Thursday, 7 December 2017

ಜಾತಕ ಸ್ಥಾನದೊಂದಿಗಿನ ಸ್ವಭಾವ

ಜಾತಕ ಕುಂಡಲಿಯಲ್ಲಿನ ಹನ್ನೆರಡು ಮನೆಗಳು ದ್ವಾದಶ ರಾಶಿಗಳನ್ನು, ದ್ವಾದಶ ಭಾವಗಳನ್ನು ಸೂಚಿಸುತ್ತವೆ. ಕುಂಡಲಿಯಲ್ಲಿ ಹನ್ನೆರಡು ಮನೆಗಳಿದ್ದು ದ್ವಾದಶ ರಾಶಿಗಳನ್ನು ಪ್ರತಿನಿಧಿಸುತ್ತದೆ. ಹನ್ನೆರಡು ಮನೆಗಳನ್ನು ದ್ವಾದಶ ಸ್ಥಾನಗಳೆನ್ನುತ್ತಾರೆ. ಸ್ಥಾನಗಳಲ್ಲಿರುವ ಗ್ರಹಗಳನ್ನು ಆಧರಿಸಿ ಜಾತಕನ ಫಲಾಫಲಗಳನ್ನು ತಿಳಿದುಕೊಳ್ಳಬಹುದು. ಲಗ್ನ : ಲಗ್ನ ಸ್ಥಾನದಿಂದ ವ್ಯಕ್ತಿಯ ವಿಚಾರ, ಗುಣ, ನಡತೆ, ಸ್ವರೂಪ, ಸನ್ಮಾನ, ಕೀರ್ತಿ, ಆರೋಗ್ಯ, ಆಕಾರ, ವಿಕಾರ, ಘನತೆ ಮತ್ತಿತರ ವಿಚಾರಗಳನ್ನು ತಿಳಿದುಕೊಳ್ಳಬಹುದು. ದ್ವಿತೀಯ : ಹಣದ ವಿಚಾರ, ಕೊಲೆ, ಸುಲಿಗೆ, ಬಲನೇತ್ರದ ವಿಚಾರ, ವಿದ್ಯೆ, ಮಾತು, ಕೊಲೆ, ಸುಲಿಗೆ ಮತ್ತಿತರ ವಿಚಾರಗಳನ್ನು ಅರ್ಥ ಮಾಡಿಕೊಳ್ಳಬಹುದು. ತೃತೀಯ : ಅಣ್ಣ, ತಮ್ಮ, ಅಕ್ಕ, ತಂಗಿ, ಸೋದರ, ಸೋದರಿ, ಧೈರ್ಯ, ಶೌರ್ಯ, ಪರಾಕ್ರಮ, ಎದೆಗಾರಿಕೆ, ಸೇವಕರು, ಕುಸ್ತಿಪಟುಗಳು ಮತ್ತಿತರ ವಿಚಾರಗಳನ್ನು ತಿಳಿಯಬಹುದು. ಚತುರ್ಥ : ಗಾಯನ, ಹಾಡುಗಾರಿಕೆ, ಭಾವಿ, ಭೂಮಿ, ಕೆರೆ, ವಾಹನ, ಮಾತು, ವಿದ್ಯಾಭ್ಯಾಸ, ಮನೆ, ಬಂಧುಗಳ ವಿಚಾರವನ್ನು ತಿಳಿಸುತ್ತದೆ. ಪಂಚಮ : ರಾಜ ಸನ್ಮಾನ, ಕವಿ, ವಾಮಾಚಾರ, ಮಂತ್ರಿ, ಪುತ್ರ, ವಿದ್ಯೆ, ಸೆರೆಮನೆವಾಸ, ಮಂತ್ರಿ, ಬಂಧನ ಮತ್ತಿತರ ವಿಷಯಗಳನ್ನು ತಿಳಿಸುತ್ತದೆ. ಷಷ್ಠಮ : ದಗಾಕೋರ, ಮೋಸಗಾರ, ಜಗಳ, ಕದನ, ಶತ್ರುನಾಶ, ಹೋರಾಟ, ವೈರತ್ವ, ಕಾಯಿಲೆ ಮತ್ತಿತರ ವಿಷಯಗಳ ಸೂಚ್ಯಕವಾಗಿದೆ. ಅಷ್ಟಮ : ವಿದೇಶ ವಾಸ, ಅಪಘಾತ, ಮರಣ, ಆಯಸ್ಸು, ಅಚಾನಕ್‌ ಧನಪ್ರಾಪ್ತಿ ಮತ್ತಿತರ ವಿಷಯಗಳನ್ನು ತಿಳಿಸುತ್ತದೆ. ನವಮ : ಪೂರ್ವಜರ ಆಸ್ತಿ, ಸಂತಾನ, ವಾಹನಯೋಗ, ಭಕ್ತಿ, ಜ್ಞಾನ, ತೀರ್ಥಯಾತ್ರೆ, ದಾನ, ಧರ್ಮ, ಪಿತೃಭಾಗ್ಯ ವಿಚಾರಗಳನ್ನು ಹೇಳುತ್ತದೆ. ದಶಮ : ನ್ಯಾಯಾಲಯ, ಕೋರ್ಟ್‌, ಕಚೇರಿ ವ್ಯವಹಾರ, ಮಂತ್ರಸಿದ್ಧಿ, ಸರಕಾರದಿಂದ ಧನ ಪ್ರಾಪ್ತಿ, ವಿದ್ಯೆ, ಐಶ್ವರ್ಯ, ಆಯಸ್ಸು ಮತ್ತಿತರ ವಿಚಾರಗಳನ್ನು ತಿಳಿಸುತ್ತದೆ. ಏಕಾದಶ : ವಾಹನ, ಐಶ್ವರ್ಯ, ದೊಡ್ಡಣ್ಣ, ಅಳಿಯ, ಸೋದರತ್ತೆ, ಸೊಸೆ, ಶುಭ ವಿಚಾರಗಳನ್ನು ಸೂಚಿಸುತ್ತದೆ. ದ್ವಾದಶ : ದುಃಖ, ನಷ್ಟ, ಪಾಪ, ಪುಣ್ಯ, ಸನ್ಯಾಸಿಯೋಗ, ಒರಟು ಪ್ರವೃತ್ತಿ, ಹಣಕಾಸಿನ ವಿಚಾರಗಳನ್ನು ಸೂಚಿಸುತ್ತದೆ.

No comments:

Post a Comment