Thursday, 7 December 2017
ಗ್ರಹದೋಷಗಳ ಸುಲಭ ಪರಿಹಾರ ಹೇಗೆ
ಜಾತಕದಲ್ಲಿ ಗ್ರಹದೋಷ ಇದೆ ಎಂದಾಕ್ಷಣ ಮನಸ್ಸು ಮುದುಡುತ್ತದೆ. ಇನ್ನಿಲ್ಲದ ಭೀತಿ ಆವರಿಸುತ್ತದೆ. ಗ್ರಹದೋಷದ ಕಾರಣ ಅಂಜಿಕೊಂಡು ಕೂಡುವ ಬದಲು ಸುಲಭ ಪರಿಹಾರಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ನಿಶ್ಚಿಂತರಾಗಿ.
ಶನಿ ದೋಷ
ಸೂರ್ಯನಿಂದ 1,427 ಮಿಲಿಯನ್ ಕಿ.ಮೀ. ದೂರದಲ್ಲಿ 16 ಚಂದ್ರಗಳನ್ನು ಹೊಂದಿರುವ ಶನಿ ಗ್ರಹದ ವಕ್ರ ಪ್ರಭಾವ ಮಾನವನ ಶರೀರದ ಮೇಲೆಬಿದ್ದಾಗ ಮನುಷ್ಯನ ಜೀವನವನ್ನೇ ಬದಲಿಸುತ್ತದೆ. ಶನಿ ಸೌರಮಂಡಲದ ವಿಸ್ಮಯ ಗ್ರಹ. ದುಂದು ವೆಚ್ಚ, ಅವ್ಯವಹಾರ ಮತ್ತು ನಿರ್ಲಕ್ಷ ಆಡಳಿತ, ಸಾಲದ ಬಾಧೆಗಳಿಂದ ಸಂಕೋಲೆಗೊಂಡು ಜೀವನವಿಡೀ ಕಲ್ಲುಮುಳ್ಳಿನ ಹಾದಿ. ಮನೋ ಕಲ್ಪನಾ ಶಕ್ತಿಗಳನ್ನು ಮೈಗೂಡಿಸಿಕೊಂಡು ಅನಾರೋಗ್ಯಕ್ಕೆ ತುತ್ತಾಗಿ ಮಾನಸಿಕ ಚಂಚಲತೆ, ಪ್ರೇಮಿಗಳು ಮತ್ತು ದಂಪತಿಗಳಲ್ಲಿ ವಿರಸ, ಯಾವುದೇ ಉದ್ದಿಮೆ ಆರಂಭಿಸಿದರೂ ತುಂಬಲಾರದ ನಷ್ಟ. ಶತೃ ಭಾದೆ ಬಂಧು ವರ್ಗ ಮತ್ತು ಮಿತ್ರರಿಂದ ದೂರ. ಅಶಾಂತಿ ಜಗಳ, ಕಂಕಣ ಭಾಗ್ಯ ಮತ್ತು ಸಂತಾನಯೋಗದಲ್ಲಿ ವಿಳಂಬ ಮುಂತಾದ ಲಕ್ಷಣಗಳು ಶನಿಗ್ರಹದಿಂದ ಉಂಟಾಗುತ್ತವೆ.
ದೋಷ ಪರಿಹಾರ
ಪ್ರಥಮವಾಗಿ ನಿವಾಸದ ಒಳಗೂ ಹೊರಗೂ ಸ್ವಚ್ಛತೆಯನ್ನು ಕಾಪಾಡಿರಿ. ಚಿಂದಿ ವಸ್ತುಗಳನ್ನು ಮುಕ್ತಗೊಳಿಸಿ, 41 ದಿವಸಗಳ ಕಾಲ ಅಷ್ಠಾಂಗ ಶನಿ ದೋಷ ನಿವಾರಣ ಪೂಜೆಯನ್ನು ಆಚರಿಸಿ. ಈ ಸಮಯದಲ್ಲಿ ಮಾಂಸಾಹಾರ, ಮಧುಪಾನದಿಂದ ದೂರವಿರಿ. ಪ್ರತಿ ನಿತ್ಯ ಸೂರ್ಯೋದಯದ ಸಮಯದಲ್ಲಿ ಮುಂಬಾಗಿಲು ಮತ್ತು ಹೊಸ್ತಿಲನ್ನು ಕೆಂಪು ಗುಲಾಬಿ ಹೂಗಳಿಂದ ಪೂಜಿಸಿ. ಶನಿವಾರದಂದು ನವಗ್ರಹಗಳಿಗೆ ಅಭಿಷೇಕ ಮಾಡಿಸಿ. ಪ್ರತಿ ಶನಿವಾರ ವಸ್ತ್ರ ದಾನ ಮಾಡಿ. ಯಾವುದಾದರೊಂದು ಶನಿ ದೇವಾಲಯಕ್ಕೆ ಭೇಟಿ ಕೊಟ್ಟು ದೇಗುಲದಲ್ಲಿ ನವಗ್ರಹ ಹೋಮ ಅಥವಾ ಶನಿದೇವರಿಗೆ ಅರ್ಚನೆ ಮಾಡಿಸಿ.
ಕುಜ ದೋಷ
ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಮಾನವನ ಮೇಲೆ ಕುಜ(ಅಂಗಾರಕ)ನ ಪ್ರಭಾವ ಹೆಚ್ಚಿರುತ್ತದೆ. ಕುಜ ದೋಷದ ಕಾರಣ ಜೀವನದ ಗತಿಯೇ ಬದಲಾಗುತ್ತದೆ. ಮುಖ್ಯವಾಗಿ ಕಂಕಣ ಭಾಗ್ಯ ಮತ್ತು ಸಂತಾನ ಯೋಗದಲ್ಲಿ ವಿಳಂಬ, ಸಾಲದ ಭಾದೆ, ಹಣಕಾಸು ವ್ಯವಹಾರದಲ್ಲಿ ನಷ್ಟ, ಮನೆಯಲ್ಲಿ ಅಶಾಂತಿ, ಮತಿ ಭ್ರಮಣೆ, ಆರೋಗ್ಯದಲ್ಲಿ ಏರುಪೇರು, ಕಳತ್ರ ದೋಷ (ಗಂಡ ಹೆಂಡಿರ ನಡುವೆ ಮನಸ್ತಾಪ), ಆಕಸ್ಮಿಕ ಅಪಘಾತ ಮತ್ತು ಅವಗಡಗಳು, ನಿರುದ್ಯೋಗ ಮತ್ತಿತರ ದೋಷಗಳು ಕಾಣಿಸುತ್ತವೆ.
ದೋಷ ಪರಿಹಾರ
ಕುಜ ದೋಷವು ಮುಖ್ಯವಾಗಿ ವಾಸ್ತು ಚಕ್ರದ ಮೇಲೆ ಅಧಿಕ ಪ್ರಭಾವ ಬೀರುತ್ತದೆ. ಹಾಗಾಗಿ ವಾಸ್ತು ತಜ್ಞರನ್ನು ಸಂಪರ್ಕಿಸಿ ದೋಷ ಪರಿಹಾರಕ್ಕೆ ಸೂಕ್ತ ಕ್ರಮಗಳನ್ನು ಕೈಗೊಳ್ಳುವುದು ಒಳಿತು. ಏಳು ದಿನಗಳ ಪರ್ಯಂತ ಸಪ್ತಾಗ್ನಿ ಪೂಜೆ (ಅಖಂಡ ಜ್ಯೋತಿ) ಯನ್ನು ಮಾಡುವುದು ಉತ್ತಮ. ಕೆಂಪು ಗುಲಾಬಿ ಹೂಗಳಿಂದ ಶಕ್ತಿ ದೇವತೆಯರನ್ನು ಪೂಜಿಸುವುದು, ಮಂಗಳವಾರದಂದು ನದಿದಡದಲ್ಲಿ ಇರುವ ಯಾವುದಾದರೊಂದು ದೇವರಿಗೆ ಅಭಿಷೇಕ ಸಲ್ಲಿಸಿ ಅಂದು ಉಪವಾಸ ವ್ರತ ಆಚರಿಸುವುದು. ಕೆಂಪು ವಸ್ತ್ರಗಳನ್ನು ದಾನಮಾಡಬೇಕು. ಹೀಗೆ ಮಾಡುವುದರಿಂದ ಕುಜನು ಸಂಪ್ರೀತನಾಗಿ ಜ್ಞಾನ, ಬಲ, ಐಶ್ವರ್ಯ, ತೇಜಸ್ಸು ಮತ್ತು ಶಕ್ತಿಯ ವೃದ್ಧಿಗೆ ನೆರವಾಗುತ್ತವೆ.
ಕಾಳಸರ್ಪ ದೋಷ
ಜನನಕಾಲದಲ್ಲಿ ನಕ್ಷತ್ರ ಮತ್ತು ಲಗ್ನ ಕುಂಡಲಿಗಳಲ್ಲಿ ಸ್ವಲ್ಪ ವ್ಯತ್ಯಾಸವಿದ್ದರೂ, ಒಂದೊಮ್ಮೆ ನಿಶ್ಚಿತಾರ್ಥ ಮತ್ತು ವಿವಾಹ ಸಮಯದಲ್ಲಿ ಶುಭಲಗ್ನ ಇಲ್ಲದಿದ್ದರೂ ಕಾಳ ಸರ್ಪ ದೋಷ ಕಾಣಿಸಿಕೊಳ್ಳುವ ಸಾಧ್ಯತೆ ಹೆಚ್ಚು. ಕಾಳಸರ್ಪ ದೋಷವು ಹೆಣ್ಣು ಮಕ್ಕಳನ್ನು ಹೆಚ್ಚಾಗಿ ಕಾಡುತ್ತದೆ. ಕಾಳಸರ್ಪ ದೋಷದ ಕಾರಣ ವಿವಾಹ ಹಾಗೂ ಸಂತಾನ ಯೋಗದಲ್ಲಿ ವಿಳಂಬವಾಗುತ್ತದೆ. ಚಿತ್ತ ಚಾಂಚಲ್ಯ ಹೆಚ್ಚಿರುತ್ತದೆ.
ದೋಷ ಪರಿಹಾರ
ನಾಗಪ್ರತಿಷ್ಠೆ ಮಾಡಿಸುವುದು, ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಸರ್ಪದೋಷ ನಿವಾರಣಾ ಪೂಜೆ ಮಾಡಿಸುವುದು. ಮನೆಯಲ್ಲಿ 21 ದಿನಗಳ ಕಾಲ ಅಖಂಡವಾಗಿ ಜ್ಯೋತಿ ಬೆಳಗಿಸುವುದು. ಪ್ರತಿನಿತ್ಯ ಗಾಯತ್ರಿ ಮತ್ತು ಲಲಿತಾಂಬ ಅಷ್ಠೋತ್ತರಗಳನ್ನು ಫಠಿಸುವುದು. ಒಂದು ದೊಡ್ಡ ಪಾತ್ರೆಯಲ್ಲಿ ಶುದ್ಧ ನೀರನ್ನು ಕಾಯಿಸಿ ಸೂರ್ಯ ಮತ್ತು ಚಂದ್ರನ ಕಿರಣಗಳು ಕಾಯಿಸಿದ ನೀರಿನ ಮೇಲೆ ಬಿಳುವಂತೆ ವರಾಂಡದಲ್ಲಿ ಇಟ್ಟು ತಣ್ಣಗಾದ ನಂತರ ಆ ನೀರನ್ನು ಶುದ್ಧ ಪಾತ್ರೆಯಲ್ಲಿ ಶೇಖರಿಸಿಟ್ಟುಕೊಳ್ಳುವುದು. ಹೀಗೆ ಸಿದ್ಧಪಡಿಸಿಟ್ಟುಕೊಂಡ ನೀರನ್ನು ಪ್ರತಿನಿತ್ಯ 3 ಹೊತ್ತು ಕುಡಿಯಬೇಕು. ಬಾಳೆ ಹಣ್ಣನ್ನು ಸೇವಿಸಬೇಕು. ಈ ವ್ರತಾಚರಣೆಯನ್ನು ಹನ್ನೊಂದು ದಿನಗಳ ಕಾಲ ಮಾಡಬೇಕು. ಹನ್ನೊಂದನೆಯ ದಿವಸ ಇದೇ ನೀರಿಗೆ ಬೇವಿನ ಸೊಪ್ಪು ಬೆರಸಿ ಮಕ್ಕಳಿಗೆ ಸ್ನಾನ ಮಾಡಿಸಬೇಕು. ಹೀಗೆ ಮಾಡುವುದರಿಂದ ಬಾಲಗ್ರಹ ದೋಷ ನಿವಾರಣೆಯಾಗುತ್ತದೆ.
-ನಾರಾಯಣ ಶೆಟ್ಟಿ ಪದ್ಮಶಾಲಿ
sangraha
Subscribe to:
Post Comments (Atom)
No comments:
Post a Comment