Thursday, 7 December 2017
ರಾಶಿ ಚಕ್ರದಲ್ಲಿ ಗ್ರಹಗಳ ಪ್ರಭಾವ
ಸೌರಮಂಡಲದ ಆಚೆ ಮಿಲಿಯನ್ ಗಟ್ಟಲೆ ತಾರಾಮಂಡಲಗಳನ್ನು ಗುರುತಿಸಲಾಗಿದೆ. ಅವುಗಳಲ್ಲಿ ಸೂರ್ಯನ ಚಲನ ಸಿದ್ದಾಂತವನ್ನು ಅವಲಂಬಿಸಿ, ಮಾನವ ಭೌತಿಕ ಗುಣಗಳಿಗೆ ಅನ್ವಯಿಸುವ 12 ತಾರಾಮಂಡಲಗಳನ್ನು (ರಾಶಿಗಳು) ಮಾತ್ರ ಗುರುತಿಸಲಾಗಿದೆ. ಪ್ರತಿಯೊಂದು ರಾಶಿಯಲ್ಲಿಯೂ ನಿರ್ಧಿಷ್ಟ ತಾರೆಗಳನ್ನು ಮತ್ತು ಗ್ರಹಗಳ ಪ್ರಭಾವವನ್ನು ಗುರುತಿಸಲಾಗಿದೆ. ಸೂರ್ಯನು ಸಮಭಾಜಕ ವೃತ್ತದ ಮೇಲೆ ಹಾದು ಹೋಗುವ ಮಾರ್ಚಿ-21ರವರೆಗೆ ರಾಶಿ ಚಕ್ರದಲ್ಲಿ ಗ್ರಹಗಳ ಪ್ರಭಾವವನ್ನು ತಿಳಿಸಲಾಗಿದೆ.
* ಮೇಷ : ದೆಸೆಗ್ರಹ ಗುರು, ಉಚ್ಚಗ್ರಹ ಕುಜ, ಬಂಡವಾಳ ಹೂಡಿಕೆಯಲ್ಲಿ ಪ್ರಗತಿ, ಲೇವಾದೇವಿ ವ್ಯವಹಾರ, ಲೋಹ, ಜವಳಿ, ದಿನಸಿ, ವ್ಯಾಪಾರದಲ್ಲಿ ಲಾಭ, ಉತ್ತಮ ಆರೋಗ್ಯ, ನಿವಾಸದಲ್ಲಿ ಶಾಂತಿ, ಕಂಕಣ ಭಾಗ್ಯ, ಪ್ರವಾಸ ಯೋಗವಿದೆ.* ವೃಷಭ : ದೆಸೆಗ್ರಹ ಚಂದ್ರ, ಉಚ್ಚಗ್ರಹ ಗುರು, ನೀಚಗ್ರಹ, ಕುಜ. ಲೇವಾದೇವಿ ವ್ಯವಹಾರ. ಬಂಡವಾಳ ಹೂಡಿಕೆಯಲ್ಲಿ ಎಚ್ಚರ. ಚಲನಚಿತ್ರ, ಬೆಳ್ಳಿ ಬಂಗಾರ ಮತ್ತು ರತ್ನ ವ್ಯಾಪಾರಿಗಳಿಗೆ ಅಧಿಕ ಲಾಭ. ವಾಹನ ಮತ್ತು ನಿವೇಶನ ಖರೀ ಯೋಗವಿದೆ.
* ಮಿಥುನ : ದೆಸೆ ಗ್ರಹ ಶುಕ್ರ, ಉಚ್ಚ ಗ್ರಹ ಬುಧ, ಕಾಲಗಣನಾ ಚಕ್ರದಲ್ಲಿ ಗ್ರಹದೋಷಗಳು (ಶನಿ, ಕುಜ ಮತ್ತು ಕಾಳಸರ್ಪದೋಷಗಳು) ತಾವಾಗಿಯೇ ದೂರ ಸರಿಯುತ್ತವೆ. ಅಗಲಿದ ದಂಪತಿಗಳು, ಪ್ರೇಮಿಗಳು ಒಂದಾಗುತ್ತಾರೆ. ಆಕಸ್ಮಿಕ ಧನಲಾಭ, ಅದೃಷ್ಟ, ದೈವಾಚರಣೆ, ರಾಜಕೀಯ, ಸಮಾಜ ಸೇವೆಯಲ್ಲಿ ಪ್ರಗತಿ ಕಂಡು ಬರುತ್ತದೆ.
* ಕಟಕ : ದೆಸೆಗ್ರಹ ಕುಜ, ಉಚ್ಚಗ್ರಹ ರವಿ, ಗುರು ಮಹಾದೆಸೆ ಇರುವುದರಿಂದ ರಾಜಯೋಗ ಅಮೃತ ಸಿದ್ಧ ಯೋಗಗಳು ಸದಾ ಬರುತ್ತವೆ. ಶನಿದೋಷ (ಸಾಡೆಸಾತ್) ದೂರ. ಹೂಡಿಕೆ ಮತ್ತು ಲೇವಾದೇವಿ ವ್ಯವಹಾರ ಉತ್ತಮವಾಗುತ್ತದೆ.
* ಸಿಂಹ: ಈ ರಾಶಿಗೆ ಸಿಂಹ ಬಲ ಆಗಮನ. ದೆಸೆ ಗ್ರಹ ರ ಉಚ್ಚಗ್ರಹ ಶುಕ್ರ. ಯಾವ ಉದ್ದಿಮೆ ಕೈಗೊಂಡರೂ ಪ್ರಗತಿ. ರಾಜಕೀಯ ಪಟ್ಟಾಭಿಷೇಕ. ಬೆಳ್ಳಿ ಬಂಗಾರ ಲೋಹಗಳ ವ್ಯಾಪಾರಸ್ಥರಿಗೆ ಅಧಿಕ ಲಾಭ ದೊರೆಯುತ್ತದೆ.
*ಕನ್ಯಾ : ದೆಸೆಗ್ರಹ ಶುಕ್ರ ಉಚ್ಚರ, ಗ್ರಹ ಸರ್ವಕಾರ್ಯ ಚತುರತೆ.ಆರೋಗ್ಯದಲ್ಲಿ ಕಿರಿಕಿರಿ, ಕುಜದೋಷದಿಂದ ದೂರ, ಕಂಕಣಭಾಗ್ಯ ನಿವಾಸದಲ್ಲಿ ಶಾಂತಿ, ಬಂಧು ಮಿತ್ರರಿಂದ ದೂರ, ಹಣದ ಲೇವಾದೇವಿಯಲ್ಲಿ ಪ್ರಗತಿ. ಚಂದ್ರದೆಸೆ ಸದಾ ಇರುತ್ತದೆ.
*ತುಲಾ : ದೆಸೆ ಗ್ರಹ ಶನಿ, ಉಚ್ಚಗ್ರಹ ಗುರು, ನೀಚಗ್ರಹ ಕುಜ, ಬಂಡವಾಳ ಹೂಡಿಕೆ, ಹಣದಲೇವಾದೇ ವ್ಯಾಪಾರ ವ್ಯವಹಾರದಲ್ಲಿ ತುಂಬಾ ಎಚ್ಚರಿಕೆ ಇರಲಿ. ಚಂದ್ರದೆಸೆ ಇರುವುದರಿಂದ ಅಧಿಕ ಖರ್ಚು.*ವೃಶ್ಚಿಕ : ಈ ರಾಶಿಯವರಿಗೆ ಸಂಪಾದನೆಯಲ್ಲಿ ಖರ್ಚು-ಲಾಭ ಸರಿಸಮನಾಗಿ ಇರುತ್ತದೆ. ದೆಸೆಗ್ರಹ ಕುಜ, ಉಚ್ಚಗ್ರಹ ರವಿ ಯಾವುದೇ ಉದ್ದಿಮೆ ಮತ್ತು ಹೂಡಿಕೆಯಲ್ಲಿ ಪ್ರಾರಂಭದಲ್ಲಿ ನಿರುತ್ಸಾಹ ನಂತರ ಅಧಿಕ ಲಾಭ. ಆರೋಗ್ಯದಲ್ಲಿ ಎಚ್ಚರವಿರಲಿ.
*ಧನಸ್ಸು : ಅಧಿಕ ನಕ್ಷತ್ರಗಳಿಂದ ಕೂಡಿದ ಧನಸ್ಸು ರಾಶಿಯವರಿಗೆ ಅದೃಷ್ಟದ ದಿನಗಳು ಆರಂಭ. ಮಾರ್ಚಿ 21ರಂದೇ ಗಜಕೇಸರಿ ಯೋಗ ಆರಂಭ. ದೆಸೆಗ್ರಹ ರವಿ ಉಚ್ಚಗ್ರಹ ಚಂದ್ರ ಕಂಕಣ ಭಾಗ್ಯ. ಸಂತಾನಯೋಗವಿದೆ. ಗ್ರಹ ದೋಷಗಳು ದೂರವಾಗುತ್ತವೆ.
*ಮಕರ : ದೆಸೆಗ್ರಹ ಚಂದ್ರ, ಉಚ್ಚ ಗ್ರಹ ಶುಕ್ರನಾದ್ದರಿಂದ ಅಧಿಕ ದೈವಭಕ್ತಿ, ಆಕಸ್ಮಿಕ ಧನಲಾಭ, ಆರೋಗ್ಯದಲ್ಲಿ ಎಚ್ಚರಿಕೆ ಇರಲಿ. ಸಾಲಗಳಿಂದ ಸಂಕೋಲೆ, ಯಾವುದೇ ಕೆಲಸ ಆರಂಭಿಸಿದರೂ ದುಂದುವೆಚ್ಚ, ನಿರ್ಲಕ್ಷ್ಯ ಮನೋಭಾವ ಹೆಚ್ಚಿರುತ್ತದೆ.
* ಕುಂಭ: ದೆಸೆ ಗ್ರಹ ರವಿ, ಉಚ್ಚಗ್ರಹ ಗುರು, ಸರ್ವಕಾರ್ಯ ಸಿದ್ಧಿ. ಸಂಶೋಧನೆ, ಬಂಡವಾಳ ಹೂಡಿಕೆ, ದೇಶ ನಿಮಯ, ಪ್ರವಾಸ, ಹಣದ ಲೇವಾದೇಯಲ್ಲಿ ಪ್ರಗತಿ, ುತ್ರರು ಮತ್ತು ಬಂಧುವರ್ಗದವರಿಂದ ಸಹಾಯದ ಹಸ್ತ ಉತ್ತಮ ಆರೋಗ್ಯ ಭಾಗ್ಯವಿದೆ.
*ಮೀನ : ದೆಸೆಗ್ರಹ ಶುಕ್ರ, ಉಚ್ಚ ಗ್ರಹ ಚಂದ್ರ. ಮನೋಕಲ್ಪಿತ ವಿಚಾರಗಳಿಂದ ದೂರವಿರಿ. ರಾಜಕೀಯ ಮತ್ತು ಸಮಾಜ ಸೇವೆಯಲ್ಲಿ ಉನ್ನತ ಹುದ್ದೆ. ಹೂಡಿಕೆಯಲ್ಲಿ ಪ್ರಗತಿ, ಕುಟುಂಬ, ಬಂಧು, ಮಿತ್ರ ಸಖ್ಯ. ಲೇವಾದೇವಿ ವ್ಯವಹಾರದಲ್ಲಿ ಎಚ್ಚರ ವಹಿಸುವುದು ಉತ್ತಮ.
Subscribe to:
Post Comments (Atom)
No comments:
Post a Comment