Sunday, 10 February 2019
ರಥ ಸಪ್ತಮಿ: ಸೂರ್ಯನ ಆರಾಧನೆಗೆ ಪ್ರಮುಖ ದಿನ
ಮಾಘಮಾಸ ಶುಕ್ಲ ಪಕ್ಷದ ಸಪ್ತಮಿ ತಿಥಿಯಂದು ಸೂರ್ಯನ ಜನ್ಮದಿನ. ಅಲ್ಲದೆ ಸಪ್ತಮಿ ತಿಥಿಯ ಅದಿದೇವತೆಯು ಸೂರ್ಯ ಆಗಿರುವುದರಿಂದ, ಫೆಬ್ರವರಿ 12.2019 ರಂದು ಸೂರ್ಯ ಆರಾಧನೆಯ ‘ರಥ ಸಪ್ತಮಿ’ ದಿನವೆಂದು ಆಚರಿಸಲಾಗುತ್ತದೆ. ನಿಯಮಬದ್ಧವಾದ ಉದಯ ಹಾಗೂ ಅಸ್ತಗಳ ಮೂಲಕ ನಮಗೆ ಶಿಸ್ತು ಬದ್ಧವಾದ ಕರ್ತವ್ಯ ಪ್ರಜ್ಞೆ, ಚೈತನ್ಯವನ್ನು ತುಂಬುವ ಸೂರ್ಯನ ಪೂಜೆಯೇ ಈ ದಿವಸದ ಮುಖ್ಯ ಆಚರಣೆಯಾಗಿದೆ. ಈ ದಿನದಲ್ಲಿ ನಡೆಯುವ ಕೆಲಸ ಕಾರ್ಯಗಳು, ಕೋರಿಕೆಗಳು ಫಲಪ್ರದವಾಗಿರುತ್ತವೆ. ಸೂರ್ಯನ ಪ್ರಕಾಶ ಹೆಚ್ಚುತ್ತಿರುವುದರಿಂದ ಚಳಿಗಾಲದ ಚಳಿ ಮುದುಡಿಕೊಂಡು ಮೈಯಲ್ಲಿ ನವಚೇತನ ತುಂಬಿದಂತೆ ಅನಿಸುತ್ತದೆ. ಅಂಗಾಂಗಗಳಲ್ಲಿ ಕಾರ್ಯಕ್ಷಮವಾಗುತ್ತಿವೆ. ಈ ಉಪಕಾರಕ್ಕಾಗಿ ಸೂರ್ಯನನ್ನು ಪೂಜಿಸುವುದು ರೂಢಿಯಲ್ಲಿದೆ. ಆಹಾರಕ್ಕಾಗಿ, ರೋಗ ನಿವಾರಣೆಗಾಗಿ ಸೂರ್ಯೋಪಾಸನೆ ಮಾಡಬೇಕೆಂದು ಸ್ಕಂದ, ವರಾಹ ಪುರಾಣಗಳಲ್ಲಿ ಹೇಳಿವೆ.
ವೈವಸ್ವತ ಮನ್ವಂತರದ ಆರಂಭದ ದಿನ. ಸೂರ್ಯನು ಉತ್ತರಾಯಣನಾಗಿ ಸಪ್ತಾಶ್ವಗಳ ರಥವನ್ನೇರಿ, ಉತ್ತರದಿಕ್ಕಿನ ಮಾರ್ಗದಲ್ಲಿ ಹೊರಟ ದಿನ.
ರಥ ಸಪ್ತಮಿ ದಿವಸ ರೋಗ ನಿವಾರಣೆ, ದೇಹದಾರ್ಡ್ಯ ಹಾಗೂ ಉತ್ತಮ ಆರೋಗ್ಯವನ್ನು ಬಯಸುವವರು ಸೂರ್ಯನ ಆರಾಧನೆ ಮಾಡಬೇಕೆಂಬ ನಿಯಮವಿದೆ. ರೋಗಾಣುಗಳನ್ನು ನಾಶ ಪಡಿಸುವ ಶಕ್ತಿ ಸೂರ್ಯನ ಕಿರಣಗಳಲ್ಲಿವೆ. ಬೆಳಗಿನ ಹಾಗೂ ಸಂಜೆಯ ಸೂರ್ಯ ಕಿರಣಗಳಿಂದ ಆರೋಗ್ಯ ವರ್ಧನೆಯಾಗುತ್ತದೆ. ರೋಗದಿಂದ ನರಳುವವರು ಈ ದಿವಸ ಸೂರ್ಯಾರಾಧನೆಯನ್ನು ಮಾಡಿದರೆ ಬೇಗ ಗುಣಮುಖರಾಗುತ್ತಾರೆ.
ಯೋಗಾಸನಗಳಲ್ಲಿ ಮೊದಲ ಪ್ರಾಶಸ್ತ್ಯ ಸೂರ್ಯ ನಮಸ್ಕಾರಕ್ಕೆ ನೀಡಬಹುದು. ಏಕೆಂದರೆ ಈ ಅಭ್ಯಾಸವು ಮನಸು, ದೇಹ ಮತ್ತು ಉಸಿರಾಟ ವ್ಯವಸ್ಥೆಗಳಿಗೆ ಪರಿಣಾಮಕಾರಿಯಾಗಿದೆ. ಭೂಮಿಯಲ್ಲಿನ ಸಕಲ ಜೀವರಾಶಿಗಳ ಚಟುವಟಿಕೆಗಳು ಸೂರ್ಯನಿಂದ ನಡೆಯುತ್ತಿದೆ.
ರಥಸಪ್ತಮಿ ದಿನದಂದು ಸೂರ್ಯೋದಯಕ್ಕೆ ಸರಿಯಾಗಿ ನದಿ, ಸಮುದ್ರ, ಸರೋವರ, ಸಂಗಮ ಮುಂತಾದೆಡೆ ಸ್ನಾನ ಮಾಡಿ ಸೂರ್ಯನಿಗೆ ‘ಅರ್ಘ್ಯ’ ನೀಡಿದರೆ ಪೂರ್ವ ಜನ್ಮದ ಪಾಪಗಳು ಹಾಗೂ ಈ ಜನ್ಮದ ಸಕಲ ದುಃಖಗಳು ಪರಿಹಾರವಾಗುತ್ತವೆ. ಸೂರ್ಯೋದಯಕ್ಕೆ ಮಾಡುವ ಮಾಘಸ್ನಾನ ಪುಣ್ಯಪ್ರದವಾದುದು. ಆಯುಷ್ಯ, ಆರೋಗ್ಯ ಸಂಪತ್ತು ಲಭಿಸುವುದಲ್ಲದೆ, ಸೂರ್ಯನ ಅನುಗ್ರಹ ಪ್ರಾಪ್ತಿಯಾಗುತ್ತದೆಂದು ಪುರಾಣದಲ್ಲಿದೆ. ಸೂರ್ಯನ ಆರಾಧನೆ ಋಗ್ವೇದದ ಕಾಲದಿಂದಲೂ ಪ್ರಚಲಿತದಲ್ಲಿದೆ. ಪ್ರಾಚೀನ ವೈದಿಕ ಧರ್ಮದಲ್ಲಿ ಸೂರ್ಯನಿಗೆ ಅತ್ಯಂತ ಪ್ರಾಮುಖ್ಯತೆ ಇತ್ತು. ಆತನ ಆರಾಧನೆಯಿಂದಲೇ ಸೌರ ಪಂಥ ಹುಟ್ಟಿದ್ದು. ಕಾಲ ಗಣನೆಯಲ್ಲಿ ಸೌರಮಾನ ಎಣಿಕೆ ಇಂದಿಗೂ ಇದೆ.
ಗಾಯತ್ರಿ ಮಂತ್ರದಲ್ಲಿನ ಪ್ರತಿಶಬ್ದವು ಸೂರ್ಯನ ಸಾಮಥ್ಯಗಳನ್ನು ಕೊಂಡಾಡುವ ಉದ್ದೇಶದಿಂದಲೇ ಬಳಸಲಾಗಿದೆ.
ದ್ವಾಪರಾಯುಗದಲ್ಲಿ ಶ್ರೀ ಕೃಷ್ಣನು ಧರ್ಮರಾಜನಿಗೆ ರಥಸಪ್ತಮಿ ಬಗ್ಗೆ ಹೇಳಿದ ಕಥೆಯಿದೆ. ಯಶೋವರ್ಮನೆಂಬ ರಾಜನ ಮಗ ಹುಟ್ಟಿನಿಂದಲೇ ರೋಗಿಷ್ಠನಾಗಿದ್ದ. ಈ ಬಗ್ಗೆ ಜ್ಯೋತಿಷಿಗಳಿಂದ ವಿವರ ಪಡೆದು ಸಂಚಿತಕರ್ಮದಿಂದ ಬಂದಿರುವ ಈ ಕಾಯಿಲೆಗೆ ರಥಸಪ್ತಮಿ ವ್ರತ ಆಚರಿಸಲು ಹೇಳಿದ್ದರು. ಅದರಂತೆ ರಥಸಪ್ತಮಿಯ ದಿನ ಸೂರ್ಯಾರಾದನೆ ಮಾಡಲಾಗಿ ರಾಜ ಪುತ್ರನು ಆರೋಗ್ಯವಂತನೂ, ಪ್ರಭಾವಶಾಲಿಯೂ ಆದ. ಅಲ್ಲದೆ ಪಾಂಡವರು ವನವಾಸದ ಅವಧಿಯಲ್ಲಿ ಕೃಷ್ಣನ ಆದೇಶದಂತೆ ಸೂರ್ಯಾರಾಧನೆ ಮಾಡಿ ಸೂರ್ಯನಿಂದ ಅಕ್ಷಯ ಪಾತ್ರೆ ಪಡೆದಿದ್ದರು.
ಅಲ್ಲದೆ ರಾವಣನ್ನು ಗೆಲ್ಲಬೇಕಾದರೆ ಶ್ರೀರಾಮನು ಕೂಡ ಅಗಸ್ತ್ಯರ ಉಪದೇಶದಂತೆ ‘ಆದಿತ್ಯ ಹೃದಯ’ ದ ಮೂಲಕ ಸೂರ್ಯನ ಆರಾಧನೆ ಮಾಡಿದನೆಂದು ರಾಮಾಯಣದಲ್ಲಿ ಹೇಳಿದೆ. ಸೂರ್ಯಾರಾಧನೆ ಮಾಡಿ, ಚಿನ್ನ ನೀಡುವ ‘ಶಮಂಥಕಮಣಿ’ ಪಡೆದ ಸತ್ರಾಜಿತ ಕಥೆ ಹರಿವಂಶದಲ್ಲಿ ಬಂದಿದೆ. ಮಯೂರನೆಂಬ ಕವಿ ‘ಸೂರ್ಯಶತಕ’ವೆಂಬ ಗ್ರಂಥ ಬರೆದು ಕಳೆದುಕೊಂಡ ಕಣ್ಣನ್ನು ಮತ್ತೆ ಪಡೆದನೆಂದು ಹೇಳುತ್ತಾರೆ.
ಶ್ರೀರಾಮ ಸೂರ್ಯವಂಶದವನಾದರೆ ಕರ್ಣ, ಸುಗ್ರೀವ, ನವಗ್ರಹಗಳಲ್ಲಿ ಶನಿ ಹಾಗೂ ಯಮ ಸೂರ್ಯನ ಪುತ್ರರಾಗಿದ್ದಾರೆ.
ವ್ಯಕ್ತಿಯ ಜನ್ಮ ಕುಂಡಲಿಯಲ್ಲಿ ಸೂರ್ಯನು ಬಲಹೀನನಾಗಿದ್ದರೆ ಅಥವಾ ಷಡ್ಬಲವಿರದಿದ್ದರೆ ರಥಸಪ್ತಮಿಯಂದು ಸೂರ್ಯಾರಾಧನೆ ಮಾಡಿದರೆ ದೋಷ ಪರಿಹಾರವಾಗುತ್ತದೆ. ಮಾಣಿಕ್ಯದ ಹರಳು ಧರಿಸಲು ಶುಭ ದಿನವಾಗಿದೆ.
ಈ ಸೂರ್ಯರಾಧನೆ ಮುಖ್ಯವಾಗಿ ಭಾರತ, ಮಧ್ಯ ಆಫ್ರಿಕಾ, ಈಜಿಪ್ತ್, ಗ್ರೀಸ್ ಹಾಗೂ ಮಧ್ಯ ಏಷ್ಯಾಗಳಲ್ಲಿ ಆಚರಿಸಲಾಗುತ್ತಿದೆ.
|| ಶ್ರೀ ಸೂರ್ಯಾಷ್ಟೋತ್ತರ ಶತನಾಮಾವಳಿಃ ||
ಧ್ಯೇಯಃಸ್ಸದಾ ಸವಿತೃಮಂಡಲ ಮಧ್ಯವರ್ಥೀ |
ನಾರಾಯಣ ಸರಸಿಜಾಸನ ಸನ್ನಿವಿಷ್ಠಾಃ |
ಕೇಯೂರವಾನ್ ಮಕರಕುಂಡಲವಾನ್ ಕಿರೀಟಿ |
ಹಾರಿ ಹಿರಣ್ಮಯ ವಪುಧೃತ ಶಂಖಚಕ್ರಾ ||
ಓಂ ಅರುಣಾಯ ನಮಃ | ಓಂ ಶರಣ್ಯಾಯ ನಮಃ |
ಓಂ ಕರುಣಾರಸಸಿಂಧವೇ ನಮಃ | ಓಂ ಅಸಮಾನಬಲಾಯ ನಮಃ |
ಓಂ ಆರ್ತರಕ್ಷಣಾಯ ನಮಃ | ಓಂ ಆದಿತ್ಯಾಯ ನಮಃ
ಓಂ ಆದಿಭೂತಾಯ ನಮಃ | ಓಂ ಅಖಿಲಾಗಮವೇದಿನೇ ನಮಃ |
ಓಂ ಅಚ್ಯುತಾಯ ನಮಃ | ಓಂ ಅಖಿಲಜ್ಞಾಯ ನಮಃ || ೧೦ ||
ಓಂ ಅನಂತಾಯ ನಮಃ | ಓಂ ಇನಾಯ ನಮಃ |
ಓಂ ವಿಶ್ವರೂಪಾಯ ನಮಃ | ಓಂ ಇಜ್ಯಾಯ ನಮಃ |
ಓಂ ಇಂದ್ರಾಯ ನಮಃ | ಓಂ ಭಾನವೇ ನಮಃ |
ಓಂ ಇಂದಿರಾಮಂದಿರಾಪ್ತಾಯ ನಮಃ | ಓಂ ವಂದನೀಯಾಯ ನಮಃ |
ಓಂ ಈಶಾಯ ನಮಃ | ಓಂ ಸುಪ್ರಸನ್ನಾಯ ನಮಃ || ೨೦ ||
ಓಂ ಸುಶೀಲಾಯ ನಮಃ | ಓಂ ಸುವರ್ಚಸೇ ನಮಃ |
ಓಂ ವಸುಪ್ರದಾಯ ನಮಃ | ಓಂ ವಸವೇ ನಮಃ |
ಓಂ ವಾಸುದೇವಾಯ ನಮಃ | ಓಂ ಉಜ್ವಲಾಯ ನಮಃ |
ಓಂ ಉಗ್ರರೂಪಾಯ ನಮಃ | ಓಂ ಊರ್ಧ್ವಗಾಯ ನಮಃ |
ಓಂ ವಿವಸ್ವತೇ ನಮಃ | ಓಂ ಉದ್ಯತ್ಕಿರಣಜಾಲಾಯ ನಮಃ || ೩೦ ||
ಓಂ ಹೃಷಿಕೇಶಾಯ ನಮಃ | ಓಂ ಊರ್ಜಸ್ವಲಾಯ ನಮಃ |
ಓಂ ವೀರಾಯ ನಮಃ | ಓಂ ನಿರ್ಜರಾಯ ನಮಃ |
ಓಂ ಜಯಾಯ ನಮಃ | ಓಂ ಊರುದ್ವಯಾಭಾವರೂಪಯುಕ್ತಸಾರಥಯೇ ನಮಃ |
ಓಂ ಋಷಿವಂದ್ಯಾಯ ನಮಃ | ಓಂ ರುಗ್ಫ್ರಂತೇ ನಮಃ |
ಓಂ ಋಕ್ಷಚಕ್ರಾಯ ನಮಃ | ಓಂ ಋಜುಸ್ವಭಾವಚಿತ್ತಾಯ ನಮಃ || ೪೦ ||
ಓಂ ನಿತ್ಯಸ್ತುತಾಯ ನಮಃ | ಓಂ ಋಕಾರ ಮಾತೃಕಾವರ್ಣರೂಪಾಯ ನಮಃ |
ಓಂ ಉಜ್ಜಲತೇಜಸೇ ನಮಃ | ಓಂ ಋಕ್ಷಾಧಿನಾಥಮಿತ್ರಾಯ ನಮಃ |
ಓಂ ಪುಷ್ಕರಾಕ್ಷಾಯ ನಮಃ | ಓಂ ಲುಪ್ತದಂತಾಯ ನಮಃ |
ಓಂ ಶಾಂತಾಯ ನಮಃ | ಓಂ ಕಾಂತಿದಾಯ ನಮಃ |
ಓಂ ಘನಾಯ ನಮಃ | ಓಂ ಕನತ್ಕನಕಭೂಷಾಯ ನಮಃ || ೫೦ ||
ಓಂ ಖದ್ಯೋತಾಯ ನಮಃ | ಓಂ ಲೂನಿತಾಖಿಲದೈತ್ಯಾಯ ನಮಃ |
ಓಂ ಸತ್ಯಾನಂದಸ್ವರೂಪಿಣೇ ನಮಃ | ಓಂ ಅಪವರ್ಗಪ್ರದಾಯ ನಮಃ |
ಓಂ ಆರ್ತಶರಣ್ಯಾಯ ನಮಃ | ಓಂ ಏಕಾಕಿನೇ ನಮಃ |
ಓಂ ಭಗವತೇ ನಮಃ | ಓಂ ಸೃಷ್ಟಿಸ್ಥಿತ್ಯಂತಕಾರಿಣೇ ನಮಃ |
ಓಂ ಗುಣಾತ್ಮನೇ ನಮಃ | ಓಂ ಘೃಣಿಭೃತೇ ನಮಃ || ೬೦ ||
ಓಂ ಬೃಹತೇ ನಮಃ | ಓಂ ಬ್ರಹ್ಮಣೇ ನಮಃ |
ಓಂ ಐಶ್ವರ್ಯದಾಯ ನಮಃ | ಓಂ ಶರ್ವಾಯ ನಮಃ |
ಓಂ ಹರಿದಶ್ವಾಯ ನಮಃ | ಓಂ ಶೌರಯೇ ನಮಃ |
ಓಂ ದಶದಿಕ್ ಸಂಪ್ರಕಾಶಾಯ ನಮಃ | ಓಂ ಭಕ್ತವಶ್ಯಾಯ ನಮಃ |
ಓಂ ಓಜಸ್ಕರಾಯ ನಮಃ | ಓಂ ಜಯಿನೇ ನಮಃ || ೭೦ ||
ಓಂ ಜಗದಾನಂದಹೇತವೇ ನಮಃ | ಓಂ ಜನ್ಮಮೃತ್ಯುಜರಾವ್ಯಾಧಿ ವರ್ಜಿತಾಯ ನಮಃ |
ಓಂ ಔನ್ನತ್ಯಪದಸಂಚಾರರಥಸ್ಥಾಯ ನಮಃ | ಓಂ ಅಸುರಾರಯೇ ನಮಃ |
ಓಂ ಕಮನೀಯಕರಾಯ ನಮಃ | ಓಂ ಅಬ್ಜವಲ್ಲಭಾಯ ನಮಃ |
ಓಂ ಅಂತರ್ಬಹಿಃ ಪ್ರಕಾಶಾಯ ನಮಃ | ಓಂ ಅಚಿಂತ್ಯಾಯ ನಮಃ |
ಓಂ ಆತ್ಮರೂಪಿಣೇ ನಮಃ | ಓಂ ಅಚ್ಯುತಾಯ ನಮಃ || ೮೦ ||
ಓಂ ಅಮರೇಶಾಯ ನಮಃ | ಓಂ ಪರಸ್ಮೈಜೋತಿಷೇ ನಮಃ |
ಓಂ ಅಹಸ್ಕರಾಯ ನಮಃ | ಓಂ ರವಯೇ ನಮಃ |
ಓಂ ಹರಯೇ ನಮಃ | ಓಂ ಪರಮಾತ್ಮನೇ ನಮಃ |
ಓಂ ತರುಣಾಯ ನಮಃ | ಓಂ ವರೇಣ್ಯಾಯ ನಮಃ |
ಓಂ ಗ್ರಹಾಣಾಂಪತಯೇ ನಮಃ | ಓಂ ಭಾಸ್ಕರಾಯ ನಮಃ || ೯೦ ||
ಓಂ ಆದಿಮಧ್ಯಾಂತರಹಿತಾಯ ನಮಃ | ಓಂ ಸೌಖ್ಯಪ್ರದಾಯ ನಮಃ |
ಓಂ ಸಕಲ ಜಗತಾಂಪತಯೇ ನಮಃ | ಓಂ ಸೂರ್ಯಾಯ ನಮಃ |
ಓಂ ಕವಯೇ ನಮಃ | ಓಂ ನಾರಾಯಣಾಯ ನಮಃ |
ಓಂ ಪರೇಶಾಯ ನಮಃ | ಓಂ ತೇಜೋರೂಪಾಯ ನಮಃ |
ಓಂ ಶ್ರೀಂ ಹಿರಣ್ಯಗರ್ಭಾಯ ನಮಃ | ಓಂ ಹ್ರೀಂ ಸಂಪತ್ಕರಾಯ ನಮಃ || ೧೦೦||
ಓಂ ಐಂ ಇಷ್ಟಾರ್ಥದಾಯ ನಮಃ | ಓಂ ಸುಪ್ರಸನ್ನಾಯ ನಮಃ |
ಓಂ ಶ್ರೀಮತೇ ನಮಃ | ಓಂ ಶ್ರೇಯಸೇ ನಮಃ |
ಓಂ ಭಕ್ತಕೋಟಿಸೌಖ್ಯಪ್ರದಾಯಿನೇ ನಮಃ | ಓಂ ನಿಖಿಲಾಗಮವೇದ್ಯಾಯ ನಮಃ |
ಓಂ ನಿತ್ಯಾನಂದಾಯ ನಮಃ | ಓಂ ಶ್ರೀ ಸೂರ್ಯನಾರಾಯಣ ಸ್ವಾಮಿನೇ ನಮಃ || ೧೦೮ ||
|| ಶ್ರೀ ಸೂರ್ಯಾಷ್ಟೋತ್ತರ ಶತನಾಮಾವಳಿಃ ಸಂಪೂರ್ಣಮ್ ||
Sangraha
Subscribe to:
Post Comments (Atom)
Thank u
ReplyDelete