Thursday, 7 December 2017
ವಿವಾಹ ಸ್ಥಾನದಲ್ಲಿ ಶನಿ ಇದ್ದರೆ...
ಸಪ್ತಮ ಸ್ಥಾನ ವಿವಾಹ ಸ್ಥಾನ ಹೀಗೆ ವಿವಾಹ ಸ್ಥಾನದಲ್ಲಿ ಶನಿ ಇದ್ದರೆ ಎಷ್ಟು ಪ್ರಯತ್ನ ಮಾಡಿದರು ವಿವಾಹ ಆಗುವುದು ಕಷ್ಟ. ವಿವಾಹ ಆಗದೆ ಉಳಿಯುವ ಸಂಭವ ಜಾಸ್ತಿ ಇರುತ್ತದೆ.
ಸಾಮಾನ್ಯವಾಗಿ ಗ್ರಹಗಳಲ್ಲಿ ಶನಿಯನ್ನು ಪಾಪಗ್ರಹ ಎಂದು ಕರೆಯುತ್ತಾರೆ. ಆದರೆ ಶನಿಯು ಕೆಲವು ಲಗ್ನದವರಿಗೆ ಯೋಗಕಾರಕನಾಗಿರುತ್ತಾನೆ. ಶನಿಯು ಇವರ ಸ್ಥಾನದಿಂದ ಶುಭ ಫಲ ಹೇಳಬಹುದು. ಶನಿಯ ಕಾಟ ಇದ್ದೆ ಇರುತ್ತದೆ. ಶನಿಯು ದುಃಖಕಾರಕನು, ಕರ್ಮಕಾರಕನು, ಆಯುಷ್ಕಾರಕನು, ಮೃತ್ಯುಕಾರಕನು ಆಗಿರುತ್ತಾನೆ. ಶನಿಯು ತುಲಾ ರಾಶಿಯಲ್ಲಿ ಉಚ್ಛನಾದರೆ ಮೇಷ ರಾಶಿಯಲ್ಲಿ ನೀಚನಾಗುತ್ತಾನೆ. ಮೇಷ ರಾಶಿಯ ಅಧಿಪತಿ ಕುಜ. ಕುಜನು ಶನಿಗೆ ಶತ್ರು ಆಗಿದ್ದಾನೆ. ತುಲಾ ಲಗ್ನವಾಗಿ ಸಪ್ತಮವು ಮೇಷ ರಾಶಿಯಾಗುತ್ತದೆ. ಮೇಷದಲ್ಲಿ ಶನಿ ಇದ್ದರೆ ಅದು ನೀಚ. ಸಪ್ತಮ ಸ್ಥಾನ ವಿವಾಹ ಸ್ಥಾನ ಹೀಗೆ ವಿವಾಹ ಸ್ಥಾನದಲ್ಲಿ ಶನಿ ಇದ್ದರೆ ಎಷ್ಟು ಪ್ರಯತ್ನ ಮಾಡಿದರು ವಿವಾಹ ಆಗುವುದು ಕಷ್ಟ. ವಿವಾಹ ಆಗದೆ ಉಳಿಯುವ ಸಂಭವ ಜಾಸ್ತಿ.
ಸಪ್ತಮ ಸ್ಥಾನವು ವಿವಾಹಸ್ಥಾನ. ಸ್ತ್ರೀಸೌಖ್ಯ, ಪತಿಪತ್ನಿಯರಲ್ಲಿ ಪ್ರೇಮ ವಿಚಾರ, ಪದ್ಧತಿ, ಹೆಂಡತಿ ಸ್ವಭಾವ, ರೂಪ, ಲಾವಣ್ಯ, ಗರ್ವ, ಪ್ರವಾಸ, ಪಾಲುಗಾರಿಯಿಂದ ಮಾಡುವ ವ್ಯವಹಾರ, ಸ್ವತಂತ್ರ ಉದ್ಯೋಗದ ಎರಿಳಿತ, ಕುಂಡಲಿ ಮತ್ತು ನವಾಂಶ ಕುಂಡಲಿಯನ್ನು ನೋಡಿ ಪಲ ಹೇಳಬೇಕು. ನೀಚ ಶನಿಯಿಂದ ಶನಿಕಾರತ್ವ ಇರುವ ಎಲ್ಲರಲ್ಲಿಯೂ ತೊಂದರೆ ಇದ್ದೆ ಇರುತ್ತದೆ. ಶನಿಯು ಭುಕ್ತಿಯಲ್ಲಿ ಗೋಚಾರ ಫಲದಲ್ಲಿಯೂ ತೊಂದರೆಯಾಗುತ್ತದೆ.
ಬರಬಹುದಾದ ತೊಂದರೆ - ಸಪ್ತಮ ಸ್ಥಾನ ವಿವಾಹದ ಬಗ್ಗೆ ತಿಳಿಯುವ ಸ್ಥಾನ ಗಂಡ ಹೆಂಡಿರ ಆಯುಷ್ಯವನ್ನು ತಿಳಿಬಹುದು. ವಿವಾಹ ವಿಳಂಬವಾಗುತ್ತದೆ. ವಿವಾಹಕ್ಕಾಗಿ ಬಹಳ ಒದ್ದಾಟ ಮಾಡಬೇಕು. ಗಂಡು ಹೆಣ್ಣುಗಳ ಜಾತಕ ಹೊಂದಿ ಬರುವುದಿಲ್ಲ ವಿವಾಹವಾದರೂ ಸತಿಪತಿಯರು ಅನ್ಯೋನ್ಯವಾಗಿರುವುದಿಲ್ಲ. ಸತಿಪತಿಯ ವಯಸ್ಸಿನಲ್ಲಿ ಬಹಳ ವ್ಯತ್ಯಾಸ ಇರುತ್ತದೆ. ಸತಿಯು ಇನ್ನೊಬ್ಬರ ಸಂಪರ್ಕವನ್ನು ಹೊಂದುವುದು ಇದೆ. ಮೇಷ ರಾಶಿಯ ಅಧಿಪತಿಯು ಕುಜ ಇದು ಬಲಹೀನನಾಗಿದ್ದರೆ ವಿವಾಹ ನಡೆಯುವುದು ಕಷ್ಟ. ಶನಿಯು ವೃದ್ಧರಿಗೆ ಕಾರಕ. ವೃದ್ಧರಿಂದ ಶಾಪವುಂಟಾಗುತ್ತದೆ. ನೀಚ ಶನಿಯು ಅಧರ್ಮದ ದಾರಿಯಲ್ಲಿ ನಡೆಸುತ್ತದೆ. ಮೇಷ ರಾಶಿಯು ಮಾನವನ ತಲೆಯ ಸೂಚಕನಾಗಿರುವುದರಿಂದ ಶನಿ ನೀಚನಾಗಿದ್ದರೆ ಪತಿಪತ್ನಿಯರಿಗೆ ತಲೆಯ ಸಂಬಂಧ ಕಾಯಿಲೆ ಬರುತ್ತದೆ. ಮೇಷ ರಾಶಿಯವರು ಕಾಮುಕರು ಇವರ ರಾಶಿಯಲ್ಲಿ ಶನಿ ನೀಚನಾದರೆ ಇವರು ಕಾಮದ ಬಗ್ಗೆ ಅಡ್ಡ ದಾರಿ ಇಡಿದು ತೊಂದರೆಯನ್ನು ಅನುಭವಿಸುತ್ತಾರೆ. ಶನಿಯು ಪ್ರವಾಸಕ್ಕೆ ಕಾರಕ ಇವರಿಗೆ ಪ್ರವಾಸದಿಂದ ತೊಂದರೆಯಾಗುತ್ತದೆ. ಶನಿಯು ದೇಹದ ಪಾದಗಳಿಗೆ ಕಾರಕ ಇದರಿಂದ ಪಾದಗಳ ಸಂಬಂಧ ತೊಂದರೆ ಬರುತ್ತದೆ. ಕಳವು ಮತ್ತು ದರೋಡೆಗೆ ಕಾರಕನಾಗಿರುವುದರಿಂದ ಇವರು ದರೋಡೆ ಕಳವು ಮಾಡಿ ತೊಂದರೆಗೆ ಸಿಲುಕುತ್ತಾರೆ. ಪಶುಗಳಿಗೆ ಕಾರಕನಾಗಿರುವುದರಿಂದ ಪಶುಗಳಿಂದ ತೊಂದರೆ ಪಶುಸಾಕಣಿಯಿಂದ ತೊಂದರೆಯನ್ನು ಅನುಭವಿಸುತ್ತಾರೆ. ಗ್ರಹಕ್ಕೆ ಶನಿಯು ಕಾರಕನಾಗಿರುವುದರಿಂದ ಇದರಿಂದ ತೊಂದರೆಯಾಗುತ್ತದೆ. ನೀಚ ಸಹವಾಸಕ್ಕೆ ಕಾರಣನಾಗಿರುವುದರಿಂದ ಇವರು ನೀಚ ಜನರ ಸಹವಾಸ ಮಾಡಿ ತೊಂದರೆಯುನ್ನು ಅನುಭವಿಸುತ್ತಾರೆ. ಸುಳ್ಳು ಹೇಳುವುದಕ್ಕೂ ಶನಿ ಕಾರಕ ಇದರಿಂದ ಸದಾಸಮಯ ಸುಳ್ಳು ಹೇಳುತ್ತಾರೆ. ಜೀವಮಾನದ ಅಂತ್ಯಕಾಲಕ್ಕೆ ಕಾರಕನಾಗಿರುವುದರಿಂದ ಅಂತ್ಯಕಾಲವು ಬಹಳ ತೊಂದರೆಯಿಂದ ಕಳೆಯುತ್ತಾರೆ. ಸ್ತ್ರೀ ಮೂಲಕ ಧನಲಾಭಕ್ಕೆ ಕಾರಕನಾಗಿರುವುದರಿಂದ ನೀಚ ಸ್ತ್ರೀಯರಿಂದ ಹಣ ಲಾಭಕ್ಕೆ ಹೋಗಿ ತೊಂದರೆಯನ್ನು ಅನುಭವಿಸುತ್ತಾರೆ.
ಶನಿಯು ಕಪ್ಪು ಬಣ್ಣಕ್ಕೆ ಕಾರಕ ಇದರಿಂದ ನೀಚನಾದ ಶನಿಯಿಂದ ಗಂಡ ಹೆಂಡಿರ ಬಣ್ಣ ಕಪ್ಪಾಗಿರುತ್ತದೆ. ಸಪ್ತಮಸ್ಥಾನ ಜಂಟಿ ವ್ಯಾಪಾರ ಮಾಡುವುದಕ್ಕೆ ಅನುಕೂಲ ಇದೆ. ನೀಚ ಶನಿ ಇದ್ದರೆ ಪಾಲುಗಾರಿಕೆ ವ್ಯಾಪಾರದಲ್ಲಿ ಅಡೆತಡೆ ಬರುತ್ತದೆ. ಶನಿಯು ಶನಿವಾರಕ್ಕೆ ಅಧಿಪತಿ ಮತ್ತು ಪಶ್ಚಿಮ ದಿಕ್ಕಿಗೂ ಅಧಿಪತಿ ಇದರಿಂದ ಶನಿ ನೀಚನಿದ್ದಾಗ ಪಶ್ಚಿಮ ದಿಕ್ಕಿನಿಂದ ತೊಂದರೆಗಳು ಬರುತ್ತದೆ. ಶನಿ ನೀಚನಾದಾಗ ಶನಿಯ ನಕ್ಷ ತ್ರದ ದಿನ ತೊಂದರೆಗಳು ಬರುತ್ತದೆ.
ನೀಚ ಶನಿಯಿಂದ ಆಗುವ ತೊಂದರೆಗಳಿಗೆ ಪರಿಹಾರ ಶ್ರೀ ವಿಷ್ಣು ಸಹಸ್ರನಾಮ ಓದಿದರೆ ಒಳ್ಳೆಯದು ದೇವರ ಪೂಜೆ ಮಾಡುವಾಗ ಪ್ರತಿದಿನ ಶನಿದೇವಯ ನಮ: ಎಂದು 108 ಬಾರಿ ಜಪಿಸಬೇಕು. ಶನಿವಾರ ಎಳ್ಳೆಣ್ಣೆಯಲ್ಲಿ ಮುಖ ನೋಡಿ ಶನಿ ದೇವಸ್ಥಾನಕ್ಕೆ ಅಥವಾ ಶಿವ ದೇವರಿಗೆ ಕೊಡಿ. ಪ್ರತಿ ದಿನ ವಿಷ್ಣು ಲಕ್ಷ್ಮೀ ಮತ್ತು ಶÜನಿ ಅಷ್ಟೋತ್ತರವನ್ನು ಪಠಣೆ ಮಾಡಿರಿ. ಪ್ರತಿದಿನ ಓಂ ನಮೋ ನಾರಾಯಾಣ ಎಂದು ಬರೆಯುತ್ತಾ ಇರಬೇಕು.
ಮೂಲ್ಕಿ ಹರಿಶ್ಚಂದ್ರ ಪಿ ಸಾಲಿಯಾನ್
sangraha
Subscribe to:
Post Comments (Atom)
No comments:
Post a Comment