Thursday, 7 December 2017
ಯೋಗಕಾರಕ ಗ್ರಹದ ಫಲಗಳು
ಯೋಗ ಕಾರಕ ಗ್ರಹರ (ಕೇಂದ್ರ ಮತ್ತು ತ್ರಿಕೋಣಾಧಿಪತಿ) ದಶಾಭುಕ್ತಿ ಕಾಲದಲ್ಲಿ ಶುಭ ಅಥವಾ ಯೋಗ ಕಾರಕ ಫಲವು ಪ್ರಾಪ್ತವಾಗುವುದು ಮತ್ತು ಯೋಗಕಾರಕ ಸಂಬಂಧದಲ್ಲಿ ಇರದ ಶುಭಗ್ರಹರ ದಶಾ (ಅಂತರ್ದಶಾ) ಕಾಲವು ಯೋಗಕಾರಕ ಗ್ರಹರ ದಶಾ-ಭುಕ್ತಿ ಕಾಲದಲ್ಲಿ ಬಂದರೆ ಯೋಗಕಾರಕ ಫಲ ಪ್ರಾಪ್ತವಾಗುವುದು.
'ಕಾರಕ' ಯೋಗವನ್ನು ನೀಡುವ ಬಲಿಷ್ಠ ಕೇಂದ್ರ ಮತ್ತು ತ್ರಿಕೋಣಾಧಿಪತಿಗಳ ದಶಾಕಾಲದಲ್ಲಿ ಶುಭ (ಕಾರಕ) ಫಲ ಪ್ರಾಪ್ತವಾಗುವುದು. ಇದೇ ಯೋಗವು ಪ್ರಾಯಶಃ ಈ ಎರಡು (ಕೇಂದ್ರ-ತ್ರಿಕೋಣ) ಗ್ರಹರ ಸಂಬಂಧದಲ್ಲಿ ಇರದ ಬಲಾಢ್ಯ ಶುಭಗ್ರಹ ಅಂತರ್ದಶಾ (ಭುಕ್ತಿ) ಕಾಲದಲ್ಲೂ ಪ್ರಾಪ್ತವಾಗುವುದು. ಉದಾ: ನವಮ-ದಶಮಾಧಿಪತಿಯು ಸಂಬಂಧದಲ್ಲಿದ್ದರೆ ಆಗ ಈ ನವಮ-ದಶಮಾಧಿಪತಿಯು ಯೋಗಕಾರಕ ಫಲಪ್ರದರಾಗುವರು. ಹೀಗಾಗಿ ನವಮಾಧಿಪತಿಯ ದಶಾ ಕಾಲದಲ್ಲಿ ಈತನಿಗೆ ಸಂಬಂಧದಲ್ಲಿರದ ಪಂಚಮಾಧಿಪತಿಯ ಅಂತರ್ದಶಾ (ಭುಕ್ತಿ) ಕಾಲದಲ್ಲಿಯಾದರೂ ಅಥವಾ ದಶಮಾಧಿಪತಿಯ ದಶಾ ಕಾಲದಲ್ಲಿ ಈತನಿಗೆ ಸಂಬಂಧದಲ್ಲಿರದ ಪಂಚಮಾಧಿಪತಿಯ ಅಂತರ್ದಶಾ (ಭುಕ್ತಿ) ಕಾಲದಲ್ಲಿ ಶುಭ ಫಲಪ್ರದರಾಗುವರು.
ಈ ಸೂತ್ರಕ್ಕೆ ಭಾಷ್ಯಕಾರರೊಬ್ಬರು ಈ ರೀತಿ ಅರ್ಥೈಸಿ ಹೇಳುತ್ತಾರೆ, 'ಯೋಗಕಾರಕ ಗ್ರಹರ ದಶಾಕಾಲದಲ್ಲಿ ಈತನಿಗೆ ಸಂಬಂಧವಿರುವ ಅಂತರ್ದಶಾ ಕಾಲದಲಿಲ, ಮತ್ತು ಇವರಿಬ್ಬರ ಸಂಬಂಧದಲ್ಲಿ ಇರದ ಶುಭಗ್ರಹರ ಪ್ರತ್ಯಂತರ ದಶಾಕಾಲದಲ್ಲಿ ಶುಭ ಫಲ ಪ್ರಾಪ್ತವಾಗುವುದು' ಎಂದಿದ್ದಾರೆ.
- ಡಿ.ಎನ್.ವೆಂಕಟೇಶ್
sangraha
Subscribe to:
Post Comments (Atom)
No comments:
Post a Comment