Thursday, 7 December 2017

ಸುಖೀ ಸಂಸಾರಕ್ಕೆ ಗ್ರಹಬಲ

ಜ್ಯೋತಿಷ್ಯ ನಮ್ಮ ಸನಾತನ ಧರ್ಮ ಉಲ್ಲೇಖಿಸಿರುವ ಚತುರಾಶ್ರಮಗಳಲ್ಲಿ ಜೀವನದ ಬಹುಪಾಲು ಗೃಹಸ್ಥಾಶ್ರಮಕ್ಕೆ ಸಂಬಂಧಿಸಿರುವುದರಿಂದ ಈ ವು ಹೆಚ್ಚಿನ ಪ್ರಾಮುಖ್ಯತೆಯನ್ನು ಹೊಂದಿದೆಯೆಂದರೆ ತಪ್ಪಾಗಲಾರದು. 'ಋುಣಾನುಬಂಧ ರೂಪೇಣ ಪಶು ಪತ್ನಿ ಸುತಾಲಯ' ಎಂಬ ಉಕ್ತಿಯಂತೆ ನಮ್ಮ ಜೀವನದಲ್ಲಿ ಉತ್ತಮ ಪತ್ನಿ ಮತ್ತು ಉತ್ತಮ ಸಂತತಿ ಪಡೆಯಲು ಪೂರ್ವಜನ್ಮದ ಪುಣ್ಯವಿರಬೇಕು. ಗೃಹಸ್ಥನಾದವನು ಉತ್ತಮ ವಿಚಾರವಂತನಾಗಿದ್ದು ಧರ್ಮ ವಿಹಿತವಾದ ಜೀವನವನ್ನು ಪರಿಪಾಲಿಸಿದ್ದೇ ಆದಲ್ಲಿ ಉತ್ತಮ ಸಂತಾನವನ್ನು ಪಡೆಯಲು ಸಾಧ್ಯ. ಯಾವುದೇ ಒಂದು ಉತ್ಪತ್ತಿಗೆ ಪುರುಷ ಶಕ್ತಿ ಅಗತ್ಯ. ಆ ಶಕ್ತಿ ಸದ್ವಿನಿಯೋಗವಾಗಬೇಕಾದರೆ ಉತ್ತಮ ಭೂಮಿಕೆಯೂ ಅಷ್ಟೇ ಮುಖ್ಯ. 'ಅಪುತ್ರಸ್ಯ ಗತಿರ್ನಾಸ್ತಿ' ಎಂಬ ಮಾತು ಸರ್ವಕಾಲಕ್ಕೂ ಸಮ್ಮತವಲ್ಲ. ಇತ್ತೀಚಿನ ದಿನಗಳಲ್ಲಿ ಹೆಣ್ಣು, ಗಂಡು ಎನ್ನುವ ಭೇದ ಭಾವವಿಲ್ಲ. ಯಾವ ಮಗುವಾದರೇನು ಅದು ಆರೋಗ್ಯವಂತವಾಗಿರಬೇಕು, ವಿವೇಕವಂತವಾಗಿರಬೇಕು. ಹಾಗಿದ್ದರೆ ಮಾತ್ರ ಸಂಸಾರದಲ್ಲೂ ಸುಖ ಮನೆಯಲ್ಲೂ ನೆಮ್ಮದಿ. ಹುಟ್ಟುವ ಮಗುವಿನ ನ್ಯೂನತೆಗೆ ಗ್ರಹದೋಷ ಕಾರಣವೆನ್ನುವ ನಂಬಿಕೆಯಿದ್ದರೂ ಆಧುನಿಕ ವಿಜ್ಞಾನ ಶಾರೀರಿಕ ನ್ಯೂನತೆಗಳನ್ನು ಬಗೆಹರಿಸುವಲ್ಲಿ ಸಾಕಷ್ಟು ನೆರವು ನೀಡುತ್ತದೆ. ಆದಾಗ್ಯೂ ಉತ್ತಮ ಸಂತಾನಕ್ಕೆ, ಕುಟುಂಬ ಸೌಖ್ಯಕ್ಕೆ ನವಗ್ರಹಗಳ ಶುಭದೃಷ್ಟಿ ಅತ್ಯವಶ್ಯ ಎನ್ನುವುದು ಅಷ್ಟೇ ಮುಖ್ಯ. ನವಗ್ರಹಗಳ ಶುಭಫಲವನ್ನು ನಿರೀಕ್ಷಿಸುವಲ್ಲಿ ಜ್ಯೋತಿಷ್ಯ ಶಾಸ್ತ್ರವು ನಮಗೆ ನೆರವು ನೀಡುತ್ತದೆ. ಕೆಳಗಿನ ನಿಯಮಗಳನ್ನು ಸರಿಯಾಗಿ ಪಾಲಿಸಿ ಉತ್ತಮ ಫಲವನ್ನು ಹೊಂದಿ. ದಂಪತಿಯ ದಶಾ ಸಮಯ ಉತ್ತಮವಾಗಿದ್ದರೆ ಶುಭ ಫಲಗಳನ್ನು ನಿರೀಕ್ಷಿಸಬಹುದು. ದೈನಂದಿನ ಕಾರ್ಯಗಳಿಗೆ ರಾಹುಕಾಲವಿಲ್ಲದ ಶುಭ ಸಮಯವನ್ನು ಆಯ್ಕೆ ಮಾಡಿಕೊಳ್ಳುವಂತೆ ದಂಪತಿಗಳ ಮಿಲನಕ್ಕೆ ದಶಾ ಸಮಯವು ಶುಭವಾಗಿರಬೇಕು. ಯಾವುದೇ ಕಾರ್ಯಗಳಿಗೆ ಶುಭ ತಿಥಿಯು ಪ್ರಶಸ್ತ. ಛಿದ್ರ ತಿಥಿಗಳಾದ ಚತುರ್ಥಿ, ಅಷ್ಟಮಿ, ಚತುರ್ದಶಿ ದಿನಗಳಾಗಲೀ ಸಂತಾನಾಪೇಕ್ಷೆಗೆ ಯೋಗ್ಯವಲ್ಲ. ಹುಣ್ಣಿಮೆ, ಅಮಾವಾಸ್ಯೆ, ಪರ್ವಕಾಲಗಳಾದ ಗ್ರಹಣ, ಸಂಕ್ರಾಂತಿಯ ಸಂದರ್ಭಗಳು ಒಳಿತಲ್ಲ. ಅಶುಭ ನಕ್ಷ ತ್ರ, ಉಗ್ರ ನಕ್ಷ ತ್ರಗಳ ದಿನಗಳೂ ಸಹ ಸಂತಾನಕ್ಕೆ ಪ್ರೇರಕವಲ್ಲ. ಹಾಗಾಗಿ ಈ ವಿಚಾರದಲ್ಲಿ ನಾವು ಗಮನಿಸಬೇಕಾದ ಸಂಗತಿಯೊಂದಿದೆ. ನಕ್ಷತ್ರಗಳ ಗುಣವೇ ಮಾನವನ ಸ್ವಭಾವವೂ ಆಗಿರುವುದರಿಂದ ಮಿಲನ ಸಂದರ್ಭದಲ್ಲಿ ನಕ್ಷ ತ್ರಗಳೂ ಪ್ರಮುಖ ಪಾತ್ರ ವಹಿಸುತ್ತವೆ. ಸಂಸಾರದ ಪ್ರತಿಯೊಂದು ಕರ್ತವ್ಯ ನಿರ್ವಹಣೆಯಲ್ಲೂ ಸತಿ-ಪತಿಯರ ಮನಸ್ಸು ಶುದ್ಧವಾಗಿರಬೇಕು. ನಿರ್ಮಲವಾದ ಮನಸ್ಸಿನಿಂದ ನಿರ್ಣಯಗಳನ್ನು ತೆಗೆದುಕೊಳ್ಳಬೇಕು. ಅಂತಹದ್ದೊಂದು ವಾತಾವರಣವಿದ್ದಲ್ಲಿ ಎಲ್ಲದರಲ್ಲೂ ಶುಭವಾಗುತ್ತದೆ. ಗೋಚಾರದಲ್ಲಿ ಪಾಪಗ್ರಹಗಳ ಸಂಯೋಗ ಇದಾ ್ದ ಗ ಯಾವುದೇ ಶುಭ ಕಾರ್ಯಗಳಿಗೆ ಮುಂದಾಗುವುದು ಸರಿಯಲ್ಲ. ಶುಭ ಗ್ರಹದ ಸಂಯೋಗವಿದಾ ್ದ ಗ ಮನೆಯೂ ಬೆಳಗುತ್ತದೆ, ಮನೆಯ ಕೀರ್ತಿ ಪತಾಕೆ ಬೆಳಗುವಂತ ಸಂತಾನ ಭಾಗ್ಯಕ್ಕೂ ಕಾರಣವಾಗುತ್ತದೆ ಎಂದು ಜ್ಯೋತಿಷ್ಯಶಾಸ್ತ್ರ ಮಾರ್ಗದರ್ಶನ ಮಾಡುತ್ತದೆ. ಮೇಲಿನ ಯಾವುದೇ ನಿಯಮಗಳನ್ನು ಪಾಲಿಸದಿದ್ದರೆ ಆಗತಕ್ಕಂತಹ ಸಂತಾನವು ಋುಣರೂಪವಾಗಿ, ದೋಷರೂಪವಾಗಿ ಹಾಗೂ ಶಾಪರೂಪವಾಗಿಯೂ ನಮ್ಮನ್ನು ಕಾಡುತ್ತದೆ. ಸಮಾಜಕ್ಕೂ ಭಾರವಾಗುತ್ತದೆ. ಡಾ. ಭಾರತಿ ರವೀಂದ್ರ sangraha

No comments:

Post a Comment