Wednesday, 6 December 2017
ಹೋಮ, ಹವನಗಳಿಂದ ಸಮಸ್ಯೆ ಪರಿಹಾರ ಆಗುತ್ತದೆಯಾ?
ನೂರಾರು ಜನರಿಗೆ ಭವಿಷ್ಯದ ಬಗ್ಗೆ ನಂಬಿಕೆ ಇಲ್ಲ. ಜಾತಕ ಕುಂಡಲಿಗಳ ಮೇಲಿಂದ ಬದುಕಿನ ಬಗೆಗೆ ವಿಶ್ಲೇಷಣೆಗಳು ವೈಜ್ಞಾನಿಕವಲ್ಲ. ಕೇವಲ ಒಂದು ಭ್ರಾಂತಿ ಎಂದು ಹೇಳುತ್ತಲೇ ಇರುತ್ತಾರೆ. ಆದರೆ ಲಕ್ಷಾಂತರ ಮಂದಿ ಜಾತಕ ಕುಂಡಲಿ ಹಸ್ತಸಾಮುದ್ರಿಕೆಗಳ ಕುರಿತಾದ ಶಾಸ್ತ್ರವನ್ನು ನಂಬುತ್ತಾರೆ. ಅಷ್ಟೇ ತೀವ್ರವಾಗಿ ಎಲ್ಲ ತೊದರೆಗಳ ಬಗೆಗೆ ಪರಿಹಾರದ ಮಾರ್ಗ ಏನು ಎಂದು ಪ್ರಶ್ನಿಸುತ್ತಾರೆ. ಬದುಕಿನ ಸುಖ ಜನರನ್ನು ಜೋತಿಷಿಗಳ ಮನೆ ಬಾಗಿಲಿಗೆ ಓಡಾಡುವಂತೆ ಮಾಡುವುದಿಲ್ಲ. ಕಷ್ಟ ಬಂದಾಗ ಜೋತಿಷಿಯನ್ನು ಸಂಧಿಸುತ್ತಾರೆ. ಇದರಲ್ಲಿ ತಪ್ಪೇನಿಲ್ಲ. ರೋಗ ಬಂದಾಗಲೇ ವೈದ್ಯರ ಬಳಿ ಹೋಗುವಂತೆ ಅಷ್ಟೆ
ಗ್ರಹಪೀಡೆ ಮತ್ತು ಪರಿಹಾರ
ಮಂತ್ರಕ್ಕೆ ಮಾನವಿಕಾಯಿ ಉದುರುವುದಿಲ್ಲ ಎಂಬ ಮಾತಿದೆ. ತುಂಬಾ ಅರ್ಥಪೂರ್ಣವಾದ ಮಾತು. ಮಂತ್ರಕ್ಕೆ ಮಾನವಿಕಾಯಿ ಉದುರುತ್ತದೆ ಎಂದರೆ ಹೇಗೆ ಎಲ್ಲಿ ತೋರಿಸಿ? ಎಂಬುವವರ ದೊಡ್ಡ ಸರತಿಯ ಸಾಲು ಬಂದು ನಿಲ್ಲುತ್ತದೆ. ಹಾಗಾದರೆ ತಲೆಮಾರುಗಳಿಂದ ಬೆಳೆದು ಬಂದ ಮಂತ್ರಗಳು, ತಂತ್ರಗಳು, ಜಪ, ಹೋಮ, ಹವನಗಳು ಸುಳ್ಳೇ? ಮಂತ್ರ ಯಾವತ್ತೂ ಸುಳ್ಳಲ್ಲ, ಹೋಮ ಹವನಗಳು ಪರಿಣಾಮಕಾರಿಯಾಗಿಯೇ ಆಗಿವೆ. ಅನುಮಾನವೇ ಬೇಡ. ಆದರೆ ಯಾರು ತ್ರಿಕರಣಪೂರ್ವಕವಾದ ಶ್ರದ್ಧೆಯಿಂದ ಮಂತ್ರ ಸಾûಾತ್ಕಾರಗೊಳಿಸಿಕೊಂಡಿದ್ದಾರೆ ಎಂಬುದರೆ ಮೇಲೆ ಸತ್ಯ ಮತ್ತು ಅಸತ್ಯದ ಕೊಂಡಿ ಹೊಯ್ದಾಡುತ್ತಿದೆ. ಪದೇ ಪದೇ ಜನ ಪರಿಹಾರಗಳ ಬಗ್ಗೆ ಕೇಳುತ್ತಾರೆ. ಅವರಿಗೆ ಪರಿಹಾರ ಬೇಕು ಆದರೆ ನಂಬಿಕೆಯ ಕುರಿತಂತೆ ಅವರಿಗೆ ಪೂರ್ತಿ ಹೊಯ್ದಾಟವೂ ಇರುತ್ತದೆ.
ಮಂತ್ರ ತಿಳಿದವರು ಅನೇಕರಿದ್ದಾರೆ. ಆದರೆ ಎಷ್ಟು ಮಂದಿ ಅದರ ಅನುಷ್ಟಾನ ಮಾಡುತ್ತಾರೆ ಎಂಬುದು ಒಂದು ಯಕ್ಷ ಪ್ರಶ್ನೆ. ಒಬ್ಬ ವ್ಯಕ್ತಿ ಭಾರತದ ರಾಜಕೀಯ ರಂಗದಲ್ಲಿ ಹೆಸರು ಮಾಡಿ ಈ ಒಂದು ದಶಕದಿಂದ ಜನಮಾನಸದಲ್ಲಿ ಗಟ್ಟಿಯಾಗಿ ನಿಂತವರೊಬ್ಬರು ಒಬ್ಬ ಪೂಜನೀಯ ಮಂತ್ರ ದ್ರಷ್ಟಾರ ಅನುಷ್ಟಾನದವರ ಬಳಿ ಬಂದು ನನಗೆ ವಿಧ್ಯುಕ್ತವಾಗಿ ಗಾಯಿತ್ರಿಉಪದೇಶ ಮಾಡುವಿರಾ? ಎಂದು ಕೇಳಿದರು. ನಾಳೆ ಬನ್ನಿ ಯೋಚಿಸಿ ಹೇಳುತ್ತೇನೆ ಎಂದು ರಾಜಕೀಯ ನಾಯಕರ ಬಳಿ ಹೇಳಿದರು. ಅವರ ಧ್ವನಿ ಮೃದುವಾಗಿದ್ದರೂ ಉಪದೇಶಿಸುತ್ತೇನೆ ಎಂಬುದನ್ನು ನಿಖರವಾಗಿ ಹೇಳಲಿಲ್ಲ. ರಾಜಕೀಯ ನಾಯಕರು ಗೌರವದಿಂದಲೇ, ನಮಸ್ಕರಿಸಿ ನಾಳೆ ಬರುತ್ತೇನೆ ಎಂದು ಹೇಳಿಹೋದರು. ಮಾರನೆಯ ದಿನ ಬಂದರು. ಮಂತ್ರ ದ್ರಷ್ಟಾರರು ರಾಜಕೀಯ ನಾಯಕರನ್ನು ಸ್ವಾಗತಿಸಿದರು. ನಾಯಕರಿಗೆ ಆತುರತ್ತು. ಗುರುಗಳೇ ಎಂದು ಸಂಭೋಧಿಸುತ್ತಿರುವಂತೆಯೇ ನಿನ್ನೆ ರಾತ್ರಿ ಏಕೆ ನಿದ್ದೆಗೆಟ್ಟಿರಿ ಎಂದು ವಿಚಾರಿಸಿದರು.
ನಾಯಕರು ನೀವು ಎಲ್ಲಿ ಸಾಧ್ಯವಾಗದು ಎಂದು ಬಿಡುತ್ತೀರೋ ಗಾಯತ್ರಿ ಬೋಧಿಸಲು ಎಲ್ಲಿ ಹಿಂದೇಟು ಹಾಕುತ್ತೀರೋ ಎಂಬ ಭಯದಿಂದ ನನಗೆ ನಿದ್ದೆಯೇ ಬರಲಿಲ್ಲ ಎಂದು ನಿಜವನ್ನೇ ಹೇಳಿದರು. ನಂಬಿಕೆಯೊಂದಿಗೆ ಇಂದು ನಿದ್ದೆ ಮಾಡಿ ಬನ್ನಿ ನಿಮ್ಮ ಮುಖಕಾಂತಿ ಕನ್ನಡಿಯಾಗುತ್ತದೆ ಎಂದು ದ್ರಷ್ಟಾರರು ಹೇಳಿದರು. ರಾಜಕೀಯ ನಾಯಕರು ಆಗಲಿ ಅಪ್ಪಣೆ ಎಂದು ಹಿಂತಿರುಗಿದರು. ಮಾರನೆಯ ದಿನ ದ್ರಷ್ಟಾರರ ಮನೆಗೆ ಹೋಗಿ ಅವರಿಗೆ ಅಡ್ಡ ಬಿದ್ದರು. ಈಗ ನಿನಗೆ ಗಾಯತ್ರಿ ಬೋಧನೆ ಆಗಿದೆಯಲ್ಲ ಯಾಕೆ ಬಂದೆ ಹಿಂತಿರುಗಿ ಎಂದು ಕೇಳಿದರು. ನಾಯಕರು ದ್ರಷ್ಟಾರರ ಮಾತಿನಂತೆ ಗಾಢ ನಿದ್ರೆಯನ್ನು ಮಾಡಿದ್ದರು.
ದ್ರಷ್ಟಾರರು ಕನಸಿನಲ್ಲಿ ಬಂದು ಗಾಯತ್ರಿಯನ್ನು ಬೋಧಿಸಿದ್ದರು. ಬೆಳಗ್ಗೆ ಸಾವಿರ ಗಾಯತ್ರಿ ಪೂರೈಸು ಎಂದು ಆದೇಶವನ್ನೂ ನೀಡಿದ್ದರು. ರಾಜಕೀಯ ನಾಯಕರು ಸಾವಿರ ಗಾಯತ್ರಿ ಪೂರೈಸಿದ್ದರು. ಅದನ್ನು ತಿಳಿಸಲು ಬಂದಿದ್ದರು. ಆದರೆ ದ್ರಷ್ಟಾರರಿಗೆ ರಾಜಕೀಯ ನಾಯಕರ ಮುಖ ಲಕ್ಷಣದಲ್ಲಿಯೇ ಸಾವಿರ ಗಾಯತ್ರಿ ಪೂರೈಸಿರುವ ಸುಳಿವು ಸಿಕ್ಕಿತ್ತು. ಈ ನಾಯಕರಿಗೆ ಒಂದು ಪ್ರತಿಷ್ಟಿತ ರಾಜ್ಯದ ಬಹುಮುಖ್ಯ ಜವಾಬ್ದಾರಿ ಹೊತ್ತ ಉನ್ನತ ಮಂತ್ರಿ. ಅದ್ವಿತೀಯ ನಾಯಕರೊಬ್ಬರ ಆಪ್ತನೂ ಕೂಡಾ. ಗಾಯತ್ರಿ ಮಂತ್ರ ಈ ನಾಯಕನ ಕೈ ಬಿಡಲಿಲ. ದ್ರಷ್ಟಾರರು ಗಾಯತ್ರಿಗೆ ಕಾರಣರೋ, ಗಾಯತ್ರಿಯೇ ದ್ರಷ್ಟಾರರ ಮೂಲಕ ನಾಯಕನಿಗೆ ಅನುಗ್ರವಿತ್ತಳ್ಳೋ? ಗಾಢವಾದ ನಿದ್ದೆ ನಂಬಿಗೆಯ ಫಲಶ್ರುತಿಯೋ? ಕನಸಲ್ಲೂ ಬರುವುದರ ನಿಜವಾದ ಶಕ್ತಿ ಏನು? ಎಲ್ಲಾ ಮಾನಸಿಕ ಸ್ಥಿತಿಗತಿಗಳ್ಳೋ? ಎಲ್ಲಾ ಕೇವಲ ಆಕಸ್ಮಿಕವೋ ಇವೆಲ್ಲ ಈಗ ಒಗಟು.
ಹೋಮ ಹವನಗಳ ಶಕ್ತಿ ಏನು?
ಕನ್ನಡದ ಪ್ರಸಿದ್ಧ, ಉತ್ತಮ ಕವಿ ಒಬ್ಬರ ಅಳಿಯನ ಆರೋಗ್ಯ ಹದಗೆಟ್ಟಿತ್ತು. ವಯಸ್ಸು ಕೇವಲ 30 ಅಥವಾ 40 ಆಗಿದ್ದಿರಬಹುದು. ಆಗ ಗಟ್ಟಿಯಾಗೇ ಇದ್ದ ಅಳಿಯನಿಗೆ ಕರುಳಿನಲ್ಲಿ ಏನೋ ಬಾಧೆ ಉಂಟಾಗಿ ದಾರುಣವಾಗ ತೊಡಗಿತ್ತು ಪರಿಸ್ಥಿತಿ. ಆಸ್ಟ್ರೇಲಿಯಾದಲ್ಲಿ ಆಸ್ಪತ್ರೆಯೊಂದರಲ್ಲಿ ಶಸ್ತ್ರ ಚಿಕಿತ್ಸೆ ಕೂಡ ಆಯ್ತು. ಆಪರೇಷನ್ ಸಕ್ಸಸ್. ಆದರೆ ದೇಹದಲ್ಲಿ ಕರುಳಿನ ಕೆಲಸ ಶುರುಗೊಳ್ಳುತ್ತಲೇ ಇಲ್ಲ. ಪ್ರಾಣಕ್ಕೆ ಅಪಾಯವಿದೆ ಎಂಬುದು ವೈದ್ಯರ ಮುಖದ ಆತಂಕದ ಮೂಲಕ ತಿಳಿಯುವಂತಿತ್ತು. ಕನ್ನಡದ ಕವಿ ಇದೂ ಒಂದು ಎಂದು ಹಳೆಯ ಅಳಿಯನ ಜಾತಕದ ಪ್ರತಿಯನ್ನು ಕೊಟ್ಟರು. ಒಂದು ಸಂಧಿಯ ಸಂಕಟ ಸ್ಪಷ್ಟವಾಗೇ ಇತ್ತು. ಸಿಂಧಿ ಶಾಂತಿ ನೆಡದ ಮೇಲೂ, ಹದಿನೈದು ದಿನಗಳ ಕಾಲ ಅನಿಶ್ಚಿತ ಸ್ಥಿತಿಯೇ ಇತ್ತು. ಆದರೆ ಕವಿಯ ಅಳಿಯನನ್ನು ನೋಡಿಕೊಂಡಿದ್ದ ವೈದ್ಯರ ಮುಖದಲ್ಲಿ ಮಂದಹಾಸ ಬರಲು, ಶುರುವಾಗಲೂ ಪ್ರಾರಂಭಿಸಿತ್ತು. ಈಗ ಅಳಿಯ ಜಾಲಿಯಾಗಿದ್ದಾರೆ. ಇಲ್ಲೂ ಇದೊಂದು ಆಕಸ್ಮಕ ಎಂದೇ ಯಾರಾದರೂ ಚೀರಾಡಿದರೆ ಅದನ್ನು ಅಲ್ಲಗೆಳೆಯುವುದು ಸಾಧ್ಯವಾಗದು. ಆದರೆ ನಮ್ಮನ್ನು ಮೀರಿದ್ದೊಂದಿದೆ. ಅದು ಮಂತ್ರಗಳ ವಶದಲ್ಲಿದೆ ಎಂಬ ಮಾತು ಅಹಂಕಾರವೂ ಆಗಬಾರದು. ತಿಳಿಯದ್ದು ಅನೇಕವಿದೆ. ತಿಳಿದಿದ್ದೂ ಸುಮಾರಿದೆ. ಹಾಗೆಯೇ ನಮ್ಮನ್ನು ಮೀರಿದ್ದೂ ಒಂದಿದೆ.
ವಾಣಿಜ್ಯಮಯ ಜಗತ್ತು , ದೇವರು, ಮಂತ್ರ ಇತ್ಯಾದಿ
ಜಗತ್ತೇ ಹಣದ ಹಿಂದೆ ನಿಂತಿದೆ. ಜ್ಯೋತಿಷಿ, ಪುರೋಹಿತ, ವೈದ್ಯ, ಶಿಕ್ಷಕ, ವಿಜ್ಞಾನಿ, ರಾಜಕಾರಣಿ, ನಾನಾ ರೀತಿಯ ಜನ ಸೇವಾ ಸಂಸ್ಥೆಗಳು, ಶಿಕ್ಷಣದ ದೇಗುಲಗಳು ಇತ್ಯಾದಿ, ಇತ್ಯಾದಿ ಹಣದ ಹಿಂದೆ ನಿಂತಿದ್ದಾರೆ. ಯಾವುದು ಅಸಲೀ ಯಾವುದು ನಕಲಿ ಎಂಬದು ತಿಳಿಯದಂತಿದೆ. ರಾಹುಲ್ ಪಚ್ಚೆ ಧರಿಸಿದರೆ, ದೇವೇಗೌಡ ಮುತ್ತು ಧರಿಸಿದರೆ, ಜಯ ಲಲಿತಾ ಗೋಮೇಧಕ ಧರಿಸಿದರೆ, ಜಯ ಲಲಿತಾ ಗೋಮೇಧಕ ಧರಿಸಿದರೆ, ಯಡಿಯೂರಪ್ಪ ಕನಕ ಪುಷ್ಯರಾಗ ಧರಿಸಿದರೆ, ಸೋಲುತ್ತಿರುವ ಕ್ಯಾಪ್ಟನ್ ಧೋನಿ ಪಚ್ಚೆ ಸಹಿತ, ಗೋಮೇಧಿಕಕ್ಕೆ ಹೊಂದಿಕೊಂಡರೆ ಸಮಸ್ಯೆ ನಿವಾರಣೆ ಆದೀತೆ? ದೇವೇಗೌಡರು ಪದೇ ಪದೇ ಮುಲಾಯಂ, ಜಯಲಲಿತಾ, ನಿತೀಶ್‌ರೊಳಗೆ ಯಾರಾದರೂ ಪ್ರಧಾನಿಯಾಗಲಿ ಎಂದು ಅನ್ನುತ್ತಿದ್ದಾರೆ. ಸುಟ್ಟ ಬೂದಿಯಿಂದಲೇ ಮತ್ತೆ ಎದ್ದು ಬರುವೆ ಎಂದು ಅಂದಿದ್ದ ದೇವೇಗೌಡರಿಗೆ ಪ್ರಧಾನಿಯಾಗುವ ಆಸೆ ಇಲ್ಲವೇ? ಮಂತ್ರಕ್ಕೆ ಮಾವಿನಕಾಯಿ ಉದುರದು. ಸರಿಯಾದ ಮಂತ್ರ ಮಾವಿನಕಾಯನ್ನು ಉದುರಿಸಬಲ್ಲದು.
ಕುಂಡಲಿ ಶಕ್ತಿಯ ಮಹತ್ವ ಮತ್ತು ಅನುಷ್ಠಾನ
ನಮ್ಮ ದೇಹವೇ ಒಂದು ಯಂತ್ರ. ಅದರಲ್ಲಿ ಅನೇಕ ಸಿದ್ಧಿ ಬಿಂದುಗಳಿವೆ. ಉದಾಹರಣೆಗೆ ಸೊಂಟದ, ಆಸನದ ತಳ ಭಾಗದಿಂದ, ತಲೆಯವರೆಗೆ ಪಸರಿಸಿದ ಬೆನ್ನು ಹುರಿ ಮಹತ್ವದ ಆರು ಚಕ್ರಗಳನ್ನು ಹೊಂದಿದೆ. ಸಹಸ್ರಾರ, ಆಜ್ಞಾ, ವಿಶುದ್ಧಿ, ಅನಾಹತ, ಮಣಿಪುರ, ಸ್ವಾಧಿಷ್ಠಾನ ಹಾಗೂ ಮೂಲಾಧಾರ ಎಂಬ ಷಟ್ ಚಕ್ರಗಳು. ಭಯವಾದಾಗ ಒಮ್ಮೆಗೇ ಚಳ್ ಎಂಬ ವಿದ್ಯುತ್ ಸಂಚಾರದ ಅನುಭವ ಬೆನ್ನು ಹುರಿಯಲ್ಲಿ ಮೂಡುವುದನ್ನು ಗಮನಿಸಿಯೇ ಇರುತ್ತಾರೆ ಸಾಮಾನ್ಯವಾಗಿ ಎಲ್ಲರೂ. ದೇಹವೆಂಬ ದೇಗುಲಕ್ಕೆ ಚಿಕ್ಕ, ಚಿಕ್ಕ ಇಟ್ಟಿಗೆಗಳಂತೆ ಕೋಶಗಳಿವೆ. ಜೀವಕೋಶಗಳಿವು. ಈ ಜೀವಕೋಶಗಳು ಬರಿಗಣ್ಣಿಗೆ ಕಾಣದ ಅಲ್ಪಾಣುಗಳು. ಒಂದು ಇರುವೆಯಲ್ಲಿ ಕೋಟಿ ಜೀವ ಕೋಶಗಳು. ಈ ಕೋಶಗಳಲ್ಲಿ ಸೂಕ್ಷ್ಮವಾದ ಆಲ್ಕೋಹಾಲ್ ಉತ್ಪಾದನೆ ಇದೆ. ಷಟ್‌ಚಕ್ರಗಳ ಚಲನವಲನ, ಭಯ ಇತ್ಯಾದಿ ಚಳಕ್ ಎಂಬ ಭಾವತೀತ ಮಿಡಿತಕ್ಕೆ ಈ ಅಲೋRಹಾಲ್ ಉರುವಲಗಳು ಶಕ್ತಿ ಮೂಲಗಳು. ನಮ್ಮನ್ನೇ ನಾವು ಮರೆತು ಮಾಡುವ ಅನುಷ್ಠಾನ ನಿರ್ದಿಷ್ಟವಾದ ಮಂತ್ರರೂಪದಲ್ಲಿ ಅನುರಣನಗೊಂಡಾಗ, ಶಕ್ತಿಯುತವಾದ ಕುಂಡಲಿನಿ ಶಕ್ತಿ ಜಾಗ್ರತವಾಗುತ್ತದೆ. ಸಾಧನೆಯ ದಾರಿಗೆ ತ್ರಿಕರಣ ಪೂರ್ವಕ ಭಕ್ತಿ ಅನುಷ್ಠಾನ ಜಾಗ್ರತಗೊಂಡಾಗ ಇಲ್ಲದ ದೇವರು ಹರಳುಗಟ್ಟಿಕೊಂಡು ಎದುರಿಗೇ ಬರುತ್ತಾನೆ. ಅವನೊಲಿದರೆ ಕೊರಡು ಕೊನರುವುದಯ್ಯ ಎಂಬ ಭಕ್ತಿ ಭಂಡಾರಿಗಳ ಮಾತು ಅವಧೂತತ್ವದ ಸಿದ್ಧಿ ಸೂಕ್ತ.
*ಅನಂತ ಶಾಸ್ತ್ರಿ ಮೊ: 8147824707
sangraha
Read more at https://www.udayavani.com/kannada/news/
Subscribe to:
Post Comments (Atom)
No comments:
Post a Comment