Friday, 8 December 2017
ಮಧುಮೇಹ: ನಿಮ್ಮ ಅರಿವು ವಿಸ್ತರಿಸಿಕೊಳ್ಳಿ
ಮಧುಮೇಹ ಮತ್ತು ಮಧುಮೇಹ ಪೂರ್ವ ಸ್ಥಿತಿಯನ್ನು ಪತ್ತೆ ಮಾಡಲು ಯಾವ ಪರೀಕ್ಷೆಗಳನ್ನು ನಡೆಸಲಾಗುತ್ತದೆ?
ಆರೋಗ್ಯ ಸೇವಾ ವೃತ್ತಿಪರರು ಸಾಮಾನ್ಯವಾಗಿ ಫಾಸ್ಟಿಂಗ್ ಪ್ಲಾಸ್ಮಾ ಗ್ಲುಕೋಸ್ -ಖಾಲಿ ಹೊಟ್ಟೆಯಲ್ಲಿ ಗ್ಲುಕೋಸ್ (ಎಫ್ಪಿಜಿ/ಎಫ್ಬಿಎಸ್) ಪರೀಕ್ಷೆ ಹಾಗೂ ಪೋಸ್ಟ್ ಪ್ರಾಂಡಿಯಲ್ ಗ್ಲುಕೋಸ್ - ಆಹಾರ ಸೇವಿಸಿದ ಬಳಿಕ ಗ್ಲುಕೋಸ್ (ಪಿಪಿಪಿಜಿ/ಪಿಪಿಬಿಎಸ್) ಪರೀಕ್ಷೆಗಳನ್ನು ಅಥವಾ ಎಚ್‌ಬಿಎ1ಸಿ ಪರೀಕ್ಷೆಯನ್ನು ಮಧುಮೇಹ ಪತ್ತೆ ಮಾಡಲು ಅವಲಂಬಿಸುತ್ತಾರೆ. ಕೆಲವು ಪ್ರಕರಣಗಳಲ್ಲಿ, ರ್‍ಯಾಂಡಮ್ ಪ್ಲಾಸ್ಮಾ ಗ್ಲುಕೋಸ್ (ಆರ್‌ಪಿಜಿ) ಪರೀಕ್ಷೆಯನ್ನು ಅವಲಂಬಿಸುವುದೂ ಇದೆ.
- ಫಾಸ್ಟಿಂಗ್ ಪ್ಲಾಸ್ಮಾ ಗ್ಲುಕೋಸ್ (ಎಫ್ಪಿಜಿ) ಪರೀಕ್ಷೆ:
ಒಂದು ನಿರ್ದಿಷ್ಟ ಸಮಯದಲ್ಲಿ ನಿಮ್ಮ ರಕ್ತದಲ್ಲಿರುವ ಗ್ಲುಕೋಸ್ ಮಟ್ಟವನ್ನು ಎಫ್ಪಿಜಿ ರಕ್ತಪರೀಕ್ಷೆ ಅಳೆಯುತ್ತದೆ. ಅತ್ಯಂತ ವಿಶ್ವಾಸಾರ್ಹ ಫಲಿತಾಂಶಕ್ಕಾಗಿ, ಇದನ್ನು ಬೆಳಗಿನ ಹೊತ್ತಿನಲ್ಲಿ, ನಿಮ್ಮ ಹೊಟ್ಟೆ ಕನಿಷ್ಠ 8 ತಾಸುಗಳ ಕಾಲ ಖಾಲಿ ಇದ್ದ ಬಳಿಕ ನಡೆಸುವುದು ವಿಹಿತ. ಖಾಲಿ ಹೊಟ್ಟೆ ಅಂದರೆ, ಕೆಲವು ಗುಟುಕು ನೀರು ವಿನಾ ಬೇರೇನೂ ಸೇವಿಸಿರಬಾರದು.
- ರ್‍ಯಾಂಡಮ್ ಪ್ಲಾಸ್ಮಾ ಗ್ಲುಕೋಸ್ (ಆರ್‌ಪಿಜಿ) ಪರೀಕ್ಷೆ:
ಕೆಲವೊಮ್ಮೆ, ಮಧುಮೇಹದ ಚಿಹ್ನೆಗಳು ಇದ್ದು, ನೀವು ಖಾಲಿ ಹೊಟ್ಟೆಯಲ್ಲಿ ಇರುವ ತನಕ ಕಾಯಬಾರದ ಸ್ಥಿತಿ ಇದ್ದಾಗ ವೈದ್ಯಕೀಯ ವೃತ್ತಿಪರರು ಆರ್‌ಪಿಜಿ ಪರೀಕ್ಷೆಯನ್ನು ಉಪಯೋಗಿಸಬಹುದು. ಆರ್‌ಪಿಜಿ ಪರೀಕ್ಷೆಗಾಗಿ ನೀವು ಇಡೀ ರಾತ್ರಿ ಖಾಲಿ ಹೊಟ್ಟೆಯಲ್ಲಿ ಇರಬೇಕಾಗಿಲ್ಲ. ಈ ರಕ್ತ ಪರೀಕ್ಷೆಯನ್ನು ಯಾವುದೇ ಸಮಯದಲ್ಲಿ ನಡೆಸಬಹುದು.
ಮಧುಮೇಹಕ್ಕೆ ಚಿಕಿತ್ಸೆ:
ಗುರಿಗಳೇನು?
- ಹೈಪರ್ ಗ್ಲೆ„ಸೇಮಿಯಾ (ಗ್ಲುಕೋಸ್ ಆಧಿಕ್ಯ)ಕ್ಕೆ ಸಂಬಂಧಿಸಿದ ಚಿಹ್ನೆಗಳನ್ನು ದೂರ ಮಾಡುವುದು.
- ಮಧುಮೇಹದಿಂದ ಉಂಟಾಗಬಹುದಾದ ದೀರ್ಘಕಾಲಿಕ ಮೈಕ್ರೊವಾಸ್ಕಾಲರ್ ಮತ್ತು ಮ್ಯಾಕ್ರೊವಾಸ್ಕಾಲರ್ ಸಂಕೀರ್ಣ ಸಮಸ್ಯೆಗಳನ್ನು ತಗ್ಗಿಸುವುದು ಅಥವಾ ದೂರ ಮಾಡುವುದು.
- ರೋಗಿಗೆ ಎಷ್ಟು ಸಾಧ್ಯವೋ ಅಷ್ಟು ಸಹಜ ಜೀವನಶೈಲಿ ಸಾಧಿಸಲು ಸಾಧ್ಯವಾಗುವಂತೆ ಮಾಡುವುದು.
ಮಧುಮೇಹಕ್ಕೆ ಲಭ್ಯವಿರುವ ಔಷಧಿವಿಜ್ಞಾನೇತರ ಚಿಕಿತ್ಸೆಗಳಾವುವು?
ವೈದ್ಯಕೀಯ ಪೌಷ್ಟಿಕಾಂಶ ಚಿಕಿತ್ಸೆ (ಮೆಡಿಕಲ್ ನ್ಯೂಟ್ರಿಶನಲ್ ಥೆರಪಿ - ಎಂಎನ್‌ಟಿ)
ಮಧುಮೇಹವನ್ನು ನಿಭಾಯಿಸುವ ಪರಿಣಾಮಕಾರಿ ಚಿಕಿತ್ಸಾಂಗವಾಗಿ ಟೈಪ್ 1 ಮಧುಮೇಹಿಗಳು ಮತ್ತು ಟೈಪ್ 2 ಮಧುಮೇಹಿಗಳಿಬ್ಬರಿಗೂ ಪೌಷ್ಟಿಕಾಂಶ ಚಿಕಿತ್ಸೆಯನ್ನು ಶಿಫಾರಸು ಮಾಡಲಾಗುತ್ತದೆ. ಅತಿದೇಹತೂಕದ ಅಥವಾ ಬೊಜ್ಜು ಹೊಂದಿರುವ ಟೈಪ್ 2 ಮಧುಮೇಹಿಗಳಿಗೆ ಶಕ್ತಿಯ ಪೂರೈಕೆಯನ್ನು ಕಡಿಮೆ ಮಾಡಿ, ಆರೋಗ್ಯಕರ ಆಹಾರ ಶೈಲಿಯನ್ನು ರೂಢಿಸಿಕೊಳ್ಳುವುದನ್ನು ತೂಕ ಕಡಿಮೆ ಮಾಡಿಕೊಳ್ಳುವುದಕ್ಕಾಗಿ ಶಿಫಾರಸು ಮಾಡಲಾಗುತ್ತದೆ.
ಇದರಿಂದ ರಕ್ತದಲ್ಲಿ ಸಕ್ಕರೆಯ ಮಟ್ಟ, ರಕ್ತದೊತ್ತಡ, ಮತ್ತು/ ಅಥವಾ ಲಿಪಿಡ್ ಮಟ್ಟ ಆರೋಗ್ಯಯುತವಾಗುವುದರ ಮೂಲಕ ವೈದ್ಯಕೀಯ ಪ್ರಯೋಜನ ಲಭಿಸುತ್ತದೆ. ಕಾಬೊìಹೈಡ್ರೇಟ್ ಸೇವನೆಯ ಮೇಲೆ ಕಾಬೊìಹೈಡ್ರೇಟ್ ಗಣನೆ ಅಥವಾ ಅನುಭವ ಆಧರಿತ ಅಂದಾಜಿನ ಆಧಾರದಲ್ಲಿ ನಿಗಾ ಇರಿಸಬೇಕು. ಹೆಚ್ಚು ಗ್ಲೆ„ಸೇಮಿಕ್ ಆಹಾರಗಳ ಬದಲಾಗಿ
ಉತ್ತಮಗೊಳ್ಳುತ್ತದೆ. ಮಧುಮೇಹಿ ಮೂತ್ರಪಿಂಡಗಳ ಕಾಯಿಲೆಗಳು ಇಲ್ಲದಿರುವ ರೋಗಿಗಳಿಗಾಗಿ ಮಾದರಿ ಪ್ರೊಟೀನ್ ಸೇವನೆಯ ಪ್ರಮಾಣ ಎಂಬುದು ಇಲ್ಲದಿರುವ ಕಾರಣ ಈ ಗುರಿಗಳನ್ನು ವ್ಯಕ್ತಿಗತವಾಗಿ ಬದಲಾಯಿಸಿಕೊಳ್ಳಬೇಕು.
ಆದರೆ, ಮೂತ್ರಪಿಂಡ ಕಾಯಿಲೆ ಇರುವ ರೋಗಿಗಳಿಗೆ ಪ್ರೊಟೀನ್ ಸೇವನೆಯನ್ನು ಸಹಜಕ್ಕಿಂತ ಕಡಿಮೆ ಮಾಡುವುದು ಸರಿಯಲ್ಲ; ಏಕೆಂದರೆ, ಅದು ಗ್ಲೆ„ಸೇಮಿಕ್ ಅಂಕಿಅಂಶಗಳು, ಹೃದ್ರೋಗ ಅಪಾಯ ಅಂಕಿಅಂಶಗಳು ಅಥವಾ ಗ್ಲೊಮರುಲಾರ್ ಫಿಲೆóàಶನ್ ದರ (ಜಿಎಫ್ಆರ್)ದ ಕುಸಿತದ ಪ್ರಮಾಣವನ್ನು ಬದಲಾಯಿಸುವುದಿಲ್ಲ. ಆಹಾರದಲ್ಲಿ ಕಡಿಮೆ ಮಾಡಬೇಕಾದ ಟ್ರಾನ್ಸ್-ಫ್ಯಾಟ್ ಕೊಬ್ಬಿನ ಗುಣಮಟ್ಟಕ್ಕಿಂತ ಕಡಿಮೆ ಮಾಡಬೇಕಾದ ಕೊಬ್ಬಿನ ಗುಣಮಟ್ಟ ಬಹಳ ಮುಖ್ಯ.
ಟೈಪ್ 1 ಮಧುಮೇಹ ಹೊಂದಿರುವ ವ್ಯಕ್ತಿಗಳಲ್ಲಿ ಎಂಎನ್‌ಟಿಯ ಗುರಿ ಕ್ಯಾಲೊರಿ ಸೇವನೆಯನ್ನು ಸಮನ್ವಯಗೊಳಿಸುವುದು ಮತ್ತು ಹೊಂದಿಕೆ ಮಾಡುವುದಾಗಿರಬೇಕು.
ಟೈಪ್ 2 ಮಧುಮೇಹಿಗಳಲ್ಲಿ ಎಂಎನ್‌ಟಿಯು ಲಘು ಪ್ರಮಾಣದ ಕ್ಯಾಲೊರಿ ಇಳಿಕೆ (ಕಡಿಮೆ ಕಾಬೊìಹೈಡ್ರೇಟ್ ಅಥವಾ ಕಡಿಮೆ ಕೊಬ್ಬು), ಕೊಬ್ಬಿನ ಸೇವನೆ ಇಳಿಕೆ ಮತ್ತು ದೈಹಿಕ ಚಟುವಟಿಕೆಯ ಹೆಚ್ಚಳವಾಗಿರಬೇಕು.
Subscribe to:
Post Comments (Atom)
No comments:
Post a Comment