Wednesday, 6 December 2017

ತ್ರಿಮೂರ್ತಿ ರೂಪ ದತ್ತಾತ್ರೇಯ

ಭಾರತೀಯ ಜೋತಿಷ್ಯ ವಿಜ್ಞಾನ ಒಬ್ಬ ವ್ಯಕ್ತಿಯ ಜಾತಕ ಕುಂಡಲಿಯಲ್ಲಿ ದೋಷಗಳನ್ನು ಶಕ್ತಿಯುತ ರಾಜಯೋಗ, ಸುಖಶಾಂತಿ, ಸಮಾಧಾನ ಸರ್ವಸಿದ್ಧಿಗಳ ಬಗೆಗಿನ ವಾಸ್ತವಗಳನ್ನು ತೆರೆದಿಡಬಹುದು. ಆದರೆ ಸಾಧಕರು ಜಾತಕ ಕುಂಡಲಿಯನ್ನು ನಿಯಂತ್ರಿಸುವ ಗ್ರಹಗಳನ್ನೇ ಶಕ್ತಿ ಆರಾಧನೆಯ ಮೂಲಕ ನಿಯಂತ್ರಿಸಲು ವಿಶೇಷವಾದ ಸಾಧನೆ ನಡೆಸುತ್ತಾರೆ. ಹಾಗಾದರೆ ಇಂಥ ಶಕ್ತಿಗಳು ಹೇಗೆ ಜಾಗೃತಗೊಳ್ಳಬಲ್ಲದು? ಸಾತ್ವಿಕತೆಯು ಇಂಥ ಶಕ್ತಿಯನ್ನು ದಯಪಾಲಿಸಿ ಕೊಡಬಹುದೇ? ಆತ್ಮವು ಪರಮಾತ್ಮನ ಜೊತೆ ಒಂದು ನಿರಂತರವಾದ ಸಂಬಂಧ ಇಟ್ಟುಕೊಂಡಿರುತ್ತದೆ. ಇಂಥ ಸಂಬಂಧದ ಫ‌ಲವಾಗಿಯೇ ನಾವು ತಿಳಿದಿರದ ಕ್ಷಿಪ್ರ ರಕ್ಷಣೆಯೊಂದನ್ನು ಪಡೆಯುತ್ತೇವೆ. ಬ್ರಹ್ಮಜಾnನವನ್ನು ತರ್ಕದಿಂದಾಗಲೀ ಚರ್ಚೆಯ ನೆಲೆಯಲ್ಲಾಗಲೀ ಪೂರ್ತಿ ತಿಳಿದುಕೊಂಡೆ ಎಂದು ಹೇಳಲಾಗದು. ಬ್ರಹ್ಮನನ್ನು ತಿಳಿಯುವ ಮುನ್ನ ನಮ್ಮ ಮಿತಿ ಮೊದಲು ಗೋಡೆಯೊಂದನ್ನು ನಿರ್ಮಿಸುತ್ತದೆ. ಹಾಗಾದರೆ ಈ ಮಿತಿಗಳೇನು? ಪಂಚೇಂದ್ರಿಯಗಳು ಧರ್ಮ, ಅರ್ಥ, ಕಾಮ, ಮೋಕ್ಷಗಳನ್ನು, ಸಂಪನ್ನಗೊಳಿಸಿಕೊಳ್ಳುವ ಪ್ರಯತ್ನದಲ್ಲಿ ಕಣ್ಣು, ಕಿವಿ, ಮೂಗು, ನಾಲಿಗೆ, ಚರ್ಮ ಎಂಬ ಪಂಚೇಂದ್ರಿಯಗಳು ಬ್ರಹ್ಮನನ್ನು ಹುಡುಕಿ ಹೊರಟಾಗ ತಂತಮ್ಮ ಕೆಲಸಗಳಲ್ಲಿ ಸೋಲುತ್ತದೆ. ಪಂಚೇಂದ್ರಿಯಗಳು ಪಂಚಭೂತಗಳನ್ನು ಸಮನಾಗಿ ಗುರುತಿಸಲಾರವು. ಮಣ್ಣನ್ನು ಗುರುತಿಸಬಹುದು. ಬೆಂಕಿಯನ್ನು ಗುರುತಿಸ ಬಹುದು. ನೀರನ್ನು ಗುರುತಿಸಬಹುದು. ಆದರೆ ಗಾಳಿಯನ್ನು ಕೇವಲ ಚರ್ಮ ಮಾತ್ರ ಗ್ರಹಿಸಬಲ್ಲದು. ಗಾಳಿಯನ್ನು ಗುರುತಿಸುವಾಗ ಕಣ್ಣಿನ ಸೋಲು ಅನಿವಾರ್ಯ. ನಾಲಿಗೆ ಕಿವಿ ಮೂಗುಗಳ ಸೋಲು ಕಣ್ಣಿನ ಸೋಲಿಗಿಂತಲೂ ಜಾಸ್ತಿ. ಕಣ್ಣಿನ ಸೋಲು ಗಾಳಿಯನ್ನು ಗುರುತಿಸುವಾಗ ಅನಿವಾರ್ಯ. ಮಣ್ಣನ್ನು ನಾಲಿಗೆ ಗುರುತಿಸದು ಕಿವಿಯೂ ಗುರುತಿಸದು. ಹೀಗೆ ನಮ್ಮ ವಾದ ಸರಣಿ ನಮ್ಮ ಮಿತಿಯ ಕುರಿತು ಬಹು ದೊಡ್ಡ ವ್ಯಾಖ್ಯಾನವನ್ನು ನಡೆಸಬಲ್ಲದು. ಮನುಷ್ಯನ ದೇಹ ತನ್ನ ಅಸ್ತಿತ್ವದ ಬಗ್ಗೆ ಪಂಚೇಂದ್ರಿಯಗಳ ಮೂಲಕ ಪಂಚಭೂತಗಳನ್ನು ಬಯಸುತ್ತದೆ. ದೇವರನ್ನು ತಿಳಿಯುವಾಗ ಒಂದು ಬಿಂದುವಿನ ಮೂಲಕವೇ ಅನಂತ ವ್ಯಾಪ್ತಿಯ ಬ್ರಹ್ಮನನ್ನು ಅರಿಯಬೇಕು. ಉದ್ದ, ಅಗಲ, ದಪ್ಪಗಳಿಲ್ಲದ ಸೂಕ್ಷ್ಮವೇ ಬಿಂದು ಎಂಬುದನ್ನು ನಾವು ವಿಜಾnನದ ಪಾಠದಲ್ಲಿ ಬಾಯಿಪಾಠ ಮಾಡುತ್ತಾ ಬಂದಿದ್ದೇವೆ. ಹಾಗಾದರೆ ಬಿಂದು ಎಂದರೆ ಏನು? ಅದು ಒಂದು ಕಲ್ಪನಾ ಆಸ್ತಿತ್ವ. ಆದರೆ ಕಲ್ಪನೆಯ ಆಸ್ತಿತ್ವದಲ್ಲಿ ಸಮಾವೇಶಗೊಳ್ಳುವ ಬಿಂದುವಿನ ಚಲನೆ ರೇಖೆಯಾಗುತ್ತದೆ. ಇದು ಕಣ್ಣಿಗೆ ಕಾಣುತ್ತದೆ. ದತ್ತಾತ್ರೇಯನು ಶಕ್ತಿ ಕೊಡುವ ಬಗೆ ಒಂದು ಕತೆಯಿದೆ. ಮಾಹಿಷ್ಮತಿಯ ಅರಸು ಕೃತವೀರ್ಯನ ಮಗ ಕಾರ್ತವೀರ್ಯಾರ್ಜುನ. ಹೈಹಯಸ ರಾಜ ಕೃತವೀರ್ಯನ ಅರಸೊತ್ತಿಗೆಗೆ ಒಳಪಟ್ಟಿದ್ದು ಮಧ್ಯ ಪ್ರದೇಶದಲ್ಲಿ ಹೈಹಯ ರಾಜವಂಶದ ಅರಸರು ನರ್ಮದಾ ನದಿಯ ತೀರದ ಗುಂಟ ತಮ್ಮ ರಾಜ್ಯದ ವ್ಯಾಪ್ತಿಯನ್ನು ವಿಸ್ತರಿಸಿಕೊಂಡು ಕೃತಯುಗದ ಕಾಲಘಟ್ಟದಲ್ಲಿ ಪರಾಕ್ರಮ ದಿಂದಲೂ ಜನರಿಗೆ ಪ್ರಿಯರಾದವರಿಂದಲೂ ಆಡಳಿತ ಅರಸೊತ್ತಿಗೆಯನ್ನು ನಡೆಸಿಕೊಂಡು ಬಂದರು. ಕೃತವೀರ್ಯನಿಗೆ ಮಕ್ಕಳಿಲ್ಲದೆ ಚಿಂತೆಯಾದಾಗ ಸುಕೃತ ಫ‌ಲವಾಗಿ ಎಂಬಂತೆ ಕಾರ್ತವೀಯಾರ್ಜುನನ ಜನನವಾಗುತ್ತದೆ. ವಿಳಂಬದಿಂದಲಾದರೂ ಪುತ್ರರತ್ನವೊಂದನ್ನು ಪಡೆದೆವು ಎಂಬ ಸಂತೋಷ ಕೃತವೀರ್ಯ ದಂಪತಿಗಳಿಗೆ ತುಂಬಿಕೊಂಡಿತಾದರೂ ಹುಟ್ಟಿದ ಮಗುವಿಗೆ ಅಂಗ ಊನವಾಗಿತ್ತು. ಕೈಗಳೇ ಇದ್ದಿರದ ಮಗುವನ್ನು ಕಂಡು ಅವರಿಗೆ ಅಪಾರವಾದ ಬೇಸರ ಜಿಗುಪ್ಸೆಗಳು ಮೂಡಿದವು. ಈ ವಿಪ್ಲವಕ್ಕೆ ಪರಿಹಾರವನ್ನು ದತ್ತಾತ್ರೇಯ ಮುನಿಗಳೆ ಒದಗಿಸಿಕೊಡಬೇಕು ಎಂದು ಯೋಚಿಸಿ, ಮುನಿಗಳ ಪಾದ ಕಮಲದ ಬಳಿ ಮಗುವನ್ನು ಇಡುತ್ತಾರೆ. ದತ್ತ ಗುರುಗಳಿಗೆ ದಂಪತಿಗಳ ದುಃಖ ಅರ್ಥವಾಗುತ್ತದೆ. ಸಾಧಕರಾದ ಅವರಿಗೆ ಪಂಚಭೂತಗಳನ್ನು ನಿಯಂತ್ರಿಸುವ ವಿದ್ಯೆ ಗೊತ್ತಿತ್ತು. ಯಾಕೆಂದರೆ ಅವರು ಬ್ರಹ್ಮ ಜಿಜಾnಸೆಯನ್ನು ಅರಿತವರು. ಸೃಷ್ಟಿ ಸ್ಥಿತಿ-ಲಯಗಳನ್ನು ಪ್ರತ್ಯೇಕವಾಗಿ ನಡೆಸಿ ನಿಯಂತ್ರಿಸುತ್ತಾರೆ. ದತ್ತಾತ್ರೇಯ ಮುನಿಗಳು ಬ್ರಹ್ಮ ವಿಷ್ಣು ಮಹೇಶ್ವರರು ಒಗ್ಗೂಡಿದಾಗ ಒಡಮೂಡಿದ ತ್ರಿಮೂರ್ತಿಗಳ ರೂಪ. ಒಂದೇ ದೇಹವಾಗಿ ಮೂರು ಪ್ರತ್ಯೇಕ ತ್ರಿಮೂರ್ತಿಗಳ ಶಿರಗಳನ್ನು ಪಡೆದು ದತ್ತಾತ್ರೇಯರೆನಿಸಿಕೊಂಡಿದ್ದಾರೆ. ಈ ಸ್ವರೂಪ ಒದಗುವಾಗ ಅತ್ರಿ ಮುನಿಯ ಪತ್ನಿ ಅನಸೂಯಾ ಎಂಬ ಪತಿವ್ರತಾ ಶಿರೋಮಣಿಯ ಸಂಕಲ್ಪ$ಶಕ್ತಿಯ ಬಲದಿಂದಾಗಿ ತ್ರಿಮೂರ್ತಿಗಳನ್ನು ಜಗತ್ತು ಎಳೆಯ ಕಂದಮ್ಮಗಳ ಸ್ವರೂಪದಲ್ಲಿ ನೋಡುವಂತಾಯಿತು. ತ್ರಿಮೂರ್ತಿಯರ ಪತ್ನಿಯರು ಕಂಗಾಲಾಗಿ ತಂತಮ್ಮ ಗಂಡಂದಿರನ್ನು ಅನಸೂಯಾಳಿಂದ ಬಿಡುಗಡೆಗೊಳಿಸಿಕೊಳ್ಳಲು ಚಡಪಡಿಸಿ ತಮ್ಮ ನಯ ವಿನಯಪೂರ್ವಕ ನಡೆಯಿಂದ ಅನಸೂಯೆಗೆ ಶರಣಾಗತರಾಗಿ ತಮ್ಮ ಗಂಡಂದಿರನ್ನು ವಾಪಸ್ಸು ಪಡೆಯುತ್ತಾರೆ. ಆದರೆ ತ್ರಿಮೂರ್ತಿಗಳ ಅಂಶಗಳು ಸೇರಿ ದತ್ತಾತ್ರೇಯ ರೂಪುಗೊಳ್ಳುತ್ತಾನೆ. ಮಾಹಿಷ್ಮತಿಯ ಅರಸ ಕೃತವೀರ್ಯ ಮುನಿ ಗಳನ್ನು ಆರಾಧಿಸಿ ಪ್ರಸನ್ನಗೊಳಿಸಿ ಅವರಿಂದ ಕೈಗಳೇ ಇರದ ಮಗ ಕಾರ್ತವೀರ್ಯಾರ್ಜುನನಿಗೆ ಸಾವಿರ ಬಾಹುಗಳನ್ನು ಅನುಗ್ರಹಿಸಿಕೊಳ್ಳುತ್ತಾನೆ. ರಾವಣ ನನ್ನು ಮೀರಿದ ಶಕ್ತಿ ಕಾರ್ತವೀರ್ಯನಿಗೆ ಬರುತ್ತೆ. ಮುಂದೆ, ಸೊಕ್ಕು ಪ್ರದರ್ಶಿಸಿದ ರಾವಣನನ್ನೇ ಕಾರ್ತವೀರ್ಯಾರ್ಜುನ ಹೆಡೆಮುರಿ ಕಟ್ಟುತ್ತಾನೆ. ದತ್ತಾತ್ರೇಯನಿಂದ ಪರಿಹಾರ ಸಾಧ್ಯ ವಾಮಾಚಾರ, ಯಕ್ಷಿಣಿ ಕ್ಷುದ್ರ ದೇವತೆಗಳ ವಶೀಕರಣ ಒಂದು ರೀತಿಯ ಶಕ್ತಿ ಒದಗಿಸಬಹುದು. ಆದರೂ ಇವುಗಳಿಗೆ ಇವುಗಳದ್ದೇ ಆದ ಮಿತಿ ಇರುತ್ತದೆ. ಆದರೆ ದತ್ತಾತ್ರೇಯನ ಆರಾಧನೆಯಿಂದ ಕ್ಷುದ್ರ ದೇವತೆಗಳ ಕಾಟದಿಂದ ಮುಕ್ತಿ ಪಡೆಯಲು ಸಾಧ್ಯವಿದೆ. ಕುಂಡಲಿನಿ ಶಕ್ತಿ ಸಂಪ್ರಾಪ್ತಿಯಾದಾಗ ದೇಹ ಮತ್ತು ಆತ್ಮಗಳ ನಡುವಣ ಅಂತರ ಸಮತೋಲನ ತಪ್ಪದ ರೀತಿಯಲ್ಲಿ ಇಚ್ಛಾಶಕ್ತಿಯ ಮೂಲಕ ಪಡೆಯಬೇಕಾದ್ದನ್ನು ಪಡೆಯಲು ಸಾಧ್ಯ. ಹಾಗಂದ ಮಾತ್ರಕ್ಕೆ ನ್ಯಾಯದ ಹಳಿಗಳನ್ನು ಮೀರುವ ಕುಹಕತನಗಳು ಶಕ್ತಿ ಒದಗಿಸಲಾರವು. ಮೂಲಾಧಾರ ಚಕ್ರ, ಸ್ವಾಧಿಷ್ಠಾನ ಚಕ್ರ, ಅನಾಹಾ°ನ ಚಕ್ರ, ಮಣಿಪುರ ಚಕ್ರ, ವಿಶುದ್ಧ ಚಕ್ರ, ಆಜಾn ಚಕ್ರ, ಸಹಸ್ರಾರ ಚಕ್ರ. ಸಹಸ್ರಾರ ಚಕ್ರವು ಮಿಕ್ಕ ಚಕ್ರಗಳನ್ನು ಒಂದು ಗೂಡಿಸುವ ಸ್ಥಳವಾಗಿದೆ. ಅದು ಮೆದುಳನ್ನು ಪೂರ್ತಿಯಾಗಿ ಆವರಿಸಿರುತ್ತದೆ. ಹೃದಯದಷ್ಟೇ ಮುಖ್ಯವಾದ ಅಂಗವಾಗಿ ಮೆದುಳು ರೂಪುಗೊಳ್ಳುವುದೇ ಈ ಕಾರಣಕ್ಕಾಗಿ. ದತ್ತಾತ್ರೇಯನ ಬಗೆಗಿನ ಧ್ಯಾನ ಅವಧೂತ ಶಕ್ತಿಯನ್ನು ಪ್ರಾಪ್ತಿಗೊಳಿಸುತ್ತದೆ. ಮಾಯೆಯ ಫ‌ಲವಾದ ಜಗತ್ತು ಮೂಲ ಬೀಜಾಕ್ಷರ ಮಂತ್ರಗಳು ನಮಗೆ ಪುಟ್ಟದಾದ ಶಕ್ತಿಕೋಶಗಳನ್ನು ಒದಗಿಸುತ್ತದೆ. ಇಡಿಯಾದ ದೇಹದ ಮೂಲದ ಬಿಂದು ಸ್ವರೂಪದ, ಪುಟ್ಟ ಜೀವಕೋಶ. ಪ್ರತಿಜೀವ ಕೋಶಗಳೂ ಬಲಗೊಂಡಾಗ ದೇಹದಲ್ಲಿ ಹುರುಪು, ಉತ್ಸಾಹ ಹಾಗೂ ಚೈತನ್ಯಗಳು ವೃದ್ಧಿಗೊಳ್ಳುತ್ತವೆ. ಆಸೆಗಳು, ಕಾಮನೆಗಳು ಆತ್ಮವನ್ನು ನೀಚತನಕ್ಕೆ ಒಯ್ಯುತ್ತವೆ. ಆತ್ಮ ಶುದ್ಧ ವಸ್ತುವಾದಾಗ ಪರಮಾತ್ಮ ನೆಲೆಸುತ್ತಾನೆ. ಜಿತೇಂದ್ರಿಯ ಶಕ್ತಿಯಿಂದಾಗಿ ದೇಹ ಸೊರಗಲಾರದು. ಧರ್ಮಾರ್ಥ ಕಾಮ ಮೋಕ್ಷಗಳು ಜೀವನವನ್ನು ಅರ್ಥಪೂರ್ಣವಾಗಿಸುತ್ತವೆ. ಅರಿಷಡ್ವರ್ಗಗಳಾದ ಕಾಮ, ಕ್ರೋಧ, ಲೋಭ, ಮೋಹ, ಮದ, ಮತ್ಸರಾದಿಗಳು ನಮ್ಮನ್ನು ನಾಶಕ್ಕೆ ತಳ್ಳುತ್ತವೆ. ಜಗದಲ್ಲಿನ ಪುರುಷಾರ್ಥಗಳನ್ನು ಸಾಧಿಸಲು ಹಿಂಜರಿಯದೆ ಜಿತೇಂದ್ರಿಯನಾದಾಗ ಚಂ ತತ್‌ ಸತ್‌ ಗಳ ಮೂಲಕ ಅತುಲ ಬಲ ಪಡೆಯುತ್ತಾರೆ. ಈ ಮೂರೂ ಅವಿಚ್ಛಿನ್ನವಾದಾಗ ಬೇರೆ ಬೇರೆಯಾದಾಗ ಬ್ರಹ್ಮ ವಿಷ್ಣು ಮಹೇಶ್ವರರಾಗುತ್ತಾರೆ. ಪರಬ್ರಹ್ಮನನ್ನು ಒಗ್ಗೂಡಿಸುವ ಕೆಲಸವನ್ನು ಧ್ಯಾನದಿಂದ ಮಾಡಬೇಕು. ಇದು ಸಾಧ್ಯವಾದಾಗ ಮಾತ್ರ ಬದುಕಿನ ಜಂಜಡ ಖನ್ನತೆ ಸೋಲು ನಿರಾಸೆಗಳಿಂದ ಹೊರಬರಲು ಸಾಧ್ಯ. sangraha Read more at https://www.udayavani.com/kannada/news/multifaceted/213036/trimurti-dattatreya#JaPrviOv2eDRpWGe.99

No comments:

Post a Comment