Wednesday, 6 February 2019
ವಾಹನ ಸೌಖ್ಯ ಯೋಗ
ವಾಹನ ಸೌಖ್ಯ ಯೋಗ
ವಾಹನ ಯೋಗ ಎಲ್ಲರಿಗೂ ಲಭಿಸುವುದಲ್ಲ. ವಾಹನ ಯೋಗಕ್ಕೂ ಗ್ರಹಗಳ ಪ್ರಭಾವಕ್ಕೂ ಸಂಬಂಧವಿದೆ ಎನ್ನುತ್ತದೆ ಜ್ಯೋತಿಷ್ಯಶಾಸ್ತ್ರ. ಅದು ಹೇಗೆ ನೋಡೋಣ. ಜಾತಕ ಕುಂಡಲಿಯಲ್ಲಿ ಚತುರ್ಥಬಾವ ಬಾವಾದಿಪತಿಯು ಶುಭಗ್ರಹಗಳ ದೃಷ್ಠಿ ಯುತಿಹೊಂದಿ ಶುಭಸ್ಥಾನಗಳಲ್ಲಿ ಸ್ಥಿತನಾಗಿದ್ದಾಗ ಆ ಚತುರ್ಥಭಾವಕ್ಕೆ ಸಂಬಂಧಿಸಿದ ಶುಭಫಲಗಳು ಅನುಭವಕ್ಕೆ ಬರುತ್ತದೆ. ಅವುಗಳಲ್ಲಿ ವಾಹನ ಯೋಗವೂ ಒಂದು.
ದ್ವಿತೀಯೇಶ ಲಗ್ನದಲ್ಲಿ ದಶಮೇಶ ಧನಭಾವದಲ್ಲಿದ್ದು ಚತುರ್ಥಬಾವದಲ್ಲಿ ಉಚ್ಚರಾಶಿಯ ಗ್ರಹವಿದ್ದರೆ ವಾಹನ ಪ್ರಾಪ್ತಿಯಾಗುತ್ತದೆ. ಲಗ್ನೇಶ ಚತುರ್ಥೇಶ ಹಾಗೂ ನವಮೇಶರು ಪರಸ್ಪತರ ಕೇಂದ್ರದಲ್ಲಿ ಸ್ಥಿತರಿದ್ದರೆ ವಾಹನ ಸುಖವಿರುತ್ತದೆ. ಚತುರ್ಥೇಶ ಮತ್ತು ಶುಕ್ರ ಜೊತೆಯಾಗಿ ಲಗ್ನ ಅಥವಾ ಚತುರ್ಥ ಬಾವದಲ್ಲಿದ್ದರೆ ವಾಹನ ಸುಖ ಉಂಟಾಗುತ್ತದೆ.
ಶುಕ್ರನಿಂದ ಸಪ್ತಮ ಭಾವದಲ್ಲಿ ಚಂದ್ರನಿದ್ದರೂ ವಾಹನ ಸುಖ ಲಭಿಸುತ್ತದೆ. ಗುರುವಿನಿಂದ ದೃಷ್ಠಿತ ಚತುರ್ಥೇಶ ಲಾಭ ಬಾವದಲ್ಲಿದ್ದರೆ ಬಹುವಾಹನ ಸೌಖ್ಯ ಉಂಟಾಗುತ್ತದೆ. ಚಂದ್ರನಿಂದ ಶುಕ್ರ ತೃತಿಯ ಅಥವಾ ಏಕಾದಶ ಬಾವದಲ್ಲಿದ್ದರೂ ವಾಹನ ಯೋಗವಿರುತ್ತದೆ. ಚತುರ್ಥೇಶನು ಕೇಂದ್ರದಲ್ಲೂ ಮತ್ತು ಕೇಂದ್ರದ ಅಧಿಪತಿ ಲಗ್ನದಲ್ಲಿದ್ದರೂ ವಾಹನ ಯೋಗ. ಚತುರ್ಥೇಶ, ಶನಿ, ಗುರು ಮತ್ತು ಶುಕ್ರನೊಡನೆ ನವಮ ಭಾವದಲ್ಲಿದ್ದಲ್ಲಿ ಮತ್ತು ನವಮೇಶ ಯಾವುದಾದರೂ ಕೇಂದ್ರ ಅಥವಾ ತ್ರಿಕೋನ ಬಾವದಲ್ಲಿದ್ದರೆ ಬಹುವಾಹನ ಯೋಗವಾಗುತ್ತದೆ. ನವಮೇಶ ದಶಮೇಶ ಮತ್ತು ಲಾಭೇಶ ಮೂವರೂ ಚತುರ್ಥ ಭಾವದಲ್ಲಿದ್ದರೆ ವಾಹನ ಯೋಗವಾಗುತ್ತದೆ. ಒಂದು ವೇಳೆ ಚತುರ್ಥೇಶ 6,8,12 ಭಾವದಲ್ಲಿ ಸ್ಥಿತನಾಗಿ ಅಸ್ತ ಅಥವಾ ಶತ್ರುಕ್ಷೇತ್ರ ಅಥವಾ ನೀಚರಾಶಿಗತನಾಗಿದ್ದರೆ ಜಾತಕನ ವಾಹನದಲ್ಲಿ ಸ್ಥಿರ ಇರದೆ ಅದು ಯಾವಾಗಲು ಕೆಡುತ್ತಿರುತ್ತದೆ.
ಯಾವ ರಾಶಿಯವರಿಗೆ ಯಾವ ಬಣ್ಣದ ವಾಹನ ಸೂಕ್ತ
ವಾಹನಯೋಗ ಎಲ್ಲರಿಗೂ ಒಲಿಯುವುದಲ್ಲ. ಆಗುಹೋಗುಗಳಿಗೆ ವಾಹನವನ್ನು ದೂರುವ ಬದಲು ವಾಹನದ ಬಣ್ಣ ನಮ್ಮ ರಾಶಿಗೆ ವೈಬ್ರೇಟ್ ಆಗಿದೆಯಾ ಎಂದು ತಿಳಿದುಕೊಳ್ಳುವುದು ಒಳ್ಳೆಯದು ಎನ್ನುತ್ತದೆ ಜ್ಯೋತಿಷಶಾಸ್ತ್ರ.
ಮೇಷ : ಕಿತ್ತಳೆ ಮಿಶ್ರಿತ ಕೆಂಪು, ತಿಳಿಗೆಂಪು ಮತ್ತು ಕಡುಗೆಂಪು ವರ್ಣದ ವಾಹನಗಳನ್ನು ಖರೀದಿಸಿದರೆ ಒಳ್ಳೆಯದು. ಇವರ ಅಧಿಪತಿ ಕುಜ. ಕುಜನ ಬಣ್ಣ ಕೆಂಪು. ಮಂಗಳವಾರದಂದು ವಾಹನ ಖರೀದಿ ಶುಭ.
ವೃಷಭ : ಬಿಳಿ ಅಥವಾ ಹಸಿರು ವರ್ಣದ ವಾಹನ ಉತ್ತಮ. ರಾಶಿಯ ಅಧಿಪತಿ ಚಂದ್ರ. ಚಂದ್ರನಿಗೆ ಬಿಳಿ ಬಣ್ಣ ಫೇವರಿಟ್. ಸೋಮವಾರ ವಾಹನ ಖರೀದಿಗೆ ಪ್ರಾಶಸ್ತ್ಯ.
ಮಿಥುನ : ಹಸಿರು ವರ್ಣ ಒಳ್ಳೆಯದು. ಹಳದಿ ವರ್ಣದ ವಾಹನ ಇವರಿಗೆ ಅಷ್ಟೇನು ಒಳಿತನ್ನು ಮಾಡುವುದಿಲ್ಲ. ವಾಹನ ಖರೀದಿಗೆ ಬುಧವಾರ ಉತ್ತಮ.
ಕಟಕ : ಬಿಳಿ, ಬೂದು, ನೇರಳೆ, ಕಪ್ಪು ಬಣ್ಣದ ವಾಹನ ಖರೀದಿಸಬಹುದು. ರಾಶಿಯ ಅಧಿಪತಿ ಚಂದ್ರ. ಸೋಮವಾರ ಖರೀದಿಗೆ ಉತ್ತಮ.
ಸಿಂಹ : ಬಂಗಾರದ ಕೆಂಪು ಬಣ್ಣ, ಕಿತ್ತಳೆ ಬಣ್ಣ ಹಾಗೂ ನೇರಳೆ ಬಣ್ಣದ ವಾಹನವನ್ನು ಖರೀದಿಸಬಹುದು. ರಾಶಿಯ ಅಧಿಪತಿ ರವಿ. ಕೆಂಪು ಬಣ್ಣದ ಪ್ರಿಯ. ಭಾನುವಾರ ವಾಹನ ಖರೀದಿಸುವುದು ಒಳ್ಳೆಯದು.
ಕನ್ಯಾ : ನೀಲಿ ಬಣ್ಣದ ವಾಹನ ಖರೀದಿಸಬಹುದು. ರಾಶಿಯ ಅಧಿಪತಿ ಬುಧ. ಹಳದಿ ಬಣ್ಣದ ವಾಹನ ಖರೀದಿ ಒಳ್ಳೆಯದು.
ತುಲಾ : ತಿಳಿಗೆಂಪು ಕಿತ್ತಳೆ ವರ್ಣ ಪ್ರಿಯರು. ಕೆಂಪು ಬಣ್ಣವು ಇವರಿಗೆ ಫೇವರಿಟ್. ಖರೀದಿಗೆ ಶುಕ್ರವಾರ ಶುಭವಾರ.
ವೃಶ್ಚಿಕ : ಗಾಢ ಕೆಂಪು ಬಣ್ಣ, ಕಂದು ಮಿಶ್ರಿತ ಬಣ್ಣದ ವಾಹನವನ್ನು ಆಯ್ಕೆ ಮಾಡಿಕೊಳ್ಳಬಹುದು. ರಾಶಿಯ ಅಧಿಪತಿ ಕುಜ.
ಧನಸ್ಸು : ಹಳದಿ, ಕೆಂಪು ಮಿಶ್ರಿತ ಹಳದಿ ಬಣ್ಣದ ವಾಹನ ಖರೀದಿಸಬಹುದು. ರಾಶಿಯ ಅಧಿಪತಿ ಗುರು. ಗುರುವಾರ ವಾಹನ ಖರೀದಿ ಶುಭ.
ಮಕರ: ನೀಲಿ, ಕೃಷ್ಣ ನೀಲಿ, ಹಳದಿ ಮಿಶ್ರಿತ ನೀಲ ವರ್ಣದ ವಾಹನ ಖರೀದಿಸಬಹುದು. ರಾಶಿಯ ಅಧಿಪತಿ ಶನಿ. ಶನಿವಾರ ವಾಹನ ಖರೀದಿ ಉತ್ತಮ.
ಕುಂಭ : ಚಿನ್ನದ ಬಣ್ಣ, ಹಳದಿ ಮಿಶ್ರಿತ ಕೆಂಪು, ನೀಲಿ ಅಥವಾ ಕಪ್ಪು ಬಣ್ಣದ ವಾಹನ ಖರೀದಿಸಬಹುದು. ರಾಶಿಯ ಅಧಿಪತಿ ಶನಿ. ಶನಿವಾರ ಖರೀದಿಸಿದರೆ ಉತ್ತಮ.
ಮೀನ : ಹಳದಿ, ಹಳದಿ ಮಿಶ್ರಿತ ಕಿತ್ತಳೆ ಬಣ್ಣದ ವಾಹನ ಖರೀದಿಸಿದರೆ ಒಳ್ಳೆಯದು. ರಾಶಿಯ ಅಧಿಪತಿ ಗುರು. ಗುರುವಾರ ವಾಹನ ಖರೀದಿಸಿದರೆ ಒಳ್ಳೆಯದು.
ಸಂಗ್ರಹ (ಕೃಪೆ ದಿನ ಪತ್ರಿಕೆ)
Subscribe to:
Post Comments (Atom)
No comments:
Post a Comment