Thursday, 7 December 2017
ಗುರು ವಕ್ರಗತಿ ಫಲ
ವಕ್ರಗತಿಯ ಗುರುವಿನ ಕಾರಣ ಉತ್ತರ ಭಾರತದ ಹಲವೆಡೆ ನೈಸರ್ಗಿಕ ಪ್ರಕೋಪ ಸಂಭವಿಸುವ ಸಾಧ್ಯತೆ ಹೆಚ್ಚು.
ಗುರು ವಕ್ರಗತಿ ಫಲಾಫಲಗಳು ಜ್ಯೋತಿಷ್ಯದ ಮೂಲಕ ಬಹಳ ಮುಖ್ಯವಾಗುತ್ತದೆ. ಕಳೆದ ಫೆಬ್ರವರಿ 6 ರಂದು ಗುರು ವಕ್ರಗತಿ ಚಿತ್ತಾ ನಕ್ಷತ್ರದ ರಡನೆ ಪಾದದಲ್ಲಿ ಪ್ರಾರಂಭವಾಗಿದೆ. ಈ ವಕ್ರಗತಿಯು ಜೂನ್ 9ರ ತನಕವಿದ್ದು ಹಸ್ತ ನಕ್ಷತ್ರ ಮೂರನೇ ಪಾದದಲ್ಲಿ ವಕ್ರತ್ಯಾಗವಾಗುತ್ತದೆ.
ವಕ್ರಗತಿಯ ಗುರುವನ್ನು ಶನಿಯು ಧನು ರಾಶಿಯಿಂದ ದಶಮ ದೃಷ್ಟಿಯಿಂದ ನೋಡುತ್ತಿದ್ದಾನೆ. ಮಂಗಳನು ಮೀನ ರಾಶಿಯಿಂದ ಸಪ್ತಮ ದೃಷ್ಟಿಯಿಂದ ನೋಡುತ್ತಾನೆ. ಗುರು ವಕ್ರಗತಿಯ ಕಾರಣ ಉತ್ತರ ಭಾರತದ ಹಲವು ಭಾಗಗಳಲ್ಲಿ ಹಾಗೂ ಇಂಡೋನೇಷ್ಯಾ, ಜಪಾನ್ ಹಾಗೂ ಮಧ್ಯ ಪ್ರಾಚ್ಯ ರಾಷ್ಟ್ರಗಳಲ್ಲಿ ನೈಸರ್ಗಿಕ ಪ್ರಕೋಪಗಳು ಸಂಭವಿಸುವ ಸಾಧ್ಯತೆ ಹೆಚ್ಚು. ಸಮುದ್ರದಲ್ಲಿ ನಿಮ್ನ ವಾಯುವಿನ ಕಾರಣ ಮಳೆಯ ಭೀವಿ ಆವರಿಸುವ ಸಂಭವವಿದೆ. ರಾಜಕೀಯ ಕ್ಷೇತ್ರದಲ್ಲಿ ಗೊಂದಲಮಯ ವಾತಾವರಣ ಉಂಟಾಗಲಿದೆ. ರಾಜಕೀಯದಲ್ಲಿ ಅನಿರೀಕ್ಷಿತ ಬದಲಾವಣೆ ಕಂಡು ಬರುತ್ತದೆ. ಪ್ರತಿಷ್ಠಿತ ರಾಜಕಾರಣಿಗಳಿಗೆ ಕಂಟಕವಿರುವ ಕಾರಣ ಹೂ, ಹಾರ, ಪುಷ್ಪಗುಚ್ಛ ಅಥವಾ ಇತರೆ ಯಾವುದೇ ರೂಪದ ವಸ್ತುಗಳನ್ನು ಸ್ವೀಕರಿಸದಿರುವುದು ಒಳ್ಳೆಯದು. ಆಹಾರ ಸೇವನೆಯಲ್ಲಿ ಜಾಗೃತರಾಗಿರಿ. ಯಾವುದೇ ವಾಹನದಲ್ಲಿ ಪ್ರಯಾಣಿಸುವ ಮುನ್ನ ಎಚ್ಚರಿಕೆಯಿರಲಿ.
ಕನ್ಯಾ, ತುಲಾ, ಧನು, ಕುಂಭ, ಮೇಷ, ಮಿಥುನ, ಕಟಕ ರಾಶಿಯವರಿಗೆ ಇದೀಗ ಗುರುಬಲ ಕಡಿಮೆಯಿದೆ. ಹಾಗಾಗಿ ಈ ರಾಶಿಯವರಿಗೆ ಸೊಂಟ, ಬೆನ್ನು, ಕೈಕಾಲು, ಮಂಡಿ ನೋವು ಕಾಣಿಸುವ ಸಾಧ್ಯತೆ ಹೆಚ್ಚು. ಅವಸರ ಅಪಘಾತಕ್ಕೆ ಕಾರಣ ಎನ್ನುವ ಮಾತು ನೆನಪಿನಲ್ಲಿರಲಿ. ಗುರು ವಕ್ರದೋಷ ಪರಿಹಾರಕ್ಕೆ ಪ್ರತಿ ಗುರುವಾರ 'ಓಂ ಹ್ರೀಂ ಶ್ರೀಂ ಅರ್ಹತ್ ಫಟ್ ಗುರು ಮಹಾಗ್ರಹ ದೇವಾಯ ಯಸ್ಯಾ ಯಜಮಾನಸ್ಯ ಮಮ ಸರ್ವ ದುರಿತೋಪ ಶಾಂತಿಂ ಕುರುಕುರು ತುಷ್ಟಿಂ ಕುರುಕುರು ಪುಷ್ಟಿಂ ಕುರುಕುರು ವಕ್ರ ಗುರುಗ್ರಹ ಗ್ರಹ ದೋಷ ನಿವಾರಣಂ ಕುರುಕುರು ಸ್ವಾಹಾ' ಎಂಬ ಮಂತ್ರವನ್ನು ಹೇಳಿಕೊಳ್ಳಿ.
ನವಗ್ರಹ ಸನ್ನಿಧಾನದಲ್ಲಿ ಒಂಬತ್ತು ಹಿಡಿ ಅಥವಾ ಒಂಬತ್ತು ಕಾಬೂಲು ಕಡಲೆಯನ್ನು ಅರ್ಪಿಸಿ. ಪರಿಹಾರ ಗುರುವಾರ ದಿನ ನೀವು ಈ ಮಂತ್ರ ಹೇಳಿ 9 ಕಾಬೂಲ್ ಕಡಲೆಯನ್ನು ಅರ್ಪಿಸಿ, ಶುದ್ಧವಾದ ನೀರಿನಲ್ಲಿ ಅದ್ದಿದ ದರ್ಬೆಯಿಂದ ಪ್ರೋಕ್ಷಣೆ ಮಾಡಿ ದೇವರಿಗೆ ಸಮರ್ಪಿಸಿ. ಅಂದು ಮಾಂಸಾಹಾರ ಸೇವಿಸಬೇಡಿ. ಗುರುಹಿರಿಯರ ಆಶೀರ್ವಾದ ಪಡೆದರೆ ಉತ್ತಮ.
ರತ್ನರಾಜ್ ಜೈನ್
sangraha
Subscribe to:
Post Comments (Atom)
No comments:
Post a Comment