Thursday 31 January 2019

ಜಾತಕದಲ್ಲಿ ಅಭಿಚಾರ ಯೋಗ

ಜನ್ಮ ಜಾತಕದಲ್ಲಿ ಆಭಿಚಾರ ಯೋಗದ ಬಗ್ಗೆ ತಿಳಿದುಕೊಳ್ಳುವ ಮುನ್ನ ಒಂದೆರಡು ಸಂಗತಿಗಳತ್ತ ಗಮನ ಹರಿಸೋಣ. ಆಭಿಚಾರದಲ್ಲಿ ಎರಡು ಬಗೆಗಳಿವೆ. ಅದೆಂದರೆ ಕ್ಷುದ್ರಾಭಿಚಾರ ಮತ್ತು ಮಹಾಭಿಚಾರ. ಪ್ರಶ್ನೆ ಕೇಳುವ ಮೂಲಕ ವ್ಯಕ್ತಿಯ ಮೇಲೆ ಆಭಿಚಾರ ಪ್ರಯೋಗ ಆಗಿದೆಯೇ ಇಲ್ಲವೇ ಎಂಬುದನ್ನು ತಿಳಿದುಕೊಳ್ಳಬಹುದು. ಜಾತಕದಲ್ಲಿ ಅಭಿಚಾರ ಜನ್ಮ ಕುಂಡಲಿಯ ಆರನೆ ಮನೆಯಲ್ಲಿರುವ ಗ್ರಹ ಮತ್ತು ಅದರ ವರ್ಣವನ್ನು ಗುರುತಿಸುವ ಮೂಲಕ ಆಭಿಚಾರ ದೋಷವನ್ನು ಪತ್ತೆ ಮಾಡಬಹುದು. ಯಾರ ಜಾತಕದಲ್ಲಿ ಬುಧನು ಬಾಧಕ ಸ್ಥಾನದಲ್ಲಿ ಇರುತ್ತಾನೋ ಅವನು ಅಭಿಚಾರ ದೋಷದಿಂದ ಬಳಲುತ್ತಾನೆ. ಒಂದು ವೇಳೆ ಜಾತಕನ ಕುಂಡಲಿಯಲ್ಲಿ ಅಭಿಚಾರ ದೋಷವಿದ್ದರೂ ಇತರೆ ಸ್ಥಾನಗಳು ಶುಭಸ್ಥಾನದಲ್ಲಿದ್ದರೆ ಅಭಿಚಾರ ದೋಷ ಕಾಣಬರುವುದಿಲ್ಲ. ಜಾತಕದಲ್ಲಿ ಕೆಳಕಂಡ ಗ್ರಹಗಳು ಸ್ಥಾನದ ಆಧಾರದ ಮೇಲೆ ಅಭಿಚಾರ ಯೋಗವನ್ನು ಲೆಕ್ಕಾಚಾರ ಹಾಕಬಹುದು. ಅದರಲ್ಲೂ ಷಟ್ ಸ್ಥಾನವು ಮುಖ್ಯವಾಗಿದೆ. ಜಾತಕದಲ್ಲಿ ಅಭಿಚಾರ ದೋಷವನ್ನು ಲೆಕ್ಕಾಚಾರ ಹಾಕುವಾಗ, ವಿಶೇಷವಾಗಿ ಕುಜ ಸ್ಥಾನವನ್ನು ಗಮನಿಸಬೇಕು. ಆರು ಮತ್ತು ಎಂಟನೆಯ ಸ್ಥಾನದಲ್ಲಿ ಯಾವ ಗ್ರಹಗಳಿವೆ ಅದರ ಅಧಿಪತಿಗಳೇನು ಎಂಬುದನ್ನು ಗಮನಿಸಬೇಕು. ಇದರ ಆಧಾರದ ಮೇಲೆ ಜಾತಕನಿಗೆ ಮಹಾ ಅಭಿಚಾರ ಅಥವಾ ಕ್ಷುದ್ರ ಅಭಿಚಾರ ದೋಷದಿಂದ ಪೀಡಿಸಲ್ಪಟ್ಟಿದ್ದಾನೆಯೇ ಎಂಬುದನ್ನು ಲೆಕ್ಕ ಹಾಕಬಹುದು. ಆರನೆ ಮನೆಯಲ್ಲಿರುವ ಗ್ರಹ ಅದರ ಬಣ್ಣ, ಸ್ವರೂಪದ ಆಧಾರದ ಮೇಲೆ ಯಾವ ವರ್ಣದವರಿಂದ ಅಭಿಚಾರ ಪ್ರಯೋಗ ಆಗಿದೆ, ಆತನ ಸ್ಥಳವೆಲ್ಲಿಯದು ಎಂಬುದನ್ನೂ ತಿಳಿದುಕೊಳ್ಳಬಹುದು. ಒಂದು ವೇಳೆ ಷಷ್ಠಮ ಸ್ಥಾನದಲ್ಲಿ ಗುರುವಿದ್ದರೆ ಮಾಟಮಂತ್ರದಂತಹ ಅಭಿಚಾರ ವಿದ್ಯೆಗಳಲ್ಲಿ ಪರಿಣತನೂ, ಶತ್ರುಗಳನ್ನು ನಾಶಮಾಡುವವನೂ,ಅತ್ಯಂತ ಆಲಸಿಯೂ ಆಗುವ ಲಕ್ಷಣಗಳನ್ನು ಹೊಂದಿರುತ್ತಾನೆ. ಜಾತಕದಲ್ಲಿ ಅಭಿಚಾರ ದೋಷವಿದೆ ಅಥವಾ ನೀವು ಅಭಿಚಾರ ಪ್ರಯೋಗಕ್ಕೆ ಒಳಗಾಗಿದ್ದೀರೆಂದಾಕ್ಷಣ ಹೆದರುವ ಅಗತ್ಯವಿಲ್ಲ. 'ಪ್ರತಿ ಪಕ್ಷ ನಾಶಿನಿ ಪ್ರತಿ ಮಂತ್ರ ಭಕ್ಷಿಣಿ' ಆದ ಪ್ರತ್ಯಂಗಿರಿ ದೇವಿಯ ಆರಾಧನೆಯಿಂದ ದೋಷ ಪರಿಹಾರವಾಗುತ್ತದೆ. ಪ್ರತ್ಯಂಗಿರಾ ದೇವಿಯನ್ನು ಅಥರ್ವಣ ಭದ್ರಕಾಳಿ ಅಥವಾ ನಿಕುಂಭಿಲಾ ಎಂತಲೂ ಕರೆಯುತ್ತಾರೆ. ದೋಷ ಪರಿಹಾರಕ್ಕಾಗಿ ಪ್ರತ್ಯಂಗಿರಾ ದೇವತೆಯ ಉಪಾಸನೆಯನ್ನು ಅಮಾವಾಸ್ಯೆ, ಹುಣ್ಣಿಮೆಯ ದಿನಗಳಂದು ಮಾಡಬೇಕು. ಅದರಲ್ಲೂ ವಿಶೇಷವಾಗಿ ವಿಷಚೂರ್ಣ ಪ್ರಯೋಗ, ಭಾನಾಮತಿ ಪ್ರಯೋಗ ಮತ್ತಿತರ ಋಣಬಾಧೆಗಳಿಂದ ನರಳುತ್ತಿರುವವರೂ ದೋಷ ಪರಿಹಾರಾರ್ಥವಾಗಿ ಪ್ರತ್ಯಂಗಿರಾ ದೇವಿಯ ಪೂಜೆಯನ್ನು ಮಾಡಬಹುದು. ಹೋಮಕ್ಕೆ ಕೆಂಪು ಮೆಣಸಿನಕಾಯಿ, ದಾಳಿಂಬೆ ಬೀಜ ಮತ್ತು ಕೆಲ ಗಿಡ ಮೂಲಿಕೆಗಳನ್ನು ಬಳಸುವ ಪದ್ಧತಿಯಿದೆ. ಸಮಸ್ಯೆ ಪರಿಹಾರಕ್ಕೊಂದು ಸೂತ್ರ * ಪ್ರತಿನಿತ್ಯ ಪ್ರತ್ಯಂಗಿರಾ ಮಂತ್ರ ಜಪ ಮಾಡಿದರೆ ಶತ್ರುಗಳು ಕ್ರಮವಾಗಿ ಕಡಿಮೆಯಾಗುತ್ತಾರೆ. * ಕಳಶ ಸ್ಥಾಪನೆ ಮಾಡಿ ಅಕ್ಕಿ ರಾಶಿಯಲ್ಲಿ ಪ್ರತ್ಯಂಗಿರ ಯಂತ್ರ ಇಟ್ಟು ಪ್ರಾಣ ಪ್ರತಿಷ್ಠೆ ಮಾಡಿ ಆವರಣ ಪೂಜೆ, ಸಹಸ್ರ ನಾಮಾವಳಿಯಿಂದ ಅರ್ಚನೆ ಮಾಡಿ 1.25 ಲಕ್ಷ ನಾರಾಯಣೆ ಪ್ರತ್ಯಂಗಿರ ಜಪ ಮಾಡಿ. ಬಿಳಿ ಎಕ್ಕದ ಸವಿತ್ತು, ಮೆಣಸು, ತುಪ್ಪ, ಎಳ್ಳು, ಹೋಮ ಮಾಡಿದರೆ ದುಷ್ಟಶಕ್ತಿ ನಿವಾರಣೆಯಾಗುತ್ತದೆ.

Thursday 10 January 2019

ಬಲಶಾಲಿ ಮಖೆ ನಕ್ಷತ್ರ

ಬಲಶಾಲಿ ಮಖೆ ನಕ್ಷತ್ರ ಮಖೆ ನಕ್ಷತ್ರ ಪಲ್ಲಕಿ ಆಕಾರದಾಗಿದ್ದು, 5 ನಕ್ಷತ್ರಗಳಿಂದ ಸೇರಿದ ನಕ್ಷತ್ರ ಆಗಿದೆ. ನಕ್ಷತ್ರದ ದೇವತೆ ಪಿತ ಸಮೂಹ. ಈ ನಕ್ಷತ್ರದವರು ತಮ್ಮ ಹೆಸರಿನ ಮೊದಲ ಅಕ್ಷರವನ್ನು ಮ, ಮಿ, ಮು, ಮೆ ಗಳಿಂದ ಆರಂಭಿಸಿದರೆ ಒಳ್ಳೆಯದು. ಜೈನರ 5ನೇ ತೀರ್ಥಂಕರರು ಸುಮಿತಿನಾಥ ಮತ್ತು ಭಾರತದ ಪಿತಾಮಹಾ ಮಹಾತ್ಮ ಗಾಂಧೀಜಿಯವರ ಜನ್ಮ ನಕ್ಷತ್ರ ಇದೇ ಆಗಿರುತ್ತದೆ. ಈ ನಕ್ಷತ್ರದವರು ಪಂಚಮುಖಿ ರುದ್ರಾಕ್ಷಿ ಧರಿಸಿದರೆ ಒಳ್ಳೆಯದು. ಈ ನಕ್ಷತ್ರದವರು ಬಲಶಾಲಿಗಳು, ದಪ್ಪ ತುಟಿ , ಅಗಲವಾದ ಹಣೆ ಇರತಕ್ಕವರೂ, ಕೋಪ ಸ್ವಭಾವದವರಾದರೂ ತಂದೆ, ತಾಯಿಯವರ ಮೇಲೆ ಬಹಳ ಭಕ್ತಿ ಇರತಕ್ಕವರು ಆಗುವರು. ಸ್ತ್ರೀ ಆಗಿದ್ದರೆ ತಂದೆ, ತಾಯಿ ಗುರು ಹಿರಿಯರ ಬಗ್ಗೆ ವಿಶೇಷ ಭಕ್ತಿ ಉಳ್ಳವರೂ ಭಾಗ್ಯವಂತರು. ಎಲ್ಲ ವರ್ಗದವರ ಮೇಲೆ ಹೊಂದಿಕೊಂಡು ಹೋಗತಕ್ಕವರು. ಹಾಗಾಗಿ ಇದು ಮಹಾನಕ್ಷತ್ರ ಆಗಿ ಪೂರ್ಣ ಜನ್ಮಕುಂಡಲಿ ನೋಡುವ ಸಂದರ್ಭ ಬರಲಾರದು. ವಿವಾಹ ಆಗಬಹುದು. ಆದರೆ ಸಗೋತ್ರ, ಒಂದೇ ನಾಡಿ ಆಗಿದ್ದು ಹತ್ತಿರದ ಸಂಬಂಧಿಕರಾದರೆ ರಕ್ತದ ಗುಂಪು ಪರಿಶೀಲಿಸಿ ವಿವಾಹ ಆಗತಕ್ಕದ್ದು. ಈ ನಕ್ಷತ್ರದಲ್ಲಿ ಪ್ರಥಮ ಋತುಮತಿ ಆದರೆ ಸಂಗೀತ ಪ್ರಿಯಳೂ, ತಂದೆ, ತಾಯಿಯವರ ಮೇಲೆ ತುಂಬಾ ಪ್ರೀತಿ ಇರತಕ್ಕವಳೂ, ಗೌರವಾನ್ವಿತಳೂ, ಧನಧಾನ್ಯ ಸಂಪತ್ತು ಉಳ್ಳವಳೂ ಆಗುವಳು. ಈ ನಕ್ಷತ್ರದಲ್ಲಿ ಹುಟ್ಟಿದ ಮಕ್ಕಳಿಗೆ ಪ್ರಥಮ ಸರಸ್ವತಿಮಾತೆ ಎಂದರೆ ಅದನ್ನೇ ಮಾತದೇವೋಭವ ಎನ್ನುವರು. ಶಾಲೆಗೆ ಹೋಗುವಾಗ ತಾಯಿಯ ಪಾದ ಸ್ಪರ್ಶ ಮಾಡಿ ಆಶೀರ್ವಾದ ಪಡೆದುಕೊಂಡು ಹೋಗಬೇಕು. ಹುಟ್ಟಿದ ಮಗುವಿಗೆ ಎರಡು ವರ್ಷಗಳವರೆಗೆ ಬಾಲಾಚೇಷ್ಠೆ ಇದೆ. ಗಣಪತಿ ದೇವರಿಗೆ ಕುಂಕುಮಾರ್ಚನೆ ಮಾಡಿ ಹಣೆಗೆ ಹಚ್ಚಬೇಕು. ನಿಮ್ಮ ಹೆಸರಿನ ಮೊದಲ ಅಕ್ಷರ ಮ, ಮಿ, ಮು, ಮೆ ಗಳಿಂದ ಆರಂಭವಾದ ವೈಢೂರ್ಯ ಹರಳಿನ ಉಂಗುರವನ್ನು ತೋರು ಬೆರಳಲ್ಲಿ ಧರಿಸತಕ್ಕದ್ದು. ಸಮಾಜದಲ್ಲಿ ಗಣ್ಯವ್ಯಕ್ತಿ ಆಗಬೇಕಾದರೆ ಸಾಧಕತಾರೆಗಳಾದ ಸ್ವಾತಿ(ರು ರೆ ರೊ) ಶತಃಭಿಷ(ಸ ಸಿ ಸು) ಆರಿದ್ರ(ಕು ಘ) ಅಕ್ಷರಗಳಿಂದ ಆರಂಭವಾದ ಹೆಸರು ಇಡತಕ್ಕದ್ದು. ಈ ನಕ್ಷತ್ರದ ವ್ಯಕ್ತಿ ಎಷ್ಟೇ ಪ್ರಭಾವಿತನಾದರೂ, ತಂದೆ ತಾಯಿಯವರನ್ನು ಮರೆಯಬಾರದು. ಊರಿಗೆ ಅರಸನಾದರೂ ತಾಯಿಗೆ ಮಗ ಎಂಬ ಗಾದೆ ಮಾತು ಅನ್ವಯಿಸುತ್ತದೆ. ಯಾವ ತಿಂಗಳ ಹುಣ್ಣಿಮೆ ದಿನ ಮಖೆ ನಕ್ಷತ್ರ ಇರುತ್ತದೋ ಅದನ್ನೇ ಮಾಘಮಾಸ ಎನ್ನುವರು. ಸಾಮಾನ್ಯವಾಗಿ ಜನವರಿ-ಫೆಬ್ರವರಿ ತಿಂಗಳಲ್ಲಿ ಬರುವುದು. ಹುಣ್ಣಿಮೆ ದಿನ ಪವಿತ್ರ ನದಿಯಲ್ಲಿ ಸ್ನಾನ ಮಾಡಿದರೆ ವಿಶೇಷ ಫಲ ಸಿಗಲಿದೆ. ಅದೇ ರೀತಿ ಅಮವಾಸ್ಯೆಯ ದಿನ ಹಿರಿಯರ ಬಗ್ಗೆ ಸ್ಮರಿಸತಕ್ಕದ್ದು. ವಿದ್ಯೆ ಕ್ಷೇತ್ರದಲ್ಲಿ ವೈದಕೀಯ, ಮಾಹಿತಿ ಕ್ಷೇತ್ರ, ತರ್ಕಶಾಸ್ತ್ರ, ಕಲೆ, ಸಾಹಿತ್ಯ, ರಾಜಕೀಯ ಶಾಸ್ತ್ರ ಹಿಡಿಸುವುದು. ವ್ಯಾಪಾರ ವ್ಯವಹಾರವಾದರೆ ಔಷಧ, ವಿದ್ಯುತ್, ಸಿಮೆಂಟ್, ಅಗ್ನಿ ಸಂಬಂಧ ವಸ್ತುಗಳು ಹಿಡಿಸುವುವು. ಜ್ಯೇಷ್ಠಮಾಸ, ದಶಮಿ ತಿಥಿ, ಮೂಲ ನಕ್ಷತ್ರ ಇರುವ ದಿನಗಳು, ಘಾತ ಆಗಿವೆ. ಯಾವ ಕಾರ್ಯಗಳನ್ನು ಮಾಡಬಾರದು. ಮಾಘ ಮಾಸದಲ್ಲಿ ಕೃಷ್ಣ ಪಂಚಮಿ ತಿಥಿ ಮತ್ತು ಶುಕ್ಲಷಷ್ಠಿ ದಿನಗಳು ಶೂನ್ಯ ತಿಥಿಗಳಾಗಿವೆ. ದೇವತಾದಿಕಾರ್ಯಗಳು ನಿಷಿದ್ಧ. ವಶೀಕರಣ ವಿದ್ಯೆ, ವ್ಯವಹಾರ ಆರಂಭಿಸಲು, ಸೇವಕರನ್ನು ಆರಿಸಲು ಅಗತ್ಯ ಬಿದ್ದರೆ ವಿವಾಹ ಕಾರ್ಯಗಳಿಗೆ ಉತ್ತಮ ದಿನ ಆಗಿದೆ. ಹುಬ್ಬ(ಬುಧವಾರ) ಪೂರ್ವಾಷಾಢ(ಗುರುವಾರ) ಹೊಸ ಬಟ್ಟೆ ಧರಿಸಲು ಉತ್ತಮ ದಿನಗಳು. ಹಸ್ತ(ಭಾನುವಾರ) ರೋಹಿಣಿ, ಶ್ರವಣ(ಸೋಮವಾರ) ಭೂಮಿ ಖರೀದಿ, ಗೃಹ ಪ್ರವೇಶ, ಗೃಹಆರಂಭ, ಬಾವಿ ತೋಡಿಸಲು ಮತ್ತು ವಿವಾಹಾದಿ ಮಂಗಳ ಕಾರ್ಯಗಳಿಗೆ ಶುಭ. ಸ್ವಾತಿ(ಶುಕ್ರವಾರ) ಶತಃಭಿಷ(ಬುಧವಾರ) ಎಲ್ಲ ಕಾರ್ಯಗಳಿಗೆ ಉತ್ತಮ ದಿನಗಳು. ಪುಷ್ಯ(ಗುರುವಾರ) ಅನುರಾಧಾ(ಬುಧವಾರ) ರೇವತಿ(ಶುಕ್ರವಾರ) ರಾಜಕೀಯ ಸೇರಲು ಉತ್ತಮ ದಿನಗಳು. ಪ್ರಾರಂಭದ ದೆಸೆ ಕೇತು 7 ವರ್ಷ. 7, 10, 12, 24, 26, 30, 60, 75 ಕಂಟಕ ವರ್ಷಗಳು. ಪೂರ್ಣ ಆಯುಷ್ಯ ಪ್ರಮಾಣ 82 ವರ್ಷ. ಆದರೆ ಗಜಕೇಸರಿಯೋಗ ಇರಬೇಕು. ಮೊದಲನೇ ಪಾದ ಮೇಷ ನವಾಂಶ. ಕ್ರೀಡಾ ಕ್ಷೇತ್ರದಲ್ಲಿ ಹೆಸರು ಪಡೆಯುವರು. 2ನೇ ಪಾದ ವೃಷಭ ನವಾಂಶ. ಬ್ಯಾಂಕ್ ಸಂಬಂಧ ಉದ್ಯೋಗ ಯೋಗ ಫಲವಿದೆ. 3ನೇ ಪಾದ ಮಿಥುನ ನವಾಂಶ. ಗಣಿತ ವಿದ್ಯೆಯಲ್ಲಿ ಪರಿಣಿತರಾಗುವರು. 4ನೇ ಪಾದ ಕರ್ಕ ನವಾಂಶ. ನೀರು, ಹಾಲು, ಲಘು ಪಾನೀಯ ವ್ಯವಹಾರದಿಂದ ಲಾಭ ಬರಲಿದೆ. ಉದ್ಯೋಗಸ್ಥರಿಗೆ ವಿದೇಶ ಪ್ರಯಾಣ ಯೋಗವಿದೆ. ಈ ನಕ್ಷತ್ರದ 30 ರಿಂದ 34 ಗಳಿಗೆ ವಿಷ ಆಹಾರ ಸೇವನೆ ಮಾಡಬಾರದು. ಚಂದ್ರನು ಮೀನರಾಶಿಯಲ್ಲಿದ್ದಾಗ ಕೃತಿಕೆ, ಉತ್ತರೆ ದಿನಗಳಲ್ಲಿ ಪ್ರಯಾಣ ನಿಷಿದ್ಧ. ವಿಶಾಲ, ಪೂರ್ವಬಾದ್ರ, ಪುನರ್ವಸು ದಿನಗಳಲ್ಲಿ ಜಾಗ್ರತೆ ಇರಬೇಕು. ಸಂಖ್ಯಾಶಾಸ್ತ್ರದಂತೆ 7, 16, 25 ತಾರೀಖು ಶುಕ್ರವಾರ ಬಂದರೆ ಶುಭದಾಯಕವಾಗಲಿದೆ. ಮಖೆ ನಕ್ಷತ್ರ ಭಾನುವಾರ, ಸೋಮವಾರ, ಶುಕ್ರವಾರ ದಿನಗಳಲ್ಲಿ ಯಾವ ಕಾರ್ಯ ಮಾಡಬಾರದು. ಪ್ರಯಾಣ ನಿಷಿದ್ಧ. ಮತ್ಯುಯೋಗ ಆಗಲಿದೆ.

ಕರಣಿಕ ಯೋಗಾದಿಗಳು

ಕರಣಿಕ ಯೋಗಾದಿಗಳು *ದೆಸೆ ಗ್ರಹ ಚಂದ್ರ: ಜೀವನದ ಅಚಲ ನಿರ್ಧಾರಗಳು ಫಲಕಾರಿ. ಜೀವಿತ ವೈಭವೀಕರಣ ದೇವರ ಇಚ್ಛೆಯಂತೆ, ಆಕಸ್ಮಿಕ ಅದೃಷ್ಟಗಳು, ಐಶ್ವರ್ಯ ಮತ್ತು ರಾಜ ಯೋಗಗಳು ಜೀವಿತ ಮಧ್ಯ ಭಾಗದಲ್ಲಿ ಮಾತ್ರ. ಸಂಶೋಧನೆ, ಅನ್ವೇಷಣೆ ಪ್ರಗತಿ, ಛಲದಿಂದ ಮಾತ್ರ ಸಾಧನೆಗಳು ಸಾಧ್ಯ. ಪಂಚಭೂತಗಳು ತಮ್ಮನ್ನು ಸದಾ ಸುತ್ತಿವೆ ಎಚ್ಚರಿಕೆಯಿಂದಿರಿ. *ಮಂಗಳ: ಪೂರ್ವಜರ ಆಶೀರ್ವಾದದಿಂದ ಜೀವನವು ಸದಾ ಜ್ಞಾನ, ಬಲ, ಐಶ್ವರ್ಯ, ವೀರ್ಯ, ಶಕ್ತಿ ಮತ್ತು ತೇಜಸ್ಸುಗಳಿಂದ ಕೂಡಿರುತ್ತವೆ. ದೇಹ ಬೆಳೆದಂತೆಲ್ಲ ಅಧಿಕ ಜ್ಞಾಪಕಶಕ್ತಿ, ಧೀರತ್ವ ರಾಜಯೋಗಗಳು ಲಭಿಸಿ, ವಿಜ್ಞಾನ ಮತ್ತು ತಂತ್ರಜ್ಞಾನದಲ್ಲಿ ಆಸಕ್ತಿ ಜೀವನ ಕಾಮಧೇನು ಕಲ್ಪವೃಕ್ಷ. * ಬುಧ: ಜೀವನವಿಡೀ ಪಂಚೇಂದ್ರಿಯಗಳು ತಮ್ಮ ಅಧೀನದಲ್ಲಿ ಇಡಲು ಸಾಧ್ಯವಿಲ್ಲ. ಸದಾ ಚಂಚಲ ಸ್ವಭಾವ, ಕಾಮ, ಕ್ರೋಧ, ಮಧ ಮತ್ತು ಮಾತ್ಸರ್ಯಗಳು ಸದಾ ಸುತ್ತುತ್ತಿರುತ್ತವೆ. ಬುದ್ಧಿ ಬ್ರಹ್ಮಾಂಡ ದೈವಚೇತನ, ಸಮಾಜೋದ್ಧಾರ ಮತ್ತು ವಿದ್ಯಾದಾನದಲ್ಲಿ ಸಂಪೂರ್ಣ ಆಸಕ್ತಿ ಸಂಗೀತ, ನೃತ್ಯ ಕಲಾಸೇವೆಯಲ್ಲಿ ಆಸಕ್ತಿ. *ಗುರು: ವಿಶ್ವವಿಖ್ಯಾತಿ ಮಹಾಜ್ಞಾನ ಮಹಾ ವಿಜ್ಞಾನ ತಮ್ಮಲ್ಲಿ ಮೂಡಲಿದೆ. ಜೀವನದಲ್ಲಿ ಉನ್ನತ ಪದವಿ, ಆಕಸ್ಮಿಕ ಅದೃಷ್ಟಗಳು, ವಿದೇಶ ವಾಸ್ತವ್ಯ, ಉತ್ತುಂಗ ಪುರಸ್ಕಾರ, ಅಮೃತ ಸಿದ್ಧ ಯೋಗಗಳು ಆಕಸ್ಮಿಕ, ಬೆಂಕಿಯಲ್ಲಿ ಸುಟ್ಟು ಹೊರಬರುವ ಪೀನಿಕ್ ಪಕ್ಷಿಯಂತೆ ಕಾಲಗಣನಾ ಚಕ್ರ. *ಶುಕ್ರ: ಜೀವನವಿಡೀ ಸುಖಮಯ ಸಂಸಾರ ಯಾವುದೇ ಆಘಾತ ಮತ್ತು ಅವಗಢಗಳಿಗೆ ಸಿಲುಕಲಾರರು, ಸಾಗರ ಸಂಶೋಧನೆ, ಜಲ ಕ್ರೀಡೆಗಳು, ಸಂಘಟನೆ, ವಾಯುಯಾನ, ಸಂಶೋಧನೆ, ವಿಜ್ಞಾನಗಳಲ್ಲಿ ಪ್ರಗತಿ, ತಮ್ಮಲ್ಲಿ ಒಂದು ದೈವಶಕ್ತಿ ಅಡಕವಾಗಿದೆ. ಅದೇ ಶಕ್ತಿ ತಮ್ಮ ಜೀವನದ ದಾರಿ ಉದ್ದಕ್ಕೂ ಭವಿಷ್ಯ ರೂಪಿಸಲಿದೆ. *ಶನಿ: ಜೀವನದಲ್ಲಿ ಬಾಧೆಗಳ ಬಿಗಿ ಮುಷ್ಠಿಯಲ್ಲಿ ಸಿಕ್ಕಿ ಬೇಯುವುದು. ಅಚಲ ನಿರ್ಧಾರಗಳು ಫಲಕಾರಿ ರಾಷ್ಟ್ರ ಹಾಗೂ ರಾಜ್ಯದ ಉನ್ನತ ಹುದ್ದೆ ಲಭ್ಯ. ಮಹಿಳೆಯರು ಮಹಾ ವಿಜ್ಞಾನಿ ಹಾಗೂ ಸಮಾಜ ಸುಧಾರಕರು ಆಗಬಹುದು. ಸಮಾಜದ ಬಿಗಿ ಮುಷ್ಠಿಯಿಂದ ತುಂಬಾ ಎಚ್ಚರ. *ರವಿ: ನಭೋಮಂಡಲದಲ್ಲಿ ಆತ್ಮವು ಎರಡು ನಭೋ ನಿಲ್ದಾಣಗಳನ್ನು ಹೊಂದಿರುವ ನಿರಂತರ ಪ್ರಯಾಣಿಕ ಎರಡು ನಿಲ್ದಾಣಗಳು ಮಧ್ಯೆ ಸಂಭವಿಸುವ ಭೌತಿಕ ಗುಣಗಳು ಮಾತ್ರ ತಮ್ಮ ಭವಿಷ್ಯವನ್ನು ರೂಪಿಸುತ್ತಿರುತ್ತವೆ. ನಿಮ್ಮ ಭವಿಷ್ಯ ನಿರ್ಧಾರಗಳ ಮೇಲೆ ನಿಂತಿದೆ. *ಪೃಥ್ವಿ: ಕಾಲಗಣನಾಚಕ್ರದಲ್ಲಿ ಯೋಗ-ಯೋಗಾದಿಗಳು ಬರುತ್ತಲೇ ಇರುತ್ತವೆ. ಇದರಿಂದ ದೈವಚೇತನ ಜ್ಞಾನಮಾರ್ಗ ವೃದ್ಧಿಸುತ್ತಲೇ ಇರುತ್ತದೆ. ತನ್ನ ದೇಹ ತನ್ನ ಹಿಡಿತದಲ್ಲಿ ಎಂದಿಗೂ ಇರುವುದಿಲ್ಲ. ಸುಖ-ಸಂತೋಷ ಸರಿ ಸಮನಾಗಿರುತ್ತವೆ. ಜೀವನ ಇಡೀ ಯಾವುದೇ ಗ್ರಹ ದೋಷಗಳು ಇರಲಾರವು. *ಪ್ಲೂಟೋ: ಜೀವಿತ ಚಿದಂಬರ ರಹಸ್ಯಗಳು ತಮಗೆ ತಿಳಿಯುತ್ತಲೇ ಇರುತ್ತವೆ. ತಮ್ಮ ದೇಹವೇ ಒಂದು ಭವಿಷ್ಯ ದೇಹ. ದೃಢ ಮನಸ್ಸುಳ್ಳ ಸ್ವಭಾವ ಸಮಾಜ ಉದ್ದಾರಕ್ಕೆ ತಮ್ಮ ದೇಹವು ಸದಾ ಮೀಸಲು ಪಂಚ ಭೂತಗಳು ತಮ್ಮನ್ನು ಸದಾ ಉತ್ತುಂಗಕ್ಕೆ ಏರಿಸುತ್ತಿರುತ್ತವೆ.

ಪಾಯ ತೆಗೆವ ಪದ್ಧತಿ ಶಾಸ್ತ್ರ ಸಮ್ಮತವಾಗಿರಲಿ

ಪಾಯ ತೆಗೆವ ಪದ್ಧತಿ ಶಾಸ್ತ್ರ ಸಮ್ಮತವಾಗಿರಲಿ ಯಾವುದೇ ರೀತಿಯ ಕಟ್ಟಡ ನಿರ್ಮಾಣ ಮಾಡುವ ಸಂದರ್ಭದಲ್ಲಿ ಪೂರ್ಣವಾದ ಫಲ ಸಿಗಬೇಕೆಂದರೆ ಮಾರ್ಕಿಂಗ್ ಮತ್ತು ಪಾಯ ತೆಗೆಯುವಾಗ ಕೆಲವೊಂದು ಮುಖ್ಯವಾದ ಜಾಗೃತ ಕ್ರಮಗಳನ್ನು ತೆಗೆದುಕೊಳ್ಳಬೇಕಾಗುತ್ತದೆ. ಕಟ್ಟಡ ನಿರ್ಮಿಸಲು ಈಗಾಗಲೇ ಸಿದ್ಧಪಡಿಸಿರುವ ನಕ್ಷೆಯ ಪ್ರಕಾರ ಮಾರ್ಕಿಂಗ್ ಮಾಡುವಾಗ ತೆಗೆದುಕೊಳ್ಳಬೇಕಾದ ವಾಸ್ತು ಶಾಸ್ತ್ರದ ಜಾಗೃತ ನಿಯಮಗಳು ಹೀಗಿವೆ. * ನಿವೇಶನದಲ್ಲಿ ನಕ್ಷೆಯ ಪ್ರಕಾರ ಅಳತೆ ಮಾಡಿ ಮಾರ್ಕಿಂಗ್ ಮಾಡಬೇಕಾರೆ, ನೆಲಕ್ಕೆ ಕೆಲವೊಂದು ಸ್ಟೀಲ್ ರಾಡ್‌ಗಳನ್ನು ಸಿಕ್ಕಿಸಬೇಕಾಗುತ್ತದೆ. ಹೀಗೆ ಸಿಕ್ಕಿಸುವ ಸ್ಟೀಲ್ ರಾಡನ್ನು ಮೊದಲು ನೈಋತ್ಯ ಭಾಗದಲ್ಲಿ ಪೂರ್ವಕ್ಕೆ ಮುಖ ಮಾಡಿ ಸಿಕ್ಕಿಸಬೇಕು. ನಂತರದ್ದು ಕ್ರಮವಾಗಿ ಆಗ್ನೇಯ, ವಾಯುವ್ಯ ಮತ್ತು ಈಶಾನ್ಯ ಮೂಲೆಯಲ್ಲಿ ಸಿಕ್ಕಿಸಬೇಕಾಗುತ್ತದೆ. * ಈ ಸ್ಟೀಲ್ ರಾಡ್‌ನಿಂದ ಸ್ಟೀಲ್ ರಾಡ್‌ಗೆ ದಾರವನ್ನು ಕಟ್ಟುವಾಗ (ಅಂದರೆ ಮಾರ್ಕ್ ಮಾಡಲು ದಾರ ಕಟ್ಟಬೇಕಾಗುತ್ತದೆ). ಮೊದಲ ದಾರ ನೈಋತ್ಯದಿಂದ ಆಗ್ನೇಯಕ್ಕೂ, ಎರಡನೆಯದಾಗಿ ನೈಋತ್ಯದಿಂದ ವಾಯುವ್ಯಕ್ಕೂ, ಮೂರನೆಯದಾಗಿ ಆಗ್ನೇಯದಿಂದ ಈಶಾನ್ಯಕ್ಕೂ ಮತ್ತು ಕಡೆಯದಾಗಿ ವಾಯುವ್ಯದಿಂದ ಈಶಾನ್ಯಕ್ಕೆ ಕಟ್ಟುವುದು ಶಾಸ್ತ್ರ ಸಮ್ಮತ. * ಹೀಗೆ ಕಟ್ಟಿದ ದಾರದ ಮೇಲೆ ಪೌಡರ್ ಹಾಕಿ ಮಾರ್ಕ್ ಮಾಡಬೇಕಾಗುತ್ತದೆ. ಈ ಪೌಡರ್ ಹಾಕುವ ಕ್ರಮವೂ ಈ ರೀತಿಯಾಗಿರುವುದು ಒಳ್ಳೆಯದು. ಅಂದರೆ ಪೌಡರ್ ಹಾಕುವ ವ್ಯಕ್ತಿಯ ಮುಖ ಪೂರ್ವ ಅಥವಾ ಉತ್ತರಕ್ಕೆ ಮಾಡಿರಬೇಕು. ಕ್ರಮವಾಗಿ ನೈಋತ್ಯದಿಂದ ಆಗ್ನೇಯ, ನೈಋತ್ಯದಿಂದ ವಾಯುವ್ಯ, ಆಗ್ನೇಯದಿಂದ ಈಶಾನ್ಯ ಮತ್ತು ವಾಯುವ್ಯದಿಂದ ಈಶಾನ್ಯ ಈ ಕ್ರಮವಾಗಿ ಮಾಡುವುದು ಶುಭಕರ. ಪಾಯ ತೆಗೆಯುವಾಗ ವಾಸ್ತು ಶಾಸ್ತ್ರದ ನಿಯಮಗಳನ್ನು ಪಾಲಿಸಬೇಕಾಗುತ್ತದೆ * ಮಾರ್ಕಿಂಗ್ ನಂತರದಲ್ಲಿ ಭೂಮಿಯನ್ನು ಅಗೆಯುವ ಕೆಲಸ ಶುರು ಆಗುತ್ತದೆ. ಹೀಗೆ ಶುರುವಾದ ಕೆಲಸ ಮೊದಲು ಈಶಾನ್ಯ ಭಾಗದಲ್ಲಿ ಆಗಬೇಕು. ಅದು ಪಾಯ ಆಗಬಹುದು, ಪಿಲ್ಲರ್‌ನ ಫಿಟ್ ಆಗಬಹುದು, ನೀರಿನ ಸಂಪ್ ಆಗಬಹುದು. ಒಟ್ಟಾರೆ ಮೊದಲು ಭೂಮಿ ಅಗೆಯುವ ಕೆಲಸ ಈಶಾನ್ಯದಿಂದಲೇ. ನಂತರದಲ್ಲಿ ಈಶಾನ್ಯದಿಂದ-ಉತ್ತರ-ವಾಯುವ್ಯ, ಈಶಾನ್ಯದಿಂದ-ಪೂರ್ವ-ಆಗ್ನೇಯ, ವಾಯುವ್ಯದಿಂದ-ಪಶ್ಚಿಮ-ನೈಋತ್ಯ, ಆಗ್ನೇಯದಿಂದ-ದಕ್ಷಿಣ-ನೈಋತ್ಯ. ಇದೇ ಕ್ರಮದಲ್ಲಿ ಭೂಮಿ ಅಗೆಯುವುದು ಶಾಸ್ತ್ರ ಸಮ್ಮತ. * ಹೀಗೆ ತೆಗೆದಂತಹ ಮಣ್ಣನ್ನು ನೈಋತ್ಯ, ದಕ್ಷಿಣ ಮತ್ತು ಪಶ್ಚಿಮ ಭಾಗದಲ್ಲೇ ಹಾಕಬೇಕು. ಸ್ವಲ್ಪ ಭಾಗ ಮಾತ್ರ ಆಗ್ನೇಯ ಮತ್ತು ವಾಯುವ್ಯದಲ್ಲಿ ಹಾಕಬಹುದು. ಆದರೆ ಯಾವುದೇ ಕಾರಣಕ್ಕೂ ಉತ್ತರ, ಪೂರ್ವ ಮತ್ತು ಈಶಾನ್ಯದಲ್ಲಿ ಹಾಕಬಾರದು. * ಇದಾದ ನಂತರ ಕಟ್ಟಡ ನಿರ್ಮಿಸಲು ಬೇಕಾದ ಕಚ್ಚಾ ವಸ್ತುಗಳನ್ನು ಶೇಖರಿಸಬೇಕಾಗುತ್ತದೆ. ಅಂತಹ ಕಚ್ಚಾವಸ್ತುಗಳಲ್ಲಿ ಮೊದಲನೆಯದಾಗಿ ಮರಳನ್ನು ನೈಋತ್ಯ ಭಾಗದಲ್ಲಿ ಹಾಕಬೇಕು. * ಉಳಿದ ಯಾವುದೇ ಕಚ್ಚಾ ವಸ್ತುಗಳನ್ನು ನೈಋತ್ಯ, ದಕ್ಷಿಣ ಮತ್ತು ಪಶ್ಚಿಮ ಭಾಗದಲ್ಲಿ ಮಾತ್ರ ಶೇಖರಿಸಬೇಕು. * ಯಾವುದೇ ಕಾರಣಕ್ಕಾಗಿ ಈಶಾನ್ಯ, ಪೂರ್ವ ಮತ್ತು ಉತ್ತರದಲ್ಲಿ ವಸ್ತುಗಳನ್ನು ಶೇಖರಿಸಬಾರದು. ಈ ರೀತಿ ತೆಗೆದ ಪಾಯದಲ್ಲಿ ಕಲ್ಲು ಜೋಡಣೆಯಾಗಲಿ ಅಥವಾ ಪಿಲ್ಲರ್ ಪುಟಿಂಗ್ ಕಾಂಕ್ರೀಟ್ ಆಗಲಿ ಮಾಡಬೇಕಾದರೆ, ಮೊದಲು ನೈಋತ್ಯ ಮೂಲೆ, ನಂತರ ಕ್ರಮವಾಗಿ ದಕ್ಷಿಣ, ಪಶ್ಚಿಮ, ಆಗ್ನೇಯ, ವಾಯುವ್ಯ, ಪೂರ್ವ, ಉತ್ತರ ಮತ್ತು ಕಡೆಯದಾಗಿ ಈಶಾನ್ಯದಲ್ಲಿ ಮಾಡಬೇಕು. ಈ ಎಲ್ಲ ಶಾಸ್ತ್ರ ಸಮ್ಮತವಾದ ಕ್ರಮಗಳನ್ನು ಅನುಸರಿಸುವುದರಿಂದ ಕಟ್ಟಡ ನಿರ್ಮಾಣ ಸುಲಲಿತವಾಗಿ ನಡೆದು ಎಲ್ಲ ಶುಭವಾಗುತ್ತದೆ.

ಸಂಖ್ಯಾಶಾಸ್ತ್ರದ ಯೋಗಾಯೋಗ

ಸಂಖ್ಯಾಶಾಸ್ತ್ರದ ಯೋಗಾಯೋಗ ವಿ.ನಾರಾಯಣ ಶೆಟ್ಟಿ ಪದ್ಮಸಾಲಿ ನಭೋ ಮಂಡಲದ ಸೃಷ್ಟಿಯ ಚಿದಂಬರ ರಹಸ್ಯಗಳು ಸಂಖ್ಯಾಶಾಸ್ತ್ರದಿಂದ ಕರಾರುವಾಕ್ಕು ರೂಪುಗೊಂಡಿರುತ್ತವೆ. ಕಾಲಗಣನಾ ಚಕ್ರದಲ್ಲಿ ಭೂತ, ಭವಿಷ್ಯತ್ ಮತ್ತು ವರ್ತಮಾನ ಕಾಲಗಳ ಅದೃಷ್ಟ ಮತ್ತು ದೆಸೆಗಳು ಸಂಖ್ಯೆಗಳಲ್ಲಿ ಹುದುಗಿಗೊಂಡಿರುತ್ತವೆ. ಇದರಿಂದ ಜ್ಯೋತಿಷ್ಯ ಶಾಸ್ತ್ರದಲ್ಲಿ ಸಂಖ್ಯಾಶಾಸ್ತ್ರ ಪ್ರಮುಖ ಅಸ್ತ್ರ ಎನಿಸಿಕೊಂಡಿರುತ್ತದೆ. ಪುರಾತನ ಖಗೋಳ, ಜ್ಯೋತಿಷ್ಯ ಮತ್ತು ಗಣಿತ ಶಾಸ್ತ್ರಜ್ಞರು ತಮ್ಮದೇ ಆದ ಸಂಖ್ಯಾಶಾಸ್ತ್ರಗಳನ್ನು ರೂಪಿಸಿದ್ದಾರೆ. ಪ್ರಮುಖ ಗಣಿತ ಶಾಸ್ತ್ರಜ್ಞ ಪೈಥಾಗಾರ್ ತಮ್ಮದೇ ಆದ ಸಂಖ್ಯಾಶಾಸ್ತ್ರವನ್ನು ವಿವರಿಸಿದ್ದಾರೆ. ಮನೋ ವೈಜ್ಞಾನಿಕಶಾಸ್ತ್ರ ಮತ್ತು ದೈವಚಿತ್ರ ಪ್ರಸಾರ ಗಣಕ ಸೂತ್ರಗಳೊಂದಿಗೆ 'ಕರಣಿಕ' ಸಂಖ್ಯಾಶಾಸ್ತ್ರವನ್ನು ರಚಿಸಲಾಗಿದೆ. ಆಸಕ್ತರು ಹಲವು ಬಾರಿ ಪ್ರಯತ್ನಿಸಿದರೆ ಉತ್ತಮ ಫಲಿತಾಂಶ ಸಿಗುವುದರಲ್ಲಿ ಸಂಶಯವೇ ಇಲ್ಲ. ಇವುಗಳನ್ನು ಮೂರು ಹಂತಗಳಲ್ಲಿ ತಿಳಿಸಲಾಗಿದೆ. 1ನೇ ಹಂತ: ಜನ್ಮ ದಿನಾಂಕ ಕರಣಿಕ ಸಂಖ್ಯೆ ಉದಾಹರಣೆಗೆ ನಾರಾಯಣ ( NARAYANA)ನ ಜನ್ಮ ದಿನಾಂಕ 1949, ಅಕ್ಟೋಬರ್ 6. ದಿನಾಂಕವನ್ನು ಸಂಖ್ಯೆಗಳಾಗಿ ಪರಿವರ್ತಿಸಿ, ಎಲ್ಲ ಸಂಖ್ಯೆಗಳನ್ನು ಕೂಡಿಸಿ ಏಕ ಸಂಖ್ಯೆಗೆ ತರುವುದು. 1+9+4+9+1+0+0+6=30=3+0=3 ಕರಣಿಕ ಸಂಖ್ಯೆ 2ನೇ ಹಂತ: ಪ್ರಸಕ್ತ ದಿನಾಂಕದ ಕರಣಿಕ ಸಂಖ್ಯೆ:2+0+1+3+0+6+0+1=1+3=4 ಕರಣಿಕ ಸಂಖ್ಯೆ. 3 ನೇ ಹಂತ: ಜನ್ಮನಾಮ ಕರಣಿಕ ಸಂಖ್ಯೆ (ಅಕ್ಷರ ಕೋಷ್ಟಕದಿಂದ) NARAYANA =8+5+6+5+3+5+8+5=45=4+5=9 ಕರಣಿಕ ಸಂಖ್ಯೆ ಎಲ್ಲ ಕರಣಿಕ ಸಂಖ್ಯೆಗಳನ್ನು ಒಟ್ಟು ಕೂಡಿಸಿದಾಗ 3+4+9=16=1+6=7 ಕರಣಿಕ ಸಂಖ್ಯೆ ದಿನಂಪ್ರತಿ ಕಾಲಮಾನದ ಯೋಗ ತಿಳಿಯಲು ಕರಣಿಕ ಸಂಖ್ಯೆ ಮತ್ತು ಪ್ರಸಕ್ತ ದಿನಾಂಕದ ವೇಳೆಯನ್ನು ಒಟ್ಟು ಕೂಡಿಸಿದರೆ ಯೋಗ ಸಂಖ್ಯೆ ಬರುವುದು ಯೋಗ ಸಂಖ್ಯೆ + ಕಾಲಮಾನ= (ಬೆಳಗ್ಗೆ 10:30) 7+10.30=7+1+0+3+0=11 1+1+2 (ಯೋಗ ಸಂಖ್ಯೆ) ಯೋಗ ಸಂಖ್ಯೆ1-4-7 ಬಂದರೆ ರಾಜಯೋಗ, 2-5-8 ಉಳಿದರೆ ಶುಭಯೋಗ ಮತ್ತು 3-6-9 ಬಂದರೆ ಅಶುಭ ಯೋಗ. ಜನ್ಮನಾಮ ಅಕ್ಷರ ಕರಣಿಕ ಕೋಷ್ಠಕವು 1:VWX, 2:STU, 3:YZY, 4:DEF, 5:ABC, 6:PQR, 7:JKL, 8:MNO ಮತ್ತು 9:GHI.

ದೇವತಾರಾಧನೆ ಎಂದರೆ ಏನು?

ದೇವತಾರಾಧನೆ ಎಂದರೆ ಏನು? *ಮಂಗಲ ಕಾರ್ಯ, ಹೊಸ, ವ್ಯಾಪಾರ ಇತ್ಯಾದಿ ಮಾಡುವ ಮುನ್ನ ಜಾತಕ ಪರಿಶೀಲಿಸಬೇಕೆ? ಏಕೆ?-ಅಚ್ಚುತ್ ರಾವ್, ಬೆಂಗಳೂರು ಉತ್ತರ: ಸುಮಂಗಲ ಫಲಾಧಿಪ ಗುರುವನ್ನೂ, ವ್ಯವಹಾರಾಧಿಪ ಬುಧನನ್ನೂ ಸ್ಥಿತಿಗಳನ್ನು ಪರಿಶೀಲಿಸಿಯೇ ಇಂಥ ಕಾರ್ಯಗಳನ್ನು ಮಾಡಬೇಕು. ಶರೀರ ಸ್ವಾಥ್ಯ ಕೆಟ್ಟಾಗ ವೈದ್ಯರನ್ನು ನೋಡುವುದಕ್ಕಿಂತ, ಆರೋಗ್ಯವಾಗಿರುವಾಗಲೇ ಸೂಕ್ತ ಆಹಾರ, ವ್ಯಾಯಾಮಗಳ ಆಶ್ರಯಿಸುವುದು ಒಳ್ಳೆಯದಲ್ಲವೇ...! *ಯೋಗ್ಯ ಜ್ಯೋತಿಷಿಗಳನ್ನು ಗುರುತಿಸುವ ಬಗೆ ಹೇಗೆ?-ಆದಿಕೇಶವಲು, ಬೆಂಗಳೂರು ಉತ್ತರ:ನಾವು ಯೋಗ್ಯ ಜೀವನ ನಡೆಸುತ್ತ, ಗುರು ಹಿರಿಯರನ್ನೂ, ಉತ್ತಮ ಪುಸ್ತಕಗಳನ್ನು ಓದಿಕೊಂಡು ವಿವೇಕಗಳಿಸಿದ್ದರೆ, ನಮಗೆ ದೊರೆವ ಜ್ಯೋತಿಷಿಯೂ ಯೋಗ್ಯರೇ ಆಗಿರುತ್ತಾರೆ. ತಂತಿಯೇ ತುಕ್ಕು ಹಿಡಿದರೆ, ಹೊರಡುವ ರಾಗ ಅಪಶ್ರುತಿಯೇ ಆಗಿರುತ್ತದೆ. *ಜ್ಯೋತಿಷ್ಯದ ಪ್ರಕಾರ ದೇವತಾರಾಧನೆ ಎಂದರೆ ಏನು, ಹೇಗೆ?ಸುಮಿತ್ರಾ, ಚಿಕ್ಕಮಗಳೂರು ಉ:ಕುಲ ದೈವ, ಗುರು ಮತ್ತು ಇಷ್ಟ ದೈವ ಎಂದು ಮೂರು ಬಗೆ. ಹಲವರಿಗೆ ಇದರಲ್ಲಿ ಸೌಮ್ಯಭಾವ ಇರದು. ಹೀಗಾಗಿ ಅವ್ಯವಸ್ಥಿತ ಜೀವನ ಸಾಗಿಸುತ್ತಿರುತ್ತಾರೆ. ಈ ವ್ಯತ್ಯಾಸ ಏನಾಗಿದೆ ಎಂದು ಜ್ಯೋತಿಷ್ಯಶಾಸ್ತ್ರದಿಂದ ಮಾತ್ರ ತಿಳಿಯಬಹುದಾಗಿದೆ. ಅನ್ಯ ಉಪಾಯ ಪ್ರಯೋಜನಕ್ಕೆ ಬಾರದು. *ಮುಹೂರ್ತಕ್ಕೂ, ಲಗ್ನಕ್ಕೂ ಇರುವ ವ್ಯತ್ಯಾಸ ಏನು?ಕಲ್ಯಾಣ ಶರ್ಮ, ಮೈಸೂರು ಉ:ನೀವು ಮನೆಯಿಂದ ಹೊರಡುವ ವೇಳೆಗೂ, ನೀವು ಹಿಡಿಯಬೇಕಾದ ಬಸ್ಸಿನ ಟೈಮಿಗೂ ಇರುವ ಸಂಬಂಧವೇ ಮುಹೂರ್ತಕ್ಕೂ, ಲಗ್ನಕ್ಕೂ ಇರುವುದು. ಅಂದಿನ ದಿನ ಗುರು ಮತ್ತು ಚಂದ್ರರ ಶುಭ ಸ್ಥಿತಿ ಮುಹೂರ್ತವಾದರೆ ಅಲ್ಲಿನ ಲಗ್ನಭಾವ ಅನುಕೂಲ ನೋಡುವುದು. ಎರಡೂ ಒಂದೇ ನಾಣ್ಯದ ಎರಡು ಮುಖಗಳು. *ಜಾತಕದಲ್ಲೇ ಗುರು ಬಲವಿಲ್ಲದೇ ಶುಭವಾಗುವುದೇ?ಜಾನಕೀಪತಿ, ಹರಿಹರ ಉ:ಒಂದು ಜನ್ಮಾಂತರದಿಂದ ತಂದದ್ದು, ಅದು ಇಲ್ಲವಾದರೆ ಮತ್ತೊಂದು ಇಲ್ಲಿ ಆರ್ಜಿಸುವುದು. ಎರಡೂ ಒಳ್ಳೆಯದೇ. ಆದರೆ ಸೂಕ್ತ ಮಾರ್ಗದರ್ಶನ ಪಡೆದು ಮುನ್ನಡೆಯಬೇಕು. (ಜ್ಯೋತಿಷ್ಯಕ್ಕೆ ಸಂಬಂಧಿಸಿದಂತೆ ಪ್ರಶ್ನೆಗಳಿದ್ದಲ್ಲಿ ನಮಗೆ ಬರೆದು ಕಳಿಸಬಹುದು. ನಿಮ್ಮ ಪ್ರಶ್ನೆಗೆ ದೈವಜ್ಞ ಹರೀಶ್ ಕಾಶ್ಯಪ್ ಉತ್ತರಿಸುತ್ತಾರೆ. ನಮ್ಮ ವಿಳಾಸ ಸಂಪಾದಕರು, ಲವಲವಿಕೆ, ಜ್ಯೋತಿಷ್ಯ ವಿಭಾಗ, ನಂ.40, ಜಯ ಸಾಯಿ ಟವರ್ಸ್‌, ಸಜ್ಜನ್ ರಾವ್ ರಸ್ತೆ, ವಿವಿ ಪುರಂ, ಬೆಂಗಳೂರು-560 004. Email:lvk@vijaykarnataka.com. ದೂರವಾಣಿ:40877545)

ಭವಿಷ್ಯಕ್ಕೆ ಜನ್ಮ ದಿನಾಂಕವೇ ಆಧಾರ

ಭವಿಷ್ಯಕ್ಕೆ ಜನ್ಮ ದಿನಾಂಕವೇ ಆಧಾರ ವಾಸ್ತು ಎಂದರೆ ವಾಸಿಸುವ ಮನೆ ಎಂದರ್ಥ. ಈ ಮನೆಯು 9 ನವಗ್ರಹಗಳ ಅಧಿಪತ್ಯಕ್ಕೆ ಒಳಪಡುವುದರಿಂದ ಯಾವ ಯಾವ ದಿಕ್ಕುಗಳಲ್ಲಿ ಯಾವ ಯಾವ ಕೊಠಡಿಗಳು ಇರಬೇಕು ಯಾವ ಯಾವ ದಿಕ್ಕುಗಳಲ್ಲಿ ಯಾವ ಯಾವ ವಸ್ತುಗಳು ಇರಬೇಕೆಂಬುದನ್ನು ಈ ವಾಸ್ತು ತಿಳಿಸುತ್ತದೆ. ಆದರೆ ಗುರುಬಲವಿದ್ದಾಗ ಮನೆ ಕಟ್ಟುವ ಕಾರ್ಯವು ಸುಸೂತ್ರವಾಗಿ ನಡೆಯುತ್ತದೆ. ಜನ್ಮ ದಿನಾಂಕದ ಮೇಲೆ ಶುಭ ವರ್ಷಗಳು ಯಾವುವು, ಶುಭ ದಿನಗಳು ಯಾವುವು ಯಾವ ವರ್ಷ ಮನೆ ಕಟ್ಟುವ ಕಾರ್ಯ ಆರಂಭ ಮಾಡಬೇಕು ಎಂಬ ವಿವರ ಇಲ್ಲಿದೆ. 1,10,19,28ನೇ ದಿನಾಂಕಗಳಂದು ಜನಿಸಿದವರಿಗೆ 1,10,19, 28, 37, 46, 55, 64, 73, 82ನೇ ವರ್ಷಗಳು ಶುಭ ವರ್ಷಗಳಾಗಿರುತ್ತವೆ. ಇವರಿಗೆ ಭಾನುವಾರ ಶುಭ ದಿನ. ಕೆಂಪು ಬಣ್ಣ ಶುಭ. 2,11,20,29ನೇ ದಿನಾಂಕಗಳಂದು ಜನಿಸಿದವರಿಗೆ 2, 11, 20, 29, 38, 47, 56, 74, 83ನೇ ವರ್ಷಗಳು ಶುಭ ವರ್ಷಗಳಾಗಿರುತ್ತವೆ. ಇವರಿಗೆ ಸೋಮವಾರ ಶುಭ ದಿನ. ಬಿಳಿಯ ಬಣ್ಣ ಶುಭ. 3,12, 21, 30ನೇ ದಿನಾಂಕಗಳಂದು ಜನಿಸಿದವರಿಗೆ 3, 12, 21, 30, 39, 48, 57, 66, 75, 84ನೇ ವರ್ಷಗಳು ಶುಭ ವರ್ಷಗಳಾಗಿರುತ್ತವೆ. ಇವರಿಗೆ ಗುರುವಾರ ಶುಭ ದಿನ. ಹಳದಿ ಬಣ್ಣ ಶುಭ. 4, 13, 22, 31ನೇ ಈ ದಿನಾಂಕಗಳಂದು ಜನಿಸಿದವರಿಗೆ 4, 13, 22, 31, 40, 49, 58, 67, 76, 85ನೇ ವರ್ಷಗಳು ಶುಭ ವರ್ಷಗಳಾಗಿರುತ್ತವೆ. ಇವರಿಗೆ ಶನಿವಾರ ಮತ್ತು ಮಂಗಳವಾರ ಶುಭ ದಿನ. ಕಪ್ಪು ಬಣ್ಣ ಶುಭ. 5, 14, 23ನೇ ದಿನಾಂಕಗಳಂದು ಜನಿಸಿದವರಿಗೆ 5, 14, 23, 32, 41, 50, 59, 68, 77, 86ನೇ ವರ್ಷಗಳು ಶುಭ ವರ್ಷಗಳಾಗಿರುತ್ತವೆ. ಇವರಿಗೆ ಬುಧವಾರ ಶುಭ ದಿನ. ಹಸಿರು ಬಣ್ಣ ಶುಭ. 6, 15, 24ನೇ ದಿನಾಂಕಗಳಂದು ಜನಿಸಿದವರಿಗೆ 6, 15 24, 42, 51, 60, 69, 78, 87ನೇ ವರ್ಷಗಳು ಶುಭ ವರ್ಷಗಳಾಗಿರುತ್ತವೆ. ಇವರಿಗೆ ಶುಕ್ರವಾರ ಶುಭ ದಿನ. ಬಿಳಿಯ ಬಣ್ಣ ಶುಭ. 7, 16, 25ನೇ ದಿನಾಂಕಗಳಂದು ಜನಿಸಿದವರಿಗೆ 7, 16, 25, 34, 43, 52, 61, 70, 79, 88ನೇ ವರ್ಷಗಳು ಶುಭ ವರ್ಷಗಳಾಗಿರುತ್ತವೆ. ಇವರಿಗೆ ಮಂಗಳವಾರ ಮತ್ತು ಶನಿವಾರ ಶುಭ ದಿನವಾಗಿರುತ್ತದೆ. ಕಪ್ಪು ಹಾಗೂ ಗೋಮತ್ರದ ಬಣ್ಣ ಶುಭ ಬಣ್ಣ ವಾಗಿರುತ್ತದೆ. 8, 17, 26ನೇ ಈ ದಿನಾಂಕಗಳಂದು ಜನಿಸಿದವರಿಗೆ 8, 17, 26, 35, 44, 53, 62, 71, 80, 89ನೇ ವರ್ಷಗಳು ಶುಭ ವರ್ಷಗಳಾಗಿರುತ್ತವೆ. ಇವರಿಗೆ ಶನಿವಾರ ಶುಭ ದಿನವಾಗಿರುತ್ತದೆ. ಕಪ್ಪು ಹಾಗೂ ನೀಲಿ ಬಣ್ಣ ಶುಭ ಬಣ್ಣ ವಾಗಿರುತ್ತದೆ. 9, 18, 27ನೇ ಈ ದಿನಾಂಕಗಳಂದು ಜನಿಸಿದವರಿಗೆ 9, 18, 27, 36, 45, 54, 63, 72, 81, 90ನೇ ವರ್ಷಗಳು ಶುಭ ವರ್ಷಗಳಾಗಿರುತ್ತವೆ. ಇವರಿಗೆ ಮಂಗಳವಾರ ಶುಭ ದಿನವಾಗಿರುತ್ತದೆ. ಕೆಂಪು ಬಣ್ಣ ಶುಭ ಬಣ್ಣ ವಾಗಿರುತ್ತದೆ. -ನಾಗರಾಜ್ ಉಳ್ಳಾಲ

ಸಕಲ ಗೃಹ ಬಲ,ಗುರುವಿನ ಕೃಪೆಯಾಗದ ತನಕ

ಸಕಲ ಗೃಹ ಬಲ ನೀನೇ ಸರಸಿಜಾಕ್ಷ ಜಾತಕದಲ್ಲಿ ಚತುರ್ಥಾಧಿಪತಿಯು ಯಾವುದಾದರೊಂದು ಶುಭ ಗ್ರಹದ ಜತೆಯಲ್ಲಿದ್ದು 1-4-7-10-5-9ನೇ ಭಾವಗಳಲ್ಲಿ ಹಾಗೂ ಚತುರ್ಥಾಧಿಪತಿ ಜತೆಯಲ್ಲಿರುವ ಗ್ರಹ ಮಿತ್ರರಾಗಿದ್ದರೆ ಮತ್ತು ಮಿತ್ರ - ಸ್ವ ಕ್ಷೇತ್ರದಲ್ಲಿ ಇದ್ದರೆ ಉತ್ತಮವಾದ ಮನೆಯನ್ನು ಕಟ್ಟಲು ಸಾಧ್ಯವಾಗುತ್ತದೆ ಹಾಗೂ ಆ ಮನೆಯಲ್ಲಿ ಎಲ್ಲ ಪ್ರಕಾರದ ಅನುಕೂಲತೆಗಳು ಇರುತ್ತದೆ. ಸ್ವಕಷ್ಟರ್ಜಿತ ಮನೆಯ ಯೋಗ : ಲಗ್ನಾಧಿಪತಿ 4ನೇ ಭಾಗದಲ್ಲಿದ್ದು 4ನೇ ಅಧಿಪತಿ ಲಗ್ನದಲ್ಲಿದ್ದರೆ ಈ ಯೋಗ ಉಂಟಾಗುತ್ತದೆ. ಈ ಯೋಗದಲ್ಲಿ ಹುಟ್ಟಿದ ಜಾತಕನು ಸ್ವಕಷ್ಟದಿಂದ ುರುಷಾರ್ಥದಿಂದ ಸ್ವಂತ ಸಂಪಾದನೆಯಿಂದ ಸಂಪಾದಿಸಿದ ಹಣದಿಂದ ಮನೆಯನ್ನು ಕಟ್ಟಿಕೊಳ್ಳುವುದು. ವೈಶಿಷ್ಟ ಪೂರ್ಣ ಮನೆಯ ಯೋಗ : 4ನೇ ಅಧಿಪತಿ ಮತ್ತು 10ನೇ ಅಧಿಪತಿ ಹಾಗೂ ಚಂದ್ರ ಜತೆಯಲ್ಲಿ ಇದ್ದು ನಾಲ್ಕನೇ ಸ್ಥಾನದಲ್ಲಿ ಶುಭಗ್ರಹ ಇದ್ದರೆ. ವೈಶಿಷ್ಟ ಪೂರ್ಣ ಮನೆಯ ಯೋಗ ಉಂಟಾಗುತ್ತಿದೆ. ಈ ಯೋಗದಲ್ಲಿ ಹುಟ್ಟಿದ ಜಾತಕರು ಮನೆಯನ್ನು ಆಧುನಿಕ ರೀತಿಯಲ್ಲಿ ಸಜ್ಜುಗೊಳಿಸಲ್ಪಟ್ಟು ಪರಿಪೂರ್ಣ ಎನಿಸಿದ್ದು ಮತ್ತು ಸಾಮಾನ್ಯ ಜನರ ಮನೆುವರಿಗಿಂತ ಬೇರೆಯೇ ರೀತಿಯಾಗಿ ಇರುತ್ತದೆ. ದೊಡ್ಡ ಬಂಗಲೆಯ ಯೋಗ : ನಿಮ್ಮ ಜಾತಕದ ನಾಲ್ಕನೇ ಭಾವದಲ್ಲಿ ಚಂದ್ರ ಮತ್ತು ಶುಕ್ರ ಇಲ್ಲವೇ ನಾಲ್ಕನೇ ಭಾವದಲ್ಲಿ ಉಚ್ಚರಾಶಿಯ ಯಾವುದಾದರೂ ಒಂದು ಗ್ರಹ ಇದ್ದರೂ ಅರಂತೆ 4ನೇ ಅಧಿಪತಿಯು ಕೇಂದ್ರ ತ್ರಿಕೋಣ ಸ್ಥಾನದಲ್ಲಿ ಶುಭ ಸ್ಥಾನದಲ್ಲಿ ಇದ್ದರೆ ಈ ಯೋಗ ಉಂಟಾಗುತ್ತದೆ. ಇಂತಹ ಯೋಗವುಳ್ಳ ಜಾತಕರು ದೊಡ್ಡ ಬಂಗಲೆಯ ಮಾಲೀಕರಾಗುವರು. ಇಂತಹ ಜನರ ಮನೆಯ ಹೊರಗೆ ತೋಟ, ಗಾರ್ಡನ್, ಈಜುಕೊಳ ಇನ್ನು ಇತ್ಯಾದಿ ಇರುತ್ತದೆ. ಕಲಾತ್ಮಕ ರೀತಿಯಿಂದ ಈ ಮನೆಯನ್ನು ಕಟ್ಟಿರುತ್ತಾರೆ. ಅಕಸ್ಮಾತ್ ಮನೆ ಹೊಂದುವ ಯೋಗ : ನಿಮ್ಮ ಜಾತಕದಲ್ಲಿ 4ನೇ ಭಾವಾಧಿಪತಿ ಮತ್ತು ಲಗ್ನಾಧಿಪತಿ ಇಬ್ಬರು ನಾಲ್ಕನೇ ಭಾವದಲ್ಲಿದ್ದರೆ ಈ ಯೋಗ ಉಂಟಾಗುತ್ತದೆ. ಈ ಯೋಗವುಳ್ಳ ಜಾತಕರಿಗೆ ಕಲ್ಪನೆಯೇ ಇರದೆ ಸ್ವಂತ ಮನೆಯನ್ನು ಹೊಂದುವರು ಇಂತಹ ಜಾತಕರು ಬೇರೆಯವರು ಕಟ್ಟಿಸಿದ ಮನೆಯನ್ನು ತೆಗೆದುಕೊಳ್ಳುವ ಸಾಧ್ಯತೆ ಇರುತ್ತದೆ. ಆದರೆ ಲಗ್ನಾಧಿಪತಿ ಮತ್ತು ಚತುರ್ಥ ಸ್ಥಾನಾಧಿಪತಿ ಇಬ್ಬರು ಮಿತ್ರ ಗ್ರಹಗಳಾಗಿದ್ದು ನಾಲ್ಕನೇ ಸ್ಥಾನ ಸ್ವಕ್ಷೇತ್ರ ಅಥವಾ ಮಿತ್ರ ಕ್ಷೇತ್ರ ಆಗಿರಬೇಕು. ಅನಾಯಸ ಮನೆ ಹೊಂದುವ ಯೋಗ : ಜಾತಕದಲ್ಲಿ ಲಗ್ನಾಧಿಪತಿ ಮತ್ತು ಸಪ್ತಮಾಧಿಪತಿ ಲಗ್ನದಲ್ಲಿದ್ದರೆ ಮತ್ತು ನಾಲ್ಕನೇ ಭಾವದ ಮೇಲೆ ಶುಭ ಗ್ರಹಗಳಾದ ಬುಧ, ಗುರು, ಶುಕ್ರ,ಚಂ್ರರ ದೃಷ್ಟಿ ಇದ್ದರೆ ಈ ಯೋಗ ಇದ್ದವರು ವಿಶೇಷ ಪ್ರಯತ್ನ ಇಲ್ಲದೆಯೇ ಮನೆ ದೊರಕುತ್ತದೆ. ಲಗ್ನಾಧಿಪತಿ ಮತ್ತು ಚತುರ್ಥಾಧಿಪತಿ ಲಗ್ನದಲ್ಲಿದ್ದರೆ ಮತ್ತು ಚತುರ್ಥ ಸ್ಥಾನದ ಮೇಲೆ ಶುಭ ಗ್ರಹಗಳ ದೃಷ್ಟಿ ಇದ್ದರೆ ಅನಾಯಾಸದ ಮನೆ ದೊರಕುತ್ತದೆ. ಇಂತಹ ಜಾತಕರಿಗೆ ವಿಶೇಷ ಪ್ರಯತ್ನ ಇಲ್ಲದೆಯೇ ಮನೆ ದೊರಕುತ್ತದೆ. 4ನೇ ಅಧಿಪತಿ ಉಚ್ಚ ಸ್ಥಾನದಲ್ಲಿ ಅಥವಾ ಮೂಲ ತ್ರಿಕೋಣದಲ್ಲಿ ಇಲ್ಲವೇ ಸ್ವ ಕ್ಷೇತ್ರದಲ್ಲಿ ಇದ್ದರೆ 9ನೇ ಅಧಿಪತಿ ಕೇಂದ್ರದಲ್ಲಿ ಇದ್ದರೆ ಅನಾಯಸದ ಮನೆ ದೊರಕುತ್ತದೆ. ಒಂದಕ್ಕಿಂತ ಹೆಚ್ಚು ಮನೆಗಳನ್ನು ಹೊಂದುವ ಯೋಗ : ನಿಮ್ಮ ಜಾತಕದಲ್ಲಿ 4ನೇ ಸ್ಥಾನ ಮತ್ತು 4ನೇ ಅಧಿಪತಿ ಇಬ್ಬರು ಚರ ರಾಶಿಯಲ್ಲಿ (ಮೇಷ,ಕಟಕ,ತುಲಾ,ಮಕರ) ಇದ್ದು 4ನೇ ಅಧಿತಿಯು ಶುಭ ಗ್ರಹದಿಂದ ಕೂಡಿದ್ದು ಇಲ್ಲವೇ ಶುಭ ಗ್ರಹಗಳಾದ ಬುಧ, ಗುರು, ಶುಕ್ರ, ಚ0ದ್ರರ ದೃಷ್ಟಿ ಇದ್ದರೆ ಒಂದಕ್ಕಿಂತ ಹೆಚ್ಚು ಮನೆಯನ್ನು ಹೊಂದುವ ಯೋಗ ಇರುತ್ತದೆ. ಇಂತಹ ಯೋಗದ ಜಾತಕರು ಹೆಚ್ಚು ಮನೆಯಲ್ಲಿ ಇರುತ್ತಾರೆ. ಮತ್ತು ಮೇಲೆಂದ ಮೇಲೆ ಮನೆಯನ್ನು ಬದಲಾಯಿಸುತ್ತಾರೆ. ಚತುರ್ಥ ಸ್ಥಾನ ಮತ್ತು ಚತುರ್ಥಾಧಿಪತಿ ಸ್ಥಿರ ರಾಶಿಯಲ್ಲಿ (ವೃಷಭ, ಸಿಂಹ, ವೃಶ್ಚಿಕ, ಕುಂಭ) ಇದ್ದರೆ ಜಾತಕರಿಗೆ ಅನೇಕ ಸ್ಥಳಗಳಲ್ಲಿ ಮನೆ ಇರುತ್ತದೆ. 4ನೇ ಅಧಿಪತಿ ಬಲಿಷ್ಠನಾಗಿದ್ದು ಮತ್ತು ಲಗ್ನಾಧಿಪತಿ 4ನೇ ಅಧಿಪತಿ ಧನಾಧಿಪತಿ ಈ ಮೂವರಲ್ಲಿ ಎಷ್ಟು ಗ್ರಹಗಳು ಮೂಲ ತ್ರಿಕೋಣದಲ್ಲಿದ್ದರೆ ಹೆಚ್ಚಿನ ಸಂಖ್ಯೆಯ ಮನೆಯನ್ನು ಹೊಂದಿರುತ್ತಾರೆ. ಉತ್ತಮ ಮನೆಯ ಯೋಗ : ಜಾತಕದಲ್ಲಿ 4ನೇ ಅಧಿಪತಿ ಮತ್ತು 10ನೇ ಅಧಿಪತಿ ಇಬ್ಬರು ಕೇಂದ್ರ ತ್ರಿಕೋಣಗಳಲ್ಲಿದ್ದರೆ ಉತ್ತಮ ಮನೆಯ ಯೋಗ ಇರುತ್ತದೆ. ಈ ಯೋಗದಿಂದ ಜಾತಕರಿಗೆ ಉತ್ತಮ ದರ್ಜೆಯ ಮನೆ ಲಭಿಸುತ್ತದೆ. ದಿಕ್ಕು ದೆಸೆ: ಗುರುವಿನ ಕೃಪೆಯಾಗದ ತನಕ ಮನೆ ಕಟ್ಟಲು ಗುರುವಿನ ಅನುಗ್ರಹ ಬೇಕು. ಇಲ್ಲಿ ಗುರುವಿನ ಅನುಗ್ರಹ ಎಂದರೆ, ಜಾತಕದಲ್ಲಿರುವ ಗುರು ಬಲ ಎಂದರ್ಥ. ಕಾಂಚಾಣಂ ಕಾರ್ಯ ಸಿದ್ಧಿಃ ಎನ್ನುವ ಕಾಲದಲ್ಲಿ ಗುರುವಿನಿಂದ ಆಗುವ ಪ್ರಯೋಜನವೇನು ಎಂಬುದನ್ನು ತಿಳಿದುಕೊಳ್ಳೋಣ. ಮನೆ ಕಟ್ಟುವ ಮುಂಚೆ ಮನೆಯನ್ನು ಯಾರ ಹೆಸರಿನಲ್ಲಿ ಕಟ್ಟಿಸಬೇಕಾಗಿ ಇರುತ್ತದೆಯೋ ಅವರು ಒಳ್ಳೆಯ ಜ್ಯೋತಿಷರ ಹತ್ತಿರ ತಮ್ಮ ಜಾತಕವನ್ನು ತೋರಿಸಬೇಕು. ತಮ್ಮ ಜಾತಕದಲ್ಲಿ ಗ್ರಹಗತಿಗಳ ಪ್ರಭಾವ ಹೇಗಿದೆ ಎಂದು ತಿಳಿದುಕೊಂಡು ನಿಮಗೆ ಗುರುಬಲ ಇದೆಯೇ ಇಲ್ಲವೇ ಎಂದು ತಿಳಿದುಕೊಳ್ಳಬೇಕು. ಒಂದು ವೇಳೆ ನಿಮಗೆ ಆ ವರ್ಷ ಗುರುವಿನ ಬಲ ಇಲ್ಲದಿದ್ದರೆ ಆ ವರ್ಷ ಯಾವುದೇ ಶುಭ ಕಾರ್ಯವನ್ನು ಅಂದರೆ ಮನೆ ಕಟ್ಟುವುದು, ಅಂಗಡಿ, ಹೋಟೆಲ್, ಬೇಕರಿ, ಫ್ಯಾನ್ಸಿ ಸ್ಟೋರ್, ಇತ್ಯಾದಿ ಹೊಸ ಕಾರ್ಯಗಳನ್ನು ಮಾಡದೆ ಇರುವುದೇ ಬಹಳ ಒಳ್ಳೆಯದು. ಒಂದು ವೇಳೆ ನೀವು ಹೊಸ ಕಾರ್ಯಗಳನ್ನು ಪ್ರಾರಂಭಿಸಿದರೆ ಎರಡು ಮೂರು ತಿಂಗಳಿನಲ್ಲಿಯೇ ಹಣ ಕಾಸಿನ ತೊಂದರೆಗಳು ಬಂದು ನಿಮ್ಮಲ್ಲಿರುವ ಹಣ ಖಾಲಿಯಾಗಿ ಬೇರೆ ಯಾರಿಂದಲೂ ಸರಿಯಾದ ಸಮಯಕ್ಕೆ ಹಣ ದೊರೆಯದೆ ನಿಮ್ಮ ಕೆಲಸ ಕಾರ್ಯಗಳು ಅರ್ಧದಲ್ಲಿಯೇ ನಿಂತು ಹೋಗುತ್ತವೆ ಹಾಗೂ ನೀವು ಪುನಃ ಕೆಲಸ ಪ್ರಾರಂಭಿಸುವಾಗ ಅದೇ ಕೆಲಸಕ್ಕೆ ಎರಡರಷ್ಟು ಹಣ ಖರ್ಚು ಬರುತ್ತದೆ ಹಾಗೂ ಮನಸ್ಸಿನ ನೆಮ್ಮದಿಯು ಹಾಳಾಗಿ ಸಾಲದ ಬಾಧೆಗೆ ಒಳಗಾಗಿ ಸಾಲ ತೀರಿಸಲಾರದೆ ಕಂಗಲಾಗುತ್ತೀರಿ. ಆದ್ದರಿಂದ ನಿಮ್ಮ ಎಲ್ಲ ಕೆಲಸ ಕಾರ್ಯಗಳಿಗೂ ಎಲ್ಲ ಗ್ರಹಗಳಿಗಿಂತ ಗುರುವಿನ ಬಲ ಅತಿ ಮುಖ್ಯವಾಗಿ ಇರಬೇಕಾಗುತ್ತದೆ. ಯಾರೇ ಆಗಲಿ ಒಳ್ಳೆಯ ಜ್ಯೋತಿಷಿಗಳಲ್ಲಿ ಜಾತಕವನ್ನು ತೋರಿಸಿದಾಗ ನಿಮ್ಮ ಜಾತಕದಲ್ಲಿ ಜನ್ಮ ಲಗ್ನದಿಂದ 1-4-7-10-5-9 ಕೇಂದ್ರ ತ್ರಿಕೋಣದಲ್ಲಿ ಶುಭ ಗ್ರಹಗಳು ಇದ್ದು ಈ ಸ್ಥಾನಗಳು ಉಚ್ಚವಿದ್ದು ಸ್ವಕ್ಷೇತ್ರವಾಗಿದ್ದರೆ ಹಾಗೂ ಗೋಚಾರ ಗ್ರಹ ಗತಿಗಳು ಶುಭವಾಗಿದ್ದರೆ ಅತ್ಯಧಿಕ ಶುಭ ಫಲವೆಂದು ತಿಳಿಯಬೇಕು. ಅದೇ ರೀತಿ ದಶಾ ಭುಕ್ತಿಗಳು ಶುಭವಾಗಿದ್ದರೆ ನಿಮ್ಮ ಕಾರ್ಯಗಳಲ್ಲಿ ಯಾವುದೇ ಅಡ್ಡಿ ಆತಂಕ ಇಲ್ಲದೆ ನೆರವೇರುತ್ತವೆ ಎಂದು ತಿಳಿಯಬೇಕು. ಮನೆ ಕಟ್ಟುವ ಮುಂಚೆ ನಿಮಗೆ ಗುರುವಿನ ಬಲ ಇದ್ದರೆ ಮನೆಯ ಕಾರ್ಯಕ್ಕೆ ಎಷ್ಟೇ ಅಡ್ಡಿ, ಆತಂಕ, ತೊಂದರೆಗಳು ಬಂದರೂ ಒಂದುವೇಳೆ ಮಧ್ಯದಲ್ಲಿ ಹಣಕಾಸಿನ ತೊಂದರೆ ಬಂದರೂ ಬೇರೆ ಮಾರ್ಗದಿಂದ ಹಣ ದೊರೆತು ಮನೆ ಕಟ್ಟುವಿಕೆಯ ಕಾರ್ಯವು ಪರಿಪೂರ್ಣವಾಗಿ ನೆರವೇರುತ್ತದೆ. ಒಂದು ವೇಳೆ ನಿಮ್ಮ ಜಾತಕ ಇಲ್ಲದಿದ್ದರೆ ಗೋಚಾರ ರೀತಿಯಿಂದಲಾದರೂ ನಿಮ್ಮನ್ನು ಕರೆಯುವ ಹೆಸರಿಗೆ ಗುರುವಿನ ಬಲ ಅತಿ ಅಗತ್ಯವಾಗಿ ಬೇಕಾಗಿರುತ್ತದೆ. ಹೀಗೆ ಗುರುಬಲ ಇರುವಾಗ ಶುಭದಿನ ಶುಭಲಗ್ನ, ಶುಭ ಮುಹೂರ್ತದಲ್ಲಿ ಪ್ರಾರಂಭ ಮಾಡಿದ ಯಾವುದೇ ಕೆಲಸ ಕಾರ್ಯಗಳು ಯಾವುದೇ ತೊಂದರೆ ಇಲ್ಲದೆ ಪರಿಪೂರ್ಣವಾಗಿ ನೆರವೇರಿ ನಿಮ್ಮ ಆಸೆ, ಅಭಿಲಾಷೆಗಳು ನೆರವೇರುತ್ತವೆ. ಇದೇ ಗುರುಬಲದ ಜತೆಗೆ ಗೋಚರದಲ್ಲಿ ಇತರೆ ಗ್ರಹಗಳ ಪ್ರಭಾವ ಶುಭವಾಗಿ ಇದೆಯೇ ಇಲ್ಲವೇ ತಿಳಿದುಕೊಂಡು ಕಾರ್ಯ ಆರಂಭಿಸಿದರೆ ಯಾವುದೇ ತೊಂದರೆಗಳು ಬರದೆ ಕಾರ್ಯ ನಿರ್ವಿಘ್ನವಾಗಿ ನೆರವೇರುತ್ತದೆ.

ಜನ್ಮ ಲಗ್ನಕ್ಕೆ ಸಂಬಂಸಿದ ವ್ಯಾಪಾರದ ಫಲಗಳು

ಜನ್ಮ ಲಗ್ನಕ್ಕೆ ಸಂಬಂಸಿದ ವ್ಯಾಪಾರದ ಫಲಗಳು ಡಾ.ಎಸ್.ಎನ್.ಶೈಲೇಶ್ ಬಾಣಾವರ ಜನ್ಮ ಲಗ್ನಕ್ಕೆ ಅನುಗುಣವಾಗಿ ವ್ಯಾಪಾರ ಪ್ರಾರಂಭಿಸಿದರೆ ಶುಭ ಫಲಗಳು ದೊರಕುತ್ತವೆ. ಈ ಸಂಬಂಧವಾಗಿ ಸಂಬಂಧಪಟ್ಟ ಲಗ್ನಗಳಿಗೆ ಯಾವ ವ್ಯಾಪಾರ ಮಾಡಿದರೆ ಶುಭ ದೊರಕುತ್ತದೆ ಎಂಬುದರ ಬಗ್ಗೆ ಒಂದು ವಿಶ್ಲೇಷಣೆ. ಮೇಷ: ವೈದ್ಯಕೀಯ, ವಕೀಲ ವೃತ್ತಿ, ಪೊಲೀಸ್ ಇಲಾಖೆ, ಕಲ್ಲಿದ್ದಲು, ಔಷಧ ವ್ಯಾಪಾರ, ಖನಿಜ ಪದಾರ್ಥ, ಉಪ್ಪು, ಬಣ್ಣದ ವ್ಯಾಪಾರ, ಎಲೆಕ್ಟ್ರಾನಿಕ್ಸ್ ವ್ಯಾಪಾರ, ತಂಬಾಕು, ಸಿಮೆಂಟ್, ಎಣ್ಣೆ ವ್ಯಾಪಾರ, ವನಸ್ಪತಿ, ವಿದ್ಯುತ್ ಉಪಕರಣಗಳ ವ್ಯಾಪಾರ. ವೃಷಭ: ಕಲಾಕ್ಷೇತ್ರ, ವ್ಯವಸಾಯ ಹಾಗೂ ಕೃಷಿಗೆ ಸಂಬಂಧಿಸಿದ ವ್ಯವಹಾರ, ಅಲಂಕಾರದ ವಸ್ತುಗಳು, ಸ್ಟೇಷನರಿ, ಬಣ್ಣದ ವ್ಯಾಪಾರ, ಎಂಜಿನಿಯರಿಂಗ್ ಉದ್ಯೋಗ. ಮಿಥುನ: ಗುಪ್ತ ವಿದ್ಯೆ, ಜ್ಯೋತಿಷ್ಯ ಶಾಸ್ತ್ರ, ಹಣಕಾಸು ವಿಭಾಗ, ಕವನ, ಲೇಖನಗಳನ್ನು ಬರೆಯುವ ಕಲೆ, ಪಾಕಶಾಸ್ತ್ರ ಪ್ರವೀಣ ವಿದ್ಯೆ. ಕಟಕ: ಸಿನಿಮಾ ರಂಗ, ಫೋಟೋಗ್ರಫಿ, ಕಲಾಕೃತಿ, ಕಲೆ, ನೀರಿಗೆ ಸಂಬಂಧಿಸಿದ ವ್ಯಾಪಾರಗಳು, ಬಣ್ಣದ ಕೆಲಸ, ಅಲಂಕಾರಿಕ ವಸ್ತುಗಳ ವ್ಯಾಪಾರ, ಮುತ್ತು, ರತ್ನಗಳ ವ್ಯಾಪಾರ. ಸಿಂಹ: ತಾಂತ್ರಿಕ ಹುದ್ದೆ, ಬಟ್ಟೆ, ಖಾದಿ, ನೂಲು, ದಾರದ ವ್ಯಾಪಾರ, ಹಣ್ಣಿನ ವ್ಯಾಪಾರ, ಕೃಷಿ ಕ್ಷೇತ್ರ ಹಾಗೂ ಕೃಷಿಗೆ ಸಂಬಂಧಿಸಿದ ಉಪಕರಣಗಳ ವ್ಯಾಪಾರ, ಲೇವಾದೇವಿ ವ್ಯಾಪಾರ. ಕನ್ಯಾ: ಯಂತ್ರ, ಮಂತ್ರ, ಜ್ಯೋತಿಷ್ಯಶಾಸ್ತ್ರ, ಬೃಹತ್ ಕಂಪನಿಗಳು ವ್ಯವಸ್ಥಾಪಕ, ಕಲೆ, ಲೇಖನ, ಪಾಕಶಾಸ್ತ್ರ, ಬ್ಯಾಂಕಿಂಗ್, ಫೈನಾನ್ಸ್, ಕ್ರಯ ವಿಕ್ರಯ. ತುಲಾ: ಅಧ್ಯಾಪಕರು, ಶಿಕ್ಷಣ ಸಂಸ್ಥೆ ನಡೆಸುವುದು, ಚಿತ್ರಕಲೆ, ಎಣ್ಣೆ ವ್ಯಾಪಾರ, ಅಲಂಕಾರದ ವಸ್ತುಗಳ ವ್ಯಾಪಾರ ಕಂಪನಿಗಳನ್ನು ನಡೆಸುವುದು, ದಲಾಲ, ಸೆಟ್ಟಾ ವ್ಯಾಪಾರ. ವೃಶ್ಚಿಕ: ವೈದ್ಯಕೀಯ ಕ್ಷೇತ್ರ, ರಾಸಾಯನಿಕ ಶಾಸ್ತ್ರ, ಸಿಮೆಂಟ್, ವಿದ್ಯುತ್ ಇಲಾಖೆ, ತಂಬಾಕು, ಖನಿಜ ವಸ್ತು, ಉಪ್ಪಿನ ವ್ಯಾಪಾರ, ಬ್ಯಾಂಕ್ ನೌಕರಿ, ಫೈನಾನ್ಸ್, ಬಣ್ಣದ ವ್ಯಾಪಾರ. ಧನಸ್ಸು: ಅಧ್ಯಾಪಕರ ವೃತ್ತಿ, ಸಂಪಾದಕರು, ಕಮಿಷನ್ ವ್ಯಾಪಾರ, ದಲಾಲ ವ್ಯಾಪಾರ, ಶಿಕ್ಷಣ ವಿಭಾಗ. ಮಕರ: ವಿದ್ಯುತ್‌ಗೆ ಸಂಬಂಧಿಸಿದ ವ್ಯಾಪಾರ, ಎಲೆಕ್ಟ್ರಾನಿಕ್ಸ್, ಸಣ್ಣ ವ್ಯಾಪಾರ, ಮೆಷಿನರಿ ವಿಭಾಗ. ಕುಂಭ: ಸೆಟ್ಟಾ ವ್ಯಾಪಾರ, ಕಬ್ಬಿಣ, ಶಿಕ್ಷಣ, ರಾಜಕೀಯ, ಶೋಧನ ಕಾರ್ಯ, ಪತ್ತೆ ದಾರಿ ವಿಭಾಗ, ಅಧ್ಯಾಪಕರ ವೃತ್ತಿ, ಸಿಮೆಂಟ್, ಎಣ್ಣೆ, ಸಣ್ಣ ವ್ಯಾಪಾರ. ಮೀನ: ಹೋಟೆಲ್ ನಡೆಸುವುದು, ಅಧ್ಯಾಪಕರ ವೃತ್ತಿ, ನೀರಿಗೆ ಸಂಬಂಧಿಸಿದ ವ್ಯಾಪಾರ, ಸಂಪಾದನ ಕಲೆ, ಲೇಖನ ಬರೆಯುವುದು, ದಲಾಲ, ರಿಯಲ್ ಎಸ್ಟೇಟ್ ವ್ಯಾಪಾರ, ವಿಲಾಸಿ ವಸ್ತುಗಳ ವ್ಯಾಪಾರ.

ಸಾಂಸಾರಿಕ ಜೀವನದ ಸುಖಕ್ಕಾಗಿ ಮತ್ತು ಶುಕ್ರನ ದೋಷನಿವಾರಣೆಗಾಗಿ ಮಂತ್ರ ಮತ್ತು ತಂತ್ರ

ಸಾಂಸಾರಿಕ ಜೀವನದ ಸುಖಕ್ಕಾಗಿ ಮತ್ತು ಶುಕ್ರನ ದೋಷನಿವಾರಣೆಗಾಗಿ ಮಂತ್ರ ಮತ್ತು ತಂತ್ರ ನಿಜವಾದ ಮುತ್ತನ್ನು ತಗೆದುಕೊಂಡು ಬೆಳ್ಳಿಯಲ್ಲಿ ಸೇರಿಸಿ ಉಂಗುರಮಾಡಿಸಿ ಉಂಗುರವನ್ನು ಒಂದು ಹುಣ್ಣಿಮೆಯದಿನ ಸಂಜೆ ಒಂದು ಸಣ್ಣ ತಟ್ಟೆಯಲ್ಲಿ ಅಕ್ಕಿ ತಗೆದುಕೊಂಡು ಅದರಮೇಲೆ ಸಣ್ಣ ಬಟ್ಟಲಿನಲ್ಲಿ ಹಸಿಹಾಲಿಟ್ಟು ಆ ಹಾಲಿನಲ್ಲಿ ಬೆಳ್ಳಿ ಉಂಗುರ ಹಾಕಿ ಚಂದ್ರ ಮಂತ್ರದಿಂದ ಪೂಜಿಸಿ ಮೂರು ದಿನಗಳನಂತರ ಹಾಲಿನಿಂದ ತಗೆದು ತೊಳೆದು ಭಕ್ತಿಯಿಂದ ನಮಿಸಿ ತಮ್ಮ ಪತಿಯ / ಪತಿಯ ಕಿರು /ಉಂಗುರ ಬೆರ‍ಳಿಗೆ ಧರಿಸಲು ಕೊಡಬೇಕು ಜೊತೆಯಲ್ಲಿ ಈ ಕೆಳಗಿನ ಮಂತ್ರವನ್ನು ನಿತ್ಯ ಜಪಿಸುವುದು. ಓಂ ಶುಕ್ರಾಚಾರ್ಯಾಯ ವಿದ್ಮಹೇ ಭಕ್ತಿ ಭೂತಾಯ ಧೀಮಹೀ ತನ್ನೋ ಶುಕ್ರ ಪ್ರಚೋದಯಾತ್* ದಿನ ನಿತ್ಯ ಮೂರು ವೇಳೆ ೬ಸಲದಂತೆ ಚಿನ್ಮುದ್ರೆಯೊಂದಿಗೆ ಈ ಮಂತ್ರ ಜಪಿಸುವುದರಿಂದ ದಾಂಪತ್ಯ ವಿರಸ, ಗಂಡನ ವಶೀಕರಣ,ಆಸ್ತಿವಿವಾದ ಬಗೆಹರಿಸಲು ನಿಮ್ಮ ಎರಡು ಕೈಯಲ್ಲಿ ಮುದ್ರೆ ಹಿಡಿದು ನಿತ್ಯ ಜಪಿಸುವುದು ೬ದಿನ ಮಾಡುವುದರಲ್ಲಿ ನಿಮಗೆ ಅದರ ಫಲಿತಾಂಶ ತಿಳಿಯುತ್ತದೆ. ನಿಮ್ಮ ಶುಕ್ರನ ದೋಷ,ದಾರಿದ್ರ್ಯ ನಿವಾರಣೆಯಾಗುತ್ತದೆ. ಕೃಪೆ- ಅದೃಷ್ಟ ದರ್ಪಣ ಕಾರ್ಯಕ್ರಮ

ರಾಹು ಮತ್ತು ಶನಿ ದೋಷ ಪರಿಹಾರ

ರಾಹು ಮತ್ತು ಶನಿ ದೋಷ ಪರಿಹಾರ:- ಮನೆದೇವರಿಗೆ ಮೊದಲನೆಯದಾಗಿ ಪೂಜೆ ಮಾಡಿಸಿ.ನಂತರ ಮೊದಲದಿನ,೧೧ನೇದಿನ,೨೧ನೇದಿನ,೪೧ನೇ ದಿನ ಇದೇ ರೀತಿ ಮಾಡುವುದು.ನಿತ್ಯವು ದುರ್ಗಾದೇವಿಯ ಅಥವ ಪಾರ್ವತಿ ದೇವಿಯ ಶತನಾಮಾವಳಿಮತ್ತು ನವಗ್ರಹ ಸ್ತೋತ್ರ ವನ್ನು ಪಠಿಸುವುದು ಮತ್ತು ಮೊದಲದಿನ,೧೧ನೇದಿನ,೨೧ನೇದಿನ,೪೧ನೇ ದಿನಗಳಲ್ಲಿ ೧ ಸಿಪ್ಪೆ ಸಹಿತ ತೆಂಗಿನ ಕಾಯಿ,೧ಬೊಗಸೆ ಬಟಾಣಿ,೧ಬೊಗಸೆ ಕರಿ ಉದ್ದಿನಕಾಳು,೧ಬೊಗಸೆ ಕರಿ ಎಳ್ಳು,೧ಚೂರು ಸೀಸ(ಲೆಡ್)ಜೊತೆಗೆ ಒಂದು ರೂಪಾಯಿ,೧ಬೊಗಸೆ ಮೊಳೆ, ಇದ್ದಿಲು ೨೫೦ಗ್ರಾಂ(ಸಾದ್ಯವಾದಲ್ಲಿ ತಮ್ಮ ತೂಕದಷ್ಟು )ತಗೆದುಕೊಂಡು ಹರಿಯುವ ನೀರಲ್ಲಿ ತಲೆಗೆ ಮೂರು ಸುತ್ತು ಸುತ್ತಿ ನೀರಲ್ಲಿ ಬಿಡುವುದು.ಮೊದಲು ನೀರಲ್ಲಿ ಬಟ್ಟೆಯಲ್ಲೇ ಸ್ನಾನಮಾಡಿ ಬಟ್ಟೆ ಸಮೇತ ನೀರಲ್ಲಿ ಎಲ್ಲಾ ವಸ್ತುಗಳನ್ನು ಬಿಡುವುದು.ನೀರಲ್ಲಿ ಬಿಡುವಾಗ ನವಗ್ರಹಗಳಿಗೆ ನನ್ನ ಗ್ರಹದೋಷನಿವಾರಣೆ ಮಾಡಿರೆಂದು ಪ್ರಾರ್ಥಿಸಿಕೊಳ್ಳಬೇಕು ನಂತರ ಒಂದೊಂದೆ ವಸ್ತುಗಳನ್ನು ತಲೆಗೆ ತಿರುಗಿಸಿ ನೀರಲ್ಲಿ ಬಿಡುವುದು.

ಜಾತಕದಲ್ಲಿ ಅಭಿಚಾರ ಯೋಗ

ಜಾತಕದಲ್ಲಿ ಅಭಿಚಾರ ಯೋಗ ಶಾಸ್ತ್ರಿಗಳೇ ನನ್ನ ಮಗ ವಿಪರೀತ ಕಷ್ಟ ಪಡ್ತಾನೆ. ಹಗಲಿರುಳು ಆಟಕ್ಕೂ ಹೋಗದೆ ಓದ್ತಾನೆ. ಆದ್ರೆ ಅದೇಕೋ ಅವನ ವಿದ್ಯಾಭ್ಯಾಸದಲ್ಲಿ ಏಳ್ಗೆಯಾಗ್ತಾ ಇಲ್ಲ. ಏನಾದ್ರೂ ಮೆಮೊರಿ ಪ್ರಾಬ್ಲಂ ಅಂತಾ ಅವರಿವರಲ್ಲಿ ತೋರಿಸಿದೆ. ಒಂದಿಷ್ಟು ಔಷದೋಪಚಾರಾನೂ ಮಾಡಾಯ್ತು. ಆದ್ರೂ ಪ್ರಯೋಜನವಾಗಲಿಲ್ಲ. ಅವನ ಜಾತಕ ಕುಂಡಲೀನಾ ಒಮ್ಮೆ ನೋಡಿ... ಅಂತ ಜಾತಕವನ್ನು ಮುಂದಿಟ್ಟಳು. ಸುಶೀಲ ನೋಡೋಕೆ ಸ್ಫುರದ್ರೂಪಿ ಯುವಕ. 16ರ ವಯಸ್ಸು. ಅವನ ಕುಂಡಲಿಯನ್ನು ಕೂಲಂಕುಷವಾಗಿ ಪರಿಶೀಲಿಸಿ ನೋಡಿದೆ. ಜಾತಕದಲ್ಲಿ ಅಭಿಚಾರ ಯೋಗವಿತ್ತು. ಅದು ಜನ್ಮದಿಂದಲೇ ಬಂದ ಕಾರಣ, ಅವನ ವಿದ್ಯಾಭ್ಯಾಸಕ್ಕೆ ಹಿನ್ನಡೆ ಉಂಟಾಗಿತ್ತು. ಜನ್ಮ ಜಾತಕದಲ್ಲಿ ಆಭಿಚಾರ ಯೋಗದ ಬಗ್ಗೆ ತಿಳಿದುಕೊಳ್ಳುವ ಮುನ್ನ ಒಂದೆರಡು ಸಂಗತಿಗಳತ್ತ ಗಮನ ಹರಿಸೋಣ. ಆಭಿಚಾರದಲ್ಲಿ ಎರಡು ಬಗೆಗಳಿವೆ. ಅದೆಂದರೆ ಕ್ಷುದ್ರಾಭಿಚಾರ ಮತ್ತು ಮಹಾಭಿಚಾರ. ಪ್ರಶ್ನೆ ಕೇಳುವ ಮೂಲಕ ವ್ಯಕ್ತಿಯ ಮೇಲೆ ಆಭಿಚಾರ ಪ್ರಯೋಗ ಆಗಿದೆಯೇ ಇಲ್ಲವೇ ಎಂಬುದನ್ನು ತಿಳಿದುಕೊಳ್ಳಬಹುದು. ಜಾತಕದಲ್ಲಿ ಅಭಿಚಾರ ಜನ್ಮ ಕುಂಡಲಿಯ ಆರನೆ ಮನೆಯಲ್ಲಿರುವ ಗ್ರಹ ಮತ್ತು ಅದರ ವರ್ಣವನ್ನು ಗುರುತಿಸುವ ಮೂಲಕ ಆಭಿಚಾರ ದೋಷವನ್ನು ಪತ್ತೆ ಮಾಡಬಹುದು. ಯಾರ ಜಾತಕದಲ್ಲಿ ಬುಧನು ಬಾಧಕ ಸ್ಥಾನದಲ್ಲಿ ಇರುತ್ತಾನೋ ಅವನು ಅಭಿಚಾರ ದೋಷದಿಂದ ಬಳಲುತ್ತಾನೆ. ಒಂದು ವೇಳೆ ಜಾತಕನ ಕುಂಡಲಿಯಲ್ಲಿ ಅಭಿಚಾರ ದೋಷವಿದ್ದರೂ ಇತರೆ ಸ್ಥಾನಗಳು ಶುಭಸ್ಥಾನದಲ್ಲಿದ್ದರೆ ಅಭಿಚಾರ ದೋಷ ಕಾಣಬರುವುದಿಲ್ಲ. ಜಾತಕದಲ್ಲಿ ಕೆಳಕಂಡ ಗ್ರಹಗಳು ಸ್ಥಾನದ ಆಧಾರದ ಮೇಲೆ ಅಭಿಚಾರ ಯೋಗವನ್ನು ಲೆಕ್ಕಾಚಾರ ಹಾಕಬಹುದು. ಅದರಲ್ಲೂ ಷಟ್ ಸ್ಥಾನವು ಮುಖ್ಯವಾಗಿದೆ. ಜಾತಕದಲ್ಲಿ ಅಭಿಚಾರ ದೋಷವನ್ನು ಲೆಕ್ಕಾಚಾರ ಹಾಕುವಾಗ, ವಿಶೇಷವಾಗಿ ಕುಜ ಸ್ಥಾನವನ್ನು ಗಮನಿಸಬೇಕು. ಆರು ಮತ್ತು ಎಂಟನೆಯ ಸ್ಥಾನದಲ್ಲಿ ಯಾವ ಗ್ರಹಗಳಿವೆ ಅದರ ಅಧಿಪತಿಗಳೇನು ಎಂಬುದನ್ನು ಗಮನಿಸಬೇಕು. ಇದರ ಆಧಾರದ ಮೇಲೆ ಜಾತಕನಿಗೆ ಮಹಾ ಅಭಿಚಾರ ಅಥವಾ ಕ್ಷುದ್ರ ಅಭಿಚಾರ ದೋಷದಿಂದ ಪೀಡಿಸಲ್ಪಟ್ಟಿದ್ದಾನೆಯೇ ಎಂಬುದನ್ನು ಲೆಕ್ಕ ಹಾಕಬಹುದು. ಆರನೆ ಮನೆಯಲ್ಲಿರುವ ಗ್ರಹ ಅದರ ಬಣ್ಣ, ಸ್ವರೂಪದ ಆಧಾರದ ಮೇಲೆ ಯಾವ ವರ್ಣದವರಿಂದ ಅಭಿಚಾರ ಪ್ರಯೋಗ ಆಗಿದೆ, ಆತನ ಸ್ಥಳವೆಲ್ಲಿಯದು ಎಂಬುದನ್ನೂ ತಿಳಿದುಕೊಳ್ಳಬಹುದು. ಒಂದು ವೇಳೆ ಷಷ್ಠಮ ಸ್ಥಾನದಲ್ಲಿ ಗುರುವಿದ್ದರೆ ಮಾಟಮಂತ್ರದಂತಹ ಅಭಿಚಾರ ವಿದ್ಯೆಗಳಲ್ಲಿ ಪರಿಣತನೂ, ಶತ್ರುಗಳನ್ನು ನಾಶಮಾಡುವವನೂ,ಅತ್ಯಂತ ಆಲಸಿಯೂ ಆಗುವ ಲಕ್ಷಣಗಳನ್ನು ಹೊಂದಿರುತ್ತಾನೆ. ಜಾತಕದಲ್ಲಿ ಅಭಿಚಾರ ದೋಷವಿದೆ ಅಥವಾ ನೀವು ಅಭಿಚಾರ ಪ್ರಯೋಗಕ್ಕೆ ಒಳಗಾಗಿದ್ದೀರೆಂದಾಕ್ಷಣ ಹೆದರುವ ಅಗತ್ಯವಿಲ್ಲ. 'ಪ್ರತಿ ಪಕ್ಷ ನಾಶಿನಿ ಪ್ರತಿ ಮಂತ್ರ ಭಕ್ಷಿಣಿ' ಆದ ಪ್ರತ್ಯಂಗಿರಿ ದೇವಿಯ ಆರಾಧನೆಯಿಂದ ದೋಷ ಪರಿಹಾರವಾಗುತ್ತದೆ. ಪ್ರತ್ಯಂಗಿರಾ ದೇವಿಯನ್ನು ಅಥರ್ವಣ ಭದ್ರಕಾಳಿ ಅಥವಾ ನಿಕುಂಭಿಲಾ ಎಂತಲೂ ಕರೆಯುತ್ತಾರೆ. ದೋಷ ಪರಿಹಾರಕ್ಕಾಗಿ ಪ್ರತ್ಯಂಗಿರಾ ದೇವತೆಯ ಉಪಾಸನೆಯನ್ನು ಅಮಾವಾಸ್ಯೆ, ಹುಣ್ಣಿಮೆಯ ದಿನಗಳಂದು ಮಾಡಬೇಕು. ಅದರಲ್ಲೂ ವಿಶೇಷವಾಗಿ ವಿಷಚೂರ್ಣ ಪ್ರಯೋಗ, ಭಾನಾಮತಿ ಪ್ರಯೋಗ ಮತ್ತಿತರ ಋಣಬಾಧೆಗಳಿಂದ ನರಳುತ್ತಿರುವವರೂ ದೋಷ ಪರಿಹಾರಾರ್ಥವಾಗಿ ಪ್ರತ್ಯಂಗಿರಾ ದೇವಿಯ ಪೂಜೆಯನ್ನು ಮಾಡಬಹುದು. ಹೋಮಕ್ಕೆ ಕೆಂಪು ಮೆಣಸಿನಕಾಯಿ, ದಾಳಿಂಬೆ ಬೀಜ ಮತ್ತು ಕೆಲ ಗಿಡ ಮೂಲಿಕೆಗಳನ್ನು ಬಳಸುವ ಪದ್ಧತಿಯಿದೆ. ಸಮಸ್ಯೆ ಪರಿಹಾರಕ್ಕೊಂದು ಸೂತ್ರ * ಪ್ರತಿನಿತ್ಯ ಪ್ರತ್ಯಂಗಿರಾ ಮಂತ್ರ ಜಪ ಮಾಡಿದರೆ ಶತ್ರುಗಳು ಕ್ರಮವಾಗಿ ಕಡಿಮೆಯಾಗುತ್ತಾರೆ. * ಕಳಶ ಸ್ಥಾಪನೆ ಮಾಡಿ ಅಕ್ಕಿ ರಾಶಿಯಲ್ಲಿ ಪ್ರತ್ಯಂಗಿರ ಯಂತ್ರ ಇಟ್ಟು ಪ್ರಾಣ ಪ್ರತಿಷ್ಠೆ ಮಾಡಿ ಆವರಣ ಪೂಜೆ, ಸಹಸ್ರ ನಾಮಾವಳಿಯಿಂದ ಅರ್ಚನೆ ಮಾಡಿ 1.25 ಲಕ್ಷ ನಾರಾಯಣೆ ಪ್ರತ್ಯಂಗಿರ ಜಪ ಮಾಡಿ. ಬಿಳಿ ಎಕ್ಕದ ಸವಿತ್ತು, ಮೆಣಸು, ತುಪ್ಪ, ಎಳ್ಳು, ಹೋಮ ಮಾಡಿದರೆ ದುಷ್ಟಶಕ್ತಿ ನಿವಾರಣೆಯಾಗುತ್ತದೆ. -ಅಶ್ವತ್ಥನಾರಾಯಣ ಗಡಿದಂ

ಅಗ್ನಿ ಹೋತ್ರ ಮಾಡುವ ವಿಧಾನ

ಅಗ್ನಿ ಹೋತ್ರ ಮಾಡುವ ವಿಧಾನ (ಬೆರಣಿಯನ್ನು ತುಪ್ಪದಲ್ಲಿ ನೆನೆಸಿ ಮೇಣದ ಬತ್ತಿಯಲ್ಲಿ ಹಚ್ಚಿಕೊಂಡು ಈ ಮಂತ್ರ ಹೇಳಿ ಹೋಮಕುಂಡಕ್ಕೆ ಬೆಂಕಿ ಹಚ್ಚಿದ ಬೆರಣಿಯನ್ನು ಇಡಬೇಕು.) ಓಂ ಮಹಾಜ್ವಾಲಾಯ ವಿದ್ಮಹೇ ಅಗ್ನಿಜ್ವಾಲಾಯ ಧೀಮಹೀ ತನ್ನೋ ಅಗ್ನಿ ಪ್ರಚೋದಯಾತ್ ನಂತರ ಈ ಮಂತ್ರವನ್ನು ೩ಬಾರಿ ಜಪಿಸಿ ಸ್ವಾಹಾ ಹೇಳುವಾಗ ತುಪ್ಪವನ್ನು ಹೋಮಕುಂಡಕ್ಕೆ ಹಾಕಬೇಕು ಭೂಸ್ವಾಹಾಃ ಅಗ್ನಿಯೇ ಇದಂ ನಮಮ ಭುವಸ್ವಾಹಾಃ ವಾಯುವೇ ಇದಂ ನಮಮ ಸ್ವಸ್ವಾಹಾಃ ಸೂರ್ಯಾಯ ಇದಂ ನಮಮ ಭೂರ್ಭುವಸ್ವಸ್ವಾಹಾಃ ಪ್ರಜಾಪತಯೇ ಇದಂ ನಮಮ ಸೂರ್ಯಾಯ ಸ್ವಾಹಃ ಸೂರ್ಯಾಯ ಇದಂ ನಮಮ (ಅಕ್ಕಿ ಮತ್ತು ತುಪ್ಪ ಬೆರೆಸಿದ ಒಂದುಬಾಗ ಅಕ್ಕಿಯನ್ನು ಹೋಮಕ್ಕೆ ಹಾಕುವುದು) ಪ್ರಜಾಪತಯೇ ಸ್ವಾಹಾಃ ಪ್ರಜಾಪತಯೇ ಇದಂ ನಮಮ ಅಗ್ನಿಯೇ ಸ್ವಾಹಾಃ ಅಗ್ನಿಯೇ ಇದಂ ನಮಮ (ಮತ್ತೊಂದುಬಾಗ ತುಪ್ಪ ಬೆರೆಸಿದ ಅಕ್ಕಿಯನ್ನು ಅಗ್ನಿ ಕುಂಡದಲ್ಲಿ ಹಾಕುವುದು) ಇಷ್ಟಾರ್ಥ ಸಿದ್ದಿಗಾಗಿ ನಿತ್ಯ ಮಾಡಿ ನಿತ್ಯ ಸೂರ್ಯನ ಉದಯ /ಅಸ್ತ ಗಳನ್ನು ನೋಡಿಕೊಂಡು ಸರಿಯಾದ ಕಾಲದಲ್ಲಿ ಮಾಡಿರಿ ಇದರಿಂದ ನಿಮ್ಮ ರಕ್ತಶುದ್ದಿ ಮಾಡುತ್ತದೆ,ಪ್ಯಾರಾಲಿಸೀಸ್ ನಿವಾರಣೆ ಮಾಡುತ್ತದೆ,ಚರ್ಮರೋಗನಿವಾರಣೆ ಮಾಡುತ್ತದೆ,ದುಷ್ಟಶಕ್ತಿಗಳನ್ನು ದೂರಮಾಡುತ್ತದೆ,ಇಷ್ಟಾರ್ಥವನ್ನು ನೆರವೇರಿಸುತ್ತದೆ ವಾತಾವರಣವನ್ನು ಶುದ್ದಿಗೊಳಿಸುತ್ತದೆ,ಮಕ್ಕಳಲ್ಲಿ ಶದ್ದೆಯನ್ನು ಚುರುಕುತನವನ್ನು ಹೆಚ್ಚಿಸುತ್ತದೆ,ರೋಗನಿರೋದಕ ಶಕ್ತಿಯನ್ನು ಉಂಟುಮಾಡುತ್ತದೆ.ಅಸ್ತಮ ನಿವಾರಣೆ,ಚರ್ಮರೋಗಗಳನಿವಾರಣೆ, ಖಚಿತವಾಗಿ ಆಗುತ್ತದೆ.ದೇಹ ಮತ್ತು ಮನೆಯನ್ನು ಕವಚದಂತೆ ಕೆಲಸನಿರ್ವಹಿಸುತ್ತದೆ. ಬೇಕಾದ ಸಾಮಗ್ರಿಗಳು:- ತಾಮ್ರದ ಅಗ್ನಿ ಕುಂಡ,ತಾಮ್ರದ ಸಣ್ಣ ತಟ್ಟೆ, ತಾಮ್ರದ ಚಿಮುಟ,ತಾಮ್ರದ ಚಮಚ, ಅಕ್ಕಿ,ಆಕಳ ಬೆರಣಿ,ಆಕಳತುಪ್ಪ,ಬೆಂಕಿಪೊಟ್ಟಣ,ಮೇಣದ ಬತ್ತಿ. ಬೆಳಗ್ಗೆ ಸಂಜೆ

ದೀಕ್ಷಾ ಮಂತ್ರಗಳು

ದೀಕ್ಷಾ ಮಂತ್ರಗಳು ಪಾಪನಾಶಕ್ಕೆ ಓಂ ದಾಮೋದರಾಯ ಮಹಾಪುರುಷಾಯ ಮಮ ಪಾಪಂ ಹನ ಹನ ಸ್ವಾಹಾ ಚಿನ್ಮುದ್ರೆ ಉತ್ತರಾಭಿಮುಖ ೧೦೮ಸಲ ನಿತ್ಯ ೧೦೮ ದಿನಗಳಕಾಲ ಜಪಿಸಿ ಅಮೃತ ಮೃತ್ಯುಂಜಯ ಮಂತ್ರ ಓಂ ಹ್ರೌಂ ಹ್ರೀಂ ಜುಂ ಸಃ ಪಶುಪತಯೇ ಶಿವಾಯ ಮಹದೇವಾಯ ಮೃತ್ಯುಂಜಯಾಯ ಸಃ ಜುಂ ಹ್ರೀಂ ಹ್ರೌಂ ಓಂ ಸ್ವಾಹಾ (ಎಲ್ಲಾರೀತಿಯ ಅಪಮೃತ್ಯು ನಿವಾರಣೆಗಾಗಿ ೧೦೮ಸಲ ಚಿನ್ಮುದ್ರೆಯೊಂದಿಗೆ ಉತ್ತರಾಭಿಮುಖವಾಗಿ ಕುಳಿತು ಜಪಿಸಿರಿ ದೇಹದಲ್ಲಿನ ಎಲ್ಲಾ ಚಕ್ರಗಳಶುದ್ದಿಗಾಗಿ) ಸಪ್ತ ಚಕ್ರಗಳ ಭೀಜಮಂತ್ರಗಳು ಓಂ ಹ್ರೌಂ ಹ್ರೀಂ ಜುಂ ಸಃ ಲಂ ವಂ ರಂ ಯಂ ಹಂ ಶಂ ಸಂ ಕ್ಷಂ ಸೋಹಂ ಶಂಕರಾಯ ಸ್ವಾಹಾ (೧೦೮ಸಲ) ಮೂಲಾದಾರ ಚಕ್ರ-ಲಂ ಸ್ವಾದಿಷ್ಟಾನ ಚಕ್ರ ವಂ ಮಣಿಪುರ ಚಕ್ರ-ರಂ ಅನಾಹತಚಕ್ರ-ಯಂ ವಿಶುದ್ದಚಕ್ರ-ಹಂ ಆಗ್ನಾ ಚಕ್ರ ಶಂ ಸಹಸ್ರಾರಚಕ್ರ-ಸಂ ಕ್ಷಂ ಸಪ್ತ ಚಕ್ರಗಳ ಮುದ್ರೆಗಳು ಬೀಜಾಕ್ಷರ ಮಂತ್ರಗಳು ತಂತ್ರಗಳು: ದೇಹದ ಸರ್ವಾಂಗಗಳಿಗೆ ಸರ್ವರೋಗಕ್ಕೆ ಸಪ ಚಕ್ರಗಳಿಗೆ ಹುಣ್ಣಿಮೆ ಅಥವ ಅಮಾವಾಸ್ಯೆ ಯಂದು ಮದ್ಯರಾತ್ರಿಸಮಯದಲ್ಲಿ ಅಂದರೆ ರಾತ್ರಿ ೧೨ ಗಂಟೆಯಿಂದ ೦೧ ಗಂಟೆಯವರೆಗೆ ಈ ಸ್ಮಯದಲ್ಲಿ ಚೆನ್ನಾಗಿ ಹಣ್ಣಾದ ೩ ನಿಂಬೆಹಣ್ಣುಗಳನ್ನು ತಗೆದುಕೊಂಡು ಒಂದನ್ನು ನಿಮ್ಮ ಗುದದ್ವಾರದಬಳಿ ಇಟ್ಟುಕೊಂಡು ಕುಳಿತುಕೊಳ್ಳಿ ಮತ್ತೆರಡನ್ನು ನಿಮ್ಮ ಎರಡು ತೊಡೆಯಮೇಲೆ ಒಂದೊಂದು ಇಟ್ಟುಕೊಳ್ಳಿ ಜೊತೆಗೆ ಚಿನ್ಮುದ್ರೆಯೊಂದಿಗೆ ಸಪ್ತ ಚಕ್ರಮಂತ್ರವನ್ನು ೧೦೮ಸಲ ಜಪಿಸಿರಿ ನಂತರ ಈ ನಿಂಬೆಹಣ್ಣುಗಳನ್ನು ಹರಿವನೀರಲ್ಲಿ ಬಿಡುವುದು.ಒಂದುವೇಳೆ ಆಗ ನೀರಲ್ಲಿ ಬಿಡಲು ಅನುಕೂಲವಿಲ್ಲದವರು ಅದನ್ನು ಒಂದು ನೀರಿನ ಲೋಟ/ ಪಾತ್ರೆಯಲ್ಲಿ ಹಾಕಿ ಜೋಪಾನವಾಗಿ ಮನೆಯ ಹೊರಗೆ ಇಟ್ಟು ಆದಷ್ಟು ಬೇಗ ಅದನ್ನು ಹರಿವನೀರಿಗೆ ಹಾಕಬೇಕು. ಇದು ಅಮವಾಸ್ಯೆದಿನ ರಾತ್ರಿಯಲ್ಲಿ ಮಾಡಬೇಕಾದ ತಂತ್ರ ಒಂದು ವೇಳೆ ರಾತ್ರಿಯಲ್ಲಿ ಮಾಡಲಾಗದವರು ಬೆಳಗಿನ ಸಮಯದಲ್ಲಿ ಅಮಾವಾಸ್ಯೆ ತಿಥಿ ಇರುವಾಗ ದೀಕ್ಷಾಮಂತ್ರದಿಂದ ಒಂದು ನಿಂಬೆಯನ್ನು ಅಭಿಮಂತ್ರಿಸಿ ಅದನ್ನು ಇಳೆತಗೆದು ಯಾವುದಾದರು ನಿರ್ಜನಪ್ರದೇಶದಲ್ಲಿ ಹಾಕಬೇಕು. ನವನಾಥರ ಮಂತ್ರಗಳು ಓಂ ಚೈತನ್ಯ ದತ್ತಾತ್ರೇಯಾಯ ನಮಃ ಓಂ ಚೈತನ್ಯ ಮತ್ಸೇಂದ್ರ ನಾಥಾಯ ನಮಃ ಓಂ ಚೈತನ್ಯ ಗೋರಕ್ಷ ನಾಥಾಯ ನಮಃ ಓಂ ಚೈತನ್ಯ ಕಾನಿಫ ನಾಥಾಯ ನಮಃ ಓಂ ಚೈತನ್ಯ ಜಾಲಂದರ ನಾಥಾಯ ನಮಃ ಓಂ ಚೈತನ್ಯ ಚರ್ಪಟ ನಾಥಾಯ ನಮಃ ಓಂ ಚೈತನ್ಯ ನಾಗ ನಾಥಾಯ ನಮಃ ಓಂ ಚೈತನ್ಯ ಭರ್ತರಿ ನಾಥಾಯ ನಮಃ ಓಂ ಚೈತನ್ಯ ರೇವಣ್ಣ ನಾಥಾಯ ನಮಃ ಓಂ ಚೈತನ್ಯ ಗಹನಿ ನಾಥಾಯ ನಮಃ ಓಂ ಓಂ ದಂ ವಂ ತಂ ಓಂ ಓಂ ಓಂ ಶ್ರೀ ದತ್ತಗೋರಕ್ಷ ಸರ್ವ ನಾಥಾಯ ನಮಃ ತ್ರಿದೋಷ ನಿವಾರಣೆಗೆ ಆರೋಗ್ಯ ಸಂರಕ್ಷಣ ಸುದರ್ಶನ ಮಂತ್ರ ಓಂ ನಮೋ ಭಗವತೇ ಸುದರ್ಶನಾಯ ಓಂ ನಮೋ ಭಗವತೇ ಮಹಾ ಸುದರ್ಶನಾಯ ಮಹಾಚಕ್ರಾಯ ಮಹಾಜ್ವಾಲಾಯ ಕರ್ಮ ಬಂಧ ವಿಮೋಚನಾಯ ಪಾದೋದಿ ಮಸ್ತಕಂ ಪರಿಹಂತಂ ವಾತ ಜನಿತಂ ರೋಗಾಣಾಂ ಪಿತ್ತ ಜನಿತ ರೋಗಾಣಾಂ ಕಫ ಜನಿತ ರೋಗಾಣಾಂ ಧಾತು ಸಂಕಲಿತ ಉದ್ಬವ ನಾನಾ ವಿಕಾರ ರೋಗಾಣಾಂ ನಾಶಯ ನಾಶಯ ಪ್ರಶಮಯ ಪ್ರಶಮಯ ಆರೋಗ್ಯಂ ದೇಹಿ ದೇಹಿ ಓಂ ಸಹಸ್ರಾರ ಹುಂ ಫಟ್ (೧೦೮ ಸಲ ನಿತ್ಯ ಉತ್ತರಾಭಿಮುಖ ಚಿನ್ಮುದ್ರೆಯೊಂದಿಗೆ ಜಪಿಸಿ ಸತತ ೧೦೮ ದಿನಗಳವರೆಗೆ) ದೇಹದ ಸಕಲ ರೋಗಗಳು ನಿವಾರಣೆಯಾಗುತ್ತಾ ಹೋಗುತ್ತವೆ. ವಿದ್ಯೆ/ಜ್ಞಾನಕ್ಕೆ ಓಂ ಹ್ರೀಂ ಸ್ಸೌಃ ಹಯಗ್ರೀವಾಯ ವಿದ್ಯಾರಾಜಾಯ ವಿಷ್ಣುವೇ ಸ್ವಾಹಾ

ವರಮಹಾಲಕ್ಷ್ಮಿ ವ್ರತ

ವರಮಹಾಲಕ್ಷ್ಮಿ ವ್ರತ - ಹೆಸರೇ ಸೂಚಿಸುವಂತೆ ವರಗಳನ್ನು ಕೊಡುವ ಲಕ್ಷ್ಮಿ ದೇವಿಯ ವ್ರತ ಇದು.ಈ ವ್ರತವನ್ನು ಶ್ರಾವಣ ಮಾಸದ ಶುಕ್ಲ ಪಕ್ಷದ ಶುಕ್ರವಾರ ಮಾಡುತ್ತಾರೆ. ಪೂರ್ಣಿಮೆಯ ಹಿಂದಿನ ಶುಕ್ರವಾರ ಮಾಡಬೇಕು. ಕೆಲವರ ಮನೆಯಲ್ಲಿ ವ್ರತ ಮಾಡುವ ಪದ್ಧತಿಗೆ ಇರುತ್ತೆ, ವ್ರತ ಮಾಡುವ ಪದ್ಧತಿ ಇಲ್ಲದಿದ್ದರೆ ಲಕ್ಷ್ಮಿ ದೇವಿಗೆ ಪೂಜೆ ಮಾಡಿ. ಈ ದಿನ ಬೆಳಿಗ್ಗೆ ಎದ್ದು ಮಂಗಳ ಸ್ನಾನ ಮಾಡಬೇಕು. ವ್ರತ ಮಾಡುವವರು ಕಲಶ ಸ್ಥಾಪನೆ ಮಾಡಬೇಕು. ಪೂಜೆ ಮಾಡುವ ಸ್ಥಳವನ್ನು ಸ್ವಚ್ಚಗೊಳಿಸಿ, ಬಾಳೆ ಕಂದು, ಮಾವಿನ ಎಲೆಗಳಿಂದ ಸಿಂಗರಿಸಿ. ಅಷ್ಟದಳ ಪದ್ಮದ ರಂಗವಲ್ಲಿ ಸಾಮನ್ಯವಾಗಿ ಎಲ್ಲ ಪೂಜೆಗಳಿಗೂ ಉಪಯೋಗಿಸುವ ಸಾಮಗ್ರಿಗಳು: ರಂಗೋಲಿ, ಮಣೆ / ಮಂಟಪ ದೇವರ ವಿಗ್ರಹ, ದೇವರ ಪಟ ನಂದಾ ದೀಪ, ದೀಪದ ಕಂಭ, ತುಪ್ಪ, ಎಣ್ಣೆ, ದೀಪಕ್ಕೆ ಹಾಕುವ ಹತ್ತಿ ಬತ್ತಿ ಘಂಟೆ, ಪಂಚಪಾತ್ರೆ, ಉದ್ದರಣೆ, ಅರ್ಘ್ಯ ಪಾತ್ರೆ, ನೀರು ಪೂಜಾ ವಿಧಾನ ಇರುವ ಪುಸ್ತಕ /ಕ್ಯಾಸೆಟ್ / ಸಿ.ಡಿ. ಅರಿಶಿನ, ಕುಂಕುಮ, ಮಂತ್ರಾಕ್ಷತೆ ಶ್ರೀಗಂಧ, ಊದಿನ ಕಡ್ಡಿ ಹೂವು, ಪತ್ರೆ, ಗೆಜ್ಜೆ ವಸ್ತ್ರ ಪಂಚಾಮೃತ - ಹಾಲು, ಮೊಸರು, ಸಕ್ಕರೆ, ತುಪ್ಪ, ಜೇನುತುಪ್ಪ ವೀಳ್ಯದ ಎಲೆ, ಅಡಿಕೆ, ಹಣ್ಣು , ತೆಂಗಿನಕಾಯಿ ನೈವೇದ್ಯ - ಪಾಯಸ, ಹುಗ್ಗಿ, ಅನ್ನ, ಕೋಸಂಬರಿ , ಇತ್ಯಾದಿ ಹಲಗಾರತಿ, ಕರ್ಪೂರ, ಮಂಗಳಾರತಿ ಬತ್ತಿ ಆರತಿ ತಟ್ಟೆ, ಸೊಡಲು, ಹೂಬತ್ತಿ, ಕೆಲವು ಪೂಜೆಗಳಲ್ಲಿ ಅಧಿಕವಾಗಿ ಇನ್ನಷ್ಟು ಸಾಮಗ್ರಿಗಳನ್ನು ಉಪಯೋಗಿಸುತ್ತೀವಿ : ಕಳಶ, ಅರಿಶಿನದ ಕೊನೆ, ಜನಿವಾರ, ಅರಿಶಿನ ದಾರ ಮರದ ಜೊತೆ / ಬಾಗಿನ ಬಳೆ, ಬಿಚ್ಚೋಲೆ, ಕನ್ನಡಿ, ಕಪ್ಪು, ರವಿಕೆ ಬಟ್ಟೆ ಸೋಬಲಕ್ಕಿ, ಉಪಾಯನ ದಾನ ನವಗ್ರಹ ಮಂಡಲ ......ಇತ್ಯಾದಿ ಧ್ಯಾನ - ನೀವು ಪೂಜೆ ಮಾಡುತ್ತಿರುವ ದೇವರನ್ನು ಭಕ್ತಿಯಿಂದ ಧ್ಯಾನ ಮಾಡಿ ಆವಾಹನೆ ಮಾಡುವುದು. ಸಾಮಾನ್ಯವಾಗಿ ಷೋಡಶೋಪಚಾರದಿಂದ ಪೂಜೆ ಮಾಡಿ ಅಂತ ನೀವು ಕೇಳಿರಬಹುದು. ಷೋಡಶ ಅಂದರೆ 16. ಹದಿನಾರು ಬಗೆಯಿಂದ ದೇವರಿಗೆ ಉಪಚಾರ ಮಾಡಿ ಎಂದರ್ಥ. ಇವುಗಳ ವಿವರ ಕೆಳಗಿದೆ: 1.ಆವಾಹನೆ - ಅಂದರೆ ಆಹ್ವಾನ . ದೇವರನ್ನು ನಿಮ್ಮ ಮನೆಗೆ ಅಥವಾ ಪೂಜೆ ಮಾಡುತ್ತಿರುವ ಜಾಗಕ್ಕೆ ಆಹ್ವಾನ ಮಾಡುವುದು. 2.ಆಸನ - ಅಂದರೆ ಕುಳಿತುಕೊಳ್ಳುವ ಜಾಗ . ದೇವರ ಪ್ರತಿಮೆಯನ್ನು ಇಡುವ ವೇದಿಕೆ/ ಮಣೆ ಮೇಲೆ ಆಸೀನ ಮಾಡಿಸುವುದು. 3.ಪಾದ್ಯ - ಕಾಲು ತೊಳೆದುಕೊಳ್ಳುವುದಕ್ಕೆ ನೀರು ಕೊಡುವುದು. 4.ಅರ್ಘ್ಯ - ಕೈ ತೊಳೆದುಕೊಳ್ಳುವುದಕ್ಕೆ ನೀರು ಕೊಡುವುದು. 5.ಆಚಮನ - ಕುಡಿಯುವುದಕ್ಕೆ ನೀರು ಕೊಡುವುದು. 6.ಸ್ನಾನ - ಶುದ್ಧೋದಕ (ನೀರು) ಮತ್ತು ಪಂಚಾಮೃತದಿಂದ ಸ್ನಾನ ಮಾಡಿಸುವುದು. 7.ವಸ್ತ್ರ - ಧರಿಸಲು ಉಡುಪು ಕೊಡುವುದು . ಗೆಜ್ಜೆವಸ್ತ್ರಗಳನ್ನೂ ದೇವರಿಗೆ ಇಡುವುದು . ಜೊತೆಗೆ ಉಪವೀತ (ಜನಿವಾರ), ಆಭರಣವನ್ನು (ಬಳೆ-ಬಿಚ್ಚೋಲೆ )ಸಮರ್ಪಿಸುವುದು. 8.ಹರಿದ್ರ, ಕುಂಕುಮ, ಗಂಧ, ಅಕ್ಷತ - ಅರಿಶಿನ , ಕುಂಕುಮ, ಶ್ರೀಗಂಧ , ಮಂತ್ರಾಕ್ಷತೆಯನ್ನು ದೇವರಿಗೆ ಅರ್ಪಿಸುವುದು. 9.ಪುಷ್ಪ ಮಾಲ - ಹೂವು, ಪತ್ರೆಗಳಿಂದ ದೇವರಿಗೆ ಅಲಂಕಾರ ಮಾಡುವುದು. 10. ಅರ್ಚನೆ/ಅಷ್ಟೋತ್ತರ - ನೂರೆಂಟು ನಾಮಗಳಿಂದ ದೇವರನ್ನು ಸ್ಮರಣೆ ಮಾಡುವುದು. 11.ಧೂಪ - ಪರಿಮಳಯುಕ್ತವಾದ ಧೂಪವನ್ನು ಅರ್ಪಿಸುವುದು. 12.ದೀಪ - ದೀಪ ಸಮರ್ಪಣೆ ಮಾಡುವುದು. 13.ನೈವೇದ್ಯ, ತಾಂಬೂಲ - ದೇವರಿಗೆ ವಿಧ ವಿಧ ಭಕ್ಷ್ಯಗಳ ಭೋಜನ ಅರ್ಪಿಸುವುದು . ಊಟದ ನಂತರ ವೀಳೆಯ, ಅಡಿಕೆ, ತೆಂಗಿನಕಾಯಿ ತಾಂಬೂಲ ಕೊಡುವುದು. 14. ನೀರಾಜನ - ಕರ್ಪುರದಿಂದ ಮಂಗಳಾರತಿ ಮಾಡುವುದು. 15. ನಮಸ್ಕಾರ - ಪ್ರದಕ್ಷಿಣೆ ಮಾಡಿ ದೇವರಿಗೆ ಸಾಷ್ಟಾಂಗ ನಮಸ್ಕಾರ ಮಾಡುವುದು. 16. ನಮಸ್ಕಾರ - ನಿಮ್ಮ ಇಷ್ಟಗಳನ್ನು ನಡೆಸಿ ಕೊಡು ಎಂದು ದೇವರಲ್ಲಿ ಅರಿಕೆ / ಪ್ರಾರ್ಥನೆ ಮಾಡುವುದು. ಪೂಜೆಯ ನಂತರದೇವರು ಅನುಗ್ರಹಿಸಿರುವ ಅರಿಶಿನ, ಕುಂಕುಮ, ನೈವೇದ್ಯವನ್ನು ಪ್ರಸಾದ ರೂಪವಾಗಿ ಸ್ವೀಕಾರ ಮಾಡುವುದು. ಹೀಗೆ ಕ್ರಮವಾಗಿ ಪೂಜೆ ಮಾಡಿ ದೇವರನ್ನು ಸಂತೃಪ್ತಿ ಪಡಿಸಿದರೆ, ಭಗವಂತನು ತನ್ನ ಕೃಪೆಯನ್ನು ನಮ್ಮ ಮೇಲೆ ಅಪಾರವಾಗಿ ಅನುಗ್ರಹಿಸುತ್ತಾನೆ :) ಇವುಗಳೊಂದಿಗೆ ಇನ್ನು ಹಲವಾರು ವಸ್ತುಗಳ ಬಳಕೆ ಮಾಡಬಹುದು ಮುಖ್ಯವಾಗಿ ಅಲಂಕಾರ ಮಾಡುವುದಕ್ಕೆ. ಮಾರುಕಟ್ಟೆಯಲ್ಲಿ ಅನೇಕ ವಿಧವಾದ ಅಲಂಕಾರಿಕ ಸಾಮಾನು ದೊರೆಯುತ್ತದೆ . ಇದು ಪ್ರತಿಯೊಬ್ಬರ ಆಸಕ್ತಿ ಮತ್ತು ಅಭಿರುಚಿ ಮೇಲೆ ಅವಲಂಭಿಸಿದೆ. ಹಾಕಬೇಕು. ಇದರ ಮೇಲೆ ಕಲಶ ಸ್ಥಾಪಿಸಬೇಕು. ಒಂದು ಚೊಂಬಿನಲ್ಲಿ ಸ್ವಲ್ಪ ನೀರು/ಅಕ್ಕಿ ಹಾಕಿ, ಜೊತೆಗೆ ಅರಿಶಿನದ ಗೊನೆ, ಅಡಿಕೆ, ಬೆಳ್ಳಿ ನಾಣ್ಯ / ಯಾವುದೇ ನಾಣ್ಯ(coin) ಹಾಕಿ.ಅದರ ಮೇಲೆ ಅರಿಶಿನ ಕುಂಕುಮ ಸವರಿದ ತೆಂಗಿನಕಾಯಿ ಇಟ್ಟು, ಇದರ ಮೇಲೆ ಮುಖದ ಆಕಾರದ ಚಿತ್ರ ಬರೆಯಬಹುದು ಅಥವಾ ಲಕ್ಷ್ಮಿ ದೇವಿಯ ಬೆಳ್ಳಿಯ ಮುಖವಾಡ ಇದ್ದರೆ ಅದನ್ನು ಈ ತೆಂಗಿನಕಾಯಿಗೆ ಜೋಡಿಸಿ. ಕಳಶದ ಬಾಯಿಗೆ ವೀಳ್ಯದ ಎಲೆ , ಮಾವಿನ ಎಲೆಗಳನ್ನು ಇಡಬೇಕು. ಈ ಕಳಶವನ್ನು ಅಕ್ಕಿ ಹರಡಿರುವ ತಟ್ಟೆಯ ಮೇಲೆ ಇಡಬೇಕು. ಈ ತಟ್ಟೆಯನ್ನು ಅಷ್ಟದಳ ರಂಗೋಲಿಯ ಮೇಲೆ ಇಡಬೇಕು. ಈ ಕಲಶಕ್ಕೆ ಹೊಸ ರವಿಕೆ ಬಟ್ಟೆ ಅಥವಾ ಸೀರೆ ಉಡಿಸಿ , ವಡವೆ ಹಾಕಿ ಅಲಂಕಾರ ಮಾಡಬಹುದು. ಈ ಕಲಶಕ್ಕೆ ಶ್ರೀ ಲಕ್ಷ್ಮಿಯನ್ನು ಆವಾಹನೆ ಮಾಡಿ, ಕಲಶವನ್ನು ಪೂಜೆ ಮಾಡಬೇಕು. ಪೂಜೆ ಎಂದರೆ ಹಲವಾರು ವಿಧಿ-ವಿಧಾನಗಳು, ಮಂತ್ರಗಳು ,ಇವುಗಳ ತಲೆ-ಬುಡ ಗೊತ್ತಿಲ್ಲ ಅಂತ ಪೇಚಾಡುತ್ತ ಇದ್ದೀರಾ. ಈ ಗೊಂದಲದಲ್ಲಿ ಸಿಕ್ಕಿ ಹಾಕಿಕೊಳ್ಳ ಬೇಕಿಲ್ಲ. ಪೂಜಾ ವಿಧಾನವನ್ನು ಸರಳವಾಗಿ ವಿವರಿಸಬಹುದು. ದೇವರ ಪೂಜೆಯನ್ನು ಅತಿಥಿ ಸತ್ಕಾರಕ್ಕೆ ಹೋಲಿಸಿಕೊಳ್ಳಿ . ದೇವರು ನಿಮ್ಮ ಮನೆಗೆ ಬಂದಿರುವ ಅತಿಥಿ. ಅತಿಥಿಗಳಿಗೆ ಹೇಗೆ ಉಪಚಾರ ಮಾಡುತ್ತಿರೋ , ಹಾಗೆಯೆ ದೇವರಿಗೆ ಪೂಜೆ ರೂಪದಲ್ಲಿ ಉಪಚಾರ ಮಾಡಬೇಕು ಅಷ್ಟೆ. ಮೊದಲು ಸಂಕಲ್ಪ ಮಾಡಿ, ನಂತರ ಧ್ಯಾನ ಮಾಡಿ ದೇವರನ್ನು ಆಹ್ವಾನ ಮಾಡುವುದು. ಸಂಕಲ್ಪ - ಅಂದರೆ ನಿರ್ಧಾರ, ನಿರ್ಣಯ, ಚಿತ್ತ. ಈ ದಿನ ಈ ಪೂಜೆ ಮಾಡುತ್ತ ಇದ್ದೀನಿ ಅಂತ ನಿರ್ಧಾರ ಮಾಡುವುದೇ ಸಂಕಲ್ಪ. ಸಂಕಲ್ಪ ಮಾಡುವಾಗ ಆ ದಿನದ ಸಂವತ್ಸರ, ಋತು , ಮಾಸ, ಪಕ್ಷ, ವಾರ, ತಿಥಿ, ನಕ್ಷತ್ರವನ್ನು ಹೆಸರಿಸಬೇಕು. ಶುಭೇ ಶೋಭನೇ ಮುಹೂರ್ತೇ ಆದ್ಯ ಬ್ರಹ್ಮಣಃ ದ್ವಿತೀಯ ಪರಾರ್ಧೇ ಶ್ವೇತ ವರಾಹ ಕಲ್ಪೇ ವೈವಸ್ವತ ಮನ್ವಂತರೇ ಕಲಿಯುಗೇ ಪ್ರಥಮ ಪಾದೇ ಜಂಬೋ ದ್ವೀಪೇ ಭರತವರ್ಷೇ ಭರತಖಂಡೇ ಗೋದಾವರ್ಯಾಃ ದಕ್ಷಿಣೇ ತೀರೇ ಶಾಲೇವಾಹನಶಖೇ ಬೌದ್ಧಾವತಾರೇ ರಾಮಕ್ಷೇತ್ರೇ ಅಸ್ಮಿನ್ ವರ್ತಮಾನೇ ವ್ಯಾವಹಾರಿಕೇ ಚಾಂದ್ರಮಾನೇ ಪ್ರಭವಾದಿ ಷಷ್ಟಿ ಸಂವತ್ಸರಾಣಾಂ ಮಧ್ಯೇ .....ನಾಮ ಸಂವತ್ಸರೇ, ಉತ್ತರಾಯನೇ/ದಕ್ಷಿಣಾಯನೇ ,... ಋತೌ , .... ಮಾಸೇ ,ಶುಕ್ಲ/ಕೃಷ್ಣ ಪಕ್ಷೇ , ... ತಿಥಿಯಾಂ , ... ವಾಸರ ಯುಕ್ತಾಯಾಂ , ಶುಭ ನಕ್ಷತ್ರ, ಶುಭಯೋಗ ಶುಭ ಕರಣ ಏವಂ ಗುಣ ವಿಶೇಷಣ ವಿಶಿಷ್ಟಾಯಾಂ ಶುಭತಿಥೌ , ಅಸ್ಮಾಕಂ ಸಹಕುಟುಂಬಾನಾಂ ಕ್ಷೇಮಸ್ಥೈರ್ಯ ವಿಜಯ ವೀರ್ಯ ಅಭಯ ಆಯುರಾರೋಗ್ಯ ಐಶ್ವರ್ಯಾಭಿವೃದ್ಧ್ಯರ್ಥಂ ಸಮಸ್ತ ದುರಿತೋಪಶಾಂತ್ಯರ್ಥಂ ಸಮಸ್ತ ಸನ್ಮಂಗಳಾರ್ಥಂ ಸಮಸ್ತಾಭ್ಯುದಯಾರ್ಥಂ ಚ ಧರ್ಮಾರ್ಥ ಕಾಮಮೋಕ್ಷ ಚತುರ್ವಿಧ ಫಲ ಪುರುಷಾರ್ಥ ಸಿಧ್ಧ್ಯರ್ಥಂ ಶ್ರೀ ....(ದೇವರ ಹೆಸರು) ಪ್ರೀತ್ಯರ್ಥಂ ಯಾವಚ್ಛಕ್ತಿ ಧ್ಯಾನಾವಾಹನಾದಿ ಷೋಡಶೋಪಚಾರ ಪೂಜಾಂ ಕರಿಷ್ಯೇ

ಶ್ರೀ ಪ್ರತ್ಯಂಗೀರಾ ಮಾಲಾ ಮಂತ್ರ

ಓಂ ದ್ರಾಂ ಓಂ ಗುರು ಲಕ್ಷ್ಮಿಶ್ರೀನಿವಾಸದತ್ತಾಯ ನಮಃ ಶ್ರೀ ಪ್ರತ್ಯಂಗೀರಾ ಮಾಲಾ ಮಂತ್ರ ಓಂ ಹ್ರೀಂ ಈಂ ಶ್ರೀಂ ಗ್ಲೌಂ ಸೌಂ ಐಂ ಓಂ ನಮಃ ಕೃಷ್ಣವಾಸಸೇ ಶತ ಸಹಸ್ರ ಸಿಂಹ ವದನೆ ಅಷ್ಟಾದಶಭುಜೆ ಮಹಾಬಲೆ ಶತ ಪರಾಕ್ರಮ ಪೂಜಿತೆ ಅಜಿತೆ ಅಪರಾಜಿತೆ ದೇವಿ ಪ್ರತ್ಯಂಗೀರೇ ಪರಸೈನ್ಯ ಪರಕರ್ಮ ವಿದ್ವಂಸಿನಿ ಪರಮಂತ್ರೋಭೇಧಿನಿ ಪರಮಂತ್ರ ಪರಯಂತ್ರ ಪರತಂತ್ರ ಉಚ್ಚಾಟಿನಿ ಪರವಿದ್ಯಾಗ್ರಾಸಕರೇ ಸರ್ವ ಭೂತಧಮನೆ ಓಂ ಕ್ಷಂ ಸೌಂ ಗ್ಲೌಂ ಈಂ ಹ್ರೀಂ ಕ್ರೀಂ ಕ್ರಾಂ ಏಹಿ ಏಹಿ ಪ್ರತ್ಯಂಗೀರೇ ಚಿದ ಚಿದ್ರೂಪೇ ಸರ್ವ ಉಪದ್ರವೇಭ್ಯಃ ಸರ್ವಗ್ರಹದೋಶೇಭ್ಯಃ ಸರ್ವ ರೋಗೇಭ್ಯಃ ಪ್ರತ್ಯಂಗೀರೇ ಮಾಮ್ ರಕ್ಷ ರಕ್ಷ ಹ್ರಾಂ ಹ್ರೀಂ ಹ್ರೂಂ ಹ್ರೈಂ ಹ್ರೌಂ ಹ್ರಃ ಕ್ಷಾಂ ಕ್ಷೀಂ ಕ್ಷುಂ ಕ್ಷೈಂ ಕ್ಷೌಂ ಕ್ಷಃ ಗ್ಲಾಂ ಗ್ಲೀಂ ಗ್ಲೂಂ ಗ್ಲೈಂ ಗ್ಲೌಂ ಗಃ ಪ್ರತ್ಯಂಗೀರೇ ಪರಬ್ರಹ್ಮ ಮಹಿಷಿ ಪರಮ ಕಾರುಣಿಕೆ ಏಹಿ ಏಹಿ ಮಮ ಶರೀರೆ ಆವೇಶಯ ಆವೇಶಯ ಮಮ ಹೃದಯೇ ಸ್ಪುರ ಸ್ಪುರ ಮಮಾಂಸೆ ಪ್ರಸ್ಕುರ ಪ್ರಸ್ಕುರ ಮಮಾಂಸೆ ರಕ್ಷ ರಕ್ಷ ಮಮ ಸರ್ವ ದುಷ್ಟಾನಾಂ ಪದಂ ವಾಚಂ ಮುಖಂ ಸ್ತಂಭಯ ಸ್ತಂಭಯ ಜಿಹ್ವಾಂ ಕೀಲಯ ಕೀಲಯ ಬುದ್ಧಿಂ ವಿನಾಶಯ ವಿನಾಶಯ ಪ್ರತ್ಯಂಗೀರೇ ಮಹಾ ಕುಂಡಲಿನಿ ಚಂದ್ರಕಳಾವತಂಸಿನಿ ಭೇತಾಳ ವಾಹನೆ ಪ್ರತ್ಯಂಗೀರೇ ಕಪಾಲಮಾಲಾಧಾರಿಣಿ ತ್ರಿಶೂಲ ವಜ್ರಾಂಕುಶ ಬಾಣ ಬಾಣಾಸನ ಪಾಣಿ ಪಾತ್ರ ಪೂರಿತಂ ಮಮ ಶತೃಶ್ರೋಣಿತಂ ಪಿಬ ಪಿಬ ಮಮ ಶತೃ ಮಾಂಸಂ ಖಾದಯ ಖಾದಯ ಮಮ ಶತೃಂ ತಾಡಯ ತಾಡಯ ಮಮ ವೈರಿ ಜನಾನ್ ದಹ ದಹ ಮಮ ವಿದ್ವೇಶ ಕಾರಿಣಿಂ ಶೀಘ್ರಮೇವ ಭಕ್ಷಯ ಭಕ್ಷಯ ಶ್ರೀ ಪ್ರತ್ಯಂಗೀರೇ ಭಕ್ತಕಾರುಣಿಕೆ ಶೀಘ್ರಮೇವ ದಯಾಂ ಕುರುಕುರು ಸದ್ಯೋಜ್ವಲ ಜಾಡ್ಯಂ ಮುಕ್ತಿಂ ಕುರುಕುರು ಭೇತಾಳ ಬ್ರಹ್ಮ ರಾಕ್ಷಸಾದೀನ್ ಜಹಿ ಜಹಿ ಮಮ ಶತೃಂ ತಾಡಯ ತಾಡಯ ಪ್ರಾರಬ್ಧ ಸಂಚಿತ ಕ್ರಿಯಮಾಣಾನ್ ದಹ ದಹ ದೂಷಗಾನ್ ಸದ್ಯೋಧೀರ್ಘರೋಗಾನ್ ಮುಕ್ತಿಂ ಕುರುಕುರು ಪ್ರತ್ಯಂಗೀರೇ ಪ್ರಾಣಶಕ್ತಿಮಯೇ ಮಮ ವೈರಿ ಜನ ಪ್ರಾಣಾನ್ ಹನ ಹನ ಮಮ ವೈರಿಜನಾನ್ ಪ್ರಾಣಾನ್ ಮರ್ಧಯ ಮರ್ಧಯ ಮಮ ವೈರಿಜನಾನ್ ಪ್ರಾಣಾನ್ ನಾಶಯ ನಾಶಯ ಮಮ ಮೃತ್ಯುರ್ ಮೃತ್ಯುಂ ನಾಶಯ ನಾಶಯ ಓಂ ಶ್ರೀಂ ಹ್ರೀಂ ಕ್ಲೀಂ ಗ್ಲೌಂ ಸೌಂ ಪ್ರತ್ಯಂಗೀರೇ ಮಹಾಮಾಯೇ ಮಮ ಮನೋವಾಂಚಿತ ಸರ್ವ ಕಾರ್ಯ ಸಿದ್ದಿಂ ಕುರು ಕುರು ಮಾಮ್ ರಕ್ಷ ರಕ್ಷ ಪ್ರತ್ಯಂಗೀರೇ ಸ್ವಾಹಾಃ ಲಘು ಮಂತ್ರ ಓಂ ಐಂ ಹ್ರೀಂ ಶ್ರೀಂ ಪ್ರತ್ಯಂಗೀರಾಯೈ ನಮಃ ಓಂ ಐಂ ಹ್ರೀಂ ಶ್ರೀಂ ಆಂ ಹ್ರೀಂ ಕ್ರೋಂ ಕ್ಷ್ರೋಂ ಪ್ರತ್ಯಂಗೀರಾಯೈ ನಮಃ

ಗಣೆಶ ಪ್ರಾರ್ಥನೆ (S S B K)

ಗಣೆಶ ಪ್ರಾರ್ಥನೆ ಶುಕ್ಲಂ ಬರದರಂ ಗಣಪತಿ ಮಂತ್ರಂ ನಿತ್ಯಂ ನಿತ್ಯಂ ಜಪೋ ಜಪೋ ವಿಘ್ನವಿನಾಶಕ ವಿದ್ಯಾಪ್ರದಾಯಕ ವೀರಗಣಪತಿ ಬಜೋ ಬಜೋ ಗುರು ಪ್ರಾರ್ಥನೆ ಜೈ ಗುರುದೇವ ಜಯಗುರುದೇವ ನಮೋ ನಮಾಮಿ ಸದ್ಗುರುದೇವ ||ಪ|| ಚ೧ ಬ್ರಹ್ಮ ಸ್ವರೂಪ ಗುರುದೇವ ವಿಷ್ಣು ರೂಪನೆ ಗುರುದೇವ ಶಿವರೂಪ ಗುರುದೇವ ತ್ರಿಮೂರ್ತಿ ಸ್ವರೂಪನೆ ಗುರುದೇವ ||ಜೈ|| ಜ್ಞಾನ ಪ್ರದಾಯಕ ಜ್ಞಾನದೇವ ವಿದ್ಯಪ್ರದಾಯಕ ಗುರುದೇವ ಬುದ್ದಿ ಪ್ರದಾಯಕ ಗುರುದೇವ

ದಾಂಪತ್ಯ ವಿರಸಕ್ಕೆ

ದಾಂಪತ್ಯ ವಿರಸಕ್ಕೆ ಪತಿ ವಶೀಕರಣ ಮಂತ್ರ/ತಂತ್ರ ಸೂಚನೆ:- ಗುರು ಹಿರಿಯರ ಸಮ್ಮುಖದಲ್ಲಿ ವಿವಾಹವಾದ ಪತ್ನಿಯನ್ನು ಬಿಟ್ಟು ಪರಸ್ತ್ರೀ ಸಹವಾಸದಲ್ಲಿರುವ ಪತಿಯನ್ನು ವಶಪಡಿಸಿಕೊಳ್ಳಲು ಮಾತ್ರ ಈ ಮಂತ್ರವನ್ನು ಉಪಯೋಗಿಸಬೇಕು ವಿನಾಕಾರಣ ಸುಮ್ಮನೆ ಈ ಪ್ರಯೋಗ ಮಾಡಿದರೆ ಅನಾಹುತಗಳನ್ನು ಎದುರಿಸಬೇಕಾಗುತ್ತದೆ. ನಿಜವಾಗಿಯು ಪತಿ ಪರಸ್ತ್ರೀ ಸಹವಾಸದಲ್ಲಿದ್ದಾಗ ಮಾತ್ರ ಈ ತಂತ್ರ ಮಂತ್ರ ಪ್ರಯೋಗ ಫಲನೀಡುತ್ತದೆ.ಇಲ್ಲವಾದಲ್ಲಿ ಅನಾಹುತ ನೀವೇ ಅನುಬವಿಸಬೇಕು. ಮಂತ್ರ: ಓಂ ಹ್ರೀಂ ಘ್ರೀಂ ಕ್ಲೀಂ ಶ್ರೀಂ ಠಂ ಪೂರ್ವ / ದಕ್ಷಿಣ ದಿಕ್ಕು ೧.ಪತಿಯ ವಸ್ತ್ರಗಳನ್ನು (ಧರಿಸುವ ಬಟ್ಟೆ) ಕೈಯಲ್ಲಿಡಿದುಕೊಂಡು ೧೦೮ಸಲ ಈ ಮಂತ್ರದಿಂದ ಅಭಿಮಂತ್ರಿಸಿ ಆ ಬಟ್ಟೆಗಳನ್ನು ಧರಿಸಲು ಕೊಡುವುದು. ೨.ಸೇವಿಸಬಹುದಾದ ಅನ್ನ ಆಹಾರಗಳನ್ನು ೧೦೮ಸಲ ಈ ಮಂತ್ರದಿಂದ ಅಭಿಮಂತ್ರಿಸಿ ತಿನ್ನಿಸುವುದು. ೩.ನಿಂಬೆಹಣ್ಣನ್ನು ೧೦೮ಸಲ ಈ ಮಂತ್ರದಿಂದ ಅಭಿಮಂತ್ರಿಸಿ ಅದರ ಜ್ಯೂಸ್ ಮಾಡಿ ಕುಡಿಯಲು ಕೊಡುವುದು. ೪.ಪತಿಯ ಭಾವಚಿತ್ರವನ್ನು ಕೈಯಲ್ಲಿ ಹಿಡಿದುಕೊಂಡು ೧೦೮ಸಲ ಈ ಮಂತ್ರದಿಂದ ಅಭಿಮಂತ್ರಿಸುವುದು. ಈ ತಂತ್ರವನ್ನು ನಿತ್ಯ ೧೦೮ ಸಲದಂತೆ ೪೮ದಿನಗಳಕಾಲ ಮಾಡಬೇಕು ಕ್ರಮೇಣ ನಿಮ್ಮ ಪತಿಯು ನಿಮ್ಮ ಕಡೆಗೆ ಒಲಿದು ಬರುವುದರಲ್ಲಿ ಯಾವ ಸಂದೇಹ ಬೇಡ.

ನವಗ್ರಹ ಪೂಜಾವಿಧಿ

ಓಂ ದ್ರಾಂ ಓಂ ಗುರುದತ್ತಾಯ ನಮಃ ಓಂ ನಮೋ ಭಗವತೇ ಲಕ್ಷ್ಮಿಶ್ರೀನಿವಾಸಾಯ ನಮಃ ನವಗ್ರಹ ಪೂಜಾವಿಧಿ ಸೂಚನೆ:- ಮಂತ್ರೋಕ್ತವಾಗಿ ನವಗ್ರಹ ಆರಾಧನೆ ಮಾಡಲು ಸಾದ್ಯವಾಗದಿದ್ದಲ್ಲಿ ಸ್ತೋತ್ರರೂಪವಾಗಿ ಆಯಾ ಗ್ರಹಗಳ ಅಷ್ಟೋತ್ತರ ಶತನಾಮಾವಳಿಗಳಿಂದ ಆರಾಧಿಸಬಹುದು. ಆಯಾ ಗ್ರಹಗಳು ಮತ್ತು ದೇವತೆಗಳಿಗೆ ಅಷ್ಟೋತ್ತರ ಶತನಾಮಾವಳಿಯನ್ನು ಹೇಳಿಕೊಳ್ಳಲು ಕಾಲಾವಕಾಶವಿಲ್ಲದಿದ್ದಲ್ಲಿ ಸಂಕ್ಷಿಪ್ತವಾಗಿ ಶ್ಲೋಕಗಳನ್ನೇ ಸ್ತುತಿಸಬಹುದು. ಋಗ್ವೇಧ ಮತ್ತು ಯಜುರ್ವೇಧ ರೀತ್ಯ ಗ್ರಹ ಸ್ಥಾಪನೆ ಪೂರ್ವ ಪಶ್ಶಿಮ ಉತ್ತರ ದಕ್ಷಿಣ ಈಶಾನ್ಯ ಆಗ್ನೇಯ ನೈರುತ್ಯ ವಾಯುವ್ಯ ಸೂರ್ಯ ಗೋಧಿ ಚಂದ್ರ ಅಕ್ಕಿ ಕುಜ ತುಗರಿ ಬುಧ ಹೆಸರು ಗುರು ಕಡಲೆ ಶುಕ್ರ ಅವರೆ ಶನಿ ಎಳ್ಳು ರಾಹು ಉದ್ದು ಕೇತು ಹುರುಳಿ ಈ ಕೆಳಗೆ ನೀಡಿರುವಂತೆ ಸಂಕಲ್ಪ ಮಾಡಿ ಪ್ರತಿಯೊಂದು ಗ್ರಹದ ಆವಾಹನೆಯನ್ನು ಮಾಡಿ ಷೋಡಶೋಪಚಾರ ಪೂಜೆ ಮಾಡಬೇಕು.ಸಂಕಲ್ಪ ಮಾಡುವಾಗ ಅವರವರ ನಕ್ಷತ್ರಮತ್ತು ರಾಶಿಯನ್ನು ಹೇಳಿಕೊಳ್ಳಬೇಕು. ಪ್ರಾರ್ಥನೆ ನಮಸೂರ್ಯಾಯ ಚಂದ್ರಾಯ ಮಂಗಳಾಯ ಬುಧಾಯಚ ಗುರು ಶುಕ್ರ ಶನಿಭ್ಯಶ್ಚ ರಾಹವೇ ಕೇತವೇ ನಮಃ ಆಚಮನ,ಪ್ರಾಣಾಯಾಮಾನಂತರ ಸಂಕಲ್ಪಮಾಡಬೇಕು. ಸಂಕಲ್ಪ ಪೂರ್ವೋಕ್ತ ಏವಂಗುಣ ವಿಶೇಷಣ ವಿಶಿಷ್ಟಾಯಾಂ ಶುಭತಿಥೌ.................. ನಕ್ಷತ್ರೇ..............ರಾಶೌ...................ಶರ್ಮಣಃ ಮಮ ಸಮಸ್ತ ಗ್ರಹಚಾರ ಪೀಡಾ ಪರಿಹಾರಾರ್ಥಂ ಸಕುಟುಂಬಾನಾಂ ಅಸ್ಮಾಕಂ ಕ್ಷೇಮ ಸ್ಥೈರ್ಯ ವಿಜಯ ವೀರ್ಯ ಆಯುರಾರೋಗ್ಯಭಿವೃದ್ಯರ್ಥಂ ಆದಿತ್ಯಾನಾಂ ನವಾನಾಂ ಗ್ರಹಣಾಂ ಶುಭಸ್ಥಾನೇಷು ಸ್ಥಿತಾಃ ತೇಷಾಂ ಗ್ರಹಣಾಂ ಅತಿಶಯ ಶುಭಸ್ಥಾನ ಫಲಾಪ್ರಾಪ್ಯರ್ಥಂ ಯೇ ಯೇ ಗಹಾಃ ಶುಭೇತರಸ್ಥಾನೇಷು ಸ್ಥಿತಾಃತೇಷಾಂ ಗ್ರಹಾಣಾಂ ಅತಿಶಯ ಶುಭಸ್ಥಾನ ಫಲಾಪ್ರಾಪ್ಯರ್ಥಂ ಅಪಮೃತ್ಯು ಅಪಕಂಟಕ ಅಂತರ್ಧಶಾ ಮಹರ್ಧಶ ಅಂತರಾಂತರ್ಧಶ ಪ್ರಾಣದಶಾಬುಕ್ತಿ ಕ್ಷುದ್ರ ಪೀಡಾ ಪರಿಹಾರಾರ್ಥಂ ಆಯುರಾರೋಗ್ಯ ಐಶ್ವರ್ಯಭಿವೃದ್ಯರ್ಥಂ ಸರ್ವರೋಗ ಪರಿಹಾರಾರ್ಥಂ ಆದಿತ್ಯಾದಿ ನವಗ್ರಹ ದೇವತಾ ಪ್ರೀತ್ಯರ್ಥಂ ಆದಿತ್ಯಾದಿ ನವಗ್ರಹ ದೇವತಾ ಪೂಜಾ ಕರಿಷ್ಯೇ ಆವಾಹನಂ ೧.ಸೂರ್ಯ ಕರ್ಣಿಕಾಯಂ ಮದ್ಯೇ ಪ್ರಸನ್ನ ವದನಂ ಸೌಮ್ಯಂ ವರದಾಭಯ ಪಾಣಿಕಂ ರಕ್ತವರ್ಣಂ ಕಳಿಂಗದೇಶಜಂ ಕಾಶ್ಯಪಗೋತ್ರಜಂ ಅಗ್ನೀಶ್ವರ ಸಹಿತಂ ಸಾಂಗಂ ಸಾಯುಧಂ ಸವಾಹನಂ ಸಪರಿವಾರಂ ಸಶಕ್ತಿ ಸಪುತ್ರ ಸರ್ವಾಲಂಕಾರ ಭೂಷಿತಂ ಅದಿದೇವತಾ ಪ್ರತ್ಯಧಿದೇವತಾ ಸಹಿತಂ ಉದುತ್ಯಂ ಜಾತವೇದಸಮಿತಿ ಕಣ್ವಪುತ್ರಃ ಪ್ರಸ್ಕಣ್ವ ಋಷಿಃ ಸೂರ್ಯೋ ದೇವತಾ ಗಾಯತ್ರೀ ಛಂಧಃ ಸೂರ್ಯಗ್ರಹ ಪ್ರೀತ್ಯರ್ಥೇ ಸೂರ್ಯಗ್ರಹಾರಾಧನೇ ವಿನಿಯೋಗಃ ಉದುತ್ಯಂಜಾತ ವೇದಸಂ ದೇವಂವಹಂತಿ ಕೇತವಃ ದೃಶೇವಿಶ್ವಾಯ ಸೂರ್ಯಂ|ಮದ್ಯೇ ಗೋಧಾಮಧಾನ್ಯ ಸ್ಕೋಪರಿ(ಗೋಧಿ) ವಕ್ತಾರ ಮಂಡಲೇ ಓಂ ಭೂರ್ಭುವಸ್ವಃ ಸೂರ್ಯಗ್ರಹಮಾವಾಹಯಾಮಿ| ಸ್ಥಾಪಯಾಮಿ ಪೂಜಯಾಮಿ|| ಚಂದ್ರ:- ಆಗ್ನೇಯಪತ್ರ‍ೇ / ಪೂರ್ವ ಪತ್ರೇ ಸೋಮಾಯ ನಮಃ ಪ್ರಸನ್ನಪಾಣಿಕಂ ಗೋಕ್ಷೀರ ದವಳ ವರ್ಣಂ ಯಮುನ ದೇಶಜಂ ಅತ್ರೇಯ ಗೋತ್ರಜಂ ಅಪಃ ಪಾರ್ವತೀ ಸಹಿತಂ ಸಾಂಗಂ ಸಾಯುಧಂ ಸವಾಹನಂ ಸಪರಿವಾರಂ ಸಶಕ್ತಿ ಸಪುತ್ರ ಸರ್ವಾಲಂಕಾರ ಭೂಷಿತಂ ಅಧಿದೇವತಾ ಪ್ರತ್ಯಧಿದೇವತಾ ಸಹಿತಂ ಅಪ್ಯಾಯಸ್ವೇತಿ ಗೌತಮಋಷಿಃ ಸೋಮದೇವತಾ ಗಾಯತ್ರಿಛಂಧಃ ಸೋಮಗ್ರಹ ಪ್ರೀತ್ಯರ್ಥೇ ಸೋಮಗ್ರಹಾರಾಧನೇ ವಿನಿಯೋಗಃ ಅಪ್ಯಾಯ ಸ್ವಸಮೇತುತೇ ವಿಶ್ವತಸ್ಸೋಮವೃಷ್ಣಂ|ಭವಾವಾಜಸ್ಯ ಸಂಗಥೇ|ಸೂರ್ಯಸ್ಯ ಆಗ್ನೇಯ ಪೂರ್ವ ದಿಗ್ಬಾಗೇ ತಂಡುಲ ಧಾನ್ಯ ಸ್ಕೋಪರಿ(ಅಕ್ಕಿ)ಚತುರಸ್ರಾಕಾರ ಮಂಡಲೇ ಓಂ ಭೂರ್ಭುವಸ್ವಃ ಚಂದ್ರಗ್ರಹ ಆವಾಹಮಾವಾಹಯಾಮಿ ಸ್ಥಾಪಯಾಮಿ ಪೂಜಯಾಮಿ|| ೩.ಕುಜ(ಅಂಗಾರಕ,ಬೌಮ) ದಕ್ಷಿನಪತ್ರೇ/ಆಗ್ನೇಯಪತ್ರ‍ೇ ಅಂಗಾರಕಾಯ ನಮಃ ಪ್ರಸನ್ನಪಾಣಿಕಂ ರಕ್ತವರ್ಣಂ ವಿಂದ್ಯಾದೇಶಜಂ ಭಾರದ್ವಜಗೋತ್ರಜಂ ಭೂಮಿಸ್ಕಂದ ಸಹಿತಂ ಸಾಂಗಂ ಸಾಯುಧಂ ಸವಾಹನಂ ಸಪರಿವಾರಂ ಸಶಕ್ತಿ ಸಪುತ್ರ ಸರ್ವಾಲಂಕಾರ ಭೂಷಿತಂ ಅದಿದೇವತಾ ಪ್ರತ್ಯಧಿದೇವತಾ ಸಹಿತಂ ಅಗ್ನಿಮೂರ್ಧೇತಿ ವಿರೂಪ ಋಷಿಃ ಅಂಗಾರಕೋ ದೇವತಾ ಗಾಯತ್ರಿ ಛಂಧಃ ಅಂಗಾರಕಗ್ರಹ ಪ್ರೀತ್ಯರ್ಥೇ ಅಂಗಾರಕ ಗ್ರಹರಾಧನೇ ವಿನಿಯೋಗಃ ಅಗ್ನಿರ್ಮಾದಿವಃ ಕಕುತ್ಪತಿಃ ಪೃಥಿವ್ಯಾ ಆಯುಂ| ಅಪಾಂರೇತಾಂಸಿಜಿನ್ವತಿ||ಸೂರ್ಯಾಸ್ಯ ದಕ್ಷಿಣ|ಆಗ್ನೇಯ ದಿಗ್ಬಾಗೇ ಅದಕಧಾನ್ಯಸ್ಕೋಪರಿ(ತುಗರಿ)ತ್ರಿಕೋಣಾಕಾರ ಮಂಡಲೇ ಮದ್ಯೇ ಓಂ ಭೂರ್ಭುವಸ್ವಃ ಅಂಗಾರಕ ಗ್ರಹಮಾವಾಹಯಾಮಿ|ಸ್ಥಾಪಯಾಮಿ ಪೂಜಯಾಮಿ| ೪.ಬುಧ(ಸೌಮ್ಯ) ಈಶಾನ್ಯಪತ್ರ‍ೇ/ದಕ್ಷಿಣಪತ್ರೇ ಬುಧಾಯ ನಮಃ ಪ್ರಸನ್ನಪಾಣಿಕಂ ಪೀತವರ್ಣಂ ಮಗಧ ದೇಶಜಂ ಅತ್ರೇಯ ಗೋತ್ರಜಂ ವಿಷ್ಣುನಾರಾಯಣ ಸಹಿತಂ ಸಾಂಗಂ ಸಾಯುಧಂ ಸವಾಹನಂ ಸಪರಿವಾರಂ ಸಶಕ್ತಿ ಸಪುತ್ರ ಸರ್ವಾಲಂಕಾರ ಭೂಷಿತಂ ಅಧಿದೇವತಾ ಪ್ರತ್ಯಧಿದೇವತಾ ಸಹಿತಂ ಬ್ರಹ್ಮಜ್ಞಾನಮಿತಿಜಜ್ಞಾನ ಋಷಿಃ ಬುಧೋದೇವತಾ ತ್ರಿಷ್ಟುಪ್ ಛಂಧಃ ಬುಧಗ್ರಹ ಪ್ರೀತ್ಯರ್ಥೇ ಬುಧಗ್ರಹಾರಾಧನೇ ವಿನಿಯೋಗಃ ಬ್ರಹ್ಮಜಜ್ಞಾನಂ ಪ್ರಥಮಂ ಪುರಸ್ತಾದ್ವಿಸೀಮತಸ್ಸುರುಚೋವೇನ ಅವಃ|ಸಬುಧ್ರ್ಯಾ ಉಪಮಾ ಅಸ್ಯ ವಿಷ್ಠಾಸ್ವತಶ್ಚಯೋನಿ ಮಸತಶ್ಚವಿವಃ|| ಸೂರ್ಯಸ್ಯ ಈಶಾನ್ಯ/ದಕ್ಷಿಣದಿಗ್ಬಾಗೇ ಮುದ್ಗಧಾನ್ಯಸ್ಕೋಪರಿ(ಹೆಸರು)ಬಾಣಾಕಾರ ಮಂಡಲೇ ಓಂ ಭೂರ್ಭುವಸ್ವಃ ಬುಧಗ್ರಹ ಆವಾಹಯಾಮಿ|ಸ್ಥಾಪಯಾಮಿ ಪೂಜಯಾಮಿ| ೫.ಗುರು(ಬೃಹಸ್ಪತಿ) ಉತ್ತರ ಪತ್ರೇ ಬೃಹಸ್ಪತಯೇ ನಮಃ ಪ್ರಸನ್ನ ಪಾಣಿಕಂ ಹೇಮ ವರ್ಣಂ ಸಿಂಧುದೇಶಜಂ ಅಂಗೀರಸಗೋತ್ರಜಂ ಇಂದ್ರ ಬ್ರಹ್ಮಸಹಿತಂ ಸಾಂಗಂ ಸಾಯುಧಂ ಸವಾಹನಂ ಸಪರಿವಾರಂ ಸಶಕ್ತಿ ಸಪುತ್ರ ಸರ್ವಾಲಂಕಾರ ಭೂಷಿತಂ ಅದಿದೇವತಾ ಪ್ರತ್ಯಧಿದೇವತಾ ಸಹಿತಂ ಬೃಹಸ್ಪತೇ ಪರಿದೀಯೋತ್ಯ ಪ್ರತಿ ಋಷಿಃ ಬೃಹಸ್ಪತಿದೇವತಾ ತ್ರಿಷ್ಟುಪ್ ಛಂಧಂ ಬೃಹಸ್ಪತಿ ಗ್ರಹ ಪ್ರೀತ್ಯರ್ಥೇ ಬೃಹಸ್ಪತಿ ಗ್ರಹಾರಾಧನೇ ವಿನಿಯೋಗಃ ಬೃಹಸ್ಪತೇ ಪರಿದೀಯಾರಾಧೇನರಕ್ಷೋಹಾಮಿತ್ರಾಃ ಅಪಚಾಧಮನಃ |ಪ್ರಭಂಜಸ್ಸೀನಾಃ ಪ್ರಮೃಣೋಯುಥಾಜಯನ್ನಸ್ಮಾಕ ಮೇದ್ಯ ವಿತಾರಥಾನುಂ|| ಸೂರ್ಯಸ್ಯ ಉತ್ತರ ದಿಗ್ಬಾಗೇ ಚಣಕಧಾನ್ಯಸ್ಕೋಪರಿ(ಕಡಲೆ)ದೀರ್ಘ ಚತುರಾಕಾರ ಮಂದಲೇ ಓಂ ಭೂರ್ಭುವಸ್ವಃ ಬೃಹಸ್ಪತಿ ಗ್ರಹಮಾವಾಹಯಾಮಿ |ಸ್ಥಾಪಯಾಮಿ ಪೂಜಯಾಮಿ

ಗುರುಜಿಯವರ ಕೆಲವು ಮುದ್ರೆ ಮಂತ್ರಗಳು

ಹೊಟ್ಟೇನೋವಿಗಾಗಿ ಮಂತ್ರ ತಂತ್ರಗಳು ದಿಕ್ಕು: ಉತ್ತರ ದಿಕ್ಕು ಸಿದ್ದಿಮಾಡಿಕೊಳ್ಳಲು ೧೦ಸಾವಿರ ಜಪ ಅವಶ್ಯಕ ಸಿದ್ದಿಗಾಗಿ ಅಮಾವಾಸ್ಯೆ/ಹುಣ್ಣಿಮೆ/ಗ್ರಹಣಕಾಲ ಸೂಕ್ತ ಮಂತ್ರ: ಓಂ ನಮೋ ಭಗವತೇ ಓಂ ನಮೋ ರೂಪಿಣಿ ನಾಗಾಣಿ ನಾಗಾತಾಕಿ ರಕ್ಷಿಣೀ ಪಿಶಾಚಿ ಭಸ್ಮಾಂಗೀ ಹೃತಂತು ವಿರಾಣಿ ಹೃಂ ಹೃಂ ಫಟ್ ಸ್ವಾಹಾ ನಿತ್ಯ ೧೦೮ಸಲ ಜಪಿಸ ಬಹುದು ತಂತ್ರ: ಒಂದು ಚಂಬಲ್ಲಿ ನೀರು ಸ್ವಲ್ಪ ಅಡಿಗೆ ಅರಿಸಿಣ ಹಾಕಿ ಈ ಮಂತ್ರದಿಂದ ಅಭಿಮಂತ್ರಿಸಿ ಉದರನೋವು,ಉದರ ಉಬ್ಬರ,ಮಾಸಿಕಋತುವಿನಹೊಟ್ಟೇನೋವು,ಬೇಧಿ,ಅಜೀರ್ಣಹೊಟ್ಟೇನೋವು,ಮಾಟದಿಂದ ಹೊಟ್ಟೇನೋವು,ಹೊಟ್ಟೇ ಉರಿ ಇವೆಲ್ಲವುಗಳು ೧೦ನಿಮಿಷದಲ್ಲಿ ನಿವಾರಣೆಯಾಗುತ್ತವೆ.ಸಿದ್ದಿಮಾಡಿಕೊಳ್ಳಬೇಕಾದ್ದು ಅಗತ್ಯ. ಅಥವ ವಿಳೇದೆಲೆಯನ್ನು ಈ ಮಂತ್ರದಿಂದ ಅಭಿಮಂತ್ರಿಸಿ ನೋವಿರುವವರಿಗೆ ಎಲೆಯನ್ನು ಮೂರು ಕಡೆ ತೂತು ಮಾಡಿ ತಿನ್ನಿಸಿದರೆ ಮೇಲಿನ ಎಲ್ಲಾರೀತಿಯ ಉದರನೋವುಗಳು ಐದು ನಿಮಿಷದಲ್ಲಿ ನಿವಾರಣೆಯಾಗುತ್ತವೆ. ಮದ್ದೀಡಿನ ತಂತ್ರ: ಯಾಲಕ್ಕಿ/ ನಿಂಬೆಹಣ್ಣು ಈ ಮಂತ್ರದಿಂದ ಅಭಿಮಂತ್ರಿಸಿ ತಿನ್ನಿಸಲು ಈ ಸಮಸ್ಯೆಯಿಂದ ಪರಿಹಾರ ಅಥವ ಗರಡ ಅಥವ ಗರುಡಗಂಬವನ್ನು ಈ ಮಂತ್ರಜಪಿಸುತ್ತಾ ಪ್ರದಕ್ಷಿಣೆ ಮಾಡಿದರೆ ಈ ಸಮಸ್ಯೆಯ ನಿವಾರಣೆಯಾಗುತ್ತದೆ. ಪತಿ ಪತ್ನಿ ವಶೀಕರಣಕ್ಕೆ ಮಂತ್ರ ತಂತ್ರ: ಭಸ್ಮವನ್ನು ಈ ಮಂತ್ರದಿಂದ ಅಭಿಮಂತ್ರಿಸಿ ಹಣೆಗೆ ಹಚ್ಚಲು ಕೊಡುವುದರಿಂದಲು ಈ ಸಮಸ್ಯೆ ನಿವಾರಣೆಸಾದ್ಯ ಅಥವ ತಿನ್ನಬಹುದಾದ ಹಣ್ಣು ಅಭಿಮಂತ್ರಿಸಿ ತಿನ್ನಿಸಬಹುದು. ವಿಶಾಖ ನಕ್ಷತ್ರ ದಿನ ಅರಿಸಿನಕೊಂಬು ತಂದು ೧೦೦೮ಸಲ ಈ ಮಂತ್ರ ಜಪಿಸಿ ಮನೆಯಲ್ಲಿ ಇರುವವರ ಕೈಯಲ್ಲಿ ಮುಟ್ಟಿಸಿ ದೇವರಮುಂದೆ ಇಡುವುದರಿಂದ ಮನೆ ನೆಮ್ಮದಿ ಶಾಂತಿಯುಂಟಾಗುತ್ತದೆ. ತಂತ್ರ: ಕೊಬ್ಬರಿ ಎಣ್ಣೆ / ನಿಂಬೆಹಣ್ಣು ಈ ಮಂತ್ರದಿಂದ ಅಭಿಮಂತ್ರಿಸಿ ಎಣ್ಣೆ ತಲೆಗೆ ಹಾಕುವುದು ನಿಂಹಣ್ಣನ್ನು ಜೂಸ್ ಮಾಡಿ ಕುಡಿಸುವುದು ಅಥವ ಒಂದು ಚಮಚ ಕರಿಮೆಣಸು ೨ಚಮಚ ಕಲ್ಲುಪ್ಪು ಇವುಗಳನ್ನು ಈ ಮಂತ್ರದಿಂದ ೧೦೮ಸಲ ಅಭಿಮಂತ್ರಿಸಿ ಶನಿದೇವಾಲಯದಲ್ಲಿ ಶನಿದೇವರ ದೇವಾಲಯದ ಹಿಂಬಾಗದಲ್ಲಿ ಇಟ್ತುಬರುವುದು ನಿಮ್ಮ ಸಮಸ್ಯೆಗಳು ನಿವಾರಣೆಯಾಗುತ್ತವೆ. ವ್ಯಾಪಾರ ವೃದ್ದಿ ಯಂತ್ರ ತಂತ್ರ ಮಂತ್ರ: ಬುಜ ಪತ್ರ ರಕ್ತಚಂದನ ದಲ್ಲಿ ಈ ಯಂತ್ರ ಬರೆದು ತುಳಸಿಕಡ್ದಿಯಿಂದ ಬರೆಯಬೇಕು ಅಥವ ಬಿಳಿ ಹಾಳೆಯಲ್ಲಿ ಬರೆದು ಈ ಮಂತ್ರದಿಂದ ೧೦೮ಸಲ ಜಪಿಸಿ ಯತಾಶಕ್ತಿ ಧೂಪ ದೀಪಗಳಿಂದ ಪೂಜಿಸಿ ನಿಮ್ಮ ತಿಜೋರಿಯಲ್ಲಿ ಹಾಕಿ ಇಟ್ಟುಕೊಳ್ಳಿ ನಿಮ್ಮ ವ್ಯಾಪಾರದಲ್ಲಿ ಅಭಿವೃದ್ದಿಯುಂಟಾಗುತ್ತದೆ. ಸ್ವಂತ ಮನೆಗಾಗಿ ಮಂತ್ರ ತಂತ್ರ: ಭುಜಪತ್ರೆ/ಗಟ್ಟಿಯಾದ ಹಾಳೆಯಲ್ಲಿ ಅಷ್ಟಗಂಧವನ್ನು ನೀರಲ್ಲಿ ಕಲೆಸಿಕೊಂಡು ತುಳಸಿಕಡ್ಡಿಯಿಂದ ಈ ಯಂತ್ರಬರೆದು ಮೇಲಿನ ಮಂತ್ರದಿಂದ ಯತಾಶಕ್ತಿ ಪೂಜೆಮಾಡಿ ೧೦೮ಸಲ ೧೦೮ಹೂವುಗಳಿಂದ ಅರ್ಚಿಸುವುದು ದಿನ ಬೆಳಗ್ಗೆ ೭ದಿನಗಳು ಸತತವಾಗಿ ಪೂಜಿಸಿ ೮ನೇ ದಿನ ಹರಿಯುವ ನೀರಲ್ಲಿ ಬಿಟ್ಟು ಬರುವುದು ನಂತರ ೯ನೇ ದಿನ ಇದೇರೀತಿ ಯಂತ್ರ ಬರೆದು ಮತ್ತೆ ೭ದಿನ ೧೦೮ಹೂಗಳಿಂದ ಪೂಜಿಸಿ ೮ದಿನ ಪೂಜಿಸಿ ೯ನೇದಿನ ಹರಿವ ನೀರಲ್ಲಿ ಬಿಡುವುದು ಭರಣಿ ನಕ್ಷತ್ರ ಇರುವ ದಿನ ಅಥವ ಶನಿವಾರ ರಾಹುಕಾಲ ಬಿಟ್ಟು ಈ ತಂತ್ರವನ್ನು ಮಾಡುವುದು ಶತೃ ನಾಶಕ್ಕೆ ಸ್ತಂಬನ ಯಂತ್ರ ಮಂತ್ರ ತಂತ್ರ: ಬುಜಪತ್ರೆಯಲ್ಲಿ ಅಥವ ಬಿಳಿಹಾಳೆ ಅಥವ ತಾಮ್ರದ ತಗಡಿನಲ್ಲಿ ಈ ಯಂತ್ರವನ್ನು ಪೆನ್ನಿಂದ/ದಬ್ಬಳದಿಂದ ಬರೆಯುವುದು ಬೆಳಗ್ಗೆ ಸಂಜೆ ನಿತ್ಯ ೧೦೮ಸಲ ಮಂತ್ರ ಹೇಳಿ ಪೂಜಿಸುವುದು.೨೧ದಿನ ೪೧ದಿನ ಪೂಜಿಸಿ ಯಾವುದಾದರು ನಿರ್ಜನ ಪ್ರದೇಶದಲ್ಲಿ ನೆಲದಲ್ಲಿ ಹಳ್ಳತೆಗೆದು ಮುಚ್ಚಿಬಿಟ್ಟರೆ ನಿಮ್ಮ ಶತೃ ನಿಮ್ಮ ತಂಟೆಗೆ ಬರಲಾರನು. ಎಲೆ ತಗೆದುಕೊಂಡು ಅದರಲ್ಲಿ ರಕ್ತಚಂದನವನ್ನು ಶಾಹಿ ಮಾಡಿಕೊಂಡು ತುಳಸಿಕಡ್ಡಿ/ದಾಳಿಂಬೆ ಕಡ್ಡಿಯಿಂದ ಮಂತ್ರ ಬರೆದು ಮದ್ಯದಲ್ಲಿ ಶತೃವಿನ ಹೆಸರು ಬರೆದು ಪೂಜಿಸಿ ನಿರ್ಜನ ಪ್ರದೇಶದಲ್ಲಿ ಅಥವ ಹುಣಸೇಮರದ ಬುಡದಲ್ಲಿ ಅಥವ ಸ್ಮಶಾನದಲ್ಲಿ ಹೂತು ಬರುವುದರಿಂದ ನಿಮ್ಮ ಬಹಿರಂಗಶತೃವು ನೀವು ಬದುಕಿರುವವರೆಗೂ ನಿಮಗೆ ಅವನಿಂದ ಯಾವುದೇ ತೊಂದರೆ ಆಗುವುದಿಲ್ಲ (ಸೂಚನೆ: ನಿಮಗೆ ನಿಜವಾಗಲು ಶತೃವಾಗಿದ್ದಲ್ಲಿ ಮಾತ್ರ ಮಾಡುವುದು ಇಲ್ಲವಾದಲ್ಲಿ ಈ ತಂತ್ರದ ಪರಿಣಾಮ ನಿಮಗೇ ಆಗುವುದು ಎಚ್ಚರವಾಗಿರಿ) ಪುಷ್ಯನಕ್ಷತ್ರ ಅಥವ ಅಮಾವಾಸ್ಯೆ/ಹುಣ್ಣಿಮೆ ಯಲ್ಲಿ ಬರೆದು ೭ದಿನ ಪೂಜಿಸಿ ನಿರ್ಜನ ಪ್ರದೇಶದಲ್ಲಿ ಹೂತು ಬರುವುದು (ರಕ್ತಚಂದನ ಸಿಗದಿದ್ದಲ್ಲಿ ಕಪ್ಪು ಕಾಡಿಗೆಯನ್ನು ಬರೆಯಲು ಉಪಯೋಗಿಸಬಹುದು) ರಕ್ತ ಚಂದನ ಬುಜಪತ್ರೆಯಲ್ಲಿ ತಾಮ್ರದ ತಗಡಲ್ಲಿ ದಬ್ಬಳದಿಂದ /ಬಿಳಿ ಹಾಳೆಯಲ್ಲಿ ಬರೆದು ನಿತ್ಯ ಬೆಳಗೆ ಸಂಜೆ ಪೂಜೆಮಾಡುವುದು ದಿನಕಳೆದಂತೆ ನಿಮ್ಮ ಶತೃ ವಶವಾಗುತ್ತಾನೆ.ಯಂತ್ರದ ಮದ್ಯದಲ್ಲಿ ಶತೃವಿನ ಹೆಸರು ಬರೆದು ಪೂಜಿಸಿರಿ. ಕತ್ತೆಯ ಮೂತ್ರವನ್ನು ತಗೆದುಕೊಂಡು ಮೂರು ಅಥವ ನಾಲ್ಕುದಾರಿ ಕೂಡಿರುವ ಕಡೆ ಮಣ್ಣಿನಲ್ಲಿ ಯಾವುದಾದರು ಕಡ್ಡಿಯಿಂದ ಈ ಯಂತ್ರವನ್ನು ಬರೆದು ಯಂತ್ರದ ಕೆಳಗೆ ನಿಮ್ಮ ವೈರಿಯ ಹೆಸರನ್ನು ಬರೆದು ನಿಮ್ಮ ಎಡಕಾಲಿನ ಎಕ್ಕಡದಿಂದ(ಚಪ್ಪಲಿ)ನಿಮ್ಮವೈರಿಯನ್ನು ಮನಸಲ್ಲಿ ಕಲ್ಪಿಸಿಕೊಂಡು ನಿಮ್ಮ ಮನಸಿಗೆ ಸಮಾದಾನವಾಗುವವರೆಗೂ ನೀವು ಬರೆದಿರುವ ಯಂತ್ರಕ್ಕೆ ನಿಮ್ಮ ಚಪ್ಪಲಿಯಿಂದ ಹೊಡೆಯುವುದು ನೀವು ಯಂತ್ರ ಬರೆಯುವ ಮುನ್ನ ಕತ್ತೆಯ ಮೂತ್ರವನ್ನು ನೀವು ಯಂತ್ರಬರೆಯುವ ಮಣ್ಣಿನಲ್ಲಿ ಹಾಕಿ ನಂತರ ಯಂತ್ರವನ್ನು ಬರೆಯಬೇಕು ಈ ತಂತ್ರ ಬರೆಯುವುದರಿಂದ ನಿಮ್ಮ ಶತೃ ನೀವು ಬದುಕಿರುವವರೆಗೂ ನಿಮಗೆ ತೊಂದರೆ ನೀಡಲಾಗುವುದಿಲ್ಲ. ಸರ್ವ ರೋಗ ನಿವಾರಕ ಮಂತ್ರ ಓಂ ನಮೋ ಭಗವತೇ ಚಿಂತಾಮಣಿ ಹನುಮಾನ ಅಂಗಶೂಲ,ಅಕ್ಷಿಶೂಲ,ಕಟಿಶೂಲ,ಕುಕ್ಷಿಶೂಲ,ಗುದಶೂಲ,ಮಸ್ತಕಶೂಲ,ಸರ್ವಶೂಲ ನಿರ್ಮೂಲಾಯ ನಿರ್ಮೂಲಾಯ ಕುರು ಕುರು ಸ್ವಾಹಾ ಸೌಭಾಗ್ಯಕರ ಮಂತ್ರ ಓಂ ನಮೋ ಶ್ರೀ ಸೂರ್ಯಾಯ ಸಹಸ್ರ ಕಿರಣಾಯ ಇಷ್ಟಾರ್ಥ ಸಿದ್ದಿಕರಾಯ ಮನೋವಾಂಚಿತ ಪೂರಯ ಕಷ್ಟಂ ಚೂರಯ ಚೂರಯ ಓಂ ಶ್ರೀಂ ಸೂರ್ಯಾಯ ನಮಃ ಸರ್ವ ಸೌಭಾಗ್ಯಂ ದೇಹಿ ದೇಹಿ ಸಕಲ ದರಿದ್ರ ನಿವಾರಣೆಗಾಗಿ ಯಂತ್ರ ಗಂಧವನ್ನು ಶಾಹಿಯಾಗಿ ಉಪಯೋಗಿಸಿ ತುಳಸಿಕಡ್ಡಿ ಅಥವ ದಾಳಿಂಬೆ ಕಡ್ಡಿಯಿಂದ ಶ್ರವಣ ನಕ್ಷತ್ರ ಭಾನುವಾರ ಇರುವ ದಿವಸ ನೀವು ನಿತ್ಯ ಊಟಮಾಡುವ ಊಟದತಟ್ಟೆಯಲ್ಲಿ(ಕಂಚು,ತಾಮ್ರ,ಹಿತ್ತಾಳೆ,ಬೆಳ್ಳಿ,ಸಾಮಾನ್ಯವಾಗಿ ನೀವು ಬಳಸುವ ಊಟದ ತಟ್ಟೆ) ಈ ಯಂತ್ರವನ್ನು ಬರೆದು ಬರಿಯ ಹೂಗಳಿಂದ ಮಾತ್ರ ನಿಮಗೆ ತಿಳಿದಂತೆ ಪೂಜಿಸಿ (ಕುಂಕುಮ ಅರಿಸಿಣ ಬಳಸಬೇಡಿ)ನಂತರ ಅದೇ ಯಂತ್ರ ಇರುವ ತಟ್ಟೆಯಲ್ಲಿ ಊಟವನ್ನು ಮಾಡಿ ತಟ್ಟೆಯನ್ನು ತಗೆದಿಡಿ ಈ ತಂತ್ರವನ್ನು ೩ ಸಲ ಮಾಡಿದರೆ ನಿಮ್ಮ ಎಲ್ಲರೀತಿಯ ದರಿದ್ರವು ನಿವಾರಣೆಯಾಗುತ್ತದೆ. ಸಕಲ ವಿಷಯಗಳಲ್ಲಿ ಜಯಕ್ಕಾಗಿ (ಕೋರ್ಟ್ ಕೇಸ್ ನಲ್ಲಿ ಜಯಕ್ಕಾಗಿ)ಈ ಮಂತ್ರವನ್ನು ಈ ಮುದ್ರೆಯೊಂದಿಗೆ ಅಮಾವಾಸ್ಯೆ ಹುಣ್ಣಿಮೆಯಂದು ೧೦ಸಲ ಜಪಿಸಿ ತಂತ್ರ: ಸಂಪಿಗೆ ಹೂವು ಅಥವ ಹಸಿರು ಹೂವು ಅಥವ ಬಿಳಿಹೂವು ಅಥವ ಯಾವುದಾದರೂ ಹೂವು ನಿಮ್ಮ ವಯಸ್ಸಿನಷ್ಟು ತಗೆದುಕೊಂಡು ನಿಮ್ಮ ಬೊಗಸೆಯಲ್ಲಿ ಇಟ್ಟುಕೊಂಡು ಉತ್ತರಕ್ಕೆ ಮುಖಮಾಡಿಕೊಂಡು ೧೦೮ಸಲ ಈ ಮಂತ್ರವನ್ನು ಹೇಳುತ್ತಾ ಅಭಿಮಂತ್ರಿಸಿ ಆ ಹೂವುಗಳನ್ನು ಯಾವುದಾದರು ಪದ್ಮಾವತಿ/ಲಕ್ಷ್ಮಿ/ಅಥವ ದೇವಿ ದೇವಾಲಯದಲ್ಲಿ ದೇವರ ಪಾದಗಳಿಗೆ ಸಮರ್ಪಿಸಬೇಕು ಅಥವ ನಿಮ್ಮ ಮನೆಯಲ್ಲೇ ಇರುವ ಸ್ತ್ರೀ ದೇವತಾ ಪಾದಗಳಿಗೆ ಅರ್ಪಿಸಬೇಕು. ವಾಸಮಾಡುವ ಮನೆಯಲ್ಲಿ ಮತ್ತು ಪರಿಸರದಲ್ಲಿ ಶತೃಗಳ ನಿವಾರಣೆ ದೋಷನಿವಾರಣೆಗಾಗಿ ಈ ಮುದ್ರೆ ಶತೃಗಳ ನಿವಾರಣೆಗಾಗಿ ತಂತ್ರ ತುಳಸಿ ೫.೧೦.೧೫.೧೧.೨೧ ಚಂಬಲ್ಲಿ ನೀರಲ್ಲಿ ತುಲಸಿ ಹಾಕಿ ಈ ಮಂತ್ರವನ್ನು ೧೦೮ಸಲ ಜಪಿಸಿ ಈ ನೀರನ್ನು ಮನೆಗೆಲ್ಲಾ ಪ್ರೋಕ್ಷಣೆಮಾಡಿದರೆ ಮತ್ತು ಈ ನೀರನ್ನು ಸೇವನೆ ಮಾಡುವುದು.ಇದರಿಂದ ಶತೃಗಳು ನಿವಾರಣೆಯಾಗುತ್ತವೆ. ಪ್ರತ್ಯಂಗಿರಾ ಮಂತ್ರ ವಾಸ್ತು ದೋಷಕ್ಕೆ ಸಮಸ್ತ ವಾಸ್ತು ದೋಷಗಳು ಪಾಪಗಳು ಜಾತಕ ದೋಷಗಳು ನಿವಾರಣೆಗಾಗಿ ಪ್ರತಿ ಅಮಾವಾಸ್ಯೆ ಹುಣ್ಣಿಮೆ ಗ್ರಹಣಕಾಲದಲ್ಲಿ ಅಥವ ಜನ್ಮದಿನ ದಂದು ಪ್ರತ್ಯಂಗಿರಾ ಮಾಲಾ ಮಂತ್ರ ಅಥವ ಲಘುಮಂತ್ರವನ್ನು ೧೦೮ಸಲ ಮುದ್ರೆಯೊಂದಿಗೆ ಜಪಿಸಿದರೆ ಎಲ್ಲಾ ಸಮಸ್ಯೆಯಿಂದ ಪರಿಹಾರ ದೊರೆಯುತ್ತದೆ.

ಅಂಜನ ದರ್ಪಣ ದರ್ಶನಕ್ಕೆ ಮಂತ್ರಗಳು

ಸರ್ವಾಂಜನಕ್ಕೆ ಮತ್ತು ಎಲ್ಲಾ ಅಂಜನಗಳಿಗೆ ಜಪಿಸಬೇಕಾದ ಅಂಜನವಿನಾಯಕಮಂತ್ರ ಓಂ ನಮೋ ವಿಘ್ನನಾಶಾಯ ವಿಘ್ನೇಶ್ವರಾಯ ಸರ್ವನಿಧಿ ಸಾಕ್ಷಾತ್ಕಾರಂ ಕುರುಕುರು ಸ್ವಾಹಾ ಸರ್ವಾಂಜನಕ್ಕೆ ಜಪಿಸಬೇಕಾದ ಮಂತ್ರ ಓಂ ನಮೋ ಭಗತೀ ರುದ್ರರೂಪಿಣಿ ಚೌಡಿಚಾಮುಂಡಿ ಸರ್ವಾಂಜನಂ ವಶ್ಯಂ ಐಂ ಹ್ರೀಂ ಕ್ಲೀಂ ಕ್ಷಾಂ ಕ್ಷೀಂ ಹರಿವಲ್ಲಭೇ ಸ್ವಾಹಾ ಮೂರನೇ ಕಣ್ಣನ್ನು ಜಾಗೃತಗೊಳಿಸಲು ಮೂರುಮಂತ್ರಗಳು ೧.ಓಂ ಸದಾಶಿವಾಯ ತ್ರಿನೇತ್ರಜಾಗೃತಾಯ ಪೂರ್ವತ್ವಂ ದೃಶ್ಯಂ ರುದ್ರಾಯ ನಮಃ ೨.ಹಂಸಃ ಶಿವಃ ಸೋಹಂ ಹಂಸಃ ಶಿವಃ ಸೋಹಂ ೩.ಓಂ ವ ಯ ನ ಮ ಶಿ ಭವಿಷ್ಯ ಅಂಜನಕ್ಕೆ ಅಭಿಮಂತ್ರಿಸಲು ಈ ಮಂತ್ರ ೪ಓಂ ನಮೋ ಉಲ್ಲೂಕರಾಜಾಯ ಲಕ್ಷ್ಮೀ ವಾಹನಾಯ ಕಂ ಖಂ ಗಂ ಘಂ ಙಂ ಚಂ ಛಂ ಜಂ ಝಂ ಞಂ ಮೇ ಗುಪ್ತ ವಿದ್ಯಾಪ್ರದಾತು ಹ್ರೀಂ ಫಟ್ ಸ್ವಾಹಾ ಯಕ್ಷಿಣಿ ಅಂಜನಕ್ಕೆ ಸಾಧನ ಮಂತ್ರಗಳು ೧.ಓಂ ಹ್ರೀಂ ಪ್ರಮೋದಾಯೈ ಸ್ವಾಹಾ ೨.ಓಂ ಹಂಸಿ ಹಂಸಿಜನೆ ಹ್ರೀಂ ಹ್ರೀಂ ಸ್ವಾಹಾ ಓಂ ಹಂಸಿನಿ ಹಂಸಗತೇ ಮಾಂ ಸ್ವಾಹಾ ಗರುಡ ಮಂತ್ರ ಓಂ ಕುಂಕುಮಾಂಕಿತ ವರ್ಣಾಯ ಕುಂದೇಂದು ದವಳಾಯಚ ವಿಷ್ಣುವಾಹನ ನಮಸ್ತುಭ್ಯಂ ಪಕ್ಷಿರಾಜಾಯತೇ ನಮಃ ಲಘು ಮಂತ್ರ ಓಂ ಪಕ್ಷಿ ಸ್ವಾಹಾ ಅಂಜನ ದರ್ಶನ ಆಂಜನೇಯ ಮಂತ್ರ ಓಂ ನಮೋ ಭಗವತೇ ಆಂಜನೇಯಾಯ ಸಕಲ

AGNI HOTRA MANTRA

ಓಂ ಶ್ರೀ ಗುರುಭ್ಯೋ ನಮಃ ೧. ಓಂ ಹೌಂ ಜುಂ ಸಃ| ಅಸಃ ಮಾಂ ಪಾಲಯ ಪಾಲಯ ಸೋಹಂ| ಸಃ ಜುಂ ಓಂ ಸ್ವಾಹಾಃ .................... ೨.ಓಂ ಹೌಂ ಜುಂ ಸಃ| ಓಂ ಭೂರ್ಭುವಸ್ವಃ| ಓಂ ತ್ರಯಂಬಕಂ ಯಜಾಮಹೇ ಸುಗಂಧಿಂ ಪುಷ್ಟಿವರ್ಧನಮ್ ಊರ್ವರುಕಮಿವ ಬಂಧನಾತ್ ಮೃತ್ಯುರ್ ಮುಕ್ಷೀಯ ಮಾ$ಮೃತಾತ್|| ಸ್ವಃಭುವಃ ಭೂಃ| ಓಂ ಸಃ ಜುಂ ಹೌಂ ಓಂ ಸ್ವಾಹಾ|| .......................... ೩. ಓಂ ಮೃತ್ಯುಂಜಯ ಮಹಾದೇವ| ಸರ್ವ ಸೌಭಾಗ್ಯದಾಯಕಂ| ತ್ರಾಹಿಮಾಮ್ ಜಗತಾನಾಥ| ಜರಾಜನ್ಮ ಲಯಾಧಿಬಿಃ| ಓಂ ಹೌಂ ಜುಂ ಸಃ| ಪ್ರಸನ್ನ ಪಾರಿಜಾತಾಯ ಸ್ವಾಹಾ|| ೪.ಓಂ ಹೌಂ ಜುಂ ಸಃ| ಗ್ರಹಬಾಧಾ ನಿವಾರಣಾಯ ನಿವಾರಣಾಯ| ಹುಂ ಫಟ್ ಸ್ವಾಹಾ|| ೫.ಓಂ ಹೌಂ ಜುಂ ಸಃ | (ಗೋತ್ರ) ಗೋತ್ರೋದ್ಬವಂ| (ನಕ್ಷತ್ರ)ನಕ್ಷತ್ರೇ| (ರಾಶಿ)ರಾಶೌ ಜಾತಂ| (ಹೆಸರು) ಶರ್ಮಣಾಂ| ಯಜಮಾನಂ ಸಹ ಕುಟುಂಬಂ| ಪಾಲಯ ಪಾಲಯ ಮೃತ್ಯುರ್ ಮೋಚಯ ಮೋಚಯ| ರೋಗಾನ್ ನಾಶಯ ನಾಶಯ| ಆಯುರ್ ವರ್ಧಯ ವರ್ಧಯ| ಆಯುಷ್ ವಂತಂ ಕುರು ಕುರು| ಸಃ ಜುಂ ಹೌಂ| ಓಂ..................... ಊರ್ವಾರುಕಮಿವ ಬಂಧನಾತ್ ಮೃತ್ಯುರ್ ಮುಕ್ಷೀಯ ಮಾ$ಮೃತಾತ್ ಶತೃ ಸಂಹಾರಕ ಸುದರ್ಶನ ಮಂತ್ರ ಓಂ ಕ್ಲೀಂ ಕೃಷ್ಣಾಯ ಗೋವಿಂದಾಯ ಗೋಪೀಜನವಲ್ಲಭಾಯ ಪರಾಯ ಪರಮ ಪುರುಷಾಯ ಪರಮಾತ್ಮನೇ ಪರಕರ್ಮ ಮಂತ್ರ ಯಂತ್ರ ಔಷಧಾನಿ ಅಸ್ತ್ರಶಸ್ತ್ರಾಣಿ ಸಂಹರ ಸಂಹರ ಮ್ರುತ್ಯುರ್ಮೋಚಯ ಮೋಚಯ ಓಂ ನಮೋ ಭಗವತೇ ಮಹಾ ಸುದರ್ಶನಾಯ ದೀಪ್ತೇಜ್ವಾಲಾವಲಿಯುತಾಯ ಸರ್ವದಿಕ್ ಕ್ಷೋಭಣಕರಾಯ ಹುಂ ಫಟ್ ಪರಬ್ರಹ್ಮಣೇ ಪರಂಜ್ಯೋತಿಷೇ ವಿಷ್ಣುವೇ ನಮಃ ಸ್ವಾಹಾ ಆರೋಗ್ಯ ಸಂರಕ್ಷಣ ಸುದರ್ಶನ ಮಂತ್ರ ಓಂ ನಮೋ ಭಗವತೇ ಸುದರ್ಶನಾಯ ಓಂ ನಮೋ ಭಗವತೇ ಮಹಾ ಸುದರ್ಶನಾಯ ಮಹಾಚಕ್ರಾಯ ಮಹಾಜ್ವಾಲಾಯ ಸರ್ವ ರೋಗ ಪ್ರಶಮನಾಯ ಕರ್ಮ ಬಂಧ ವಿಮೋಚನಾಯ ಪಾದೋದಿ ಮಸ್ತಕಂ ಪರಿಹಂತಂ ವಾತ ಜನಿತಂ ರೋಗಾಣಾಂ ಪಿತ್ತ ಜನಿತ ರೋಗಾಣಾಂ ಶ್ಲೇಷ್ಮ ಜನಿತ ರೋಗಾಣಾಂ ಧಾತು ಸಂಕಲಿತ ಉದ್ಬವ ನಾನಾ ವಿಕಾರ ರೋಗಾಣಾಂ ನಾಶಯ ನಾಶಯ ಪ್ರಶಮಯ ಪ್ರಶಮಯ ಆರೋಗ್ಯಂ ದೇಹಿ ದೇಹಿ ಓಂ ಸಹಸ್ರಾರ ಹುಂ ಫಟ್ ದುಷ್ಟ ಶಕ್ತಿ ನಿವಾರಣ ಸುದರ್ಶನ ಮಂತ್ರ ಓಂ ನಮೋ ಭಗವತೇ ಮಹಾ ಸುದರ್ಶನಾಯ ಮಹಾ ಚಕ್ರಾಯ ಮಹಾ ಜ್ವಾಲಾಯ ಧೀಪ್ತಿರೂಪಾಯ ಸರ್ವತೋ ಮಾಂ ರಕ್ಷ ರಕ್ಷ ಮಹಾಬಲಾಯ ಹುಂ ಫಟ್ ಸ್ವಾಹಾ

ಶನಿ ರಾಹು ದೋಷ ನಿವಾರಣೆಗಾಗಿ ಮಾಡಬಹುದಾದ ತಂತ್ರ

೧.ಸಿಪ್ಪೆ ಇರುವ ತೆಂಗಿನಕಾಯಿ ೧೧ ೨.ಕರಿ ಎಳ್ಳು ೧೧ ಹಿಡಿ ೩.ಕಪ್ಪು ಬಟ್ಟೆ (ಬಟ್ಟೆಯಲ್ಲಿ ಎಳ್ಳು ಕಟ್ಟಿಕೊಳ್ಳಿ ೧೧ ಬಿಡಿ ಬಿಡಿಯಾಗಿ) ೪.ಸಣ್ಣ ಕಬ್ಬಿಣದ ಮೊಳೆ ೧೧ ಹಿಡಿ ೫.ಕಪ್ಪು ಉದ್ದಿನಕಾಳು ೧೧ ಹಿಡಿ ೬.ಸೀಸ ೧೧ ತುಂಡು (ಸೀಸದ ಜೊತೆ ಕಾಯಿನ್ ಸೇರಿಸಿ ಬಿಡುವುದು) ೭.ಕಾಯಿನ್ ೧೧ ೮.ಬಿಳಿಸಾಸಿವೆ ೧೧ ಹಿಡಿ ೯.ಸೌದೆ ಇದ್ದಿಲು (ನಿಮ್ಮ ವಯಸ್ಸಿ ನಷ್ಟು ಕಿಲೋ) ೧೦.ಅವರೆಕಾಳು ೧೧ಹಿಡಿ ೧೧.ಬಿಳಿಜೋಳ ೧೧.ಹಿಡಿ ಮಾಡುವ ವಿಧಾನ: ಶನಿವಾರ ಸಂದ್ಯಾಸಮಯದಲ್ಲಿ ಶುದ್ದವಾದ ಹರಿಯುವ ನೀರಲ್ಲಿ ಬಟ್ಟೆಸಹಿತ ಮುಳುವು ಪಶ್ಚಿಮಾಭಿಮುಖವಾಗಿ ನಿಂತುಕೊಂಡು ತಲೆಗೆ ಒಂದೊಂದೇ ಪದಾರ್ಥಗಳನ್ನು ೩/೭/೯/೧೧ ಸುತ್ತು ಸುತ್ತಿಸಿ ನವಗ್ರಹದೇವತೆಗಳೇ ನನ್ನ ಸಕಲದೋಷವನ್ನು ನಿವಾರಣೆ ಮಾಡಿ ಎಂದು ಪ್ರಾರ್ಥನೆ ಮಾಡಿಕೊಂಡು ಹರಿಯುವ ನೀರಲ್ಲಿ ಉಳಿದೆಲ್ಲ ಪದಾರ್ಥಗಳನ್ನು ನೀರಲ್ಲಿ ಬಿಡುವುದು.

ಜ್ಯೋತಿಷಶಾಸ್ತ್ರ ಆಧರಿತ ಪ್ರತಿ ಕ್ಷಣವೂ ಹೊಸತನ

ಜನವರಿ ಒಂದನೇ ದಿನಾಂಕವನ್ನು ಹೊಸ ವರ್ಷದ ಹೊಸ ದಿನ ಎಂದು ಎಲ್ಲರೂ ಆಚರಿಸುತ್ತಾರೆ. ಹಿಂದೂ ಪಂಚಾಂಗದ ಜ್ಯೋತಿಷಶಾಸ್ತ್ರ ಆಧರಿತದಲ್ಲಿ ಜ.1 ಮಾತ್ರ ಹೊಸ ದಿನವಲ್ಲ. ಅದಕ್ಕೆ ಕೆಲವು ಕಾರಣಗಳೂ ಇವೆ. ಪಂಚಾಂಗದಲ್ಲಿ ತಿಥಿ, ವಾರ, ನಕ್ಷತ್ರ, ಯೋಗ ಮತ್ತು ಕರಣ ಎಂಬ 5 ಅಂಶಗಳು ಇರುವುದು. ತಿಥಿಯಾಗಲಿ, ಯೋಗವಾಗಲಿ, ಕರಣವಾಗಲಿ, ವಾರವಾಗಲಿ, ನಕ್ಷತ್ರವಾಗಲಿ ಅವು ಒಂದು ಕಳೆದು ಮತ್ತೊಂದು ಬಂದಾಗ ಹೊಸದಾಗಿರುತ್ತದೆ. ಈ ದಿನದ ವಾರ ಮುಂದಿನ ವಾರ ಬಂದರೆ ತಿಥಿ, ಯೋಗ ಬೇರೆ ಬೇರೆಯಾಗಿರುತ್ತದೆ. ಅಂದರೆ ಪ್ರತಿ ದಿನದ ಕ್ಷಣ ಕ್ಷಣವೂ ಹೊಸದಾಗಿರುತ್ತದೆ. ಈ ಕಾರಣದಿಂದ ಜ್ಯೋತಿಷದ ಪಂಚಾಂಗದ ಪ್ರಕಾರ ಪ್ರತಿ ದಿನವೂ ಹೊಸ ದಿನವೇ ಆಗುವುದು. ತಿಥಿಗಳು:ಒಟ್ಟು 15 ತಿಥಿಗಳಿವೆ. ಈ 15 ತಿಥಿಗಳು ಪ್ರತಿ ದಿನವೂ ಬದಲಾವಣೆ ಆಗುತ್ತದೆ. ಹೀಗಾಗಿ ದಿನವೂ ಹೊಸ ದಿನವೇ ಆಗುವುದು.

Wednesday 9 January 2019

ಅಂಗೈಯಲ್ಲೇ ಮಹಾಯೋಗ

ಯೋಗ ಎಂದರೆ ಒಬ್ಬ ವ್ಯಕ್ತಿ ಜನಿಸಿದ ಮೇಲೆ ಅವರು ಪಡೆದುಕೊಂಡು ಬಂದಿರುವ ಉತ್ತಮ ಮಟ್ಟದ ಜೀವನ, ಒಳ್ಳೆಯ ಮಕ್ಕಳು, ಪ್ರೀತಿಸುವ ಮಡದಿ, ಸುಖಕರವಾದ ಜೀವನ. ಇಂತಹ ಜೀವನ ನಡೆಸಲು ಹಣ, ಆಸ್ತಿ, ಐಶ್ವರ್ಯ, ವಾಹನ ಈ ಎಲ್ಲಾ ಸುಖ ಜೀವನ ನಡೆಸಲು ಮುಖ್ಯವಾಗಿ ಬೇಕಾಗಿರುವ ಆರೋಗ್ಯ ಮತ್ತು ಉತ್ತಮ ಆಯಸ್ಸು, ಇಂತಹ ಆಯಸ್ಸು, ಆರೋಗ್ಯ, ಐಶ್ವರ್ಯ ಪಡೆಯಲು ಯೋಗವೇ ಮುಖ್ಯ ಕಾರಣ ಎನ್ನುತ್ತದೆ ಜ್ಯೋತಿಷ. ಒಂದೊಮ್ಮೆ ಹಸ್ತದಲ್ಲಿ ಪ್ರತಿಬಂಧಕ ಯೋಗವಿದ್ದರೆ ಅವನ ಪರಿಸ್ಥಿತಿ ಕೈಗೆಟುಕದ ದ್ರಾಕ್ಷಿ ಹುಳಿ ಎಂಬಂತಾಗಿರುತ್ತದೆ. ಯಾವುದೇ ವ್ಯಕ್ತಿಯ ಹಸ್ತದಲ್ಲಿ ಗುರು ಬೆರಳು, ರವಿ ಬೆರಳಿಗೆ ಸಮನಾಗಿ ಇದ್ದು, ನೋಡಲು ಅಂದವಾಗಿ ಇದ್ದು ಜೊತೆಗೆ ಗುರುಪರ್ವ ಉತ್ತಮವಾಗಿದ್ದು, ಆ ಪರ್ವದ ಮೇಲೆ ಯಾವುದೇ ಅಶುಭ ಚಿಹ್ನೆಗಳು ಇಲ್ಲದಿದ್ದರೆ ಅಂತಹ ಹಸ್ತ ಹೊಂದಿರುವ ವ್ಯಕ್ತಿಗೆ ಪಂಚಮಹಾಪುರುಷ ಯೋಗಗಳಲ್ಲಿ ಒಂದಾದ ಹಂಸಯೋಗವಿದೆಯೆಂದು ಅರ್ಥೈಸಬೇಕು. ಹಂಸಯೋಗವಿರುವ ವ್ಯಕ್ತಿ ಸದಾ ನಗುಮೊಗದಿಂದ ಕೂಡಿರುತ್ತಾನೆ. ಉತ್ತಮ ಪದವಿ ಹೊಂದಿ ಉತ್ತಮ ಜೀವನ ನಡೆಸುತ್ತಾನೆ. ಪಂಚಮಹಾಪುರುಷ ಯೋಗಗಳಲ್ಲಿ ಮಾಳವ್ಯ ಯೋಗ ಎರಡನೆಯದು. ವ್ಯಕ್ತಿಯ ಹಸ್ತದಲ್ಲಿ ಹೆಬ್ಬೆರಳಿನ ಕೆಳಭಾಗದಲ್ಲಿ ಇರುವ ಪರ್ವವನ್ನು ಶುಕ್ರಪರ್ವ ಎನ್ನುತ್ತಾರೆ. ಗ್ರಹಗಳ ಕಾರಕತ್ವದಲ್ಲಿ ಮನುಷ್ಯ ಜೀವಿಗಳಿಗೆ ಶುಕ್ರಗ್ರಹವು ಸುಖವನ್ನು ಕೊಡುವ ಕಾರಣ ಶುಕ್ರನನ್ನು ಸುಖಕಾರಕ ಎನ್ನುತ್ತಾರೆ. ಆ ಕಾರಣ ಯಾರಲ್ಲಿ ಶುಕ್ರಪರ್ವವು ಬಲಾಢ್ಯವಾಗಿದ್ದು ಕೆಂಪು ಬಣ್ಣದಿಂದ ಕೂಡಿ ಯಾವುದೇ ಅಶುಭ ರೇಖೆಗಳೇ ಇಲ್ಲದೆ ಸ್ಪಷ್ಟವಾಗಿ ಕಾಣುತ್ತಿದ್ದರೆ ಹಾಗೆಯೇ ಈ ಪರ್ವದ ಮೇಲೆರ ಶುಭ ಚಿಹ್ನೆಗಳು ಕಂಡು ಬರುತ್ತಿದ್ದರೆ ಮಾಳವ್ಯ ಯೋಗದಲ್ಲಿ ವ್ಯಕ್ತಿ ಜನಿಸಿದ್ದಾನೆ ಎನ್ನಬಹುದು. ಈ ಯೋಗ ಹೊಂದಿರುವ ವ್ಯಕ್ತಿ ಉತ್ತಮವಾದ ಸುಖವನ್ನು ಪಡೆಯುತ್ತಾನೆ. ರುಚಿಕ ಯೋಗವು ಜಾತಕ ಅಥವಾ ಹಸ್ತದಲ್ಲಿ ಮಂಗಳನಿಂದ ರೂಪಿತವಾಗುತ್ತದೆ. ಯಾರ ಹಸ್ತದಲ್ಲಿ ಕುಜಗ್ರಹದ ಸಕಾರಾತ್ಮಕ ಪರ್ವವು ಉತ್ತಮವಾಗಿದೆಯೋ ಅವರಿಗೆ ರುಚಿಕ ಯೋಗವಿದೆಂದು ತಿಳಿಯಬಹುದು. ಈ ಪರ್ವದ ಜೊತೆ ಯಾರ ಹಸ್ತದಲ್ಲಿ ಗದಾಚಿಹ್ನೆ, ಖಡ್ಗ ಚಿಹ್ನೆ ಕಂಡು ಬಂದಲ್ಲಿ ಉತ್ತಮ ಫಲ ದೊರೆಯುತ್ತದೆ. ಯಾರ ಹಸ್ತದಲ್ಲಿ ಶನಿ ಪರ್ವವು ಉತ್ತಮವಾಗಿ ಬೆಳೆದಿದ್ದು ಶನಿ ಬೆರಳು, ರವಿ ಬೆರಳಿಗಿಂತ ಉದ್ದವಾಗಿದ್ದರೆ ಅವರು ಶಶಯೋಗದವರು. ಈ ಯೋಗದವರು ಗಣ್ಯಾತಿಗಣ್ಯರಾಗಿರುತ್ತಾರೆ. ಭದ್ರಯೋಗ ಪಂಚಮಹಾಯೋಗಗಳಲ್ಲಿ ಕೊನೆಯದು. ಯಾರ ಹಸ್ತದಲ್ಲಿ ಬುಧಪರ್ವವು ಉತ್ತಮವಾಗಿದ್ದು ಬುಧಪರ್ವದ ಮೇಲೆ ಶುಭ ಚಿಹ್ನೆಗಳಿದ್ದರೆ ಅವರು ಪ್ರಖ್ಯಾತ ಪಂಡಿತರಾಗುತ್ತಾರೆ.
ಜನವರಿ ಒಂದನೇ ದಿನಾಂಕವನ್ನು ಹೊಸ ವರ್ಷದ ಹೊಸ ದಿನ ಎಂದು ಎಲ್ಲರೂ ಆಚರಿಸುತ್ತಾರೆ. ಹಿಂದೂ ಪಂಚಾಂಗದ ಜ್ಯೋತಿಷಶಾಸ್ತ್ರ ಆಧರಿತದಲ್ಲಿ ಜ.1 ಮಾತ್ರ ಹೊಸ ದಿನವಲ್ಲ. ಅದಕ್ಕೆ ಕೆಲವು ಕಾರಣಗಳೂ ಇವೆ. ಪಂಚಾಂಗದಲ್ಲಿ ತಿಥಿ, ವಾರ, ನಕ್ಷತ್ರ, ಯೋಗ ಮತ್ತು ಕರಣ ಎಂಬ 5 ಅಂಶಗಳು ಇರುವುದು. ತಿಥಿಯಾಗಲಿ, ಯೋಗವಾಗಲಿ, ಕರಣವಾಗಲಿ, ವಾರವಾಗಲಿ, ನಕ್ಷತ್ರವಾಗಲಿ ಅವು ಒಂದು ಕಳೆದು ಮತ್ತೊಂದು ಬಂದಾಗ ಹೊಸದಾಗಿರುತ್ತದೆ. ಈ ದಿನದ ವಾರ ಮುಂದಿನ ವಾರ ಬಂದರೆ ತಿಥಿ, ಯೋಗ ಬೇರೆ ಬೇರೆಯಾಗಿರುತ್ತದೆ. ಅಂದರೆ ಪ್ರತಿ ದಿನದ ಕ್ಷಣ ಕ್ಷಣವೂ ಹೊಸದಾಗಿರುತ್ತದೆ. ಈ ಕಾರಣದಿಂದ ಜ್ಯೋತಿಷದ ಪಂಚಾಂಗದ ಪ್ರಕಾರ ಪ್ರತಿ ದಿನವೂ ಹೊಸ ದಿನವೇ ಆಗುವುದು. ತಿಥಿಗಳು:ಒಟ್ಟು 15 ತಿಥಿಗಳಿವೆ. ಈ 15 ತಿಥಿಗಳು ಪ್ರತಿ ದಿನವೂ ಬದಲಾವಣೆ ಆಗುತ್ತದೆ. ಹೀಗಾಗಿ ದಿನವೂ ಹೊಸ ದಿನವೇ ಆಗುವುದು. ನಕ್ಷತ್ರಗಳು:ಒಟ್ಟು 27 ಇವೆ. ಈ 27 ನಕ್ಷತ್ರಗಳು ಪ್ರತಿ ದಿನ ಅಥವಾ ಎರಡು ದಿನಕ್ಕೆ ಒಂದು ಬಾರಿ ಬದಲಾವಣೆ ಆಗುವುದು. ಹೀಗಾಗಿ ದಿನವೂ ಹೊಸ ದಿನವೇ ಆಗುವುದು. ಯೋಗಗಳು:ಒಟ್ಟು 27 ಇವೆ. ಈ 27 ಯೋಗಗಳು ಪ್ರತಿ ದಿನ ಬದಲಾವಣೆ ಆಗುವುದು. ಹೀಗಾಗಿ ದಿನವೂ ಹೊಸ ದಿನವೇ ಆಗುವುದು. ಕರಣ:ಒಟ್ಟು 11 ಕರಣಗಳು ಇವೆ. ಈ 11 ಕರಣಗಳು ಪ್ರತಿದಿನವೂ ಬದಲಾವಣೆ ಆಗುವುದು. ವಾರಗಳು:ವಾರಗಳು ಒಟ್ಟು ಏಳು. ಈ ಏಳು ವಾರಗಳು ಪ್ರತಿ ದಿನವೂ ಬದಲಾಣೆಯಾಗುವುದರಿಂದ ಪ್ರತಿ ದಿನವೂ ಹೊಸತೆ. ಸಮಯ: ನಾವು ಕಳೆಯುವ ಪ್ರತಿ ಸಮಯವು ಮತ್ತೆ ಬಾರದು. ಹೀಗಾಗಿ ಪ್ರತಿ ಸಮಯವೂ ಹೊಸತೆ. ಮನುಷ್ಯನ ಆಯುಸ್ಸು 120 ವರ್ಷ:ಜ್ಯೋತಿಷಶಾಸ್ತ್ರದ ಪ್ರಕಾರ ಮನುಷ್ಯನ ದೀರ್ಘಾಯಸ್ಸು 120 ವರ್ಷಗಳು. 9 ಗ್ರಹಗಳ ಒಟ್ಟು ದೆಸೆ 120 ವರ್ಷಗಳು. ಅವು ಯಾವುವು ಎಂದರೆ ರವಿ 6 ವರ್ಷ, ಚಂದ್ರ ದೆಸೆ 10 ವರ್ಷ, ಕುಜ ದೆಸೆ 7, ಬುಧ ದೆಸೆ 17, ಗುರು ದೆಸೆ 16, ಶುಕ್ರ ದೆಸೆ 20, ಶನಿ ದೆಸೆ 19, ರಾಹು ದೆಸೆ 18, ಕೇತು ದೆಸೆ 7. 60 ವರ್ಷ ತುಂಬಿದ ವ್ಯಕ್ತಿಗೆ ಷಷ್ಟಾಬ್ದಿ ಶಾಂತಿಯನ್ನು ಮಾಡುತ್ತಾರೆ. ಅಂದರೆ ಅವರ ಅರ್ಧ ಆಯಸ್ಸು ಕಳೆಯಿತು ಎಂದು. ಈ 60 ವರ್ಷದಲ್ಲಿ ಸಾಮಾನ್ಯವಾಗಿ ಶೇ.75 ಭಾಗ ನಿದ್ರೆಯಲ್ಲಿ ಕಳೆದಿರುತ್ತೇವೆ. ಉಳಿದ ಶೇ.25 ಭಾಗದಲ್ಲಿ ಒಂದು ಭಾಗವನ್ನು ಸಹ ಸತ್ಕಾರ್ಯಕ್ಕೆ ಉಪಯೋಗಿಸಿರುವುದು ಕಷ್ಟವೇ. ಜ್ಯೋತಿಷ ಆಧರಿತ 120 ವರ್ಷ ಇದ್ದರೂ ಉತ್ತಮ ಆರೋಗ್ಯ ಇದ್ದರೆ ಮಾತ್ರ ಅಷ್ಟು ವರ್ಷಗಳು ಜೀವಿಸಲು ಸಾಧ್ಯ. ಪ್ರತಿ ದಿನವೂ ಹೊಸ ವರ್ಷದ ದಿನ ಎಂದು ತಿಳಿದು ಸಮಯವನ್ನು ವ್ಯರ್ಥ ಮಾಡದೇ ಉತ್ತಮ ಜೀವನ ನಡೆಸುವುದು ನಮ್ಮ ಧರ್ಮ.

2019: ನವಗ್ರಹ ಸಂಚಾರ

ಹೊಸ ವರ್ಷದ ಹೊಸ್ತಿಲಲ್ಲಿ ನಾವಿದ್ದೇವೆ. ಯಾವ ರಾಶಿಗೆ ಶುಭ? ನವಗ್ರಹ ಸಂಚಾರ ಹೇಗಿರುತ್ತದೆ? ಕೌಟುಂಬಿಕ ಮತ್ತು ಆರೋಗ್ಯದ ವಿಚಾರದ ಬಗ್ಗೆ ರಾಶಿಫಲ ಹೇಳುವುದೇನು? ಖ್ಯಾತ ಜ್ಯೋತಿಷಿ ಬೆಂಗಳೂರು ನಿರಂಜನಬಾಬು ಅವರು ಇಲ್ಲಿ ವಿವರಿಸಿದ್ದಾರೆ. ಸೂರ್ಯ: ಜನವರಿ 13ರಂದು ಮಕರ ರಾಶಿಗೆ, ಫೆಬ್ರವರಿ 11ರಂದು ಕುಂಭ ರಾಶಿಗೆ, ಮಾರ್ಚ್‌ 13ರಂದು ಮೀನ ರಾಶಿಗೆ, ಏಪ್ರಿಲ್‌ 13ರಂದು ಮೇಷ ರಾಶಿಗೂ, ಮೇ13ರಂದು ವೃಷಭ ರಾಶಿಗೂ, ಜೂನ್‌ 14ರಂದು ಮಿಥುನ ರಾಶಿಗೂ, ಜುಲೈ 15ರಂದು ಕಟಕ ರಾಶಿಗೂ, ಆಗಸ್ಟ್‌ 16ರಂದು ಸಿಂಹ ರಾಶಿಗೂ, ಸೆಪ್ಟೆಂಬರ್‌ 16ರಂದು ಕನ್ಯಾ ರಾಶಿಗೂ, ಅಕ್ಟೋಬರ್‌ 16ರಂದು ತುಲಾ ರಾಶಿಗೂ, ನವೆಂಬರ್‌ 15ರಂದು ವೃಶ್ಚಿಕ ರಾಶಿಗೂ ಮತ್ತು ಡಿಸೆಂಬರ್‌ 15ರಂದು ಧನು ರಾಶಿಯಲ್ಲಿ ಸೂರ್ಯ ಪ್ರವೇಶಿಸುತ್ತಾನೆ. ಕುಜ: ಫೆಬ್ರವರಿ 3ರಂದು ಬುಧ ರಾಶಿಗೂ, ಮಾರ್ಚ್‌ 20ರಂದು ವೃಷಭ ರಾಶಿಗೂ, ಮೇ 5ರಂದು ಮಿಥುನ ರಾಶಿಗೂ, ಜೂನ್‌ 20ರಂದು ಕಟಕ ರಾಶಿಗೂ, ಆಗಸ್ಟ್‌ 6ರಂದು ಸಿಂಹ ರಾಶಿಗೂ, ಸೆಪ್ಟೆಂಬರ್‌ 23ರಂದು ಕನ್ಯಾ ರಾಶಿಗೂ, ನವೆಂಬರ್‌ 8ರಂದು ತುಲಾ ರಾಶಿಗೂ, ಡಿಸೆಂಬರ್‌ 23ರಂದು ವೃಶ್ಚಿಕ ರಾಶಿಯಲ್ಲಿ ಕುಜ ಅಥವಾ ಮಂಗಳ ಪ್ರವೇಶಿಸುತ್ತಾನೆ. ಬುಧ: ಜನವರಿ 19ರಂದು ಮಕರರಾಶಿಗೆ, ಫೆಬ್ರವರಿ 6ರಂದು ಕುಂಭ ರಾಶಿಗೆ, ಫೆಬ್ರವರಿ 24ರಂದು ಮೀನರಾಶಿಗೆ, ಮಾರ್ಚ್‌ 6ರಂದು ವಕ್ರಿಯಾಗಿ ಮಾರ್ಚ್‌ 16ರಂದು ಮತ್ತೆ ಕುಂಭರಾಶಿಯನ್ನು ಪ್ರವೇಶಿಸುತ್ತಾನೆ. ಮಾರ್ಚ್‌ 29ರಂದು ನೇರ ಪ್ರಭಾವವನ್ನು ಬೀರುತ್ತಾನೆ. ಏಪ್ರಿಲ್‌ 10ರಂದು ಮೀನರಾಶಿಗೆ, ಮೇ 2 ರಂದು ಮೇಷರಾಶಿಗೆ, ಮೇ 18ರಂದು ವೃಷಭರಾಶಿಗೂ, ಜೂನ್‌ 1ರಂದು ಮಿಥುನರಾಶಿಗೆ, ಜೂನ್‌ 19ರಂದು ಕಟಕರಾಶಿಗೆ ಪ್ರವೇಶಿಸಿ ಜುಲೈ 9ರಂದು ವಕ್ರಿಯಾಗುತ್ತಾನೆ. ಆಗಸ್ಟ್‌ 2ರಂದು ನೇರ ಪ್ರಭಾವವನ್ನು ಬೀರುತ್ತಾನೆ. ಆಗಸ್ಟ್‌ 25ರಂದು ಸಿಂಹರಾಶಿಗೆ, ಸೆಪ್ಟಂಬರ್‌ 10ರಂದು ಕನ್ಯಾರಾಶಿಗೆ, ಸೆಪ್ಟೆಂಬರ್‌ 28ರಂದು ತುಲಾರಾಶಿಗೆ, ಅಕ್ಟೋಬರ್‌ 22ರಂದು ವೃಶ್ಚಿಕ ರಾಶಿಗೆ ಪ್ರವೇಶಿಸಿ ನವೆಂಬರ್‌ 1ರಂದು ವಕ್ರಿಯಾಗುತ್ತಾನೆ. ನವೆಂಬರ್‌ 8ರಂದು ತುಲಾರಾಶಿಗೆ ಪ್ರವೇಶಿಸಿ ನವೆಂಬರ್‌ 22ರಂದು ನೇರ ಪ್ರಭಾವವನ್ನು ಬೀರುತ್ತಾನೆ. ಡಿಸೆಂಬರ್‌ 4ರಂದು ವೃಶ್ಚಿಕರಾಶಿಗೆ ಮತ್ತು ಡಿಸೆಂಬರ್‌ 24ರಂದು ಧನುರಾಶಿಯಲ್ಲಿ ಬುಧ ಪ್ರವೇಶಿಸುತ್ತಾನೆ. ಗುರು: ಮಾರ್ಚ್‌ 8ರಂದು ಧನುರಾಶಿಗೆ ಪ್ರವೇಶಿಸಿ ಏಪ್ರಿಲ್‌ 11ರಂದು ವಕ್ರಿಯಾಗುತ್ತಾನೆ. ಮೇ 14ರಂದು ವೃಶ್ಚಿಕರಾಶಿ ಪ್ರವೇಶಿಸಿ ಆಗಸ್ಟ್‌ 12ರಂದು ನೇರ ಪ್ರಭಾವ ಬೀರುತ್ತಾನೆ. ಅಕ್ಟೋಬರ್‌ 28ರಂದು ಧನುರಾಶಿಯಲ್ಲಿ ಗುರು ಪ್ರವೇಶಿಸುತ್ತಾನೆ. ಕನ್ಯಾ: ಜನವರಿ 28ರಂದು ಧನುರಾಶಿಗೆ, ಫೆಬ್ರವರಿ 23ರಂದು ಮಕರರಾಶಿಗೆ, ಮಾರ್ಚ್‌ 20ರಂದು ಕುಂಭರಾಶಿಗೆ, ಏಪ್ರಿಲ್‌ 14ರಂದು ಮೀನರಾಶಿಗೆ, ಮೇ 9ರಂದು ಮೇಷರಾಶಿಗೆ, ಜೂನ್‌ 3ರಂದು ವೃಷಭರಾಶಿಗೆ, 27ನೇ ಜೂನ್‌ರಂದು ಮಿಥುನರಾಶಿಗೆ, ಜುಲೈ 22ರಂದು ಕಟಕರಾಶಿಗೆ, ಆಗಸ್ಟ್‌ 15ರಂದು ಸಿಂಹರಾಶಿಗೆ, ಸೆಪ್ಟೆಂಬರ್‌ 8ರಂದು ಕನ್ಯಾ ರಾಶಿಗೆ, ಅಕ್ಟೋಬರ್‌ 3ರಂದು ತುಲಾರಾಶಿಗೆ, ಅಕ್ಟೋಬರ್‌ 27ರಂದು ವೃಶ್ಚಿಕರಾಶಿಗೆ, ನವೆಂಬರ್‌ 20ರಂದು ಧನುರಾಶಿಗೆ ಮತ್ತು ಡಿಸೆಂಬರ್‌ 14ರಂದು ಮಕರರಾಶಿಗೆ ಕನ್ಯಾ ಪ್ರವೇಶಿಸುತ್ತದೆ. ಶನಿ: ಮೇ 1ರಂದು ಧನುರಾಶಿಯಲ್ಲಿ ಶನಿಯು ವಕ್ರಿಯಾಗಿ ಸೆಪ್ಟೆಂಬರ್‌ 19ರವರೆಗೆ ನೇರ ಪ್ರಭಾವ ಬೀರುತ್ತಾನೆ. ರಾಹು-ಕೇತು: ರಾಹುಗ್ರಹವು ಏಪ್ರಿಲ್‌ 3ರಂದು ಮಿಥುನ ರಾಶಿಗೆ ಪ್ರವೇಶಿಸುತ್ತದೆ. ಏಪ್ರಿಲ್‌ 3ರಂದು ಧನುರಾಶಿಗೆ ಕೇತು ಪ್ರವೇಶಿಸುತ್ತದೆ. ಹೊಸ ವರ್ಷದ ರಾಶಿಫಲ; ಯಾರಿಗೆ, ಹೇಗಿದೆ? ಹೊಸ ವರ್ಷದ ಹೊಸ್ತಿಲಲ್ಲಿ ನಾವಿದ್ದೇವೆ. ಯಾವ ರಾಶಿಗೆ ಶುಭ? ಔದ್ಯೋಗಿಕ ಕ್ಷೇತ್ರದಲ್ಲಿರುವವರ ಬೆಳವಣಿಗೆ ಹೇಗೆ? ವಿದ್ಯಾರ್ಥಿಗಳಿಗೆ ಈ ವರ್ಷ ಶುಭದಾಯಕವೇ? ವ್ಯಾಪಾರಸ್ಥರಿಗೆ ಜ್ಯೋತಿಷ ದಿಕ್ಸೂಚಿ ಹೇಗಿದೆ? ಕೌಟುಂಬಿಕ ಮತ್ತು ಆರೋಗ್ಯದ ವಿಚಾರದ ಬಗ್ಗೆ ರಾಶಿಫಲ ಹೇಳುವುದೇನು? ಖ್ಯಾತ ಜ್ಯೋತಿಷಿ ಬೆಂಗಳೂರು ನಿರಂಜನಬಾಬು ಅವರು ಇಲ್ಲಿ ವಿವರಿಸಿದ್ದಾರೆ. ಮೇಷ (ಅಶ್ವಿನಿ, ಭರಣಿ ಮತ್ತು ಕೃತ್ತಿಕ 1): ವೃತ್ತಿಯಲ್ಲಿ ಉನ್ನತಿ ಸಾಧ್ಯತೆ. ವೃತ್ತಿಭೂಮಿಕೆಯಲ್ಲಿ ಕೆಲವರು ನಾಯಕರಾಗುವ ಸಂಭವ. ಹೆಚ್ಚುವರಿ ಜವಾಬ್ದಾರಿಗಳನ್ನು ಜಾಗರೂಕತೆಯಿಂದ ನಿರ್ವಹಿಸಿ. ಯಾವುದೇ ಪ್ರಮುಖ ನಿರ್ಣಯ ತೆಗೆದುಕೊಳ್ಳುವ ಮುನ್ನ ಸಹೋದ್ಯೋಗಿಗಳ ವಿಶ್ವಾಸವನ್ನು ಗಳಿಸಿರಿ. ನಿಮ್ಮ ಸುತ್ತಣ ಪರಿಸರದಲ್ಲಿರುವ ಬುದ್ಧಿವಂತ ಹಾಗೂ ಪ್ರಭಾವಿ ವ್ಯಕ್ತಿಗಳಿಂದ ಹೆಚ್ಚಿನ ಲಾಭ ಉಂಟಾಗುವುದು. ವ್ಯಾಪಾರ ಕ್ಷೇತ್ರದಲ್ಲಿರುವವರಿಗೆ ಕಠಿಣ ಸವಾಲುಗಳು ಎದುರಾಗುತ್ತವೆ. ಸ್ವಲ್ಪ ದುಡುಕಿದರೂ ಕಾನೂನಾತ್ಮಕ ತೊಡಕು ಉಂಟಾಗುವುದು. ಲೆಕ್ಕಾಚಾರದ ನಡಿಗೆ ಉತ್ತಮ. ತಜ್ಞರ ಸಲಹೆ ಪಡೆದು ಹೊಸ ಕಾರ್ಯಗಳನ್ನು ಪ್ರಾರಂಭಿಸಿದರೂ ಅಧಿಕ ಶ್ರಮವಾಗುತ್ತದೆ. ಸಾಕಷ್ಟು ಆದಾಯವಿದ್ದರೂ ಅದಕ್ಕೆ ತಕ್ಕಂತೆ ಖರ್ಚು ಇರುತ್ತದೆ. ನಿಮ್ಮ ಹಾಗೂ ಕುಟುಂಬದ ಆರೋಗ್ಯದ ವಿಚಾರದಲ್ಲಿ ಹೆಚ್ಚು ನಿಗಾ ವಹಿಸಿ. ಪದೇ ಪದೇ ಕಾಯಿಲೆ ಬೀಳುವ ಸಾಧ್ಯತೆ ಹೆಚ್ಚಿರುತ್ತದೆ. ಆಧ್ಯಾತ್ಮಿಕ ವ್ಯಕ್ತಿಗಳು ನೀವಾದ ಕಾರಣ ಪದೇ ಪದೇ ಪುಣ್ಯಕ್ಷೇತ್ರಗಳನ್ನು ದರ್ಶಿಸುತ್ತೀರಿ. ನಿಮ್ಮ ಸುತ್ತಣ ಪರಿಸರದೊಳಗೆ ಉತ್ತಮ ಪ್ರಶಂಸೆ ಲಭಿಸುವುದು. ಶೈಕ್ಷಣಿಕ ಕ್ಷೇತ್ರದಲ್ಲಿ ಉತ್ತಮ ಪ್ರಗತಿಯಿದೆ. ಆದರೆ ಚಿತ್ತಚಾಂಚಲ್ಯದ ಕಾರಣ ತೊಡರುಗಾಲು ಹೆಚ್ಚು. ಉನ್ನತ ವ್ಯಾಸಂಗ ಮಾಡಲಿಚ್ಛಿಸುವವರು ಮತ್ತಷ್ಟು ಶ್ರಮ ಪಡಬೇಕಾಗುತ್ತದೆ. ಹೊಸ ವರ್ಷದ ರಾಶಿಫಲ; ಯಾರಿಗೆ, ಹೇಗಿದೆ? ಹೊಸ ವರ್ಷದ ಹೊಸ್ತಿಲಲ್ಲಿ ನಾವಿದ್ದೇವೆ. ಯಾವ ರಾಶಿಗೆ ಶುಭ? ಔದ್ಯೋಗಿಕ ಕ್ಷೇತ್ರದಲ್ಲಿರುವವರ ಬೆಳವಣಿಗೆ ಹೇಗೆ? ವಿದ್ಯಾರ್ಥಿಗಳಿಗೆ ಈ ವರ್ಷ ಶುಭದಾಯಕವೇ? ವ್ಯಾಪಾರಸ್ಥರಿಗೆ ಜ್ಯೋತಿಷ ದಿಕ್ಸೂಚಿ ಹೇಗಿದೆ? ಕೌಟುಂಬಿಕ ಮತ್ತು ಆರೋಗ್ಯದ ವಿಚಾರದ ಬಗ್ಗೆ ರಾಶಿಫಲ ಹೇಳುವುದೇನು? ಖ್ಯಾತ ಜ್ಯೋತಿಷಿ ಬೆಂಗಳೂರು ನಿರಂಜನಬಾಬು ಅವರು ಇಲ್ಲಿ ವಿವರಿಸಿದ್ದಾರೆ. ವೃಷಭ (ಕೃತ್ತಿಕ 2, 3, 4, ರೋಹಿಣಿ ಮತ್ತು ಮೃಗಶಿರ 1,2) ಸ್ವಭಾವತಃ ಕುಶಲಿಗಳಾದ ನೀವು ಕಾರ್ಯಕ್ಷೇತ್ರದಲ್ಲಿ ಎಂತಹ ಅಡೆತಡೆಗಳನ್ನು ಎದುರಿಸಬಲ್ಲಿರಿ. ನಿಮ್ಮ ಕೌಶಲ್ಯದ ಕಾರಣ ಉತ್ತಮ ಫಲಿತಾಂಶ ಮೂಡುವ ಕಾರಣ ಮೇಲಧಿಕಾರಿಗಳ ಪ್ರಶಂಸೆಗೆ ಪಾತ್ರರಾಗುವಿರಿ. ನಾಯಕರಾಗಿದ್ದ ಪಕ್ಷದಲ್ಲಿ ನಿಮ್ಮ ಅಧಿಕಾರ ವ್ಯಾಪ್ತಿಯನ್ನು ಮೀರಿ ನಡೆಯದಿರಿ. ವ್ಯಾವಹಾರಿಕ ಚಟುವಟಿಕೆಗಳು ಉತ್ತಮವಾಗಿರುತ್ತವೆ. ವೃತ್ತಿಭೂಮಿಕೆಗೆ ಸಂಬಂಧಿಸಿದಂತೆ ವಿವಾದಗಳಿಂದ ದೂರವಿರಿ. ವೃತ್ತಿಭೂಮಿಕೆಯ ಉನ್ನತಿಗೆ ಪೂರಕವಾಗುವಂತ ಹೊಸ ವಿಷಯಗಳ ಕಲಿಕೆಯಲ್ಲಿ ಆಸಕ್ತಿ ತೋರಿದರೆ ಒಳಿತಾಗುತ್ತದೆ. ವರ್ಷವಿಡೀ ಉತ್ತಮ ಆದಾಯವಿದ್ದರೂ ನೀರಿನಂತೆ ಹಣ ಪೋಲಾಗುವ ಸಾಧ್ಯತೆಯಿದೆ. ಬಂಡವಾಳ ಹೂಡಿಕೆಯಲ್ಲಿ ತಜ್ಞರ ಅಭಿಪ್ರಾಯ ಪಡೆದು ಮುನ್ನಡೆಯಿರಿ. ವಯಸ್ಸಾದವರು ಆರೋಗ್ಯದ ವಿಚಾರದಲ್ಲಿ ಹೆಚ್ಚು ಗಮನ ವಹಿಸಿ. ವರ್ಷವಿಡೀ ಸಾಮಾನ್ಯ ಆರೋಗ್ಯವಿದ್ದರೂ ವರ್ಷಾಂತ್ಯದಲ್ಲಿ ಆರೋಗ್ಯ ವಿಚಾರದಲ್ಲಿ ಸ್ವಲ್ಪ ಮಟ್ಟಿಗೆ ಏರುಪೇರಾಗುವ ಸಾಧ್ಯತೆ ಹೆಚ್ಚು. ಅಪಘಾತ, ಅವಘಡಗಳಿಗೆ ಕಾರಣವಾಗುವ ಕಾರ್ಯಕ್ಷೇತ್ರದಿಂದ ಆದಷ್ಟೂ ದೂರವಿರಿ. ಕೌಟುಂಬಿಕ ವ್ಯವಹಾರದಲ್ಲಿ ಸಮಾಧಾನ ಚಿತ್ತರಾಗಿ. ಕೋಪ ಅನರ್ಥಕ್ಕೆ ಕಾರಣವಾಗಬಹುದು. ಪದೇ ಪದೇ ಅನುಮಾನ ಪಡುವ ಪ್ರವೃತ್ತಿಯ ಕಾರಣ ಬಂಧು, ಮಿತ್ರ ಹಾಗೂ ಪ್ರೀತಿಪಾತ್ರರಲ್ಲಿ ವೈಮನಸ್ಯ ಉಂಟಾಗಬಹುದು. ಸಂಗಾತಿಯ ನಿರೀಕ್ಷೆಯಲ್ಲಿರುವವರಿಗೆ ಸಿಗುವ ಸಾಧ್ಯತೆ ಹೆಚ್ಚು. ಸಹವಾಸ ಬೆಳಸುವಾಗ ಎಚ್ಚರವಿರಲಿ. ನಿಮ್ಮ ಪ್ರಯತ್ನದ ಫಲವಾಗಿ ಕುಟುಂಬದಲ್ಲಿ ಸಾಮರಸ್ಯ ಉಂಟಾಗುತ್ತದೆ. ಪ್ರೌಢ ವಯಸ್ಸಿನವರು ವಿದ್ಯಾಭ್ಯಾಸದತ್ತ ಹೆಚ್ಚು ಗಮನ ಹರಿಸಬೇಕು. ಉನ್ನತ ಶಿಕ್ಷಣಕ್ಕೆ ಸಾಕಷ್ಟು ಅವಕಾಶವಿದೆ. ಯಾವುದೇ ಕೆಲಸದಲ್ಲಾದರೂ ಏಕಾಗ್ರತೆ ಸಾಧನೆ ಮುಖ್ಯವೆನಿಸುತ್ತದೆ. ಹೊಸ ವರ್ಷದ ರಾಶಿಫಲ; ಯಾರಿಗೆ, ಹೇಗಿದೆ? ಹೊಸ ವರ್ಷದ ಹೊಸ್ತಿಲಲ್ಲಿ ನಾವಿದ್ದೇವೆ. ಯಾವ ರಾಶಿಗೆ ಶುಭ? ಔದ್ಯೋಗಿಕ ಕ್ಷೇತ್ರದಲ್ಲಿರುವವರ ಬೆಳವಣಿಗೆ ಹೇಗೆ? ವಿದ್ಯಾರ್ಥಿಗಳಿಗೆ ಈ ವರ್ಷ ಶುಭದಾಯಕವೇ? ವ್ಯಾಪಾರಸ್ಥರಿಗೆ ಜ್ಯೋತಿಷ ದಿಕ್ಸೂಚಿ ಹೇಗಿದೆ? ಕೌಟುಂಬಿಕ ಮತ್ತು ಆರೋಗ್ಯದ ವಿಚಾರದ ಬಗ್ಗೆ ರಾಶಿಫಲ ಹೇಳುವುದೇನು? ಖ್ಯಾತ ಜ್ಯೋತಿಷಿ ಬೆಂಗಳೂರು ನಿರಂಜನಬಾಬು ಅವರು ಇಲ್ಲಿ ವಿವರಿಸಿದ್ದಾರೆ. ಮಿಥುನ (ಮೃಗಶಿರ 3,4, ಆರಿದ್ರಾ ಮತ್ತು ಪುನರ್ವಸು 1,2,3) ವೃತ್ತಿಕ್ಷೇತ್ರದಲ್ಲಿ ಸ್ವಲ್ಪ ನಿರ್ಲಕ್ಷ್ಯ ವಹಿಸಿದರೂ ಅನಾಹುತ ತಪ್ಪಿದ್ದಲ್ಲ. ಕಚೇರಿಯ ಕೆಲಸಕ್ಕೆ ಹೆಚ್ಚು ಸಮಯ ವ್ಯಯ ಮಾಡಿ. ನಿರ್ಣಯ ತೆಗೆದುಕೊಳ್ಳುವ ಮುನ್ನ ಸಮಾಲೋಚಿಸಿ. ವ್ಯಾಪಾರೋದ್ಯಮ ಕ್ಷೇತ್ರದಲ್ಲಿರುವವರು ತಜ್ಞರ ಸಲಹೆ ಪಡೆದು ಕಾನೂನಾತ್ಮಕ ಚೌಕಟ್ಟಿನಲ್ಲೇ ವ್ಯಾಪಾರವನ್ನು ನಿರ್ವಹಿಸಬೇಕು. ಪಾಲುದಾರಿಕೆ ವ್ಯವಹಾರದಲ್ಲಿ ಸ್ವಲ್ಪ ತೊಡಕಿದೆ. ವರ್ಷವಿಡೀ ಹಣಕಾಸಿನ ಲೆಕ್ಕಾಚಾರ, ಆಯವ್ಯಯ ಹಾಕಿಕೊಳ್ಳುವುದು ಒಳ್ಳೆಯದು. ಒಂದೊಮ್ಮೆ ಸ್ವಲ್ಪ ಅಜಾಗರೂಕರಾದರೂ ತೊಂದರೆ ತಪ್ಪಿದ್ದಲ್ಲ. ಅಲರ್ಜಿ ಮತ್ತು ಸೋಂಕು ಕಾಡುವ ಸಾಧ್ಯತೆಯಿದೆ. ವಯಸ್ಸಾದವರು ತಮ್ಮ ಆರೋಗ್ಯದ ಕಡೆ ನಿಗಾ ವಹಿಸುವುದು ಒಳ್ಳೆಯದು. ವರ್ಷದ ಮೊದಲ ಕೆಲ ತಿಂಗಳಲ್ಲಿ ಸಾಂಸಾರಿಕ ಭಿನ್ನಾಭಿಪ್ರಾಯ ಉಂಟಾಗಬಹುದು. ಮುಂದಿನ ದಿನಗಳಲ್ಲಿ ಕನಸು ನನಸಾಗುತ್ತದೆ. ನಿರೀಕ್ಷಿತ ಫಲ ನೀಡುತ್ತದೆ. ಬಂಧು, ಮಿತ್ರರಲ್ಲಿ ವ್ಯವಹರಿಸುವಾಗ ಜಾಗ್ರತೆಯಿರಿಲಿ. ವೈಮನಸ್ಯ ಬಾರದಂತೆ ನೋಡಿಕೊಳ್ಳಿ. ಆಧ್ಯಾತ್ಮಿಕ ಜೀವನಶೈಲಿಗೆ ಒಗ್ಗಿಕೊಳ್ಳುವುದರಿಂದ ಮನಸ್ಸಿಗೆ ಸ್ವಲ್ಪ ಸಮಾಧಾನ ಸಿಗುತ್ತದೆ. ಆಧ್ಯಾತ್ಮಿಕ ಮನೋಭಾವನೆ ಉಳ್ಳವರಿಗೆ ಪುಣ್ಯಕ್ಷೇತ್ರ ದರ್ಶನ ಭಾಗ್ಯ. ಉನ್ನತ ಶಿಕ್ಷಣದಲ್ಲಿ ಉತ್ತಮ ಫಲಿತಾಂಶ. ವಿದ್ಯಾರ್ಥಿಗಳಿಗೆ ಉತ್ತಮ ಪ್ರಗತಿ. ಸಂಶೋಧನಾ ಕ್ಷೇತ್ರದಲ್ಲಿರುವವರಿಗೆ ಪ್ರಗತಿ ಸ್ವಲ್ಪ ನಿಧಾನವಾದರೂ ಉತ್ತಮ ಫಲಿತಾಂಶ ದೊರೆಯುತ್ತದೆ. ಕಟಕ (ಪುನರ್ವಸು 4, ಪುಷ್ಯ ಮತ್ತು ಆಶ್ಲೇಷ) : ವೃತ್ತಿಭೂಮಿಕೆಯಲ್ಲಿ ಉತ್ತಮ ಪ್ರಗತಿ ಸಾಧಿಸುವಿರಿ. ಸಹೋದ್ಯೋಗಿಗಳ ನೆರವು ದೊರೆತು ಉತ್ತಮ ಟೀಂ ಲೀಡರ್‌ ಆಗುವಿರಿ. ಆದರೆ ಹೊಸ ಆಲೋಚನೆಗಳನ್ನು ಅಳವಡಿಸಿಕೊಳ್ಳುವುದು ಕಷ್ಟವೆನಿಸುತ್ತದೆ. ಕೌಶಲ್ಯಾಭಿವೃದ್ಧಿಯಲ್ಲಿ ಪದೇ ಪದೇ ಶ್ರಮ ಪಡುವುದರಿಂದ ಉತ್ತಮ ಫಲಿತಾಂಶ ನಿರೀಕ್ಷಿಸಬಹುದು. ವ್ಯಾಪಾರಿಗಳಿಗೆ ಉತ್ತಮ ಕಾಲ. ಪರಿಣಿತರಲ್ಲಿ ಸೂಕ್ತ ಸಲಹೆ ಪಡೆಯುವುದರಿಂದ ವ್ಯಾಪಾರದಲ್ಲಿ ಪ್ರಗತಿ ಹೊಂದುವಿರಿ. ಆದ್ಯತೆಯ ಮೇರೆಗೆ ಕೆಲಸಕಾರ್ಯಗಳನ್ನು ಮಾಡುವ ಮೂಲಕ ಸಮಯ ನಿರ್ವಹಣೆ ಸಾಧ್ಯವಾಗುತ್ತದೆ. ವರ್ಷವಿಡೀ ಲಾಭದಾಯಕವಾಗಿದೆ. ಬಂಡವಾಳ ಹೂಡಿಕೆಯಲ್ಲಿ ತಜ್ಞರ ಸಲಹೆ ಪಡೆಯಿರಿ. ಆರೋಗ್ಯ ವಿಚಾರ ಉತ್ತಮವಾಗಿದೆ. ಸಮಸ್ಯೆಗಳು ಪರಿಹಾರವಾಗುತ್ತವೆ. ಆದರೆ ವೈದ್ಯಕೀಯ ಮತ್ತು ಪಥ್ಯದ ವಿಚಾರದಲ್ಲಿ ಎಚ್ಚರವಿರಲಿ. ಸಾಮಾಜಿಕ ಬಾಂಧವ್ಯ ಸುಧಾರಿಸುತ್ತದೆ. ಕಲೆ ಮತ್ತಿತರ ವಿಷಯಗಳಲ್ಲಿ ಉನ್ನತ ವ್ಯಾಸಂಗ ಬಯಸಿರುವವರು ನೀವಾಗಿದ್ದರೆ ಉತ್ತಮ ಪ್ರಗತಿ ಕಾಣುವಿರಿ. ಜೀವನ ಸಂಗಾತಿಯ ಹುಡುಕಾಟದಲ್ಲಿ ಯಶಸ್ಸು ಕಾಣುವಿರಿ. ಸ್ನೇಹಿತರ ಆಯ್ಕೆಯಲ್ಲಿ ಎಚ್ಚರವಿರಲಿ. ಸ್ವಲ್ಪ ಎಚ್ಚರ ತಪ್ಪಿದರೂ ಸಮಾಜದಲ್ಲಿ ನಿಮ್ಮ ಘನತೆ ಮಣ್ಣುಪಾಲಾಗುತ್ತದೆ ಎಚ್ಚರ. ವಿದ್ಯಾರ್ಥಿಗಳಿಗೆ ಉತ್ತಮ ಭವಿಷ್ಯವಿದೆ. ಆದರೆ ಚಿತ್ತಚಾಂಚಲ್ಯವನ್ನು ಬದಿಗೊತ್ತುವುದು ಅತ್ಯವಶ್ಯ. ಪರಿಣಿತಿ ಹೊಂದಬೇಕೆಂದು ಬಯಸುವವರು ಮತ್ತಷ್ಟು ಶ್ರಮ ಪಡಬೇಕು. ಸಿಂಹ (ಮಖ, ಪೂರ್ವಫಲ್ಗುಣಿ ಮತ್ತು ಉತ್ತರ ಫಲ್ಗುಣಿ 1): ವೃತ್ತಿ ಭೂಮಿಕೆಯಲ್ಲಿರುವವರು ಸಾಕಷ್ಟು ಸವಾಲುಗಳನ್ನು ಎದುರಿಸುವಿರಿ. ಹೊಸ ಜವಾಬ್ದಾರಿ ಹೊರ ಬಯಸುವವರು ತಾಳ್ಮೆಯಿಂದ ಇರುವುದು ಒಳ್ಳೆಯದು. ಬೆಳವಣಿಗೆಯ ಹಾದಿಯಲ್ಲಿ ನಿಮ್ಮ ದಿಕ್ಕು ತಪ್ಪಿಸುವವರೇ ಹೆಚ್ಚಿರುವುದರಿಂದ ನಿಮ್ಮತನವನ್ನು ಪ್ರದರ್ಶಿಸುವುದು ಸ್ವಲ್ಪ ಕಷ್ಟವಾದೀತು. ವ್ಯಾಪಾರಿಗಳು ಹೆಚ್ಚು ಶ್ರಮ ವಹಿಸಬೇಕಾಗುತ್ತದೆ. ಸ್ಪರ್ಧಾತ್ಮಕ ಜಗದಲ್ಲಿ ನಿಲ್ಲಲು ಕೌಶಲ್ಯವನ್ನು ಹೆಚ್ಚಿಸಿಕೊಳ್ಳಬೇಕಾಗುತ್ತದೆ. ಸಮರ್ಪಕ ಸಂಪನ್ಮೂಲಗಳನ್ನು ಸರಿಯಾಗಿ ಬಳಸಿಕೊಳ್ಳಿ. ನಿಮ್ಮ ಲೆಕ್ಕಾಚಾರಗಳ ಮೇಲೆ ಪೂರ್ವಗ್ರಹ ಪ್ರಭಾವ ಉಂಟಾಗದಂತೆ ನೋಡಿಕೊಳ್ಳಿ. ಆರೋಗ್ಯದ ವಿಚಾರದಲ್ಲಿ ಸ್ವಲ್ಪ ಗಮನವಿರಲಿ. ಮನೆಯಲ್ಲಿ ಸುಖ, ಶಾಂತಿ ನೆಲೆಸುತ್ತದೆ. ಸಕಾರಾತ್ಮಕ ಚಿಂತನೆಗಳನ್ನು ಮೈಗೂಡಿಸಿಕೊಳ್ಳುವುದರಿಂದ ನಕಾರಾತ್ಮಕ ಅಂಶಗಳು ದೂರಾಗುತ್ತವೆ. ಕಾರ್ಯಕ್ಷೇತ್ರದತ್ತ ವಿಶೇಷ ಗಮನ ಹರಿಸುವುದರಿಂದ ಮೇಲಧಿಕಾರಿಗಳಿಂದ ಉತ್ತಮ ಪ್ರಶಂಸೆ ಗಳಿಸುವಿರಿ. ಆದರೆ ಯಾವ ಕಾರಣಕ್ಕೂ ನಿಮ್ಮ ಪ್ರಯತ್ನಗಳು ನೀರಿನಲ್ಲಿ ಹೋಮವಾಗದಂತೆ ನೋಡಿಕೊಳ್ಳಿ. ಜಾಣ್ಮೆಯ ನಡೆಯಿಂದ ಬಂಧು ಮಿತ್ರರಲ್ಲಿ ವೈಮನಸ್ಯ ಉಂಟಾಗುವುದನ್ನು ತಪ್ಪಿಸಬಹುದು. ನಿಮ್ಮ ಏಳ್ಗೆಗೆ ನೆರವಾಗುವವರ ಸಹವಾಸವನ್ನು ಮಾಡಿ. ಅನಗತ್ಯ ವದಂತಿಗಳಿಗೆ ಕಿವಿಗೊಡಬೇಡಿ. ವಿದ್ಯಾರ್ಥಿಗಳು ಓದಿನಲ್ಲಿ ಏಕಾಗ್ರತೆ ಮೂಡಿಸಿಕೊಳ್ಳದ ಹೊರತು ಅಭ್ಯುದಯ ಸಾಧ್ಯವಿಲ್ಲ. ಯಾವ ಕಾರಣಕ್ಕೆ ವ್ಯಾಸಂಗದಲ್ಲಿ ಹಿಂದುಳಿದಿದ್ದೀರಿ ಎಂಬುದನ್ನು ಅರಿತು ಸರಿಪಡಿಸಿಕೊಳ್ಳಲು ತಜ್ಞರ ಸಲಹೆ ಪಡೆಯಿರಿ. ಅಂದುಕೊಂಡ ಗುರಿ ಮುಟ್ಟಲು ಶಿಸ್ತುಬದ್ಧ ಜೀವನ ಮತ್ತು ಏಕಾಗ್ರತೆ ಅತ್ಯವಶ್ಯ. ಕನ್ಯಾ (ಉತ್ತರಫಲ್ಗುಣಿ 2,3,4, ಹಸ್ತ ಮತ್ತು ಚಿತ್ತ 1,2): ಕಾರ್ಯಕ್ಷೇತ್ರದಲ್ಲಿ ಸಾಕಷ್ಟು ಸವಾಲುಗಳು ಎದುರಾಗುತ್ತವೆ. ಸಹೋದ್ಯೋಗಿಗಳೊಂದಿಗೆ ಜಾಣ್ಮೆಯಿಂದ ವ್ಯವಹರಿಸಿ. ನಡೆ ಸುಲಭವಲ್ಲ. ಕ್ಲಿಷ್ಟಕರ ಸನ್ನಿವೇಶಗಳನ್ನು ಎದುರಿಸಲು ಮಾನಸಿಕವಾಗಿ ಸನ್ನದ್ಧರಾಗಿ. ವ್ಯಾಪಾರಿಗಳು ತಮ್ಮ ಕ್ಷೇತ್ರದಲ್ಲಿ ತೀವ್ರ ಪೈಪೋಟಿ ಹಾಗೂ ಪಾಲುದಾರರ, ಸೇವಕ ವರ್ಗದವರ ಅಸಹಕಾರವನ್ನೂ ಎದುರಿಸುವ ಸಾಧ್ಯತೆ ಹೆಚ್ಚು. ಆದರೆ ನಿರಂತರ ಪ್ರಯತ್ನದಿಂದ ಯಶಸ್ಸು ಶತಸ್ಸಿದ್ಧ. ಆತ್ಮಸ್ಥೈರ್ಯವನ್ನು ವೃದ್ಧಿಸಿಕೊಳ್ಳುವ ಮೂಲಕ ಉತ್ತಮ ಅವಕಾಶಗಳನ್ನು ನಿಮ್ಮದಾಗಿಸಿಕೊಳ್ಳುವಿರಿ. ಅನಗತ್ಯ ವಿವಾದಗಳಿಂದ ದೂರವಿರಿ. ಕುಟುಂಬ ಸದಸ್ಯರ ಆರೋಗ್ಯದ ವಿಚಾರದಲ್ಲಿ ಎಚ್ಚರವಿರಲಿ. ಅದರಲ್ಲೂ ಅಲರ್ಜಿ ಮತ್ತು ಸೋಂಕಿನಿಂದ ಪದೇ ಪದೇ ಭಾದಿತರಾಗುತ್ತಿದ್ದರೆ ಜಾಗರೂಕರಾಗಿರಿ. ಕುಟುಂಬ ಸದಸ್ಯರಲ್ಲಿ ಭಿನ್ನಾಭಿಪ್ರಾಯ ಮತ್ತು ಅಸಂತೋಷ ಉಂಟಾಗುವ ಸಾಧ್ಯತೆ. ವರ್ಷಾಂತ್ಯದಲ್ಲಿ ಉತ್ತಮ ಫಲಿತಾಂಶ ನಿರೀಕ್ಷಿಸಬಹುದು. ಆಧ್ಯಾತ್ಮಿಕ ಹಾಗೂ ಧಾರ್ಮಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಿ. ನಿಯಮಿತ ಲೆಕ್ಕಾಚಾರದಿಂದ ಹಣಕಾಸಿನ ವ್ಯವಹಾರ ಉತ್ತಮವಾಗುತ್ತದೆ. ವಿದ್ಯಾರ್ಥಿಗಳು ಏಕಾಗ್ರತೆ ಕಳೆದುಕೊಳ್ಳುವ ಕಾರಣ ಅಂದುಕೊಂಡ ಗುರಿಮುಟ್ಟಲು ವಿಫಲರಾಗಬಹುದು. ಉನ್ನತ ವ್ಯಾಸಂಗದಲ್ಲಿ ಮುಂದುವರಿಯಲು ಕೌಶಲಾಭಿವೃದ್ಧಿ ಮುಖ್ಯವೆನಿಸುತ್ತದೆ. ಮುಂದಿನ ಭವಿಷ್ಯದ ಬಗ್ಗೆ ಆಲೋಚಿಸಿ ಮುನ್ನಡೆಯಿರಿ. ತುಲಾ (ಚಿತ್ತ 3, 4, ಸ್ವಾತಿ ಮತ್ತು ವಿಶಾಖ 1, 2, 3): ವೃತ್ತಿಭೂಮಿಕೆಯಲ್ಲಿ ಹೊಸ ಅಸೈನ್‌ಮೆಂಟ್‌ಗಳು ಎಡತಾಕುತ್ತವೆ. ಸಮರ್ಪಕ ವ್ಯಕ್ತಿಗಳೊಂದಿಗೆ ಬೆರೆಯುವುದರಿಂದ ಔದ್ಯೋಗಿಕ ಕ್ಷೇತ್ರದಲ್ಲಿ ಉನ್ನತಿ ಹೊಂದುವಿರಿ. ಸಕ್ರಿಯರಾಗಿ ತೊಡಗಿಸಿಕೊಳ್ಳಿ. ಕಲಿಯಲು ಸಾಕಷ್ಟು ಅವಕಾಶವಿದೆ. ವ್ಯಾಪಾರೋದ್ಯಮಿಗಳ ಬೆಳವಣಿಗೆಗೆ ಉತ್ತಮ ಅವಕಾಶವಿದೆ. ಪ್ರಸ್ತುತ ತೊಡಗಿಸಿಕೊಂಡಿರುವ ವ್ಯಾಪಾರ ಕ್ಷೇತ್ರವನ್ನು ಮತ್ತೂ ವಿಸ್ತರಿಸಿಕೊಳ್ಳುವುದರಿಂದ ಉತ್ತಮ ಫಲಿತಾಂಶ ಹೊಂದುವಿರಿ. ಕೆಲವೊಮ್ಮೆ ನಡೆವ ಹಾದಿಯಲ್ಲಿ ಅಡೆತಡೆ ಉಂಟಾದೀತು ಎಚ್ಚರ. ಆದರೆ ಸ್ನೇಹಿತರ ಸಹಕಾರದಿಂದ ಮುನ್ನಡೆಯುವಿರಿ. ನಿಮ್ಮ ಸುತ್ತಮುತ್ತಲ ವರ್ತುಲದಿಂದ ಆದಾಯ ಸಾಧ್ಯತೆಯಿದೆ. ಸಣ್ಣ ಪುಟ್ಟ ತೊಂದರೆಯ ಹೊರತಾಗಿ ವರ್ಷವಿಡೀ ಆರೋಗ್ಯ ಉತ್ತಮವಾಗಿರುತ್ತದೆ. ಸ್ನೇಹಿತರು ಮತ್ತು ಕುಟುಂಬದವರೊಂದಿಗೆ ಕಾಲಕಳೆಯಲು ಸಮಯ ಸಿಗುವುದು. ಹೊಸ ವಿಷಯ ಕಲಿಯಲು ಆಸಕ್ತಿ ತೋರಿಸುವಿರಿ. ಯಾವುದೇ ಸನ್ನಿವೇಶವನ್ನು ನಿಭಾಯಿಸಲು ಕೌಟಿಂಬಿಕ ಸಂದರ್ಭವು ಕಾರಣವಾಗುತ್ತದೆ. ನೀವೆಣಿಸಿದ ಕ್ಷೇತ್ರದಲ್ಲಿ ಪರಿಣತಿ ಹೊಂದುವಿರಿ. ಮಾಡುವ ಕೆಲಸದಲ್ಲಿ ಏಕಾಗ್ರತೆಯಿರಲಿ. ವದಂತಿಗಳಿಗೆ ಕಿವಿಗೊಡಬೇಡಿ. ವಿದ್ಯಾರ್ಥಿಗಳು ಅನಪೇಕ್ಷಿತ ವಿಷಯಗಳನ್ನು ಮರೆತು ವ್ಯಾಸಂಗದತ್ತ ಹೆಚ್ಚು ಗಮನ ಹರಿಸಬೇಕು. ಹಿರಿಯರ ಮತ್ತು ತಜ್ಞರ ಅಭಿಪ್ರಾಯ, ಸೂಕ್ತ ಸಲಹೆ ಪಡೆದು ಮುನ್ನಡೆಯುವ ಮೂಲಕ ಶೈಕ್ಷಣಿಕ ಕ್ಷೇತ್ರದಲ್ಲಿ ಉತ್ತಮ ಪ್ರಗತಿ ಕಾಣುವಿರಿ. ಮುಂದಿನ ಆಗುಹೋಗಗಳತ್ತ ಗಮನ ಹರಿಸುವುದರಿಂದ ಉತ್ತಮ ಭವಿಷ್ಯ ನಿಮ್ಮದಾಗುತ್ತದೆ. ವೃಶ್ಚಿಕ (ವಿಶಾಖ 4, ಅನುರಾಧ ಮತ್ತು ಜ್ಯೇಷ್ಠ): ಹೊಸ ಚಟುವಟಿಕೆಗಳಲ್ಲಿ ನಿಮ್ಮನ್ನು ನೀವು ತೊಡಗಿಸಿಕೊಳ್ಳುವಿರಿ. ಆ ಕ್ಷೇತ್ರದಲ್ಲಿ ಉನ್ನತಿ ಸಾಧಿಸಲು ಸಾಕಷ್ಟು ಸಮಯ ವ್ಯಯ ಮತ್ತು ಪರಿಶ್ರಮವನ್ನು ಹಾಕಬೇಕಾಗುತ್ತದೆ. ಸೂಕ್ತ ಸಮಯದಲ್ಲಿ ಸಮರ್ಪಕವಾಗಿ ಕಾರ್ಯ ನಿರ್ವಹಿಸಲು ನಿಮ್ಮ ಅನುಭವ ಸೂಕ್ತ ವೇದಿಕೆಯಾಗುತ್ತದೆ. ವೃತ್ತಿಪರಿಣಿತರು ಉನ್ನತಿ ಹೊಂದಲು ಮತ್ತೆ ಮತ್ತೆ ಶ್ರಮ ಪಡಬೇಕಾದದ್ದು ಅನಿವಾರ್ಯ. ಔದ್ಯೋಗಿಕ ಕ್ಷೇತ್ರದಲ್ಲಿ ವಿವಾದಗಳನ್ನು ನಿರ್ವಹಿಸಬೇಕಾಗುತ್ತದೆ. ವ್ಯಾಪಾರಿಗಳು ತಮ್ಮ ನಡೆಯಲ್ಲಿ ಪಾಲುದಾರಿಕೆ ವ್ಯವಹಾರದಲ್ಲಿ ಜಾಗರೂಕರಾಗಿರಬೇಕು. ನಿರ್ದಿಷ್ಟ ಗುರಿಯನ್ನು ಸರಿಯಾದ ಸಮಯದಲ್ಲಿ ಮುಟ್ಟುವತ್ತ ಗಮನಹರಿಸಿ. ಇಲ್ಲವಾದರೆ ಅನಗತ್ಯವಾಗಿ ದಂಡ ಪಾವತಿಸಬೇಕಾಗುತ್ತದೆ ಅದರೊಂದಿಗೆ ಕಳಂಕದ ಹಣೆಪಟ್ಟಿಯನ್ನೂ ಕಟ್ಟಿಕೊಳ್ಳುವಿರಿ. ಹಣಕಾಸಿನ ವ್ಯವಹಾರದಲ್ಲಿ ಲಾಭ ನಷ್ಟ ಲೆಕ್ಕಾಚಾರದತ್ತ ಗಮನವಿರಲಿ. ಯಾರೊಬ್ಬರ ಆಮಿಷಕ್ಕೂ ಒಳಗಾಗಬೇಡಿ. ವರ್ಷವಿಡೀ ಆರೋಗ್ಯದತ್ತ ಗಮನವಿರಲಿ. ವಿನಾಕಾರಣ ಮಾತುಕತೆ, ವಿವಾದ ಮತ್ತು ಅನಗತ್ಯ ಸಂದೇಹಗಳಿಗೆ ಎಡೆಮಾಡಿಕೊಡಬೇಡಿ. ಅದರಿಂದ ಮನಸ್ಸಿನ ಸ್ವಾಸ್ಥ್ಯ ಹಾಳಾಗುತ್ತದೆ. ಕಷ್ಟನಷ್ಟದ ಸಂದರ್ಭಗಳು ಎದುರಾಗುವ ಸಾಧ್ಯತೆ ಹೆಚ್ಚು. ಆಂತರಿಕವಾಗಿ ಸರಳವಾಗಿದ್ದರೂ ಇತರರಿಗೆ ನಿಮ್ಮ ಸ್ವಭಾವ ಗಡುಸೆನಿಸಬಹುದು. ಕಷ್ಟಕರ ಸನ್ನಿವೇಶಗಳಲ್ಲಿ ಆಪ್ತ ಸ್ನೇಹಿತರು ನಿಮಗೆ ನೆರವಾಗುವರು. ಏಕತಾನತೆಯಿಂದ ಹೊರಬಂದು ಎಲ್ಲರೊಡನೆ ಬೆರೆಯಿರಿ. ಮನಸ್ಸನ್ನು ಸಕಾರಾತ್ಮಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಿ. ಯಾರ ಸಖ್ಯದಿಂದ ನಿಮಗೆ ಕೇಡಾಗುತ್ತದೆ ಎನಿಸುತ್ತದೆಯೇ ಅಂತಹವರ ಸಹವಾಸದಿಂದ ದೂರವಿರಿ. ವಿದ್ಯಾರ್ಥಿಗಳು ಸಕಾರಾತ್ಮಕವಾಗಿ ಚಿಂತಿಸಬೇಕು. ತಮ್ಮ ಗುರಿಯತ್ತ ಗಮನ ಹರಿಸಬೇಕು. ವ್ಯಾಸಂಗದಲ್ಲಿ ಏಕಾಗ್ರತೆಯನ್ನು ಹೊಂದಿ. ಧನು (ಮೂಲ, ಪೂರ್ವಾಷಾಢ ಮತ್ತು ಉತ್ತರಾಷಾಢ 1): ಸೇವಾಕ್ಷೇತ್ರದಲ್ಲಿ ಬದಲಾವಣೆ ಸಾಧ್ಯತೆ ಹೆಚ್ಚು. ಕಾರ್ಯಕ್ಷೇತ್ರದಲ್ಲಿ ಅಡೆತಡೆಗಳು ಹೆಚ್ಚಾಗುವ ಸಾಧ್ಯತೆ. ನಿಯಮಿತವಾಗಿ ಕಾರ್ಯದತ್ತ ಗಮನ ಹರಿಸುವುದರಿಂದ ಸಂಕಷ್ಟದ ಸಮಯದಿಂದ ಪಾರಾಗುವಿರಿ. ನಿಮ್ಮ ಸೋಲಿನ ಕಾರಣವನ್ನು ನೀವೇ ಅವಲೋಕಿಸಿಕೊಂಡು ಸರಿಪಡಿಸಿಕೊಳ್ಳಿ. ಯಾವುದೇ ವಿಷಯ, ವಿಚಾರವನ್ನು ಅನುಷ್ಠಾನಗೊಳಿಸುವ ಮುನ್ನ ಲೆಕ್ಕಾಚಾರದಿಂದ ಮುನ್ನಡೆಯಿರಿ. ಸ್ವಲ್ಪ ತಾಳ್ಮೆ ವಹಿಸಿ ಮುನ್ನಡೆದರೆ ಮುಂದಿನ ದಿನಗಳಲ್ಲಿ ಉತ್ತಮ ಫಲಿತಾಂಶ ಕಾಣುವಿರಿ. ಹಣಕಾಸಿನ ವಿಚಾರದಲ್ಲಿ ಖರ್ಚು, ವೆಚ್ಚ ಅಧಿಕವಾಗುತ್ತದೆ. ಯಾವ ಕಾರಣಕ್ಕೂ ಅನಗತ್ಯ ಕೈಸಾಲಕ್ಕೆ ಮುಂದಾಗಬೇಡಿ. ಹಣಕಾಸಿನ ವ್ಯವಹಾರದ ವಿಚಾರದಲ್ಲಿ ಸ್ನೇಹಿತರು ಮತ್ತು ಆಪ್ತರ ಸಲಹೆ ಪಡೆದು ಮುನ್ನಡೆಯಿರಿ. ಔಷಧೋಪಚಾರಗಳನ್ನು ಸರಿಯಾಗಿ ಮಾಡಿಕೊಳ್ಳಿ. ಪಥ್ಯದ ವಿಚಾರದಲ್ಲಿ ಗಮನವಿರಲಿ. ವರ್ಷವಿಡೀ ಸಾಕಷ್ಟು ಸವಾಲುಗಳು ಎದುರಾಗುತ್ತವೆ. ನಿಮ್ಮ ಪ್ರಯತ್ನದಲ್ಲಿ ಏಕಾಗ್ರತೆಯಿರಲಿ ಇಲ್ಲವಾದರೆ ಅನರ್ಥ ಸಂಭವಿಸೀತು ಎಚ್ಚರ. ಕ್ಲಿಷ್ಟಕರ ಸನ್ನಿವೇಶವನ್ನು ಸಮರ್ಪಕವಾಗಿ ನಿಭಾಯಿಸಲು ಹಿರಿಯರ ಮತ್ತು ಪ್ರೀತಿಪಾತ್ರರ ನೆರವನ್ನು ಪಡೆದುಕೊಳ್ಳಿ. ಶಿಸ್ತುಬದ್ಧ ಜೀವನ ನಡೆಸಿದರೆ ಉತ್ತಮ ಫಲಿತಾಂಶ ನಿಮ್ಮದಾಗುತ್ತದೆ. ವಿದ್ಯಾರ್ಥಿಗಳು ತಮ್ಮ ಗುರಿಯತ್ತ ಗಮನ ಹರಿಸಿ. ಉನ್ನತ ವ್ಯಾಸಂಗದತ್ತ ಗಮನ ಹರಿಸಲು ಬಯಸುವವರು ಮತ್ತಷ್ಟು ಶ್ರಮ ಪಡಬೇಕು. ಮಕರ (ಉತ್ತರಾಷಾಢ 2,3,4, ಶ್ರವಣ ಮತ್ತು ಧನಿಷ್ಟ 1,2): ವೃತ್ತಿಪರಿಣತರಿಗಿದು ಸಕಾಲ. ಸ್ವಲ್ಪ ಶ್ರಮ ವಹಿಸಿದರೂ ಉತ್ತಮ ಫಲಿತಾಂಶ ನಿಮ್ಮದಾಗುತ್ತದೆ. ಗುರಿ ಮುಟ್ಟಲು ಮತ್ತಷ್ಟು ಪ್ರಯತ್ನಶೀಲರಾಗಿ. ವ್ಯಾಪಾರಿಗಳು ಸಾಕಷ್ಟು ಕ್ಷೇತ್ರಗಳಲ್ಲಿ ತಮ್ಮನ್ನು ತೊಡಗಿಸಿಕೊಳ್ಳುವರು. ಬಿಸಿಷೆಡ್ಯೂಲ್‌ ನಿಮ್ಮದಾಗಲಿದೆ. ತಜ್ಞರೊಂದಿಗೆ ಪದೇ ಪದೇ ಸಮಾಲೋಚಿಸುವ ಮೂಲಕ ಉತ್ತಮ ಅಭಿವೃದ್ಧಿ ಕಾಣುವಿರಿ. ಆದಾಯ ಉತ್ತಮವಾಗಲಿದೆ. ವ್ಯಾಪಾರ ಅಭಿವೃದ್ಧಿಯಾಗಲಿದೆ. ಖರ್ಚುವೆಚ್ಚದತ್ತ ಗಮನವಿರಲಿ. ವಂಚಿಸುವ ಜಾಲದತ್ತ ಗಮನವಿರಲಿ. ಅನಾರೋಗ್ಯದಿಂದ ಬಳಲುತ್ತಿರುವರಿಗೆ ಈ ವರ್ಷ ಉತ್ತಮವಾಗಲಿದೆ. ನಕಾರಾತ್ಮಕ ಚಿಂತನೆಗಳನ್ನು ದೂರವಿಡಿ. ಕೌಟುಂಬಿಕ ನೆಮ್ಮದಿಯನ್ನು ಕಾಣುವಿರಿ. ಗೊತ್ತುಗುರಿಯಲ್ಲದ ಓಡಾಟ ಬೇಡ. ಸ್ನೇಹಿತರು ಮತ್ತು ಬಂಧುಗಳೊಂದಿಗೆ ಸ್ನೇಹಕೂಟದಲ್ಲಿ ಭಾಗವಹಿಸುವಿಕೆ ಖುಷಿಯನ್ನು ತರುತ್ತದೆ. ಕೆಲವೊಮ್ಮೆ ಚಂಚಲಚಿತ್ತರಾಗುವ ಕಾರಣ ಸಂಬಂಧಗಳು ಕೆಡಬಹುದು. ಸಕಾರಾತ್ಮಕ ಬೆಳವಣಿಗೆಗೆ ಆಧ್ಯಾತ್ಮಿಕ ಮತ್ತು ಚಾರಿತ್ರಿಕ ಅಧ್ಯಯನ ಪೂರಕವಾಗುತ್ತದೆ. ಕ್ಲಿಷ್ಟ ಸಂದರ್ಭವನ್ನು ಜಾಗರೂಕತೆಯಿಂದ, ಜಾಣ್ಮೆಯಿಂದ ನಿಭಾಯಿಸಿ. ವಿದ್ಯಾರ್ಥಿಗಳಿಗೆ ಉತ್ತಮ ಏಳ್ಗೆಯಿದೆ. ಉನ್ನತ ವ್ಯಾಸಂಗದಲ್ಲಿ ಪ್ರಗತಿ ಕಾಣುವಿರಿ. ಕುಂಭ (ಧನಿಷ್ಟ 3, 4, ಶತಭಿಷ ಮತ್ತು ಪೂರ್ವಾಭಾದ್ರ 1, 2, 3) ಜಾಹಿರಾತು, ಮಾರ್ಕೆಟಿಂಗ್‌ ಅಥವಾ ಫೈನ್‌ ಆರ್ಟ್ಸ್ ಕ್ಷೇತ್ರದಲ್ಲಿ ನೀವಿದ್ದರೆ ಉತ್ತಮ ಫಲಿತಾಂಶ ಕಾಣುವಿರಿ. ಸನ್ನಿವೇಶಗಳನ್ನು ಸಮರ್ಪಕವಾಗಿ ನಿರ್ವಹಿಸುವ ನಿಮ್ಮ ಕೌಶಲ ಪ್ರಗತಿಗೆ ಪೂರಕ. ಸೂಕ್ತ ಸಲಹೆ ಮತ್ತು ಸಹಾಯ ಪಡೆಯುವುದರಿಂದ ಹಿಡಿದ ಕೆಲಸವನ್ನು ಸಾಧಿಸುವಿರಿ. ಕಾರ್ಯಕ್ಷೇತ್ರದಲ್ಲಿ ಸೌಹಾರ್ಧಯುತ ವಾತಾವರಣವಿರುತ್ತದೆ. ವ್ಯಾಪಾರಸ್ಥರು ಸರಿಯಾದ ರೀತಿಯಲ್ಲಿ ವ್ಯವಸ್ಥಿತವಾಗಿ ಕಾರ್ಯ ನಿರ್ವಹಿಸಬೇಕು. ಹಣಕಾಸಿನ ಸ್ಥಿತಿ ಉತ್ತಮವಾಗಿರಲಿದೆ. ಸಾಲದ ಬಾಧೆಯಿಂದ ಮುಕ್ತರಾಗುವಿರಿ. ಲೆಕ್ಕಾಚಾರ ಹಾಗೂ ವಿವೇಕದಿಂದ ಷೇರು ಕ್ಷೇತ್ರದಲ್ಲಿ ಬಂಡವಾಳ ಹೂಡುವುದರಿಂದ ಉತ್ತಮ ಲಾಭ ಗಳಿಸುವಿರಿ. ಆರೋಗ್ಯದತ್ತ ಗಮನವಿರಲಿ. ಕಾಲಕಾಲಕ್ಕೆ ತಕ್ಕಂತೆ ವೈದ್ಯರ ಸಲಹೆ ಪಡೆಯಿರಿ. ಆಧ್ಯಾತ್ಮಿಕ ಚಟುವಟಿಕೆಗಳಲ್ಲಿ ನಿಮ್ಮನ್ನು ತೊಡಗಿಸಿಕೊಳ್ಳುವಿರಿ. ಗುರಿ ಸಾಧನೆಯಲ್ಲಿ ಕೌಟುಂಬಿಕ ಸಮಸ್ಯೆಗಳು ಅಡ್ಡಿಯಾಗಬಲ್ಲದು. ಮನೋಚಾಂಚಲ್ಯದಿಂದ ದೂರಾಗಿ ಹಿಡಿದ ಕಾರ್ಯದಲ್ಲಿ ಗಮನ ಹರಿಸಿ. ಆಧ್ಯಾತ್ಮಿಕ ಮತ್ತು ಧಾರ್ಮಿಕ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳುವುದರಿಂದ ಬಿಝಿಯಾಗಿರುತ್ತೀರಿ. ವಿದ್ಯಾರ್ಥಿಗಳು ಅವಕಾಶಗಳಿಗಾಗಿ ಎದುರು ನೋಡಬೇಕು. ಹಿರಿಯರ ಸಲಹೆ ಪಡೆಯಬೇಕು. ಕಠಿಣ ಪರಿಶ್ರಮದಿಂದ ಹಿಡಿದ ಗುರಿಯನ್ನು ಸಾಧಿಸಬಹುದು. ಸಂಶೋಧನಾ ಕ್ಷೇತ್ರದಲ್ಲಿರುವವರು ಸರಿಯಾದ ಸಲಹೆ, ಸಹಾಯ ಪಡೆಯಬೇಕು. ಮೀನ (ಪೂರ್ವಾಭಾದ್ರ 4, ಉತ್ತರಾಭಾದ್ರ ಮತ್ತು ರೇವತಿ): ವೃತ್ತಿಪರಿಣಿತರಿಗಿದು ಸಕಾಲ. ಉನ್ನತಿ ಹೊಂದುವಿರಿ. ಔದ್ಯೋಗಿಕ ಕ್ಷೇತ್ರದಲ್ಲಿ ಸಣ್ಣಪುಟ್ಟ ತೊಂದರೆಗಳು ಎದುರಾಗಬಹುದು. ವಿನಯಶೀಲ ಗುಣದ ಕಾರಣ ಅಂತಹ ಸಂದರ್ಭಗಳನ್ನು ಸಮರ್ಪಕವಾಗಿ ಎದುರಿಸುವಿರಿ. ಸಂಶೋಧನಾ ಕ್ಷೇತ್ರದಲ್ಲಿ ತೊಡಗಿಸಿಕೊಂಡವರಿಗೆ ಉತ್ತಮ ಫಲಿತಾಂಶ ದೊರೆಯುತ್ತದೆ. ಸರಿಯಾದ ಸಮಯದಲ್ಲಿ ಸೂಕ್ತ ನಿರ್ಣಯ ತೆಗೆದುಕೊಳ್ಳುವ ಮೂಲಕ ಗುರಿಸಾಧಿಸುವಿರಿ. ಅದೆಷ್ಟೇ ಪ್ರತಿರೋಧವಿದ್ದಾಗ್ಯೂ ವ್ಯಾಪಾರ ಕ್ಷೇತ್ರದಲ್ಲಿ ಉತ್ತಮ ಲಾಭ ಹೊಂದುವಿರಿ. ಆದರೆ ತಾಳ್ಮೆ ಅತ್ಯಗತ್ಯ. ಹಣಕಾಸಿನ ಸ್ಥಿತಿ ಉತ್ತಮವಾಗುತ್ತದೆ. ದುಂದುವೆಚ್ಚಕ್ಕೆ ಕಡಿವಾಣ ಹಾಕಿರಿ. ನೀವೇನಾದರೂ ಅಲರ್ಜಿ ಮತ್ತು ಸೋಂಕಿಗೆ ಪದೇ ಪದೇ ತುತ್ತಾಗುತ್ತಿದ್ದರೆ ಎಚ್ಚರವಿರಲಿ. ಮನೆಯಲ್ಲಿರುವ ಹಿರಿಯರ ಆರೋಗ್ಯದತ್ತ ಗಮನವಿರಲಿ. ಶೈಕ್ಷಣಿಕ ಕ್ಷೇತ್ರದಲ್ಲಿ ಆಸ್ಥೆ ವಹಿಸುವುದರಿಂದ ಉತ್ತಮ ಫಲಿತಾಂಶ ಕಾಣುವಿರಿ. ಸಹನಶೀಲರಾಗಿ, ದುಡುಕು ಪ್ರವೃತ್ತಿ ಬೇಡ. ಅನಗತ್ಯ ಸಂದೇಹ, ಅನುಮಾನಗಳಿಗೆ ಆಸ್ಪದಕೊಡಬೇಡಿ. ಹಾಗೇನಾದರೂ ಕೊಟ್ಟರೆ ಅನಗತ್ಯ ವಿವಾದ, ಜಗಳಕ್ಕೆ ಕಾರಣವಾಗುತ್ತದೆ. ನಿಮ್ಮ ನಡೆ, ನುಡಿಯತ್ತ ಎಚ್ಚರವಿರಲಿ. ನಿಮ್ಮ ಚಟುವಟಿಕೆಗಳಿಂದ ಬೇರೆಯವರ ಕುದೃಷ್ಟಿಗೆ ಕಾರಣರಾಗುವುದರಿಂದ ಮಾಡಿದ ಕೆಲಸಕ್ಕೆ ಪ್ರತಿಫಲ ಸಿಗದಂತಾಗಬಹುದು. ಸಂಬಂಧ ಸುಧಾರಣೆಯತ್ತ ಗಮನವಿರಲಿ. ವಿದ್ಯಾರ್ಥಿಗಳು ಶಿಸ್ತುಬದ್ಧ ಜೀವನ ನಡೆಸಬೇಕು. ಕಷ್ಟಪಟ್ಟು ವ್ಯಾಸಂಗದಲ್ಲಿ ತೊಡಗಬೇಕು. ಏಕಾಗ್ರತೆ ಅಳವಡಿಸಿಕೊಳ್ಳಲು ಗುರು, ಹಿರಿಯರ ಮತ್ತು ಹಿತೈಷಿಗಳ ಸಲಹೆ ಪಡೆದುಕೊಳ್ಳಿ.