Wednesday, 22 July 2026

**ದ್ವಾದಶಾ ರಾಶಿಗಳಿಂದ ಉಂಟಾಗುವ ರೋಗಬಾಧೆಗಳು** *ಮೇಷರಾಶಿ :- ಇದು ಭ ಚಕ್ರದ ಮೊದಲ ರಾಶಿ, ಅಂಗಗಳಲ್ಲಿ ಶಿರೋ ಭಾಗವನ್ನು ಅಂದರೆ ತಲೆಯ ಭಾಗ ವನ್ನು ಪ್ರತಿನಿಧಿಸುತ್ತದೆ. ಕುಜ ಈ ರಾಶಿಯ ಅಧಿಪತಿ ಹಾಗೂ ಅರೋಗ್ಯದಾಯಾಕ ಸೂರ್ಯ ಇಲ್ಲಿ ಉಚ್ಚ ಹಾಗೂ ರೋಗಕಾರಕ ಶನಿ ನೀಚ. ಮೇಷ ರಾಶಿಯಿಂದ ಉಂಟಾಗುವ ರೋಗಬಾಧೆಗಳು :- ಶರೀರದಲ್ಲಿ ಹರಡುವ ರೋಗ, ಬಾಯಿರೋಗ, ಹುಳುಕಡ್ಡಿ, ಜ್ವರ, ತಲೆಯಹುಣ್ಣುಗಳು, ಊತ ರೋಗ, ಮುಖದ ಮೊಡವೆಗಳು, ಅಪಸ್ಮಾರ, ಒಣ ಕಾಮಾಲೆ.. ಇತ್ಯಾದಿಗಳು.. *ವೃಷಭ ರಾಶಿ :- ಭ ಚಕ್ರದ ಎರಡನೇ ಮನೆ, ಶುಕ್ರ ಅಧಿಪತಿ, ದೇಹಕಾರಕ ಚಂದ್ರ ಇಲ್ಲಿ ಉಚ್ಚ.ಅಂಗಾಗ- ಗಳಲ್ಲಿ ಮುಖ, ಗಂಟಲು, ಬಾಯಿ ಇತ್ಯಾದಿ.. ವೃಷಭ ರಾಶಿನಿಂದಾಗುವ ರೋಗಬಾಧೆ.. ಗಂಟಲು ಬೇನೆ, ಎದೆ, ಕಫ ರೋಗಗಳು, ಹೊಟ್ಟೆಯಲ್ಲಿ ಉಂಟಾಗುವ ಗಂಟು ರೋಗ, ಶ್ವಾಸಕೋಶ ರೋಗಗಳು.. ಇತ್ಯಾದಿಗಳು... *ಮಿಥುನ ರಾಶಿ :- ಭ ಚಕ್ರದ ಮೂರನೇ ಮನೆಯಾಗಿ ಬುಧ ಅಧಿಪತಿ, ಮಾತಿಗೆ, ನರಗಳಿಗೆ, ಬುದ್ದಿಗೆಕಾರಕ. ಅಂಗಾಗಳಲ್ಲಿ ದೇಹದ ಭುಜ, ತೋಳು, ಕೈಗಳು ಇತ್ಯಾದಿ... ಮಿಥುನ ರಾಶಿನಿಂದಾಗುವ ರೋಗಭಾದೆಗಳು.. ಅಪಘಾತಗಳು, ನಿಶ್ಯಕ್ತಿಇಂದಾಗಿ ಕೈಗಳು, ಭುಜಗಳು, ತೊಡೆಗಳು, ಕುಸಿದು ಬೀಳುವ ರೋಗಗಳು, ವಿಷರಕ್ತ ನರಗಳು,ನರಗಳ ದೌರ್ಬಲ್ಯ ರೋಗಗಳು, ಬುದ್ದಿಭ್ರಮಣೆ, ಚಿತ್ತಾವಿಕಾರ ಇತ್ಯಾದಿಗಳು... *ಕಟಕ ರಾಶಿ :- ಭ ಚಕ್ರದ ನಾಲ್ಕನೇ ಮನೆ, ಸುಖಭಾವ. ಚಂದ್ರ ಅಧಿಪತಿ, ಅಭಿವುದ್ದಿಗೆ ಕಾರಣನಾದ ಗುರು ಈ ಮನೆಯಲ್ಲಿ ಉಚ್ಚ ಹಾಗೂ ಧೈರ್ಯ ಶೌರ್ಯ, ಪರಾಕ್ರಮ ಕಾರಕ ಕುಜ ನೀಚ. ಎದೆ, ಹೃದಯಭಾಗ,ಹೊಟ್ಟೆಇತ್ಯಾದಿ... ಕಟಕ ರಾಶಿಯಿಂದ ಒದಗುವ ರೋಗಗಳು... ಎದೆ, ಹೊಟ್ಟೆನೋವು, ಆಜೀರ್ಣ, ಜಲೋದರ ರೋಗ, ಅಸಾಧ್ಯ ಕೆಮ್ಮು, ಸದಾ ಯಾವುದೊ ಒಂದು ರೋಗಬಾದೆ... ಇತ್ಯಾದಿಗಳು.. *ಸಿಂಹ ರಾಶಿ :- ಭ ಚಕ್ರದ ಐದನೇ ಮನೆ.. ಆತ್ಮಕಾರಕ ಸೂರ್ಯ ಅಧಿಪತಿ...ಹೃದಯ, ಬೆನ್ನು, ಮೂಳೆ, ರಕ್ತ ಸಂಚಾರ ಮುಂತಾದವುಗಳ ಪ್ರತಿನಿಧಿ. ಸಿಂಹ ರಾಶಿಯಿಂದ ಉಂಟಾಗುವ ರೋಗ... ಸಂಧಿವಾತ, ನೇತ್ರಬೇನೆ, ಪ್ಲೇಗ್, ಗ್ರಂಥಿ ರೋಗ ಸಾಂಕ್ರಾಮಿಕ ವ್ಯಾಧಿಗಳು ಇತ್ಯಾದಿಗಳು. *ಕನ್ಯಾ ರಾಶಿ :- ಭ ಚಕ್ರದ ಆರನೇ ಮನೆ, ಬುಧ ಅಧಿಪತಿ, ಬುಧನ ಮೂಲತ್ರಿಕೋಣ, ಉಚ್ಛಕ್ಷೇತ್ರವೂ ಆಗಿದೆ.ಸಂತೋಷ ಕಾರಕ ಶುಕ್ರ ಇಲ್ಲಿ ನೀಚ. ಸೊಂಟ, ಕಿಬೊಟ್ಟೆ,ಕರಳು, ಇತ್ಯಾದಿ ಅಂಗಾಗ ಸೂಚಿಸುತ್ತದೆ. ಕನ್ಯಾ ರಾಶಿಯಿಂದ ಉಂಟಾಗುವ ರೋಗಬಾಧೆ ಜಂತುರೋಗ, ಪಿತ್ತರೋಗ, ವಾಯುರೋಗ, ಮೂತ್ರವ್ಯಾಧಿ, ಕಿಬ್ಬೊಟ್ಟೆ ರೋಗಗಳು ಇತ್ಯಾದಿ. *ತುಲಾ ರಾಶಿ :- ಭ ಚಕ್ರದ ಏಳನೇ ಮನೆ.ಶುಕ್ರ ಅಧಿಪತಿ, ಸೂರ್ಯ ಇಲ್ಲಿ ನೀಚ,ಶನಿ ಉಚ್ಚ, ಶರೀರದ ಅಂಗಾಗಳಲ್ಲಿ ಮೂತ್ರಪಿಂಡ ಇತ್ಯಾದಿ ಸೂಚಿಸುತ್ತದೆ. ತುಲಾ ರಾಶಿನಿಂದಾಗುವ ರೋಗ ಬಾಧೆ.. ಮೂತ್ರಕೋಶಕ್ಕೆ ಸಂಬಂಧಪಟ್ಟ ಸಕಲ ಮೇಹರೋಗಗಳು, ವಿಷ ರಕ್ತ ವ್ಯಾಧಿ ಇತ್ಯಾದಿಗಳು. *ವೃಶ್ಚಿಕ ರಾಶಿ :- ಭ ಚಕ್ರದ ಎಂಟನೇ ಮನೆ. ಕುಜ ಅಧಿಪತಿ. ಚಂದ್ರ ಇಲ್ಲಿ ನೀಚ, ಶರೀರದ ಖಾಸಗಿ ಅಂಗಗಳು, ಗರ್ಭಕೋಶ ಇತ್ಯಾದಿ ಸೂಚಿಸುವ ರಾಶಿ. ವೃಶ್ಚಿಕ ರಾಶಿಯಿಂದ ಗಮನಿಸಬೇಕಾದ ರೋಗಬಾಧೆಗಳು.. ಮೂಲವ್ಯಾಧಿ, ಮೇಹ ವ್ಯಾಧಿಗಳು, ಗರ್ಭ, ಗರ್ಭಕೋಶದ ಸಮಸ್ಯೆಗಳು ಇತ್ಯಾದಿಗಳು. * ಧನಸ್ಸು ರಾಶಿ :- ಭ ಚಕ್ರದ ಒಂಬತ್ತನೇ ಮನೆ. ಗುರು ಅಧಿಪತಿ. ದೇಹದ ಎರಡೂ ತೊಡೆಗಳು,ಯಕೃತ್ಇತ್ಯಾದಿ ಸುಚಿಸುವ ರಾಶಿ. ಧನಸ್ಸು ರಾಶಿಯಿಂದ ಬರುವ ರೋಗಬಾಧೆ.. ಚತುಷ್ಪಾತ್ ಜೀವಾ ರಾಶಿಗಳಿಂದಾಗುವ ಪ್ರಮಾದಗಳು, ಆಕಸ್ಮಿಕ ಬೆಂಕಿ, ನೀರು, ವ್ಯಾಯಾಮ ವಿದ್ಯೆಗಳಿಂದಗುವ ರೋಗಗಳು ದೇಹದಲ್ಲಿ ಕಾಡುವ ಉಷ್ಣವ್ಯಾಧಿ ಇತ್ಯಾದಿ... * ಮಕರ ರಾಶಿ :- ಭ ಚಕ್ರದ ಹತ್ತನೇ ಮನೆ. ಶನಿ ಅಧಿಪತಿ, ಕುಜ ಉಚ್ಚ . ಶರೀರದ ಅಂಗಾಗ ಗಳಲ್ಲಿ ಮೊಣಕಾಲುಗಳು,ಕೂದಲು, ಎಲುಬು ಇತ್ಯಾದಿಗಳನ್ನು ಸೂಚಿಸುತ್ತದೆ. ಮಕರ ರಾಶಿಯಿಂದ ಕಾಣಸಿಗುವ ರೋಗ ಬಾಧೆಗಳು..ಕುಷ್ಠ, ಅಂಟುರೋಗ, ಮೊಣಕಾಲಿನ ವ್ಯಾಧಿ,ಚರ್ಮ ವ್ಯಾಧಿ ಇತ್ಯಾದಿ. *ಕುಂಭ ರಾಶಿ :- ಭ ಚಕ್ರದ ಹನ್ನೊಂದನೇ ಮನೆ. ಶನಿಯ ಮೂಲತ್ರಿಕೋಣ ಹಾಗೂ ಅದಿಪತ್ಯಈ ರಾಶಿಯಿಂದ ದೇಹದಲ್ಲಿ ತೋರಿಸು ಅಂಗಾಗಗಳು ಕಾಲಿನ ಮಂಡಿಯಿಂದ ಕೆ ಭಾಗ.ಕುಂಭ ರಾಶಿಯಿಂದ ಒದಗುವ ರೋಗಬಾಧೆ ಜಲೋದರ ವ್ಯಾಧಿ, ಖಣ ಕಾಲುಗಳ ತೊಂದ್ರೆ, ನರಗಳ ನಿಶ್ಯಕ್ತಿ, ಸೆಳೆತ ರೋಗ ಇತ್ಯಾದಿ ಗಳು. *ಮೀನಾ ರಾಶಿ : ಭ ಚಕ್ರದ ಹನ್ನೆರಡನೇ ಮನೆ. ಗುರು ಅಧಿಪತ ಶುಕ್ರ ಉಚ್ಚ, ಬುಧ ನೀಚ.ಶರೀರದ ಅಂಗಾಗಗಳಲ್ಲಿ ಪಾದಗಳನ್ನಸೂಚಿಸುವ ರಾಶಿಯಾಗಿದೆ. ಮೀನಾ ರಾಶಿಯಿಂದ ಗಮನಿಸಬೇಕಾದ ರೋಗಬಾಧೆಗಳು,ಪಾದಗಳ ತೊಂದರೆಗಳು, ವ್ಯಾಧಿಗಳು,ಸೆಳೆತ ಇತ್ಯಾದಿಗಳು..

No comments:

Post a Comment