Thursday, 7 December 2017

ಮೂಲಾ ನಕ್ಷತ್ರ

ನಮ್ಮಲ್ಲಿ ಹಲವರಿಗೆ ಮೂಲಾ ನಕ್ಷ ತ್ರದ ಬಗ್ಗೆ ಅಪನಂಬಿಕೆಯಿದೆ. ಆದರೆ ಮೂಲಾ ನಕ್ಷ ತ್ರದಲ್ಲಿ ಹುಟ್ಟಿದವರಿಗೆಲ್ಲ ಕೆಟ್ಟದಾಗುತ್ತದೆ ಎನ್ನುವ ವಾದ ಸರಿಯಲ್ಲ. ನಕ್ಷತ್ರದೋಷ ಕುರಿತಂತೆ ಯಾವುದೇ ನಿರ್ಣಯಕ್ಕೆ ಬರುವ ಮುನ್ನ ಜಾತಕವನ್ನು ಅಮೂಲಾಗ್ರವಾಗಿ ಪರಿಶೀಲಿಸಬೇಕು. ಮೂಲಾ ನಕ್ಷತ್ರದವರ ಜಾತಕದಲ್ಲಿ ಗ್ರಹಗಳು ಬಲಿಷ್ಟವಾಗಿದ್ದರೆ ಅದರ ಫಲಗಳು ಒಳ್ಳೆಯದೇ ಆಗಿರುತ್ತವೆ. ಜ್ಯೋತಿಷ ಶಾಸ್ತ್ರದ ಪ್ರಕಾರ ಮೂಲಾನಕ್ಷ ತ್ರದಲ್ಲಿ ಹುಟ್ಟಿದ ಸ್ತ್ರೀ ಅಲ್ಪ ಸುಖವನ್ನು ಹೊಂದಿರುತ್ತಾಳೆ ಎನ್ನುತ್ತಾರೆ. ಆದರೆ ಶುಭಗ್ರಹಗಳು ಬಲಿಷ್ಠವಾಗಿದ್ದರೆ ಮೇಲಿನ ಫಲಗಳಿಂದ ಯುಕ್ತರಾಗುತ್ತಾರೆ. ಮೂಲನಕ್ಷ ತ್ರದ ಒಂದನೇ ಚರಣ ತಾಯಿಗೂ 2ನೇ ಚರಣದಲ್ಲಿ ಜನಿಸಿದರೆ ತಂದೆಗೂ ಮೂರನೇ ಚರಣದಲ್ಲಿ ಹುಟ್ಟಿದರೆ ಜನನವಾದವರಿಗೂ ನಾಲ್ಕನೇ ಚರಣದಲ್ಲಿ ಜನಿಸಿದರೆ ತನ್ನ ವಂಶಕ್ಕೆ ತೊಂದರೆ ಬರುತ್ತದೆ. ಮೂಲ ನಕ್ಷ ತ್ರದಲ್ಲಿ ಹುಟ್ಟಿದವರ ನಕ್ಷ ತ್ರ ಎಷ್ಟು ಗಳಿಗೆ ಇದೆ ಎಂದು ನೋಡಬೇಕು. ಅದನ್ನು ಎಂಟು ಭಾಗ (4.7.10.8.9.5.6.11) ಮಾಡಬೇಕು. ಪ್ರತಿಯೊಂದು ಭಾಗಕ್ಕೂ ಸೇರಿಸುತ್ತಾ ಹೋಗಬೇಕು. ಕೆಲವರ ನಂಬಿಕೆಯಂತೆ ನಾಲ್ಕು ಗಳಿಗೆಯಲ್ಲಿ ಜನನವಾದರೆ ಸರ್ವನಾಶ, ಏಳನೇ ಗಳಿಗೆಯಲ್ಲಿ ಜನಿಸಿದರೆ ದ್ರವ್ಯನಾಶ, ಮೂರನೇ ಭಾಗದ 10 ಗಳಿಗೆಯಲ್ಲಿ ಜನಿಸಿದರೆ ಸಹೋದರರಿಗೆ ತೊಂದರೆ, ನಾಲ್ಕನೆ ಭಾಗದ ಎಂಟನೆ ಗಳಿಗೆಯಲ್ಲಿ ಜನನವಾದರೆ ತಾಯಿಗೆ ಅಶುಭ, ಐದನೇಯ ಭಾಗದ ಒಂಬತ್ತನೆಯ ಗಳಿಗೆಯಲ್ಲಿ ಜನನವಾದರೆ ಬಂಧು ಬಳಗದವರಿಗೆ ತೊಂದರೆ, ಆರನೇಯ ಭಾಗದ ಐದನೇ ಗಳಿಗೆಯಲ್ಲಿ ಜನನವಾದವರಿಗೆ ಮಂತ್ರಿಯೋಗ ಬರುತ್ತದೆ. ಏಳನೇಯ ಭಾಗದ ಆರು ಗಳಿಗೆಯಲ್ಲಿ ಜನನವಾದರೆ ರಾಜ್ಯ ಪ್ರಾಪ್ತಿ. ಏಳನೆಯ ಭಾಗದ ಹನ್ನೊಂದನೆ ಗಳಿಗೆಯಲ್ಲಿ ಜನಿಸಿದವರಿಗೆ ಅಲ್ಪಾಯುಷ್ಯ ಎನ್ನುತ್ತಾರೆ. * ಮೂಲ್ಕಿ ಹರಿಶ್ಚಂದ್ರ ಪಿ. ಸಾಲಿಯಾನ್‌ sangraha

No comments:

Post a Comment