Wednesday, 6 February 2019
ಯೋಗ
ಯಾವ ಲಗ್ನದವರಿಗೆ ಯಾವಾಗ ರಾಜಯೋಗ?
ಜಾತಕದಲ್ಲಿನ ಕೆಲವು ಗ್ರಹಗಳ ಸಂಯೋಗ ಮತ್ತು ಸ್ಥಿತಿಗಳ ಆಧಾರದಲ್ಲಿ ವ್ಯಕ್ತಿಯ ರಾಜಯೋಗಗಳನ್ನು ಕಂಡುಹಿಡಿಯಬಹುದು. ರಾಜಯೋಗ ಎಂದರೆ ಈಗಿನ ಪರಿಸ್ಥಿತಿಯಲ್ಲಿ ರಾಜ್ಯಸರ್ಕಾರದ ಐ.ಎ.ಎಸ್., ಐ.ಪಿ.ಎಸ್. ಸರಿಸಮಾನರಾದ ಉನ್ನತ ಅಧಿಕಾರಿಗಳು, ನಗರಸಭಾ ಸದಸ್ಯರು, ವಿಧಾನಸಭಾ ಸದಸ್ಯರು, ಲೋಕಸಭಾ ಸದಸ್ಯರು, ಮಂತ್ರಿಗಳು, ಮುಖ್ಯಮಂತ್ರಿಗಳು ಹಾಗೂ ಪ್ರಧಾನಮಂತ್ರಿಗಳನ್ನು ರಾಜ ಅಥವಾ ರಾಜಸಮಾನರೆಂದು ಗುರುತಿಸಬಹುದು.
ಮೇಷಲಗ್ನ : ಗುರು, ಶನಿ, ಕಟಕ, ತುಲಾರಾಶಿಯಲ್ಲಿದ್ದು ಯಾವುದೇ ಪಾಪಗ್ರಹಗಳ ಸಂಬಂಧವಿಲ್ಲದೆ ಇದ್ದು ಅವುಗಳ ದೆಶೆಯೇ ನಡೆಯುತ್ತಿದ್ದರೆ ರಾಜಯೋಗವಿರುತ್ತದೆ.
ವೃಷಭ ಲಗ್ನ : ಲಗ್ನದಲ್ಲಿ ಕುಜ, ಸಿಂಹರಾಶಿಯಲ್ಲಿ ಚಂದ್ರ, ಕುಂಭದಲ್ಲಿ ಗುರು, ಮಕರದಲ್ಲಿ ರವಿ, ಮೀನದಲ್ಲಿ ಶನಿ ಇದ್ದರೆ ಆ ಜಾತಕನು ರಾಜಯೋಗ ಪಡೆಯುತ್ತಾನೆ.
ಮಿಥುನ ಲಗ್ನ : ಬುಧ, ಶುಕ್ರ 1, 4, 5, 7, 9, 10 ಸ್ಥಾನದಲ್ಲಿದ್ದರೆ ರಾಜಯೋಗ ಉಂಟಾಗುತ್ತದೆ. ಬುಧ, ಶುಕ್ರ, ಶನಿ, ಚಂದ್ರ ಕಲೆತಿದ್ದರೆ ಆದು ಕೇಂದ್ರ ತ್ರಿಕೋನವಾದರೆ ರಾಜಯೋಗ ಲಭಿಸುತ್ತದೆ.
ಕಟಕ ಲಗ್ನ : ಶುಕ್ರ, ಶನಿ, 4, 5, 7, 9, 10 ಸ್ಥಾನದಲ್ಲಿದ್ದರೆ ಕಲೆತಿದ್ದರೆ ರಾಜಯೋಗ ಪ್ರಾಪ್ತಿಯಾಗುತ್ತದೆ. ದ್ವಿತೀಯದಲ್ಲಿ ಚಂದ್ರ, ಕುಜ, ಗುರು, ಪಂಚಮದಲ್ಲಿ ರವಿ, ಶುಕ್ರರಿದ್ದರೆ ರಾಜಯೋಗ ಬರುತ್ತದೆ.
ಸಿಂಹ ಲಗ್ನ : ಲಗ್ನದಲ್ಲಿ ಕುಜ, ಚತುರ್ಥದಲ್ಲಿ ಶನಿ, ಪಂಚಮ ರಾಹು, ಭಾಗ್ಯದಲ್ಲಿ ಚಂದ್ರ, ಶುಕ್ರ, ರಾಜ್ಯದಲ್ಲಿ ರವಿ, ಬುಧರಿದ್ದರೆ ಉನ್ನತ ರಾಜಯೋಗ ಉಂಟಾಗುತ್ತದೆ.
ಕನ್ಯಾ ಲಗ್ನ : ದ್ವಿತೀಯ ಸ್ಥಾನದಲ್ಲಿ ರವಿ, ಶುಕ್ರರ ಸಂಬಂಧವಿದ್ದರೆ ರಾಜಯೋಗ ಬರುತ್ತದೆ. ಮೇಷದಲ್ಲಿ ರವಿ, ಸಿಂಹದಲ್ಲಿ ಕುಜನಿದ್ದರೆ ರಾಜಯೋಗ ಲಭಿಸುತ್ತದೆ.
ತುಲಾ ಲಗ್ನ : ಲಗ್ನದಲ್ಲಿ ಚಂದ್ರ, ಶುಕ್ರ, ದ್ವಿತೀಯದಲ್ಲಿ ರವಿ, ಬುಧ, ತೃತೀಯದಲ್ಲಿ ಗುರು, ಪಂಚಮದಲ್ಲಿ ಕುಜನಿದ್ದರೆ ರಾಜಯೋಗ ಪ್ರಾಪ್ತಿಯಾಗುತ್ತದೆ.
ವೃಶ್ಚಿಕ ಲಗ್ನ : ಸಪ್ತಮ ಸ್ಥಾನದಲ್ಲಿ ರವಿ, ಬುಧ, ಶುಕ್ರ ಕಲೆತರೆ ರಾಜಯೋಗ ಬರುತ್ತದೆ. ಜನ್ಮದಲ್ಲಿ ಗುರು ಇದ್ದು ಗುರುದೆಸೆ ಪ್ರಾಪ್ತಿಯಾದರೆ ರಾಜಯೋಗ ಉಂಟಾಗುತ್ತದೆ.
ಧನು ಲಗ್ನ: ಗುರು ಒಬ್ಬನೇ ಷಷ್ಟಮ ಸ್ಥಾನದಲ್ಲಿ ಅಥವಾ 8, 12ರ ಸ್ಥಾನದಲ್ಲಿದ್ದರೆ ರಾಜಯೋಗ ಬರುತ್ತದೆ. ಚಂದ್ರನು ರಾಹು ಅಥವಾ ಕೇತುವಿನೊಂದಿಗೆ ಮೇಷ, ಸಿಂಹ ರಾಶಿಯಲ್ಲಿದ್ದರೆ ರಾಜಯೋಗ ಪ್ರಾಪ್ತಿಯಾಗುತ್ತದೆ.
ಮಕರ ಲಗ್ನ : ಲಗ್ನದಲ್ಲಿ ಬುಧ, ಶುಕ್ರ, ಚತುರ್ಥದಲ್ಲಿ ಚಂದ್ರ, ಭಾಗ್ಯದಲ್ಲಿ ಗುರು ಇದ್ದರೆ ಒಳ್ಳೆಯ ರಾಜಯೋಗ ಬರುತ್ತದೆ.
ಕುಂಭ ಲಗ್ನ : ಲಗ್ನದಲ್ಲಿ ರವಿ, ಶುಕ್ರ, ದಶಮದಲ್ಲಿ ರಾಹು ಇದ್ದರೆ ಶುಕ್ರ ರಾಹು ಕಲೆತು ಲಗ್ನ ಅಥವಾ ಅಷ್ಟಮ ಸ್ಥಾನದಲ್ಲಿದ್ದರೆ ರಾಹು ದೆಸೆಯಲ್ಲಿ ರಾಜಯೋಗ ಪ್ರಾಪ್ತಿಯಾಗುತ್ತದೆ.
ಮೀನ ಲಗ್ನ : ಚಂದ್ರ ಗುರು ಕೇಂದ್ರ ಕೋನದಲ್ಲಿ ಕಲೆತಿದ್ದರೂ ಆ ದಿಸೆಯಲ್ಲಿ ರಾಜಯೋಗವಿರುತ್ತದೆ. ಮೀನದಲ್ಲಿ ಚಂದ್ರನಿದ್ದು ಗುರು ದೃಷ್ಟಿಗೆ ಒಳಗಾದರೆ ರಾಜಯೋಗ ಬರುತ್ತದೆ.
ಜೀವನದಲ್ಲಿ ನವಗ್ರಹ ಪ್ರಭಾವ
ದೈನಂದಿನ ಬದುಕಿನ ಆಗುಹೋಗುಗಳಿಗೂ ನವಗ್ರಹ ಪ್ರಭಾವಕ್ಕೂ ಸಂಬಂಧವಿದೆಯೇ? ದಿನಚರಿಯನ್ನು ಅರ್ಥಾತ್ ಜೀವನಶೈಲಿಯನ್ನು ಸರಿಪಡಿಸಿಕೊಂಡರೆ ನವಗ್ರಹಗಳ ಪ್ರಭಾವ ಶಮನವಾಗುತ್ತದೆಯೇ? ಇಂತಹ ಪ್ರಶ್ನೆಗಳಿಗೆ ಜ್ಯೋತಿಷ್ಯಶಾಸ್ತ್ರ ಹೌದೆನ್ನುತ್ತದೆ. ಆರೋಗ್ಯಕರ ಜೀವನಶೈಲಿಯನ್ನು ರೂಢಿಸಿಕೊಂಡಾಗ ದೈವಕೃಪೆ ತಾನಾಗೇ ಲಭಿಸುತ್ತದೆ. ಅದು ಹೇಗೆ ಎಂದು ನೋಡೋಣ.
ರವಿಯ ಅನುಗ್ರಹ : ಬೆಳಗಿನ ಜಾವ ಬೇಗನೆದ್ದು ಮನೆಯನ್ನು ಶುಚಿರ್ಭೂತವನ್ನಾಗಿ ಮಾಡಿ ಸೂರ್ಯನಿಗೆ ನಮಸ್ಕಾರ ಮಾಡುವುದರಿಂದ ಸಾಕಷ್ಟು ಉತ್ತಮ ಪರಿಣಾಮಗಳು ಉಂಟಾಗುತ್ತದೆ. ಸೂರ್ಯನ ಕಿರಣದಲ್ಲಿರುವ 'ಡಿ' ಮತ್ತು 'ಇ' ಪ್ರೋಟೀನ್ನಿಂದಾಗಿ ಚರ್ಮವು ಕಾಂತಿಯುತವಾಗುತ್ತದೆ. ದಿನವಿಡೀ ಮನಸ್ಸೂ ಉಲ್ಲಸಿತವಾಗಿರುತ್ತದೆ.
ಚಂದ್ರನ ಅನುಗ್ರಹ : ಚಂದ್ರನೆಂದರೆ ನೀರು. ಮನೆಯಲ್ಲಿ ಅಶೌಚ ಇರಬಾರದು. ಎಂಜಲು, ಮುಸುರೆ ಪಾತ್ರೆಗಳಿರಬಾರದು. ತಿಂದ ತಟ್ಟೆಗಳನ್ನು ಕೂಡಲೇ ತೊಳದಿಡುವ ಅಭ್ಯಾಸವನ್ನು ರೂಢಿಸಿಕೊಳ್ಳಬೇಕು. ಮನೆಯ ವಾತಾವರಣ ಶುಭ್ರವಾಗಿದ್ದರೆ ಮನಸ್ಸೂ ಶುಭ್ರವಾಗಿರುತ್ತದೆ.
ಕುಜನ ಅನುಗ್ರಹ : ರಕ್ತಕ್ಕೆ ಅಧಿಪತಿ ಕುಜ. ಅನ್ನಾದಿ ಆಹಾರಗಳ ಸೇವನೆಯಿಂದ ರಕ್ತ ವೃದ್ಧಿಯಾಗುತ್ತದೆ. ಆ ಕಾರಣ 'ಅನ್ನಂ ಬ್ರಹ್ಮ' ಎಂಬ ವೇದವಾಕ್ಯವನ್ನು ಗೌರವಿಸಬೇಕು. ಆಹಾರ ಪದಾರ್ಥವನ್ನು ವೇಸ್ಟ್ ಮಾಡದಂತೆ ಜಾಗ್ರತೆ ವಹಿಸಬೇಕು. ನಿಯಮಿತವಾಗಿ ರಕ್ತ ದಾನವನ್ನು ಮಾಡಬೇಕು. ಅಶಕ್ತರಿಗೆ ಸಹಾಯ ಮಾಡಬೇಕು.
ಬುಧನ ಅನುಗ್ರಹ : ಬುಧ ಬುದ್ದಿಕಾರಕ. ಬುದ್ಧಿ ಹೀನನಾದರೆ ಮಾಡುವ ಕೆಲಸದಲ್ಲೂ ತೊಂದರೆ ಉಂಟಾಗುತ್ತದೆ. ಹಾಗಾಗಿ ಆಡುವ ಮಾತಿನಲ್ಲಿ, ಮಾಡುವ ಕೆಲಸದಲ್ಲಿ ವಿವೇಕವಿರಬೇಕು.
ಗುರುವಿನ ಅನುಗ್ರಹ : ಗುರು ಸಕಲ ದೋಷ ನಿವಾರಕ. ಮಾರ್ಗಸೂಚಕ. ನಮ್ಮಲ್ಲೊಂದು ಲೋಕೋಕ್ತಿಯಿದೆ. 'ಕೋಶ ಓದಬೇಕು ಲೋಕ ಸುತ್ತಬೇಕು' ಅಂತ. ಅರಿವೇ ಗುರು ಎನ್ನುವಂತೆ ಸುತ್ತಣ ಪರಿಸರವನ್ನು ನೋಡಿ ಕಲಿಯಬೇಕು. ಗಿಡ, ಮರಗಳಿಗೆ ನೀರೆಯುವ ಮೂಲಕ ಅವುಗಳನ್ನು ಪೋಷಿಸಬೇಕು.
ಶುಕ್ರನ ಅನುಗ್ರಹ : ಶುಕ್ರನೆಂದರೆ ವೀರ್ಯ. ಪೌಷ್ಟಿಕದಾಯಕ ಆಹಾರ ಸೇವನೆಗೆ ಅಗತ್ಯವಾದ ಹಣ್ಣು, ತರಕಾರಿಗಳನ್ನು ಮನೆಗೆ ತರಬೇಕು. ಕುಟುಂಬ ಸೌಖ್ಯಕ್ಕೆ ಅಗತ್ಯವಾದ ಕಾರ್ಯಗಳನ್ನು ಮಾಡಬೇಕು.
ಶನಿಯ ಅನುಗ್ರಹ : ಶನಿ ಕರ್ಮಾಧಿಪತಿ. ಕರ್ಮಸೂಚಕವಾದ ಪಾದರಕ್ಷೆಗಳನ್ನು ಮನೆಯಾಚೆಯೇ ಬಿಡಬೇಕು. ಮನೆಯನ್ನು ಶುಭ್ರವಾಗಿಟ್ಟುಕೊಳ್ಳಬೇಕು.
ರಾಹುವಿನ ಅನುಗ್ರಹ : ಹೊರಗಿನ ಪಾಪ ಮನೆಯೊಳಗೆ ಎನ್ನುವ ಮಾತಿನಂತೆ ಹೊರಗಿನಿಂದ ಮನೆಯೊಳಗೆ ಪ್ರವೇಶಿಸಿದ ಕೂಡಲೇ ಕೈಕಾಲುಗಳನ್ನು ತೊಳೆದುಕೊಳ್ಳಿ. ಮೂತ್ರ ಅಥವಾ ಮಲ ವಿಸರ್ಜನೆಯ ನಂತರ ಶುದ್ಧಾಚಮನ ಮಾಡಿ. ಕೈಕಾಲುಗಳನ್ನು ತೊಳೆಯಿರಿ.
ಕೇತುವಿನ ಅನುಗ್ರಹ : ಅತಿಥಿ ದೇವೋ ಭವ ಎನ್ನುವುದು ಶಾಸ್ತ್ರೊಕ್ತಿ. ಮನೆಗೆ ಬಂದ ಅತಿಥಿಗಳನ್ನು ಗೌರವಿಸುವುದರಿಂದ ಉತ್ತಮ ಫಲಗಳನ್ನು ಕಾಣಬಹುದು.
ಹಂಸ ಯೋಗ ಮತ್ತು ಭದ್ರಕ ಯೋಗದಲ್ಲಿ ಜನಿಸಿದವರ ವ್ಯಕ್ತಿತ್ವ ಹೇಗಿರುತ್ತದೆ?
ಹಂಸ ಯೋಗ
ಗುರುವು ತನ್ನ ಉಚ್ಛ ಕ್ಷೇತ್ರವಾದ ಕರ್ಕಾಟಕದಲ್ಲಾಗಲೀ, ಸ್ವ ಕ್ಷೇತ್ರಗಳಾದ ಧನು, ಮೀನದಲ್ಲಾಗಲೀ ಇದ್ದು ಈ ಸ್ಥಾನಗಳು ಲಗ್ನಕ್ಕೆ ಕೇಂದ್ರ ಸ್ಥಾನಗಳಾದರೆ 'ಹಂಸಕ' ವೆಂಬ ಯೋಗ ಉಂಟಾಗುತ್ತದೆ. ಈ ಹಂಸಕ ಅಥವಾ ಹಂಸ ಯೋಗದಲ್ಲಿ ಜನಿಸಿದವರು ಸ್ವಲ್ಪ ಕೆಂಪಾದ ಶರೀರ ಕಾಂತಿಯುಳ್ಳವರೂ, ಉನ್ನತವಾದ ಮೂಗು ಸವಿೂಚೀನವಾದ ಮುಖ, ಪಾದ, ಹಸ್ತಗಳು ಗಂಭೀರವಾದ ಧ್ವನಿ, ಕಫ ಪ್ರಕೃತಿ ಕಮಲದೋಪಾದಿಯಲ್ಲಿರುವ ಕಣ್ಣುಗಳು ಉಳ್ಳವರೂ ಆಗಿರುತ್ತಾರೆ. ಇವರಿಗೆ ನೀರಿನಲ್ಲಿ ಪ್ರೀತಿಯೂ, ಸ್ತ್ರೀ ವಿಷಯದಲ್ಲಿ ಆಸಕ್ತಿಯೂ, ಇವರು ಬಹುಕಾಲ ಯಶಸ್ವಿಯಾಗಿ ತಮ್ಮ ರಾಜ್ಯಭಾರ ಅಧಿಕಾರವನ್ನು ಮಾಡಿ ಸುಮಾರು ತೊಂಬತ್ತೈದು ವರ್ಷ ಆಯುಷ್ಯ ಇರುತ್ತಾರೆ.
ಭದ್ರಕ ಯೋಗ -
ಬುಧ ತನ್ನ ಸ್ವ ಕ್ಷೇತ್ರಗಳಾದ ಮಿಥುನ, ಕನ್ಯಾಗಳಲ್ಲಿದ್ದು ಈ ಸ್ಥಾನಗಳು ಲಗ್ನಕ್ಕೆ ಕೇಂದ್ರಗಳಾದರೆ ಭದ್ರಕವೆಂಬ ಯೋಗ ಉಂಟಾಗುತ್ತದೆ. ಈ ಭದ್ರಕ ಯೋಗದಲ್ಲಿ ಹುಟ್ಟಿದವರು, ಸಿಂಹ ಸಧೃಶವಾದ ಪರಾಕ್ರಮವುಳ್ಳವರೂ ವಿಶಾಲವಾದ ಎದೆ, ಬಾಯಿಗಳುಳ್ಳವರೂ, ಸಮಾಕೃತಿಯುಳ್ಳವರೂ ಆಗಿರುತ್ತಾರೆ. ಇವರು ಸುರೂಪಿಗಳೂ, ಬುದ್ಧಿವಂತರೂ ಶಾಸ್ತ್ರಾರ್ಥ ತಿಳಿದವರೂ, ಧರ್ಮದಲ್ಲಿ ಆಸಕ್ತಿಯುಳ್ಳವರೂ, ಧೈರ್ಯಶಾಲಿಗಳೂ, ಭೋಗಶಾಲಿಗಳೂ, ಮಾನವೇ ಮುಖ್ಯವಾಗಿಳ್ಳುವರು ಆಗಿರುತ್ತಾರೆ. ಇವರು ತಾವು ಮಾಡುವ ಕಾರ್ಯದಲ್ಲಿ ಸ್ವತಂತ್ರರೂ, ಆ ಕಾರ್ಯ ಮಾಡಿದವರೂ ಸ್ವಜನವಾದರೂ ಅವರನ್ನು ಕ್ಷ ಮಿಸದೆ ಇರತಕ್ಕವರೂ, ಕೇಳಿದವರಿಗೆ ಧನ ಸಹಾಯ ಮಾಡುತ್ತಾರೆ. ಪತ್ನಿ ಪುತ್ರರುಗಳಿಂದ ಅತಿಶಯ ಸೌಖ್ಯವನ್ನು ಅನುಭವಿಸಿ ಸುಮಾರು ಎಂಬತ್ತು ವರ್ಷ ಕಾಲ ಆಯಸ್ಸುಳ್ಳವರೂ ಆಗಿರುತ್ತಾರೆ.
ರುಚಿಕಾ,ಭದ್ರ,ಮಾಲವೀಯ ಯೋಗಿಗಳು:ನಿಮಗೆ ಯಾವ ರೀತಿಯ ಯೋಗವಿದೆ?
ಕಳೆದ ವಾರದಲ್ಲಿ ಹಂಸ ಯೋಗ, ಶಶಯೋಗದ ಬಗ್ಗೆ ತಿಳಿದುಕೊಂಡೆವು. ಈವಾರ ರುಚಿಕಾ ಯೋಗ, ಭದ್ರಯೋಗ ಹಾಗೂ ಮಾಲವೀಯ ಯೋಗದ ಬಗ್ಗೆ ತಿಳಿಯೋಣ.
ಕುಜನು ಅಧಿಪತಿಯಾಗಿರುವ ಯೋಗವೇ ರುಚಿಕಾ ಯೋಗ. ಮೇಷ ಲಗ್ನವಾಗಿ ಕುಜನು ಲಗ್ನದಲ್ಲಿರಬೇಕು. ವೃಶ್ಚಿಕ ಲಗ್ನವಾದಾರೂ ಕುಜನು ಲಗ್ನದಲ್ಲಿರಬೇಕು. ಮಕರ ಲಗ್ನವಾಗಿ ಕುಜನು ಲಗ್ನದಲ್ಲಿರಬೇಕು. ಇದು ರುಚಿಕಾಯೋಗದ ನಿಯಮ. ಕುಜನಿಗೆ ಮೇಷ-ವೃಶ್ಚಿಕ ಸ್ವಂತ ಮನೆಯಾದರೆ ಮಕರ ರಾಶಿ ಉತ್ಛಸ್ಥಾನವಾಗುತ್ತದೆ. ಕುಜ
ಭಾತೃಕಾರಕ. ಕುಜನ ಬಣ್ಣ: ಕೆಂಪು. ಲೋಹ: ತಾಮ್ರ. ರತ್ನ: ಹವಳ. ಸಂಖ್ಯೆ: 9. ದೇವತೆ: ಸುಬ್ರಹ್ಮಣ್ಯ. ಧಾನ್ಯ: ತೊಗರಿ. ವಾರ: ಮಂಗಳವಾರ.
ಸಾಮಾನ್ಯವಾಗಿ ರುಚಿಕಾ ಯೋಗದಲ್ಲಿ ಹುಟ್ಟಿದವರು ಎತ್ತರವಾಗಿರುತ್ತಾರೆ. ಸದೃಢ ಶರೀರಿಯಾಗಿರುತ್ತಾರೆ. ಭಾವುಕತೆ ಇವರಲ್ಲಿ ಕಡಿಮೆ. ದೃಢಮನಸ್ಕರಾಗಿರುತ್ತಾರೆ. ಕೆಲವೊಮ್ಮೆ ಕ್ರೂರಿಗಳಾಗುವ ಸಾಧ್ಯತೆಗಳೂ ಇವೆ. ಏಕ್ ಮಾರ್ ದೋ ತುಕುಡಾ ಎಂಬಂತೆ ಇರುತ್ತಾರೆ. ಮಾತೂ ಸಹ ಕತ್ತಿಯಂತೆ ಹರಿತ. ಹೃದಯ ಬೆಟ್ಟದ ಹಾಗೆ ಅಲುಗಾಡುವುದಿಲ್ಲ. ಚಿಕ್ಕಪುಟ್ಟ ವಿಷಯಕ್ಕೆ ಮನಸ್ಸು ಕಸಿವಿಸಿ ಮಾಡಿಕೊಳ್ಳುವುದಿಲ್ಲ.
ಒಂದು ದೊಡ್ಡ ಸಂಸ್ಥೆಯನ್ನು ಹುಟ್ಟು ಹಾಕಿ ಮುನ್ನಡೆಸುವ ಛಾತಿ ಇರುತ್ತದೆ. ರಾಜಕೀಯವಾಗಿ ಉನ್ನತ ಸ್ಥಾನದಲ್ಲಿ ಇರುತ್ತಾರೆ. ಯಾವುದೇ ದೊಡ್ಡ ಸಂಸ್ಥೆಯ ಉನ್ನತಾಧಿಕಾರಿಯಾಗಬಹುದು. ಏಕೆಂದರೆ ದೊಡ್ಡ ಸ್ಥಾನದಲ್ಲಿ ಇರುವವರು ಭಾವುಕತೆಗೆ ಪಕ್ಕಾಗದೆ ಕೆಲವು ಬಾರಿ ದೃಢ
ನಿರ್ಧಾರಗಳನ್ನು ಮಾಡಬೇಕಾಗುತ್ತದೆ. ಕೆಲವು ನಿರ್ಣಯಗಳನ್ನು ತೆಗೆದುಕೊಳ್ಳುವಾಗ ಅಣ್ಣ, ತಮ್ಮ ಚಿಕ್ಕಪ್ಪ ಸೋದರಮಾವ ಎಂದು ಮೃದು ಧೋರಣೆ ತೋರಿಸಲಾಗುವುದಿಲ್ಲ. ರುಚಿಕಾ ಯೋಗದವರು ಯಾವ ಮುಲಾಜನ್ನೂ ನೋಡದೆ ಆ ಸಂದರ್ಭಕ್ಕೆ ಯೋಗ್ಯವಾದ ನಿರ್ಧಾರವನ್ನು ತೆಗೆದುಕೊಳ್ಳುವುದರಲ್ಲಿ ನಿಸ್ಸೀಮರು. ಇದು ಆ ಸಮಯಕ್ಕೆ ಹರಿತ ಎನಿಸಿದರೂ ದೂರದೃಷ್ಟಿಯಿಂದ ಒಳ್ಳೆಯದೇ ಆಗಿರುತ್ತದೆ.
ರುಚಿಕಾ ಯೋಗವರು ಪೊಲೀಸ್, ಮಿಲಿಟರಿ ಹುದ್ದೆಗೆ ಹೆಚ್ಚು ಸೂಕ್ತರು. ಉಳಿದ ಗ್ರಹಗತಿಗಳೂ ಶುಭಸ್ಥಾನದಲ್ಲಿದ್ದರೆ ಪೊಲೀಸ್ ಅಥವಾ ಮಿಲಿಟರಿ ಅಥವಾ ರಾಜಕೀಯವಾಗಿ ಉನ್ನತ ಸ್ಥಾನದಲ್ಲಿ ಇರುತ್ತಾರೆ. ಸುಪ್ರಸಿದ್ಧರಾಗುತ್ತಾರೆ. ಗ್ರಹಚಾರವಶಾತ್ ಕುಜನಿಗೆ ಶನಿಯ ದೃಷ್ಟಿಯೋ, ರಾಹುವಿನ ದೃಷ್ಟಿಯೋ ಬಿದ್ದಿದ್ದರೆ ಅಂಥವರು ಕುಪ್ರಸಿದ್ಧರೂ ಆಗಿಬಿಡುತ್ತಾರೆ. ಇಂಥವರು ಕಳ್ಳರು, ದರೋಡೆಕೋರರು, ಕೊಲೆಗಡುಕರು, ಅತ್ಯಾಚಾರಿಗಳು, ಆಗಿಬಿಡಬಹುದು. ಪೊಲೀಸ್ ಇಲಾಖೆಯಲ್ಲಿ ಕ್ರೂರಿಯಾದ ಆಫೀಸರ್ ಆಗಬಹುದು. ಒಬ್ಬ ಹೆಸರಾಂತ ವೈದ್ಯ ಆಗಬಹುದು. ಸದಾ ರಕ್ತ ಮಾಂಸ ಇಂಥವುಗಳ ಸಹವಾಸಗಳಲ್ಲೇ ಇರುವಂತವನಾಗಬಹುದು. ಲ್ಯಾಬ್ ಟೆಕ್ನಿಷಿಯನ್ ಕೂಡಾ ಆಗಬಹುದು. ಭೂಗತ ಪಾತಕಿಯಾಗಬಹುದು. ಇವರು ಸಾವಿಗೆ ಅಂಜುವುದಿಲ್ಲ. ದೇಶಕ್ಕಾಗಿಯೂ ಪ್ರಾಣ ಕೊಡಬಹುದು, ದೇಶದ್ರೋಹ ಮಾಡಲೂ ಆತ್ಮಾಹುತಿ ಮಾಡಿಕೊಳ್ಳಬಹುದು.
ರುಚಿಕಾ ಯೋಗದವರಿಗೆ ಹೊಡೆತ, ಬೀಳುವುದು, ಏಳುವುದು, ಗಾಯ ರಕ್ತ, ಅಪಘಾತ, ಮೂಳೆಮುರಿತ, ಪ್ರಾಣಾಂತಿಕ ಅಪಾಯಗಳು ಇವರಿಗೆ ಲೆಕ್ಕವೇ ಇಲ್ಲ. ಯಾವುದಕ್ಕೂ ಕೇರೇ ಮಾಡರು. ಸಾಹಸ ವೃತ್ತಿಗಳಲ್ಲಿ ಇವರಿಗೆ ಬಹಳ ಆಸಕ್ತಿ. ರಿವರ್ ರ್ಯಾಫ್ಟಿಂಗ್ ಮಾಡುವುದು, ಪರ್ವತಾರೋಹಣ, ಮಾರ್ಷಲ್ ಆರ್ಟ್ನಲ್ಲಿ ಪರಿಣಿತಿ, ಕುದುರೆ ಸವಾರಿ, ಕತ್ತಿವರಸೆ, ಫುಟ್ಬಾಲ್ ಕ್ರಿಕೆಟ್ ನಂಥ ಕ್ರೀಡೆಗಳಲ್ಲಿ ಆಸಕ್ತಿ, ಅದನ್ನೇ ವೃತ್ತಿಯನ್ನಾಗಿಸಿಕೊಂಡವರೂ ಆಗಿರಬಹುದು. ಒಟ್ಟಿನಲ್ಲಿ ಸಾಹಸ ಮತ್ತು ಧೈರ್ಯ ಇವರ ಜೀವನದ ಅವಿಭಾಜ್ಯ ಅಂಗವಾಗಿರುತ್ತದೆ. ಕೋಪಿಷ್ಠರೂ ಆಗಿರುತ್ತಾರೆ. ಪ್ರಾಣವನ್ನು ಕೊಡಲೂ, ಪ್ರಾಣವನ್ನು ತೆಗೆಯಲೂ ಹಿಂದೆಮುಂದೆ ನೋಡುವುದಿಲ್ಲ. ಎರಡರಲ್ಲೂ ಮಿತಿ ಇಲ್ಲ. ಇವರಿಗೆ ಒಳ್ಳೆಯ ಶಿಕ್ಷಣ ಸಂಸ್ಕಾರವಂತ ವಾತಾವರಣ ದೊರೆತರೆ ದೇಶಕ್ಕೆ ಇವರೊಂದು ಆಸ್ತಿಯಾಗಿಯೂ ಆಗುತ್ತಾರೆ. ತಮ್ಮ ಕುಟುಂಬಕೂ,R ಹುಟ್ಟೂರಿಗೂ ದೇಶಕ್ಕೂ ಹೆಸರು ತರುತ್ತಾರೆ. ಮಾಜಿ ವಿಶ್ವಸುಂದರಿ ಹಾಗೂ ಖ್ಯಾತ ಬಾಲಿವುಡ್ ನಟಿ ಐಶ್ವರ್ಯಾ ರೈ ರುಚಿಕಾ ಯೋಗದಲ್ಲಿ ಹುಟ್ಟಿದವರು.
ಭದ್ರಯೋಗ
ಇನ್ನು ಭದ್ರಯೋಗಕ್ಕೆ ಬುಧ ಅಧಿಪತಿ. ಮಿಥುನ ಲಗ್ನವಾಗಿ, ಬುಧನು ಮಿಥುನದಲ್ಲಾಗಲೀ ಕನ್ಯಾದಲ್ಲಾಗಲೀ ಇರಬೇಕು ಅಥವಾ ಕನ್ಯಾಲಗ್ನವಾಗಿ ಬುಧನು ಕನ್ಯಾದಲ್ಲಾಗಲೀ ಮಿಥುನದಲ್ಲಾಗಲಿ ಇರಬೇಕು. ಇದು ಭದ್ರಯೋಗವೆನಿಸಿಕೊಳ್ಳುತ್ತದೆ. ಭದ್ರಯೋಗದಲ್ಲಿ ಜನಿಸಿದವರು ಬಹಳ ಬುದ್ಧಿಬಂತರು. ಬುಧನು ಬಂಧುಕಾರಕ. ಬುದ್ಧಿಕಾರಕ. ಭದ್ರಯೋಗದವರು ಬಂಧು ಬಾಂಧವರೊಡನೆ ಉತ್ತಮ ಸಂಬಂಧ ಹೊಂದಿರುತ್ತಾರೆ. ಇವರ ಐಕ್ಯೂ ತುಂಬಾ ಹರಿತ. ನೆನಪಿನ ಶಕ್ತಿಯೂ ಬಹಳ ತೀಕ್ಷ್ಣ. ಬ್ಯಾಂಕಿಂಗ್ ಕ್ಷೇತ್ರ, ಚಾರ್ಟೆಡ್ ಅಕೌಂಟೆಂಟ್, ಕಂಪ್ಯೂಟರ್ ಕ್ಷೇತ್ರ ಇವರಿಗೆ ಹೇಳಿ ಮಾಡಿಸಿದ ಕ್ಷೇತ್ರಗಳು. ಈಗಿನ ಮೊಬೈಲ್ ಕ್ಷೇತ್ರದ ದೊರೆಯಾಗಬಹುದು. ಬುದ್ಧಿವಂತಿಕೆ ಎನ್ನುವುದು ಇವರ ಕಣಕಣದಲ್ಲೂ ಹರಿಯುತ್ತಿರುತ್ತದೆ.ಕ್ವಿಜ್ ಕಾರ್ಯಕ್ರಮಗಳಲ್ಲಿ ಇವರು ಭಾಗವಸಿದರೆ ಮೊದಲ ಬಹುಮಾನ ಗ್ಯಾರಂಟಿ. ಕ್ವಿಜ್ ಕಾರ್ಯಕ್ರಮಗಳ ಆಯೋಜಕರೂ ಆಗಿರುತ್ತಾರೆ. ವಿಜಾnನ, ಗಣಿತ, ಅಕೌಂಟ್ಸ್ ಮತ್ತು ತಂತ್ರಜಾnನ ಇವರಿಗೆ ಅಚ್ಚುಮೆಚ್ಚಾದ ಕ್ಷೇತ್ರ. ಈ ಕ್ಷೇತ್ರಗಳಲ್ಲಿ ಇವರನ್ನು ಮೀರಿಸುವವರು ಯಾರೂಇಲ್ಲ. ಕ್ರೀಡೆಯಲ್ಲೂ ಇವರು ಗಮನ ಸೆಳೆಯುತ್ತಾರೆ. ಇದಕ್ಕೆ ಉದಾಹರಣೆ ಭಾರತೀಯ ಕ್ರಿಕೆಟ್ನ ಮಾಜಿ ನಾಯಕ, ಹಾಲಿ ಆಟಗಾರ ಮಹೇಂದ್ರ ಸಿಂಗ್ ಧೋನಿ. ಧೋನಿ ಭದ್ರಯೋಗದ ಜಾತಕದವರು. ಒಮ್ಮೊಮ್ಮೆ ನೆಲಕ್ಕೆ ಬಿದ್ದರೂ ಅಷ್ಟೇ ವೇಗವಾಗಿ ಎದ್ದು ನಿಲ್ಲುತ್ತಾರೆ. ಇಂಥವರಿಗೆ ದೌರ್ಬಲ್ಯಗಳು ಕಡಿಮೆ.
ಭದ್ರಯೋಗದವರ ಮಾತೂ ಸಹ ಅತಿ ಬುದ್ಧಿವಂತಿಕೆಯಿಂದ ಕೂಡಿರುತ್ತದೆ. ಬೆಣ್ಣೆಯಲ್ಲಿ ಕೂದಲು ತೆಗೆದಂತೆ ಅತಿ ನಾಜೂಕಾದ ಮಾತುಕತೆಗೆ ಇವರು ಸಿದ್ಧಹಸ್ತರು. ಯಾರನ್ನಾದರೂ ಕನ್ವಿನ್ಸ್ ಮಾಡುವುದು ಇವರಿಗೆ ಸುಲಭ. ಹೀಗಾಗಿ ಇವರು ಇನುÒರೆನ್ಸ್ ಕೇತ್ರದಲ್ಲೂ ಹೆಸರು ಮಾಡುತ್ತಾರೆ. ಒಳ್ಳೆಯ ಎಂಜಿನಿಯರ್ಗಳು ಆಗಿರುತ್ತಾರೆ. ಅಣೆಕಟ್ಟು ಕಟ್ಟುವುದು, ಕಟ್ಟಡಗಳ ಸಂಕೀರ್ಣಗಳನ್ನು ನಿರ್ಮಿಸುವುದು ವಿಮಾನ ಕ್ಷೇತ್ರ, (ಏರೋನಾಟಿಕ್ ಎಂಜಿನಿಯರ್) ದೊಡ್ಡ ದೊಡ್ಡ ಮೆನುಗಳನ್ನು ತಯಾರಿಸುವುದು, ಯಂತ್ರಮಾನವವನ್ನು ನಿರ್ಮಿಸುವುದು ಇಂಥವೆಲ್ಲಾ
ಭದ್ರಯೋಗದವರಿಗೆ ಸುಲಭ. ದೈಹಿಕ ಶಕ್ತಿಯಿಂದ ಮಾಡಲಾಗದ್ದನ್ನು ಬುದ್ಧಿವಂತಿಕೆಯಿಂದ ಸುಲಭ ಮಾಡಿಕೊಳ್ಳುತ್ತಾರೆ. ಶಕ್ತಿಗಿಂತ ಯುಕ್ತಿ ಮೇಲು ಎನ್ನುವ ನಾಣ್ನುಡಿ ಇವರಿಗೆ ತುಂಬಾ ಅನ್ವಯವಾಗುತ್ತದೆ. ವ್ಯಾಪಾರ ಕ್ಷೇತ್ರದಲ್ಲೂ ಇವರದ್ದು ಎತ್ತಿದ ಕೈ. ಬಹುದೊಡ್ಡ ಅಂಗಡಿ ಮಳಿಗೆಗಳನ್ನು ಹೊಂದಿರುತ್ತಾರೆ. ಬುದ್ಧಿಗೆ ಕಸರತ್ತು ಕೊಡುವ ಯಾವುದೇ ಕೆಲಸವಾಗಲೀ ಇವರು ಚಾಲೆಂಜಾಗಿ ತೆಗೆದುಕೊಂಡು ಲೀಲಾಜಾಲವಾಗಿ ಮಾಡಿ ಮುಗಿಸುತ್ತಾರೆ. ತಮ್ಮ ಬುದ್ಧಿವಂತಿಕೆ ಸೃಜನಶೀಲತೆಯಿಂದ ಬಲು ಬೇಗ ಪ್ರಸಿದ್ಧಿಗೆ ಬರುತ್ತಾರೆ. ಅವಕಾಶಗಳು ಇವರನ್ನು ಹುಡುಕಿಕೊಂಡು ಬರುತ್ತವೆ. ಇವರು ಸುಲಭದಲ್ಲಿ ಸೋಲೊಪ್ಪುವುದೂ ಇಲ್ಲ. ಎಲ್ಲ ವಿಷಯದಲ್ಲೂ ಅಚ್ಚುಕಟ್ಟು ಶುಚಿ ಬಯಸುವ ಜನ.
ಬುಧನ ಬಣ್ಣ ಹಸಿರು. ವಾರ: ಬುಧವಾರ. ರತ್ನ: ಪಚ್ಚೆ. ಸಂಖ್ಯೆ: ಐದು. ಧಾನ್ಯ: ಹೆಸರು. ಅಧಿದೇವತೆ: ವಿಷ್ಣು.
ಮಾಲವೀಯ ಯೋಗ
ಮಾಲವೀಯ ಯೋಗಕ್ಕೆ ಶುಕ್ರ ಅಧಿಪತಿ. ವೃಷಭ, ತುಲಾ ಶುಕ್ರನಿಗೆ ಸ್ವಂತ ಮನೆಗಳು. ಮೀನ ರಾಶಿ ಶುಕ್ರನಿಗೆ ಉತ್ಛ ಸ್ಥಾನ. ಹೀಗಾಗಿ ಈ ಮೂರೂ ರಾಶಿಗಳಲ್ಲಿ ಯಾವುದಾದರೂ ರಾಶಿ ಲಗ್ನವಾಗಿ ಅದರಲ್ಲಿ ಶುಕ್ರನಿರಬೇಕು. ಶುಕ್ರ ಸುಖಕಾರಕ. ಲಲಿತ ಕಲೆಗಳ ಅಧಿದೇವತೆ. ಶುಕ್ರನು ದಾನವ ಗುರುವಾಗಿದ್ದರೂ ಸುಂಕುಚಿತ ಸ್ವಭಾವದವನು. ಸೌಮ್ಯಗ್ರಹ. ಮಾಲವೀಯ ಯೋಗದ ಜಾತಕರು ಬಹಳ ನಾಜೂಕಿನವರು. ಸೂಕ್ಷ್ಮಜೀವಿಗಳು. ಸುಂದರಾಂಗರು.
ಮಾಲವೀಯ ಯೋಗದವರು ಹುಟ್ಟಿನಿಂದಲೇ ಅದೃಷ್ಟವಂತರು. ಇವರಿರುವ ಕಡೆ ಐಶ್ವರ್ಯ ಕಾಲುಮುರಿದು ಬಿದ್ದಿರುತ್ತದೆ. ಮಾಲವೀಯ ಯೋಗದವರು ಚಿಕ್ಕಂದಿನಿಂದಲೇ ಸುಖವಾಗಿ ಬೆಳೆಯುತ್ತಾರೆ. ತಂದೆ ಎಷ್ಟು ಬಡವನಾದರೂ ಇವರು ಹುಟ್ಟಿದ ನಂತರ ಶ್ರೀಮಂತನಾಗುತ್ತಾನೆ. ಮಾಲವೀಯ ಯೋಗದವರು ಅಲಂಕಾರಪ್ರಿಯರು. ಶುಕ್ರ ಕಲೋಪಾಸಕ. ಹೀಗಾಗಿ ಈ ಯೋಗದವರು ಕಲೆಗಳ ಆರಾಧಕರಾಗಿರುತ್ತಾರೆ. ಸಂಗೀತ, ಸಾಹಿತ್ಯ, ನೃತ್ಯ ಸಂಗೀತವಾದ್ಯಗಳ ವಾದನ, ಕಸೂತಿ, ಟೈಲರಿಂಗ್, ಶಿಲ್ಪಕಲೆ, ವಾಸ್ತುಕಲೆ, ವಾಸ್ತುಶಾಸ್ತ್ರ, ಕಟ್ಟಡ ವಿನ್ಯಾಸ, ಕುಸುರಿ ಕೆಲಸ, ಆಭರಣಗಳನ್ನು ತಯಾರುಮಾಡುವುದು, ಆಭರಣಗಳ ಕುಸುರಿ ಕಲೆ ವಿನ್ಯಾಸ ಮಾಡುವುದು, ಮೂರ್ತಿ ಕೆತ್ತುವುದು, ಕುಂದನ್ ವರ್ಕì ಬಾಟಿಕ್ ವರ್ಕ್ ಹೀಗೆ ಯಾವುದಾದರೂ ಒಂದು ಕಲೆಯಲ್ಲಿÉ ಪರಿಣಿತರಾಗಿರುತ್ತಾರೆ. ಮಾಲವೀಯ ಯೋಗದವರು ಬಹುದೊಡ್ಡ ಕಲಾವಿದರೂ ಆಗಿರುತ್ತಾರೆ.
ಮಾಲವೀಯ ಯೋಗದವರು ಆಹ್ಲಾದಕರ ಪ್ರವೃತ್ತಿಯವರು. ತಾವೂ ಖುಷಿಯಾಗಿದ್ದು ತಮ್ಮ ಸುತ್ತಲಿನವರನ್ನೂ ಖುಷಿಯಾಗಿಡುತ್ತಾರೆ. ಕಷ್ಟವೆನ್ನುವುದು ಇವರ ಜೀವನದಲ್ಲಿ ಕಡಿಮೆ. ರಾಜಯೋಗವನ್ನು ಅನುಭವಿಸುತ್ತಾರೆ. ತಮ್ಮ ಸುಖ ಐಷಾರಾಮಕ್ಕೆ ಯಾವುದೇ ಕೊರತೆ ಮಾಡಿಕೊಳ್ಳುವುದಿಲ್ಲ.
ಮಾಲವೀಯ ಯೋಗದವರು ಸೃಜನಶೀಲರು. ಕಲ್ಪನಾಶೀಲರು. ಭಾವುಕರು.ಶೃಂಗಾರ ಪ್ರಿಯರು. ರಸಿಕರು. ಜಿಹ್ವಾಚಾಪಲ್ಯ ಹೆಚ್ಚು. ಒಳ್ಳೊಳ್ಳೆಯ ಊಟ ತಿಂಡಿಗಳನ್ನು ಬಯಸುತ್ತಾರೆ. ಹೇಗೋ ಜೀವನ ಮಾಡುವುದಿಲ್ಲ. ಆ ಹೊತ್ತಿಗೆ ಏನಿದ್ದರೆ ಅದು ತಿನ್ನುವುದು, ಯಾವುದೋ ಒಂದು ಬಟ್ಟೆ ಧರಿಸುವುದು ಹೇಗೋ ಇದ್ದು ಬಿಡುವುದು ಇವರ ಜಾಯಮಾನವಲ್ಲ. ಇವರು ಎಲ್ಲದರಲ್ಲೂ ಅಚ್ಚುಕಟ್ಟು ಬಯಸುವವರು. ರುಚಿಕಟ್ಟಾದ ಊಟ, ಅಚ್ಚುಕಟ್ಟಾದ ಮನೆ, ವೇಷಭೂಷಣಗಳಲ್ಲಿ ನಾಜೂಕು ಎಲ್ಲವೂ ಇರಬೇಕು. ಇವರಿದ್ದ ಕಡೆ ಎಲ್ಲವೂ ನೀಟಾಗಿ ಶುಚಿಯಾಗಿ ಇರಬೇಕು. ಆಯಾ ವಸ್ತುಗಳು ಎಲ್ಲಿರಬೇಕೋ ಅಲ್ಲಿ ಇರಬೇಕು. ತಮ್ಮ ದೇಹದ ಮೇಲೆ ಒಂದು ಸಣ್ಣ ಗೀರು ಉಂಟಾದರೂ ತಮ್ಮ ಸೌದರ್ಯಕ್ಕೆಲ್ಲಿ ಧಕ್ಕೆ ಬರುವುದೋ ಎಂದು ಭಯ ಪಡುತ್ತಾರೆ. ಅಷ್ಟು ಸೂಕ್ಷ್ಮಜೀವಿಗಳು. ಹೆಚ್ಚು ಬಿಸಿಲಾದರೂ ಸಹಿಸರು.
ಶುಕ್ರನ ದೇವತೆ ಲಕ್ಷಿ$¾à ಪಾರ್ವತಿ ಅಥವಾ ಸರಸ್ವತಿ. ಯಾವ ಶಕ್ತಿದೇವತೆಯಾದರೂ ಶುಕ್ರ ಅವರಿಗೆ ಅಧೀನ. ಶುಕ್ರನ ರತ್ನ: ವಜ್ರ. ಧಾನ್ಯ: ಅವರೆ. ಸಂಖ್ಯೆ: 6. ಬಣ್ಣ: ಬಿಳಿ. ಲೋಹ: ಬೆಳ್ಳಿ.
ಹಂಸಯೋಗ, ಶಶಯೋಗ, ಮಾಲವೀಯ ಯೋಗ, ಭದ್ರಯೋಗ, ರುಚಿಕಾ ಯೋಗ ಈ ಯಾವ ಯೋಗದಲ್ಲಿ ಜನಿಸಿದರೂ ಅವರು ಅದೃಷ್ಟವಂತರು. ಪ್ರಖ್ಯಾತರು, ಸುಪ್ರಸಿದ್ಧರೂ ಆಗುತ್ತಾರೆ. ದೊಡ್ಡ ಸ್ಥಾನಮಾನಗಳು ಇವರಿಗೆ ಸಿಗುತ್ತವೆ. ಸಾಮಾಜಿಕ ಗೌರವ, ಜನಾನುರಾಗ, ಎಲ್ಲವೂ ಇವರಾದಾಗಿರುತ್ತದೆ. ಯಾವುದೇ ಕ್ಷೇತ್ರದಲ್ಲಾದರೂ ಇವರು ಉನ್ನತ ಸ್ಥಾನದಲ್ಲಿ ಇರುತ್ತಾರೆ. ವೀಣಾ ಚಿಂತಾಮಣಿ
-ಸಂಗ್ರಹ (ಕೃಪೆ ದಿನ ಪತ್ರಿಕೆ)
Subscribe to:
Post Comments (Atom)
No comments:
Post a Comment