Wednesday 6 February 2019

ಗ್ರಹ ಸ್ಥಾನದಿಂದ ರೋಗ ನಿರ್ಣಯ

ಇಂಟ್ರೋ : ಜಾತಕ ವ್ಯಕ್ತಿಯ ಆಗುಹೋಗುಗಳ ಕನ್ನಡಿ ಇದ್ದಂತೆ. ಕುಂಡಲಿಯಲ್ಲಿ ಲಗ್ನವೇ ರೋಗಿಯ ಸ್ಥಾನ, ಸಪ್ತಮ ಸ್ಥಾನವೇ ವೈದ್ಯನ ಸ್ಥಾನ, ಚತುರ್ಥ ಸ್ಥಾನವಾದ 4ನೇ ಸ್ಥಾನವೇ ಔಷಧದ ಸ್ಥಾನ. ಷಷ್ಟ ಸ್ಥಾನವೇ ರೋಗದ ಗುಣ ಅವಗುಣ ತೋರಿಸುವ ಸ್ಥಾನವಾಗಿದೆ. ನಾಗರಾಜ್‌ ಕೆ.ಸಿ. ಜಾತಕ ಭವಿಷ್ಯ ಸೂಚಕ. ಜಾತಕ ಕುಂಡಲಿಯನ್ನು ಸೂಕ್ಷ್ಮವಾಗಿ ಪರಿಶೀಲಿಸುವ ಮೂಲಕ ವ್ಯಕ್ತಿಯ ಆಗು ಹೋಗುಗಳನ್ನು ಗುರುತಿಸಬಹುದು. ಆತನಿಗೆ ಮುಂದೆ ಬರಬಹುದಾದ ರೋಗವನ್ನು ನಿರ್ಣಯಿಸಬಹುದು. 1-4-7-10ನೇ ಸ್ಥಾನಗಳಲ್ಲಿ ಪಾಪಗ್ರಹಗಳು ಇದ್ಡು ಲಗ್ನಾಧಿಪತ್ನಿಯಾದ 1ನೇ ಅಧಿಪತಿ ಮತ್ತು ಚಂದ್ರನು ಪಾಪ ಗ್ರಹಗಳಿಂದ ಕೂಡಿ ಪಾಪ ಸ್ಥಾನಗಳಲ್ಲಿದ್ದರೂ. ಅಷ್ಟಮಾಧಿಪತಿಯಾದ 8ನೇ ಅಧಿಪತಿ ಪಾಪಗ್ರಹವಾಗಿ ಲಗ್ನದಲ್ಲಿ ಇರುವಾಗ ಲಗ್ನಕ್ಕೆ ಶುಭ ಸಂಬಂಧವಾಗಲಿ. ಶುಭಗ್ರಹಗಳ ದೃಷ್ಟಿಯಾಗಲಿ ಇಲ್ಲದೆ ಇರುವಾಗ ಇತರ 4-7-10ರಲ್ಲಿ ಶುಭಗ್ರಹಗಳು ಇಲ್ಲದೆ ಲಗ್ನಾಧಿಪತಿ ಮತ್ತು ಚಂದ್ರ ನಿರ್ಬಲರಾಗಿದ್ದರೆ ರೋಗಿಗೆ ಮಾರಣಾಂತಿಕ ಗಂಡಾಂತರ ಸಂಭವಿಸುವ ಸಾಧ್ಯತೆ ಹೆಚ್ಚಿರುತ್ತದೆ. ಲಗ್ನಾಧಿಪತಿ ಮತ್ತು ಚಂದ್ರ ಬಲಿಷ್ಟರಾಗಿದ್ದು 8ನೇ ಅಧಿಪತಿ 11ರಲ್ಲಿದ್ದರು 1-4-7-10-5-9ರಲ್ಲಿ ಅಂದರೆ ಕೇಂದ- ತ್ರಿಕೋಣದಲ್ಲಿ ಶುಭಗ್ರಹಗಳು ಅಧಿಕವಾಗಿದ್ದು ಪಾಪಗ್ರಹಗಳು 3-11ನೇ ಸ್ಥಾನಗಳಲ್ಲಿ ಇದ್ದರು 1-4-7-10ರಲ್ಲಿ ಗುರು ಶುಕ್ರರು ಇದ್ದಾಗ ರೋಗಿ ಚೇತರಿಸಿಕೊಳ್ಳುತ್ತಾನೆ ಎಂದು ಹೇಳಬಹುದು. 1-4-10ನೇ ಸ್ಥಾನಗಳು ಬಲವಾಗಿದ್ದು 7ನೇ ಸ್ಥಾನ ನಿರ್ಬಲವಾಗಿದ್ದರೆ ಈಗ ಚಿಕಿತ್ಸೆ ಕೂಡಿಸುತ್ತಿರುವ ವೈದ್ಯರಿಂದ ರೋಗ ಗುಣ ಆಗುವುದಿಲ್ಲವೆಂದು ಮತ್ತೊಬ್ಬ ವೈದ್ಯರಿಂದ ಚಿಕಿತ್ಸೆ ಕೊಡಿಸ ಬೇಕೆಂತಲು 1-10-7ನೇ ಸ್ಥಾನಗಳು ಬಲಿಷ್ಟವಾಗಿದ್ದು 4ನೇ ಸ್ಥಾನ ನಿರ್ಬಲವಾಗಿದ್ದರೆ ಕೂಡಿಸುತ್ತಿರುವ ಔಷಧವನ್ನು ಬಿಟ್ಟು ಬೇರೆ ಔಷಧಿಯನ್ನು ಕೂಡಿಸುವುದರಿಂದ ಗುಣವಾಗುವುದೆಂದು ನಿರ್ಣಯಿಸಬಹುದು. 1-4-7ನೇ ಸ್ಥಾನಗಳು ಬಲಿಷ್ಟವಾಗಿ 10ನೇ ಸ್ಥಾನ ನಿರ್ಬಲವಾಗಿದ್ದರೆ ಆಲಸ್ಯದಿಂದ ಅಂದರೆ ನಿಧಾನವಾಗಿ ಗುಣವಾಗುವುದೆಂದು ತಿಳಿಯಬಹುದು. ಷಷ್ಠ ಸ್ಥಾನದಲ್ಲಿ ಅಂದರೆ 6ನೇ ಸ್ಥಾನದಲ್ಲಿ ಯಾವ ಗ್ರಹಗಳು ಇರುತ್ತವೆಯೋ ಅಥವಾ 6ನೇ ಅಧಿಪತಿ ಯಾವ ಗ್ರಹಗಳಿಂದ ಕೂಡಿರುತ್ತಾನೆಯೋ ಆಯಾ ಗ್ರಹಗಳ ಕಾರಕ ಸಂಬಂಧದಿಂದ ರೋಗವನ್ನು ನಿರ್ಣಯಿಸುವುದು ಉತ್ತಮ. ಹೇಗೆಂದರೆ 6ನೇ ಸ್ಥಾನಕ್ಕಾಗಲಿ 6ನೇ ಅಧಿಪತಿಗಾಗಲಿ ರವಿಯ ಸಂಬಂಧ ಇದ್ದರೆ ಪಿತ್ತೋದ್ರೇಕದಿಂದ ರೋಗವು ಇರುವುದೆಂದು, ಚಂದ್ರ ಶುಕ್ರರ ಸಂಬಂಧ ಉಂಟಾಗಿದ್ದರೆ ಶೀತಕ್ಕೆ ಸಂಬಂಧಪಟ್ಟ ರೋಗವೆಂದು, ಶನಿ-ಬುಧರ ಸಂಬಂಧ ಉಂಟಾಗಿದ್ದರೆ ವಾತ ಸಂಬಂಧವಾದ ರೋಗವೆಂತಲೂ, ರಾಹು ಕೇತುಗಳ ಸಂಬಂಧವಾದರೆ ವಿಷ ಸಂಬಂಧವಾದದ್ದೆಂತಲೂ ಅಥವಾ ತ್ರಿದೋಷದಿಂದ ಕೂಡಿರುವುದೆಂದು ತಿಳಿಯಬಹುದು. 6ನೇ ಸ್ಥಾನಕ್ಕಾಗಲಿ 6ನೇ ಅಧಿಪತಿಗಾಗಲಿ ಕುಜ ರಾಹು ಸಂಬಂಧ ಉಂಟಾದರೆ ಕೆಟ್ಟ ಹುಣ್ಣು ಮಾಟ ಮರೆವು ಅಥವಾ ಕ್ರೂರ ಜಾಡ್ಯ ಉಂಟಾಗುವ ಸಾಧ್ಯತೆ ಇರುತ್ತದೆ. ಚಂದ್ರ, ರಾಹು, ಶುಕ್ರ, ರಾಹು ಸಂಬಂಧವುಂಟಾದರೆ ಮೇಹರೋಗ ಶೀತ ವಿಷಮ ಜಾಡ್ಯವೆಂತಲೂ, ರವಿ, ರಾಹು ಸಂಬಂಧ ಉಂಟಾದರೆ ಸನ್ನಿಪಾತ ಜ್ವರ ಅಥವಾ ಪಿತ್ತ ಸನ್ನಿಯೆಂತಲೂ. ಶನಿ - ರಾಹು ಸಂಬಂಧ ಇದ್ದರೆ ವಾತ ಜ್ವರ ವಾತ ವಿಷಮಜಾಡ್ಯ ಅಥವಾ ವಾತ ಸನಿಯಂತಲೂ ರವಿ ಕುಜರ ಸಂಬಂಧ ಇದ್ದರೆ ಶೀತೋಷ್ಣ ವೈಪರೀತ್ಯ ಜ್ವರ ಅಥವಾ ಕ್ಷ ಯ ರೋಗ ಎಂತಲೂ ತಿಳಿಯಬಹುದು. -ಸಂಗ್ರಹ

No comments:

Post a Comment