Wednesday, 6 February 2019

ಯಾವ ಲಗ್ನದವರಿಗೆ ಯಾವಾಗ ರಾಜಯೋಗ?

ಯಾವ ಲಗ್ನದವರಿಗೆ ಯಾವಾಗ ರಾಜಯೋಗ? ಜಾತಕದಲ್ಲಿನ ಕೆಲವು ಗ್ರಹಗಳ ಸಂಯೋಗ ಮತ್ತು ಸ್ಥಿತಿಗಳ ಆಧಾರದಲ್ಲಿ ವ್ಯಕ್ತಿಯ ರಾಜಯೋಗಗಳನ್ನು ಕಂಡುಹಿಡಿಯಬಹುದು. ರಾಜಯೋಗ ಎಂದರೆ ಈಗಿನ ಪರಿಸ್ಥಿತಿಯಲ್ಲಿ ರಾಜ್ಯಸರ್ಕಾರದ ಐ.ಎ.ಎಸ್‌., ಐ.ಪಿ.ಎಸ್‌. ಸರಿಸಮಾನರಾದ ಉನ್ನತ ಅಧಿಕಾರಿಗಳು, ನಗರಸಭಾ ಸದಸ್ಯರು, ವಿಧಾನಸಭಾ ಸದಸ್ಯರು, ಲೋಕಸಭಾ ಸದಸ್ಯರು, ಮಂತ್ರಿಗಳು, ಮುಖ್ಯಮಂತ್ರಿಗಳು ಹಾಗೂ ಪ್ರಧಾನಮಂತ್ರಿಗಳನ್ನು ರಾಜ ಅಥವಾ ರಾಜಸಮಾನರೆಂದು ಗುರುತಿಸಬಹುದು. ಮೇಷಲಗ್ನ : ಗುರು, ಶನಿ, ಕಟಕ, ತುಲಾರಾಶಿಯಲ್ಲಿದ್ದು ಯಾವುದೇ ಪಾಪಗ್ರಹಗಳ ಸಂಬಂಧವಿಲ್ಲದೆ ಇದ್ದು ಅವುಗಳ ದೆಶೆಯೇ ನಡೆಯುತ್ತಿದ್ದರೆ ರಾಜಯೋಗವಿರುತ್ತದೆ. ವೃಷಭ ಲಗ್ನ : ಲಗ್ನದಲ್ಲಿ ಕುಜ, ಸಿಂಹರಾಶಿಯಲ್ಲಿ ಚಂದ್ರ, ಕುಂಭದಲ್ಲಿ ಗುರು, ಮಕರದಲ್ಲಿ ರವಿ, ಮೀನದಲ್ಲಿ ಶನಿ ಇದ್ದರೆ ಆ ಜಾತಕನು ರಾಜಯೋಗ ಪಡೆಯುತ್ತಾನೆ. ಮಿಥುನ ಲಗ್ನ : ಬುಧ, ಶುಕ್ರ 1, 4, 5, 7, 9, 10 ಸ್ಥಾನದಲ್ಲಿದ್ದರೆ ರಾಜಯೋಗ ಉಂಟಾಗುತ್ತದೆ. ಬುಧ, ಶುಕ್ರ, ಶನಿ, ಚಂದ್ರ ಕಲೆತಿದ್ದರೆ ಆದು ಕೇಂದ್ರ ತ್ರಿಕೋನವಾದರೆ ರಾಜಯೋಗ ಲಭಿಸುತ್ತದೆ. ಕಟಕ ಲಗ್ನ : ಶುಕ್ರ, ಶನಿ, 4, 5, 7, 9, 10 ಸ್ಥಾನದಲ್ಲಿದ್ದರೆ ಕಲೆತಿದ್ದರೆ ರಾಜಯೋಗ ಪ್ರಾಪ್ತಿಯಾಗುತ್ತದೆ. ದ್ವಿತೀಯದಲ್ಲಿ ಚಂದ್ರ, ಕುಜ, ಗುರು, ಪಂಚಮದಲ್ಲಿ ರವಿ, ಶುಕ್ರರಿದ್ದರೆ ರಾಜಯೋಗ ಬರುತ್ತದೆ. ಸಿಂಹ ಲಗ್ನ : ಲಗ್ನದಲ್ಲಿ ಕುಜ, ಚತುರ್ಥದಲ್ಲಿ ಶನಿ, ಪಂಚಮ ರಾಹು, ಭಾಗ್ಯದಲ್ಲಿ ಚಂದ್ರ, ಶುಕ್ರ, ರಾಜ್ಯದಲ್ಲಿ ರವಿ, ಬುಧರಿದ್ದರೆ ಉನ್ನತ ರಾಜಯೋಗ ಉಂಟಾಗುತ್ತದೆ. ಕನ್ಯಾ ಲಗ್ನ : ದ್ವಿತೀಯ ಸ್ಥಾನದಲ್ಲಿ ರವಿ, ಶುಕ್ರರ ಸಂಬಂಧವಿದ್ದರೆ ರಾಜಯೋಗ ಬರುತ್ತದೆ. ಮೇಷದಲ್ಲಿ ರವಿ, ಸಿಂಹದಲ್ಲಿ ಕುಜನಿದ್ದರೆ ರಾಜಯೋಗ ಲಭಿಸುತ್ತದೆ. ತುಲಾ ಲಗ್ನ : ಲಗ್ನದಲ್ಲಿ ಚಂದ್ರ, ಶುಕ್ರ, ದ್ವಿತೀಯದಲ್ಲಿ ರವಿ, ಬುಧ, ತೃತೀಯದಲ್ಲಿ ಗುರು, ಪಂಚಮದಲ್ಲಿ ಕುಜನಿದ್ದರೆ ರಾಜಯೋಗ ಪ್ರಾಪ್ತಿಯಾಗುತ್ತದೆ. ವೃಶ್ಚಿಕ ಲಗ್ನ : ಸಪ್ತಮ ಸ್ಥಾನದಲ್ಲಿ ರವಿ, ಬುಧ, ಶುಕ್ರ ಕಲೆತರೆ ರಾಜಯೋಗ ಬರುತ್ತದೆ. ಜನ್ಮದಲ್ಲಿ ಗುರು ಇದ್ದು ಗುರುದೆಸೆ ಪ್ರಾಪ್ತಿಯಾದರೆ ರಾಜಯೋಗ ಉಂಟಾಗುತ್ತದೆ. ಧನು ಲಗ್ನ: ಗುರು ಒಬ್ಬನೇ ಷಷ್ಟಮ ಸ್ಥಾನದಲ್ಲಿ ಅಥವಾ 8, 12ರ ಸ್ಥಾನದಲ್ಲಿದ್ದರೆ ರಾಜಯೋಗ ಬರುತ್ತದೆ. ಚಂದ್ರನು ರಾಹು ಅಥವಾ ಕೇತುವಿನೊಂದಿಗೆ ಮೇಷ, ಸಿಂಹ ರಾಶಿಯಲ್ಲಿದ್ದರೆ ರಾಜಯೋಗ ಪ್ರಾಪ್ತಿಯಾಗುತ್ತದೆ. ಮಕರ ಲಗ್ನ : ಲಗ್ನದಲ್ಲಿ ಬುಧ, ಶುಕ್ರ, ಚತುರ್ಥದಲ್ಲಿ ಚಂದ್ರ, ಭಾಗ್ಯದಲ್ಲಿ ಗುರು ಇದ್ದರೆ ಒಳ್ಳೆಯ ರಾಜಯೋಗ ಬರುತ್ತದೆ. ಕುಂಭ ಲಗ್ನ : ಲಗ್ನದಲ್ಲಿ ರವಿ, ಶುಕ್ರ, ದಶಮದಲ್ಲಿ ರಾಹು ಇದ್ದರೆ ಶುಕ್ರ ರಾಹು ಕಲೆತು ಲಗ್ನ ಅಥವಾ ಅಷ್ಟಮ ಸ್ಥಾನದಲ್ಲಿದ್ದರೆ ರಾಹು ದೆಸೆಯಲ್ಲಿ ರಾಜಯೋಗ ಪ್ರಾಪ್ತಿಯಾಗುತ್ತದೆ. ಮೀನ ಲಗ್ನ : ಚಂದ್ರ ಗುರು ಕೇಂದ್ರ ಕೋನದಲ್ಲಿ ಕಲೆತಿದ್ದರೂ ಆ ದಿಸೆಯಲ್ಲಿ ರಾಜಯೋಗವಿರುತ್ತದೆ. ಮೀನದಲ್ಲಿ ಚಂದ್ರನಿದ್ದು ಗುರು ದೃಷ್ಟಿಗೆ ಒಳಗಾದರೆ ರಾಜಯೋಗ ಬರುತ್ತದೆ.

No comments:

Post a Comment