Friday, 8 December 2017
ಗೋಮೂತ್ರದಿಂದ ಕ್ಯಾನ್ಸರ್, ಕ್ಷಯಾದಿ ರೋಗಗಳು ದೂರ!
ವೇದಗಳು, ಮಂತ್ರಗಳು, ಪುರಾಣಗಳಿಗೆ ಭಾರತ ತವರುಮನೆ. ಕೆಲವು ಸಾವಿರ ವರ್ಷಗಳ ಹಿಂದೆ ದೇವತೆಗಳ ನಡೆದಾಡಿದ ಈ ಪುಣ್ಯಭೂಮಿ ಮೇಲೆ ವನ್ಯಪ್ರಾಣಿಗಳೂ ಸಹ ಗೌರವ ಪಡೆದುಕೊಂಡವು. ಅಂತಹವುಗಳಲ್ಲಿ ವಿಶೇಷವಾದ ಪ್ರಾಣಿ ಗೋವು. ಹಸುವಿನಿಂದ ಬರುವ ಹಾಲು, ಮೊಸರು, ಬೆಣ್ಣೆ, ಸಗಣಿ, ಮೂತ್ರಗಳನ್ನು ಪಂಚಗವ್ಯಗಳು, ಪಂಚಾಮೃತ ಎಂದು ಕರೆಯುತ್ತಾರೆ. ಗೋಮೂತ್ರ ಮನುಷ್ಯನ ದೇಹದಲ್ಲಿನ ಕಾಯಿಲೆಗಳಿಗೆ ಕಾರಣವಾಗುವ ಮಲಿನಗಳನ್ನು ನಿರ್ಮೂಲನ ಮಾಡುತ್ತದೆ. ಸೌದೆಯನ್ನು ಅಗ್ನಿ ದಹಿಸಿದಂತೆ ಈ ಪಂಚಗವ್ಯಗಳು ಮಾನವ ದೇಹದಲ್ಲಿನ ವ್ಯಾಧಿಗಳನ್ನು ಸುಟ್ಟುಹಾಕುತ್ತವೆ.
ಗೋಮೂತ್ರದಿಂದ ಮಾನವರಿಗೆ ಉಂಟಾಗುವ ಅನೇಕ ಪ್ರಯೋಜನಗಳು ಜಗತ್ತಿನಾದ್ಯಂತ ನಡೆದ ವಿವಿಧ ಸಂಶೋಧನೆಗಳಲ್ಲಿ ಸಾಬೀತಾಗಿವೆ. ಗೋಮೂತ್ರವನ್ನು ಕೇವಲ ಪುರಾತನ ಕಾಲದ ಆಯುರ್ವೇದದಲ್ಲಿ ಅಷ್ಟೇ ಅಲ್ಲದೆ, ಪ್ರಸ್ತುತ ಪಾಶ್ಚಿಮಾತ್ಯ ದೇಶಗಳಲ್ಲೂ ಸಹ ಅನೇಕ ಔಷಧಿಗಳ ತಯಾರಿಕೆಯಲ್ಲಿ ಬಳಸುತ್ತಿದ್ದಾರೆ. ಭಾರತ ದೇಶದಲ್ಲಿನ ಅನೇಕ ಗ್ರಾಮಗಳಲ್ಲಿ ಇಂದಿಗೂ ಗೋಮೂತ್ರವನ್ನು ಯಾಕೆ ಚೆಲ್ಲುತ್ತಾರೆಂದರೆ ಅದರಲ್ಲಿ ಕ್ರಿಮಿನಾಶಕ ರಾಸಾಯನಿಕಗಳು ಇರುತ್ತವೆ. ಅಷ್ಟೇ ಅಲ್ಲದೆ ಹಸುವಿನ ಸಗಣಿ ಸಹ ಗೋಡೆಗಳಿಗೆ ಬಳಿಯುವುದರಿಂದ ಅಲ್ಲಿನ ಪರಿಸರ ಸ್ವಚ್ಛವಾಗಿರುತ್ತದಷ್ಟೇ ಅಲ್ಲ, ರೋಗಗಳ ನಿವಾರಣೆಗೂ ಸಹ ಇದು ಸಹಕಾರಿ.
ಕಹಿಯಾಗಿ, ಬೆಚ್ಚಗೆ ಇರುವ ಗೋಮೂತ್ರದಿಂದ ಉದರ ಸಂಬಂಧಿ ಸಮಸ್ಯೆಗಳು ನಿವಾರಣೆಯಾಗುತ್ತವೆ.
ಇದು ವಾತ ಪಿತ್ತಗಳನ್ನು ಸರಿತೂಗಿಸುತ್ತದೆ. ಇದರಲ್ಲಿ ಪೊಟ್ಯಾಷಿಯಂ, ಕ್ಯಾಲ್ಸಿಯಂ, ಕ್ಲೋರೈಡ್, ಯೂರಿಯಾ, ಅಮೋನಿಯಾ, ಸಲ್ಫರ್, ಯೂರಿಕ್ ಆಸಿಡ್, ಫಾಸ್ಫೇಟ್, ಮ್ಯಾಂಗನೀಸ್, ಕಾರ್ಬೋಲಿಕ್ ಆಸಿಡ್‌ನಂತಹ ಖನಿಜ ಲವಣಗಳಷ್ಟೇ ಅಲ್ಲದೆ ವಿಟಮಿನ್ ಎ, ಬಿ, ಡಿ, ಇ ಗಳು ಇವೆ ಎಂದು ಆಧುನಿಕ ಸಂಶೋಧನೆಗಳಲ್ಲಿ ಪತ್ತೆಯಾಗಿದೆ. ಕೇವಲ ಗ್ಯಾಸ್ಟ್ರಿಕ್, ಅಸಿಡಿಟಿ ಸಮಸ್ಯೆಗಳಷ್ಟೇ ಅಲ್ಲದೆ ಹಲವಾರು ಕಾಯಿಲೆಗಳನ್ನು ಗುಣಪಡಿಸುತ್ತದೆ ಗೋಮೂತ್ರ. ಕ್ಯಾನ್ಸರ್, ಹಿಸ್ಟೀರಿಯಾ, ಕ್ಷಯದಂತಹ ಭಯಾನಕ ಕಾಯಿಲೆಗಳನ್ನೂ ವಾಸಿ ಮಾಡುವ ಗುಣಗಳು ಗೋಮೂತ್ರದಲ್ಲಿವಿಯೆಂದು ಅಧ್ಯಯನಗಳಿಂದ ಗೊತ್ತಾಗಿದೆ.
ತೀವ್ರವಾದ ಕಾಯಿಲೆಗಳಿಂದ ರಕ್ಷಿಸುವ ಗುಣ ಗೋಮೂತ್ರದಲ್ಲಿದೆ. ಆಕ್ಸೀಕರಣದಿಂದ ದೇಹದ ಕಣಗಳಲ್ಲಿನ ಹಾನಿಗೊಳಗಾದ ಡಿಎನ್‌ಎಯನ್ನು ರಕ್ಷಿಸುತ್ತದೆ. ನರಗಳ ದೌರ್ಬಲ್ಯವನ್ನು ಸಹ ಸರಿಪಡಿಸುತ್ತದೆ. ಅಧಿಕ ರಕ್ತದ ಒತ್ತಡವನ್ನು ಸಹ ನಿಯಂತ್ರಿಸಿ ಹೃದಯದ ಕೆಲಸವನ್ನು ಉತ್ತಮಗೊಳಿಸುತ್ತದೆ. ಹಸುವಿನ ಹಾಲು, ತುಪ್ಪ, ಮೊಸರಿನಲ್ಲಿ ಅತ್ಯಧಿಕ ಪೋಷಕಾಂಶಗಳಿರುತ್ತವೆ. ಹಾಗಾಗಿ ಪೋಷಕಾಹಾರ ಲೋಪದಿಂದ ಬಳಲುವವರು ಇವುಗಳನ್ನು ತೆಗೆದುಕೊಂಡರೆ ಪ್ರಯೋಜನ ಇರುತ್ತದೆ. ತುಪ್ಪದಿಂದ ದೈಹಿಕ, ಮಾನಸಿಕ ಸಾಮರ್ಥ್ಯ ವೃದ್ಧಿಯಾಗುತ್ತದೆ.
Subscribe to:
Post Comments (Atom)
No comments:
Post a Comment