ಕರ್ಪುರ ಹತ್ತಿಸುತ್ತೆನೆ ಅಂತ ಹೇಳೋದು . ಇಲ್ಲ ಬೇರೆಯವರ ಕೈಯಲ್ಲಿ ಕರ್ಪುರ ಹತ್ತಿಸಿ ಪ್ರಮಾಣ ಮಾಡಿಸೋದು ಮಾಡುತ್ತಾರೆ . ಶನಿ ಚಂದ್ರ ಯೋಗ . ಚಂದ್ರನು ಶನಿ ನಕ್ಷತ್ರದಲ್ಲಿ ಸ್ಥಿತವಿದ್ರೆ ಅಥವಾ ಶನಿ ಮತ್ತು ಚಂದ್ರ ಪರಿವರ್ತನಾ ಯೋಗವಿದ್ರೆ ಅಥವಾ ಶನಿಯು ಚಂದ್ರನನ್ನು ೩-೭-೧೦ ನೇ ದೃಷ್ಟಿಯಿಂದ ನೋಡಿದ್ರೆ ಶನಿ ಚಂದ್ರ ಯೋಗವಾಗುತ್ತೆ . ಈ ಯೋಗವಿದ್ರೆ ಅತ್ತೆ ಸೊಸೆಗೆ ಆಗೋದಿಲ್ಲ . ಮನೆಯಲ್ಲಿ ನೆಮ್ಮದಿಯಿರೋದಿಲ್ಲ . ಜಾತಕನು ಯಾವಾಗಲೂ ಹಳೆಯವಿಚಾರವನ್ನೇ ಹೇಳುತ್ತಿರುತ್ತಾನೆ . ಅಭಿವೃದ್ಧಿ ಕಮ್ಮಿ . ಪರಿಹಾರ ಶನಿಗೆ ತಾಯಿ ಅಂದ್ರೆ ಪ್ರೀತಿ ಅದ್ರಿಂದ ತಾಯಿಗೆ ಯಾವಾಗಲು ನಮಸ್ಕಾರ ಮಾಡಿರಿ . ಚಂದ್ರಮಣಿ ಉಂಗುರ ಧರಿಸಿರಿ . ಓಂ ನಮಃ ಶಿವಾಯಃ ಮಂತ್ರ ಜಪಿಸಿ . ಶನಿಗೆ ಸ್ತ್ರೀಯರನ್ನು ಕಂಡ್ರೆ ಗೌರವ ಅದ್ರಿಂದ ಸ್ತ್ರೀಯರಿಗೆ ದುಃಖ ಕೊಡಬೇಡಿ . ನಿಮ್ಮ ಜಾತಕದಲ್ಲಿ ಶುಕ್ರನು ಈ ಕೆಳಗಿನ ರಾಶಿಯಲ್ಲಿ ಇದ್ದರೆ ನಿಮಗೆ ಮನೆ ಕೊಳ್ಳುವಯೋಗ , ವಾಹನ ಕೊಳ್ಳುವಯೋಗ , ಒಡವೆ ಕೊಳ್ಳುವಯೋಗ , ಮದುವೆಯಾಗದವರಿಗೆ ಮದುವೆಯೋಗ , ಒಟ್ಟಾರೆ ನಿಮಗೆ ಅದೃಷ್ಟವೇ ಅದೃಷ್ಟ . ಮೇಷ - ಮಿಥುನ - ಸಿಂಹ - ತುಲಾ - ಧನಸು - ಕುಂಭ . ನೀವು ಈಗಲೇ ರೆಡಿಯಾಗಿರಿ . ವಾಹನ ತಗೋಬೇಕಾದ್ರೆ ಯೋಗ ಇದೆಯೋ ಇಲ್ಲವೋ ಅಂತ ಹೇಗೆ ಗೊತ್ತಾಗುತ್ತೆ ? ಯೋಗವನ್ನು ಹೇಗೆ ನೋಡೋದು ? ಶುಕ್ರನ ಸ್ಥಾನ ಬಲವಾಗಿದ್ದು, ಶನಿಯ ಸಂಯೋಗ ಅಥವಾ ಗೋಚಾರ ಶನಿಯು ಶುಕ್ರನಿಗೆ ೧,೫ ,೯ ಗೆ ಬಂದರೂ ವಾಹನ ಲಭ್ಯ. ಶನಿ ಬಲವಾಗಿದ್ದರೆ ಹಳೆಯ ಅಥವಾ ದೊಡ್ಡದಾದ ವಾಹನ , ಶುಕ್ರ ಬಲವಾಗಿದ್ದರೆ ಹೊಸ ಮಾಡಲ್ ಗಳು ದೊರೆಯುತ್ತವೆ.ಗೋಚಾರದಲ್ಲಿ ಶುಕ್ರನ ಮನೆಗೆ ಶನಿಯ ಸಂಚಾರವಿದ್ದು , ಗೋಚಾರ ಗುರು ದೃಷ್ಟಿ ಇದ್ದರೂ ಒಳ್ಳೆಯ ವಾಹನದ ಲಭ್ಯವಿರುತ್ತದೆ. ರಾಹು ಯಾವ ರಾಶಿಯಲ್ಲಿ ಸ್ಥಿತವಿರುತ್ತಾನೋ , ಆ ರಾಶಿಗೆ ಸಂಬಂಧಪಟ್ಟ ದಿಕ್ಕಿನಲ್ಲಿ ಅವರ ಮನೆಗೆ ರಸ್ತೆ ಇರುತ್ತದೆ . ಇಲ್ಲ ಮನೆಯ ಬಾಗಿಲು ಇರುತ್ತದೆ ರವಿ ಕುಜ - ಅಧಿಕಾರವುಳ್ಳ ಗಂಡ . ಬುಧ ಕುಜ - ಬುದ್ದಿವಂತ ಮತ್ತು ಲೆಕ್ಕಾಚಾರದ ಗಂಡ . ಗುರು ಕುಜ - ಹಠಮಾರಿ ಮತ್ತು ಬೇರೆಯವರಿಗೆ ಉಪದೇಶ ಮಾಡುವ ಗಂಡ . ಶುಕ್ರ ಕುಜ - ಯಾವಾಗಲು ಹಣದಬಗ್ಯೆ ಯೋಚಿಸುವ ಗಂಡ . ಶನಿ ಕುಜ - ಟೆಕ್ನಿಕಲ್ ಗಂಡ . ರಾಹು ಕುಜ - ದೊಡ್ಡ ದೊಡ್ಡ ಮಾತಾಡುವ ಗಂಡ . ಕೇತು ಕುಜ - ಯಾವುದಕ್ಕೂ ತಲೆಕೆಡಿಸಿ ಕೊಳ್ಳದ ಗಂಡ ರವಿ ಶುಕ್ರ -ಅಹಂಕಾರದ ಹೆಂಡತಿ . ಕುಜ ಶುಕ್ರ - ಕೋಪಿಷ್ಠ ಹೆಂಡತಿ . ಚಂದ್ರ ಶುಕ್ರ - ಧಾರಾಳ ಹೆಂಡತಿ . ಬುಧ ಶುಕ್ರ - ಬುದ್ದಿವಂಥ ಹೆಂಡತಿ . ಗುರು ಶುಕ್ರ - ಜ್ಞಾನವಂತೆ ಹೆಂಡತಿ . ಶನಿ ಶುಕ್ರ ಆಸೆಯುಳ್ಳ ಹೆಂಡತಿ . ರಾಹು ಶುಕ್ರ - ಜೋರುಬಾಯಿಯ ಹೆಂಡತಿ . ಕೇತು ಶುಕ್ರ -ವೈರಾಗ್ಯದ ಹೆಂಡತಿ . ರವಿ ಶುಕ್ರ - ಅದೃಷ್ಟವಂತ ತಂದೆ , ಅಧಿಕಾರವಂಥ ಹೆಂಡತಿ . ಭಾಗ್ಯವಂತ ಮಗಳು . ಚಂದ್ರ ಶುಕ್ರ - ಅನುಮಾನ ಪಡುವ ಹೆಂಡತಿ. ರವಿ ರಾಹು ಸುಖವಾಗಿರುವ ತಂದೆ . ರವಿ ಕೇತು ಕಷ್ಟಪಟ್ಟಿರುವ ತಂದೆ . ಕುಜ ಶುಕ್ರ ಯಾವಾಗಲು ಕಣ್ಣಲ್ಲಿ ನೀರುತುಂಬಿರುವ ಪತ್ನಿ . ಗುರು ಶುಕ್ರ ಯಾವಾಗಲು ಉಪದೇಶಮಾಡುತ್ತಿರುವ ಪತ್ನಿ . ಯಾರಿಗೆ ಲಗ್ನ ಅಥವಾ ದ್ವಿತೀಯ ಭಾವದಲ್ಲಿ ರವಿ ಇದ್ರೆ ಅವರು ಬೇರೆಯವರು ಮಾಡಿದ ಸಹಾಯವನ್ನು ಬೇಗ ಮರೆತುಬಿಡುತ್ತಾರೆ . ಇವರು ಯಾರನ್ನು ಜಾಸ್ತಿ ಹಚ್ಚಿಕೊಳ್ಳೋದಿಲ್ಲ . ರವಿ ಬುಧ ರಾಹು ಒಟ್ಟಿಗೆ ಇದ್ರೆ ಜಾತಕದವರಿಗೆ ಪಿತ್ರಾಜಿತ ಅಸ್ತಿ ಬರುತ್ತೆ . ಹೆಣ್ಣಿನ ಜಾತಕದಲ್ಲಿ ಶುಕ್ರನನ್ನು ಜೀವಕಾರಕ ಎಂದು ಪರಿಗಣಿಸಬೇಕು . ಶುಕ್ರ ರವಿಯ ಯುತಿ ಇದ್ರೆ ಅವಳು ಸ್ವಲ್ಪ ಅಹಂ ಉಳ್ಳವಳು . ಸ್ವಾಭಿಮಾನಿ , ಇದ್ದದನ್ನು ಇದ್ದಂಗೆ ಹೇಳುವವಳು . ಅವಳಲ್ಲಿ ಯಾವುದೇ ಗುಪ್ತಾ ವಿಚಾರಗಳು ಉಳಿಯುವುದಿಲ್ಲ ಶುಕ್ರನ ಹಿಂದೆ ಅಥವಾ ಮುಂದೆ ರವಿ ಇದ್ರೆ , ಹೆಂಡತಿಗೆ ಕಣ್ಣಿನ ತೊಂದ್ರೆ ಇರುತ್ತೆ . ಗುರುವಿನಿಂದ ಶನಿಯು ಎರಡನೇ ಮನೆಯಲ್ಲಿ ಇದ್ದರೆ ಜಾತಕನು ಚಿಕ್ಕವಯಸ್ಸಿನಲ್ಲೇ ಕೆಲಸಕ್ಕೆ ಸೇರುತ್ತಾನೆ ಶುಕ್ರನಿಂದ ಎರಡನೇ ಮನೆಯಲ್ಲಿ ಬುಧ ಇದ್ರೆ . ಹೆಂಡತಿಯು ಬುದ್ದಿವಂತಳು ಆಗಿರುತ್ತಾಳೆ . ಗುರುವಿದ್ರೆ ಜ್ಞಾನವಂತಳು . ಕುಜನಿದ್ರೆ ಲೆಕ್ಕಾಚಾರದವಳು ಶುಕ್ರನ ಹಿಂದೆ ಅಥವಾ ಮುಂದೆ ರಾಹು ಇದ್ರೆ ಹೆಂಡತಿಯು ತುಂಬಾ ಮಾತನಾಡುವವಳು ಶುಕ್ರನ ಮುಂದೆ ಬುಧ ಕೇತು ಇದ್ರೆ ಹೆಂಡತಿಯು ಬುದ್ದಿವಂತಳು ಮತ್ತು ನಿಷ್ಟೂರವಾಗಿ ಮಾತನಾಡುವವಳು ಜಾತಕದಲ್ಲಿ ಶುಕ್ರನಿಗೆ ಗುರುವಿನ ಸಂಬಂಧ ಇದ್ದರೆ , ಜಾತಕನಿಗೆ ಬೇಗ ಮದುವೆ ಆಗುತ್ತೆ . ನೀವು ಯಾವ ಯೋಗದಲ್ಲಿ ಹುಟ್ಟಿರುತ್ತೀರಿ ನೋಡಿ , ಅದೇ ಯೋಗ ಯಾವ ವಾರ ಬರುತ್ತೆ ನೀಡಿಕೊಳ್ಳಿ , ಆ ದಿನ ನಿಮಗೆ ಧನ ಯೋಗವಿರುತ್ತೆ . ರವಿ ಯಿಂದ ಶನಿಯು 2 ನೆ ಮನೆಯಲ್ಲಿದ್ದರೆ ಜಾತಕನ ತಂದೆಯು ಚಿಕ್ಕ ವಯಸ್ಸಿನಲ್ಲಿ ತುಂಬಾ ಕಷ್ಟ (ಶ್ರಮ ) ಪಟ್ಟಿರುತ್ತಾರೆ. 7 ನೇ ಅಧಿಪತಿ 6 ನೇ ಮನೆಯಲ್ಲಿ ಇದ್ದರೆ ಹೋದ ಜನ್ಮದಲ್ಲಿಯ ಪತಿ ಅಥವಾ ಪತ್ನಿ ಯೇ , ಈ ಜನ್ಮದಲ್ಲಿ ಇರುತ್ತಾರೆ 7 ನೇ ಅಧಿಪತಿಯು 8 ನೇ ಮನೆಯಲ್ಲಿ ಇದ್ದರೆ , ಮುಂದಿನ ಜನ್ಮದಲ್ಲಿಯೂ ಇವರೇ ನಿಮ್ಮ ಪತಿ ಅಥವಾ ಪತ್ನಿ ಆಗುತ್ತಾರೆ . ರವಿ ಮತ್ತು ಗುರುವಿಗೆ ಪರಿವರ್ತನೆ ಯೋಗ ವಿದ್ದು ಗೋಚಾರ ಶನಿ ಅಥವಾ ಗುರು , ರವಿ ಸ್ಥಿತ ರಾಶಿಗೆ ಬಂದಾಗ ಕೆಲಸದಲ್ಲಿ ಬಡ್ತಿ ಸಿಗುತ್ತದೆ ಜೊತೆಗೆ ಹೆಸರು ಮತ್ತು ಕೀರ್ತಿಯನ್ನು ಸಹಾ ಗಳಿಸುತ್ತಾರೆ. "ಬಂಧನ ಯೋಗ" ಕುಜ - ಪೊಲೀಸ್ ಕೇತು - ಕೈ ಬೇಡಿ ಯಾರ ಜಾತಕದಲ್ಲಿ ಕುಜ ಮತ್ತು ಕೇತು ಸಂಯೋಗ ಇರುತ್ತೆ ಅವರಿಗೆ "ಬಂಧನ ಯೋಗ" ಇರುತ್ತೆ. ರಾಹು ತನ್ನ ಮಿತ್ರ ಗ್ರಹಗಳ ರಾಶಿಗಳಲ್ಲಿ ಸ್ಥಿತನಾಗಿದ್ದು, ಆ ರಾಶ್ಯಾಧಿಪತಿ ರಾಹುವಿನ ಜೊತೆ ಸಂಯೋಗ ಹೊಂದಿದ್ದರೆ, ಆ ರಾಶ್ಯಾಧಿಪತಿ ಪ್ರಭಲವಾದ ರಾಜಯೋಗ ವನ್ನು ಕೊಡುತ್ತೆ ಮತ್ತು ಜೀವನದಲ್ಲಿ ಅತ್ಯಂತ ಮಹತ್ತರವಾದ ತಿರುವನ್ನು ಆ ಗ್ರಹ ಕೊಡುತ್ತೆ. ಉದಾ: ಕನ್ಯಾದಲ್ಲಿ ಬುಧ ನ ಜೊತೆ ರಾಹು ಸಂಯೋಗ. ರವಿ ,ಶುಕ್ರ ಮತ್ತು ಚಂದ್ರ ಈ ಮೂರು ಗ್ರಹಗಳ ಸಂಯೋಗವಿದ್ದರೆ ಅಥವಾ ಸಂಬಂದ ಬಂದರೆ , ಜಾತಕ/ಜಾತಕಿ ಯ ಮುಖವು ತುಂಬಾ ತೇಜಸ್ಸಿನಿಂದ ಕೂಡಿದ್ದು, ನೋಡಲು ತುಂಬಾ ಆಕರ್ಷಕ ರಾಗಿರುತ್ತಾರೆ. =ಅಭೀಂದ್ರ ರಾಮಮೂರ್ತಿ 9845347963 9341035841 Naadi Astrologer

ದಾಂಪತ್ಯದಲ್ಲಿ ಅನ್ಯೋನ್ಯತೆ ಕಡಿಮೆಯಾಗಿದೆ. ಮಾಡುವ ಕೆಲಸ ಕಾರ್ಯಗಳಲ್ಲಿ ಬಹಳಷ್ಟು ವಿಘ್ನಗಳು, ದರಿದ್ರಗಳು ಕಂಡು ಬರುತ್ತಿದೆ.

ದಾಂಪತ್ಯ ಜೀವನ ಮತ್ತು ಕಳತ್ರ ಕಾರಕ ಶುಕ್ರ ದೂಷೀತನಾದಲ್ಲಿ ಹಾಗೂ ಯಾವ ಯಾವ ಗ್ರಹ ಸಂಯೋಗ ದಿಂದ ಹೇಗೆ ಸಮಸ್ಯೆ ಗಳು , ಬರುತ್ತದೆ ಮತ್ತು ಅದಕ್ಕೆ ಪರಿಹಾರ ! ಮೊದಲಿಗೆ . . . . . . . . . . .ಹರಿ ಓಂ ಹರೇ ಶ್ರೀನಿವಾಸ. ಯಾರೇ ಆಗಿರಲಿ ಜಾತಕವನ್ನು ಕೇಳಬೇಕು ಎಂದುಕೊಂಡಿರುವವರು ಕಷ್ಟದಲ್ಲಿ ಇರುವವರೇ ಹೇಚ್ಚು ಕೇಳುವುದು ಚನ್ನಾಗಿ ಇದ್ದಾಗ ಯಾರು ಕೇಳುವುದಿಲ್ಲ, ರೋಗ ಬಂದಾಗಲೇ ಡಾಕ್ಟರ್ ಬಳಿ ಓಡಿ ಹೋಗುವುದು , ಮುಖ್ಯವಾಗಿ ಪ್ರತಿಯೊಬ್ಬ ಮನುಷ್ಯರು ಕೂಡ ಸುಖವನ್ನೇ ಅಪೇಕ್ಷೆ ಪಡುತ್ತಾರೆ . ನಮ್ಮ ಜಾತಕದಲ್ಲಿ ಸುಖ ಸ್ಥಾನಾಧಿಪತಿ ಆಗಿರುವವನು ರಾಹುವಿನ ಜೊತೆಯಲ್ಲಿ ಇದ್ದರೆ ಅಥವಾ ಕುಜ ರಾಹು ಸಂಯೋಗದಲ್ಲಿ ಇದ್ದರೆ ಅಥವಾ ಶುಕ್ರ ರಾಹು ಸಂಯೋಗದಲ್ಲಿ ಇದ್ದರೆ ದಾಂಪತ್ಯ ಜೀವನದಲ್ಲಿ ಅನಾನುಕೂಲ, ಮಾಡುವ ಕೆಲಸ ಕಾರ್ಯಗಳಲ್ಲಿ ದರಿದ್ರತೆ, ಎಷ್ಟೇ ಪ್ರಯತ್ನವನ್ನು ಪಟ್ಟರು ಕೂಡ ವಿಘ್ನಗಳು ಎದುರಾಗುತ್ತಾ ಇರುತ್ತವೆ. ಬಹಳಷ್ಟು ಜನ ಏನು ಮಾಡುತ್ತಾರೆ ಎಂದರೆ ಜ್ಯೋತಿಷ್ಯರ ಬಳಿ ಹೋಗುತ್ತೀರ. ಶುಕ್ರನ ದೆಸೆ ನೆಡೆಯುತ್ತಿದೆ ನೀವು ಚೆನ್ನಾಗಿ ಇರುತ್ತೀರ ಎಂದು ಜ್ಯೋತಿಷ್ಯರು ಸಹ ಹೇಳಿ ಬಿಡುತ್ತಾರೆ. ಆದರೆ ನಿಮ್ಮ ಜಾತಕದಲ್ಲಿ ಶುಕ್ರ ಮತ್ತು ರಾಹು ಸಂಯೋಗದಲ್ಲಿ ಇದ್ದರೆ ಅಥವಾ ಕುಜ ಮತ್ತು ರಾಹು ಸಂಯೋಗದಲ್ಲಿ ಇದ್ದರೆ ನಾನಾ ರೀತಿಯ ಸಂಕಷ್ಟಗಳನ್ನು ಅನುಭವಿಸಬೇಕಾಗುತ್ತದೆ. ಇಂತಹ ಸಂಕಷ್ಟಗಳನ್ನು ಜಾತಕಗಳನ್ನು ನೀವು ಪರಿಶೀಲನೆ ಮಾಡಿಕೊಳ್ಳಿ ನಿಮ್ಮ ಜಾತಕದಲ್ಲಿ ಶುಕ್ರ -ರಾಹು ಮತ್ತು ಕುಜ- ರಾಹು ಸಂಯೋಗದಲ್ಲಿ ಇದ್ದರೆ, ದಾಂಪತ್ಯ ಜೀವನದಲ್ಲಿ ವಿಚ್ಛೇದನದವರೆಗೂ ಕೂಡ ಹೋಗಿರುವಂತಹ ಸಾಧ್ಯತೆಗಳು ಮತ್ತು ಈ ರೀತಿಯ ಬಹಳಷ್ಟು ಉದಾಹರಣೆಗಳು ನಮಗೆ ಸಿಗುತ್ತವೆ. ಇದರ ಜೊತೆಗೆ ಶುಕ್ರ – ರಾಹು ಸಂಯೋಗದಲ್ಲಿ ಇದ್ದರೆ ಬಹಳಷ್ಟು ಹಣವನ್ನು ಸಂಪಾದನೆ ಮಾಡಲು ಹೋಗುತ್ತೀರಾ ಮತ್ತು ಎಲ್ಲೋ ಒಂದು ಕಡೆ ದಂಡವನ್ನು ಸಹ ಕಟ್ಟುತ್ತೀರಾ, ಅಪರಾಧಗಳನ್ನು ನಿಮ್ಮ ಮೇಲೆ ಹಾಕಿಕೊಳ್ಳುತ್ತೀರಿ. ಇಂತಹ ಸಾಧ್ಯತೆಗಳು ಹೆಚ್ಚಾಗಿ ಕಂಡುಬರುತ್ತವೆ. ಇಂತಹ ಜಾತಕದವರಿಗೆ ಶುಕ್ರ-ರಾಹು ಸಂಯೋಗದಲ್ಲಿ ಇದ್ದರೆ ಏನು ಮಾಡಬೇಕು ? ಪರಿಹಾರ ಪ್ರತಿ ಶುಕ್ರವಾರ ದುರ್ಗಾ ಸಪ್ತಶತಿ ಪಾರಾಯಣವನ್ನು ಮಾಡಬೇಕು. ಪ್ರತಿನಿತ್ಯ ಸೂರ್ಯ ನಮಸ್ಕಾರವನ್ನು ಮಾಡಬೇಕು. ಯಾವುದೇ ಕಾರಣಕ್ಕೂ ಶನಿವಾರದ ದಿನ ಮಾಸ ಧಾನ್ಯವನ್ನು ಅಂದರೆ ಉದ್ದಿನ ಬೇಳೆಯಿಂದ ಮಾಡಿದ ಯಾವುದೇ ಆಹಾರ ಪದಾರ್ಥವನ್ನು ಸಹ ಸೇವಿಸಬಾರದು. ಜೊತೆಗೆ ಜಾತಕವನ್ನು ಸಂಪೂರ್ಣವಾಗಿ ಪರಿಶೀಲಿಸಿಕೊಳ್ಳಬೇಕು. ಈ ರೀತಿ ಪರಿಶೀಲಿಸಿ ಕೊಂಡಾಗ ಜಾತಕದಲ್ಲಿ ಕುಜ-ರಾಹು ಸಂಯೋಗದಲ್ಲಿ ಇದ್ದರೆ, ಅದೆಷ್ಟೋ ಅನೇಕ ಜನರು ಕುಜ ಶಾಂತಿ ಮತ್ತು ರಾಹು ಶಾಂತಿಯನ್ನು ಮಾಡಿಕೊಳ್ಳುತ್ತಾರೆ . ಆದರೂ ಕೂಡ ಯಾವುದೇ ಪ್ರಯೋಜನ ಆಗಿರುವುದಿಲ್ಲ. ಬಹಳಷ್ಟು ಜನ ಬಂದು ಹೀಗೆ ಹೇಳುತ್ತಾರೆ. ಎಲ್ಲ ಹೋಮ. ಪೂಜೆಗಳನ್ನು ಮಾಡಿಸಿದ್ದೇವೆ, ಜಾತಕವನ್ನು ತೋರಿಸಿದ್ದೇವೆ. ಆದರೂ ಕೂಡ ನಮ್ಮ ಸಮಸ್ಯೆ ಪರಿಹಾರವಾಗಿಲ್ಲ ಎಂದು ಹೇಳುತ್ತಾರೆ. ನಮ್ಮ ದಾಂಪತ್ಯದಲ್ಲಿ ಅನ್ಯೋನ್ಯತೆ ಕಡಿಮೆಯಾಗಿದೆ. ಮಾಡುವ ಕೆಲಸ ಕಾರ್ಯಗಳಲ್ಲಿ ಬಹಳಷ್ಟು ವಿಘ್ನಗಳು, ದರಿದ್ರಗಳು ಕಂಡು ಬರುತ್ತಿದೆ. ನಾವು ನೂರು ರುಪಾಯಿಯನ್ನು ದುಡಿದರೆ, ಇನ್ನೂರು ರೂಪಾಯಿಯನ್ನು ಖರ್ಚು ಮಾಡಬೇಕಾಗಿದೆ. ಅಂತಹ ಪರಿಸ್ಥಿತಿಯಲ್ಲಿ ನಾವಿದ್ದೇವೆ ಇದರಿಂದ ಸಾಲ ಮುಕ್ತರಾಗಲು ನಾವು ಏನು ಮಾಡಬೇಕು ? ಇದಕ್ಕೆ ಪರಿಹಾರ ಏನು ಎಂದು ಕೇಳುತ್ತಾರೆ ? ಎಲ್ಲರಿಗೂ ಕೂಡ ಗ್ರಹಚಾರ ದೋಷ ಎನ್ನುವುದು ಇರುತ್ತದೆ. ಕುಜ- ರಾಹು ಸಂಯೋಗ ಅಥವಾ ಶುಕ್ರ -ರಾಹು ಸಮ ಸಂಯೋಗ ಬಂದ ತಕ್ಷಣ ಧೈರ್ಯ ಗೆಡುವವರು ಬಹಳಷ್ಟು ಜನ ಇದ್ದಾರೆ. ಬರುವ ಕಷ್ಟಗಳನ್ನು ವ್ಯವಸ್ಥಿತವಾಗಿ ನಿಯಮಬದ್ಧವಾಗಿ ಪರಿಹಾರವನ್ನು ಮಾಡಬೇಕು. ಪ್ರತಿಯೊಬ್ಬರಿಗೂ ಕೂಡ ವ್ಯವಸ್ಥಿತವಾಗಿ ಗ್ರಹಚಾರ ದೋಷ ಎನ್ನುವುದು ಇರುತ್ತದೆ. ಕುಜ -ರಾಹು ಸಂಯೋಗ ಅಥವಾ ಶುಕ್ರ- ರಾಹು ಸಂಯೋಗ ಬಂದ ತಕ್ಷಣ ಧೈರ್ಯ ಗೆಡುವುದು ಬೇಡ. ಬರುವ ಕಷ್ಟ ಕಾರ್ಪಣ್ಯಗಳನ್ನು ವ್ಯವಸ್ಥಿತವಾಗಿ, ನಿಯಮಬದ್ಧವಾಗಿ ಪರಿಹಾರವನ್ನು ಮಾಡಿಕೊಳ್ಳಬೇಕು. ನಿಮ್ಮ ಜಾತಕವನ್ನು ನೀವೇ ಕೂತು ಸ್ವತಃ ಸಂಕಲ್ಪ ಮಾಡಿ ಗ್ರಹದೋಷ ವಿವರಣೆಗಳನ್ನು ಮಾಡಿಕೊಳ್ಳಬಹುದು ಅಥವಾ ನಮ್ಮ ಬಳಿ ಜಾತಕ ಪರಿಶೀಲನೆ ಮಾಡಿಸಿ ಸೂಕ್ತ ಹಾಗೂ ಸರಳ ಪರಿಹಾರ ನೀಡಲಾಗುವುದು ಒಂದು ವೇಳೆ ನಿಮ್ಮ ಜಾತಕದಲ್ಲಿ ದೋಷಗಳು ಸಮಸ್ಯೆ ಗಳು ಜಾಸ್ತಿ ಇದ್ದಾಗ, ಗ್ರಹ ಶಾಂತಿ , ಹೋಮ, ತಿಳಿಸಲಾಗುವುದು , ಪರಿಹಾರ, ಮಾಡಿ ಆಗ ವ್ಯವಸ್ಥಿತವಾಗಿ ಅನುಕೂಲಗಳು ನಿಮಗೆ ಪ್ರಾಪ್ತಿಯಾಗುತ್ತದೆ. ನೀವು ಯಾರಿಗೋ ಹಣವನ್ನು ಕೊಟ್ಟು ಗ್ರಹ ಶಾಂತಿ ಮಾಡಿಸುವುದು ನಿಮಗೆ ಯಾವುದೇ ಪ್ರಯೋಜನವಾಗುವುದಿಲ್ಲ. ನೀವು ಒಂದು ಏಕಾಂತವಾಗಿರುವ ಸ್ಥಳಕ್ಕೆ ಸಾಮೂಹಿಕ ಗ್ರಹಶಾಂತಿ ಮಾಡುವ ಸ್ಥಳಕ್ಕೆ ಹೋಗಬೇಡಿ. ಯಾಕೆಂದರೆ ನೀವು ಬೇರೆ ಲಗ್ನದಲ್ಲಿ ಜನನ ವಾಗಿರುತ್ತೀರಿ. ಅವರು ಬೇರೆ ಲಗ್ನದಲ್ಲಿ ಜನನವಾಗಿರುತ್ತಾರೆ. ನಿಮ್ಮ ನಕ್ಷತ್ರ ಬೇರೆ, ಅವರ ನಕ್ಷತ್ರ ಬೇರೆ ,ಆದ್ದರಿಂದ ಸಾಮೂಹಿಕವಾಗಿ ಗ್ರಹ ಶಾಂತಿಗಳನ್ನು ಮಾಡಿಕೊಳ್ಳಬೇಡಿ. ಪ್ರತ್ಯೇಕವಾಗಿ ಗ್ರಹ ಶಾಂತಿಗಳನ್ನು ಮಾಡಿಕೊಳ್ಳಿ. ಸಾಮೂಹಿಕ ಗ್ರಹ ಶಾಂತಿ ಮಾಡಿಸಿಕೊಂಡು ಅದು ಪ್ರಯೋಜನ ಆಗದೆ , ಜ್ಯೋತಿಷೀಯರನ್ನು ದೂರುವುದು ಬೇಡ ಆಂದರಿಂದ ಮೊದಲೆ ನಿಮ್ಮ ಜಾತಕದಲ್ಲಿ ರುವ ಸಮಸ್ಯೆ ಯನ್ನು ತಿಳಿದು ಅದಕ್ಕೆ ಮಾಡಬೇಕಾದ ಪರಿಹಾರದ ಬಗ್ಗೆ ಪೂರ್ಣ ಮಾಹಿತಿ ಪಡೆದು ಮಾಡಿ . ಕಟಾಚಾರಕ್ಕೆ ಪರಿಹಾರ ಮಾಡುವುದು ಮನಸ್ಸಿನಲ್ಲಿ ಹಲವಾರು ಸಂದೇಹ ಬೇರೆಯವರಿಗೆ ಕೆಡುಕು ಮಾಡುವ ಯೋಚನೆ ಇಟ್ಟುಕೊಂಡು ಮಾಡುವುದು , ಫಲಿಸುವುದಿಲ್ಲ ಶುದ್ಧ ಮನಸ್ಸಿನಿಂದ ಶಾಸ್ತ್ರ ದಂತೆ ವಿಧಾನವನ್ನು ತಿಳಿದು ಮಾಡಿ ಖಂಡಿತ ನಿಮ್ಮ ಕಷ್ಟ ಕ್ಕೆ ಪರಿಹಾರ ಸಿಗುತ್ತದೆ ಇನ್ನೊಂದು ವಿಚಾರ ಯಾರ ಜಾತಕದಲ್ಲಿ ವ್ಯಯ ಸ್ಥಾನ, ಮತ್ತು ಪಂಚಮ ಸ್ಥಾನ ಕೆಟ್ಟಿದ್ದರೇ ದೂಷೀತವಾದರೇ ಅಥವಾ ಚಂದ್ರ ಗ್ರಹ ಕೆಟ್ಟಿದ್ದರೂ ಅವರು ಜಾತಕ ಪರಿಶೀಲನೆ ಮಾಡಿಸುತ್ತಾರೆ , ಅಷ್ಟೇ ಆದರೇ ಪರಿಹಾರ ಮಾಡುವುದಿಲ್ಲ, ಪೆಟ್ಟು ತಿಂದ ನಂತರ ಮಾಡಿಸಲು ಯೋಚಿಸುತ್ತಾರೆ. ಧನ್ಯವಾದಗಳು . ಯಾವ ರಾಶಿಯಲ್ಲಿ ಚಂದ್ರನಿದ್ದರೆ ಅವರು ಪ್ರಸಿದ್ಧರು! ಲಗ್ನದಿಂದ ಹನ್ನೊಂದನೆ ಮನೆ ಲಾಭಸ್ಥಾನ. ಈ ರಾಶಿಯಲ್ಲಿ ಚಂದ್ರನಿದ್ದರೆ ಅವರು ಪ್ರಸಿದ್ಧರೂ, ಭಾವಗುಣಗಳಿಂದ ಕೂಡಿದವರಾಗುತ್ತಾರೆ. ಇವರಿಗೆ ಹಣಕಾಸಿನ ಲಾಭ ಇದೆ. ವಾಹನಗಳನ್ನು ಹೊಂದುತ್ತಾರೆ, ಸುಂದರ ರೂಪವು ಇರುತ್ತದೆ ದೃಢವಾಗಿ ಕೀರ್ತಿ ಇರುತ್ತದೆ. ಆರೋಗ್ಯವು ಏರುಪೇರಾಗುತ್ತದೆ. ಬುದ್ಧಿವಂತವರೂ ಜ್ಞಾನವಂತರೂ ಆಗುತ್ತಾರೆ. ಸನ್ಮಾರ್ಗದಲ್ಲಿ ನಡೆದು ನಡೆನುಡಿ ಒಳ್ಳೆಯದಿರುತ್ತದೆ. ವಿಖ್ಯಾತ ಗುಣವಂತರಾಗುತ್ತಾರೆ. ಭೋಗ ಸಂಪತ್ತು ಹೊಂದುತ್ತಾರೆ. ಇವರ ದೇಹ ಬಿಳುಪು ಇರುತ್ತದೆ, ಮಾನವೀಯತೆ ಇರುತ್ತದೆ. ಮಿತ್ರರರು ಬಹಳ ಮಂದಿ ಇರುತ್ತಾರೆ, ಹಣಕಾಸು, ಕೀರ್ತಿ, ಒಳ್ಳೆಯಗುಣಗಳಿಂದ ಮತ್ತು ವಾಹನಗಳನ್ನು ಹೊಂದಿರುತ್ತಾರೆ. ಸಮಾಜದಲ್ಲಿ ಪ್ರತಿಷ್ಠೆಯ ಅಧಿಕಾರ ಹೊಂದುತ್ತಾರೆ. ಹನ್ನೊಂದರಿಂದ ಇಪ್ಪತ್ತೇಳನೆ. ಪ್ರಾಯದಲ್ಲಿ ಗೌರವ ಸಿಗುತ್ತದೆ. ಇವರು ಒಳ್ಳೆಯ ಮಾತುಗಳನ್ನು ಮಾತನಾಡುತ್ತಾರೆ. ಉದಾರ ಮನೋಭಾವದವರು. ತುಂಬಾ ಒಳ್ಳೆಯ ಗೆಳೆಯರನ್ನು ಹೊಂದುತ್ತಾರೆ, ಜನಪ್ರಿಯರಾಗುತ್ತಾರೆ. ಸಾಂಸಾರಿಕ ಸುಖ ಚೆನ್ನಾಗಿರುವುದು, ಸಾರ್ವಜನಿಕ ಸಂಸ್ಥೆಯ ಮುಖಂಡರಾಗುತ್ತಾರೆ. ಹೆಚ್ಚಿನ ಅನುಭವಿ ಜ್ಯೋತಿಷಿಗಳು ಲಾಭದ ಚಂದ್ರ ಶುಭ ಫಲವನ್ನೇ ಕೊಡುತ್ತದೆ ಎಂದು ಹೇಳಿದ್ದಾರೆ. ಶುಭ ಫಲಗಳು ಪುರುಷ ರಾಶಿಯಲ್ಲಿ ಜಾಸ್ತಿಯಾಗಿರುತ್ತದೆ ರೋಗ ಫಲ ಸ್ತ್ರೀ ರಾಶಿಯ ಚಂದ್ರನಿಂದ ಜಾಸ್ತಿ ಇರುತ್ತದೆ. ಲಾಭದ ಚಂದ್ರನಿರುವವರು ವೈದ್ಯರಾಗುವವರು ಇದ್ದಾರೆ. ಲಾಭದ ಚಂದ್ರನಿಂದ ಯಶಸ್ವಿಯಾದ ಜೀವನ ನಡೆಸುತ್ತಾರೆ ಇವರು ಸ್ವತಂತ್ರದ ಕಡೆ ಗಮನ ಕೊಡುತ್ತಾರೆ ರಕ್ಷ ಣಾ ಸಿಬ್ಬಂದಿಗಳಾಗುವವರು ಇದ್ದಾರೆ. ಚಂದ್ರ ಬಾದಿತನಾದರೇ ಪೂರ್ಣ ಫಲ ಸಿಗುವುದಿಲ್ಲ ಲಗ್ನ ದಿಂದ 11 ನೇ ಮನೆಯಲ್ಲಿ ಸೂರ್ಯನಿದ್ದರೂ ದೊಡ್ಡ ವ್ಯಕ್ತಿ ಅಥವಾ ಪ್ರಭಾವಿ ವ್ಯಕ್ತಿಗಳು ರಾಜಕೀಯ ವ್ಯಕ್ತಿಗಳು ಅಧಿಕಾರಿಗಳು ಆಗಿರುತ್ತಾರೆ. ಧನ್ಯವಾದಗಳು *ದಾನದ ಮಹತ್ವ ಸಂಪೂರ್ಣ ಮಾಹಿತಿ * ದಾನ ಅಂದರೆ ಏನು..? ದಾನ ಮಾಡಿದರೆ ಏನು ಫಲ..? ಯಾವ ದಾನ ಶ್ರೇಷ್ಠ..? ದಾನ ಮಾಡಲೇ ಬೇಕಾ..? ಅನ್ನೋ ಪ್ರಶ್ನೆಗಳು ನಿಮ್ಮನ್ನೂ ಕಾಡಿರತ್ವೆ. ನನ್ನನ್ನೂ ಕಾಡಿತ್ತು ಉತ್ತರ ಕಂಡುಕೊಂಡೆ ಸತ್ಯ ಅನ್ನಿಸಿತು. ನಿಮಗೂ ಹೌದು ಅನ್ನಿಸಿದರೆ ಒಪ್ಪಿಕೊಳ್ಳಬಹುದು..ಒಂದು ಸುಭಾಷಿತ ಇದೆ ಅನ್ನದಾನಂ ಪರಂದಾನಂ ವಿದ್ಯಾದಾನ ಮದ: ಪರ:ಅನ್ನೇನ ಕ್ಷಣಿಕ: ತೃಪ್ತಿ: ಯಾವಜ್ಜೀವಂಚ ವಿದ್ಯಯಾ " ಅಂತ. ಹಾಗಂದ್ರೆ ಅನ್ನ ದಾನ ಪರಮ ಶ್ರೇಷ್ಠ ದಾನವಂತೆ. ಆದರೆ ವಿದ್ಯಾದಾನ ಅದಕ್ಕಿಂತ ಶ್ರೇಷ್ಠ ದಾನವಂತೆ. ಯಾಕಪ್ಪಾ ಅಂದ್ರೆ ಅನ್ನ ದಾನ ಕ್ಷಣಿಕ ತೃಪ್ತಿಯನ್ನ ಕೊಡತ್ತೆ. ಮತ್ತೆ ಹಸಿವು ಶುರುವಾಗತ್ತೆ. ಆದರೆ ವಿದ್ಯಾ ದಾನ ಮಾಡಿಬಿಟ್ಟರೆ ಯಾವಜ್ಜೀವ, ಬದುಕಿರುವವರೆಗೂ ಅವನಿಗೆ ನೆರವಾಗಿರತ್ತೆ ಅಂತ. ಹಾಗಾದರೆ ನಾವು ಮಾಡೋ ಇತರೆ ದಾನಗಳೆಲ್ಲ ಹುರುಳಾ..? ಗೋದಾನ, ಭೂದಾನ, ಸುವರ್ಣ ದಾನ ಇವೆಲ್ಲ ಮಾಹಾದಾನಗಳು ಅನ್ನಿಸಿಕೊಂಡಿವೆಯಲ್ಲ ಇದೆಲ್ಲವುಗಳಿಗಿಂತ ವಿದ್ಯಾ ದಾನವೇ ಶ್ರೇಷ್ಠವಲ್ಲವಾ ಅನ್ನಿಸಿಬಿಡತ್ತೆ. ವಾಸ್ತವವಾಗಿ ದಾನಕ್ಕೆ ಶಾಸ್ತ್ರೀಯ ಅರ್ಥವಿದೆಯಾ ಅಂತ ಕೆಲ ಪುಸ್ತಕಗಳಲ್ಲಿ ಹುಡುಕಿದೆ. ನಿಜ ದಾನ ಅಂತ ಅನ್ನಿಸಿದ ಮಾಹಿತಿಯೊಂದು ಸಿಕ್ಕಿತು ನಿಮ್ಮ ಮುಂದಿಡುತ್ತಿದ್ದೇನೆ..ನಮ್ಮ ಶಾಸ್ತ್ರ ಚೌಕಟ್ಟಲ್ಲಿ 4 ಬಗೆಯ ದಾನಗಳಿವೆಯಂತೆ. ಆ ನಾಲ್ಕೂ ದಾನಗಳನ್ನ ಅರಿತು ಮಾಡುವ ದಾನ ಮಾನ್ಯವಾದದ್ದು. 1. ನಿತ್ಯದಾನ : "ಅಹನ್ಯಹನಿ ಯತ್ಕಿಂಚೇತ್ ದದ್ಯಾತ್ ಅನುಪಕಾರಿಣೇಅನುದ್ದಿಶ್ಯ ಫಲಂ ತಸ್ಮಾತ್ ಬ್ರಾಹ್ಮಣಾಯತು ನಿತ್ಯಕಂ"ಇದು ಮೊದಲನೇ ದಾನ. ನಿತ್ಯದಾನ ಅಂದ್ರೆ ಏನು..? ಪ್ರತಿದಿನ, ಅನುದಿನವೂ ಏನನ್ನಾದರೂ ಒಬ್ಬರಿಗೆ ದಾನ ಮಾಡು. ಅನುದ್ದಿಶ್ಯ ಯಾವುದೇ ಉದ್ದೇಶವಿಲ್ಲದೆ ಪ್ರತಿದಿನವೂ ದಾನ ಮಾಡು. ನಾನು ಕಂಡ ಒಂದು ನಿತ್ಯದಾನದ ಘಟನೆ ಇದು: ನಮ್ಮ ಊರಿನ ಸಮೀಪದಲ್ಲಿ ಒಂದು ಶಾಲೆ ಇತ್ತು. ಆಗ ನಾನು ITI ಓದ್ತಾಇದ್ದೆ. ಶಾಲೆಯಿಂದ ಅರ್ಧ ಕಿ. ಮೀ ದೂರದಲ್ಲಿ ಒಂದು ಗುಡಿಸಲು. ಅಲ್ಲೊಬ್ಬ ಯೋಗಿಗಳಿದ್ರು. ಅವರು ಪ್ರತಿನಿತ್ಯ ಶಾಲೆ ಹತ್ರ ಬರ್ತಿದ್ರು. ಅವರು ಹೆಚ್ಚು ಮಾತ್ನಾಡೋರಲ್ಲ. ನೋಡೋಕೆ ಉಗ್ರ ಸ್ವರೂಪ. ಎಲ್ರೂ ಹುಚ್ಚ ಅಂದ್ಕೋತಿದ್ರು. ಏನೇ ಇರ್ಲಿ ಬಿಡಿ ಮುಂದಿನ ವಾಕ್ಯ ಓದಿ..ಅವ್ರು ಶಾಲೆಗೆ ಬಂದವ್ರು ಒಬ್ಬ ಹುಡುಗನ್ನ ಕರೀತಿದ್ರು ಹೋದ್ರೆ ಒಂದಿನ ಊಟ ಕೊಡುಸ್ತಿದ್ರು, ಒಂದಿನ ಬುಕ್ ಕೊಡುಸ್ತಿದ್ರು, ಒಂದಿನ ಬಟ್ಟೆ, ಒಂದಿನ ಪೆನ್ನು, ಹೀಗೆ ಪ್ರತೀ ದಿನ ಒಬ್ಬಲ್ಲ ಒಬ್ಬನ್ನ ಕರೆದು ಏನೋ ಒಂದು ಕೊಡ್ತಿದ್ರು. ಮತ್ತು ಅವ್ರು ಆ ಹುಡುಗರಿಂದ ಏನನ್ನೂ ನಿರೀಕ್ಷಿಸ್ತಾ ಇರ್ಲಿಲ್ಲ. ಪ್ರತೀ ದಿನವೂ ಈ ಕಾರ್ಯ ನಡೀತಿತ್ತು ಒಂದು ವರೆ ವರ್ಷ ಹೀಗೇ ಮಾಡಿದ್ರು ಆಮೇಲೆ ಒಂದಿನ ಅವ್ರು ಬರ್ಲಿಲ್ಲ. ಹುಡುಗ್ರೆಲ್ಲ ಅಲ್ಲಿ ಹೋಗಿ ನೋಡಿದ್ರೆ ಗುಡಿಸಲೇ ಛಿದ್ರ ವಾಗಿತ್ತು. ಎಲ್ಲಿ ಹೋದ್ರೋ ಪಾಪ.. ಎಷ್ಟು ಹುಡುಕಿದ್ರೂ ಸಿಗ್ಲಿಲ್ಲ.. ಅವರು ಮಾಡಿದ್ದು ಅನುದ್ದಿಶ್ಯ ನಿತ್ಯದಾನ ಅನ್ನಿಸ್ತು. 2. ಇನ್ನು ಎರಡನೇ ದಾನ ನೈಮಿತ್ತಿಕ ದಾನ : " ಯತ್ತು ಪಾಪೋಪ ಶಾಂತ್ಯರ್ಥಂ ಜೀಯತೇ ವಿದುಷಾಂ ಕರೇನೈಮಿತ್ತಿಕಂ ತದುದ್ದಿಷ್ಟಂ ದಾನಂ ಸದ್ಧಿರನುತ್ತಮಂ "ಅಂದ್ರೆ ಯಾವುದಾದರೂ ಪಾಪ ಪರಿಹಾರಕ್ಕಾಗಿ, ಪ್ರಾಯಶ್ಚಿತ್ತಕ್ಕಾಗಿ ಜ್ಯೋತಿಷಿಗಳು ಹೇಳೋ ದಾನ ಇದೆಯಲ್ಲ ಅದು ನೈಮಿತ್ತಿಕ ದಾನ. ಆದರೆ ನೆನಪಿರಲಿ ನೀವು ಕೊಡುವ ದಾನ ಎಷ್ಟು ಪಾತ್ರವೂ ದಾನ ಕೊಡುವ ವ್ಯಕ್ತಿಯೂ ಅಷ್ಟೇಸತ್ಪಾತ್ರನಾಗಿರಬೇಕು. ಬೀದಿಯಲ್ಲಿ ಬೋರ್ಡ್ ಇಟ್ಕೊಂಡ್ ಕೂತವರೆಲ್ಲ ಜ್ಯೋತಿಷಿಗಳಲ್ಲ, ಕಾವಿ ಉಟ್ಟವರೆಲ್ಲ ಸನ್ಯಾಸಿಗಳಲ್ಲ. ದೊಡ್ಡ ಹಣೆ, ಬಿರುಸಾದ ವಿಭೂತಿ ಪಟ್ಟಿ ಬಳಿದ ಮಾತ್ರಕ್ಕೇ ಸತ್ಪಾತ್ರನಲ್ಲ. ಅದು ನಿಮಗೆ ತಿಳಿಸಬೇಕಿಲ್ಲ ಬಿಡಿ ನೀವೇನ್ ದಡ್ಡರಲ್ಲ..! 3. ಇನ್ನು ಮೂರನೇ ದಾನ ಕಾಮ್ಯದಾನ :ಕಾಮ್ಯ ಹೆಸರೇ ಹೇಳುವಂತೆ ಯಾವುದಾದರೂ ಬೇಡಿಕೆ ಈಡೇರಲಿ ಅನ್ನೋ ಕಾರಣಕ್ಕೆ ಕೊಡುವ ದಾನ. ಸುಖಕ್ಕಾಗಿ ಮಾಡುವ ದಾನ. ಇವೆಲ್ಲ ದಾನಗಳು ಶಾಸ್ತ್ರ ವಿಧಿಯಲ್ಲಿವೆಯಾದರೂ ಅಂಥಾ ಶ್ರೇಷ್ಠ ದಾನಗಳು ಅನ್ನಿಸೊಲ್ಲ. ಮುಂದಿನ ದಾನ ಇದೆಯಲ್ಲ ಅದು ಸ್ವಲ್ಪ ಧನ್ಯತೆಯನ್ನ ತುಂಬುವ ದಾನ ಅನ್ನಿಸತ್ತೆ. 4. ನಾಲ್ಕನೆಯ ದಾನ ವಿಮಲ ದಾನ :ವಿಮಲ ಅಂದ್ರೆ ಪರಿಶುದ್ಧ ಅಂತ. ಪರಿಶುದ್ಧ ದಾನ. ಹಾಗಂದ್ರೆ ಏನು..?" ಯದೀಶ್ವರಸ್ಯ ಪ್ರೀತ್ಯರ್ಥಂ ಬ್ರಹ್ಮವಿತ್ಸುಪ್ರದೀಯತೇಚೇತಸಾ ಧರ್ಮಯುಕ್ತೇನ ತದ್ದಾನಂ ವಿಮಲಂ ಸ್ಮೃತಂ "ಯದೀಶ್ವರಸ್ಯ ಪ್ರೀತ್ಯರ್ಥಂ : ಯಾವ ಕಾರಣಕ್ಕೆ.. ಈಶ್ವರಸ್ಯ ಪ್ರೀತ್ಯರ್ಥಂ ಈಶ್ವರನ ಪ್ರೀತಿಗೋಸ್ಕರ, ಭಗವಂತನ ಪ್ರೀತಿಗೋಸ್ಕರ ಮಾಡುವ ದಾನ ಹೇಗೆ ಬ್ರಹ್ಮನಿಗಾಗಿ ದಾನ ಮಾಡೋದು..? ಸ್ವಾಮೀ ಈದಾನ ಯಾರ್ಯಾರಿಗೋ ಕೊಡೋದಲ್ಲ ಈ ದಾನ ಪರಮ ಜ್ಞಾನಿಗೆ ಪ್ರಿವಾದದ್ದನ್ನ ಕೊಡಬೇಕು. ಆತನಿಗೆ ಏನು ಉಪಯೋಗಕ್ಕೆ ಬೇಕೋ ಅದನ್ನ ಕೊಟ್ಟರೆ ಭಗವಂತನಿಗೆ ಕೊಟ್ಟಂತಾಗತ್ತೆ ಅನ್ನೋದು ಶಾಸ್ತ್ರದ ಮಾತು ಹಾಗಾಗಿ ಶ್ರೇಷ್ಠ ಜ್ಞಾನಿಗೆ ಉಕ್ತವಾದದ್ದನ್ನ ದಾನ ಮಾಡಿದರೆ ಅದು ವಿಮಲ ದಾನ ಅನ್ನಿಸಿಕೊಳ್ಳತ್ತೆ. ಅದೇ ಪರಿಶುದ್ಧ ದಾನ. ಆ ಪರಿಶುದ್ಧ ದಾನವೇ ಪರಮಾತ್ಮನಿಗೆ ಪ್ರೀಯವಾದ ದಾನ. ಹೀಗಾಗಿ ದಾನ ಮಾಡುವ ಮುನ್ನ ಯೋಚಿಸಿ, ದಾನದಿಂದ ಮನುಷ್ಯ ದೊಡ್ಡವನಾಗುತ್ತಾನೆ. ಇದರಿಂದಲೇ ಶ್ರೇಯಸ್ಸು ಲಭಿಸುತ್ತದೆ. ದಾನದಿಂದ ಪಾಪ ಪರಿಹಾರವಾಗುತ್ತದೆ ಎನ್ನಲಾಗುತ್ತದೆ. ದಾನದ ಹಿಂದೆ ಇಲ್ಲದವರಿಗೆ ಇರುವವರು ನೀಡುವ ಮೂಲಕ ಮತ್ತೊಬ್ಬರ ಅಗತ್ಯ ಪೂರೈಕೆಯಾಗುವ ಆಶಯವಿರುವುದು ಸತ್ಯ. ಅನೇಕ ಬಗೆಯ ದಾನಗಳನ್ನು ನಾವು ಗುರುತಿಸಬಹುದು. ಮನುಷ್ಯ ದಾನ ಮಾಡಬೇಕು ಎಂದು ಪುರಾಣಗಳು ಹೇಳುತ್ತವೆ. ನಾವು ಮಾಡುವ ದಾನ ಅವರಿಗೆ ಉಪಯೋಗವಾಗುವಂತೆ ಇರಬೇಕು. ಯಾವ ವಸ್ತುಗಳನ್ನು ದಾನ ಮಾಡಿದರೆ ಏನು ಫಲ ಸಿಗುತ್ತದೆ, ಹಾಗೂ ಜ್ಯೋತಿಷ್ಯ ಶಾಸ್ತ್ರ ದ ಪ್ರಕಾರ ಯಾವ ರೀತಿಯ ಲಾಭವಾಗುತ್ತದೆ ಎಂದು ನೋಡೋಣ 1. ವಸ್ತ್ರದಾನದಿಂದ ಆಯಸ್ಸುವೃದ್ಧಿಯಾಗುತ್ತದೆ. 2 ಭೂ ದಾನ – ಬ್ರಹ್ಮ ಲೋಕ ಪ್ರಾಪ್ತಿ 3. ಜೇನು ದಾನ – ಇದನ್ನು ಕಂಚಿನ ಪಾತ್ರೆಯಲ್ಲಿ ನೀಡಬೇಕು – ಪುತ್ರ ಭಾಗ್ಯ 4. ಗೋದಾನ – ಋಷಿ ದೇವ ಪಿತೃ ಪ್ರೀತಿ 5. ಬೆಟ್ಟದನೆಲ್ಲಿ ಕಾಯಿ ದಾನ – ಜ್ಞಾನ ಪ್ರಾಪ್ತಿ 6.ದೇವಾಲಯದಲ್ಲಿ ದೀಪ ದಾನ – ಚಕ್ರವರ್ತಿ ಪದವಿ ಎಂದರೆ ಜೀವನದಲ್ಲಿ ಅತ್ಯುನ್ನದ ಪದವಿ ಪ್ರಾಪ್ತಿ 7. ದೀಪ ದಾನ – ಲೋಪ ಹರಣ 8. ಬೇಳೆ ಕಾಳಿನ ದಾನ – ದೀರ್ಘಾಯುಸ್ಸು ಸಿದ್ಧಿ 9.ಅಕ್ಕಿ – ಎಲ್ಲಾ ವಿಧವಾದ ಪಾಪ ನಾಶ 10. ತಾಂಬೂಲ – ಸ್ವರ್ಗ ಪ್ರಾಪ್ತಿ 11. ಕಂಬಳಿ ದಾನ – ವಾಯುರೋಗ ನಾಶ 12. ಹತ್ತಿ ದಾನ – ಕುಷ್ಠ ರೋಗ ನಿವಾರಣೆ 13. ಜನಿವಾರ ದಾನ – ಬ್ರಾಹ್ಮಣ ಜನ್ಮ ಲಭಿಸುತ್ತದೆ 14. ತುಲಸಿ ಪುಷ್ಪ – ಸ್ವರ್ಗ ಪ್ರಾಪ್ತಿ 15. ತುಪ್ಪ ದಾನ – ರೋಗ ನಿವಾರಣೆ 16. ಅನ್ನ ದಾನ ಮಾಡಿದರೆ: ದಾರಿದ್ರ ನಾಶವಾಗುತ್ತದೆ, ಸಾಲಗಳು ತೀರುತ್ತದೆ. 17. ವಸ್ತು ದಾನ ಮಾಡಿದರೆ ಆಯುಷ್ಯ ಹೆಚ್ಚುತ್ತದೆ. 18. .ದೀಪ ದಾನಮಾಡಿದರೆ ಕಣ್ಣು ಚನ್ನಾಗಿ ಕಾಣಿಸುತ್ತದೆ. 19. ತುಪ್ಪ ದಾನಮಾಡಿದರೆ ರೋಗ ನಿವಾರಣೆಯಾಗುತ್ತದೆ. 20. ಹಾಲು ದಾನಮಾಡಿದರೆ ದುಖಃ ತೀರುತ್ತದೆ. 21. ಮೊಸರು ದಾನಮಾಡಿದರೆ ಇಂದ್ರಿಯಗಳು ವೃದ್ಧಿಯಾಗುತ್ತವೆ. 22. ಹಣ್ಣು ಗಳನ್ನು ದಾನಮಾಡಿದರೆ ಬುದ್ಧಿ,ಸಿದ್ಧಿಯು ಲಭಿಸುತ್ತದೆ. 23. ಬಂಗಾರ ದಾನಮಾಡಿದರೆ ಕುಟುಂಬದಲ್ಲಿ ಇರುವ ದೋಷ ನೀಗುತ್ತದೆ. 24. ಬೆಳ್ಳಿ ದಾನಮಾಡಿದರೆ ಮನಸ್ಸಿನಚಿಂತೆ ನೀಗುತ್ತದೆ. 25.ಹಸು(ಗೋವು) ದಾನಮಾಡಿದರೆ ಖುಷಿ,ದೇವರುಗಳು,ಪಿತೃಗಳಿಂದ ವಿಮೋಚನೆ 26.ತೆಂಗಿನಕಾಯಿ ದಾನಮಾಡಿದರೆ ನೆನೆದ ಕಾರ‌್ಯ ಸಿದ್ಧಿಸುತ್ತದೆ. 27. ನೆಲ್ಲಿಕಾಯಿ ದಾನಮಾಡಿದರೆ ಜ್ಞಾನ ದಕ್ಕುತ್ತದೆ. 28. ಭೂಮಿ ದಾನಮಾಡಿದರೆ ಈಶ್ವರ ದರ್ಶನವಾಗುತ್ತದೆ. ನಿಮ್ಮ ಜಾತಕದಲ್ಲಿ ಯಾವ ಗ್ರಹ ದೂಷೀತವಾಗಿದೆ. ಎಂದು ತಿಳಿದುಕೊಂಡು, ಆ ಗ್ರಹಕ್ಕೆ ಸಂಬಂಧಪಟ್ಟ ವಸ್ತುಗಳನ್ನು ದಾನ ಮಾಡುವುದು ಸೂಕ್ತ. ಧನ್ಯವಾದಗಳು . ವಿವಾಹಯೋಗ: ಸುಲಗ್ನ ಸಾವಧಾನ ಮದುವೆ ಆಗಬೇಕಾದ್ರೆ ಎರಡು ಮನಸ್ಸುಗಳ ನಡುವಿನ ಸಂಬಂಧ, ಅನುಬಂಧ ಗಟ್ಟಿಯಾಗಿರಬೇಕು. ಸ್ವಲ್ಪ ಹಿಂದಿರುಗಿ ನೋಡಿದ್ರೂ ಜೀವನದಲ್ಲಿ ಹೀನಾಯ ಸೋಲು ಗ್ಯಾರಂಟಿ. ಬದಲಾದ ಕಾಲಮಾನದಲ್ಲಿ ನಮ್ಮ ಆಸೆ, ಆಕಾಂಕ್ಷೆ, ನಿರೀಕ್ಷೆ ಮತ್ತು ಸ್ವಭಾವಗಳು ಸಾಕಷ್ಟು ರೂಪಾಂತರಗೊಂಡಿವೆ. ಮದುವೆಗೆ ಮುನ್ನ ಸರಸ ಬಯಸೋ ಮನಸ್ಸು ನಂತರ ವಿರಸದ ದಾರಿ ಹಿಡಿಯೋದು ಏಕೆ? ಹೋರಾಶಾಸ್ತ್ರದ ರೀತ್ಯ ಜಾತಕದ ಗಣಕೂಟವನ್ನು ಪರಿಶೀಲಿಸಿದಾಗ ಅದಕ್ಕೊಂದು ಉತ್ತರ ಕಂಡುಕೊಳ್ಳಬಹುದು. ಜಾತಕನ ಕುಂಡಲಿಯಲ್ಲಿ ಲಗ್ನಾಧಿಪತಿಯಿಂದ 7 ಮತ್ತು 5ನೇ ಮನೆಯಲ್ಲಿ ಯಾವ ಗ್ರಹವಿದೆ ಎನ್ನುವುದರ ಮೇಲೆ ಸಂಸಾರ ಸೌಖ್ಯ ಅಥವಾ ಕಲ್ಯಾಣ ಲಕ್ಷಣವನ್ನು ಅರ್ಥ ಮಾಡಿಕೊಳ್ಳಬಹುದು. ಅದರ ಆಧಾರದಲ್ಲೇ ಹೊಂದಾಣಿಕೆಯ ಲೆಕ್ಕಾಚಾರ ಹಾಕಬಹುದು. ದೋಷದ ಸೂಚನೆಗಳು * ಸಪ್ತಮಾಧಿಪತಿ ಅಥವಾ ಏಳನೇ ಮನೆಯ ಗ್ರಹವು ಯಾವುದೇ ಕ್ಲೇಶಗಳಿಂದ ಬಾಧಿತನಾಗಿರಬಾರದು. * ಸಪ್ತಮಾಧಿಪತಿ ಅಥವಾ ಏಳನೇ ಮನೆಯಲ್ಲಿರುವ ಗ್ರಹಕ್ಕೆ ಪಾಪಕರ್ತಾರಿ ಯೋಗದಿಂದ ಬಾಧಿತನಾಗಿರಬಾರದು. * ಸಪ್ತಮಾಧಿಪತಿ ನೀಚ ನವಾಂಶದಿಂದ ಕೂಡಿರಬಾರದು. * ಅವಯೋಗವೇನಾದರೂ ಲಗ್ನವನ್ನು ಬಾಧಿಸಿದರೆ ಅದರಿಂದಾಗಿ ಆರೋಗ್ಯ ಅಥವಾ ಕುಟುಂಬ ಅಸೌಖ್ಯ ಉಂಟಾಗುತ್ತದೆ. * ಎರಡೂ ಜಾತಕಗಳಲ್ಲಿನ ಅವಯೋಗಗಳು ಒಂದಾದರೆ, ಸಂಸಾರ ಸಾಮರಸ್ಯಕ್ಕೆ ತೊಂದರೆಯಾಗುತ್ತದೆ. ಈ ಅಂಶವನ್ನು ಸೂಕ್ಷ್ಮವಾಗಿ ಗಮನಿಸಬೇಕು. * ಶನಿ, ಬುಧ ಮತ್ತು ರಾಹು ಗ್ರಹಗಳು 12ನೇ ಮನೆಯಲ್ಲಿರಬಾರದು. ಕಾರಣ ಈ ಮನೆಯನ್ನು ಶಯನ ಸ್ಥಾನ ಎನ್ನುತ್ತಾರೆ. * ಮಹಿಳೆಯ ಜಾತಕದ ಎಂಟನೆ ಮನೆ ಮಾಂಗಲ್ಯ ಸ್ಥಾನವನ್ನು ಸೂಚಿಸುತ್ತದೆ. ಈ ಮನೆಯು ಯಾವುದೇ ರೀತಿಯಿಂದ ಬಾಧಿತವಾಗಿರಬಾರದು. * ಜಾತಕನ ಕುಂಡಲಿಯ 3,7 ಮತ್ತು 11ನೇ ಮನೆಗಳನ್ನು, ಅದರೊಳಗಿನ ಗ್ರಹಗಳನ್ನು, ಭಾವಗಳನ್ನು ಸೂಕ್ಷ್ಮವಾಗಿ ಗಮನಿಸಬೇಕು. * ಕುಟುಂಬ ಸೌಖ್ಯ ಲೆಕ್ಕಾಚಾರ ಹಾಕಲು ನವಾಂಶ ಕುಂಡಲಿಯನ್ನು ಪ್ರತ್ಯೇಕವಾಗಿ ಗಮನಿಸಬೇಕು. ಈ ಕುಂಡಲಿಯಲ್ಲಿ ಲಗ್ನ, ಲಗ್ನಾಧಿಪತಿ, ಶುಕ್ರನ ಸ್ಥಾನವನ್ನು ವಿಶೇಷವಾಗಿ ಗಮನಿಸಬೇಕು. ಶುಭ ಯೋಗದ ಸೂಚನೆಗಳು * ಸಪ್ತಮ ಸ್ಥಾನದಲ್ಲಿ ಶುಭ ಗ್ರಹವಿರಬೇಕು, ಶುಭ ನಕ್ಷತ್ರದ ದೃಷ್ಟಿ ಇರಬೇಕು ಮತ್ತು ಶುಭ ನವಾಂಶವನ್ನು (ಉಚ್ಛ ನವಾಂಶ, ಸ್ವ ನವಾಂಶ, ಮಿತ್ರ ನವಾಂಶ ಕೇಂದ್ರ ಮತ್ತು ರಾಶಿಲಗ್ನದಿಂದ ತ್ರಿಕೋಣಗಳ ಭಾವ) ಹೊಂದಿರಬೇಕು. * ಅತ್ಯುತ್ತಮ ಕುಟುಂಬ ಸೌಖ್ಯಕ್ಕಾಗಿ ಯಾವುದಾದರೂ ಒಂದು ಜಾತಕದಲ್ಲಿ ಯೋಗಗಳು ಕೂಡಿರಬೇಕು. * ಐದನೇ ಮನೆಗೆ ಹೋಲಿಸಿದರೆ ಏಳನೇ ಮನೆಯ ಸರ್ವಾಷ್ಟಕವರ್ಗದಲ್ಲಿ ಕಡಿಮೆ ಬಿಂದುಗಳಿರಬೇಕು. * ಏಳನೇ ಮನೆಯ ಶುಕ್ರಾಷ್ಟಕವರ್ಗದಲ್ಲಿ ಹೆಚ್ಚು ಬಿಂದುಗಳಿರಬೇಕು. * ಏಳನೇ ಮನೆ ಮತ್ತು ಸಪ್ತಮಾಧಿಪತಿಯ ಮೇಲೆ ಗುರುವಿನ ದೃಷ್ಟಿ ಇರಬೇಕು. * ಏಳನೇ ಮನೆ ಮತ್ತು ಸಪ್ತಮಾಧಿಪತಿಗೆ ಶುಭಕರ್ತಾರಿ ಯೋಗವಿದ್ದರೆ ಉತ್ತಮ ಫಲಿತಾಂಶವನ್ನು ನಿರೀಕ್ಷಿಸಬಹುದು. * ಸಪ್ತಮಾಧಿಪತಿ ಪುಷ್ಕರ ನವಾಂಶವನ್ನು ಹೊಂದಿದ್ದರೆ ಅತ್ಯುತ್ತಮ ಕುಟುಂಬ ಸೌಖ್ಯವನ್ನು ನಿರೀಕ್ಷಿಸಬಹುದು. * ಕುಜನ ಲಕ್ಷಣಗಳು ತೀವ್ರವಾಗಿದ್ದರೆ ಜಾತಕನ ಸ್ವಭಾವ ಆಕ್ರಮಣಕಾರಿಯಾಗಿರುತ್ತದೆ. ಅದರ ನೇರ ಪರಿಣಾಮ ಕುಟುಂಬದ ಮೇಲಾಗುತ್ತದೆ. * ಶನಿ ಚಂದ್ರ ಯೋಗದ ಕಾರಣ ಸ್ವಭಾವಗಳು ಚಿತ್ರವಾಗಿರುತ್ತವೆ. ಅದರ ಪರಿಣಾಮ ಕುಟುಂಬದ ಮೇಲಾಗುತ್ತದೆ. ಶುಕ್ರನಲ್ಲಿ ಜಲ ಲಕ್ಷಣವಿದ್ದರೆ ಅಂತಹವರು ಸೂಕ್ಷ್ಮ ಪ್ರವೃತ್ತಿಯುಳ್ಳವರಾಗಿರುತ್ತಾರೆ. ಷಂಡತ್ವ ಮತ್ತು ಸಂತಾನಶಕ್ತಿ * ಶನಿಯೊಂದಿಗೆ ಬುಧ ಏಳನೇ ಮನೆಯಲ್ಲಿ ಅಥವಾ ತುಲಾ ರಾಶಿಯಲ್ಲಿದ್ದರೆ ಒಳ್ಳೆಯದಲ್ಲ. * ಮಂಗಳ ಮತ್ತು ಶುಕ್ರಗ್ರಹವು ಬಾಧಿತವಾಗಿದ್ದರೆ ಮತ್ತು ಎಂಟನೆ ಮನೆಯು ಹಾನಿಕಾರಕವಾಗಿದ್ದರೆ ಜಾತಕನಿಗೆ ಲೈಂಗಿಕ ಆಸಕ್ತಿ ಅಷ್ಟಾಗಿ ಇರುವುದಿಲ್ಲ. * ರಾಶಿ ಚಕ್ರದಲ್ಲಿ ಬೀಜ ಸ್ಪುಟ ಮತ್ತು ಕ್ಷೇತ್ರ ಸ್ಪುಟವು ಬಾಧಿತವಾಗಿದ್ದರೆ ಲೈಂಗಿಕ ಜೀವನ ಅಷ್ಟೊಂದು ತೃಪ್ತಿಕರವಾಗಿರುವುದಿಲ್ಲ. * ಕುಂಡಲಿಯಲ್ಲಿ ಶುಕ್ರ ಮತ್ತು ಚಂದ್ರ ಬಾಧಿತನಾಗಿದ್ದರೆ ವೀರಾರ‍ಯಣುಗಳ ಸಂಖ್ಯೆ ಕಡಿಮೆಯಾಗುತ್ತದೆ. * ಏಳನೇ ಮನೆಯಲ್ಲಿ ಉಪಕೇತು, 12ನೇ ಮನೆಯಲ್ಲಿ ಧೂಮ ಲಕ್ಷಣಗಳಿದ್ದರೆ ಷಂಡತ್ವವನ್ನು ಸೂಚಿಸುತ್ತದೆ. ಉತ್ತಮ ಬಾಂಧವ್ಯ 'ಋುಣಾನುಬಂಧ ರೂಪೇಣ ಪಶು, ಪತ್ನಿ, ಸುತಾಲಯಚ' ಎನ್ನುವಂತೆ ಋುಣಾನುಬಂಧವನ್ನು ಜಾತಕ ಕುಂಡಲಿಯ ಲಗ್ನಾಧಿಪತಿ ಅಥವಾ ಏಳನೇ ಮನೆಯಲ್ಲಿರುವ ಗ್ರಹ ಶುಭವಾಗಿದೆಯೇ ಎಂದು ನೋಡುವ ಮೂಲಕ ಲೆಕ್ಕ ಹಾಕಬಹುದು. ಮುಖ್ಯವಾಗಿ ನವಾಂಶ ಕುಂಡಲಿ ಸಂಗಾತಿಯ ಜೀವನ ದರ್ಪಣವಾಗಿರುತ್ತದೆ. ಕುಜ ದೋಷ ಕೆಲವೊಂದು ಲಗ್ನಗಳನ್ನು ಹೊರತುಪಡಿಸಿ ಕುಜ ದೋಷವು ಕನ್ಯಾ, ಮಿಥುನ, ತುಲಾ ಮತ್ತು ವೃಶ್ಚಿಕ ಲಗ್ನಗಳನ್ನು ಬಾಧಿಸುತ್ತದೆ. ಶನಿಗ್ರಹವೇನಾದರೂ 1, 4, 7, 8 ಮತ್ತು 12ನೇ ಸ್ಥಾನದಲ್ಲಿದ್ದರೆ ಕುಜದೋಷವು ಬಾಧಿಸುವುದಿಲ್ಲ. ಒಂದೊಮ್ಮೆ ಕುಜನೇನಾದರೂ ಚಂದ್ರ, ಬುಧ ಮತ್ತು ಗುರುವಿನೊಂದಿಗೆ ಇದ್ದರೆ ದೋಷವು ಗಣನೆಗೆ ಬರುವುದಿಲ್ಲ. ಜಾತಕನ ಲಗ್ನ ಅಥವಾ 7ನೇ ಮನೆಯಲ್ಲಿ ಗುರು ಮತ್ತು ಶುಕ್ರ ಗ್ರಹವಿದ್ದರೆ ಕುಜದೋಷ ನಿವಾರಣೆಯಾಗುತ್ತದೆ. ಅಶ್ವಿನಿ, ಮೃಗಶಿರಾ, ಪುನರ್ವಸು, ಪುಷ್ಯ, ಚಿತ್ತಾ, ಸ್ವಾತಿ, ಅನುರಾಧ, ಪೂರ್ವಾಷಾಢ, ಉತ್ತರಾಷಾಢ, ಉತ್ತರಾಭಾದ್ರ ಮತ್ತು ರೇವತಿ ನಕ್ಷತ್ರಗಳಿಗೆ ಕುಜದೋಷವಿಲ್ಲ. ಧನ್ಯವಾದಗಳು *ನಿಮ್ಮ ಜನ್ಮ ಲಗ್ನದಿಂದ ಸ್ತೀ ಸ್ವಭಾವ* ಮಹಿಳೆಯರ ಜನ್ಮ ಸಮಯದಲ್ಲಿ ಲಗ್ನದಲ್ಲಿ ಸೂರ್ಯ ಗ್ರಹ ಸ್ಥಿತಗೊಂಡಿದ್ದರೆ ಆಕೆ ಕಠಿಣ ಸ್ವಭಾವ ಉಳ್ಳವಳು, ಪರಧನಾಪೇಕ್ಷೆಯುಳ್ಳವಳು ಆಗಿರುತ್ತಾಳೆ. ಒಂದೊಮ್ಮೆ ಉಚ್ಛರಾಶಿಯಲ್ಲಿ ಸೂರ್ಯನಿದ್ದರೆ ಸುಖವಂತಳಾಗಿರುತ್ತಾಳೆ. ಎರಡನೇ ಭಾವದಲ್ಲಿದ್ದರೆ ನೇತ್ರ ರೋಗ ಉಂಟಾಗಬಹುದು. ತೃತೀಯ ಭಾವದಲ್ಲಿ ರವಿ ಸ್ಥಿತನಾಗಿದ್ದರೆ ಆಕೆ ಪ್ರಸನ್ನಚಿತ್ತಳು ಆಗಿರುತ್ತಾಳೆ. ಚತುರ್ಥ ಭಾವದಲ್ಲಿ ಅಷ್ಟಾಗಿ ಸುಖವಿರುವುದಿಲ್ಲ. ಪಂಚಮದಲ್ಲಿ ರವಿ ಸ್ಥಿತನಾಗಿದ್ದರೆ ದೇವತಾ ಆರಾಧನೆ ಮಾಡುವವಳಾಗಿರುತ್ತಾಳೆ. ಒಂದೊಮ್ಮೆ ಸೂರ್ಯ ಮೇಷ ಸಿಂಹರಾಶಿಯಲ್ಲಿದ್ದರೆ ಬಾಲ್ಯಾವಸ್ಥೆಯಲ್ಲಿ ಈಕೆ ರೋಗದಿಂದ ನರಳಿರುವ ಸಾಧ್ಯತೆ ಇರುತ್ತದೆ. ಷಷ್ಠ ಭಾವದಲ್ಲಿ ರವಿ ಸ್ಥಿತನಾಗಿದ್ದರೆ ಶತ್ರುಗಳನ್ನು ಗೆಲ್ಲುವವಳು, ದಕ್ಷ ಳೂ, ಧನಪುತ್ರಾದಿ ಸುಖವುಳ್ಳವಳೂ, ಸಾಧು-ಸಂತರ ಸೇವೆ ಮಾಡುವವಳೂ, ಪ್ರಬಲಳೂ, ಚತುರೆ, ಸುಂದರ ಆಕೃತಿ, ಪತಿಭಕ್ತಳೂ, ಉತ್ತಮ ಜ್ಞಾನ ಬುದ್ಧಿ ಉಳ್ಳವಳೂ, ಶಾಂತ ಸ್ವಭಾವದವಳೂ ಆಗಿರುತ್ತಾಳೆ. ರವಿಯು ಸಪ್ತಮ ಭಾವದಲ್ಲಿದ್ದರೆ ಪತಿಯಿಂದ ತಾತ್ಸಾರಕ್ಕೆ ಒಳಗಾಗುವ ಸಾಧ್ಯತೆ ಹೆಚ್ಚು, ಅಷ್ಟಮ ಭಾವದಲ್ಲಿ ರವಿ ಗ್ರಹವು ಸ್ಥಿತವಾಗಿದ್ದರೆ ಬಾಲ್ಯದಲ್ಲಿ ಅನಾರೋಗ್ಯದಿಂದ ನರಳಿರುವ ಸಾಧ್ಯತೆ ಹೆಚ್ಚು. ರಕ್ತದೋಷ ಕಾಣಿಸಿಕೊಳ್ಳಬಹುದು. ನವಮ ಭಾವದಲ್ಲಿ ಸೂರ್ಯನಿದ್ದರೆ ಆಕೆ ಸಾಹಸಪ್ರಿಯಳಾಗಿರುತ್ತಾಳೆ,ಕೋಪದ ಸ್ವಭಾವ ಹೊಂದಿರುತ್ತಾಳೆ. ಸೂರ್ಯ ನೇನಾದರೂ ದಶಮ ಭಾವದಲ್ಲಿದ್ದರೆ ದುಷ್ಕರ್ಮಗಳಲ್ಲಿ ಪ್ರೀತಿಯುಳ್ಳವಳಾಗಿರುವ ಸಾಧ್ಯತೆ ಹೆಚ್ಚು. ಏಕಾದಶ ಭಾವದಲ್ಲಿ ರವಿ ಸ್ಥಿತನಾಗಿದ್ದರೆ ಜಿತೇಂದ್ರಿಯಳು, ಕ್ಷ ಮಾಶೀಲೆ, ಬಂಧುಸಮ್ಮಾನಿತೆ, ಅನೇಕ ಕಲೆಗಳಲ್ಲಿ ಪ್ರವೀಣೆ, ಅನೇಕ ಮೂಲಗಳಿಂದ ಲಾಭ ಪಡೆಯುವಾಕೆ, ದಾನಧರ್ಮ ಮಾಡುವ ಪ್ರವೃತ್ತಿ, ಮಕ್ಕಳು, ಮೊಮ್ಮಕ್ಕಳನ್ನು ಹೊಂದುತ್ತಾಳೆ. ದ್ವಾದಶ ಭಾವದಲ್ಲಿ ರವಿಯಿದ್ದರೆ ಅನಗತ್ಯವಾಗಿ ಹಣವನ್ನು ಪೋಲು ಮಾಡುತ್ತಾಳೆ. ವಾತದೋಷ ಆಕೆಯನ್ನು ಕಾಡಬಹುದು. ಇನ್ನೂ ಪುರುಷರ ಜಾತಕದಲ್ಲಿ ಶುಕ್ರ ನ ಸ್ಥಾನ ದಿಂದ ಸಪ್ತಮ ಸ್ಥಾನದಿಂದ ಅವರ ಸ್ವಭಾವ, ಮುಂದೆ ಇರುವ ದಾಂಪತ್ಯ ಜೀವನದ ರಹಸ್ಯ ಒಡುಕು ಕೆಡೆಕು , ಗಳನ್ನು ತಿಳಿಯಬಹುದು ದಶಮ ಭಾವದ ಆಧಾರದಿಂದಲೂ ಅವರ ನಡತೆ ತಿಳಿಯಬಹುದು ಜಾತಕ ವಿಲ್ಲದಿದ್ದರೂ ಅವರ ನಡಿಗೆ ಕಾಲುಬೆರಳುಗಳಿಂದ ಮುಂದಿನ ಜೀವನದ ಕಷ್ಟ ನಷ್ಟ, ಸುಖ ಸಂತೋಷ ಗಳನ್ನು ಸಹ ತಿಳಿಸಬಹುದು . ನಾನು ಸಪ್ತಮ ಭಾವ ಮತ್ತು ವಿವಾಹ ದಾಂಪತ್ಯ ಜೀವನಕ್ಕೆ ಸಂಬಂಧ ಇರುವ ಎಲ್ಲಾ ರೀತಿಯ ಜ್ಯೋತಿಷ್ಯ ವಿಷಯಗಳನ್ನು ಕುರಿತು ಉಪನ್ಯಾಸ ಮತ್ತು ತುಂಬಾ ಆಳವಾಗಿ ಅಧ್ಯಯನ ನಡೆಸುತ್ತಿದ್ದೆನೆ , ಯಾವ ಕಾರಣಕ್ಕಾಗಿ ವಿವಾಹ ಜೀವನ ದುಃಖ ವಿಚ್ಛೇದನ, ಕಿರುಕುಳ, ಅತೀಜಗಳ, ಏಕೆಂದರೆ ನನ್ನ ಪ್ರಕಾರ ಮನುಷ್ಯನ ಜೀವನ 70% ಭಾಗ ಮದುವೆ ಜೀವನದಲ್ಲೆ ಇರುತ್ತದೆ , ಶೇಕಡ 50% ಜನ ಮದುವೆ ನಂತರ ಕೆಟ್ಟ ಚಟ ಹಣದ ಸಮಸ್ಯೆ , ಮಾನಸಿಕ ಒತ್ತಡ, ತುಂಬಾ ಕಷ್ಟ ಅನುಭವಿಸುತ್ತಾರೆ , ಆಂದರಿಂದ ಇದಕ್ಕೆ ಪರಿಹಾರ ನಮ್ಮ ಕೈಯಲ್ಲೆ ಇದೆ , ನಾವು ಯಾವುದಾದರು ಸಣ್ಣಪುಟ್ಟ ವಸ್ತುಗಳನ್ನು ಕೊಳ್ಳುವಾಗಲು, ಅದರ ಗುಣಮಟ್ಟ, ಅನೇಕ ರೀತಿಯಲ್ಲಿ ವಿಚಾರಿಸಿ ನಂತರ ತಗೆದುಕೊಳ್ಳುತ್ತೆವೆ, ಆದರೇ ನಮ್ಮ ಜೀವನದ ಅಮೂಲ್ಯ ಸಮಯ ಬಂದಾಗ ನಾವು ಎಡವಟ್ಟು ಎಡುವುತ್ತೆವೆ, ನಮ್ಮ ಆಯ್ಕೆ ತಪ್ಪು ಎಂದು ಮದುವೆಯ ನಂತರ ಕೊರಗುತ್ತೆವೆ, ಆಂದರಿಂದ ಮದುವೆ ಕಿಂತ ಮುಂಚೆ ಜಾತಕ ಪರಿಶೀಲನೆ, ಅವರ, ನಡೆ, ಅವರ ಕಾಲು ಬೆರಳು ಆಕಾರ, ನೋಡಬೇಕು , ಕೇವಲ ಸಲಾವಳಿ ಬಂದ ತಕ್ಷಣ ಎಲ್ಲವೂ ಶುಭ ಎನ್ನುವುದು ತಪ್ಪು ಮಾಹಿತಿ ಸಲಾವಳಿಯಲ್ಲಿ 34/ 30 ಗುಣ ಬಂದರು ಮದುವೆ ಜೀವನ ಮುರಿದಿರುವ ಘಟನೆ, ನಮ್ಮ ಮುಂದೆ ನಡೆದಿದೆ ಆಂದರಿಂದ ತುಂಬಾ ಆಳವಾಗಿ ಜಾತಕ ಪರಿಶೀಲನೆ ಅಗತ್ಯ ಹಾಗೂ ಮದುವೆ ಮೂಹುರ್ತ ತುಂಬಾ ಮುಖ್ಯ, ಎನೇ ನೋಡಿ ಎನೇ ಮಾಡಿದರು ಜೀವನದಲ್ಲಿ ಕಷ್ಟ ಅನ್ನುವುದಾದರೆ ,,,,ಗೊತ್ತೊ ಗೊತ್ತಿಲದಹಾಗೆ ತಪ್ಪು ನೀವು ಎಡುವುತ್ತಿರಾ, ಏನುಮಾಡಲು ಸಾದ್ಯವಿಲ್ಲ ನಿಮ್ಮ ಹಿಂದಿನ ಜನ್ಮದ ಕರ್ಮಫಲ ಅಷ್ಟೇ ಅನುಭವಿಸಬೇಕು , ಅದೇ ಹಣೆಬರಹ, ಇನ್ನೊಂದು ವಿಚಾರ ನೀವು ಮದುವೆ ಮಾಡುವಾಗ ಎಷ್ಟೋ ಲಕ್ಷಗಟ್ಟಲೆ ಖರ್ಚು ಮಾಡಿ ಮಾಡುತ್ತಿರಾ ಏತಕ್ಕಾಗಿ? ವಧು ವರರು ಸುಖ ಸಂತೋಷದಿಂದ ಇರಲು ತಾನೇ ಆದರೇ ಇಬ್ಬರ ಜಾತಕ ಹೊಂದಾಣಿಕೆ ಬಗ್ಗೆ ತಿಳಿಯಲು, ಜ್ಯೋತಿಷ್ಯ ರ ಬಳಿ ಚೌಕಾಸಿ ಮಾಡುತ್ತಿರಾ ಅಥವಾ ಸರಿಯಾಗಿ ಕೇಳುವುದಿಲ್ಲ ಕಟಾಚಾರಕ್ಕಾಗಿಯೊ, ಅಥವಾ ಭಯಕ್ಕಾಗಿಯೊ ಗೊತ್ತಿಲ್ಲ, ಇನ್ನೂ ಕೆಲವರು ಎಲ್ಲಿ ಹಣ ಜಾಸ್ತಿ ಆಗುತ್ತದೆಯೊ ಅನ್ನುವ ಭಯ ಲಕ್ಷಗಟ್ಟಲೇ ಹಣ ಖರ್ಚು ಮಾಡುವವರಿಗೆ, ಅವರ ಶುಲ್ಕ 1000 ಇರಬಹುದು ಅದನ್ನು ಕೊಡಲು ಹಿದೆ ಮುಂದೆ ನೊಡುತ್ತಾರೆ, ಕೆಲವು ಜನ, ಆಂದರಿಂದ ಪ್ರೀ ಯಾಗಿ ಎನು ಕೇಳುತ್ತಿಲ್ಲವಲ್ಲ ಸರಿಯಾದ ಮಾಹಿತಿ ಪಡೆಯಬೇಕು ಅದು ನಿಮ್ಮ ಹಕ್ಕು ಅದೇ ಜಾತಕವನ್ನು ಹಲವು ಕಡೆ ಜ್ಯೋತಿಷ್ಯಶಾಸ್ತ್ರಜ್ಞರ ಬಳಿ ಚರ್ಚಿಸಿ ಸೂಕ್ತ ನಿರ್ಧಾರ ಕೈಗೊಂಡು ಮುನ್ನಡೆಯಬೇಕು ಅದು ನಿಮ್ಮ ಕರ್ತವ್ಯ, ಕೇಲವು ಭಾರಿ ಎಷ್ಟೇ ಅನುಭವಿ ಜ್ಯೋತಿಷ್ಯರು ಎಡುವುತ್ತಾರೆ, ಆಂದರಿಂದ 10 ಭಾರಿ ಯೋಚಿಸಿ , 10 ಕಡೆ ತೋರಿಸಬೇಕು, ನಾವು ಯಾವುದೇ ವಸ್ತುವನ್ನು ತರುವ ಮುಂಚೆ ಹತ್ತು ಕಡೆ ವಿಚಾರಿಸುವುದಿಲ್ಲವೆ ? ಹಾಗೆ ಎಲ್ಲ ಮುಗಿದ ನಂತರ ಯಾರೂ ಬರುವುದಿಲ್ಲ ಇನ್ನೂ ನಿಮಗೆ ಬಿಟ್ಟದ್ದು , *ಜಾತಕದಲ್ಲಿ ಗುರು ಸ್ಥಾನ ದ ಫಲ ಹಾಗೂ ಗುರು ಗ್ರಹ ಮತ್ತು ಗುರುವಿನ ಮಹತ್ವ* ಪ್ರಥಮವಾಗಿ ಎಲ್ಲರಿಗೂ ಗುರುವಾರದ ಶುಭಾಶಯಗಳು . ಪ್ರತಿಯೊಬ್ಬ ಮನುಷ್ಯನಿಗೂ ಗುರುವಿನ ಅವಶ್ಯಕತೆ ಇದ್ದೆ ಇದೆ. ಏಕೆಂದರೆ ಗುರುವಿಲ್ಲದೆ ಕಲಿತ ವಿದ್ಯೆ ಶೂನ್ಯ ಎನ್ನುತ್ತಾರೆ. ಒಬ್ಬ ಕಳ್ಳನಿಗೂ ಗುರು ಬೇಕು ಎನ್ನುತ್ತಾರೆ ಶ್ರೀ ರಾಮಕೃಷ್ಣ ಪರಮಹಂಸರು. ಶ್ರೀಕೃಷ್ಣನಿಗೆ ಸಾಂದೀಪನಿ ಗುರು, ಶ್ರೀ ಶಂಕರಾಚಾರ‍್ಯರಿಗೆ ಶ್ರೀ ಗೋವಿಂದ ಭಗವತ್ಪಾದರು ಗುರು, ಶ್ರೀ ರಾಮಕೃಷ್ಣ ಪರಮಹಂಸರಿಗೆ ತೋತಾಪುರಿ ಗುರು, ಪಾಂಡವರಿಗೆ ಮತ್ತು ಕೌರವರಿಗೆ ದ್ರೋಣಾಚಾರ‍್ಯರು ಗುರು, ಶ್ರೀರಾಮ ಲಕ್ಷ್ಮಣರಿಗೆ ವಿಶ್ವಾಮಿತ್ರರು ಗುರು. ಗುರುವಿನಲ್ಲಿ ಮೂರು ವಿಧ. 1. ಆಧ್ಯಾತ್ಮಿಕ ಶಿಕ್ಷಣವನ್ನು ನೀಡುವ ಗುರು. 2. ಶೈಕ್ಷಣಿಕ, ವ್ಯಾವಹಾರಿಕ ಬದುಕಿಗೆ ಬೇಕಾದ ಶಿಕ್ಷಣ ನೀಡುವ ಗುರು. 3. ಅಂಗೀರಸ ಪುತ್ರನಾದ ಬೃಹಸ್ಪತಿ ಅಥವಾ ಗುರು. ಈತ ನವಗ್ರಹಗಳಲ್ಲಿ ಒಂದಾದ ಗ್ರಹ ಮತ್ತು ಜ್ಯೊತಿಷ್ಯ ಶಾಸ್ತ್ರದಲ್ಲಿ ಈ ಗುರುವಿನ ಸ್ಥಾನಕ್ಕೆ ಬಹಳ ಮಹತ್ವವಿದೆ. ಈ ಗುರು ನಮ್ಮ ನಿತ್ಯ ಜೀವನದಲ್ಲಿ ಯಾವ ರೀತಿ ಪರಿಣಾಮ ಬೀರುತ್ತಾನೆ ಎಂದು ವ್ಯಕ್ತಿಯ ಜಾತಕ ಅಥವಾ ಕುಂಡಲಿ ಮತ್ತು ರಾಶಿಯ ಮೂಲಕ ತಿಳಿಯಬಹುದು. ಗುರು ಗ್ರಹ: ನವಗ್ರಹಗಳಲ್ಲಿ ಅತಿ ಶುಭ ಹಾಗೂಶಾಂತ ಗ್ರಹ ಎಂದರೆ ಗುರು. ಈತನ ಸ್ವಕ್ಷೇತ್ರ ಧನುಸ್ಸು ಮತ್ತು ಮೀನ ರಾಶಿ. ಕಟಕರಾಶಿ ಉಚ್ಚರಾಶಿಯಾದರೆ ಮಕರ ನೀಚರಾಶಿಯಾಗಿದೆ. ಗುರು ವಿದ್ಯಾವಂತನು, ಶಾಂತ ಸ್ವಭಾವದವನು, ಅಧ್ಯಾತ್ಮಿಕ ಶಾಸ್ತ್ರ ನಿಪುಣನು, ಸಮಾಜ ಕಾರ‍್ಯದಲ್ಲಿ ಪ್ರವೀಣ, ಬುದ್ಧಿವಂತನು, ಪರೋಪಕಾರಿ, ಹಣದ ವಿಷಯದಲ್ಲಿ ಉದಾರಿ, ಪುತ್ರಕಾರಕ, ಶಿಕ್ಷಣ ನೀಡುವವನೂ ಆಗಿರುವನು. ಜಾತಕದಲ್ಲಿ ಗುರು ಕುಂಡಲಿಯಲ್ಲಿ ಗುರುವು ಲಗ್ನ ಅಥವಾ ಮೊದಲನೆ ಭಾವದಲ್ಲಿ ಇದ್ದರೆ ಆ ಜಾತಕದವರು ಸುಂದರ ದೇಹವುಳ್ಳವರು, ಅವರು ದೀರ್ಘ ಆಯುಸ್ಸು ಉಳ್ಳವರು, ಪಂಡಿತರೂ, ಧೀರರೂ, ಶ್ರೇಷ್ಠ ವ್ಯಕ್ತಿಯೂ ಆಗಿರುತ್ತಾರೆ. ಕುಂಡಲಿಯಲ್ಲಿ ಗುರುವು ಎರಡನೇ ಮನೆಯಲ್ಲಿದ್ದರೆ ಆ ಜಾತಕದವರು ಧನಿಕರೂ, ಉತ್ತಮ ಆಹಾರ ಸೇವಿಸುವವರೂ, ವಾಕ್‌ ಚಾತುರ‍್ಯ ಹೊಂದಿರುವವರೂ, ಮೃದುಭಾಷಿಗಳೂ ಆಗಿರುತ್ತಾರೆ. ಮೂರನೇ ಮನೆಯಲ್ಲಿದ್ದರೆ ಬೇರೆಯವರಿಂದ ತಿರಸ್ಕರಿಸಲ್ಪಡುವವರೂ, ಕೃಪಣರೂ, ಸ್ತ್ರೀಯರಿಂದ ಪರಾಜಿತನೂ, ಹೆಚ್ಚು ಪಾಪ ಕಾರ್ಯ ಮಾಡುವವರೂ ಆಗಿರುತ್ತಾರೆ. ಕುಂಡಲಿಯಲ್ಲಿ ಗುರು 4ನೇ ಮನೆಯಲ್ಲಿದ್ದರೆ ಆ ಜಾತಕರು ವಾಹನ ಸುಖವನ್ನು ಹೊಂದುವರು, ಬುದ್ಧಿವಂತರೂ, ಭೋಗವಂತರೂ, ಶ್ರೇಷ್ಠರೂ, ಶತ್ರುಗಳನ್ನು ಜಯಿಸುವವರೂ ಆಗಿರುತ್ತಾರೆ. ಗುರು ಐದನೇ ಮನೆಯಲ್ಲಿದ್ದರೆ ಪುತ್ರ ಸಂತಾನ, ಉತ್ತಮ ಮಿತ್ರರನ್ನು ಹೊಂದುವರು. ಧೈರ‍್ಯವಂತರಾಗಿದ್ದು ಎಲ್ಲಾ ವಿಧದ ಸುಖವನ್ನು ಹೊಂದುತ್ತಾರೆ. ಆರನೇ ಮನೆಯಲ್ಲಿದ್ದರೆ ಕೊಟ್ಟ ಮಾತಿನಂತೆ ನಡೆಯುವವರು, ಯಾವಾಗಲೂ ಹೊಟ್ಟೆಗೆ ಸಂಬಂಧಪಟ್ಟ ತೊಂದರೆ ಅನುಭವಿಸುವರು. ಪತ್ನಿಯಿಂದ ಕೀರ್ತಿಯನ್ನು ಹೊಂದುವರು. 7ನೇ ಮನೆಯಲ್ಲಿದ್ದರೆ ಭಾಗ್ಯವಂತರಾಗಿ ಉತ್ತಮ ಪತ್ನಿ ಅಥವಾ ಪತಿಯನ್ನು ಹೊಂದುತ್ತಾರೆ. ಸಂಸಾರದಲ್ಲಿ ನೆಮ್ಮದಿಯಿಂದ ಇರುವವರೂ, ಸಮಯಕ್ಕೆ ಸರಿಯಾಗಿ ಮಾತಾಡುವವರೂ ಕವಿಯೂ, ಲೇಖಕರೂ ಆಗಿರುತ್ತಾರೆ. ಗುರು 8 ನೇ ಮನೆಯಲ್ಲಿದ್ದರೆ ಆಯಸ್ಸು ಕಡಿಮೆ ಇರುತ್ತದೆ. ಸಾಲಗಾರರೂ, ಆರೋಗ್ಯದಲ್ಲಿ ಆಗಾಗ ತೊಂದರೆ ಅನುಭವಿಸುವವರೂ, ಉತ್ತಮ ಕೆಲಸದಲ್ಲಿ ಇರುವವರೂ ಆಗಿರುತ್ತಾರೆ. 9ನೇ ಮನೆಯಲ್ಲಿದ್ದರೆ ದೇವರಲ್ಲಿ, ಗುರುಹಿರಿಯರಲ್ಲಿ ಅಪಾರ ಭಕ್ತಿ ಹೊಂದಿರುವವರೂ, ವಿದ್ಯಾವಂತರೂ, ಮಂತ್ರಿಗಳ ಭಾಗ್ಯ ಹೊಂದಿರುವವರೂ, 10ನೇ ಮನೆಯಲ್ಲಿದ್ದರೆ ಪ್ರಾರಂಭಿಸಿದ ಕೆಲಸವನ್ನು ಯಶಸ್ವಿಯಾಗಿ ಮಾಡುವವರೂ, ಸಕಲ ಉಪಾಯ ಮತ್ತು ಕುಶಲತೆಯನ್ನು ಹೊಂದಿರುವವರೂ, ವಾಹನ, ಧನ, ಭಾಗ್ಯ, ಶಿಕ್ಷಣ ಕ್ಷೇತ್ರದಲ್ಲಿ ವೃತ್ತಿ ಮಾಡುವವರು ಆಗಿರುತ್ತಾರೆ. 11ನೇ ಮನೆಯಲ್ಲಿದ್ದರೆ ಅಧಿಕ ಲಾಭ ಗಳಿಸುವವರು, ಅನೇಕ ಸೇವಕರನ್ನು ಹೊಂದಿರುವವರು, ಜನಗಳಿಂದ ಪ್ರೀತಿ ಹೊಂದುವವರು, ಅಲ್ಪ ಸಂತಾನ ಹೊಂದಿರುವವರು ಆಗಿರುತ್ತಾರೆ. 12ನೇ ಮನೆಯಲ್ಲಿದ್ದರೆ ಆಲಸಿಯೂ, ಜಗಳಗಂಟರೂ, ಜನಗಳಲ್ಲಿ ದ್ವೇಷ ಹೊಂದಿದವರೂ, ಯಾವ ಕೆಲಸಕ್ಕೂ ಹೇಸದವರೂ ಆಗಿರುತ್ತಾರೆ. ನಿಮ್ಮ ಜಾತಕದಲ್ಲಿ ಗುರುಗ್ರಹ ಬಲ ವಿಲ್ಲದಿದ್ದರೇ ಅಥವಾ ನೀಚ ಅಥವಾ ಆಗ್ರಹ ದ ದೋಷ ತಿಳಿದು ಸೂಕ್ತ ವಾದ ಪರಿಹಾರ ಮಾಡಿ ಎಲ್ಲವೂ ಶುಭ ವಾಗುತ್ತದೆ. ಗುರುಗ್ರಹದ ಅನುಗ್ರಹಕ್ಕೆ. * ಗುರುಗ್ರಹದ ವಿಗ್ರಹಕ್ಕೆ ಪ್ರತಿದಿನ ಹಳದಿ ಬಟ್ಟೆ ಅಥವಾ ಹಳದಿ ಬಣ್ಣದ ಹೂ ಅರ್ಪಿಸಿ. * ಮಾನಸಿಕ ಅಸ್ವಸ್ಥರಿಗೆ ಆಹಾರವನ್ನು ನೀಡಿ. * ಬಡಮಕ್ಕಳಿಗೆ ವಿದ್ಯಾಭ್ಯಾಸದ ಸಾಮಗ್ರಿಗಳನ್ನು ನೀಡಿ. ಪುಷ್ಯರಾಗದ ಉಂಗುರವನ್ನು ಧರಿಸಿ.ಧರಿಸಿ. ಇದು ನಿಮ್ಮ ಜನ್ಮ ಲಗ್ನ ದಿಂದ ನೋಡಬೇಕು * ಗುರು ಅಷ್ಟೋತ್ತರ ಪಠಿಸಿ * ಗುರುವಾರ ಗುರವಿನ ದೇವಾಲಯಕ್ಕೆ ಹೋಗುವುದು. * ಗೋವುಗಳಿಗೆ ಪ್ರತಿದಿನ ಅಕ್ಕಿ ಮತ್ತು ಬೆಲ್ಲವನ್ನು ಕೊಡಿ. * ಗುರು ಜಪ ಅಥವಾ ಗುರು ಶಾಂತಿ ಮಾಡಿಸಿ. * ಗುರು ದತ್ತಾತ್ರೇಯ ಅಷ್ಟೋತ್ತರ ಪಠಿಸಿ. ಧನ್ಯವಾದಗಳು . ಹರುಷ ಜ್ಯೋತಿಷ್ಯ. ಜಾತಕ ಮಾಡಿಸಲು ಅಥವಾ ಯಾವುದೇ ಭವಿಷ್ಯ ದ ಬಗ್ಗೆ ಪ್ರಶ್ನೆ , ಸಂಖ್ಯಾಶಾಸ್ತ್ರ Numerology ಗಾಗಿ ಸಂಪರ್ಕಿಸಿ :7676761586,9591372555