Wednesday 6 February 2019

ರಾಜಯೋಗದೊಂದಿಗೆ ಸಕಲ ಗ್ರಹದೋಷಗಳು ಧೂಳೀಪಟ

ರಾಜಯೋಗದೊಂದಿಗೆ ಸಕಲ ಗ್ರಹದೋಷಗಳು ಧೂಳೀಪಟ ಜ್ಞಾನ, ಬಲ, ಶಕ್ತಿ, ತೇಜಸ್ಸು, ಐಶ್ವರ್ಯ, ಸಿರಿಸಂಪತ್ತುಗಳು ಸರ್ವತೋಮುಖ ಅಭಿವೃದ್ಧಿ ಹೊಂದಲು ಸರ್ವಚೇತನ ಜ್ಞಾನ, ಧ್ಯಾನ, ಭಕ್ತಿ ಮತ್ತು ಕರ್ಮಯೋಗಗಳಿಂದ ಪಡೆಯಬಹುದು. ಮೇಷ : ಸರ್ವಕಾರ್ಯಚತುರತೆ. ಹಣದ ಲೇವಾದೇವಿ ಬಂಡವಾಳ ಹೂಡಿಕೆಯಲ್ಲಿ ಪ್ರಗತಿ. ಬೆಳ್ಳಿ ಬಂಗಾರ ಮತ್ತು ರತ್ನ ವ್ಯಾಪಾರಗಳಲ್ಲಿ ಅಧಿಕಲಾಭ. ವಿದೇಶ ಪ್ರವಾಸ. ಸಂಶೋಧನೆ ಮತ್ತು ವಿಜ್ಞಾನದಲ್ಲಿ ಪ್ರಗತಿ ಉಂಟಾಗುತ್ತದೆ. ವೃಷಭ : ಡಿಸೆಂಬರ್‌ 24ರಿಂದ ಶುಭಯೋಗ. ರಾಜಕೀಯ ಮತ್ತು ಸಮಾಜ ಸೇವೆಯಲ್ಲಿ ಪಟ್ಟಾಭಿಷೇಕ. ಚಂದ್ರದೆಸೆಯಲ್ಲಿ ಜನನವಾಗಿದ್ದರೆ, ಅವಘಡ, ಅಘಾತ, ಸಾಲದ ಭಾದೆ ದೂರವಾಗುತ್ತದೆ. ವಿದ್ಯಾ ಕ್ಷೇತ್ರದಲ್ಲಿ ಪ್ರಗತಿ. ಮಿಥುನ : ಆಗಸ್ಟ್‌ 29 ರಿಂದ ಶುಕ್ರ ಪಂಚಮ ಸ್ಥಾನದಲ್ಲಿ ಇರುವುದರಿಂದ ರಾಜಯೋಗ, ಅಮೃತಸಿದ್ಧಯೋಗ, ಗಜಕೇಸರಿಯೋಗಗಳು ಆರಂಭ. ಕೈಗೊಳ್ಳುವ ಎಲ್ಲಾ ಯೋಜನೆಗಳು ಕಾರ್ಯರೂಪಕ್ಕೆ ಬರುತ್ತವೆ. ಸಾಲಗಳಿಂದ ವಿಮುಕ್ತಿ. ಕಟಕ : ಸೆಪ್ಟೆಂಬರ್‌ 23 ರಿಂದ ರಾಜಯೋಗ ಆರಂಭ. ವಾಹನ ನಿವೇಶನ ಮತ್ತು ಭೂ ಖರೀದಿ. ಕಾಲ ಗಣನಾಚಕ್ರದಲ್ಲಿ ಶನಿ, ಕುಜ ಮತ್ತು ಕಾಳ ಸರ್ಪದೋಷಗಳು ನಿವಾರಣೆಯಾಗಲಿದೆ. ದೇವಾಲಯ ಹಾಗೂ ಪ್ರೇಕ್ಷ ಣೀಯ ಸ್ಥಳಗಳ ದರ್ಶನ. ಸಿಂಹ : ಕಳೆದ ಡಿಸೆಂಬರ್‌ 24ರಿಂದಲೇ ರಾಜಯೋಗ ಆರಂಭವಾಗಿದ್ದು ಮುಂದಿನ ಮೂರು ವರ್ಷಗಳು ಅದೃಷ್ಟದ ವರ್ಷಗಳಾಗಿರುತ್ತವೆ. ಆರ್ಥಿಕ, ಸಾಮಾಜಿಕ, ರಾಜಕೀಯ ಮತ್ತು ವಿದ್ಯಾಕ್ಷೇತ್ರಗಳಲ್ಲಿ ಪ್ರಗತಿ. ವಿದೇಶ ಪ್ರವಾಸ ಉಂಟಾಗುತ್ತದೆ. ಕನ್ಯಾ : ಬೆಳ್ಳಿ ಬಂಗಾರ ಮತ್ತು ರತ್ನ ವ್ಯಾಪಾರದಲ್ಲಿ ಪ್ರಗತಿ, ದಿನಸಿ ವ್ಯಾಪಾರಗಳಲ್ಲಿ ಅಧಿಕಲಾಭ, ಶನಿ ಅಲ್ಪ ನೀಚನಾಗಿರುವುದರಿಂದ ಸದಾ ಮಾನಸಿಕ ಚಿಂತೆ, ಸಾಲದ ಬಾಧೆ, ನಿವಾಸದಲ್ಲಿ ಅಶಾಂತಿ ಉಂಟಾಗುತ್ತದೆ. ತುಲಾ : ರವಿ ದೆಸೆ ಸದಾ ಇರುವುದರಿಂದ ಜೀವನದಲ್ಲಿ ಅವಘಡ ಮತ್ತು ಆಘಾತಗಳು ಸಂಭವಿಸಲಾರವು. ಸೆಪ್ಟೆಂಬರ್‌ 23ರಂದು ರಾಜಯೋಗ ಆರಂಭದಿಂದಲೇ ಗ್ರಹದೋಷಗಳು ಧೂಳಿಪಟ ಆಗಲಿವೆ. ವೃಶ್ಚಿಕ : ಗುರು ಪಂಚಮ ಸ್ಥಾನದಲ್ಲಿ ಸಂಚರಿಸುವುದರಿಂದ ಮಿತ್ರರು ಮತ್ತು ಬಂಧುವರ್ಗದವರಿಂದ ಸಹಾಯದ ಹಸ್ತ ದೊರೆಯುತ್ತದೆ. ಮಾರ್ಚಿ 21ರಿಂದಲೇ ರಾಜಯೋಗ ಆರಂಭವಾಗಿರುವುದರಿಂದ ಜ್ಞಾಪಕ ಶಕ್ತಿ ಅಧಿಕವಾಗುತ್ತದೆ. ಧನಸ್ಸು : ಸೆಪ್ಟೆಂಬರ್‌ 23 ರಿಂದ ರಾಜಯೋಗ ಪ್ರಾರಂಭ. ಕೋರ್ಟ್‌ ಕಚೇರಿಗಳ ವ್ಯಾಜ್ಯ ಇತ್ಯರ್ಥ. ಆಕಸ್ಮಿಕ ಚರಾಸ್ಥಿಗಳ ಆಗಮನ. ವಾಹನ ಖರೀದಿ, ನಿವೇಶನ ಕೊಳ್ಳುವಿಕೆ, ಗೃಹ ನಿರ್ಮಾಣಗಳು ಸಂಭವವಿದೆ. ಮಕರ : ಆಗಸ್ಟ್‌ 29ರಿಂದ ರಾಜಯೋಗ ಆರಂಭ. ಚಂದ್ರದೆಸೆ ಸದಾ ಇರುವುದರಿಂದ ಕಾರ್ಯಸಿದ್ಧಿ. ಆಕಸ್ಮಿಕ ಧನಲಾಭ. ಸಾಲಗಳಿಂದ ಮುಕ್ತಿ. ಕಾಳಸರ್ಪದೋಷಗಳು ಧೂಳಿಪಠ ಆಗಲಿವೆ. ಕುಂಭ : ಮೇ 19ರಂದೇ ರಾಜಯೋಗ ಬಂದಿರುವುದರಿಂದ ಉನ್ನತ ಪದವಿ, ರಾಜಕೀಯ ಪಟ್ಟಾಭಿಷೇಕ. ವಿದ್ಯಾಬುದ್ಧಿಯಲ್ಲಿ ಪ್ರಗತಿ. ಚಿತ್ರ ನಿರ್ಮಾಪಕರು, ರೇಷ್ಮೆ ಉದ್ದಿಮೆದಾರರು, ಸಾಗರ ಸಂಶೋಧಕರಿಗಿದು ಸಕಾಲ. ಮೀನ : ಮಾರ್ಚಿ 21ರಿಂದಲೇ ರಾಜಯೋಗ, ಅಮೃತಸಿದ್ಧಯೋಗ, ಗಜಕೇಸರಿಯೋಗ ಮತ್ತು ಶುಕ್ರದೆಸೆಗಳು ಮರುಕಳಿಸುತ್ತಲೇ ಇರುತ್ತವೆ. ನವಗ್ರಹಗಳ ಅನುಗ್ರಹ. ಜ್ಞಾನ, ಛಲ, ಕೀರ್ತಿ ಸಂಭವ. ಶುಕ್ರನು ಉಚ್ಛ ಸ್ಥಾನದಲ್ಲಿದ್ದರೆ ಸಂಗೀತಗಾರನಾಗುವ ಯೋಗ ನಾದಮಯ ಈ ಜಗವೆಲ್ಲಾ ನಾದಮಯ. ಹೌದು, ನಾದದ ಮೂಲವೇ ಸಂಗೀತ. ಸಂಗೀತ ಕಲೆ ಎಲ್ಲರಿಗೂ ಸಿದ್ಧಿಸುವುದಿಲ್ಲ. ಜ್ಯೋತಿಷ ಶಾಸ್ತ್ರದ ಪ್ರಕಾರ ಯಾರ ಜಾತಕದಲ್ಲಿ ಶುಕ್ರ, ಚಂದ್ರರ ಸಂಯೋಗವಿರುತ್ತದೆಯೋ ಅವರಲ್ಲಿ ಸಂಗೀತಜ್ಞಾನ ಅಪಾರವಾಗಿರುತ್ತದೆ. ಮನೋಹ್ಲಾದಕ್ಕೆ ಸಂಗೀತವೇ ಮೂಲ. ಕುಂಡಲಿಯಲ್ಲಿ ಶುಕ್ರಗ್ರಹವು ಉಚ್ಚಸ್ಥಾನದಲ್ಲಿದ್ದರೆ ಆ ವ್ಯಕ್ತಿಗೆ ಸಂಗೀತಗಾರನಾಗುವ ಯೋಗವಿರುತ್ತದೆ. ಒಂದೊಮ್ಮೆ ಶುಕ್ರ ಚಂದ್ರನೊಂದಿಗೆ ಕಟಕ ರಾಶಿಯಲ್ಲಿದ್ದರೆ ಸಂಗೀತಗಾರನಾಗುತ್ತಾನೆ. ಶುಕ್ರ ಗ್ರಹಕ್ಕೆ ಚಂದ್ರನ ದೃಷ್ಟಿ ಇದ್ದರೆ ಅವರು ಸಂಗೀತ ವಾದ್ಯವನ್ನು ನುಡಿಸುತ್ತಾರೆ. ಶುಕ್ರನ ಮನೆಯಲ್ಲಿ ಗುರುವಿದ್ದರೆ ಸಂಗೀತ ಭೋದಕರಾಗುತ್ತಾರೆ. ಜನನದ ಸಮಯದಲ್ಲಿ ಶುಕ್ರದೆಶೆ ಇದ್ದರೆ ಚಿಕ್ಕ ವಯಸ್ಸಿನಲ್ಲಿಯೇ ಸಂಗೀತಗಾರನಾಗಿ ಬಲು ಬೇಗ ಪ್ರಸಿದ್ಧಿಗೆ ಬರುತ್ತಾರೆ. ಕುಂಡಲಿಯಲ್ಲಿ ಶುಕ್ರನ ಜೊತೆ ಕುಜಗ್ರಹವಿದ್ದು ಚಂದ್ರನ ದೃಷ್ಟಿ ಇದ್ದರೆ ಚರ್ಮವಾದಕರಾಗಿ ಪ್ರಖ್ಯಾತರಾಗುತ್ತಾರೆ. ಶುಕ್ರನು ಕುಂಡಲಿಯಲ್ಲಿ 10ನೇ ಮನೆಯಲ್ಲಿದ್ದು ಅದಕ್ಕೆ ಗುರುವಿನ ದೃಷ್ಟಿ ಇದ್ದರೆ ಸಂಗೀತ ಸಂಬಂಧ ಪುಸ್ತಕ ರಚಿಸುತ್ತಾರೆ. ಶುಕ್ರನು ನೀಚಸ್ಥಾನದಲ್ಲಿದ್ದರೆ ಸಂಗೀತ ಅಭ್ಯಾಸ ಅರ್ಧಕ್ಕೇ ನಿಲ್ಲುತ್ತದೆ. ಶುಕ್ರ ಭುಕ್ತಿ ಅಥವಾ ಚಂದ್ರ ಭುಕ್ತಿ ನಡೆಯುತ್ತಿದ್ದಾಗ ಸಂಗೀತದಲ್ಲಿ ಆಸಕ್ತಿ ಹೆಚ್ಚಾಗಿ ಇರುತ್ತದೆ. ವೃಷಭ, ತುಲಾ, ಕಟಕ, ಮೀನರಾಶಿಯವರಿಗೆ ಹಾಗೂ ಮೂಲ ನಕ್ಷತ್ರದವರಿಗೆ ಸಂಗೀತದಲ್ಲಿ ಆಸಕ್ತಿ ಹೆಚ್ಚಿಗೆ ಇರುತ್ತದೆ. ಗ್ರಹಗಳ ಕಾರಕತ್ವ ಭಾವ ಜ್ಯೋತಿಷ ಶಾಸ್ತ್ರದ ಪ್ರಕಾರ 9 ಗ್ರಹಗಳಿಗೂ ಅವುಗಳದೇ ಆದ ಕಾರಕತ್ವವಿದೆ. ರವಿ-ಪಿತೃಕಾರಕ, ಚಂದ್ರ-ಮಾತೃಕಾರಕ, ಕುಜ-ಶಕ್ತಿಕಾರಕ, ಬುಧ-ಬುದ್ಧಿಕಾರಕ, ಗುರು-ಜ್ಞಾನಕಾರಕ, ಶುಕ್ರ-ಕಳತ್ರಕಾರಕ, ಶನಿ-ಕರ್ಮಕಾರಕ, ರಾಹು-ಸರ್ವದೋಷ ನಿವಾರಕ, ಕೇತು-ಮೋಕ್ಷಕಾರಕ ಸಂಗ್ರಹ (ಕೃಪೆ ದಿನ ಪತ್ರಿಕೆ)

No comments:

Post a Comment