Wednesday, 6 December 2017

ಭೂತಾಯಿ ಕಾಮಧೇನು ತಾಯಿ ಆದ ಕತೆಯು

ಪರಾಶರರು ಪತಿಯಾದ ಪೃಥು ಮಹಾರಾಜನ ದುಗುಡಗಳ ಕುರಿತು ಹೇಳುತ್ತಿದ್ದಂತೆಯೇ ಮೈತ್ರೇಯರಿಗೆ ಭೂ ದೇವಿಯೇ ತನ್ನ ಅತಿ ಸಹಜವಾದ ಧಾರಣ ಶಕ್ತಿಯನ್ನು ಕಳಕೊಂಡಿದ್ದವರ ಬಗೆಗೆ ಆಶ್ಚರ್ಯವಾಯ್ತು. ಭೂ ದೇವಿಗೂ ಒಂದು ಮಿತಿ ಇದ್ದು, ಮಿತಿಯು ಅತಿಯಾದುದ್ದಕ್ಕೆ ಬಲಿಗೊಂಡಾಗ ಧಾತ್ರಿಯು ಕಾಳಿಯಾಗಿ ಭಯಂಕರಿಯಾಗುವ ಮಾರ್ಪಾಟಿನ ಕುರಿತು ಯೋಚನೆ ಹತ್ತಿತು. ಭೂಪತಿಯಾದ ಪೃಥು ಮಹಾರಾಜನಿಗೆ ಪ್ರಜೆಗಳು ಭೂ ದೇವಿಯ ಬಗೆಗೇ ದೂರು ಕೊಟ್ಟ ರೀತಿ ಕೃತ್ರಿಮವಾಗಿ ಕಂಡಿತು. ಆದರೆ ಪೃಥು ಪ್ರಜೆಗಳ ಪ್ರಲಾಪಕ್ಕೆ ಗಾಬರಿ ಬಿದ್ದಿರಬೇಕು. ಭೂ ದೇವಿಯ ವಿರುದ್ಧವೇ ಪೃಥು ಮಹಾರಾಜನು ಕ್ರಮ ಕೈಗೊಳ್ಳಲು ಮುಂದಾದ ಕಥೆಯನ್ನು ಹೇಳುತ್ತಲೇ ಇದ್ದ ಗುರು ಪರಾಶರರನ್ನು ಒಂದೇ ಸಮನೆ ಮೈತ್ರೇಯರು ಗಮನಿಸ ತೊಡಗಿದರು. ನಿನ್ನ ಚಿಂತನೆಗಳಿರಲಿ, ವಿಮರ್ಶೆಗಳೂ ಇರಲಿ, ಕಥೆಯ ಭಾಗವನ್ನು ಮೊದಲಾಗಿ ಮುಗಿಸುವೆ, ಕೇಳಿಸಿಕೋ ಎಂಬಂತೆ ಮತ್ತೆ ಮುಂದವರಿಸಿದರು. "ಮೈತ್ರೇಯಾ, ದುಗುಡ ಗಂಡ ಪೃಥು ಮಹಾರಾಜನಿಗೆ ಭೂಮಿಯ ಮೇಲೆ ಸಿಟ್ಟು ಬಂದಿತ್ತು. ಫ‌ಲವಂತಿಕೆಯನ್ನೆಲ್ಲ ತಾನೇ ತನ್ನೊಳಗೆ ಹೀರಿಕೊಂಡು ಅವಾಸ್ತವ ಸ್ಥಿತಿಯಲ್ಲಿ ಚಂಡಿಯಾ ಭೂಮಿಯನ್ನು ನಿಯಂತ್ರಿಸುವ ಕಾರಣಕ್ಕಾಗಿ ಶಿವನಿಂದ ದತ್ತಗೊಂಡ ಆಜಗವ ಎಂಬ ಧನಸ್ಸನ್ನೂ, ಇತರ ದಿವ್ಯಾಸ್ತ್ರಗಳನ್ನೂ ದಿವೆÂಯಾದ ಭೂಮಿಯ ಮೇಲೆ ಹೂಡಲು ಸಜ್ಜಾಗಿ ನಿಂತನು. ಭೂದೇವಿಯನ್ನು ಧನುರ್ಧಾರಿಯಾಗಿ ಅಟ್ಟಿಸಿಕೊಂಡು ಹೊರಟನು. ಭೂದೇವಿಯು ತನ್ನ ನಿಜರೂಪವನ್ನು ಬದಲಿಸಿ ಗೋವಿನ ರೂಪದಲ್ಲಿ ಓಡ ತೊಡಗಿದಳು. ಬ್ರಹ್ಮಲೋಕಾದಿ ವಿವಿ ಲೋಕಗಳಿಗೆ ಅದು ಓಡೋಡುತ್ತಲೇ ಸಂಚರಿಸ ತೊಡಗಿತು. ಆದರೆ ಪೃಥುಮಹಾರಾಜರು ಗೋವಿನ ಬೆನ್ನು ಬಿಡದೆ ಬೆನ್ನಟ್ಟಿದನು. ಗೋವಿ ರೂಪದ ಭೂಮಿ ಓಡಿದೆಡೆಯಲ್ಲೆಲ್ಲ ಧಾವಿಸಿ ಬಂದನು. ಒಂದೆಡೆ ಥಟ್ಟನೆ ನಿಂತ ಭೂದೇವಿ ಪೃಥುವನ್ನುದ್ದೇಶಿಸಿ. "ನಿನ್ನ ಧನುರ್ಬಾಣಗಳಿಂದ ನನ್ನನ್ನು ಬೆದರಿಸಿಕೊಂಡು ಬರುತ್ತಿರುವ ನಿನ್ನ ಬಗೆಗೆ ನನಗೆ ಆಶ್ಚರ್ಯವಾಗಿದೆ. ಅಧೈರ್ಯದಿಂದ ನಡುಗುತ್ತಲೂ ಇದ್ದೇನೆ. ನಾನು ಧಾರಿಣಿ. ತಾಯಿಯಾದುದರಿಂದ ಸ್ತ್ರೀ. ಸ್ತ್ರೀಯನ್ನು ಕೊಲ್ಲುವುದ ಶಾಪ. ಬಹು ದೊಡ್ಡ ಶಾಪಕ್ಕೆ ಭಾಜನಗೊಳ್ಳುವುದು ಉತ್ತಮನಾಗಿರುವ ನಿನಗೆ ಶೋಭಯೇ?' ಎಂದು ಕೇಳಿದಳು. ಕೋಪದಿಂದ ನಡುಗುತ್ತಿದ್ದ ಪೃಥು ಮಹಾರಾಜನು "ಕಾಳಿಯಾಗಿ ಭಯದ ಮಾರಿಯಾಗಿರುವ ಅನರ್ಥಕಾರಿ ಶಕ್ತಿಯನ್ನು ವಧಿಸುವುದು ರಾಜ ಧರ್ಮ. ಬಹು ಜನರ ಪಾಲಿಗೆ ಇದು ಕ್ಷೇಮದ ವಿಚಾರ. ಹೀಗಾಗಿ ಶಾಪವು ಬಾರದು. ಇದರಿಂದ ಪುಣ್ಯವೇ ಸಂಪಾದನೆಯಾಗಲಿದೆ. ನೀನು ಪಾತಿಯಾಗಿರುವ. ಅಮಂಗಳೆಯಾಗಿ ಭಕ್ಷಿಣಿಯಾಗಿರುವೆ. ಸರ್ವನಾಶಕ್ಕೆ ಮುನ್ನುಡಿ ಬರೆಯುತ್ತಿರುವೆ. ನಿನ್ನಂಥವಳು ಅನುಪಯೋಗಿಯಾಗಿ ಬದುಕುವುದು ಯುಕ್ತವಾದುದಲ್ಲ' ಎಂದನು. ಭೂದೇವಿಯು ಈ ಮಾತುಗಳಿಂದ ವಿಚಲಿತಗೊಳ್ಳದೆ ಸಮಾಧಾನದಿಂದ ಮರು ಪ್ರಶ್ನೆ ಮಾಡಿದಲು " ಮಹಾರಾಜ, ನೀನು ನನ್ನನ್ನು ಸಂಹರಿಸಿದೆಯಾದರೆ ನಿನ್ನನ್ನು ನನ್ನ ವಿರುದ್ಧ ಉತ್ತೇಜಿಸಿ, ಕೊಲ್ಲಲ್ಲು ಕಳಿಸಿದ ನಿನ್ನ ದಯಾಳುಗಳಾದ ಪ್ರಜೆಗಳು ನಿಲ್ಲಲ್ಲು ಇರುತ ಸ್ಥಳವಾದರೂ ಯಾವುದು? ನನ್ನ ಯೋಗಬಲದಿಂದಾಗಿ ಇವರನ್ನೆಲ್ಲ ನನ್ನ ಮೇಲೆ ನಾನು ಧರಿಸಿಕೊಂಡ ನೆಲೆ ನೀಡುವ ಧಾರಣಿಯಾಗಿದ್ದೇನೆ. ನಾನು ಸತ್ತರೆ ಆಧಾರವಿರದೆ ನಿರಾಧಾರವಾಗಿ ಹತ ಪ್ರಾಣರಾಗುತ್ತಾರೆಂಬುದನ್ನು ಯೋಚಿಸಿರುವಿಯಾ? ಪೃಥುವು ಭೂದೇವಿಯ ಈ ಮಾತುಗಳಿಂದ ಕೆರಳಿ ನುಡಿದನು. "ಭೂಮಿಯೇ, ನಾನು ಪರಾಕ್ರಮಿ, ನಾನೇ ಯೋಗಬಲವನ್ನು ಬಲಪಡಿಸಿಕೊಂಡು ಪ್ರಜೆಗಳನ್ನು ಧಾರಣವಾಗಿಸಿಕೊಂಡು ಆಧಾರನಾಗುತ್ತೇನೆ. ನಿನ್ನ ಹಂಗೇ ಬೇಕಾಗಿಲ್ಲ ' ಎಂದು ಮಾತಿನಿಂದ ತಿವಿದನು. ಭೂದೇವಿ ನಡುಗಿದಳು. ಭಯಾವೃತಗೊಂಡು ಭೂಪಾಲನಿಗೇ ನಮಸ್ಕರಿಸುತ್ತ ನಿನ್ನ ಹೊಸ ಯೋಚನೆಯು ಅದ್ಭುತವಾಗಿದೆ. ಆದರೆ ಎಲ್ಲ ಆರಂಭಗಳೂ ಉಪಾಯದಿಂದ, ನಿಧಾನವಾಗಿ ಯುಕ್ತವಾಗಿ ರೂಪುಗೊಳ್ಳಬೇಕು. ಆಗಲೇ ಕಾರ್ಯ ಸಿದ್ಧಿ. ಹೀಗಾಗಿ ನಿನಗೊಂಡು ಉಪಾಯವನ್ನು ಸೂಚಿಸುತ್ತೇನೆ. ಒಪ್ಪಿಗೆಯಾದರೆ ನೀನದನ್ನು ಮಾಡಬಹುದು. ನಾನು ಈಗ ಏನೆಲ್ಲ ಸತ#ಲ, ಸಂಪನ್ನತೆ, ಫ‌ಲವಂತಿಕೆಗಳನ್ನೆಲ್ಲ ನುಂಗಿ ಕರಗಿಸಿಕೊಂಡಿರವೆನೋ, ಇವನ್ನೆಲ್ಲ ಅದ್ಬುತಮಯವಾದ ಕ್ಷೀರ ರೂಪದಲ್ಲಿ ಕೊಟ್ಟು ಬಿಡುತ್ತೇನೆ. ಹೀಗಾಗಿ ನಿನ್ನ ಪ್ರಿಯ ಪ್ರಜೆಗಳ ಒಳಿತಿಗಾಗಿ ನನಗಾಗಿ ಒಂದು ಯುಕ್ತವಾದ ಕರು ಒಂದನ್ನು ಒದಗಿಸಿಕೊಡು. ನಾನು ಹಾಲನ್ನು ನೀಡುತ್ತೇನೆ. ಜೊತೆಗೆ ಈ ನೆಲವನ್ನೆಲ್ಲ ಸಪಾಟವಾಗಿಸು. ಸಮತಟ್ಟಾದ ನೆಲ ಉತ್ತಮ ಸಸ್ಯ ಸಂಪತ್ತಿಗೆ ಮತ್ತೆ ಕಾರಣವಾಗುತ್ತದೆ. ಆ ರೀತಿಯಲ್ಲಿ ನನ್ನ ಹಾಲಿನಿಂದ ನೆಲವನ್ನು ಫ‌ಲವತ್ತಾಗಿಸುತ್ತೇನೆ. ಸಸ್ಯ ಸಂಪತ್ತಿಗೆ ಬೇಕಾದ ಬೀಜದ ಒಳ ತಿರುಳು ನನ್ನ ಹಾಲನ್ನೇ ತನ್ನ ಬಡಂವಾಳವನ್ನಾಗಿಸಿಕೊಳ್ಳಬೇಕಾಗುತ್ತದೆ. ಸಕಲವೂ ಹಸಿರಾಗಿ ಚಿಗುರೆದ್ದು ಬರಲು ಬೀಜವು ಅಮೃತಮಯವಾಗಬೇಕು' ಎಂದು ಅಂದಳು. ಭೂದೇವಿಯು ಹೀಗೆ ಹೇಳುತ್ತ ಇದ್ದಂತೆ ರಾಜನು ಧನಸ್ಸಿನ ಅಗ್ರಭಾಗದ ಮೊನೆಯಿಂದ ಎಲ್ಲೆಲ್ಲಿಯೂ ಹರಡಿದ್ದ ಸಾವಿರಾರು ಬೆಟ್ಟಗಳನ್ನು ಬೇರೆ ಬೇರೆ ಕಡೆಯ ಅಷ್ಟ ದಿಕ್ಕುಗಳಂಚಿಗೆ ತಳ್ಳಇ ದೂಡಿದನು. ಏರುತಗ್ಗುಗಳೇ ತುಂಬಿದ್ದ ಭೂತಳವು ಸಪಾಟಾಗಿ ವಾಸಕ್ಕೆ, ನಗರೀಕರಣಕ್ಕೆ ರಂಗ ರೂಪಿಸಿತು. ಬೆಟ್ಟ ಗುಡ್ಡ, ಕಾಡುಗಳಿಂದ, ಕುರಚಲು, ಮುಳ್ಳುಗಂಟೆಗಳಿಂದ ತುಂಬಿದ್ದ ನೆಲದಲ್ಲಿ ಹಳ್ಳಿ, ನಗರ, ಪಟ್ಟಣಗಳೆಂಬ ವಿಭಾಗೀಕರಣ ಇದ್ದಿರಲೇ ಇಲ್ಲ. ಗೋ ಸಂಪತ್ತಿನ ಉತ್ಕರ್ಷ, ವಾಣಿಜ್ಯೀಕರಣ, ಕೃಷಿ ಭೂಮಿಯು ಯುಕ್ತ ಸ್ಥಿತಿಗತಿಗಳ ಇತ್ಯಾದಿ ವ್ಯವಸ್ಥೆಗಳಿರದೆ ಅವ್ಯವಸ್ಥೆಗಳ ಆಗರವೇ ಆಗಿತ್ತು ಧರೆಯಲ್ಲ. ರಾಜನಿಂದ ಸಮತಟ್ಟಾದ ಭೂಮಿಯ ಯುಕ್ತ ಪಾತಳಿಯಿಂದ ಹರ್ಷಿತರಾದ ಪ್ರಜಾವರ್ಗ ವಾಸಕ್ಕಾಗಿ ಸೌಧಗಳನ್ನು ನಿರ್ಮಿಸಿ ಬೆಚ್ಚಗೆ ಹಾಯಾಗಿ ಮನೆಯೊಳಗಿರಲು ಆನಂದಿತರಾಗಿ ಮುಂದಾದರು. ಪ್ರಜೆಗಳ ಆಹಾರವು ಕೇವಲ ಹಣ್ಣು, ಹಂಪಲು, ಗಡ್ಡೆ, ಗೆಣಸು ನಾರು, ಬೇರುಗಳೇ ಆಗಿದ್ದವು. ಸಸ್ಯಸಂಪತ್ತನ್ನು ಭೂದೇವಿ ಸ್ವಾಹ ಮಾಡಿದ ಮೇಲೆ ಅದೂ ದುರ್ಲಭವಾಗಿತ್ತು. ವಾಸಕ್ಕೆ ಆಸ್ಥೆ ತೋರಿ ಸಮತಟ್ಟಾದ ಭೂತಳದಿಂದ ಹರ್ಷಮಯರಾದ ಪ್ರಜಾವರ್ಗದ ಕೇಕೆ, ಸಂಭ್ರಮೋತ್ಸಾಹ ಗಮನಿಸಿ ರಾಜನೂ ಸಂತೋಷ ಭರಿತನಾದನು. ಸಂತೋಷಗೊಂಡ ಪೃಥುವು ಸ್ವಾಯಂಭುವ ಮನುವನ್ನು ಕರುವನ್ನಾಗಿ ರೂಪಾಂತರಿಸಿದನು. ಕರುವನ್ನು ಕಂಡ ಗೋರೂಪಿಯಾಗಿದ್ದ ಭೂ ದೇವಿ ಆನಂದಿತಳಾದಳು. ಪೃಥುವು ಗೋವಿನಿಂದ ಕ್ಷೀರವನ್ನು ಹಿಂಡಿ ಕರೆದು ಬಿಂದಿಗೆಗೆ ತುಂಬು ತೊಡಗಿದನು. ಅಮೃತವಾದದ್ದು ಗೋಕ್ಷೀರ ಎಂಬ ವಾಸ್ತವ ಪ್ರಥಮತಃ ಜನ ಕೋಟಿ ಅಂದು ಅರಿಯುವಂತಾಯ್ತು. ಪ್ರಜೆಗಳ ಹಿತಕ್ಕಾಗಿ ಗೋವಿನೊಳಗೆ ಅಡಕಗೊಂಡಿದ್ದ ಕ್ಷೀರ ರೂಪದ ಭೂ ಸಂಪತ್ತು ಪೃಥುವಿನಿಂದ ಹೊರಗಡೆಗೆ ಬರುವಂತಾಯ್ತು. ಸಮಸ್ತ ಸಂಪತ್ತಿಗೂ ಭೂಮಿಯೇ ಆಧಾರಳು. ಅಂದು ಪೃಥುವು ಕರೆದು ಹಿಂಡಿದ ಹಾಲು, ಗೋವಿನೊಳಗಿನ ಭೂ ಸಂಪತ್ತು ಇಂದೂ ಜನರ ಬಳಕೆಗೆ ಪೂರೈಕೆಯಾಗುತ್ತಲೇ ಇದೆ. ಕೊಲ್ಲಲು ಮುಂದಾಗಿದ್ದು ಪೃಥುವು ಭೂಮಿಯನ್ನು ಕೊಲ್ಲಲಿಲ್ಲ. ಪ್ರಾಣದಾನ ಮಾಡಿ ಭೂಮಿಗೇ ತಾನು ತಂದೆಯಾದನು. ಇದರಿಂದ ಭೂಮಿ ಪೃಥ್ವಿ ಎಂದು ಕರೆಯಲ್ಪಟ್ಟಳು. ಪೃಥುವಿನ ಮಗಳು ಪೃಥ್ವಿ' ಪರಾಶರರು ಹೇಳಿದ ಈ ಕಥೆ ಮೈತ್ರೇಯರಿಗೆ ರೋಮಾಂಚನ ಒದಗಿಸಿತು. ಸಾಮಾನ್ಯವಾದ ರೋಮಾಂಚನವಲ್ಲ ಇದು. ನಾಗರೀಕತೆಯ ದಟ್ಟವಾದ ಅಜ್ಞಾನವನ್ನು ತೊಡೆದು ಮಣ್ಣನ್ನು ಕ್ಷೀರವಾಗಿಸಿಕೊಂಡ ಕಥೆ ಇದು. ಮೈತ್ರೇಯರ ಅಂದಿನ ರೋಮಾಂಚನ ನಮ್ಮ ಇಂದಿನ ರೋಮಾಚನವೂ ಹೌದು. ಕೇವಲ ಪುರಾಣ ಕಂತೆ ಎಂಬ ವಿಷ್ಣುಪುರಾಣ ಬೆಟ್ಟಗುಡ್ಡಗಳೇ ತುಂಬಿದ ಕಗ್ಗಲ್ಲ ಗಹ್ವರಗಳು ಸಂಪದ್ಬರಿತವಾದ ವಾಸಕ್ಕೆ ಯೋಗ್ಯವಾದ ಪುಣ್ಯಮಯವಾದ ವಾಸ ಸ್ಥಳವಾದ, ಸಸ್ಯಗಳ ಕಿರುಕಾಂಡ, ಗಂಟೆ, ಮುಳ್ಳು, ತೊಗಟೆಗಳೇ ಧಾರಿಣಿಯಾದ ಗೋ ಮಾತೆಯ ಒಳ ಗರ್ಭ ಸೇರಿ ಅಮೃತಮಯವಾದ ಸಮತೋಲನ ಆಹಾರ (ಕ್ಷೀರಮಯ)ವಾದ ಈ ಕಥೆ, ಕಥೆಯೇ? ಅಲ್ಲ ಇದು ವಾಸ್ತವ ಅಂದು ಕೃಷಿಗಾಗಿನ, ಬೀಜ ಬಿತ್ತುತ್ತ ತಿನ್ನುವ ಕಾಳಿಗಾಗಿನ ಬೇಸಾಯದ ಸಕಲ ವಿಜ್ಞಾನಗಳನ್ನು ಗರ್ಭೀಕರಿಸಿಕೊಂಡಿದೆ. ಪುರಾಣ ಕೇವಲ ಕಥೆಯಲ್ಲ. ವಾಸ್ತವದ ನೆಲೆಯಲ್ಲಿ ಅಕ್ಷರಗಳಾದ ವಿಜ್ಞಾನದ ಪಾಠ. ನಮಗೆ ಭಾರತೀಯರಿಗೆ ಹೀಗಾಗಿ ಪುರಾಣಗಳು ಮೂಢ ನಂಬಿಕೆಯಲ್ಲ. ಜೀವನಕ್ಕೆ ಬೇಕಾದ ವಿಜ್ಞಾನ ಈ ಬಗೆಯದು ಎಂಬು ವಾಸ್ತವ ಕಟ್ಟಿಕೊಟ್ಟ ನಿಜ್ಞಾನ ಗ್ರಂಥ ಸೋಶಿಯಾಲಜಿ ಇಲ್ಲಿ ವಿದಿತ. -sangraha Read more at https://www.udayavani.com/kannada/news

No comments:

Post a Comment