Sunday, 17 December 2017

ಕುಂಡಲಿಗಳಲ್ಲಿ ಗೋಚರ

ಕುಂಡಲಿಗಳಲ್ಲಿ ಗೋಚರ ಈಗ ಜ್ಯೋತಿಷ್ಯ ಶಾಸ್ತ್ರದಲ್ಲಿ ಮಕ್ಕಳ ಫಲವನ್ನು ನವಾಂಶ ಮತ್ತು ಸಪ್ತಾಂಶ ಕುಂಡಲಿಗಳನ್ನು ನೋಡಿದಾಗ ಮಕ್ಕಳ ಭಾಗ್ಯದ ವಿಚಾರ ಗೋಚರವಾಗುತ್ತದೆ. 1. ಐದನೆಯ ಭಾವಾಧಿಪತಿ ಪುರುಷ ರಾಶಿ ಹಾಗೂ ಪುರುಷ ನವಾಂಶದಲ್ಲಿದ್ದರೆ ಗಂಡು ಮಗುವಿನ ಫಲ ದೊರಕುತ್ತದೆ. 2. ಐದನೆಯ ಭಾವಾಧಿಪತಿ ನಪುಂಸಕ ರಾಶಿ ಹಾಗೂ ನಪುಂಸಕ ನವಾಂಶದಲ್ಲಿದ್ದರೆ ಅಂತವರಿಗೆ ನಪುಂಸಕ ಮಗುವಿನ ಫಲ ದೊರೆಯುತ್ತದೆ. 3. ಐದನೆಯ ಭಾವಾಧಿಪತಿ ಸ್ತ್ರೀ ರಾಶಿ ಹಾಗೂ ಸ್ತ್ರೀ ನವಾಂಶದಲ್ಲಿದ್ದರೆ ಅಂತವರಿಗೆ ಹೆಣ್ಣು ಮಗುವಿನ ಫಲ ದೊರೆಯುತ್ತದೆ. 4. ಐದನೆಯ ಭಾವಾಧಿಪತಿ ದ್ವಿಸ್ವಭಾವ ರಾಶಿ ಹಾಗೂ ದ್ವಿಸ್ವಭಾವ ನವಾಂಶದಲ್ಲಿದ್ದರೆ ಅಂತವರಿಗೆ ಅವಳಿ ಜವಳಿ ಮಕ್ಕಳ ಫಲ ಪ್ರಾಪ್ತಿಯಾಗುತ್ತದೆ. ಇನ್ನೂ ಅನೇಕ ಗ್ರಂಥಗಳಾದ ಸತ್ಯ ಜಾತಕ, ಪಲಾಧಿಪತಿ, ಸರ್ವಧ ಚಿಂತಾಮಣಿ ಬೃಹತ್ ಪರಾಶರ ಹೋರಾ ಶಾಸ್ತ್ರ, ಜಾತಕ ಪಾರಿಜಾತಕ, ಮಂತ್ರೇಶ್ವರ ಕೃತಿ, ಸಂಕೇತ ನಿಧಿ, ಹೀಗೆ ಹಲವು ಗ್ರಂಥಗಳಲ್ಲಿ ಮಕ್ಕಳು ನಿಧಾನವಾಗಿ ಆಗುವುದಕ್ಕೆ ಹಾಗೂ ಮಕ್ಕಳ ಫಲ ಇಲ್ಲದಿರುವುದಕ್ಕೆ ಕಾರಣಗಳೂ ಹಾಗೂ ಹೇಗೆ ಗ್ರಹಗತಿಗಳಿಂದ ಆಗುತ್ತಿದೆ ಎಂಬ ವಿಚಾರಗಳನ್ನು ತಿಳಿಸಿದೆ. 1. ಐದನೆಯ ಭಾವದಲ್ಲಿ ಅಂಗಾರಕನ ಜೊತೆ (ಕುಜ) ಪಾಪಗ್ರಹಗಳಿದ್ದರೆ ಮಕ್ಕಳು ಮರಣ ಹೊಂದುತ್ತವೆ ಹಾಗೂ ಗರ್ಭನಿಲ್ಲುವುದಿಲ್ಲ. 2. ಐದನೆಯ ಭಾವವು ಶನೇಶ್ವರ (ಶನಿ)ನಿಂದ ದೃಷ್ಟಿ ಹೊಂದಿದ್ದರೆ ಮಕ್ಕಳಾಗುವುದಿಲ್ಲ. 3. ಐದನೆಯ ಭಾವದಲ್ಲಿ ರಾಹು ಇದ್ದರೆ ಹಾಗೂ ಅಂಗಾರಕನ (ಕುಜ) ದೃಷ್ಟಿ ಇದ್ದರೆ ಸಂತಾನಫಲವಿಲ್ಲ. 4. ಐದನೆಯ ಭಾವ ಹಾಗೂ ಅಧಿಪತಿ ಗ್ರಹದ ತೊಂದರೆಗೆ ಒಳಗಾಗಿದ್ದಾಗ ಸಂತಾನ ಫಲವಿಲ್ಲ. 5. ಐದನೆಯ ಭಾವದಲ್ಲಿ ಪಾಪ ಗ್ರಹಗಳು ಹಾಗೂ ಭಾವಾಧಿಪತಿ ಪಾಪಗ್ರಹಗಳೊಡನೆ ಇದ್ದರೆ ಸಂತಾನಕಾರಕ ಗುರು ಐದನೆಯ ಭಾವದಲ್ಲಿದ್ದಾಗ ಪುತ್ರಶೋಕ ನಿರಂತರಂ. 6. ಅಂಗಾರಕ (ಕುಜ) ಹಾಗೂ ಶನೇಶ್ವರ (ಶನಿ) ಐದನೆಯ ಬಾವದಲ್ಲಿದ್ದರೆ ಹಾಗೂ ಐದನೆಯ ಭಾವದಿಂದ 6, 8, 12ರಲ್ಲಿ ಪಾಪಗ್ರಹಗಳಿದ್ದರೆ ಎದನೇಯ ಭಾವಾಧಿಪತಿ ಪಾಪಗ್ರಹಗಳೊಡನೆ ಅಥವಾ ಶತ್ರುಗಳೊಂದಿಗೆ ಇದ್ದರೆ ಸಂತಾನಫಲವಿರುವುದಿಲ್ಲ. 7. ಪಂಚಮಾಧಿಪತಿ ಹಾಗೂ ಸಪ್ತಮಾಧಿಪತಿ ಯುತಿಯಲ್ಲಿದ್ದರೆ ಅಥವಾ ರಾಶಿ ಪರಿವರ್ತನೆ ಹೊಂದಿದ್ದರೆ ಮಕ್ಕಳ ಫಲವಿಲ್ಲ. 8. ಐದನೆಯ ಭಾವ ಮತ್ತು ಲಗ್ನ ಅಗ್ನಿರಾಶಿಯಾಗಿದ್ದು ಐದನೆಯ ಬಾವಾಧಿಪತಿ 6, 8, 12ರಲ್ಲಿದ್ದರೆ ಸಂತಾನ ಫಲವಿಲ್ಲ. 9. ಸಂತಾನ ಭಾಗ್ಯ ಕೊಡುವ ಭಾವಾಧಿಪತಿಗಳು ಶತ್ರುಸ್ಥಾನ, ನೀಚಸ್ಥಾನ, ದ್ವಿಸ್ಥಾನದಲ್ಲಿ ಬಲಹೀನರಾಗಿದ್ದರೆ ಸಂತಾನಫಲವಿಲ್ಲ. ಸರ್ಪಶಾಪ ಐದನೆಯ ಭಾವದಲ್ಲಿ ಕುಜನ ರಾಶಿಯಾಗಿದ್ದು ಅದರಲ್ಲಿ ರಾಹು ಸ್ಥಿತನಿದ್ದರೆ ಹಾಗೂ ಅಂಗಾರಕನ ದೃಷ್ಠಿಗೆ ಒಳಗಾಗಿದ್ದರೆ ಮಕ್ಕಳಾಗುವುದಿಲ್ಲ. ಪಿತೃಶಾಪ ಐದನೇ ಭಾವವು ನೀಚ ಸೂರ‌್ಯನಾಗಿದ್ದು (ರವಿ) ಹಾಗೂ ಸೂರನ್ಯನು (ರವಿ) ಪಾಪಕೃರ್ತ ಯೋಗದಲ್ಲಿದ್ದರೆ ಹಾಗೂ ಆ ಸೂರ‌್ಯನು (ರವಿ) ಶನಿಯ ನವಾಂಶದಲ್ಲಿದ್ದರೆ, ರಾಹು ಶನಿ ಯುತಿಯಲ್ಲಿದ್ದರೆ ಮಕ್ಕಳಾಗುವುದಿಲ್ಲ. ಮಾತೃಶಾಪ ಐದನೇ ಭಾವವು ನೀಚ ಚಂದ್ರನಾಗಿದ್ದು ಹಾಗೂ ಚಂದ್ರನು ಪಾಪ ಕರ್ತರಿಯೋಗದಲ್ಲಿದ್ದು ಶನಿಯ ನವಾಂಶದಲ್ಲಿ ಆ ಚಂದ್ರನಿದ್ದರೆ ಹಾಗೂ ಶನಿ ಅಥವಾ ರಾಹು ಯತಿಯಲ್ಲಿದ್ದರೆ ಮಕ್ಕಳಾಗುವುದಿಲ್ಲ. ಭ್ರಾತೃಶಾಪ ಮೂರನೆಯ ಭಾವದಲ್ಲಿ ಲಗ್ನಾಧಿಪತಿಯಿದ್ದು ಅಂಗಾರಕ ರಾಹು ಎದನೆಯ ಭಾವದಲ್ಲಿದ್ದರೆ ಮೂರನೆಯ ಭಾವದಲ್ಲಿ ಎಂಟರ ಭಾವಾಧಿಪತಿಯಿದ್ದು ಹಾಗೂ ಐದನೆಯ ಭಾವದಲ್ಲಿ ರಾಹು ಅಂಗಾರಕನೊಡನೆ ಇದ್ದರೆ ಮಕ್ಕಳಾಗುವುದಿಲ್ಲ. ಪ್ರೇತಶಾಪ ಲಗ್ನದಿಂದ ಐದನೇ ಶನಿಗೂ ಹಾಗೂ ಸ್ಥಾನಾಧಿಪತಿಗೂ ಕೂಡಾ ಮಾಂದ್ಯ ದೃಷ್ಠಿಯಿದ್ದು ಲಗ್ನದಿಂದ ಐದನೇ ಸ್ಥಾನದಲ್ಲಿ ಶನಿ ಮಾಂದ್ಯರು ಕೂಡಿದ್ದರೂ ಮಕ್ಕಳಾಗುವುದಿಲ್ಲ. ಬ್ರಹ್ಮಶಾಪ ಗುರು, ಶನಿ, ಅಂಗಾರಕ ನವಾಂಶದಲ್ಲಿದ್ದರೆ ಲಗ್ನದಿಂದ ಐದನೇ ಸ್ಥಾನಾಧಿಪನು ಅಂಗಾರಕ, ಗುರು, ಶನಿ, ರಾಹುವಿನಿಂದ ಕೂಡಿ ಲಗ್ನದಿಂದ 6, 8, 12ನೇ ಸ್ಥಾನದಲ್ಲಿ ದುರ್ಬಲರಾಗಿದ್ದರೆ ಮಕ್ಕಳಾಗುವುದಿಲ್ಲ. ಗುರುಶಾಪ ಶನಿ ಅಥವಾ ರಾಹು ಯತಿಯಲ್ಲಿದ್ದರೆ ನವಾಂಶದಲ್ಲಿ ಗುರು, ಶನಿಯಿದ್ದರೆ ಲಗ್ನದಿಂದ ಐದನೇ ಭಾವವು ನೀಚ ಗುರುವುನದ್ದು ಆಗಿದ್ದ ಗುರು ಪಾಪಕರ್ತರಿ ಯೋಗದಲ್ಲಿದ್ದರೆ ಮಕ್ಕಳಾಗುವುದಿಲ್ಲ. ಆದ್ದರಿಂದ ಯಾರೇ ಆಗಲಿ ಮಕ್ಕಳ ಫಲವಿಲ್ಲದಿದ್ದಾಗ ಅನುಭವಿ ಜ್ಯೋತಿಷ್ಯರಿಂದ ಜಾತಕವನ್ನು ಪರಿಶೀಲಿಸಿ ಸಂಬಂಧ ಪಟ್ಟ ತೊಂದರೆ ಹಾಗೂ ಶಾಪದ ಫಲಗಳನ್ನು ತಿಳಿದು ಅದಕ್ಕೆ ಸಂಬಂಧಿಸಿದ ಪೂಜೆ, ಹೋಮ, ಜಪತಪಗಳಿಂದ ಮಕ್ಕಳ ಫಲ ಪಡೆದು ಸುಖ ಸಂತೋಷದಿಂದ ಬಾಳಬಹುದು.

*ಗ್ರಹಗಳು ಜಾತಕನ ಕುಂಡಲಿಯಲ್ಲಿ ಬಲಹೀನರಾಗಿದ್ದರೆ ಉಂಟಾಗುವ ತೊಂದರೆಗಳು ಇವುಗಳ ಪರಿಹಾರಗಳು*

*ಗ್ರಹಗಳು ಜಾತಕನ ಕುಂಡಲಿಯಲ್ಲಿ ಬಲಹೀನರಾಗಿದ್ದರೆ ಉಂಟಾಗುವ ತೊಂದರೆಗಳು ಇವುಗಳ ಪರಿಹಾರಗಳು* ಗ್ರಹಗಳು:- ೧)ನೀಚತ್ವದಲ್ಲಿ ೨)ಶತೃಕ್ಷೇತ್ರಗಳಲ್ಲಿ ೩)ದುಸ್ಥಾನಗಳಲ್ಲಿ ಅಶುಭರ ಸಂಪರ್ಕದಲ್ಲಿದ್ದರೆ ೪)ಅಸ್ತಂಗತ ೫)೫,೮,೯,೪,೧೨ನೇ ಸ್ಥಾನಳಲ್ಲಿದ್ದರೆ. ೬)ಕೇಂದ್ರಾದಿಪತಿಯಾಗಿ ತನ್ನದಲ್ಲದ ಮತ್ತೊಂದು ಕೇಂದ್ರದಲ್ಲಿದರೆ. ೭)ಗ್ರಹ ಯುದ್ದದಲ್ಲಿ ಪರಾಜಿತ ಈ ರೀತಿ ಇದ್ದಾಗ ಗ್ರಹಗಳು ಬಲಹೀನರೆಂದು ಪರಿಗಣಿಸಲಾಗುತ್ತದೆ. *ರವಿಯಿಂದ ಉಂಟಾಗುವ ತೊದರೆಗಳು ಮತ್ತು ಅದಕ್ಕೆ ಪರಿಹಾರಗಳು* ತೊಂದರೆಗಳು:- ಆತ್ಮ ವಿಶ್ವಾಸದ ಗೌರವದ ಕೊರತೆ,ದೈರ್ಯ,ಉತ್ಸಾಹಗಳು ಇಲ್ಲದಿರುವಿಕೆ,ಇತರರ ಬಗ್ಗೆ ಹೆದರಿಕೆ. ಮುನ್ನುಗ್ಗುವವರಲ್ಲ. ಎಲ್ಲದಕ್ಕೂ ಇತರರ ಮೇಲೆ ಸದಾ ಅವಲಂಬನೆ ಜೀವನದಲ್ಲಿ ಸೋಲು,ಮೇಲಾಧಿಕಾರಿಗಳಲ್ಲಿ ಸದಾವಿರಸ,ತಂದೆಯ ಅಸಹಕಾರ,ಮಗನಿಂದ ಮಾನಸಿಕ ಹಿಂಸೆ,ಬಲಗಣ್ಣಿನಲ್ಲಿ ತೊಂದರೆ,ಜೀವನದಲ್ಲಿ ಸಮಸ್ಯೆಗಳಿಂದ ನೊಂದು ಸಂಸಾರದಲ್ಲಿ ಯಾರಾದರು ಸನ್ಯಾಸಿಯಾಗುತ್ತಾರೆ,ಕಳ್ಲತನ ಅಥವ ಸರ್ಕಾರದಿಂದ ಶಿಕ್ಷೆ,ಪತ್ನಿಯ ಸಮಸ್ಯೆ,ಇದರಿಂದಾಗಿ ಮಾನದ್ಸಿಕನೋವು,ಉತ್ಸಾಹಹೀನತೆ,ಅಶಕ್ತತೆ,ಹಸಿವು ಇಲ್ಲದಿರುವಿಕೆ,ಹಾಗು ಅಜೀರ್ಣತೆ,ಕ್ಷೀಣನಾಡಿಬಡಿತ,ಹೃದಯದೌರ್ಬಲ್ಯತೆ,ರಕ್ತ ಚಲನೆಯಲ್ಲಿ ಕೊರತೆ,ನರದೌರ್ಬಲ್ಯ,ದೃಷ್ಟಿದೋಷ,ಸಂದಿವಾತ ಮತ್ತು ಮೂಳೆಗಳು ದುರ್ಬಲವಾಗಿರುತ್ತವೆ. ಪರಿಹಾರಗಳು:- *ಶಿವಮತ್ತು ರವಿಯನ್ನು ಆರಾಧಿಸಿ,೨೩ರಿಂದ೨೪ನೇ ವಯಸ್ಸಿನೊಳಗೆ ವಿವಾಹವಾಗಿ,ರವಿಗೆ ಸಂಬಂದಿಸಿದ ಇತರರೌ ನೀಡಿದ ವಸ್ತುಗಳನ್ನು ದೇವಸ್ಥಾನಕ್ಕೆ *ದಾನಮಾಡಿ,ಬಿಳಿ ಅಥವ ಗುಲಾಬಿಬಣ್ಣದ ವಸ್ತುಗಳನ್ನು ಉಪಯೋಗಿಸಿ,ಸಕ್ಕರೆನೀರನ್ನು ಗುಲಾಬಿ ಪುಷ್ಪಗಳೊಂದಿಗೆ ಉದಯಿಸುತ್ತಿರುವ ರವಿಗೆ ಅರ್ಪಿಸಿ. *ಸರ್ಕಾರದಲ್ಲಿನ ಉದ್ಯೋಗಿಯನ್ನು ಅಥವ ವೈದ್ಯರನ್ನು ಆದರಿಸಿ. *ಕುರುಡರಿಗೆ,ಕೋತಿ,ಅಥವ ಹುಂಜಕ್ಕೆ ಆಹಾರವನ್ನು ನೀಡಿ. *ಸಂಜೆ ಇರುವೆಗಳಿಗೆ ಅಕ್ಕಿ,ಸಕ್ಕರೆ ಎಳ್ಲನ್ನು ಕೊಡಿ. *ಆಹಾರ ತೆಗೆದುಕೊಳ್ಲುವುದಕ್ಕೆ ಮುಂಚೆ ಅಗ್ನಿಗೆ ಸ್ವಲ್ಪ ಅರ್ಪಿಸಿ. *ಬೆಲ್ಲ,ತಾಮ್ರ,ಚಿನ್ನವನ್ನು ದಾನಮಾಡಿ. *ತಾಮ್ರದ ಅಥವ ಲೋಹದ ನಾಣ್ಯವನ್ನು ಹರಿಯುವ ನೀರಿನಲ್ಲಿ ಹಾಕಿ *ಸೂರ್ಯಗ್ರಹಣದ ದಿನ ಹರಿಯುವ ನೀರಲ್ಲಿ ಇದ್ದಿಲು,ಸಾಸಿವೆಕಾಳು ಅಥವ ಬಾರ್ಲಿಯನ್ನು ಹಾಕಿ. *ಕೆಲಸವನ್ನು ಆರಂಬಿಸುವ ಮೊದಲು ಸ್ವಲ್ಪ ಸಿಹಿಯನ್ನು ತಿಂದು ನೀರುಕುಡಿಯಿರಿ. *ಮನೆಯಲ್ಲಿ ಅಡುಗೆ ಮನೆ ಪೂರ್ವದ ಗೋಡೆಯ ಕಡೆ ಇರಲಿ. *ಸುಳ್ಳು ಸಕ್ಷ್ಯ ಹೇಳದಿರಿ,ಮಾಂಸ ಮತ್ತು ಮದ್ಯಗಳನ್ನು ಬಿಡಿ. *ಉಪ್ಪನ್ನು ಕಡಿಮೆ ಉಪಯೋಗಿಸಿ ಮತ್ತು ಭಾನುವಾರಗಳಂದು ಉಪವಾಸಮಾಡಿ. *ವಿಷ್ಣುವನ್ನು ಆರಾಧಿಸಿ ಮತ್ತು ಹರಿವಂಶವನ್ನು ಓದಿ. *ದೇವಾಲಯಕ್ಕೆ ದಾನಮಾಡಿ. *ತಾಮ್ರದ ಪಾತ್ರೆಯಲ್ಲಿ ಬಾದಾಮಿ ಅಥವ ನೀರನ್ನು ರಾತ್ರಿ ತಲೆಯ ಬಳಿ ಇಟ್ಟುಕೊಂಡು ಅದನ್ನು ಬೆಳಗ್ಗೆ ದೇವಸ್ಥಾನಕ್ಕೆ ಕೊಡಿ. ಚಂದ್ರ:- ಜನನ ಕುಂಡಲಿಯಲ್ಲಿ ಚಂದ್ರನು ರಾಹು ಮತ್ತು ಶನಿಗಳ ಸಂಪರ್ಕದಲ್ಲಿ ಮತ್ತು ಕ್ಷೀಣನಾಗಿದ್ದರೆ,ಬಾವನಾತ್ಮಕತೆಯಲ್ಲಿ ಅಸಮತೋಲನ,ಇತರರಬಗ್ಗೆ ಆತ್ಮೀಯತೆಯಿಂದಿರಲು ಹೆದರಿಕೆ,ಜೀವನದಲ್ಲಿ ತುಮುಲಗಳನ್ನು ಸಹಿಸಲಾರರು ಸಂತೃಪ್ತಿ ಇರುವುದಿಲ್ಲ ರಹಸ್ಯಗಳನ್ನು ಕಾಪಾಡಲಾರರು,ಋಣಾತ್ಮಕತೆ,ಮಂಕು ಮುಚ್ಚಿದ ಮನಸ್ಸು,ತಾಯಿಯು ಸಹ ಜೀವನದಲ್ಲಿ ಹಲವಾರು ರೀತಿಯಲ್ಲಿ ಕಷ್ಟಗಳನ್ನು ಅನುಭವಿಸಿರುವರು,ಅಶಕ್ತತೆ,ದೇಹದಲ್ಲಿ ದ್ರವಗಳ ಕೊರತೆ,ತೂಕನಷ್ಟ,ಒಣಗಿದ ಚರ್ಮ,ಮಲಬದ್ದತೆ,ನರಗಳ ಊತ,ಮೂತ್ರಕೋಶದ ತೊಂದರೆ,ಶ್ವಾಸಕೋಶಗಳ ನಿರ್ಬಲತೆ,ತಾಪವನ್ನು ತಾಳಲಾರರು,ಔಷದಿಗಳು ಉಪಯೋಗವಾಗುವುದಿಲ್ಲ ಹೃದಯ ಅಥವ ಸ್ತನಗಳಲ್ಲಿ ತೊಂದರೆ,ಮದ್ಯವ್ಯಸನಿಗಳಾಗುವರು,ಸೊಸೆಯೊಂದಿಗೆ ವಿನಾಕಾರಣ ಕಲಹಗಳು,ಮಗಳು ಅತ್ತೆಮನೆಯಲ್ಲಿ ಅಸುಖಿ,ಮಕ್ಕಳವಿದ್ಯಾಬ್ಯಾಸದಲ್ಲಿ ತೊಂದರೆಗಳು,ಹಾಲುಕೊಡುವ ಹಸುಗಳು ಸಾಯುತ್ತವೆ,ಕೊಳವೆಬಾವಿ ಒಣಗುತ್ತದೆ,ಸಂಸಾರದಲ್ಲಿ ಒಡಕು ಹೆಚ್ಚಾಗುತ್ತದೆ,ಪರಸ್ತ್ರೀಯರ ಮೇಲೆ ಹಣವನ್ನು ವ್ಯೆಚ್ಚಮಾಡುವಿರಿ,ಅನಿರೀಕ್ಷಿತ ಅನಾರೋಗ್ಯ,ಹಣಕಾಸು ತೊಂದರೆ ಒಳ್ಳೆಕೆಲಸ ಮಾಡಿದರು ಕೆಟ್ಟಹೆಸರು ತಪ್ಪುವುದಿಲ್ಲ,ಗತವನ್ನು ಚಿಂತಿಸಿ ಅತಿಯಾಗಿ ಮರುಗುವಿರಿ,ಸ್ತ್ರೀಯರಲ್ಲಿ ಬಂಜೆತನ ಮತ್ತು ಮುಟ್ಟಿನತೊಂದರೆಗಳು. ಪರಿಹಾರಗಳು:- *ದುರ್ಗೆ ಅಥವ ಚಾಮುಂಡಿಯನ್ನು ಆರಾಧಿಸಿ,ಶಿವಲಿಂಗಕ್ಕೆ ಅಭಿಷೇಕ ಮಾಡಿಸಿ(ಚಂದ್ರನು ಮೇಷ ಅಥವ ವೃಶ್ಚಿಕಗಳಿಇದ್ದರೆ) *ಹಾಲು ಮತ್ತು ನೀರನ್ನು ಕುಡಿಯಲು ಬೆಳ್ಳಿಯ ಲೋಟವನ್ನು ಉಪಯೋಗಿಸಿ. *ನಿಮ್ಮ ತಾಯಿಯ ಕೈಯಿಂದ ಹಳೆಯ ಅಕ್ಕಿ ಮತ್ತು ಬೆಳ್ಳಿಯ ನಾಣ್ಯವನ್ನು ತಗೆದುಕೊಂಡು ಒಂದು ಬಿಳಿಯ ವಸ್ತ್ರದಲ್ಲಿ ಕಟ್ಟಿ ಮನೆಯಲ್ಲಿಟ್ಟಿರಿ. *ಬಿಳಿಯ ಬಟ್ಟೆಯಲ್ಲಿ ಸ್ವಲ್ಪ ಅಕ್ಕಿಯನ್ನು ಕಟ್ಟಿ ಸೋಮವಾರಗಳಂದು ಹರಿಯುವ ನೀರಲ್ಲಿ ಹಾಕಿ. *೪೦ದಿನಗಳಕಾಲ ಮಲಗುವಾಗ ತಲೆಯ ಬಳಿ ಒಂದುಪಾತ್ರೆಯಲ್ಲಿ ನೀರನ್ನು ಇಟ್ಟುಕೊಂಡು ಅಶ್ವತ್ತ ಮರದ ಬುಡಕ್ಕೆ ಹಾಕಿ. *ರಾತ್ರಿಯ ಹೊತ್ತು ಹಾಲನ್ನು ಕುಡಿಯಬೇಡಿ. *ಮಗನ ಜೊತೆ ಪ್ರಯಾಣಿಸುವಾಗ ಹರಿಯುವ ನೀರಿನಲ್ಲಿ ತಾಮ್ರದ ನಾಣ್ಯವನ್ನು ಹಾಕಿ. *ರುದ್ರಭೂಮಿಯಲ್ಲಿನ ಬಾವಿಯ ನೀರನ್ನು ತಂದು ಮನೆಯಲ್ಲಿ ಇಟ್ಟುಕೊಳ್ಳಿ. *ಎರಡು ಜೊತೆ ಬೆಳ್ಳಿ ಮತ್ತು ಮುತ್ತಿನ ಚೂರುಗಳನ್ನು ತೆಗೆದುಕೊಂಡು ಅದರಲ್ಲಿ ಒಂದು ಜೊತೆಯನ್ನು ಹರಿಯುವ ನೀರಲ್ಲಿ ಹಾಕಿ ಮತ್ತೊಂದನ್ನು ನಿಮ್ಮ ಜೊತೆಯಲ್ಲಿ ಇಟ್ಟುಕೊಳ್ಳಿ. *ತಾಯಿಯನ್ನು ನಿಮ್ಮ ಜೊತೆಯಲ್ಲಿ ಇಟ್ಟುಕೊಳ್ಳಿ. *ಮಗ ಮತ್ತು ಮೊಮ್ಮೊಗನೊಡನೆ ದೇವಸ್ಥಾನಕ್ಕೆ ಹೋಗಿ ಪಿತೃಕಾರ್ಯವನ್ನು ಮಾಡಿ *ಸರಿಯಾಗಿ ನಿದ್ರೆ ಬರದಿದ್ದರೆ ಮಂಚದ ನಾಲ್ಕು ಕಾಲುಗಳಿಗು ತಾಮ್ರದ ಮೊಳೆಯನ್ನು ಹೊಡೆಯಿರಿ. *೨೪ನೇ ವಯಸ್ಸಿಗೆ ಮುಂಚೆ ವಿವಾಹವಾಗಬಾರದು. *ಮೊದಲಬಾರಿಗೆ ಪತ್ನಿಯನ್ನು ಅವರ ಮನೆಯಿಂದ ಕರೆತರುವಾಗ ಸ್ವಲ್ಪ ಬೆಳ್ಳಿಯನ್ನು ಸಹ ಜೊತೆಯಲ್ಲಿ ತಗೆದುಕೊಂಡು ಬನ್ನಿ. *ಆಸ್ಪತ್ರೆ ಅಥವ ರುದ್ರಭೂಮಿಯಲ್ಲಿ ಬಾವಿಯನ್ನು ತೆಗೆಯಿಸಿ. *ಹಾಲು ತುಂಬಿದ ಪಾತ್ರೆ ಅಥವ ಬಾಟಲನ್ನು ನಿರ್ಜನ ಪ್ರದೇಶದಲ್ಲಿ ನೆಲದಲ್ಲಿ ಹುದುಗಿಸಿ. *ಅನಾಥ ಮಕ್ಕಳೀಗೆ ಹಾಲನ್ನು ಕೊಡಿ. *ಸ್ವಲ್ಪ ಬೆಳ್ಳಿಯನ್ನು ಮನೆಯ ತಳಪಾಯದಲ್ಲಿ ಹುದುಗಿಸಿ ಅದರಲ್ಲಿನ ಸ್ವಲ್ಪಬಾಗವನ್ನು ಮನೆಯಲ್ಲಿ ಇರಿಸಿ. *ಚಂದ್ರಗ್ರಹಣದಲ್ಲಿ ಸ್ವಲ್ಪ ಇದ್ದಿಲು,ಬಾರ್ಲಿ,ಬಿಳಿಸಾಸಿವೆಕಾಳುಗಳನ್ನು ಹರಿಯುವ ನೀರಲ್ಲಿ ಹಾಕಿ. *ಹಸಿರು ವಸ್ತ್ರವನ್ನು ಕನ್ಯೆಗೆ ದಾನಮಾಡಿ. *ಬಿಳಿಯ ಮೊಲವನ್ನು ಸಾಕಿ. *ಕೆಲಸಕ್ಕೆ ಮೊದಲು ಹಾಲು ಅಥವ ನೀರು ಕುಡಿಯಿರಿ. *ಬೆಳ್ಳಿಯ ಉಂಗುರದಲ್ಲಿ ಮುತ್ತನ್ನು ಹಾಕಿ ಉಂಗುರದ ಬೆರಳಿಗೆ ಹಾಕಿಕೊಳ್ಳಿ ಮತ್ತು ಸೋಮವಾರಗಳಂದು ಉಪವಾಸ ಮಾಡಿ. *ನಿರ್ವೀರ್ಯತೆಗೆ ಬಂಗಾರದ ಕಡ್ಡಿಯನ್ನು ಕೆಂಪಗೆ ಕಾಯಿಸಿ ೧೧ ಸಲ ನೀರಲ್ಲಿ ಹದ್ದಿನಂತರ ಆ ನೀರನ್ನು ಕುಡಿಯಿರಿ. ಕುಜ:- ಉತ್ಸಾಹ ರಹಿತರು,ಯಾವುದೇ ಕೆಲಸವನ್ನು ಮಾಡಲು ಅನರ್ಹತೆ,ನಿರ್ಬೀತಿಯಿಂದ ಇರಲಾರರು,ಹಾಗು ತಮ್ಮ ಸ್ವಂತ ಬಲದ ಮೇಲೆ ನಿಲ್ಲರಾರರು,ಇತರರ ಅಧಿಕಾರಕ್ಕೆ ದಬ್ಬಾಳಿಕೆಗೆ ಸುಲಬವಾಗಿ ಒಳಗಾಗುವವರು,ಕೋರ್ಟು ವ್ಯವಹಾರಗಳಲ್ಲಿ ಸಿಲುಕುವವರು,ಇದರಿಂದ ನಷ್ಟಗಳನ್ನು ಅನುಭವಿಸಿವವರು. ಅನಿರೀಕ್ಷಿತವಾಗಿ ಸ್ಥಿರಾಸ್ಥಿಯು ಮಾರಾಟಕ್ಕೆ ಬರುತ್ತದೆ,ಅಥವ ಇತರರ ಅನುಬೋಗಕ್ಕೆ ಒಳಗಾಗುತ್ತದೆ,ಅಗ್ನಿ,ಕಳ್ಳರು ಮತ್ತು ಸಮಸ್ಯೆಗಳಿಂದ ತೊಂದರೆಗೊಳಗಾಗುತ್ತಾರೆ,ರೋಗ ನಿರೋದಕಶಕ್ತಿ ಇರುವುದಿಲ್ಲ.ಹಸಿವಿಲ್ಲದಿರುವಿಕೆ,ದೇಹ ತೂಕವನ್ನು ಕಳೆದುಕೊಳ್ಳುತ್ತದೆ,ಬಲಹೀನ ಜಠರ-ಕರುಳಿನ ತೊಂದರೆಗಳು,ರಕ್ತಸೋರುವ ಗಾಯಗಳು,ರಕ್ತಹೀನತೆಯಿಂದ ಗಾಯಗಳು ವಾಸಿಯಾಗುವುದು ನಿದಾನವಾಗುತ್ತದೆ. ಪುರುಷರಲ್ಲಿ ನಿರ್ವೀರ್ಯತೆ ಕಿವಿ,ಕೀಲು,ಮಂಡಿ,ಕಾಲುಗಳು ನೋವಿರುತ್ತದೆ,ಪತ್ನಿಗೆ ಅನಾರೋಗ್ಯವಿರುತ್ತದೆ,ದಾಂಪತ್ಯ ಸುಖವಿರುವುದಿಲ್ಲ,ಗರ್ಭಪಾತ ಅಥವ ಹುಟ್ಟಿದ ಮಕ್ಕಳೆಲ್ಲಾ ಸಾಯುವುದು,ಕುಟುಂಬದಲ್ಲಿ ಹೆಚ್ಚಿನ ಸಾವು*ದಾಂಪತ್ಯದ ಹೊರಗೂ ಸಂಬಂದಗಳು* ಮಗನ ತಪ್ಪಿನಿಂದ ಬಾಧೆ,ಸುಖವಿರುವುದಿಲ್ಲ ಹಿರಿಯ ಸೋದರ ಅಥವ ಭಾವನಿಂದ ಸಮಸ್ಯೆಗಳು,ಇವರ ತಾಯಿ ಅಥವ ಸೋದರಿಯೊಡನೆ ಸೋದರರ ಬಂದುಗಳು ಅಥವ ಸ್ನೇಹಿತರ ಸಂಬಂದಗಳು ಹಿತವಾಗಿರುವುದಿಲ್ಲ ಶತೃಗಳು ಹೆಚ್ಚಾಗುವಿಕೆ. ಪರಿಹಾರಗಳು:- *ಸುಬ್ರಮಣ್ಯ,ಹನುಮಂತರನ್ನು ಬೆಸ ರಾಶಿಯವರು/ಚಾಮುಂಡಿಅಥವ ಭದ್ರಕಾಳಿಯನ್ನು ಸಮರಾಶಿಯವರು ಆರಾಧಿಸಿ. *ಮಂಗಳವಾರಗಳಂದು ಉಪವಾಸವನ್ನು ಮಾಡಿ ಸಿಹಿಯನ್ನು ಹಂಚಿ *ಕರ್ಪೂರ,ಮೊಸರು,ಸುಗಂಧ,ದ್ರವ್ಯಗಳನ್ನು ಕೆಂಪು ವಸ್ತ್ರದಲ್ಲಿ ಇರಿಸಿ ನಿರ್ಜನ ಪ್ರದೇಶದಲ್ಲಿ ನೆಲದಲ್ಲಿ ಹುದುಗಿಸಿ. *ಹಾಲನ್ನು ಆಲದ ಮರದ ಬುಡಕ್ಕೆ ಹಾಕಿ ಹಸಿಯ ಮಣ್ಣನ್ನು ತಿಲಕದಂತೆ ಹಚ್ಚಿಕೊಳ್ಳಿ,ಬೇವಿನ ಮರವನ್ನು ನೆಟ್ಟು ನೀರನ್ನು ಹಾಕುತ್ತಿರಿ. *ಸೋದರ ಮತ್ತು ಸೋದರ ಮಾವನನ್ನು ಆರಾಧಿಸಿ. *ನಾಯಿಗಳಿಗೆ ತಂದೂರಿ ಸಿಹಿರೊಟ್ಟಿಯನ್ನು ೪೫ ದಿನಗಳ ಕಾಲ ಕೊಡಿ. *ಸದಾ ಗಾಯತ್ರಿ ಮಂತ್ರ ಅಥವ ಹನುಮಾನ್ ಚಾಲೀಸವನ್ನು ಪಠಿಸುತ್ತಿರಿ. *ರಕ್ತ ದಾನ ಮಾಡಿ. *ಮಂಗಳವಾರ ಮದ್ಯಾಹ್ನಗಳಂದು ಹರಿಯುವ ನೀರಲ್ಲಿ ಬತ್ತಾಸು ಹಾಕಿ *ಚಪಾತಿಯನ್ನು ಸುಡುವ ಮುಂಚೆ ಕಾದ ಹೆಂಚಿನ ಮೇಲೆ ನೀರನ್ನು ಚುಮುಕಿಸಿ. *ಬಂಗಾರ, ಬೆಳ್ಳಿ, ತಾಮ್ರದ ಉಂಗುರವನ್ನು ಧರಿಸಿ. *ತುಕ್ಕು ಹಿಡಿದ ವಸ್ತುಗಳನ್ನು ಮನೆಯಲ್ಲಿ ಇಡಬೇಡಿ. *ಕೆಂಪು ವಸ್ತ್ರಗಳನ್ನು ಸೋದರತ್ತೆ,ಸೋದರಿ,ತಾಯಿಗೆ ಹಾಗು ಹೆಂಡತಿಗೆ ಕೊಡಿ. *ಪಕ್ಷಿಗಳಿಗೆ ಸಿಹಿಯನ್ನು ತಿನ್ನಿಸಿ. *ರೋಗಗಳಿಂದ ಮುಕ್ತರಾಗಲು ಜಿಂಕೆ ಚರ್ಮದ ಮೇಲೆ ಮಲಗಿ. *ಅಗ್ನಿ ಅಪಘಾತಗಳ ತಡೇಗಟ್ಟಲು ಸಕ್ಕರೆಯ ಖಾಲಿ ಚೀಲಗಳನ್ನು ಸಜ್ಜೆಯ ಮೇಲೆ ಇಡಿ.ಬಾವ,ಬಾಮೈದುನ ನೊಂದಿಗೆ ಬಾಗಸ್ಥವ್ಯವಹಾರ ಮಾಡದಿರಿ. *ಪತ್ನಿ ಅಥವ ಮಕ್ಕಳಿಗೆ ತೊಂದರೆ ಇದ್ದರೆ ಮಣ್ಣಿನ ಪಾತ್ರೆಯಲ್ಲಿ ಜೇನು ತುಪ್ಪವನ್ನು ಇಟ್ಟು ರುದ್ರಭೂಮಿಯಲ್ಲಿ ಹುದುಗಿಸಿ. *೮ನೇ ಸ್ಥಾನದಲ್ಲಿ ಕುಜನು ಅಶುಭನಾಗಿದ್ದರೆ ಆನೆಗೆ ಸಂಬಂದಿಸಿದ ದಂತದ ವಸ್ತುಗಳನ್ನು ಮನೆಯಲ್ಲಿ ಇಟ್ಟುಕೊಳ್ಳುವುದು. *೬ನೇ ಸ್ಥಾನದಲ್ಲಿ ಕುಜನು ಅಶುಭನಾಗಿದ್ದರೆ ೬ ಮಂದಿ ಕನ್ಯಾ ಮುತ್ತೈದೆಯರ ಅಶೀರ್ವಾದವನ್ನು ೬ ದಿನಗಳ ಕಾಲ ಪಡೆಯಿರಿ. ಬುಧ:- ಬುದ್ದಿಮಾಂದ್ಯತೆ,ವಿಚಾರಗಳನ್ನು ತಿಳಿಸುವಲ್ಲಿ ಅಸಹಾಯಕತೆ,ಮೂರ್ಖತನ,ಅಪ್ರಬುದ್ದತೆ,ವಾಕ್ ತೊಂದರೆ,ನೆನಪಿನ ಶಕ್ತಿ ಕೊರತೆ,ತಮ್ಮ ಮೇಲೆಯೇ ಹತೋಟಿಯಿಲ್ಲದಿರುವಿಕೆ,ಹಗಲು ಗನಸು ಗಾರರು, ತಾರ್ಕಿಕತೆಯ ಕೊರತೆ,ಸಂಸಾರದಲ್ಲಿ ಹುಡುಗಿಯರಿಗೆ ಸಮಸ್ಯೆಗಳು,ನರದೌರ್ಬಲ್ಯತೆ,ಕ್ಷಯ,ನಿದ್ರಾಹೀನತೆ,ತಲೆಸುತ್ತುವಿಕೆ,ಚರ್ಮದ ತುರಿಕೆ,ಅಲರ್ಜಿ,ಹೃದಯ ಮತ್ತು ಶ್ವಾಸಕೋಶಗಳ ದುರ್ಬಲತೆ,ವ್ಯಾಪಾರ ವ್ಯವಹಾರ,ಷೇರು ಪೇಟೆವ್ಯವಹಾರಗಳಲ್ಲಿ ನಷ್ಟ,ಹಲ್ಲಿನ ತೊಂದರೆ*ವಿದ್ಯಾಬ್ಯಾಸದಲ್ಲಿ ಅಡಚಣೆ* ಏಕಾಂತತೆ,ಮಾನಸಿಕ ತೊಳಲಾಟ,ಮದುವೆಯ ನಂತರವೂ ಹೆಣ್ಣಿನ ತಾಯಿಯ ಮನೆಯವರಿಗೆ ತೊಂದರೆಗಳು,ನಾದಿನಿಯಿಂದ ಕೆಟ್ಟ ಹೆಸರು,ಕಛೇರಿಯಲ್ಲಿ ಸ್ವಾರ್ಥತೆ,ಜಾತಕರು ಸುಳ್ಳುಗಾರರು,ಮೋಸಗಾರರು,ಮದ್ಯವ್ಯಸನಿ,ಬಂದುಗಳ ಅಥವ ದಾಂಪತ್ಯದ ಹೊರಗಿನ ಸಂಬಂದದಿಂದ ಕೆಟ್ತ ಹೆಸರು ಪರಿಹಾರಗಳು:- *ಗಣೇಶ ಮತ್ತು ವಿಷ್ಣುವಿನ ಆರಾಧನೆ ಮಾಡಿ. *ಹಲ್ಲುಗಳನ್ನು ಸ್ವಚ್ಚವಾಗಿ ಇಟ್ಟುಕೊಳ್ಳಿ. *ಹೆಣ್ಣು ಮಕ್ಕಳು ಮೂಗನ್ನು ಚುಚ್ಚಿಕೊಂಡು ಬೆಳ್ಳಿಯ ಉಂಗುರವನ್ನು ಹಾಕಿಕೊಳ್ಳಿ. *ಗಂಡಸರು ಎಡಕೈಗೆ ಬೆಳ್ಳಿಯ ಕಡಗವನ್ನು ಧರಿಸಿ. *ಸರಸ್ವತಿ ಅಥವ ಗಾಯತ್ರಿಯನ್ನು ಆರಾಧಿಸಿ,ಗಾಯತ್ರಿ ಜಪವನ್ನು ಸದಾ ಮಾಡುತ್ತಿರಿ. *ಬಡವಿದ್ಯಾರ್ಥಿಗಳಿಗೆ ಸಹಾಯ ಮಾಡಿ ಹಸಿಹುಲ್ಲನ್ನು ಹಸುಗಳಿಗೆ ತಿನ್ನಿಸಿ. *ಮದ್ಯ,ಮಾಂಸ,ಮೊಟ್ಟೆಗಳನ್ನು ಸೇವಿಸಬೇಡಿ. *ಊಟಕ್ಕೆ ಮುಂಚೆ ಸ್ವಲ್ಪ ಆಹಾರವನ್ನು ಹಸು,ನಾಯಿ,ಕಾಗೆಗಳಿಗೆ ಹಾಕಿರಿ. *ರಾತ್ರಿ ಉಪ್ಪುನೀರಲ್ಲಿ ನೆನೆಸಿದ ಹೆಸರುಬೇಳೆಯನ್ನು ಮಾರನೆ ದಿನ ಬೆಳಗ್ಗೆ ಪಕ್ಷಿಗಳಿಗೆ ನೀಡಿರಿ. *ಹಸಿ ಮಣ್ಣಿನ ಕಲಶವನ್ನು ಹರಿಯುವ ನೀರಲ್ಲಿ ಹಾಕಿ. *ಯಾರಿಂದಲೂ ಯಂತ್ರಗಳನ್ನು(ತಾಯಿತ,ಕುಡಿಕೆ.ಇತರೆ)ತಗೆದುಕೊಳ್ಳಬೇಡಿ. *ಸ್ವಲ್ಪ ಶುದ್ದವಾದ ತುಪ್ಪ ಸಕ್ಕರೆ,ಕರ್ಪೂರಗಳನ್ನು ಹಿತ್ತಾಳೆ ಬಕೇಟಿನ ನೀರಲ್ಲಿ ಹಾಕಿ. *ಬುಧವಾರದಿಂದ ೮ದಿನಗಳ ಕಾಲ ತೂತಿರುವ ತಾಮ್ರದ ಸಣ್ಣ ಬಿಲ್ಲೆಗಳನ್ನು ಹರಿಯುವ ನೀರಲ್ಲಿಹಾಕಿ. *ಮಣ್ಣಿನ ಪಾತ್ರೆಯಲ್ಲಿ ಜೇನು ತುಪ್ಪ ಕಲ್ಲುಸಕ್ಕರೆಯನ್ನು ಹಾಕಿ ನಿರ್ಜನ ಪ್ರದೇಶದಲ್ಲಿ ನೆಲದಲ್ಲಿ ಹುದುಗಿಸಿರಿ. ಗುರು:- ನಿರುತ್ಸಾಹ,ಚಂಚಲತೆ,ನಾಸ್ತಿಕತೆ,ನಿರಾಸೆ,ದುಗುಡ,ದುಖಃ,ಆರ್ಥಿಕ ತೊಂದರೆಗಳು,ಅನುಕಂಪ ರಹಿತವರ್ತನೆ,ದಬ್ಬಾಳಿಕೆ,ಸಂತಾನ ಇಲ್ಲದಿರುವಿಕೆ,ಇದ್ದರೂ ಅವರಿಗೆ ಕಷ್ಟಗಳು,ನಿರ್ವೀರ್ಯತೆ,ದೇಹವು ಕೃಷಗೊಳ್ಳುವುದು,ನರಗಳು ಮತ್ತು ಕೋಶಗಳು ಅಸಮರ್ಪಕವಾಗಿ ಕೆಲಸಮಾಡುವಿಕೆ,ಸದಾರೋಗಿ,ಮನೆಯಲ್ಲಿಟ್ಟ ಬಂಗಾರವು ಕಳವಾಗುವುದು ಅಥವ ಆಭರಣಗಳನ್ನು ಮಾರುವುದು,*ಅನಿರೀಕ್ಷಿತವಾಗಿ ವಿದ್ಯಾಬ್ಯಾಸವು ನಿಂತುಹೋಗುವುದು,*ಧರ್ಮದಲ್ಲಿ ಅನಾಸಕ್ತಿ,ಪತ್ನಿ ಅಥವ ಮಕ್ಕಳಿಗೆ ಅನಾರೋಗ್ಯ,ಸಂಪತ್ತು ಬರುವುದರಲ್ಲಿ ಅಡಚಣೆ,ಸಂತಾನದಿಂದ ಸುಖವಿಲ್ಲದಿರುವಿಕೆ,ಮದುವೆಯು ತಡವಾಗುವಿಕೆ,ಶೀಘ್ರ ಸ್ಖಲನ,ವಿಧವೆ ಅಥವ ಕೀಳು ಹೆಂಗಸಿನ ಸಂಪರ್ಕ,ಜಾತಕರ ತಂದೆಗೆ ಉಸಿರಾಟದ ತೊಂದರೆ ಅಥವ ಮಾನಸಿಕ ತೊಳಲಾಟ.ಕಿವಿನೋವು,ಮಧುಮೇಹತೊಂದರೆ,ಕಾಮಾಲೆ ಅಥವ ಮೂತ್ರ ಪಿಂಡತೊಂದರೆ, ಮಗಳ ಮದುವೆಗೆ ಅಡಚಣೆಗಳು.ವ್ಯಾಪಾರದಲ್ಲಿ ನಷ್ಟವಾಗುವಿಕೆ. ಪರಿಹಾರಗಳು:- *ಇಂದ್ರನನ್ನು ಆರಾಧಿಸಿ. *ಸಂತರನ್ನು,ಹಿರಿಯರನ್ನು,ಹೆಂಗಸರನ್ನು,ಹೆಣ್ಣುಮಕ್ಕಳನ್ನು ಆದರಿಸಿ, *ಬಂಗಾರದ ಸರವನ್ನು ಕೊರಳಲ್ಲಿ ಹಾಕಿಕೊಳ್ಳಿರಿ. *ದೇವಾಲಯಗಳಿಗೆ ನಿತ್ಯವೂ ಹೋಗಿಬನ್ನಿ. *ಸಿಧೂರವನ್ನು ಹಣೆಗೆ ತಿಲಕವಾಗಿ ಇಟ್ಟುಕೊಳ್ಳಿ. *ಕೊಟ್ಟ ಮಾತನ್ನು ಉಳಿಸಿಕೊಳ್ಳೀ. *ಗುರುವಾರಗಳಂದು ಪತ್ನಿಯು ಉಪವಾಸವನ್ನು ಮಾಡಾಬೇಕು. *ಮಕ್ಕಳಿಂದ ತೊಂದರೆ ಇದ್ದಲ್ಲಿ ವಿಷ್ಣುವನ್ನು ಪೂಜಿಸಿ. *ತಂದೆಗೆ ಅನಾರೋಗ್ಯ ಇದ್ದರೆ ಹರಿಯುವ ನೀರಲ್ಲಿ ೪೫ ದಿನಗಳ ಕಾಲ ತಾಮ್ರದ ನಾಣ್ಯವನ್ನು ಹಾಕಿರಿ. *ದಾಂಪತ್ಯದಿಂದ ಹೊರಗೆ ಸಂಬಂದಗಳನ್ನು ಇಟ್ಟುಕೊಳ್ಳಬೇಡಿ. *ಅಶ್ವತ್ತ ವೃಕ್ಷಕ್ಕೆ ೮ ಗುರುವಾರಗಳು ಅರಿಸಿನದ ದಾರವನ್ನು ೮ ಸುತ್ತು ಕಟ್ಟಿ. *ಗುರುವು ೭ರಲ್ಲಿ ಅಶುಭನಾಗಿದ್ದರೆ ಹಳದಿ ವಸ್ತ್ರವನ್ನು ಅರ್ಚಕರಿಗೆ ದಾನಮಾಡಿ *ಸೂರ್ಯ ಗ್ರಹಣದಲ್ಲಿ,ಬಾದಾಮಿ,ಸಿಪ್ಪೆ ಸಹಿತ ತೆಂಗಿನಕಾಯಿ ಮತ್ತು ಕಪ್ಪು ಉದ್ದಿನಕಾಳು ದಾನ ಮಾಡಿ. *ಮಗಳ ಮದುವೆಯಲ್ಲಿ ೨ ಒಂದೇ ಸಮನಾದ ಬಂಗಾರದ ನಾಣ್ಯಗಳನ್ನು ಮಾಡಿಸಿ ಒಂದನ್ನು ಹರಿಯುವ ನೀರಲ್ಲಿ ಹಾಕಿ,ಮತ್ತೊಂದನ್ನು ಮಗಳಿಗೆ ನೀಡಿ ಸದಾ ಕಾಲ ಜೋಪಾನವಾಗಿ ಅದನ್ನು ತಮ್ಮ ಬಳಿ ಇಟ್ಟುಕೊಳ್ಳುವಂತೆ ಮಾಡಿರಿ. *ಗುರುವು ಅಸ್ತನಾಗಿದ್ದರೆ ೪೦೦ಗ್ರಾಂ ಬೆಲ್ಲ ಅಥವ ಗೋಧಿಯನ್ನು ಭಾನುವಾರ ಹರಿಯುವ ನೀರಲ್ಲಿ ಹಾಕಿ. *ಬುಧನೊಡನೆ ಗುರುವಿದ್ದರೆ ಬುಧನಿಗೆ ಸಂಬಂದಿಸಿದ ವಸ್ತುಗಳನ್ನು ದಾನಮಾಡಿ. *ಗುರುಗಳ ಸೇವೆಯನ್ನು ಮಾಡಿರಿ. *ಓದುವ ಮಕ್ಕಳಿಗೆ ಉಚಿತ ಪಠ್ಯ,ಪಾಠಪ್ರವಚನಗಳನ್ನು ಮಾಡಿ. *ಗುರುಕುಲ,ಮಠಗಳಲ್ಲಿ ಪುಸ್ತಕ,ಪೆನ್ನು,ವಿದ್ಯಾರ್ಥಿಗಳಿಗೆ ಬೇಕಾದ ಅಗತ್ಯ ವಸ್ತುಗಳನ್ನು ನೀಡಿ. ಶುಕ್ರ:- ಕುರೂಪಿ,ಕಳಾಹೀನತೆ,ಪ್ರೀತಿವಾತ್ಸಲ್ಯಗಳಿರುವುದಿಲ್ಲ,ಒರಟುತನ,ನೀಚತ್ವ,ವೈವಾಹಿಕ ಅಥವ ದಾಂಪತ್ಯ ಸಮಸ್ಯೆಗಳು,ಪುರುಷರಿಗೆ ಸ್ತ್ರೀಯೊಡನೆ ವಿರಸ,ಸಂಬಂದಗಳು,ಸ್ತ್ರೀಯರಲ್ಲಿ ಕೋಮಲತೆಯ ಗುಣಗಳು ಇಲ್ಲದಿರುವುದು,ದೈಹಿಕ,ಮೂತ್ರಪಿಂಡ ತೊಂದರೆಗಳು,ಅತಿಯಾದ ಲೈಂಗಿಕತೆ,ಮಿತಿಮೀರಿದ ತಿನ್ನುವಿಕೆ,ಕುಡಿತ,ವಯಸ್ಸಾದ ನಂತರವೂ ಇತರ ಹೆಂಗಸ ರೊಡನೆ ಸಂಬಂದಗಳು,ಪತ್ನಿ ಅಥವ ಪರಸ್ತ್ರೀಯರಿಂದ ಸಂಪತ್ತಿನ ಹಾನಿ,ಜಾತಕರಿಗೆ ಹೆಚ್ಚಾಗಿ ಹೆಣ್ಣು ಸಂತಾನ,ಮಾದಕ ದ್ರವ್ಯ ವ್ಯಸನಿ,ತಕ್ಕ ಮಟ್ಟಿಗೆ ಸಂಪಾದನೆ ಇದ್ದರೂ ಸದಾ ಸಾಲಗಾರರು,ಲೈಂಗಿಕ ವ್ಯಾಧಿಗಳು,ತಮ್ಮ ಸ್ಥಾನ ಮಾನಗಳು,ಅಧಿಕಾರಿಗಳಿಂದ ಎಂದೂ ತೃಪ್ತರಲ್ಲ,ಶುಭಸಮಾರಂಭಗಳಲ್ಲಿ ಅನಿರೀಕ್ಷಿತ ಅಪಘಾತಗಳು,ಕಲೆಗಳಲ್ಲಿ ಅಡಚಣೇಗಳು,ಅಶುಭರಿಂದ ೬ ಅಥವ ೮ರಲ್ಲಿ ಶುಕ್ರನು ಬಲಹೀನನಾಗಿರುವುದು. ಪರಿಹಾರಗಳು:- *ಶಚಿದೇವಿ ಅಥವ ಲಕ್ಷ್ಮಿಯನ್ನು ಪೂಜಿಸಿರಿ. *ಸದಾ ಶುಭ್ರರಾಗಿರಿ. *ಪತ್ನಿಯನ್ನು ಸಂತೋಷದಿಂದ ಇರಿಸಿಕೊಳ್ಳಿ. *೮ಕಿಲೋ ಮೂಲಂಗಿಯನ್ನು ದೇವಾಲಯಕ್ಕೆ ದಾನ ಮಾಡಿ. *೨೫ ನೇ ವಯಸ್ಸಿನ ನಂತರ ವಿವಾಹ ಮಾಡಿಕೊಳ್ಳಿ. *ಹಸುವಿನ ತುಪ್ಪ,ಮೊಸರು,ಕರ್ಪೂರ,ಮುತ್ತು,ಬಿಳಿಯ ಬಟ್ಟೆ ಅಥವ ಸೌಂದರ್ಯ ಸಾಧನಗಳನ್ನು ದಾನಮಾಡಿ. *ಕರಿ ಹಸುವಿಗೆ ಜೋಳ,ಹಸಿಹುಲ್ಲು,೨ಕಿಲೋ ಆಲೂಗಡ್ಡೆ ಅಥವ ಅರಿಸಿನ ಮಿಶ್ರಿತ ಹಿಟ್ಟನ್ನು ತಿನ್ನಿಸಿ. *ಚಿಕ್ಕ ಬೆಳ್ಳಿಯ ಗುಂಡನ್ನು ಮನೆಯಲ್ಲಿ ಇಟ್ಟುಕೊಳ್ಳಿ. *ಮನೆಗೆ ಪಶ್ಚಿಮ ದಿಕ್ಕಿನಲ್ಲಿ ಕಸಕ್ಕಾಗಿ ಒಂದು ಬುಟ್ಟಿಯನ್ನು ಇಡಿ. *ಮಗುವನ್ನು ದತ್ತು ತೆಗೆದುಕೊಳ್ಳಬೇಡಿ. *ಪತ್ನಿಗೆ ಅನಾರೋಗ್ಯವಾಗಿದ್ದರೆ ಆಕೆಯ ತೂಕದಷ್ಟು ಬೆಲ್ಲವನ್ನು ದೇವಾಲಯಕ್ಕೆ ದಾನ ಮಾಡಿ. *೬ದಿನಗಳ ಕಾಲ ಕನ್ಯಾಮುತೈದೆಯರಿಗೆ ಹಾಲು ಮತ್ತು ಜೇನು ನೀಡಿರಿ. *ಯಾವುದೇ ಕೆಲಸದ ಪ್ರಾರಂಭದಲ್ಲಿಯೂ ಸ್ವಲ್ಪ ಸಿಹಿ ಮತ್ತು ನೀರನ್ನು ಸೇವಿಸಿರಿ. *ಬೆಳ್ಳಿಯ ಚಿಕ್ಕ ಫಲಕವನ್ನು ಬೇವಿನ ಮರದಡಿ ಹುದುಗಿಸಿ. *ಬೆಳ್ಳಿಯ ಚೂರನ್ನು ಜೇನಿನೊಂದಿಗೆ ನೆಲದಲ್ಲಿ ಹುದುಗಿಸಿ,ಮಗಳ ಮದುವೆಯಕಾಲದಲ್ಲಿ ಅಳಿಯನಿಗೆ ೨ಬಂಗಾರದ ಚೂರುಗಳನ್ನು ಸಂಕಲ್ಪಿಸಿಕೊಡಬೇಕು. ಶನಿ:- ಕಳವಳ,ಆಂದೋಲನೆ,ಒತ್ತಡಗಳನ್ನು ನಿಬಾಯಿಸುವಲ್ಲಿ ಅನರ್ಹತೆ,ಸಬಲರಿಗೆ ಸುಲಬವಾಗಿ ಒಳಗಾಗುವರು,ಸರ್ಕಾರ ಅಥವ ಇತರೆ ಸಂಸ್ಥೆಗಳಿಂದ ಆರ್ಥಿಕ ತೊಂದರೆಗಳಿಗೆ ಸಿಲುಕುವುದು,ಆಲಸಿಕೆ,ನಿದಾನ,ನಿರಾಸೆ,ನಿರುತ್ಸಾಹ,ನರ ಮತ್ತು ಮೂಳೆಗಳ ದುರ್ಬಲತೆ,ಸಾಂಕ್ರಾಮುಕ ರೋಗಗಳಿಗೆ ತುತ್ತಾಗುವಿಕೆ,ಜ್ವರ,ಕುಷ್ಟ,ಕಾಮಾಲೆ,ಕಿವುಡುತನ,ದಡಾರ,ಮೂರ್ಛೆ,ಕ್ಯಾನ್ಸರ್(ಅರ್ಬುದ)ಪೆರಾಲಿಸೀಸ್.ಇತ್ಯಾದಿಗಳಿಂದ ಬಾದಿತರು,ವಿದ್ಯಾಭಂಗ,ಕುಟುಂಬದಿಂದ ದೂರ ಹೋಗುವಿಕೆ,ನರಗಳದೌರ್ಬಲ್ಯತೆ,ಕೀಲುಗಳನೋವು,ಹೊಟ್ಟೆಯ ತೊಂದರೆಗಳು,ದೀರ್ಘಕಾಲಿಕ ಕಾಯಿಲೆಗಳಾದ ಪೆರಾಲಿಸಿಸ್,ಮೂತ್ರಕೋಶದ ವೈಪಲ್ಯತೆ,ಇತ್ಯಾದಿಗಳಿಂದ ಬಾಧಿತರು,ಅಗ್ನಿ ಮತ್ತು ಇತರ ಅಪಘಾತಗಳಿಂದ ಮನೆಗೆ ಅಪಾಯ,ರಾತ್ರಿ ಕುರುಡು,ಕಾಲುಗಳಲ್ಲಿ ನೋವು,ಕೂದಲು ಉದರುವಿಕೆ,ಸರ್ಕಾರದಿಂದ,ಅಧಿಕಾರಿಗಳಿಂದ ಅಥವ ನ್ಯಾಯಾಲಯಗಳಿಂದ ಅನಿರೀಕ್ಷಿತ ತೊಂದರೆಗಳು,ಮದ್ಯ ವ್ಯಸನಿ ಮತ್ತು ಪತ್ನಿಗೆ ತೀರಾ ಅನಾರೋಗ್ಯ,ಹಳೆಯ ಮನೆಯನ್ನು ಅಥವ ಯಂತ್ರಗಳನ್ನು ಕೊಳ್ಳುವಿಕೆ.ಪಶುಗಳ ನಷ್ಟ,ವ್ಯಾಪಾರ ವ್ಯವಹಾರಗಳಲ್ಲಿ ಅನಿರೀಕ್ಷಿತ ತೊಡಕುಗಳು ತೀವ್ರಪ್ರತೀಕಾರದ ಮನೋಭಾವ,ಶನಿಯು ೫ ಮತ್ತು ೮ನೇ ಸ್ಥಾನಗಳಲ್ಲಿ ಕಲುಶಿತನಾಗಿದ್ದರೆ ಮಕ್ಕಳು ಹೇಳಿದ ಮಾತು ಕೇಳದೆ ತಮ್ಮ ದಾರಿಯಲ್ಲಿ ಸಾಗುತ್ತಾರೆ,ಶನಿಯು ೨ ಅಥವ ೭ರಲ್ಲಿ ಕಲುಶಿತನಾಗಿದ್ದರೆ ಪತ್ನಿ/ಪತಿಯರಲ್ಲಿ ಸಾಮರಸ್ಯದ ಕೊರತೆ ಉಂಟಾಗುತ್ತದೆ.ಶನಿಯು ೨,೫,೭,೮ರಲ್ಲಿ ಬಲಹೀನನಾಗುತ್ತಾನೆ. ಪರಿಹಾರ:- *ಹನುಮಂತನನ್ನು ಆರಾಧಿಸಿರಿ. *ಆಹಾರ ಸೇವನೆ ಮುಂಚೆ ಸ್ವಲ್ಪ ಆಹಾರವನ್ನು ನಾಯಿ ಅಥವ ಕಾಗೆಗಳಿಗೆ ನೀಡಿ *ಉದ್ದು,ಎಳ್ಳಿನ ಎಣ್ಣೆ,ಚರ್ಮ,ಬಾದಾಮಿ ಇವುಗಳನ್ನು ನಿರ್ಗತಿಕರಿಗೆ ನೀಡಿ. *ಎಮ್ಮೆಗೆ ಮೇವನ್ನು ನೀಡಿ,ಸೂರ್ಯಾಸ್ತದ ನಂತರ ಕಪ್ಪು ಇರುವೆಗಳಿಗೆ ದನ್ಯನೀಡಿ *ನಡುವಿನ ಬೆರಳಿಗೆ ಕಬ್ಬಿಣದ ಸ್ಟೀಲ್ ಕುದುರೆ ಲಾಳದ ಉಂಗುರವನ್ನು ಧರಿಸಿರಿ. *ಹರಿಯುವ ನೀರಲ್ಲಿ ೬ ಬಾದಾಮಿ ೬ ಸಿಪ್ಪೆ ಸಹಿತ ತೆಂಗಿನಕಾಯಿ೬ಶನಿವಾರದ ದಿನಗಳ ಕಾಲ ಹಾಕಿರಿ. *ಮನೆಯ ಕತ್ತಲೆಯ ಕೋಣೆಯಲ್ಲಿ ದಕ್ಷಿಣ ದಿಕ್ಕಿನಲ್ಲಿ ೧೨ ಬಾದಾಮಿಗಳನ್ನು ಅಥವ ಜೇನುತುಪ್ಪ ಅಥವ ತಾಮ್ರವನ್ನು ಕಪ್ಪು ಬಟ್ಟೆಯಲ್ಲಿ ಕಟ್ಟಿ ನೆಲದಲ್ಲಿ ಹುದುಗಿಸಿರಿ. *ಮಾಂಸ,ಮೀನು ಅಥವ ಮದ್ಯವನ್ನು ದೂರವಿಡಿ. *ಶನಿವಾರಗಳಂದು ಉಪವಾಸವನ್ನು ಮಾಡಿ ಆಲದಮರದ ಬುಡಕ್ಕೆ ಹಾಲನ್ನು ಹಾಕಿ ಆ ಹಸಿಯ ಮಣ್ಣನ್ನು ತಿಲಕದಂತೆ ಹಣೆಗೆ ಹಚ್ಚಿಕೊಳ್ಳಿ. *ಮಕ್ಕಳಿಗೆ ತೊಂದರೆಯ ನಿವಾರಣೆಗೆ ಕಪ್ಪು ನಾಯಿಯನ್ನು ಸಾಕಿರಿ. *ಮಣ್ಣಿನ ಕುಡಿಕೆಯಲ್ಲಿ ಎಳ್ಳಿನ ಎಣ್ಣೆಯನ್ನು ಹಾಕಿ ನದಿಯ ಅಥವ ಕೊಳದ ದಡದ ಬಳಿ ನೀರಲ್ಲಿ ಮುಳುಗುವಂತೆ ಹುದುಗಿಸಿರಿ. *ಮುಖ್ಯವಾದ ಕೆಲಸಗಳನ್ನು ರಾತ್ರಿಗಳಲ್ಲಿ ಅಥವ ಕೃಷ್ಣಪಕ್ಷದಲ್ಲಿ ಮಾಡಿರಿ. *ಬೆಳ್ಳಿಯ ಚೌಕಾಕಾರದ ತುಂಡನ್ನು ನಿಮ್ಮ ಬಳಿಯಲ್ಲಿ ಇಟ್ಟುಕೊಂಡಿರಿ ಮತ್ತು ೮೦೦ಗ್ರಾಂ ಉದ್ದು ಶನಿವಾರದಿಂದ ಆರಂಭಿಸಿ ೮ ದಿನಗಳ ಕಾಲ ಹರಿಯುವ ನೀರಿಗೆ ಹಾಕಿರಿ. *ಸ್ವಲ್ಪ ಎಣ್ಣೆಯನ್ನು ೪೩ ದಿನಗಲ ಕಾಲ ನೆಲದ ಮೇಲೆ ಹಾಕುತ್ತಿರಿ.ಮದ್ಯ ಮತ್ತು ಸಾರವನ್ನು ಸಹ ಹಾಕಬುದು. *೨ನೇ ಸ್ಥಾನದಲ್ಲಿ ಅಶುಭಗ್ರಹಗಳಿದ್ದರೆ ೧೦ ಬಾದಾಮಿಗಳನ್ನು ದೇವಾಲಯಕ್ಕೆ ಕೊಟ್ಟು ಅದರಲ್ಲಿ ೫ಅನ್ನು ಮನೆಗೆ ಹಿಂದಕ್ಕೆ ತಂದು ಮನೆಯಲ್ಲಿಟ್ಟಿರಿ ಆದರೆ ಅವುಗಳನ್ನು ನೀವು ತಿನ್ನಬಾರದು. *ಒಳ್ಳೆಯ ದಾಂಪತ್ಯ ಜೀವನಕ್ಕೆ ಕಪ್ಪು ಕೊಳಲಿನಲ್ಲಿ ಜೇನನ್ನು ಹಾಕಿ ನಿರ್ಜನ ಪ್ರದೇಶದಲ್ಲಿ ನೆಲದಲ್ಲಿ ಹುದುಗಿಸಿಬಿಡಿ. *ಸಂಪತ್ತಿಗಾಗಿ,ಗಂಗಾಜಲವನ್ನು ಹಿತ್ತಾಳೆಯ ಪಾತ್ರೆಯಲ್ಲಿ ಇಡಿರಿ. *ಮಾನಸಿಕ ಶಾಂತಿಗಾಗಿ ತಾಯಿಯ ಆರೋಗ್ಯಕಾಗಿ ಹಳೆಯ ಅಕ್ಕಿ ಅಥವ ಬೆಳ್ಳಿಯನ್ನು ಹರಿಯುವ ನೀರಲ್ಲಿ ಹಾಕಿರಿ. *೨ನೇ ಸ್ಥಾನದಲ್ಲಿ ಶನಿಯು ಕಲುಶಿತನಾಗಿದ್ದರೆ ಬರಿಗಾಲಲ್ಲಿ ದೇವಾಲಯಕ್ಕೆ ಹೋಗಿ ಸರ್ಪಗಳಿಗೆ ಹಾಲನ್ನು ನೀಡಿರಿ. *ಏಳರಾಟದ ಶನಿಕಾಟಕ್ಕೆ ನಿವಾರಣೆಗಾಗಿ ಶನಿವಾರದ ಸಂಜೆ ಮಣ್ಣಿನ ಕುಂಡದಲ್ಲಿ ತಾಮ್ರದಲ್ಲಿ ಕೆತ್ತಿದ ಒಂದು ಜೊತೆ ಸರ್ಪ ಮತ್ತು ಕಪ್ಪು ಉದ್ದನ್ನು ಅಶ್ವತ್ತ ಮರದ ಬೇರಿನ ಬುಡದಲ್ಲಿ ಹುದುಗಿಸಿರಿ. ರಾಹು:- ಅತಿಯಾದ ಸೂಕ್ಷ್ಮತೆ,ತೊಳಲಾಟ,ಆತಂಕ,ಭಯ,ಭ್ರಮೆಗಳು,ಮಾದಕವಸ್ತುಗಳಸೇವನೆ,ಮೂರ್ಖತನ,ನೀರಲ್ಲಿ ಮುಳುಗುವ ಅಥವ ಎತ್ತರದಿಂದ ಬೀಳುವ ಸಂಬವ ವಿವೇಚನಾರಹಿತ ನಿರ್ದಾರಗಳು,ಎಲ್ಲರೊಡನೆಯೂ ವಿರಸ,ಸ್ನೇಹಿತರು ತೊರೆಯುವರು,ವಿದವೆಯರೊಡನೆ ಕೀಳು ಮಟ್ಟದ ಸ್ತ್ರೀಯರೊಡನೆ ಅನೈತಿಕ ಸಂಬಂದಗಳು,ವಿದೇಶಿಯರು ಮತ್ತು ಕೀಳು ಜನರ ಸಂಪರ್ಕಗಳು,ಇದರಿಂದ ತೊಂದರೆಗಳು,ಇರುತ್ತವೆ ಕೀಳು ಕೆಲಸಗಳಲ್ಲಿ ನಿರತರಾಗಿರುತ್ತಾರೆ,ಸಾಂಕ್ರಾಮಿಕ ರೋಗಗಳಿಗೆ ತುತ್ತಾಗುವ್ವರು,ರೋಗ ನಿರೋಧಕ ಶಕ್ತಿ ಇಲ್ಲದಿರುವುದು.ಮಾನಸಿಕ ಅಸಮತೋಲನೆ,ವಿಷ,ಸರ್ಪಗಳ ಭೀತಿ,ಸಕಾಲ ಕಲಹಗಳು,ಅಪಘಾತ,ವಾದ-ವಿವಾದಗಳಲ್ಲಿ ನಿರತರು,ಕಾಮಾಲೆ,ಕಾಲರ,ಪ್ಲೇಗ್ ಇತ್ಯಾದಿ.ಉಗುರುಗಳು ದುರ್ಬಲವಾಗುತ್ತವೆ,ಗುರುತಿಸಲಾಗದ ವ್ಯಾಧಿಗಳು,ಕಳ್ಳತನದಿಂದ ಸಂಪತ್ತಿನ ನಷ್ಟ,೮ರಲ್ಲಿ ಅಶುಭ ರಾಹುವಿನಿಂದ ಗಮನೀಯ ಏಳು ಬೀಳುಗಳು ಉಂಟಾಗುತ್ತವೆ. *ಗಮನಕ್ಕೆ*:_ಪ್ರತಿನಿಧಿ ಗ್ರಹವು ಬಲಹೀನವಾಗಿದ್ದರೆ ೫,೮.೧೨,ನೆಯ ಸ್ಥಾನಗಳಲ್ಲಿ ಕ್ರೂರವಾಗಿದ್ದರೆ ರಾಹುವು ಬಲಹೀನನೆಂದು ಪರಿಗಣಿಸಲಾಗಿದೆ. ಪರಿಹಾರೋಪಾಯಗಳು:- *ದುರ್ಗೆ ಮತ್ತು ನಾಗಪೂಜೆಯನ್ನು ನೀಲಿ ಪುಷ್ಪಗಳಿಂದ ಮಾಡುವುದು. *ಒಟ್ಟು ಕುಟುಂಬದೊಂದಿಗೆ ಜೀವಿಸುವುದು. *ಆನೆಯು ತುಳಿದ ಮಣ್ಣನ್ನು ಒಂದು ಬಾವಿಯಲ್ಲಿ ಹಾಕುವುದು. *ದೇವಾಲಯ ಅಥವ ದಾರ್ಮಿಕ ಸ್ಥಳದಲ್ಲಿ ಪಾಪ ಕೆಲಸಗಲನ್ನು ಮಾಡದಿರುವುದು. *ಬೆಳ್ಳಿಯಲ್ಲಿ ಮಾಡಿದ ಒಂದು ಆನೆಯನ್ನು ಅಥವ ಒಂದು ಸಣ್ಣ ಕೆಂಪು ಬಣ್ಣದ ಲೋಹದ ಗುಂಡನ್ನು ಮನೆಯಲ್ಲಿ ಇಡಿರಿ. *ಅಡುಗೆ ಮನೆಯಲ್ಲಿ ಕುಳಿತು ಊಟಮಾಡಿ. *ನಿಮ್ಮ ಸಂಪಾದನೆಯ ಸ್ವಲ್ಪಬಾಗವನ್ನು ನಾದಿನಿ,ಮಗಳು,ಅಥವ ಸೋದರಿಗಾಗಿ ಖರ್ಚುಮಾಡಿ,ಹರಿಯುವ ನೀರಲ್ಲಿ ಹಾಲಿನಲ್ಲಿ ತೊಳೆದ ಬಾರ್ಲಿಅಥವ ನಿಮ್ಮ ತೂಕದಷ್ಟು ಇದ್ದಿಲು ಅಥವ ೮ ನೀಲಿ ಹೂವುಗಳನ್ನು ಹಾಕುವುದು. *ಮಾನಸಿಕ ಶಾಂತಿಗೆ ಬೆಳ್ಳಿಯ ಪಾತ್ರೆಯಲ್ಲಿ ಗಂಗಾಜಲವನ್ನು ಹಾಕಿ ಅದರಲ್ಲಿ ಒಂದು ಚೌಕಾಕಾರದ ಬೆಳ್ಳಿಯ ತಗಡನ್ನು ಹಾಕಿ ದೇವರ ಬಳೀ ಇಡಿ ಅಥವ ಬೇಳ್ಳಿಯ ಸರವನ್ನು ಕೊರಳಿಗೆ ಹಾಕಿಕೊಳ್ಳಿ. *ಸಾಸಿವೆ,ಹೊಗೆಸೊಪ್ಪು,ಕಪ್ಪುಬಂಬಳಿ,ಸೀಸ ಅಥವ ಕಸ್ತೂರಿಯನ್ನು ಅಂತ್ಯಜರಿಗೆ ದಾನ ಮಾಡಿ,ಮುಸ್ಲಿಂಬಾಂದವರಿಗೂ ಮಸೀದಿಯಲ್ಲಿ ಕೊಡಬಹುದು. *ಸ್ಥಿರವಾಗಿ ಜ್ವರವಿದ್ದರೆ ಅಥವ ಕ್ಷಯವಿದ್ದರೆ ೮೦೦ಗ್ರಾಂ ಬಾರ್ಲಿಯನ್ನು ಗೋಮೂತ್ರದಲ್ಲಿ ತೊಳೆದು ಒಂದು ಕೆಂಪು ಬಟ್ಟೆಯಲ್ಲಿ ಕಟ್ಟಿ ಹರಿಯುವ ನೀರಲ್ಲಿ ಹಾಕಿರಿ.(ರವಿಯು ಜನನ ಕುಂಡಲಿಯಲ್ಲಿ ೪ನೇಸ್ಥಾನದಲ್ಲಿದ್ದರೆ ಬಾವಿಯಲ್ಲಿ ಹಾಕಿರಿ.) *ರಾಹು ನಿಮ್ಮ ಜಾತಕದಲ್ಲಿ ಗೋಚಾರದಲ್ಲಿ ೧೨ನೇ ಸ್ಥಾನದಲ್ಲಿ ಸಂಚರಿಸುವಾಗ ಯಾವ ಹೊಸ ಕೆಲಸವನ್ನು ಮಾಡಬೇಡಿ. *ಕಪ್ಪು ವಸ್ತ್ರ ಅಥವ ಕನ್ನಡಕವನ್ನು ಧರಿಸಿರಿ. *ತಾಮ್ರದಲ್ಲಿ ಮಾಡಿದ ಒಂದು ಜೊತೆ ಸರ್ಪಗಳನ್ನು ಮನೆಯಿಂದ ನೈರುತ್ಯದಿಕ್ಕಿನಲ್ಲಿ ನಿರ್ಜನ ಪ್ರದೇಶದಲ್ಲಿ ಹುದುಗಿಸಿರಿ. *ಸೂರ್ಯೋದಯ ಅಥವ ಅಸ್ತಗಳಲ್ಲಿ ಯಾವ ಮುಖ್ಯ ನಿರ್ದಾರಗಳನ್ನು ತಗೆದುಕೊಳ್ಳಬೇಡಿ. *ರಾಹುವಿನ ದುಷ್ಪರಿಣಾಮಗಳನ್ನು ನಿವಾರಿಸಲು ಮಗಳ ಮದುವೆಯಲ್ಲಿ ಕಬ್ಬಿಣದ ಅಥವ ಸ್ಟೀಲಿನ ಒಂದು ಜೊತೆ ಒಂದೇ ತರದ ಚೂರುಗಳನ್ನು ಕೊಟ್ಟು ಒಂದನ್ನು ಹರಿಯುವ ನೀರಿನಲ್ಲಿ ಹಾಕಿ ಮತ್ತೊಂದನ್ನು ಸದಾಕಾಲ ಅವಳ ಬಳಿಯಲ್ಲೇ ಇಟ್ಟುಕೊಳ್ಳುವಂತೆ ಹೇಳಿರಿ. *ಭಾನುವಾರ ಸಂಜೆ ಒಂದು ತೆಂಗಿನಕಾಯಿ ಮತ್ತು ತಾಮ್ರದ ತಗಡಿನಲ್ಲಿ ಕೆತ್ತಿದ ಜೋಡಿ ಸರ್ಪಗಳನ್ನು ನೀಲಿವಸ್ತ್ರದಲ್ಲಿ ಕಟ್ಟಿ ನದಿಯಲ್ಲಿ ಹಾಕಿ *ರೋಗ ನಿವಾರಣೆಗೆ ರೋಗಿಯ ತೂಕದಷ್ಟು ಬಾರ್ಲಿಯನ್ನು ರಾತ್ರಿ ತಲೆಯ ಬಳಿ ಇಟ್ಟುಕೊಂಡಿದ್ದು ಮಾರನೆಯ ದಿನ ಅಂತ್ಯಜರಿಗೆ ದಾನಮಾಡಿರಿ. *ಪತ್ನಿ ಮತ್ತು ಮಕ್ಕಳ ತೊಂದರೆಗೆ ಮನೆಯ ಹೊಸ್ತಿಲಿನಲ್ಲಿ ಬೆಳ್ಳಿಯ ತಗಡನ್ನು ಹುದುಗಿಸಿ,ಬಿಳಿ ಹಸುವನ್ನು ಸಾಕಿರಿ. ಕೇತು:- ವಿವೇಚನಾ ರಹಿತರು,ತಮ್ಮಲ್ಲೇ ನಂಬಿಕೆಯನ್ನು ಕಲೆದುಕೊಂಡವರು,ಆತ್ಮಘಾತುಕ ಮನೋಬಾವ,ಕ್ರೌರ್ಯದಿಂದ ಗಾಯಗೊಳ್ಳುವವರು,ಗುಂಪುಘರ್ಷಣೆಯಲ್ಲಿ ತೊಂದರೆಗೆ ಸಿಲುಕುತ್ತಾರೆ.ನಿರರ್ಥಕ ಕೆಲಸಗಳಲ್ಲಿ ಕಾಲಕಳೆಯುವವರು,ಅಲ್ಸರ್,ಅಜೀರ್ಣ,ಎಲ್ಲಾ ರೀತಿಯ ಹುಳುಗಳಿಂದ ಹೊಟ್ಟೆಯಲ್ಲಿ ತೊಂದರೆ ದೀರ್ಘಕಾಲಿಕ ಕಾಯಿಲೆಗಳಿಂದ ನರಳುವವರು ಮಗನಿಗೆ ಅಪಾಯ ವಿರುತ್ತದೆ,ಭ್ರಮೆಗಳಿಂದ ಭೀತರು,ಮೊಣಕಾಲುಗಳಿಗೆ ಆಗಾಗ ಅಪಾಯ ಉಂಟಾಗುತ್ತಿರುತ್ತದೆ,೧೦೦ದಿನಗಳಿಗೂ ಹೆಚ್ಚಾಗಿ ಕೆಲಸದ ಮೇಲೆ ಹೋಗಬೇಕಾಗುವುದು.ಮೂತ್ರದ ಅಥವ ಮಾನಸಿಕ ತೊಂದರೆಗಳಿಂದ ಅಥವ ತಿಳಿಯಲಾರದ ಕಾಯಿಲೆಗಳಿಂದ ನರಳುವರು.ಆಗಾಗ ಆತ್ಮಹತ್ಯ ಮನೋಬಾವನೆ,ಸುಳಿಯುತ್ತಿರುತ್ತದೆ,ಪ್ಲೀಹದ ತೊಂದರೆ,ಜಲೋದರ,ಸಾಂಕ್ರಾಮಿಕ ತೀವ್ರತರವಾದ ಜ್ವರ,ಗಾಯಗಳಿಂದ ಪಾದಗಳಲ್ಲಿ ಉರಿ,ಸಂದಿವಾತ,ಕುಷ್ಟ ಅಥವ ಚರ್ಮವ್ಯಾಧಿಗಳಿಂದ ಬೆನ್ನು ನೋವು,ಕಿವಿನೋವು,ಹರ್ನಿಯಾ,ಗಡ್ಡೆ ಅಥವ ನಾಭಿಯ ಕೆಳಗೆಡೆಯ ಕಾಯಿಲೆಗಳಿಂದ ನರಳುವವರು,ಕೇತುವು ೨,೮,೧೧ನೇ ಸ್ಥಾನಗಳಲ್ಲಿ ಬಲಹೀನನಾಗುತ್ತಾನೆ. ಪರಿಹಾರೋಪಾಯಗಳು:- *ಗಣಪತಿಯನ್ನು ಆರಾಧಿಸಿರಿ *ಕರಿ ನಾಯಿ ಸಾಕಿಕೊಳ್ಳಿರಿ *ಬಿಳಿ ಅಥವ ಕಪ್ಪು ಕಂಬಳಿಯನ್ನು ದೇವಾಲಯಕ್ಕೆ ಅಥವ ಸಾಧುವಿಗೆ ನೀಡಿ. *ಮಕ್ಕಳ ಒಳಿತಿಗಾಗಿ ಹಾಲು,ಅಕ್ಕಿ,ಕೆಂಪು ಬೇಳೆ,ಕಲ್ಲು ಸಕ್ಕರೆ,ಜೇನು ತುಪ್ಪ, ದಾನ ಮಾಡಿ. *ವರದಕ್ಷಿಣೆಯಾಗಿ ಬಂದ ಹಾಸಿಗೆಯ ಮೇಲೆ ಮಲಗಿರಿ *ಕಿವಿಯನ್ನು ಚುಚ್ಚಿಸಿಕೊಂಡು ಬಂಗಾರದ ಉಂಗುರವನ್ನು ಹಾಕಿಕೊಳ್ಳಿ. *ಎರಡು ಒಂದೇ ಆಕಾರದ ಬೆಣಚಕಲ್ಲುಗಳನ್ನು ತಗೆದುಕೊಂಡು ಒಂದನ್ನು ಹರಿಯುವ ನೀರಲ್ಲಿ ಹಾಕಿ ಮತ್ತೊಂದನ್ನು ನಿಮ್ಮ ಬಳಿಯೇ ಇಟ್ಟುಕೊಳ್ಳಿ (ರವಿಯು ೪ನೇ ಸ್ಥಾನದಲ್ಲಿದ್ದರೆ ಬಾವಿಯಲ್ಲಿ ಹಾಕಿ. *ಕಾಲಿನ ಹೆಬ್ಬೆರಳಿಗೆ ಬೆಳ್ಳಿಯ ಉಂಗುರವನ್ನು ಹಾಕಿಕೊಳ್ಳಿ. *ಬಂಗಾರದ ಸರವನ್ನು ಕೊರಳಿಗೆ ಹಾಕಿಕೊಳ್ಳಿ,ಕೇಸರಿಯನ್ನು ಹಣೆಗೆ ಹಚ್ಚಿಕೊಳ್ಳಿ. *ಮನೆಯ ಗೇಟಿನ ಕಂಬಕ್ಕೆ ತಾಮ್ರದ ತಗಡನ್ನು ಹಾಕಿರಿ. *ನಿಮ್ಮ ಸಂಪಾದನೆಯಲ್ಲಿ ಸ್ವಲ್ಪ ನಿಮ್ಮ ಬಾವಮೈದುನ,ಸೋದರಿಯ ಮಗ/ಮಗಳಿಗೆ ನೀಡಿ. *ಮಕ್ಕಳ ಒಳಿತಿಗಾಗಿ ಕಡಲೆಕಾಳು ಮತ್ತು ಕೇಸರಿಯನ್ನು ದೇವಸ್ಥಾನಕ್ಕೆ ಗುರುವಾರ ದಂದು ದಾನ ಕೊಡಿ ೧೦೦ ದಿನಗಳಿಗೂ ಹೆಚ್ಚಾಗಿ ಕೆಲಸದ ಮೇಲೆ ಹೊರಗೆ ಹೋಗಬೇಕಾಗಿ ಬಂದರೆ ಹರಿವ ನೀರಿನಲ್ಲಿ ತಾಮ್ರದ ನಾಣ್ಯಗಳನ್ನು ಹಾಕಿರಿ. *ಬೆಳ್ಳಿಯ ಕೊಡದಲ್ಲಿ ಜೇನು ತುಪ್ಪವನ್ನು ತುಂಬಿ ಮನೆಯ ಹೊರಗಡೆ ಹುದುಗಿಸಿ. *ಮಕ್ಕಳಿಲ್ಲದವರಿಂದ ಭೂಮಿಯನ್ನು ಕೊಂಡು ಅಲ್ಲಿ ಮನೆಯನ್ನು ಕಟ್ಟದಿರಿ. *೮ನೇ ಸ್ಥಾನದಲ್ಲಿ ಕೇತುವು ಕಲುಶಿತನಾಗಿದ್ದರೆ ಶಿವನಿಗೆ ಕ್ಷೀರಾಭಿಷೇಕ ಮಾಡಿಸಿರಿ.ಅಥವ ನಿಂಬೇ ಹಣ್ಣನ್ನು ದಾರ್ಮಿಕ ಸ್ಥಳಗಳಲ್ಲಿ ದಾನ ಮಾಡಿ,ನಾಯಿಗೆ ೧೫ ದಿನಗಳ ಕಾಲ ಹಾಲನ್ನು ಹಾಕಿರಿ.

Friday, 8 December 2017

ಪಿತ್ತಜನಕಾಂಗದ ಕ್ಯಾನ್ಸರ್‌

ರಮೇಶ್‌ ಶಿವಮೊಗ್ಗದಲ್ಲಿ ವಾಸವಾಗಿರುವ 60 ವರ್ಷದ ರೈತ. ಒಂದು ಬಾರಿ ರಮೇಶ್‌ನ ಕಣ್ಣು ಮತ್ತು ಮೂತ್ರದ ಬಣ್ಣ ಹಳದಿಯಾಗಿರುವುದು ಪತ್ತೆಯಾಯಿತು. ರಮೇಶ್‌ ತನ್ನ ಊರಿನ ವೈದ್ಯರನ್ನು ಭೇಟಿಯಾದರು. ರಕ್ತಪರೀಕ್ಷೆ ಮತ್ತು MRಐ ಪರೀಕ್ಷೆಗಳಿಂದ ಅವರಿಗೆ ಟೈಪ್‌ 3 ಹಿಲಾರ್‌ ಕೊಲಾಂಜಿಯೋಕಾರ್ಸಿನೋಮಾ ಇರುವುದು ಪತ್ತೆಯಾಯಿತು. ಟೈಪ್‌ 3 ಹಿಲಾರ್‌ ಕೊಲಾಂಜಿಯೋಕಾರ್ಸಿನೋಮಾ ಅಂದರೆ ಪಿತ್ತನಾಳದಲ್ಲಿ ಕಾಣಿಸಿಕೊಳ್ಳುವ ಮತ್ತು ಕಾಮಾಲೆಯನ್ನು ಉಂಟುಮಾಡುವ ಒಂದು ಸಂಕೀರ್ಣ ವಿಧದ ಕ್ಯಾನ್ಸರ್‌. ಹೆಚ್ಚಿನ ಚಿಕಿತ್ಸೆಗಾಗಿ ರಮೇಶನನ್ನು ಮಣಿಪಾಲ ಆಸ್ಪತ್ರೆಗೆ ಶಿಫಾರಸು ಮಾಡಲಾಯಿತು. ಮಣಿಪಾಲ ಆಸ್ಪತ್ರೆಯಲ್ಲಿ ಅವರು 12 ಗಂಟೆಗಳ ಅವಧಿಯ ತಾಜ್‌ಮಹಲ್‌ ರಿಸೆಕ್ಷನ್‌ ಶಸ್ತ್ರ ಚಿಕಿತ್ಸೆಗೆ ಒಳಗಾದರು. ತಾಜ್‌ಮಹಲ್‌ ರಿಸೆಕ್ಷನ್‌ ಶಸ್ತ್ರ ಚಿಕಿತ್ಸೆ ಅಂದರೆ ಗಡ್ಡೆಯಿಂದ ಬಾಧಿತವಾಗಿರುವ ಪಿತ್ತಜನಕಾಂಗ ಮತ್ತು ಪಿತ್ತನಾಳದ ಭಾಗವನ್ನು ತೆಗೆದುಹಾಕುವ ಒಂದು ಶಸ್ತ್ರ ಉಚಿಕಿತ್ಸೆ. ಪಿತ್ತಜನಕಾಂಗದಿಂದ ಕತ್ತರಿಸಿ ತೆಗೆದು ಹಾಕಲಾಗುವ ಭಾಗವು ತಾಜ್‌ಮಹಲಿನ ಮೇಲ್ಭಾಗದ ಗುಂಬಜ್‌ನ ಆಕಾರದಂತೆ ಕಾಣುವ ಕಾರಣಕ್ಕಾಗಿ ಈ ಶಸ್ತ್ರ ಚಿಕಿತ್ಸೆಗೆ ತಾಜ್‌ಮಹಲ್‌ ರಿಸೆಕ್ಷನ್‌ ಎಂದು ಕರೆಯಲಾಗುತ್ತದೆ. ಶಸ್ತ್ರ ಚಿಕಿತ್ಸೆಯ ಬಳಿಕ ರಮೇಶ್‌ ಉತ್ತಮವಾಗಿ ಚೇತರಿಸಿಕೊಂಡರು, 6 ದಿನಗಳ ಅನಂತರ ಅವರನ್ನು ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಯಿತು. ಶಸ್ತ್ರ ಚಿಕಿತ್ಸೆಯಾದ ಒಂಬತ್ತು ತಿಂಗಳ ಅನಂತರ, ಮತ್ತೆ ನಿಯಮಿತ ಫಾಲೋ-ಅಪ್‌ಗೆ ಬಂದಾಗ ರಮೇಶ್‌ ಸಂಪೂರ್ಣವಾಗಿ ಆರೋಗ್ಯವಾಗಿದ್ದರು. 17 ವರ್ಷದ ವಿದ್ಯಾರ್ಥಿ, ಕೃಷ್ಣಮೂರ್ತಿ ಕಿಬ್ಬೊಟ್ಟೆಯ ನೋವಿನಿಂದ ಬಳಲುತ್ತಿದ್ದು, ಬಹಳ ನಿಶ್ಯಕ್ತನಾಗಿದ್ದ. ಚಿಕಿತ್ಸೆಗಾಗಿ ಆತ ತನ್ನ ಊರಿನ ವೈದ್ಯರನ್ನು ಭೇಟಿ ಮಾಡಿದ. ಅಲ್ಟ್ರಾಸೋನೋಗ್ರ ಮಾಡಿ ನೋಡಿದಾಗ ಕೃಷ್ಣ ಮೂರ್ತಿಯ ಪಿತ್ತಜನಕಾಂಗದಲ್ಲಿ 15 ಸೆಂ.ಮೀ. ನಷ್ಟು ದೊಡ್ಡ ಗಡ್ಡೆ ಇರುವುದು ಪತ್ತೆ ಆಯಿತು. ಹೆಚ್ಚಿನ ಚಿಕಿತ್ಸೆಗಾಗಿ ಕೃಷ್ಣಮೂರ್ತಿ ಮಣಿಪಾಲ ಆಸ್ಪತ್ರೆಗೆ ಬಂದ. 8 ಗಂಟೆಗಳ ಅವಧಿಯ ಶಸ್ತ್ರ ಚಿಕಿತ್ಸೆಯಿಂದ ಗಡ್ಡೆಯನ್ನು ಯಶಸ್ವಿಯಾಗಿ ತೆಗೆದು ಹಾಕಲಾಯಿತು. ಶಸ್ತ್ರಚಿಕಿತ್ಸೆಗೆ ಉತ್ತಮವಾಗಿ ಸ್ಪಂದಿಸಿದ ರೋಗಿಯನ್ನು 5ನೇ ದಿನ ಬಿಡುಗಡೆ ಮಾಡಲಾಯಿತು. ಶಸ್ತ್ರ ಚಿಕಿತ್ಸೆಯಾಗಿ 3 ವರ್ಷ ಕಳೆದಿದೆ, ಕೃಷ್ಣಮೂರ್ತಿ ಈಗಲೂ ಆರೋಗ್ಯವಾಗಿದ್ದಾನೆ. ಪಿತ್ತಜನಕಾಂಗದ ಕ್ಯಾನ್ಸರ್‌ ಅಥವಾ ಲಿವರ್‌ ಕ್ಯಾನ್ಸರ್‌ ಎಂದರೇನು? ಪಿತ್ತಜನಕಾಂಗದಲ್ಲಿ ಅಸಹಜ ಬೆಳವಣಿಗೆಗಳಾಗುವುದನ್ನು ಅಥವಾ ಪಿತ್ತಜನಕಾಂಗದಲ್ಲಿ ಅಸಹಜ ಗಡ್ಡೆಗಳು ಬೆಳೆದು, ಅಲ್ಲಿ ಕ್ಯಾನ್ಸರ್‌ಬೆಳೆಯಲು ಕಾರಣ ಆಗುವುದಕ್ಕೆ ಪಿತ್ತಜನಕಾಂಗದ ಕ್ಯಾನ್ಸರ್‌ ಎಂದು ಹೇಳುತ್ತಾರೆ. ಅಲ್ಲಿ ಬೆಳೆದ ಅಸಹಜ ಕ್ಯಾನ್ಸರ್‌ ಕೋಶಗಳು ಸುತ್ತಮುತ್ತಲಿನ ಸಹಜ ಅಂಗಾಂಶಗಳಿಗೆ ಹರಡಿ, ಅವುಗಳನ್ನು ನಿಧಾನವಾಗಿ ನಾಶಪಡಿಸುತ್ತವೆ ಮತ್ತು ಆ ಬಳಿಕ ಕ್ರಮೇಣ ದೂರದ ಅಂಗಭಾಗಗಳಿಗೆ ಹರಡಿ, ಮರಣಕ್ಕೆ ಕಾರಣವಾಗುತ್ತವೆ. ಪಿತ್ತಜನಕಾಂಗದ ಕ್ಯಾನ್ಸರಿಗೆ ಕಾರಣಗಳು ಯಾವುವು? ಪಿತ್ತಜನಕಾಂಗಕ್ಕೆ ಹಾನಿಯುಂಟುಮಾಡುವ ಯಾವುದೇ ಪರಿಸ್ಥಿತಿಯಾದರೂ ಸಹ ಪಿತ್ತಜನಕಾಂಗದ ಕ್ಯಾನ್ಸರಿಗೆ ಕಾರಣವಾಗಬಹುದು. ಅಂದರೆ ಅಧಿಕ ಮದ್ಯಪಾನ, ಹೆಪಾಟೈಟಿಸ್‌ ಬಿ ಮತ್ತು ಸಿ ವೈರಾಣು ಸೋಂಕು, ಫ್ಯಾಟಿ ಲಿವರ್‌-ಇದು ಆರಂಭದಲ್ಲಿ ಪಿತ್ತಜನಕಾಂಗಕ್ಕೆ ಹಾನಿ (ಸಿರಾಸಿಸ್‌) ಉಂಟು ಮಾಡಿ, ಆ ಬಳಿಕ ಪಿತ್ತಜನಕಾಂಗದ ಕ್ಯಾನ್ಸರಿಗೆ ಕಾರಣವಾಗುತ್ತದೆ. ಆದರೆ, ಸಹಜ ಸ್ಥಿತಿಯಲ್ಲಿರುವ ಪಿತ್ತಜನಕಾಂಗದಲ್ಲಿಯೂ ಸಹ ಕ್ಯಾನ್ಸರ್‌ ಬೆಳೆಯುವ ಸಾಧ್ಯತೆ ಇದೆ. ಪಿತ್ತಜನಕಾಂಗದ ಕ್ಯಾನ್ಸರಿನ ಲಕ್ಷಣಗಳು ಯಾವುವು? ಆರಂಭಿಕ ಹಂತದಲ್ಲಿ, ಕೆಲವೇ ಕೆಲವು ರೋಗಿಗಳಲ್ಲಿ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ. ಆ ಲಕ್ಷಣಗಳು ಅಂದರೆ, ಕಿಬ್ಬೊಟ್ಟೆಯಲ್ಲಿ ನೋವು, ಕಾಮಾಲೆ, ದೇಹದ ತೂಕ ಕಡಿಮೆಯಾಗುವುದು, ಕಿಬ್ಬೊಟ್ಟೆ ಬಿಗಿಯಾಗಿರುವಂತೆ ಅನ್ನಿಸುವುದು ಮತ್ತು ಆ ಮೇಲಿನ ಹಂತಗಳಲ್ಲಿ ಸಾಮಾನ್ಯವಾಗಿ ಕಿಬ್ಬೊಟ್ಟೆಯಲ್ಲಿ ಗಡ್ಡೆಗಳು ಕಾಣಿಸಿಕೊಳ್ಳುತ್ತವೆ. ಪಿತ್ತಜನಕಾಂಗದ ಕ್ಯಾನ್ಸರ್‌ ಮಾರಣಾಂತಿಕವೇ? ಹೌದು. ಯಾಕೆಂದರೆ ಪಿತ್ತಜನಕಾಂಗದ ಕ್ಯಾನ್ಸರ್‌ ಸಾಮಾನ್ಯವಾಗಿ ಕಾಯಿಲೆಯ ಮುಂದುವರಿದ ಹಂತದಲ್ಲಿ ಪತ್ತೆಯಾಗುವ ಕಾರಣ, ಇದು ಮಾರಣಾಂತಿಕ ಕಾಯಿಲೆ. ಒಂದು ವೇಳೆ ಕಾಯಿಲೆಯು ಆರಂಭಿಕ ಹಂತದಲ್ಲಿಯೇ ಪತ್ತೆ ಆದರೆ, ಪರಿಣಾಮಕಾರಿ ಚಿಕಿತ್ಸೆಗಳು ಲಭ್ಯ ಇವೆ ಮತ್ತು ಈ ಕ್ಯಾನ್ಸರ್‌ ಅನ್ನು ಗುಣಪಡಿಸುವುದು ಸಾಧ್ಯ ಇದೆ. ಪಿತ್ತಜನಕಾಂಗದ ಕ್ಯಾನ್ಸರ್‌ಗೆ ಹೇಗೆ ಚಿಕಿತ್ಸೆ ನೀಡಲಾಗುತ್ತದೆ? ಕ್ಯಾನ್ಸರ್‌ ಆರಂಭಿಕ ಹಂತದಲ್ಲಿ ಇದ್ದರೆ, ಶಸ್ತ್ರಚಿಕಿತ್ಸೆಯಿಂದ ಅದನ್ನು ಗುಣಪಡಿಸಬಹುದು. ರೋಗಿಯ ಪಿತ್ತಜನಕಾಂಗವು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದರೆ, ಪ್ಯಾಟೋಕ್ಟಾಮಿ (ಗಡ್ಡೆಯನ್ನು ಹೊಂದಿರುವ ಪಿತ್ತಜನಕಾಂಗದ ಭಾಗವನ್ನು ಕತ್ತರಿಸಿ ತೆಗೆಯುುವುದು) ವಿಧಾನವನ್ನು ಅನುಸರಿಸಲಾಗುತ್ತದೆ. ಒಂದುವೇಳೆ ರೋಗಿಯಲ್ಲಿ ಪಿತ್ತಜನಕಾಂಗದ ತೊಂದರೆಯ ಕಾರಣದಿಂದ (ಸಿರಾಸಿಸ್‌) ಕ್ಯಾನ್ಸರ್‌ ಬೆಳವಣಿಗೆ ಆಗಿದ್ದರೆ, ಆಗ ಪಿತ್ತಜನಕಾಂಗದ ಕಸಿ ಅಂದರೆ ಟ್ರಾನ್ಸ್‌ ಪ್ಲಾಂಟೇಶನ್‌ ಆವಶ್ಯಕ. ಆದರೆ ಕೆಲವು ರೋಗಿಗಳು ವೃದ್ಧಾಪ್ಯ, ಹೃದಯದ ಕಾಯಿಲೆಗಳು, ಶ್ವಾಸಕೋಶದ ಕಾಯಿಲೆ ಇತ್ಯಾದಿ ಆರೋಗ್ಯ ಸಮಸ್ಯೆಗಳ ಕಾರಣದಿಂದ ದೊಡ್ಡ ಶಸ್ತ್ರಚಿಕಿತ್ಸೆಗೆ ಒಳಗಾಗಲು ದೈಹಿಕವಾಗಿ ಸಮರ್ಥರಿರುವುದಿಲ್ಲ. ಈ ರೋಗಿಗಳಲ್ಲಿ, ರೇಡಿಯೋಫ್ರೀಕ್ವೆನ್ಸಿ ಅಬ್ಲೇಷನ್‌ ವಿಧಾನದಿಂದ ಗಡ್ಡೆಯನ್ನು ಸುಡುವ ಚಿಕಿತ್ಸೆಯ ಮೂಲಕ ಉತ್ತಮ ಫ‌ಲಿತಾಂಶವನ್ನು ಪಡೆಯುವುದು ಸಾಧ್ಯವಿದೆ. ಪಿತ್ತಜನಕಾಂಗದ ಕ್ಯಾನ್ಸರ್‌ ಇನ್ನೂ ಆರಂಭಿಕ ಹಂತದಲ್ಲಿ ಇರುವ ರೋಗಿಗಳಲ್ಲಿ, ಕ್ಯಾನ್ಸರ್‌ ಅನ್ನು ಗುಣಪಡಿಸುವುದು ಸಾಧ್ಯವಾಗಲಾರದು. ಸೋರಾಫೆನಿಬ್‌ ಮತ್ತು ಖಅಇಉ ಚಿಕಿತ್ಸೆಗಳಿಂದ ಅವರ ಜೀವನಾವಧಿ ಹೆಚ್ಚಿಸಬಹುದು ಮತ್ತು ಜೀವನ ಗುಣಮಟ್ಟವನ್ನು ಸುಧಾರಿಸಬಹುದು. ಪಿತ್ತಜನಕಾಂಗದ ಶಸ್ತ್ರ ಚಿಕಿತ್ಸೆ ಸುರಕ್ಷಿತವೇ? ಹೌದು. ಪಿತ್ತಜನಕಾಂಗದ ಶಸ್ತ್ರ ಉಚಿಕಿತ್ಸೆಯಲ್ಲಿ ಈಗ ಬಹಳಷ್ಟು ಸುಧಾರಣೆಗಳು ಆಗಿವೆ. ಪ್ರಸ್ತುತ ಕಾಲಮಾನದಲ್ಲಿ, ಸುಮಾರು ಶೇ. 5ಕ್ಕಿಂತಲೂ ಕಡಿಮೆ ಮರಣದ ಅಪಾಯದೊಂದಿಗೆ ಪಿತ್ತಜನಕಾಂಗದ ಶಸ್ತ್ರಚಿಕಿತ್ಸೆಯನ್ನು ಸುರಕ್ಷಿತವಾಗಿ ನಡೆಸಬಹುದಾಗಿದೆ. ಪಿತ್ತಜನಕಾಂಗದ ಕ್ಯಾನ್ಸರ್‌ ಕರ್ನಾಟಕದಲ್ಲಿ ಹೆಚ್ಚು ಸಾಮಾನ್ಯವಾಗಿ ಕಂಡು ಬರುತ್ತದೆಯೇ? ಹೌದು. ಹೆಚ್ಚಾಗಿ ಕರ್ನಾಟಕದ ವಿವಿಧ ಭಾಗಗಳಲ್ಲಿ ಅಂದರೆ ದಾವಣಗೆರೆ, ಶಿವಮೊಗ್ಗ, ಉಡುಪಿ, ಚಿಕ್ಕಮಗಳೂರು ಮತ್ತು ಸುತ್ತಲಿನ ಕೆಲವು ಜಿಲ್ಲೆಗಳಲ್ಲಿ ಕಾಣಿಸಿಕೊಳ್ಳುವ ಪಿತ್ತಜನಕಾಂ ಗದ ಕ್ಯಾನ್ಸರಿನ ವಿನ್ಯಾಸವು ದೇಶದ ಇನ್ನಿತರ ಕಡೆಗಳಲ್ಲಿ ಕಾಣಿಸಿಕೊಳ್ಳುವ ಪಿತ್ತಜನಕಾಂಗದ ಕ್ಯಾನ್ಸರಿಗಿಂತ ಭಿನ್ನವಾಗಿರುತ್ತದೆ. ಮದ್ಯಪಾನ, ಹೆಪಾಟೈಟಿಸ್‌ ಸೋಂಕು ಅಥವಾ ಫ್ಯಾಟಿಲಿವರ್‌ ಇತ್ಯಾದಿ ಅಪಾಯ ಪೂರಕ ಅಂಶಗಳು ಇಲ್ಲದೆಯೇ ಕರ್ನಾಟಕದ ಈ ಭಾಗಗಳಲ್ಲಿ, ಆರೋಗ್ಯವಂತ ಪಿತ್ತಜನಕಾಂಗದಲ್ಲಿಯೂ ಕ್ಯಾನ್ಸರ್‌ ಕಾಣಿಸಿಕೊಳ್ಳುತ್ತಿದೆ. ಅದಕ್ಕಿಂತಲೂ ಹೆಚ್ಚಾಗಿ, ಈ ಕ್ಯಾನ್ಸರ್‌ ಗಡ್ಡೆಗಳು ದೇಹದ ಇತರ ಭಾಗಗಳಿಗೆ ಹರಡುವುದಕ್ಕೆ ಬದಲಾಗಿ ಬಹಳ ದೊಡ್ಡದಾಗಿ ಬೆಳೆಯುತ್ತವೆ. ಗಡ್ಡೆಯು ದೊಡ್ಡದಾಗಿ ಬೆಳೆದಿದ್ದರೂ ಶಸ್ತ್ರ ಚಿಕಿತ್ಸೆಯ ಮೂಲಕ ಅದನ್ನು ಸುರಕ್ಷಿತವಾಗಿ ಕತ್ತರಿಸಿ ತೆಗೆಯುವುದುಸಾಧ್ಯ ಇದೆ. ನಮ್ಮ ಅನುಭವದ ಪ್ರಕಾರ,ಅನೇಕ ರೋಗಿಗಳು ಶಸOಉಚಿಕಿತ್ಸೆಯ ಅನಂತರವೂ ಕೆಲವು ವರ್ಷಗಳವರೆಗೆ ಬದುಕಿದ್ದರು ಮತ್ತು ಇನ್ನು ಕೆಲವರಿಗೆ ಪಿತ್ತಜನಕಾಂಗದ ಕ್ಯಾನ್ಸರ್‌ ಸಂಪೂರ್ಣವಾಗಿ ಗುಣಮುಖವಾಗಿದೆ.

ಮಧುಮೇಹ: ನಿಮ್ಮ ಅರಿವು ವಿಸ್ತರಿಸಿಕೊಳ್ಳಿ

ಮಧುಮೇಹ ಮತ್ತು ಮಧುಮೇಹ ಪೂರ್ವ ಸ್ಥಿತಿಯನ್ನು ಪತ್ತೆ ಮಾಡಲು ಯಾವ ಪರೀಕ್ಷೆಗಳನ್ನು ನಡೆಸಲಾಗುತ್ತದೆ? ಆರೋಗ್ಯ ಸೇವಾ ವೃತ್ತಿಪರರು ಸಾಮಾನ್ಯವಾಗಿ ಫಾಸ್ಟಿಂಗ್‌ ಪ್ಲಾಸ್ಮಾ ಗ್ಲುಕೋಸ್‌ -ಖಾಲಿ ಹೊಟ್ಟೆಯಲ್ಲಿ ಗ್ಲುಕೋಸ್‌ (ಎಫ್ಪಿಜಿ/ಎಫ್ಬಿಎಸ್‌) ಪರೀಕ್ಷೆ ಹಾಗೂ ಪೋಸ್ಟ್‌ ಪ್ರಾಂಡಿಯಲ್‌ ಗ್ಲುಕೋಸ್‌ - ಆಹಾರ ಸೇವಿಸಿದ ಬಳಿಕ ಗ್ಲುಕೋಸ್‌ (ಪಿಪಿಪಿಜಿ/ಪಿಪಿಬಿಎಸ್‌) ಪರೀಕ್ಷೆಗಳನ್ನು ಅಥವಾ ಎಚ್‌ಬಿಎ1ಸಿ ಪರೀಕ್ಷೆಯನ್ನು ಮಧುಮೇಹ ಪತ್ತೆ ಮಾಡಲು ಅವಲಂಬಿಸುತ್ತಾರೆ. ಕೆಲವು ಪ್ರಕರಣಗಳಲ್ಲಿ, ರ್‍ಯಾಂಡಮ್‌ ಪ್ಲಾಸ್ಮಾ ಗ್ಲುಕೋಸ್‌ (ಆರ್‌ಪಿಜಿ) ಪರೀಕ್ಷೆಯನ್ನು ಅವಲಂಬಿಸುವುದೂ ಇದೆ. - ಫಾಸ್ಟಿಂಗ್‌ ಪ್ಲಾಸ್ಮಾ ಗ್ಲುಕೋಸ್‌ (ಎಫ್ಪಿಜಿ) ಪರೀಕ್ಷೆ: ಒಂದು ನಿರ್ದಿಷ್ಟ ಸಮಯದಲ್ಲಿ ನಿಮ್ಮ ರಕ್ತದಲ್ಲಿರುವ ಗ್ಲುಕೋಸ್‌ ಮಟ್ಟವನ್ನು ಎಫ್ಪಿಜಿ ರಕ್ತಪರೀಕ್ಷೆ ಅಳೆಯುತ್ತದೆ. ಅತ್ಯಂತ ವಿಶ್ವಾಸಾರ್ಹ ಫ‌ಲಿತಾಂಶಕ್ಕಾಗಿ, ಇದನ್ನು ಬೆಳಗಿನ ಹೊತ್ತಿನಲ್ಲಿ, ನಿಮ್ಮ ಹೊಟ್ಟೆ ಕನಿಷ್ಠ 8 ತಾಸುಗಳ ಕಾಲ ಖಾಲಿ ಇದ್ದ ಬಳಿಕ ನಡೆಸುವುದು ವಿಹಿತ. ಖಾಲಿ ಹೊಟ್ಟೆ ಅಂದರೆ, ಕೆಲವು ಗುಟುಕು ನೀರು ವಿನಾ ಬೇರೇನೂ ಸೇವಿಸಿರಬಾರದು. - ರ್‍ಯಾಂಡಮ್‌ ಪ್ಲಾಸ್ಮಾ ಗ್ಲುಕೋಸ್‌ (ಆರ್‌ಪಿಜಿ) ಪರೀಕ್ಷೆ: ಕೆಲವೊಮ್ಮೆ, ಮಧುಮೇಹದ ಚಿಹ್ನೆಗಳು ಇದ್ದು, ನೀವು ಖಾಲಿ ಹೊಟ್ಟೆಯಲ್ಲಿ ಇರುವ ತನಕ ಕಾಯಬಾರದ ಸ್ಥಿತಿ ಇದ್ದಾಗ ವೈದ್ಯಕೀಯ ವೃತ್ತಿಪರರು ಆರ್‌ಪಿಜಿ ಪರೀಕ್ಷೆಯನ್ನು ಉಪಯೋಗಿಸಬಹುದು. ಆರ್‌ಪಿಜಿ ಪರೀಕ್ಷೆಗಾಗಿ ನೀವು ಇಡೀ ರಾತ್ರಿ ಖಾಲಿ ಹೊಟ್ಟೆಯಲ್ಲಿ ಇರಬೇಕಾಗಿಲ್ಲ. ಈ ರಕ್ತ ಪರೀಕ್ಷೆಯನ್ನು ಯಾವುದೇ ಸಮಯದಲ್ಲಿ ನಡೆಸಬಹುದು. ಮಧುಮೇಹಕ್ಕೆ ಚಿಕಿತ್ಸೆ: ಗುರಿಗಳೇನು? - ಹೈಪರ್‌ ಗ್ಲೆ„ಸೇಮಿಯಾ (ಗ್ಲುಕೋಸ್‌ ಆಧಿಕ್ಯ)ಕ್ಕೆ ಸಂಬಂಧಿಸಿದ ಚಿಹ್ನೆಗಳನ್ನು ದೂರ ಮಾಡುವುದು. - ಮಧುಮೇಹದಿಂದ ಉಂಟಾಗಬಹುದಾದ ದೀರ್ಘ‌ಕಾಲಿಕ ಮೈಕ್ರೊವಾಸ್ಕಾಲರ್‌ ಮತ್ತು ಮ್ಯಾಕ್ರೊವಾಸ್ಕಾಲರ್‌ ಸಂಕೀರ್ಣ ಸಮಸ್ಯೆಗಳನ್ನು ತಗ್ಗಿಸುವುದು ಅಥವಾ ದೂರ ಮಾಡುವುದು. - ರೋಗಿಗೆ ಎಷ್ಟು ಸಾಧ್ಯವೋ ಅಷ್ಟು ಸಹಜ ಜೀವನಶೈಲಿ ಸಾಧಿಸಲು ಸಾಧ್ಯವಾಗುವಂತೆ ಮಾಡುವುದು. ಮಧುಮೇಹಕ್ಕೆ ಲಭ್ಯವಿರುವ ಔಷಧಿವಿಜ್ಞಾನೇತರ ಚಿಕಿತ್ಸೆಗಳಾವುವು? ವೈದ್ಯಕೀಯ ಪೌಷ್ಟಿಕಾಂಶ ಚಿಕಿತ್ಸೆ (ಮೆಡಿಕಲ್‌ ನ್ಯೂಟ್ರಿಶನಲ್‌ ಥೆರಪಿ - ಎಂಎನ್‌ಟಿ) ಮಧುಮೇಹವನ್ನು ನಿಭಾಯಿಸುವ ಪರಿಣಾಮಕಾರಿ ಚಿಕಿತ್ಸಾಂಗವಾಗಿ ಟೈಪ್‌ 1 ಮಧುಮೇಹಿಗಳು ಮತ್ತು ಟೈಪ್‌ 2 ಮಧುಮೇಹಿಗಳಿಬ್ಬರಿಗೂ ಪೌಷ್ಟಿಕಾಂಶ ಚಿಕಿತ್ಸೆಯನ್ನು ಶಿಫಾರಸು ಮಾಡಲಾಗುತ್ತದೆ. ಅತಿದೇಹತೂಕದ ಅಥವಾ ಬೊಜ್ಜು ಹೊಂದಿರುವ ಟೈಪ್‌ 2 ಮಧುಮೇಹಿಗಳಿಗೆ ಶಕ್ತಿಯ ಪೂರೈಕೆಯನ್ನು ಕಡಿಮೆ ಮಾಡಿ, ಆರೋಗ್ಯಕರ ಆಹಾರ ಶೈಲಿಯನ್ನು ರೂಢಿಸಿಕೊಳ್ಳುವುದನ್ನು ತೂಕ ಕಡಿಮೆ ಮಾಡಿಕೊಳ್ಳುವುದಕ್ಕಾಗಿ ಶಿಫಾರಸು ಮಾಡಲಾಗುತ್ತದೆ. ಇದರಿಂದ ರಕ್ತದಲ್ಲಿ ಸಕ್ಕರೆಯ ಮಟ್ಟ, ರಕ್ತದೊತ್ತಡ, ಮತ್ತು/ ಅಥವಾ ಲಿಪಿಡ್‌ ಮಟ್ಟ ಆರೋಗ್ಯಯುತವಾಗುವುದರ ಮೂಲಕ ವೈದ್ಯಕೀಯ ಪ್ರಯೋಜನ ಲಭಿಸುತ್ತದೆ. ಕಾಬೊìಹೈಡ್ರೇಟ್‌ ಸೇವನೆಯ ಮೇಲೆ ಕಾಬೊìಹೈಡ್ರೇಟ್‌ ಗಣನೆ ಅಥವಾ ಅನುಭವ ಆಧರಿತ ಅಂದಾಜಿನ ಆಧಾರದಲ್ಲಿ ನಿಗಾ ಇರಿಸಬೇಕು. ಹೆಚ್ಚು ಗ್ಲೆ„ಸೇಮಿಕ್‌ ಆಹಾರಗಳ ಬದಲಾಗಿ ಉತ್ತಮಗೊಳ್ಳುತ್ತದೆ. ಮಧುಮೇಹಿ ಮೂತ್ರಪಿಂಡಗಳ ಕಾಯಿಲೆಗಳು ಇಲ್ಲದಿರುವ ರೋಗಿಗಳಿಗಾಗಿ ಮಾದರಿ ಪ್ರೊಟೀನ್‌ ಸೇವನೆಯ ಪ್ರಮಾಣ ಎಂಬುದು ಇಲ್ಲದಿರುವ ಕಾರಣ ಈ ಗುರಿಗಳನ್ನು ವ್ಯಕ್ತಿಗತವಾಗಿ ಬದಲಾಯಿಸಿಕೊಳ್ಳಬೇಕು. ಆದರೆ, ಮೂತ್ರಪಿಂಡ ಕಾಯಿಲೆ ಇರುವ ರೋಗಿಗಳಿಗೆ ಪ್ರೊಟೀನ್‌ ಸೇವನೆಯನ್ನು ಸಹಜಕ್ಕಿಂತ ಕಡಿಮೆ ಮಾಡುವುದು ಸರಿಯಲ್ಲ; ಏಕೆಂದರೆ, ಅದು ಗ್ಲೆ„ಸೇಮಿಕ್‌ ಅಂಕಿಅಂಶಗಳು, ಹೃದ್ರೋಗ ಅಪಾಯ ಅಂಕಿಅಂಶಗಳು ಅಥವಾ ಗ್ಲೊಮರುಲಾರ್‌ ಫಿಲೆóàಶನ್‌ ದರ (ಜಿಎಫ್ಆರ್‌)ದ ಕುಸಿತದ ಪ್ರಮಾಣವನ್ನು ಬದಲಾಯಿಸುವುದಿಲ್ಲ. ಆಹಾರದಲ್ಲಿ ಕಡಿಮೆ ಮಾಡಬೇಕಾದ ಟ್ರಾನ್ಸ್‌-ಫ್ಯಾಟ್‌ ಕೊಬ್ಬಿನ ಗುಣಮಟ್ಟಕ್ಕಿಂತ ಕಡಿಮೆ ಮಾಡಬೇಕಾದ ಕೊಬ್ಬಿನ ಗುಣಮಟ್ಟ ಬಹಳ ಮುಖ್ಯ. ಟೈಪ್‌ 1 ಮಧುಮೇಹ ಹೊಂದಿರುವ ವ್ಯಕ್ತಿಗಳಲ್ಲಿ ಎಂಎನ್‌ಟಿಯ ಗುರಿ ಕ್ಯಾಲೊರಿ ಸೇವನೆಯನ್ನು ಸಮನ್ವಯಗೊಳಿಸುವುದು ಮತ್ತು ಹೊಂದಿಕೆ ಮಾಡುವುದಾಗಿರಬೇಕು. ಟೈಪ್‌ 2 ಮಧುಮೇಹಿಗಳಲ್ಲಿ ಎಂಎನ್‌ಟಿಯು ಲಘು ಪ್ರಮಾಣದ ಕ್ಯಾಲೊರಿ ಇಳಿಕೆ (ಕಡಿಮೆ ಕಾಬೊìಹೈಡ್ರೇಟ್‌ ಅಥವಾ ಕಡಿಮೆ ಕೊಬ್ಬು), ಕೊಬ್ಬಿನ ಸೇವನೆ ಇಳಿಕೆ ಮತ್ತು ದೈಹಿಕ ಚಟುವಟಿಕೆಯ ಹೆಚ್ಚಳವಾಗಿರಬೇಕು.

ಮಧುಮೇಹಕ್ಕೆ ಔಷಧ ಚಿಕಿತ್ಸೆ

ಟೈಪ್‌ 2 ಮಧುಮೇಹ ಚಿಕಿತ್ಸೆಗೆ ಲಭ್ಯವಿರುವ ಔಷಧಗಳಾವುವು? ಮಧುಮೇಹದ ದೀರ್ಘ‌ಕಾಲಿಕ ಸಂಕೀರ್ಣ ಸಮಸ್ಯೆಗಳನ್ನು ಕಡಿಮೆ ಮಾಡುವುದು ಮತ್ತು ಗ್ಲೆ„ಸೇಮಿಯಾ ನಿರ್ವಹಣೆಯು ಔಷಧೀಯ ಚಿಕಿತ್ಸೆಯ ಗುರಿಗಳಾಗಿವೆ. ವಿವಿಧ ಗುಂಪಿನ ಈ ಔಷಧಿಗಳೆಂದರೆ: (1) ಇನ್ಸುಲಿನ್‌ ಸೆನ್ಸಿಟೈಸರ್‌ಗಳು: (ಎ) ಬಿಗುವಾನೈಡ್ಸ್‌ (ಬಿ) ಥಿಯಾಝೊಲಿಡಿನೆಡಿಯೊನಸ್‌ (ಟಿಝಡ್‌ಡಿಗಳು) (2) ಇನ್ಸುಲಿನ್‌ ಸೆಕ್ರೆಟಾಗಾಗಸ್‌: (ಎ) ಸಲೊನಿಲುರಿಯಾಸ್‌; (ಬಿ) ಮೆಗ್ಲಿಟಿನೈಡ್‌ ಡಿರೈವೇಟಿವ್ಸ್‌ (3) ಅಲ್ಫಾಗ್ಲುಕೋಸಿಡೇಸ್‌ ಇನ್‌ಹಿಬಿಟರ್ (4) ಗ್ಲುಕಾಗೊನ್‌ಲೈಕ್‌ ಪೆಪ್ಟೆ„ಡ್‌ - 1(ಜಿಎಲ್‌ಪಿ-1) ಅಗೊನಿಸ್ಟ್ಸ್ (5) ಡೈಪೆಪ್ಟೆ„ಡಿಲ್‌ ಪೆಪ್ಟಿಡೇಸ್‌ ಐV (ಡಿಪಿಪಿ-4) ಇನ್‌ಹಿಬಿಟರ್ (6) ಸೆಲೆಕ್ಟಿವ್‌ ಸೋಡಿಯಂ -ಗ್ಲುಕೊಸೆಟ್ರಾನ್ಸ್‌ ಪೋರ್ಟರ್‌-2 (ಎಸ್‌ಜಿಎಲ್‌ಟಿ-2) ಇನ್‌ಹಿಬಿಟರ್ (7) ಇನ್ಸುಲಿನ್‌ (8) ಅಮಿಲಿನೊಮೈಮೆಟಿಕ್ಸ್‌ ಇನ್ಸುಲಿನ್‌ ಸೆನ್ಸಿಟೈಸರ್‌ಗಳು 1. ಬಿಗುವಾನೈಡ್ಸ್‌ ಬಿಗುವಾನೈಡ್ಸ್‌ ಹೆಪಾಟಿಕ್‌ ಗ್ಲುಕೋಸ್‌ ಔಟ್‌ಪುಟ್‌ ಕಡಿಮೆ ಮಾಡುತ್ತದೆ. ಇದು ಗ್ಲುಕೋಸ್‌ ಕರುಳಿನಲ್ಲಿ ಹೀರಿಕೆಯಾಗುವುದನ್ನು ಕೂಡ ತಗ್ಗಿಸುತ್ತದೆ ಮತ್ತು ಬಾಹ್ಯ ಗ್ಲುಕೋಸ್‌ ಸ್ವೀಕರಣ ಹಾಗೂ ಬಳಕೆಯನ್ನು ಹೆಚ್ಚಿಸುವ ಮೂಲಕ ಇನ್ಸುಲಿನ್‌ ಸಂವೇದಕತೆಯನ್ನು ವೃದ್ಧಿಸುತ್ತದೆ. ಈ ಗುಂಪಿನಲ್ಲಿ ಸಾಮಾನ್ಯವಾಗಿ ಬಳಕೆಯಾಗುವ ಔಷಧ ಮೆಟಮಾರ್ಫಿನ್‌. ಮೆಟಮಾರ್ಫಿನ್‌ನ ಪ್ರಮುಖ ಲಾಭಗಳೆಂದರೆ, ಏಕಔಷಧಿಯಾಗಿ ಬಳಸಿದಾಗ ಹೈಪೊಗ್ಲೆ„ಸೇಮಿಯಾ ಉಂಟು ಮಾಡುವುದಿಲ್ಲ. ಇದು ತೂಕ ನಷ್ಟಕ್ಕೆ ಕಾರಣವಾಗಬಹುದು ಮತ್ತು ಇದು ಪ್ಲಾಸ್ಮಾ ಟ್ರೈಗ್ಲಿಸರೈಡ್‌ಗಳ ಸಾಂದ್ರತೆಯನ್ನು ಶೇ.10-20ರಷ್ಟು ಕಡಿಮೆಗೊಳಿಸುವುದು ಕಂಡುಬಂದಿದೆ. ಸಾಮಾನ್ಯವಾಗಿ ದಿನಕ್ಕೆ ಎರಡು ಡೋಸ್‌ ಆಗಿರುತ್ತದೆ, ಆದರೆ ದಿನಕ್ಕೆ ಮೂರು ಡೋಸ್‌ ಕೂಡ ನೀಡಬಹುದಾಗಿದೆ, ನಿಧಾನ ಬಿಡುಗಡೆ ಸ್ವರೂಪದ (ಎಕ್ಸ್‌ಟೆಂಡೆಡ್‌ ರಿಲೀಸ್‌ ಫಾರ್ಮುಲೇಶನ್‌) ಈ ಔಷಧಿಯನ್ನು ದಿನಕ್ಕೆ ಒಮ್ಮೆ ನೀಡಲಾಗುತ್ತದೆ. ಮೆಟಮಾರ್ಫಿನ್‌ನ ಸರ್ವೇಸಾಮಾನ್ಯ ಆರಂಭಿಕ ಡೋಸ್‌ 500 ಎಂಜಿ/ದಿನ ಆಗಿದ್ದು, ಗರಿಷ್ಟ ಡೋಸ್‌ 2,500 ಎಂಜಿ/ದಿನ ಆಗಿರುತ್ತದೆ. ಮೆಟಮಾರ್ಫಿನ್‌ನ ನಿಧಾನಗತಿಯ ಟೈಟ್ರೇಶನ್‌ - ಬೆಳಗಿನ ಉಪಾಹಾರದ ಬಳಿಕ 500 ಎಂಜಿ ಮತ್ತು ಸಾಪ್ತಾಹಿಕ ಬಿಡುವುಗಳ ಜತೆಗೆ 500 ಎಂಜಿಗಳಷ್ಟು ಹೆಚ್ಚಿಸುತ್ತಾ ಬೆಳಗಿನ ಉಪಾಹಾರ ಮತ್ತು ರಾತ್ರಿಯೂಟದ ಬಳಿಕದ 1,000 ಎಂಜಿಯ ಡೋಸ್‌ಗೆ ವೃದ್ಧಿಸುವುದು ಜೀರ್ಣಾಂಗವ್ಯೂಹಕ್ಕೆ (ಗ್ಯಾಸ್ಟ್ರೊಇಂಟಸ್ಟೈನಲ್‌) ಸಂಬಂಧಿಸಿದ ಅಡ್ಡ ಪರಿಣಾಮಗಳನ್ನು ತಡೆಯಲು ಸಹಾಯ ಮಾಡುತ್ತದೆ. ಕಂಜೆಸ್ಟಿವ್‌ ಹಾರ್ಟ್‌ ಫೈಲ್ಯೂರ್‌ (ಸಿಎಚ್‌ಎಫ್), ರೀನಲ್‌ ಅಥವಾ ಹೆಪಾಟಿಕ್‌ ಡಿಸ್‌ಫ‌ಂಕ್ಷನ್‌ ಅಥವಾ ಬಿಂಗ್‌ ಅಲ್ಕೊಹಾಲಿಸಂ ಉಳ್ಳ ರೋಗಿಗಳಲ್ಲಿ ಈ ಔಷಧಿಯನ್ನು ಬಳಸಲಾಗದು. 2. ಥಿಯಾಝೊಲಿಡಿನೆಡಿಯೊನಸ್‌ (ಟಿಝಡ್‌ಡಿಗಳು) ಥಿಯಾಝೊಲಿಡಿನೆಡಿಯೊನಸ್‌ ಪೆರೊಕ್ಸಿಸೋಮ್‌ ಪ್ರಾಲಿಫ‌ರೇಟರ್‌ ಆ್ಯಕ್ಟಿವೇಟೆಡ್‌ ರಿಸೆಪ್ಟರ್‌ (ಪಿಪಿಎಆರ್‌) ಗಾಮಾಗಳ ಜತೆಗೆ ಸಂಯೋಜನೆ ಹೊಂದುವ ಮೂಲಕ ಇನ್ಸುಲಿನ್‌ ಪ್ರತಿರೋಧವನ್ನು ಕುಗ್ಗಿಸುತ್ತದೆ. ಪಯೊಗ್ಲಿಟಾಝೋನ್‌, ಇದರ ಆರಂಭಿಕ ಡೋಸ್‌ 7.5 ಎಂಜಿ/ದಿನ ಮತ್ತು ಗರಿಷ್ಠ ಡೋಸ್‌ 45 ಎಂಜಿ/ದಿನ. ಏಕಔಷಧಿಯಾಗಿ ಬಳಸಿದಾಗ ಇವು ಹೈಪೊಗ್ಲೆ„ಸೇಮಿಯಾ ಉಂಟುಮಾಡುವುದಿಲ್ಲ. ಪಯೊಗ್ಲಿಟಾಝೋನ್‌ ಬಳಕೆ ಟ್ರೈಗ್ಲಿಸರೈಡ್‌ ಮಟ್ಟ ಕಡಿಮೆಯಾಗುವುದಕ್ಕೆ, ಹೈ ಡೆನ್ಸಿಟಿ ಲಿಪೊಪ್ರೊಟೀನ್‌ (ಎಚ್‌ಡಿಎಲ್‌) ಮತ್ತು ಲೋ ಡೆನ್ಸಿಟಿ ಲಿಪೊಪ್ರೊಟೀನ್‌ (ಎಲ್‌ಡಿಎಲ್‌) ಪಾರ್ಟಿಕಲ್‌ ಗಾತ್ರ ವೃದ್ಧಿಗೆ ಕಾರಣವಾಗುತ್ತದೆ. ಪ್ರಮುಖ ಅಡ್ಡ ಪರಿಣಾಮಗಳಲ್ಲಿ ಸಬ್‌ಕಟೇನಿಯಸ್‌ ಅಡಿಪೋಸಿಟಿ ಮತ್ತು ದ್ರವಾಂಶ ಉಳಿಕೆಯ ಸಹಿತ ತೂಕಗಳಿಕೆಯನ್ನು ಒಳಗೊಂಡಿದೆ, ಇದು ಸಾಮಾನ್ಯವಾಗಿ ಬಾಹ್ಯ ನೀರೂತವಾಗಿ ಆಗಿ ಕಾಣಿಸಿಕೊಳ್ಳುತ್ತದೆ, ಆದರೆ ಹೃದಯವೈಫ‌ಲ್ಯ ಉಂಟಾಗುವುದು ಅಪರೂಪ. ಈ ಅಡ್ಡಪರಿಣಾಮಗಳು ಹೆಚ್ಚಿನ ಡೋಸ್‌ಗಳ ಸಂದರ್ಭದಲ್ಲಿ ಮಾತ್ರ ಕಾಣಿಸಿಕೊಳ್ಳುತ್ತವೆ. ಹೀಗಾಗಿ ಪಿತ್ತಕೋಶ ಕಾಯಿಲೆಗಳು ಅಥವಾ ಸಿಎಚ್‌ಎಫ್ (ಕ್ಲಾಸ್‌ ಐಐಐ ಅಥವಾ ಐV) ಉಳ್ಳ ರೋಗಿಗಳಿಗೆ ಈ ಔಷಧ ಶಿಫಾರಸು ಮಾಡಬಾರದು. ಟಿಝಡ್‌ಡಿಗಳು ವಿಶೇಷವಾಗಿ ಮಹಿಳೆಯರಲ್ಲಿ ಮೂಳೆಮುರಿತ ಅಪಾಯ ಹೆಚ್ಚಳದ ಜತೆಗೆ ಸಂಬಂಧ ಹೊಂದಿವೆ, ಅಪರೂಪವಾಗಿ ಡಯಾಬಿಟಿಕ್‌ ಮಾಕ್ಯುಲಾರ್‌ ಎಡೇಮಾ ಉಲ್ಬಣಕ್ಕೆ ಕಾರಣವಾಗುವುದೂ ಇದೆ. ಗರ್ಭಿಣಿಯರಲ್ಲಿ ಥಿಯಾಝೊಲಿಡಿನೆಡಿಯೊನಸ್‌ ಔಷಧಿ ಪ್ರಯೋಗ ಎಷ್ಟರ ಮಟ್ಟಿಗೆ ಸುರಕ್ಷಿತ ಎಂಬುದು ಇನ್ನೂ ನಿಖರವಾಗಿ ಗೊತ್ತಾಗಿಲ್ಲ. ಇನ್ಸುಲಿನ್‌ ಸೆಕ್ರೆಟಾಗಾಗಸ್‌ ಈ ಔಷಧಗಳು ಬೇಟಾ ಜೀವಕೋಶಗಳ ಮೇಲಿನ ಎಟಿಪಿ -ಸಂವೇದನಾಶೀಲ ಪೊಟ್ಯಾಸಿಯಂ ಚಾನೆಲ್‌ ಜತೆಗೆ ಸಂವಹಿಸಿ ಇನ್ಸುಲಿನ್‌ ಸ್ರಾವವನ್ನು ಪ್ರಚೋದಿಸುತ್ತವೆ. 1. ಸಲೊನಿಲುರಿಯಾಸ್‌ ಈ ಔಷಧಿಗಳು ಖಾಲಿ ಹೊಟ್ಟೆಯ ಮತ್ತು ಆಹಾರ ಸೇವನೆಯ ಬಳಿಕದ (ಪೋಸ್ಟ್‌ ಪ್ರಾಂಡಿಯಲ್‌) ಗ್ಲುಕೋಸ್‌ ಮಟ್ಟವನ್ನು ತಗ್ಗಿಸುತ್ತವೆ ಹಾಗೂ ಇವುಗಳನ್ನು ಕಡಿಮೆ ಡೋಸ್‌ನಿಂದ ಆರಂಭಿಸಿ, 1ರಿಂದ 2 ವಾರಗಳ ಮಧ್ಯಂತರದಲ್ಲಿ ರಕ್ತದ ಗ್ಲುಕೋಸ್‌ ಮಟ್ಟ (ಎಸ್‌ಎಂಬಿಜಿ)ದ ಸ್ವಯಂ ನಿಗಾವನ್ನು ಆಧರಿಸಿ ಹೆಚ್ಚಿಸಬೇಕು. ಸಾಮಾನ್ಯವಾಗಿ ಬಳಕೆಯಾಗುವ ಔಷಧಗಳೆಂದರೆ ಗ್ಲಿಬೆನ್‌ಕ್ಲಾಮೈಡ್‌ (ಡೋಸ್‌ ರೇಂಜ್‌: 5-20 ಎಂಜಿ), ಗ್ಲಿಮೆಪೆರೈಡ್‌ (ಡೋಸ್‌ ರೇಂಜ್‌: 1-8 ಎಂಜಿ), ಗ್ಲಿಕ್ಲಾಝೈಡ್‌ (ಡೋಸ್‌ ರೇಂಜ್‌: 40-240 ಎಂಜಿ) ಮತ್ತು ಗ್ಲಿಪಿಝೈಡ್‌ (ಡೋಸ್‌ ರೇಂಜ್‌: 5-20 ಎಂಜಿ). 2. ಮೆಗ್ಲಿಟಿನೈಡ್‌ ಡಿರೈವೇಟಿವ್ಸ್‌ ರೆಪಾಗ್ಲಿನೈಡ್‌ (ಡೋಸ್‌ ರೇಂಜ್‌: 0.5 -16 ಎಂಜಿ) ಮತ್ತು ನೆಟೆಗ್ಲಿನೈಡ್‌ (ಡೋಸ್‌ ರೇಂಜ್‌: 180-360 ಎಂಜಿ)ಗಳು ಸಲೊನೈಲೂರಿಯಾಸ್‌ ಅಲ್ಲವಾದರೂ ಎಟಿಪಿ-ಸಂವೇದನಶೀಲ ಪೊಟ್ಯಾಸಿಯಂ ಚಾನೆಲ್‌ ಜತೆಗೂ ಸಂವಹಿಸುತ್ತವೆ. ಇವುಗಳ ಕಿರು ಅರ್ಧಾಯುಷ್ಯದ ಕಾರಣವಾಗಿ, ಈ ಔಷಧಿಗಳನ್ನು ಪ್ರತೀ ಊಟದ ಜತೆಗೆ ಅಥವಾ ಅದಕ್ಕೆ ಮುನ್ನ ಊಟ -ಉಪಾಹಾರ ಸಂಬಂಧಿ ಗ್ಲುಕೋಸ್‌ ಆಧಿಕ್ಯವನ್ನು ತಡೆಯಲು ನೀಡಲಾಗುತ್ತದೆ. 3. ಆಲ್ಫಾ- ಗ್ಲುಕೋಸಿಡೇಸ್‌ ಇನ್‌ಹಿಬಿಟರ್ ಆಲ್ಫಾ - ಗ್ಲುಕೋಸಿಡೇಸ್‌ ಇನ್‌ಹಿಬಿಟರ್ ಅಕಾಬೋìಸ್‌ (ಡೋಸೇಜ್‌ ರೇಂಜ್‌: 25-100 ಎಂಜಿ, ಪ್ರತೀ ಊಟದ ಜತೆಗೆ), ಮಿಗಿಟಾಲ್‌ (ಡೋಸ್‌ ರೇಂಜ್‌: 25-50 ಎಂಜಿ, ಪ್ರತೀ ಊಟದ ಜತೆಗೆ) ಮತ್ತು ವೊಗ್ಲಿಬೋಸ್‌ (ಡೋಸ್‌ ರೇಂಜ್‌: 0.1-0.3 ಎಂಜಿ, ಪ್ರತೀ ಊಟದ ಜತೆಗೆ) ಪೋಸ್ಟ್‌ ಪ್ರಾಂಡಿಯಲ್‌ ಹೈಪರ್‌ಗ್ಲೆ„ಸೇಮಿಯಾ ಉಂಟಾಗುವುದನ್ನು ಗ್ಲುಕೋಸ್‌ ಹೀರಿಕೆ ವಿಳಂಬಿಸುವುದರ ಮೂಲಕ ಕಡಿಮೆ ಮಾಡುತ್ತವೆ. ಈ ಔಷಧಿಗಳನ್ನು ಇನ್‌ಫ್ಲಮೇಟರಿ ಬವೆಲ್‌ ಕಾಯಿಲೆ, ಗ್ಯಾಸ್ಟ್ರೊಪರೇಸಿಸ್‌ ಅಥವಾ ಸೀರಮ್‌ ಕ್ರಿಯಾಟಿನಿನ್‌ ಮಟ್ಟ 2 ಎಂಜಿ/ಡಿಎಲ್‌ಕ್ಕಿಂತ ಹೆಚ್ಚು ಇರುವ ರೋಗಿಗಳಿಗೆ ಉಪಯೋಗಿಸಬಾರದು. 4. ಗ್ಲುಕೊಗೋನ್‌ ಲೈಕ್‌ ಪೆಪ್ಟೆ„ಡ್‌-1 (ಜಿಎಲ್‌ಪಿ-1) ಅಗನಿಸ್ಟ್‌ ಜಿಎಲ್‌ಪಿ-1 ಸಣ್ಣ ಕರುಳಿನ ಎಲ್‌ ಜೀವಕೋಶಗಳಲ್ಲಿ ಉತ್ಪಾದನೆಯಾಗುತ್ತವೆ ಹಾಗೂ ಇನ್ಸುಲಿನ್‌ ಸ್ರಾವವನ್ನು ಪ್ರಚೋದಿಸುತ್ತವೆ ಮತ್ತು ಗ್ಲುಕೋಸ್‌ ಅವಲಂಬಿ ವಿಧಾನದಲ್ಲಿ ಗ್ಲುಕಗೋನ್‌ ಸ್ರಾವವನ್ನು ಮತ್ತು ಹೆಪಾಟಿಕ್‌ ಗ್ಲುಕೋಸ್‌ ಉತ್ಪಾದನೆಯನ್ನು ಪ್ರತಿಬಂಧಿಸುತ್ತದೆ. ದಿನಕ್ಕೆ ಎರಡು ಬಾರಿ ಚರ್ಮದ ಕೆಳಗಿನ ಇಂಜೆಕ್ಷನ್‌ ಮೂಲಕ ನೀಡಲಾಗುತ್ತದೆ. ಎಕ್ಸನಾಟೈಡ್‌ನ‌ ಆರಂಭಿಕ ಡೋಸ್‌ 5ಫಿಜಿ. ಈ ಡೋಸೇಜ್‌ ಸ್ವೀಕೃತವಾದರೆ 1 ತಿಂಗಳ ಬಳಿಕ 10ಫಿಜಿಗೆ ಟೈಟ್ರೇಟ್‌ ಮಾಡಬೇಕು. ಗ್ಯಾಸ್ಟ್ರಿಕ್‌ ಎಂಪ್ಟಿಯಿಂಗ್‌ ಮೇಲೆ ತನ್ನ ವಿಳಂಬಿಸುವ ಪರಿಣಾಮದಿಂದಾಗಿ ಹೊಟ್ಟೆತೊಳೆಸುವಿಕೆ, ವಾಂತಿ ಮತ್ತು ಬೇಧಿಯಂತಹ ಅಡ್ಡಪರಿಣಾಮಗಳನ್ನು ಜಿಐ ಉಂಟು ಮಾಡುತ್ತದೆ. ಲಿರಾಗುಟೈಡ್‌ ಜಿಎಲ್‌ಪಿ-1 ಅನಲಾಗ್‌ ಆಗಿದ್ದು, ಮನುಷ್ಯ ಜಿಎಲ್‌ಪಿ-1ರಿಂದ ಪಡೆಯಲಾಗುತ್ತದೆ. ಅದರ ಪೆನ್‌ ಮೂಲಕ ಚರ್ಮದಡಿಗೆ ಇಂಜೆಕ್ಷನ್‌ ಆಗಿ ದಿನಕ್ಕೆ ಒಮ್ಮೆ ಇದನ್ನು ನೀಡಲಾಗುತ್ತದೆ. ಸಮಯವು ಊಟ-ಉಪಾಹಾರದ ಸಮಯವನ್ನು ಆಧರಿಸಿರುತ್ತದೆ. ಇದರ ಅರ್ಧಾಯುಷ್ಯವು ಸುಮಾರು 13 ತಾಸುಗಳು. ಇದರ ಪ್ರಯೋಜನಗಳು ಮತ್ತು ಅಡ್ಡಪರಿಣಾಮಗಳು ಎಕ್ಸೆನಾಟೈಡ್‌ನ‌ಂತೆಯೇ ಇವೆ, ಆದರೆ ಇದು ತನ್ನ ಪರಿಣಾಮಗಳಲ್ಲಿ ತುಸು ಹೆಚ್ಚು ಶಕ್ತಿಯುತವಾಗಿದೆ. ಇದರ ಆರಂಭಿಕ ಡೋಸೇಜ್‌ ಒಂದು ವಾರ ಕಾಲ 0.6 ಎಂಜಿ/ದಿನ ಆಗಿರುತ್ತದೆ. ಯಾವುದೇ ಅಡ್ಡ ಪರಿಣಾಮಗಳು ಕಾಣಿಸಿಕೊಳ್ಳದಿದ್ದಲ್ಲಿ, 1.2ಎಂಜಿ/ದಿನಕ್ಕೆ ಹೆಚ್ಚಿಸಲಾಗುತ್ತದೆ (ಈ ಡೋಸೇಜ್‌ನಲ್ಲಿ ಇದರ ಬಹುತೇಕ ವೈದ್ಯಕೀಯ ಪ್ರಯೋಜನಗಳು ಕಾಣಿಸಿಕೊಳ್ಳುತ್ತವೆ). ಬಹುತೇಕ ರೋಗಿಗಳಿಗೆ, ಇನ್ನೊಂದು ವಾರದ ಬಳಿಕ ಯಾವುದೇ ಅಡ್ಡ ಪರಿಣಾಮಗಳು ಕಾಣಿಸಿಕೊಳ್ಳದಿದ್ದರೆ ಡೋಸನ್ನು 1.8 /ದಿನಕ್ಕೆ ಹೆಚ್ಚಿಸಲಾಗುತ್ತದೆ.

2017ರ ರಾಶಿ ಭವಿಷ್ಯ

ಮೇಷ ರಾಹುವಿನ ದೈವಾನುಕೂಲವು ಒದಗಿ ಸಂತೋಷಪಡುವಿರಿ. ನೂತನ ಉದ್ಯೋಗ ಲಾಭ, ಅವಿವಾಹಿತರಿಗೆ ವಿವಾಹಯೋಗ, ವಿವಾಹಿತರಿಗೆ ಸಂತಾನಭಾಗ್ಯ, ಧನಾರ್ಜನೆ, ವ್ಯಾಪಾರವೃಛಿಯಾಗಿ ಸಂತಸ ತರುವ ಕಾಲ. ಈ ವರ್ಷ ನಿಜವಾಗಿಯೂ ಭಾಗ್ಯಶಾಲಿಗಳೆನ್ನಿಸುವಿರಿ. ತೊಡಗಿಸಿದ ಕಾರ್ಯ ಭಾಗಗಳೆಲ್ಲವೂ ಯಶಸ್ವಿಯಾಗಿ ಕೊನೆಗೊಳ್ಳುವ ಸುಯೋಗವಿದೆ. ಧೈರ್ಯೋತ್ಸಾಹಗಳು ಆತ್ಮಬಲ, ಜನಸಂಪರ್ಕ ವೃದಿಟಛಿಗೊಂಡು ಲಾಭದಾಯಕವೆನಿಸಲಿದೆ. ದೀಪಾವಳಿ ಅನಂತರ ಸಾಂಸಾರಿಕ ಜೀವನವು ಸುವ್ಯವಸ್ಥಿತವಾಗಿ ನಡೆಯುವುದು. ವ್ಯಕ್ತಿತ್ವದ ವಿಕಾಸ, ಸ್ವಜನ ಬಂಧು ವರ್ಗದವರ ಸಹಕಾರ, ಆರ್ಥಿಕ ಉನ್ನತಿ, ಕೌಟುಂಬಿಕ ಅಭಿವೃದಿಟಛಿ, ಪ್ರಭು ಜನರ ಆಗ್ರಹ, ಆಸ್ತಿ ಪಾಸ್ತಿಗಳ ಸಂಚಯ ಇತ್ಯಾದಿಗಳು ಕೈಗೂಡುವುವು. ಅನಿಷ್ಟ ಸ್ಥಾನದಲ್ಲಿರುವ ಶನಿಯಿಂದಾಗಿ ಕೆಲವೊಮ್ಮೆ ಹಿರಿಯರ ಆರೋಗ್ಯಕ್ಕೆಧಕ್ಕೆ. ಸ್ವಜನರೊಂದಿಗೆ ಮತಭೇದ. ಬಂಧುಗಳೊಂದಿಗೆ, ಮೇಲಧಿಕಾರಿಗಳೊಂದಿಗೆ ಭಿನ್ನಾಭಿಪ್ರಾಯ ಕಲಹಕ್ಕೆ ಕಾರಣವಾಗಿ ಅವರ ಅಸಂತೋಷ, ಗೌರವಕ್ಕೆ ಧಕ್ಕೆ, ಅಸುಖ ಇತ್ಯಾದಿಗಳು ಅನುಭವಕ್ಕೆ ಬರುವುವು. ಸಕಲ ಕಾರ್ಯಗಳಲ್ಲಿ ಜಯ, ಸದಾಚಾರ, ಆರೋಗ್ಯವೃದ್ಧಿ. ಕೆಲವೊಮ್ಮೆ ಹಂತಹಂತವಾಗಿ ಅನಾದರಣೆ, ಅಪವ್ಯಯಗಳು ಇರುತ್ತವೆ. ವಿವಿಧ ಮೂಲಗಳಿಂದ ಹೇರಳ ಧನಪ್ರಾಪ್ತಿ, ಕೇತು, ಶನಿಗಳಿಂದ ಕಾರ್ಯಗಳಲ್ಲಿ ವಿಘ್ನ, ಶ್ರಮ, ದುಷ್ಟ ವೃತ್ತಿ, ದೇಹಾಯಾಸ ಕಂಡುಬರುತ್ತದೆ. ಕೃಷಿ ಕ್ಷೇತ್ರ ವಿಸ್ತರಣೆ ಹಾಗೂ ನಿವೇಶನ ಖರೀದಿ ಯೋಗ ಕಂಡುಬರುತ್ತದೆ. ಧನದ ವಿಚಾರದಲ್ಲಿ ಚಿಂತೆಯಿಲ್ಲದೆ ಸುಸೂತ್ರವಾಗಿ ತೃಪ್ತಿ ಜೀವನವಾಗಲಿದೆ. ಎಷ್ಟೋ ಸಮಯದ ನಿರೀಕ್ಷಿತ ಕಾರ್ಯಗಳು ಕೈಗೂಡಿ ಸಂತೋಷವೆನಿಸುವುದು. ಜೂನ್‌ ಅನಂತರ ಮಿಶ್ರ ಫ‌ಲಗಳು ತೋರಿಬಂದರೂ ಸಾಂಸಾರಿಕವಾಗಿ ಕಿರಿಕಿರಿ, ಅವಮಾನ, ಉಷ್ಣಪೀಡೆ ಮುಂತಾದವುಗಳಿರುತ್ತವೆ. ಮೊದಲನೇ ಚರಣ: ಅಶ್ವಿ‌ನಿ, ಭರಣಿ, ಕೃತ್ತಿಕಾ. ಶುಭ ವಾರ : ಕುಜವಾರ. ಶುಭ ರತ್ನ : ಹವಳ. ಶುಭ ದಿಕ್ಕು : ದಕ್ಷಿಣ. ಶುಭ ವರ್ಣ : ಕೆಂಪು. ಶುಭ ಲೋಹ : ಹಿತ್ತಾಳೆ. ವೃಷಭ ಸ್ವಪ್ರಯತ್ನದಲ್ಲಿ ಮುಂದುವರಿದಲ್ಲಿ ಕಾರ್ಯಜಯವಿದೆ. ದೈವಬಲ ಇಲ್ಲದ ನಿಮಗೆ ಅನಾರೋಗ್ಯ, ಸ್ವಜನ ವಿರೋಧ ಮುಂತಾದವು ಒಂದಲ್ಲ ಒಂದು ರೀತಿಯಲ್ಲಿ ತಲೆದೋರುವುವು. ಮುಖ್ಯವಾಗಿ ದೀರ್ಘ‌ ಪ್ರಯಾಣದ ಅವಕಾಶವಿದ್ದು ಇದನ್ನು ಅನುಕೂಲಕರವಾಗಿ ಬಳಸಿಕೊಳ್ಳಬಹುದು. ದೈವಾನುಕೂಲವಿಲ್ಲದ ಪರಿಸ್ಥಿತಿಯಿಂದಾಗಿ ದೈಹಿಕ, ಮಾನಸಿಕ ಆಘಾತ ಇತ್ಯಾದಿಗಳಿಂದ ಬದುಕು ಅಸ್ತವ್ಯಸ್ತವಾದರೂ ದೇವತಾಪ್ರಾರ್ಥನೆಯಿಂದ ಶುಭ. ಅದೇ ರೀತಿ ಧಾರ್ಮಿಕ ಪ್ರವೃತ್ತಿಗಳಿಂದ ಶುಭವಾದೀತು. ಕೃಷಿ, ಕೈಗಾರಿಕೆ, ಕಾರ್ಮಿಕ ವರ್ಗ ಇನ್ನಿತರ ಶ್ರಮಸಾಧ್ಯ ಪ್ರವೃತ್ತಿಯವರಿಗೆ ಕಷ್ಟ-ನಷ್ಟಗಳು ತೋರಿ ಬರಲಿವೆ. ಜೂನ್‌ ಅನಂತರ ವ್ಯಾಪಾರೋದ್ಯಮಗಳಿಗೆ ಸಾಕಷ್ಟು ಪ್ರಗತಿ ಇದೆ. ಆದರೆ ಆರೋಗ್ಯದ ವಿಚಾರದಲ್ಲಿ ಮಾನಸಿಕ ಅಶಾಂತಿಯಿಂದವಾದ-ವಿವಾದಗಳಿಂದ ದೈಹಿಕ ಪರಿಣಾಮ ಬೀರಬಹುದು. ರಕ್ತದೋಷ, ನಿಶ್ಶಕ್ತಿ, ಉಷ್ಣ ಪ್ರಕೋಪಗಳಿರುವುದರಿಂದ ಈ ಸಮಯ ಆದಷ್ಟು ಜಾಗ್ರತೆ ವಹಿಸಬೇಕಾದೀತು. ಡಿಸೆಂಬರ್‌ ಅನಂತರ ಉದ್ಯಮಿಗಳಿಗೆ ಉದ್ಯೋಗ ವ್ಯವಹಾರಗಳಲ್ಲಿ ಉತ್ತಮ ಪ್ರಗತಿ ಕಂಡುಬರುತ್ತದೆ. ಧನಲಾಭ ಸಾಕಷ್ಟಿದ್ದರೂ ಹಲವು ರೀತಿಯ ಖರ್ಚುಗಳು, ನಷ್ಟವೂ ತೋರಿಬಂದು ಧೃತಿಗೆಡುವಂತಾಗುತ್ತದೆ. ಫೆಬ್ರವರಿ ಅನಂತರ ಈ ಮಾಸವು ಎಲ್ಲಾ ರೀತಿಯ ಪ್ರತಿಕೂಲತೆಗಳಿಗೆ ಕಾರಣವಾದೀತು. ಬಂಧುಜನರ ಕ್ಲೇಶ, ಕೈಗೊಂಡ ಕಾರ್ಯಗಳು ವಿಘ್ನಗಳ ಪಾಲಾಗಿ ಮನೋವ್ಯಥೆ ಆವರಿಸುತ್ತದೆ. ಆದ ಕಾರಣ ಸ್ವಜನರ ವಂಚನೆಗೆ ಸಿಲುಕದಂತೆ ಎಚ್ಚರ ವಹಿಸಿರಿ. ಮೇ ತಿಂಗಳಲ್ಲಿ ಆರ್ಥಿಕ ಹಾಗೂ ಸಾಂಸಾರಿಕ ಇಷ್ಟಸಿದ್ಧಿ, ವಿವಿಧ ಮೂಲಗಳಿಂದ ಆದಾಯ ವೃದ್ಧಿ, ಸ್ಥಾನಮಾನಾದಿಗಳಲ್ಲಿ ಅಭಿವೃದ್ಧಿ, ಸಮಾಜದಲ್ಲಿ ಗೌರವ, ಗೃಹಲಾಭ, ಮಕ್ಕಳ ಸುಖ ಇತ್ಯಾದಿ ಶುಭಫ‌ಲಗಳು ಅನುಭವಕ್ಕೆ ಬರುತ್ತವೆ. ಜೂನ್‌ ಅನಂತರ ಪ್ರಗತಿಯೂ ಲಾಭವೂ ಅಧಿಕವಾಗುವುದು. ಅನ್ಯರಿಂದ ಉತ್ತಮ ಬಾಂಧವ್ಯ ಕುದುರಿಸಿಕೊಳ್ಳಲು ಸಕಾಲ. ತೀರ್ಥಕ್ಷೇತ್ರ, ಧಾರ್ಮಿಕ ಕಾರ್ಯಕ್ಷೇತ್ರಗಳಿಂದ ಮಾನಸಿಕ ಸಂತೋಷ ತೋರಿಬರುವುದು. ಇಷ್ಟಾರ್ಥ ಸಿದ್ಧಿಗಾಗಿ ಕುಲದೇವತಾರಾಧನೆಯಿಂದ ಅನುಗ್ರಹವಾಗುತ್ತದೆ. ಕೃತ್ತಿಕಾ, 2, 3, 4ನೇ ಪಾದ ರೋಹಿಣಿ, ಮೃಗಶಿರಾ 2ನೇ ಪಾದ ಶುಭ ವಾರ : ಶುಕ್ರವಾರ. ಶುಭ ರತ್ನ : ವಜ್ರ. ಶುಭ ದಿಕ್ಕು : ಆಗ್ನೇಯ. ಶುಭ ವರ್ಣ : ಬಿಳಿ. ಶುಭ ಲೋಹ : ಬೆಳ್ಳಿ. ಮಿಥುನ ರಾಶಿಸ್ಥಿತ ಗುರುವಿನ ಅನುಗ್ರಹ ಪೂರ್ಣವಾಗಿದ್ದು ಕಳೆದ ವರ್ಷ ಸಾಧಿಸಲಾಗದ ಹಾಗೂ ಅರ್ಧದಲ್ಲೇ ನಿಂತು ಹೋದ ಕೆಲಸಕಾರ್ಯಗಳಿಗೆ ಚಾಲನೆ ದೊರೆತುಪುನಃ ಆರಂಭವಾಗಿ ಜಯಪ್ರದವಾಗುತ್ತದೆ. ಸಮಾಜದಲ್ಲಿ ಸ್ಥಾನಮಾನ, ಗೌರವ ಪುನಃ ತೋರಿಬರುತ್ತದೆ. ಸಾಂಸಾರಿಕವಾಗಿ ಸುಖ, ಸಂತೋಷ, ವಿವಾಹಾದಿ ಮಂಗಲಕಾರ್ಯ ಪ್ರಸಕ್ತಿ, ಸಂತಾನ ಪ್ರಾಪ್ತಿ, ಉನ್ನತ ಸ್ಥಾನಮಾನ, ಸಂಪದಭಿವೃದ್ಧಿ, ಐಷಾರಾಮ ಸಾಧನಗಳ ಸಂಗ್ರಹ ಮೊದಲಾವುಗಳು ಅನುಭವಕ್ಕೆ ಬರುತ್ತವೆ. ಆದರೂ ಮಧ್ಯೆ ಮಧ್ಯೆ ರಾಹು ತುಸು ಆತಂಕಗಳನ್ನು ಉಂಟುಮಾಡುವನು. ಇದರಿಂದ ದುರ್ಜನರ ವಂಚನೆ, ಚೋರೋಪದ್ರವ, ಉದ್ಯೋಗ ವ್ಯವಹಾರಗಳಲ್ಲಿ ತೊಡಕುಗಳೇ ಆಗಾಗ ಕಂಡುಬರುವ ಕಾರಣ ಆರ್ಥಿಕ ಅಭದ್ರತೆ ನಿವಾರಣೆಗೆ ಕ್ರಮ ಅಗತ್ಯವಿದೆ. ದೀಪಾವಳಿಯ ಅನಂತರ ಕೊಂಚ ಜಾಗ್ರತೆ ವಹಿಸಬೇಕು. ಮುಂದೆ ಡಿಸೆಂಬರ್‌ನಲ್ಲಿ ಲಾಭಸ್ಥಾನದ ಶನಿಯಿಂದ ಬಾಕಿ ಹಣ ವಸೂಲಿ, ವ್ಯಾಪಾರದಲ್ಲಿ, ಉದ್ಯಮದಲ್ಲಿ ಯಶಸ್ಸು, ಸಾಮೂಹಿಕ ಕೆಲಸ ಕಾರ್ಯಗಳಲ್ಲಿ ಜಯ ಲಾಭಾದಿಗಳಿರುತ್ತದೆ. ಜನವರಿಯಲ್ಲಿ ಆರ್ಥಿಕ ಅಪವ್ಯಯ, ಅನಾರೋಗ್ಯ ತೋರಿಬಂದರೂ ಕಾರ್ಯಜಯವಿದೆ. ಫೆಬ್ರವರಿಯಲ್ಲಿ ಹೊಸ ಸ್ಥಾನಮಾನಗಳು, ಉದ್ಯೋಗ, ವ್ಯವಹಾರದಲ್ಲಿ ಪ್ರಗತಿ ಕಂಡುಬಂದು ವ್ಯವಸಾಯ ಕ್ಷೇತ್ರದಲ್ಲಿ ಅಪರಿಮಿತ ಸಾಧನೆ ನಿಮ್ಮದು. ಇದರಿಂದ ಆರ್ಥಿಕ ಲಾಭ ಕಂಡು ಬರುವುದು. ಜಮೀನು ಖರೀದಿ ಮತ್ತು ವಿವಾದಗಳ ತೀರ್ಮಾನ ಈ ವರ್ಷದಲ್ಲಿ ವಿಶೇಷ ಫ‌ಲವಾಗುತ್ತದೆ. ಅವಿವಾಹಿತರಿಗೆ ಗುರುಬಲ ಇರುವುದರಿಂದ ಲಗ್ನ ಕಾರ್ಯಕ್ಕೆ ಮನಸ್ಸು ಮಾಡಿದರೆ ಉತ್ತಮ ಫ‌ಲಪ್ರಾಪ್ತಿ ಇದೆ. ನಿರುದ್ಯೋಗಿಗಳಿಗೆ ನಿಶ್ಚಿತವಾಗಿಯೂ ಉದ್ಯೋಗ ದೊರೆಯುತ್ತದೆ. ವಿದ್ಯಾರ್ಥಿಗಳಿಗೆ ವಿದ್ಯಾಕ್ಷೇತ್ರದಲ್ಲಿ ಈ ವರ್ಷ ಉತ್ತಮ ಫ‌ಲಿತಾಂಶ ಲಭ್ಯವಾಗಿ ಮಾನಸಿಕ ನೆಮ್ಮದಿ ದೊರೆಯುತ್ತದೆ. ಅನಂತರ ನಿಮ್ಮ ಎಷ್ಟೋ ಸಮಸ್ಯೆಗಳು ಹಂತ ಹಂತವಾಗಿ ಪರಿಹಾರವಾಗಲಿವೆ. ಗುರು, ರಾಹು, ಜಪ, ಪೂಜಾದಿಗಳ ಅನುಗ್ರಹದಿಂದ ನಿಮಗೆ ಯಶಸ್ಸು ತೋರಿ ಬರುತ್ತದೆ. ಮೃಗಶಿರಾ 3 ಮತ್ತು 4ನೇ ಪಾದ. ಆದ್ರಾì, ಪುನರ್ವಸು 1, 2, 3ನೇ ಪಾದ. ಶುಭ ವಾರ : ಬುಧವಾರ ಶುಭ ರತ್ನ : ಪಚ್ಚೆ. ಶುಭ ದಿಕ್ಕು : ಉತ್ತರ. ಶುಭ ವರ್ಣ : ಹಸುರು. ಶುಭ ಲೋಹ : ಕಂಚು. ಕಟಕ ಬಹುದಿನಗಳ ಬಳಿಕ ಹೆಚ್ಚಿನ ಕಾರ್ಯಗಳು ವಿಳಂಬವಾಗಿಯಾದರೂ ಸಿದ್ಧಿಯಾಗಲಿದೆ. ಹಾಗೆ ಜೀವನದಲ್ಲಿ ವಿಸ್ತೃತವಾದ ಬದಲಾವಣೆ ಉಂಟಾಗುವ ಸಾಧ್ಯತೆ ಇದೆ. ಇದು ಕೆಲವೊಮ್ಮೆ ಗಮನಕ್ಕೆ ಬಾರದೆ ಸಾಮಾನ್ಯವೆಂಬಂತೆಯೂ ನಡೆದು ಹೋಗಬಹುದಾದರೂ ಮುಂದಕ್ಕೆ ಇದರ ಫ‌ಲಗಳು ಅನುಭವಕ್ಕೆ ಬರಲಿವೆ. ಉದ್ಯೋಗ, ವ್ಯವಹಾರಗಳಲ್ಲಿ ಇಷ್ಟಾರ್ಥ ಸಿದ್ಧಿಯಾಗಲಿದೆ. ಭಡ್ತಿ ಅಥವಾ ಉನ್ನತಉದ್ಯೋಗಗಳು ದೊರಕುವ ಅವಕಾಶವೂ ಇದೆ. ಆರ್ಥಿಕ ಸ್ಥಿತಿಗಳು ಉತ್ತಮಗೊಳ್ಳುವುವು. ವಿವಾಹ, ಸಂತಾನ ಯೋಗ ಇಷ್ಟಾರ್ಥ ಸಿದ್ಧಿಸುವುವು. ಗೃಹಕೃತ್ಯದ ಉತ್ತಮ ಪ್ರಗತಿ ಇದೆ. ದೀಪಾವಳಿಯ ಅನಂತರದ ಎಲ್ಲಾ ಥರದ ಉದ್ಯೋಗದವರಿಗೂ ಪ್ರಗತಿ ಹಾಗೂ ಜಯವಿದೆ. ಸೋಮಾರಿ ನಿರುದ್ಯೋಗಿಗಳೆನಿಸಿಕೊಂಡವರೂ ಲಾಭಕರ ಉದ್ಯೋಗದಲ್ಲಿ ಪ್ರವೃತರಾಗುವರು. ಡಿಸೆಂಬರ್‌ ಅನಂತರ ಕೃಷಿ, ಭೂಮ್ಯಾದಿ ಅಭಿವೃದ್ಧಿ ಇತ್ಯಾದಿಗಳಿರುತ್ತವೆ. ಈ ಮಧ್ಯೆ ಹಣದ ದುರ್ವ್ಯಯ ಇಷ್ಟಜನರೊಂದಿಗೆ ಕಲಹದಿಂದ ಮಾನಸಿಕ ದುಃಖವುಂಟಾದೀತು. ಮಾರ್ಚ್‌ ಅನಂತರ ಸಂಬಂಧಿಗಳು, ಸ್ನೇಹಿತರು ಹಾಗೂ ನಿಕಟ ಸಂಪರ್ಕ ಹೊಂದಿದ ಜನರೊಂದಿಗೆ ವ್ಯವಹಾರ ಕಷ್ಟಕರವೆನಿಸೀತು. ವಿದ್ಯಾರ್ಥಿಗಳಿಗೆ ಪ್ರಗತಿದಾಯಕ ವರ್ಷವೆನಿಸಲಿದೆ. ಕಷ್ಟಗಳನ್ನು ಪ್ರಯತ್ನದಿಂದ ಎದುರಿಸಿದಲ್ಲಿ ಗುರು ಅನುಗ್ರಹಕಾರಕನಾದಾನು. ಜೂನ್‌ ಅನಂತರ ಶನಿಯಿಂದ ಆರ್ಥಿಕವಾಗಿ ಪ್ರತಿಕೂಲ ಫ‌ಲವಿದೆ. ಧರ್ಮಬಾಹಿರ ಕಾರ್ಯಗಳಿಂದ ಗುರು ಜನರ ವಿರೋಧ ಉಂಟಾದೀತು. ಅಧಿಕಾರಿ ವರ್ಗದವರಿಂದ ಧಾರಾಳ ಲಾಭವೂ ಕೈಗೂಡುವುದು. ಆದರೂ ಎಚ್ಚರವಿರಲಿ. ಆರೋಗ್ಯದ ಬಗ್ಗೆ ಎಚ್ಚರಿಕೆ ಅಗತ್ಯ. ವರ್ಷದ ಕೊನೆಗೆ ದೈವಬಲವಿಲ್ಲದೆ ಹೋದರೂ ರಾಶಿಸ್ಥಿತ ಗುರುವಿನಿಂದ ಆರ್ಥಿಕವಾಗಿ ಸ್ಥಿತಿ ಉತ್ತಮಗೊಳ್ಳುತ್ತದೆ. ಕೊಂಚ ಅನಾರೋಗ್ಯವಿದ್ದರೂ ಸ್ಥಿರತೆ ಕಂಡು ಬಂದೀತು. ಅಭಿಮಾನಿಗಳ ಪ್ರೋತ್ಸಾಹ ಹಾಗೂ ಸಹಕಾರವೂ ಇದೆ. ಪ್ರಾಣ ದೇವರ ಉಪಾಸನೆ ನಿಮಗೆ ಹೆಚ್ಚಿನ ಶ್ರೇಯಸ್ಸು ತರಲಿದೆ. ಪುನರ್ವಸು 4ನೇ ಪಾದ, ಪುಷ್ಯ, ಆಶ್ಲೇಷಾ ಶುಭ ವಾರ : ಸೋಮವಾರ. ಶುಭ ರತ್ನ : ಮುತ್ತು. ಶುಭ ದಿಕ್ಕು : ವಾಯವ್ಯ ಶುಭ ವರ್ಣ : ಬಿಳಿ. ಶುಭ ಲೋಹ : ಬೆಳ್ಳಿ. ಸಿಂಹ ದೀಪಾವಳಿ ಅನಂತರ ಸಕಾಲದಲ್ಲಿ ಮಿತ್ರರ ಸಹಾಯದಿಂದ ಕಷ್ಟ ಪರಿಹಾರವಾಗುವುದು. ಕೌಟುಂಬಿಕವಾಗಿಯೂ ಪ್ರಗತಿ ಇದೆ. ಶನಿಯು ಚತುರ್ಥದ ಸ್ಥಾನದಿಂದ ತನ್ನ ಹಾಗೂ ಅಷ್ಟಮದ ಕೇತು ಅಶುಭ ಫ‌ಲಗಳನ್ನು ಕೊಡಲಾರಂಭಿಸುವನು. ಇದರಿಂದ ದೈವಬಲವೂ ಪ್ರತಿಕೂಲ ಸ್ಥಿತಿಯಿಂದ ಇರುವ ಕಾರಣ ಸುಖ-ಸಂತೋಷಗಳು ಮರೀಚಿಕೆಯಾದಾವು. ಉದ್ಯೋಗ, ವ್ಯವಹಾರಗಳಲ್ಲಿ ತೀವ್ರ ಪ್ರತಿಸ್ಪರ್ಧೆ, ಶತ್ರುಗಳಿಂದ ಕಿರುಕುಳ, ಅರ್ಥಹಾನಿ, ಮಾನಸಿಕ ಉದ್ವೇಗ, ಪ್ರಯಾಣ, ಕಷ್ಟ-ನಷ್ಟಗಳು ಎದುರಾಗುವುವು. ಆರೋಗ್ಯವು ಕೆಟ್ಟೀತು. ಆದರೆ ಹಿಂದೆ ಸಾಧಿಸಿದ ಕೆಲಸಗಳಿಂದ ಆದಾಯ ಕೈಸೇರಲಿದೆ. ಸ್ವಕಾರ್ಯ ಪೂರೈಕೆಗಾಗಿ ಕಠಿಣ ದುಡಿಮೆಯಿಂದ ಪ್ರಯತ್ನಿಸಬೇಕಾಗುವುದು. ಒಂದರ ಹಿಂದೆ ಒಂದರಂತೆ ಕಷ್ಟ-ನಷ್ಟಗಳು, ಅಡ್ಡಿ-ಆತಂಕಗಳು ತೋರಿಬಂದರೂ ಕರ್ತವ್ಯದಿಂದ ವಿಮುಖರಾಗದಿರಿ. "ತಾಳಿದವನು ಬಾಳಿಯಾನು' ಎಂಬಂತೆ ಅನಿರೀಕ್ಷಿತ ಘಟನೆಗಳಿಂದ ತಿರುವು ತೋರಿಬರುತ್ತದೆ. ಗೃಹ ಕಲಹಗಳಿಂದ ಮಾನಸಿಕ ಶಾಂತಿ ಭಂಗವಾದೀತು. ದೇಹಾಲಸ್ಯ ಉಂಟಾಗಿ ಕೋಪ- ತಾಪಗಳು ಅಧಿಕವಾಗುವುದು. ಆದರೂ ದ್ವಾದಶದ ಗುರು ಬಲದಿಂದ ನಿಮ್ಮ ಇಚ್ಛಿತ ಕಾರ್ಯಗಳು ಅನುಭವಕ್ಕೆ ಕಂಡುಬಂದು ಹಣ ಪ್ರಾಪ್ತಿ, ಐಶ್ವರ್ಯ, ಸಮಾಜದಲ್ಲಿ ಸ್ಥಾನಮಾನ, ಗೌರವ, ಕೌಟುಂಬಿಕ ಇಷ್ಟಸಿದ್ಧಿಗಳು ಸಂಭವಿಸುತ್ತವೆ. ಜೂನ್‌ ಅನಂತರ ಮಿಶ್ರ ಫ‌ಲವಿದೆ. ಭೂ ಸಂಬಂಧ ವ್ಯವಹಾರಗಳಲ್ಲೂ ಹೊಸ ಕಾರ್ಯಪ್ರವೃತ್ತಿಯಲ್ಲೂ ಹೆಚ್ಚಿನ ಯಶ ಉಂಟಾಗಲಿದೆ. ಮುಂದೆ ವರ್ಷಾಂತ್ಯದವರೆಗೂ ಹೆಚ್ಚಿನ ಕಾರ್ಯಗಳು ಹಂತಹಂತವಾಗಿ ಉತ್ತಮ ಅಭಿವೃದ್ಧಿ ತಂದುಕೊಡಲಿವೆ. ಕೃಷಿಯಲ್ಲಿ ನಿಮಗೆ ವಿಶೇಷ ಕೊಡುಗೆಯಾಗಿ ಅಧಿಕ ಬೆಳೆ ಮತ್ತು ಅಧಿಕ ಲಾಭವನ್ನು ಸೂಚಿಸುತ್ತದೆ. ನವಗ್ರಹ ಸ್ತೋತ್ರ, ಕುಲದೇವತಾ ಅನುಗ್ರಹಕ್ಕೆ ಪ್ರಯತ್ನಿಸಿದಲ್ಲಿ ನಿಮ್ಮ ಅಭೀಷ್ಟಗಳು ಸಿದ್ಧಿಸಲಿವೆ. ಮಘಾ, ಹುಬ್ಟಾ, ಉತ್ತರಾ ಮೊದಲ ಪಾದ. ಶುಭ ವಾರ : ರವಿವಾರ. ಶುಭ ರತ್ನ : ಮಾಣಿಕ್ಯ. ಶುಭ ದಿಕ್ಕು : ಪೂರ್ವ. ಶುಭ ವರ್ಣ : ಸಪ್ತವರ್ಣ. ಶುಭ ಲೋಹ : ತಾಮ್ರ. ಕನ್ಯಾ ಏಕಾದಶದ ಲಾಭಸ್ಥಾನಗತನಾದ ಗುರುವಿನ ಅನುಗ್ರಹದಿಂದ ಸುಖ, ಸಂಪತ್ತುಗಳು ವೃದ್ಧಿಯಾಗಲಿವೆ. ಅಲ್ಲದೆ ಅತ್ಯುಜ್ವಲ ಭಾಗ್ಯವನ್ನು ತಂದುಕೊಡಲಿದ್ದಾನೆ. ವಿವಾಹಾದಿ ಮಂಗಲಕಾರ್ಯ ಪ್ರಸಕ್ತಿ. ಸಾಂಸಾರಿಕ ಸುಖ, ಇಚ್ಛಿತ ಕಾರ್ಯಗಳಲ್ಲಿ ಜಯಲಾಭಾದಿಗಳು, ಕುಟುಂಬಾಭಿವೃದ್ಧಿ, ಆಸ್ತಿಪಾಸ್ತಿಗಳ ಸಂಗ್ರಹ, ಸ್ಥಾನಾಂತರ ಲಾಭ, ಉದ್ಯೋಗದಲ್ಲಿ ಪ್ರಗತಿ ಲಾಭಗಳಿವೆ. ಸಂತಾನ ಪ್ರಾಪ್ತಿ, ದೈಹಿಕ ಆರೋಗ್ಯವು ಸಾಕಷ್ಟು ಉತ್ತಮವಿರುವುದು. ದೀಪಾವಳಿಯ ಅನಂತರ ಮಕ್ಕಳಿಂದ ಸಂತೋಷ, ಐಶ್ವರ್ಯಾಭಿವೃದಿಟಛಿ, ಭೂ ವ್ಯವಹಾರದಲ್ಲಿ ಜಯ ಇತ್ಯಾದಿಗಳೊಂದಿಗೆ ಕೆಲವೊಮ್ಮೆಶತ್ರು ಪೀಡೆ. ಜ್ವರ, ಸಾಲಗಾರರ ಪೀಡೆ, ಮಾನಸಿಕ ಅಶಾಂತಿ, ಅಪಘಾತಗಳು, ನಿಮ್ಮ ಸಪ್ತಮದ ಕೇತುವಿನ ಪ್ರತಿಕೂಲತೆ ಯಿಂದ ಕಂಡುಬರುತ್ತದೆ. ಜನವರಿ ಅನಂತರ ದುಃಖ ನಿವಾರಣೆ, ಶತ್ರುಪೀಡೆ ನಿವಾರಣೆ, ಮನಶ್ಯಾಂತಿ, ಅಜೀರ್ಣ, ಉಷ್ಣವಿಕಾರ, ರಕ್ತದೋಷ ಇತ್ಯಾದಿಗಳು ತೋರಿಬರುತ್ತವೆ. ಮೇ ಅನಂತರ ಹಂತಹಂತವಾಗಿ ಆರ್ಥಿಕ ಸ್ಥಿತಿಯ ಏರಿಕೆ ಉಂಟಾಗಿ ವ್ಯಾಪಾರ, ವ್ಯವಹಾರಗಳಲ್ಲಿ ಹೆಚ್ಚಿನ ಲಾಭ ಕಂಡುಬರುತ್ತದೆ. ಗುರುವಿನ ದೈವಬಲದಿಂದ ಧನಪ್ರಾಪ್ತಿ, ವಿವಿಧ ಮೂಲಗಳಿಂದ ಕಾರ್ಯಜಯ, ಗೃಹಕೃತ್ಯಗಳಲ್ಲಿ ಪ್ರಗತಿ, ಉತ್ತಮ ಮೇಧಾಶಕ್ತಿ, ಸಾಂಸಾರಿಕ ಸುಖ ವಿಭವಗಳು, ಅಭಿವೃದಿಟಛಿಯಿಂದ ಆರ್ಥಿಕ ವಾಗಿಯೂ ಬೆಳವಣಿಗೆಯುಂಟಾಗುತ್ತದೆ. ಜೂನ್‌ ಅನಂತರ ಕೌಟುಂಬಿಕವಾಗಿಯೂ ಸಂಬಂಧ ವೃದ್ಧಿ, ಪ್ರಮುಖ ವ್ಯವಹಾರವೊಂದರಲ್ಲಿ ಸಣ್ತೀಪರೀಕ್ಷೆಯ ಕಾಲ. ಕೌಟುಂಬಿಕ ವ್ಯಾಜ್ಯಗಳು ಉದ್ಭವಿಸಿಯಾವು. ಮುಂದೆ ನಂತರದ ಅವಧಿಯಲ್ಲೂ ವ್ಯಾಪಾರೋದ್ಯಮ ಲಾಭಕರವಾಗಿಯೇ ಉಳಿದರೂ ಇತರ ಸಂಗತಿಗಳಲ್ಲಿ ನಷ್ಟ, ಅಡಚಣೆಗಳು ತೋರಿಬಂದಾವು. ವಿದ್ಯಾರ್ಥಿಗಳಿಗೆ ಉನ್ನತ ವ್ಯಾಸಂಗಕ್ಕೆ ಅನುಕೂಲವಾಗಲಿದೆ. ಸ್ತ್ರೀಯರಿಗೆ ಆರೋಗ್ಯದಲ್ಲಿ ಆಗಾಗ ತೊಂದರೆ ತೋರಿಬಂದರೂ ಸಾಂಸಾರಿಕವಾಗಿ ಗೃಹಸುಖವುಂಟಾಗುತ್ತದೆ. ಪ್ರತೀ ಶುಕ್ರವಾರ ಲಕ್ಷ್ಮೀಪೂಜೆ, ಪಂಚಮಿ ದಿನ ನಾಗಾರಾಧನೆಗಳಿಂದ ಅನುಗ್ರಹಕ್ಕೆ ಪಾತ್ರರಾದಲ್ಲಿ ಎಲ್ಲಾ ಕ್ಷೇತ್ರಗಳಲ್ಲಿ ಗಣನೀಯ ಪ್ರಗತಿ ಖಂಡಿತ ಸಾಧಿಸಬಹುದು. ಉತ್ತರಾ 2, 3, 4ನೇ ಪಾದ. ಹಸ್ತಾ, ಚಿತ್ರಾ 1, 2ನೇ ಪಾದ. ಶುಭ ವಾರ : ಬುಧವಾರ. ಶುಭ ರತ್ನ : ಪಚ್ಚೆ. ಶುಭ ದಿಕ್ಕು : ಉತ್ತರ. ಶುಭ ವರ್ಣ : ಹಸುರು. ಶುಭ ಲೋಹ : ಕಂಚು. ತುಲಾ ರಾಶಿಸ್ಥಿತ ಏಳೂವರೆ ಶನಿ ಪದೇಪದೇ ಇಷ್ಟಾರ್ಥ ಸಿದ್ಧಿಗೆ ತಡೆಯನ್ನೊಡ್ಡಿದರೂ ಮಧ್ಯೆಮಧ್ಯೆ ಇತರ ಗ್ರಹಗಳ ಶುಭ ಫ‌ಲಗಳು ಆದಷ್ಟು ಮನಶ್ಯಾಂತಿಗೆ ಕಾರಣವಾದೀತು. ಆರ್ಥಿಕ ಅಡಚಣೆ, ದೂರದ ವ್ಯರ್ಥ ಸಂಚಾರ, ದೈಹಿಕ ಹಾಗೂ ಮಾನಸಿಕ ಆಘಾತ, ಪ್ರಯಾಣಾಪಘಾತ, ವ್ಯವಹಾರಗಳಲ್ಲಿ ಅಪಯಶಸ್ಸು, ಪ್ರೀತಿ ಜನರ ವಿಯೋಗ, ಬಂಧುಜನರಿಂದ ಕಷ್ಟನಷ್ಟಗಳು, ವ್ಯಾಜ್ಯ ತಕರಾರುಗಳು, ದುರ್ಜನರ ಒಡನಾಟ, ಗೌರವ ಹಾನಿ, ಅಧಿಕಾರಿ ಜನರ ಆಗ್ರಹ ಇತ್ಯಾದಿಗಳಿಗೆ ಕಾರಣರೆನಿಸುವರು. ದೀಪಾವಳಿಯ ಅನಂತರ ಕೆಲವೊಂದು ಕಾರ್ಯಗಳಲ್ಲಿ ಜಯ, ಲಾಭಾದಿಗಳು ಧನಪ್ರಾಪ್ತಿ, ಜನರ ಸಹಾನುಭೂತಿ, ಉದ್ಯೋಗ ವ್ಯವಹಾರಗಳಲ್ಲಿ ಯಶಸ್ಸು, ಶತ್ರು ನಾಶ ಸಾಂಸಾರಿಕ ಸುಖ, ಮಿತ್ರ ಲಾಭ, ವಾಹನ ಸುಖ ಇತ್ಯಾದಿಗಳು ಅನುಭವಕ್ಕೆ ತೋರಿಬರುತ್ತವೆ. ಸಮಾಧಾನ, ತಾಳ್ಮೆ ಅತೀ ಅಗತ್ಯ. ಜನವರಿ ತಿಂಗಳಲ್ಲಿ ವ್ಯಾಪಾರೋದ್ಯಮಗಳಿಗೆ ಪಾಲುದಾರರಿಗೆ, ಲೇವಾದೇವಿ ವ್ಯವಹಾರಸ್ಥರಿಗೆ ಭಾಗಶಃ ಯಶಸ್ಸು ಲಭ್ಯವಾಗುತ್ತದೆ. ಕೈಗಾರಿಕೋದ್ಯಮಗಳಿಗೂ ಕಾರ್ಮಿಕ ವರ್ಗದವರಿಗೂ, ಶ್ರಮಜೀವಿಗಳಿಗೂ ಕಷ್ಟನಷ್ಟಗಳು ಅಧಿಕವಾದಾವು. ಮಾರ್ಚ್‌ ತಿಂಗಳಲ್ಲಿ ಕ್ರಯವಿಕ್ರಯ, ಗೃಹ, ವಾಹನಾದಿ ವ್ಯವಹಾರವುಳ್ಳವರಿಗೆ ಉತ್ತಮ ಆರ್ಥಿಕ ಲಾಭ ತಂದೀತು. ಗೃಹಕೃತ್ಯದಲ್ಲಿ ಇಷ್ಟಾರ್ಥದಂತೆ ನಡೆಯುವುದು, ಬಂಧುಗಳಲ್ಲಿ ಮನಸ್ತಾಪ, ಧನಹಾನಿ ಹಾಗೂ ಮಾನಹಾನಿಗೆ ಕಾರಣವಾಗದಂತೆ ಎಚ್ಚರವಿರಲಿ. ಜುಲೈ ಅನಂತರ ನಿಮಗೆ ಅನುಕೂಲವಾಗಿ ನೆಮ್ಮದಿ ಲಭ್ಯ ಹಾಗೂ ಭಡ್ತಿಯಾಗಲಿದೆ. ವಿದ್ಯಾರ್ಥಿಗಳಿಗೆ ಪರೀಕ್ಷೆಯಲ್ಲಿ ಹೆಚ್ಚಿನ ಅಂಕ ಗಳಿಸಲು ಅತೀ ಹೆಚ್ಚಿನ ಪರಿಶ್ರಮದ ಅಗತ್ಯವಿದೆ. ಮಹಿಳೆಯರಿಗೆ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ಬೇಕು. ಆದರೂ ಜೂನ್‌ ಅನಂತರ ಹಂತಹಂತವಾಗಿ ಸುಧಾರಣೆಯಾಗಲಿದೆ ಹಾಗೂ ನೆಮ್ಮದಿ ಲಭ್ಯವಿದೆ. ಪ್ರತೀ ಶುಕ್ರವಾರ ಲಕ್ಷ್ಮೀ ಪೂಜೆಯನ್ನು ಮಾಡಿದಲ್ಲಿ ಎಲ್ಲಾ ರೀತಿಯ ಉತ್ತರೋತ್ತರ ಅಭಿವೃದ್ಧಿಗೆ ಹಾಗೂ ಮಾನಸಿಕ ಶಾಂತಿಗೆ ಫ‌ಲಪ್ರದವಾಗಿ ತೋರಿಬಂದೀತು. ಚಿತ್ರಾ 3, 4ನೇ ಪಾದ ಸ್ವಾತೀ ವಿಶಾಖಾ 1, 2, 3ನೇ ಪಾದ ಶುಭವಾರ: ಶುಕ್ರವಾರ ಶುಭರತ್ನ: ವಜ್ರ, ಶುಭ ದಿಕ್ಕು: ಆಗ್ನೇಯ ಶುಭವರ್ಣ: ಚಿತ್ರವರ್ಣ ಶುಭಲೋಹ: ಬೆಳ್ಳಿ. ವೃಶ್ಚಿಕ ಸ್ವಾಭಿಮಾನಿಗಳೂ, ಛಲವಾದಿಗಳೂ ಆದ ನೀವು ಮಿಶ್ರ ಫ‌ಲಾನುಭೂತಿಯನ್ನು ಪಡೆಯಲಿರುವಿರಿ. ಭಾಗ್ಯಸ್ಥಾನಗತನಾದ ಗುರುವಿನಿಂದಾಗಿ ಸೌಭಾಗ್ಯ, ಸಂಪತ್ತು ತಾನಾಗಿ ಬಂದು ಸೇರುವುವು. ಕೆಲವೊಮ್ಮೆ ಅನಾರೋಗ್ಯವೂ ನಿಮ್ಮನ್ನು ಬಾಧಿಸುತ್ತಾ ಕಳವಳಕ್ಕೀಡು ಮಾಡಿದರೂ ಎಣಿಕೆಯಂತೆ ಕಾರ್ಯ ಜಯವಾಗುವುದರಿಂದ ನೀವು ಆ ಕುರಿತು ಚಿಂತಿಸುವ ಆವಶ್ಯಕತೆ ಇಲ್ಲ. ಹೆಚ್ಚಿನ ಕೆಲಸಕಾರ್ಯಗಳು ಅನಾಯಾಸವಾಗಿ ಪೂರ್ಣವಾಗಿ ದಕ್ಷತೆ ಹೆಚ್ಚಿಸುವುದು. ಸಂಚಾರ ಯೋಗವಿದ್ದರೂ ಅನಿಷ್ಟವಾಗುವುದಿಲ್ಲ. ಮುಂದುವರಿದಂತೆ ಪರಿಸ್ಥಿತಿ ಉತ್ತಮಗೊಂಡು ಸ್ಥಾನ-ಮಾನಾದಿಗಳ ಉತ್ಕರ್ಷಣೆಗೆ ಕಾರಣವಾಗುವಂಥ ಕಾರ್ಯಗಳು ಕೈಗೂಡುವುವು. ಕಲಹ ಸಂಭವವಿದೆ. ಮುಖ್ಯವಾಗಿ ಧನಾರ್ಜನೆಯು ಉತ್ತಮವಿರುವುದರಿಂದ ಅಡಚಣೆ ತೋರಿಬಾರದು. ವೈವಾಹಿಕ ಜೀವನದಲ್ಲಿ ಸಂತೃಪ್ತಿ ಕಂಡುಬರುತ್ತದೆ. ಪ್ರಾಪ್ತ ವಯಸ್ಕರಿಗೆ ಇದು ಕಲ್ಯಾಣ ಕಾರ್ಯಕ್ಕೆ ಸಕಾಲವಾಗಿ ಕಂಕಣ ಬಲ ಕೂಡಿ ಬರಲಿದೆ. ಫೆಬ್ರವರಿ ತಿಂಗಳಿಂದ ಆರ್ಥಿಕ ಉನ್ನತಿ, ತಂಟೆ-ತಕರಾರುಗಳಿಂದ ಬಿಡುಗಡೆ, ಶತ್ರುನಾಶ, ಮನಶ್ಯಾಂತಿ, ಉದ್ದೇಶಿತ ಕಾರ್ಯಸಾಧನೆ, ಸಂತಾನಸುಖ ಇತ್ಯಾದಿಗಳಿರುತ್ತದೆ. ಈ ವರ್ಷ ಉತ್ತಮ ಫ‌ಲಿತಾಂಶ ಕಂಡುಬರುತ್ತದೆ. ವಿಶೇಷವಾಗಿ ಉನ್ನತ ವ್ಯಾಸಂಗದಲ್ಲಿದ್ದವರಿಗೆ ಹೆಚ್ಚಿನ ಅನುಕೂಲ ಯೋಗವಿದೆ. ಆರೋಗ್ಯಕ್ಕೆ ಸಂಬಂಧಿಸಿದಂತೆ ವೆಚ್ಚವು ಕಡಿಮೆಯಾಗಲಿದೆ. ಆರ್ಥಿಕ ಪರಿಸ್ಥಿತಿ ಜೂನ್‌ ತಿಂಗಳ ಅನಂತರ ದಿನೇ ದಿನೇ ಅಭಿವೃದ್ಧಿ ಪಡೆಯಲಿದೆ. ಸರಕಾರಿ ಕೆಲಸ ಕಾರ್ಯಗಳಲ್ಲಿ ಪೂರ್ಣ ಜಯ ನಿಮ್ಮದಾಗಲಿದೆ. ನಿವೇಶನ ಖರೀದಿ ಮತ್ತು ಕೃಷಿ ಭೂಮಿ ಖರೀದಿ ಬಗ್ಗೆ ಜಾಗ್ರತೆ ಬೇಕು. ಅನಂತೇಶ್ವರನ ಆರಾಧನೆ ನಿಮ್ಮ ಬಾಳಿಗೆ ಹೆಚ್ಚಿನ ಶ್ರೇಯಸ್ಸು ತರಲಿದೆ. ವಿಶಾಖಾ 4ನೇ ಪಾದ, ಅನುರಾಧಾ, ಜ್ಯೇಷ್ಠ ಶುಭವಾರ: ಮಂಗಳವಾರ, ಶುಭರತ್ನ: ಹವಳ, ಶುಭದಿಕ್ಕು: ದಕ್ಷಿಣ, ಶುಭವರ್ಣ: ನಸುಗಂದು, ಶುಭಲೋಹ: ಹಿತ್ತಾಳೆ. ಧನು ಉಚ್ಚ ಸ್ಥಾನದ ಗುರುಬಲವಿದ್ದರೂ ಶನಿ, ರಾಹುಗಳು ಈ ವರ್ಷ ಅನಿಷ್ಟ ಸ್ಥಾನಸ್ಥಿತರಾದ ಅನೇಕ ವಿಧದ ಕಷ್ಟನಷ್ಟಗಳಿಗೆ ಕಾರಣವಾಗಿ ಉದ್ಯೋಗ, ವ್ಯವಹಾರಗಳಲ್ಲಿ ಅಪಯಶಸ್ಸು, ಆರ್ಥಿಕ ಅಡಚಣೆ, ವ್ಯಾಧಿಗಳು, ಮಾನಸಿಕ ಅಶಾಂತಿಗೆ ಕಾರಣವಾಗುತ್ತದೆ. ಸ್ಥಾನಚಲನ, ಕರ್ಮವಿಘ್ನ, ಬಂಧುಬಳಗದವರಿಂದ ಅನೇಕ ಕ್ಲೇಶಗಳು ಸಂಭವಿಸಿ ಮನೋಪೀಡೆಗೆ ಒಳಗಾಗಬೇಕಾದೀತು. ಮಿತ್ರರು ವಿಮುಖರಾಗುವರು. ಧನ ಸಂಪತ್ತು, ಕೌಟುಂಬಿಕ ಸುಖಾದಿಗಳು ಕ್ಷೀಣಿಸುವುವು. ಸ್ವಜನರಿಗೂ ಬಂಧುವರ್ಗದವರಿಗೂ ಹಾನಿ. ಧನವ್ಯಯ, ದೈನ್ಯತೆ, ಪಶು ಭಯಾದಿಗಳು ತೋರಿಬಂದೀತು. ಆದರೆ ವಾಹನ, ಸ್ಥಿರಾಸ್ತಿ, ವ್ಯವಹಾರ ಮೊದಲಾದ ಕಾರ್ಯಕ್ಷೇತ್ರವುಳ್ಳವರು ಇದ್ದುದರಲ್ಲೇ ಪ್ರಗತಿ ಹೊಂದಿ ಭಾಗ್ಯಶಾಲಿಗಳೆನಿಸುವರು. ವಿದ್ಯಾಕ್ಷೇತ್ರದಲ್ಲಿ ವಿದ್ಯಾರ್ಥಿಗಳು ಪ್ರಯತ್ನಬಲದಿಂದಲೇ ಮಿಶ್ರಫ‌ಲಗಳನ್ನು ಪಡೆಯುವರು. ಅನಂತರ ಅನಾರೋಗ್ಯ, ಸಂತಾನ, ಸಿದ್ಧಿ ನಿಮಿತ್ತ ಕಷ್ಟಗಳೇ ತೋರಿಬಂದರೂ ಕಾರ್ಯರಂಗದಲ್ಲಿ ಜಯ ಲಾಭಾದಿಗಳು ಉನ್ನತಿ, ಶತ್ರುಭಯ ಕಲಹಾದಿಗಳ ನಿವಾರಣೆ, ಧನ, ಸುವರ್ಣಾದಿಗಳು ಪ್ರಾಪ್ತಿ. ರೋಗಶಮನ, ಶೋಕ ಪರಿಹಾರ, ಆರ್ಥಿಕ ಅಭಿವೃದಿಟಛಿ ಮೊದಲಾದ ಫ‌ಲಗಳಿವೆ. ಜನವರಿ ತಿಂಗಳಲ್ಲಿ ದೂರದ ವ್ಯರ್ಥ ಪ್ರಯಾಣದಿಂದ ತೊಂದರೆಗಳಿದ್ದು ಧನದಾಯದ ಮಟ್ಟಿಗೆ ಉತ್ತಮ ಪ್ರಗತಿ ಇದೆ. ಮುಂದೆ ಮಾರ್ಚ್‌ ಅನಂತರ ಮಿಶ್ರ ಫ‌ಲಗಳೆ ಮುಂದುವರಿದು ಅನಾರೋಗ್ಯ, ಹಣಕಾಸು ವ್ಯವಹಾರಗಳಲ್ಲಿ ವಿರೋಧಗಳಿವೆ. ಜೂನ್‌ ಅನಂತರ ಗುರುಬಲದಿಂದ ವಿವಿಧ ಮೂಲಗಳಿಂದ ಧನಪ್ರಾಪ್ತಿ, ಆರ್ಥಿಕ ಅಭಿವೃದ್ದಿ, ಸರಕಾರದ ಕೋರ್ಟು ಕಚೇರಿ ಕೆಲಸಗಳಲ್ಲಿ ಇಷ್ಟಬಲ, ಅಧಿಕಾರಿ ಜನರ ಅನುಗ್ರಹ, ಸದಾಚಾರ ಆರೋಗ್ಯಭಾಗ್ಯ ಇತ್ಯಾದಿ ಫ‌ಲಗಳಿರುತ್ತದೆ. ಈ ಮಧ್ಯೆ ಸಾಂಸಾರಿಕ ತಾಪತ್ರಯಗಳು ಕೆಲವೊಮ್ಮೆ ಒದಗಬಹುದು. ಮುಂದೆ ಹಂತ ಹಂತವಾಗಿ ಕೆಲಸಗಳಲ್ಲಿ ಪ್ರಗತಿ, ಧನಸಮೃದ್ಧಿ, ವಿವಾಹ ಕಾರ್ಯಕ್ಕೆ ವರ್ಷ ಪೂರ್ತಿ ಉತ್ತಮ ಕಾಲವಾಗಿರುತ್ತದೆ. ಉತ್ತಮ ಕಂಕಣ ಭಾಗ್ಯವಿದೆ. ನಿಮ್ಮ ರಾಜಕೀಯ ಭವಿಷ್ಯದಲ್ಲಿ ಹೆಚ್ಚಿನ ಪ್ರಾಶಸ್ತ್ಯ ಹಾಗೂ ಸ್ಥಾನಮಾನ ದೊರಕುತ್ತದೆ. ಭವಿಷ್ಯದ ನಿಮ್ಮ ಮುಂದಿನ ಉತ್ತಮ ಜೀವನಕ್ಕೆ ಶಿವಸ್ತುತಿ, ರುದ್ರಾಭಿಷೇಕದಿಂದ ಅನುಗ್ರಹ ದೊರೆತು ಯಶಸ್ಸು ಕಂಡುಬರುತ್ತದೆ. ಮೂಲಾ, ಪೂರ್ವಾಷಾಡ, ಉತ್ತರಾಷಾಢದ 1ನೇ ಪಾದ ಶುಭವಾರ: ಗುರುವಾರ, ಶುಭರತ್ನ: ಕನಕ ಪುಷ್ಯರಾಗ, ಶುಭದಿಕ್ಕು: ಈಶಾನ್ಯ, ಶುಭವರ್ಣ: ಹಳದಿ, ಶುಭಲೋಹ: ಚಿನ್ನ ಮಕರ ಉತ್ತಮ ಗ್ರಹವಾದ ಗುರುವಿನ ದೈವಬಲ ಹೊಂದುವ ನಿಮಗೆ ಈ ವರ್ಷ ಸ್ಥಾನಮಾನಗಳು ಭದ್ರವಾಗಿದ್ದು, ವ್ಯಾಪಾರಾದಿ ಉದ್ಯಮಗಳಲ್ಲಿ ವಿಶೇಷ ಲಾಭದಾಯಕವಾಗಿರುತ್ತದೆ. ಸಂಸಾರ ಸುಖವು ತೃಪ್ತಿಕರವಾಗಿದ್ದು ವಿಶೇಷ ಸಂಭ್ರಮವಿದ್ದರೂ ಹೆಚ್ಚಿನ ಪ್ರಗತಿಯಿಲ್ಲ. ಅನಾವಶ್ಯಕ ಖರ್ಚು, ಆಪ್ತ ಜನರೆಲ್ಲ ದ್ವೇಷ ಕಟ್ಟಿಕೊಂಡು ಕಾರ್ಯದಲ್ಲಿ ವಿಘ್ನವುಂಟಾಗುವುದು. ಆರ್ಥಿಕ ಗಳಿಕೆ ಉತ್ತಮವಿದ್ದು ವಿಶೇಷ ಗೌರವವೂ ದೊರೆತು ನೆಮ್ಮದಿಗೆ ಭಂಗವಾಗದು. ಶನಿಯಿಂದ ಡಿಸೆಂಬರ್‌ ಅನಂತರ ಎಲ್ಲಾ ವಿಧದ ವೃತ್ತಿಯವರಿಗೂ ಸುಖದುಃಖ ಲಾಭಾನುಲಾಭಗಳು ಸಮಾನವೆನಿಸುತ್ತದೆ. ತೊಡಗಿದ ಕಾರ್ಯಭಾಗಗಳು ಪ್ರತಿಕೂಲ ಪರಿಸ್ಥಿತಿಗಳನ್ನು ಎದುರಿಸುತ್ತಾ ವರ್ಷದ ಕೊನೆಗೆ ತುಸು ಪ್ರಗತಿ ತೋರಿಬಂದೀತು. ಫೆಬ್ರವರಿ ತಿಂಗಳಲ್ಲಿ ವ್ಯವಹಾರದಲ್ಲಿ ಇಷ್ಟ ಸಿದ್ಧಿ. ಸದಾಚಾರ ಪ್ರವೃತ್ತಿಯಿಂದ ಗುರುಹಿರಿಯರ ದಯಾಭಾಗ್ಯ ಲಭಿಸಿ ಆರೋಗ್ಯವು ಸುಧಾರಿಸುತ್ತದೆ. ಅವಿವಾಹಿತರಿಗೆ ಉತ್ತಮ ಕಂಕಣಬಲ ಒದಗಿ ವೈವಾಹಿಕ ಸುಖ ತೋರಿಬರಲಿದೆ. ಹಾಗೇ ಗೃಹಧನಾದಿ ಲಾಭವಿದೆ. ಮಾರ್ಚ್‌ ತಿಂಗಳಲ್ಲಿ ಭೂವ್ಯವಹಾರ ಗಳನ್ನು ಈ ಅವಧಿಯಲ್ಲಿ ನಿರ್ವಹಿಸುವಾಗ ಅತೀ ಎಚ್ಚರ ಅಗತ್ಯವಿದೆ. ಬಹುದಿನಗಳ ಬಳಿಕ ಅನುಭವಿಸಿದ ಕಹಿಯ ಅನುಭವ ಇನ್ನೂ ದೂರವಾಗುವ ಕಾಲ ಸನ್ನಿಹಿತವಾಗುವ ಸಮಯವಿದು. ಇದರ ಸದುಪಯೋಗ ಮಾಡಿಕೊಂಡಲ್ಲಿ ಯಶಸ್ಸು ನಿಶ್ಚಿತವೆನ್ನಬಹುದು. ವೈಭವದ ಅಲಂಕಾರಿಕ ಉಪಕರಣಗಳು ಮನೆಯನ್ನು ಅಲಂಕರಿಸಲಿವೆ. ಒಟ್ಟಿನಲ್ಲಿ ನಿರುದ್ಯೋಗಿಗಳಿಗೆ, ವಿದ್ಯಾರ್ಥಿಗಳಿಗೆ, ಉದ್ಯೋಗಸ್ಥರಿಗೆ ಪರಿವರ್ತನೆಯನ್ನು ತಂದುಕೊಡಲಿದೆ. ಕಾರ್ಮಿಕ ವರ್ಗದವರಿಗೆ ಶ್ರಮಕ್ಕೆ ತಕ್ಕ ಯೋಗ್ಯ ಪ್ರತಿಫ‌ಲ ದೊರೆಯುತ್ತದೆ. ಬಂಧುಮಿತ್ರರ ಆಗಮನ ವರ್ಷವಿಡೀ ಸಂತಸದ ವಾತಾವರಣವನ್ನು ತಂದುಕೊಡಲಿದೆ. ನನೆಗುದಿಗೆ ಬಿದ್ದಿರುವ ಕೆಲಸ ಕಾರ್ಯಗಳನ್ನು ಕೈಗೊಳ್ಳಲು ಸಹಾಯವಾಗುತ್ತದೆ. ಮುಖ್ಯವಾಗಿ ಈ ವರ್ಷ ನಿಮ್ಮ ಆಶಾದೀಪ ಬೆಳಗುವ ಕಾಲ ಇದಾಗಿರುತ್ತದೆ. ಉತ್ತರಾಷಾಢ 2,3,4ನೇ ಪಾದ, ಶ್ರವಣಾ ಧನಿಷ್ಠಾ 1,2,3ನೇ ಪಾದ ಶುಭವಾರ: ಶನಿವಾರ, ಶುಭರತ್ನ: ಇಂದ್ರನೀಲ, ಶುಭದಿಕ್ಕು: ಪಶ್ಚಿಮ, ಶುಭವರ್ಣ: ನೀಲಿ, ಶುಭಲೋಹ: ಕಬ್ಬಿಣ. ಕುಂಭ ದೈವಬಲ ಇಲ್ಲದ ನಿಮಗೆ ಶನಿಯು ಇಷ್ಟಸ್ಥಾನದಲ್ಲಿ ಸಂಚರಿಸುವುದರಿಂದ ಶತ್ರುಗಳು ಹಿಮ್ಮೆಟ್ಟಿ ಉದ್ಯೋಗ ವ್ಯವಹಾರಗಳಲ್ಲಿ ಹೆಚ್ಚಿನ ಸ್ಥಿರತೆ ಕಾಣಬಹುದು. ಆರೋಗ್ಯವು ತುಸು ಮಟ್ಟಿಗೆ ತಾತ್ಕಾಲಿಕವಾಗಿ ಉತ್ತಮವಾಗಿ ತೋರಿದರೂ ಕಾಳಜಿ ಅಗತ್ಯವಿದೆ. ಅಷ್ಟಮದ ರಾಹುವಿನಿಂದ ಶತ್ರುಗಳ, ದಾಯಾದಿಗಳ ಕಲಹ, ಕಿರುಕುಳ ಹೆಚ್ಚುತ್ತಿರುವ ಖರ್ಚುವೆಚ್ಚಗಳಿಂದ ಧನಹಾನಿ, ಬಂಧುಗಳೊಂದಿಗೆ ವಾದವಿವಾದಗಳು ಒದಗುವುವು. ದೀಪಾವಳಿಯ ಅನಂತರ ಆರೋಗ್ಯವು ಉತ್ತಮವಿರುವುದಲ್ಲದೆ ವೈವಾಹಿಕ ಜೀವನದಲ್ಲಿ ಸುಖ, ಸಂತೋಷಗಳು, ಐಶ್ವರ್ಯ ಪ್ರಾಪ್ತಿ, ಹೆಚ್ಚಿನ ಜವಾಬ್ದಾರಿಗಳು ಹಾಗೂ ಕೆಲವೊಂದು ಮಹಣ್ತೀದ ಸಂಗತಿಗಳು ಈ ವರ್ಷ ಕೈಗೂಡುವ ಸಂಭವವಿದೆ. ಜನವರಿ ಅನಂತರ ಹೆಚ್ಚಿನ ಪ್ರಗತಿ ತೋರಿಬಾರದಿದ್ದರೂ ಧರ್ಮ ನ್ಯಾಯಗಳಿಗೆ ಸಮ್ಮತವಲ್ಲದ ಸಂಗತಿಗಳಲ್ಲಿ ಪ್ರವೃತ್ತರಾಗುವ ಪ್ರಸಕ್ತಿ ಉಂಟಾದೀತು. ಭೂವ್ಯವಹಾರಾದಿಗಳಲ್ಲಿ ಜಯ ಲಾಭ, ವ್ಯಾಜ್ಯಗಳಲ್ಲಿ ಅನುಕೂಲ ಫ‌ಲ, ಆರ್ಥಿಕ ಇಷ್ಟ ಸಿದ್ಧಿ. ಆರೋಗ್ಯದ ಕುರಿತು ಕಾಳಜಿ ಅಗತ್ಯವಿರುತ್ತದೆ ಹಾಗೂ ಲಾಭನಷ್ಟಗಳೂ ಅಧಿಕ. ಮಾರ್ಚ್‌ ತಿಂಗಳಲ್ಲಿ ತುಸು ನೆಮ್ಮದಿ ತೋರಿಬಂದರೂ ಆಹಾರ ವ್ಯತ್ಯಯದಿಂದಾಗಿ ದೇಹಾರೋಗ್ಯವು ಕೆಡುವ ಸಂಭವವಿದೆ. ಚಿಂತಿತ ಕಾರ್ಯವು ದುಷ್ಟ ಜನರಿಂದಾಗಿ ನಿಂತುಬಿಡುತ್ತದೆ. ಜೂನ್‌ ತಿಂಗಳಲ್ಲಿ ಆರ್ಥಿಕ ತಾಪತ್ರಯವಿರದಿದ್ದರೂ ಇತರ ದೃಷ್ಟಿಯಿಂದ ಅಸಮಾಧಾನಕರವಾಗಿದೆ. ಭೀತಿ ಮನೋಭಾವ ನಿತ್ಯವಾಗಿರುತ್ತದೆ. ಸುಖದುಃಖಗಳು ಸರಿಸಮಾನವಾಗಿ ಶುಭಾಶುಭ ಮಿಶ್ರ ಫ‌ಲದಾಯಕವಾಗಿರುತ್ತದೆ. ಬಹುಜನರೊಂದಿಗೆ ಕಲಹ, ದುಃಖ, ಶತ್ರು ಪೀಡೆ, ಮಿತ್ರಧನ, ಬಾರ್ಯಾದಿ ಸುಖಹಾನಿ, ಕುಟಿಲ ಮನಸ್ಸಿನಿಂದ ಇನ್ನಷ್ಟು ಹಾನಿಯಾಗದಿರಲು ಆದಷ್ಟು ಶ್ರೀಕುಲದೇವರ ಅನುಗ್ರಹ ಪಡೆಯಲು ಯತ್ನಿಸಿದಲ್ಲಿ ಇಷ್ಟಾರ್ಥ ಸಿದ್ಧಿಸಲಿದೆ. ಮುಂದೆ ದೈವಾನುಕೂಲವೂ ಒದಗಿ ಸ್ಥಾನಮಾನ, ಸಂಪತ್ತುಗಳ ಅಭಿವೃದ್ಧಿ. ಧನಿಷ್ಠಾ 2, 4ನೇ ಪಾದ, ಶತಭಿಷಾ, ಪೂರ್ವಾಭಾದ್ರಾ 1,2,3ನೇ ಪಾದ ಶುಭವಾರ: ಶನಿವಾರ ಶುಭರತ್ನ: ಕಡುನೀಲಿ, ಶುಭ ದಿಕ್ಕು: ಪಶ್ಚಿಮ ಶುಭವರ್ಣ: ಕಡು ಕಪ್ಪು, ಶುಭ ಲೋಹ: ಕಬ್ಬಿಣ. ಮೀನ ಜನ್ಮರಾಶಿಯಲ್ಲಿ ಸಂಚರಿಸುವ ರಾಹುಕೇತು, ಕಾಳಸರ್ಪ ದೋಷ, ಶನಿಗಳಿಂದಾಗಿ ಧನ ಸಂಪದಾದಿಗಳ ಹಾನಿ. ಭಯ, ದುಃಖ, ಚಿಂತೆ, ಸ್ಥಾನ ಚಲನೆ, ಸ್ವಜನ, ಗುರುಜನರ ವೈರ, ಕೆಲಸ ಕಾರ್ಯಗಳಲ್ಲಿ ಅಡ್ಡಿ, ಆತಂಕ ಹಾಗೂ ಅಸಫ‌ಲತೆ, ಶತ್ರುಗಳಿಂದ ಧನಪರಿಹಾರ, ಕುಟುಂಬ ವರ್ಗದವರಲ್ಲಿ ಅನಾವಶ್ಯಕ ತಪ್ಪು ಅಭಿಪ್ರಾಯ, ಅನಾರೋಗ್ಯ, ಪ್ರಯಾಣ ಇತ್ಯಾದಿಗಳು ಬಹುಪ್ರಕಾರ ತೋರಿಬರುತ್ತವೆ. ಅನಂತರ ಗುರುಬಲದಿಂದ ಆರೋಗ್ಯದಲ್ಲಿ ಉತ್ತಮ ಸುಧಾರಣೆ, ಶತ್ರುಗಳಿಂದ ಮುಕ್ತಿ, ದುಃಖ ಮತ್ತು ಮಾನಸಿಕ ವ್ಯಥೆಗಳು ಕಮ್ಮಿಯಾಗಲಿವೆ. ಸಂತಾನ ಚಿಂತೆ, ಸ್ವಜನರೊಡನೆ ಕಲಹವುಂಟಾದೀತು. ಮುಂದೆ ಡಿಸೆಂಬರ್‌ನಲ್ಲಿ ಆರ್ಥಿಕ ವಿಚಾರದಲ್ಲಿ ಉತ್ತಮ ಬೆಳವಣಿಗೆ ತೋರಿಬರುತ್ತದೆ. ಫೆಬ್ರವರಿ ತಿಂಗಳಲ್ಲಿ ಶತ್ರು ಸಂಬಂಧೀ ಕಷ್ಟಗಳಿಂದ ಬಿಡುಗಡೆ. ರೋಗನಾಶ, ಧನಪ್ರಾಪ್ತಿ, ಕಾರ್ಯಜಯ ಇತ್ಯಾದಿ ಹೆಚ್ಚಾಗಿ ಅನುಭವಕ್ಕೆ ಬರುತ್ತದೆ. ಆಯವ್ಯಯಗಳು ಸಮತೂಕದಲ್ಲಿ ನಿಲ್ಲಲಿರುವುದಾದರೂ ವ್ಯವಹಾರದಲ್ಲಿ ಆತ್ಮೀಯರಿಂದಲೇ ವಂಚಿತರಾಗಲಿರುವಿರಿ. ಮಾರ್ಚ್‌ ಅನಂತರ ವ್ಯಾಪಾರಿಗಳಿಗೆ ಹೆಚ್ಚಿನ ಆರ್ಥಿಕ ಸ್ಥಿತಿ ಉಂಟಾಗಿ ಬಂಧುವರ್ಗದ ಸಹಕಾರ ದೊರಕಲಿದೆ. ಜೂನ್‌ ಅನಂತರ ಅರ್ಥರ್ಜನೆಯ ಮಾರ್ಗ ಸುಗಮವಿದ್ದರೂ ಖರ್ಚಿನ ಅಂಶವು ಮಿತಿಮೀರುವುದು. ಅನಂತರ ಆರ್ಥಿಕ ಸ್ಥಿತಿಯು ಉತ್ತಮವಿದ್ದು ಸುಖೋಪಕರಣಗಳ ಸಂಗ್ರಹ ಹಾಗೂ ದೇಹಾರೋಗ್ಯ ವಿಷಯದಲ್ಲಿ ಪುಷ್ಟಿಕರವಾಗಿದ್ದು, ಅಪೇಕ್ಷಿತ ಸುಖ, ಸಿದ್ಧಿ ಉಂಟಾಗಲಿದೆ. ವಿದ್ಯಾರ್ಥಿ ವರ್ಗದವರಿಗೆ ವಿದ್ಯಾಕ್ಷೇತ್ರದಲ್ಲಿ ಹೆಚ್ಚಿನ ಪ್ರಗತಿ ತೋರಿಬಂದರೂ ಉದಾಸೀನತೆ ಸಲ್ಲದು. ಉದ್ಯೋಗದಲ್ಲಿ ಅವಕಾಶಗಳು ದೊರೆತು ಸಮಸ್ಯೆಗಳು ಪರಿಹಾರ ಕಾಣಲಿವೆ. ಮಹಿಳೆಯರಿಗೆ ದೀಪಾವಳಿಯ ಅನಂತರ ಉದ್ಯೋಗದಲ್ಲಿ ಭಡ್ತಿ, ಉನ್ನತ ವ್ಯಾಸಂಗದಲ್ಲಿ ಪ್ರಗತಿ ಇದೆ. ಆವಶ್ಯಕ ಸಂದರ್ಭದಲ್ಲಿ ಅನಿರೀಕ್ಷಿತವಾಗಿ ಫ‌ಲ ತೋರಿಬರಲಿದೆ. ಕಾಳಸರ್ಪದ ಗ್ರಹಚಾರದ ಉಪಶಮನಕ್ಕಾಗಿ ಪ್ರತೀ ಸೋಮವಾರ ಅನಂತೇಶ್ವರನ ಆರಾಧನೆ ಅನುಗ್ರಹಕರವಾಗಲಿದೆ. ಪೂರ್ವಾಭಾದ್ರಾ 4ನೇ ಪಾದ, ಉತ್ತರಾಭಾದ್ರಾ , ರೇವತಿ ಶುಭವಾರ: ಗುರುವಾರ ಶುಭರತ್ನ: ಶ್ವೇತ, ಪುಷ್ಯರಾಗ, ಶುಭದಿಕ್ಕು: ಈಶಾನ್ಯ ಶುಭವರ್ಣ: ಶುಭ್ರ ಬಿಳಿ, ಶುಭ ಲೋಹ: ಚಿನ್ನ.

ವಿವಾಹವಾಗುವ ಸ್ತ್ರೀ ಲಕ್ಷಣಗಳು ಹೀಗಿರಬೇಕೆನ್ನುತ್ತದೆ ಭವಿಷ್ಯ ಪುರಾಣ

ವಿರುದ್ಧ ಸ್ವಭಾವ ಇರುವ ಇಬ್ಬರು ವ್ಯಕ್ತಿಗಳನ್ನು ಮದುವೆ ಒಂದು ಮಾಡುತ್ತದೆ. ಹಿಂದೂ ವಿವಾಹ ಪದ್ಧತಿಯಲ್ಲಿ ಜಾತಕಕ್ಕೆ ಬಹಳಷ್ಟು ಪ್ರಾಮುಖ್ಯತೆ ಇದೆ. ಇವುಗಳ ಪ್ರಕಾರ ಯುವಕ ಯುವತಿಯ ಗುಣಾಗುಣಗಳನ್ನು ತಾಳೆಹಾಕಲಾಗುತ್ತದೆ. ಜಾತಕದಲ್ಲಿನ ಗ್ರಹ ಸ್ಥಿತಿ, ಅವುಗಳ ಸಂಚಾರದ ಮೇಲೆ ಭವಿಷ್ಯ ಆಧಾರಪಟ್ಟಿರುತ್ತದೆಂಬುದು ಭಾರತೀಯರ, ಮುಖ್ಯವಾಗಿ ಹಿಂದೂಗಳ ನಂಬಿಕೆ. ಕೇವಲ ಜಾತಕಗಳಲ್ಲಷ್ಟೇ ಅಲ್ಲ ಸ್ತ್ರೀಯ ದೈಹಿಕ ಲಕ್ಷಣಗಳೂ ಸಹ ಭವಿಷ್ಯದಲ್ಲಿ ಪ್ರಭಾವ ಬೀರುತ್ತವೆ ಎಂಬುದು ಕೆಲವರ ವಾದ. ಪುರಾತನ ಗ್ರಂಥವಾದ ಭವಿಷ್ಯ ಪುರಾಣದಲ್ಲಿ ವಿವಾಹ ಮಾಡಿಕೊಳ್ಳುವ ಮಹಿಳೆಯರಿಗೆ ಇರಬೇಕಾದ ದೈಹಿಕ ಲಕ್ಷಣಗಳ ಬಗ್ಗೆ ತಿಳಿಸಲಾಗಿದೆ. ಸ್ತ್ರೀಯರಿಗೆ ಈ ರೀತಿಯ ಲಕ್ಷಣಗಳಿದ್ದರೆ ವಿವಾಹದ ಬಳಿಕ ಗಂಡನಿಗೆ ಅಪಾರವಾದ ಅದೃಷ್ಟ, ಸಂಪತ್ತು ಸಿದ್ಧಿಸುತ್ತದಂತೆ. ದಂತಪಂಕ್ತಿ ವಕ್ರವಾಗಿ, ಅಡ್ಡದಿಡ್ಡಿಯಾಗಿ ಇಲ್ಲದ ಮಹಿಳೆಯರು ವಿವಾಹದ ಬಳಿಕ ಜೀವನ ಸಂಗಾತಿಗೆ ಅನುಕೂಲವಾಗಿ, ಸಮಚಿತ್ತದಿಂದ ಇರುತ್ತಾರೆ. ಒಂದು ವೇಳೆ ಹಲ್ಲುಗಳ ನಡುವೆ ಖಾಲಿ ಜಾಗ ಇದ್ದರೆ ನಿರಂತರ ಕಲಹ ತಪ್ಪಿದ್ದಲ್ಲ ಎನ್ನುತ್ತದೆ ಭವಿಷ್ಯ ಪುರಾಣ. ಮಹಿಳೆ ಪಾದಗಳಿಗೆ, ಜೀವನ ಸಂಗಾತಿಯ ಯಶಸ್ಸಿಗೆ ಸಂಬಂಧ ಇರುತ್ತದಂತೆ. ಪಾದಗಳು ಪೇಲವ ಬಣ್ಣದಲ್ಲಿದ್ದರೆ ಹೆಚ್ಚು ಕಷ್ಟಗಳಿಗೆ ಅದು ಸಂಕೇತ. ಪಾದ ಕೆಂಪು ಅಥವಾ ಗುಲಾಬಿ ಬಣ್ಣದಲ್ಲಿದ್ದರೆ ಗಂಡನಿಗೆ ಸಂಪತ್ತು, ಸ್ಥಾನಮಾನಗಳು ಹೆಚ್ಚುತ್ತವಂತೆ.ಹಣೆಯ ಮೇಲೆ ಮೂರು ಗೆರೆಗಳು ಇರುವ ಮಹಿಳೆಯನ್ನು ಮದುವೆಯಾದರೆ ಸಂಗಾತಿಗೆ ಅದು ದೊಡ್ಡ ಅದೃಷ್ಟ ಎಂದು ನಂಬುತ್ತಾರೆ. ಇವರಿಗೆ ಶಿವನ ಆಶೀರ್ವಾದ ಇರುವುದರಿಂದ ಈ ರೀತಿ ನಡೆಯುತ್ತದಂತೆ. ಕಾಂತಿಯುತವಾದ, ಮೃದುವಾದ ಚರ್ಮ ಇರುವ ಮಹಿಳೆಯರು ಅನುಕೂಲಸ್ಥರಾಗಿ ಬದುಕುತ್ತಾರೆ. ಈ ರೀತಿ ಇರುವವರು ಗಂಡನಿಗೆ ಯಾವಾಗಲೂ ಒತ್ತಾಸೆಯಾಗಿ ನಿಲ್ಲುತ್ತಾರಂತೆ. ಚರ್ಮದ ಮೇಲೆ ಗೆರೆಗಳು, ಸುಕ್ಕುಗಳು ಇದ್ದರೆ ಗಂಡನಿಗೆ ಕಷ್ಟಗಳು ತಪ್ಪಿದ್ದಲ್ಲ, ದುರದೃಷ್ಟ ಅವರನ್ನು ಕಾಡುತ್ತಿರುತ್ತದೆ. ಅಷ್ಟೇ ಅಲ್ಲದೆ ಇವರು ಸದಾ ಗಲಾಟೆಯಲ್ಲೇ ಕಾಲ ತಳ್ಳುತ್ತಾರಂತೆ. ಚಿಕ್ಕದಾಗಿರುವಂತಹ ಕುತ್ತಿಗೆ ಆನಂದಕ್ಕೆ, ಕಾರ್ಪಣ್ಯಕ್ಕೆ ಚಿನ್ಹೆ ಇದ್ದಂತೆ. ಮಹಿಳೆಯರ ಕುತ್ತಿಗೆ ಮೇಲೆ ಗೆರೆಗಳು ಸ್ಪಷ್ಟವಾಗಿ ಕಾಣಿಸುತ್ತಿದ್ದರೆ ಅದೃಷ್ಟಕ್ಕೆ ಸಂಕೇತವಂತೆ. ಮದುವೆ ಎಂಬ ಅಂಶದಲ್ಲಿ ಮಹಿಳೆಯರ ಹುಬ್ಬುಗಳಿಗೆ ಅಧಿಕ ಪ್ರಾಧಾನ್ಯತೆ ಇರುತ್ತದೆ. ಮಹಿಳೆಯರ ಹುಬ್ಬುಗಳು ಬಿಲ್ಲಿನ ಆಕಾರದಲ್ಲಿ ಬಾಗಿದ್ದರೆ ಅವು ಜೀವನದಲ್ಲಿ ಲಕ್ಷ್ಮಿ ಕೃಪಾಕಟಾಕ್ಷ, ಯಶಸ್ಸಿನ ಸಂಕೇತಗಳು. ಮೃದುವಾದ ಧ್ವನಿ ಇರುವ ಮಹಿಳೆಯರು ಚಿತ್ತಸ್ತಿಮಿತದಿಂದ ಇರುತ್ತಾರೆ. ಇಂತಹವರೊಂದಿಗೆ ಜೀವನ ಆನಂದಕರವಾಗಿ ಸಾಗುತ್ತದೆ ಎನ್ನುತ್ತದೆ ಭವಿಷ್ಯ ಪುರಾಣ. ಇದು ಈ ಕಾಲಕ್ಕೆ ಎಷ್ಟರ ಮಟ್ಟಿಗೆ ಅನ್ವಯಿಸುತ್ತದೋ ಗೊತ್ತಿಲ್ಲ!

ಗೋಮೂತ್ರದಿಂದ ಕ್ಯಾನ್ಸರ್, ಕ್ಷಯಾದಿ ರೋಗಗಳು ದೂರ!

ವೇದಗಳು, ಮಂತ್ರಗಳು, ಪುರಾಣಗಳಿಗೆ ಭಾರತ ತವರುಮನೆ. ಕೆಲವು ಸಾವಿರ ವರ್ಷಗಳ ಹಿಂದೆ ದೇವತೆಗಳ ನಡೆದಾಡಿದ ಈ ಪುಣ್ಯಭೂಮಿ ಮೇಲೆ ವನ್ಯಪ್ರಾಣಿಗಳೂ ಸಹ ಗೌರವ ಪಡೆದುಕೊಂಡವು. ಅಂತಹವುಗಳಲ್ಲಿ ವಿಶೇಷವಾದ ಪ್ರಾಣಿ ಗೋವು. ಹಸುವಿನಿಂದ ಬರುವ ಹಾಲು, ಮೊಸರು, ಬೆಣ್ಣೆ, ಸಗಣಿ, ಮೂತ್ರಗಳನ್ನು ಪಂಚಗವ್ಯಗಳು, ಪಂಚಾಮೃತ ಎಂದು ಕರೆಯುತ್ತಾರೆ. ಗೋಮೂತ್ರ ಮನುಷ್ಯನ ದೇಹದಲ್ಲಿನ ಕಾಯಿಲೆಗಳಿಗೆ ಕಾರಣವಾಗುವ ಮಲಿನಗಳನ್ನು ನಿರ್ಮೂಲನ ಮಾಡುತ್ತದೆ. ಸೌದೆಯನ್ನು ಅಗ್ನಿ ದಹಿಸಿದಂತೆ ಈ ಪಂಚಗವ್ಯಗಳು ಮಾನವ ದೇಹದಲ್ಲಿನ ವ್ಯಾಧಿಗಳನ್ನು ಸುಟ್ಟುಹಾಕುತ್ತವೆ. ಗೋಮೂತ್ರದಿಂದ ಮಾನವರಿಗೆ ಉಂಟಾಗುವ ಅನೇಕ ಪ್ರಯೋಜನಗಳು ಜಗತ್ತಿನಾದ್ಯಂತ ನಡೆದ ವಿವಿಧ ಸಂಶೋಧನೆಗಳಲ್ಲಿ ಸಾಬೀತಾಗಿವೆ. ಗೋಮೂತ್ರವನ್ನು ಕೇವಲ ಪುರಾತನ ಕಾಲದ ಆಯುರ್ವೇದದಲ್ಲಿ ಅಷ್ಟೇ ಅಲ್ಲದೆ, ಪ್ರಸ್ತುತ ಪಾಶ್ಚಿಮಾತ್ಯ ದೇಶಗಳಲ್ಲೂ ಸಹ ಅನೇಕ ಔಷಧಿಗಳ ತಯಾರಿಕೆಯಲ್ಲಿ ಬಳಸುತ್ತಿದ್ದಾರೆ. ಭಾರತ ದೇಶದಲ್ಲಿನ ಅನೇಕ ಗ್ರಾಮಗಳಲ್ಲಿ ಇಂದಿಗೂ ಗೋಮೂತ್ರವನ್ನು ಯಾಕೆ ಚೆಲ್ಲುತ್ತಾರೆಂದರೆ ಅದರಲ್ಲಿ ಕ್ರಿಮಿನಾಶಕ ರಾಸಾಯನಿಕಗಳು ಇರುತ್ತವೆ. ಅಷ್ಟೇ ಅಲ್ಲದೆ ಹಸುವಿನ ಸಗಣಿ ಸಹ ಗೋಡೆಗಳಿಗೆ ಬಳಿಯುವುದರಿಂದ ಅಲ್ಲಿನ ಪರಿಸರ ಸ್ವಚ್ಛವಾಗಿರುತ್ತದಷ್ಟೇ ಅಲ್ಲ, ರೋಗಗಳ ನಿವಾರಣೆಗೂ ಸಹ ಇದು ಸಹಕಾರಿ. ಕಹಿಯಾಗಿ, ಬೆಚ್ಚಗೆ ಇರುವ ಗೋಮೂತ್ರದಿಂದ ಉದರ ಸಂಬಂಧಿ ಸಮಸ್ಯೆಗಳು ನಿವಾರಣೆಯಾಗುತ್ತವೆ. ಇದು ವಾತ ಪಿತ್ತಗಳನ್ನು ಸರಿತೂಗಿಸುತ್ತದೆ. ಇದರಲ್ಲಿ ಪೊಟ್ಯಾಷಿಯಂ, ಕ್ಯಾಲ್ಸಿಯಂ, ಕ್ಲೋರೈಡ್, ಯೂರಿಯಾ, ಅಮೋನಿಯಾ, ಸಲ್ಫರ್, ಯೂರಿಕ್ ಆಸಿಡ್, ಫಾಸ್ಫೇಟ್, ಮ್ಯಾಂಗನೀಸ್, ಕಾರ್ಬೋಲಿಕ್ ಆಸಿಡ್‌ನಂತಹ ಖನಿಜ ಲವಣಗಳಷ್ಟೇ ಅಲ್ಲದೆ ವಿಟಮಿನ್ ಎ, ಬಿ, ಡಿ, ಇ ಗಳು ಇವೆ ಎಂದು ಆಧುನಿಕ ಸಂಶೋಧನೆಗಳಲ್ಲಿ ಪತ್ತೆಯಾಗಿದೆ. ಕೇವಲ ಗ್ಯಾಸ್ಟ್ರಿಕ್, ಅಸಿಡಿಟಿ ಸಮಸ್ಯೆಗಳಷ್ಟೇ ಅಲ್ಲದೆ ಹಲವಾರು ಕಾಯಿಲೆಗಳನ್ನು ಗುಣಪಡಿಸುತ್ತದೆ ಗೋಮೂತ್ರ. ಕ್ಯಾನ್ಸರ್, ಹಿಸ್ಟೀರಿಯಾ, ಕ್ಷಯದಂತಹ ಭಯಾನಕ ಕಾಯಿಲೆಗಳನ್ನೂ ವಾಸಿ ಮಾಡುವ ಗುಣಗಳು ಗೋಮೂತ್ರದಲ್ಲಿವಿಯೆಂದು ಅಧ್ಯಯನಗಳಿಂದ ಗೊತ್ತಾಗಿದೆ. ತೀವ್ರವಾದ ಕಾಯಿಲೆಗಳಿಂದ ರಕ್ಷಿಸುವ ಗುಣ ಗೋಮೂತ್ರದಲ್ಲಿದೆ. ಆಕ್ಸೀಕರಣದಿಂದ ದೇಹದ ಕಣಗಳಲ್ಲಿನ ಹಾನಿಗೊಳಗಾದ ಡಿಎನ್‌ಎಯನ್ನು ರಕ್ಷಿಸುತ್ತದೆ. ನರಗಳ ದೌರ್ಬಲ್ಯವನ್ನು ಸಹ ಸರಿಪಡಿಸುತ್ತದೆ. ಅಧಿಕ ರಕ್ತದ ಒತ್ತಡವನ್ನು ಸಹ ನಿಯಂತ್ರಿಸಿ ಹೃದಯದ ಕೆಲಸವನ್ನು ಉತ್ತಮಗೊಳಿಸುತ್ತದೆ. ಹಸುವಿನ ಹಾಲು, ತುಪ್ಪ, ಮೊಸರಿನಲ್ಲಿ ಅತ್ಯಧಿಕ ಪೋಷಕಾಂಶಗಳಿರುತ್ತವೆ. ಹಾಗಾಗಿ ಪೋಷಕಾಹಾರ ಲೋಪದಿಂದ ಬಳಲುವವರು ಇವುಗಳನ್ನು ತೆಗೆದುಕೊಂಡರೆ ಪ್ರಯೋಜನ ಇರುತ್ತದೆ. ತುಪ್ಪದಿಂದ ದೈಹಿಕ, ಮಾನಸಿಕ ಸಾಮರ್ಥ್ಯ ವೃದ್ಧಿಯಾಗುತ್ತದೆ.

Thursday, 7 December 2017

ಸಿಜೇರಿಯನ್‌ಗೂ ಜ್ಯೋತಿಷ್ಯದ ನಂಟು

ಈಗ ಎಲ್ಲೆಡೆಯೂ ಸಿಜೇರಿಯನ್‌ ಹೆರಿಗೆ ಸಾಮಾನ್ಯವಾಗಿದೆ. ತಾಯಿ ಮತ್ತು ಮಗುವಿನ ಆರೋಗ್ಯ ದೃಷ್ಟಿಯಿಂದ ಅಥವಾ ತುರ್ತು ಪರಿಸ್ಥಿತಿಯಲ್ಲಿ ಮಾಡಲಾಗುವ ಇಂಥ ಹೆರಿಗೆಗೆ ಜ್ಯೋತಿಷ್ಯ ವಿಜ್ಞಾನ ಹೇಗೆ ಅನ್ವಯವಾಗುತ್ತದೆ ಎಂಬುದನ್ನು ತಿಳಿದುಕೊಳ್ಳಲು ಇಲ್ಲಿ ಓದಿ. ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ, ಜಗತ್ತಿನಲ್ಲಿ ಶೇ. 10 ರಿಂದ 15 ರಷ್ಟು ಹೆರಿಗೆಗಳು ಸಿಜೇರಿಯನ್‌ ಶಸ್ತ್ರಚಿಕಿತ್ಸೆಯಿಂದ ಆಗುತ್ತವೆ. ಮುಂದುವರಿದ ದೇಶಗಳಲ್ಲಿ ಅತ್ಯಂತ ಸಾಮಾನ್ಯಹೆರಿಗೆ ಪ್ರಕ್ರಿಯೆಯಾಗಿದ್ದ ಈಗ ಇದು ಭಾರತದಂತಹ ಮುಂದುವರಿಯುತ್ತಿರುವ ದೇಶದಲ್ಲೂ ಸಾಮಾನ್ಯವಾಗಿದೆ. ಸಿಜೇರಿಯನ್‌ ಹೆರಿಗೆಯನ್ನು ಅತ್ಯಂತ ತುರ್ತು ಸಂದರ್ಭಗಳಲ್ಲಿ ಮಾಡಲಾಗುತ್ತದೆ ಅಥವಾ ತಾಯಿ ಮತ್ತು ಮಗುವಿನ ಆರೋಗ್ಯ ದೃಷ್ಟಿಯಿಂದ ಮೊದಲೇ ದಿನ ನಿಗದಿಗೊಳಿಸಿ ಸಿಜೇರಿಯನ್‌ ಮಾಡಿ ಮಗುವನ್ನು ಹೊರಗೆ ತೆಗೆಯಲಾಗುತ್ತದೆ. ಈ ರೀತಿ ಮಾಡುವಾಗ ಜ್ಯೋತಿಷ್ಯಕ್ಕೆ ಸಂಬಂಧಪಟ್ಟಂತೆಯೂ ಕೆಲವು ಅಂಶಗಳನ್ನು ನೆನಪಿನಲ್ಲಿಟ್ಟುಕೊಳ್ಳಬೇಕು. ದಂಪತಿ ಜಾತಕ ವಿಶ್ಲೇಷಣೆ ಸಿಜೇರಿಯನ್‌ನಲ್ಲಿ ಜ್ಯೋತಿಷ್ಯ ಶಾಸ್ತ್ರವು ಎರಡು ವಿಧಗಳಲ್ಲಿ ಸಹಾಯಕವಾಗುತ್ತದೆ. ಮೊದಲನೆಯದಾಗಿ ದಂಪತಿ ಜಾತಕಗಳ ವಿಶ್ಲೇಷಣೆಯಿಂದ ಸಿಜೇರಿಯನ್‌ ಹೆರಿಗೆಯ ಸಾಧ್ಯತೆಗಳನ್ನು ಕಂಡು ಹಿಡಿಯುವುದು ಹಾಗೂ ಎರಡನೆಯದಾಗಿ ಸಿಜೇರಿಯನ್‌ ಶಸ್ತ್ರಚಿಕಿತ್ಸೆಗೆ ಶ್ರೇಷ್ಠ ಸಮಯವನ್ನು ನಿರ್ಧರಿಸುವುದು. ತಾಯಿ ಮತ್ತು ಮದು ಆರೋಗ್ಯದಿಂದಿರಲು ಹಾಗೂ ಮಗುವಿನ ಉಜ್ವಲ ಭವಿಷ್ಯಕ್ಕೆ ಉತ್ತಮ ಮುಹೂರ್ತಗಳನ್ನು ನಿರ್ಧರಿಸಲಾಗುತ್ತದೆ. ಕುಂಡಲಿ ಯೋಗ ಪತಿ ಅಥವಾ ಪತ್ನಿಯ ಕುಂಡಲಿಯಲ್ಲಿ ಈ ಕೆಳಗೆ ಹೇಳಿರುವ ಯೋಗಗಳಲ್ಲಿ ಯಾವುದಾದರೊಂದು ಯೋಗವಿದ್ದರೆ ಅವರಿಗೆ ಸಿಜೇರಿಯನ್‌ ಹೆರಿಗೆಯ ಮೂಲಕ ಮಗು ಜನಿಸುತ್ತದೆ. ಅವು ಯಾವುವೆಂದರೆ, 1. ಕರ್ಕ ಲಗ್ನವಿದ್ದು, ಪಂಚಮೇಶನು ಅಷ್ಟಮ ಅಥವಾ ದ್ವಾದಶ ಭಾವದಲ್ಲಿರುವುದು. 2. ಧನು ಲಗ್ನವಿದ್ದು, ಮಂಗಳನು ಅಷ್ಟಮ ಅಥವಾ ದ್ವಾದಶ ಭಾವದಲ್ಲಿರುವುದು. 3. ಮಂಗಳನು ಪಂಚಮ, ದಶಮ, ಏಕಾದಶ ಅಥವಾ ದ್ವಿತೀಯ ಭಾವದಲ್ಲಿರುವುದು. 4. ಪಂಚಮೇಶನು ಮಂಗಳನ ಪ್ರಭಾವದಲ್ಲಿರುವುದು. 5. ಪಂಚಮೇಶನು ಷಷ್ಠ, ಅಷ್ಟಮ ಅಥವಾ ದ್ವಾದಶ ಭಾವದಲ್ಲಿರುವುದು 6. ಪಂಚಮೇಶನು ಷಷ್ಠೇಶ, ಅಷ್ಟಮೇಶ ಅಥವಾ ದ್ವಾದಶೇಷರಿಂದ ಯುತ, ದೃಷ್ಟ ಅಥವಾ ರಾಶಿ ಪರಿವರ್ತನದಲ್ಲಿದ್ದರೆ 7. ಶಿಶು ಜನನ ಕಾಲದಲ್ಲಿ ಪಂಚಮ ಭಾವವು ಪಾಪಗ್ರಹಗಳ ಪ್ರಭಾವದಲ್ಲಿರುವುದು 8. ಮಗುವಿನ ಜನನ ಕಾಲದಲ್ಲಿ ತಂದೆ ಅಥವಾ ತಾಯಿಯ ದಶಾನಾಥರು ದ್ವಿತೀಯ, ಷಷ್ಠ, ಸಪ್ತಮ, ಅಷ್ಟಮ ಅಥವಾ ದ್ವಾದಶ ಭಾವಗಳೊಂದಿಗೆ ಅಥವಾ ಮಂಗಳ ಗ್ರಹದೊಂದಿಗಿದ್ದರೆ. ಈ ಮೇಲಿನ ಎಲ್ಲಾ ಯೋಗಗಳಲ್ಲಿ ಮಗುವಿನ ಜನನವು ಸಿಜೇರಿಯನ್‌ ಮೂಲಕ ಆಗುತ್ತದೆ. ಉತ್ತಮ ಸಮಯ ಸಾಮಾನ್ಯವಾಗಿ ಪ್ರಸವದ ಸಂಭಾವ್ಯ ದಿನಗಳಿಗಿಂತ ಮೊದಲು ಗರ್ಭಿಣಿಯ ಮತ್ತು ಗರ್ಭದೊಳಗೆ ಶಿಶುವಿನ ಸ್ಥಿತಿಯ ಅನುಸಾರ ಪ್ರಸವದ ವಿಧಾನವನ್ನು ನಿರ್ಧರಿಸಲಾಗುತ್ತದೆ. ಅಂದರೆ ಸಿಜೇರಿಯನ್‌ ಮಾಡಲು ಕನಿಷ್ಠ ನಾಲ್ಕೈದು ದಿನಗಳ ಸಮಯಾವಕಾಶವಿರುತ್ತದೆ. ಆಗ ನಾವು ಉತ್ತಮವಾದ ಸಮಯ ಅಥವಾ ಮುಹೂರ್ತವನ್ನು ನಿರ್ಧರಿಸಬಹುದು. ಈ ವೇಳೆಯಲ್ಲಿ ಈ ಕೆಳಗಿನ ಅಂಶಗಳನ್ನು ಗಮನದಲ್ಲಿಟ್ಟುಕೊಳ್ಳಿ. 1. ಜನ್ಮ ಸಮಯದಲ್ಲಿ ಚಂದ್ರನು ರೇವತಿ, ಅಶ್ವಿನಿ, ಆಶ್ಲೇಷಾ, ಮಘಾ, ಜೇಷ್ಠಾ ಮತ್ತು ಮೂಲ ನಕ್ಷ ತ್ರಗಳಲ್ಲಿರಬಾರದು. 2. ಅಮಾವಾಸ್ಯೆ, ಸಂಕ್ರಾಂತಿ ಅಥವಾ ಗ್ರಹಣ ಕಾಲದಲ್ಲಿ ಜನನವಾಗಬಾರದು. 3. ಲಗ್ನದ ಪ್ರಾರಂಭ ಅಥವಾ ಸಮಾಪ್ತಿಯ ಅರ್ಥಾತ್‌ ಸಂಧಿ ಕಾಲವನ್ನು ಸಿಜೇರಿಯನ್‌ಗೆ ನಿಗದಿಪಡಿಸಬಾರದು. 4. ಲಗ್ನ ನಿರ್ಧರಿಸುವ ಸಮಯದಲ್ಲಿ ಕೇಂದ್ರ, ತ್ರಿಕೋನ ಭಾವಗಳಲ್ಲಿ ಅಧಿಕ ಗ್ರಹಗಳಿರಬೇಕು, ಷಷ್ಠ-ಅಷ್ಟಮ-ದ್ವಾದಶ ಭಾವಗಳಲ್ಲಿ ಗ್ರಹಗಳಿರಬಾರದು. ಇದ್ದರೂ ಲಗ್ನೇಶ, ಪಂಚಮೇಶ, ಭಾಗ್ಯೇಶ ಅಥವಾ ದಶಮೇಶನಿರಬಾರದು. 5. ತ್ರಿಕೋನೇಶ ಮತ್ತು ಕೇಂದ್ರೇಶದಲ್ಲಿ ಯುತಿ, ದೃಷ್ಟಿ ಅಥವಾ ರಾಶಿ ಪರಿವರ್ತನಾ ಸಂಬಂಧವಿರಬೇಕು. ಕಾಲ ಸರ್ಪಾದಿ ಯೋಗಗಳಿರಬಾರದು. 6. ಹಂಸ, ಮಾಲವ್ಯ, ಗಜಕೇಸರಿ, ರಾಜಯೋಗಾದಿ ಶುಭ ಯೋಗಗಳಿರಬೇಕು. ಪಂಚಮ ಭಾವವು ರಾಹುವಿನ ಪ್ರಭಾವದಲ್ಲಿರಬಾರದು. ಸಪ್ತಮ ಭಾವವು ಮಂಗಳಾದಿ ಪಾಪ ಗ್ರಹಗಳಿಂದ ಯುಕ್ತ ಅಥವಾ ದೃಷ್ಟವಾಗಿರಬಾರದು. 7. ಅಷ್ಟಮ ಭಾವದಲ್ಲಿ ರಾಹು-ಗುರು, ರಾಹು-ಚಂದ್ರ-ಸೂರ್ಯ ಅಥವಾ ರಾಹು-ಲಗ್ನೇಶರ ಯುತಿಯೂ ಇರಬಾರದು. ಸಿಜೇರಿಯನ್‌ ಸಮಯವನ್ನು ನಿರ್ಧರಿಸುವಾಗ ಲಗ್ನವು ನವಾಂಶದಲ್ಲಿ ಶುಭ ಭಾವದಲ್ಲಿರಬೇಕು. 8. ಶುಭ ಭಾವೇಶರ ದಶಾಗಳು ಜೀವನದ ಪೂರ್ವಾರ್ಧದಲ್ಲಿ ಬರುವಂತೆ ಜನ್ಮ ನಕ್ಷ ತ್ರವನ್ನು ನಿರ್ಧರಿಸಬೇಕು. ಒಟ್ಟಿನಲ್ಲಿ ಯಾವುದೇ ಕಾರ್ಯವನ್ನು ಆರಂಭಿಸುವ ಪೂರ್ವದಲ್ಲಿ ಮುಹೂರ್ತವನ್ನು ನಿರ್ಧರಿಸುವಂತೆ ಸಿಜೇರಿಯನ್‌ ಮೂಲಕ ಮಗುವಿನ ಜನನದ ಮುಹೂರ್ತವನ್ನು ನಿರ್ಧರಿಸಿ ಅದರ ಜೀವನ ಅಥವಾ ಭಾಗ್ಯದ ದಿಶೆಯನ್ನು ಬದಲಿಸಬಹುದು.

ಕಾಳಸರ್ಪ 'ಯೋಗಾಯೋಗ' 1.ಅನಂತ ಕಾಳಸರ್ಪ: -7.ತಕ್ಷಕ ಕಾಳಸರ್ಪ:

ಶ್ರುತಿ ಶ್ರೀವಾಸ್ತವ ಜಾತಕದಲ್ಲಿರೋ ಅದೆಷ್ಟೋ ಯೋಗಗಳಲ್ಲಿ ಕಾಳಸರ್ಪ ಯೋಗವೂ ಒಂದು. ಕಾಲ ಎಂದರೆ ಸಾವು. ಸರ್ಪ ಎಂದರೆ ಹಾವು. ಕಾಲವನ್ನು ಸಮಯ ಅಂತಾನೂ ಗುರುತಿಸಬಹುದು. ಸರ್ಪ ಅಂದ್ರೆ ಭಯ. ಅಂದ್ರೆ ಭಯದ ಕಾಲ ಅಂತಾನೂ ಅರ್ಥೈಸಿಕೊಳ್ಳ ಬಹುದು. ಭಯಪೀಡಿತ ವ್ಯಕ್ತಿ ಮಾನಸಿಕವಾಗಿ ಅಸ್ವಸ್ಥನಾಗ್ತಾನೆ, ಇನ್ನಿಲ್ಲದ ತೊಂದರೆಗೆ ಸಿಕ್ಕಿ ಹಾಕೊಳ್ತಾನೇ ಅನ್ನೋದು ಜ್ಯೋತಿಷ್ಯ ಶಾಸ್ತ್ರದ ಅಂಬೋಣ. ಮನೋವಿಜ್ಞಾನಿಗಳು ಈ ಅಂಶವನ್ನೇ ಹೇಳ್ತಾರೆ. ಎಲ್ಲಿಯವರೆಗೆ ನೀವು ಭಯಪೀಡಿತರಾಗಿರ್ತೀರೋ ಅಲ್ಲಿಯವರೆಗೆ ರೋಗಗಳು ನಿಮ್ಮನ್ನು ಕಾಡುತ್ತವೆ ಅಂತ. ವೈಜ್ಞಾನಿಕ ದೃಷ್ಟಿಕೋನದಲ್ಲಿ ಹೇಳೋದಾದ್ರೆ ಕಾಳಸರ್ಪ ಯೋಗ ಅನ್ನೋದು ಮನಸ್ಸಿನ ಭೀತಿಗೆ ಸಂಬಂಧಿಸಿದ್ದು. ಭಾರತೀಯ ಜ್ಯೋತಿಷ್ಯಶಾಸ್ತ್ರದಲ್ಲಿ ರಾಹು ಮತ್ತು ಕೇತುವನ್ನು ಸರ್ಪಕ್ಕೆ ಹೋಲಿಸಿದ್ದಾರೆ. ಹಾಗಾಗಿ ಜಾತಕದಲ್ಲಿ ರಾಹು ಇರುವ ಸ್ಥಾನವನ್ನು ಸರ್ಪದ ಶಿರೋಭಾಗವೆಂತಲೂ, ಕೇತುವಿನ ಸ್ಥಾನವನ್ನು ಸರ್ಪದ ಬಾಲದ ತುದಿಗೂ ಹೋಲಿಸುತ್ತಾರೆ. ಸರ್ಪದ ತಲೆ ಮತ್ತು ಬಾಲದ ನಡುವೆ ಇನ್ನುಳಿದ ಗ್ರಹಗಳು (ರವಿ, ಸೋಮ, ಕುಜ, ಶುಕ್ರ, ಬುಧ, ಗುರು, ಶನಿ) ಇದ್ದರೆ ಆ ಯೋಗವನ್ನು ಕಾಳಸರ್ಪ ಯೋಗವೆನ್ನುತ್ತಾರೆ. ಅಂತಹ ಯೋಗದಲ್ಲಿ ಜನಿಸಿದವರು ಸಾಕಷ್ಟು ಕಷ್ಟ, ನಷ್ಟಗಳನ್ನು ಅನುಭವಿಸುತ್ತಾರೆ ಎನ್ನುವ ನಂಬಿಕೆಯಿದೆ. ಕೆಲವರಂತೂ ಕಾಳಸರ್ಪ ಯೋಗವನ್ನು ದೋಷಕ್ಕೆ ಹೋಲಿಸುತ್ತಾರೆ. ಕಾಳಸರ್ಪ ದೋಷದಿಂದ ವಿಮುಕ್ತಿ ಹೊಂದಲು ಸುಬ್ರಹ್ಮಣ್ಯ ಸ್ವಾಮಿಯ ಪೂಜೆ ಮಾಡಬೇಕೆಂಬುದು ಕೆಲವರ ಅಭಿಪ್ರಾಯ. ಮತ್ತೆ ಕೆಲವರು ಕಾಳಸರ್ಪ ದೋಷ ಪರಿಹಾರಕ್ಕಾಗಿ ಕಾಳಸರ್ಪ ಯಂತ್ರವನ್ನು ಮನೆಯೊಳಗಿಟ್ಟು ಪೂಜಿಸುವುದುಂಟು. ಅದರಿಂದಾಗಿ ಸಕಾರಾತ್ಮಕ ಪರಿಣಾಮಗಳು ಉಂಟಾಗುತ್ತವೆ ಎನ್ನುವ ನಂಬಿಕೆಯಿದೆ. ಆದರೆ ಗ್ರಹಗಳ ಚಲನೆ ಒಂದು ರಾಶಿಯಿಂದ ಮತ್ತೊಂದು ರಾಶಿಗೆ ನಿರಂತರವಾಗಿ ನಡೆಯುತ್ತಲೇ ಇರುತ್ತವೆ. ಹಾಗಾಗಿ ಜಾತಕನ ಗ್ರಹಕೂಟದಲ್ಲಿ ರಾಹು, ಕೇತುಗಳ ಸ್ಥಾನದಲ್ಲಿ ಬದಲಾವಣೆಯಾಗುತ್ತಲೇ ಇರುತ್ತದೆ. ಹಾಗಾಗಿ ಕಾಳಸರ್ಪ ದೋಷವಿದ್ದರೂ ಮನುಷ್ಯನ ಸ್ವಭಾವದ ಮೇಲಾಗುವ ಪರಿಣಾಮಗಳು ಬೇರೆಯಾಗೇ ಇರುತ್ತವೆ. ಅದಕ್ಕೆ ಕಾರಣವೂ ಇಲ್ಲದಿಲ್ಲ. ಒಂದೊಮ್ಮೆ ನಿಮ್ಮ ಜಾತಕದಲ್ಲಿ ಕಾಳಸರ್ಪ ಯೋಗವಿದ್ರೂ ಹೆದರಿಕೊಳ್ಳೋ ಅವಶ್ಯಕತೆ ಇಲ್ಲ. ಜನ್ಮ ಕುಂಡಲಿಯಲ್ಲಿ ರಾಹು ಮತ್ತು ಕೇತುವಿನ ಸ್ಥಾನಕ್ಕೆ ಅನುಗುಣವಾಗಿ ಕಾಳಸರ್ಪ ಯೋಗವನ್ನು ಏಳು ಭಾಗಗಳಾಗಿ ವಿಂಗಡಿಸಲಾಗಿದೆ. ಅದರ ಆಧಾರದ ಮೇಲೆ ಜ್ಯೋತಿಷಿಗಳು ಜಾತಕನ ಫಲವನ್ನು ಹೇಳುತ್ತಾರೆ. ಏಳು ಬಗೆಯ ಕಾಳಸರ್ಪ ಯೋಗಗಳೆಂದರೆ, ಅನಂತ, ಕಾಳಿಕಾ, ವಾಸುಕಿ, ಶಂಖಪಾಲ, ಪದ್ಮ, ಮಹಾಪದ್ಮ ಮತ್ತು ತಕ್ಷ ಕ. ವೈಜ್ಞಾನಿಕ ದೃಷ್ಟಿಕೋನದಲ್ಲಿ ಹೇಳುವುದಾದರೆ ರಾಹು ಸಂಬಂಧಿತ ಆಹಾರ ಅಂದರೆ ಉದ್ದು. ಅದರ ಸೇವನೆಯನ್ನು ಹೆಚ್ಚಾಗಿ ಮಾಡುವುದರಿಂದ ಶರೀರದಲ್ಲಿ ಟಾಕ್ಸಿಕ್‌ಅಂಶ ಹೆಚ್ಚುತ್ತದೆ. ವಾತದೋಷ ಉಂಟಾಗುತ್ತದೆ. ದೋಷದ ಕಾರಣ ವಾಯು ನೋವು ಮತ್ತಿತರ ಸಮಸ್ಯೆಗಳು ಕಾಣಬಹುದು. ಆ ಕಾರಣ ಮನೋ ನಿಯಂತ್ರಣ ಮಾಡಿಕೊಳ್ಳಬೇಕು.ಧ್ಯಾನ, ಪ್ರಾಣಾಯಾಮ ಕ್ರಿಯೆಗಳಲ್ಲಿ ತೊಡಗಿಸಿಕೊಂಡು ದೇಹವನ್ನು ಶಿಸ್ತುಬದ್ಧವಾಗಿ ಇಟ್ಟುಕೊಳ್ಳಬೇಕು. ಆಗ ಕಾಳಸರ್ಪ ದೋಷ ಕುರಿತಂತೆ ಅನಗತ್ಯವಾಗಿ ಭಯ ಪಡುವಅಗತ್ಯವಿಲ್ಲ. 1.ಅನಂತ ಕಾಳಸರ್ಪ: ಲಗ್ನದಲ್ಲಿ ರಾಹುವಿದ್ದು ಕೇತು ಏಳನೆಯ ಮನೆಯಲ್ಲಿದ್ದರೆ ಜಾತಕನಿಗೆ ಅನಂತ ಕಾಳಸರ್ಪ ಯೋಗವಿರುತ್ತದೆ. ಅಂತಹ ಜಾತಕನು ವೃಥಾ ಅಪವಾದಕ್ಕೆ ಗುರಿಯಾಗುತ್ತಾನೆ. ಕೋರ್ಟು, ಕಚೇರಿ ವ್ಯವಹಾರಗಳಲ್ಲಿ ತೊಂದರೆ ಅನುಭವಿಸುತ್ತಾನೆ ಎನ್ನಲಾಗುತ್ತದೆ. 2.ಕಾಳಿಕಾ ಕಾಳಸರ್ಪ: ರಾಹು ಲಗ್ನದಿಂದ ಎರಡನೆಯ ಮನೆಯಲ್ಲಿದ್ದು, ಕೇತು ಎಂಟನೆಯ ಮನೆಯಲ್ಲಿದ್ದರೆ ಕಾಳಿಕಾ ಕಾಳಸರ್ಪ ಯೋಗ ಉಂಟಾಗುತ್ತದೆ. ಅಂತಹ ಯೋಗವಿರುವ ಜಾತಕನು ಆರ್ಥಿಕ ಸಮಸ್ಯೆಗಳಲ್ಲಿ ಬಳಲುವ ಸಾಧ್ಯತೆ ಹೆಚ್ಚು. 3.ವಾಸುಕಿ ಕಾಳಸರ್ಪ: ರಾಹು ಲಗ್ನದಿಂದ ಮೂರನೆಯ ಮನೆಯಲ್ಲಿದ್ದು ಕೇತು ಒಂಬತ್ತನೆಯ ಮನೆಯಲ್ಲಿದ್ದರೆ ವಾಸುಕಿ ಕಾಳಸರ್ಪ ಯೋಗ ಉಂಟಾಗುತ್ತದೆ. ಅಂತಹ ವ್ಯಕ್ತಿಗಳಿಗೆ ಕಳತ್ರ ದೋಷವಿರುತ್ತದೆ ಎನ್ನಲಾಗುತ್ತದೆ. ಕೋರ್ಟಿನ ವ್ಯವಹಾರಗಳು ಅವರ ಪರವಾಗಿ ಆಗುವುದು ಕಡಿಮೆ. 4.ಶಂಖಪಾಲ ಕಾಳಸರ್ಪ: ಲಗ್ನದಿಂದ ರಾಹು ನಾಲ್ಕನೆಯ ಮನೆಯಲ್ಲಿದ್ದು ಕೇತು 10ನೇ ಮನೆಯಲ್ಲಿದ್ದರೆ ಶಂಖಪಾಲ ಕಾಳಸರ್ಪ ಯೋಗವಿರುತ್ತದೆ. ಈ ಯೋಗದ ಜಾತಕನು ಸ್ವಯಂಕೃತಾಪರಾಧಕ್ಕೆ ಒಳಗಾಗಿ ತಾನೇ ಸಂಕಷ್ಟಕ್ಕೆ ಗುರಿಯಾಗುತ್ತಾನೆ. ಅದರಲ್ಲೂ ಆಸ್ತಿ, ಭೂ ವಿವಾದಗಳಲ್ಲಿ ತೊಂದರೆ ಹೆಚ್ಚು. ಆರ್ಥಿಕವಾಗಿಯೂ ಸಾಕಷ್ಟು ತೊಂದರೆಗಳಿಗೆ ತುತ್ತಾಗುತ್ತಾನೆ ಎಂದು ಜ್ಯೋತಿಷಿಗಳು ಅಭಿಪ್ರಾಯಿಸುತ್ತಾರೆ. 5.ಪದ್ಮ ಕಾಳಸರ್ಪ: ಲಗ್ನದಿಂದ ಐದನೆಯ ಮನೆಯಲ್ಲಿ ರಾಹುವಿದ್ದು ಕೇತು 11ನೇ ಮನೆಯಲ್ಲಿದ್ದರೆ ಪದ್ಮ ಕಾಳಸರ್ಪ ಯೋಗ ಉಂಟಾಗುತ್ತದೆ. ಅಂತಹವರನ್ನು ಅನುವಂಶಿಕ ಅಥವಾ ಸಂತಾನ ದೋಷ ಕಾಡುವ ಸಾಧ್ಯತೆ ಹೆಚ್ಚು. 6.ಮಹಾಪದ್ಮ ಕಾಳಸರ್ಪ: ಲಗ್ನ ಭಾವದಿಂದ ರಾಹು ಆರನೆಯ ಮನೆಯಲ್ಲಿದ್ದು ಕೇತು 12ನೇ ಮನೆಯಲ್ಲಿದ್ದರೆ ಮಹಾಪದ್ಮ ಕಾಳಸರ್ಪ ಯೋಗ ಉಂಟಾಗುತ್ತದೆ. ಈ ಯೋಗವಿರುವವರು ಪದೇ ಪದೇ ವೈಪಲ್ಯವನ್ನು ಎದುರಿಸುತ್ತಾರೆ. 7.ತಕ್ಷಕ ಕಾಳಸರ್ಪ: ಲಗ್ನ ಭಾವದಿಂದ ರಾಹು ಏಳನೆಯ ಮನೆಯಲ್ಲಿದ್ದು ಕೇತು ಒಂದನೇ ಮನೆಯಲ್ಲಿದ್ದರೆ ತಕ್ಷಕ ಕಾಳಸರ್ಪ ಯೋಗ ಉಂಟಾಗುತ್ತದೆ. ಅಂತಹವರು ವೃಥಾ ಅಪವಾದಗಳಿಗೆ ಸಿಲುಕುತ್ತಾರೆ. ವ್ಯಾಪಾರ ಮತ್ತು ಸಂಬಂಧಗಳಲ್ಲಿ ತೊಂದರೆ ಉಂಟಾಗುವ ಸಾಧ್ಯತೆ ಇರುತ್ತದೆ.

ನಕ್ಷ ತ್ರ, ವೃಕ್ಷ ಮತ್ತು ಅಧಿದೇವತೆಗಳು

ಮನುಷ್ಯನ ಜನ್ಮ ಕಾಲಕ್ಕೆ ನಕ್ಷ ತ್ರವೊಂದು ನಿರ್ದಿಷ್ಟವಾಗಿರುತ್ತದೆ. ಅದು ಅವನ ಜನ್ಮ ನಕ್ಷ ತ್ರವೆಂದೇ ಕರೆಸಿಕೊಳ್ಳುತ್ತದೆ. ಒಬ್ಬರ ಅಭ್ಯುದಯವನ್ನು ಕಂಡಾಗ ಅವರ ಸ್ಟಾರ್‌ ಮಿಂಚುತ್ತಿದೆ ಎನ್ನುವುದನ್ನು ನಾವು ಅದೆಷ್ಟೋ ಬಾರಿ ಕೇಳಿರುತ್ತೇವೆ. ಈ ಸ್ಟಾರ್‌ಗೂ ಒಂದು ವೃಕ್ಷ ವಿದೆ ಮತ್ತು ಆ ವೃಕ್ಷ ಕ್ಕೆ ಒಂದು ಅಧಿದೇವತೆಯಿದ್ದಾರೆ ಎಂಬುದು ನಿಮಗೆ ಗೊತ್ತೇ? ಪ್ರಾಚೀನ ಕಾಲದಲ್ಲಿ ಒಂದು ಮಗು ಜನನವಾದಾಗ ತಂದೆ, ತಾಯಿ ಆ ಮಗುವನ್ನು ಎತ್ತಿಕೊಂಡು ಸಮೀಪವಿರುವ ಋುಷಿಗಳನ್ನು ಸಂಪರ್ಕಿಸಿ ಮಗುವಿಗೆ ಇಡಬೇಕಾದ ಹೆಸರು, ಕುಂಡಲಿಗಳನ್ನು ಬರೆಸಿ ಆಶೀರ್ವಾದ ಪಡೆಯುತ್ತಿದ್ದರು. ಋುಷಿಗಳು ಮಗುವಿನ ಜನ್ಮ ನಕ್ಷ ತ್ರವನ್ನು ಗುರುತಿಸಿ, ಮಗುವಿನ ಜನ್ಮ ನಕ್ಷ ತ್ರದ ಮೇಲೆ ಒಂದು ಗಿಡವನ್ನು ಬೆಳೆಸಲು ಹೇಳುತ್ತಿದ್ದರು. ಮಗು ಬೆಳೆಯುತ್ತಾ ಹೋದಂತೆ ಗಿಡವೂ ಬೆಳೆದು ಕುಟುಂಬದಲ್ಲಿ ಸಮೃದ್ಧಿಯಾಗುತ್ತಿತ್ತು. ವೇದಗಳಲ್ಲಿ 27 ನಕ್ಷ ತ್ರಗಳಿವೆ. ಪ್ರತಿಯೊಂದು ನಕ್ಷ ತ್ರಕ್ಕೆ ಬೇರೆ ಬೇರೆ ವೃಕ್ಷ ಗಳಿವೆ. ಹಾಗೆಯೇ ನಕ್ಷ ತ್ರಕ್ಕೆ ಆಧಿದೇವತೆಗಳೂ ಇವೆ. ಇಲ್ಲಿ ಕೋಷ್ಟಕದಲ್ಲಿ ಕೊಟ್ಟಿರುವ ಪ್ರತಿಯೊಂದು ನಕ್ಷ ತ್ರಕ್ಕೆ ಹೇಳಿದ ವೃಕ್ಷ ಗಳ ಗುಣಧರ್ಮಗಳು ಆಯಾ ನಕ್ಷ ತ್ರಕ್ಕೆ ಅನುಕೂಲವಾಗುವವು. ಆ ವೃಕ್ಷ ದ ಬೇರು, ಕಾಂಡ, ಎಲೆ, ಹಣ್ಣುಗಳಿಂದ ಉಪಯೋಗವಾಗುವುದು. ಜನ್ಮ ನಕ್ಷ ತ್ರದ ಮೇಲಿಂದ ಮನುಷ್ಯನ ಗುಣ ಸ್ವಭಾವ ಪ್ರವೃತ್ತಿ ಹೇಳಬಹುದು. ಹಾಗೆಯೇ ಪ್ರತಿಯೊಂದು ನಕ್ಷ ತ್ರಗಳ ದೋಷಗಳನ್ನು ಪರಿಹಾರ ಮಾಡಲು ಜನ್ಮ ನಕ್ಷ ತ್ರ ಮತ್ತು ವೃಕ್ಷ ಗಳು ನೆರವಾಗುತ್ತವೆ. ಭಗವಾನ್‌ ಬೋಧಾಯನ ಆಚಾರ್ಯರು ಬಹಳ ಹಿಂದೆಯೇ ಅಶ್ವತ್ಥೋಪನಯನ, ಪುತ್ರತ್ವೇನ ವಟವೃಕ್ಷ ಸ್ವೀಕಾರ, ವಟ ಸಾವಿತ್ರಿ ವೃತ, ತುಲಸೀಪೂಜಾ, ಬನ್ನಿಪೂಜೆ, ಸಮೀತ್‌ ಹೋಮ ಇತ್ಯಾದಿಗಳನ್ನು ಮಾಡಿ ಮನುಷ್ಯನಿಗೆ ಬರುವ ಅನಿಷ್ಟ ಪರಿಹಾರವನ್ನು ಪರಿಹರಿಸಿಕೊಳ್ಳಬೇಕೆಂದು ತಿಳಿಸಿದ್ದಾರೆ. ಹೋಮ ಹವನಗಳಲ್ಲಿ ವಿವಿಧ ವನಸ್ಪತಿಗಳನ್ನು ವಿವಿಧ ವಸ್ತುಗಳೊಂದಿಗೆ ಆಹುತಿ ಕೊಡಲಾಗುತ್ತದೆ. ಅಂದರೆ ಪ್ರತಿಯೊಂದು ಶಕ್ತಿ ದೇವತೆಗೆ ಒಂದೊಂದು ವನಸ್ಪತಿಯ ಮೇಲೆ ಆಸಕ್ತಿಯಿದೆ ಎಂಬುದು ಅರಿವಾಗುತ್ತದೆ. ಜನ್ಮ ನಕ್ಷ ತ್ರ ವೃಕ್ಷ ಗಳ ಮೇಲಿರುವ ಶ್ರದ್ಧೆ, ಭಕ್ತಿ ಇವುಗಳಿಗೆ ಹಾಕುವ ಪ್ರದಕ್ಷಿಣೆಗಳಿಂದ ಮನುಷ್ಯನಿಗೆ ಆರ್ಥಿಕ, ದೈಹಿಕ, ಮಾನಸಿಕ ಲಾಭಗಳು ಸಿಗುವವು. ನಕ್ಷ ತ್ರಗಳ ಸ್ವರೂಪ, ಸ್ವಭಾವ, ಲಕ್ಷ ಣಗಳನ್ನು ನಕ್ಷ ತ್ರೇಷ್ಠಿ ಮಂತ್ರಗಳಲ್ಲಿ ಹೇಳಲಾಗಿದೆ. ನಕ್ಷ ತ್ರಗಳು ಬೀರುವ ಕಿರಣಗಳಲ್ಲಿ ಉಗ್ರ, ತೀಕ್ಷ ್ಣ, ಕ್ಷಿಪ್ರ, ಸ್ಥಿರ, ಮೃದು, ಚರ ಇತ್ಯಾತಿಗಳಿವೆ. ನಕ್ಷ ತ್ರಗಳ ಮೂಲಕ ಆದಿ, ಮಧ್ಯ, ಅಂತ್ಯ ನಾಡಿಗಳನ್ನು ಗುರುತಿಸುತ್ತಾರೆ. - ವತ್ಸಲಾ ತದ್ದಲಸೆ

ವೈದ್ಯಕೀಯ 'ಜ್ಯೋತಿಷ್ಯ' - ಜಿ.ವಿ. ರೋಹಿಣಿ

ಜ್ಯೋತಿಷ್ಯ ಶಾಸ್ತ್ರ ಒಂದು ಸನಾತನವಾದ ವಿಜ್ಞಾನ. ಆದ್ದರಿಂದ ಅದನ್ನು ವೇದಾಂಗ ಜ್ಯೋತಿಷ್ಯ ಎಂದೂ ಕರೆದಿದ್ದಾರೆ. ಈ ಜ್ಯೋತಿಷ್ಯ ವಿಭಾಗದಲ್ಲಿ ವೈದ್ಯಕೀಯ ಜ್ಯೋತಿಷ್ಯವೂ ಒಂದು ಪ್ರಮುಖ ಭಾಗವಾಗಿದೆ. ಇದನ್ನು ಸಾಮಾನ್ಯವಾಗಿ ಎಲ್ಲ ಜ್ಯೋತಿಷಿಗಳು ಪ್ರಮುಖವಾಗಿ ಗಣನೆಗೆ ತೆಗೆದುಕೊಳ್ಳುತ್ತಾರೆ. ಈ ವೈದ್ಯಕೀಯ ಜ್ಯೋತಿಷ್ಯ ಶಾಸ್ತ್ರದ ಅಧ್ಯಯನ ಕರ್ಮ ಸಿದ್ಧಾಂತವನ್ನು ಅವಲಂಬಿಸಿದೆ. ವೈದ್ಯಕೀಯ ಜ್ಯೋತಿಷ್ಯದಲ್ಲಿ ಒಬ್ಬ ಜಾತಕನಿಗೆ ತಗುಲಬಹುದಾದ ಕಾಯಿಲೆ ಮತ್ತು ಅವನ ಸಂಬಂಧಿಗಳಿಗೆ ತಗುಲಬಹುದಾದ ಕಾಯಿಲೆಗಳನ್ನು ಗುರುತಿಸಬಹುದು. ಆದರೆ ಇದು ವೈದ್ಯಕೀಯ ವಿಜ್ಞಾನಕ್ಕೆ ಅಸಾಧ್ಯ. ಇದು ವೈದ್ಯಕೀಯ ಜ್ಯೋತಿಷ್ಯದಲ್ಲಿ ಏಕೆ ಸಾಧ್ಯವೆಂದರೆ ಅಲ್ಲಿ ಜಾತಕನ ಕರ್ಮಾನುಸಾರದಿಂದ ಏರ್ಪಟ್ಟಿರುವ ಅಣ್ಣ, ತಮ್ಮ, ಅಕ್ಕ, ತಂಗಿ, ತಂದೆ, ತಾಯಿ, ಹೆಂಡತಿ, ಗಂಡ, ಸೋದರ ಮಾವ, ಭಾವ, ಮೈದುನ ಹೀಗೆ ಇವರ ಸಂಬಂಧಗಳು ಉಂಟಾಗಿರುತ್ತವೆ. ಉದಾಹರಣೆಗೆ ಒಬ್ಬ ಜಾತಕನು ಸಿಂಹ ಲಗ್ನದಲ್ಲಿ ಹುಟ್ಟಿದ್ದರೆ ಮತ್ತು ಅವನ ಜಾತಕದಲ್ಲಿ ಗುರು ಕಟಕದಲ್ಲಿ ಉಚ್ಛ ಸ್ಥಿತಿಯಲ್ಲಿ ಸ್ಥಿತನಾಗಿದ್ದರೆ ಅವನ ಪತ್ನಿಗೆ ಫ್ಲಗ್ಮಾಟಿಕ್‌ ಕಾಯಿಲೆ ಬರುವ ಸಾಧ್ಯತೆ ಇರುತ್ತದೆ. ಇದರ ವಿಶ್ಲೇಷಣೆ ಹೇಗೆಂದರೆ, ಸಿಂಹದಿಂದ ಏಳನೆ ಮನೆಯು ಕುಂಭ ರಾಶಿಯಾಗಿದೆ. ಇದು ಆತನ ಪತ್ನಿಗೆ ಸಂಬಂಧಿಸಿದೆ. ಕುಂಭದಿಂದ ಆರನೇ ಮನೆಯು ಕಟಕವಾದ್ದರಿಂದ 6ನೇ ಮನೆಯು ಪತ್ನಿಯ ರೋಗಸ್ಥಾನ. ಇಲ್ಲಿ ಗುರು ಸ್ಥಿತನಾಗಿರುವುದರಿಂದಲೂ ಮತ್ತು ಕಟಕ ರಾಶಿಯು ಜಲತತ್ವವಾದ್ದರಿಂದಲೂ ಆಕೆಗೆ ಕಫ ಸಂಬಂಧ ಕಾಯಿಲೆ ಬರುವ ಸಾಧ್ಯತೆ ಇರುತ್ತದೆ. ಅಥವಾ ದಪ್ಪನಾದ ಶರೀರ ಉಳ್ಳವಳಾಗಿಯೂ ಇರಬಹುದು. ಮತ್ತು ಮಧುಮೇಹದಿಂದ ಬಳಲಬಹುದು. ಆದ್ದರಿಂದ ಜಾತಕನ ಪತ್ನಿಗೆ ಮೇಲೆ ಹೇಳಿದ ಕಾಯಿಲೆ ಬರುವ ಸಾಧ್ಯತೆ ಇದೆ. ವೈದ್ಯಕೀಯ ಜ್ಯೋತಿಷ್ಯದಲ್ಲಿ ಅನಾರೋಗ್ಯವನ್ನು ಕಂಡು ಹಿಡಿಯಲು ಗ್ರಹಗಳನ್ನು ಬಳಸಲಾಗುತ್ತದೆ. ಏಕೆಂದರೆ ನವಗ್ರಹಗಳಿಗೆ ತ್ರಿದೋಷಗಳ ಸಂಬಂಧವುಂಟು ಹಾಗೂ ಅದರದೇ ಆದ ಪ್ರಕೃತಿ ನಿಯಮಗಳುಂಟು. ಇವುಗಳನ್ನು ಕೆಳಕಂಡಂತೆ ತಿಳಿಯಬಹುದು. ಸೂರ್ಯ: ಚತುರಶ್ರತನುಃ ಪಿತ್ತ ಪ್ರಕೃತಿಃ ಸವಿತಾಲ್ಪಕಚಃ ಅಂದರೆ ಸೂರ್ಯನು ಚೌಕಾಕಾರದ ಮುಖವುಳ್ಳವನು. ಪಿತ್ತ ಸ್ವಭಾವದವನೂ ಹಾಗೂ ತಲೆಯಲ್ಲಿ ಕೂದಲಿಲ್ಲದವನೂ ಎಂದು ಹೇಳಲ್ಪಟ್ಟಿದೆ. ಇದನ್ನು ಜ್ಯೋತಿಷ್ಯ ಶಾಸ್ತ್ರದಲ್ಲಿ 'ಖಲ್ವಾತ' ಯೋಗವೆಂದು ಹೇಳುತ್ತಾರೆ. ಆಯುರ್ವೇದದಲ್ಲಿ ಹೇಳಿರುವ ಪಿತ್ತ ಪ್ರಕೋಪದ ಯಾವುದಾದರೂ ಕಾಯಿಲೆ ಸೂರ್ಯಗ್ರಹನು ಕೆಟ್ಟಿರುವಾಗ ಹಾಗೂ ಜಾತಕನ ಜನ್ಮ ಕುಂಡಲಿಯಲ್ಲಿ ರೋಗಸ್ಥಾನವಾದ 6ನೇ ಮನೆಯ ಹಾಗೂ ಅದರ ಅಧಿಪತಿಯ ಸಂಬಂಧದಿಂದ ಉಂಟಾಗುತ್ತದೆ. ಈ ನಿಯಮ ಕೆಳಗೆ ಹೇಳಿರುವ ಎಲ್ಲ ಗ್ರಹಗಳಿಗೂ ಅನ್ವಯಿಸುತ್ತದೆ. ಚಂದ್ರ: ತನು ವೃತ್ತ ತನುಃ ಬಹುವಾತ ಕಫಃ ಫ್ರಾಙ್ನ ಮೃದುವಾಕ್‌ ಶುಭ ದೃಕ್‌ ಅಂದರೆ ಚಂದ್ರನು ಗುಂಡಾದ ಮುಖವುಳ್ಳವನು ಹಾಗೂ ವಾತ ಮತ್ತು ಕಫ ಪ್ರಕೃತಿಗಳುಳ್ಳವನು ಹಾಗೂ ಶುಭವಾದ ದೃಷ್ಟಿ ಉಳ್ಳವನಾಗಿರುತ್ತಾನೆ. ಆದ್ದರಿಂದ ವಾತ ಮತ್ತು ಕಫ ಸಂಬಂಧವಾದ ರೋಗಗಳುಂಟಾಗುತ್ತದೆ. ಕುಜ: ಕ್ರೂರ ದಕ್‌ ತರುಣ ಮೂರ್ತಿ ಉದಾರಃ ಪೈತ್ತಿಕಃ ಸುಚಪಲಃ ಕೃಷ ಮಧ್ಯಃ ಜಾತಕನು ಕ್ರೂರ ದೃಷ್ಟಿ ಉಳ್ಳವನಾಗಿ ತರುಣನಂತೆ ಕ್ರಿಯಾಸಕ್ತನಾಗಿ ಚಪಲ ಸ್ವಭಾವ ಉಳ್ಳವನಾಗಿ, ಉದಾರಿಯಾಗಿ, ಪಿತ್ತ ಸ್ವಭಾವವನ್ನು ಉಳ್ಳವನಾಗಿರುತ್ತಾನೆ. ಆದ್ದರಿಂದ ಪಿತ್ತ ಸ್ವಭಾವದ ರೋಗಗಳನ್ನು ಕುಜನಿಗೆ ಹೇಳಲ್ಪಟ್ಟಿದೆ. ಬುಧ: ಸ್ಲಿಷ್ಟವಾಕ್‌ ಸತತ ಹಾಸ್ಯ ರುಚಿಃ ಪಿತ್ತ ಮಾರುತ ಕಫ ಪ್ರಕೃತಿಶ್ಚ ಬುಧನು ಹಾಸ್ಯ ಪ್ರದಾಯಕನಾಗಿಯೂ ವಾಕ್‌ ಚಾತುರ್ಯ ಉಳ್ಳವನಾಗಿಯೂ ವಾತ, ಪಿತ್ತ, ಕಫ ಮೂರೂ ದೋಷಗಳುಳ್ಳ ವ್ಯಾಧಿಗಳನ್ನು ಸೂಚಿಸುತ್ತಾನೆ. ಗುರು: ಬೃಹತ್ತನುಃ ಪಿಂಗಳ ಮೂಧ್ರ್ವ ಜೇಕ್ಷ ಣೋ ಬೃಹತ್ತನುಃ ಶ್ರೇಷ್ಠ್ಠಮೂರ್ತಿ ಕಫಾತ್ಮಕಃ ಗುರುವು ಬೃಹತ್ತಾದ ಶರೀರವುಳ್ಳವನಾಗಿ, ಶ್ರೇಷ್ಠ್ಠಮೂರ್ತಿಯಾಗಿ ಕಫ ಪ್ರವೃತ್ತಿ ಉಳ್ಳ ಸ್ವಭಾವದವನಾಗಿರುತ್ತಾನೆ. ಆದ್ದರಿಂದ ಗುರುವಿಗೆ ಕಫ ಸಂಬಂಧವಾದ ರೋಗಗಳನ್ನು ಹೇಳಲ್ಪಟ್ಟಿದೆ. ಶುಕ್ರ: ಭೃಗು ಸುಖೀ ಕಾಂತವಪುಃ ಸುಲೋಚನಃ ಸಿತ ಅನಿಲಾತ್ಮ ಸಿತ ವಕ್ರಮೂರ್ಧಜಃ ಶುಕ್ರನು ಸುಖಿಯೂ, ಕಾಂತಿಯುಳ್ಳ ಶರೀರವಂತನೂ, ಸುಂದರವಾದ ಕಣ್ಣುಗಳುಳ್ಳವನೂ, ವಾಯು ಪ್ರಕೃತಿ ಉಳ್ಳವನೂ ಆಗಿರುತ್ತಾನೆ. ಅಂದರೆ ಶುಕ್ರನು ವಾಯು ದೋಷ ಸಂಬಂಧವಾದ ರೋಗಗಳನ್ನು ಹೊಂದುತ್ತಾನೆ. ಶನಿ: ಮಂದೋ ಲಸಃ ಕೃಷ ದೀರ್ಘ ಗಾತ್ರಃ ಪುರುಷ ರೋಮಕ ಚೋನಿಲಾತ್ಮಃ ಶನಿಯು ಮಂದನೂ, ಆಲಸಿಯೂ, ಕೃಶನೂ ಹಾಗೂ ಸಣ್ಣಗೆ ಉದ್ದವಾದ ಶರೀರ ಉಳ್ಳವನೂ ಮತ್ತು ವಾತ ಪ್ರಕೃತಿಯುಳ್ಳವನೂ ಆಗಿರುತ್ತಾನೆ. ಆದ್ದರಿಂದ ಶನಿಗೆ ವಾತ ಸಂಬಂಧವಾದ ಕಾಯಿಲೆಗಳನ್ನು ಹೇಳಲ್ಪಡುತ್ತದೆ. ರಾಹು ಕೇತುಗಳಿಗೆ ಯಾವುದೇ ವೈದ್ಯಕೀಯ ಸಂಬಂಧವಿಲ್ಲದ ಕಾಯಿಲೆಗಳು ಹೇಳಲ್ಪಡುತ್ತದೆ. ಅಂದರೆ ವೈದ್ಯಕೀಯ ಶಾಸ್ತ್ರದಲ್ಲಿ ಪತ್ತೆ ಮಾಡಲು ಕಷ್ಟವಾಗುವಂತಹ ಕಾಯಿಲೆಗಳು, ಹುಳು ಹುಪ್ಪಟ, ಹಾವು ಇತ್ಯಾದಿ ವಿಷ ಕ್ರಿಮಿಗಳ ಕಡಿತದಿಂದ ಬರುವ ಮಾರಣಾಂತಿಕ ಕಾಯಿಲೆಗಳು ಹಾಗೂ ಅಭಿಚಾರಗಳಿಗೆ ತುತ್ತಾಗುವಂತಹ ಕಾಯಿಲೆಗಳು ರಾಹುಕೇತುವಿಗೆ ಹೇಳಲ್ಪಡುತ್ತದೆ. ಆದ್ದರಿಂದ ಜ್ಯೋತಿಷ್ಯವು ಮೂಲತಃ ಕರ್ಮಸಿದ್ಧಾಂತದ ಭದ್ರವಾದ ಬುನಾದಿಯಲ್ಲಿ ನೆಲೆಯಾಗಿವೆ. ಆದ್ದರಿಂದ ನವಗ್ರಹಗಳು ಮಾನವನ ಮೇಲೆ ಈಗ ಮೇಲೆ ಹೇಳಿದ ವಿಶೇಷ ರೀತಿಯಲ್ಲಿ ತಮ್ಮದೇ ಆದ ಪ್ರಭಾವದಿಂದ ರೋಗಗಳನ್ನುಂಟು ಮಾಡುತ್ತದೆ. ಇದೇ ವೈದ್ಯಕೀಯ ಜ್ಯೋತಿಷ್ಯದ ಮೂಲ ಸಾರ.

'ಸರಕಾರಿ ಕೆಲಸಕ್ಕೂ' ಗ್ರಹಗಳ ನಂಟು

1. ಕರ್ಕಾಟಕ, ಸಿಂಹ, ಧನು ಹಾಗೂ ತುಲಾ ರಾಶಿಗಳು ರಾಜಕೀಯ ರಾಶಿಗಳು. ಈ ರಾಶಿಯು ಯಾವುದಾದರೂ ಒಂದು ಲಗ್ನವಾಗಿದ್ದಾಗ ನವಮ ಅಥವಾ ದಶಮ ಸ್ಥಾನದಲ್ಲಿ ಗುರು ಇದ್ದರೆ ಶನಿಯು ಸ್ವಂತ ಮನೆಯಲ್ಲಿ ಇಲ್ಲವೆ, ಉಚ್ಛ ರಾಶಿಯಲ್ಲಿ ಇದ್ದರೆ ಅಂಥವರು ನ್ಯಾಯಾಲಯದ ನ್ಯಾಯಾಧೀಶರಾಗುತ್ತಾರೆ. 2. ಕರ್ಕಾಟಕ, ಸಿಂಹ, ತುಲಾ, ಧನು ಇಲ್ಲವೆ ಕುಂಭ ರಾಶಿಗಳಲ್ಲಿ ಯಾವುದಾದರೂ ಒಂದು ರಾಶಿಯು ಲಗ್ನವಾಗಿ ದ್ವಿತೀಯ ಅಥನಾ ದಶಮದಲ್ಲಿ ಗುರು ಬಲಿಷ್ಠನಾಗಿದ್ದು ರವಿಯು ಪಂಚಮ ಷಷ್ಠ, ನವಮ ಇಲ್ಲವೆ ದಶಮ ಸ್ಥಾನದಲ್ಲಿ ಇದ್ದರೆ ಶನಿ-ಚಂದ್ರ ಇಲ್ಲವೆ ಶನಿ-ರವಿ ಕೇಂದ್ರ ಯೋಗ ಇದ್ದರೆ ಈ ಯೋಗವು ಸಿಗುವುದಿಲ್ಲ. 3. ರವಿ ಉಚ್ಛನಾಗಿ, ಬಲಿಷ್ಠ ಅಥವಾ ಸ್ವ ಕ್ಷೇತ್ರದಲ್ಲಿ ಇದ್ದರೆ ಅದು ದಶಮ ಏಕಾದಶ ಸ್ಥಾನವಾದರೆ ಮತ್ತು ಸಿಂಹ ಅಥವಾ ಧನು ಲಗ್ನವಾದರೆ ಬಲಿಷ್ಠನಾದ ರವಿಯು ಲಗ್ನದಲ್ಲಾಗಲೀ ಇಲ್ಲವೆ ದಶಮ ಸ್ಥಾನದಲ್ಲಿದ್ದು ಮಂಗಳನು ಉಚ್ಛನಿದ್ದರೆ ಈ ಯೋಗ ಇದ್ದವರು ಜಿಲ್ಲಾಧಿಕಾರಿಯಾಗುತ್ತಾರೆ. ಬಲಿಷ್ಠವಾದ ಮಂಗಳನು ದಶಮದಲ್ಲಿದ್ದರೆ ಮೇಲಿನ ಯೋಗಕ್ಕೆ ಅನುಕೂಲವಾಗುವುದು. 4. ಕುಜ, ರಾಹು ಹಾಗೂ ಶನಿ ಗ್ರಹಗಳು ಅಧಿಕಾರಕ್ಕೆ ಯೋಗಕಾರಕರು. ಲಗ್ನ ಅಥವಾ ದಶಮದಲ್ಲಿ ಈ ಗ್ರಹಗಳ ಮುಖಾಮುಖಿಯಾದರೆ ಬಹಳ ಒಳ್ಳೆಯದು. ಮೇಷ ಲಗ್ನ ಅಥವಾ ದಶಮ ಸ್ಥಾನದಲ್ಲಿ ಶನಿ-ಮಂಗಳ ಯೋಗ ಇದ್ದರೆ ಜಾತಕರು ಪೊಲೀಸ್‌ ಇಲಾಖೆಯಲ್ಲಿ ಅಧಿಕಾರ ಪಡೆಯುತ್ತಾರೆ. 5. ಮೇಷ ಲಗ್ನವಾಗಿ ಅಲ್ಲಿ ರವಿ, ಶುಕ್ರ ಯೋಗ ಇದ್ದರೆ ಬಹಳ ಒಳ್ಳೆಯದು. ದಶಮ ಸ್ಥಾನವಾಗಿ ಮೇಷ, ಕರ್ಕಾಟಕ, ತುಲಾ ಅಥವಾ ಮಕರ ಇವುಗಳಲ್ಲಿ ಯಾವುದಾದರೊಂದು ರಾಶಿಯಾದರೆ ಬಹಳ ಒಳ್ಳೆಯದು. ಜಾತಕನು ಅಗ್ನಿ ತತ್ವದ ರಾಶಿಯಲ್ಲಿ ಜನಿಸಿದರೆ ಅವರಿಗೆ ಬರುವ ಯಾವುದೇ ಎಡರು ತೊಡರುಗಳನ್ನು ಆದಷ್ಟು ಬೇಗ ನಿವಾರಿಸುವರು. 6. ಪೊಲೀಸರ ಜಾತಕದಲ್ಲಿ ತೃತೀಯ ಷಷ್ಠ, ಅಷ್ಟಮ, ದಶಮ ಇಲ್ಲವೆ ಲಗ್ನ ಸ್ಥಾನದಲ್ಲಿ ಯಾವುದಾದರೂ ಒಂದು ಸ್ಥಾನದಲ್ಲಿ ಮಂಗಳ ಇಲ್ಲವೆ ರಾಹು ಇದ್ದೇ ಇರುತ್ತದೆ. 7. ಅಧಿಕಾರದ ಸ್ಥಾನದಲ್ಲಿರುವವರ ಜಾತಕದಲ್ಲಿ ರವಿಯು ಬಲಿಷ್ಠನಾಗಿರುತ್ತಾನೆ. ಬಲಹೀನನಾದ ರವಿ ಇದ್ದರೆ ಅವರೂ ಎಂದೂ ಅಧಿಕಾರ ಸ್ಥಾನದಲ್ಲಿರುವುದಿಲ್ಲ. 8. ಲೋಕೋಪಯೋಗಿ ಇಲಾಖೆಯಲ್ಲಿರುವ ನೌಕರರ ಜಾತಕದಲ್ಲಿ ಶನಿಯು ಬಲಿಷ್ಠನಾಗಿರುತ್ತಾನೆ. ಮಿಥುನ, ಕನ್ಯಾ, ತುಲಾ, ಮಕರ ಇಲ್ಲವೆ ಕುಂಭ ರಾಶಿಯಲ್ಲಿ ಯಾವುದಾದರೂ ಒಂದು ರಾಶಿಯಲ್ಲಿ ಶನಿಯು ಇದ್ದೇ ಇರಬೇಕು. 9. ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳಲ್ಲಿ ರವಿ, ಬುಧ, ಶನಿ ಗ್ರಹಗಳು ಬಲಿಷ್ಠನಾಗಿರಬೇಕು. ಪಿ. ಹರಿಶ್ಚಂದ್ರ ಸಾಲಿಯಾನ್‌

ಜಾತಕ ಪರಿಶೀಲನೆಯಿಂದ ವೈವಾಹಿಕ ಅಡೆತಡೆ ಪತ್ತೆ

ಪ್ರತಿಯೊಬ್ಬನ ಮನುಷ್ಯನ ಜಾತಕದಲ್ಲಿ ಅವರವರ ಕುಂಡಲಿಯಲ್ಲಿರುವ ಗ್ರಹದಂತೆ ಫಲಾಫಲಗಳು ಸಿಗುತ್ತವೆ. ಇದು ಅವರ ಹಿಂದಿನ ಜನ್ಮದ ಕರ್ಮಾನುಸಾರವಾಗಿರುತ್ತದೆ. ವಿವಾಹ ಕೂಡಾ ಕರ್ಮಾನುಸಾರವೇ ಆಗಿರುತ್ತದೆ. ಹೀಗಾಗಿ ಹೇಗೆ ಕರ್ಮಫಲವನ್ನು ತಪ್ಪಿಸಲು ಸಾಧ್ಯವಿಲ್ಲವೋ ಹಾಗೆಯೇ ವಿಧಿಧಿ ಬರಹವನ್ನು ಬದಲಾಯಿಸುವುದೂ ಅಸಾಧ್ಯವೇ ಸರಿ.ಜಾತಕದಲ್ಲಿ ಶುಕ್ರ ಶನಿಗಳು ತಮ್ಮ ತಮ್ಮ ಕ್ಷೇತ್ರವನ್ನು ಬದಲಾಯಿಸುವುದು, ಶುಕ್ರ ಶನಿ ಒಟ್ಟಿಗೆ ಇರುವುದು ಇತ್ಯಾದಿಗಳೆಲ್ಲ ಶುಕ್ರನ ಯೋಗವನ್ನು ಕೆಡಿಸುತ್ತವೆ. ಇದು ವ್ಯಕ್ತಿಯ ವೈವಾಹಿಕ ಬಂಧದ ಮೇಲೂ ಪ್ರಭಾವ ಬೀರುತ್ತದೆ. ಇದರಿಂದಾಗಿಯೇ ಮದುವೆಯಾಗುವ ವಯಸ್ಸಿನಲ್ಲಿ ಎಷ್ಟು ಓದ್ದಾಡಿದರೂ ಸಮಯ ಕೂಡಿ ಬರುವುದಿಲ್ಲ. ವಿವಾಹದ ಬಳಿಕವೂ ಹಲವು ಸಮಸ್ಯೆಗಳು ತಲೆದೋರಬಹುದು. ಪ್ರೀತಿಸಿದ ಹೆಣ್ಣು ಕೈಕೊಟ್ಟು ಬೇರೆಯವರನ್ನು ಮದುವೆಯಾಗುವುದು, ಗಂಡ ಮದುವೆಗೆ ಮುನ್ನವೇ ಮತ್ತೊಬ್ಬ ಸ್ತ್ರೀಯ ಜತೆ ಸಂಬಂಧ ಇರುವುದು, ಕೈ ಹಿಡಿದ ಹೆಂಡತಿಗೆ ಕಾಯಿಲೆಗಳು ಬರುವುದು, ಮದುವೆಯ ನಂತರ ಗಂಡ- ಹೆಂಡತಿ ವಾದ ವಿವಾದ ಮಾಡಿ ಹೆಂಡತಿಯ ಕೈಬಿಡುವುದು, ಬೇರೆ ಸ್ತ್ರೀ ಸಂಬಂಧದಿಂದ ಕಾಯಿಲೆಗಳು ಬರುವುದು, ಶನಿಯು ನೀಚ ಜಾತಿಯಾಗಿರುವುದರಿಂದ ನೀಚ ಜಾತಿಯ ಸ್ತ್ರೀ ಸಂಬಂಧವಾಗುವುದು... ಹೀಗೆ ಬೇರೆ ಬೇರೆ ರೀತಿಯ ತೊಂದರೆಗಳು ಬರುತ್ತವೆ. ಇದು ಒಂದು ರೀತಿಯ ಕಿರುಕುಳವಾಗಿ ಜೀವನ ಪೂರ್ತಿ ಕಾಡುತ್ತದೆ. ಇದಕ್ಕೆ ಕಾರಣವೇನು ಎಂದು ತಿಳಿಯುವುದು ಕೂಡಾ ಇಲ್ಲ. ಇಂಥವರಿಗೆ ದಾಂಪತ್ಯ ಜೀವನದಲ್ಲಿ ಸುಖ ಎಂಬುದು ಕನಸಿನಲ್ಲಿಯೂ ದುರ್ಲಭ. ಇಂಥವರು ದೇವತಾರಾಧನೆ ಮಾಡುತ್ತಿರುತ್ತಾರೆ. ಅವರಲ್ಲಿ ವೈರಾಗ್ಯ, ನಿಷ್ಠೆ, ಲಾಭ, ಗುರು, ಅನುಗ್ರಹ ಮುಂತಾದ ಒಳ್ಳೆಯ ಗುಣಗಳಿರುತ್ತದೆ. ಇವರಿಂದ ಬೇರೆಯವರಿಗೆ ಸಹಾಯವೂ ಸಿಗುತ್ತದೆ. ಇತರರು ಇವರು ಒಳ್ಳೆಯವರು, ಇವರಿಗೆ ಈ ರೀತಿಯ ಕಷ್ಟ ಸಿಗಬಾರದಿತ್ತು ಎಂದೂ ಹೇಳುತ್ತಾರೆ. ಬಡವರ ಮೇಲೆ ಅನುಕಂಪ, ಕೆಲಸಗಾರರ ಮೇಲೆ ಪ್ರೀತಿ ಇರುವ ಇಂಥವರು ನಿಜಕ್ಕೂ ಉತ್ತಮರು. ಇವರು ಶಾಂತಿಪಾಲಕರಾಗಿರುತ್ತಾರೆ. ಆದರೆ, ಎಲ್ಲಾ ಬಣ್ಣ ಮಸಿ ನುಂಗಿತು ಎನ್ನುವ ಹಾಗೆ ವಿವಾಹಯೋಗ ಮಾತ್ರ ಇವರಿಗೆ ಕಷ್ಟವಾಗುವುದುಂಟು. ಶುಕ್ರನಿಗೆ ಗುರು ಯೋಗ ಇದ್ದರೆ ಮಕ್ಕಳಾಗುತ್ತದೆ. ಆದರೆ, ಇತರೆ ಸಂಸಾರ ಸೌಖ್ಯಗಳು ಕಡಿಮೆಯೇ ಆಗಿರುವುದೂ ಉಂಟು. ಶನಿ ಮತ್ತು ಚಂದ್ರರು ಒಂದೇ ಮನೆಯಲ್ಲಿದ್ದರೆ ಇದರಿಂದ ವಿವಾಹವಾಗುವುದಕ್ಕೆ ಅಡೆ ತಡೆಯಾಗುತ್ತದೆ. ಹೀಗಾಗಿ ವಿವಾಹ ಸಂಬಂಧ ಬೇಕಾದಷ್ಟು ಬಂದರೂ ವಿವಾಹವಾಗುವುದಿಲ್ಲ. ಶನಿಯ ದೃಷ್ಟಿ ಚಂದ್ರನ ಮೇಲೆ ಇದ್ದಾಗ ಮತ್ತು ಚಂದ್ರ ಶನಿಯು ಕೇಂದ್ರ ಸ್ಥಾನದಲ್ಲಿ ಇದ್ದರೂ ಮದುವೆಗೆ ಅಡೆತಡೆಯಾಗುವುದು ಖಂಡಿತ. 2-7-11 ಮನೆಯು ವಿವಾಹಕ್ಕೆ ಪ್ರಮುಖ ಸ್ಥಾನ ಇಲ್ಲ. ಶುಭ ಗ್ರಹಗಳಾದ ಗುರು ಚಂದ್ರ ಬುಧ ಶುಕ್ರ ಇದ್ದರೆ ಅಥವಾ 2-7-11ನೇ ಮನೆಯ ಅಧಿಧಿಪತಿಯೊಡನೆ ಶುಭಗ್ರಹ ಇದ್ದರೂ ಶುಭಗ್ರಹಗಳು 2-7-11ನೇ ಮನೆಗಳನ್ನು ಅಥವಾ ಆ ಮನೆಯ ಅಧಿಧಿಪತಿಯನ್ನು ನೋಡಿದರೂ ಇಂತಹ ಜಾತಕರ ಮದುವೆಯು ಸರಿಯಾದ ಸಮಯಕ್ಕೆ ನಡೆಯುತ್ತದೆ, ಒಳ್ಳೆಯ ಸಂಬಂಧ ಸಿಗುತ್ತದೆ. -ಮೂಲ್ಕಿ ಹರಿಶ್ಚಂದ್ರ ಪಿ. ಸಾಲಿಯಾನ್‌

ಯಾರ ಮೇಲೆ ಅಭಿಚಾರ ಪ್ರಯೋಗ

ಅಭಿಚಾರ, ಕಾಲಾಜಾದು, ಮಾಟ ಇತ್ಯಾದಿ ಅನೇಕ ಹೆಸರುಗಳಿಂದ ಕರೆಯಲ್ಪಡುವ ಕ್ರಿಯೆಯು ವಿಶ್ವದ ವಿಭಿನ್ನ ಸ್ಥಾನಗಳಲ್ಲಿ ಅನೇಕ ರೂಪಗಳಲ್ಲಿ ಪ್ರಚಲಿತದಲ್ಲಿದೆ. ಈ ಕ್ರಿಯೆಯ ಮೂಲಕ ಹಾನಿಕಾರಕ, ನಕಾರಾತ್ಮಕ ಶಕ್ತಿಗಳನ್ನು ಜಾಗೃತಗೊಳಿಸಲಾಗುತ್ತದೆ. ಅನ್ಯರ ಯಶಸ್ಸು, ಉನ್ನತಿ, ಸಮೃದ್ಧಿ, ಸುಖಗಳನ್ನು ಸಕಾರಾತ್ಮಕವಾಗಿ ಸ್ವೀಕರಿಸದ ಜನರು ಈರ್ಷೆ, ಮತ್ಸರ, ದುರಾಶೇ, ನಿರಾಶೆಗಳಿಂದ ಕೂಡಿ ಅನ್ಯರ ಸುಖ ಸಂತೋಷಗಳನ್ನು ಹಾಳು ಮಾಡಲು ಅಭಿಚಾರ ಕ್ರಿಯೆಗಳ ಮೊರೆ ಹೋಗುತ್ತಾರೆ. ಯಾರು ಈ ಅಭಿಚಾರ ಪ್ರಯೋಗಕ್ಕೆ ಒಳಗಾಗುತ್ತಾರೆ ಎನ್ನುವುದನ್ನು ಅವರ ಕುಂಡಲಿಯಲ್ಲಿರುವ ಗ್ರಹಗಳ ವಿಶೇಷ ಸಂಯೋಗದಿಂದ ಗುರುತಿಸಬಹುದಾಗಿದೆ. ಕುಂಡಲಿಯಲ್ಲಿ ಸೂರ್ಯ, ಚಂದ್ರ, ಶನಿ, ಮಂಗಲರು ಕೆಲವು ವಿಶೇಷ ಭಾವಗಳಲ್ಲಿ ರಾಹು- ಕೇತುಗಳಿಂದ ಪೀಡಿತರಾಗುವುದರಿಂದ ವ್ಯಕ್ತಿಯು ಮಾಟದ ಪ್ರಭಾವಕ್ಕೆ ಒಳಗಾಗುತ್ತಾರೆ. ಯಾರ ಕುಂಡಲಿಯಲ್ಲಿ ಲಗ್ನ ಮತ್ತು ಸೂರ್ಯರು ದುರ್ಬಲರಾಗಿರುವರೋ ಅವರು ಅಭಿಚಾರ ಪೀಡಿತರಾಗಿರುತ್ತಾರೆ. ಕುಂಡಲಿಯಲ್ಲಿ ಗ್ರಹಣಯೋಗವಿದ್ದರೆ, ರಾಹು ಅನಿಷ್ಟಕಾರಿ ಸ್ಥಿತಿಯಲ್ಲಿದ್ದರೆ, ಮಂಗಲ-ಶನಿ ಯುತಿ ಇದ್ದರೆ, ಶನಿ ಚಂದ್ರ ಯುತಿ ಇದ್ದರೆ ಅಥವಾ ಶನಿಯ ವಕ್ರದೃಷ್ಟಿಯಿದ್ದರೆ ಜಾತಕನು ಋುಣಾತ್ಮಕ ಶಕ್ತಿಗಳ ಪ್ರಭಾವಕ್ಕೀಡಾಗುತ್ತಾರೆ. ಈ ಸಮಯದಲ್ಲಿ ಷಷ್ಟಮ ಭಾವ ಮತ್ತು ಷಷ್ಟಮಾಧಿಪತಿಗಳ ದಶಾ ನಡೆಯುತ್ತಿದ್ದು, ದಶಾನಾಥನು ಲಗ್ನ, ಸಪ್ತಮ, ದ್ವಾದಶ ಭಾವಗಳಲ್ಲಿದ್ದು, ಕೇತುವು ಲಗ್ನ ಚತುರ್ಥ ಅಥವಾ ದಶಮ ಭಾವದಲ್ಲಿದ್ದು, ಮಂಗಲನು ಲಗ್ನದೊಂದಿಗೆ ಸಂಬಂಧದಲ್ಲಿದ್ದರೆ ಜಾತಕರು ಅಭಿಚಾರದ ಪ್ರಭಾವಕ್ಕೆ ಒಳಗಾಗುತ್ತಾರೆ. ಬುಧ ಗ್ರಹವು ಮಂದಿ ಅಥವಾ ಗುಳಿಕದೊಂದಿಗೆ ಸಂಬಂಧ ಹೊಂದಿದ್ದು, ಮಂಗಲನು ಬಾಧಕ ಸ್ಥಾನದಲ್ಲಿದ್ದು ಪರಸ್ಪರ ದೃಷ್ಟಿ ಸಂಬಂಧದಲ್ಲಿದ್ದರೆ ಅಭಿಚಾರ ಪ್ರಯೋಗಕ್ಕೆ ಬಲಿಯಾಗುತ್ತಾರೆ. ಈ ಪ್ರಕಾರ ಸಂಯೋಗಗಳಿದ್ದರೆ ಅವುಗಳ ಸಂಬಂಧಿತ ದಶಾ ಅಂತರ್ದಶಾಗತದಲ್ಲಿ ಈ ಪ್ರಭಾವಗಳು ಕಂಡು ಬರುತ್ತವೆ. ಅಭಿಚಾರ ಪ್ರಯೋಗಕ್ಕೀಡಾದವರ ಉದ್ಯೋಗ, ಪಾರಿವಾರಿಕ ಜೀವನ, ಧನ-ಸಮೃದ್ಧಿಗಳ ಮೇಲೆ ಕೆಟ್ಟ ಪರಿಣಾಮ ಉಂಟಾಗುತ್ತದೆ. ವಿನಾಕಾರಣ ಭಯ, ಚಿಂತೆ, ಆರೋಗ್ಯ ಸಮಸ್ಯೆ, ಅಶಾಂತಿ ಪೀಡಿಸುತ್ತವೆ. ಪತ್ನಿ- ಮಕ್ಕಳೊಂದಿಗೆ ಭಿನ್ನಾಭಿಪ್ರಾಯ, ಕಲಹ ಉಂಟಾಗುತ್ತದೆ. ವಿಚಿತ್ರವಾದ ವ್ಯವಹಾರ, ಅಶಾಂತಿ, ಬುದ್ಧಿ ಭ್ರಮಣೆ ಉಂಟಾಗುತ್ತವೆ. ವಿಶೇಷ ಪರಿಸ್ಥಿತಿಗಳಲ್ಲಿ ಅಪ್ರಾಕೃತಿಕ ಮೃತ್ಯುವಿಗೀಡಾಗಬಹುದು. ತಜ್ಞ ಜ್ಯೋತಿಷಿಗಳ ಸಲಹೆ ಪಡೆದು ಸೂಕ್ತ ಪರಿಹಾರ ಕ್ರಮ ಕೈಗೊಂಡರೆ ಸಮಸ್ಯೆಗಳಿಂದ ಪಾರಾಗಬಹುದು. ಶ್ರೀಪಾದ ಆರ್‌. ಕುಲಕರ್ಣಿ

ಮನೆಯ ವಾಸ್ತು ವಿಚಾರ

ಮನೆ ಕೊಳ್ಳುವಾಗ, ಬಾಡಿಗೆಗೆ ಹೋಗುವಾಗ ವಾಸ್ತುವಿನ ಬಗ್ಗೆ ತಲೆ ಕೆಡಿಸಿಕೊಳ್ಳುವವರು ಅನೇಕರು. ಯಾವ ಕೋಣೆ ಯಾವ ದಿಕ್ಕಿಗೆ ಇರಬೇಕು, ಗೃಹ ಪ್ರವೇಶ ಯಾವ ದಿಕ್ಕಿನಲ್ಲಾಗಬೇಕು ಇತ್ಯಾದಿ ಹಲವು ಪ್ರಶ್ನೆಗಳು ಅನೇರಲ್ಲಿವೆ. ಇಂತಹ ಸಂದೇಹಗಳಿಗೆ ಇಲ್ಲಿದೆ ಉತ್ತರ. ಎಲ್ಲರಿಗೂ ಸೈಟು, ಮನೆಗಳು ಬೇಕೇ ಬೇಕು. ತಾವೇ ಮನೆ ಕಟ್ಟಿಸಿಕೊಳ್ಳಲು ಸಾಧ್ಯವಾಗದಿದ್ದರೆ ಕಟ್ಟಿಸಿದ ಮನೆಯನ್ನು ಕೊಳ್ಳುವವರೂ ಉಂಟು. ಇದಲ್ಲದೆ ಬಾಡಿಗೆಗೆ ಮನೆ ಪಡೆಯುವುದಂತೂ ಸಾಮಾನ್ಯ. ಈ ಎಲ್ಲ ಸಂದರ್ಭಗಳಲ್ಲಿ ಯಾವ ದಿಕ್ಕಿನಲ್ಲಿ ಪ್ರವೇಶ ದ್ವಾರ ಇರಬೇಕು, ಎಲ್ಲೆಲ್ಲಿ ಯಾವ್ಯಾವ ಕೋಣೆ ಇರಬೇಕು ಎಂಬಂತಹ ಜಿಜ್ಞಾಸೆಗಳು ಮೂಡುವುದು ಸಹಜ. ಬೆಂಗಳೂರು ನಗರದಲ್ಲಿ ಎಲ್ಲರಿಗೂ ಬೇಕು ಪೂರ್ವ ಉತ್ತರ ಮತ್ತು ಈಶಾನ್ಯ ದಿಕ್ಕುಗಳ ನಿವೇಶನ ಮತ್ತು ಮನೆ ಗಳು ಇದಕ್ಕೆ ಬೆಲೆ ದುಬಾರಿ ಆದರೂ ಖರೀದಿ ಮಾಡುವರು. ಆದರೆ ಎಲ್ಲರಿಗೂ ಈ ನಿವೇಶನ ಮನೆ ಆಗುವುದಿಲ್ಲ ಎಂದು ತಿಳಿದುಕೊಳ್ಳುವುದು ಉತ್ತಮ. ಮೇಷ ರಾಶಿಯವರಿಗೆ ಪೂರ್ವ ದಿಕ್ಕು ಉತ್ತಮವಾದರೆ ವೃಷಭ ರಾಶಿಯವರಿಗೆ ದಕ್ಷಿಣ ದಿಕ್ಕು ಸೂಕ್ತ. ಮಿಥುನ ರಾಶಿಯವರಿಗೆ ಪಶ್ಚಿಮ ದಿಕ್ಕು, ಕಟಕ ರಾಶಿಯವರಿಗೆ ಉತ್ತರ ದಿಕ್ಕು ಉತ್ತಮ. ಸಿ0ಹ/ಧನು ರಾಶಿಯವರಿಗೆ ಪೂರ್ವ ಆಗ್ನೇಯ, ಕನ್ಯಾ/ಮಕರ ರಾಶಿಯವರಿಗೆ ಪಶ್ಚಿಮ ನೈಋುತ್ಯ, ತುಲಾ/ಕುಂಭ ರಾಶಿಯವರಿಗೆ ಪಶ್ಚಿಮ ವಾಯುವ್ಯ ದಿಕ್ಕುಗಳು ಉತ್ತಮ. ಮನೆಯ ಪ್ರವೇಶ ಮನೆಯ ಆರಂಭ ಈಶಾನ್ಯ ದಿಕ್ಕಿನಿಂದ ಆಗಬೇಕು. ಮನೆಗೆ ಬೇಕಾದ ಸಾಮಗ್ರಿಗಳನ್ನು ಪಶ್ಚಿಮ ಮತ್ತು ದಕ್ಷಿಣ ದಿಕ್ಕುಗಳಲ್ಲಿ ಇಡಬೇಕು. ಪೂರ್ವ ಮತ್ತು ಉತ್ತರ ಬೇಡ. ಬೇಗನೆ ತಡೆ ಇಲ್ಲದೆ ಆಗುವುದು. ಮನೆಗೆ ಪೂರ್ವ ಉತ್ತರ ಪ್ರವೇಶ ಆದರೆ ಮೆಟ್ಟಿಲು ಗಳು ಕನಿಷ್ಠ 3 ಗರಿಷ್ಟ 9 ಇರಬೇಕು. ಉಳಿದ ಮನೆಗಳಿಗೆ ಹೆಚ್ಚು ಮೆಟ್ಟಲುಗಳು ಇದ್ದಷ್ಟು ಉತ್ತಮ. ಆದರೆ ಬೆಸ ಸಂಖ್ಯೆ ಇರಬೇಕು 9 11 15 17 19 ಇತ್ಯಾದಿ. ಫ್ಲಾಟ್‌ ಆದರೆ ಪೂರ್ವ ಉತ್ತರ ಈಶಾನ್ಯಗಳಾದರೆ ಗರಿಷ್ಟ 4 ಮಹಡಿಗಳ ಕೆಳಗೆ ಇರಬೇಕು. ಉಳಿದವು ಎಷ್ಟು ಎತ್ತರ ಇದ್ದಷ್ಟು ಉತ್ತಮ. ಗಗನ ಚುಂಬಿ ಕಟ್ಟಡಗಳಿಗಳಾದರೆ ಆಗ್ನೇಯ ದಕ್ಷಿಣ ಭಾಗಗಳಲ್ಲಿ ತುದಿಗಳಲ್ಲಿ ಬೆದರು ಬೊಂಬೆ ಇರಬೇಕು. ಇಲ್ಲದಿದ್ದರೆ ಜನರ ಕೆಟ್ಟ ದೃಷ್ಟಿಯಿಂದಾಗಿ ಕೆಲವರು ಮೇಲಿಂದ ಬೀಳುವ ಸಾಧ್ಯತೆ ಇದೆ. ಇದು ಮೂಢನಂಬಿಕೆ ಎಂದು ಮೂದಲಿಸುವವರೂ ಇದ್ದಾರೆ ಆದರೆ ಇದು ಸತ್ಯ. ಟಿವಿ ಆನ್‌ ಮಾಡಲು ರಿಮೋಟ್‌ ಬಳಸುತ್ತೀರಿ. ಕೆಲವೊಮ್ಮೆ ಒತ್ತಿದರೂ ಟಿವಿ ಆನ್‌ ಆಗುವುದಿಲ್ಲ ಎಂದರೆ ಬ್ಯಾಟರಿ ವೀಕ್‌ ಆಗಿದೆ ಎಂದು ಅರ್ಥ. ಅದೇ ರೀತಿ ಕೆಲವರು ಏನು ಹೇಳಿದರೂ ಆಗುವುದಿಲ್ಲ. ಆದರೆ ಕೆಲವರ ದೃಷ್ಟಿ ತುಂಬಾ ಬಲಯುತವಾಗಿ ದೃಷ್ಟಿ ತಾಗುವುದು. ಮನೆ ಯಾವುದೇ ದಿಕ್ಕಿನಲ್ಲಿರಲಿ, ನಾವು ಪರಿಹಾರ ಮಂತ್ರ ಪಠಿಸಿದರೆ ದೋಷ ಬರಬಾರದು. ಎಲ್ಲರಿಗೂ ವಿವಿಧ ದೋಷಗಳಿಗೆ ತಕ್ಕಂತೆ ಪಠಿಸಲು ಮಂತ್ರಗಳಿವೆ. ಮನೆಯ ಮಧ್ಯ ಭಾಗದಲ್ಲಿ, ಪೂರ್ವ ದಿಕ್ಕಿನಲ್ಲಿ, ಆಗ್ನೇಯ, ಪಶ್ಚಿಮ, ದಕ್ಷಿಣ ಹೀಗೆ ವಿವಿಧ ದಿಕ್ಕುಗಳಲ್ಲಿ ಇರುವ ದೋಷ ನಿವಾರಣೆಗೆ ಪ್ರತ್ಯೇಕ ಮಂತ್ರಗಳಿವೆ. ದೋಷಗಳನ್ನು ತಿಳಿದು ಸೂಕ್ತ ಮಂತ್ರಗಳನ್ನು ಪಠಿಸಿದರೆ ಅವು ನಿವಾರಣೆಯಾಗುತ್ತವೆ. ನಂಬಿಕೆ ಇದ್ದು ಪಠಿಸಿದರೆ ಶ್ಮಶಾನದಲ್ಲಿ ಮನೆ ಇದ್ದರೂ ಸಹ ಉತ್ತಮ ಫಲ ಸಿಗುವುದು. ವಾಸ್ತು ಸಂಬಂಧ ಮಾಹಿತಿ ವಿಚಾರ ಮನೆಯ ಪೂರ್ವ-ಉತ್ತರ ಭಾಗಗಳಲ್ಲಿ ಭಾರವಾದ ಯಾವುದೇ ವಸ್ತುಗಳನ್ನು ಇಡಬಾರದು. ಆದರೆ ದಕ್ಷಿಣ ಪಶ್ಚಿಮ ನೈಋುತ್ಯ ಭಾಗಗಳಲ್ಲಿ ಭಾರವಾದ ವಸ್ತುಗಳು ಎಷ್ಟು ಇದ್ದರೂ ಒಳ್ಳೆಯದು. ಅಡುಗೆ ಮನೆ ಆಗ್ನೇಯ ಭಾಗದಲ್ಲಿ ಇದ್ದರೆ ಅತ್ಯುತ್ತಮ. ಜಾಗ ಇಲ್ಲದಿದ್ದರೆ ವಾಯುವ್ಯ ಭಾಗದಲ್ಲಿ ಇದ್ದರೂ ಆಗಬಹುದು. ಆದರೆ ಬಾಗಿಲು ಇರಬಾರದು. ಓಪನ್‌ ಕಿಚನ್‌ ಇರಬೇಕು. ಯಜಮಾನನು ಮಲಗುವ ಕೋಣೆ ನೈಋುತ್ಯ ಭಾಗದಲ್ಲಿ ಇದ್ದು ಎಲ್ಲಾ ಕೋಣೆಗಳಿಗಿಂತಲೂ ದೊಡ್ಡದು ಇರಬೇಕು. ದೇವರ ಕೋಣೆ ಈಶಾನ್ಯದಲ್ಲಿದ್ದು ದೇವರ ಮುಖ ಪೂರ್ವ ಅಭಿಮುಖವಾಗಿ ಇರತಕ್ಕದ್ದು. ಸೂರ್ಯನ ಕಿರಣಗಳು ದೇವರ ಕೋಣೆಗೆ ಬಿದ್ದರೆ ಅತ್ಯುತ್ತಮ. ಮಲಗುವ ಕೋಣೆಯಲ್ಲಿ ಮಂಚದ ಎದುರು ಕನ್ನಡಿ ಇರಬಾರದು. ಕನ್ನಡಿ ಯಾವಾಗಲೂ ಪೂರ್ವ ಗೋಡೆಯಲ್ಲಿ ಪಶ್ಚಿಮಕ್ಕೆ ಎದುರಾಗಿ ಇರಬೇಕು. ಉತ್ತರ ದಿಕ್ಕಿನಲ್ಲಿ ದಕ್ಷಿಣ ಅಭಿಮುಖವಾಗಿ ಇಡುವುದು ಉತ್ತಮ. ಸಾಧ್ಯತೆ ಗಳಿದ್ದರೆ ಮನೆಯ ಮುಖ್ಯ ಬಾಗಿಲಿನ ಎಡಬಲಭಾಗಗಳಲ್ಲಿ ಕಿಟಿಕಿಗಳಿದ್ದರೆ ಉತ್ತಮ. ಇವು ಎರಡು ಕಣ್ಣುಗಳು ಎಂಬ ಭಾವನೆ ಉಂಟಾಗುವುದು. ಇದಲ್ಲದೆ ಮನೆಯ ಸುತ್ತ ಮುತ್ತ ಸಾಕಷ್ಟು ಜಾಗ ಇದ್ದರೆ ಉತ್ತಮ. ಅಕ್ಕಪಕ್ಕದ ಮನೆಗಳು ಒಂದಕ್ಕೊಂದು ಅಂಟಿಕೊಂಡು ಇರುವ ಬದಲು ಜಾಗವಿದ್ದಲ್ಲಿ ವಾಸ್ತು ದೇವತೆಗೆ ಓಡಾಡಲು ಅನುಕೂಲ ಎನ್ನಲಾಗುತ್ತದೆ. ------- ಹೊಸದಾಗಿ ಮನೆ ಕಟ್ಟಿಸಿದಾಗ ಮೊದಲಾಗಿ ಸ್ಥಳ ಶುದ್ಧಿಗೆ ಪಂಚಗವ್ಯ ಹೋಮ ಮಾಡಲಾಗುತ್ತದೆ. ಇದಲ್ಲದೆ ಅನೇಕರು ಗೋ ಪ್ರವೇಶ ಮಾಡಿಸುತ್ತಾರೆ. ಮನೆ ಪ್ರವೇಶಕ್ಕೆ ಮುನ್ನ ವಾಸ್ತು ಪ್ರತಿಷ್ಠೆ, ವಾಸ್ತು ಹೋಮ ಮಾಡುತ್ತಾರೆ. ಗ್ರಹಶಾಂತಿ ಕೂಡ ಇದ್ದೇ ಇರುತ್ತದೆ. ಹಾಲು ಉಕ್ಕಿಸುವ ಶಾಸ್ತ್ರವಂತೂ ಇದ್ದೇ ಇರುತ್ತದೆ. ಇದಲ್ಲದೆ ಮನೆ ಬಾಡಿಗೆಗೆ ಕೊಡುವಾಗ ಮನೆಯ ಮಾಲೀಕರು ಹೇಗಿದ್ದರೂ ಅದಕ್ಕೆ ಸೂಕ್ತ ಸಂಸ್ಕಾರಗಳನ್ನು ಮಾಡಿಯೇ ಕೊಡುತ್ತಾರಾದ್ದರಿಂದ ಈ ಬಗ್ಗೆ ಬಾಡಿಗೆದಾರರು ಹೆಚ್ಚು ಚಿಂತೆ ಮಾಡಬೇಕಿಲ್ಲ. -ಎಂ.ವಿ.ಶರ್ಮಾ ತದ್ದಲಸೆ, ಶಾಸ್ತ್ರಕಾರರು. sangraha

ಜನ್ಮ ಕುಂಡಲಿಯ ಹನ್ನೆರಡು ಮನೆಗಳು

ಒಂದು ಜನ್ಮ ಕುಂಡಲಿಯಲ್ಲಿ ಹನ್ನೆರಡು ಮನೆಗಳಿರುತ್ತವೆ. ಈ ಒಂದೊಂದು ಮನೆಯೂ ಜೀವನದ ವಿವಿಧ ಕ್ಷೇತ್ರಗಳಿಗೆ ಅನ್ವಯಿಸುತ್ತವೆ. ಮೊದಲನೆಯ ಮನೆ ವ್ಯಕ್ತಿಯ ವ್ಯಕ್ತಿತ್ವ, ದೈಹಿಕ ರೀತಿಯನ್ನು ತಿಳಿಸುತ್ತದೆ. ಇದು ವ್ಯಕ್ತಿಯ ಆರ್ಥಿಕ ಸ್ಥಿತಿಗತಿ, ಹಣ ಗಳಿಸುವ ಬಗೆ ಇತ್ಯಾದಿಗಳನ್ನು ಸೂಚಿಸುತ್ತದೆ. ಮೂರನೇ ಮನೆ ವ್ಯಕ್ತಿಯ ಸುತ್ತಲಿನ ಆತ್ಮೀಯ ಪರಿಸರ ಅಂದರೆ ಸೋದರ-ಸೋದರಿಯರು, ಶಾಲೆ, ಆಫೀಸಿನ ಹತ್ತಿರದ ಪರಿಧಿಯನ್ನು ಹೇಳುತ್ತದೆ. ನಾಲ್ಕನೇ ಮನೆ ಕುಟುಂಬ, ತಲೆಮಾರು ಇತ್ಯಾದಿ ವಂಶ ಮಾಹಿತಿಯನ್ನು, ಐದನೇ ಮನೆ ಪ್ರೀತಿಪ್ರೇಮ, ಸುಖ, ಬಿಡುವು, ಮಕ್ಕಳು ಇತ್ಯಾದಿಗಳ ಬಗ್ಗೆ, ಆರನೇ ಮನೆ ದಿನನಿತ್ಯದ ಕೆಲಸ, ಸಹೋದ್ಯೋಗಿಗಳು, ಆರೋಗ್ಯ ಇತ್ಯಾದಿಗಳನ್ನು, ಏಳನೇ ಮನೆ ಮದುವೆಯ ಬಗ್ಗೆ, ಎಂಟನೇ ಮನೆ ಬದುಕಿನ ಇಷ್ಟ-ಕಷ್ಟಗಳು, ಲೈಂಗಿಕತೆ, ಸಾವಿನ ಕುರಿತು, ಒಂಬತ್ತನೇ ಮನೆ ಪ್ರವಾಸ, ಅಧ್ಯಾತ್ಮ ಇತ್ಯಾದಿಗಳ ಬಗ್ಗೆ, ಹತ್ತನೇ ಮನೆಯು ತಾಯಿ, ಸಾಮಾಜಿಕ ಯಶಸ್ಸಿನ ಬಗ್ಗೆ, 11ನೇ ಮನೆ ಗೆಳೆಯರು, ಭದ್ರತೆ ಇತ್ಯಾದಿಗಳ ಬಗ್ಗೆ, ಹನ್ನೆರಡನೇ ಮನೆ ವೈರಿಗಳು, ಕಷ್ಟಗಳು, ಗುಟ್ಟಿನ ಸಂಗತಿಗಳನ್ನು ಸೂಚಿಸುತ್ತವೆ.

ವಿವಾಹಕ್ಕೆ ಮುನ್ನ ಜಾತಕ ಪರಿಶೀಲನೆ

ವಿವಾಹಕ್ಕೆ ಮುನ್ನ ಜಾತಕಗಳನ್ನು ಪರಿಶೀಲಿಸುವುದು ಸಾಮಾನ್ಯ. ಈ ಪ್ರಕ್ರಿಯೆ ಏಕೆ ನಡೆಯುತ್ತದೆ? ಜಾತಕ ಮೇಳಾಮೇಳಿಯ ಉದ್ದೇಶವೇನು? ಪ್ರತಿಯೊಬ್ಬ ಮನುಷ್ಯನ ಜಾತಕದಲ್ಲಿ ಅವರವರ ಕುಂಡಲಿಯಲ್ಲಿರುವ ಗ್ರಹದಂತೆ ಫಲ ಕೊಡುತ್ತದೆ. ಇದು ಅವರ ಹಿಂದಿನ ಜನ್ಮದ ಕರ್ಮಾನುಸಾರವಾಗಿರುತ್ತದೆ. ವಿವಾಹ ಕೂಡಾ ಕರ್ಮಾನುಸಾರವಾಗಿರುತ್ತದೆ. ವಿಧಿಧಿ ಬರಹವನ್ನು ಬದಲಾಯಿಸಲು ಅಸಾಧ್ಯ. ಜಾತಕದಲ್ಲಿ ಶುಕ್ರ ಶನಿಗಳು ತಮ್ಮ ತಮ್ಮ ಕ್ಷೇತ್ರವನ್ನು ಬದಲಾಯಿಸುವುದು, ಶುಕ್ರ ಶನಿ ಒಟ್ಟಿಗೆ ಇರುವುದು ಇದು ಶುಕ್ರನ ಯೋಗವನ್ನು ಕೆಡಿಸುವುದು. ಜಾತಕದಲ್ಲಿ ಸಮಸ್ಯೆ ಇದ್ದರೆ ಹಲವು ಸಮಸ್ಯೆಗಳು ಬರುವುವು. ಮದುವೆಯಾಗುವ ವಯಸ್ಸಿನಲ್ಲಿ ಎಷ್ಟು ಒದ್ದಾಡಿದರೂ ಸಮಯ ಕೂಡಿ ಬರುವುದಿಲ್ಲ, ಪ್ರೀತಿಸಿದ ಹೆಣ್ಣು ಕೈಕೊಟ್ಟು ಬೇರೆಯವರನ್ನು ಮದುವೆಯಾಗುವುದು, ಗಂಡ ಮಕ್ಕಳಾದರೆ ಮದುವೆಗೆ ಮುನ್ನ ಮತ್ತೊಬ್ಬರ ಸ್ತ್ರೀ ಸಂಬಂಧ ಇರುವುದು, ಕೈ ಹಿಡಿದ ಹೆಂಡತಿಗೆ ಕಾಯಿಲೆಗಳು ಬರುವುದು, ಮದುವೆಯ ನಂತರ ಗಂಡ- ಹೆಂಡತಿ ವಾದ ವಿವಾದ ಮಾಡಿ ಹೆಣ್ಣನ್ನು ಬಿಡುವುದು, ಬೇರೆ ಸ್ತ್ರೀ ಸಂಬಂಧದಿಂದ ಕಾಯಿಲೆಗಳು ಬರುವುದು, ಶನಿಯು ನೀಚ ಸ್ಥಾನದಲ್ಲಿರುವುದರಿಂದ ಇದರಿಂದ ನೀಚ ಜಾತಿಯ ಸ್ತ್ರೀ ಸಂಬಂಧವಾಗುವುದು, ಬೇರೆ ಬೇರೆ ರೀತಿಯ ತೊಂದರೆಗಳು ಬರುತ್ತವೆ. ಇಂಥವೆಲ್ಲ ಒಂದು ಸಮಸ್ಯೆಯಾಗಿ ಕಾಡುತ್ತವೆ. ಆದರೆ, ಇದಕ್ಕೆ ಕಾರಣವೇನು ಎಂದು ತಿಳಿಯುವುದು ಕೂಡಾ ಇಲ್ಲ. ಇಂಥವರಿಗೆ ದಾಂಪತ್ಯ ಜೀವನದಲ್ಲಿ ಸುಖ ಎಂಬುದು ಕನಸಿನಲ್ಲಿಯೂ ಇರುವುದಿಲ್ಲ. ಇವರ ದೇವತಾರಾಧನೆಗೆ ವೈರಾಗ್ಯ ನಿಷ್ಠೆ, ಗುರು ಅನುಗ್ರಹ ಇತ್ಯಾದಿ ಒಳ್ಳೆಯ ಗುಣಗಳಿರುತ್ತದೆ. ಇವರಿಂದ ಬೇರೆಯವರಿಗೆ ಸಹಾಯ ಸಿಗುತ್ತದೆ. ಇತರರು ಇವರು ಒಳ್ಳೆಯವರು, ಇವರಿಗೆ ಈ ರೀತಿಯ ಕಷ್ಟ ಸಿಗಬಾರದಿತ್ತು ಎಂದು ಹೇಳುತ್ತಾರೆ. ಇವರಿಗೆ ಬಡವರಲ್ಲಿ ಪ್ರೀತಿ, ಕೆಲಸಗಾರರಲ್ಲಿ ಪ್ರೀತಿ ಇರುತ್ತದೆ. ಇವರು ಶಾಂತಿಪಾಲಕರಾಗಿರುತ್ತಾರೆ. ಶುಕ್ರನಿಗೆ ಗುರು ಯೋಗ ಇದ್ದರೆ ಮಕ್ಕಳಾಗುತ್ತದೆ. ಶನಿ ಮತ್ತು ಚಂದ್ರರು ಒಂದೇ ಮನೆಯಲ್ಲಿದ್ದರೆ ವಿವಾಹಕ್ಕೆ ಅಡೆತಡೆಯಾಗುತ್ತದೆ. ಸಂಬಂಧಗಳು ಬೇಕಾದಷ್ಟು ಬಂದರೂ ವಿವಾಹವಾಗುವುದಿಲ್ಲ. ಶನಿ ಚಂದ್ರನ ಮೇಲೆ ದೃಷ್ಟಿ ಇದ್ದಾಗ ಮತ್ತು ಚಂದ್ರ ಶನಿಯು ಕೇಂದ್ರ ಸ್ಥಾನದಲ್ಲಿ ಇದ್ದರೂ ಮದುವೆಗೆ ಅಡೆತಡೆಯಾಗುವುದು ಖಂಡಿತ. 2-7-11 ಮನೆಯು ವಿವಾಹಕ್ಕೆ ಪ್ರಮುಖ ಸ್ಥಾನ. ಶುಭ ಗ್ರಹಗಳಾದ ಗುರು ಚಂದ್ರ ಬುಧ ಶುಕ್ರ ಇದ್ದರೆ ಅಥವಾ 2-7-11ನೇ ಮನೆಯ ಅಧಿಧಿಪತಿಯೊಡನೆ ಶುಭಗ್ರಹ ಇದ್ದರೂ ಶುಭಗ್ರಹಗಳು 2-7-11ನೇ ಮನೆಗಳನ್ನು ಅಥವಾ ಆ ಮನೆಯ ಅಧಿಧಿಪತಿಯನ್ನು ನೋಡಿದರೂ ಇಂತಹ ಜಾತಕರ ಮದುವೆಯು ಸರಿಯಾದ ಸಮಯಕ್ಕೆ ನಡೆಯುತ್ತದೆ, ಒಳ್ಳೆಯ ಸಂಬಂಧ ಸಿಗುತ್ತದೆ. ಹರಿಶ್ಚಂದ್ರ ಪಿ. ಸಾಲಿಯಾನ್‌ sangraha

ಜಾತಕದಲ್ಲಿ ಪಿತೃದೋಷ

ಮೂರು ಮುಖ್ಯ ದೋಷಗಳಲ್ಲಿ ಪಿತೃದೋಷವೂ ಒಂದು. ಇದು ಏಕೆ ಬರುತ್ತದೆ, ಇದನ್ನು ನಿವಾರಿಸುವುದು ಹೇಗೆ ಎಂಬ ಬಗ್ಗೆ ಇಲ್ಲಿದೆ ಮಾಹಿತಿ. ಹಿಂದೂ ಪಂಚಾಂಗದ ಪ್ರಕಾರ ಒಂದು ಸಂವತ್ಸರದಲ್ಲಿ 12 ಅಮಾವಾಸ್ಯೆ ಬರುವುದು. ಅವು ಯಾವುವು ಎಂದರೆ ಅಕ್ಷಯತದಿಗೆ ಅಮಾವಾಸ್ಯೆ, ಬಾದಾಮಿ ಅಮಾವಾಸ್ಯೆ, ಮಣ್ಣೆತ್ತಿನ ಅಮಾವಾಸ್ಯೆ, ನಾಗರ ಅಮಾವಾಸ್ಯೆ, ಬೆನಕ ಅಮಾವಾಸ್ಯೆ, ಮಹಾಲಯ ಅಮಾವಾಸ್ಯೆ, ದೀಪಾವಳಿ ಅಮಾವಾಸ್ಯೆ, ಛಟ್ಟಿ ಅಮಾವಾಸ್ಯೆ, ಎಳ್ಳಮಾವಾಸ್ಯೆ, ಅವರಾತ್ರಿ ಅಮಾವಾಸ್ಯೆ, ಶಿವರಾತ್ರಿ ಅಮಾವಾಸ್ಯೆ, ಯುಗಾದಿ ಅಮಾವಾಸ್ಯೆ. ಅಮಾವಾಸ್ಯೆ ಎಂಬುದಕ್ಕೆ ವಿಶೇಷ ಅರ್ಥವಿದೆ. ಅಮಾಯಾಂ ವಸತಃ -ಅಂದರೆ ಸೂರ್ಯ ಚಂದ್ರರು ಒಂದೇ ಮನೆಯಲ್ಲಿರುವುದು (ಸರಳ ರೇಖೆಯಲ್ಲಿ). ಪ್ರತಿವರ್ಷ ಬರುವ ಭಾದ್ರಪದ ಮಾಸದ ಮಹಾಲಯ ಅಮಾವಾಸ್ಯೆ ಎಲ್ಲಾ ಅಮಾವಾಸ್ಯೆಗಳಿಗಿಂತ ವಿಶೇಷವಾದದ್ದು. ಆದ್ದರಿಂದ ಇದನ್ನು ಮಹಾಲಯ ಅಮಾವಾಸ್ಯೆ ಎಂದು ಕರೆದರು. ಈ ಅಮಾವಾಸ್ಯೆ ಪಿತೃಪಕ್ಷದ ಕೊನೆಯ ದಿನ. ಕುಂಡಲಿಯಲ್ಲಿಯೂ ಪಿತೃದೋಷ ದೋಷಗಳಲ್ಲಿ ಅತಿ ಮುಖ್ಯವಾದವು ಎಂದರೆ ಕುಜ ದೋಷ, ರಾಹು ದೋಷ ಹಾಗೂ ಪಿತೃದೋಷ. ಲಗ್ನದಿಂದ 5, 6 ಮತ್ತು 7ನೇ ಮನೆಯಿಂದ ಪಿತೃದೋಷವನ್ನು ಕಂಡುಹಿಡಿಯಲು ಸಾಧ್ಯ. ಲಗ್ನದಿಂದ 5ನೇ ಮನೆಯಲ್ಲಿ ರಾಹು ಮತ್ತು ಗುರು ಇದ್ದರರೆ ಅದಕ್ಕೆ ರವಿ ದೃಷ್ಟಿ ಇದ್ದರೆ ಪಿತೃದೋಷ ಬರುವುದು. ಇದರಿಂದ ಸಂತಾನಕ್ಕೆ ತೊಂದರೆ ಇರುತ್ತದೆ. ಲಗ್ನದಿಂದ 7ನೇ ಮನೆಯಲ್ಲಿ ರಾಹು ಅಥವಾ ಕೇತು ಗ್ರಹಗಳು ಇದ್ದು ಅದಕ್ಕೆ ಶುಕ್ರನ ದೃಷ್ಟಿ ಇದ್ದರೆ ವಿವಾಹಕ್ಕೆ ತಡೆ ಉಂಟಾಗುವುದು. ಲಗ್ನದಿಂದ ಮಾತೃಸ್ಥಾನವನ್ನು 4ನೇ ಮನೆಯಿಂದ, ಪಿತೃಸ್ಥಾನವನ್ನು 9ನೇ ಮನೆಯಿಂದ ತಿಳಿಯಬಹುದು. ಆ ಮನೆಗಳಲ್ಲಿ ಪಾಪಗ್ರಹಗಳಿದ್ದು ರವಿ ದೃಷ್ಟಿ ಇದ್ದರೆ ಆಗಲೂ ಪಿತೃದೋಷ ಉಂಟಾಗುವುದು. ಪಿತೃಗಳು ಗತಿಸಿದಾಗ ಅವರ ಕಾಲಾಂತರದ ಕ್ರಿಯೆಗಳು ಸರಿಯಾಗಿ ಮಾಡದೆ ಇರುವುದು, ಪ್ರತಿವರ್ಷ ಪಿತೃಗಳ ಕಾರ್ಯ ಮಾಡದೇ ಇರುವುದು, ಅಪಘಾತದಲ್ಲಿ ಮರಣ ಹೊಂದಿದ ವ್ಯಕ್ತಿಗೆ ಸರಿಯಾದ ರೀತಿಯಲ್ಲಿ ಕಾರ್ಯ ಮಾಡದೇ ಇರುವುದು : ಈ ಕಾರಣಗಳಿಂದಾಗಿ ದೋಷ ಉಂಟಾಗಲು ಸಾಧ್ಯ. ದೈವಾರಾಧನೆ ಮರೆತರೂ ಶ್ರಾದ್ಧಕಾರ್ಯವನ್ನು ಮರೆಯಬಾರದು ಎನ್ನುತ್ತದೆ ಶಾಸ್ತ್ರ. ಏಕೆಂದರೆ ದೇವತೆಗಳಿಗೆ ಹವಿಸ್ಸನ್ನು ಯಜ್ಞ, ಯಾಗ ಹಾಗೂ ಹೋಮಗಳ ಮೂಲಕ ಅಗ್ನಿಯಿಂದ ನೀಡಿರುತ್ತೇವೆ. ಅದೇ ರೀತಿ ಪಿತೃದೇವತೆಗಳಿಗೆ ಶ್ರಾದ್ಧ ಮಾಡುವಾಗ ಎಳ್ಳಿನಿಂದ ತರ್ಪಣ ನೀಡುತ್ತೇವೆ ಹಾಗೂ ಅವರಿಗೆ ಇಷ್ಟವಾದ ಆಹಾರ ಪದಾರ್ಥವನ್ನೂಎಡೆ ಇಡುತ್ತೇವೆ. ಸ್ಥೂಲ ಶರೀರದಲ್ಲಿ ನಮ್ಮ ಕಣ್ಣ ಮುಂದೆ ಇಲ್ಲದಿದ್ದರೂ ಸೂಕ್ಷ್ಮ ಶರೀರದಿಂದ ಪರೋಕ್ಷವಾಗಿ ನಾವು ಮಾಡುವ ಪಿತೃಕಾರ್ಯಗಳನ್ನು ಅವರು ವೀಕ್ಷಿಸುತ್ತಾರೆ. ಅವರ ಆಶೀರ್ವಾದದಿಂದಲೇ ನಮಗೆ ವಿವಾಹ, ಸಂತಾನ, ಸುಖ ಹಾಗೂ ಧನಲಾಭಗಳು ಉಂಟಾಗುತ್ತವೆ. ಮಹಾಲಯ ಅಮಾವಾಸ್ಯೆ ಸಮಯದಲ್ಲಿ ಹಿರಿಯರ ಕಾರ‍್ಯ ಮಾಡುವುದರ ಜೊತೆಯಲ್ಲಿ ಮನೆಯಲ್ಲಿ ಸಾಕಿದ ಪ್ರಾಣಿಪಕ್ಷಿಗಳು ಗತಿಸಿರುತ್ತವೆ. ಅವುಗಳಿಗೂ ಸಹ ಕಾರ್ಯವನ್ನು ಮಾಡಬಹುದು. ವರವೂ ಉಂಟು ಶಾಪವೂ ಉಂಟು ಸುರಪುರದಲ್ಲಿ ರಾಮಭಟ್ಟ ಎಂಬುವನು ತನ್ನ ತಂದೆತಾಯಿಯ ಶ್ರಾದ್ಧವನ್ನು ಶ್ರದ್ಧೆಯಿಂದ ಮಾಡುತ್ತಿದ್ದನು. ಆದರೆ, ಆತನಿಗೆ ಬಡತನದ ಒತ್ತಡ ಕಾಡುತ್ತಿತ್ತು. ಆದರೂ ಪಿತೃಕಾರ್ಯ ಮಾತ್ರ ಬಿಡುತ್ತಿರಲಿಲ್ಲ. ಒಂದು ಸಲ ಪಿತೃಕಾರ್ಯ ಮಾಡಲು ಮನೆಯಲ್ಲಿ ಯಾವ ಆಹಾರ ಪದಾರ್ಥವೂ ಇರಲಿಲ್ಲ.ಎಳ್ಳು ಮಾತ್ರ ಇತ್ತು. ಅದರಿಂದಲೇ ಎಳ್ಳುಂಡೆ ಮಾಡಿ ಬ್ರಾಹ್ಮಣರಿಗೆ ದಾನ ಮಾಡಿದ. ಆ ದಿನ ರಾತ್ರಿ ಅವನ ತಂದೆ ಕನಸಿನಲ್ಲಿ ಬಂದು, 'ನಾನು ಮಲಗುತ್ತಿದ್ದ ಜಾಗದಲ್ಲಿ (ನೆಲದ ಕೆಳಗೆ) ಹಣವನ್ನು ಇಟ್ಟಿರುವೆ, ಅದನ್ನು ಅನುಭವಿಸು' ಎಂದನು. ಅದರಂತೆ ಆ ಜಾಗದಲ್ಲಿ ನೋಡಿದಾಗ ಹಣ ಇತ್ತು. ಅದನ್ನು ತೆಗೆದುಕೊಂಡು ಶ್ರೀಮಂತನಾದನು. ಪಿತೃಗಳಿಂದ ವರ ಲಭಿಸಿತು. ಮೂರನೇ ವರ್ಷ ಪಿತೃಕಾರ್ಯ ಮಾಡಲು ಹಣ ಇದ್ದರೂ ಎಳ್ಳುಂಡೆಯನ್ನೇ ದಾನ ಮಾಡಿದನು. ಇದರಿಂದ ಪಿತೃಗಳು ಕೋಪಗೊಂಡು ಶಾಪವನ್ನು ಆತನಿಗೆ ನೀಡಿ, ನೀನು ಮೊದಲಿನಂತೆ ಬಡತನ ಅನುಭವಿಸು ಎಂದರು. ಮಾತಾಪಿತೃಗಳು ಇರುವಾಗ ಅವರನ್ನು ಸರಿಯಾಗಿ ನೋಡಿಕೊಳ್ಳದೆ ಅವರ ನಿಧನದ ನಂತರ ಅವರ ಕಾರ್ಯವನ್ನು ಅದ್ಧೂರಿಯಾಗಿ ಮಾಡಿದರೆ ಉಪಯೋಗ ಇರುವುದಿಲ್ಲ. ತಂದೆತಾಯಿ ಪ್ರತ್ಯಕ್ಷ ದೇವರು ಎಂಬ ನಂಬಿಕೆ ನಮ್ಮಲ್ಲಿ ದೃಢವಾಗಿರುವುದು ಇದಕ್ಕೇ. --- ಮಹಾಲಯ ಅಮಾವಾಸ್ಯೆ ಮಾಡುವಾಗ ಈ ಅಂಶಗಳು ಗಮನದಲ್ಲಿರಲಿ: *ಶ್ರಾದ್ಧದ ದಿನ ಮನೆಯ ಮುಂದೆ ಮತ್ತು ದೇವರ ಮುಂದೆ ರಂಗೋಲಿ ಹಾಕಬಾರದು, ಕಾರ್ಯದ ನಂತರ ಹಾಕಬೇಕು * ಶ್ರಾದ್ಧವನ್ನು ಸ್ವಗೃಹದಲ್ಲಿಯೇ ಮಾಡಬೇಕು. *ಶ್ರಾದ್ಧವನ್ನು ಗಂಡು ಮಕ್ಕಳು ಮಾಡಬೇಕು . ಅವರು ಇಲ್ಲದೆ ಇದ್ದರೆ ಅಳಿಯಂದಿರು ಮಾಡಬಹುದು. *ಶ್ರಾದ್ಧವನ್ನು ಮಧ್ಯಾಹ್ನ 12 ಗಂಟೆ ನಂತರ ಮಾಡಬೇಕು. *ಶ್ರಾದ್ಧ ಮಾಡಿದ ದಿನ ರಾತ್ರಿ ಊಟ ಮಾಡಬಾರದು. *ಶ್ರಾದ್ಧ ಪ್ರಸಾದವನ್ನು ಮನೆಯವರು ಮಾತ್ರ ಉಪಯೋಗಿಸಬೇಕು. *ಶ್ರಾದ್ಧದಲ್ಲಿ ಹತ್ತಿರದ ಸಂಬಂಧಿಕರು ಮಾತ್ರ ಭಾಗಿ ಆಗಬೇಕು. *ಶ್ರಾದ್ಧ ಮಾಡಲು ಅನನುಕೂಲ ಇದ್ದರೆ ಸ್ವಯಂ ಪಾಕ ಅಥವಾ ಪಡಿಯನ್ನು ನೀಡಬಹುದು. *ಶ್ರಾದ್ಧದ ದಿನ ಹಾಗೂ ಹಿಂದಿನ ದಿನ ಬ್ರಹ್ಮ ಚರ‍್ಯವನ್ನು ಪಾಲಿಸಬೆಕು. * ಶ್ರಾದ್ಧವನ್ನು ದಕ್ಷಿಣ ದಿಕ್ಕಿಗೆ ತಿರುಗಿ ಮಾಡಬೇಕು *ಶ್ರಾದ್ಧ ಮಡುವವರು ಹಿಂದಿನ ದಿನ ರಾತ್ರಿ ಊಟ ಮಾಡಬಾರದು ಫಲಹಾರ ಮಾಡಬೇಕು *ಶ್ರಾದ್ಧವನ್ನು ಶ್ರದ್ಧೆಯಿಂದ ಮಾಡಬೇಕು. ಕೆಲವು ಆಚರಣೆಗಳು ಅವರವರ ಸಂಪ್ರದಾಯಕ್ಕೆ, ರೂಢಿಗತ ಆಚರಣೆಗೆ ತಕ್ಕಂತೆ ಬದಲಾಗಬಹುದು. ಕೆ.ಆರ್‌.ಪಿ ಜೋಯಿಸ್‌ sangraha

ಮೂಲ ನಕ್ಷತ್ರ ಶುಭಕಾರಕ-ಮಂಡಗದ್ದೆ ಪ್ರಕಾಶ ಬಾಬು ಕೆ.ಆರ್‌.

ರಾತ್ರಿ ಸಮಯದಲ್ಲಿ ನೀಲ ಆಕಾಶವನ್ನು ನೋಡಿದರೆ ಅಗಣಿತವಾದ ಮಿನುಗುವ ಚುಕ್ಕೆಗಳೂ, ತೇಜಃಪುಂಜವಾದ ನಕ್ಷತ್ರಗಳು ನಮ್ಮ ಕಣ್ಣಿಗೆ ಗೋಚರವಾಗುವುವು. ಭಾರತೀಯ ವೇದಾಂಗ ಜ್ಯೋತಿಷ್ಯ ಶಾಸ್ತ್ರದಲ್ಲಿ 27 ನಕ್ಷತ್ರಗಳನ್ನು ಮಾತ್ರ ಗಣನೆಗೆ ತೆಗೆದುಕೊಂಡಿದ್ದು, ಅದರಲ್ಲಿ ಕೆಲವು ನಕ್ಷತ್ರಗಳಿಗೆ ಹೆಚ್ಚಿನ ಪ್ರಾಧ್ಯಾನತೆಯನ್ನು ಕೊಟ್ಟಿರುತ್ತಾರೆ. ಅವು ಯಾವುವೆಂದರೆ- ಮೂಲ, ಆಶ್ಲೇಷ, ವಿಶಾಖ ಮತ್ತು ಜೇಷ್ಠ ನಕ್ಷತ್ರ. ಇವುಗಳನ್ನು ಸ್ತ್ರೀಯರಿಗೆ ಮಾತ್ರ ಬಹಳ ದೋಷಕಾರಕ ನಕ್ಷತ್ರಗಳಾಗಿವೆ ಎಂದು ಹೇಳಿರುವರು. ಮೂಲ ನಕ್ಷತ್ರದ ಬಗ್ಗೆ ಗಮನ ಹರಿಸಿದಾಗ, ಈ ನಕ್ಷತ್ರಗಳನ್ನು ಮೂರು ಗುಂಪುಗಳಾಗಿ ಮಾಡಿರುತ್ತಾರೆ. ಅಶ್ವಿನಿಯಿಂದ ಆಶ್ಲೇಷ ನಕ್ಷತ್ರದ ತನಕ ಒಂದು ಗುಂಪು. ಮಖಾ ನಕ್ಷತ್ರದಿಂದ ಜೇಷ್ಠ ನಕ್ಷತ್ರದ ತನಕ ಇನ್ನೊಂದು ಗುಂಪು. ಮೂರನೆಯದಾಗಿ ಮೂಲ ನಕ್ಷತ್ರದಿಂದ ರೇವತಿ ನಕ್ಷತ್ರದ ತನಕ ಮತ್ತೊಂದು ಗುಂಪು. ಇವುಗಳಲ್ಲಿ ಅಶ್ವಿನಿ, ಮಖಾ ಮತ್ತು ಮೂಲ ನಕ್ಷತ್ರ ಮೊದಲನೇ ನಕ್ಷತ್ರಗಳು. ಮೂಲ ನಕ್ಷತ್ರ ಮೊದಲನೆಯದಾಗಿದ್ದರಿಂದ ಅದಕ್ಕೆ ಋುಷಿ ಮುನಿಗಳು ಮೂಲ ನಕ್ಷತ್ರ ಎಂದು ಕರೆದರು. ಇದರ ಅಧಿಪತಿ ಕೇತು ಗ್ರಹ. ಮೂಲ ನಕ್ಷತ್ರದ 1ನೇ ಪಾದದಲ್ಲಿ ಹೆಣ್ಣು ಮಗು ಜನಿಸಿದರೆ 8 ವರ್ಷದ ತನಕ ಮಗು ತಂದೆಯನ್ನು ನೋಡಬಾರದು ಎಂದೂ 2ನೇ ಪಾದವಾದರೆ ತಾಯಿಗೆ ದೋಷ, 3ನೇ ಪಾದವಾದರೆ ತಂದೆಗೆ ಬರುವ ಆದಾಯದಲ್ಲಿ ನಷ್ಟ ಹಾಗೂ 4ನೇ ಪಾದವಾದರೆ ಶುಭ ಎಂದು ಹೇಳಿರುವರು. ಮೂಲ ನಕ್ಷತ್ರದಲ್ಲಿ ಹೆಣ್ಣು ಮಗು ಜನಿಸಿದರೆ ಮದುವೆಯ ನಂತರ ಪತಿಯ ತಂದೆಗೆ (ಮಾವ)ನಿಗೆ ಕಂಟಕವಾಗುವುದು ಎಂದು ಹೇಳಲಾಗಿದೆ. ಜಾತಕದಲ್ಲಿ ಚಂದ್ರನಿಗೆ ಶುಭ ದೃಷ್ಟಿ ಇದ್ದರೆ, ಯಾವ ಭಾವಕ್ಕೆ ದೋಷ ಆಗಿದೆ ಆ ಭಾವದ ಅಧಿಪತಿ 9ನೇ ಮನೆಯಲ್ಲಿ ಆಗಲಿ ಅಥವಾ ಶುಭ ಸ್ಥಾನದಲ್ಲಿದ್ದರೆ, ಶುಭ ಗ್ರಹಗಳಿಂದ ದೃಷ್ಟಿಸಿದ್ದರೆ, ಚಂದ್ರನಾಗಲಿ, ಭಾವಾಧಿಪತಿಯಾಗಲಿ ಬಲಿಷ್ಠನಾಗಿದ್ದರೆ, ಚಂದ್ರನಿಗೆ ಗುರು ದೃಷ್ಟಿ ಇದ್ದರೆ ಈ ಮೇಲಿನ ಮೂಲ ನಕ್ಷತ್ರದ ದೋಷಗಳೆಲ್ಲಾ ಪರಿಹಾರವಾಗುವುದು. ಇದನ್ನು ಯಾರು ಗಣನೆಗೆ ತೆಗೆದುಕೊಳ್ಳದೆ ಮೂಲ ನಕ್ಷತ್ರ ಎಂದ ತಕ್ಷಣ ಕೆಟ್ಟ ನಕ್ಷತ್ರ ಎಂದು ನಿರ್ಧರಿಸುವುದು ಸರಿಯಲ್ಲ. ಸಾಕ್ಷಾತ್‌ ಸರಸ್ವತಿ ದೇವಿಯ ಜನನವಾಗಿದ್ದೂ ಮೂಲ ನಕ್ಷತ್ರದಲ್ಲಿಯೇ. ನವರಾತ್ರಿಯ ಸಮಯದಲ್ಲಿ ಮೂಲ ನಕ್ಷತ್ರದ ದಿನ ಸರಸ್ವತಿ ದೇವಿಯನ್ನು ವಿಶೇಷ ರೀತಿಯಲ್ಲಿ ಪೂಜಿಸುವರು. ಅಂದು ಆ ದೇವಿಯು ಜನಿಸಿದ ದಿನ ಎಂದು ಸರಸ್ವತಿಯನ್ನು ಆವಾಹನೆ ಮಾಡಿ ಪುಸ್ತಕಗಳನ್ನು ಇಟ್ಟು ಪೂಜಿಸುವುದು ವಾಡಿಕೆಯಾಗಿದೆ. ಸಾಕ್ಷಾತ್‌ ಸರಸ್ವತಿ ದೇವಿಯದೇ ಮೂಲ ನಕ್ಷತ್ರವಾಗಿದ್ದರಿಂದ ಈ ನಕ್ಷತ್ರವನ್ನು ಒಳ್ಳೆಯ ನಕ್ಷತ್ರ ಎಂದೇ ಪರಿಗಣಿಸಬಹುದು. ವಿವಾಹ, ವಿದ್ಯಾರಂಭ, ಯಾತ್ರೆ, ಸೀಮಂತ, ಶಿಶುವಿಗೆ ತೊಟ್ಟಿಲು ಇನ್ನು ಮುಂತಾದ ಶುಭ ಕಾರ್ಯಗಳನ್ನು ಈ ಮೂಲ ನಕ್ಷತ್ರದ ದಿನ ಮಾಡುತ್ತಾರೆ. ಆದ್ದರಿಂದ ಮೂಲ ನಕ್ಷತ್ರ ಶುಭ ನಕ್ಷತವೇ ಆಗಿದೆ.

ನವಧಾನ್ಯವೂ ಪರಿಹಾರವೂ

ಫಲ ಜ್ಯೋತಿಷ್ಯ- ವಿದ್ಯಾರ್ಥಿಗಳ ಮುಂದೆ ಕ್ಷೇತ್ರಗಳ ಆಯ್ಕೆ ಬಹಳ. ತಾವು ಆಯ್ಕೆ ಮಾಡಿಕೊಂಡ ಕ್ಷೇತ್ರದಲ್ಲಿ ಮುನ್ನಡೆಯಲು ಅನುಸರಿಸಬೇಕಾದ ಸುಲಭ ಪರಿಹಾರವೇನು? ಎಂಬುದಕ್ಕೆ ಜ್ಯೋತಿಷ್ಯಶಾಸ್ತ್ರದಲ್ಲಿ ಸರಳ ಪರಿಹಾರವಿದೆ. ಅದನ್ನು ಪಾಲಿಸಿ ಕ್ಷಿಪ್ರ ಲಾಭವನ್ನು ಹೊಂದಬಹುದು. ವಿದ್ಯಾರ್ಥಿಗಳಿಗೆ ಒಂದಿಲ್ಲೊಂದು ಆತಂಕ. ಅತ್ತ ಪರೀಕ್ಷಾ ಜ್ವರ. ಇತ್ತ ಪ್ರತಿನಿತ್ಯ ಅಸೈನ್‌ಮೆಂಟ್‌. ಮನೆಯಲ್ಲಿ ಪೋಷಕರಿಂದ ಓದು ಓದು ಅನ್ನೋ ಒತ್ತಡ. ಶಾಲೆ, ಕಾಲೇಜು ಮುಗಿಸಿ ಬಂದ ಮೇಲೆ ಟ್ಯೂಷನ್‌. ಟ್ಯೂಷನ್‌ ಅನ್ನೋ ಫ್ಯೂಷನ್‌ನಲ್ಲೇ ಸ್ಟೂಡೆಂಟ್‌ ಲೈಫ್‌ನಲ್ಲಿ ಪರ್ಫೆಕ್ಷನ್‌ ಸಾಧಿಸಬೇಕು. ಕಾಂಪಿಟೇಷನ್‌ ವರ್ಲ್ಡ್‌ನಲ್ಲಿ ಉತ್ತಮ ಅಂಕ ಗಳಿಸಬೇಕು. ಅಬ್ಬಾ ಎಷ್ಟೊಂದು ಟೆನ್ಷನ್‌! ಜ್ಯೋತಿಷ್ಯಶಾಸ್ತ್ರ ಎಲ್ಲದಕ್ಕೂ ಒಂದಿಷ್ಟು ಪರಿಹಾರ ಸೂಚಿಸುತ್ತದೆ. ವಿದ್ಯಾರ್ಥಿಗಳ ಪಾಡಿಗೆ ಏನಾದರೂ ಪರಿಹಾರ ಇದೆಯಾ? ಅದೂ ನಮ್ಮ ಕೈಗೆ ಎಟುಕವಂತಿದೆಯಾ? ಹಾಂ ಇದೆ... ಜ್ಯೋತಿಷ್ಯಶಾಸ್ತ್ರದ ಲೆಕ್ಕಾಚಾರಗಳು ನವಗ್ರಹದ ಚಲನೆಯನ್ನು ಆಧರಿಸಿವೆ. ಒಂದೊಂದು ಗ್ರಹವು ಒಂದೊಂದು ಧಾನ್ಯದ ಪ್ರತೀಕವಾಗಿವೆ. ಅಂದಮೇಲೆ ನವಧಾನ್ಯಗಳ ಆಧಾರದ ಮೇಲೆ ವಿದ್ಯಾರ್ಥಿಗಳ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಸಾಧ್ಯವೇ? ಸೋಜಿಗವೆನಿಸಿದರೂ ಸಾಧ್ಯವಿದೆ. ಯಾವ ಧಾನ್ಯದಿಂದ ಯಾವ ಪರಿಹಾರ ಅಂತ ನೋಡೋಣ. ಗೋಧಿ : ಸೂರ್ಯ ಗ್ರಹವನ್ನು ಪ್ರತಿನಿಧಿಸುತ್ತದೆ. ವಿದ್ಯಾ ವಿಹೀನಃ ಪಶುಃ ಎನ್ನುವಂತೆ ವಿದ್ಯೆಯಿಲ್ಲದ ಬಾಳು ನಾಯಿಗಿಂತ ಕಡೆ. ಅದರಲ್ಲೂ ವಿದ್ಯಾರ್ಥಿಯಾದವನಿಗೆ ವಿದ್ಯೆಯೇ ಬಂಡವಾಳ. ತಾನು ತೆಗೆದುಕೊಂಡ ಕೋರ್ಸ್‌ನಲ್ಲಿ ಉತ್ತಮ ಅಂಕ ಪಡೆದರೇನೇ ಅವಕಾಶ. ಸೂರ್ಯ ಜ್ಞಾನ ಪ್ರದಾಯಕ. ಅವನ ಸಂಕೇತವಾದ ಗೋಧಿ ಪೌಷ್ಟಿದಾಯಕ. ಭಾನುವಾರ ಸೂರ್ಯನಿಗೆ ಸಂಬಂಧಿಸಿದ ವಾರ. ನವಗ್ರಹಗಳನ್ನು ವಿಗ್ರಹಗಳಿಂದಷ್ಟೇ ಅಲ್ಲದೇ ಸಂಬಂಧಿತ ವೃಕ್ಷಗಳಿಂದಲೂ ಗುರುತಿಸುತ್ತೇವೆ. ಹಾಗಾಗಿ ಸೂರ್ಯನ ಕೃಪೆ ಸಂಪಾದಿಸಲು ಜ್ಞಾನವಂತರಾಗಲು ಪ್ರತಿ ಭಾನುವಾರ ನವಗ್ರಹ ವೃಕ್ಷಗಳಿಗೆ ಅಥವಾ ನವಗ್ರಹ ಸನ್ನಿಧಾನಕ್ಕೆ ಎರಡು ಸುತ್ತು ಪ್ರದಕ್ಷಿಣೆ ಬನ್ನಿ. ಕಾಲು ಕೆ.ಜಿ.ಯಷ್ಟನ್ನಾದರೂ ಗೋಧಿಯನ್ನು ದಾನ ಮಾಡಿ. ಹೀಗೆ ಮಾಡುವುದರಿಂದ ಜೀವನದಲ್ಲಿ ಒಂದು ಬಗೆಯ ಶಿಸ್ತು, ಬದುಕಿಗೆ ಅವಶ್ಯವಾದ ತ್ಯಾಗ ಗುಣವೂ ನಿಮ್ಮದಾಗುತ್ತದೆ. ನಿರಾಳವಾದ ಮನಸ್ಸು ಜ್ಞಾನಾರ್ಜನೆಗೆ ಪೂರಕವಾಗುತ್ತದೆ. ಸೂರ್ಯ ಗ್ರಹವು ಆಡಳಿತಾತ್ಮಕ, ಅಂತಾರಾಷ್ಟ್ರೀಯ, ಕಾನೂನು, ವೈದ್ಯಕೀಯ, ಸಲಹೆಗಾರ ಕ್ಷೇತ್ರಗಳನ್ನು ಪ್ರತಿನಿಧಿಸುತ್ತದೆ. ಅಕ್ಕಿ : ತಂಡುಲ ಎಂದು ಕರೆಯಲ್ಪಡುವ ಅಕ್ಕಿ ಚಂದ್ರ ಗ್ರಹವನ್ನು ಪ್ರತಿನಿಧಿಸುತ್ತದೆ. ಚಂದ್ರ ಮನೋಕಾರಕ. ಮನಸ್ಸೇ ಸರಿಯಾಗಿಲ್ಲದಿದ್ದರೆ ಹಿಡಿದ ಕೆಲಸ ಸಾಧನೆಯಾಗುವುದಾದರೂ ಹೇಗೆ? ಚಂದ್ರನ ಒಲುಮೆ ಗಳಿಸಿಕೊಳ್ಳಲು ನಿಯಮಿತವಾಗಿ ಪ್ರತಿ ಸೋಮವಾರ ನವಗ್ರಹ ಸನ್ನಿಧಾನದಲ್ಲಿ ಐದು ಪ್ರದಕ್ಷಿಣೆ ಹಾಕಿ. ಕಾಲು ಕೆಜಿಯಷ್ಟಾದರೂ ಅಕ್ಕಿಯನ್ನು ದಾನ ಮಾಡಿ. ಚಂದ್ರಗ್ರಹವು ವಿಜ್ಞಾನ,ಸಂಶೋಧನೆ, ಚಲನಚಿತ್ರ, ನರ್ಸಿಂಗ್‌ ವಿದ್ಯೆ, ಪ್ರಸೂತಿ, ಔಷಧಿ ಶಾಸ್ತ್ರ ಮತ್ತಿತರ ಕ್ಷೇತ್ರಗಳನ್ನು ಪ್ರತಿನಿಧಿಸುತ್ತದೆ. ತೊಗರಿ : ಕುಜಗ್ರಹವನ್ನು ಪ್ರತಿನಿಧಿಸುತ್ತದೆ. ಕುಜನಲ್ಲಿ ನಾಯಕತ್ವದ ಗುಣವಿದೆ. ವಿದ್ಯಾರ್ಥಿಯಾದವನಿಗೆ ಜ್ಞಾನವೊಂದಿದ್ದರೆ ಸಾಲದು. ಹಿಡಿದ ಕೆಲಸವನ್ನು ಸಾಧಿಸುವ ಛಲ ಅವನಲ್ಲಿರಬೇಕು. ಇನ್‌ಫೀರಿಯಾರಿಟಿ ಕಾಂಪ್ಲೆಕ್ಸ್‌ ಬದಿಗೊತ್ತಿ ಮುಂದಾಳುವಾಗುವ ಲಕ್ಷಣವಿರಬೇಕು. ಕುಜನು ಭೌತಶಾಸ್ತ್ರ, ಕ್ರಿಯಾಲಜಿ, ಭೂಗರ್ಭ ಮತ್ತಿತರ ಕ್ಷೇತ್ರಗಳನ್ನು ಪ್ರತಿನಿಧಿಸುತ್ತದೆ. ಹೆಸರು ಕಾಳು : ಬುಧಗ್ರಹವನ್ನು ಪ್ರತಿನಿಧಿಸುತ್ತದೆ. ಬುಧನು ವ್ಯಾಪಾರ, ವಾಣಿಜ್ಯ, ಸಂಗ್ರಹಶಕ್ತಿ, ಚಾಣಾಕ್ಷತನ. ಕಂಪ್ಯೂಟರ್‌, ತೆರಿಗೆ, ಲೆಖ್ಖಪತ್ರ, ಪತ್ರಿಕೋದ್ಯಮ, ಮಾಹಿತಿ ಮತ್ತು ಸಂಪರ್ಕ ಕ್ಷೇತ್ರಗಳನ್ನು ಪ್ರತಿನಿಧಿಸುತ್ತಾನೆ. ಅವನ ಕೃಪೆ ಸಂಪಾದಿಸಲು ಪ್ರತಿ ಬುಧವಾರ ನವಗ್ರಹ ಸನ್ನಿಧಾನದಲ್ಲಿ ನಾಲ್ಕು ಪ್ರದಕ್ಷಿಣೆ ಹಾಕಿ 100 ಗ್ರಾಂನಷ್ಟಾದರೂ ಹೆಸರುಕಾಳನ್ನು ದಾನಮಾಡುವುದು ಒಳ್ಳೆಯದು. ಕಡಲೆಕಾಳು : ‘ನ ಗುರೋರಧಿಕಂ ಸತ್ಯಂ’ ಎನ್ನುತ್ತದೆ ವೇದವಾಕ್ಯ. ಯಾವುದೇ ಕ್ಷೇತ್ರದಲ್ಲಿ ಮುನ್ನಡೆಯಲು ಗುರುವಿನ ಅನುಗ್ರಹ ಮುಖ್ಯ. ಕಡಲೆಕಾಳು ಗುರುಗ್ರಹವನ್ನು ಪ್ರತಿನಿಧಿಸುತ್ತದೆ. ಗುರುವಿನ ಅನುಗ್ರಹವಿಲ್ಲದೇ ವಿದ್ಯೆಯಲ್ಲಿ ಆಸಕ್ತಿ ಮೂಡುವುದಿಲ್ಲ. ವೇದಾಂತ, ಜ್ಞಾನ, ಆಯುರ್ವೇದ, ಸಂಸ್ಕೃತ, ಶಿಕ್ಷಣ ತರಬೇತಿ, ಉಪನ್ಯಾಸಕ, ನ್ಯಾಯ, ಕಾನೂನು ಮತ್ತಿತರ ಕ್ಷೇತ್ರಗಳನ್ನು ಇವನು ಪ್ರತಿನಿಧಿಸುತ್ತಾನೆ. ಗುರುವಿನ ಅನುಗ್ರಹಕ್ಕೆ ಪ್ರತಿ ಗುರುವಾರ ನವಗ್ರಹಗಳಿಗೆ ಐದು ಪ್ರದಕ್ಷಿಣೆ ಹಾಕಿ 100 ಗ್ರಾಂನಷ್ಟಾದರೂ ಕಡಲೆಕಾಳನ್ನು ದಾನ ಮಾಡುವುದು ಒಳ್ಳೆಯದು. ಅವರೆಕಾಳು : ಶುಕ್ರಗ್ರಹವನ್ನು ಪ್ರತಿನಿಧಿಸುತ್ತದೆ. ಶುಕ್ರ ಗ್ರಹದ ಪ್ರಭಾವ ಚಲನಚಿತ್ರ, ನಾಟ್ಯ, ಸಂಗೀತ, ಅಲಂಕಾರ, ಒಳಾಂಗಣ ವಿನ್ಯಾಸ, ಛಾಯಾಗ್ರಹಣ, ಬ್ಯೂಟಿಷಿಯನ್‌ ಮತ್ತಿತರ ಕ್ಷೇತ್ರಗಳ ಮೇಲಾಗುತ್ತದೆ. ಶುಕ್ರನ ಅನುಗ್ರಹ ಸಂಪಾದಿಸಲು ಪ್ರತಿ ಶುಕ್ರವಾರ ನವಗ್ರಹಗಳಿಗೆ 6 ಪ್ರದಕ್ಷಿಣೆ ಹಾಕಿ 100 ಗ್ರಾಂನಷ್ಟಾದರೂ ಅವರೆಕಾಳನ್ನು ದಾನ ಮಾಡಬೇಕು. ಕಪ್ಪು ಎಳ್ಳು : ಶನಿಗ್ರಹವನ್ನು ಸಂಕೇತಿಸುತ್ತದೆ. ಶನಿ ಕರ್ಮಾಧಿಪತಿ. ಅವನೇ ಕಾರ್ಯಕಾರಕ. ‘ವಿದ್ಯಾ ದಧಾತಿ ವಿನಯಂ’ ಎನ್ನುವಂತೆ ವಿದ್ಯಾರ್ಥಿಗೆ ವಿನಯವೇ ಭೂಷಣ. ವಿದ್ಯಾರ್ಥಿಗಳಿಗೆ ಇರಬೇಕಾದ ಶಿಸ್ತು, ಸಹನೆ, ಸಂಯಮಗಳು, ಶೈಕ್ಷಣಿಕ ಕ್ಷೇತ್ರದಲ್ಲಿ ಉನ್ನತಿ ಶನಿ ದೇವರ ಕೃಪೆಯಿಂದ ಲಭ್ಯವಾಗುತ್ತದೆ. ಇಂಜಿನಿಯರಿಂಗ್‌, ಕೃಷಿ, ನೀರಾವರಿ, ಪ್ರಾಚ್ಯವಸ್ತು ಸಂಶೋಧನೆ, ಇತಿಹಾಸ, ಗುಡಿ ಕೈಗಾರಿಕೆ ಮತ್ತಿತರ ಕ್ಷೇತ್ರಗಳನ್ನು ಶನಿ ಪ್ರತಿನಿಧಿಸುತ್ತಾನೆ. ಅವನ ಒಲುಮೆ ಸಂಪಾದಿಸಲು ಪ್ರತಿ ಶನಿವಾರ ನವಗ್ರಹಗಳಿಗೆ ಏಳು ಪ್ರದಕ್ಷಿಣೆ ಹಾಕಿ 50 ಗ್ರಾಂನಷ್ಟಾದರೂ ಕರಿ ಎಳ್ಳನ್ನು ದಾನ ಮಾಡಬೇಕು. ಉದ್ದಿನ ಬೇಳೆ : ರಾಹು ಗ್ರಹವನ್ನು ಸಂಕೇತಿಸುತ್ತದೆ. ಜ್ಯೋತಿಷ್ಯಶಾಸ್ತ್ರದ ಪ್ರಕಾರ ರಾಹು ಮತ್ತು ಕೇತು ಛಾಯಾ ಗ್ರಹಗಳು. ರಾಹು ಫೋಟೋಗ್ರಫಿ, ಚಿತ್ರಕಲೆ, ಅನೆಸ್ತೇಷಿಯಾ, ವೈದ್ಯಕೀಯ ಕ್ಷೇತ್ರಕ್ಕೆ ಸಂಬಂಧಿಸಿದ ವಿದ್ಯೆಗಳನ್ನು ಪ್ರತಿನಿಧಿಸುತ್ತಾನೆ. ರಾಹುವಿನ ಕೃಪೆಗಾಗಿ ಪ್ರತಿ ಶನಿವಾರ ನವಗ್ರಹ ಸನ್ನಿಧಾನಕ್ಕೆ ಒಂಬತ್ತು ಪ್ರದಕ್ಷಿಣೆ ಹಾಕುವುದು. ನೂರು ಗ್ರಾಂನಷ್ಟಾದರೂ ಉದ್ದಿನಬೇಳೆಯನ್ನು ದಾನ ಮಾಡುವುದು. ಹುರುಳಿ ಕಾಳು : ಕೇತು ಗ್ರಹವನ್ನು ಪ್ರತಿನಿಧಿಸುತ್ತದೆ. ಕೇತು ಗ್ರಹವು ಯೋಗ, ಧ್ಯಾನ, ಮೀಮಾಂಸೆ, ವ್ಯಾಕರಣ, ಔಷಧ ತಯಾರಿಕಾ ಕ್ಷೇತ್ರಗಳನ್ನು ಪ್ರತಿನಿಧಿಸುತ್ತದೆ. ಕೇತುವಿನ ಕೃಪೆಗೆ ಪ್ರತಿ ಮಂಗಳವಾರ ನವಗ್ರಹ ಸನ್ನಿಧಾನಕ್ಕೆ ಒಂಬತ್ತು ಪ್ರದಕ್ಷಿಣೆಗಳನ್ನು ಹಾಕಿ ಕನಿಷ್ಟ ಪಕ್ಷ 100 ಗ್ರಾಂನಷ್ಟಾದರೂ ಹುರಳಿಕಾಳನ್ನು ದಾನ ಮಾಡಬೇಕು. * ಎಂ. ವಾಸುದೇವ ಮೂರ್ತಿ sangraha

ಪಂಚಮಭಾವದ ಫಲಾಫಲ

ಜ್ಯೋತಿಷಿ ಬದಲಿಸುವವನೇ ಬ್ರಹ್ಮ ಲಿಖಿತವನು ಎಂದು ಮೂಗೆಳೆಯುವವರಿಗೇನು ಕಡಿಮೆಯಿಲ್ಲ. ಬ್ರಹ್ಮ ಲಿಖಿತವನ್ನು ಬದಲಿಸಲಿಕ್ಕೆ ಸಾಧ್ಯವಾಗದಿದ್ದರೂ ಜಾತಕದೊಳಗಿನ ಭಾವವನ್ನು ಸೂಕ್ಷ್ಮವಾಗಿ ಪರಿಶೀಲಿಸುವುದರಿಂದ ಬಂದೊದಗಬಹುದಾದ ಫಲಗಳನ್ನು ಹೇಳಬಹುದು. ಮಹರ್ಷಿ ಪರಾಶರರು ಪಂಚಮಭಾವವನ್ನು ಪರಿಶೀಲಿಸುವುದರಿಂದ ಯಂತ್ರ, ಮಂತ್ರ, ತಂತ್ರ, ವಿದ್ಯೆ, ಬುದ್ದಿ, ಕಲ್ಪನೆ, ರಾಜ್ಯಪ್ರಾಪ್ತಿ, ಅಪಭ್ರಂಶ ಮತ್ತಿತರ ಸಂಗತಿಗಳನ್ನು ತಿಳಿಯಬಹುದು ಎನ್ನುತ್ತಾರೆ. ಜ್ಯೋತಿಷ್ಯದಲ್ಲಿ ಲಗ್ನ, ಪಂಚಮ ಮತ್ತು ಭಾಗ್ಯಸ್ಥಾನಗಳಿಗೆ ವಿಶೇಷ ಪ್ರಾಶಸ್ಥ್ಯವಿದೆ. ಲಗ್ನವು ತನ್ನನ್ನೂ, ಪಂಚಮವು ಸಂತಾನ, ತಾತನನ್ನು , ಭಾಗ್ಯಸ್ಥಾನವು ಜನ್ಮದಾತನನ್ನು ಸೂಚಿಸುವುದರಿಂದ ಇವು ಜಾತಕನ ವಂಶವನ್ನು ಸೂಚಿಸುವುದು. ಅದರಿಂದಾಗಿ ವಂಶಪಾರಂಪರ್ಯವಾಗಿ ಬರುವ ಶುಭಾಶುಭ ಫಲಗಳನ್ನು ತಿಳಿದುಕೊಳ್ಳಬಹುದು. ಪಂಚಮಭಾವದಲ್ಲಿ ಶುಭಗ್ರಹಗಳಿದ್ದರೆ, ಪಂಚಮಾಧಿಪತಿಯು ಬಲಿಷ್ಠನಾಗಿದ್ದರೆ, ಕಾರಕನಾದ ಗುರುವು ಬಲಿಷ್ಠನಾಗಿದ್ದರೆ, ಪಂಚಮಾಧಿಪತಿ ನೈಸರ್ಗಿಕ ಶುಭಗ್ರಹನಾಗಿದ್ದು 1,2,3,4,5,7,9, 10, 11ರಲ್ಲಿದ್ದರೆ ಪಂಚಮಾಧಿಪತಿ ನೈಸರ್ಗಿಕ ಪಾಪಗ್ರಹನಾದಾಗ 1,5,9,10,11ನೇ ಭಾವಗಳಲ್ಲಿದ್ದರೆ ಪೂರ್ವಾರ್ಜಿತ ಪುಣ್ಯಫಲದ ಕಾರಣ ಉತ್ತಮ ನಡತೆ, ಜ್ಞಾನ, ಮಂತ್ರಸಿದ್ಧಿ, ರಾಜಾಶ್ರಯ, ಸತ್‌ ಸಂತಾನ, ಪ್ರೀತ್ಯಾಧರಗಳನ್ನು ಹೊಂದುತ್ತಾನೆ. ಪಂಚಮಭಾವದಲ್ಲಿ ಅಶುಭ ಗ್ರಹಗಳಿದ್ದರೆ, ಪಂಚಮಾಧಿಪತಿ ಬಲಹೀನನಾಗಿ ಅಶುಭ ಭಾವಗಳಲ್ಲಿ ಇದ್ದರೆ , ಪಂಚಮಾಧಿಪತಿ ನೈಸರ್ಗಿಕ ಶುಭಗ್ರಹನಾಗಿ 6,8,12ರಲ್ಲಿದ್ದರೆ , ಕಾರಕ ಗುರುವು ಬಲಹೀನನಾಗಿದ್ದರೆ, ಪೂರ್ವಾರ್ಜಿತ ಪುಣ್ಯಫಲದ ಕೊರತೆಯಿಂದ ಅಥವಾ ಪಾಪಫಲದ ಕಾರಣದಿಂದ ವಿದ್ಯಾಹೀನನಾಗುವನು, ಮೂಢನಾಗುವನು, ಸಂಕುಚಿತ ಹಾಗೂ ಹೊಟ್ಟೆ ಕಿಚ್ಚಿನ ಸ್ವಭಾವ ಉಳ್ಳವನಾಗುವನು. ನಿಸ್ಸಂತಾನ ಅಥವಾ ದುರ್ನಡತೆಯುಳ್ಳ ಸಂತಾನ ಪ್ರಾಪ್ತಿಯಾಗುವುದು. ಪಂಚಮಭಾವದ ಅಧಿಪತಿ ನೈಸರ್ಗಿಕವಾಗಿ ಅಶುಭನಾಗಿ 4,6,7,8,12ರಲ್ಲಿದ್ದರೆ ಅನಾರೋಗ್ಯ, ದುಃಖ, ಜ್ಞಾಪಕಶೂನ್ಯತೆ, ಅವಿವೇಕ ವರ್ತನೆ ಕಂಡು ಬರುತ್ತದೆ. ತನ್ನ ಬುದ್ಧಿಯ ಕಾರಣದಿಂದಲೇ ಕಷ್ಟ ನಷ್ಟಗಳನ್ನು ಅನುಭವಿಸುತ್ತಾನೆ. 3,5,9,10,11ರಲ್ಲಿದ್ದರೆ ಉತ್ತಮವಾದ ವಿದ್ಯೆ, ಬುದ್ದಿ, ಜ್ಞಾನ, ಸಂತಾನ, ಪದವಿ, ಉದ್ಯೋಗ ಇತ್ಯಾದಿಗಳು ಲಭಿಸುತ್ತವೆ. ಪಂಚಮಾಧಿಪತಿ ಸೂಚಿಸುವ ದೇವತೆಗಳನ್ನು ಜಪಿಸಿ ಪೂಜಿಸಿದರೆ ಜನ್ಮಾಂತರಗಳಲ್ಲಿ ಅಥವಾ ವಂಶವಾಹಿನಿಯಿಂದ ಪ್ರಾಪ್ತವಾದ ಕಷ್ಟ, ದುಃಖ, ರೋಗಗಳು ನಿವಾರಣೆಯಾಗಿ ಸುಖ ಪ್ರಾಪ್ತಿಯಾಗುತ್ತವೆ. ಪಂಚಮಾಧಿಪತಿ ಗ್ರಹಗಳ ಜತೆ ಸೂಚಿಸಿರುವ ದೇವತೆಗಳನ್ನು ಪೂಜಿಸುವುದರಿಂದ , ಮಂತ್ರಜಪ ಇತ್ಯಾದಿ ವಿಧಾನದಿಂದ ಸೇವಿಸುವುದರಿಂದ, ಪಂಚಮಾಧಿಪತಿ ಸೂಚಿಸುವ ಧಾನ್ಯವನ್ನು ದಾನ ಮಾಡುವುದರಿಂದ, ಸೂಚಿಸುವ ರತ್ನ ಧಾರಣೆ ಮಾಡುವುದರಿಂದ ಆತ್ಮಸ್ಥೈರ್ಯ ಹೆಚ್ಚುತ್ತದೆ. ಸಂಗೀತ ಮತ್ತಿತರ ಕಲೆಗಳಲ್ಲಿ ಪ್ರಾವೀಣ್ಯತೆ, ವಿದ್ಯೆಯಲ್ಲಿ ಆಸಕ್ತಿ, ಸಭೆಗಳಲ್ಲಿ ಗೌರವ, ಸನ್ಮಾನ ಉನ್ನತ ಪದವಿಯನ್ನು ಹೊಂದುವ ಸಾಧ್ಯತೆಯಿದೆ. ಬಾಂಧವ್ಯಗಳು ಸುಧಾರಣೆಯಾಗುತ್ತವೆ. ಮಾನಸಿಕ ಸ್ಥೈರ್ಯ ಉತ್ತಮವಾಗುತ್ತದೆ. ಪಂಚಮಾಧಿಪತಿ- ದೇವತೆ - ಧಾನ್ಯ - ರತ್ನ ರವಿ -ಸೂರ್ಯ, ಗಾಯತ್ರಿ -ಗೋಧಿ- ಮಾಣಿಕ್ಯ ಚಂದ್ರ -ಪಾರ್ವತಿ, ಲಕ್ಷ್ಮಿ- ಅಕ್ಕಿ,- ಭತ್ತ -ಮುತ್ತು ಕುಜ- ಸುಬ್ರಹ್ಮಣ್ಯ, ದುರ್ಗಾ, ನರಸಿಂಹ -ತೊಗರಿ- ಹವಳ ಬುಧ -ಲಕ್ಷ್ಮೇನಾರಾಯಣ, ವಿನಾಯಕ -ಹೆಸರುಕಾಳು -ಪಚ್ಚೆ ಗುರು- ದಕ್ಷಿಣಾಮೂರ್ತಿ, ದತ್ತಾತ್ರೇಯ- ಕಡಲೆ- ಪುಷ್ಯರಾಗ ಶುಕ್ರ -ಲಕ್ಷ್ಮಿ, ದುರ್ಗಾದೇವಿ- ಅವರೆ, ವಜ್ರ ಶನಿ- ಮೃತ್ಯುಂಜಯ, ಹನುಮಂತ- ಕರಿಎಳ್ಳು -ಗೋಮೇಧಿಕ ಕೇತು -ನಾಗದೇವತೆ, ಗಣಪತಿ- ಹುರಳಿ- ವೈಢೂರ್ಯ -ಪ್ರಕಾಶ್‌ರಾವ್‌ ಕೆಂದೋಳೆ sangraha

ನಂಬಿಕೆಯಲ್ಲಿದೆ ಪರಿಹಾರ

ಮನೆ, ಮನಸ್ಸನ್ನು ತುಂಬೋ ಮಕ್ಕಳು ಇದ್ದಕ್ಕಿದ್ದಂತೆ ಹುಷಾರು ತಪ್ಪುತ್ತಿರುತ್ತಾರೆ. ಮನೇಲಿ ಪದೇ ಪದೇ ಅನಾರೋಗ್ಯ. ಎಷ್ಟು ದುಡಿದ್ರೂ, ಏನೇ ಕೂಡಿಹಾಕಿದ್ರೂ ಪ್ರಯೋಜನವಿಲ್ಲ. ಕೈಸಾಲ ಇಲ್ಲಾ ಋುಣಬಾಧೆ ಇಲ್ಲಾ ಅಪವ್ಯಯ. ಇಂತಹ ಸಂದರ್ಭಗಳಲ್ಲಿ ತಕ್ಷ ಣ ನೆನಪಿಗೆ ಬರೋ ಸಂಗತಿಯೇ ಯಾರಾದರೂ ನಮಗೆ ಮಾಟ ಮಾಡಿಸಿದ್ದಾರಾ? ಕೈಮುಸುಕು (ವಾಮಾಚಾರ) ಮಾಡಿಸಿದ್ದಾರಾ? ಅಂತ. ಮನುಷ್ಯರ ಸ್ವಭಾವವೇ ಹಾಗೆ. ಸಮಸ್ಯೆ ಬಂದಾಗ ಸಕಾರಾತ್ಮಕವಾಗಿ ಚಿಂತಿಸಿ ಅದಕ್ಕೊಂದು ಪರಿಹಾರ ಹುಡ್ಕೋ ಬದಲು ನಕಾರಾತ್ಮಕವಾಗೇ ಯೋಚಿಸೋದು. ಕೈಮುಸುಕು, ಮಾಟ, ಮಂತ್ರಗಳ ಹಿಂದೆ ಮನಸ್ಸನ್ನು ಸುತ್ತಾಡಿಸೋದು. ಆದರೂ ನೊಂದ, ಬೆಂದ, ಖಿನ್ನವಾದ ಮನಸ್ಸಿಗೆ ಒಂದಿಷ್ಟು ಸಮಾಧಾನ ಕೊಡೋ ಮಾತು, ಪರಿಹಾರ ವಿಧಾನ ಕೊಟ್ಟಾಗ ಅವರಿಗೂ ಖುಷಿಯಾಗುತ್ತೆ. ಸಮಾಜಕ್ಕೆ ಒಳ್ಳೆಯದನ್ನು ಮಾಡಿದ ತೃಪ್ತಿಯೂ ನಮಗಿರುತ್ತೆ. ಯಾರೋ ವಾಮಾಚಾರ ಮಾಡಿದ್ದಾರೆ, ಮತ್ಯಾರೋ ಮಾಟ ಮಾಡಿಸಿದ್ದಾರೆ ಅಂತ ಗೊಣಗೋದು ಬಿಟ್ಟು ಸುಲಭ ಹಾಗೂ ಸರಳವಾದ ಈ ಪರಿಹಾರವನ್ನು ಅಳವಡಿಸಿಕೊಳ್ಳಿ. ಮಾಡಿದ ಕೂಡಲೇ ಪರಿಹಾರ ಸಿಗದಿದ್ದರೂ ಒಂದಷ್ಟು ದಿನಗಳ ನಂತರ ಅದರ ಫಲಾನುಭವ ನಿಮ್ಮದಾಗುತ್ತದೆ ಎನ್ನುವುದರಲ್ಲಿ ಸಂಶಯವಿಲ್ಲ. ಸೋಲಾರ್‌ ಟ್ರೀಟ್ಮೆಂಟ್‌: ಅರಿಶಿನ ಮಿಶ್ರಿತ ನೀರನ್ನು ಗಂಧದಂತೆ ಮಾಡಿಕೊಂಡು ದೊಡ್ಡದಾದ ಸ್ಟೀಲ್‌ ತಟ್ಟೆಗೆ ಸವರಿ. ಅದರ ಮೇಲ್ಬದಿಯಲ್ಲಿ ಕೆಂಪು ಗುಲಾಬಿ ಹೂವಿನ ದಳಗಳನ್ನು ಹರಡಿ. ಅದರ ಮೇಲೆ ಕೊಬ್ಬರಿ ಎಣ್ಣೆ ಮಿಶ್ರಿತ ಶುದ್ಧ ನೀರನ್ನು ಚಿಮುಕಿಸಿ. ಕೆಂಪು ಗುಲಾಬಿ ಹೂವಿನ ಮಧ್ಯೆ ಮೇಣದ ಬತ್ತಿಗಳನ್ನು ಬೆಳಗಿಸಿ. ದೇವರ ಮನೆಯಲ್ಲಿ ಇಡಿ. ತದೇಕ ಚಿತ್ತದಿಂದ ಒಂದು ನಿಮಿಷಗಳ ಕಾಲ ಮೇಣದ ಬತ್ತಿಯ ಜ್ಯೋತಿಯನ್ನೇ ದೃಷ್ಟಿಸಿ. ನಂತರ ಮನೆಯಿಂದ ಹೊರಗೆ ಬಂದು ಸೂರ್ಯನನ್ನು ದೃಷ್ಟಿಸುವುದು. ಸೂರ್ಯನಲ್ಲಾಗುವ ಬಣ್ಣದ ಬದಲಾವಣೆಗಳನ್ನು (ಕೆಂಪು, ಹಳದಿ ಮತ್ತು ನೀಲಿ) ಗಮನಿಸುವುದು. ಆ ನಂತರ ಮನೆಯೊಳಗೆ ತಟ್ಟೆಯಲ್ಲಿ ಇಟ್ಟಿರುವ ದೀಪವನ್ನು ದೃಷ್ಟಿಸಿದಾಗ ಅದೂ ಕೆಂಬಣ್ಣದಂತೆಯೇ ಕಾಣುತ್ತದೆ. ಅದನ್ನು ತದೇಕಚಿತ್ತವಾಗಿ ಒಂದು ನಿಮಿಷಗಳ ಕಾಲ ನೋಡುವ ಮೂಲಕ ಸೂರ್ಯನ ಪ್ರಭಾವ ನಮ್ಮ ಮೇಲಾಗುತ್ತದೆ. ಮನಸ್ಸಿಗೆ ಮಸುಕಿರುವ ವಾಮಾಚಾರದ ಛಾಯೆ ಸರಿದು ಹೋಗುತ್ತದೆ. ಆದರೆ ಗರ್ಭಿಣಿ ಹೆಣ್ಣು ಮಕ್ಕಳು ಹಾಗೂ ಮೈಗ್ರೇನ್‌ ಪೀಡಿತರು ಈ ಪ್ರಯೋಗವನ್ನು ಮಾಡಬಾರದು. ನಾರಾಯಣ ಸೆಟ್ಟಿ ಪದ್ಮಸಾಲಿ sangraha

ನವಧಾನ್ಯ ದಾನದಿಂದ ಕಾಯಿಲೆ ನಿವಾರಣೆ

ನವಧಾನ್ಯಗಳ ಸೇವನೆಯಿಂದ ಆರೋಗ್ಯವಷ್ಟೇ ಸುಧಾರಿಸುವುದಿಲ್ಲ. ಅದರೊಂದಿಗೆ ಕರ್ಮಸಂಬಂಧಿತ ಕಾಯಿಲೆಗಳನ್ನು ಗುಣಪಡಿಸಿಕೊಳ್ಳಬಹುದು. ತತ್‌ ಸಂಬಂಧಿ ದೋಷವನ್ನು ಪರಿಹರಿಸಿಕೊಳ್ಳಬಹುದು. * ಗೋಧಿ-ಸೂರ್ಯ: ಪ್ರತಿ ಭಾನುವಾರ ನವಗ್ರಹಗಳಿಗೆ 2 ಪ್ರದಕ್ಷಿಣೆ ಹಾಕಿ 1/4 ಗೋಧಿ ದಕ್ಷಿಣೆ ಸಹಿತ ಧಾನ ಮಾಡಿದರೆಪುರುಷರ ಆರೋಗ್ಯ, ಹೃದಯ, ಕಣ್ಣುಪಿತ್ತ, ಪಿತ್ತಪ್ರಧಾನವಾದ ರೋಗಗಳು, ಬೆನ್ನು, ರಕ್ತದೊತ್ತಡ, ಮಿದುಳುವ್ಯಾಧಿ, ತಲೆ ಸುಡುವುದು, ಜಠರದ ಹುಣ್ಣು, ಸಣ್ಣಕರುಳು, ಕೆಂಪು ರಕ್ತಕಣ, ರಕ್ತದ ಪ್ಲೇಟ್‌ಲೆಟ್ಸ್‌ (ಡೆಂಗ್ಯೂ ಜ್ವರ), ಏಡ್ಸ್‌, ಸನ್‌ಸ್ಟ್ರೋಕ್ಸ್‌, ಪ್ರತಿರೋಧಕ ಶಕ್ತಿ, ಥೈರಾಯಿಡ್‌, ಪೋಲಿಯೋ ಗುಣವಾಗುತ್ತವೆ. *ಅಕ್ಕಿ-ಚಂದ್ರ: ಪ್ರತಿ ಸೋಮವಾರ ನವಗ್ರಹಗಳಿಗೆ 5 ಪ್ರದಕ್ಷಿಣೆ ಹಾಕಿ 1/4 ಅಕ್ಕಿ ದಕ್ಷಿಣೆ ಸಹಿತ ದಾನ ಮಾಡಿದರೆ ಸ್ತ್ರೀಯರ ಆರೋಗ್ಯ, ಮಾನಸಿಕವಾಗಿ ಬಲಾಡ್ಯನಾಗಲು, ಏಕಾಗ್ರತೆ, ಮನಃಶಾಂತಿಗೆ, ರಕ್ತ ಚಲನೆಗೆ, ಮಧುಮೇಹ,ಕೋಮ, ಮೂರ್ಛೆ, ಸನ್ನಿವ್ಯಾಧಿ, ಗರ್ಭಾಶಯ, ತುಟಿ, ಬಾಣಂತಿಯರ ವ್ಯಾಧಿಗಳು, ಪುರುಷರಿಗೆ ಎಡಗಣ್ಣು, ಸ್ತ್ರೀಗೆ ಬಲಕಣ್ಣು, ಅಸ್ತಮ, ಕ್ಷಯ, ಅನ್ನಕೋಶ, ಸ್ತನಗಳು, ಜಲಧೋರ, ಹುಚ್ಚು, ಥೈರಾಯಿಡ್‌, ಪಾಶ್ರ್ವವಾಯು, ಬಿಕ್ಕಳಿಕೆ, ಸಣ್ಣ ಮಕ್ಕಳಿಗೆ ಬರುವ ಎಲ್ಲಾ ವ್ಯಾಧಿಗಳು ಗುಣವಾಗುತ್ತವೆ. *ತೊಗರಿ-ಕುಜ: ಪ್ರತಿ ಮಂಗಳವಾರ ನವಗ್ರಹಗಳಿಗೆ 9 ಪ್ರದಕ್ಷಿಣೆ ಹಾಕಿ 100ಗ್ರಾಂ ತೊಗರಿಬೇಳೆ ದಕ್ಷಿಣೆ ಸಹಿತ ದಾನ ಮಾಡಿದರೆ ಶಸ್ತ್ರಚಿಕಿತ್ಸೆ, ಬೆಂಕಿ, ರಕ್ತ ಹೆಪ್ಪುಗಟ್ಟಲು, ಸ್ತ್ರೀಮಾಸಿಕ ರಕ್ತಸ್ರಾವ ಮತ್ತು ಹೊಟ್ಟೆ ನೋವು, ಅಸ್ತಮ, ಅಲ್ಸರ್‌, ಕ್ಯಾನ್ಸರ್‌, ಗಾಯ, ಕುರು, ಹುಣ್ಣು, ನೋವುಗಳಿಗೆ ಎಡ ಮಿದುಳು, ಆಂತರಿಕ ವ್ರಣ, ಆಮ್ಲ ಉಷ್ಣ ಪಿತ್ಥ, ತಾಪಾಮಾನ ವ್ಯಾದಿ, ಕತ್ತು, ಮಜ್ಜ, ಸ್ನಾಯು, ಹೃದಯದ ಕವಾಟಗಳು, ಮಂಗನ ಬಾವು ಪಿಸಾರ, ಪ್ಲೇಗ್‌, ಮೈಲಿ, ಒಣಕೆಮ್ಮು, ರೋಗ ನಿರೋಧಕ ಗುಣವಾಗುತ್ತವೆ. *ಹೆಸರು ಕಾಳು-ಬುಧ: ಪ್ರತಿ ಬುಧವಾರ ನವಗ್ರಹಗಳಿಗೆ 4ಪ್ರದಕ್ಷಣೆ ಹಾಕಿ 100 ಗ್ರಾಂ ಹೆಸರುಕಾಳು ದಾನ ಮಾಡಿದರೆ ಚರ್ಮ, ತೊದಲು ಮಾತು,ನರಗಳು, ಬಲ ಮಿದುಳು, ತಲೆಸುತ್ತು, ನೆನಪಿನ ಶಕ್ತಿ, ಶ್ವಾಸಕೋಶ, ಗಂಟಲು, ಮೂಗಿನವ್ಯಾಧಿ, ಅಸ್ತಮಾ, ಉಸಿರಾಟ, ಅಪಸ್ಮಾರ, ಮೂಗಿನ ವ್ಯಾಧಿ, ದುಃಸ್ವಪ್ನ, ಮೈ ತುರಿಸುವಿಕೆ, ಚಿತ್ತಭ್ರಮೆ, ಉನ್ಮಾದ ಗುಣವಾಗುವಲ್ಲಿ ಪೂರಕ. *ಕಡಲೆಕಾಳು-ಗುರು: ಪ್ರತಿ ಗುರುವಾರ ನವಗ್ರಹಗಳಿಗೆ 5 ಪ್ರದಕ್ಷಿಣೆ ಹಾಕಿ 100ಗ್ರಾಂ ಕಡಲೆಕಾಳು ಸಹಿತ ದಾನ ಮಾಡಿದರೆ ಮೂತ್ರಪಿಂಡ, ದುರ್ಮಾಂಸ, ಕಾಮಾಲೆ, ಜ್ವರ, ಟೈಫಾಯಿಡ್‌, ಮಧುಮೇಹ, ಗ್ಯಾಸ್ಟ್ರಿಕ್‌, ಯಕೃತ್‌, ಸುಖದಿಂದ ಬರುವ ವ್ಯಾಧಿ, ಬಲಕಿವಿ, ಜಠರಾಗ್ನಿ, ಮೇದೋಜೀರಕ ಗ್ರಂಥಿ ಸಂಬಂಧಿ ಸಮಸ್ಯೆ ಇತ್ಯಾದಿ ಶಮನವಾಗುತ್ತವೆ. *ಅವರೆಕಾಳು- ಶುಕ್ರ: ಪ್ರತಿ ಶುಕ್ರವಾರ ನವಗ್ರಹಗಳಿಗೆ 6 ಪ್ರದಕ್ಷಿಣೆ ಹಾಕಿ 100 ಗ್ರಾಂ ಅವರೆಕಾಳು ದಕ್ಷಿಣೆ ಸಹಿತ ದಾನ ಮಾಡಿದರೆ ಗುಪ್ತವ್ಯಾಧಿಗಳು, ಬೆವರು, ಮೂತ್ರವ್ಯಾದಿ, ದಾಹ, ಮೇಧಾಶಕ್ತಿ, ಸ್ತ್ರೀವ್ಯಾಧಿಗಳು, ಏಡ್ಸ್‌, ವೀರ್ಯ ದೋಷ, ಮಧುಮೇಹ, ಮೂತ್ರಪಿಂಡ, ಜನನೇಂದ್ರೀಯ, ಸುಂದರ ಅಂಗ, ಥೈರಾಯಿಡ್‌, ಸಂಭೋಗದಲ್ಲಿ ತಡೆ ಇತ್ಯಾದಿ ಸಮಸ್ಯೆಗಳ ನಿರಾವಣೆಗೆ ಅನುಕೂಲ. *ಕಪ್ಪು ಎಳ್ಳು-ಶನಿ: ಪ್ರತಿ ಶನಿವಾರ ನವಗ್ರಹಗಳಿಗೆ 7 ಪ್ರದಕ್ಷಿಣೆ ಹಾಕಿ 50ಗ್ರಾಂ ಕಪ್ಪು ಎಳ್ಳು ದಕ್ಷಿಣೆ ಸಹಿತ ದಾನ ಮಾಡಿದರೆ ಗ್ಯಾಸ್ಟ್ರಿಕ್‌, ಸಂಧಿವಾತ, ಪಾಶ್ರ್ವವಾಯು, ಮೂಳೆ, ದೊಡ್ಡ ಕರುಳವ್ಯಾಧಿ, ವಾಹನದುರಸ್ತಿಗೆ, ಹಲ್ಲು, ಕೀಲುನೋವು, ಸಂಧಿವಾತ, ಪಾಶ್ರ್ವವಾಯು, ಮೂಳೆ, ದೊಡ್ಡ ಕರುಳುವ್ಯಾಧಿ, ಶೀತದ ಅಸ್ತಮ, ಬಾಲಗ್ರಹ, ಕೋಮ, ಮಿದುಳಿನಲ್ಲಿ ರಕ್ತತಡೆ, ಕೊಲೆಸ್ಟ್ರಾಲ್‌, ಕೆಮ್ಮು, ಮೂಳೆಕ್ಷಯ, ಕಾಲರಾ, ಫಿಟ್ಸ್‌, ಹೃದಯ, ಪೋಲಿಯೋ, ಸನ್ನಿಪಾತ, ನಾಯಿಕೆಮ್ಮು, ಹಲ್ಲು, ಬೆನ್ನು ನೋವು, ಸಂಧಿವಾತ, ಕೀಳು, ಅತಿಸಾರ, ಮಲೇರಿಯಾ, ಕೂದಲು ಉದುರುವುದು, ಧರ್ನುವಾತ, ಒಣಕೆಮ್ಮು, ಹೃದಯದಲ್ಲಿ ರಂಧ್ರಸಮಸ್ಯೆ ನಿವಾರಣೆಗೆ ಪೂರಕ. * ಉದ್ದು- ರಾಹು ಪ್ರತಿ ಶನಿವಾರ ನವಗ್ರಹಗಳಿಗೆ 9 ಪ್ರದಕ್ಷಿಣೆ ಹಾಕಿ 100 ಗ್ರಾಂ ಉದ್ದಿನಬೇಳೆ ಸಹಿತ ದಾನ ಮಾಡಿದರೆ ಹೆದರಿಕೆ, ನಡುಗಿಸುವಿಕೆ, ಕ್ರೂರ ಜಂತುಗಳಿಂದ ಬಾಧೆ, ಅಮ್ಮ, ನಾಗರಸುತ್ತು, ಕುಷ್ಠ, ಚರ್ಮ, ತೊನ್ನು, ಭೂತವಿಕಾರಗಳು, ಕರು, ಸಾಂಕ್ರಾಮಿಕ ವ್ಯಾಧಿ, ಭಯ, ಹೃದಯ ಸ್ತಂಭನ, ರಕ್ತನ್ಯೂನತೆ, ಗರ್ಭಪಾತ, ಸ್ತ್ರೀಮಾಸಿಕ ದೋಷ, ದೃಷ್ಟಿ ದೋಷ ನಿವಾರಣೆಗೆ, ಅನುಸೂಚಿತ ವ್ಯಾಧಿ, ಮಾಟ ಶೂನ್ಯ, ಒಣಕೆಮ್ಮು. *ಹುರುಳಿ- ಕೇತು: ಪ್ರತಿ ಮಂಗಳವಾರ ನವಗ್ರಹಗಳಿಗೆ 9 ಪ್ರದಕ್ಷಿಣೆ ಹಾಕಿ 100 ಗ್ರಾಂ ಹುರುಳಿಕಾಳು ದಕ್ಷಿಣೆ ಸಹಿತ ದಾನ ಮಾಡಿದರೆ ಎಲ್ಲಾ ವಿಧವಾದ ಕ್ಯಾನ್ಸರ್‌ಗಳು, ಅಲ್ಸರ್‌, ಗ್ರಂಥಿ ದೋಷ, ಜೀವಾಣುಗಳಿಂದ ಬರುವ ವ್ಯಾಧಿ, ಬುದ್ಧಿಭ್ರಮಣೆ, ಜೀವಕೋಶಗಳ ವ್ಯಾಧಿ ಶಮನಕ್ಕೆ ಪೂರಕವಾಗುತ್ತವೆ. ಮೇಲೆ ತಿಳಿಸಿದ ದಿನಗಳಲ್ಲಿ ವ್ಯಾದಿಗಳಿಗೆ ತಕ್ಕಂತೆ ನವಧಾನ್ಯಗಳನ್ನು ಹಲವು ವಾರ ದಾನ ಮಾಡಿದರೆ ಈ ವ್ಯಾಧಿಗಳು ನಿವಾರಣೆಯಾಗುತ್ತದೆ. * ಎಂ. ವಾಸುದೇವಮೂರ್ತಿ sangraha

ಜ್ಯೋತಿಷ್ಯ ಶಾಸ್ತ್ರ ಸಂಬಂಧಿ ಮೂಲ ಮಾಹಿತಿಗಳು

ಸೂರ್ಯನ ಚಲನೆಗೆ ಅನುಸಾರವಾಗಿ ಎರಡು ಆಯನಗಳಿವೆ. ಅದೆಂದರೆ ಉತ್ತರಾಯಣ ಮತ್ತು ದಕ್ಷಿಣಾಯಣ. ಸೂರ್ಯನು ಮಕರ ರಾಶಿಯಿಂದ ಮಿಥುನ ಮಾಸಾಂತ್ಯದವರೆಗೆ ಸಂಚರಿಸುವಾಗ ಉತ್ತರಾಯಣವಾಗುತ್ತದೆ. ಕರ್ಕಾಟಾದಿ ಧನುರಾಂತ್ಯದವರೆಗೆ ಸೂರ್ಯನು ಸಂಚರಿಸುವಾಗ ದಕ್ಷಿಣಾಯಣವಾಗುತ್ತದೆ. ಇಂಗ್ಲಿಷ್‌ ಕಾಲಮಾನದ ಒಂದು ವರ್ಷವನ್ನು ಪಂಚಾಂಗದ ರೀತ್ಯ ಸಂವತ್ಸರವೆಂದು ಗುರುತಿಸಲಾಗುತ್ತದೆ. ಒಟ್ಟು 60 ಸಂವತ್ಸರಗಳಿವೆ. ನಾವೀಗ 30ನೇ ಸಂವತ್ಸರದಲ್ಲಿದ್ದೇವೆ. ಮುಂಬರುವ ಸಂವತ್ಸರವೇ 'ಹೇವಿಳಂಬಿ'. ಒಂದು ಸಂವತ್ಸರಕ್ಕೆ ಆರು ಋುತುಗಳು. ಮಾಸಗಳು : ಒಟ್ಟು ಹನ್ನೆರಡು ಮಾಸಗಳಿವೆ. ಅವೆಂದರೆ ವಸಂತ ಋುತು (ಚೈತ್ರ-ವೈಶಾಖ), ಗ್ರೀಷ್ಮ ಋುತು (ಜ್ಯೇಷ್ಠ-ಆಷಾಢ), ವರ್ಷ ಋುತು (ಶ್ರಾವಣ-ಭಾದ್ರಪದ), ಶರದ್ರುತು (ಆಶ್ವಯುಜ-ಕಾರ್ತಿಕ), ಹೇಮಂತ ಋುತು (ಮಾರ್ಗಶಿರ-ಪುಷ್ಯ), ಶಿಶಿರ ಋುತು (ಮಾಘ-ಫಾಲ್ಗುಣ). ಒಂದು ತಿಂಗಳಲ್ಲಿ ಎರಡು ಪಕ್ಷಗಳು. ಶುಕ್ಲ (ಹುಣ್ಣಿಮೆಯಿಂದ ಪಾಡ್ಯದವರೆಗೆ - ವೃದ್ಧಿ ಚಂದ್ರ) ಮತ್ತು ಕೃಷ್ಣ ಪಕ್ಷ (ಪಾಡ್ಯದಿಂದ ಅಮಾವಾಸ್ಯೆಯವರೆಗೆ - ಕ್ಷೀಣ ಚಂದ್ರ). ವೃದ್ಧಿ ಚಂದ್ರ ಕಾಲದಲ್ಲಿ ಶುಭ ಕಾರ್ಯಗಳನ್ನು ಮಾಡಬೇಕೆನ್ನುವುದು ಶಾಸ್ತ್ರಗಳ ಅಭಿಮತ.ಯೋಗಗಳು : ಜ್ಯೋತಿಷ್ಯಶಾಸ್ತ್ರವು 27 ನಕ್ಷತ್ರಗಳನ್ನು ಗುರುತಿಸಿದೆ. ಅದಕ್ಕೆ ಹೊಂದಿಕೊಂಡಂತೆ 27 ಯೋಗಗಳನ್ನು ಹೇಳಿದೆ. ಅವೆಂದರೆ, ವಿಷ್ಕಂಭಯೋಗ, ಪ್ರೀತಿಯೋಗ, ಆಯುಷ್ಮಾನ್‌ಯೋಗ, ಸೌಭಾಗ್ಯಯೋಗ, ಶೋಭಾನಯೋಗ, ಅತಿಗಂಡಯೋಗ, ಸುಕರ್ಮಯೋಗ, ಧೃತಿಯೋಗ, ಶೂಲಯೋಗ, ಗಂಡಯೋಗ, ವೃದ್ಧಿಯೋಗ, ಧ್ರುವಯೋಗ, ವ್ಯಾಘಾತಯೋಗ, ಹರ್ಷಣಯೋಗ, ವಜ್ರಯೋಗ, ಸಿದ್ಧಿಯೋಗ, ವೃತೀಪಾತಯೋಗ, ವರೀಯಾನ್‌ಯೋಗ, ಪರಿಘಯೋಗ, ಶಿವನಾಮಯೋಗ, ಸಿದ್ಧಯೋಗ, ಸಾಧ್ಯಯೋಗ, ಶುಭಯೋಗ, ಶುಕ್ಲನಾಮಯೋಗ, ಬ್ರಹ್ಮಯೋಗ, ಐಂದ್ರಯೋಗ ಮತ್ತು ವೈಧೃತಿಯೋಗ. ಕರಣಗಳು : ಹನ್ನೊಂದು ಕರಣಗಳಿವೆ. ಅವೆಂದರೆ, ಬವ, ಬಾಲವ, ಕೌಲವ, ತೈತಿಲ, ಗರಜ, ವಣಿಕ್‌, ಭದ್ರ, ಶಕುನಿ, ಚತುಷ್ಪಾತ್‌, ನಾಗವಾನ್‌ ಮತ್ತು ಕಿಂಸ್ತುಘ್ನ ಕರಣ. ರಾಶ್ಯಾಧಿಪತಿ ಯಾರು? : ಹನ್ನೆರಡು ರಾಶಿಗಳಿದ್ದು ಪ್ರತಿಯೊಂದು ರಾಶಿಗೂ ರಾಶ್ಯಾಧಿಪತಿಯಿದ್ದಾನೆ. ಸಿಂಹರಾಶಿಗೆ ಸೂರ್ಯ, ಕರ್ಕಾಟಕ ರಾಶಿಗೆ ಚಂದ್ರ, ಮೇಷ-ವೃಶ್ಚಿಕ ರಾಶಿಗಳಿಗೆ ಅಂಗಾರಕ, ಕನ್ಯಾ-ಮಿಥುನ ರಾಶಿಗಳಿಗೆ ಬುಧ, ಧನು-ಮೀನ ರಾಶಿಗಳಿಗೆ ಗುರು, ತುಲಾ-ವೃಷಭ ರಾಶಿಗಳಿಗೆ ಶುಕ್ರ, ಮಕರ-ಕುಂಭ ರಾಶಿಗಳಿಗೆ ಶನಿಯು ಅಧಿಪತಿಯಾಗಿರುತ್ತಾರೆ. ಲಗ್ನ ಪ್ರಮಾಣ : ಲಗ್ನ ಪ್ರಮಾಣವನ್ನು ಲೆಕ್ಕ ಹಾಕುವಾಗ ಜಾತಕದಲ್ಲಿನ ಆಯಾ ಲಗ್ನಕ್ಕೆ ಅನುಗುಣವಾಗಿ ಲೆಕ್ಕಾಚಾರ ಮಾಡಲಾಗುತ್ತದೆ. ಮೇಷ ಪ್ರಮಾಣವು 4-12, ವೃಷಭ ಪ್ರಮಾಣವು 4-38, ಮಿಥುನ ಪ್ರಮಾಣವು 5-14, ಕರ್ಕಾಟಕ ಪ್ರಮಾಣವು 5-32, ಸಿಂಹ ಪ್ರಮಾಣವು 5-20, ಕನ್ಯಾ ಪ್ರಮಾಣವು 5-4, ತುಲಾ ಪ್ರಮಾಣವು 5-4, ವೃಶ್ಚಿಕ ಪ್ರಮಾಣವು 5-20, ಧನು ಪ್ರಮಾಣವು 5-32, ಮಕರ ಪ್ರಮಾಣವು 5-14, ಕುಂಭ ಪ್ರಮಾಣವು 4-38, ಮೀನ ಪ್ರಮಾಣವು 4-12. ಹೀಗೆ ಮೇಷಾದಿ ಲಗ್ನ ಪ್ರಮಾಣಗಳನ್ನು ಲೆಕ್ಕ ಹಾಕುತ್ತಾರೆ. ಲಗ್ನ ಪ್ರಮಾಣ ಲೆಕ್ಕ ಹಾಕಿದ ನಂತರ ಲಗ್ನಭುಕ್ತಿಯನ್ನು ನಿರ್ಣಯಿಸುತ್ತಾರೆ. ಲಗ್ನ ಭುಕ್ತಿಯ ನಿರ್ಣಯ ಹೀಗಿದೆ. ಮೇಷ -8, ಮಿಥುನ-10, ಕರ್ಕಾಟಕ-11, ಸಿಂಹ-11, ಕನ್ಯಾ-11, ತುಲಾ-10, ವೃಶ್ಚಿಕ-11, ಧನು-11, ಮಕರ-11, ಕುಂಭ-10, ಮೀನ-9.

ಪ್ರಶ್ನಶಾಸ್ತ್ರದ ಫಲಾಫಲ

ಭವಿಷ್ಯವನ್ನು ತಿಳಿಯಲು ಜಾತಕ ಬಹಳ ಮುಖ್ಯವಾದ ಸಾಧನ. ಈ ಜಾತಕ ರೂಪಿಸಲು ಜನ್ಮ ದಿನಾಂಕ, ಸಮಯ ಮತ್ತು ಜನ್ಮ ಸ್ಥಳದ ಖಚಿತ ಮಾಹಿತಿ ಇರಬೇಕು. ಆದರೆ ಎಷ್ಟೋ ಜನರಿಗೆ ಇವುಗಳಲ್ಲಿ ಯಾವುದಾದರೊಂದು ಮಾಹಿತಿ ಇಲ್ಲವಾದಾಗ ಪ್ರಶ್ನಶಾಸ್ತ್ರವು ಉಪಯೋಗಕ್ಕೆ ಬರುತ್ತದೆ. ಅಲ್ಲದೇ ಜಾತಕದಲ್ಲಿ ತಿಳಿಯಲು ಕಷ್ಟವಾಗುವ ವಿಷಯಗಳನ್ನು ಸಹಾ ಪ್ರಶ್ನಶಾಸ್ತ್ರದ ಮೂಲಕ ತಿಳಿಯಬಹುದು. ಪ್ರಶ್ನಶಾಸ್ತ್ರವು ಹೋರಾಶಾಸ್ತ್ರದಂತೆ ಜಾತಕನ ಸಾಮಾನ್ಯ ಫಲಗಳನ್ನು ಹೇಳುವುದಿಲ್ಲ. ಪ್ರಶ್ನೆಯನ್ನು ಕೇಳುವ ಸಮಯಕ್ಕೆ ಸರಿಯಾಗಿ ಒಂದು ಕುಂಡಲಿಯನ್ನು ತಯಾರಿಸಲಾಗುತ್ತದೆ. ಈ ಕುಂಡಲಿಯು ಪ್ರಶ್ನ ಸಮಯದ ಗೋಚಾರದ ಕುಂಡಲಿಯೇ ಆಗಿರುತ್ತದೆ. ಈ ಕುಂಡಲಿಯನ್ನು ಪ್ರಶ್ನೆ ಕೇಳುವವನ ಜಾತಕದಂತೆ ಭಾವಿಸಿ, ಆತನು ಆ ಸಧ್ಯಕ್ಕೆ ಕೇಳುವ ಪ್ರಶ್ನೆಗೆ ಉತ್ತರಿಸಲ್ಲಷ್ಟೇ ಸೀಮಿತಗೊಳಿಸಲಾಗುತ್ತದೆ. ಉದಾಹರಣೆಗೆ ಪೃಚ್ಛಕನು (ಪ್ರಶ್ನೆ ಕೇಳುವವನು) 'ಮಗಳ ವಿವಾಹ ಯಾವಾಗ ಆಗುತ್ತದೆ?', 'ಮಗನ ನೌಕರಿ ಯಾವಾಗ ಸಿಗುತ್ತದೆ?', 'ನನಗೆ ಈ ವ್ಯಾಪಾರವು ಲಾಭದಾಯಕವೇ?' ಇತ್ಯಾದಿ ಪ್ರಶ್ನೆಗಳಿಗೆ ಉತ್ತರವನ್ನು ನೇರವಾಗಿ ಕೊಡಲು ಪ್ರಶ್ನಶಾಸ್ತ್ರವು ಸಹಾಯಕವಾಗಿದೆ. ಲಕ್ಷಣಗಳು ಹೇಗಿರಬೇಕು? ಈ ಪ್ರಶ್ನಶಾಸ್ತ್ರವನ್ನು ಅಭ್ಯಸಿಸುವ ಜ್ಯೋತಿಷಿಯು ಶುದ್ಧ ಅಂತಃಕರಣ, ನಿರಹಂಕಾರ, ಉತ್ತಮ ದೈವಭಕ್ತಿ, ಗುರುಹಿರಿಯರಲ್ಲಿ ಗೌರವ, ಜ್ಯೋತಿಷವನ್ನು ಚೆನ್ನಾಗಿ ಅಭ್ಯಾಸಮಾಡುತ್ತಾ ವಾಕ್ಪಟುತ್ವ, ವಾಕ್‌ಸಿದ್ಧಿ, ಊಹಾಪೋಹ ಪಟುತ್ವವನ್ನು ಹೊಂದಿರಬೇಕು. ಪ್ರಶ್ನೆಗೆ ಉತ್ತರಿಸುವ ಮುನ್ನ ಪೃಚ್ಛಕನ ಅಂಗಚೇಷ್ಠೆ ಮತ್ತು ಶಕುನಗಳನ್ನು ಗಮನಿಸಬೇಕು. ತತ್ಕಾಲ ಪ್ರಶ್ನಕುಂಡಲಿಯನ್ನು ರಚಿಸಿ, ಗ್ರಹಗಳ ಫಲಗಳನ್ನು ತಿಳಿದು ದೈವಪ್ರಾರ್ಥನೆ ಮಾಡಿ ಫಲವನ್ನು ನುಡಿಯಬೇಕು. ಕೇಳುವವನ ಲಕ್ಷಣ ಪ್ರಶ್ನಶಾಸ್ತ್ರ ಹೇಳುವವನಿಗೆ ಪ್ರಾಮುಖ್ಯತೆ ಇರುವಂತೆ ಶಾಸ್ತ್ರ ಕೇಳುವವನಲ್ಲೂ ಕೆಲ ಲಕ್ಷಣಗಳಿರಬೇಕು. ಪೃಚ್ಛಕನು ದೈಹಿಕ, ಮಾನಸಿಕ ಶುದ್ಧಿಯಿಂದ ಇರಬೇಕು. ಪ್ರಶ್ನೆ ಕೇಳುವ ಸಂದರ್ಭದಲ್ಲಿ ಅವನ ಮನಸ್ಸು ಚಿತ್ತ ಚಾಂಚಲ್ಯಕ್ಕೆ ಒಳಗಾಗಬಾರದು. ದೃಢ ಮನಸ್ಸಿನಿಂದ ತನ್ನ ಸಮಸ್ಯೆಗೆ ಪರಿಹಾರ ಸಿಗುತ್ತದೆ ಎನ್ನುವ ಭರವಸೆಯಿಂದ ದೈವ ಪ್ರಾರ್ಥನೆಯನ್ನು ಮಾಡಿಕೊಂಡು ಕೇಳಬೇಕು. ಒಮ್ಮೆಲೆ ಒಂದು ಪ್ರಶ್ನೆಯನ್ನು ಮಾತ್ರ ಕೇಳಬೇಕು. ಶಾಸ್ತ್ರದ ವಿಧಗಳು ಪ್ರಶ್ನಶಾಸ್ತ್ರದಲ್ಲಿ ಅಷ್ಟಮಂಗಲಪ್ರಶ್ನ, ತಾಜಕಪದ್ಧತಿ, ಸ್ವರನಾಡಿ, ಉದಯಲಗ್ನ, ಆರೂಢಲಗ್ನ, ಇಷ್ಟಸಂಖ್ಯಾಲಗ್ನ ಮತ್ತಿತರ ವಿಧಾನಗಳಿವೆ. ಇವುಗಳಲ್ಲಿ ಅಷ್ಟಮಂಗಲವು ಕೇರಳದಲ್ಲಿ ಪ್ರಸಿದ್ಧವಾಗಿದೆ. ತಾಜಕ, ಆರೂಢ, ಉದಯ ಲಗ್ನಗಳು ಸಾಧಾರಣವಾಗಿ ಬಳಕೆಯಾಗುತ್ತವೆ. ಫಲ ನಿರ್ಣಯ ರಾಶಿ, ಭಾವ ಮತ್ತು ಗ್ರಹಗಳ ಬಲಾಬಲಗಳನ್ನು ತುಲನೆ ಮಾಡಿ ಫಲ ನಿರ್ಣಯಿಸಬೇಕು. ಪ್ರಶ್ನೆ ಕೇಳಲು ಮನಃಕಾರಕ ಚಂದ್ರನೇ ಕಾರಣ. ಪ್ರಶ್ನೆಗೆ ಸಂಬಂಧಿಸಿದ ಗ್ರಹ ಮತ್ತು ಭಾವವು ಶುಭಗ್ರಹಗಳ ದೃಷ್ಟಿ, ಸ್ಥಿತಿ, ವೀಕ್ಷಣೆಗಳಿಂದ ಕುಡಿದ್ದರೆ ಉತ್ತರವು ಧನಾತ್ಮಕವಾಗಿಯೂ, ಪಾಪಗ್ರಹಗಳ ದೃಷ್ಟಿ, ಸ್ಥಿತಿ, ವೀಕ್ಷಣೆಗಳಿಂದ ಕೂಡಿದ್ದರೆ ಋುಣಾತ್ಮಕವಾಗಿಯೂ ಇರುತ್ತದೆ. ಕಾರಕಗ್ರಹ, ಭಾವಾಧಿಪತಿ, ಭಾವಗಳು ಬಲಿಷ್ಠವಾಗಿದ್ದು ಚಂದ್ರನು ಶುಭಭಾವಗಳಲ್ಲಿದ್ದರೆ ಪ್ರಶ್ನೆಯು ಸಿದ್ಧಿಸುವುದರಲ್ಲಿ ಸಂದೇಹವಿಲ್ಲ. ಗಮನಿಸಬೇಕಾದ ಅಂಶಗಳು * ಫಲಸಿದ್ಧಿಯ ಕಾಲ ನಿರ್ಣಯ. ಶೀಘ್ರ ಮತ್ತು ಮಂದಗ್ರಹಗಳಿರುವ ಕಾರಣ ಆಯಾ ಗ್ರಹಗಳ ಸೂಚಿತ ಸಮಯದಲ್ಲಿ ಕಾರ್ಯವು ಸಿದ್ಧಿಯಾಗುತ್ತದೆಯೇ ಇಲ್ಲವೇ ಎಂಬುದನ್ನು ನಿರ್ಣಯಿಸಬೇಕು. ಲಗ್ನಾಧಿಪತಿ, ಚಂದ್ರ ಮತ್ತು ಪ್ರಶ್ನಕಾರಾರ‍ಯಧಿಪತಿಗಳು ಪರಸ್ಪರ ತ್ರಿಕೋಣದಲ್ಲಿ ಅಥವಾ ಉತ್ತಮ ಸ್ಥಿತಿಯಲ್ಲಿದ್ದರೆ ಫಲವು ಶೀಘ್ರವಾಗಿ ಲಭಿಸುತ್ತದೆ. * ಪ್ರಶ್ನಲಗ್ನವು ಚರ ರಾಶಿಯಾದರೆ ಧಾತು ಪ್ರಶ್ನೆ, ದುಗುಡದಿಂದ ಕೇಳಿದ ವರ್ತಮಾನದ ಪ್ರಶ್ನೆ, ಶೀಘ್ರಫಲ; ಸ್ಥಿರರಾಶಿಯಾದರೆ ಮೂಲಪ್ರಶ್ನೆ, ಶಾಂತ ಮನಸ್ಸಿನಿಂದ ಕೇಳಿದ ಭೂತಕಾಲದ ಪ್ರಶ್ನೆ, ಮಂದಫಲ; ದ್ವಿಸ್ವಭಾವ ರಾಶಿಯಾದರೆ ಜೀವ ಪ್ರಶ್ನೆ, ಮಿಶ್ರಚಿತ್ತದಿಂದ ಕೇಳಿದ ಭವಿಷ್ಯದ ಪ್ರಶ್ನೆ, ಸಾವಧಾನವಾಗಿ ಸಿದ್ಧಿಸುತ್ತದೆ. * ಪ್ರಶ್ನಕುಂಡಲಿಯಲ್ಲಿ ಗುರುವು ಬಲಿಷ್ಠನಾಗಿದ್ದು ಕೇಂದ್ರ, ತ್ರಿಕೋಣಾದಿ ಶುಭಭಾವಗಳಲ್ಲಿದ್ದರೆ, ಲಗ್ನವನ್ನು ವೀಕ್ಷಿಸಿದರೆ, ಕಾರಾರ‍ಯಧಿಪತಿಗೆ ಸಂಬಂಧ ಹೊಂದಿದ್ದು ಇತರ ಗ್ರಹಗಳು ಪ್ರತಿಕೂಲವಾಗಿದ್ದರೆ ದೈವಾನುಗ್ರಹದಿಂದ ಕಾರ‍್ಯವು ಸಿದ್ಧಿಯಾಗುತ್ತದೆ ಎಂದು ತಿಳಿಯಬೇಕು. ಲಗ್ನಾಧಿಪತಿಯು ಬಲಿಷ್ಠನಾಗಿ ಶುಭಸ್ಥಾನದಲ್ಲಿದ್ದು ಇತರ ಗ್ರಹಗಳು ಪ್ರತಿಕೂಲವಾಗಿದ್ದರೆ ಪ್ರಶ್ನೆ ಕೇಳುವವನು ಸ್ವಶಕ್ತಿಯಿಂದ ಕಾರ‍್ಯವನ್ನು ಸಾಧಿಸುವನು ಎಂದು ತಿಳಿಯಬೇಕು. * ರಾಜದ್ರೋಹ, ಕಳ್ಳತನ, ಹಾದರ, ಭೂಗತ ನಿಧಿ, ಅನರ್ಥಕರವಾದ ಕೆಲಸ ಇತ್ಯಾದಿ ವಿಷಯಗಳ ಬಗ್ಗೆ ಯಾರಾದರೂ ಪ್ರಶ್ನಿಸಿದರೆ ಜ್ಯೋತಿಷಿಯು ಇವುಗಳಿಗೆ ಉತ್ತರಿಸಬಾರದು. * ಜ್ಯೋತಿಷ್ಯಶಾಸ್ತ್ರದಲ್ಲಿ ನಂಬಿಕೆ ಮತ್ತು ವಿಶ್ವಾಸವೇ ಮುಖ್ಯವಾಗಿದೆ. ಫಲವನ್ನು ನುಡಿಯುವ ಮುನ್ನ ದೈವಜ್ಞನು ತನ್ನ ಜವಾಬ್ದಾರಿಯನ್ನು ಸರಿಯಾಗಿ ನಿರ್ವಹಿಸಬೇಕು. ಭೀತನಾಗಿರುವ ಪೃಚ್ಛಕನಿಗೆ ಧೈರ್ಯವನ್ನು ತುಂಬಬೇಕು. ಮನಃಶಾಸ್ತ್ರಜ್ಞನಂತೆ ಆತನನ್ನು ದುಃಖ, ಕಷ್ಟಗಳಿಂದ ಹೊರಬರಲು ಬೇಕಾದ ವಿಧಾನಗಳನ್ನು ವಿವರಿಸಿ ಪ್ರಯತ್ನಿಸಲು ಹುರಿದುಂಬಿಸಬೇಕು. -ಪ್ರಕಾಶ್‌ರಾವ್‌ ಕೆಂದೋಳೆ sangraha