Wednesday, 6 December 2017

ಜಾತಕ, ಕುಂಡಲಿ ನಿಯಂತ್ರಿಸುವ ಗ್ರಹಗಳನ್ನು ಒಲಿಸಿಕೊಳ್ಳುವುದು ಹೇಗೆ?

ಕಣ್ಣು, ಕಿವಿ, ನಾಲಿಗೆ, ಚರ್ಮ ಇವು ಇತರ ಇಂದ್ರಿಯಗಳು. ಅಪಾಯ, ಹಿತವಾದ ಅನುಭವಗಳಾದರೆ ಆನಂದವನ್ನೂ ಪಡೆಯುತ್ತೇವೆ. ಈ ಪಂಚೇಂದ್ರಿಯಗಳನ್ನು ಮೀರಿದ ಒಂದು ನಿಗೂಢ ಶಕ್ತಿ ಕೆಲವು ಮುಂದಿನ ಆಗುಹೋಗುಗಳ ಬಗೆಗೆ ಅರಿವನ್ನು ಕೆಲವರಿಗೆ ಕ್ಷೀಣವಾಗಿ, ಕೆಲವರಿಗೆ ಹೆಚ್ಚು ಸ್ಪಷ್ಟವಾಗಿ ಕೊಡುತ್ತಿರುತ್ತದೆ. ಇದನ್ನು ಆರನೇ ಇಂದ್ರಿಯ ಎನ್ನುತ್ತೇವೆ. ಜೀವನವನ್ನು ಕಷ್ಟಗಳಿಲ್ಲದೆ ದಾಟುವುದು ಸಾಧ್ಯವಿಲ್ಲ. ಒಬ್ಬನಿಗೆ ಅನ್ನದ ಚಿಂತೆಯಾದರೆ ಮತ್ತೂಬ್ಬರಿಗೆ ಆರೋಗ್ಯದ ಚಿಂತೆ. ಭಾರತೀಯ ಜೋತಿಷ್ಯ ವಿಜಾnನ ಒಬ್ಬ ವ್ಯಕ್ತಿಯ ಜಾತಕ ಕುಂಡಲಿಯಲ್ಲಿ ದೋಷಗಳನ್ನು ಶಕ್ತಿಯುತ ರಾಜಯೋಗ, ಸುಖಶಾಂತಿ, ಸಮಾಧಾನ ಸರ್ವಸಿದ್ಧಿಗಳ ಬಗೆಗಿನ ವಾಸ್ತವಗಳನ್ನು ತೆರೆದಿಡಬಹುದು. ಆದರೆ ಸಾಧಕರು ಜಾತಕ ಕುಂಡಲಿಯನ್ನು ನಿಯಂತ್ರಿಸುವ ಗ್ರಹಗಳನ್ನೇ ಶಕ್ತಿ ಆರಾಧನೆಯ ಮೂಲಕ ನಿಯಂತ್ರಿಸಲು ವಿಶೇಷವಾದ ಸಾಧನೆ ನಡೆಸುತ್ತಾರೆ. ಹಾಗಾದರೆ ಇಂಥ ಶಕ್ತಿಗಳು ಹೇಗೆ ಜಾಗೃತಗೊಳ್ಳಬಲ್ಲದು? ಸಾತ್ವಿಕತೆಯು ಇಂಥ ಶಕ್ತಿಯನ್ನು ದಯಪಾಲಿಸಿ ಕೊಡಬಹುದೇ? ಆತ್ಮವು ಪರಮಾತ್ಮನ ಜೊತೆ ಒಂದು ನಿರಂತರವಾದ ಸಂಬಂಧ ಇಟ್ಟುಕೊಂಡಿರುತ್ತದೆ. ಇಂಥ ಸಂಬಂಧದ ಫ‌ಲವಾಗಿಯೇ ನಾವು ತಿಳಿದಿರದ ಕ್ಷಿಪ್ರ ರಕ್ಷಣೆಯೊಂದನ್ನು ಪಡೆಯುತ್ತೇವೆ. ಪಂಚೇದ್ರಿಯಗಳ ಬಗ್ಗೆ ನಿಮಗೆ ವಿಶೇಷವಾದದ್ದನ್ನು ಓದದಯೇ ಸುಲಭವಾಗಿ ತಿಳಿಯಲು ಅವಕಾಶ ಗಟ್ಟಿಯಾಗಿದೆ. ಮೂಗು ವಾಸನೆಯನ್ನು ಗ್ರಹಿಸ ಬಲ್ಲದು. ಅಡುಗೆ ಅನಿಲ ಸೋರುತ್ತಿದ್ದರೆ ಏನೋ ಸುಟ್ಟ ವಾಸನೆ ತುಂಬಿಕೊಂಡರೆ ಅಪಾಯದ ವಿಚಾರ ಚಿಮ್ಮಿಕೊಳ್ಳುತ್ತಿದೆ ಎಂದು ನಾವು ಸುಲಭವಾಗಿ ಗ್ರಹಿಸಿ ಅಪಾಯದ ಸ್ಥಳದಿಂದ ಪಾರಾಗಲು ಸಜ್ಜಾಗುತ್ತೇವೆ. ಕಣ್ಣು, ಕಿವಿ, ನಾಲಿಗೆ, ಚರ್ಮ ಇವು ಇತರ ಇಂದ್ರಿಯಗಳು. ಅಪಾಯ, ಹಿತವಾದ ಅನುಭವಗಳಾದರೆ ಆನಂದವನ್ನೂ ಪಡೆಯುತ್ತೇವೆ. ಈ ಪಂಚೇಂದ್ರಿಯಗಳನ್ನು ಮೀರಿದ ಒಂದು ನಿಗೂಢ ಶಕ್ತಿ ಕೆಲವು ಮುಂದಿನ ಆಗುಹೋಗುಗಳ ಬಗೆಗೆ ಅರಿವನ್ನು ಕೆಲವರಿಗೆ ಕ್ಷೀಣವಾಗಿ, ಕೆಲವರಿಗೆ ಹೆಚ್ಚು ಸ್ಪಷ್ಟವಾಗಿ ಕೊಡುತ್ತಿರುತ್ತದೆ. ಇದನ್ನು ಆರನೇ ಇಂದ್ರಿಯ ಎನ್ನುತ್ತೇವೆ. ಅನೇಕ ಸ್ವಾಮಿಗಳು ಜಾತ್ರೆ ಅಥವಾ ವಿಶೇಷ ಪೂಜೆಯ ಮುಂಚೆ ಇಲ್ಲವೇ ನಂತರ ನಡೆಯುವ ಧಾರ್ಮಿಕ ವಿಧಿಯ ಸಂದರ್ಭದಲ್ಲಿ ಸದ್ಯೋಭವಿಷ್ಯತ್ತಿನಲ್ಲಿ ನಡೆಯುವ ಭಕ್ತರೆಲ್ಲ ಕೇಳಿಸಿಕೊಳ್ಳಲು ಕಾತರಗೊಂಡಿರುವ ಸಂದರ್ಭದಲ್ಲಿ ನುಡಿಯುತ್ತಾರೆ. ಕೆಲವು ನೇರವಾದ ಭವಿಷ್ಯ ಹೀಗೆಯೇ ಸಾಗಲಿದೆ ಎಂದು ತಿಳಿಸುವ ಕ್ರಮ ಇದ್ದರೆ ಹಾಗೆ ನೇರವಾಗಿ ತಿಳಿಯುವಂತೆ ಹೇಳುತ್ತಾರೆ. ಇನ್ನು ಕೆಲವು ಸಂದರ್ಭಗಳಲ್ಲಿ ಒಗಟಿನ ರೂಪದಲ್ಲಿ ಇರುತ್ತದೆ. ನೆಲಕ್ಕೆ ಬೀಳುತ್ತದೆ. ಹಸಿರಿನ ಮಾಲೆ ಎಂದು ಈ ಒಗಟು ತಿಳಿಸಬಹುದು. ಮುತ್ತು ಒಡೆದು ನೂರು ಹೋಳಾಗುತ್ತದೆ. ನೆಲದ ಹೊಟ್ಟೆಗೆ ಬಿತ್ತು ಬೆಂಕಿಯ ಉಂಡೆ, ಇತ್ಯಾದಿ ಒಗಟು ಒಗಟಾದ ಶಬ್ದಗಳು ಅರ್ಥ ಬಿಡಿಸಬೇಕು. ಹಾಗಾದರೆ ಇದನ್ನು ನಾವೂ ಒಂದಿಷ್ಟು ಶಬ್ದಗಳಲ್ಲಿ ಹೇಳಿಬಿಡಬಹುದಲ್ಲ ಎಂದು ತಿಳಿದರೆ, ಹಾಗೆ ಸರಾಗವಾಗಿ ಶಬ್ದಗಳು ಒಂದು ಲಯದೊಂದಿಗೆ ನಮಗೆ ದಕ್ಕಿಕೊಂಡು ಹೊರಬರುವುದು ಕಷ್ಟವೇ ಸರಿ. ಒಂದು ಅನೂಹ್ಯ ನಿಗೂಢ ಶಕ್ತಿ ಇದೆಯೇ? ಪುಟ್ಟಪರ್ತಿ ಸಾಯಿಬಾಬಾ, ಶಿರಡಿ ಸಾಯಿಬಾಬಾ, ಅವಧೂತರು, ಬೈರಾಗಿಗಳು, ಹಠಸಾಧಕರು, ಕ್ಷುದ್ರ ಶಕ್ತಿ ಆರಾಧಕರು, ಸಾತ್ವಿಕ ಶಕ್ತಿ ಆರಾಧಕರು,. ಸ್ವಯಂ ಘೋಷಿತ ದೇವಮಾನವರು, ಸಿದ್ಧರು, ಸಾಧ್ಯರು, ಅಘೋರಿಗಳು ಗಿಳಿಶಾಸ್ತ್ರ, ಕಾಕ ಶಾಸ್ತ್ರ, ಸ್ವಪ್ನ ಸಿದ್ಧಾಂತ ವಿಶ್ಲೇಷಕರು ಮುಖದಲ್ಲೇ ಭಾವನೆ ಗ್ರಹಿಸಿ ಹೇಳುವವರು, ಸಂಖ್ಯಾಶಾಸ್ತ್ರಜ್ಞರು, ಕಣಿ ನುಡಿಯುವವರು, ಹಕ್ಕಿ ಶಾಸ್ತ್ರದವರು, ಕೊರವಂಜಿಗಳು, ಹಸ್ತ ಸಾಮುದ್ರಿಕ ತಜ್ಞರು ಮುಂತಾದ ಮಾದರಿಯ ಭವಿಷ್ಯಕಾರರು ನಮ್ಮ ದೇಶದಲ್ಲಿದ್ದಾರೆ. ಬರೇ ನಮ್ಮ ದೇಶದಲ್ಲಿ ಎಂದಲ್ಲ ಜಗತ್ತಿನಾದ್ಯಂತ ನಮ್ಮ ಗಮನ ಸೆಳೆಯುವವರು ಇರುತ್ತಾರೆ. ಇಸ್ಪೀಟ್‌ ಎಲೆಗಳಂತೆ ಕೆಲವು ಎಲೆಗಳನ್ನು ಹರ ಭವಿಷ್ಯ ಹೇಳುವ ಬ್ಯಾರಟ್‌ ಕಲೆ ಪಾಶ್ಚಾತ್ಯರಲ್ಲಿದೆ. ಎಲ್ಲಿಂದ ಈ ನಿಗೂಢ ಶಕ್ತಿಯ ಉಗಮ? ರವಿ ಕಾಣದ್ದನ್ನು ಕವಿ ಕಾಣುತ್ತಾನೆ ಎಂಬ ಮಾತಿದೆ. ಊಹೆ ಕಲ್ಪನಾಶಕ್ತಿಯ ಮೂಲಕ ಚಾತಕ ಪಕ್ಷಿ ಮಳೆನೀರಿಗಾಗಿ ಕಾತರಿಸುವ, ಚಕೋರ ಪಕ್ಷಿಗೆ ಚಂದ್ರನಾಗಮನ ಚಿಂತೆ ತುಂಬಿರುವ, ಹಿಂತಿರುಗಿ ಮೂರು ಕಾಲಿನ ಪಾದಗಳಿರುವ ದೆವ್ವ ಪಿಶಾಚಿಗಳು ಇದ್ದಿರುವ, ಯಾರಿಗೂ ಕಾಣದಂತೆ ರಾತ್ರಿ ಸಂಚರಿಸುವ ಏಳು ಹೆಡೆಗಳ ನಾಗರಕ್ಕೆ ಬೆಳಕು ಚೆಲ್ಲುವ, ಅದ್ಭುತವಾದ ಮುತ್ತು ಬೆಳೆದುಕೊಂಡಿರುವ ರಾತ್ರಿ ಬಂದು ಮುಚ್ಚಿದ ಬಾಗಿಲುಗಳ ಹೊರಗೆ ಅಳುತ್ತಾ ಬಾಗಿಲು ತೆಗೆ ಎಂದು ವಿನಂತಿಸುವ ಯಾವುದೋ ಸ್ತ್ರೀರೂಪಿ ದೇವತೆ ಇರಬಹುದು ಎಂದು ಅನಿಸುವ ಧ್ವನಿ ಕೇಳಿಸುತ್ತದೆ - ಈ ಹೀತಿ ಹೇಳಿದಾಗ, ಅನ್ಯರು ನೋಡಿದ್ದನ್ನು ನಾವು ನೋಡಿದ್ದೇವೆ ಎಂದು ಹೇಳುವುದನ್ನು ನಾವು ಆಗಾಗ ನೋಡುತ್ತೇವೆ. ಜಿರಲೆಯ ಆತ್ಮ ಕೂಡಾ ಕಂಡಿತು ಎಂದು ಹೇಳಿದವರಿದ್ದಾರೆ. ಇದು ವಾಸ್ತವ ಎಂದು ಅನಿಸುವುದಿಲ್ಲ ಅಥವಾ ಅನಿಸುತ್ತದೆ ಎಂಬ ನಮ್ಮ ನಿರ್ಣಯ ಬೇರೆ. ಆದರೆ ಹೇಳುವವರು ಕೇವಲ ಹಸಿ ಸುಳ್ಳೊಂದನ್ನು ಹೇಳುತ್ತಿದ್ದಾರೆ ಎಂದು ಗ್ರಹಿಸಲಾಗದು. ನಮಗೆ ಸಿಗಲಾರದ್ದು, ತಿಳಿಯಲಾರದ್ದು ಅವರಿಗೆ ಸಿಕ್ಕಿರುತ್ತದೆ. ಕೈಗೆ ಅಂಜನ ಬಳಿದು ಕೆಲವು ರಹಸ್ಯಗಳ ಬೆನ್ನು ಹತ್ತುವುದು ಇದೊಂದು ರಹಸ್ಯ ವಿದ್ಯೆ. ಅಂಜನ ಎಂಬ ಒಂದು ಲೇಪನವನ್ನು ಹಲವು ಹತ್ತು ವಿಧಾನಗಳಿಂದ ತಯಾರಿಸಿ ಬಲಗೈನ ಅಂಗೈಗೆ ವೃತ್ತಾಕಾರದಲ್ಲಿ ಲೇಪಿಸಿಕೊಂಡು, ಹಲವು ವಿಚಾರಗಳನ್ನು ತಿಳಿದುಕೊಳ್ಳುವ ನಿಗೂಢ ಶಕ್ತಿಯ ಕುರಿತು ಭಾರತೀಯರು ಮಾತನಾಡಿಕೊಳ್ಳುತ್ತಾರೆ. ಅಂಜನದ ಲೇಪ ಹಚ್ಚಿಕೊಂಡ ತಕ್ಷಣ ಎಲ್ಲರಿಗೂ ಇದು ಸಾಧಿಸುತ್ತದೆ ಎಂದು ಹೇಳುವಂತಿಲ್ಲ. ಈ ಲೇಪವನ್ನು ಅಂಗೈಗೆ ಬಳಿದುಕೊಂಡಾಗ ಇಂಥದೇ ವ್ಯಕ್ತಿಗಳು ಎಂದು ಇರುತ್ತಾರೆ. ಅವರಿಗೆ ಕೆಲವು ರಹಸ್ಯಗಳನ್ನು ನಿಖರವಾಗಿ ತಿಳಿಯುವ ಶಕ್ತಿ ಉದ್ದೀಪನಗೊಳ್ಳುತ್ತದೆ. ಕಳೆದು ಹೋದ ಬೆಲೆ ಬಾಳುವ ಒಡವೆ, ಆಭರಣ, ತಲೆ ಮರೆಸಿಕೊಂಡ ವ್ಯಕ್ತಿಯ ನೆಲೆ ಎಲ್ಲಿ? ಹೇಗೆ? ಎಂಬಿತ್ಯಾದಿ ವಿವರಗಳು ಗೋಚರಿಸುತ್ತದೆ ಎಂಬ ವಿಚಾರ ಚಾಲ್ತಿಯಲ್ಲಿದೆ. ಈ ಲೇಪವನ್ನು ಹಚ್ಚಿದ ಮಾತ್ರಕ್ಕೆ ಉಳಿದವರಿಗೆ ಕಾಣಿಸದ ನೆಲೆಗಳು, ರಹಸ್ಯಗಳು, ವಾಸ್ತವಗಳು ಇವರಿಗೆ ಹೇಗೆ ತಿಳಿಯುತ್ತದೆ ಎಂಬುದನ್ನು ವಿವರಿಸಲಾಗದು. ಪ್ರತಿಯೊಬ್ಬರ ರಸಾಯನಶಾಸ್ತ್ರ ಭಿನ್ನವಾಗಿರುತ್ತದೆ. ಹೀಗಾಗಿ ಇದು ಯಾರಿಗೆ ಮಾತ್ರ ಗೋಚರಕ್ಕೆ ಬರಬಹುದು ಎಂಬುದನ್ನು ಸರ್ರನೆ ತಿಳಿಯಲಾಗದು. ದೇವರು ಬರುವುದು ಇನ್ನೊಂದು ಆತ್ಮ ಪ್ರವೇಶಿಸುವುದು ಇತ್ಯಾದಿ ಹಲವು ಸಂದರ್ಭಗಳಲ್ಲಿ ಹಲವು ಜನರಿಗೆ ಮೈಯಲ್ಲಿ ದೇವರು ಬರುವ ವಿಚಾರಗಳನ್ನು ನಾವು ತಿಳಿದಿದ್ದೇವೆ. ಹಲವು ರೀತಿಯ ಶಿಷ್ಟ ಆರಾಧನೆಗಳ ಸಂದರ್ಭಗಳಲ್ಲಿ ನಮ್ಮ ದೇಶದಾದ್ಯಂತ ಇವು ಗಮನಕ್ಕೆ ಬರುತ್ತಿರುತ್ತದೆ. ಬೇರೆಯದೇ ಒಂದು ಪ್ರೇತಾತ್ಮ ಜೀವಂತ ವ್ಯಕ್ತಿಯೊಳಗೆ ಪ್ರವೇಶಿಸಿ, ಹಾಗೆ ಆತ್ಮಗಳ ಪ್ರವೇಶವನ್ನು ಪಡೆದುಕೊಂಡ ವ್ಯಕ್ತಿ ತಾನು ತಿಳಿದೇ ಇರದ ಭಾಷೆಯಲ್ಲಿ ಮಾತನಾಡತೊಡಗುವ ವೈಚಿತ್ರ್ಯಗಳನ್ನು ನಾವು ಕೇಳಿಸಿಕೊಂಡಿದ್ದೇವೆ. ತಿಳಿದಿರದ ಭಾಷೆಯಲ್ಲಿ ಮಾತನಾಡುವುದಾದರೂ ಹೇಗೆ?ಪಡೆದ ಆತ್ಮಗಳು ತಮಗೆ ತಿಳಿದ ಭಾಷೆಯನ್ನು ತಾವು ಪ್ರವೇಶಿಸಿದ ವ್ಯಕ್ತಿಯ ಬಾಯಿಂದ ಮಾತನಾಡಿಸುತ್ತವೆ. ಇನ್ನು ಶಿವಾರಾಧನೆ ಮಾಡುವ ಅಘೋರಿಗಳು ಜೀವನದ ಸತ್ಯಗಳನ್ನು ಕಾಣುವ ಬಗೆಯೇ ಮಗದೊಂದು ರೀತಿಯದು. ಎಲ್ಲರೂ ಒಂದು ರೀತಿಯಲ್ಲಿ ಅಗೋಚರವಾದ ಆದರೆ ಇದ್ದೇ ಇರುವ ಒಂದು ಅಪೂರ್ವವಾದ ಸತ್ಯವೇ ಸತ್ವವಾದ "ಓಂ ತತ್‌ ಸತ್‌' ಎಂಬ ಶಕ್ತಿಯ ಆರಾಧನೆ ಭಾರತದಲ್ಲಿ ಲಾಗಾಯ್ತಿನಿಂದ ಸಾಗಿ ಬಂದಿದೆ. ಸಾಧಕರು ಅಗೋಚರವಾದ ಸತ್ಯನಿಧಿಯಾದ ಬ್ರಹ್ಮನನ್ನು ತಾತ್ವಿಕಾರ್ಥಗಳೊಂದಿಗೆ ತಿಳಿದು ಸಾರ್ಥಕ ಶಕ್ತಿಯೊಂದಿಗೆ, ಯೋಗ ಸಿದ್ಧಿಯೊಂದಿಗೆ ಭೂತ ಭವಿಷ್ಯತ್‌ ವರ್ತಮಾನಗಳನ್ನು ತಿಳಿಯುವ ವಿಶ್ಲೇಷಿಸುವ, ಕಷ್ಟಗಳ ನಿವಾರಣೆಗಾಗಿ ಪರಿಹಾರ ಕಾಣುವ ಶಾಸ್ತ್ರದ ಕುರಿತು ಮುಂದೆ ತಿಳಿಯೋಣ. -sangraha Read more at https://www.udayavani.com/kannada/news/astrology-articles/212129/planet-that-controls-the-horoscope-and-the-kundali#gJPDIfsICJbaiX6Q.99

No comments:

Post a Comment