Wednesday, 13 February 2019

*ಗ್ರಹಗಳು ಜಾತಕನ ಕುಂಡಲಿಯಲ್ಲಿ ಬಲಹೀನರಾಗಿದ್ದರೆ ಉಂಟಾಗುವ ತೊಂದರೆಗಳು ಇವುಗಳ ಪರಿಹಾರಗಳು

*ಗ್ರಹಗಳು ಜಾತಕನ ಕುಂಡಲಿಯಲ್ಲಿ ಬಲಹೀನರಾಗಿದ್ದರೆ ಉಂಟಾಗುವ ತೊಂದರೆಗಳು ಇವುಗಳ ಪರಿಹಾರಗಳು* ರವಿ:- *ಗ್ರಹಗಳು ಜಾತಕನ ಕುಂಡಲಿಯಲ್ಲಿ ಬಲಹೀನರಾಗಿದ್ದರೆ ಉಂಟಾಗುವ ತೊಂದರೆಗಳು ಇವುಗಳ ಪರಿಹಾರಗಳು* ಗ್ರಹಗಳು:- ೧)ನೀಚತ್ವದಲ್ಲಿ ೨)ಶತೃಕ್ಷೇತ್ರಗಳಲ್ಲಿ ೩)ದುಸ್ಥಾನಗಳಲ್ಲಿ ಅಶುಭರ ಸಂಪರ್ಕದಲ್ಲಿದ್ದರೆ ೪)ಅಸ್ತಂಗತ ೫)೫,೮,೯,೪,೧೨ನೇ ಸ್ಥಾನಳಲ್ಲಿದ್ದರೆ. ೬)ಕೇಂದ್ರಾದಿಪತಿಯಾಗಿ ತನ್ನದಲ್ಲದ ಮತ್ತೊಂದು ಕೇಂದ್ರದಲ್ಲಿದರೆ. ೭)ಗ್ರಹ ಯುದ್ದದಲ್ಲಿ ಪರಾಜಿತ ಈ ರೀತಿ ಇದ್ದಾಗ ಗ್ರಹಗಳು ಬಲಹೀನರೆಂದು ಪರಿಗಣಿಸಲಾಗುತ್ತದೆ. *ರವಿಯಿಂದ ಉಂಟಾಗುವ ತೊದರೆಗಳು ಮತ್ತು ಅದಕ್ಕೆ ಪರಿಹಾರಗಳು* ತೊಂದರೆಗಳು:- ಆತ್ಮ ವಿಶ್ವಾಸದ ಗೌರವದ ಕೊರತೆ,ದೈರ್ಯ,ಉತ್ಸಾಹಗಳು ಇಲ್ಲದಿರುವಿಕೆ,ಇತರರ ಬಗ್ಗೆ ಹೆದರಿಕೆ. ಮುನ್ನುಗ್ಗುವವರಲ್ಲ. ಎಲ್ಲದಕ್ಕೂ ಇತರರ ಮೇಲೆ ಸದಾ ಅವಲಂಬನೆ ಜೀವನದಲ್ಲಿ ಸೋಲು,ಮೇಲಾಧಿಕಾರಿಗಳಲ್ಲಿ ಸದಾವಿರಸ,ತಂದೆಯ ಅಸಹಕಾರ,ಮಗನಿಂದ ಮಾನಸಿಕ ಹಿಂಸೆ,ಬಲಗಣ್ಣಿನಲ್ಲಿ ತೊಂದರೆ,ಜೀವನದಲ್ಲಿ ಸಮಸ್ಯೆಗಳಿಂದ ನೊಂದು ಸಂಸಾರದಲ್ಲಿ ಯಾರಾದರು ಸನ್ಯಾಸಿಯಾಗುತ್ತಾರೆ,ಕಳ್ಲತನ ಅಥವ ಸರ್ಕಾರದಿಂದ ಶಿಕ್ಷೆ,ಪತ್ನಿಯ ಸಮಸ್ಯೆ,ಇದರಿಂದಾಗಿ ಮಾನದ್ಸಿಕನೋವು,ಉತ್ಸಾಹಹೀನತೆ,ಅಶಕ್ತತೆ,ಹಸಿವು ಇಲ್ಲದಿರುವಿಕೆ,ಹಾಗು ಅಜೀರ್ಣತೆ,ಕ್ಷೀಣನಾಡಿಬಡಿತ,ಹೃದಯದೌರ್ಬಲ್ಯತೆ,ರಕ್ತ ಚಲನೆಯಲ್ಲಿ ಕೊರತೆ,ನರದೌರ್ಬಲ್ಯ,ದೃಷ್ಟಿದೋಷ,ಸಂದಿವಾತ ಮತ್ತು ಮೂಳೆಗಳು ದುರ್ಬಲವಾಗಿರುತ್ತವೆ. ಪರಿಹಾರಗಳು:- *ಶಿವಮತ್ತು ರವಿಯನ್ನು ಆರಾಧಿಸಿ,೨೩ರಿಂದ೨೪ನೇ ವಯಸ್ಸಿನೊಳಗೆ ವಿವಾಹವಾಗಿ,ರವಿಗೆ ಸಂಬಂದಿಸಿದ ಇತರರೌ ನೀಡಿದ ವಸ್ತುಗಳನ್ನು ದೇವಸ್ಥಾನಕ್ಕೆ ದಾನಮಾಡಿ,ಬಿಳಿ ಅಥವ ಗುಲಾಬಿಬಣ್ಣದ ವಸ್ತುಗಳನ್ನು ಉಪಯೋಗಿಸಿ,ಸಕ್ಕರೆನೀರನ್ನು ಗುಲಾಬಿ ಪುಷ್ಪಗಳೊಂದಿಗೆ ಉದಯಿಸುತ್ತಿರುವ ರವಿಗೆ ಅರ್ಪಿಸಿ. *ಸರ್ಕಾರದಲ್ಲಿನ ಉದ್ಯೋಗಿಯನ್ನು ಅಥವ ವೈದ್ಯರನ್ನು ಆದರಿಸಿ. *ಕುರುಡರಿಗೆ,ಕೋತಿ,ಅಥವ ಹುಂಜಕ್ಕೆ ಆಹಾರವನ್ನು ನೀಡಿ. *ಸಂಜೆ ಇರುವೆಗಳಿಗೆ ಅಕ್ಕಿ,ಸಕ್ಕರೆ ಎಳ್ಲನ್ನು ಕೊಡಿ. *ಆಹಾರ ತೆಗೆದುಕೊಳ್ಲುವುದಕ್ಕೆ ಮುಂಚೆ ಅಗ್ನಿಗೆ ಸ್ವಲ್ಪ ಅರ್ಪಿಸಿ. *ಬೆಲ್ಲ,ತಾಮ್ರ,ಚಿನ್ನವನ್ನು ದಾನಮಾಡಿ. *ತಾಮ್ರದ ಅಥವ ಲೋಹದ ನಾಣ್ಯವನ್ನು ಹರಿಯುವ ನೀರಿನಲ್ಲಿ ಹಾಕಿ *ಸೂರ್ಯಗ್ರಹಣದ ದಿನ ಹರಿಯುವ ನೀರಲ್ಲಿ ಇದ್ದಿಲು,ಸಾಸಿವೆಕಾಳು ಅಥವ ಬಾರ್ಲಿಯನ್ನು ಹಾಕಿ. *ಕೆಲಸವನ್ನು ಆರಂಬಿಸುವ ಮೊದಲು ಸ್ವಲ್ಪ ಸಿಹಿಯನ್ನು ತಿಂದು ನೀರುಕುಡಿಯಿರಿ. *ಮನೆಯಲ್ಲಿ ಅಡುಗೆ ಮನೆ ಪೂರ್ವದ ಗೋಡೆಯ ಕಡೆ ಇರಲಿ. *ಸುಳ್ಳು ಸಕ್ಷ್ಯ ಹೇಳದಿರಿ,ಮಾಂಸ ಮತ್ತು ಮದ್ಯಗಳನ್ನು ಬಿಡಿ. *ಉಪ್ಪನ್ನು ಕಡಿಮೆ ಉಪಯೋಗಿಸಿ ಮತ್ತು ಭಾನುವಾರಗಳಂದು ಉಪವಾಸಮಾಡಿ. *ವಿಷ್ಣುವನ್ನು ಆರಾಧಿಸಿ ಮತ್ತು ಹರಿವಂಶವನ್ನು ಓದಿ. *ದೇವಾಲಯಕ್ಕೆ ದಾನಮಾಡಿ. *ತಾಮ್ರದ ಪಾತ್ರೆಯಲ್ಲಿ ಬಾದಾಮಿ ಅಥವ ನೀರನ್ನು ರಾತ್ರಿ ತಲೆಯ ಬಳಿ ಇಟ್ಟುಕೊಂಡು ಅದನ್ನು ಬೆಳಗ್ಗೆ ದೇವಸ್ಥಾನಕ್ಕೆ ಕೊಡಿ. *ಗ್ರಹಗಳು ಜಾತಕನ ಕುಂಡಲಿಯಲ್ಲಿ ಬಲಹೀನರಾಗಿದ್ದರೆ ಉಂಟಾಗುವ ತೊಂದರೆಗಳು ಇವುಗಳ ಪರಿಹಾರಗಳು* ಚಂದ್ರ:- ಚಂದ್ರ:- ಜನನ ಕುಂಡಲಿಯಲ್ಲಿ ಚಂದ್ರನು ರಾಹು ಮತ್ತು ಶನಿಗಳ ಸಂಪರ್ಕದಲ್ಲಿ ಮತ್ತು ಕ್ಷೀಣನಾಗಿದ್ದರೆ,ಬಾವನಾತ್ಮಕತೆಯಲ್ಲಿ ಅಸಮತೋಲನ,ಇತರರಬಗ್ಗೆ ಆತ್ಮೀಯತೆಯಿಂದಿರಲು ಹೆದರಿಕೆ,ಜೀವನದಲ್ಲಿ ತುಮುಲಗಳನ್ನು ಸಹಿಸಲಾರರು ಸಂತೃಪ್ತಿ ಇರುವುದಿಲ್ಲ ರಹಸ್ಯಗಳನ್ನು ಕಾಪಾಡಲಾರರು,ಋಣಾತ್ಮಕತೆ,ಮಂಕು ಮುಚ್ಚಿದ ಮನಸ್ಸು,ತಾಯಿಯು ಸಹ ಜೀವನದಲ್ಲಿ ಹಲವಾರು ರೀತಿಯಲ್ಲಿ ಕಷ್ಟಗಳನ್ನು ಅನುಭವಿಸಿರುವರು,ಅಶಕ್ತತೆ,ದೇಹದಲ್ಲಿ ದ್ರವಗಳ ಕೊರತೆ,ತೂಕನಷ್ಟ,ಒಣಗಿದ ಚರ್ಮ,ಮಲಬದ್ದತೆ,ನರಗಳ ಊತ,ಮೂತ್ರಕೋಶದ ತೊಂದರೆ,ಶ್ವಾಸಕೋಶಗಳ ನಿರ್ಬಲತೆ,ತಾಪವನ್ನು ತಾಳಲಾರರು,ಔಷದಿಗಳು ಉಪಯೋಗವಾಗುವುದಿಲ್ಲ ಹೃದಯ ಅಥವ ಸ್ತನಗಳಲ್ಲಿ ತೊಂದರೆ,ಮದ್ಯವ್ಯಸನಿಗಳಾಗುವರು,ಸೊಸೆಯೊಂದಿಗೆ ವಿನಾಕಾರಣ ಕಲಹಗಳು,ಮಗಳು ಅತ್ತೆಮನೆಯಲ್ಲಿ ಅಸುಖಿ,ಮಕ್ಕಳವಿದ್ಯಾಬ್ಯಾಸದಲ್ಲಿ ತೊಂದರೆಗಳು,ಹಾಲುಕೊಡುವ ಹಸುಗಳು ಸಾಯುತ್ತವೆ,ಕೊಳವೆಬಾವಿ ಒಣಗುತ್ತದೆ,ಸಂಸಾರದಲ್ಲಿ ಒಡಕು ಹೆಚ್ಚಾಗುತ್ತದೆ,ಪರಸ್ತ್ರೀಯರ ಮೇಲೆ ಹಣವನ್ನು ವ್ಯೆಚ್ಚಮಾಡುವಿರಿ,ಅನಿರೀಕ್ಷಿತ ಅನಾರೋಗ್ಯ,ಹಣಕಾಸು ತೊಂದರೆ ಒಳ್ಳೆಕೆಲಸ ಮಾಡಿದರು ಕೆಟ್ಟಹೆಸರು ತಪ್ಪುವುದಿಲ್ಲ,ಗತವನ್ನು ಚಿಂತಿಸಿ ಅತಿಯಾಗಿ ಮರುಗುವಿರಿ,ಸ್ತ್ರೀಯರಲ್ಲಿ ಬಂಜೆತನ ಮತ್ತು ಮುಟ್ಟಿನತೊಂದರೆಗಳು. ಪರಿಹಾರಗಳು:- *ದುರ್ಗೆ ಅಥವ ಚಾಮುಂಡಿಯನ್ನು ಆರಾಧಿಸಿ,ಶಿವಲಿಂಗಕ್ಕೆ ಅಭಿಷೇಕ ಮಾಡಿಸಿ(ಚಂದ್ರನು ಮೇಷ ಅಥವ ವೃಶ್ಚಿಕಗಳಿಇದ್ದರೆ) *ಹಾಲು ಮತ್ತು ನೀರನ್ನು ಕುಡಿಯಲು ಬೆಳ್ಳಿಯ ಲೋಟವನ್ನು ಉಪಯೋಗಿಸಿ. *ನಿಮ್ಮ ತಾಯಿಯ ಕೈಯಿಂದ ಹಳೆಯ ಅಕ್ಕಿ ಮತ್ತು ಬೆಳ್ಳಿಯ ನಾಣ್ಯವನ್ನು ತಗೆದುಕೊಂಡು ಒಂದು ಬಿಳಿಯ ವಸ್ತ್ರದಲ್ಲಿ ಕಟ್ಟಿ ಮನೆಯಲ್ಲಿಟ್ಟಿರಿ. *ಬಿಳಿಯ ಬಟ್ಟೆಯಲ್ಲಿ ಸ್ವಲ್ಪ ಅಕ್ಕಿಯನ್ನು ಕಟ್ಟಿ ಸೋಮವಾರಗಳಂದು ಹರಿಯುವ ನೀರಲ್ಲಿ ಹಾಕಿ. *೪೦ದಿನಗಳಕಾಲ ಮಲಗುವಾಗ ತಲೆಯ ಬಳಿ ಒಂದುಪಾತ್ರೆಯಲ್ಲಿ ನೀರನ್ನು ಇಟ್ಟುಕೊಂಡು ಅಶ್ವತ್ತ ಮರದ ಬುಡಕ್ಕೆ ಹಾಕಿ. *ರಾತ್ರಿಯ ಹೊತ್ತು ಹಾಲನ್ನು ಕುಡಿಯಬೇಡಿ. *ಮಗನ ಜೊತೆ ಪ್ರಯಾಣಿಸುವಾಗ ಹರಿಯುವ ನೀರಿನಲ್ಲಿ ತಾಮ್ರದ ನಾಣ್ಯವನ್ನು ಹಾಕಿ. *ರುದ್ರಭೂಮಿಯಲ್ಲಿನ ಬಾವಿಯ ನೀರನ್ನು ತಂದು ಮನೆಯಲ್ಲಿ ಇಟ್ಟುಕೊಳ್ಳಿ. *ಎರಡು ಜೊತೆ ಬೆಳ್ಳಿ ಮತ್ತು ಮುತ್ತಿನ ಚೂರುಗಳನ್ನು ತೆಗೆದುಕೊಂಡು ಅದರಲ್ಲಿ ಒಂದು ಜೊತೆಯನ್ನು ಹರಿಯುವ ನೀರಲ್ಲಿ ಹಾಕಿ ಮತ್ತೊಂದನ್ನು ನಿಮ್ಮ ಜೊತೆಯಲ್ಲಿ ಇಟ್ಟುಕೊಳ್ಳಿ. *ತಾಯಿಯನ್ನು ನಿಮ್ಮ ಜೊತೆಯಲ್ಲಿ ಇಟ್ಟುಕೊಳ್ಳಿ. *ಮಗ ಮತ್ತು ಮೊಮ್ಮೊಗನೊಡನೆ ದೇವಸ್ಥಾನಕ್ಕೆ ಹೋಗಿ ಪಿತೃಕಾರ್ಯವನ್ನು ಮಾಡಿ *ಸರಿಯಾಗಿ ನಿದ್ರೆ ಬರದಿದ್ದರೆ ಮಂಚದ ನಾಲ್ಕು ಕಾಲುಗಳಿಗು ತಾಮ್ರದ ಮೊಳೆಯನ್ನು ಹೊಡೆಯಿರಿ. *೨೪ನೇ ವಯಸ್ಸಿಗೆ ಮುಂಚೆ ವಿವಾಹವಾಗಬಾರದು. *ಮೊದಲಬಾರಿಗೆ ಪತ್ನಿಯನ್ನು ಅವರ ಮನೆಯಿಂದ ಕರೆತರುವಾಗ ಸ್ವಲ್ಪ ಬೆಳ್ಳಿಯನ್ನು ಸಹ ಜೊತೆಯಲ್ಲಿ ತಗೆದುಕೊಂಡು ಬನ್ನಿ. *ಆಸ್ಪತ್ರೆ ಅಥವ ರುದ್ರಭೂಮಿಯಲ್ಲಿ ಬಾವಿಯನ್ನು ತೆಗೆಯಿಸಿ. *ಹಾಲು ತುಂಬಿದ ಪಾತ್ರೆ ಅಥವ ಬಾಟಲನ್ನು ನಿರ್ಜನ ಪ್ರದೇಶದಲ್ಲಿ ನೆಲದಲ್ಲಿ ಹುದುಗಿಸಿ. *ಅನಾಥ ಮಕ್ಕಳೀಗೆ ಹಾಲನ್ನು ಕೊಡಿ. *ಸ್ವಲ್ಪ ಬೆಳ್ಳಿಯನ್ನು ಮನೆಯ ತಳಪಾಯದಲ್ಲಿ ಹುದುಗಿಸಿ ಅದರಲ್ಲಿನ ಸ್ವಲ್ಪಬಾಗವನ್ನು ಮನೆಯಲ್ಲಿ ಇರಿಸಿ. *ಚಂದ್ರಗ್ರಹಣದಲ್ಲಿ ಸ್ವಲ್ಪ ಇದ್ದಿಲು,ಬಾರ್ಲಿ,ಬಿಳಿಸಾಸಿವೆಕಾಳುಗಳನ್ನು ಹರಿಯುವ ನೀರಲ್ಲಿ ಹಾಕಿ. *ಹಸಿರು ವಸ್ತ್ರವನ್ನು ಕನ್ಯೆಗೆ ದಾನಮಾಡಿ. *ಬಿಳಿಯ ಮೊಲವನ್ನು ಸಾಕಿ. *ಕೆಲಸಕ್ಕೆ ಮೊದಲು ಹಾಲು ಅಥವ ನೀರು ಕುಡಿಯಿರಿ. *ಬೆಳ್ಳಿಯ ಉಂಗುರದಲ್ಲಿ ಮುತ್ತನ್ನು ಹಾಕಿ ಉಂಗುರದ ಬೆರಳಿಗೆ ಹಾಕಿಕೊಳ್ಳಿ ಮತ್ತು ಸೋಮವಾರಗಳಂದು ಉಪವಾಸ ಮಾಡಿ. *ನಿರ್ವೀರ್ಯತೆಗೆ ಬಂಗಾರದ ಕಡ್ಡಿಯನ್ನು ಕೆಂಪಗೆ ಕಾಯಿಸಿ ೧೧ ಸಲ ನೀರಲ್ಲಿ ಹದ್ದಿನಂತರ ಆ ನೀರನ್ನು ಕುಡಿಯಿರಿ. *ಗ್ರಹಗಳು ಜಾತಕನ ಕುಂಡಲಿಯಲ್ಲಿ ಬಲಹೀನರಾಗಿದ್ದರೆ ಉಂಟಾಗುವ ತೊಂದರೆಗಳು ಇವುಗಳ ಪರಿಹಾರಗಳು* ಕುಜ:- ಕುಜ:- ಉತ್ಸಾಹ ರಹಿತರು,ಯಾವುದೇ ಕೆಲಸವನ್ನು ಮಾಡಲು ಅನರ್ಹತೆ,ನಿರ್ಬೀತಿಯಿಂದ ಇರಲಾರರು,ಹಾಗು ತಮ್ಮ ಸ್ವಂತ ಬಲದ ಮೇಲೆ ನಿಲ್ಲರಾರರು,ಇತರರ ಅಧಿಕಾರಕ್ಕೆ ದಬ್ಬಾಳಿಕೆಗೆ ಸುಲಬವಾಗಿ ಒಳಗಾಗುವವರು,ಕೋರ್ಟು ವ್ಯವಹಾರಗಳಲ್ಲಿ ಸಿಲುಕುವವರು,ಇದರಿಂದ ನಷ್ಟಗಳನ್ನು ಅನುಭವಿಸಿವವರು. ಅನಿರೀಕ್ಷಿತವಾಗಿ ಸ್ಥಿರಾಸ್ಥಿಯು ಮಾರಾಟಕ್ಕೆ ಬರುತ್ತದೆ,ಅಥವ ಇತರರ ಅನುಬೋಗಕ್ಕೆ ಒಳಗಾಗುತ್ತದೆ,ಅಗ್ನಿ,ಕಳ್ಳರು ಮತ್ತು ಸಮಸ್ಯೆಗಳಿಂದ ತೊಂದರೆಗೊಳಗಾಗುತ್ತಾರೆ,ರೋಗ ನಿರೋದಕಶಕ್ತಿ ಇರುವುದಿಲ್ಲ.ಹಸಿವಿಲ್ಲದಿರುವಿಕೆ,ದೇಹ ತೂಕವನ್ನು ಕಳೆದುಕೊಳ್ಳುತ್ತದೆ,ಬಲಹೀನ ಜಠರ-ಕರುಳಿನ ತೊಂದರೆಗಳು,ರಕ್ತಸೋರುವ ಗಾಯಗಳು,ರಕ್ತಹೀನತೆಯಿಂದ ಗಾಯಗಳು ವಾಸಿಯಾಗುವುದು ನಿದಾನವಾಗುತ್ತದೆ. ಪುರುಷರಲ್ಲಿ ನಿರ್ವೀರ್ಯತೆ ಕಿವಿ,ಕೀಲು,ಮಂಡಿ,ಕಾಲುಗಳು ನೋವಿರುತ್ತದೆ,ಪತ್ನಿಗೆ ಅನಾರೋಗ್ಯವಿರುತ್ತದೆ,ದಾಂಪತ್ಯ ಸುಖವಿರುವುದಿಲ್ಲ,ಗರ್ಭಪಾತ ಅಥವ ಹುಟ್ಟಿದ ಮಕ್ಕಳೆಲ್ಲಾ ಸಾಯುವುದು,ಕುಟುಂಬದಲ್ಲಿ ಹೆಚ್ಚಿನ ಸಾವು *ದಾಂಪತ್ಯದ ಹೊರಗೂ ಸಂಬಂದಗಳು* ಮಗನ ತಪ್ಪಿನಿಂದ ಬಾಧೆ,ಸುಖವಿರುವುದಿಲ್ಲ ಹಿರಿಯ ಸೋದರ ಅಥವ ಭಾವನಿಂದ ಸಮಸ್ಯೆಗಳು,ಇವರ ತಾಯಿ ಅಥವ ಸೋದರಿಯೊಡನೆ ಸೋದರರ ಬಂದುಗಳು ಅಥವ ಸ್ನೇಹಿತರ ಸಂಬಂದಗಳು ಹಿತವಾಗಿರುವುದಿಲ್ಲ ಶತೃಗಳು ಹೆಚ್ಚಾಗುವಿಕೆ. ಪರಿಹಾರಗಳು:- *ಸುಬ್ರಮಣ್ಯ,ಹನುಮಂತರನ್ನು ಬೆಸ ರಾಶಿಯವರು/ಚಾಮುಂಡಿಅಥವ ಭದ್ರಕಾಳಿಯನ್ನು ಸಮರಾಶಿಯವರು ಆರಾಧಿಸಿ. *ಮಂಗಳವಾರಗಳಂದು ಉಪವಾಸವನ್ನು ಮಾಡಿ ಸಿಹಿಯನ್ನು ಹಂಚಿ *ಕರ್ಪೂರ,ಮೊಸರು,ಸುಗಂಧ,ದ್ರವ್ಯಗಳನ್ನು ಕೆಂಪು ವಸ್ತ್ರದಲ್ಲಿ ಇರಿಸಿ ನಿರ್ಜನ ಪ್ರದೇಶದಲ್ಲಿ ನೆಲದಲ್ಲಿ ಹುದುಗಿಸಿ. *ಹಾಲನ್ನು ಆಲದ ಮರದ ಬುಡಕ್ಕೆ ಹಾಕಿ ಹಸಿಯ ಮಣ್ಣನ್ನು ತಿಲಕದಂತೆ ಹಚ್ಚಿಕೊಳ್ಳಿ,ಬೇವಿನ ಮರವನ್ನು ನೆಟ್ಟು ನೀರನ್ನು ಹಾಕುತ್ತಿರಿ. *ಸೋದರ ಮತ್ತು ಸೋದರ ಮಾವನನ್ನು ಆರಾಧಿಸಿ. *ನಾಯಿಗಳಿಗೆ ತಂದೂರಿ ಸಿಹಿರೊಟ್ಟಿಯನ್ನು ೪೫ ದಿನಗಳ ಕಾಲ ಕೊಡಿ. *ಸದಾ ಗಾಯತ್ರಿ ಮಂತ್ರ ಅಥವ ಹನುಮಾನ್ ಚಾಲೀಸವನ್ನು ಪಠಿಸುತ್ತಿರಿ. *ರಕ್ತ ದಾನ ಮಾಡಿ. *ಮಂಗಳವಾರ ಮದ್ಯಾಹ್ನಗಳಂದು ಹರಿಯುವ ನೀರಲ್ಲಿ ಬತ್ತಾಸು ಹಾಕಿ *ಚಪಾತಿಯನ್ನು ಸುಡುವ ಮುಂಚೆ ಕಾದ ಹೆಂಚಿನ ಮೇಲೆ ನೀರನ್ನು ಚುಮುಕಿಸಿ. *ಬಂಗಾರ, ಬೆಳ್ಳಿ, ತಾಮ್ರದ ಉಂಗುರವನ್ನು ಧರಿಸಿ. *ತುಕ್ಕು ಹಿಡಿದ ವಸ್ತುಗಳನ್ನು ಮನೆಯಲ್ಲಿ ಇಡಬೇಡಿ. *ಕೆಂಪು ವಸ್ತ್ರಗಳನ್ನು ಸೋದರತ್ತೆ,ಸೋದರಿ,ತಾಯಿಗೆ ಹಾಗು ಹೆಂಡತಿಗೆ ಕೊಡಿ. *ಪಕ್ಷಿಗಳಿಗೆ ಸಿಹಿಯನ್ನು ತಿನ್ನಿಸಿ. *ರೋಗಗಳಿಂದ ಮುಕ್ತರಾಗಲು ಜಿಂಕೆ ಚರ್ಮದ ಮೇಲೆ ಮಲಗಿ. *ಅಗ್ನಿ ಅಪಘಾತಗಳ ತಡೇಗಟ್ಟಲು ಸಕ್ಕರೆಯ ಖಾಲಿ ಚೀಲಗಳನ್ನು ಸಜ್ಜೆಯ ಮೇಲೆ ಇಡಿ.ಬಾವ,ಬಾಮೈದುನ ನೊಂದಿಗೆ ಬಾಗಸ್ಥವ್ಯವಹಾರ ಮಾಡದಿರಿ. *ಪತ್ನಿ ಅಥವ ಮಕ್ಕಳಿಗೆ ತೊಂದರೆ ಇದ್ದರೆ ಮಣ್ಣಿನ ಪಾತ್ರೆಯಲ್ಲಿ ಜೇನು ತುಪ್ಪವನ್ನು ಇಟ್ಟು ರುದ್ರಭೂಮಿಯಲ್ಲಿ ಹುದುಗಿಸಿ. *೮ನೇ ಸ್ಥಾನದಲ್ಲಿ ಕುಜನು ಅಶುಭನಾಗಿದ್ದರೆ ಆನೆಗೆ ಸಂಬಂದಿಸಿದ ದಂತದ ವಸ್ತುಗಳನ್ನು ಮನೆಯಲ್ಲಿ ಇಟ್ಟುಕೊಳ್ಳುವುದು. *೬ನೇ ಸ್ಥಾನದಲ್ಲಿ ಕುಜನು ಅಶುಭನಾಗಿದ್ದರೆ ೬ ಮಂದಿ ಕನ್ಯಾ ಮುತ್ತೈದೆಯರ ಅಶೀರ್ವಾದವನ್ನು ೬ ದಿನಗಳ ಕಾಲ ಪಡೆಯಿರಿ. *ಗ್ರಹಗಳು ಜಾತಕನ ಕುಂಡಲಿಯಲ್ಲಿ ಬಲಹೀನರಾಗಿದ್ದರೆ ಉಂಟಾಗುವ ತೊಂದರೆಗಳು ಇವುಗಳ ಪರಿಹಾರಗಳು* ಬುಧ:- ಬುಧ:- ಬುದ್ದಿಮಾಂದ್ಯತೆ,ವಿಚಾರಗಳನ್ನು ತಿಳಿಸುವಲ್ಲಿ ಅಸಹಾಯಕತೆ,ಮೂರ್ಖತನ,ಅಪ್ರಬುದ್ದತೆ,ವಾಕ್ ತೊಂದರೆ,ನೆನಪಿನ ಶಕ್ತಿ ಕೊರತೆ,ತಮ್ಮ ಮೇಲೆಯೇ ಹತೋಟಿಯಿಲ್ಲದಿರುವಿಕೆ,ಹಗಲು ಗನಸು ಗಾರರು, ತಾರ್ಕಿಕತೆಯ ಕೊರತೆ,ಸಂಸಾರದಲ್ಲಿ ಹುಡುಗಿಯರಿಗೆ ಸಮಸ್ಯೆಗಳು,ನರದೌರ್ಬಲ್ಯತೆ,ಕ್ಷಯ,ನಿದ್ರಾಹೀನತೆ,ತಲೆಸುತ್ತುವಿಕೆ,ಚರ್ಮದ ತುರಿಕೆ,ಅಲರ್ಜಿ,ಹೃದಯ ಮತ್ತು ಶ್ವಾಸಕೋಶಗಳ ದುರ್ಬಲತೆ,ವ್ಯಾಪಾರ ವ್ಯವಹಾರ,ಷೇರು ಪೇಟೆವ್ಯವಹಾರಗಳಲ್ಲಿ ನಷ್ಟ,ಹಲ್ಲಿನ ತೊಂದರೆ*ವಿದ್ಯಾಬ್ಯಾಸದಲ್ಲಿ ಅಡಚಣೆ* ಏಕಾಂತತೆ,ಮಾನಸಿಕ ತೊಳಲಾಟ,ಮದುವೆಯ ನಂತರವೂ ಹೆಣ್ಣಿನ ತಾಯಿಯ ಮನೆಯವರಿಗೆ ತೊಂದರೆಗಳು,ನಾದಿನಿಯಿಂದ ಕೆಟ್ಟ ಹೆಸರು,ಕಛೇರಿಯಲ್ಲಿ ಸ್ವಾರ್ಥತೆ,ಜಾತಕರು ಸುಳ್ಳುಗಾರರು,ಮೋಸಗಾರರು,ಮದ್ಯವ್ಯಸನಿ,ಬಂದುಗಳ ಅಥವ ದಾಂಪತ್ಯದ ಹೊರಗಿನ ಸಂಬಂದದಿಂದ ಕೆಟ್ತ ಹೆಸರು ಪರಿಹಾರಗಳು:- *ಗಣೇಶ ಮತ್ತು ವಿಷ್ಣುವಿನ ಆರಾಧನೆ ಮಾಡಿ. *ಹಲ್ಲುಗಳನ್ನು ಸ್ವಚ್ಚವಾಗಿ ಇಟ್ಟುಕೊಳ್ಳಿ. *ಹೆಣ್ಣು ಮಕ್ಕಳು ಮೂಗನ್ನು ಚುಚ್ಚಿಕೊಂಡು ಬೆಳ್ಳಿಯ ಉಂಗುರವನ್ನು ಹಾಕಿಕೊಳ್ಳಿ. *ಗಂಡಸರು ಎಡಕೈಗೆ ಬೆಳ್ಳಿಯ ಕಡಗವನ್ನು ಧರಿಸಿ. *ಸರಸ್ವತಿ ಅಥವ ಗಾಯತ್ರಿಯನ್ನು ಆರಾಧಿಸಿ,ಗಾಯತ್ರಿ ಜಪವನ್ನು ಸದಾ ಮಾಡುತ್ತಿರಿ. *ಬಡವಿದ್ಯಾರ್ಥಿಗಳಿಗೆ ಸಹಾಯ ಮಾಡಿ ಹಸಿಹುಲ್ಲನ್ನು ಹಸುಗಳಿಗೆ ತಿನ್ನಿಸಿ. *ಮದ್ಯ,ಮಾಂಸ,ಮೊಟ್ಟೆಗಳನ್ನು ಸೇವಿಸಬೇಡಿ. *ಊಟಕ್ಕೆ ಮುಂಚೆ ಸ್ವಲ್ಪ ಆಹಾರವನ್ನು ಹಸು,ನಾಯಿ,ಕಾಗೆಗಳಿಗೆ ಹಾಕಿರಿ. *ರಾತ್ರಿ ಉಪ್ಪುನೀರಲ್ಲಿ ನೆನೆಸಿದ ಹೆಸರುಬೇಳೆಯನ್ನು ಮಾರನೆ ದಿನ ಬೆಳಗ್ಗೆ ಪಕ್ಷಿಗಳಿಗೆ ನೀಡಿರಿ. *ಹಸಿ ಮಣ್ಣಿನ ಕಲಶವನ್ನು ಹರಿಯುವ ನೀರಲ್ಲಿ ಹಾಕಿ. *ಯಾರಿಂದಲೂ ಯಂತ್ರಗಳನ್ನು(ತಾಯಿತ,ಕುಡಿಕೆ.ಇತರೆ)ತಗೆದುಕೊಳ್ಳಬೇಡಿ. *ಸ್ವಲ್ಪ ಶುದ್ದವಾದ ತುಪ್ಪ ಸಕ್ಕರೆ,ಕರ್ಪೂರಗಳನ್ನು ಹಿತ್ತಾಳೆ ಬಕೇಟಿನ ನೀರಲ್ಲಿ ಹಾಕಿ. *ಬುಧವಾರದಿಂದ ೮ದಿನಗಳ ಕಾಲ ತೂತಿರುವ ತಾಮ್ರದ ಸಣ್ಣ ಬಿಲ್ಲೆಗಳನ್ನು ಹರಿಯುವ ನೀರಲ್ಲಿಹಾಕಿ. *ಮಣ್ಣಿನ ಪಾತ್ರೆಯಲ್ಲಿ ಜೇನು ತುಪ್ಪ ಕಲ್ಲುಸಕ್ಕರೆಯನ್ನು ಹಾಕಿ ನಿರ್ಜನ ಪ್ರದೇಶದಲ್ಲಿ ನೆಲದಲ್ಲಿ ಹುದುಗಿಸಿರಿ. *ಗ್ರಹಗಳು ಜಾತಕನ ಕುಂಡಲಿಯಲ್ಲಿ ಬಲಹೀನರಾಗಿದ್ದರೆ ಉಂಟಾಗುವ ತೊಂದರೆಗಳು ಇವುಗಳ ಪರಿಹಾರಗಳು* ಗುರು:- ಗುರು:- ನಿರುತ್ಸಾಹ,ಚಂಚಲತೆ,ನಾಸ್ತಿಕತೆ,ನಿರಾಸೆ,ದುಗುಡ,ದುಖಃ,ಆರ್ಥಿಕ ತೊಂದರೆಗಳು,ಅನುಕಂಪ ರಹಿತವರ್ತನೆ,ದಬ್ಬಾಳಿಕೆ,ಸಂತಾನ ಇಲ್ಲದಿರುವಿಕೆ,ಇದ್ದರೂ ಅವರಿಗೆ ಕಷ್ಟಗಳು,ನಿರ್ವೀರ್ಯತೆ,ದೇಹವು ಕೃಷಗೊಳ್ಳುವುದು,ನರಗಳು ಮತ್ತು ಕೋಶಗಳು ಅಸಮರ್ಪಕವಾಗಿ ಕೆಲಸಮಾಡುವಿಕೆ,ಸದಾರೋಗಿ,ಮನೆಯಲ್ಲಿಟ್ಟ ಬಂಗಾರವು ಕಳವಾಗುವುದು ಅಥವ ಆಭರಣಗಳನ್ನು ಮಾರುವುದು,*ಅನಿರೀಕ್ಷಿತವಾಗಿ ವಿದ್ಯಾಬ್ಯಾಸವು ನಿಂತುಹೋಗುವುದು,*ಧರ್ಮದಲ್ಲಿ ಅನಾಸಕ್ತಿ,ಪತ್ನಿ ಅಥವ ಮಕ್ಕಳಿಗೆ ಅನಾರೋಗ್ಯ,ಸಂಪತ್ತು ಬರುವುದರಲ್ಲಿ ಅಡಚಣೆ,ಸಂತಾನದಿಂದ ಸುಖವಿಲ್ಲದಿರುವಿಕೆ,ಮದುವೆಯು ತಡವಾಗುವಿಕೆ,ಶೀಘ್ರ ಸ್ಖಲನ,ವಿಧವೆ ಅಥವ ಕೀಳು ಹೆಂಗಸಿನ ಸಂಪರ್ಕ,ಜಾತಕರ ತಂದೆಗೆ ಉಸಿರಾಟದ ತೊಂದರೆ ಅಥವ ಮಾನಸಿಕ ತೊಳಲಾಟ.ಕಿವಿನೋವು,ಮಧುಮೇಹತೊಂದರೆ,ಕಾಮಾಲೆ ಅಥವ ಮೂತ್ರ ಪಿಂಡತೊಂದರೆ, ಮಗಳ ಮದುವೆಗೆ ಅಡಚಣೆಗಳು.ವ್ಯಾಪಾರದಲ್ಲಿ ನಷ್ಟವಾಗುವಿಕೆ. ಪರಿಹಾರಗಳು:- *ಇಂದ್ರನನ್ನು ಆರಾಧಿಸಿ. *ಸಂತರನ್ನು,ಹಿರಿಯರನ್ನು,ಹೆಂಗಸರನ್ನು,ಹೆಣ್ಣುಮಕ್ಕಳನ್ನು ಆದರಿಸಿ, *ಬಂಗಾರದ ಸರವನ್ನು ಕೊರಳಲ್ಲಿ ಹಾಕಿಕೊಳ್ಳಿರಿ. *ದೇವಾಲಯಗಳಿಗೆ ನಿತ್ಯವೂ ಹೋಗಿಬನ್ನಿ. *ಸಿಧೂರವನ್ನು ಹಣೆಗೆ ತಿಲಕವಾಗಿ ಇಟ್ಟುಕೊಳ್ಳಿ. *ಕೊಟ್ಟ ಮಾತನ್ನು ಉಳಿಸಿಕೊಳ್ಳೀ. *ಗುರುವಾರಗಳಂದು ಪತ್ನಿಯು ಉಪವಾಸವನ್ನು ಮಾಡಾಬೇಕು. *ಮಕ್ಕಳಿಂದ ತೊಂದರೆ ಇದ್ದಲ್ಲಿ ವಿಷ್ಣುವನ್ನು ಪೂಜಿಸಿ. *ತಂದೆಗೆ ಅನಾರೋಗ್ಯ ಇದ್ದರೆ ಹರಿಯುವ ನೀರಲ್ಲಿ ೪೫ ದಿನಗಳ ಕಾಲ ತಾಮ್ರದ ನಾಣ್ಯವನ್ನು ಹಾಕಿರಿ. *ದಾಂಪತ್ಯದಿಂದ ಹೊರಗೆ ಸಂಬಂದಗಳನ್ನು ಇಟ್ಟುಕೊಳ್ಳಬೇಡಿ. *ಅಶ್ವತ್ತ ವೃಕ್ಷಕ್ಕೆ ೮ ಗುರುವಾರಗಳು ಅರಿಸಿನದ ದಾರವನ್ನು ೮ ಸುತ್ತು ಕಟ್ಟಿ. *ಗುರುವು ೭ರಲ್ಲಿ ಅಶುಭನಾಗಿದ್ದರೆ ಹಳದಿ ವಸ್ತ್ರವನ್ನು ಅರ್ಚಕರಿಗೆ ದಾನಮಾಡಿ *ಸೂರ್ಯ ಗ್ರಹಣದಲ್ಲಿ,ಬಾದಾಮಿ,ಸಿಪ್ಪೆ ಸಹಿತ ತೆಂಗಿನಕಾಯಿ ಮತ್ತು ಕಪ್ಪು ಉದ್ದಿನಕಾಳು ದಾನ ಮಾಡಿ. *ಮಗಳ ಮದುವೆಯಲ್ಲಿ ೨ ಒಂದೇ ಸಮನಾದ ಬಂಗಾರದ ನಾಣ್ಯಗಳನ್ನು ಮಾಡಿಸಿ ಒಂದನ್ನು ಹರಿಯುವ ನೀರಲ್ಲಿ ಹಾಕಿ,ಮತ್ತೊಂದನ್ನು ಮಗಳಿಗೆ ನೀಡಿ ಸದಾ ಕಾಲ ಜೋಪಾನವಾಗಿ ಅದನ್ನು ತಮ್ಮ ಬಳಿ ಇಟ್ಟುಕೊಳ್ಳುವಂತೆ ಮಾಡಿರಿ. *ಗುರುವು ಅಸ್ತನಾಗಿದ್ದರೆ ೪೦೦ಗ್ರಾಂ ಬೆಲ್ಲ ಅಥವ ಗೋಧಿಯನ್ನು ಭಾನುವಾರ ಹರಿಯುವ ನೀರಲ್ಲಿ ಹಾಕಿ. *ಬುಧನೊಡನೆ ಗುರುವಿದ್ದರೆ ಬುಧನಿಗೆ ಸಂಬಂದಿಸಿದ ವಸ್ತುಗಳನ್ನು ದಾನಮಾಡಿ. *ಗುರುಗಳ ಸೇವೆಯನ್ನು ಮಾಡಿರಿ. *ಓದುವ ಮಕ್ಕಳಿಗೆ ಉಚಿತ ಪಠ್ಯ,ಪಾಠಪ್ರವಚನಗಳನ್ನು ಮಾಡಿ. *ಗುರುಕುಲ,ಮಠಗಳಲ್ಲಿ ಪುಸ್ತಕ,ಪೆನ್ನು,ವಿದ್ಯಾರ್ಥಿಗಳಿಗೆ ಬೇಕಾದ ಅಗತ್ಯ ವಸ್ತುಗಳನ್ನು ನೀಡಿ. *ಗ್ರಹಗಳು ಜಾತಕನ ಕುಂಡಲಿಯಲ್ಲಿ ಬಲಹೀನರಾಗಿದ್ದರೆ ಉಂಟಾಗುವ ತೊಂದರೆಗಳು ಇವುಗಳ ಪರಿಹಾರಗಳು* ಶುಕ್ರ:- ಶುಕ್ರ:- ಕುರೂಪಿ,ಕಳಾಹೀನತೆ,ಪ್ರೀತಿವಾತ್ಸಲ್ಯಗಳಿರುವುದಿಲ್ಲ,ಒರಟುತನ,ನೀಚತ್ವ,ವೈವಾಹಿಕ ಅಥವ ದಾಂಪತ್ಯ ಸಮಸ್ಯೆಗಳು,ಪುರುಷರಿಗೆ ಸ್ತ್ರೀಯೊಡನೆ ವಿರಸ,ಸಂಬಂದಗಳು,ಸ್ತ್ರೀಯರಲ್ಲಿ ಕೋಮಲತೆಯ ಗುಣಗಳು ಇಲ್ಲದಿರುವುದು,ದೈಹಿಕ,ಮೂತ್ರಪಿಂಡ ತೊಂದರೆಗಳು,ಅತಿಯಾದ ಲೈಂಗಿಕತೆ,ಮಿತಿಮೀರಿದ ತಿನ್ನುವಿಕೆ,ಕುಡಿತ,ವಯಸ್ಸಾದ ನಂತರವೂ ಇತರ ಹೆಂಗಸ ರೊಡನೆ ಸಂಬಂದಗಳು,ಪತ್ನಿ ಅಥವ ಪರಸ್ತ್ರೀಯರಿಂದ ಸಂಪತ್ತಿನ ಹಾನಿ,ಜಾತಕರಿಗೆ ಹೆಚ್ಚಾಗಿ ಹೆಣ್ಣು ಸಂತಾನ,ಮಾದಕ ದ್ರವ್ಯ ವ್ಯಸನಿ,ತಕ್ಕ ಮಟ್ಟಿಗೆ ಸಂಪಾದನೆ ಇದ್ದರೂ ಸದಾ ಸಾಲಗಾರರು,ಲೈಂಗಿಕ ವ್ಯಾಧಿಗಳು,ತಮ್ಮ ಸ್ಥಾನ ಮಾನಗಳು,ಅಧಿಕಾರಿಗಳಿಂದ ಎಂದೂ ತೃಪ್ತರಲ್ಲ,ಶುಭಸಮಾರಂಭಗಳಲ್ಲಿ ಅನಿರೀಕ್ಷಿತ ಅಪಘಾತಗಳು,ಕಲೆಗಳಲ್ಲಿ ಅಡಚಣೇಗಳು,ಅಶುಭರಿಂದ ೬ ಅಥವ ೮ರಲ್ಲಿ ಶುಕ್ರನು ಬಲಹೀನನಾಗಿರುವುದು. ಪರಿಹಾರಗಳು:- *ಶಚಿದೇವಿ ಅಥವ ಲಕ್ಷ್ಮಿಯನ್ನು ಪೂಜಿಸಿರಿ. *ಸದಾ ಶುಭ್ರರಾಗಿರಿ. *ಪತ್ನಿಯನ್ನು ಸಂತೋಷದಿಂದ ಇರಿಸಿಕೊಳ್ಳಿ. *೮ಕಿಲೋ ಮೂಲಂಗಿಯನ್ನು ದೇವಾಲಯಕ್ಕೆ ದಾನ ಮಾಡಿ. *೨೫ ನೇ ವಯಸ್ಸಿನ ನಂತರ ವಿವಾಹ ಮಾಡಿಕೊಳ್ಳಿ. *ಹಸುವಿನ ತುಪ್ಪ,ಮೊಸರು,ಕರ್ಪೂರ,ಮುತ್ತು,ಬಿಳಿಯ ಬಟ್ಟೆ ಅಥವ ಸೌಂದರ್ಯ ಸಾಧನಗಳನ್ನು ದಾನಮಾಡಿ. *ಕರಿ ಹಸುವಿಗೆ ಜೋಳ,ಹಸಿಹುಲ್ಲು,೨ಕಿಲೋ ಆಲೂಗಡ್ಡೆ ಅಥವ ಅರಿಸಿನ ಮಿಶ್ರಿತ ಹಿಟ್ಟನ್ನು ತಿನ್ನಿಸಿ. *ಚಿಕ್ಕ ಬೆಳ್ಳಿಯ ಗುಂಡನ್ನು ಮನೆಯಲ್ಲಿ ಇಟ್ಟುಕೊಳ್ಳಿ. *ಮನೆಗೆ ಪಶ್ಚಿಮ ದಿಕ್ಕಿನಲ್ಲಿ ಕಸಕ್ಕಾಗಿ ಒಂದು ಬುಟ್ಟಿಯನ್ನು ಇಡಿ. *ಮಗುವನ್ನು ದತ್ತು ತೆಗೆದುಕೊಳ್ಳಬೇಡಿ. *ಪತ್ನಿಗೆ ಅನಾರೋಗ್ಯವಾಗಿದ್ದರೆ ಆಕೆಯ ತೂಕದಷ್ಟು ಬೆಲ್ಲವನ್ನು ದೇವಾಲಯಕ್ಕೆ ದಾನ ಮಾಡಿ. *೬ದಿನಗಳ ಕಾಲ ಕನ್ಯಾಮುತೈದೆಯರಿಗೆ ಹಾಲು ಮತ್ತು ಜೇನು ನೀಡಿರಿ. *ಯಾವುದೇ ಕೆಲಸದ ಪ್ರಾರಂಭದಲ್ಲಿಯೂ ಸ್ವಲ್ಪ ಸಿಹಿ ಮತ್ತು ನೀರನ್ನು ಸೇವಿಸಿರಿ. *ಬೆಳ್ಳಿಯ ಚಿಕ್ಕ ಫಲಕವನ್ನು ಬೇವಿನ ಮರದಡಿ ಹುದುಗಿಸಿ. *ಬೆಳ್ಳಿಯ ಚೂರನ್ನು ಜೇನಿನೊಂದಿಗೆ ನೆಲದಲ್ಲಿ ಹುದುಗಿಸಿ,ಮಗಳ ಮದುವೆಯಕಾಲದಲ್ಲಿ ಅಳಿಯನಿಗೆ ೨ಬಂಗಾರದ ಚೂರುಗಳನ್ನು ಸಂಕಲ್ಪಿಸಿಕೊಡಬೇಕು. *ಗ್ರಹಗಳು ಜಾತಕನ ಕುಂಡಲಿಯಲ್ಲಿ ಬಲಹೀನರಾಗಿದ್ದರೆ ಉಂಟಾಗುವ ತೊಂದರೆಗಳು ಇವುಗಳ ಪರಿಹಾರಗಳು* ಶನಿ:- ಶನಿ: ಕಳವಳ,ಆಂದೋಲನೆ,ಒತ್ತಡಗಳನ್ನು ನಿಬಾಯಿಸುವಲ್ಲಿ ಅನರ್ಹತೆ,ಸಬಲರಿಗೆ ಸುಲಬವಾಗಿ ಒಳಗಾಗುವರು,ಸರ್ಕಾರ ಅಥವ ಇತರೆ ಸಂಸ್ಥೆಗಳಿಂದ ಆರ್ಥಿಕ ತೊಂದರೆಗಳಿಗೆ ಸಿಲುಕುವುದು,ಆಲಸಿಕೆ,ನಿದಾನ,ನಿರಾಸೆ,ನಿರುತ್ಸಾಹ,ನರ ಮತ್ತು ಮೂಳೆಗಳ ದುರ್ಬಲತೆ,ಸಾಂಕ್ರಾಮುಕ ರೋಗಗಳಿಗೆ ತುತ್ತಾಗುವಿಕೆ,ಜ್ವರ,ಕುಷ್ಟ,ಕಾಮಾಲೆ,ಕಿವುಡುತನ,ದಡಾರ,ಮೂರ್ಛೆ,ಕ್ಯಾನ್ಸರ್(ಅರ್ಬುದ)ಪೆರಾಲಿಸೀಸ್.ಇತ್ಯಾದಿಗಳಿಂದ ಬಾದಿತರು,ವಿದ್ಯಾಭಂಗ,ಕುಟುಂಬದಿಂದ ದೂರ ಹೋಗುವಿಕೆ,ನರಗಳದೌರ್ಬಲ್ಯತೆ,ಕೀಲುಗಳನೋವು,ಹೊಟ್ಟೆಯ ತೊಂದರೆಗಳು,ದೀರ್ಘಕಾಲಿಕ ಕಾಯಿಲೆಗಳಾದ ಪೆರಾಲಿಸಿಸ್,ಮೂತ್ರಕೋಶದ ವೈಪಲ್ಯತೆ,ಇತ್ಯಾದಿಗಳಿಂದ ಬಾಧಿತರು,ಅಗ್ನಿ ಮತ್ತು ಇತರ ಅಪಘಾತಗಳಿಂದ ಮನೆಗೆ ಅಪಾಯ,ರಾತ್ರಿ ಕುರುಡು,ಕಾಲುಗಳಲ್ಲಿ ನೋವು,ಕೂದಲು ಉದರುವಿಕೆ,ಸರ್ಕಾರದಿಂದ,ಅಧಿಕಾರಿಗಳಿಂದ ಅಥವ ನ್ಯಾಯಾಲಯಗಳಿಂದ ಅನಿರೀಕ್ಷಿತ ತೊಂದರೆಗಳು,ಮದ್ಯ ವ್ಯಸನಿ ಮತ್ತು ಪತ್ನಿಗೆ ತೀರಾ ಅನಾರೋಗ್ಯ,ಹಳೆಯ ಮನೆಯನ್ನು ಅಥವ ಯಂತ್ರಗಳನ್ನು ಕೊಳ್ಳುವಿಕೆ.ಪಶುಗಳ ನಷ್ಟ,ವ್ಯಾಪಾರ ವ್ಯವಹಾರಗಳಲ್ಲಿ ಅನಿರೀಕ್ಷಿತ ತೊಡಕುಗಳು ತೀವ್ರಪ್ರತೀಕಾರದ ಮನೋಭಾವ,ಶನಿಯು ೫ ಮತ್ತು ೮ನೇ ಸ್ಥಾನಗಳಲ್ಲಿ ಕಲುಶಿತನಾಗಿದ್ದರೆ ಮಕ್ಕಳು ಹೇಳಿದ ಮಾತು ಕೇಳದೆ ತಮ್ಮ ದಾರಿಯಲ್ಲಿ ಸಾಗುತ್ತಾರೆ,ಶನಿಯು ೨ ಅಥವ ೭ರಲ್ಲಿ ಕಲುಶಿತನಾಗಿದ್ದರೆ ಪತ್ನಿ/ಪತಿಯರಲ್ಲಿ ಸಾಮರಸ್ಯದ ಕೊರತೆ ಉಂಟಾಗುತ್ತದೆ.ಶನಿಯು ೨,೫,೭,೮ರಲ್ಲಿ ಬಲಹೀನನಾಗುತ್ತಾನೆ. ಪರಿಹಾರ:- *ಹನುಮಂತನನ್ನು ಆರಾಧಿಸಿರಿ. *ಆಹಾರ ಸೇವನೆ ಮುಂಚೆ ಸ್ವಲ್ಪ ಆಹಾರವನ್ನು ನಾಯಿ ಅಥವ ಕಾಗೆಗಳಿಗೆ ನೀಡಿ *ಉದ್ದು,ಎಳ್ಳಿನ ಎಣ್ಣೆ,ಚರ್ಮ,ಬಾದಾಮಿ ಇವುಗಳನ್ನು ನಿರ್ಗತಿಕರಿಗೆ ನೀಡಿ. *ಎಮ್ಮೆಗೆ ಮೇವನ್ನು ನೀಡಿ,ಸೂರ್ಯಾಸ್ತದ ನಂತರ ಕಪ್ಪು ಇರುವೆಗಳಿಗೆ ದನ್ಯನೀಡಿ *ನಡುವಿನ ಬೆರಳಿಗೆ ಕಬ್ಬಿಣದ ಸ್ಟೀಲ್ ಕುದುರೆ ಲಾಳದ ಉಂಗುರವನ್ನು ಧರಿಸಿರಿ. *ಹರಿಯುವ ನೀರಲ್ಲಿ ೬ ಬಾದಾಮಿ ೬ ಸಿಪ್ಪೆ ಸಹಿತ ತೆಂಗಿನಕಾಯಿ೬ಶನಿವಾರದ ದಿನಗಳ ಕಾಲ ಹಾಕಿರಿ. *ಮನೆಯ ಕತ್ತಲೆಯ ಕೋಣೆಯಲ್ಲಿ ದಕ್ಷಿಣ ದಿಕ್ಕಿನಲ್ಲಿ ೧೨ ಬಾದಾಮಿಗಳನ್ನು ಅಥವ ಜೇನುತುಪ್ಪ ಅಥವ ತಾಮ್ರವನ್ನು ಕಪ್ಪು ಬಟ್ಟೆಯಲ್ಲಿ ಕಟ್ಟಿ ನೆಲದಲ್ಲಿ ಹುದುಗಿಸಿರಿ. *ಮಾಂಸ,ಮೀನು ಅಥವ ಮದ್ಯವನ್ನು ದೂರವಿಡಿ. *ಶನಿವಾರಗಳಂದು ಉಪವಾಸವನ್ನು ಮಾಡಿ ಆಲದಮರದ ಬುಡಕ್ಕೆ ಹಾಲನ್ನು ಹಾಕಿ ಆ ಹಸಿಯ ಮಣ್ಣನ್ನು ತಿಲಕದಂತೆ ಹಣೆಗೆ ಹಚ್ಚಿಕೊಳ್ಳಿ. *ಮಕ್ಕಳಿಗೆ ತೊಂದರೆಯ ನಿವಾರಣೆಗೆ ಕಪ್ಪು ನಾಯಿಯನ್ನು ಸಾಕಿರಿ. *ಮಣ್ಣಿನ ಕುಡಿಕೆಯಲ್ಲಿ ಎಳ್ಳಿನ ಎಣ್ಣೆಯನ್ನು ಹಾಕಿ ನದಿಯ ಅಥವ ಕೊಳದ ದಡದ ಬಳಿ ನೀರಲ್ಲಿ ಮುಳುಗುವಂತೆ ಹುದುಗಿಸಿರಿ. *ಮುಖ್ಯವಾದ ಕೆಲಸಗಳನ್ನು ರಾತ್ರಿಗಳಲ್ಲಿ ಅಥವ ಕೃಷ್ಣಪಕ್ಷದಲ್ಲಿ ಮಾಡಿರಿ. *ಬೆಳ್ಳಿಯ ಚೌಕಾಕಾರದ ತುಂಡನ್ನು ನಿಮ್ಮ ಬಳಿಯಲ್ಲಿ ಇಟ್ಟುಕೊಂಡಿರಿ ಮತ್ತು ೮೦೦ಗ್ರಾಂ ಉದ್ದು ಶನಿವಾರದಿಂದ ಆರಂಭಿಸಿ ೮ ದಿನಗಳ ಕಾಲ ಹರಿಯುವ ನೀರಿಗೆ ಹಾಕಿರಿ. *ಸ್ವಲ್ಪ ಎಣ್ಣೆಯನ್ನು ೪೩ ದಿನಗಲ ಕಾಲ ನೆಲದ ಮೇಲೆ ಹಾಕುತ್ತಿರಿ.ಮದ್ಯ ಮತ್ತು ಸಾರವನ್ನು ಸಹ ಹಾಕಬುದು. *೨ನೇ ಸ್ಥಾನದಲ್ಲಿ ಅಶುಭಗ್ರಹಗಳಿದ್ದರೆ ೧೦ ಬಾದಾಮಿಗಳನ್ನು ದೇವಾಲಯಕ್ಕೆ ಕೊಟ್ಟು ಅದರಲ್ಲಿ ೫ಅನ್ನು ಮನೆಗೆ ಹಿಂದಕ್ಕೆ ತಂದು ಮನೆಯಲ್ಲಿಟ್ಟಿರಿ ಆದರೆ ಅವುಗಳನ್ನು ನೀವು ತಿನ್ನಬಾರದು. *ಒಳ್ಳೆಯ ದಾಂಪತ್ಯ ಜೀವನಕ್ಕೆ ಕಪ್ಪು ಕೊಳಲಿನಲ್ಲಿ ಜೇನನ್ನು ಹಾಕಿ ನಿರ್ಜನ ಪ್ರದೇಶದಲ್ಲಿ ನೆಲದಲ್ಲಿ ಹುದುಗಿಸಿಬಿಡಿ. *ಸಂಪತ್ತಿಗಾಗಿ,ಗಂಗಾಜಲವನ್ನು ಹಿತ್ತಾಳೆಯ ಪಾತ್ರೆಯಲ್ಲಿ ಇಡಿರಿ. *ಮಾನಸಿಕ ಶಾಂತಿಗಾಗಿ ತಾಯಿಯ ಆರೋಗ್ಯಕಾಗಿ ಹಳೆಯ ಅಕ್ಕಿ ಅಥವ ಬೆಳ್ಳಿಯನ್ನು ಹರಿಯುವ ನೀರಲ್ಲಿ ಹಾಕಿರಿ. *೨ನೇ ಸ್ಥಾನದಲ್ಲಿ ಶನಿಯು ಕಲುಶಿತನಾಗಿದ್ದರೆ ಬರಿಗಾಲಲ್ಲಿ ದೇವಾಲಯಕ್ಕೆ ಹೋಗಿ ಸರ್ಪಗಳಿಗೆ ಹಾಲನ್ನು ನೀಡಿರಿ. *ಏಳರಾಟದ ಶನಿಕಾಟಕ್ಕೆ ನಿವಾರಣೆಗಾಗಿ ಶನಿವಾರದ ಸಂಜೆ ಮಣ್ಣಿನ ಕುಂಡದಲ್ಲಿ ತಾಮ್ರದಲ್ಲಿ ಕೆತ್ತಿದ ಒಂದು ಜೊತೆ ಸರ್ಪ ಮತ್ತು ಕಪ್ಪು ಉದ್ದನ್ನು ಅಶ್ವತ್ತ ಮರದ ಬೇರಿನ ಬುಡದಲ್ಲಿ ಹುದುಗಿಸಿರಿ. *ಗ್ರಹಗಳು ಜಾತಕನ ಕುಂಡಲಿಯಲ್ಲಿ ಬಲಹೀನರಾಗಿದ್ದರೆ ಉಂಟಾಗುವ ತೊಂದರೆಗಳು ಇವುಗಳ ಪರಿಹಾರಗಳು*ರಾಹು:- ರಾಹು:- ಅತಿಯಾದ ಸೂಕ್ಷ್ಮತೆ,ತೊಳಲಾಟ,ಆತಂಕ,ಭಯ,ಭ್ರಮೆಗಳು,ಮಾದಕವಸ್ತುಗಳಸೇವನೆ,ಮೂರ್ಖತನ,ನೀರಲ್ಲಿ ಮುಳುಗುವ ಅಥವ ಎತ್ತರದಿಂದ ಬೀಳುವ ಸಂಬವ ವಿವೇಚನಾರಹಿತ ನಿರ್ದಾರಗಳು,ಎಲ್ಲರೊಡನೆಯೂ ವಿರಸ,ಸ್ನೇಹಿತರು ತೊರೆಯುವರು,ವಿದವೆಯರೊಡನೆ ಕೀಳು ಮಟ್ಟದ ಸ್ತ್ರೀಯರೊಡನೆ ಅನೈತಿಕ ಸಂಬಂದಗಳು,ವಿದೇಶಿಯರು ಮತ್ತು ಕೀಳು ಜನರ ಸಂಪರ್ಕಗಳು,ಇದರಿಂದ ತೊಂದರೆಗಳು,ಇರುತ್ತವೆ ಕೀಳು ಕೆಲಸಗಳಲ್ಲಿ ನಿರತರಾಗಿರುತ್ತಾರೆ,ಸಾಂಕ್ರಾಮಿಕ ರೋಗಗಳಿಗೆ ತುತ್ತಾಗುವ್ವರು,ರೋಗ ನಿರೋಧಕ ಶಕ್ತಿ ಇಲ್ಲದಿರುವುದು.ಮಾನಸಿಕ ಅಸಮತೋಲನೆ,ವಿಷ,ಸರ್ಪಗಳ ಭೀತಿ,ಸಕಾಲ ಕಲಹಗಳು,ಅಪಘಾತ,ವಾದ-ವಿವಾದಗಳಲ್ಲಿ ನಿರತರು,ಕಾಮಾಲೆ,ಕಾಲರ,ಪ್ಲೇಗ್ ಇತ್ಯಾದಿ.ಉಗುರುಗಳು ದುರ್ಬಲವಾಗುತ್ತವೆ,ಗುರುತಿಸಲಾಗದ ವ್ಯಾಧಿಗಳು,ಕಳ್ಳತನದಿಂದ ಸಂಪತ್ತಿನ ನಷ್ಟ,೮ರಲ್ಲಿ ಅಶುಭ ರಾಹುವಿನಿಂದ ಗಮನೀಯ ಏಳು ಬೀಳುಗಳು ಉಂಟಾಗುತ್ತವೆ. *ಗಮನಕ್ಕೆ*:_ಪ್ರತಿನಿಧಿ ಗ್ರಹವು ಬಲಹೀನವಾಗಿದ್ದರೆ ೫,೮.೧೨,ನೆಯ ಸ್ಥಾನಗಳಲ್ಲಿ ಕ್ರೂರವಾಗಿದ್ದರೆ ರಾಹುವು ಬಲಹೀನನೆಂದು ಪರಿಗಣಿಸಲಾಗಿದೆ. ಪರಿಹಾರೋಪಾಯಗಳು:- *ದುರ್ಗೆ ಮತ್ತು ನಾಗಪೂಜೆಯನ್ನು ನೀಲಿ ಪುಷ್ಪಗಳಿಂದ ಮಾಡುವುದು. *ಒಟ್ಟು ಕುಟುಂಬದೊಂದಿಗೆ ಜೀವಿಸುವುದು. *ಆನೆಯು ತುಳಿದ ಮಣ್ಣನ್ನು ಒಂದು ಬಾವಿಯಲ್ಲಿ ಹಾಕುವುದು. *ದೇವಾಲಯ ಅಥವ ದಾರ್ಮಿಕ ಸ್ಥಳದಲ್ಲಿ ಪಾಪ ಕೆಲಸಗಲನ್ನು ಮಾಡದಿರುವುದು. *ಬೆಳ್ಳಿಯಲ್ಲಿ ಮಾಡಿದ ಒಂದು ಆನೆಯನ್ನು ಅಥವ ಒಂದು ಸಣ್ಣ ಕೆಂಪು ಬಣ್ಣದ ಲೋಹದ ಗುಂಡನ್ನು ಮನೆಯಲ್ಲಿ ಇಡಿರಿ. *ಅಡುಗೆ ಮನೆಯಲ್ಲಿ ಕುಳಿತು ಊಟಮಾಡಿ. *ನಿಮ್ಮ ಸಂಪಾದನೆಯ ಸ್ವಲ್ಪಬಾಗವನ್ನು ನಾದಿನಿ,ಮಗಳು,ಅಥವ ಸೋದರಿಗಾಗಿ ಖರ್ಚುಮಾಡಿ,ಹರಿಯುವ ನೀರಲ್ಲಿ ಹಾಲಿನಲ್ಲಿ ತೊಳೆದ ಬಾರ್ಲಿಅಥವ ನಿಮ್ಮ ತೂಕದಷ್ಟು ಇದ್ದಿಲು ಅಥವ ೮ ನೀಲಿ ಹೂವುಗಳನ್ನು ಹಾಕುವುದು. *ಮಾನಸಿಕ ಶಾಂತಿಗೆ ಬೆಳ್ಳಿಯ ಪಾತ್ರೆಯಲ್ಲಿ ಗಂಗಾಜಲವನ್ನು ಹಾಕಿ ಅದರಲ್ಲಿ ಒಂದು ಚೌಕಾಕಾರದ ಬೆಳ್ಳಿಯ ತಗಡನ್ನು ಹಾಕಿ ದೇವರ ಬಳೀ ಇಡಿ ಅಥವ ಬೇಳ್ಳಿಯ ಸರವನ್ನು ಕೊರಳಿಗೆ ಹಾಕಿಕೊಳ್ಳಿ. *ಸಾಸಿವೆ,ಹೊಗೆಸೊಪ್ಪು,ಕಪ್ಪುಬಂಬಳಿ,ಸೀಸ ಅಥವ ಕಸ್ತೂರಿಯನ್ನು ಅಂತ್ಯಜರಿಗೆ ದಾನ ಮಾಡಿ,ಮುಸ್ಲಿಂಬಾಂದವರಿಗೂ ಮಸೀದಿಯಲ್ಲಿ ಕೊಡಬಹುದು. *ಸ್ಥಿರವಾಗಿ ಜ್ವರವಿದ್ದರೆ ಅಥವ ಕ್ಷಯವಿದ್ದರೆ ೮೦೦ಗ್ರಾಂ ಬಾರ್ಲಿಯನ್ನು ಗೋಮೂತ್ರದಲ್ಲಿ ತೊಳೆದು ಒಂದು ಕೆಂಪು ಬಟ್ಟೆಯಲ್ಲಿ ಕಟ್ಟಿ ಹರಿಯುವ ನೀರಲ್ಲಿ ಹಾಕಿರಿ.(ರವಿಯು ಜನನ ಕುಂಡಲಿಯಲ್ಲಿ ೪ನೇಸ್ಥಾನದಲ್ಲಿದ್ದರೆ ಬಾವಿಯಲ್ಲಿ ಹಾಕಿರಿ.) *ರಾಹು ನಿಮ್ಮ ಜಾತಕದಲ್ಲಿ ಗೋಚಾರದಲ್ಲಿ ೧೨ನೇ ಸ್ಥಾನದಲ್ಲಿ ಸಂಚರಿಸುವಾಗ ಯಾವ ಹೊಸ ಕೆಲಸವನ್ನು ಮಾಡಬೇಡಿ. *ಕಪ್ಪು ವಸ್ತ್ರ ಅಥವ ಕನ್ನಡಕವನ್ನು ಧರಿಸಿರಿ. *ತಾಮ್ರದಲ್ಲಿ ಮಾಡಿದ ಒಂದು ಜೊತೆ ಸರ್ಪಗಳನ್ನು ಮನೆಯಿಂದ ನೈರುತ್ಯದಿಕ್ಕಿನಲ್ಲಿ ನಿರ್ಜನ ಪ್ರದೇಶದಲ್ಲಿ ಹುದುಗಿಸಿರಿ. *ಸೂರ್ಯೋದಯ ಅಥವ ಅಸ್ತಗಳಲ್ಲಿ ಯಾವ ಮುಖ್ಯ ನಿರ್ದಾರಗಳನ್ನು ತಗೆದುಕೊಳ್ಳಬೇಡಿ. *ರಾಹುವಿನ ದುಷ್ಪರಿಣಾಮಗಳನ್ನು ನಿವಾರಿಸಲು ಮಗಳ ಮದುವೆಯಲ್ಲಿ ಕಬ್ಬಿಣದ ಅಥವ ಸ್ಟೀಲಿನ ಒಂದು ಜೊತೆ ಒಂದೇ ತರದ ಚೂರುಗಳನ್ನು ಕೊಟ್ಟು ಒಂದನ್ನು ಹರಿಯುವ ನೀರಿನಲ್ಲಿ ಹಾಕಿ ಮತ್ತೊಂದನ್ನು ಸದಾಕಾಲ ಅವಳ ಬಳಿಯಲ್ಲೇ ಇಟ್ಟುಕೊಳ್ಳುವಂತೆ ಹೇಳಿರಿ. *ಭಾನುವಾರ ಸಂಜೆ ಒಂದು ತೆಂಗಿನಕಾಯಿ ಮತ್ತು ತಾಮ್ರದ ತಗಡಿನಲ್ಲಿ ಕೆತ್ತಿದ ಜೋಡಿ ಸರ್ಪಗಳನ್ನು ನೀಲಿವಸ್ತ್ರದಲ್ಲಿ ಕಟ್ಟಿ ನದಿಯಲ್ಲಿ ಹಾಕಿ *ರೋಗ ನಿವಾರಣೆಗೆ ರೋಗಿಯ ತೂಕದಷ್ಟು ಬಾರ್ಲಿಯನ್ನು ರಾತ್ರಿ ತಲೆಯ ಬಳಿ ಇಟ್ಟುಕೊಂಡಿದ್ದು ಮಾರನೆಯ ದಿನ ಅಂತ್ಯಜರಿಗೆ ದಾನಮಾಡಿರಿ. *ಪತ್ನಿ ಮತ್ತು ಮಕ್ಕಳ ತೊಂದರೆಗೆ ಮನೆಯ ಹೊಸ್ತಿಲಿನಲ್ಲಿ ಬೆಳ್ಳಿಯ ತಗಡನ್ನು ಹುದುಗಿಸಿ,ಬಿಳಿ ಹಸುವನ್ನು ಸಾಕಿರಿ. *ಗ್ರಹಗಳು ಜಾತಕನ ಕುಂಡಲಿಯಲ್ಲಿ ಬಲಹೀನರಾಗಿದ್ದರೆ ಉಂಟಾಗುವ ತೊಂದರೆಗಳು ಇವುಗಳ ಪರಿಹಾರಗಳು*ಕೇತು:- ಕೇತು:- ವಿವೇಚನಾ ರಹಿತರು,ತಮ್ಮಲ್ಲೇ ನಂಬಿಕೆಯನ್ನು ಕಲೆದುಕೊಂಡವರು,ಆತ್ಮಘಾತುಕ ಮನೋಬಾವ,ಕ್ರೌರ್ಯದಿಂದ ಗಾಯಗೊಳ್ಳುವವರು,ಗುಂಪುಘರ್ಷಣೆಯಲ್ಲಿ ತೊಂದರೆಗೆ ಸಿಲುಕುತ್ತಾರೆ.ನಿರರ್ಥಕ ಕೆಲಸಗಳಲ್ಲಿ ಕಾಲಕಳೆಯುವವರು,ಅಲ್ಸರ್,ಅಜೀರ್ಣ,ಎಲ್ಲಾ ರೀತಿಯ ಹುಳುಗಳಿಂದ ಹೊಟ್ಟೆಯಲ್ಲಿ ತೊಂದರೆ ದೀರ್ಘಕಾಲಿಕ ಕಾಯಿಲೆಗಳಿಂದ ನರಳುವವರು ಮಗನಿಗೆ ಅಪಾಯ ವಿರುತ್ತದೆ,ಭ್ರಮೆಗಳಿಂದ ಭೀತರು,ಮೊಣಕಾಲುಗಳಿಗೆ ಆಗಾಗ ಅಪಾಯ ಉಂಟಾಗುತ್ತಿರುತ್ತದೆ,೧೦೦ದಿನಗಳಿಗೂ ಹೆಚ್ಚಾಗಿ ಕೆಲಸದ ಮೇಲೆ ಹೋಗಬೇಕಾಗುವುದು.ಮೂತ್ರದ ಅಥವ ಮಾನಸಿಕ ತೊಂದರೆಗಳಿಂದ ಅಥವ ತಿಳಿಯಲಾರದ ಕಾಯಿಲೆಗಳಿಂದ ನರಳುವರು.ಆಗಾಗ ಆತ್ಮಹತ್ಯ ಮನೋಬಾವನೆ,ಸುಳಿಯುತ್ತಿರುತ್ತದೆ,ಪ್ಲೀಹದ ತೊಂದರೆ,ಜಲೋದರ,ಸಾಂಕ್ರಾಮಿಕ ತೀವ್ರತರವಾದ ಜ್ವರ,ಗಾಯಗಳಿಂದ ಪಾದಗಳಲ್ಲಿ ಉರಿ,ಸಂದಿವಾತ,ಕುಷ್ಟ ಅಥವ ಚರ್ಮವ್ಯಾಧಿಗಳಿಂದ ಬೆನ್ನು ನೋವು,ಕಿವಿನೋವು,ಹರ್ನಿಯಾ,ಗಡ್ಡೆ ಅಥವ ನಾಭಿಯ ಕೆಳಗೆಡೆಯ ಕಾಯಿಲೆಗಳಿಂದ ನರಳುವವರು,ಕೇತುವು ೨,೮,೧೧ನೇ ಸ್ಥಾನಗಳಲ್ಲಿ ಬಲಹೀನನಾಗುತ್ತಾನೆ. ಪರಿಹಾರೋಪಾಯಗಳು:- *ಗಣಪತಿಯನ್ನು ಆರಾಧಿಸಿರಿ *ಕರಿ ನಾಯಿ ಸಾಕಿಕೊಳ್ಳಿರಿ *ಬಿಳಿ ಅಥವ ಕಪ್ಪು ಕಂಬಳಿಯನ್ನು ದೇವಾಲಯಕ್ಕೆ ಅಥವ ಸಾಧುವಿಗೆ ನೀಡಿ. *ಮಕ್ಕಳ ಒಳಿತಿಗಾಗಿ ಹಾಲು,ಅಕ್ಕಿ,ಕೆಂಪು ಬೇಳೆ,ಕಲ್ಲು ಸಕ್ಕರೆ,ಜೇನು ತುಪ್ಪ, ದಾನ ಮಾಡಿ. *ವರದಕ್ಷಿಣೆಯಾಗಿ ಬಂದ ಹಾಸಿಗೆಯ ಮೇಲೆ ಮಲಗಿರಿ *ಕಿವಿಯನ್ನು ಚುಚ್ಚಿಸಿಕೊಂಡು ಬಂಗಾರದ ಉಂಗುರವನ್ನು ಹಾಕಿಕೊಳ್ಳಿ. *ಎರಡು ಒಂದೇ ಆಕಾರದ ಬೆಣಚಕಲ್ಲುಗಳನ್ನು ತಗೆದುಕೊಂಡು ಒಂದನ್ನು ಹರಿಯುವ ನೀರಲ್ಲಿ ಹಾಕಿ ಮತ್ತೊಂದನ್ನು ನಿಮ್ಮ ಬಳಿಯೇ ಇಟ್ಟುಕೊಳ್ಳಿ (ರವಿಯು ೪ನೇ ಸ್ಥಾನದಲ್ಲಿದ್ದರೆ ಬಾವಿಯಲ್ಲಿ ಹಾಕಿ. *ಕಾಲಿನ ಹೆಬ್ಬೆರಳಿಗೆ ಬೆಳ್ಳಿಯ ಉಂಗುರವನ್ನು ಹಾಕಿಕೊಳ್ಳಿ. *ಬಂಗಾರದ ಸರವನ್ನು ಕೊರಳಿಗೆ ಹಾಕಿಕೊಳ್ಳಿ,ಕೇಸರಿಯನ್ನು ಹಣೆಗೆ ಹಚ್ಚಿಕೊಳ್ಳಿ. *ಮನೆಯ ಗೇಟಿನ ಕಂಬಕ್ಕೆ ತಾಮ್ರದ ತಗಡನ್ನು ಹಾಕಿರಿ. *ನಿಮ್ಮ ಸಂಪಾದನೆಯಲ್ಲಿ ಸ್ವಲ್ಪ ನಿಮ್ಮ ಬಾವಮೈದುನ,ಸೋದರಿಯ ಮಗ/ಮಗಳಿಗೆ ನೀಡಿ. *ಮಕ್ಕಳ ಒಳಿತಿಗಾಗಿ ಕಡಲೆಕಾಳು ಮತ್ತು ಕೇಸರಿಯನ್ನು ದೇವಸ್ಥಾನಕ್ಕೆ ಗುರುವಾರ ದಂದು ದಾನ ಕೊಡಿ ೧೦೦ ದಿನಗಳಿಗೂ ಹೆಚ್ಚಾಗಿ ಕೆಲಸದ ಮೇಲೆ ಹೊರಗೆ ಹೋಗಬೇಕಾಗಿ ಬಂದರೆ ಹರಿವ ನೀರಿನಲ್ಲಿ ತಾಮ್ರದ ನಾಣ್ಯಗಳನ್ನು ಹಾಕಿರಿ. *ಬೆಳ್ಳಿಯ ಕೊಡದಲ್ಲಿ ಜೇನು ತುಪ್ಪವನ್ನು ತುಂಬಿ ಮನೆಯ ಹೊರಗಡೆ ಹುದುಗಿಸಿ. *ಮಕ್ಕಳಿಲ್ಲದವರಿಂದ ಭೂಮಿಯನ್ನು ಕೊಂಡು ಅಲ್ಲಿ ಮನೆಯನ್ನು ಕಟ್ಟದಿರಿ. *೮ನೇ ಸ್ಥಾನದಲ್ಲಿ ಕೇತುವು ಕಲುಶಿತನಾಗಿದ್ದರೆ ಶಿವನಿಗೆ ಕ್ಷೀರಾಭಿಷೇಕ ಮಾಡಿಸಿರಿ.ಅಥವ ನಿಂಬೇ ಹಣ್ಣನ್ನು ದಾರ್ಮಿಕ ಸ್ಥಳಗಳಲ್ಲಿ ದಾನ ಮಾಡಿ,ನಾಯಿಗೆ ೧೫ ದಿನಗಳ ಕಾಲ ಹಾಲನ್ನು ಹಾಕಿರಿ. -SANGRAHA

No comments:

Post a Comment