Friday, 8 December 2017
ಪಿತ್ತಜನಕಾಂಗದ ಕ್ಯಾನ್ಸರ್
ರಮೇಶ್ ಶಿವಮೊಗ್ಗದಲ್ಲಿ ವಾಸವಾಗಿರುವ 60 ವರ್ಷದ ರೈತ. ಒಂದು ಬಾರಿ ರಮೇಶ್‌ನ ಕಣ್ಣು ಮತ್ತು ಮೂತ್ರದ ಬಣ್ಣ ಹಳದಿಯಾಗಿರುವುದು ಪತ್ತೆಯಾಯಿತು. ರಮೇಶ್ ತನ್ನ ಊರಿನ ವೈದ್ಯರನ್ನು ಭೇಟಿಯಾದರು. ರಕ್ತಪರೀಕ್ಷೆ ಮತ್ತು MRಐ ಪರೀಕ್ಷೆಗಳಿಂದ ಅವರಿಗೆ ಟೈಪ್ 3 ಹಿಲಾರ್ ಕೊಲಾಂಜಿಯೋಕಾರ್ಸಿನೋಮಾ ಇರುವುದು ಪತ್ತೆಯಾಯಿತು. ಟೈಪ್ 3 ಹಿಲಾರ್ ಕೊಲಾಂಜಿಯೋಕಾರ್ಸಿನೋಮಾ ಅಂದರೆ ಪಿತ್ತನಾಳದಲ್ಲಿ ಕಾಣಿಸಿಕೊಳ್ಳುವ ಮತ್ತು ಕಾಮಾಲೆಯನ್ನು ಉಂಟುಮಾಡುವ ಒಂದು ಸಂಕೀರ್ಣ ವಿಧದ ಕ್ಯಾನ್ಸರ್. ಹೆಚ್ಚಿನ ಚಿಕಿತ್ಸೆಗಾಗಿ ರಮೇಶನನ್ನು ಮಣಿಪಾಲ ಆಸ್ಪತ್ರೆಗೆ ಶಿಫಾರಸು ಮಾಡಲಾಯಿತು.
ಮಣಿಪಾಲ ಆಸ್ಪತ್ರೆಯಲ್ಲಿ ಅವರು 12 ಗಂಟೆಗಳ ಅವಧಿಯ ತಾಜ್‌ಮಹಲ್ ರಿಸೆಕ್ಷನ್ ಶಸ್ತ್ರ ಚಿಕಿತ್ಸೆಗೆ ಒಳಗಾದರು. ತಾಜ್‌ಮಹಲ್ ರಿಸೆಕ್ಷನ್ ಶಸ್ತ್ರ ಚಿಕಿತ್ಸೆ ಅಂದರೆ ಗಡ್ಡೆಯಿಂದ ಬಾಧಿತವಾಗಿರುವ ಪಿತ್ತಜನಕಾಂಗ ಮತ್ತು ಪಿತ್ತನಾಳದ ಭಾಗವನ್ನು ತೆಗೆದುಹಾಕುವ ಒಂದು ಶಸ್ತ್ರ ಉಚಿಕಿತ್ಸೆ. ಪಿತ್ತಜನಕಾಂಗದಿಂದ ಕತ್ತರಿಸಿ ತೆಗೆದು ಹಾಕಲಾಗುವ ಭಾಗವು ತಾಜ್‌ಮಹಲಿನ ಮೇಲ್ಭಾಗದ ಗುಂಬಜ್‌ನ ಆಕಾರದಂತೆ ಕಾಣುವ ಕಾರಣಕ್ಕಾಗಿ ಈ ಶಸ್ತ್ರ ಚಿಕಿತ್ಸೆಗೆ ತಾಜ್‌ಮಹಲ್ ರಿಸೆಕ್ಷನ್ ಎಂದು ಕರೆಯಲಾಗುತ್ತದೆ. ಶಸ್ತ್ರ ಚಿಕಿತ್ಸೆಯ ಬಳಿಕ ರಮೇಶ್ ಉತ್ತಮವಾಗಿ ಚೇತರಿಸಿಕೊಂಡರು, 6 ದಿನಗಳ ಅನಂತರ ಅವರನ್ನು ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಯಿತು. ಶಸ್ತ್ರ ಚಿಕಿತ್ಸೆಯಾದ ಒಂಬತ್ತು ತಿಂಗಳ ಅನಂತರ, ಮತ್ತೆ ನಿಯಮಿತ ಫಾಲೋ-ಅಪ್‌ಗೆ ಬಂದಾಗ ರಮೇಶ್ ಸಂಪೂರ್ಣವಾಗಿ ಆರೋಗ್ಯವಾಗಿದ್ದರು.
17 ವರ್ಷದ ವಿದ್ಯಾರ್ಥಿ, ಕೃಷ್ಣಮೂರ್ತಿ ಕಿಬ್ಬೊಟ್ಟೆಯ ನೋವಿನಿಂದ ಬಳಲುತ್ತಿದ್ದು, ಬಹಳ ನಿಶ್ಯಕ್ತನಾಗಿದ್ದ. ಚಿಕಿತ್ಸೆಗಾಗಿ ಆತ ತನ್ನ ಊರಿನ ವೈದ್ಯರನ್ನು ಭೇಟಿ ಮಾಡಿದ. ಅಲ್ಟ್ರಾಸೋನೋಗ್ರ ಮಾಡಿ ನೋಡಿದಾಗ ಕೃಷ್ಣ ಮೂರ್ತಿಯ ಪಿತ್ತಜನಕಾಂಗದಲ್ಲಿ 15 ಸೆಂ.ಮೀ. ನಷ್ಟು ದೊಡ್ಡ ಗಡ್ಡೆ ಇರುವುದು ಪತ್ತೆ ಆಯಿತು. ಹೆಚ್ಚಿನ ಚಿಕಿತ್ಸೆಗಾಗಿ ಕೃಷ್ಣಮೂರ್ತಿ ಮಣಿಪಾಲ ಆಸ್ಪತ್ರೆಗೆ ಬಂದ. 8 ಗಂಟೆಗಳ ಅವಧಿಯ ಶಸ್ತ್ರ ಚಿಕಿತ್ಸೆಯಿಂದ ಗಡ್ಡೆಯನ್ನು ಯಶಸ್ವಿಯಾಗಿ ತೆಗೆದು ಹಾಕಲಾಯಿತು. ಶಸ್ತ್ರಚಿಕಿತ್ಸೆಗೆ ಉತ್ತಮವಾಗಿ ಸ್ಪಂದಿಸಿದ ರೋಗಿಯನ್ನು 5ನೇ ದಿನ ಬಿಡುಗಡೆ ಮಾಡಲಾಯಿತು. ಶಸ್ತ್ರ ಚಿಕಿತ್ಸೆಯಾಗಿ 3 ವರ್ಷ ಕಳೆದಿದೆ, ಕೃಷ್ಣಮೂರ್ತಿ ಈಗಲೂ ಆರೋಗ್ಯವಾಗಿದ್ದಾನೆ.
ಪಿತ್ತಜನಕಾಂಗದ ಕ್ಯಾನ್ಸರ್ ಅಥವಾ ಲಿವರ್ ಕ್ಯಾನ್ಸರ್ ಎಂದರೇನು?
ಪಿತ್ತಜನಕಾಂಗದಲ್ಲಿ ಅಸಹಜ ಬೆಳವಣಿಗೆಗಳಾಗುವುದನ್ನು ಅಥವಾ ಪಿತ್ತಜನಕಾಂಗದಲ್ಲಿ ಅಸಹಜ ಗಡ್ಡೆಗಳು ಬೆಳೆದು, ಅಲ್ಲಿ ಕ್ಯಾನ್ಸರ್‌ಬೆಳೆಯಲು ಕಾರಣ ಆಗುವುದಕ್ಕೆ ಪಿತ್ತಜನಕಾಂಗದ ಕ್ಯಾನ್ಸರ್ ಎಂದು ಹೇಳುತ್ತಾರೆ. ಅಲ್ಲಿ ಬೆಳೆದ ಅಸಹಜ ಕ್ಯಾನ್ಸರ್ ಕೋಶಗಳು ಸುತ್ತಮುತ್ತಲಿನ ಸಹಜ ಅಂಗಾಂಶಗಳಿಗೆ ಹರಡಿ, ಅವುಗಳನ್ನು ನಿಧಾನವಾಗಿ ನಾಶಪಡಿಸುತ್ತವೆ ಮತ್ತು ಆ ಬಳಿಕ ಕ್ರಮೇಣ ದೂರದ ಅಂಗಭಾಗಗಳಿಗೆ ಹರಡಿ, ಮರಣಕ್ಕೆ ಕಾರಣವಾಗುತ್ತವೆ.
ಪಿತ್ತಜನಕಾಂಗದ ಕ್ಯಾನ್ಸರಿಗೆ ಕಾರಣಗಳು ಯಾವುವು?
ಪಿತ್ತಜನಕಾಂಗಕ್ಕೆ ಹಾನಿಯುಂಟುಮಾಡುವ ಯಾವುದೇ ಪರಿಸ್ಥಿತಿಯಾದರೂ ಸಹ ಪಿತ್ತಜನಕಾಂಗದ ಕ್ಯಾನ್ಸರಿಗೆ ಕಾರಣವಾಗಬಹುದು. ಅಂದರೆ ಅಧಿಕ ಮದ್ಯಪಾನ, ಹೆಪಾಟೈಟಿಸ್ ಬಿ ಮತ್ತು ಸಿ ವೈರಾಣು ಸೋಂಕು, ಫ್ಯಾಟಿ ಲಿವರ್-ಇದು ಆರಂಭದಲ್ಲಿ ಪಿತ್ತಜನಕಾಂಗಕ್ಕೆ ಹಾನಿ (ಸಿರಾಸಿಸ್) ಉಂಟು ಮಾಡಿ, ಆ ಬಳಿಕ ಪಿತ್ತಜನಕಾಂಗದ ಕ್ಯಾನ್ಸರಿಗೆ ಕಾರಣವಾಗುತ್ತದೆ. ಆದರೆ, ಸಹಜ ಸ್ಥಿತಿಯಲ್ಲಿರುವ ಪಿತ್ತಜನಕಾಂಗದಲ್ಲಿಯೂ ಸಹ ಕ್ಯಾನ್ಸರ್ ಬೆಳೆಯುವ ಸಾಧ್ಯತೆ ಇದೆ.
ಪಿತ್ತಜನಕಾಂಗದ ಕ್ಯಾನ್ಸರಿನ ಲಕ್ಷಣಗಳು ಯಾವುವು?
ಆರಂಭಿಕ ಹಂತದಲ್ಲಿ, ಕೆಲವೇ ಕೆಲವು ರೋಗಿಗಳಲ್ಲಿ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ. ಆ ಲಕ್ಷಣಗಳು ಅಂದರೆ, ಕಿಬ್ಬೊಟ್ಟೆಯಲ್ಲಿ ನೋವು, ಕಾಮಾಲೆ, ದೇಹದ ತೂಕ ಕಡಿಮೆಯಾಗುವುದು, ಕಿಬ್ಬೊಟ್ಟೆ ಬಿಗಿಯಾಗಿರುವಂತೆ ಅನ್ನಿಸುವುದು ಮತ್ತು ಆ ಮೇಲಿನ ಹಂತಗಳಲ್ಲಿ ಸಾಮಾನ್ಯವಾಗಿ ಕಿಬ್ಬೊಟ್ಟೆಯಲ್ಲಿ ಗಡ್ಡೆಗಳು ಕಾಣಿಸಿಕೊಳ್ಳುತ್ತವೆ.
ಪಿತ್ತಜನಕಾಂಗದ ಕ್ಯಾನ್ಸರ್ ಮಾರಣಾಂತಿಕವೇ?
ಹೌದು. ಯಾಕೆಂದರೆ ಪಿತ್ತಜನಕಾಂಗದ ಕ್ಯಾನ್ಸರ್ ಸಾಮಾನ್ಯವಾಗಿ ಕಾಯಿಲೆಯ ಮುಂದುವರಿದ ಹಂತದಲ್ಲಿ ಪತ್ತೆಯಾಗುವ ಕಾರಣ, ಇದು ಮಾರಣಾಂತಿಕ ಕಾಯಿಲೆ. ಒಂದು ವೇಳೆ ಕಾಯಿಲೆಯು ಆರಂಭಿಕ ಹಂತದಲ್ಲಿಯೇ ಪತ್ತೆ ಆದರೆ, ಪರಿಣಾಮಕಾರಿ ಚಿಕಿತ್ಸೆಗಳು ಲಭ್ಯ ಇವೆ ಮತ್ತು ಈ ಕ್ಯಾನ್ಸರ್ ಅನ್ನು ಗುಣಪಡಿಸುವುದು ಸಾಧ್ಯ ಇದೆ.
ಪಿತ್ತಜನಕಾಂಗದ ಕ್ಯಾನ್ಸರ್‌ಗೆ ಹೇಗೆ ಚಿಕಿತ್ಸೆ ನೀಡಲಾಗುತ್ತದೆ?
ಕ್ಯಾನ್ಸರ್ ಆರಂಭಿಕ ಹಂತದಲ್ಲಿ ಇದ್ದರೆ, ಶಸ್ತ್ರಚಿಕಿತ್ಸೆಯಿಂದ ಅದನ್ನು ಗುಣಪಡಿಸಬಹುದು. ರೋಗಿಯ ಪಿತ್ತಜನಕಾಂಗವು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದರೆ, ಪ್ಯಾಟೋಕ್ಟಾಮಿ (ಗಡ್ಡೆಯನ್ನು ಹೊಂದಿರುವ ಪಿತ್ತಜನಕಾಂಗದ ಭಾಗವನ್ನು ಕತ್ತರಿಸಿ ತೆಗೆಯುುವುದು) ವಿಧಾನವನ್ನು ಅನುಸರಿಸಲಾಗುತ್ತದೆ.
ಒಂದುವೇಳೆ ರೋಗಿಯಲ್ಲಿ ಪಿತ್ತಜನಕಾಂಗದ ತೊಂದರೆಯ ಕಾರಣದಿಂದ (ಸಿರಾಸಿಸ್) ಕ್ಯಾನ್ಸರ್ ಬೆಳವಣಿಗೆ ಆಗಿದ್ದರೆ, ಆಗ ಪಿತ್ತಜನಕಾಂಗದ ಕಸಿ ಅಂದರೆ ಟ್ರಾನ್ಸ್ ಪ್ಲಾಂಟೇಶನ್ ಆವಶ್ಯಕ. ಆದರೆ ಕೆಲವು ರೋಗಿಗಳು ವೃದ್ಧಾಪ್ಯ, ಹೃದಯದ ಕಾಯಿಲೆಗಳು, ಶ್ವಾಸಕೋಶದ ಕಾಯಿಲೆ ಇತ್ಯಾದಿ ಆರೋಗ್ಯ ಸಮಸ್ಯೆಗಳ ಕಾರಣದಿಂದ ದೊಡ್ಡ ಶಸ್ತ್ರಚಿಕಿತ್ಸೆಗೆ ಒಳಗಾಗಲು ದೈಹಿಕವಾಗಿ ಸಮರ್ಥರಿರುವುದಿಲ್ಲ.
ಈ ರೋಗಿಗಳಲ್ಲಿ, ರೇಡಿಯೋಫ್ರೀಕ್ವೆನ್ಸಿ ಅಬ್ಲೇಷನ್ ವಿಧಾನದಿಂದ ಗಡ್ಡೆಯನ್ನು ಸುಡುವ ಚಿಕಿತ್ಸೆಯ ಮೂಲಕ ಉತ್ತಮ ಫಲಿತಾಂಶವನ್ನು ಪಡೆಯುವುದು ಸಾಧ್ಯವಿದೆ.
ಪಿತ್ತಜನಕಾಂಗದ ಕ್ಯಾನ್ಸರ್ ಇನ್ನೂ ಆರಂಭಿಕ ಹಂತದಲ್ಲಿ ಇರುವ ರೋಗಿಗಳಲ್ಲಿ, ಕ್ಯಾನ್ಸರ್ ಅನ್ನು ಗುಣಪಡಿಸುವುದು ಸಾಧ್ಯವಾಗಲಾರದು. ಸೋರಾಫೆನಿಬ್ ಮತ್ತು ಖಅಇಉ ಚಿಕಿತ್ಸೆಗಳಿಂದ ಅವರ ಜೀವನಾವಧಿ ಹೆಚ್ಚಿಸಬಹುದು ಮತ್ತು ಜೀವನ ಗುಣಮಟ್ಟವನ್ನು ಸುಧಾರಿಸಬಹುದು.
ಪಿತ್ತಜನಕಾಂಗದ ಶಸ್ತ್ರ ಚಿಕಿತ್ಸೆ ಸುರಕ್ಷಿತವೇ?
ಹೌದು. ಪಿತ್ತಜನಕಾಂಗದ ಶಸ್ತ್ರ ಉಚಿಕಿತ್ಸೆಯಲ್ಲಿ ಈಗ ಬಹಳಷ್ಟು ಸುಧಾರಣೆಗಳು ಆಗಿವೆ. ಪ್ರಸ್ತುತ ಕಾಲಮಾನದಲ್ಲಿ, ಸುಮಾರು ಶೇ. 5ಕ್ಕಿಂತಲೂ ಕಡಿಮೆ ಮರಣದ ಅಪಾಯದೊಂದಿಗೆ ಪಿತ್ತಜನಕಾಂಗದ ಶಸ್ತ್ರಚಿಕಿತ್ಸೆಯನ್ನು ಸುರಕ್ಷಿತವಾಗಿ ನಡೆಸಬಹುದಾಗಿದೆ. ಪಿತ್ತಜನಕಾಂಗದ ಕ್ಯಾನ್ಸರ್ ಕರ್ನಾಟಕದಲ್ಲಿ ಹೆಚ್ಚು ಸಾಮಾನ್ಯವಾಗಿ ಕಂಡು ಬರುತ್ತದೆಯೇ?
ಹೌದು. ಹೆಚ್ಚಾಗಿ ಕರ್ನಾಟಕದ ವಿವಿಧ ಭಾಗಗಳಲ್ಲಿ ಅಂದರೆ ದಾವಣಗೆರೆ, ಶಿವಮೊಗ್ಗ, ಉಡುಪಿ, ಚಿಕ್ಕಮಗಳೂರು ಮತ್ತು ಸುತ್ತಲಿನ ಕೆಲವು ಜಿಲ್ಲೆಗಳಲ್ಲಿ ಕಾಣಿಸಿಕೊಳ್ಳುವ ಪಿತ್ತಜನಕಾಂ ಗದ ಕ್ಯಾನ್ಸರಿನ ವಿನ್ಯಾಸವು ದೇಶದ ಇನ್ನಿತರ ಕಡೆಗಳಲ್ಲಿ ಕಾಣಿಸಿಕೊಳ್ಳುವ ಪಿತ್ತಜನಕಾಂಗದ ಕ್ಯಾನ್ಸರಿಗಿಂತ ಭಿನ್ನವಾಗಿರುತ್ತದೆ. ಮದ್ಯಪಾನ, ಹೆಪಾಟೈಟಿಸ್ ಸೋಂಕು ಅಥವಾ ಫ್ಯಾಟಿಲಿವರ್ ಇತ್ಯಾದಿ ಅಪಾಯ ಪೂರಕ ಅಂಶಗಳು ಇಲ್ಲದೆಯೇ ಕರ್ನಾಟಕದ ಈ ಭಾಗಗಳಲ್ಲಿ, ಆರೋಗ್ಯವಂತ ಪಿತ್ತಜನಕಾಂಗದಲ್ಲಿಯೂ ಕ್ಯಾನ್ಸರ್ ಕಾಣಿಸಿಕೊಳ್ಳುತ್ತಿದೆ. ಅದಕ್ಕಿಂತಲೂ ಹೆಚ್ಚಾಗಿ, ಈ ಕ್ಯಾನ್ಸರ್ ಗಡ್ಡೆಗಳು ದೇಹದ ಇತರ ಭಾಗಗಳಿಗೆ ಹರಡುವುದಕ್ಕೆ ಬದಲಾಗಿ ಬಹಳ ದೊಡ್ಡದಾಗಿ ಬೆಳೆಯುತ್ತವೆ. ಗಡ್ಡೆಯು ದೊಡ್ಡದಾಗಿ ಬೆಳೆದಿದ್ದರೂ ಶಸ್ತ್ರ ಚಿಕಿತ್ಸೆಯ ಮೂಲಕ ಅದನ್ನು ಸುರಕ್ಷಿತವಾಗಿ ಕತ್ತರಿಸಿ ತೆಗೆಯುವುದುಸಾಧ್ಯ ಇದೆ. ನಮ್ಮ ಅನುಭವದ ಪ್ರಕಾರ,ಅನೇಕ ರೋಗಿಗಳು ಶಸOಉಚಿಕಿತ್ಸೆಯ ಅನಂತರವೂ ಕೆಲವು ವರ್ಷಗಳವರೆಗೆ ಬದುಕಿದ್ದರು ಮತ್ತು ಇನ್ನು ಕೆಲವರಿಗೆ ಪಿತ್ತಜನಕಾಂಗದ ಕ್ಯಾನ್ಸರ್ ಸಂಪೂರ್ಣವಾಗಿ ಗುಣಮುಖವಾಗಿದೆ.
Subscribe to:
Post Comments (Atom)
No comments:
Post a Comment