Thursday, 7 December 2017
ಧನಕಾರಕ ಗುರುವಿನಿಂದ ಲಕ್ಷ್ಮೀ ಕಟಾಕ್ಷ
ವಾಸ್ತು ಪ್ರಕಾರ ಮನೆಯಲ್ಲಿರುವ ದೇವರ ಮೂಲೆ ತಗ್ಗಿನಲ್ಲಿರಬೇಕು ಹಾಗಿದ್ದರೆ ಮಾತ್ರ ಆ ಮನೆಯಲ್ಲಿ ಧನ ನಿಲ್ಲುತ್ತದೆ. ವಾಯು ಮೂಲೆ ತಗ್ಗಿನಲ್ಲಿದ್ದರೆ ಆ ಮನೆಯಲ್ಲಿ ದುಡ್ಡು ನಿಲ್ಲುವುದಿಲ್ಲ.
ಕೆಲವರು ಎಷ್ಟು ಕಷ್ಟ ಪಟ್ಟು ಗಳಿಸಿದರೂ ಹಣ ಉಳಿತಾಯವಾಗಲ್ಲ, ಸದಾ ಬಡತನ ಬೆಂಬತ್ತಿ ಕಾಡುತ್ತಿದೆ ಎಂದು ಗೊಣಗುತ್ತಾರೆ. ಆದರೆ, ಎರಡನೆ ಮನೆ ಧನಸ್ಥಾನ (ಧನಕಾರಕ ಗುರು) ಬಲವಾಗಿದ್ದರೆ ಲಕ್ಷ್ಮಿಕಟಾಕ್ಷ ಸದಾ ಇರುತ್ತದೆ.
9ನೇ ಮನೆ ಭಾಗ್ಯಸ್ಥಾನ, 11ನೇ ಮನೆ ಲಾಭಸ್ಥಾನ, 12ನೇ ಮನೆ ವ್ಯಯಸ್ಥಾನ. ಈ ಸಮಯದಲ್ಲಿ ಯಾರು ಜನಿಸಿರುತ್ತಾರೋ (ಬೆಳಗ್ಗೆ 6 ಗಂಟೆಯಿಂದ ಸಂಜೆ 6 ಗಂಟೆವರೆಗೆ ) ಅವರ ಜಾತಕದಲ್ಲಿ ಸೂರ್ಯ 11ನೇ ಮನೆಯಲ್ಲಿದ್ದರೆ ಜೀವನ ಪರ್ಯಂತ ಹಣ ಬರುತ್ತಲೇ ಇರುತ್ತದೆ. ರಾತ್ರಿ ಯಾರು ಹುಟ್ಟಿರುತ್ತಾರೋ ಅಂತಹವರ ಜಾತಕದಲ್ಲಿ 11ರಲ್ಲಿ ಚಂದ್ರನಿದ್ದರೆ ಇವರಿಗೆ ಜೀವನ ಪರ್ಯಂತ ಎಷ್ಟು ಖರ್ಚು ಮಾಡಿದರೂ ದುಡ್ಡಿನ ತೊಂದರೆ ಇರುವುದಿಲ್ಲ.
ಲಗ್ನಾಧಿಪತಿ 11ರಲ್ಲಿ ಗುರುವಿದ್ದರೆ ಸಾಧಾರಣವಾಗಿ ಲಕ್ಷ್ಮಿಕಟಾಕ್ಷ ಇರುತ್ತದೆ. ಯಾವುದೆ ದಶಾಭುಕ್ತಿ ಇದ್ದರೂ ಚೆನ್ನಾಗಿರುತ್ತಾರೆ. 2ನೇ ಮನೆ ಅಧಿಪತಿ 11ರಲ್ಲಿ ಇದ್ದರೆ, 11ರ ಅಧಿಪತಿ 2ರಲ್ಲಿ ಇದ್ದರೆ ಧನಯೋಗ ಎನ್ನುತ್ತಾರೆ. ಗುರು ಧನ ಸ್ಥಾನದಲ್ಲಿದ್ದರೆ ಹಾಗೂ 11ರಲ್ಲಿದ್ದರೂ ಇವರಿಗೆ ಹಣದ ಅಭಾವ ಇರುವುದಿಲ್ಲ. 50ರೂ. ಖರ್ಚಾಗುವುದಾದರೆ 60ರೂ. ಲಾಭ ಸಿಕ್ಕಿರುತ್ತದೆ ಇವರಿಗೆ.
ಎರಡನೆ ಮನೆ ಅಧಿಪತಿ ಅಥವ ಗುರು 12ರಲ್ಲಿದ್ದರೆ ಅವರಿಗೆ ಹಣದ ಕೊರತೆ ಕಾಡುತ್ತದೆ (ದರಿದ್ರ ಯೋಗ ಅಂತಾರೆ). ರಾಹು ಇದ್ದರೆ ಜೂಜಾಟವಾಡಿ ಹಣ ಕಳೆದುಕೊಳ್ಳುತ್ತಾರೆ.
ವಾಸ್ತು ಶಾಸ್ತ್ರ ಹೇಳುವುದೇನು?
ವಾಸ್ತು ಪ್ರಕಾರ ಮನೆಯಲ್ಲಿರುವ ದೇವರ ಮೂಲೆ ತಗ್ಗಿನಲ್ಲಿರಬೇಕು ಹಾಗಿದ್ದರೆ ಮಾತ್ರ ಆ ಮನೆಯಲ್ಲಿ ಧನ ನಿಲ್ಲುತ್ತದೆ. ವಾಯು ಮೂಲೆ ತಗ್ಗಿನಲ್ಲಿದ್ದರೆ ಆ ಮನೆಯಲ್ಲಿ ದುಡ್ಡು ನಿಲ್ಲುವುದಿಲ್ಲ. ನೈರುತ್ಯ ಎತ್ತರವಿರಬೇಕು, ಕುಬೇರ ಮೂಲೆ ವಾಯು ಮೂಲೆಗಿಂತ ತಗ್ಗಿನಲ್ಲಿದ್ದರೆ ದುಡ್ಡು ಬಂದರೂ ಅನಾವಶ್ಯಕ ಕಾರಣಗಳಿಂದ ಖರ್ಚಾಗುತ್ತದೆ.
ಹಣದ ಪೆಟ್ಟಿಗೆ ಕುಬೇರ ಮೂಲೆಯಲ್ಲಿದ್ದರೆ ಒಳ್ಳೆಯದು. ಅದನ್ನು ಉತ್ತರ ದಿಕ್ಕಿನಲ್ಲಿಯೂ ಇಡಬಹುದು. ಕನಕ ಪುಷ್ಯರಾಗ ಹರಳನ್ನು (8 ರಿಂದ 9 ಕ್ಯಾರೆಟ್) ಪ್ರತಿನಿತ್ಯ ಸೂರಾರಯಸ್ತದ ನಂತರ ಪೂಜಿಸುವುದರಿಂದ ಉತ್ತಮ ಫಲಗಳನ್ನು ಕಾಣುತ್ತೀರಿ. ಕೈಕಾಲು ಮುಖ ತೊಳೆದು ಅಥವಾ ಸ್ನಾನ ಮಾಡಿ ಹಳದಿ ವಸ್ತ್ರದಲ್ಲಿ ಅದನ್ನು ಇಟ್ಟು ಬಲಗೈ ಮುಷ್ಠಿಯಲ್ಲಿ ಹಿಡಿದು 33 ಸಲ ಈ ಮಂತ್ರವನ್ನು ಹೇಳಬೇಕು.
* ಓಂ ಐಂ ಕ್ರೀಂ ಶ್ರೀಂ ಕ್ಲೀಂ ಶ್ರೀ ಮಹಾಲಕ್ಷ್ಮಿಯೇ ನಮಃ *
ಈಶಾನ್ಯ ಭಾಗದಲ್ಲಿ ನೀರಿನ ಅಂಶ ಇಟ್ಟುಕೊಂಡು ಮಣೆ ಹಾಕಿಕೊಂಡು ಕಿವಿಯಲ್ಲಿ ಹತ್ತಿ ಇಟ್ಟುಕೊಂಡು ಈ ಮೇಲಿನ ಮಂತ್ರವನ್ನು ಉತ್ತರಾಭಿಮುಖವಾಗಿ ಕುಳಿತು ಹೇಳÜಬೇಕು. ಮಂತ್ರದೀಕ್ಷೆಯ ಸಂದರ್ಭದಲ್ಲಿ ಮಾಂಸಾಹಾರವನ್ನು ತ್ಯಜಿಸುವುದು ಒಳ್ಳೆಯದು.
30 ರಿಂದ 40 ವಯಸ್ಸಿನವರೆಗೂ ರಾಹು ದಶೆ ಕುಜ ಭುಕ್ತಿ, ಗುರುದಶೆ ರಾಹುಭುಕ್ತಿ, ಶನಿದಶೆ ರಾಹುಭುಕ್ತಿ ಹಾಗೂ ಗುರು ರಾಹು ಕುಜ ಶನಿ 12ನೇ ಮನೆಯಲ್ಲಿದ್ದರೆ ಬಡತನ ಬರುವ ಸಂಭವ ಹೆಚ್ಚು.
ಶುಕ್ರದಶೆ ಶನಿಭುಕ್ತಿ ಅಥವಾ ಶನಿದಶೆ ಶುಕ್ರಭುಕ್ತಿ ಬಂದಾಗ ಉತ್ತಮ ಸ್ಥಾನಗಳಲ್ಲಿದ್ದರೂ ಅಷ್ಟೇ ಕೆಟ್ಟದ್ದಾಗುವ ಸಾಧ್ಯತೆಯಿದೆ. ಕೆಟ್ಟ ಸ್ಥಾನಗಳಲ್ಲಿದ್ದರೆ ಒಳ್ಳೆ ಫಲಗಳು ಲಭಿಸುತ್ತವೆ.
* ಸ್ವಾಮಿ ಅಮರೇಶ ಬಿ.ಹಿರೇಮಠ
sangraha
Subscribe to:
Post Comments (Atom)
No comments:
Post a Comment