Wednesday, 22 July 2026
|| ಕೂಪಾರಂಭ (ಬಾವಿ, ಕೊಳವೆ ಬಾವಿ ತೋಡಲು ಯಾವ ದಿನ ಶುಭ)||
ಮನೆಗೆ ಸಾಂಪ್ರದಾಯಿಕ ಬಾವಿ ಅಥವಾ ಕೊಳವೆ ಬಾವಿಯೆಂಬುದು ನೀರು ಒದಗಿಸುವ ಪ್ರಮುಖ ಮೂಲ. ಕೆಲವರು ಸಂಪೂರ್ಣವಾಗಿ ಬಾವಿಯನ್ನೇ ಅವಲಂಬಿಸಿರುತ್ತಾರೆ. ವಾಸ್ತುವಿನಲ್ಲಿ ಬಾವಿಯ ದಿಕ್ಕು ಮತ್ತು ಬಾವಿ ಕೊರೆಯುವ ವಿಧಾನದ ಬಗ್ಗೆ ಕೆಲವೊಂದು ನಿಯಮಗಳಿವೆ.
* ಬಾವಿ ಕೊರೆದ ಬಳಿಕ ಹೊಸ ಮನೆಯ ನಿರ್ಮಾಣವನ್ನು ಆರಂಭಿಸಬೇಕು.
* ಹೊಸ ಮನೆ ನಿರ್ಮಾಣದಲ್ಲಿ ಆ ಬಾವಿಯ ನೀರನ್ನು ಉಪಯೋಗಿಸಿದರೆ ಒಳಿತಾಗುತ್ತದೆ ಎಂಬ ನಂಬಿಕೆಯಿದೆ.
* ಬಾವಿ ಅಥವಾ ನೀರಿನ ಮೂಲ ಮನೆಯ ಉತ್ತರ ಅಥವಾ ಈಶಾನ್ಯ ಭಾಗದಲ್ಲಿರಬೇಕು.
*ಒಂದು ವೇಳೆ ನೀರಿನ ಪೈಪ್ ಆಗ್ನೇಯ ಅಥವಾ ಈಶಾನ್ಯ ಮೂಲೆಯಲ್ಲಿದ್ದರೆ ಬಾವಿಯು ಅದರ ಎಡ ಅಥವಾ ಬಲಕ್ಕಿದ್ದು ಮಧ್ಯದಲ್ಲಿರಬಾರದು.
* ಬಾವಿಯು ಪ್ರಾಪರ್ಟಿಯ ಉತ್ತರ ಅಥವಾ ಪೂರ್ವ ದಿಕ್ಕಿನಲ್ಲಿರಬಹುದು.
*ಬಾವಿಯು ವಾಯುವ್ಯ ಅಥವಾ ಆಗ್ನೇಯ ದಿಕ್ಕಿನಲ್ಲಿರಬಾರದು.
*ಬಾವಿಯು ವೃತ್ತಾಕಾರವಾಗಿರಬೇಕು. ನೀರಿಗೆ ದಿನಕ್ಕೆ ಕನಿಷ್ಠ ಐದು ಗಂಟೆಯಾದರೂ ಸೂರ್ಯನ ಬೆಳಕು ಬೀಳುವಂತಿರಬೇಕು.
*ಬಾವಿ ನೀರನ್ನು ಎರಡು ಮನೆಯವರು ಪಾಲು ಮಾಡಿಕೊಳ್ಳಬಾರದು.
*ಗಂಗಾಪ್ರಾಥನಾ,ಕುಲದೇವತಾಪ್ರಾಥನಾ ಪೂಜೆ ಮಾಡಿದ ಬಳಿಕವೇ ಬಾವಿ ತೋಡುವ ಕಾರ್ಯ ಆರಂಭಿಸಬೇಕು.
|| ಶುಭವಾರಗಳು||
ಸೋಮವಾರ, ಬುಧವಾರ, ಗುರುವಾರ ಮತ್ತು ಶುಕ್ರವಾರ ಬಾವಿ ತೋಡಲು ಆರಂಭಕ್ಕೆ ಶುಭ ವಾರಗಳು.
||ಶುಭ ನಕ್ಷತ್ರಗಳು:||
ಕೃತಿಕಾ, ಪೂರ್ವ ಪಲ್ಗುಣಿ, ಮೂಲ, ಭರಣಿ, ಅಶ್ಲೇಷಾ,ಪೂರ್ವಾಭಾದ್ರ ಮತ್ತು ಪೂರ್ವಾಷಾಢ ನಕ್ಷತ್ರದಲ್ಲಿಯೂ ಬಾವಿ ತೋಡಲು ಆರಂಭಿಸಬಹುದು.
||ಶುಭ ಜಲ ಲಗ್ನಗಳು||
ಕಟಕ,ವೃಶ್ಚಿಕ,ಮೀನ,(ಮಕರ,ಕುಂಭ.) ಸಂಪೂರ್ಣ ಜಲ ಲಗ್ನಗಳಲ್ಲಿ ಕೊಳವೆಬಾವಿ ತಗೆಸಲು ಪ್ರಾರಂಬಿಸಬೇಕು.
ಅಜ್ಜಹಳ್ಳಿ ಕೃಷ್ಣಮೂರ್ತಿ
Subscribe to:
Post Comments (Atom)
No comments:
Post a Comment