Thursday, 7 December 2017
ನಂಬಿಕೆಯಲ್ಲಿದೆ ಪರಿಹಾರ
ಮನೆ, ಮನಸ್ಸನ್ನು ತುಂಬೋ ಮಕ್ಕಳು ಇದ್ದಕ್ಕಿದ್ದಂತೆ ಹುಷಾರು ತಪ್ಪುತ್ತಿರುತ್ತಾರೆ. ಮನೇಲಿ ಪದೇ ಪದೇ ಅನಾರೋಗ್ಯ. ಎಷ್ಟು ದುಡಿದ್ರೂ, ಏನೇ ಕೂಡಿಹಾಕಿದ್ರೂ ಪ್ರಯೋಜನವಿಲ್ಲ. ಕೈಸಾಲ ಇಲ್ಲಾ ಋುಣಬಾಧೆ ಇಲ್ಲಾ ಅಪವ್ಯಯ. ಇಂತಹ ಸಂದರ್ಭಗಳಲ್ಲಿ ತಕ್ಷ ಣ ನೆನಪಿಗೆ ಬರೋ ಸಂಗತಿಯೇ ಯಾರಾದರೂ ನಮಗೆ ಮಾಟ ಮಾಡಿಸಿದ್ದಾರಾ? ಕೈಮುಸುಕು (ವಾಮಾಚಾರ) ಮಾಡಿಸಿದ್ದಾರಾ? ಅಂತ. ಮನುಷ್ಯರ ಸ್ವಭಾವವೇ ಹಾಗೆ. ಸಮಸ್ಯೆ ಬಂದಾಗ ಸಕಾರಾತ್ಮಕವಾಗಿ ಚಿಂತಿಸಿ ಅದಕ್ಕೊಂದು ಪರಿಹಾರ ಹುಡ್ಕೋ ಬದಲು ನಕಾರಾತ್ಮಕವಾಗೇ ಯೋಚಿಸೋದು. ಕೈಮುಸುಕು, ಮಾಟ, ಮಂತ್ರಗಳ ಹಿಂದೆ ಮನಸ್ಸನ್ನು ಸುತ್ತಾಡಿಸೋದು. ಆದರೂ ನೊಂದ, ಬೆಂದ, ಖಿನ್ನವಾದ ಮನಸ್ಸಿಗೆ ಒಂದಿಷ್ಟು ಸಮಾಧಾನ ಕೊಡೋ ಮಾತು, ಪರಿಹಾರ ವಿಧಾನ ಕೊಟ್ಟಾಗ ಅವರಿಗೂ ಖುಷಿಯಾಗುತ್ತೆ. ಸಮಾಜಕ್ಕೆ ಒಳ್ಳೆಯದನ್ನು ಮಾಡಿದ ತೃಪ್ತಿಯೂ ನಮಗಿರುತ್ತೆ.
ಯಾರೋ ವಾಮಾಚಾರ ಮಾಡಿದ್ದಾರೆ, ಮತ್ಯಾರೋ ಮಾಟ ಮಾಡಿಸಿದ್ದಾರೆ ಅಂತ ಗೊಣಗೋದು ಬಿಟ್ಟು ಸುಲಭ ಹಾಗೂ ಸರಳವಾದ ಈ ಪರಿಹಾರವನ್ನು ಅಳವಡಿಸಿಕೊಳ್ಳಿ. ಮಾಡಿದ ಕೂಡಲೇ ಪರಿಹಾರ ಸಿಗದಿದ್ದರೂ ಒಂದಷ್ಟು ದಿನಗಳ ನಂತರ ಅದರ ಫಲಾನುಭವ ನಿಮ್ಮದಾಗುತ್ತದೆ ಎನ್ನುವುದರಲ್ಲಿ ಸಂಶಯವಿಲ್ಲ.
ಸೋಲಾರ್ ಟ್ರೀಟ್ಮೆಂಟ್: ಅರಿಶಿನ ಮಿಶ್ರಿತ ನೀರನ್ನು ಗಂಧದಂತೆ ಮಾಡಿಕೊಂಡು ದೊಡ್ಡದಾದ ಸ್ಟೀಲ್ ತಟ್ಟೆಗೆ ಸವರಿ. ಅದರ ಮೇಲ್ಬದಿಯಲ್ಲಿ ಕೆಂಪು ಗುಲಾಬಿ ಹೂವಿನ ದಳಗಳನ್ನು ಹರಡಿ. ಅದರ ಮೇಲೆ ಕೊಬ್ಬರಿ ಎಣ್ಣೆ ಮಿಶ್ರಿತ ಶುದ್ಧ ನೀರನ್ನು ಚಿಮುಕಿಸಿ. ಕೆಂಪು ಗುಲಾಬಿ ಹೂವಿನ ಮಧ್ಯೆ ಮೇಣದ ಬತ್ತಿಗಳನ್ನು ಬೆಳಗಿಸಿ. ದೇವರ ಮನೆಯಲ್ಲಿ ಇಡಿ. ತದೇಕ ಚಿತ್ತದಿಂದ ಒಂದು ನಿಮಿಷಗಳ ಕಾಲ ಮೇಣದ ಬತ್ತಿಯ ಜ್ಯೋತಿಯನ್ನೇ ದೃಷ್ಟಿಸಿ. ನಂತರ ಮನೆಯಿಂದ ಹೊರಗೆ ಬಂದು ಸೂರ್ಯನನ್ನು ದೃಷ್ಟಿಸುವುದು. ಸೂರ್ಯನಲ್ಲಾಗುವ ಬಣ್ಣದ ಬದಲಾವಣೆಗಳನ್ನು (ಕೆಂಪು, ಹಳದಿ ಮತ್ತು ನೀಲಿ) ಗಮನಿಸುವುದು. ಆ ನಂತರ ಮನೆಯೊಳಗೆ ತಟ್ಟೆಯಲ್ಲಿ ಇಟ್ಟಿರುವ ದೀಪವನ್ನು ದೃಷ್ಟಿಸಿದಾಗ ಅದೂ ಕೆಂಬಣ್ಣದಂತೆಯೇ ಕಾಣುತ್ತದೆ. ಅದನ್ನು ತದೇಕಚಿತ್ತವಾಗಿ ಒಂದು ನಿಮಿಷಗಳ ಕಾಲ ನೋಡುವ ಮೂಲಕ ಸೂರ್ಯನ ಪ್ರಭಾವ ನಮ್ಮ ಮೇಲಾಗುತ್ತದೆ. ಮನಸ್ಸಿಗೆ ಮಸುಕಿರುವ ವಾಮಾಚಾರದ ಛಾಯೆ ಸರಿದು ಹೋಗುತ್ತದೆ. ಆದರೆ ಗರ್ಭಿಣಿ ಹೆಣ್ಣು ಮಕ್ಕಳು ಹಾಗೂ ಮೈಗ್ರೇನ್ ಪೀಡಿತರು ಈ ಪ್ರಯೋಗವನ್ನು ಮಾಡಬಾರದು.
ನಾರಾಯಣ ಸೆಟ್ಟಿ ಪದ್ಮಸಾಲಿ
sangraha
Subscribe to:
Post Comments (Atom)
No comments:
Post a Comment