Wednesday 20 February 2019

ನಿವೇಶನದ ಆಯವರ್ಗ, ಹೆಚ್ಚು ಮನೆಗಳನ್ನು ಹೊಂದುವ ಯೋಗ,ಯಾರಿಗಿದೆ ಗೃಹಯೋಗ ಲಾಭ,ವಾಸ್ತು ದೋಷ ನಿವಾರಣೆಗೆ ವೃಕ್ಷಾರಾಧನೆ

ನಿವೇಶನದ ಆಯವರ್ಗ ಆಯವರ್ಗದಲ್ಲಿ ಎಂಟು ವಿಧಗಳಿವೆ ಅವೆಂದರೆ 1.ಧ್ವಜಾಯ, 2.ಧೂಮ್ರಾಯ, 3.ಸಿಂಹಾಯ, 4.ಶ್ವಾನಾಯ, 5.ವೃಷಭಾಯ, 6.ಖರಾಯ, 7.ಗಜಾಯ ಮತ್ತು 8.ಕಾಕಾಯ. ಆಯವರ್ಗದಲ್ಲಿ ಎಂಟು ವಿಧಗಳಿವೆ ಅವೆಂದರೆ ಧ್ವಜಾಯ, ಧೂಮ್ರಾಯ, ಸಿಂಹಾಯ, ಶ್ವಾನಾಯ, ವೃಷಭಾಯ, ಖರಾಯ, ಗಜಾಯ ಮತ್ತು ಕಾಕಾಯ. ಇವುಗಳಲ್ಲಿ ಧ್ವಜಾಯ, ವೃಷಭಾಯ ಅತೀ ಶ್ರೇಷ್ಠ. ಸಿಂಹಾಯ, ಗಜಾಯ ಸಾಧರಣವಾದ ಫಲಯನ್ನು ಕೂಡುವವು, ಉಳಿದ ಆಯಗಳು ಕನಿಷ್ಠವಾದವು. ಈ ಶುಭ ಆಯದ ಜೊತೆಗೆ ವಾರ ತಿಥಿ, ನಕ್ಷ ತ್ರ ಯೋಗ, ಕರಣ, ಆಯಸ್ಸು, ಧನ ಸಂಖ್ಯೆ, ಋುಣ ಸಂಖ್ಯೆ ಅಂಶ ಮತ್ತು ದಿಕ್ಪಾಲಕರು ಇವು ಸಹ ಶುಭವಾಗಿ ಇರಬೇಕು. ಆಯ ವರ್ಗವು ಸೇರಿ ಹನ್ನೊಂದು ವರ್ಗವು ಶುಭವಾಗಿರಬೇಕು. ಎಂಟು ವಿಧ ಆಯಗಳ ಫಲಗಳ ಬಗ್ಗೆ ತಿಳಿಯೋಣ : 1. ಧ್ವಜಾಯದ ಫಲ : ಧ್ವಜಾಯದಲ್ಲಿ ಕಟ್ಟುವ ಮನೆಯಲ್ಲಿ ಸಮಸ್ತ ಸೌಭಾಗ್ಯವನ್ನು, ದ್ರವ್ಯಲಾಭ, ಶತ್ರುನಾಶ,ರಾಜಪೂಜ್ಯತೆಯನ್ನುಂಟು ಮಾಡುವುದು. 2. ಧೂಮ್ರಾಯದ ಫಲ : ಧೂಮ್ರಾಯದಲ್ಲಿ ಕಟ್ಟಿದ ಮನೆಯು ರೋಗ ಪೀಡೆಯು, ಪುತ್ರರಿಗೂ, ಪತ್ನಿಗೂ ನಾನಾ ವಿಧವಾದ ವ್ಯಾದಿಯನ್ನು ಶತೃವೃದ್ಧಿಯನ್ನು ಉಂಟುಮಾಡುವುದು. 3. ಸಿಂಹಾಯದ ಫಲ : ಸಿಂಹಾಯದ ಮನೆಯಲ್ಲಿ ವಾಸಿಸುವವರಿಗೆ ಶರೀರಸೌಖ್ಯ, ರೋಗನಾಶ, ಧನ-ಧಾನ್ಯ ಸಂಪಾದನೆ, ಸರ್ವ ಕಾರ್ಯಗಳಲ್ಲಿ ಜಯ ಉಂಟಾಗುವುದು ಈ ಮನೆಯಲ್ಲಿ ವಾಸಿಸುವವರಿಗೆ ಸಿಟ್ಟುಜಾಸ್ತಿ, ಸಿಂಹಾಯದ ಮನೆಯ ಎದುರಿಗೆ ಗಜಾಯದ ಮನೆಯನ್ನು ಕಟ್ಟಿದರೆ ಗಜಾಯದ ಮನೆಯು ಶೀಘ್ರವಾಗಿ ನಾಶವಾಗುವುದು. 4. ಶ್ವಾನಾಯದ ಫಲ : ಶ್ವಾನಾಯದ ಮನೆಯಲ್ಲಿ ವಾಸಿಸುವವರಿಗೆ ಶ್ವಾನ (ನಾಯಿ)ಗಳ ಬುದ್ಧಿ ಇರುತ್ತದೆ. ಯಾವಾಗಲೂ ಕಲಹ, ಧನ ಧಾನ್ಯ ನಷ್ಠ, ಶತೃವೃದ್ಧಿ, ದೇಹಾಲಸ್ಯ, ಅಗ್ನಿಭಯ, ದಾರಿದ್ರ್ಯ, ಜೀವನದಲ್ಲಿ ಸಂಕಷ್ಠ ಉಂಟಾಗುವುದು. 5. ಖರಾಯದ ಫಲ : ಖರಾಯದಲ್ಲಿ ವಾಸ ಮಾಡುವ ಯಜಮಾನನು ಯಾವಾಗಲು ಪರಸ್ಥಳದಲ್ಲಿ ಕಷ್ಟಪಡುತ್ತಾನೆ. ಆ ಮನೆಗೆ ಯಾವಾಗಲೂ ದಾರಿದ್ರ್ಯತೆ ಉಂಟಾಗಿ ಸದಾ ವೈರತ್ವದಿಂದ ಕೂಡಿರುತ್ತದೆ. 6. ಗಜಾಯದ ಫಲ : ಗಜಾಯದ ಮನೆಯು ವಾಸಕ್ಕೆ ಯೋಗ್ಯವಾಗಿರುತ್ತದೆ. ಆರೋಗ್ಯ, ಐಶ್ವರ್ಯ, ಸಕಲ ಧನ ಧಾನ್ಯಗಳು ಸಂಪತ್ತುಗಳಿಂದ ಕೂಡಿರುತ್ತದೆ. ಈ ಮನೆಯ ಯಜಮಾನನಿಗೆ ಎರಡು ಸಂಸಾರಗಳು ಉಂಟಾಗುವುದು. ಕೆಲಸ ಕಾರ್ಯಗಳು ನಿಧಾನವಾಗಿ ಕೈಗೂಡುವುದು ಇದರ ಎದುರಿಗೆ ಸಿಂಹಾಯದ ಮನೆ ಇದ್ದರೆ ಈ ಮನೆಗೆ ನಾಶ ಉಂಟಾಗುವುದು. 7. ಕಾಕಾಯದ ಫಲ : ಕಾಕಾಯದಲ್ಲಿ ಮನೆಯನ್ನು ನಿರ್ಮಿಸಿದರೆ ಆ ಮನೆಗೆ ಕಾಗೆ ಹೊಕ್ಕ ಫಲ ಉಂಟಾಗುವುದು. ಸದಾ ದುಃಖದಿಂದಲೂ ರೋಗದಿಂದಲೂ ಕೂಡಿರುತ್ತದೆ. ಕಲಹ ಕಷ್ಟಕಾರ್ಪಣ್ಯಗಳು ಮೇಲಿಂದ ಮೇಲೆ ಒದಗಿ ಬರುವುದು. ಒಂದಕ್ಕಿಂತ ಹೆಚ್ಚು ಮನೆಗಳನ್ನು ಹೊಂದುವ ಯೋಗ ಯಾರಿಗಿರುತ್ತದೆ? ಉತ್ತಮ ಗೃಹ ಯೋಗ : ಜಾತಕದಲ್ಲಿ ಚತುರ್ಥಾಧಿಪತಿಯು ಯಾವುದಾದರೊಂದು ಶುಭ ಗ್ರಹದ ಜೊತೆಯಲ್ಲಿ ಇದ್ದು 1-4-7-10-5-9 ನೇ ಭಾವಗಳಲ್ಲಿ ಹಾಗೂ ಚತುರ್ಥಾಧಿಪತಿ ಜೊತೆಯಲ್ಲಿರುವ ಗ್ರಹ ಮಿತ್ರರಾಗಿದ್ದರೆ ಮತ್ತು ಮಿತ್ರ - ಸ್ವ ಕ್ಷೇತ್ರದಲ್ಲಿ ಇದ್ದರೆ ಉತ್ತಮವಾದ ಮನೆಯನ್ನು ಕಟ್ಟಲು ಸಾಧ್ಯವಾಗುತ್ತದೆ ಹಾಗೂ ಆ ಮನೆಯಲ್ಲಿ ಎಲ್ಲಾ ಪ್ರಕಾರದ ಅನುಕೂಲತೆಗಳು ಇರುತ್ತದೆ. ಸ್ವಾರ್ಜಿತ ಮನೆಯ ಯೋಗ : ಲಗ್ನಾಧಿಪತಿ 4ನೇ ಭಾವದಲ್ಲಿದ್ದು 4ನೇ ಅಧಿಪತಿ ಲಗ್ನದಲ್ಲಿದ್ದರೆ ಈ ಯೋಗ ಉಂಟಾಗುತ್ತದೆ. ಈ ಯೋಗದಲ್ಲಿ ಹುಟ್ಟಿದ ಜಾತಕನು ಸ್ವಪ್ರಯತ್ನದಿಂದ, ಪುರುಷಾರ್ಥದಿಂದ. ಸ್ವಂತ ಹಣದಿಂದ ಮನೆಯನ್ನು ಕಟ್ಟಿಕೊಳ್ಳುತ್ತಾನೆ. ವೈಶಿಷ್ಠ ಪೂರ್ಣ ಮನೆಯ ಯೋಗ : 4ನೇ ಅಧಿಪತಿ ಮತ್ತು 10ನೇ ಅಧಿಪತಿ ಹಾಗೂ ಚಂದ್ರನ ಜೊತೆಯಲ್ಲಿ ಇದ್ದು ನಾಲ್ಕನೇ ಸ್ಥಾನದಲ್ಲಿ ಶುಭಗ್ರಹ ಇದ್ದರೆ. ವೈಶಿಷ್ಟ ಪೂರ್ಣ ಮನೆಯ ಯೋಗ ಉಂಟಾಗುತ್ತದೆ. ದೊಡ್ಡ ಬಂಗಲೆಯ ಯೋಗ : ಜಾತಕದ ನಾಲ್ಕನೇ ಭಾವದಲ್ಲಿ ಚಂದ್ರ ಮತ್ತು ಶುಕ್ರ ಇಲ್ಲವೇ ನಾಲ್ಕನೇ ಭಾವದಲ್ಲಿ ಉಚ್ಚರಾಶಿಯ ಯಾವುದಾದರೂ ಒಂದು ಗ್ರಹ ಇದ್ದರೂ ಅದರಂತೆ 4ನೇ ಅಧಿಪತಿಯು ಕೇಂದ್ರ ತ್ರಿಕೋಣ ಸ್ಥಾನದಲ್ಲಿ ಶುಭ ಸ್ಥಾನದಲ್ಲಿ ಇದ್ದರೆ ಈ ಯೋಗ ಉಂಟಾಗುತ್ತದೆ. ಅಕಸ್ಮಾತ್‌ ಮನೆ ಹೊಂದುವ ಯೋಗ : ಜಾತಕದಲ್ಲಿ 4ನೇ ಭಾವಾಧಿಪತಿ ಮತ್ತು ಲಗ್ನಾಧಿಪತಿ ಇಬ್ಬರು ನಾಲ್ಕನೇ ಭಾವದಲ್ಲಿದ್ದರೆ ಈ ಯೋಗ ಉಂಟಾಗುತ್ತದೆ. ಅನಾಯಸ ಮನೆ ಹೊಂದುವ ಯೋಗ : ಜಾತಕದಲ್ಲಿ ಲಗ್ನಾಧಿಪತಿ ಮತ್ತು ಸಪ್ತಮಾಧಿಪತಿ ಲಗ್ನದಲ್ಲಿದ್ದರೆ ಮತ್ತು ನಾಲ್ಕನೇ ಭಾವದ ಮೇಲೆ ಶುಭ ಗ್ರಹಗಳಾದ ಬುಧ, ಗುರು, ಶುಕ್ರ,ಚಂದ್ರರ ದೃಷ್ಟಿ ಇದ್ದರೆ ಈ ಯೋಗ ಇದ್ದವರು ವಿಶೇಷ ಪ್ರಯತ್ನ ಇಲ್ಲದೆಯೇ ಮನೆಯು ದೊರಕುತ್ತದೆ. ಲಗ್ನಾಧಿಪತಿ ಮತ್ತು ಚತುರ್ಥಾಧಿಪತಿ ಲಗ್ನದಲ್ಲಿದ್ದರೆ ಮತ್ತು ಚತುರ್ಥ ಸ್ಥಾನದ ಮೇಲೆ ಶುಭ ಗ್ರಹಗಳ ದೃಷ್ಠಿ ಇದ್ದರೆ ಅನಾಯಾಸದ ಮನೆ ದೊರಕುತ್ತದೆ. ಒಂದಕ್ಕಿಂತ ಹೆಚ್ಚು ಮನೆಗಳನ್ನು ಹೊಂದುವ ಯೋಗ : ಜಾತಕದಲ್ಲಿ 4ನೇ ಸ್ಥಾನ ಮತ್ತು 4ನೇ ಅಧಿಪತಿ ಇಬ್ಬರು ಚರ ರಾಶಿಯಲ್ಲಿ (ಮೇಷ,ಕಟಕ,ತುಲಾ,ಮಕರ) ಇದ್ದು 4ನೇ ಅಧಿಪತಿಯು ಶುಭ ಗ್ರಹದಿಂದ ಕೂಡಿದ್ದು ಇಲ್ಲವೆ ಶುಭ ಗ್ರಹಗಳಾದ ಬುಧ, ಗುರು, ಶುಕ್ರ, ಚಂದ್ರರ ದೃಷ್ಟಿ ಇದ್ದರೆ ಒಂದಕ್ಕಿಂತ ಹೆಚ್ಚು ಮನೆಯನ್ನು ಹೊಂದುವ ಯೋಗ ಇರುತ್ತದೆ. ಉತ್ತಮ ಮನೆಯ ಯೋಗ : ನಿಮ್ಮ ಜಾತಕದಲ್ಲಿ 4ನೇ ಅಧಿಪತಿ ಮತ್ತು 10ನೇ ಅಧಿಪತಿ ಇಬ್ಬರು ಕೇಂದ್ರ ತ್ರಿಕೋಣಗಳಲ್ಲಿದ್ದರೆ ಉತ್ತಮ ಮನೆಯ ಯೋಗ ಇರುತ್ತದೆ. ಯಾರಿಗಿದೆ ಗೃಹಯೋಗ ಲಾಭ? ಋುಣಾನುಬಂಧ ರೂಪೇಣ ಪಶು, ಪತ್ನಿ, ಸುತ, ಆಲಯಚ ಎಂಬ ಉಕ್ತಿಯಂತೆ ಮನೆಯನ್ನು ಹೊಂದಲು ಋುಣವಿರಬೇಕು. ಕೆಲವರ ಬಳಿ ಎಷ್ಟೇ ಹಣವಿದ್ದರೂ ಗೃಹಯೋಗವಿರುವುದಿಲ್ಲ. ಋುಣಾನುಬಂಧ ರೂಪೇಣ ಪಶು, ಪತ್ನಿ, ಸುತ, ಆಲಯಚ ಎಂಬ ಉಕ್ತಿಯಂತೆ ಮನೆಯನ್ನು ಹೊಂದಲು ಋುಣವಿರಬೇಕು. ಕೆಲವರ ಬಳಿ ಎಷ್ಟೇ ಹಣವಿದ್ದರೂ ಗೃಹಯೋಗವಿರುವುದಿಲ್ಲ. ಎಲ್ಲಾ ಸೌಕರ್ಯಗಳಿದ್ದರೂ ಸ್ವಂತ ಮನೆ ಮಾಡಿಕೊಳ್ಳಲು ಆಗುವುದಿಲ್ಲ. ಅದಕ್ಕೆ ಕಾರಣವೇನು? ಜ್ಯೋತಿಷದ ಪ್ರಕಾರ ಜಾತಕದಲ್ಲಿ ಸ್ಥಿರಾಸ್ಥಿ ಯೋಗವಿದೆಯೇ ಎಂದು ನೋಡಬೇಕು. ಯೋಗವಿದ್ದರೆ ವಾಸ್ತು ದೋಷವಿಲ್ಲದ ಗೃಹ ನಿರ್ಮಿಸಲು ಸಾಧ್ಯವೇ ಎಂಬುದನ್ನು ಗಮನಿಸಬೇಕು. ಗ್ರಹಗಳಲ್ಲಿ ಚಂದ್ರ ಗೃಹ ಸೌಖ್ಯಕಾರಕ. ಜಾತಕದಲ್ಲಿ ಚಂದ್ರ ಬಲಿಷ್ಠನಾಗಿದ್ದರೆ ಗೃಹ ಸೌಖ್ಯವಿರುತ್ತದೆ. ಜಾತಕದಲ್ಲಿ ನಾಲ್ಕನೆಯ ಮನೆ ಹಾಗೂ ಗ್ರಹಗಳಲ್ಲಿ ಮಂಗಳ ಗ್ರಹ (ಕುಜ) ಇವುಗಳ ಆಸ್ತಿಯ ಬಗ್ಗೆ ಸೂಚಕವಾದ ಭಾವ ಹಾಗೂ ಗ್ರಹವಾಗಿರುತ್ತವೆ. ಜಾತಕದಲ್ಲಿ 4ರ ಅಧಿಪತಿಯು ನಾಲ್ಕರಲ್ಲಿ ಸ್ಥಿತನಾಗಿದ್ದು ಲಗ್ನಾಧಿಪತಿಯು ಸ್ಥಿತನಾಗಿದ್ದು ಶುಭಗ್ರಹಕ್ಕೆ ದೃಷ್ಟಿಯಿದ್ದರೆ ಗೃಹ ಸೌಖ್ಯವಿರುತ್ತದೆ. ಚತುರ್ಥ ಭಾವದ ಅಧಿಪತಿಯು ಚತುರ್ಥದಲ್ಲಿ ಸ್ಥಿತನಾಗಿದ್ದು ತನ್ನ ಸ್ವಂತ ನವಾಂಶದಲ್ಲಿ ಸ್ಥಿತರಾಗಿದ್ದರೆ ಅಥವಾ ಚತುರ್ಥಾಧಿಪತಿಯು ಉಚ್ಛ ಸ್ಥಾನದಲ್ಲಿದ್ದರೆ ಜಾತಕನಿಗೆ ದೊಡ್ಡ ಬಂಗಲೆ ಕಟ್ಟುವ ಯೋಗ, ವಾಹನ ಸೌಖ್ಯ, ಗೃಹದಲ್ಲಿ ಸಂಗೀತ ವಾದ್ಯಗಳೊಂದಿಗೆ ಸೌಖ್ಯದಿಮದ ಜೀವನ ನಡೆಸುವ ಯೋಗವುಂಟಾಗುತ್ತದೆ ಚತುರ್ಥಾಧಿಪತಿ ಹಾಗೂ ದಶಮಾಧಿಪತಿಗಳು ಕೇಂದ್ರ ತ್ರಿಕೋಣಗಳಲ್ಲಿ ಸ್ಥಿತರಾಗಿದ್ದರೆ ಜಾತಕನು ರಾಜಭವನ-ಅರಮನೆಗಳಂತಹ ವೈಭವ ಪೂರಿತ ಗೃಹಗಳಲ್ಲಿ ವಾಸ ಮಾಡುವ ಯೋಗ ಹೊಂದಿರುತ್ತಾನೆ. ಜಾತಕನಿಗೆ ಚತುರ್ಥ ಭಾವಾಧಿಪತಿಯ ದಶಾ / ಕುಜ ದಶಾ ಕಾಲದಲ್ಲಿ ಗೃಹ ನಿರ್ಮಾಣ ಯೋಗ ಉಂಟಾಗುತ್ತದೆ. ಚತುರ್ಥ ಭಾವದಲ್ಲಿ ಚಂದ್ರಸ್ಥಿತ ಚತುರ್ಥಾಧಿಪತಿ ಚಂದ್ರ ಸ್ಥಿತ / ವೀಕ್ಷಣೆಯೊಂದಿಗೆ ಜಾತಕನು ನೂತನ ಗೃಹ ನಿರ್ಮಿಸುವ ಯೋಗ ಹೊಂದಿರುತ್ತಾನೆ. ಚತುರ್ಥಾಧಿಪತಿಯು ಬುಧನ ಸಂಬಂಧ ಹೊಂದಿದ್ದರೆ ಜಾತಕನು ಸೌಂದರ್ಯಯುತವಾದ ಗೃಹ ನಿರ್ಮಾಣ ಮಾಡುವ ಯೋಗ ಹೊಂದಿರುತ್ತಾನೆ. ಚತುರ್ಥಾಧಿಪತಿಯು ಗುರು ಸಂಬಂಧ ಹೊಂದಿದ್ದರೆ ಜಾತಕನು ಭವ್ಯವಾದ ಗಟ್ಟಿಯಾದ ಗೃಹ ನಿರ್ಮಾಣ ಮಾಡುತ್ತಾನೆ. ಸೂರ್ಯ, ಕೇತು ಗ್ರಹಗಳ ಚತುರ್ಥಾದಿಪತಿಯು ಸಂಬಂಧ ಪಟ್ಟರೆ ದುರ್ಬಲ ಮನೆಯ ನಿರ್ಮಾಣ ಮಾಡುತ್ತಾನೆ. ಶನಿ ಮತ್ತು ರಾಹು ಸಂಬಂಧ ಚತುರ್ಥಾಧಿಪತಿಗೆ ಏರ್ಪಟ್ಟರೆ ಜಾತಕನು ಹಳೆಯ ಮನೆಯನ್ನು ಮತ್ತೆ ಖರೀದಿಸುವ ಯೋಗವನ್ನು ಹೊಂದುತ್ತಾನೆ. ಚತುರ್ಥಾಧಿಪತಿಗೆ ಶುಕ್ರನ ಸಂಬಂಧ ಏರ್ಪಟ್ಟರೆ ಸಾಲಂಕೃತ ಗೃಹವನ್ನು ನಿರ್ಮಿಸುತ್ತಾನೆ. ಚತುರ್ಥಾಧಿಪತಿಗೆ ಕುಜನ ಸಂಬಂಧ ಏರ್ಪಟ್ಟರೆ ಜಾತಕನ ಗೃಹವು ಅಗ್ನಿಯಿಂದ ಭಾದೆಗೆ ಒಳಪಡುತ್ತದೆ. ಚತುರ್ಥಭಾವ ಗೃಹ ವ್ಯಾಜ್ಯ : ಚತುರ್ಥಭಾವದಲ್ಲಿ ಅಥವಾ ಚತುರ್ಥಾಧಿಪತಿಗೆ ಅಥವಾ ಕುಜಗ್ರಹಕ್ಕೆ ಕ್ಷೀಣ ಸೂರ್ಯನ ಸಂಬಂಧ ಏರ್ಪಟ್ಟರೆ ಜಾತಕನ ಸ್ಥಿರಾಸ್ಥಿಯು ಸರ್ಕಾರದಿಂದ ತೊಂದರೆಗೆ ಒಳಗಾಗುತ್ತದೆ. ಚತುರ್ಥ ಭಾವಕ್ಕೆ, ಭಾವಾಧಿಪತಿಗೆ ಅಥವಾ ಕುಜಗ್ರಹಕ್ಕೆ ರಾಹು ಸಂಬಂಧ ಏರ್ಪಟ್ಟರೆ ಜಾತಕನು ಗೃಹ / ನಿವೇಶನ ಖರೀದಿಸುವಲ್ಲಿ ಮೋಸ ಹೋಗುತ್ತಾನೆ ಅಥವಾ ಕಾಗದ ಪತ್ರಗಳಿಂದ ಮೋಸಕ್ಕೆ ಒಳಗಾಗುತ್ತಾನೆ. ಗೃಹ ವಾಸ್ತು : ಜಾತಕನ ಚತುರ್ಥಭಾವದಿಂದ ಗೃಹವಾಸ್ತುವನ್ನು ತಿಳಿದು ನಿರ್ಮಿಸಬೇಕು. ಚತುರ್ಥದಲ್ಲಿ ಶುಭಗ್ರಹಗಳ ಸ್ಥಿತ ಅಥವಾ ವೀಕ್ಷಣೆಯಿದ್ದರೆ ಶುಭಫಲ ಉಂಟಾಗುತ್ತದೆ. ಚತುರ್ಥದಲ್ಲಿ ಅಶುಭ ಗ್ರಹಗಳ ಸ್ಥಿತನಾಗಿದ್ದರೆ (ಶನಿ-ಕುಜ-ರಾಹು-ಕೇತು) ಒಳ್ಳೆಯದಲ್ಲ. ಜಾತಕನು ವಾಸ್ತುವಿಲ್ಲದ ಗೃಹದಲ್ಲಿ ವಾಸನಾಗಿದ್ದು ಕಷ್ಟನಷ್ಟಗಳನ್ನು ಅನುಭವಿಸುತ್ತಾನೆ. ವಾಸ್ತು ದೋಷ ನಿವಾರಣೆಗೆ ವೃಕ್ಷಾರಾಧನೆ ಜ್ಯೋತಿಷ ಶಾಸ್ತ್ರದಲ್ಲಿ ಋುಷಿಮುನಿಗಳು ಒಂದೊಂದು ನಕ್ಷತ್ರ ಹಾಗೂ ಒಂದೊಂದು ಗ್ರಹಕ್ಕೂ ಮರಗಿಡಗಳನ್ನು ಹೆಸರಿಸಿದ್ದಾರೆ. 'ವೃಕ್ಷೋ ರಕ್ಷತಿ ರಕ್ಷಿತಃ' ಎಂಬ ಮಾತಿನಂತೆ ಪರಿಸರದ ಉಳಿವು ಮನುಕುಲದ ಉಳಿವಾಗುತ್ತದೆ. ಜ್ಯೋತಿಷದ ಪ್ರಕಾರ ಮರ, ಗಿಡಗಳ ಪೋಷಣೆ, ಆರಾಧನೆ, ಅರ್ಚನೆ, ರಕ್ಷಣೆಯಿಂದ ದೋಷಗಳು ನಿವಾರಣೆಯಾಗುತ್ತವೆ. ಮನೆಯ ವಾಸ್ತುದೋಷ ನಿವಾರಣೆಗೂ ಪೂರಕವಾಗಿದೆ. ಮನೆಯ ಮೇಲೆ ಕೆಟ್ಟ ದೃಷ್ಟಿ ಬೀಳಬಾರದು, ನಕಾರಾತ್ಮಕ ಅಂಶಗಳು ಮೂಡಣ ದಿಕ್ಕಿನಲ್ಲಿ ಹೆಚ್ಚಬಾರದು ಎಂದರೆ ಪಶ್ಚಿಮ ದಿಕ್ಕಿನಲ್ಲಿ ತೆಂಗಿನ ಗಿಡ, ಉತ್ತರಕ್ಕೆ ಮಾವಿನ ಗಿಡ, ದಕ್ಷಿಣಕ್ಕೆ ಅಡಿಕೆ ಮರ ಮತ್ತು ಪೂರ್ವಕ್ಕೆ ಹಲಸಿನ ಮರವನ್ನು ನೆಡಬೇಕೆನ್ನುತ್ತದೆ ವಾಸ್ತುಶಾಸ್ತ್ರ. ಆದರೆ ಇತ್ತೀಚಿನ ದಿನಗಳಲ್ಲಿ ಕಟ್ಟಡ ನಿರ್ಮಿಸಲೇ ಜಾಗವಿಲ್ಲದ ಸಂದರ್ಭದಲ್ಲಿ ಇಂತಹ ಪರಿಹಾರ ಕ್ರಮಗಳನ್ನು ಕೈಗೊಳ್ಳುವುದಾದರೂ ಹೇಗೆ ಎಂಬ ಪ್ರಶ್ನೆ ಕಾಡುತ್ತದೆ. ಅಂತಹ ಸನ್ನಿವೇಶದಲ್ಲಿ ಮೂಡಣ ಬಾಗಿಲಿದ್ದರೆ ಬಾಗಿಲಿಗೆ ಎದುರಾಗಿ ಮಂತ್ರಪೂರಿತ ಪೂರ್ಣಫಲವನ್ನು ಕಟ್ಟುವುದರಿಂದ, ಉತ್ತರ ದಿಕ್ಕಿನಲ್ಲಿ ಅಡುಕೆಯ ಹೊಂಬಾಳೆಯನ್ನು ಸಿಲುಕಿಸುವುದರಿಂದ ದೋಷ ನಿವಾರಣೆಯಾಗುತ್ತದೆ. ದೈವ ಬಲವಿದ್ದರೂ ಲಕ್ಷ್ಮೇ ಕಟಾಕ್ಷವಿಲ್ಲದಿದ್ದರೆ ಪ್ರಯೋಜನವಿಲ್ಲ. ಲಕ್ಷ್ಮೇ ದೇವಿಯ ಕೃಪೆಗಾಗಿ ಮನೆಯ ಪೂರ್ವದಲ್ಲಿ ಬಿಲ್ವ ವೃಕ್ಷವನ್ನು ಬೆಳೆಸಬೇಕು. ಒಂದೊಮ್ಮೆ ಸ್ಥಳವಿಲ್ಲದಿದ್ದರೆ ಪಾಟ್‌ನಲ್ಲಾದರೂ ಬಿಲ್ವ ಪತ್ರೆಯ ಬೋನ್ಸಾಯ್‌ ವೃಕ್ಷವನ್ನು ಬೆಳೆಸಿ ಪ್ರತಿನಿತ್ಯ ನೀರುಣಿಸಿ ಆರಾಧಿಸಬೇಕು. ಇದರಿಂದ ಮನಸ್ಸಿಗೆ ಶ್ರೇಯಸ್ಸು ಉಂಟಾಗುತ್ತದೆ. ನೆಲ್ಲಿಕಾಯಿ ಮರವನ್ನು ಮನೆಯ ಎದುರು ಬೆಳೆಸಿದರೆ ಮನೆಯಲ್ಲಿ ಶಾಂತಿ, ನೆಮ್ಮದಿ ನೆಲೆಸುತ್ತದೆ. ಒಂದೊಮ್ಮೆ ಬೆಳೆಸಲು ಜಾಗವಿಲ್ಲದವರು ಮನೆಯ ಮುಂದಿನ ತುಳಸಿ ವೃಂದಾವನದಲ್ಲಿ ನೆಲ್ಲಿ ಸಸಿಯನ್ನು ನೆಟ್ಟ ಕೃಷ್ಣನ ಆರಾಧನೆ ಮಾಡುವುದು ಉತ್ತಮ. ಮನೆಯ ಈಶಾನ್ಯ ದಿಕ್ಕಿನಲ್ಲಿ ಔದುಂಬರ ವೃಕ್ಷವನ್ನು ಬೆಳೆಸಿದರೆ ಗುರುವಿನ ಅನುಗ್ರಹ ಹಾಗೂ ವಾಸ್ತುದೋಷ ಪರಿಹಾರ. ಔದುಂಬರ ಶುಕ್ರಗ್ರಹ ಪ್ರಿಯ. ಗುರು ದತ್ತಾತ್ರೇಯರ ಮೂಲಸ್ಥಾನ. ಒಂದೊಮ್ಮೆ ಜಾಗವಿಲ್ಲದಿದ್ದರೆ ಔದುಂಬರ ಕಾಷ್ಟವನ್ನಾದರೂ ಆ ದಿಕ್ಕಿನಲ್ಲಿಟ್ಟು ನಮಸ್ಕರಿಸಿ ಪೂಜಿಸುವುದು. ಶಿವನ ಅನುಗ್ರಹ ಹೊಂದಲು ಬಿಳಿ ತುಂಬೆ ಹೂವಿನ ಗಿಡವನ್ನು ಮನೆಯಲ್ಲಿ ಬೆಳೆಸಿದರೆ ಒಳ್ಳೆಯದು. ತುಂಬೆ ಹೂವಿನ ಗಿಡ ಔಷಧಿಯಾಗೂ ಬಳಕೆಯಾಗುತ್ತದೆ. ಸೋಂಕು ನಿವಾರಕವಾಗಿಯೂ ಕೆಲಸ ಮಾಡುತ್ತದೆ. ಮನೆಯ ಮುಂದೆ ತುಳಸಿ ಗಿಡವನ್ನು ಬೆಳೆಸುವುದರಿಂದ ಆಮ್ಲಜನಕದ ಹರಿವಿನ ಪ್ರಮಾಣ ಹೆಚ್ಚಿ ಮನೆಯೊಳಗೆ ಸಕಾರಾತ್ಮಕ ಶಕ್ತಿ ಸಂಚಲನವಾಗುತ್ತದೆ. ಮನೆಯ ಅಭಿವೃದ್ಧಿಗೆ ವಿಳ್ಯೇದೆಲೆ ಗಿಡ, ಜಾಜಿ ಗಿಡ, ಮಲ್ಲಿಗೆ ಗಿಡ, ಚಂದನ ಅಥವಾ ಶ್ರೀಗಂಧದ ಮರವನ್ನು ಬೆಳೆಸುವುದು ಒಳ್ಳೆಯದು. ಮನಿಪ್ಲಾಂಟ್‌ ನೆರಳಿನಲ್ಲೂ ಬೆಳೆಯುತ್ತದೆ. ಅದನ್ನು ಮನೆಯೊಳಗೆ ಇಟ್ಟು ಬೆಳೆಸಿದರೆ ಸಕಲ ವಾಸ್ತು ದೋಷಗಳು ನಿವಾರಣೆಯಾಗಿ, ಕೌಟುಂಬಿಕ ಶಾಂತಿ ನೆಲೆಸುತ್ತದೆ. ಮನೆಯ ಎದುರು ಬಿಳಿ ಎಕ್ಕದ ಗಿಡವನ್ನು ಬೆಳೆಸಿದರೆ ಅಥವಾ ಮನೆಯ ಸಮೀಪವಿರುವ ಬಿಳಿ ಎಕ್ಕದ ಗಿಡಕ್ಕೆ ಪ್ರತಿನಿತ್ಯ ಪೂಜಿಸುವುದರಿಂದ ಗಣಪತಿಯ ಅನುಗ್ರಹ ಉಂಟಾಗುತ್ತದೆ. ಗಣೇಶ ಮೂಡಿರುವ ಬಿಳಿ ಎಕ್ಕದ ಗಿಡದ ಬೇರನ್ನು ಮನೆಯೊಳಗಿಟ್ಟು ಆರಾಧಿಸುವುದರಿಂದ ಸಕಲ ಇಷ್ಟಾರ್ಥಗಳು ನೆರವೇರುತ್ತವೆ. ಮನೆಯ ಬಲಭಾಗದಲ್ಲಿ ಬನ್ನಿ (ಶಮೀ) ಗಿಡವನ್ನು ಬೆಳೆಸಿದರೆ ಅಥವಾ ಶಮೀ ಪತ್ರೆಯಿಂದ ಹನುಮಂತ ಅಥವಾ ದುರ್ಗಾ ದೇವಿಯನ್ನು ಆರಾಧಿಸಿದರೆ ವಾಸ್ತುದೋಷ ನಿವಾರಣೆಯಾಗುತ್ತದೆ. ಮನೆಯ ಮುಂಬಾಗಿಲಿನ ಹೊಸ್ತಿಲಿಗೆ ಪ್ರತಿನಿತ್ಯ ಗರಿಕೆ ಪೂಜೆ ಮಾಡುವುದು ಅಥವಾ ಮುಂಬಾಗಿಲ ಬಲಬದಿಯಲ್ಲಿ ಗರಿಕೆ ಬೆಳೆಸಿದರೆ ಲಕ್ಷ್ಮೇ ಗಣಪತಿಯ ಅನುಗ್ರಹ ಉಂಟಾಗುತ್ತದೆ. ಅಷ್ಟೇಕೆ ವಾಸ್ತುದೋಷವೂ ನಿವಾರಣೆಯಾಗುತ್ತದೆ. ಬಿಲ್ವ ಪತ್ರೆಯ ತೋರಣವನ್ನು ಮನೆಯ ಮುಂಬಾಗಿಲು ಹಾಗೂ ದೇವರ ಮನೆಗೆ ಕಟ್ಟುವುದರಿಂದಲೂ ವಾಸ್ತುದೋಷ ನಿವಾರಣೆಯಾಗುತ್ತದೆ -SANGRAHA

4 comments:

  1. ವೃಷಭಯದ ಫಲದ ಬಗ್ಗೆ ಮಾಹಿತಿ ಇಲ್ಲ

    ReplyDelete
  2. ನಾವು 59 39 ಆಯಾ ಮಾಡಿಷಿದಿವಿ ಕಟ್ಟಡ್ 51 39 ಮಾಡಿದ್ದೀವಿ ಇದ ರಂದಾಗಿ ತೊಂದರೆ ಇದೆ ಯೆ

    ReplyDelete
  3. ಇದರಲ್ಲಿ ವೃಷಭಾಯದ ಫಲದ ಬಗ್ಗೆ ಮಾಹಿತಿ ಇಲ್ಲ.
    ಮೊದಲು ಅದನ್ನು update ಮಾಡಿ.

    ReplyDelete
  4. ನಮ್ಮ ನಿವೇಶನ ಪಶ್ಚಿಮ ದಿಕ್ಕಿಗೆ ಇದೆ. ಅಳತೆ ಪೂರ್ವ ಪಶ್ಟಿಮ 45 ಅಡಿ ಉತ್ತರ ದಕ್ಷಿಣ 30 ಅಡಿ ಇದೆ.ಇದಕ್ಕೆಯಾವ ಆಯ ಉತ್ತಮ ತಿಳಿಸಿ

    ReplyDelete