Wednesday, 6 February 2019
ವಿವಾಹ ಮುಹೂರ್ತ
ವಿವಾಹ ನಿರ್ಣಯಿಸುವಾಗ ಮುಹೂರ್ತ ನೋಡುವ ಪದ್ಧತಿಯಿದೆ. ಮುಹೂರ್ತ ಲೆಕ್ಕಾಚಾರ ಮಾಡುವಾಗ ವರ ಮತ್ತು ಕನ್ಯೆಗೆ ಇರುವ ಗ್ರಹಬಲಗಳನ್ನು ನೋಡಿ ನಿರ್ಣಯಿಸಬೇಕು. ಸರಿಯಾಗಿ ನೋಡದೇ ವಿವಾಹ ಮುಹೂರ್ತಗಳನ್ನು ನಿರ್ಣಯಿಸಿದರೆ ಅನರ್ಥ ಸಂಭವಿಸಬಹುದು
ವಿವಾಹ ಮುಹೂರ್ತವನ್ನು ನಿರ್ಣಯಿಸುವಾಗ 'ತ್ರಿಬಲ' ಅಂದರೆ ವರನಿಗೆ ಸೂರ್ಯ, ಚಂದ್ರಬಲ ಮತ್ತು ಕನ್ಯೆಗೆ ಚಂದ್ರ, ಗುರುಬಲಗಳನ್ನು ನೋಡಬೇಕು. ಸೂರ್ಯನು 4, 8, 12ನೇ ಭಾವದಲ್ಲಿರುವಾಗ ವಿವಾಹ ಮಾಡಿದರೆ ಮೃತ್ಯುವಾಗುತ್ತದೆ. ವರನ ರಾಶಿಯಿಂದ ಸೂರ್ಯ 1,2,5,7, 9ನೆಯ ಭಾವದಲ್ಲಿದ್ದರೆ ಸೂರ್ಯನ ಪೂಜೆ, ಜಪ, ದಾನಗಳನ್ನು ಮಾಡುವುದರಿಂದ ವಿವಾಹ ಶುಭವಾಗುತ್ತದೆ. 11,3, 6, 10ನೆಯ ಭಾವದಲ್ಲಿದ್ದರೆ ವಿವಾಹವು ಶುಭವಾಗುತ್ತದೆ.
ಕನ್ಯೆಯ ರಾಶಿಯಿಂದ 4,8,12ರಲ್ಲಿ ಗುರುವಿರುವಾಗ ವಿವಾಹ ಮಾಡಿದರೆ ಕನ್ಯೆಯ ಪ್ರಾಣಹಾನಿಯಾಗುತ್ತದೆ. ಗುರುವು 1,3,6,10ರಲ್ಲಿರುವಾಗ ಪೂಜೆ, ಜಪ, ದಾನಗಳನ್ನು ಮಾಡಿ ವಿವಾಹ ಮಾಡಿದರೆ ಶುಭವಾಗುತ್ತದೆ. ಗುರುವು 11, 2, 5, 7, 9ರಲ್ಲಿರುವಾಗ ವಿಶೇಷ ಫಲ ಉಂಟಾಗುತ್ತದೆ. ಕನ್ಯೆ ಮತ್ತು ವರ ಈರ್ವರಿಗೂ ಚಂದ್ರಬಲ ಹೇಳಲಾಗಿದ್ದು, ಅದರ ಫಲಗಳು ಹೀಗಿರುತ್ತವೆ. 1ರಲ್ಲಿ ಲಕ್ಷ್ಮಿ ಪ್ರಾಪ್ತಿ, 2ರಲ್ಲಿ ಮನಸ್ಸಂತೋಷ, 3ರಲ್ಲಿ ಧನಸಂಪತ್ತು, 4ರಲ್ಲಿ ಕಲಹ, 5ರಲ್ಲಿ ಜ್ಞಾನವೃದ್ಧಿ, 6ರಲ್ಲಿ ಸಂಪತ್ತು, 7ರಲ್ಲಿ ರಾಜ ಸನ್ಮಾನ, 8ರಲ್ಲಿ ಮೃತ್ಯು, 9ರಲ್ಲಿ ಧರ್ಮಲಾಭ, 10ರಲ್ಲಿ ಮನೋಭಿಲಾಷೆ ಪ್ರಾಪ್ತಿ, ಏಕಾದಶದಲ್ಲಿ ಸರ್ವಲಾಭ ಮತ್ತು ದ್ವಾದಶದಲ್ಲಿ ಹಾನಿಯುಂಟಾಗುತ್ತದೆ.
ಜ್ಯೋತಿಷ ಶಾಸ್ತ್ರದ ಪ್ರಕಾರ ಗುರು ಜೀವರಕ್ಷಕ, ಚಂದ್ರ ಧನ ಪ್ರದಾತ, ಸೂರ್ಯ ತೇಜವನ್ನು, ಮಂಗಲ ಭೂ ಸಂಪತ್ತನ್ನು ಕೊಡುತ್ತಾನೆ. ಗುರುವು ಹೀನಬಲನಾಗಿದ್ದರೆ ಕನ್ಯೆಯು ಮೃತ್ಯು, ಸೂರ್ಯ ಹೀನನಾಗಿದ್ದರೆ ವರನ ಮೃತ್ಯುವಾಗುತ್ತದೆ. ಚಂದ್ರ ಹೀನನಾಗಿದ್ದರೆ ಲಕ್ಷ್ಮಿ ಕ್ಷೀಣವಾಗುತ್ತಾಳೆ. ಮಂಗಲ ಹೀನನಾಗಿದ್ದರೆ ಸ್ಥಾನ ಹಾನಿಯಾಗುತ್ತದೆ.
ಗ್ರಹಗಳ ಬಲ ವಿಚಾರ : ಲಗ್ನ, ಚತುರ್ಥ, ಸಪ್ತಮ, ದಶಮ ಈ ನಾಲ್ಕು ಕೇಂದ್ರ ಸ್ಥಾನಗಳಲ್ಲಿ ಶುಭಗ್ರಹವಿದ್ದರೆ ಶ್ರೇಷ್ಠವು. ಸಪ್ತಮ ಸ್ಥಾನದಲ್ಲಿ ಗ್ರಹವಿರದಿದ್ದರೆ ಅಶುಭ. ಶುಕ್ಲಪಕ್ಷ ದಶಮಿಯಿಂದ ಕೃಷ್ಣಪಕ್ಷದ ಪಂಚಮಿಯವರೆಗೆ ಚಂದ್ರನು ಶ್ರೇಷ್ಠನಾಗಿರುತ್ತಾನೆ. ಸೂರ್ಯ ರಾಹುಗಳು ಶುಕ್ಲಪಕ್ಷ ದ್ವಿತಿಯಾದಿಂದ ದಶಮಿಯವರೆಗೆ ಶುಭರಾಗಿರುತ್ತಾರೆ. ಭೌಮ, ಶನಿ, ಕೇತುಗಳು ಕೃಷ್ಣ ಪಂಚಮಿಯಿಂದ, 30ರವರೆಗೆ ಚಂದ್ರ ಪಾಪಗ್ರಹರಾಗಿರುತ್ತಾರೆ. ಲಗ್ನದಿಂದ ದ್ವಿತೀಯ ಭಾವದಲ್ಲಿ ಚಂದ್ರ ಶುಭನಾಗಿರುತ್ತಾನೆ. 3,6ರಲ್ಲಿ ಪಾಪಗ್ರಹನಾಗಿರುತ್ತಾನೆ. 3, 11ರಲ್ಲಿ ಸರ್ವಗ್ರಹಗಳು ಶುಭವಾಗಿರುತ್ತವೆ. ಸಪ್ತಮದಲ್ಲಿ ಸೌಮ್ಯ, ಕ್ರೂರ ಮತ್ತು ಪಾಪಗ್ರಹಗಳು ಮೃತ್ಯುಪ್ರದವಾಗಿವೆ. ಶನಿ ಸೂರ್ಯರು ಲಗ್ನಾತ್ ಸಪ್ತಮದಲ್ಲಿದ್ದರೆ ಚಂದ್ರ 1,6,8ರಲ್ಲಿದ್ದರೆ, ಮಂಗಳ 1, 7, 8ರಲ್ಲಿದ್ದರೆ, ಶುಕ್ರನು 8,7,6ರಲ್ಲಿದ್ದರೆ, ಗುರುವು 8ರಲ್ಲಿದ್ದರೆ, ರಾಹು 1, 7, 4ರಲ್ಲಿದ್ದರೆ, ಬುಧ 7,8ರಲ್ಲಿದ್ದ ಸಮಯದಲ್ಲಿ ವಿವಾಹವಾದರೆ ಪ್ರಾಣಹಾನಿಯಾಗುತ್ತದೆ. ಗ್ರಹಗಳ ಮಧ್ಯದಲ್ಲಿ ಚಂದ್ರ ಅಥವಾ ಲಗ್ನವಿದ್ದರೆ ವರನಿಗೆ ಮೃತ್ಯುಕಾರಕನಾಗುವುದರಿಂದ ವಜ್ರ್ಯವಾಗುತ್ತದೆ. ತುಲಾ, ಮಿಥುನ, ಕನ್ಯಾ, ವೃಷಭ ಲಗ್ನಗಳು ಮತ್ತು ಧನುವಿನ ಪೂರ್ವಾರ್ಧ ಶುಭ ಲಗ್ನಗಳಾಗಿವೆ. ಅನ್ಯ ಲಗ್ನಗಳು ಮಧ್ಯಮವಾಗಿವೆ.
ಸಂಗ್ರಹ (ಕೃಪೆ ದಿನ ಪತ್ರಿಕೆ)
ವಾಹನ ಸೌಖ್ಯ ಯೋಗ
ವಾಹನ ಸೌಖ್ಯ ಯೋಗ
ವಾಹನ ಯೋಗ ಎಲ್ಲರಿಗೂ ಲಭಿಸುವುದಲ್ಲ. ವಾಹನ ಯೋಗಕ್ಕೂ ಗ್ರಹಗಳ ಪ್ರಭಾವಕ್ಕೂ ಸಂಬಂಧವಿದೆ ಎನ್ನುತ್ತದೆ ಜ್ಯೋತಿಷ್ಯಶಾಸ್ತ್ರ. ಅದು ಹೇಗೆ ನೋಡೋಣ. ಜಾತಕ ಕುಂಡಲಿಯಲ್ಲಿ ಚತುರ್ಥಬಾವ ಬಾವಾದಿಪತಿಯು ಶುಭಗ್ರಹಗಳ ದೃಷ್ಠಿ ಯುತಿಹೊಂದಿ ಶುಭಸ್ಥಾನಗಳಲ್ಲಿ ಸ್ಥಿತನಾಗಿದ್ದಾಗ ಆ ಚತುರ್ಥಭಾವಕ್ಕೆ ಸಂಬಂಧಿಸಿದ ಶುಭಫಲಗಳು ಅನುಭವಕ್ಕೆ ಬರುತ್ತದೆ. ಅವುಗಳಲ್ಲಿ ವಾಹನ ಯೋಗವೂ ಒಂದು.
ದ್ವಿತೀಯೇಶ ಲಗ್ನದಲ್ಲಿ ದಶಮೇಶ ಧನಭಾವದಲ್ಲಿದ್ದು ಚತುರ್ಥಬಾವದಲ್ಲಿ ಉಚ್ಚರಾಶಿಯ ಗ್ರಹವಿದ್ದರೆ ವಾಹನ ಪ್ರಾಪ್ತಿಯಾಗುತ್ತದೆ. ಲಗ್ನೇಶ ಚತುರ್ಥೇಶ ಹಾಗೂ ನವಮೇಶರು ಪರಸ್ಪತರ ಕೇಂದ್ರದಲ್ಲಿ ಸ್ಥಿತರಿದ್ದರೆ ವಾಹನ ಸುಖವಿರುತ್ತದೆ. ಚತುರ್ಥೇಶ ಮತ್ತು ಶುಕ್ರ ಜೊತೆಯಾಗಿ ಲಗ್ನ ಅಥವಾ ಚತುರ್ಥ ಬಾವದಲ್ಲಿದ್ದರೆ ವಾಹನ ಸುಖ ಉಂಟಾಗುತ್ತದೆ.
ಶುಕ್ರನಿಂದ ಸಪ್ತಮ ಭಾವದಲ್ಲಿ ಚಂದ್ರನಿದ್ದರೂ ವಾಹನ ಸುಖ ಲಭಿಸುತ್ತದೆ. ಗುರುವಿನಿಂದ ದೃಷ್ಠಿತ ಚತುರ್ಥೇಶ ಲಾಭ ಬಾವದಲ್ಲಿದ್ದರೆ ಬಹುವಾಹನ ಸೌಖ್ಯ ಉಂಟಾಗುತ್ತದೆ. ಚಂದ್ರನಿಂದ ಶುಕ್ರ ತೃತಿಯ ಅಥವಾ ಏಕಾದಶ ಬಾವದಲ್ಲಿದ್ದರೂ ವಾಹನ ಯೋಗವಿರುತ್ತದೆ. ಚತುರ್ಥೇಶನು ಕೇಂದ್ರದಲ್ಲೂ ಮತ್ತು ಕೇಂದ್ರದ ಅಧಿಪತಿ ಲಗ್ನದಲ್ಲಿದ್ದರೂ ವಾಹನ ಯೋಗ. ಚತುರ್ಥೇಶ, ಶನಿ, ಗುರು ಮತ್ತು ಶುಕ್ರನೊಡನೆ ನವಮ ಭಾವದಲ್ಲಿದ್ದಲ್ಲಿ ಮತ್ತು ನವಮೇಶ ಯಾವುದಾದರೂ ಕೇಂದ್ರ ಅಥವಾ ತ್ರಿಕೋನ ಬಾವದಲ್ಲಿದ್ದರೆ ಬಹುವಾಹನ ಯೋಗವಾಗುತ್ತದೆ. ನವಮೇಶ ದಶಮೇಶ ಮತ್ತು ಲಾಭೇಶ ಮೂವರೂ ಚತುರ್ಥ ಭಾವದಲ್ಲಿದ್ದರೆ ವಾಹನ ಯೋಗವಾಗುತ್ತದೆ. ಒಂದು ವೇಳೆ ಚತುರ್ಥೇಶ 6,8,12 ಭಾವದಲ್ಲಿ ಸ್ಥಿತನಾಗಿ ಅಸ್ತ ಅಥವಾ ಶತ್ರುಕ್ಷೇತ್ರ ಅಥವಾ ನೀಚರಾಶಿಗತನಾಗಿದ್ದರೆ ಜಾತಕನ ವಾಹನದಲ್ಲಿ ಸ್ಥಿರ ಇರದೆ ಅದು ಯಾವಾಗಲು ಕೆಡುತ್ತಿರುತ್ತದೆ.
ಯಾವ ರಾಶಿಯವರಿಗೆ ಯಾವ ಬಣ್ಣದ ವಾಹನ ಸೂಕ್ತ
ವಾಹನಯೋಗ ಎಲ್ಲರಿಗೂ ಒಲಿಯುವುದಲ್ಲ. ಆಗುಹೋಗುಗಳಿಗೆ ವಾಹನವನ್ನು ದೂರುವ ಬದಲು ವಾಹನದ ಬಣ್ಣ ನಮ್ಮ ರಾಶಿಗೆ ವೈಬ್ರೇಟ್ ಆಗಿದೆಯಾ ಎಂದು ತಿಳಿದುಕೊಳ್ಳುವುದು ಒಳ್ಳೆಯದು ಎನ್ನುತ್ತದೆ ಜ್ಯೋತಿಷಶಾಸ್ತ್ರ.
ಮೇಷ : ಕಿತ್ತಳೆ ಮಿಶ್ರಿತ ಕೆಂಪು, ತಿಳಿಗೆಂಪು ಮತ್ತು ಕಡುಗೆಂಪು ವರ್ಣದ ವಾಹನಗಳನ್ನು ಖರೀದಿಸಿದರೆ ಒಳ್ಳೆಯದು. ಇವರ ಅಧಿಪತಿ ಕುಜ. ಕುಜನ ಬಣ್ಣ ಕೆಂಪು. ಮಂಗಳವಾರದಂದು ವಾಹನ ಖರೀದಿ ಶುಭ.
ವೃಷಭ : ಬಿಳಿ ಅಥವಾ ಹಸಿರು ವರ್ಣದ ವಾಹನ ಉತ್ತಮ. ರಾಶಿಯ ಅಧಿಪತಿ ಚಂದ್ರ. ಚಂದ್ರನಿಗೆ ಬಿಳಿ ಬಣ್ಣ ಫೇವರಿಟ್. ಸೋಮವಾರ ವಾಹನ ಖರೀದಿಗೆ ಪ್ರಾಶಸ್ತ್ಯ.
ಮಿಥುನ : ಹಸಿರು ವರ್ಣ ಒಳ್ಳೆಯದು. ಹಳದಿ ವರ್ಣದ ವಾಹನ ಇವರಿಗೆ ಅಷ್ಟೇನು ಒಳಿತನ್ನು ಮಾಡುವುದಿಲ್ಲ. ವಾಹನ ಖರೀದಿಗೆ ಬುಧವಾರ ಉತ್ತಮ.
ಕಟಕ : ಬಿಳಿ, ಬೂದು, ನೇರಳೆ, ಕಪ್ಪು ಬಣ್ಣದ ವಾಹನ ಖರೀದಿಸಬಹುದು. ರಾಶಿಯ ಅಧಿಪತಿ ಚಂದ್ರ. ಸೋಮವಾರ ಖರೀದಿಗೆ ಉತ್ತಮ.
ಸಿಂಹ : ಬಂಗಾರದ ಕೆಂಪು ಬಣ್ಣ, ಕಿತ್ತಳೆ ಬಣ್ಣ ಹಾಗೂ ನೇರಳೆ ಬಣ್ಣದ ವಾಹನವನ್ನು ಖರೀದಿಸಬಹುದು. ರಾಶಿಯ ಅಧಿಪತಿ ರವಿ. ಕೆಂಪು ಬಣ್ಣದ ಪ್ರಿಯ. ಭಾನುವಾರ ವಾಹನ ಖರೀದಿಸುವುದು ಒಳ್ಳೆಯದು.
ಕನ್ಯಾ : ನೀಲಿ ಬಣ್ಣದ ವಾಹನ ಖರೀದಿಸಬಹುದು. ರಾಶಿಯ ಅಧಿಪತಿ ಬುಧ. ಹಳದಿ ಬಣ್ಣದ ವಾಹನ ಖರೀದಿ ಒಳ್ಳೆಯದು.
ತುಲಾ : ತಿಳಿಗೆಂಪು ಕಿತ್ತಳೆ ವರ್ಣ ಪ್ರಿಯರು. ಕೆಂಪು ಬಣ್ಣವು ಇವರಿಗೆ ಫೇವರಿಟ್. ಖರೀದಿಗೆ ಶುಕ್ರವಾರ ಶುಭವಾರ.
ವೃಶ್ಚಿಕ : ಗಾಢ ಕೆಂಪು ಬಣ್ಣ, ಕಂದು ಮಿಶ್ರಿತ ಬಣ್ಣದ ವಾಹನವನ್ನು ಆಯ್ಕೆ ಮಾಡಿಕೊಳ್ಳಬಹುದು. ರಾಶಿಯ ಅಧಿಪತಿ ಕುಜ.
ಧನಸ್ಸು : ಹಳದಿ, ಕೆಂಪು ಮಿಶ್ರಿತ ಹಳದಿ ಬಣ್ಣದ ವಾಹನ ಖರೀದಿಸಬಹುದು. ರಾಶಿಯ ಅಧಿಪತಿ ಗುರು. ಗುರುವಾರ ವಾಹನ ಖರೀದಿ ಶುಭ.
ಮಕರ: ನೀಲಿ, ಕೃಷ್ಣ ನೀಲಿ, ಹಳದಿ ಮಿಶ್ರಿತ ನೀಲ ವರ್ಣದ ವಾಹನ ಖರೀದಿಸಬಹುದು. ರಾಶಿಯ ಅಧಿಪತಿ ಶನಿ. ಶನಿವಾರ ವಾಹನ ಖರೀದಿ ಉತ್ತಮ.
ಕುಂಭ : ಚಿನ್ನದ ಬಣ್ಣ, ಹಳದಿ ಮಿಶ್ರಿತ ಕೆಂಪು, ನೀಲಿ ಅಥವಾ ಕಪ್ಪು ಬಣ್ಣದ ವಾಹನ ಖರೀದಿಸಬಹುದು. ರಾಶಿಯ ಅಧಿಪತಿ ಶನಿ. ಶನಿವಾರ ಖರೀದಿಸಿದರೆ ಉತ್ತಮ.
ಮೀನ : ಹಳದಿ, ಹಳದಿ ಮಿಶ್ರಿತ ಕಿತ್ತಳೆ ಬಣ್ಣದ ವಾಹನ ಖರೀದಿಸಿದರೆ ಒಳ್ಳೆಯದು. ರಾಶಿಯ ಅಧಿಪತಿ ಗುರು. ಗುರುವಾರ ವಾಹನ ಖರೀದಿಸಿದರೆ ಒಳ್ಳೆಯದು.
ಸಂಗ್ರಹ (ಕೃಪೆ ದಿನ ಪತ್ರಿಕೆ)
ಮಹೂರ್ತ ನಿರ್ಣಯ
ಶುಭ ಮಹೂರ್ತ ನಿರ್ಣಯ
ಒಳ್ಳೆಯ ಮನಸ್ಸಿನಿಂದ ಮಾಡುವ ಯಾವುದೇ ಕಾರ್ಯದಲ್ಲೂ ಗೆಲುವಿರುತ್ತದೆ. ಶುಭ ಮಹೂರ್ತಗಳಲ್ಲಿ ಹೊಸ ಕಾರ್ಯವನ್ನು ಆರಂಭ ಮಾಡುವುದರಿಂದ ಹಿಡಿದ ಕಾರ್ಯದಲ್ಲಿ ಯಶಸ್ಸು ದೊರೆಯುತ್ತದೆ. ಶುಭ ಮಹೂರ್ತ ನಿರ್ಣಯ ಕುರಿತ ಸಂಕ್ಷೇಪ ಮಾಹಿತಿ. * ಕೆ.ಸಿ. ನಾಗರಾಜ್
ಜ್ಯೋತಿಷ್ಯಶಾಸ್ತ್ರದಲ್ಲಿ ಮೂರೂವರೆ ಮಹೂರ್ತಗಳನ್ನು (ಯುಗಾದಿಯ ಪಾಡ್ಯ, ಅಕ್ಷಯ ತದಿಗೆ, ವಿಜಯ ದಶಮಿ ಮತ್ತು ಬಲಿ ಪಾಡ್ಯಮಿ) ಅತಿ ಶ್ರೇಷ್ಠವೆನ್ನುತ್ತಾರೆ. ಈ ಮಹೂರ್ತಗಳಿಗೆ ಯಾವುದೇ ದಿನ ದೋಷವಿಲ್ಲ. ಒಂದೊಮ್ಮೆ ಈ ದಿನಗಳಿಗೆ ಹೊಂದಿಕೊಂಡಂತೆ ಗ್ರಹಣವೇನಾದರೂ ಸಂಭವಿಸಿದರೆ ಆಗ ಶುಭ ಕಾರ್ಯಗಳನ್ನು ಮಾಡದಿರುವುದು ಒಳ್ಳೆಯದು. ಧನುರ್ಮಾಸದಲ್ಲಿ ಗೃಹ ಪ್ರವೇಶ, ನೂತನ ಗೃಹ ನಿರ್ಮಾಣ ಕಾರ್ಯಾರಂಭ, ವಿವಾಹ ಮತ್ತಿತರ ಶುಭ ಕಾರ್ಯಗಳನ್ನು ಮಾಡುವುದು ಒಳ್ಳೆಯದಲ್ಲ. ಸೋಮವಾರ, ಬುಧವಾರ, ಗುರುವಾರ ಮತ್ತು ಶುಕ್ರವಾರಗಳನ್ನು ಶುಭವಾರಗಳೆನ್ನುತ್ತಾರೆ. ಶುದ್ಧ ಬಿದಿಗೆ, ತದಿಗೆ, ಪಂಚಮಿ, ಸಪ್ತಮಿ, ದಶಮಿ, ಏಕಾದಶಿ ಮತ್ತು ತ್ರಯೋದಶಿ ಉತ್ತಮ ತಿಥಿಗಳಾಗಿವೆ. ಅಶ್ವಿನಿ, ಮೃಗಶಿರಾ, ರೋಹಿಣಿ, ಪುನರ್ವಸು, ಪುಷ್ಯ, ಮಾಘ, ಪುಬ್ಬ, ಉತ್ತರ,
ಹಸ್ತ, ಚಿತ್ತ, ಸ್ವಾತಿ, ಅನುರಾಧ, ಮೂಲ, ಉತ್ತರಾಷಾಢ, ಶ್ರವಣ, ಧನಿಷ್ಠ, ಶತಭಿಷ, ಉತ್ತರಭಾದ್ರ, ರೇವತಿ ಶುಭ ನಕ್ಷತ್ರಗಳಾಗಿವೆ.
ಪ್ರೀತಿ, ಸೌಭಾಗ್ಯ, ಶೋಭಾನ, ವೃದ್ಧಿ, ಧೃವ, ಹರ್ಷಣ, ಸಿದ್ಧಿ, ಶಿವ, ಸಾದ್ಯ, ಶುಭ, ಶುಕ್ಲ, ಬ್ರಹ್ಮ ಇವುಗಳನ್ನು ಶುಭ ಯೋಗಗಳೆನ್ನುತ್ತಾರೆ. ಭವ, ಬಾಲವ, ಕೌಲವ, ತೈತುಲ, ಗರಜ, ವಣಿಕ, ಭದ್ರ ಇವು ಶುಭ ಕರಣಗಳಾಗಿವೆ. ವೃಷಭ, ಮಿಥುನ, ಕನ್ಯಾ, ತುಲಾ, ಧನಸ್ಸು, ಮೀನ ಶುಭಲಗ್ನಗಳಾಗಿದ್ದರೆ, ಬುಧ, ಗುರು, ಶುಕ್ರ, ಚಂದ್ರ ಈ ಗ್ರಹಗಳು ಕೇಂದ್ರ
ತ್ರಿಕೋಣ ಸ್ಥಾನಗಳಾದ 1-4-7-10-5-9 ರಲ್ಲಿ ಇದ್ದಾಗ ಶುಭ ಗ್ರಹವೆನಿಸುತ್ತದೆ. ರವಿ, ಕುಜ, ಶನಿ ಗ್ರಹಗಳು 3-6-11 ರಲ್ಲಿ ಇದ್ದರೆ ಪಾಪಗ್ರಹಗಳೆಂದು ನಿರ್ಣಯಿಸುವುದು. 11 ನೇ ಸ್ಥಾನದಲ್ಲಿ ಸರ್ವ ಗ್ರಹಗಳು ಇದ್ದರೆ ಶುಭವೆಂದು ತೀರ್ಮಾನಿಸಬೇಕು. ರಾಹು, ಕೇತು ಛಾಯಾ ಗ್ರಹಗಳಾದರೂ ಜನ್ಮ ಕುಂಡಲಿಯಲ್ಲಿ 3-6-11 ರಲ್ಲಿ ಇದ್ದರೆ ಶುಭವೆಂದು ತೀರ್ಮಾನಿಸಬಹುದು.
ತಿಥಿ ನಿರ್ಣಯ
ಐದು ಬಗೆಯ ತಿಥಿಗಳಿವೆ. ಅವೆಂದರೆ, ನಂದಾ, ಭದ್ರ, ಜಯ, ರಿಕ್ತಾ ಮತ್ತು ಪೂರ್ಣ.
ನಂದಾ: ಉತ್ಸವ, ವಾಸ್ತು ಪ್ರತಿಷ್ಠೆ, ಕೃಷಿ ಕಾರ್ಯಾರಂಭ, ಸಂಗೀತಾರಂಭ ಮೊದಲಾದವನ್ನು ಮಾಡಬಹುದು.
ಭದ್ರ: ವಿವಾಹ, ಉಪನಯನ, ಪ್ರಯಾಣ, ಶಾಂತಿ ಕರ್ಮಗಳನ್ನು ಮಾಡುವುದು
ಜಯ: ಯುದ್ಧಾರಂಭ, ವಿವಾಹ, ಉಪನಯನ, ಷೋಡಷ ಸಂಸ್ಕಾರಗಳನ್ನು ಮಾಡಬಹುದು.
ಪೂರ್ಣ: ಮಂಗಳ ಕಾರ್ಯಗಳು, ವಿವಾಹಾದಿ ಶುಭ ಕಾರ್ಯಗಳು, ಯಾತ್ರಾ ಆಗಮನಾದಿ ಶಾಂತಿ ಕರ್ಮಗಳನ್ನು ಮಾಡಬಹುದು.
ತಿಥಿ ನಕ್ಷ ತ್ರ ಹಾಗೂ ಲಗ್ನ ಗಂಡಾಂತರಗಳು
* ತಿಥಿ ಗಂಡಾಂತರ :- ಪಂಚಮಿ, ದಶಮಿ, ಪೂರ್ಣಿಮ ಮತ್ತು ಅಮವಾಸ್ಯೆ ತಿಥಿಗಳು, ಪಾಡ್ಯ, ಷಷ್ಠಿ, ಏಕಾದಶಿ, ಈ ತಿಥಿಗಳ ಸಂಧಿ ಕಾಲದಲ್ಲಿ 2-2 ಘಳಿಗೆ ತಿಥಿ ಗಂಡಾತರವಾಗುತ್ತದೆ. ಈ ಗಂಡಾಂತರ ಕಾಲದಲ್ಲಿ ಶುಭ ಕೆಲಸ ಮಾಡುವುದು ಶ್ರೇಯಸ್ಕರವಲ್ಲ.
* ನಕ್ಷ ತ್ರ ಗಂಡಾಂತರ: ರೇವತಿ, ಆಶ್ಲೇಷ, ಜೇಷ್ಠ ನಕ್ಷ ತ್ರಗಳ ಅಂತ್ಯದಲ್ಲಿ 2-2 ಘಳಿಗೆ ಅಶ್ವಿನಿ
ಮಖಾ ಮೂಲಾ ನಕ್ಷ ತ್ರಗಳ ಪ್ರಾರಂಭದ 2-2 ಘಳಿಗೆ ಕಾಲವು ಗಂಡಾಂತರ ದೋಷ ಎನಿಸುತ್ತದೆ. ಈ ಸಮಯದಲ್ಲಿ ಶುಭ ಕಾರ್ಯಗಳನ್ನು ಮಾಡಬಾರದು.
* ಲಗ್ನ ಗಂಡಾಂತರ : ಕಟಕ, ಸಿಂಹ, ವೃಶ್ಚಿಕ, ಧನಸ್ಸು, ಮೀನ, ಮೇಷ ಈ ಲಗ್ನಗಳ ಸಂಧಿ
ಕಾಲದಲ್ಲಿ ಅರ್ಧ ಘಳಿಗೆ ಗಂಡಾಂತರ ಇದೆ. ಇದು ಸಹ ಶುಭ ಕಾರ್ಯಕ್ಕೆ ನಿಷಿದ್ದ.
* ಗುರು ಶುಕ್ರ ಅಸ್ತಂಗತ ದೋಷ: ಗುರು ಶುಕ್ರರು ಸೂರ‍್ಯನೊಂದಿಗಿದ್ದಾಗ ಅಸಮರ್ಥರು ಆಗುವುದನ್ನೇ ಅಸ್ತವೆನ್ನುವರು. ಶುಕ್ರನು ಪೂರ್ವದಲ್ಲಿ ಉದಯಿಸಿದರೆ ಮೂರು ದಿನ ಬಾಲನು. ಪಶ್ಚಿಮದಲ್ಲಿ ಉದಯಿಸಿದರೆ ಹತ್ತು ದಿನ ಬಾಲನು. ಪೂರ್ವದಲ್ಲಿ ಅಸ್ತಮಿಸಿದರೆ ಹನ್ನೊಂದು ದಿನ ವೃದ್ಧನು ಮತ್ತು ಪಶ್ಚಿಮದಲ್ಲಿ ಅಸ್ತಮಿಸಿದರೆ ಹದಿನೈದು ದಿನ ವೃದ್ಧನೆಂದು ತಿಳಿಯಬಹುದು.
-ಸಂಗ್ರಹ
ಗ್ರಹ ಸ್ಥಾನದಿಂದ ರೋಗ ನಿರ್ಣಯ
ಇಂಟ್ರೋ : ಜಾತಕ ವ್ಯಕ್ತಿಯ ಆಗುಹೋಗುಗಳ ಕನ್ನಡಿ ಇದ್ದಂತೆ. ಕುಂಡಲಿಯಲ್ಲಿ ಲಗ್ನವೇ ರೋಗಿಯ ಸ್ಥಾನ, ಸಪ್ತಮ ಸ್ಥಾನವೇ ವೈದ್ಯನ ಸ್ಥಾನ, ಚತುರ್ಥ ಸ್ಥಾನವಾದ 4ನೇ ಸ್ಥಾನವೇ ಔಷಧದ ಸ್ಥಾನ. ಷಷ್ಟ ಸ್ಥಾನವೇ ರೋಗದ ಗುಣ ಅವಗುಣ ತೋರಿಸುವ ಸ್ಥಾನವಾಗಿದೆ. ನಾಗರಾಜ್ ಕೆ.ಸಿ.
ಜಾತಕ ಭವಿಷ್ಯ ಸೂಚಕ. ಜಾತಕ ಕುಂಡಲಿಯನ್ನು ಸೂಕ್ಷ್ಮವಾಗಿ ಪರಿಶೀಲಿಸುವ ಮೂಲಕ ವ್ಯಕ್ತಿಯ ಆಗು ಹೋಗುಗಳನ್ನು ಗುರುತಿಸಬಹುದು. ಆತನಿಗೆ ಮುಂದೆ ಬರಬಹುದಾದ ರೋಗವನ್ನು ನಿರ್ಣಯಿಸಬಹುದು. 1-4-7-10ನೇ ಸ್ಥಾನಗಳಲ್ಲಿ ಪಾಪಗ್ರಹಗಳು ಇದ್ಡು ಲಗ್ನಾಧಿಪತ್ನಿಯಾದ 1ನೇ ಅಧಿಪತಿ ಮತ್ತು ಚಂದ್ರನು ಪಾಪ
ಗ್ರಹಗಳಿಂದ ಕೂಡಿ ಪಾಪ ಸ್ಥಾನಗಳಲ್ಲಿದ್ದರೂ. ಅಷ್ಟಮಾಧಿಪತಿಯಾದ 8ನೇ ಅಧಿಪತಿ ಪಾಪಗ್ರಹವಾಗಿ ಲಗ್ನದಲ್ಲಿ ಇರುವಾಗ ಲಗ್ನಕ್ಕೆ ಶುಭ ಸಂಬಂಧವಾಗಲಿ. ಶುಭಗ್ರಹಗಳ ದೃಷ್ಟಿಯಾಗಲಿ ಇಲ್ಲದೆ ಇರುವಾಗ ಇತರ 4-7-10ರಲ್ಲಿ ಶುಭಗ್ರಹಗಳು ಇಲ್ಲದೆ ಲಗ್ನಾಧಿಪತಿ ಮತ್ತು ಚಂದ್ರ ನಿರ್ಬಲರಾಗಿದ್ದರೆ ರೋಗಿಗೆ ಮಾರಣಾಂತಿಕ ಗಂಡಾಂತರ ಸಂಭವಿಸುವ ಸಾಧ್ಯತೆ ಹೆಚ್ಚಿರುತ್ತದೆ. ಲಗ್ನಾಧಿಪತಿ ಮತ್ತು ಚಂದ್ರ ಬಲಿಷ್ಟರಾಗಿದ್ದು 8ನೇ ಅಧಿಪತಿ 11ರಲ್ಲಿದ್ದರು 1-4-7-10-5-9ರಲ್ಲಿ ಅಂದರೆ ಕೇಂದ- ತ್ರಿಕೋಣದಲ್ಲಿ ಶುಭಗ್ರಹಗಳು ಅಧಿಕವಾಗಿದ್ದು ಪಾಪಗ್ರಹಗಳು 3-11ನೇ ಸ್ಥಾನಗಳಲ್ಲಿ ಇದ್ದರು 1-4-7-10ರಲ್ಲಿ ಗುರು ಶುಕ್ರರು ಇದ್ದಾಗ ರೋಗಿ ಚೇತರಿಸಿಕೊಳ್ಳುತ್ತಾನೆ ಎಂದು ಹೇಳಬಹುದು.
1-4-10ನೇ ಸ್ಥಾನಗಳು ಬಲವಾಗಿದ್ದು 7ನೇ ಸ್ಥಾನ ನಿರ್ಬಲವಾಗಿದ್ದರೆ ಈಗ ಚಿಕಿತ್ಸೆ ಕೂಡಿಸುತ್ತಿರುವ ವೈದ್ಯರಿಂದ ರೋಗ ಗುಣ ಆಗುವುದಿಲ್ಲವೆಂದು ಮತ್ತೊಬ್ಬ ವೈದ್ಯರಿಂದ ಚಿಕಿತ್ಸೆ ಕೊಡಿಸ ಬೇಕೆಂತಲು 1-10-7ನೇ ಸ್ಥಾನಗಳು ಬಲಿಷ್ಟವಾಗಿದ್ದು 4ನೇ ಸ್ಥಾನ ನಿರ್ಬಲವಾಗಿದ್ದರೆ ಕೂಡಿಸುತ್ತಿರುವ ಔಷಧವನ್ನು ಬಿಟ್ಟು ಬೇರೆ ಔಷಧಿಯನ್ನು ಕೂಡಿಸುವುದರಿಂದ ಗುಣವಾಗುವುದೆಂದು ನಿರ್ಣಯಿಸಬಹುದು. 1-4-7ನೇ ಸ್ಥಾನಗಳು ಬಲಿಷ್ಟವಾಗಿ 10ನೇ ಸ್ಥಾನ ನಿರ್ಬಲವಾಗಿದ್ದರೆ ಆಲಸ್ಯದಿಂದ ಅಂದರೆ ನಿಧಾನವಾಗಿ ಗುಣವಾಗುವುದೆಂದು ತಿಳಿಯಬಹುದು.
ಷಷ್ಠ ಸ್ಥಾನದಲ್ಲಿ ಅಂದರೆ 6ನೇ ಸ್ಥಾನದಲ್ಲಿ ಯಾವ ಗ್ರಹಗಳು ಇರುತ್ತವೆಯೋ ಅಥವಾ 6ನೇ ಅಧಿಪತಿ ಯಾವ ಗ್ರಹಗಳಿಂದ ಕೂಡಿರುತ್ತಾನೆಯೋ ಆಯಾ ಗ್ರಹಗಳ ಕಾರಕ ಸಂಬಂಧದಿಂದ ರೋಗವನ್ನು ನಿರ್ಣಯಿಸುವುದು ಉತ್ತಮ.
ಹೇಗೆಂದರೆ 6ನೇ ಸ್ಥಾನಕ್ಕಾಗಲಿ 6ನೇ ಅಧಿಪತಿಗಾಗಲಿ ರವಿಯ ಸಂಬಂಧ ಇದ್ದರೆ ಪಿತ್ತೋದ್ರೇಕದಿಂದ ರೋಗವು ಇರುವುದೆಂದು, ಚಂದ್ರ ಶುಕ್ರರ ಸಂಬಂಧ ಉಂಟಾಗಿದ್ದರೆ ಶೀತಕ್ಕೆ ಸಂಬಂಧಪಟ್ಟ ರೋಗವೆಂದು, ಶನಿ-ಬುಧರ ಸಂಬಂಧ ಉಂಟಾಗಿದ್ದರೆ ವಾತ ಸಂಬಂಧವಾದ ರೋಗವೆಂತಲೂ, ರಾಹು ಕೇತುಗಳ ಸಂಬಂಧವಾದರೆ ವಿಷ ಸಂಬಂಧವಾದದ್ದೆಂತಲೂ ಅಥವಾ ತ್ರಿದೋಷದಿಂದ ಕೂಡಿರುವುದೆಂದು ತಿಳಿಯಬಹುದು.
6ನೇ ಸ್ಥಾನಕ್ಕಾಗಲಿ 6ನೇ ಅಧಿಪತಿಗಾಗಲಿ ಕುಜ ರಾಹು ಸಂಬಂಧ ಉಂಟಾದರೆ ಕೆಟ್ಟ ಹುಣ್ಣು ಮಾಟ ಮರೆವು ಅಥವಾ ಕ್ರೂರ ಜಾಡ್ಯ ಉಂಟಾಗುವ ಸಾಧ್ಯತೆ ಇರುತ್ತದೆ.
ಚಂದ್ರ, ರಾಹು, ಶುಕ್ರ, ರಾಹು ಸಂಬಂಧವುಂಟಾದರೆ ಮೇಹರೋಗ ಶೀತ ವಿಷಮ ಜಾಡ್ಯವೆಂತಲೂ, ರವಿ, ರಾಹು ಸಂಬಂಧ ಉಂಟಾದರೆ ಸನ್ನಿಪಾತ ಜ್ವರ ಅಥವಾ ಪಿತ್ತ ಸನ್ನಿಯೆಂತಲೂ. ಶನಿ - ರಾಹು ಸಂಬಂಧ ಇದ್ದರೆ ವಾತ ಜ್ವರ ವಾತ ವಿಷಮಜಾಡ್ಯ ಅಥವಾ ವಾತ ಸನಿಯಂತಲೂ ರವಿ ಕುಜರ ಸಂಬಂಧ ಇದ್ದರೆ ಶೀತೋಷ್ಣ ವೈಪರೀತ್ಯ ಜ್ವರ ಅಥವಾ ಕ್ಷ ಯ ರೋಗ ಎಂತಲೂ ತಿಳಿಯಬಹುದು.
-ಸಂಗ್ರಹ
ಸಂತಾನಯೋಗ
ಜಾತಕನಿಗೆ ಸಂತಾನಯೋಗ ತಿಳಿಯುವುದೆಂತು?
ನಮ್ಮ ಪುರಾಣಗಳಲ್ಲಿ ಸಂತಾನಕ್ಕೋಸ್ಕರ ತಪಸ್ಸು ಮಾಡಿ ಸಂತಾನ ಪಡೆದ ಹತ್ತು ಹಲವು ಪ್ರಸಂಗಗಳನ್ನು ನೋಡುತ್ತೇವೆ. ಜ್ಯೋತಿಷವು ಸಂತಾನಕಾರಕ ಗ್ರಹ ಗುರು ಎನ್ನುತ್ತದೆ. ಹಾಗೆಯೇ ವಿಶೇಷವಾಗಿ ಗುರು, ಬುಧ, ರಾಹು ನಂತರ ಕೇತು,ಚಂದ್ರರನ್ನೂ ಗಮನಿಸಲಾಗುತ್ತದೆ. ಅದರ ಆಧಾರದ ಮೇಲೆ ಸಂತಾನ ಯೋಗ ಯಾವಾಗ ಆಗುತ್ತದೆ, ಎಷ್ಟು ಸಂತಾನ ಎಂಬ ಅಂಶವನ್ನು ತಿಳಿಯಬಹುದು. ಸಂತಾನ ವಿಚಾರ ತಿಳಿಯಲು ಲಗ್ನ, ಪಂಚಮ ಭಾಗ್ಯ ಸ್ಥಾನಗಳನ್ನು ಪರಿಶೀಲಿಸಬೇಕು. ಸಂತಾನಯೋಗ ಲೆಕ್ಕಾಚಾರ ಮಾಡಲು ಗಂಡ-ಹೆಂಡಿರ ಜಾತಕವನ್ನು ಲೆಕ್ಕ ಹಾಕಬೇಕು.
ಲಗ್ನವು ಜಾತಕನನ್ನೂ, ಪಂಚಮವು ಮುಂದಿನ ಪೀಳಿಗೆಯನ್ನು, ಭಾಗ್ಯವು ಹಿಂದಿನ ಪೀಳಿಗೆಯನ್ನು ಸೂಚಿಸುತ್ತದೆ.
ಸಂತಾನಯೋಗದ ನಿಯಮಾವಳಿ :
ಲಗ್ನಾಧಿಪತಿ ಪಂಚಮದಲ್ಲಿ ಮತ್ತು ಪಂಚಮಾಧಿಪತಿ ಲಗ್ನದಲ್ಲಿದ್ದು ಪರಿವರ್ತನೆಯಾಗಿದ್ದರೆ ಸಂತಾನ ಸುಖ ಉಂಟಾಗುತ್ತದೆ. ಪಂಚಮಾಧಿಪತಿ ಕೇಂದ್ರ ತ್ರಿಕೋಣದಲ್ಲಿದ್ದು ಗುರುವಿನ ಸಂಬಂಧ ಹೊಂದಿದ್ದರೂ ಸಂತಾನಯೋಗವಿರುತ್ತದೆ. ಪಂಚಮಾಧಿಪತಿ ಬಲಾಢ್ಯನಾಗಿ ಲಗ್ನಾಧಿಪತಿ ಗುರುವಿನಿಂದ ಶುಭ ಸಂಬಂಧವನ್ನು ಹೊಂದ್ದಿದರೆ, ಪಂಚಮ ಭಾವದಲ್ಲಿ ಶುಭಗ್ರಹವಿದ್ದು ಪಂಚಮಕ್ಕೆ ಲಗ್ನ ಪಂಚಮಾಧಿಪತಿಯ ಸಂಬಂಧವಿದ್ದರೆ, ಲಗ್ನ ಅಥವಾ ಚಂದ್ರನಿಂದ ಪಂಚಮಾಧಿಪತಿ ಮತ್ತು ಗುರು ಸುಸ್ಥಿತಿಯಲ್ಲಿರುವ ಜಾತಕರಿಗೆ, ಪಂಚಮ ಭಾವದಲ್ಲಿ ಸ್ವಕ್ಷೇತ್ರದಲ್ಲಿ ಪಾಪಗ್ರಹನಿದ್ದರೆ ಸಂತಾನ ಭಾಗ್ಯವಿರುತ್ತದೆ ಎನ್ನುತ್ತದೆ ಫಲದೀಪಿಕ. ಹೀಗೆ ಸಂತಾನವಿದೆಯೇ ಎಂಬುದನ್ನು ಮೇಲಿನ ನಿಯಮಾವಳಿಗಳಿಂದ ತಿಳಿಯಬಹುದು.
ಪರಿಹಾರಗಳು :
ಪಂಚಮಾಧಿಪತಿ ದುಸ್ಥಾನದಲ್ಲಿದ್ದಾಗ ಸಂತಾನದೋಷ ಉಂಟಾಗುತ್ತದೆ. ಪಂಚಮ ಭಾವ / ಭಾವಾಧಿಪತಿಗೆ ಶನಿ, ಚಂದ್ರ ಅಥವಾ ಬುಧನ ಸಂಬಂಧವಿದ್ದರೂ ತೊಂದರೆ ಕಾಣುತ್ತದೆ. ಅಂತಹ ಸಂದರ್ಭದಲ್ಲಿ ರಾಮೇಶ್ವರದಲ್ಲಿ ತೀರ್ಥಸ್ನಾನ, ಗಂಗಾಸ್ನಾನ, ಸಂತಾನ ಗೋಪಾಲಸ್ವಾಮಿ ವ್ರತ ಮಾಡುವುದರಿಂದ ದೋಷ ಪರಿಹಾರ ಉಂಟಾಗುತ್ತದೆ.
ಸರ್ಪಶಾಪ ಮತ್ತು ಸಂತಾನ ಭಾಗ್ಯ ಅಂದರೆ ಇದು!
ಭಾರತೀಯ ಸಂಸ್ಕೃತಿಯಲ್ಲಿ ಸರ್ಪಗಳಿಗೆ ತನ್ನದೇ ಆದ ಪ್ರಾಮುಖ್ಯತೆ ಇದೆ. ಸರ್ಪ ನಾಶದ ಸಂಕೇತವೂ ಹೌದು. ಫಲವಂತಿಕೆಗೆ ಕೂಡಾ ಸರ್ಪ ಸಂಕೇತವಾಗಿದೆ. ನಮ್ಮ ಪುರಾಣದ ಪರಿಕಲ್ಪನೆಯಲ್ಲಿ ಸೃಷ್ಟಿಯ ನಂತರದ ಸ್ಥಿತಿ ಹಾಗೂ ಲಯಗಳಿಗೆ ಅಧಿಪತಿಗಳಾದ ವಿಷ್ಣು ಮಹೇಶ್ವರರು ಕ್ರಮವಾಗಿ ಸರ್ಪವನ್ನು ಹಾಸಿಗೆಯನ್ನಾಗಿಯೂ, ಸರ್ಪವನ್ನೇ ಅಲಂಕಾರವಾಗಿ ಕೊರಳಿಗೆ ಹಾರವನ್ನಾಗಿಯೂ ಉಪಯೋಗಿಸಿಕೊಂಡಿದ್ದಾರೆ. ಹಾಲ್ಗಡಲಲ್ಲಿ ತಣ್ಣನೆಯ ಮೈ ಆದಿಶೇಷನೆಂಬ ಹಾವಿನ ಮೇಲೆ ಮಲಗಿದ ವಿಷ್ಣುವಿಗೆ ಲಕ್ಷ್ಮೀ ದೇವಿ ಯಾವಾಗಲೂ ಕಾಲು ಒತ್ತುತ್ತಿರುತ್ತಾಳೆ. ತಣ್ಣನೆಯ ಮೈಯ ಆದಿಶೇಷನ ತಣ್ಣನೆಯ ತಟಸ್ಥ ಸ್ಥಿತಿ ವಿಷ್ಣುವಿಗೆ ಬಾಧಿಸಬಾರದೆಂದಾರೆ ಕಾಲೊತ್ತುತ್ತ ಕಾವಿನ ಜೀವಂತಿಕೆಯ ಘಟಕಗಳನ್ನು ವಿಷ್ಣುವಿನಲ್ಲಿ ಅಭಾದಿತಳಾಗಿಸುತ್ತಾಳೆ. ಹಾಗೆಯೇ ನಂಜುಂಡ ನಂಜನ್ನು ಕುಡಿದಾಗ ಪಾರ್ವತಿ ಶಿವನ ಕಂಠ ಸವರುತ್ತ ವಿಷವು ದೇಹದೊಳಗೆ ಪ್ರವೇಶಿಸದಂತೆ ತಡೆಯುತ್ತಾಳೆ. ಇದರಿಂದ ಶಿವನಿಗೆ ವಿಷದಿಂದ ಉಂಟಾಗುವ ಕಂಟಕ ತಪ್ಪುತ್ತದೆ. ಒಟ್ಟಿನಲ್ಲಿ ವಿಷಮಯವಾದ ಸರ್ಪ ಸೃಷ್ಟಿಯ ಸ್ಥಿತಿ ಹಾಗೂ ಲಯಗಳ ನಡುವೆ ಒಂದು ಸಮತೋಲನವನ್ನು ನೆರವೇರಿಸಿದೆ.
ನೋಡಿ, ನಮ್ಮ ಪುರಾಣದ ಪ್ರಕಾರ ಆದಿಶೇಷ ಭೂಮಿಯನ್ನು ನೆತ್ತಿಯ ಮೇಲೆ ಹೊತ್ತಿದ್ದಾನೆ. ಅದಕ್ಕೆ ಒಂದೆಡೆ ಒಂದೇ ಭಂಗಿಯಿಂದ ಎತ್ತಿದ ಹಾಗೆ ಚಡಪಡಿಕೆಯಾದಾಗ ಕೊರಳು ಕೊಂಕಿಸುತ್ತದೆ. ಆಗ ನಮಗೆ ಭೂಕಂಪನದ ಅನುಭವವಾಗುತ್ತದೆ ಎಂದು ಪುರಾಣ ಹೇಳುತ್ತದೆ. ಇಲ್ಲೂ ವಿನಾಶಕ್ಕೆ ಮತ್ತೆ ಸರ್ಪವೇ ಕಾರಣ. ಭೂಕಂಪ ಸರ್ಪದ ಕಾರಣದಿಂದಾಗಿ ಆಗುತ್ತದೆ.
ಏನು ಈ ಸರ್ಪ ಶಾಪ?
ಜಾತಕ ಶಾಸ್ತ್ರದಲ್ಲಿ 5ನೇ ಮನೆ ಸಂತಾನದ ಮನೆಯಾಗಿದೆ. ರಾಹು ಸರ್ಪದ ಸಂಕೇತವಾಗಿದ್ದಾನೆ. ಜಾತಕದಲ್ಲಿ ದೋಷ ಕಾರಕನಾದ ರಾಹುವು ಸಂತಾನದ ಮನೆಯನ್ನು ಬಾಧಿಸಿದ್ದಲ್ಲಿ ಹುಟ್ಟಿದ ಮಕ್ಕಳು ಸಾಯುವುದು, ಬಾಧೆ ಪಡುವುದು, ತಂದೆತಾಯಿಗಳನ್ನು ಗೋಳು ಹೊಯ್ದುಕೊಳ್ಳುವುದು ಸಂಭವಿಸುತ್ತದೆ. ಈ ರಾಹುವಿನ ಜೊತೆಗೆ ಕುಜ ಶನಿಗಳು ಕ್ಷೀಣ ಚಂದ್ರರು ಅಸ್ತಂಗತ ದೋಷ ಇರುವ ಸೂರ್ಯ ಇತ್ಯಾದಿ ವಿಚಾರಗಳಿಂದಾದ ಬಾಧೆ ಅಗಾಧವಾಗಿದ್ದಾಗ ಸಂತಾನ ಹೀನತೆ ಸಂತಾನನಾಶ ಮಕ್ಕಳಿಂದ ನಿರಂತರ ನೋವುಗಳು ಇತ್ಯಾದಿ ಸಂಭವಿಸುತ್ತ ಜೀವನಕ್ಕೆ ಅರ್ಥ ಕಳೆದುಬಿಡುತ್ತದೆ. ಬೇರೆಯವರ ಬಲಿ ಹೇಳಿಕೊಳ್ಳಲಾಗದ ತಮಗೆ ತಾವೇ ನಿಭಾಯಿಸಲಾಗದ ಸಮಸ್ಯೆಗಳಲ್ಲಿ ವ್ಯಕ್ತಿ ತೊಳಲಾಡುತ್ತಾನೆ.
ಸಂತಾನಭಾಗ್ಯಕ್ಕೆ ತೊಂದರೆ ಹಾಗೂ ವಿಳಂಬಕ್ಕೆ ಸರ್ಪಶಾಪ
ಮುಖ್ಯವಾಗಿ ಸಂತಾನ ಸ್ಥಾನಕ್ಕೆ ಸರ್ಪಶಾಪ ಅಂಟಿದಾಗ ಮಕ್ಕಳೂ ಹುಟ್ಟಿ ಬಾಧೆ ಹೊಂದುವುದು ಮಕ್ಕಳು ಸಾಯುವುದು ಇತ್ಯಾದಿಯಲ್ಲದೆ ಮಕ್ಕಳೇ ಆಗದಿರುವ ತಾಪತ್ರಯ ಎದುರಾಗಬಹುದು. ಸಂತಾನ ಸ್ಥಾನಕ್ಕೆ ದೋಷವಿದ್ದಾಗ ಎಂಬುದೇ ಅಲ್ಲ. ಭಾಗ್ಯ ಹಾಗೂ ಸುಖಸ್ಥಾನಗಳ ಸಂಬಂಧ ತಾನು ಪಡೆದ ದೋಷದಿಂದಾಗಿ ಯಾವುದೇ ರೀತಿಯಲ್ಲಿ, ಸಂತಾನ ಸ್ಥಾನದೊಂದಿಗೆ ಏನಾದರೂ ಬಹು ಮುಖ್ಯವಾದ ಕಿಂಚತ್ ಸಂಬಂದ ಹೊಂದಿದ್ದರೆ ಸಂತಾನ ಹೀನತೆ ಉಟಾಗಬಹುದು. ಹುಟ್ಟಿದ ಮಕ್ಕಳಿಂದ ಬಹುವಿಧವಾದ ಕಿರುಕುಳಗಳನ್ನು ಎದುರಿಸಬೇಕಾಗಬಹುದು. ಈ ನಿಟ್ಟಿನಲ್ಲಿ ಶನೈಶ್ಚರನೂ ಚಂದ್ರನೂ, ತಂತಮ್ಮ ಒಟ್ಟಾಗಿರುವ ಸ್ಥಿತಿ ಅಥವಾ ಪರಸ್ಪರ ದೃಷ್ಟಿ ಹೊಂದಿದ್ದಾಗಲೂ ಸಂತಾನದ ವಿಷಯದಲ್ಲಿ ಕಿರುಕುಳಗಳು ಕಟ್ಟಿಟ್ಟ ಬುತ್ತಿ. ಯಾವಾಗಲೂ ಶನೈಶ್ಚರನ ಜೊತೆಗಿನ ಚಂದ್ರಯುತಿ ಅನೇಕ ಕಿರಿಕಿರಿಗಳನ್ನು ಎದುರಿಗಿಡುತ್ತದೆ. ಶನಿಕಾಟದ ಸಂದರ್ಭದಲ್ಲಿ ವಿಪರೀತವಾಗಿ ಸಂತಾನದ ವಿಷಯದಲ್ಲಿ ಕಿರುಕುಳಗಳು ಎದುರಾದೀತು. ಅನೇಕ ಉದಾಹರಣೆಗಳೊಂದಿಗೆ ಈ ವಿಚಾರಗಳನ್ನು ಶ್ರುತಪಡಿಸಬಹುದಾಗಿದೆ. ಸ್ಪಷ್ಟವಾಗಿ ಇಂತ ಬವಣೆ, ಕಿರಕಿರಿ ಹೊಂದಿದವರ ಜಾತಕದಲ್ಲಿ ರಾಹು ದೋಷ, ಸರ್ಪದೋಷ ಖಂಡಿತಾ ಇರುತ್ತದೆ. ಹೀಗಾಗಿಯೇ ಭಾರತೀಯ ಸಂಸ್ಕೃತಿಯಲ್ಲಿ ಸರ್ಪಶಾಪ ಅಥವಾ ಸರ್ಪದೋಷವನ್ನು ಬಹು ಪ್ರಮುಖವಾಗಿ ಪರಿಗಣಿಸುತ್ತಾರೆ.
ಸರ್ಪ ಪ್ರತಿಷ್ಠೆ, ಸರ್ಪ ಸಂಸ್ಕಾರ ಇತ್ಯಾದಿ ರಾಹು ಜಪ, ಸಂತಾನ ಗೋಪಾಲ ಜಪ ಇತ್ಯಾದಿ ಪರಿಹಾರ ಸ್ವರೂಪವಾಗಿ ನೆರವೇರಿಸುತ್ತಾರೆ. ಈ ಸರ್ಪಶಾಪ ಜನ್ಮ, ಜನ್ಮಾಂತರದಿಂದ ಅಂಟಿಕೊಂಡು ಬಂದ ಸೂಚನೆಗಳು ಜಾತಕದಲ್ಲಿ ದೊರಕುತ್ತಿರುತ್ತದೆ. ನಮ್ಮ ಸಂಸ್ಕೃತಿಯಲ್ಲಿ ಹಾವು ಹೊಡೆಯುವುದನ್ನಾಗಲೀ, ನೋಡುವುದಾಗಲೀ ಪಾಪ ಎಂದು ಪರಿಗಣಿಸಲ್ಪಟ್ಟಿದೆ. ಆದರೆ ಇಂಥದೊಂದು ಮೂಢನಂಬಿಕೆಯಲ್ಲಿ ನಖಶಿಖಾಂಥವಾಗಿ ಮುಳುಗುವುದೂ ಬೇಡ. ಅನಿವಾರ್ಯವಾದ ಸಂದರ್ಭದಲ್ಲಿ ಆತ್ಮರಕ್ಷಣೆಗಾಗಿ ಸರ್ಪವನ್ನು ಹೊಡೆಯಲೇ ಬೇಕಾಗುತ್ತದೆ. ಹೀಗೆ ಹೊಡೆದಿದ್ದರಿಂದಾಗಿ ಸರ್ರನೆ ಒಬ್ಬನ ಜಾತಕದಲ್ಲಿ ಸರ್ಪ ಶಾಪ ಬಂದು ಬೇರು ಬಿಟ್ಟಿತು ಎಂದು ಅರ್ಥವಲ್ಲ. ಸರ್ಪಶಾಪದ ಕಲ್ಪನೆಯೇ ಬೇರೆ. ಆ ಕಲ್ಪನೆಯ ಪ್ರಕಾರ ಸರ್ಪವನ್ನು ಸಂಕೇತಿಸುವ ರಾಹು, ರಾಹುವನ್ನು ಒಳಗೊಳ್ಳುವ ಗ್ರಹಗಳು ಒಟ್ಟಾರೆಯಾದ ಅವರ ದುರ್ಬಲ ಸ್ಥಿತಿಯ ಸಂದರ್ಭದಲ್ಲಿ ಒಂದಿಷ್ಟು ತಡೆಯಲು ತೊಡಕಾಗುವ ಅಗಾಧ ಚಡಪಡಿಕೆ ಅಸಹಾಯಕತೆಗಳಿಗೆ ಕಾರಣವಾಗುತ್ತದೆ. ಇದು ಸತ್ಯ.
ಯಾರು ಮಕ್ಕಳಿಂದ ತೊಂದರೆಗೊಳಗಾಗಿದ್ದಾರೆ ?
ಇಲ್ಲಿ ಅವರೆಲ್ಲ ಯಾರೆಂಬ ಹೆಸರುಗಳು ಬೇಡ. ಸೂಕ್ಷ್ಮವಾಗಿ ಅವರನ್ನು ಪ್ರಸ್ಥಾಪಿಸುತ್ತೇನೆ. ಜಾತಕಶಾಸ್ತ್ರದಲ್ಲಿ ಸರ್ಪದೋಷ ಶಾಪ ಹಾಗೂ ಇದನ್ನು ಸುತ್ತವರಿದು ಕಾಡುವ ಗ್ರಹಗಳು ಹೇಗೆ ಸಂತಾನದ ವಿಷಯದಲ್ಲಿ ವಿಳಂಬ, ಸಂತಾನಹೀನತೆ, ಮಕ್ಕಳ ಕಾಟ, ತಮ್ಮೆದುರೇ ಮಕ್ಕಳು ಪರದಾಡುವ ವಿಚಾರ ಗಮನಿಸುತ್ತಾರೆ. ಪರದಾಡುತ್ತಾರೆಂಬುದನ್ನು ಉದಾಹರಿಸಲು ಸರ್ಪಶಾಪ ಎಂಬುದು ಒಂದು ಕಟ್ಟುಕಥೆಯಲ್ಲ.
ಬಹಳ ಪ್ರಮುಖ ಹೆಸರು ಗಳಿಸಿದ ನಮ್ಮ ದೇಶದ ದೊಡ್ಡ ರಾಜ್ಯದ ಮುಖ್ಯಮಂತ್ರಿಗಳೊಬ್ಬರಿಗೆ ಸಂತಾನ ಭಾಗ್ಯವಿರಲಿಲ್ಲ. ಚಾಣಾಕ್ಯ ಮುಖ್ಯಮಂತ್ರಿ ಎಂದು ಹೆಸರು ಗಳಿಸಿದ ಜನಾಕರ್ಷಣೆಯಿಂದ ಮಿಂಚಿದ ಮತ್ತೂಂದು ರಾಜ್ಯದ ಮುಖ್ಯಮಂತ್ರಿ ಮಗನಿಂದ ಅಂತ್ಯಕಾಲದಲ್ಲಿ ಯಾತನೆ ಪಟ್ಟರು. ಬಹು ಪ್ರಖ್ಯಾತ ಮಹಿಳೆಯೊಬ್ಬರು ಮಗನಿಂದ ಇನ್ನಿಲ್ಲದ ಸಂಕಟಗಳನ್ನು ಎದುರುಹಾಕಿಕೊಂಡರು. ಜನಪ್ರಿಯ ನಟರೊಬ್ಬರಿಗೆ ಸಂತಾನ ಭಾಗ್ಯ ಕೂಡಿಬರಲೇ ಇಲ್ಲ. ಇನ್ನೊಬ್ಬರು ಇದೇ ರೀತಿಯ ಪ್ರಖ್ಯಾತ ನಟ ತನ್ನ ಸಾವಿನ ದಿನಗಳ ವರೆಗೂ ತಮ್ಮ ಮಗನಿಂದಾಗಿ ಎದುರಿಸಿದ ಕಷ್ಟಗಳು ಅಷ್ಟಿಷ್ಟಲ್ಲ. ಸಾಹಿತಿಗಳು ಮಾಜಿ ಮುಖ್ಯಮಂತ್ರಿಗಳು ಸಾಂಸ್ಕೃತಿಕ ವಕ್ತಾರರು ಎಂಬೆಲ್ಲಾ ದೊಡ್ಡ ಯಾದಿಯೇ ಇದೆ. ಸರ್ಪದೋಷ ಸರ್ಪಶಾಪ ಇವರನ್ನೆಲ್ಲ ಕಾಡಿ ಹಣ್ಣುಗಾಯಿ ನೀರುಗಾಯಿಯಾಗಿಸಿದೆ.
ಪಂಚಮ ಸ್ಥಾನ ದೋಷ ಸಂತಾನ ಭಾಗ್ಯಕ್ಕೆ ದಕ್ಕೆ ತರಬಲ್ಲುದೆ?
ಜನ್ಮಕುಂಡಲಿಯಲ್ಲಿ ಐದನೆಯ ಮನೆಯು ಬಹಳ ಮಹತ್ವದ ಸ್ಥಳವಾಗಿದೆ. ಸಹಜವಾಗಿಯೇ ಇದು ತ್ರಿಕೋನ ಸ್ಥಾನವಾದುದರಿಂದ ಮಾನವನ ಸಂಬಂಧವಾದ ಯಶಸ್ಸಿನ ಏರಿಳಿತಗಳಲ್ಲಿ ಈ ಸ್ಥಳವು ನಿರ್ಣಾಯಕವಾದ ಪಾತ್ರಗಳನ್ನು ವಹಿಸುತ್ತದೆ. ಮುಖ್ಯವಾಗಿ ಸಂತಾನ- ಅಂದರೆ ಮಕ್ಕಳ ಪ್ರಾಪ್ತಿಯ ಬಗೆಗೆ ಈ ಮನೆಯನ್ನು ವರವಾಗಿ ವಿಶ್ಲೇಷಿಸಬೆಕಾಗುತ್ತದೆ. ಕೇವಲ ಮಕ್ಕಳ ಪ್ರಾಪ್ತಿ ಅಥವಾ ಅಪ್ರಾಪ್ತಿಯ ವಿಷಯವೊಂದೇ ಅಲ್ಲ, ಆ ಮನೆಯ ಶಕ್ತಿ ಹಾಗೂ ದೌರ್ಬಲ್ಯಗಳ ಮೇಲಿಂದ ಮಕ್ಕಳ ಸಾವು, ಮಕ್ಕಳಿಂದ ಎದುರಾಗುವ ಪೀಡೆ, ಮನೋಲ್ಲಾಸ, ಇತ್ಯಾದಿ ಇತ್ಯಾದಿಗಳನ್ನು ಕೂಡ ಈ ಪಂಚಮಭಾವದಿಂದ ನಿರ್ಣಯಿಸಬಹುದು. ಕುಟುಂಬ ಸ್ಥಾನ, ಲಾಭ, ಸುಖ ಹಾಗೂ ಭಾಗ್ಯ ಸ್ಥಾನಗಳು ಕೂಡಾ ತಂತಮ್ಮ ಶಕ್ತಿ ಹಾಗೂ ಮಿತಿಗಳೊಡನೆ ಈ ಪಂಚಮ ಭಾವವನ್ನು ನಿಯಂತ್ರಿಸಬಲ್ಲವು. ಮನುಷ್ಯನ ಅದೃಷ್ಟ ದೈವಬಲ, ಒಟ್ಟಾರೆಯಾಗಿ ಪಂಚಮ ಸಂತಾನ ಭಾವದಿಂದಲೇ ಹೆಚ್ಚು ಸ್ಪಷ್ಟ ಎಂಬುದರ ಮೇಲಿಂದ ಪಂಚಮ ಸ್ಥಳ ಮಹತ್ವದ ಆಯಕಟ್ಟಿನ ಸ್ಥಳವಾಗಿದೆ.
ಸರ್ಪದೋಷ ಸಂತಾನ ದೋಷ ತರಬಲ್ಲುದೇ?
ಸಂತಾನ ದೋಷಕ್ಕೆ ಸರ್ಪ ದೋಷವೂ ಕಾರಣವಾಗಬಲ್ಲದೇ ವಿನಾ ಸಂತಾನ ದೋಷಕ್ಕೆ ಸರ್ಪದೋಷವೇ ಮುಖ್ಯ ಕಾರಣವಲ್ಲ. ಪಂಚಮ ಸ್ಥಾನದ ಅಧಿಪತಿಗಿರುವ ದೋಷವು, ಪಂಚಮಭಾವದಲ್ಲಿರುವ ಗ್ರಹಗಳು ಈ ಗ್ರಹಗಳಿಗೆ ಒದಗಿದ ನೀಚತನ ಅಥವಾ ಅಸ್ತಂಗತ ದೋಷಗಳು, ಸಂತಾನ ಹೀನತೆಯನ್ನು ಅಥವಾ ಸಂತಾನ ವಿಳಂಬವನ್ನು ಕೊಂಡಿ ಕೊಡಿಸಬಲ್ಲುದು.
ಹಾಗೆಯೇ ಈ ಪಂಚಮಭಾವ ರಾಗ-ಭಾವಗಳನ್ನು, ಉದ್ವಿಗ್ನತೆ, ನಿರುದ್ವಿಗ್ನತೆಗಳನ್ನು ಕೂಡಾ ನಿರ್ಧರಿಸುವುದರಿಂದ ಬಹುತೇಕವಾಗಿ ನಿರ್ವಿàರ್ಯತೆ ಪುರುಷನಿಗೆ ಅಥವಾ ಬಂಜೆತನ ಮಹಿಳೆಗೆ ದೋಷ ಅಲ್ಲದಿದ್ದರೂ ಹೆಣ್ಣು ಹಾಗೂ ಗಂಡಿನ ಮಿಲನ ಕ್ರಿಯೆಯನ್ನೇ ದೋಷಪೂರ್ಣವಾಗಿ ಮಾಡಿಬಿಡಬಲ್ಲದು. ಹೀಗಾಗಿ ಗಂಡು ಹಾಗೂ ಹೆಣ್ಣಿನ ಜಾತಕಗಳ ಜೋಡಣೆಯ ಸಂದರ್ಭದಲ್ಲೇ ಈ ಆಂಶವನ್ನು ಸರಿಯಾಗಿ ಪರಿಶೀಲಿಸಿಯೆ ಜಾತಕ ಹೊಂದಾಣಿಕೆ ಸಾಧ್ಯವಾಗಬೇಕು. ಗಂಡು ಹಾಗೂ ಹೆಣ್ಣು ಇಬ್ಬರೂ ಉದ್ವಿಗ್ನ ಸ್ಥಿತಿಯವರಾದರೆ ಪೂರ್ವಪುಣ್ಯ ಸ್ಥಾನದ ಚಿಕ್ಕ ದೋಷವೂ ಕೂಡಾ ಸಂತಾನಹೀನತೆಯನ್ನು ತಂದೊಡ್ಡಬಹುದಾಗಿದೆ. ಉದ್ವಿಗ್ನತೆ, ನಿರುದ್ವಿಗ್ನತೆಗಳು ಒಂದು ಹೆಣ್ಣಿನಲ್ಲಿದ್ದರೆ ಇದಕ್ಕೆ ವಿರುದ್ದ ಭಾವದ ಗಂಡು ಆಕೆಗೆ ಸರಿಯಾದ ಜೊತೆಗಾರನಾಗಬಲ್ಲ. ಪೂರ್ವಪುಣ್ಯ ಸ್ಥಾನದ ತೀವ್ರ ದೌರ್ಬಲ್ಯಗಳು ಕೂಡಾ ಹೆಣ್ಣುಗಂಡುಗಳ ಸಂಯೋಜನೆಯೊಂದಿಗೆ ನಿವಾರಣೆಯಾಗಿ ಉತ್ತಮ ಸಂತಾನಕ್ಕ ಕಾರಣವಾಗಬಲ್ಲದು.
ಮಕ್ಕಳಿದ್ದರೂ ಪೀಡೆ
ಮನುಷ್ಯನ ಬದುಕಿನಲ್ಲಿ ಪೀಡೆಯ ಘಟ್ಟ ಎಲ್ಲಿಂದ ಪ್ರಾರಂಭ ಎಂದು ನಿಖರವಾಗಿ ಊಹಿಸಬಾರದು. ಉತ್ತಮವಾದ ಬಾಲ್ಯ, ಯುಕ್ತ ವಯಸ್ಸಿನಲ್ಲಿ ಮದುವೆ, ಶೀಘ್ರ ಸಂತಾನ ಅದರಲ್ಲೂ ಪುತ್ರ ಪ್ರಾಪ್ತಿಯ ಸುಯೋಗ. ಕೇಳಬೇಕೆ..? ಸ್ವರ್ಗಕ್ಕೆ ಮೂರೇ ಗೇಣು. ಆದರೆ ಹುಣ್ಣಿಮೆಯ ಚಂದ್ರನಂತೆ ಪರಿಶೋಭಿಸಬೇಕಾದ ಮಗನೋ, ಮಗಳ್ಳೋ ಅಡ್ಡದಾರಿ ಹಿಡಿದರೆ, ದುರಹಂಕಾರ, ಅಲ್ಪಮತಿಗಳಿಂದ ಬಳಲಿದರೆ, ಮನುಷ್ಯನ ನಡುವಯಸ್ಸು, ವೃದ್ಧಾಪ್ಯ ಕೇಳುವುದೇ ಬೇಡ, ನಿತ್ಯ ನರಕವಾಗಬಲ್ಲದು. ಸಂತಾನ ಸ್ಥಾನವಾದ ಪಂಚಮ ಭಾವಕ್ಕೆ ದೋಷದ ಅಬುìದ ಪೀಡೆ ಸಂತಾನಹೀನತೆಯನ್ನು ಮಾತ್ರ ಕೊಡುವ ರೀತಿಯಲ್ಲಿರುತ್ತದೆ ಎಂದು ಭಾವಿಸಬಾರದು. ಸಂತಾನದೋಷಕ್ಕೆ, ಪೀಡಕರಾದ ಮಕ್ಕಳೂ ತಂತಮ್ಮ ಪಾಲನ್ನು ಧಾರೆ ಎರೆಯಬಲ್ಲರು. ಹೀಗಾಗಿ ಬಂಜೆ ಎಂದು ಯಾರನ್ನೂ ಜರೆಯದಿರಿ. ನಿಮ್ಮನ್ನು ಬಂಜೆಯಲ್ಲಿ ಎಂದು ಸಾಬೀತು ಪಡಿಸಿದ ಮಕ್ಕಳೇ, ಮುಂದೆ ವ್ಯಾಘ್ರವಾಗಿ ತಲೆ ತಿನ್ನಬಲ್ಲರು.
ಅಶುಭ ಗ್ರಹಗಳ ದಶಾಕಾಲ ಮತ್ತು ಪುತ್ರನಾಶ
ಯಾವಾಗಲೂ ಅಶುಭ ಗ್ರಹಗಳಾದ ಸೂರ್ಯ, ಶನಿ, ಕುಜ, ರಾಹು, ಕೇತುಗಳು ಸಂತಾನ ಭಾವದಲ್ಲಿರುವುದು ಮಕ್ಕಳ ದೃಷ್ಟಿಯಿಂದ ಕ್ಷೇಮಕರವಲ್ಲ. ಯೋಗಕಾರಕನಾಗಿ, ಜಾತಕಕ್ಕೆ ಒಳ್ಳೆಯವನಾಗಿ ಅಶುಭಗ್ರಹಗಳು ಇದ್ದರೂ, ಶನಿಕಾಟದ ಸಂದರ್ಭದಲ್ಲಿ, ದುಷ್ಟ ದಶಾಕಾಲದಲ್ಲಿ ಈ ಅಶುಭಗ್ರಹಗಳೇನಾದರೂ ದುಷ್ಟ ದಶಾನಾಥನ ಕಕ್ಷೆಯಲ್ಲಿ ನರಳುವ ಸಂದರ್ಭಗಳು ಒದಗಿದಲ್ಲಿ ಮಕ್ಕಳಿಂದ ತೊಂದರೆ, ಸಂತಾನ ನಾಶ, ಸಂತಾನಹೀನತೆ ಇತ್ಯಾದಿ ಏನೋ ಒಂದು ನಿಸ್ಸಂಶಯವಾಗಿಯೂ ಸಂಭವಿಸಿಯೇ ತೀರುತ್ತದೆ.
ಈ ಮೇಲಿನ ಅಂಶವನ್ನು ಭಾರತದ ಮಾಜಿ ಪ್ರಧಾನಿಯೋರ್ವರ ಜಾತಕದಲ್ಲಿ ಗಮನಿಸಬಹುದಾಗಿದೆ. ಇವರ ಜಾತಕದಲ್ಲಿ ಪಂಚಮ ಸ್ಥಾನ ಸ್ಥಿತ ಸೂರ್ಯ, ಅವನ ವೈರಿಯಾದ ಶನೈಶ್ಚರನ (ಅನುರಾಧಾ) ನಕ್ಷತ್ರದಲ್ಲಿದ್ದುದು ಪ್ರಮುಖವಾಗಿದೆ. ಜೊತೆಗೆ ಸೂರ್ಯನಿಗೆ ಪಂಚಮಾಧಿಪತಿ (ಯೋಗಕಾರಕನೂ ಕೂಡ) ಕುಜನೊಂದಿಗೆ ಪರಿವರ್ತನ ಯೋಗವೂ ಇತ್ತು. ಇದರಿಂದಾಗಿ ಮುಂದೆ ಬಹು ಮುಖ್ಯವಾದ ಅಧಿಕಾರ ಯೋಗವನ್ನೂ ಪಡೆಯುವ ಪ್ರತಿಭೆಯನ್ನು ಇವರ ಪುತ್ರನಿಗೆ ಈ ಪರಿವರ್ತನಯೋಗ ಒದಗಿಸಿ ಕೊಡುವಷ್ಟು ಬಲವಾಗಿತ್ತು. ಆದರೆ, ಶನೈಶ್ಚರನ ದಶಾಕಾಲದಲ್ಲಿ ಶನೈಶ್ಚರ ಸೂರ್ಯನ ನಕ್ಷತ್ರವಾದ ಉತ್ತರಾ ನಕ್ಷತ್ರದಲ್ಲಿ ಸಂಚರಿಸುವಾಗ ಪುತ್ರನನ್ನು ಕಳೆದುಕೊಳ್ಳುವ ಯೋಗವನ್ನು ಈ ಮಾಜಿ ಪ್ರಧಾನಿಗಳಿಗೆ ಒದಗಿಸಿಬಿಟ್ಟಿದ್ದ. ಕಳೆದುಕೊಂಡ ಪ್ರಧಾನಿ ಪಟ್ಟ ಹಿಂತಿರುಗಿ ಪಡೆದ ಸಂಭ್ರಮದಲ್ಲೂ ಅವರಿಗೆ ಈ ಶೋಕ ಶನಿ ಹಾಗೂ ಸೂರ್ಯರ ದೋಷ ಪೂರ್ಣ ಜಟಾಪಟಿಯಿಂದ ಆವರಿಸುವಂತಾಯ್ತು.
ಸರ್ಪ ದೋಷ ಹಾಗೂ ಸಂತಾನ ಪೀಡೆ
ಭಾಗ್ಯಸ್ಥಾನದಲ್ಲಿನ ಸರ್ಪ ನೆರಳು, ಸುಖ ಸ್ಥಾನದಲ್ಲಿನ ಸರ್ಪನೆರಳು, ಪಂಚಮ (ಸಂತಾನ) ಸ್ಥಾನದ ಸರ್ಪ ನೆರಳು ಮುಖ್ಯವಾಗಿ ರಾಹು ದೋಷದಿಂದ ಒದಗುವಂಥದ್ದು. ಹೀಗಾಗಿ ರಾಹುವೂ ವ್ಯಕ್ತಿಯೋರ್ವನ, ಓರ್ವಳ ಜಾತಕದಲ್ಲಿ ಸಂತಾನ ದೋಷಕ್ಕೆ ಬಹು ಪ್ರಮುಖವಾದ ಘಟಕವಾಗಿ ಬಿಡುತ್ತದೆ.
ಭಾರತೀಯ ಸಂಸ್ಕೃತಿಯಲ್ಲಿ ಸರ್ಪಾರಾಧನೆಗೆ ಮಹತ್ವದ ಪಾತ್ರವಿದೆ. ನಾಗಬನ, ನಾಗಪೂಜೆ, ನಾಗಾರಾಧನೆ, ನಾಗಪ್ರತಿಷ್ಠೆ, ನಾಗ ಸಂಸ್ಕಾರ ಇತ್ಯಾದಿಗಳನ್ನ ನಾಗರ ಪ್ರೀತ್ಯರ್ಥವಾಗಿ ನೆರವೇರಿಸಿ ಮುಖ್ಯವಾಗಿ ಸಂತಾನ ಫಲಕ್ಕಾಗಿ, ಸಂತಾನಫಲ ದೊರಕಿದರೂ ಅಪ್ರಾಪ್ತ ವಯಸ್ಸಿನಲ್ಲಿ ಮಕ್ಕಳನ್ನು ಕಳೆದುಕೊಳ್ಳುವ ಪ್ರಾರಬ್ಧ ನಿವಾರಣೆಗಾಗಿ, ಮಕ್ಕಳಿಂದಲೇ ಪರಮ ಪೀಡೆಗಳನ್ನು ಅನುಭವಿಸುವ ಯಾತನೆಯ ಶಮನಕ್ಕಾಗಿ ಸರ್ಪದೋಷಗಳನ್ನು ಕಳೆದುಕೊಳ್ಳುತ್ತಾರೆ.
ಚಂದ್ರನ ಕ್ಷೀಣ ಸ್ಥಿತಿ ಸಂತಾನಕ್ಕೆ ಅಪಾಯಕಾರಿ
ಸಂತಾನ ಸ್ಥಾನವಾದ ಪೂರ್ವಪುಣ್ಯ ಅಥವಾ ಪಂಚಮಭಾವಕ್ಕೆ ದೋಷ ವಿದ್ದಾಗ ಜಾತಕದಲ್ಲಿ ಚಂದ್ರನೇ ಕ್ಷೀಣನಾಗಿ ಪಂಚಮಾಧಿಪತಿಯೂ ಆಗಿದ್ದರೆ ಪಂಚಮ ಭಾವದಲ್ಲೇ ಕ್ಷೀಣ ಚಂದ್ರನಿದ್ದರೆ ಸಂತಾನಹೀನತೆ ದೊಡ್ಡ ಸಮಸ್ಯೆಯಾಗಬಲ್ಲುದು. ಈ ಸಂದರ್ಭದಲ್ಲಿ ತಂದೆ-ತಾಯಿಗಳ, ಅತ್ತೆ- ಮಾವಂದಿರ ಸಾಂತ್ವನ ಬೆಂಬಲದ ಆಸರೆ, ಆರೈಕೆ, ಧೈರ್ಯದ ಮಾತು ಚಂದ್ರನ ದೋಷವನ್ನು ನಿವಾರಿಸಬಲ್ಲದು. ಚಂದ್ರನೊಟ್ಟಿಗೆ ಸಂಪನ್ನವಾದ ಯೋಗವನ್ನು ಒಡಮೂಡಿಸುವ ಗುರುಗ್ರಹದ ಶಕ್ತಿಯೂ ಕೂಡಾ ಚಂದ್ರನ ಕ್ಷೀಣತೆಯನ್ನು ಸಾಕಷ್ಟು ದೂರ ಮಾಡುತ್ತದೆ. ಗುರುಗ್ರಹವು ಸಹಜವಾಗೇ ಚಂದ್ರನ ಜೊತೆ ಅಪಾರವಾದ ಒಳಿತುಗಳನ್ನು ಒಬ್ಬ ವ್ಯಕ್ತಿಗೆ ಕೊಡ ಮಾಡುವಲ್ಲಿ ನಿರಂತರವಾಗಿ ಹೆಣಗುತ್ತಿರುತ್ತದೆ.
ಯೋಗ್ಯ ಸಂತಾನಕ್ಕೆ ಸಂಸ್ಕಾರ
ಆಷಾಢ ಕಳೆದು ಶ್ರಾವಣಮಾಸದ ಹೊಸ್ತಿಲಲ್ಲಿದ್ದೇವೆ. ಆಷಾಢಕ್ಕೆ ತವರಿಗೆ ತೆರಳಿದ ಹೆಣ್ಣುಮಕ್ಕಳು ಹಬ್ಬದ ಸಂಭ್ರಮದೊಂದಿಗೆ ಗಂಡನ ಮನೆಗೆ ಬರುತ್ತಾರೆ. ಒಂದೆಡೆ ಸಂಭ್ರಮ, ಸಂತೋಷ, ಉಲ್ಲಾಸ. ಮತ್ತೊಂದೆಡೆ ಪ್ರತಿಯೊಬ್ಬರಿಗೂ ತಮ್ಮ ಬದುಕು ಚೆನ್ನಾಗಿರಬೇಕು. ತಮಗೆ ಹುಟ್ಟುವ ಮಕ್ಕಳು ಉತ್ತಮರಾಗಿರಬೇಕು, ಆರೋಗ್ಯವಂತರಾಗಿರಬೇಕು, ಭವಿಷ್ಯದಲ್ಲಿ ಯಶಸ್ಸನ್ನು ಹೊಂದಬೇಕು ಎಂದು ಬಯಸುವುದು ಸಹಜವೇ.
ನಮ್ಮ ಸಂಸ್ಕೃತಿಯಲ್ಲಿ ಆ ಕಾರಣ 'ಗರ್ಭದಾನ ಸಂಸ್ಕಾರ' ವಿಧಾನವನ್ನು ರೂಪಿಸಲಾಗಿದೆ. ಶಾಸ್ತ್ರೋಕ್ತ ವಿಧಾನದಿಂದ ಪತಿ ಪತ್ನಿಯರ ಮಿಲನವೇ ಗರ್ಭದಾನ ಸಂಸ್ಕಾರವಾಗಿದೆ. ಯೋಗ್ಯ ಸಂತಾನೋತ್ಪತ್ತಿಯೇ ಇದರ ಉದ್ದೇಶವಾಗಿದೆ. ಜ್ಯೋತಿಷ್ಯಶಾಸ್ತ್ರದಲ್ಲಿ ಇದಕ್ಕೆಂದೇ ಕೆಲವೊಂದು ಮಹೂರ್ತಗಳನ್ನು ನಿರ್ಣಯಿಸಲಾಗಿದೆ.
ಸೂಕ್ತ ತಿಥಿಗಳು - ಕೃಷ್ಣಪಕ್ಷದಲ್ಲಿ 1,2,3,5,7,10 ಮತ್ತು ಶುಕ್ಲಪಕ್ಷದಲ್ಲಿ 2,3,5,7,10,12,13.
ರಿಕ್ತ ತಿಥಿಗಳು (4,9,14): ಷಷ್ಠಿ, ಅಷ್ಟಮಿ, ಏಕಾದಶಿ, ಪೌರ್ಣಮಿ, ಅಮಾವಾಸ್ಯೆ ತಿಥಿಗಳು ವರ್ಜವಾಗಿವೆ. ಇದಲ್ಲದೆ, ತಂದೆ-ತಾಯಿಯ ಶ್ರಾದ್ಧ ತಿಥಿಗಳು, ತಿಥಿ ಗಂಡಾಂತ ಸಮಯ ವರ್ಜಿತವಾಗಿರುತ್ತದೆ.
ಸೂಕ್ತ ವಾರಗಳು : ಸೋಮವಾರ, ಬುಧವಾರ, ಗುರುವಾರ, ಶುಕ್ರವಾರ ಸೂಕ್ತವಾಗಿವೆ. ರವಿವಾರ, ಮಂಗಳವಾರ, ಶನಿವಾರ ನಿಷಿದ್ದವಾಗಿವೆ.
ನಕ್ಷತ್ರಗಳು : ಮೃಗಶಿರಾ, ರೋಹಿಣಿ, ಉತ್ತರಾ, ಫಾಲ್ಗುಣಿ, ಹಸ್ತ, ಸ್ವಾತಿ,ಅನುರಾಧಾ, ಉತ್ತರಾಷಾಢ, ಶ್ರವಣ, ಧನಿಷ್ಠ, ಶತಭಿಷಾ, ಉತ್ತರಾಭಾದ್ರಪದ ಈ ಹನ್ನೊಂದು ನಕ್ಷತ್ರಗಳು ಸೂಕ್ತವಾಗಿವೆ. ಇವುಗಳ ಅಭಾವದಲ್ಲಿ, ಅಶ್ವಿನಿ, ಪುನರ್ವಸು, ಪುಷ್ಯ ಮತ್ತು ಚಿತ್ತಾ ನಕ್ಷತ್ರಗಳನ್ನು ಪರಿಗಣಿಸಬಹುದು. ಇದಲ್ಲದೆ, ಪತಿ ಪತ್ನಿಯರ ಜನ್ಮ ನಕ್ಷತ್ರ ವರ್ಜಿತವಾಗಿವೆ. ಜನ್ಮ ನಕ್ಷತ್ರದಿಂದ 7, 10, 16, 19 ಮತ್ತು 25ನೆಯ ವಧ ತಾರೆಗಳು ವರ್ಜಿತವಾಗಿವೆ. ಪತಿ ಪತ್ನಿ ಇಬ್ಬರ ಜನ್ಮ ನಕ್ಷತ್ರದಿಮದ ವಧ ತಾರೆಗಳನ್ನು ನೋಡಬೇಕು ಮತ್ತು ಸೂರ್ಯ ಮಂಗಲ, ಶನಿ , ರಾಹು-ಕೇತುಗಳು ಗೋಚಾರದಲ್ಲಿರುವ ನಕ್ಷತ್ರಗಳು ಕೂಡಾ ಮತ್ತು ನಕ್ಷತ್ರ ಗಂಡಾಂತರ ಕಾಲ ವರ್ಜಿತವಾಗಿವೆ.
ಕರಣ : ವಿಷ್ಟಿ ಕರಣದ ಹೊರತು ಅನ್ಯ ಕರಣಗಳು ಸೂಕ್ತವಾಗಿವೆ.
ಯೋಗ : ವ್ಯತಿಪಾತ, ಪರಿಘ, ವೈಧೃತಿಯ ಹೊರತು ಅನ್ಯ ಯೋಗಗಳು ಸೂಕ್ತವಾಗಿರುತ್ತವೆ. ಪರಿಘದ ಪೂರ್ವಾರ್ಧ ವರ್ಜಿತವಾಗಿದ್ದು, ಉತ್ತರಾರ್ಧ ಯೋಗ್ಯವಾಗಿದೆ.
ಲಗ್ನ : ಎಲ್ಲಾ ಲಗ್ನಗಳು ಶುಭವಾಗಿವೆ. ಆದರೆ ಜನ್ಮರಾಶಿ ಅಥವಾ ಜನ್ಮ ಲಗ್ನದಿಂದ ಅಷ್ಟಮ ಲಗ್ನ ವರ್ಜಿತವಾಗಿದೆ ಮತ್ತು ಪಾಪಗ್ರಹಯುಕ್ತ ಲಗ್ನವು ವರ್ಜಿತವಾಗಿದೆ.
ಕೇಂದ್ರ (1,4,7,10) ಮತ್ತು ತ್ರಿಕೋಣ (5,9) ಭಾವಗಳಲ್ಲಿ ಬುಧ, ಗುರು, ಶುಕ್ರಾದಿ ಶುಭಗ್ರಹಗಳು ಇರುವಾಗ ಮತ್ತು ಚಂದ್ರ ಮತ್ತು ಪಾಪಗ್ರಹಗಳು 3,6,11ರಲ್ಲಿ ಇದ್ದರೆ ಉಪಯುಕ್ತವಿರುತ್ತದೆ.
ಅಷ್ಟಮ ಭಾವವು ಗ್ರಹರಹಿತವಾಗಿರಬೇಕು. ವಿಶೇಷವಾಗಿ ಮಂಗಲನು ಇರಬಾರದು ಮತ್ತು ಲಗ್ನ ಗಂಡಾಂತರವಿರಬಾರದು.
ನವಾಂಶ : ನವಾಂಶದಲ್ಲಿ ಎಲ್ಲಾ ನವಾಂಶಗಳು ಶುಭವಾಗಿವೆ. ಆದರೆ ನವಾಂಶ ಕುಂಡಲಿಯಲ್ಲಿ ಚಂದ್ರ ವಿಷಮ ರಾಶಿಯಲ್ಲಿ ಇರಬೇಕು. ಜೊತೆಗೆ ಲಗ್ನದ ವಿಷಯದಲ್ಲಿ ಹೇಳಲಾದ ಎಲ್ಲ ವರ್ಜಿತ ಅಂಶಗಳನ್ನು ಗಮನಿಸಬೇಕು.
ಸ್ತ್ರೀಯರ ಋುತುಕಾಲ, ಗ್ರಹಣ, ಸಂಕ್ರಾಂತಿ ದಿನಗಳು, ಸಂಧ್ಯಾಕಾಲ, ಹಗಲು, ಗುರು-ಶುಕ್ರಾಸ್ತ ಸಮಯ, ಮಲಮಾಸ ಮತ್ತು ಸ್ತ್ರೀಯ ಜನ್ಮರಾಶಿಯಿಂದ ಚತುರ್ಥ, ಅಷ್ಟಮ ಮತ್ತು ದ್ವಾದಶ ಭಾವಗಳಲ್ಲಿ ಚಂದ್ರನಿರುವ ಸಮಯಗಳು ಗರ್ಭಾದಾನಕ್ಕೆ ವರ್ಜಿತವಾಗಿವೆ.
ಈ ಪ್ರಕಾರ ಗರ್ಭಾದಾನ ಸಂಸ್ಕಾರದ ಮುಹೂರ್ತವನ್ನು ತಿಳಿದುಕೊಂಡು, ಶಾಸ್ತ್ರೀಯ ತಿಥಿ ವಿಧಿಗೆ ಅನುಸಾರವಾಗಿ ಗರ್ಭಾದಾನ ಸಂಸ್ಕಾರ ಮಾಡಿಸುವುದರಿಂದ ಯೋಗ್ಯ, ಆರೋಗ್ಯವಂತ ಸಂತಾನ ಪ್ರಾಪ್ತಿಯಾಗುತ್ತದೆ.
-ಸಂಗ್ರಹ
ಗೃಹಯೋಗ
ಒಂದಕ್ಕಿಂತ ಹೆಚ್ಚು ಮನೆಗಳನ್ನು ಹೊಂದುವ ಯೋಗ ಯಾರಿಗಿರುತ್ತದೆ?
ಜಾತಕದಲ್ಲಿ 4ನೇ ಸ್ಥಾನ ಮತ್ತು 4ನೇ ಅಧಿಪತಿ ಇಬ್ಬರು ಚರ ರಾಶಿಯಲ್ಲಿ (ಮೇಷ,ಕಟಕ,ತುಲಾ,ಮಕರ) ಇದ್ದು 4ನೇ ಅಧಿಪತಿಯು ಶುಭ ಗ್ರಹದಿಂದ ಕೂಡಿದ್ದು ಇಲ್ಲವೆ ಶುಭ ಗ್ರಹಗಳಾದ ಬುಧ, ಗುರು, ಶುಕ್ರ, ಚಂದ್ರರ ದೃಷ್ಟಿ ಇದ್ದರೆ ಒಂದಕ್ಕಿಂತ ಹೆಚ್ಚು ಮನೆಯನ್ನು ಹೊಂದುವ ಯೋಗ ಇರುತ್ತದೆ
ಉತ್ತಮ ಗೃಹ ಯೋಗ : ಜಾತಕದಲ್ಲಿ ಚತುರ್ಥಾಧಿಪತಿಯು ಯಾವುದಾದರೊಂದು ಶುಭ ಗ್ರಹದ ಜೊತೆಯಲ್ಲಿ ಇದ್ದು 1-4-7-10-5-9 ನೇ ಭಾವಗಳಲ್ಲಿ ಹಾಗೂ ಚತುರ್ಥಾಧಿಪತಿ ಜೊತೆಯಲ್ಲಿರುವ ಗ್ರಹ ಮಿತ್ರರಾಗಿದ್ದರೆ ಮತ್ತು ಮಿತ್ರ - ಸ್ವ ಕ್ಷೇತ್ರದಲ್ಲಿ ಇದ್ದರೆ ಉತ್ತಮವಾದ ಮನೆಯನ್ನು ಕಟ್ಟಲು ಸಾಧ್ಯವಾಗುತ್ತದೆ ಹಾಗೂ ಆ ಮನೆಯಲ್ಲಿ ಎಲ್ಲಾ ಪ್ರಕಾರದ ಅನುಕೂಲತೆಗಳು ಇರುತ್ತದೆ.
ಸ್ವಾರ್ಜಿತ ಮನೆಯ ಯೋಗ : ಲಗ್ನಾಧಿಪತಿ 4ನೇ ಭಾವದಲ್ಲಿದ್ದು 4ನೇ ಅಧಿಪತಿ ಲಗ್ನದಲ್ಲಿದ್ದರೆ ಈ ಯೋಗ ಉಂಟಾಗುತ್ತದೆ. ಈ ಯೋಗದಲ್ಲಿ ಹುಟ್ಟಿದ ಜಾತಕನು ಸ್ವಪ್ರಯತ್ನದಿಂದ, ಪುರುಷಾರ್ಥದಿಂದ. ಸ್ವಂತ ಹಣದಿಂದ ಮನೆಯನ್ನು ಕಟ್ಟಿಕೊಳ್ಳುತ್ತಾನೆ.
ವೈಶಿಷ್ಠ ಪೂರ್ಣ ಮನೆಯ ಯೋಗ : 4ನೇ ಅಧಿಪತಿ ಮತ್ತು 10ನೇ ಅಧಿಪತಿ ಹಾಗೂ ಚಂದ್ರನ ಜೊತೆಯಲ್ಲಿ ಇದ್ದು ನಾಲ್ಕನೇ ಸ್ಥಾನದಲ್ಲಿ ಶುಭಗ್ರಹ ಇದ್ದರೆ. ವೈಶಿಷ್ಟ ಪೂರ್ಣ ಮನೆಯ ಯೋಗ ಉಂಟಾಗುತ್ತದೆ.
ದೊಡ್ಡ ಬಂಗಲೆಯ ಯೋಗ : ಜಾತಕದ ನಾಲ್ಕನೇ ಭಾವದಲ್ಲಿ ಚಂದ್ರ ಮತ್ತು ಶುಕ್ರ ಇಲ್ಲವೇ ನಾಲ್ಕನೇ ಭಾವದಲ್ಲಿ ಉಚ್ಚರಾಶಿಯ ಯಾವುದಾದರೂ ಒಂದು ಗ್ರಹ ಇದ್ದರೂ ಅದರಂತೆ 4ನೇ ಅಧಿಪತಿಯು ಕೇಂದ್ರ ತ್ರಿಕೋಣ ಸ್ಥಾನದಲ್ಲಿ ಶುಭ ಸ್ಥಾನದಲ್ಲಿ ಇದ್ದರೆ ಈ ಯೋಗ ಉಂಟಾಗುತ್ತದೆ.
ಅಕಸ್ಮಾತ್ ಮನೆ ಹೊಂದುವ ಯೋಗ : ಜಾತಕದಲ್ಲಿ 4ನೇ ಭಾವಾಧಿಪತಿ ಮತ್ತು ಲಗ್ನಾಧಿಪತಿ ಇಬ್ಬರು ನಾಲ್ಕನೇ ಭಾವದಲ್ಲಿದ್ದರೆ ಈ ಯೋಗ ಉಂಟಾಗುತ್ತದೆ.
ಅನಾಯಸ ಮನೆ ಹೊಂದುವ ಯೋಗ : ಜಾತಕದಲ್ಲಿ ಲಗ್ನಾಧಿಪತಿ ಮತ್ತು ಸಪ್ತಮಾಧಿಪತಿ ಲಗ್ನದಲ್ಲಿದ್ದರೆ ಮತ್ತು ನಾಲ್ಕನೇ ಭಾವದ ಮೇಲೆ ಶುಭ ಗ್ರಹಗಳಾದ ಬುಧ, ಗುರು, ಶುಕ್ರ,ಚಂದ್ರರ ದೃಷ್ಟಿ ಇದ್ದರೆ ಈ ಯೋಗ ಇದ್ದವರು ವಿಶೇಷ ಪ್ರಯತ್ನ ಇಲ್ಲದೆಯೇ ಮನೆಯು ದೊರಕುತ್ತದೆ. ಲಗ್ನಾಧಿಪತಿ ಮತ್ತು ಚತುರ್ಥಾಧಿಪತಿ ಲಗ್ನದಲ್ಲಿದ್ದರೆ ಮತ್ತು ಚತುರ್ಥ ಸ್ಥಾನದ ಮೇಲೆ ಶುಭ ಗ್ರಹಗಳ ದೃಷ್ಠಿ ಇದ್ದರೆ ಅನಾಯಾಸದ ಮನೆ ದೊರಕುತ್ತದೆ.
ಒಂದಕ್ಕಿಂತ ಹೆಚ್ಚು ಮನೆಗಳನ್ನು ಹೊಂದುವ ಯೋಗ : ಜಾತಕದಲ್ಲಿ 4ನೇ ಸ್ಥಾನ ಮತ್ತು 4ನೇ ಅಧಿಪತಿ ಇಬ್ಬರು ಚರ ರಾಶಿಯಲ್ಲಿ (ಮೇಷ,ಕಟಕ,ತುಲಾ,ಮಕರ) ಇದ್ದು 4ನೇ ಅಧಿಪತಿಯು ಶುಭ ಗ್ರಹದಿಂದ ಕೂಡಿದ್ದು ಇಲ್ಲವೆ ಶುಭ ಗ್ರಹಗಳಾದ ಬುಧ, ಗುರು, ಶುಕ್ರ, ಚಂದ್ರರ ದೃಷ್ಟಿ ಇದ್ದರೆ ಒಂದಕ್ಕಿಂತ ಹೆಚ್ಚು ಮನೆಯನ್ನು ಹೊಂದುವ ಯೋಗ ಇರುತ್ತದೆ.
ಉತ್ತಮ ಮನೆಯ ಯೋಗ : ನಿಮ್ಮ ಜಾತಕದಲ್ಲಿ 4ನೇ ಅಧಿಪತಿ ಮತ್ತು 10ನೇ ಅಧಿಪತಿ ಇಬ್ಬರು ಕೇಂದ್ರ ತ್ರಿಕೋಣಗಳಲ್ಲಿದ್ದರೆ ಉತ್ತಮ ಮನೆಯ ಯೋಗ ಇರುತ್ತದೆ.
ಗೃಹಯೋಗ ಲಾಭ?
ಋುಣಾನುಬಂಧ ರೂಪೇಣ ಪಶು, ಪತ್ನಿ, ಸುತ, ಆಲಯಚ ಎಂಬ ಉಕ್ತಿಯಂತೆ ಮನೆಯನ್ನು ಹೊಂದಲು ಋುಣವಿರಬೇಕು. ಕೆಲವರ ಬಳಿ ಎಷ್ಟೇ ಹಣವಿದ್ದರೂ ಗೃಹಯೋಗವಿರುವುದಿಲ್ಲ. ಎಲ್ಲಾ ಸೌಕರ್ಯಗಳಿದ್ದರೂ ಸ್ವಂತ ಮನೆ ಮಾಡಿಕೊಳ್ಳಲು ಆಗುವುದಿಲ್ಲ. ಅದಕ್ಕೆ ಕಾರಣವೇನು? ಜ್ಯೋತಿಷದ ಪ್ರಕಾರ ಜಾತಕದಲ್ಲಿ ಸ್ಥಿರಾಸ್ಥಿ ಯೋಗವಿದೆಯೇ ಎಂದು ನೋಡಬೇಕು. ಯೋಗವಿದ್ದರೆ ವಾಸ್ತು ದೋಷವಿಲ್ಲದ ಗೃಹ ನಿರ್ಮಿಸಲು ಸಾಧ್ಯವೇ ಎಂಬುದನ್ನು ಗಮನಿಸಬೇಕು.
ಗ್ರಹಗಳಲ್ಲಿ ಚಂದ್ರ ಗೃಹ ಸೌಖ್ಯಕಾರಕ. ಜಾತಕದಲ್ಲಿ ಚಂದ್ರ ಬಲಿಷ್ಠನಾಗಿದ್ದರೆ ಗೃಹ ಸೌಖ್ಯವಿರುತ್ತದೆ. ಜಾತಕದಲ್ಲಿ ನಾಲ್ಕನೆಯ ಮನೆ ಹಾಗೂ ಗ್ರಹಗಳಲ್ಲಿ ಮಂಗಳ ಗ್ರಹ (ಕುಜ) ಇವುಗಳ ಆಸ್ತಿಯ ಬಗ್ಗೆ ಸೂಚಕವಾದ ಭಾವ ಹಾಗೂ ಗ್ರಹವಾಗಿರುತ್ತವೆ.
ಜಾತಕದಲ್ಲಿ 4ರ ಅಧಿಪತಿಯು ನಾಲ್ಕರಲ್ಲಿ ಸ್ಥಿತನಾಗಿದ್ದು ಲಗ್ನಾಧಿಪತಿಯು ಸ್ಥಿತನಾಗಿದ್ದು ಶುಭಗ್ರಹಕ್ಕೆ ದೃಷ್ಟಿಯಿದ್ದರೆ ಗೃಹ ಸೌಖ್ಯವಿರುತ್ತದೆ. ಚತುರ್ಥ ಭಾವದ ಅಧಿಪತಿಯು ಚತುರ್ಥದಲ್ಲಿ ಸ್ಥಿತನಾಗಿದ್ದು ತನ್ನ ಸ್ವಂತ ನವಾಂಶದಲ್ಲಿ ಸ್ಥಿತರಾಗಿದ್ದರೆ ಅಥವಾ ಚತುರ್ಥಾಧಿಪತಿಯು ಉಚ್ಛ ಸ್ಥಾನದಲ್ಲಿದ್ದರೆ ಜಾತಕನಿಗೆ ದೊಡ್ಡ ಬಂಗಲೆ ಕಟ್ಟುವ ಯೋಗ, ವಾಹನ ಸೌಖ್ಯ, ಗೃಹದಲ್ಲಿ ಸಂಗೀತ ವಾದ್ಯಗಳೊಂದಿಗೆ ಸೌಖ್ಯದಿಮದ ಜೀವನ ನಡೆಸುವ ಯೋಗವುಂಟಾಗುತ್ತದೆ.
ಚತುರ್ಥಾಧಿಪತಿ ಹಾಗೂ ದಶಮಾಧಿಪತಿಗಳು ಕೇಂದ್ರ ತ್ರಿಕೋಣಗಳಲ್ಲಿ ಸ್ಥಿತರಾಗಿದ್ದರೆ ಜಾತಕನು ರಾಜಭವನ-ಅರಮನೆಗಳಂತಹ ವೈಭವ ಪೂರಿತ ಗೃಹಗಳಲ್ಲಿ ವಾಸ ಮಾಡುವ ಯೋಗ ಹೊಂದಿರುತ್ತಾನೆ. ಜಾತಕನಿಗೆ ಚತುರ್ಥ ಭಾವಾಧಿಪತಿಯ ದಶಾ / ಕುಜ ದಶಾ ಕಾಲದಲ್ಲಿ ಗೃಹ ನಿರ್ಮಾಣ ಯೋಗ ಉಂಟಾಗುತ್ತದೆ.
ಚತುರ್ಥ ಭಾವದಲ್ಲಿ ಚಂದ್ರಸ್ಥಿತ ಚತುರ್ಥಾಧಿಪತಿ ಚಂದ್ರ ಸ್ಥಿತ / ವೀಕ್ಷಣೆಯೊಂದಿಗೆ ಜಾತಕನು ನೂತನ ಗೃಹ ನಿರ್ಮಿಸುವ ಯೋಗ ಹೊಂದಿರುತ್ತಾನೆ. ಚತುರ್ಥಾಧಿಪತಿಯು ಬುಧನ ಸಂಬಂಧ ಹೊಂದಿದ್ದರೆ ಜಾತಕನು ಸೌಂದರ್ಯಯುತವಾದ ಗೃಹ ನಿರ್ಮಾಣ ಮಾಡುವ ಯೋಗ ಹೊಂದಿರುತ್ತಾನೆ.
ಚತುರ್ಥಾಧಿಪತಿಯು ಗುರು ಸಂಬಂಧ ಹೊಂದಿದ್ದರೆ ಜಾತಕನು ಭವ್ಯವಾದ ಗಟ್ಟಿಯಾದ ಗೃಹ ನಿರ್ಮಾಣ ಮಾಡುತ್ತಾನೆ. ಸೂರ್ಯ, ಕೇತು ಗ್ರಹಗಳ ಚತುರ್ಥಾದಿಪತಿಯು ಸಂಬಂಧ ಪಟ್ಟರೆ ದುರ್ಬಲ ಮನೆಯ ನಿರ್ಮಾಣ ಮಾಡುತ್ತಾನೆ.
ಶನಿ ಮತ್ತು ರಾಹು ಸಂಬಂಧ ಚತುರ್ಥಾಧಿಪತಿಗೆ ಏರ್ಪಟ್ಟರೆ ಜಾತಕನು ಹಳೆಯ ಮನೆಯನ್ನು ಮತ್ತೆ ಖರೀದಿಸುವ ಯೋಗವನ್ನು ಹೊಂದುತ್ತಾನೆ. ಚತುರ್ಥಾಧಿಪತಿಗೆ ಶುಕ್ರನ ಸಂಬಂಧ ಏರ್ಪಟ್ಟರೆ ಸಾಲಂಕೃತ ಗೃಹವನ್ನು ನಿರ್ಮಿಸುತ್ತಾನೆ. ಚತುರ್ಥಾಧಿಪತಿಗೆ ಕುಜನ ಸಂಬಂಧ ಏರ್ಪಟ್ಟರೆ ಜಾತಕನ ಗೃಹವು ಅಗ್ನಿಯಿಂದ ಭಾದೆಗೆ ಒಳಪಡುತ್ತದೆ.
ಚತುರ್ಥಭಾವ
ಗೃಹ ವ್ಯಾಜ್ಯ : ಚತುರ್ಥಭಾವದಲ್ಲಿ ಅಥವಾ ಚತುರ್ಥಾಧಿಪತಿಗೆ ಅಥವಾ ಕುಜಗ್ರಹಕ್ಕೆ ಕ್ಷೀಣ ಸೂರ್ಯನ ಸಂಬಂಧ ಏರ್ಪಟ್ಟರೆ ಜಾತಕನ ಸ್ಥಿರಾಸ್ಥಿಯು ಸರ್ಕಾರದಿಂದ ತೊಂದರೆಗೆ ಒಳಗಾಗುತ್ತದೆ.
ಚತುರ್ಥ ಭಾವಕ್ಕೆ, ಭಾವಾಧಿಪತಿಗೆ ಅಥವಾ ಕುಜಗ್ರಹಕ್ಕೆ ರಾಹು ಸಂಬಂಧ ಏರ್ಪಟ್ಟರೆ ಜಾತಕನು ಗೃಹ / ನಿವೇಶನ ಖರೀದಿಸುವಲ್ಲಿ ಮೋಸ ಹೋಗುತ್ತಾನೆ ಅಥವಾ ಕಾಗದ ಪತ್ರಗಳಿಂದ ಮೋಸಕ್ಕೆ ಒಳಗಾಗುತ್ತಾನೆ.
ಗೃಹ ವಾಸ್ತು : ಜಾತಕನ ಚತುರ್ಥಭಾವದಿಂದ ಗೃಹವಾಸ್ತುವನ್ನು ತಿಳಿದು ನಿರ್ಮಿಸಬೇಕು. ಚತುರ್ಥದಲ್ಲಿ ಶುಭಗ್ರಹಗಳ ಸ್ಥಿತ ಅಥವಾ ವೀಕ್ಷಣೆಯಿದ್ದರೆ ಶುಭಫಲ ಉಂಟಾಗುತ್ತದೆ. ಚತುರ್ಥದಲ್ಲಿ ಅಶುಭ ಗ್ರಹಗಳ ಸ್ಥಿತನಾಗಿದ್ದರೆ (ಶನಿ-ಕುಜ-ರಾಹು-ಕೇತು) ಒಳ್ಳೆಯದಲ್ಲ. ಜಾತಕನು ವಾಸ್ತುವಿಲ್ಲದ ಗೃಹದಲ್ಲಿ ವಾಸನಾಗಿದ್ದು ಕಷ್ಟನಷ್ಟಗಳನ್ನು ಅನುಭವಿಸುತ್ತಾನೆ.
ಯಾರಿಗೆ ಅಕಸ್ಮಾತ್ ಮನೆ ಹೊಂದುವ ಯೋಗ?
ಈ ಯೋಗವುಳ್ಳ ಜಾತಕರಿಗೆ ಕಲ್ಪನೆಯೆ ಇರದೆ ಸ್ವಂತ ಮನೆಯನ್ನು ಹೊಂದುವರು ಇಂತಹ ಜಾತಕರು ಬೇರೆಯವರು ಕಟ್ಟಿಸಿದ ಮನೆಯನ್ನು ತೆಗೆದುಕೊಳ್ಳುವ ಸಾಧ್ಯತೆ ಇರುತ್ತದೆ.
ನಿಮ್ಮ ಜಾತಕದಲ್ಲಿ ಚತುರ್ಥಾಧಿಪತಿ ಶುಭಗ್ರಹದ ಜೊತೆಯಲ್ಲಿ ಇದ್ದು 1-4-7-10-5-9 ನೇ ಭಾವಗಳಲ್ಲಿ ಹಾಗೂ ತನ್ನೊಡನಿರುವ ಗ್ರಹ ಮಿತ್ರರಾಗಿದ್ದರೆ ಮತ್ತು ಮಿತ್ರ - ಸ್ವ ಕ್ಷೇತ್ರದಲ್ಲಿ ಇದ್ದರೆ ಉತ್ತಮವಾದ ಮನೆಯನ್ನು ಕಟ್ಟುತ್ತಾನೆ. ಆ ಮನೆಯಲ್ಲಿ ಎಲ್ಲಾ ಪ್ರಕಾರದ ಅನುಕೂಲತೆಗಳು ಇರುತ್ತವೆ.
ಲಗ್ನಾಧಿಪತಿ 4ನೇ ಭಾವದಲ್ಲಿದ್ದು 4ನೇ ಅಧಿಪತಿ ಲಗ್ನದಲ್ಲಿದ್ದರೆ ಸ್ವ ಪ್ರಯತ್ನದಿಂದ ಜಾತಕ ಮನೆ ಕಟ್ಟುತ್ತಾನೆ. ಈ ಯೋಗದಲ್ಲಿ ಹುಟ್ಟಿದ ಜಾತಕನು ಸ್ವಕಷ್ಟದಿಂದ, ಪುರುಷಾರ್ಥದಿಂದ, ಸ್ವಂತ ಸಂಪಾದನೆಯಿಂದ ಸಂಪಾದಿಸಿದ ಹಣದಿಂದ ಮನೆಯನ್ನು ಕಟ್ಟಿಕೊಳ್ಳುತ್ತಾನೆ.
ವೈಶಿಷ್ಠ ಪೂರ್ಣ ಮನೆಯ ಯೋಗ : 4ನೇ ಅಧಿಪತಿ ಮತ್ತು 10ನೇ ಅಧಿಪತಿ ಹಾಗೂ ಚಂದ್ರನ ಜೊತೆಯಲ್ಲಿ ಇದ್ದು ನಾಲ್ಕನೇ ಸ್ಥಾನದಲ್ಲಿ ಶುಭಗ್ರಹ ಇದ್ದರೆ. ವೈಶಿಷ್ಟ ಪೂರ್ಣ ಮನೆಯ ಯೋಗ ಉಂಟಾಗುತ್ತದೆ. ಈ ಯೋಗದಲ್ಲಿ ಹುಟ್ಟಿದ ಜಾತಕರು ಮನೆಯನ್ನು ಆಧುನಿಕ ರೀತಿಯಲ್ಲಿ ಸಜ್ಜುಗೊಳಿಸಲ್ಪಟ್ಟು ಪರಿಪೂರ್ಣ ಎನಿಸಿದ್ದು ಮತ್ತು ಸಾಮಾನ್ಯ ಜನರ ಮನೆಯವರಿಗಿಂತ ಬೇರೆಯೇ ರೀತಿಯಾಗಿ ಇರುತ್ತದೆ.
ದೊಡ್ಡ ಬಂಗಲೆಯ ಯೋಗ : ನಿಮ್ಮ ಜಾತಕದ ನಾಲ್ಕನೇ ಭಾವದಲ್ಲಿ ಚಂದ್ರ ಮತ್ತು ಶುಕ್ರ ಇಲ್ಲವೇ ನಾಲ್ಕನೇ ಭಾವದಲ್ಲಿ ಉಚ್ಚರಾಶಿಯ ಯಾವುದಾದರೂ ಒಂದು ಗ್ರಹ ಇದ್ದರು ಅದರಂತೆ 4ನೇ ಅಧಿಪತಿಯು ಕೇಂದ್ರ ತ್ರಿಕೋಣ ಸ್ಥಾನದಲ್ಲಿ ಶುಭ ಸ್ಥಾನದಲ್ಲಿ ಇದ್ದರೆ ಈ ಯೋಗ ಉಂಟಾಗುತ್ತದೆ. ಇಂತಹ ಯೋಗವುಳ್ಳ ಜಾತಕರು ದೊಡ್ಡ ಬಂಗಲೆಯ ಮಾಲೀಕರಾಗುತ್ತಾರೆ.
ಅಕಸ್ಮಾತ್ ಮನೆ ಹೊಂದುವ ಯೋಗ : ನಿಮ್ಮ ಜಾತಕದಲ್ಲಿ 4ನೇ ಭಾವಾಧಿಪತಿ ಮತ್ತು ಲಗ್ನಾಧಿಪತಿ ಇಬ್ಬರು ನಾಲ್ಕನೇ ಭಾವದಲ್ಲಿದ್ದರೆ ಈ ಯೋಗ ಉಂಟಾಗುತ್ತದೆ. ಈ ಯೋಗವುಳ್ಳ ಜಾತಕರಿಗೆ ಕಲ್ಪನೆಯೆ ಇರದೆ ಸ್ವಂತ ಮನೆಯನ್ನು ಹೊಂದುವರು ಇಂತಹ ಜಾತಕರು ಬೇರೆಯವರು ಕಟ್ಟಿಸಿದ ಮನೆಯನ್ನು ತೆಗೆದುಕೊಳ್ಳುವ ಸಾಧ್ಯತೆ ಇರುತ್ತದೆ. ಆದರೆ ಲಗ್ನಾಧಿಪತಿ ಮತ್ತು ಚತುರ್ಥ ಸ್ಥಾನಾಧಿಪತಿ ಇಬ್ಬರು ಮಿತ್ರ ಗ್ರಹಗಳಾಗಿದ್ದು ನಾಲ್ಕನೇ ಸ್ಥಾನ ಸ್ವಕ್ಷೇತ್ರ ಅಥವಾ ಮಿತ್ರ ಕ್ಷೇತ್ರ ಆಗಿರಬೇಕು.
ಯಾರಿಗೆ ಸುಂದರವಾದ ಮನೆ ಕಟ್ಟುವ ಯೋಗ ಇರುತ್ತದೆ? *
ಸ್ವಂತ ಮನೆಯನ್ನು ಕಟ್ಟುವ ಸಂದರ್ಭದಲ್ಲಿ ಪ್ರಶ್ನೆ ಮಾಡಿದಾಗ ಲಗ್ನ ಮತ್ತು ಚತುರ್ಥ ಸ್ಥಾನಗಳ ಮೇಲಿಂದ ತಿಳಿಯ ಬೇಕು. ಲಗ್ನ ಮತ್ತು ಚತುರ್ಥಧಿಪತಿಗಳು ಮಿತ್ರ ಗ್ರಹಗಳಾಗಿದ್ದು ಹಾಗೂ ಸ್ವ ಕ್ಷೇತ್ರ ಉಚ್ಚಕ್ಷೇತ್ರ ಮಿತ್ರ ಕ್ಷೇತ್ರಗಳಾಗಿದ್ದರೆ ಹಾಗೂ ಲಗ್ನ ಮತ್ತು ಚತುರ್ಥ ಸ್ಥಾನಗಳಿಗೆ ಯಾವುದೇ ಪಾಪಗ್ರಹಗಳ ದೃಷ್ಠಿ ಬೀಳಬಾರದು ಹಾಗೂ ಪಾಪ ಗ್ರಹಗಳ ಜೊತೆ ಸೇರಿರಬಾರದು ಲಗ್ನಾಧಿಪತಿಯಾಗಲಿ ಅಥವಾ ಚತುರ್ಥಧಿಪತಿಯಾಗಲಿ ಆಸ್ತನಾಗಿರಬಾರದು. ಲಗ್ನಾಧಿಪತಿಯಾಗಲಿ ಚತುರ್ಥಾಧಿಪತಿಯಾಗಲಿ ಶುಭ ಗ್ರಹಗಳಾದ ಗುರು, ಶುಕ್ರ ಪೂರ್ಣ ಚಂದ್ರ, ಬುಧ ಗ್ರಹಗಳಾಗಿದ್ದರೆ ತುಂಬಾ ಸುಂದರವಾದ ಮನೆಯನ್ನು ಕಟ್ಟಲು ಸಾಧ್ಯ.
ಲಗ್ನಾಧಿಪತಿಗಾಗಲಿ ಚತುರ್ಥಧಿಪತಿಗಾಗಲಿ ಶುಭ ಗ್ರಹಗಳ ದೃಷ್ಟಿ ಇದ್ದರೆ ವೈಭವವುಳ್ಳ ಮನೆಯನ್ನು ಕಟ್ಟಿ ಅದರಲ್ಲಿ ಎಲ್ಲಾ ತರಹದ ಸುಖ ಸಂತೋಷಗಳನ್ನು ಅನುಭವಿಸಲು ಸಾಧ್ಯ. ಜಾತಕನು ಪ್ರಶ್ನೆ ಕೇಳಿದ ಸಂದರ್ಭದಲ್ಲಿ ಕೇಂದ್ರ ತ್ರಿಕೋಣಗಳಲ್ಲಿ ಶುಭ ಗ್ರಹಗಳು ಇರಬೇಕು ಹಾಗೂ ಲಗ್ನ ಮತ್ತು ಚತುರ್ಥಾಧಿಪತಿಗಳಿಗೆ 6-8-12 ನೇ ರಾಶಿಗಳ ಗ್ರಹಗಳ ಸಂಬಂಧ ಇರಬಾರದು. ಈ ರಾಶಿಯ ಅಧಿಪತಿಗಳ ದೃಷ್ಟಿಯು ಬೀಳಬಾರದು. ಮತ್ತು ಪಾಪ ಗ್ರಹಗಳಾದ ಕುಜ,ಶನಿ,ರಾಹು, ಕೇತು ಕ್ಷೀಣ ಚಂದ್ರ, ಪಾಪ ಗ್ರಹಗಳ ಜೊತೆಯಲ್ಲಿರುವ ಬುಧ ಈ ಗ್ರಹಗಳ ಸಂಬಂಧ ಲಗ್ನ, ಚತುರ್ಥಾಧಿಪತಿಗಳಿಗೆ ಬಂದರೆ ನೀವು ಕಟ್ಟುವ ಮನೆಯು ಪರಿಪೂರ್ಣವಾಗದೆ ಹಾಗೂ ಮನೆಯನ್ನು ಕಟ್ಟಿದರೂ ಆ ಮನೆಯಲ್ಲಿ ಸುಖ ಸಂತೋಷದಿಂದ ಇರುವುದಕ್ಕೆ ಸಾಧ್ಯ ಆಗುವುದಿಲ್ಲ. ಆದ್ದರಿಂದ ಲಗ್ನ ಚತುರ್ಥ ಸ್ಥಾನದಲ್ಲಿ ಶುಭ ಗ್ರಹಗಳು ಇದ್ದು ಶುಭ ಗ್ರಹಗಳ ದೃಷ್ಟಿಗೆ ಒಳಗಾಗಿರಬೇಕು.
ನಿವೇಶನದ ಆಯವರ್ಗ
ಆಯವರ್ಗದಲ್ಲಿ ಎಂಟು ವಿಧಗಳಿವೆ ಅವೆಂದರೆ ಧ್ವಜಾಯ, ಧೂಮ್ರಾಯ, ಸಿಂಹಾಯ, ಶ್ವಾನಾಯ, ವೃಷಭಾಯ, ಖರಾಯ, ಗಜಾಯ ಮತ್ತು ಕಾಕಾಯ.
ಇವುಗಳಲ್ಲಿ ಧ್ವಜಾಯ, ವೃಷಭಾಯ ಅತೀ ಶ್ರೇಷ್ಠ. ಸಿಂಹಾಯ, ಗಜಾಯ ಸಾಧರಣವಾದ ಫಲಯನ್ನು ಕೂಡುವವು, ಉಳಿದ ಆಯಗಳು ಕನಿಷ್ಠವಾದವು. ಈ ಶುಭ ಆಯದ ಜೊತೆಗೆ ವಾರ ತಿಥಿ, ನಕ್ಷ ತ್ರ ಯೋಗ, ಕರಣ, ಆಯಸ್ಸು, ಧನ ಸಂಖ್ಯೆ, ಋುಣ ಸಂಖ್ಯೆ ಅಂಶ ಮತ್ತು ದಿಕ್ಪಾಲಕರು ಇವು ಸಹ ಶುಭವಾಗಿ ಇರಬೇಕು. ಆಯ ವರ್ಗವು ಸೇರಿ ಹನ್ನೊಂದು ವರ್ಗವು ಶುಭವಾಗಿರಬೇಕು.
ಎಂಟು ವಿಧ ಆಯಗಳ ಫಲಗಳ ಬಗ್ಗೆ ತಿಳಿಯೋಣ :
1. ಧ್ವಜಾಯದ ಫಲ : ಧ್ವಜಾಯದಲ್ಲಿ ಕಟ್ಟುವ ಮನೆಯಲ್ಲಿ ಸಮಸ್ತ ಸೌಭಾಗ್ಯವನ್ನು, ದ್ರವ್ಯಲಾಭ, ಶತ್ರುನಾಶ,ರಾಜಪೂಜ್ಯತೆಯನ್ನುಂಟು ಮಾಡುವುದು.
2. ಧೂಮ್ರಾಯದ ಫಲ : ಧೂಮ್ರಾಯದಲ್ಲಿ ಕಟ್ಟಿದ ಮನೆಯು ರೋಗ ಪೀಡೆಯು, ಪುತ್ರರಿಗೂ, ಪತ್ನಿಗೂ ನಾನಾ ವಿಧವಾದ ವ್ಯಾದಿಯನ್ನು ಶತೃವೃದ್ಧಿಯನ್ನು ಉಂಟುಮಾಡುವುದು.
3. ಸಿಂಹಾಯದ ಫಲ : ಸಿಂಹಾಯದ ಮನೆಯಲ್ಲಿ ವಾಸಿಸುವವರಿಗೆ ಶರೀರಸೌಖ್ಯ, ರೋಗನಾಶ, ಧನ-ಧಾನ್ಯ ಸಂಪಾದನೆ, ಸರ್ವ ಕಾರ್ಯಗಳಲ್ಲಿ ಜಯ ಉಂಟಾಗುವುದು ಈ ಮನೆಯಲ್ಲಿ ವಾಸಿಸುವವರಿಗೆ ಸಿಟ್ಟುಜಾಸ್ತಿ, ಸಿಂಹಾಯದ ಮನೆಯ ಎದುರಿಗೆ ಗಜಾಯದ ಮನೆಯನ್ನು ಕಟ್ಟಿದರೆ ಗಜಾಯದ ಮನೆಯು ಶೀಘ್ರವಾಗಿ ನಾಶವಾಗುವುದು.
4. ಶ್ವಾನಾಯದ ಫಲ : ಶ್ವಾನಾಯದ ಮನೆಯಲ್ಲಿ ವಾಸಿಸುವವರಿಗೆ ಶ್ವಾನ (ನಾಯಿ)ಗಳ ಬುದ್ಧಿ ಇರುತ್ತದೆ. ಯಾವಾಗಲೂ ಕಲಹ, ಧನ ಧಾನ್ಯ ನಷ್ಠ, ಶತೃವೃದ್ಧಿ, ದೇಹಾಲಸ್ಯ, ಅಗ್ನಿಭಯ, ದಾರಿದ್ರ್ಯ, ಜೀವನದಲ್ಲಿ ಸಂಕಷ್ಠ ಉಂಟಾಗುವುದು.
5. ಖರಾಯದ ಫಲ : ಖರಾಯದಲ್ಲಿ ವಾಸ ಮಾಡುವ ಯಜಮಾನನು ಯಾವಾಗಲು ಪರಸ್ಥಳದಲ್ಲಿ ಕಷ್ಟಪಡುತ್ತಾನೆ. ಆ ಮನೆಗೆ ಯಾವಾಗಲೂ ದಾರಿದ್ರ್ಯತೆ ಉಂಟಾಗಿ ಸದಾ ವೈರತ್ವದಿಂದ ಕೂಡಿರುತ್ತದೆ.
6. ಗಜಾಯದ ಫಲ : ಗಜಾಯದ ಮನೆಯು ವಾಸಕ್ಕೆ ಯೋಗ್ಯವಾಗಿರುತ್ತದೆ. ಆರೋಗ್ಯ, ಐಶ್ವರ್ಯ, ಸಕಲ ಧನ ಧಾನ್ಯಗಳು ಸಂಪತ್ತುಗಳಿಂದ ಕೂಡಿರುತ್ತದೆ. ಈ ಮನೆಯ ಯಜಮಾನನಿಗೆ ಎರಡು ಸಂಸಾರಗಳು ಉಂಟಾಗುವುದು. ಕೆಲಸ ಕಾರ್ಯಗಳು ನಿಧಾನವಾಗಿ ಕೈಗೂಡುವುದು ಇದರ ಎದುರಿಗೆ ಸಿಂಹಾಯದ ಮನೆ ಇದ್ದರೆ ಈ ಮನೆಗೆ ನಾಶ ಉಂಟಾಗುವುದು.
7. ಕಾಕಾಯದ ಫಲ : ಕಾಕಾಯದಲ್ಲಿ ಮನೆಯನ್ನು ನಿರ್ಮಿಸಿದರೆ ಆ ಮನೆಗೆ ಕಾಗೆ ಹೊಕ್ಕ ಫಲ ಉಂಟಾಗುವುದು. ಸದಾ ದುಃಖದಿಂದಲೂ ರೋಗದಿಂದಲೂ ಕೂಡಿರುತ್ತದೆ. ಕಲಹ ಕಷ್ಟಕಾರ್ಪಣ್ಯಗಳು ಮೇಲಿಂದ ಮೇಲೆ ಒದಗಿ ಬರುವುದು. (ಕೃಪೆ ಒಂಟಿ ಕೊಪ್ಪಲ್ ಪಂಚಾಂಗ)
ಯಾವ ಲಗ್ನದವರಿಗೆ ಯಾವಾಗ ರಾಜಯೋಗ?
ಯಾವ ಲಗ್ನದವರಿಗೆ ಯಾವಾಗ ರಾಜಯೋಗ?
ಜಾತಕದಲ್ಲಿನ ಕೆಲವು ಗ್ರಹಗಳ ಸಂಯೋಗ ಮತ್ತು ಸ್ಥಿತಿಗಳ ಆಧಾರದಲ್ಲಿ ವ್ಯಕ್ತಿಯ ರಾಜಯೋಗಗಳನ್ನು ಕಂಡುಹಿಡಿಯಬಹುದು. ರಾಜಯೋಗ ಎಂದರೆ ಈಗಿನ ಪರಿಸ್ಥಿತಿಯಲ್ಲಿ ರಾಜ್ಯಸರ್ಕಾರದ ಐ.ಎ.ಎಸ್., ಐ.ಪಿ.ಎಸ್. ಸರಿಸಮಾನರಾದ ಉನ್ನತ ಅಧಿಕಾರಿಗಳು, ನಗರಸಭಾ ಸದಸ್ಯರು, ವಿಧಾನಸಭಾ ಸದಸ್ಯರು, ಲೋಕಸಭಾ ಸದಸ್ಯರು, ಮಂತ್ರಿಗಳು, ಮುಖ್ಯಮಂತ್ರಿಗಳು ಹಾಗೂ ಪ್ರಧಾನಮಂತ್ರಿಗಳನ್ನು ರಾಜ ಅಥವಾ ರಾಜಸಮಾನರೆಂದು ಗುರುತಿಸಬಹುದು.
ಮೇಷಲಗ್ನ : ಗುರು, ಶನಿ, ಕಟಕ, ತುಲಾರಾಶಿಯಲ್ಲಿದ್ದು ಯಾವುದೇ ಪಾಪಗ್ರಹಗಳ ಸಂಬಂಧವಿಲ್ಲದೆ ಇದ್ದು ಅವುಗಳ ದೆಶೆಯೇ ನಡೆಯುತ್ತಿದ್ದರೆ ರಾಜಯೋಗವಿರುತ್ತದೆ.
ವೃಷಭ ಲಗ್ನ : ಲಗ್ನದಲ್ಲಿ ಕುಜ, ಸಿಂಹರಾಶಿಯಲ್ಲಿ ಚಂದ್ರ, ಕುಂಭದಲ್ಲಿ ಗುರು, ಮಕರದಲ್ಲಿ ರವಿ, ಮೀನದಲ್ಲಿ ಶನಿ ಇದ್ದರೆ ಆ ಜಾತಕನು ರಾಜಯೋಗ ಪಡೆಯುತ್ತಾನೆ.
ಮಿಥುನ ಲಗ್ನ : ಬುಧ, ಶುಕ್ರ 1, 4, 5, 7, 9, 10 ಸ್ಥಾನದಲ್ಲಿದ್ದರೆ ರಾಜಯೋಗ ಉಂಟಾಗುತ್ತದೆ. ಬುಧ, ಶುಕ್ರ, ಶನಿ, ಚಂದ್ರ ಕಲೆತಿದ್ದರೆ ಆದು ಕೇಂದ್ರ ತ್ರಿಕೋನವಾದರೆ ರಾಜಯೋಗ ಲಭಿಸುತ್ತದೆ.
ಕಟಕ ಲಗ್ನ : ಶುಕ್ರ, ಶನಿ, 4, 5, 7, 9, 10 ಸ್ಥಾನದಲ್ಲಿದ್ದರೆ ಕಲೆತಿದ್ದರೆ ರಾಜಯೋಗ ಪ್ರಾಪ್ತಿಯಾಗುತ್ತದೆ. ದ್ವಿತೀಯದಲ್ಲಿ ಚಂದ್ರ, ಕುಜ, ಗುರು, ಪಂಚಮದಲ್ಲಿ ರವಿ, ಶುಕ್ರರಿದ್ದರೆ ರಾಜಯೋಗ ಬರುತ್ತದೆ.
ಸಿಂಹ ಲಗ್ನ : ಲಗ್ನದಲ್ಲಿ ಕುಜ, ಚತುರ್ಥದಲ್ಲಿ ಶನಿ, ಪಂಚಮ ರಾಹು, ಭಾಗ್ಯದಲ್ಲಿ ಚಂದ್ರ, ಶುಕ್ರ, ರಾಜ್ಯದಲ್ಲಿ ರವಿ, ಬುಧರಿದ್ದರೆ ಉನ್ನತ ರಾಜಯೋಗ ಉಂಟಾಗುತ್ತದೆ.
ಕನ್ಯಾ ಲಗ್ನ : ದ್ವಿತೀಯ ಸ್ಥಾನದಲ್ಲಿ ರವಿ, ಶುಕ್ರರ ಸಂಬಂಧವಿದ್ದರೆ ರಾಜಯೋಗ ಬರುತ್ತದೆ. ಮೇಷದಲ್ಲಿ ರವಿ, ಸಿಂಹದಲ್ಲಿ ಕುಜನಿದ್ದರೆ ರಾಜಯೋಗ ಲಭಿಸುತ್ತದೆ.
ತುಲಾ ಲಗ್ನ : ಲಗ್ನದಲ್ಲಿ ಚಂದ್ರ, ಶುಕ್ರ, ದ್ವಿತೀಯದಲ್ಲಿ ರವಿ, ಬುಧ, ತೃತೀಯದಲ್ಲಿ ಗುರು, ಪಂಚಮದಲ್ಲಿ ಕುಜನಿದ್ದರೆ ರಾಜಯೋಗ ಪ್ರಾಪ್ತಿಯಾಗುತ್ತದೆ.
ವೃಶ್ಚಿಕ ಲಗ್ನ : ಸಪ್ತಮ ಸ್ಥಾನದಲ್ಲಿ ರವಿ, ಬುಧ, ಶುಕ್ರ ಕಲೆತರೆ ರಾಜಯೋಗ ಬರುತ್ತದೆ. ಜನ್ಮದಲ್ಲಿ ಗುರು ಇದ್ದು ಗುರುದೆಸೆ ಪ್ರಾಪ್ತಿಯಾದರೆ ರಾಜಯೋಗ ಉಂಟಾಗುತ್ತದೆ.
ಧನು ಲಗ್ನ: ಗುರು ಒಬ್ಬನೇ ಷಷ್ಟಮ ಸ್ಥಾನದಲ್ಲಿ ಅಥವಾ 8, 12ರ ಸ್ಥಾನದಲ್ಲಿದ್ದರೆ ರಾಜಯೋಗ ಬರುತ್ತದೆ. ಚಂದ್ರನು ರಾಹು ಅಥವಾ ಕೇತುವಿನೊಂದಿಗೆ ಮೇಷ, ಸಿಂಹ ರಾಶಿಯಲ್ಲಿದ್ದರೆ ರಾಜಯೋಗ ಪ್ರಾಪ್ತಿಯಾಗುತ್ತದೆ.
ಮಕರ ಲಗ್ನ : ಲಗ್ನದಲ್ಲಿ ಬುಧ, ಶುಕ್ರ, ಚತುರ್ಥದಲ್ಲಿ ಚಂದ್ರ, ಭಾಗ್ಯದಲ್ಲಿ ಗುರು ಇದ್ದರೆ ಒಳ್ಳೆಯ ರಾಜಯೋಗ ಬರುತ್ತದೆ.
ಕುಂಭ ಲಗ್ನ : ಲಗ್ನದಲ್ಲಿ ರವಿ, ಶುಕ್ರ, ದಶಮದಲ್ಲಿ ರಾಹು ಇದ್ದರೆ ಶುಕ್ರ ರಾಹು ಕಲೆತು ಲಗ್ನ ಅಥವಾ ಅಷ್ಟಮ ಸ್ಥಾನದಲ್ಲಿದ್ದರೆ ರಾಹು ದೆಸೆಯಲ್ಲಿ ರಾಜಯೋಗ ಪ್ರಾಪ್ತಿಯಾಗುತ್ತದೆ.
ಮೀನ ಲಗ್ನ : ಚಂದ್ರ ಗುರು ಕೇಂದ್ರ ಕೋನದಲ್ಲಿ ಕಲೆತಿದ್ದರೂ ಆ ದಿಸೆಯಲ್ಲಿ ರಾಜಯೋಗವಿರುತ್ತದೆ. ಮೀನದಲ್ಲಿ ಚಂದ್ರನಿದ್ದು ಗುರು ದೃಷ್ಟಿಗೆ ಒಳಗಾದರೆ ರಾಜಯೋಗ ಬರುತ್ತದೆ.
Subscribe to:
Posts (Atom)