Wednesday, 20 February 2019
ವಿವಾಹ ಮುಹೂರ್ತ,ಜ್ಯೊತಿಷ ಸಾಮಾನ್ಯ ಜ್ಞಾನ,ಶುಭ ಮಹೂರ್ತ ನಿರ್ಣಯ
ವಿವಾಹ ಮುಹೂರ್ತ
ವಿವಾಹ ನಿರ್ಣಯಿಸುವಾಗ ಮುಹೂರ್ತ ನೋಡುವ ಪದ್ಧತಿಯಿದೆ. ಮುಹೂರ್ತ ಲೆಕ್ಕಾಚಾರ ಮಾಡುವಾಗ ವರ ಮತ್ತು ಕನ್ಯೆಗೆ ಇರುವ ಗ್ರಹಬಲಗಳನ್ನು ನೋಡಿ ನಿರ್ಣಯಿಸಬೇಕು. ಸರಿಯಾಗಿ ನೋಡದೇ ವಿವಾಹ ಮುಹೂರ್ತಗಳನ್ನು ನಿರ್ಣಯಿಸಿದರೆ ಅನರ್ಥ ಸಂಭವಿಸಬಹುದು.
ವಿವಾಹ ಮುಹೂರ್ತವನ್ನು ನಿರ್ಣಯಿಸುವಾಗ 'ತ್ರಿಬಲ' ಅಂದರೆ ವರನಿಗೆ ಸೂರ್ಯ, ಚಂದ್ರಬಲ ಮತ್ತು ಕನ್ಯೆಗೆ ಚಂದ್ರ, ಗುರುಬಲಗಳನ್ನು ನೋಡಬೇಕು. ಸೂರ್ಯನು 4, 8, 12ನೇ ಭಾವದಲ್ಲಿರುವಾಗ ವಿವಾಹ ಮಾಡಿದರೆ ಮೃತ್ಯುವಾಗುತ್ತದೆ. ವರನ ರಾಶಿಯಿಂದ ಸೂರ್ಯ 1,2,5,7, 9ನೆಯ ಭಾವದಲ್ಲಿದ್ದರೆ ಸೂರ್ಯನ ಪೂಜೆ, ಜಪ, ದಾನಗಳನ್ನು ಮಾಡುವುದರಿಂದ ವಿವಾಹ ಶುಭವಾಗುತ್ತದೆ. 11,3, 6, 10ನೆಯ ಭಾವದಲ್ಲಿದ್ದರೆ ವಿವಾಹವು ಶುಭವಾಗುತ್ತದೆ.
ಕನ್ಯೆಯ ರಾಶಿಯಿಂದ 4,8,12ರಲ್ಲಿ ಗುರುವಿರುವಾಗ ವಿವಾಹ ಮಾಡಿದರೆ ಕನ್ಯೆಯ ಪ್ರಾಣಹಾನಿಯಾಗುತ್ತದೆ. ಗುರುವು 1,3,6,10ರಲ್ಲಿರುವಾಗ ಪೂಜೆ, ಜಪ, ದಾನಗಳನ್ನು ಮಾಡಿ ವಿವಾಹ ಮಾಡಿದರೆ ಶುಭವಾಗುತ್ತದೆ. ಗುರುವು 11, 2, 5, 7, 9ರಲ್ಲಿರುವಾಗ ವಿಶೇಷ ಫಲ ಉಂಟಾಗುತ್ತದೆ. ಕನ್ಯೆ ಮತ್ತು ವರ ಈರ್ವರಿಗೂ ಚಂದ್ರಬಲ ಹೇಳಲಾಗಿದ್ದು, ಅದರ ಫಲಗಳು ಹೀಗಿರುತ್ತವೆ. 1ರಲ್ಲಿ ಲಕ್ಷ್ಮಿ ಪ್ರಾಪ್ತಿ, 2ರಲ್ಲಿ ಮನಸ್ಸಂತೋಷ, 3ರಲ್ಲಿ ಧನಸಂಪತ್ತು, 4ರಲ್ಲಿ ಕಲಹ, 5ರಲ್ಲಿ ಜ್ಞಾನವೃದ್ಧಿ, 6ರಲ್ಲಿ ಸಂಪತ್ತು, 7ರಲ್ಲಿ ರಾಜ ಸನ್ಮಾನ, 8ರಲ್ಲಿ ಮೃತ್ಯು, 9ರಲ್ಲಿ ಧರ್ಮಲಾಭ, 10ರಲ್ಲಿ ಮನೋಭಿಲಾಷೆ ಪ್ರಾಪ್ತಿ, ಏಕಾದಶದಲ್ಲಿ ಸರ್ವಲಾಭ ಮತ್ತು ದ್ವಾದಶದಲ್ಲಿ ಹಾನಿಯುಂಟಾಗುತ್ತದೆ.
ಜ್ಯೋತಿಷ ಶಾಸ್ತ್ರದ ಪ್ರಕಾರ ಗುರು ಜೀವರಕ್ಷಕ, ಚಂದ್ರ ಧನ ಪ್ರದಾತ, ಸೂರ್ಯ ತೇಜವನ್ನು, ಮಂಗಲ ಭೂ ಸಂಪತ್ತನ್ನು ಕೊಡುತ್ತಾನೆ. ಗುರುವು ಹೀನಬಲನಾಗಿದ್ದರೆ ಕನ್ಯೆಯು ಮೃತ್ಯು, ಸೂರ್ಯ ಹೀನನಾಗಿದ್ದರೆ ವರನ ಮೃತ್ಯುವಾಗುತ್ತದೆ. ಚಂದ್ರ ಹೀನನಾಗಿದ್ದರೆ ಲಕ್ಷ್ಮಿ ಕ್ಷೀಣವಾಗುತ್ತಾಳೆ. ಮಂಗಲ ಹೀನನಾಗಿದ್ದರೆ ಸ್ಥಾನ ಹಾನಿಯಾಗುತ್ತದೆ.
ಗ್ರಹಗಳ ಬಲ ವಿಚಾರ : ಲಗ್ನ, ಚತುರ್ಥ, ಸಪ್ತಮ, ದಶಮ ಈ ನಾಲ್ಕು ಕೇಂದ್ರ ಸ್ಥಾನಗಳಲ್ಲಿ ಶುಭಗ್ರಹವಿದ್ದರೆ ಶ್ರೇಷ್ಠವು. ಸಪ್ತಮ ಸ್ಥಾನದಲ್ಲಿ ಗ್ರಹವಿರದಿದ್ದರೆ ಅಶುಭ. ಶುಕ್ಲಪಕ್ಷ ದಶಮಿಯಿಂದ ಕೃಷ್ಣಪಕ್ಷದ ಪಂಚಮಿಯವರೆಗೆ ಚಂದ್ರನು ಶ್ರೇಷ್ಠನಾಗಿರುತ್ತಾನೆ. ಸೂರ್ಯ ರಾಹುಗಳು ಶುಕ್ಲಪಕ್ಷ ದ್ವಿತಿಯಾದಿಂದ ದಶಮಿಯವರೆಗೆ ಶುಭರಾಗಿರುತ್ತಾರೆ. ಭೌಮ, ಶನಿ, ಕೇತುಗಳು ಕೃಷ್ಣ ಪಂಚಮಿಯಿಂದ, 30ರವರೆಗೆ ಚಂದ್ರ ಪಾಪಗ್ರಹರಾಗಿರುತ್ತಾರೆ. ಲಗ್ನದಿಂದ ದ್ವಿತೀಯ ಭಾವದಲ್ಲಿ ಚಂದ್ರ ಶುಭನಾಗಿರುತ್ತಾನೆ. 3,6ರಲ್ಲಿ ಪಾಪಗ್ರಹನಾಗಿರುತ್ತಾನೆ. 3, 11ರಲ್ಲಿ ಸರ್ವಗ್ರಹಗಳು ಶುಭವಾಗಿರುತ್ತವೆ. ಸಪ್ತಮದಲ್ಲಿ ಸೌಮ್ಯ, ಕ್ರೂರ ಮತ್ತು ಪಾಪಗ್ರಹಗಳು ಮೃತ್ಯುಪ್ರದವಾಗಿವೆ. ಶನಿ ಸೂರ್ಯರು ಲಗ್ನಾತ್ ಸಪ್ತಮದಲ್ಲಿದ್ದರೆ ಚಂದ್ರ 1,6,8ರಲ್ಲಿದ್ದರೆ, ಮಂಗಳ 1, 7, 8ರಲ್ಲಿದ್ದರೆ, ಶುಕ್ರನು 8,7,6ರಲ್ಲಿದ್ದರೆ, ಗುರುವು 8ರಲ್ಲಿದ್ದರೆ, ರಾಹು 1, 7, 4ರಲ್ಲಿದ್ದರೆ, ಬುಧ 7,8ರಲ್ಲಿದ್ದ ಸಮಯದಲ್ಲಿ ವಿವಾಹವಾದರೆ ಪ್ರಾಣಹಾನಿಯಾಗುತ್ತದೆ. ಗ್ರಹಗಳ ಮಧ್ಯದಲ್ಲಿ ಚಂದ್ರ ಅಥವಾ ಲಗ್ನವಿದ್ದರೆ ವರನಿಗೆ ಮೃತ್ಯುಕಾರಕನಾಗುವುದರಿಂದ ವಜ್ರ್ಯವಾಗುತ್ತದೆ. ತುಲಾ, ಮಿಥುನ, ಕನ್ಯಾ, ವೃಷಭ ಲಗ್ನಗಳು ಮತ್ತು ಧನುವಿನ ಪೂರ್ವಾರ್ಧ ಶುಭ ಲಗ್ನಗಳಾಗಿವೆ. ಅನ್ಯ ಲಗ್ನಗಳು ಮಧ್ಯಮವಾಗಿವೆ
ಜ್ಯೊತಿಷ ಸಾಮಾನ್ಯ ಜ್ಞಾನ
ಜನರಲ್ ಕಾನೆಲ್ಡ್ಜ್ ಸಾಮಾನ್ಯ ಜ್ಯೋತಿಷ್ಯ ಜ್ಞಾನ ಆಯನಗಳು : ಸೂರ್ಯನ ಚಲನೆಗೆ ಅನುಸಾರವಾಗಿ ಎರಡು ಆಯನಗಳಿವೆ ಅದೆಂದರೆ ಉತ್ತರಾಯಣ ಮತ್ತು ದಕ್ಷಿಣಾಯಣ...
ಆಯನಗಳು : ಸೂರ್ಯನ ಚಲನೆಗೆ ಅನುಸಾರವಾಗಿ ಎರಡು ಆಯನಗಳಿವೆ. ಅದೆಂದರೆ ಉತ್ತರಾಯಣ ಮತ್ತು ದಕ್ಷಿಣಾಯಣ. ಸೂರ್ಯನು ಮಕರ ರಾಶಿಯಿಂದ ಮಿಥುನ ಮಾಸಾಂತ್ಯದವರೆಗೆ ಸಂಚರಿಸುವಾಗ ಉತ್ತರಾಯಣವಾಗುತ್ತದೆ. ಕರ್ಕಾಟಾದಿ ಧನುರಾಂತ್ಯದವರೆಗೆ ಸೂರ್ಯನು ಸಂಚರಿಸುವಾಗ ದಕ್ಷಿಣಾಯಣವಾಗುತ್ತದೆ.
ಮಾಸಗಳು : ಹನ್ನೆರಡು ಮಾಸಗಳಿವೆ. ಅವೆಂದರೆ ವಸಂತ ಋುತು (ಚೈತ್ರ-ವೈಶಾಖ), ಗ್ರೀಷ್ಮ ಋುತು (ಜ್ಯೇಷ್ಠ-ಆಷಾಢ), ವರ್ಷ ಋುತು (ಶ್ರಾವಣ-ಭಾದ್ರಪದ), ಶರದ್ರುತು (ಆಶ್ವಯುಜ-ಕಾರ್ತಿಕ), ಹೇಮಂತ ಋುತು (ಮಾರ್ಗಶಿರ-ಪುಷ್ಯ), ಶಿಶಿರ ಋುತು (ಮಾಘ-ಫಾಲ್ಗುಣ). ಒಂದು ತಿಂಗಳಲ್ಲಿ ಎರಡು ಪಕ್ಷಗಳು. ಶುಕ್ಲ (ಹುಣ್ಣಿಮೆಯಿಂದ ಪಾಡ್ಯದವರೆಗೆ -
ವೃದ್ಧಿ ಚಂದ್ರ) ಮತ್ತು ಕೃಷ್ಣ ಪಕ್ಷ (ಪಾಡ್ಯದಿಂದ ಅಮಾವಾಸ್ಯೆಯವರೆಗೆ - ಕ್ಷೀಣ ಚಂದ್ರ). ವೃದ್ಧಿ ಚಂದ್ರ ಕಾಲದಲ್ಲಿ ಶುಭ ಕಾರ್ಯಗಳನ್ನು ಮಾಡಬೇಕೆನ್ನುವುದು ಶಾಸ್ತ್ರಗಳ ಅಭಿಮತ.
ಯೋಗಗಳು : ಜ್ಯೋತಿಷ್ಯಶಾಸ್ತ್ರವು 27 ನಕ್ಷತ್ರಗಳನ್ನು ಗುರುತಿಸಿದೆ. ಅದಕ್ಕೆ ಹೊಂದಿಕೊಂಡಂತೆ 27 ಯೋಗಗಳಿವೆ. ಅವೆಂದರೆ, ವಿಷ್ಕಂಭಯೋಗ, ಪ್ರೀತಿಯೋಗ, ಆಯುಷ್ಮಾನ್‌ಯೋಗ, ಸೌಭಾಗ್ಯಯೋಗ, ಶೋಭಾನಯೋಗ, ಅತಿಗಂಡಯೋಗ, ಸುಕರ್ಮಯೋಗ, ಧೃತಿಯೋಗ, ಶೂಲಯೋಗ, ಗಂಡಯೋಗ, ವೃದ್ಧಿಯೋಗ, ಧ್ರುವಯೋಗ, ವ್ಯಾಘಾತಯೋಗ, ಹರ್ಷಣಯೋಗ, ವಜ್ರಯೋಗ, ಸಿದ್ಧಿಯೋಗ, ವೃತೀಪಾತಯೋಗ, ವರೀಯಾನ್‌ಯೋಗ, ಪರಿಘಯೋಗ, ಶಿವನಾಮಯೋಗ, ಸಿದ್ಧಯೋಗ, ಸಾಧ್ಯಯೋಗ, ಶುಭಯೋಗ, ಶುಕ್ಲನಾಮಯೋಗ, ಬ್ರಹ್ಮಯೋಗ, ಐಂದ್ರಯೋಗ ಮತ್ತು ವೈಧೃತಿಯೋಗ.
ಕರಣಗಳು : ಹನ್ನೊಂದು ಕರಣಗಳು. ಅವೆಂದರೆ, ಬವ, ಬಾಲವ, ಕೌಲವ, ತೈತಿಲ, ಗರಜ, ವಣಿಕ್, ಭದ್ರ, ಶಕುನಿ, ಚತುಷ್ಪಾತ್, ನಾಗವಾನ್ ಮತ್ತು ಕಿಂಸ್ತುಘ್ನ ಕರಣ.
ರಾಶ್ಯಾಧಿಪತಿ ಲೆಕ್ಕಾಚಾರ: ಸಿಂಹರಾಶಿಗೆ ಸೂರ್ಯ, ಕರ್ಕಾಟಕ ರಾಶಿಗೆ ಚಂದ್ರ, ಮೇಷ-ವೃಶ್ಚಿಕ ರಾಶಿಗಳಿಗೆ ಅಂಗಾರಕ, ಕನ್ಯಾ-ಮಿಥುನ ರಾಶಿಗಳಿಗೆ ಬುಧ, ಧನು-ಮೀನ ರಾಶಿಗಳಿಗೆ ಗುರು, ತುಲಾ-ವೃಷಭ ರಾಶಿಗಳಿಗೆ ಶುಕ್ರ, ಮಕರ-ಕುಂಭ ರಾಶಿಗಳಿಗೆ ಶನಿ ಅಧಿಪತಿ.
ಲಗ್ನ ಪ್ರಮಾಣ : ಲಗ್ನ ಪ್ರಮಾಣವನ್ನು ಲೆಕ್ಕ ಹಾಕುವಾಗ ಜಾತಕದಲ್ಲಿನ ಆಯಾ ಲಗ್ನಕ್ಕೆ ಅನುಗುಣವಾಗಿ ಲೆಕ್ಕಾಚಾರ ಮಾಡಬೇಕು. ಮೇಷ ಪ್ರಮಾಣವು 4-12, ವೃಷಭ ಪ್ರಮಾಣವು 4-38, ಮಿಥುನ ಪ್ರಮಾಣವು 5-14, ಕರ್ಕಾಟಕ ಪ್ರಮಾಣವು 5-32, ಸಿಂಹ ಪ್ರಮಾಣವು 5-20, ಕನ್ಯಾ ಪ್ರಮಾಣವು 5-4, ತುಲಾ ಪ್ರಮಾಣವು 5-4, ವೃಶ್ಚಿಕ ಪ್ರಮಾಣವು 5-20, ಧನು ಪ್ರಮಾಣವು 5-32, ಮಕರ ಪ್ರಮಾಣವು 5-14, ಕುಂಭ ಪ್ರಮಾಣವು 4-38, ಮೀನ ಪ್ರಮಾಣವು 4-12. ಹೀಗೆ ಮೇಷಾದಿ ಲಗ್ನ ಪ್ರಮಾಣಗಳನ್ನು ಲೆಕ್ಕ ಹಾಕಬೇಕು. ಲಗ್ನ ಪ್ರಮಾಣ ಲೆಕ್ಕ ಹಾಕಿದ ನಂತರ ಲಗ್ನಭುಕ್ತಿಯನ್ನು ನಿರ್ಣಯಿಸ ಬೇಕು.
ಶುಭ ಮಹೂರ್ತ ನಿರ್ಣಯ
ಒಳ್ಳೆಯ ಮನಸ್ಸಿನಿಂದ ಮಾಡುವ ಯಾವುದೇ ಕಾರ್ಯದಲ್ಲೂ ಗೆಲುವಿರುತ್ತದೆ. ಶುಭ ಮಹೂರ್ತಗಳಲ್ಲಿ ಹೊಸ ಕಾರ್ಯವನ್ನು ಆರಂಭ ಮಾಡುವುದರಿಂದ ಹಿಡಿದ ಕಾರ್ಯದಲ್ಲಿ ಯಶಸ್ಸು ದೊರೆಯುತ್ತದೆ.
ಒಳ್ಳೆಯ ಮನಸ್ಸಿನಿಂದ ಮಾಡುವ ಯಾವುದೇ ಕಾರ್ಯದಲ್ಲೂ ಗೆಲುವಿರುತ್ತದೆ. ಶುಭ ಮಹೂರ್ತಗಳಲ್ಲಿ ಹೊಸ ಕಾರ್ಯವನ್ನು ಆರಂಭ ಮಾಡುವುದರಿಂದ ಹಿಡಿದ ಕಾರ್ಯದಲ್ಲಿ ಯಶಸ್ಸು ದೊರೆಯುತ್ತದೆ.
ಶುಭ ಮಹೂರ್ತ ನಿರ್ಣಯ ಕುರಿತ ಸಂಕ್ಷೇಪ ಮಾಹಿತಿ.
ಜ್ಯೋತಿಷ್ಯಶಾಸ್ತ್ರದಲ್ಲಿ ಮೂರೂವರೆ ಮಹೂರ್ತಗಳನ್ನು (ಯುಗಾದಿಯ ಪಾಡ್ಯ, ಅಕ್ಷಯ ತದಿಗೆ, ವಿಜಯ ದಶಮಿ ಮತ್ತು ಬಲಿ ಪಾಡ್ಯಮಿ) ಅತಿ ಶ್ರೇಷ್ಠವೆನ್ನುತ್ತಾರೆ. ಈ ಮಹೂರ್ತಗಳಿಗೆ ಯಾವುದೇ ದಿನ ದೋಷವಿಲ್ಲ. ಒಂದೊಮ್ಮೆ ಈ ದಿನಗಳಿಗೆ ಹೊಂದಿಕೊಂಡಂತೆ ಗ್ರಹಣವೇನಾದರೂ ಸಂಭವಿಸಿದರೆ ಆಗ ಶುಭ ಕಾರ್ಯಗಳನ್ನು ಮಾಡದಿರುವುದು ಒಳ್ಳೆಯದು. ಧನುರ್ಮಾಸದಲ್ಲಿ ಗೃಹ ಪ್ರವೇಶ, ನೂತನ ಗೃಹ ನಿರ್ಮಾಣ ಕಾರ್ಯಾರಂಭ, ವಿವಾಹ ಮತ್ತಿತರ ಶುಭ ಕಾರ್ಯಗಳನ್ನು ಮಾಡುವುದು ಒಳ್ಳೆಯದಲ್ಲ. ಸೋಮವಾರ, ಬುಧವಾರ, ಗುರುವಾರ ಮತ್ತು ಶುಕ್ರವಾರಗಳನ್ನು ಶುಭವಾರಗಳೆನ್ನುತ್ತಾರೆ. ಶುದ್ಧ ಬಿದಿಗೆ, ತದಿಗೆ, ಪಂಚಮಿ, ಸಪ್ತಮಿ, ದಶಮಿ, ಏಕಾದಶಿ ಮತ್ತು ತ್ರಯೋದಶಿ ಉತ್ತಮ ತಿಥಿಗಳಾಗಿವೆ. ಅಶ್ವಿನಿ, ಮೃಗಶಿರಾ, ರೋಹಿಣಿ, ಪುನರ್ವಸು, ಪುಷ್ಯ, ಮಾಘ, ಪುಬ್ಬ, ಉತ್ತರ,
ಹಸ್ತ, ಚಿತ್ತ, ಸ್ವಾತಿ, ಅನುರಾಧ, ಮೂಲ, ಉತ್ತರಾಷಾಢ, ಶ್ರವಣ, ಧನಿಷ್ಠ, ಶತಭಿಷ, ಉತ್ತರಭಾದ್ರ, ರೇವತಿ ಶುಭ ನಕ್ಷತ್ರಗಳಾಗಿವೆ.
ಪ್ರೀತಿ, ಸೌಭಾಗ್ಯ, ಶೋಭಾನ, ವೃದ್ಧಿ, ಧೃವ, ಹರ್ಷಣ, ಸಿದ್ಧಿ, ಶಿವ, ಸಾದ್ಯ, ಶುಭ, ಶುಕ್ಲ, ಬ್ರಹ್ಮ ಇವುಗಳನ್ನು ಶುಭ ಯೋಗಗಳೆನ್ನುತ್ತಾರೆ. ಭವ, ಬಾಲವ, ಕೌಲವ, ತೈತುಲ, ಗರಜ, ವಣಿಕ, ಭದ್ರ ಇವು ಶುಭ ಕರಣಗಳಾಗಿವೆ. ವೃಷಭ, ಮಿಥುನ, ಕನ್ಯಾ, ತುಲಾ, ಧನಸ್ಸು, ಮೀನ ಶುಭಲಗ್ನಗಳಾಗಿದ್ದರೆ, ಬುಧ, ಗುರು, ಶುಕ್ರ, ಚಂದ್ರ ಈ ಗ್ರಹಗಳು ಕೇಂದ್ರ
ತ್ರಿಕೋಣ ಸ್ಥಾನಗಳಾದ 1-4-7-10-5-9 ರಲ್ಲಿ ಇದ್ದಾಗ ಶುಭ ಗ್ರಹವೆನಿಸುತ್ತದೆ. ರವಿ, ಕುಜ, ಶನಿ ಗ್ರಹಗಳು 3-6-11 ರಲ್ಲಿ ಇದ್ದರೆ ಪಾಪಗ್ರಹಗಳೆಂದು ನಿರ್ಣಯಿಸುವುದು. 11 ನೇ ಸ್ಥಾನದಲ್ಲಿ ಸರ್ವ ಗ್ರಹಗಳು ಇದ್ದರೆ ಶುಭವೆಂದು ತೀರ್ಮಾನಿಸಬೇಕು. ರಾಹು, ಕೇತು ಛಾಯಾ ಗ್ರಹಗಳಾದರೂ ಜನ್ಮ ಕುಂಡಲಿಯಲ್ಲಿ 3-6-11 ರಲ್ಲಿ ಇದ್ದರೆ ಶುಭವೆಂದು ತೀರ್ಮಾನಿಸಬಹುದು.ತಿಥಿ ನಿರ್ಣಯ
ಐದು ಬಗೆಯ ತಿಥಿಗಳಿವೆ. ಅವೆಂದರೆ, ನಂದಾ, ಭದ್ರ, ಜಯ, ರಿಕ್ತಾ ಮತ್ತು ಪೂರ್ಣ.
ನಂದಾ: ಉತ್ಸವ, ವಾಸ್ತು ಪ್ರತಿಷ್ಠೆ, ಕೃಷಿ ಕಾರ್ಯಾರಂಭ, ಸಂಗೀತಾರಂಭ ಮೊದಲಾದವನ್ನು ಮಾಡಬಹುದು.
ಭದ್ರ: ವಿವಾಹ, ಉಪನಯನ, ಪ್ರಯಾಣ, ಶಾಂತಿ ಕರ್ಮಗಳನ್ನು ಮಾಡುವುದು
ಜಯ: ಯುದ್ಧಾರಂಭ, ವಿವಾಹ, ಉಪನಯನ, ಷೋಡಷ ಸಂಸ್ಕಾರಗಳನ್ನು ಮಾಡಬಹುದು.
ಪೂರ್ಣ: ಮಂಗಳ ಕಾರ್ಯಗಳು, ವಿವಾಹಾದಿ ಶುಭ ಕಾರ್ಯಗಳು, ಯಾತ್ರಾ ಆಗಮನಾದಿ ಶಾಂತಿ ಕರ್ಮಗಳನ್ನು ಮಾಡಬಹುದು.
ತಿಥಿ ನಕ್ಷ ತ್ರ ಹಾಗೂ ಲಗ್ನ ಗಂಡಾಂತರಗಳು
* ತಿಥಿ ಗಂಡಾಂತರ :- ಪಂಚಮಿ, ದಶಮಿ, ಪೂರ್ಣಿಮ ಮತ್ತು ಅಮವಾಸ್ಯೆ ತಿಥಿಗಳು, ಪಾಡ್ಯ, ಷಷ್ಠಿ, ಏಕಾದಶಿ, ಈ ತಿಥಿಗಳ ಸಂಧಿ ಕಾಲದಲ್ಲಿ 2-2 ಘಳಿಗೆ ತಿಥಿ ಗಂಡಾತರವಾಗುತ್ತದೆ. ಈ ಗಂಡಾಂತರ ಕಾಲದಲ್ಲಿ ಶುಭ ಕೆಲಸ ಮಾಡುವುದು ಶ್ರೇಯಸ್ಕರವಲ್ಲ.
* ನಕ್ಷ ತ್ರ ಗಂಡಾಂತರ: ರೇವತಿ, ಆಶ್ಲೇಷ, ಜೇಷ್ಠ ನಕ್ಷ ತ್ರಗಳ ಅಂತ್ಯದಲ್ಲಿ 2-2 ಘಳಿಗೆ ಅಶ್ವಿನಿ
ಮಖಾ ಮೂಲಾ ನಕ್ಷ ತ್ರಗಳ ಪ್ರಾರಂಭದ 2-2 ಘಳಿಗೆ ಕಾಲವು ಗಂಡಾಂತರ ದೋಷ ಎನಿಸುತ್ತದೆ. ಈ ಸಮಯದಲ್ಲಿ ಶುಭ ಕಾರ್ಯಗಳನ್ನು ಮಾಡಬಾರದು.* ಲಗ್ನ ಗಂಡಾಂತರ : ಕಟಕ, ಸಿಂಹ, ವೃಶ್ಚಿಕ, ಧನಸ್ಸು, ಮೀನ, ಮೇಷ ಈ ಲಗ್ನಗಳ ಸಂಧಿ
ಕಾಲದಲ್ಲಿ ಅರ್ಧ ಘಳಿಗೆ ಗಂಡಾಂತರ ಇದೆ. ಇದು ಸಹ ಶುಭ ಕಾರ್ಯಕ್ಕೆ ನಿಷಿದ್ದ.
* ಗುರು ಶುಕ್ರ ಅಸ್ತಂಗತ ದೋಷ: ಗುರು ಶುಕ್ರರು ಸೂರ‍್ಯನೊಂದಿಗಿದ್ದಾಗ ಅಸಮರ್ಥರು ಆಗುವುದನ್ನೇ ಅಸ್ತವೆನ್ನುವರು. ಶುಕ್ರನು ಪೂರ್ವದಲ್ಲಿ ಉದಯಿಸಿದರೆ ಮೂರು ದಿನ ಬಾಲನು. ಪಶ್ಚಿಮದಲ್ಲಿ ಉದಯಿಸಿದರೆ ಹತ್ತು ದಿನ ಬಾಲನು. ಪೂರ್ವದಲ್ಲಿ ಅಸ್ತಮಿಸಿದರೆ ಹನ್ನೊಂದು ದಿನ ವೃದ್ಧನು ಮತ್ತು ಪಶ್ಚಿಮದಲ್ಲಿ ಅಸ್ತಮಿಸಿದರೆ ಹದಿನೈದು ದಿನ ವೃದ್ಧನೆಂದು ತಿಳಿಯಬಹುದು.
-SANGRAHA
Subscribe to:
Post Comments (Atom)
No comments:
Post a Comment