Thursday, 7 December 2017

ಚಂದ್ರದೆಸೆಯಲ್ಲಿ ಶುಭಯೋಗ

ಚಂದ್ರ ದೆಸೆಯಲ್ಲಿ ಯಾವುದೇ ಉದ್ದಿಮೆ ಮತ್ತು ಕಾರ್ಯ ಯೋಜನೆಗಳನ್ನು ಆರಂಭಿಸುವುದರಿಂದ ನಿರೀಕ್ಷೆಗೂ ಮೀರಿದ ಲಾಭವನ್ನು ಗಳಿಸಬಹುದು. ಪೃಥ್ವಿಯಿಂದ 380000 ಕಿಮೀ ದೂರದಲ್ಲಿ ತನ್ನದೇ ಆದ ಚಲನ ಸಿದ್ದಾಂತ ಹೊಂದಿರುವ ಚಂದ್ರನು ಒಂದು ಪೌರ್ಣಮಿಯಿಂದ ಇನ್ನೊಂದು ಪೌರ್ಣಮಿಯವರೆಗೆ ಚಲಿಸುವ ಕಾಲ 29 ದಿನಗಳು, 12 ಗಂಟೆ 14 ನಿಮಿಷ ಮತ್ತು 3 ಸೆಕೆಂಡುಗಳು. ಚಂದ್ರನ ಚಲನೆ ಆಧ್ಯಾತ್ಮಿಕ, ದೈವಿಕ, ಪುರಾಣ, ಖಗೋಳ ಮತ್ತು ಜ್ಯೋತಿಷ್ಯ ಶಾಸ್ತ್ರಗಳಲ್ಲಿ ಮಹತ್ತರ ಸ್ಥಾನವನ್ನು ಪಡೆದಿರುತ್ತದೆ. ಚಂದ್ರನನ್ನು ಡಯಾನ, ಲಟೋನ, ಲುಸಿನಾ ಎಂಬ ಹೆಸರುಗಳಿಂದ ಪ್ರಪಂಚದ ಇತರೆಡೆ ಪೂಜಿಸುತ್ತಿದ್ದಾರೆ. ಮುಖ್ಯವಾಗಿ ಕೃಷಿಕರು ಚಂದ್ರನ ಚಲನೆಯ ಆಧಾರದ ಮೇಲೆ ಕೃಷಿ ಮಾಡುವ ಅಭ್ಯಾಸವನ್ನು ಇಟ್ಟುಕೊಂಡಿದ್ದಾರೆ. ಚಲನ ರೀತ್ಯ ಲೆಕ್ಕಾಚಾರ ಚಂದ್ರನ ಚಲನ ಸಿದ್ದಾಂತದಿಂದ ಪೃಥ್ವಿಯ ಮೇಲೆ ಯಾವುದೇ ಅವಘಡ ಮತ್ತು ಅಘಾತಗಳು ಸಂಭವಿಸದಿದ್ದರೂ, ಪೃಥ್ವಿಗೆ ಹತ್ತಿರ ಬರುವುದರಿಂದ (ಸೂಪರ್‌ಮೂನ್‌) ಸಾಗರ ಸಮುದ್ರಗಳಲ್ಲಿ ಉಬ್ಬರ ಇಳಿತಗಳು (ಟೈಡ್ಸ್‌) ಸಂಭವಿಸುವ ಸಾಧ್ಯತೆಗಳಿವೆ. ಆ ಕಾರಣ ಚಂದ್ರನ ಚಲನೆಗೆ ಅನುಗುಣವಾಗಿ ಶುಭ ಮಹೂರ್ತಗಳನ್ನು ನಿರ್ಣಯಿಸುವ ವಾಡಿಕೆಯೂ ಬಂದಿದೆ. ಚಂದ್ರ ದೆಸೆಯ ಆಧಾರದ ಮೇಲೆ ಕಾಲಮಾನವನ್ನು ರಾಜಯೋಗ ಮತ್ತು ಅಮೃತ ಸಿದ್ಧಯೋಗವೆಂದು ಗುರುತಿಸಲಾಗಿದೆ. ಅದಕ್ಕೆ ಚಂದ್ರಫಲ ಸಿದ್ಧಾಂತವೆಂದು ಹೆಸರು. ಚಂದ್ರನ ಚಲನೆ ಆಧರಿತವಾದ ಪಂಚಾಂಗಕ್ಕೆ ಚಾಂದ್ರಮಾನ ಸಿದ್ಧಾಂತ ಎಂತಲೂ, ಅದರ ಲೆಕ್ಕಾಚಾರದಲ್ಲೇ ಬರುವ ಯುಗಾದಿಗೆ ಚಾಂದ್ರಮಾನ ಯುಗಾದಿ ಎಂತಲೂ ಹೆಸರಿಸಲಾಗಿದೆ. ಕಾಲನಿರ್ಣಯ ಹೇಗೆ? ಕಾಲಗಣನಾ ಚಕ್ರದಲ್ಲಿ ಕಾಣಸಿಗುವ ಸೂರ್ಯೋದಯ, ಸೂರ್ಯಾಸ್ತಮಾನ, ಚಂದ್ರೋದಯ, ಚಂದ್ರಾಸ್ತಮಾನಗಳ ನಡುವಿನ ಕಾಲವನ್ನು ವಿಭಜಿಸಿ ಲೆಕ್ಕಾಚಾರ ಮಾಡುವ ಮೂಲಕ ಚಂದ್ರದೆಸೆಯನ್ನು ನಿರ್ಣಯಿಸಬಹುದು.ಜ್ಯೋತಿಷ್ಯ ಫಲಗಳು ಮನೋವೈಜ್ಞಾನಿಕ ಶಾಸ್ತ್ರದ ಪ್ರಾಕಾರಗಳಿಂದ ಚಂದ್ರನ ಚಲನ ಸಿದ್ದಾಂತವನ್ನು ವಿಭಜಿಸಿದರೆ; ಚಂದ್ರ ದೆಸೆಯಲ್ಲಿ ಜನಿಸಿದವರು ಹಾಗೂ ದಿನಂಪ್ರತಿ ಚಂದ್ರದೆಸೆಯನ್ನು ಪಾಲಿಸುವವರಿಗೆ ಅಷ್ಟಾಂಗ ಯೋಗ ಶುಭ ಸಂಕೇತಗಳು ಲಭಿಸುತ್ತವೆ. ಚಂದ್ರದೆಸೆಯಲ್ಲಿ ಜನಿಸಿದ ಮಗುವಿಗೆ (ಹೆಣ್ಣಾಗಲಿ ಗಂಡಾಗಲಿ) ಪ್ರತಿ 6-11-11-28 (ಜನನ ಕಾಲದಿಂದ) ವರ್ಷಗಳಿಗೊಮ್ಮೆ ಚಂದ್ರದೆಸೆ ಮರುಕಳಿಸುತ್ತಲೇ ಇರುತ್ತದೆ. ಜೀವನವಿಡೀ ಶನಿ, ಕುಜ ಮತ್ತು ಕಾಳಸರ್ಪದೋಷಗಳು ಬರಲಾರವು. ರವಿ, ಗುರು ಮತ್ತು ಶುಕ್ರಗ್ರಹಗಳು ಉಚ್ಚಗ್ರಹಗಳಾಗಿರುತ್ತವೆ. ಉತ್ಕ್ರಾಂತ ವರ್ಷದ, ಚಂದ್ರ ದೆಸೆಯಲ್ಲಿ ಜನನವಾದರೆ; ಮಹಾನ್‌ ವಿಜ್ಞಾನಿಗಳು ಸಮಾಜ ಸುಧಾರಕರು, ರಾಜಕೀಯ ನೇತಾರರು, ವೀರಮಲ್ಲರು ಧನವಂತ ದೈವಜ್ಞರು ಹಾಗೂ ಬ್ರಹ್ಮಚಾರಿಗಳಾಗಿರುವುದರಲ್ಲಿ ಸಂಶಯವೇ ಇಲ್ಲ. ಚಂದ್ರ ದೆಸೆಯಲ್ಲಿ ಯಾವುದೇ ಉದ್ದಿಮೆ ಮತ್ತು ಕಾರ್ಯ ಯೋಜನೆಗಳನ್ನು ಆರಂಭಿಸಿದರೆ, ಲೇವಾದೇವಿ, ಬಂಡವಾಳ ಹೂಡಿಕೆ, ಬೆಳ್ಳಿ ಬಂಗಾರ ಮತ್ತು ರತ್ನವ್ಯಾಪಾರ, ಜವಳಿ ಉದ್ದಿಮೆ, ಸಾಗರ ಸಂಶೋಧನೆ, ಕ್ರೀಡೆ, ಪ್ರವಾಸ ಮತ್ತು ಚಲನ ಚಿತ್ರರಂಗಗಳಲ್ಲಿ ಪ್ರಗತಿ ಹಾಗೂ ನಿರೀಕ್ಷೆಗೂ ಮೀರಿದ ಲಾಭ ಉಂಟಾಗುತ್ತದೆ. ಪೌರ್ಣಮಿಯಿಂದ ಮೂರನೇ ದಿನ ಚಂದ್ರನನ್ನು ನೋಡಿ ನವಗ್ರಹಗಳಿಗೆ ಪೂಜೆ ಮಾಡುವುದರಿಂದ ಗ್ರಹದೋಷಗಳು ದೂರವಾಗಿ ಕಂಕಣಭಾಗ್ಯ ಮತ್ತು ಸಂತಾನ ಪ್ರಾಪ್ತಿ ಆಗುತ್ತದೆಂಬ ನಂಬಿಕೆಯಿದೆ. * ನಾರಾಯಣ ಶೆಟ್ಟಿ ಪದ್ಮಸಾಲಿ sangraha

No comments:

Post a Comment