Wednesday, 13 February 2019
ಜಾತಕದಲ್ಲಿ ಸಂತಾನ ಯೋಗ
ಜಾತಕದಲ್ಲಿ ಸಂತಾನ ಯೋಗ *
ಈಗಿನ ಕಾಲದಲ್ಲಿ ಸಂತಾನದ ಸಂಖ್ಯೆ ಕಡಿಮೆ ಮಾಡಿಕೊಂಡು ಜೀವನ ಮಾಡುತ್ತಾರೆ. ಆದರೆ ಸಂತತಿ ಇಲ್ಲದವರು ವೈದ್ಯರಿಂದ ಚಿಕಿತ್ಸೆ ಪಡೆಯುವುದು, ಜ್ಯೋತಿಷ್ಯರ ಸಲಹೆ ಪಡೆಯುವುದು,
ಸಂತಾನಕ್ಕಾಗಿ ಪೂಜೆ ಮಾಡಿಸುವುದು ಹೀಗೆ ಎಲ್ಲ ಪ್ರಯತ್ನ ಮಾಡುತ್ತಾರೆ. ಸಂತತಿಯ ಯೋಗವನ್ನು ಅವರವರ ಜಾತಕದಿಂದ ನೋಡಬಹುದು.
ಜನ್ಮ ಲಗ್ನದಿಂದ ಅಥವಾ ಚಂದ್ರ ರಾಶಿಯಿಂದ ಪಂಚಮ ಸಪ್ತಮಗಳನ್ನು ಭಾಗ್ಯಾಧಿಪತಿಯು ನೋಡಿದರೆ ಸಂತಾನ ಮತ್ತು ದಾಂಪತ್ಯವು ಸುಖಮಯವಾಗುತ್ತದೆ.
ಲಗ್ನ ಅಥವಾ ಚಂದ್ರನಿಂದ ಪಂಚಮಾಧಿಪತಿ ಮತ್ತು ಸಪ್ತಮಾಪತಿಯು ನವಮದಲ್ಲಿ ಇದ್ದರೆ ಅತ್ಯಂತ ಸುಖಮಯ ದಾಂಪತ್ಯ ಜೀವನ ಹಾಗೂ ಸಂತತಿ ಸುಖ ಇರುತ್ತದೆ.
ಪಂಚಮದ ಅಧಿಪತಿಯು ಪಂಚಮದಲ್ಲಿ ಸಪ್ತಮಾಧಿಪತಿಯು ನವಮದಲ್ಲಿ ಇದ್ದರೆ ಇಂತಹ ಜಾತಕದವರು ಸುಖಮಯ ದಾಂಪತ್ಯ ಜೀವನ ಮಾಡುತ್ತಾರೆ.
ಪಂಚಮ, ಸಪ್ತಮ ಮತ್ತು ನವಮದಲ್ಲಿ ಶುಭ ಗ್ರಹಗಳು ಇದ್ದರೆ ಅಥವಾ ಈ ಮನೆಯನ್ನು ಶುಭ ಗ್ರಹಗಳು ನೋಡಿದರೆ ಇಂತಹ ಜಾತಕದರಿಗೆ ಪುತ್ರ ಸಂತತಿ ಇರುವುದಲ್ಲದೆ ಇವರು ಸುಖಮಯ ದಾಂಪತ್ಯ ಜೀವನವನ್ನು ಅನುಭವಿಸುತ್ತಾರೆ.
ಪಂಚಮ, ಸಪ್ತಮ ಮತ್ತು ನವಮಾಧಿಪತಿಗಳು ಷಷ್ಠ, ಅಷ್ಟಮ ಮತ್ತು ದ್ವಾದಶದಲ್ಲಿ ಇದ್ದರೆ ದಾಂಪತ್ಯ ಜೀವನ ಸುಖಮಯವಾಗಿರುವುದಿಲ್ಲ.
ಜಾತಕದಲ್ಲಿ ಬೇರೆ ಬೇರೆ ಭಾವಗಳಲ್ಲಿ ಪಂಚಮ, ಸಪ್ತಮ ಮತ್ತು ನವಮಾಧಿಪತಿ ಇದ್ದರೆ ದಾಂಪತ್ಯ ಜೀವನವು ಮಧ್ಯಮ ಇರುತ್ತದೆ.
ಶುಕ್ರ - ಕುಜರ ಯತಿಯು ಇದ್ದರೆ ದಾಂಪತ್ಯ ಜೀವನವು ಸುಖಮಯವಾಗಿರುವುದಿಲ್ಲ.
ಸ್ತ್ರೀ ಜಾತಕದಲ್ಲಿ ಶುಕ್ರನು ಅಸ್ತನಾಗದೆ ಅಷ್ಟಮ ಭಾವದಲ್ಲಿ ಇದ್ದರೆ ಅತ್ಯಂತ ಸುಖಮಯ ದಾಂಪತ್ಯ ಜೀವನ ಇರುತ್ತದೆ.
ಸಪ್ತಮ, ಅಷ್ಟಮದಲ್ಲಿರುವ ಕುಜ ದೋಷವು ಕೈ ಹಿಡಿಯುವ ಗಂಡಿನ ಜಾತಕದಲ್ಲಿ ಇದ್ದರೆ ಇವರಿಗೆ ಸುಖಮಯ ಜೀವನ ಇರುತ್ತದೆ.
ಪಂಚಮದಲ್ಲಿ ಶನಿ ಇದ್ದರೆ ಬಹಳ ವಿಳಂಬವಾಗಿ ಸಂತತಿಯಾಗುತ್ತದೆ.
ಕುಂಭ ರಾಶಿಯು ಪಂಚಮವಾಗಿದ್ದು, ಇಲ್ಲಿ ಶನಿ ಇದ್ದರೆ ಇವರಿಗೆ ಸಂತತಿ ಆಗುವುದು ಕಡಿಮೆ.
ಪಂಚಮ ಸ್ಥಾನವು ಅಗ್ನಿ ರಾಶಿಯಾಗಿ ಅಲ್ಲಿ ಶನಿ ಇದ್ದರೆ ಇವರಿಗೆ ಮಕ್ಕಳಾಗುವುದಿಲ್ಲ.
ಪಂಚಮ ಸ್ಥಾನದಲ್ಲಿ ಕುಜನಿದ್ದರೆ ಇವರಿಗೆ ಸಂತತಿಗೆ ತಡೆಯಾಗುವುದು.
ಪಂಚಮದಲ್ಲಿ ಶುಕ್ರನಿದ್ದರೆ ಇವರಿಗೆ ಕನ್ಯಾ ಸಂತತಿ ಜಾಸ್ತಿ ಇರುತ್ತದೆ.
ಪಂಚಮದಲ್ಲಿ ಕೇತು ಇದ್ದರೆ ಇವರ ಮಕ್ಕಳಿಂದ ಸುಖ ಸಿಗುವುದಿಲ್ಲ.
ದಶಮದಲ್ಲಿ ಚಂದ್ರ ಇದ್ದರೆ ಕನ್ಯಾ ಸಂತತಿ ಜಾಸ್ತಿ ಇರುತ್ತದೆ.
ಪಂಚಮ ಸ್ಥಾನವು ಅಗ್ನಿ ರಾಶಿಯಾಗಿದ್ದು, ಇಲ್ಲಿ ಮಂಗಳನಿದ್ದರೆ ಇವರಿಗೆ ಸಂತತಿ ಆಗುವುದೇ ಇಲ್ಲ.
ಲಗ್ನದಿಂದ ಪಂಚಮ ಸ್ಥಾನದಲ್ಲಿಯೂ ಮತ್ತು ಗುರು ಚಂದ್ರರಿದ್ದ ರಾಶಿಯಿಂದ ಪಂಚಮದಲ್ಲಿ ಪಾಪ ಗ್ರಹ ಇದ್ದು, ಇದಕ್ಕೆ ಶುಭ ಗ್ರಹ ದೃಷ್ಟಿ ಇಲ್ಲದಿದ್ದರೆ ಇಂತಹ ಜಾತಕದವರಿಗೆ ಮಕ್ಕಳಾಗುವುದಿಲ್ಲ.
ಸಂತಾನಕ್ಕೆ ಮಂತ್ರ
ಜಾತಕದ ದ್ವಾದಶ ಭಾವಗಳಲ್ಲಿ ಮನುಷ್ಯನ ಜೀವಿತದ ಆಗು ಹೋಗುಗಳೂ ಅಡಕವಾಗಿರುತ್ತವೆ.
ಲಗ್ನತ್ ಪಂಚಮಭಾಮ, ಪೂರ್ವಪುಣ್ಯ ಹಾಗೂ ಸಂತಾನ ಭಾಗ್ಯವನ್ನು ಸೂಚಿಸುತ್ತದೆ.
ಗಂಡ-ಹೆಂಡಿರ ಎರಡೂ ಜಾತಕಗಳನ್ನು ಪರೀಕ್ಷಿಸಿದ್ದಲ್ಲದೆ, ಯಾವುದೇ ರೀತಿಯ ಸಂತಾನ ದೋಷವೆಂಬ ತೀರ್ಮಾನಕ್ಕೆ ಬರಲಾಗದು.
ತೃತೀಯ ಭಾವ ವೀರ್ಯ ಸ್ಥಾನವೆಂದು ಕರೆಯಲ್ಪಟ್ಟಿದ್ದು, ಶನಿ, ಬುಧ, ಕೇತು ಗ್ರಹಗಳು ನಪುಂಸಕ ಗ್ರಹಗಳೆಂದು ಹೇಳಲಾಗಿದೆ.
ಪಂಚಮದಲ್ಲಿ ಶುಭಗ್ರಹಗಳಾದ ಗುರು, ಶುಕ್ರ ಹಾಗೂ ಬುಧ ಇದ್ದಲ್ಲಿ ಸತ್ಸಂತಾನವೂ, ವ್ಯತಿರಿಕ್ತ್ಯವಾಗಿ ಪಾಪಗ್ರಹಗಳಾದ ಶನಿ, ರಾಹು-ಕೇತು, ಕುಜ ರವಿಗಳಿದ್ದಲ್ಲಿ ದೃಷ್ಟ ಸಂತಾನವೂ ಮತ್ತು ಪಂಚಮಭಾವಕ್ಕೆ ಸಂಬಂಧಿಸಿದಂತೆ ಸರ್ಪ ದೋಷವಿದ್ದಾಗ,
(ರಾಹು ಕೇತುಗಳ ಮಧ್ಯೆ ಎಲ್ಲ ಗ್ರಹಗಳು ಇದ್ದರೆ ಸರ್ಪ ದೋಷ ಎನ್ನಲಾಗಿದೆ.
ಪ್ರತಿಷ್ಠ ಮಂದಾರ ಎಂಬ ಗ್ರಂಥದಲ್ಲಿ ಮಾರಣ ಮಾಲಾ ಕಾಳ ಸರ್ಪ ದೋಷ ನಿವಾರಣ ಮಂತ್ರವೆಂದು :'ಓಂ ನವೋ ಭಗವತೇ ಮಹಾ ಸುದರ್ಶನಾಯ! ಮಹಾ ಚಕ್ರಾಯ! ದಗ್ಧಹಿತರಾಂತರ! ಪ್ರಜ್ವಲ! ಪ್ರಜ್ವಲ! ಪ್ರಜ್ವಲ!! ದೃಷ್ಟದಾನವ, ಭಯಂಕರ ಬ್ರಹ್ಮರಾಕ್ಷಸ, ಭೂಚರ, ಖೇಚರ, ಅಂತರಿಕ್ಷ ನಿಶಾಚಾರ, ಕಾಲ ಸರ್ವಕಾನ್ ಸ್ವಾಹ! ಓಂ ಫಟ್!! ಎಂದು 108 ಸಾರಿ ಪ್ರತಿದಿನ ಜಪಿಸುವುದರಿಂದ ದೋಷ ನಿವಾರಣೆಯಾಗುವುದು ಎನ್ನಲಾಗಿದೆ.
ಆದರೆ ಸರ್ಪ ದೋಷವು ಹಲವಾರು ವಿಧವಾಗಿರಬಹುದು. ಸರ್ಪ ಸಂಸ್ಕಾರ ಹಾಗೂ ರಾಹು ದೋಷ ಪೂಜಾ ವಿಧಾನಗಳನ್ನು ಮಾಡುವರು. ಅಂತೆಯೇ ಇತರ ಸಂತಾನ ದೋಷಗಳಿಗೆ, ಸಂತಾನ ಗೋಪಾಲ ಯಂತ್ರ ಮಂತ್ರಗಳನ್ನು ಹೇಳಬಹುದು. (ಸಂತಾನ ಗೋಪಾಲ ಮೂಲಮಂತ್ರ ಹೀಗಿದೆ: ಓಂ ಶ್ರೀ ಹ್ರೀಂ ಕ್ಲೀಂ ಕ್ಲೌಂ ದೇವಕಿಸುತ ಗೋವಿಂದ ವಾಸುದೇವ ಜಗತ್ಪತೇ! ದೇಹಿಮೆತನಯಾಂ ಕೃಷ್ಣ ತ್ವಾಮಹಂ ಶರಣಾಗತ!!). ನವನೀತ ನೈವೇದ್ಯದೊಂದಿಗೆ ಪೂಜಿಸುವುದು ಸಾಮಾನ್ಯ.
ಸಂತಾನ ಗೋಪಾಲ ಮಂತ್ರದಷ್ಟೇ ಶಕ್ತಿಯುತವಾದ ಇನ್ನೊಂದು ನಿಗೂಢ ಮಂತ್ರವೊಂದು, 'ದೇವಿ ಭಾಗವತದ' 9ನೇ ಸ್ಕಂದ, 46ನೇ ಅಧ್ಯಾಯದ ಷಷ್ಠಿ ದೇವಿಯನ್ನು ಪೂಜಿಸಬೇಕು. ಬಾಲಕರ ಅಧಿಷ್ಠಾತ್ರಿಯಾಗಿ ಹಾಗೂ ವಿಷ್ಣು ಮಾಯ ಎಂದು ಕರೆಯಲಾಗುವ ಷಷ್ಠಿ ದೇವಿಯು ದೇವತೆಗಳ ಯುದ್ಧದಲ್ಲಿ ದೈತ್ಯರನ್ನು ಪರಾಭವಗೊಳಿಸಿದ ಕಾರಣ ದೇವಸೇನ ಎಂದು ಕರೆಯಲಾಗುವ ದೇವಿಯು ಕಾರ್ತಿಕೇಯನ ಧರ್ಮಪತ್ನಿ. ಮೂಲಮಂತ್ರವು 'ಶ್ರೀಂ ಹ್ರೀಂ ಷಷ್ಠಿ ದೇವ್ಯೈ ಸ್ವಾಹ.' ಇದನ್ನು ಒಂದು ಲಕ್ಷ ಜಪಿಸಿದರೆ ಸಿದ್ಧಿಯಾಗುವುದೆಂದು ನಮೂದಿಸಲಾಗಿದೆ. ಇದರೊಂದಿಗೆ ಷಷ್ಠಿದೇವಿಯ ಸ್ತೋತ್ರವು ಭಕ್ತಿಪೂರ್ವಕವಾಗಿ ಅನುಷ್ಠಾನ ಮಾಡಿದಲ್ಲಿ ಮಹಾವಂಧ್ಯೆಯೂ ಸತ್ಪುತ್ರರನ್ನು ಪಡೆಯುವರೆಂದು ಹೇಳಲಾಗಿದೆ.
ಸಂತಾನ ಯೋಗ ಜಾತಕ ಮತ್ತು ದೋಷ ಪರಿಹಾರ
ಕುಂಡಲಿಯಲ್ಲಿ ಪಂಚಮ ಸ್ಥಾನವನ್ನು ಕೂಲಂಕಷವಾಗಿ ಪರಿಶೀಲಿಸಿ, ಸಂತಾನ ಯೋಗವನ್ನು ಹೇಳಬಹುದು. ಪಂಚಮ ಸ್ಥಾನದ ಅಧಿಪತಿಯನ್ನು ಶುಭಗ್ರಹಗಳು ನೋಡಬೇಕು.
ಲಗ್ನಾಧಿಪತಿ ಮತ್ತು ಪಂಚಮಾಧಿಪತಿಯು ಒಂದೇ ರಾಶಿಯಲ್ಲಿ ಕೂಡಿಕೊಂಡಿರಬೇಕು. ಇವರು ಪರಸ್ಪರ ಒಳ್ಳೆಯ ದಷ್ಟಿಯಿಂದ ನೋಡಬೇಕು.
ಲಗ್ನಾಧಿಪತಿ ಮತ್ತು ಪಂಚಮಾಧಿಪತಿಗಳು ಪರಿವರ್ತನೆಯಾಗಿದ್ದಲ್ಲಿ ಇವರಿಗೆ ಸಂತತಿ ಯೋಗ ಇರುತ್ತದೆ.
ಲಗ್ನ ಮತ್ತು ಪಂಚಮಕ್ಕೆ ಗುರುಬಲ ಇದ್ದರೆ ಸಂತತಿ ಯೋಗ ಇರುತ್ತದೆ. ಪಂಚಮ ಗ್ರಹವು ಪಾಪಕರ್ತರಿ ಯೋಗದಲ್ಲಿ ಇದ್ದರೆ, ಪಂಚಮಾಧಿಪತಿ ಅಬಲನಾಗಿ, ದುಸ್ಥಾನದಲ್ಲಿದ್ದರೆ,
ಲಗ್ನ, ಚಂದ್ರ, ಗುರುವಿನಿಂದ ಪಂಚಮ ಭಾವದಲ್ಲಿ ಪಾಪ ಗ್ರಹಗಳು ಇದ್ದರೆ, ಇಂತಹವರಿಗೆ ಸಂತಾನ ಆಗುವುದಿಲ್ಲ.
ವೃಶ್ಚಿಕ, ವೃಷಭ, ಕನ್ಯಾ ಮತ್ತು ಸಿಂಹ ರಾಶಿಗಳು ಅಲ್ಪ ಸಂತಾನ ರಾಶಿಗಳು. ಈ ರಾಶಿಗಳು ಜಾತಕನಿಗೆ ಪಂಚಮ ಭಾವವಾದರೆ, ಇಂತಹ ಜಾತಕರಿಗೆ ಅಲ್ಪ ಸಂತಾನ ಯೋಗ ಇರುತ್ತದೆ.
ಪಂಚಮ ಭಾವದಲ್ಲಿ ಆ ಭಾವದ ಅಧಿಪತಿ ಪಾಪ ಗ್ರಹ ಇದ್ದರೂ, ಅಂತಹವರಿಗೆ ಸಂತಾನ ಯೋಗ ಇರುತ್ತದೆ.
ಪಂಚಮದ ಅಧಿಪತಿಯು ಪಾಪಗ್ರಹವಾಗಿ, ಅದರೊಂದಿಗೆ ಇನ್ನೊಂದು ಪಾಪ ಗ್ರಹ ಇದ್ದರೆ, ಅಂತಹವರಿಗೆ ಬಹು ಸಂತಾನ ಫಲ ಇರುತ್ತದೆ.
ಪಂಚಮದಲ್ಲಿ ಅದರ ಅಧಿಪತಿ ಸ್ವಂತ ಮನೆಯಲ್ಲಿ ಅಥವಾ ಉಚ್ಚನಾಗಿದ್ದರೆ, ಇಂತಹವರಿಗೆ ಸಂತಾನ ನಷ್ಟವಾಗುತ್ತದೆ.
ರವಿಯು ವೃಶ್ಚಿಕ, ವೃಷಭ, ಕನ್ಯಾ ಮತ್ತು ಸಿಂಹ ರಾಶಿಯಲ್ಲಿರುವಾಗ ಇದು ಪಂಚಮ ಭಾವವಾಗಿ, ಅಷ್ಟಮದಲ್ಲಿ ಶನಿ, ಲಗ್ನದಲ್ಲಿ ಕುಜನಿದ್ದರೆ, ಇವರಿಗೆ ಬಹಳ ತಡವಾಗಿ ಸಂತಾನವಾಗುತ್ತದೆ.
ರವಿಯು ಕರ್ಕಾಟಕ ರಾಶಿಯಲ್ಲಿ ಅಥವಾ ಬೇರೆ ಗ್ರಹಗಳೊಂದಿಗೆ ಇದ್ದು, ಇದು ಪಂಚಮ ಭಾವವಾದರೆ, ಇವರಿಗೆ ಎರಡನೆಯ ಹೆಂಡತಿಯಿಂದ ಮಕ್ಕಳಾಗುತ್ತದೆ.
ಚಂದ್ರ, ಬುಧರು ಕರ್ಕಾಟಕ ರಾಶಿಯಲ್ಲಿದ್ದು, ಅದು ಪಂಚಮ ಭಾವವಾದರೆ, ಇವರಿಗೆ ಅಲ್ಪ ಸಂತಾನ ಯೋಗವಾಗುತ್ತದೆ.
ಗುರು ಕರ್ಕಾಟಕ ರಾಶಿಯಲ್ಲಿದ್ದು, ಅದು ಪಂಚಮ ಭಾವವಾದರೆ, ಆಗ ಹೆಚ್ಚು ಸ್ತ್ರೀ ಸಂತಾನವಾಗುತ್ತದೆ.
ನಾಲ್ಕನೇ ಮನೆಯಲ್ಲಿ ಪಾಪಗ್ರಹ ಇದ್ದು, ದಶಮದಲ್ಲಿ ಚಂದ್ರ, ಸಪ್ತಮದಲ್ಲಿ ಶುಕ್ರ ಇರುವವರಿಗೆ ಮಕ್ಕಳಾಗುವುದಿಲ್ಲ.
ಲಗ್ನದಲ್ಲಿ ಪಂಚಮ, ಅಷ್ಟಮ, ವ್ಯಯದಲ್ಲಿ ಪಾಪಗ್ರಹವಿದ್ದರೆ ಇವರಿಗೆ ಮಕ್ಕಳ ಯೋಗ ಇರುವುದಿಲ್ಲ.
ಪಾಪಗ್ರಹಗಳು ನಾಲ್ಕನೇ ಮನೆಯಲ್ಲಿ ಗುರು, ಪಂಚಮದಲ್ಲಿ ಶುಕ್ರ, ಬುಧರು ಸಪ್ತಮದಲ್ಲಿದ್ದರೆ, ಇವರಿಗೆ ಮಕ್ಕಳಾಗುವುದಿಲ್ಲ.
ಲಗ್ನ ಪಾಪಗ್ರಹ, ಚಂದ್ರನು ಪಂಚಮದಲ್ಲಿ, ಅಷ್ಟಮ ದ್ವಾದಶದಲ್ಲಿ ಪಾಪಗ್ರಹಗಳಿದ್ದರೆ ಅಂತಹವರಿಗೆ ಮಕ್ಕಳಾಗುವುದಿಲ್ಲ.
ಲಗ್ನದಲ್ಲಿ ಪಾಪಗ್ರಹ ಇದ್ದರೆ, ಪಂಚಮಾಧಿಪತಿಯು ತತೀಯದಲ್ಲಿ ಮತ್ತು ಚತುರ್ಥದಲ್ಲಿ ಚಂದ್ರನೊಂದಿಗೆ ಇದ್ದರೆ, ಲಗ್ನಾಧಿಪತಿಯು ಪಂಚಮದಲ್ಲಿದ್ದರೆ, ಇಂತಹವರಿಗೆ ಮಕ್ಕಳಾಗುವುದಿಲ್ಲ.
ಪಂಚಮಾಧಿಪತಿಯು ಬಲಿಷ್ಠನಾಗಿದ್ದರೆ, ಅವರಿಗೆ ಒಳ್ಳೆಯ ಪುತ್ರರು ಜನಿಸುತ್ತಾರೆ.
ರವಿ, ಗುರು ಮತ್ತು ಚಂದ್ರ ವಿಷಮ ರಾಶಿಯಲ್ಲಿ ಪುರುಷ ನವಾಂಶ ಬಲಿಷ್ಠನಾಗಿದ್ದರೆ ಇವರಿಗೆ ಗಂಡು ಸಂತಾನವಾಗುತ್ತದೆ.
ಗುರು ಮತ್ತು ರವಿಯು ಲಗ್ನದಿಂದ ವಿಷಮ ಭಾಗದಲ್ಲಿ ಇದ್ದರೆ ಗಂಡು ಮಗುವಿನ ಜನನವಾಗುತ್ತದೆ.
ಲಗ್ನದಿಂದ ವಿಷಮ ಭಾವದಲ್ಲಿ ಚಂದ್ರ, ಶುಕ್ರ ಮತ್ತು ಕುಜನಿದ್ದರೆ, ಹೆಣ್ಣು ಸಂತಾನವಾಗುತ್ತದೆ.
ಪಂಚಮಾಧಿಪತಿಯು ಪುರುಷ ರಾಶಿ,ಪುರುಷ ನವಾಂಶದಲ್ಲಿದ್ದರೆ ಪುರುಷ ಗ್ರಹದೊಂದಿಗೆ ಮತ್ತು ಪುರುಷ ಗ್ರಹಗಳ ದಷ್ಟಿ ಇದ್ದರೆ, ಎಲ್ಲಾ ಸಂತಾನವೂ ಗಂಡು ಸಂತಾನವಾಗುತ್ತದೆ.
ಪಂಚಮಾಧಿಪತಿಯು ಪುರುಷ ನವಾಂಶದಲ್ಲಿದ್ದರೆ, ಪುರುಷ ಗ್ರಹಗಳೊಂದಿಗೆ ಮತ್ತು ಪುರುಷ ಗ್ರಹಗಳ ದಷ್ಟಿ ಇದ್ದರೆ, ಎಲ್ಲಾ ಸಂತಾನವೂ ಗಂಡು ಸಂತಾನವಾಗುತ್ತದೆ.
ಪಂಚಮಾಧಿಪತಿಯು ಸ್ತ್ರೀ ರಾಶಿ ಮತ್ತು ಸ್ತ್ರೀ ನವಾಂಶದಲ್ಲಿದ್ದು, ಸ್ತ್ರೀ ಗ್ರಹಗಳೊಂದಿಗೆ ಇದ್ದರೆ ಅಥವಾ ಪುರುಷ ಗ್ರಹದ ದಷ್ಟಿಯಲ್ಲಿದ್ದರೆ, ಇವರಿಗೆ ಹೆಣ್ಣು ಸಂತಾನವಾಗುತ್ತದೆ.
ಸಂತಾನ ದೋಷಕ್ಕೆ ಪರಿಹಾರ
* ಸಂತಾನ ದೋಷ ಇರುವ ತಿಥಿಗೆ ಅನುಗುಣವಾಗಿ, ದೋಷ ಪರಿಹಾರ ಮಾಡಬೇಕು. ಸಂತಾನ ದೋಷ ಇರುವವರ ತಿಥಿಯು,
* ಷಷ್ಠಿಯಾದರೆ ಸುಬ್ರಮಣ್ಯ ದೇವರ ಆರಾಧನೆ ಮಾಡಬೇಕು.
* ಚತುರ್ಥ ತಿಥಿಯಾದರೆ, ನಾಗದೇವತೆಯ ಆರಾಧನೆ ಮಾಡಬೇಕು
* ನವಮಿಯಾದರೆ, ರಾಮಾಯಣ ಪುರಾಣ ಶ್ರವಣ ಮಾಡಬೇಕು.
* ಅಷ್ಟಮಿ ತಿಥಿಯಾದರೆ ಶ್ರವಣೋಪವಾಸ ಮಾಡಬೇಕು.
* ಚತುರ್ದಶಿಯಾದರೆ, ರುದ್ರಪೂಜೆ ಮಾಡಬೇಕು.
* ದ್ವಾದಶಿಯಾದರೆ ಅನ್ನದಾನ ಮಾಡಬೇಕು.
* ಅಮಾವಾಸ್ಯೆ ಅಥವಾ ಹುಣ್ಣಿಮೆಯಾದರೆ, ಪಿತ ಕಾರ್ಯವನ್ನು ಅತ್ಯಂತ ಶ್ರದ್ಧಾಭಕ್ತಿಗಳಿಂದ ಮಾಡಬೇಕು.
* ಸಂತಾನ ದೋಷ ಇರುವವರು ಸಂಬಂಧಿಸಿದ ಗ್ರಹಗಳ ವಕ್ಷ ಪೂಜೆ ಮಾಡಿದರೆ ಒಳ್ಳೆಯದಾಗುತ್ತದೆ. ಸಂತಾನ ಫಲವೂ ಸಿದ್ಧಿಸುತ್ತದೆ.
ಮಕ್ಕಳ ಫಲವಿಲ್ಲದ್ದಕ್ಕೆ ಹಲವು ಕಾರಣಗಳು * ಡಾ. ಎಸ್.ಎನ್. ಶೈಲೇಶ್ ಬಾಣಾವರ
ಸ್ನೇಹಿತರು ಅಥವಾ ಸಂಬಂಧಿಕರು ಜೊತೆ ಸೇರಿದಾಗ ಲೋಕರೂಢಿಯಂತೆ ನಿಮಗೆ ಮಕ್ಕಳೆಷ್ಟು? ಏನು ಮಾಡುತ್ತಿದ್ದಾರೆ? ಎನ್ನುವ ಪ್ರಶ್ನೆ ಹಾಕುವುದು ಸಾಮಾನ್ಯವಾಗಿದೆ. ಆದರೆ ಹೆಚ್ಚಿನ ಸಂದರ್ಭದಲ್ಲಿ ಇದಕ್ಕೆ ಉತ್ತರ ಇನ್ನೂ ಆಗಿಲ್ಲ ಎನ್ನುವುದಾಗಿರುತ್ತದೆ.
ಕೆಲವಕು ಕಣ್ಣೀರಿಂದಲೇ ಉತ್ತರಿಸುತ್ತಾರೆ. 'ನೋಡಿ ನಮಗೆ ಮದುವೆಯಾಗಿ 8 ವರ್ಷವಾಯಿತು. ಇನ್ನೂ ಕೂಡಾ ಮಕ್ಕಳಾಗಿಲ್ಲ ಎಂದು ಹೇಳಿದರೆ,
ಕೆಲವರು ದೇವರ ಮೊರೆ ಹೋದೆವು, ಹಲವಾರು ವೈದ್ಯರುಗಳನ್ನು ಭೇಟಿಯಾಗಿ ಅವರು ಹೇಳಿದ ಎಲ್ಲ ಪರೀಕ್ಷೆಗಳನ್ನು ಮಾಡಿಸಿದೆವು.
ಆದರೂ ಮಕ್ಕಳಾಗಲಿಲ್ಲ . ಕೆಲವರು ಜ್ಯೋತಿಷಿಗಳ ಬಳಿ ಕುಂಡಲಿಗಳನ್ನು ಪರಿಶೀಲಿಸಿ, ಅವರು ಹೇಳಿದ ಪೂಜೆ ಪುನಸ್ಕಾರಗಳನ್ನೆಲ್ಲಾ ಮಾಡಿದರೂ ಮಕ್ಕಳಾಗಲಿಲ್ಲ ಎನ್ನುವುದ ಹತ್ತು ಹಲವಾರು ಸಮಸ್ಯೆಗಳನ್ನು ತಿಳಿಸುತ್ತಾರೆ.
ಇತ್ತೀಚಿನ ದಿನಗಳಲ್ಲಿ ಮದುವೆ ಮೊದಲು ಸಾಲಾವಳಿ ಕೇಳುವುದು ಕಡಿಮೆಯಾಗಿದೆ. ಹಿಂದಿನ ದಿನಗಳಲ್ಲಿ ತಂದೆ ತಾಯಿಗಳು ತಮ್ಮ ಮಗಳ ಅಥವಾ ಮಗನ ಜಾತಕವನ್ನು ಜ್ಯೋತಿಷಿಗಳ ಬಳಿ ತೋರಿಸುತ್ತಿದ್ದರು.
ಜಾತಕ ಇಲ್ಲದವರು ಹೆಸರು ಬಲದ ಮೇಲೆ ಸಾಲಾವಳಿ ಬರುವುದು ಇಲ್ಲವೋ ಎಂದು ಪರೀಕ್ಷಿಸುತ್ತಿದ್ದರು. ಇನ್ನು ಕೆಲವರು ದೇವರ ಅಪ್ಪಣೆ ಕೇಳಿ ವಿವಾಹ ಕಾರ್ಯ ನೆರವೇರಿಸುತ್ತಿದ್ದರು.
ಕೆಲವರು ಈ ಪದ್ಧತಿಯನ್ನು ಈಗಲೂ ಮುಂದುವರಿಸಿದ್ದಾರೆ. ಆದರೆ, ಹೆಚ್ಚಿನವರು ಅದರಿಂದ ದೂರ ಹೋಗಿದ್ದಾರೆ.
ದೋಷಗಳ ಪರಿಹಾರ
ಜಾತಕದಲ್ಲಿ ಕುಜ ದೋಷ ಹಾಗೂ ಬೇರೆ ಇನ್ನೇನಾದರೂ ತೊಂದರೆ ಇದ್ದರೆ ಅದಕ್ಕೆ ಪರಿಹಾರ ಸೂಜಿಗೆ ಸಾಲಾವಳಿ ವಿಚಾರದಲ್ಲಿ 18 ಗುಣ ಮೇಲ್ಪಟ್ಟು ಬಂದಾಗ ವಿವಾಹ ನಡೆಸಬಹುದೆಂದು ಎಲ್ಲಾ ತರಹದ ವಿಚಾರ ವಿನಿಮಯ ಮಾಡಿದರೂ ಕೂಡ ಒಂದೊಂದು ಸಲ ಮಕ್ಕಳ ಫಲ ಆಗುವುದಿಲ್ಲ. ಕಾರಣಗಳೇನು ಎಂಬ ಪ್ರಶ್ನೆಗೆ ಉತ್ತರ.
ಮೊದಲನೆಯದು ಹಿಂದಿನ ಜನ್ಮದಲ್ಲಿ ಮಾಡಿದ ಪಾಪದ ಫಲಗಳು. ಅದರ ಜೊತೆ ಪ್ರೇತಶಾಪ, ಗುರುಶಾಪ, ಪಿತೃಶಾಪ, ಸರ್ಪಶಾಪ, ಮಾತೃಶಾಪ ಹೀಗೆ ಮುಂತಾದ ಶಾಪಗಳನ್ನು ಮಾಡಿದ ತಪ್ಪಿಗೆ ಹಾಗೂ ಈ ಯಾವುದಾದರೂ ಶಾಪಗಳ ಪಾಪದಿಂದ ಮಕ್ಕಳ ಫಲಗಳಾಗುವುದಿಲ್ಲ.
ಈ ವಿಚಾರವನ್ನು ಕುಂಡಲಿಯಲ್ಲಿ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ವಿಚಾರಗಳನ್ನು ತಿಳಿದುಕೊಳ್ಳಬಹುದು.
ಹೀಗೆ ಪೂರ್ವಜನ್ಮದ ಪಾಪದ ಫಲದಿಂದ ಮಕ್ಕಳ ಭಾಗ್ಯವಿಲ್ಲವೆಂದು ಅನುಭವಿ ಜ್ಯೋತಿಷಿಗಳಿಂದ ತಿಳಿದುಕೊಂಡ ನಂತರ ಸಂಬಂಧ ಪಟ್ಟ ಶಾಪದ ಫಲಗಳನ್ನು ಪೂಜೆ, ಹೋಮ ಮುಂತಾದವುಗಳನ್ನು ಕ್ರಮಬದ್ಧವಾಗಿ ಆಚರಣೆ ಮಾಡಿ ಮಕ್ಕಳ ಭಾಗ್ಯ ಪಡೆಯಬಹುದು.
ಇನ್ನು ಎರಡನೆಯ ಕಾರಣವೇನೆಂದರೆ ಕೆಲವು ವೈಜ್ಞಾನಿಕ ರೀತಿಯ ಮಕ್ಕಳ ಭಾಗ್ಯ ದೊರಕದೇ ಇರಬಹುದು ಅದು ಜ್ಯೋತಿಷ್ಯ ಶಾಸ್ತ್ರದ ಮೂಲಕ ಇದೇನು ವೈಜ್ಞಾನಿಕಕ್ಕೂ ಜ್ಯೋತಿಷ್ಯಕ್ಕೂ ಏನು ಸಂಬಂಧ ಎಂಬ ಪ್ರಶ್ನೆ ಇಲ್ಲಿ ಬರುತ್ತದೆ.
ಅಲ್ಲದೆ ಅದಕ್ಕೆ ಉತ್ತರ ಜ್ಯೋತಿಷ್ಯ ಶಾಸ್ತ್ರವೂ ಕೂಡ ವಿಜ್ಞಾನವಾಗಿದೆ.
ಇನ್ನು ವೈಜ್ಞಾನಿಕವಾಗಿ ಎರಡು ಭಾಗಗಳಾಗಿ ವಿಂಗಡಿಸಿದಾಗ ಪಕ್ಷ ಪಾತದ ಬಂಜೆತನ ಹಾಗೂ ನಪುಂಸಕತ್ವದಿಂದ ಮಕ್ಕಳ ಫಲ ದೊರಕದೆ ಇರಬಹುದು.
ವೈದ್ಯಕೀಯ ಪರೀಕ್ಷೆಗೆ ಒಳಗಾದ ನಂತರ ಹೆಣ್ಣಿನಲ್ಲಿ ತೊಂದರೆ ಇರಬಹುದು ಅಥವಾ ಗಂಡಿನಲ್ಲಿ ತೊಂದರೆ ಇರಬಹುದು ಅಂತಹ ಸಂದರ್ಭಗಳಲ್ಲಿ ಕೆಲವು ಔಷಧಿಗಳಿಂದ ಮಕ್ಕಳಾಗುವ ಸಂಭವ ಇರುತ್ತದೆ.
ಒಂದು ವೇಳೆ ಔಷಧಿಯಿಂದಲೂ ಸಂತಾಲ ಫಲ ದೊರಕದೆ ಇದ್ದಾಗ ದತ್ತು ಪಡೆದುಕೊಳ್ಳಬೇಕಾದ ಪ್ರಸಂಗವು ಬರಬಹುದು.
ಕುಂಡಲಿಗಳಲ್ಲಿ ಗೋಚರ
ಈಗ ಜ್ಯೋತಿಷ್ಯ ಶಾಸ್ತ್ರದಲ್ಲಿ ಮಕ್ಕಳ ಫಲವನ್ನು ನವಾಂಶ ಮತ್ತು ಸಪ್ತಾಂಶ ಕುಂಡಲಿಗಳನ್ನು ನೋಡಿದಾಗ ಮಕ್ಕಳ ಭಾಗ್ಯದ ವಿಚಾರ ಗೋಚರವಾಗುತ್ತದೆ.
1. ಐದನೆಯ ಭಾವಾಧಿಪತಿ ಪುರುಷ ರಾಶಿ ಹಾಗೂ ಪುರುಷ ನವಾಂಶದಲ್ಲಿದ್ದರೆ ಗಂಡು ಮಗುವಿನ ಫಲ ದೊರಕುತ್ತದೆ.
2. ಐದನೆಯ ಭಾವಾಧಿಪತಿ ನಪುಂಸಕ ರಾಶಿ ಹಾಗೂ ನಪುಂಸಕ ನವಾಂಶದಲ್ಲಿದ್ದರೆ ಅಂತವರಿಗೆ ನಪುಂಸಕ ಮಗುವಿನ ಫಲ ದೊರೆಯುತ್ತದೆ.
3. ಐದನೆಯ ಭಾವಾಧಿಪತಿ ಸ್ತ್ರೀ ರಾಶಿ ಹಾಗೂ ಸ್ತ್ರೀ ನವಾಂಶದಲ್ಲಿದ್ದರೆ ಅಂತವರಿಗೆ ಹೆಣ್ಣು ಮಗುವಿನ ಫಲ ದೊರೆಯುತ್ತದೆ.
4. ಐದನೆಯ ಭಾವಾಧಿಪತಿ ದ್ವಿಸ್ವಭಾವ ರಾಶಿ ಹಾಗೂ ದ್ವಿಸ್ವಭಾವ ನವಾಂಶದಲ್ಲಿದ್ದರೆ ಅಂತವರಿಗೆ ಅವಳಿ ಜವಳಿ ಮಕ್ಕಳ ಫಲ ಪ್ರಾಪ್ತಿಯಾಗುತ್ತದೆ.
ಇನ್ನೂ ಅನೇಕ ಗ್ರಂಥಗಳಾದ ಸತ್ಯ ಜಾತಕ, ಪಲಾಧಿಪತಿ, ಸರ್ವಧ ಚಿಂತಾಮಣಿ ಬೃಹತ್ ಪರಾಶರ ಹೋರಾ ಶಾಸ್ತ್ರ, ಜಾತಕ ಪಾರಿಜಾತಕ, ಮಂತ್ರೇಶ್ವರ ಕೃತಿ, ಸಂಕೇತ ನಿಧಿ, ಹೀಗೆ ಹಲವು ಗ್ರಂಥಗಳಲ್ಲಿ ಮಕ್ಕಳು ನಿಧಾನವಾಗಿ ಆಗುವುದಕ್ಕೆ ಹಾಗೂ ಮಕ್ಕಳ ಫಲ ಇಲ್ಲದಿರುವುದಕ್ಕೆ ಕಾರಣಗಳೂ ಹಾಗೂ ಹೇಗೆ ಗ್ರಹಗತಿಗಳಿಂದ ಆಗುತ್ತಿದೆ ಎಂಬ ವಿಚಾರಗಳನ್ನು ತಿಳಿಸಿದೆ.
1. ಐದನೆಯ ಭಾವದಲ್ಲಿ ಅಂಗಾರಕನ ಜೊತೆ (ಕುಜ) ಪಾಪಗ್ರಹಗಳಿದ್ದರೆ ಮಕ್ಕಳು ಮರಣ ಹೊಂದುತ್ತವೆ ಹಾಗೂ ಗರ್ಭನಿಲ್ಲುವುದಿಲ್ಲ.
2. ಐದನೆಯ ಭಾವವು ಶನೇಶ್ವರ (ಶನಿ)ನಿಂದ ದೃಷ್ಟಿ ಹೊಂದಿದ್ದರೆ ಮಕ್ಕಳಾಗುವುದಿಲ್ಲ.
3. ಐದನೆಯ ಭಾವದಲ್ಲಿ ರಾಹು ಇದ್ದರೆ ಹಾಗೂ ಅಂಗಾರಕನ (ಕುಜ) ದೃಷ್ಟಿ ಇದ್ದರೆ ಸಂತಾನಫಲವಿಲ್ಲ.
4. ಐದನೆಯ ಭಾವ ಹಾಗೂ ಅಧಿಪತಿ ಗ್ರಹದ ತೊಂದರೆಗೆ ಒಳಗಾಗಿದ್ದಾಗ ಸಂತಾನ ಫಲವಿಲ್ಲ.
5. ಐದನೆಯ ಭಾವದಲ್ಲಿ ಪಾಪ ಗ್ರಹಗಳು ಹಾಗೂ ಭಾವಾಧಿಪತಿ ಪಾಪಗ್ರಹಗಳೊಡನೆ ಇದ್ದರೆ ಸಂತಾನಕಾರಕ ಗುರು ಐದನೆಯ ಭಾವದಲ್ಲಿದ್ದಾಗ ಪುತ್ರಶೋಕ ನಿರಂತರಂ.
6. ಅಂಗಾರಕ (ಕುಜ) ಹಾಗೂ ಶನೇಶ್ವರ (ಶನಿ) ಐದನೆಯ ಬಾವದಲ್ಲಿದ್ದರೆ ಹಾಗೂ ಐದನೆಯ ಭಾವದಿಂದ 6, 8, 12ರಲ್ಲಿ ಪಾಪಗ್ರಹಗಳಿದ್ದರೆ ಎದನೇಯ ಭಾವಾಧಿಪತಿ ಪಾಪಗ್ರಹಗಳೊಡನೆ ಅಥವಾ ಶತ್ರುಗಳೊಂದಿಗೆ ಇದ್ದರೆ ಸಂತಾನಫಲವಿರುವುದಿಲ್ಲ.
7. ಪಂಚಮಾಧಿಪತಿ ಹಾಗೂ ಸಪ್ತಮಾಧಿಪತಿ ಯುತಿಯಲ್ಲಿದ್ದರೆ ಅಥವಾ ರಾಶಿ ಪರಿವರ್ತನೆ ಹೊಂದಿದ್ದರೆ ಮಕ್ಕಳ ಫಲವಿಲ್ಲ.
8. ಐದನೆಯ ಭಾವ ಮತ್ತು ಲಗ್ನ ಅಗ್ನಿರಾಶಿಯಾಗಿದ್ದು ಐದನೆಯ ಬಾವಾಧಿಪತಿ 6, 8, 12ರಲ್ಲಿದ್ದರೆ ಸಂತಾನ ಫಲವಿಲ್ಲ.
9. ಸಂತಾನ ಭಾಗ್ಯ ಕೊಡುವ ಭಾವಾಧಿಪತಿಗಳು ಶತ್ರುಸ್ಥಾನ, ನೀಚಸ್ಥಾನ, ದ್ವಿಸ್ಥಾನದಲ್ಲಿ ಬಲಹೀನರಾಗಿದ್ದರೆ ಸಂತಾನಫಲವಿಲ್ಲ.
ಸರ್ಪಶಾಪ
ಐದನೆಯ ಭಾವದಲ್ಲಿ ಕುಜನ ರಾಶಿಯಾಗಿದ್ದು ಅದರಲ್ಲಿ ರಾಹು ಸ್ಥಿತನಿದ್ದರೆ ಹಾಗೂ ಅಂಗಾರಕನ ದೃಷ್ಠಿಗೆ ಒಳಗಾಗಿದ್ದರೆ ಮಕ್ಕಳಾಗುವುದಿಲ್ಲ.
ಪಿತೃಶಾಪ
ಐದನೇ ಭಾವವು ನೀಚ ಸೂರ‌್ಯನಾಗಿದ್ದು (ರವಿ) ಹಾಗೂ ಸೂರನ್ಯನು (ರವಿ) ಪಾಪಕೃರ್ತ ಯೋಗದಲ್ಲಿದ್ದರೆ ಹಾಗೂ ಆ ಸೂರ‌್ಯನು (ರವಿ) ಶನಿಯ ನವಾಂಶದಲ್ಲಿದ್ದರೆ, ರಾಹು ಶನಿ ಯುತಿಯಲ್ಲಿದ್ದರೆ ಮಕ್ಕಳಾಗುವುದಿಲ್ಲ.
ಮಾತೃಶಾಪ
ಐದನೇ ಭಾವವು ನೀಚ ಚಂದ್ರನಾಗಿದ್ದು ಹಾಗೂ ಚಂದ್ರನು ಪಾಪ ಕರ್ತರಿಯೋಗದಲ್ಲಿದ್ದು ಶನಿಯ ನವಾಂಶದಲ್ಲಿ ಆ ಚಂದ್ರನಿದ್ದರೆ ಹಾಗೂ ಶನಿ ಅಥವಾ ರಾಹು ಯತಿಯಲ್ಲಿದ್ದರೆ ಮಕ್ಕಳಾಗುವುದಿಲ್ಲ.
ಭ್ರಾತೃಶಾಪ
ಮೂರನೆಯ ಭಾವದಲ್ಲಿ ಲಗ್ನಾಧಿಪತಿಯಿದ್ದು ಅಂಗಾರಕ ರಾಹು ಎದನೆಯ ಭಾವದಲ್ಲಿದ್ದರೆ ಮೂರನೆಯ ಭಾವದಲ್ಲಿ ಎಂಟರ ಭಾವಾಧಿಪತಿಯಿದ್ದು ಹಾಗೂ ಐದನೆಯ ಭಾವದಲ್ಲಿ ರಾಹು ಅಂಗಾರಕನೊಡನೆ ಇದ್ದರೆ ಮಕ್ಕಳಾಗುವುದಿಲ್ಲ.
ಪ್ರೇತಶಾಪ
ಲಗ್ನದಿಂದ ಐದನೇ ಶನಿಗೂ ಹಾಗೂ ಸ್ಥಾನಾಧಿಪತಿಗೂ ಕೂಡಾ ಮಾಂದ್ಯ ದೃಷ್ಠಿಯಿದ್ದು ಲಗ್ನದಿಂದ ಐದನೇ ಸ್ಥಾನದಲ್ಲಿ ಶನಿ ಮಾಂದ್ಯರು ಕೂಡಿದ್ದರೂ ಮಕ್ಕಳಾಗುವುದಿಲ್ಲ.
ಬ್ರಹ್ಮಶಾಪ
ಗುರು, ಶನಿ, ಅಂಗಾರಕ ನವಾಂಶದಲ್ಲಿದ್ದರೆ ಲಗ್ನದಿಂದ ಐದನೇ ಸ್ಥಾನಾಧಿಪನು ಅಂಗಾರಕ, ಗುರು, ಶನಿ, ರಾಹುವಿನಿಂದ ಕೂಡಿ ಲಗ್ನದಿಂದ 6, 8, 12ನೇ ಸ್ಥಾನದಲ್ಲಿ ದುರ್ಬಲರಾಗಿದ್ದರೆ ಮಕ್ಕಳಾಗುವುದಿಲ್ಲ.
ಗುರುಶಾಪ
ಶನಿ ಅಥವಾ ರಾಹು ಯತಿಯಲ್ಲಿದ್ದರೆ ನವಾಂಶದಲ್ಲಿ ಗುರು, ಶನಿಯಿದ್ದರೆ ಲಗ್ನದಿಂದ ಐದನೇ ಭಾವವು ನೀಚ ಗುರುವುನದ್ದು ಆಗಿದ್ದ ಗುರು ಪಾಪಕರ್ತರಿ ಯೋಗದಲ್ಲಿದ್ದರೆ ಮಕ್ಕಳಾಗುವುದಿಲ್ಲ.
ಆದ್ದರಿಂದ ಯಾರೇ ಆಗಲಿ ಮಕ್ಕಳ ಫಲವಿಲ್ಲದಿದ್ದಾಗ ಅನುಭವಿ ಜ್ಯೋತಿಷ್ಯರಿಂದ ಜಾತಕವನ್ನು ಪರಿಶೀಲಿಸಿ ಸಂಬಂಧ ಪಟ್ಟ ತೊಂದರೆ ಹಾಗೂ ಶಾಪದ ಫಲಗಳನ್ನು ತಿಳಿದು ಅದಕ್ಕೆ ಸಂಬಂಧಿಸಿದ ಪೂಜೆ, ಹೋಮ, ಜಪತಪಗಳಿಂದ ಮಕ್ಕಳ ಫಲ ಪಡೆದು ಸುಖ ಸಂತೋಷದಿಂದ ಬಾಳಬಹುದು.
-SANGRAHA
Subscribe to:
Post Comments (Atom)
No comments:
Post a Comment