Wednesday, 20 February 2019

ವಿವಾಹ ಮುಹೂರ್ತ,ಜ್ಯೊತಿಷ ಸಾಮಾನ್ಯ ಜ್ಞಾನ,ಶುಭ ಮಹೂರ್ತ ನಿರ್ಣಯ

ವಿವಾಹ ಮುಹೂರ್ತ ವಿವಾಹ ನಿರ್ಣಯಿಸುವಾಗ ಮುಹೂರ್ತ ನೋಡುವ ಪದ್ಧತಿಯಿದೆ. ಮುಹೂರ್ತ ಲೆಕ್ಕಾಚಾರ ಮಾಡುವಾಗ ವರ ಮತ್ತು ಕನ್ಯೆಗೆ ಇರುವ ಗ್ರಹಬಲಗಳನ್ನು ನೋಡಿ ನಿರ್ಣಯಿಸಬೇಕು. ಸರಿಯಾಗಿ ನೋಡದೇ ವಿವಾಹ ಮುಹೂರ್ತಗಳನ್ನು ನಿರ್ಣಯಿಸಿದರೆ ಅನರ್ಥ ಸಂಭವಿಸಬಹುದು. ವಿವಾಹ ಮುಹೂರ್ತವನ್ನು ನಿರ್ಣಯಿಸುವಾಗ 'ತ್ರಿಬಲ' ಅಂದರೆ ವರನಿಗೆ ಸೂರ್ಯ, ಚಂದ್ರಬಲ ಮತ್ತು ಕನ್ಯೆಗೆ ಚಂದ್ರ, ಗುರುಬಲಗಳನ್ನು ನೋಡಬೇಕು. ಸೂರ್ಯನು 4, 8, 12ನೇ ಭಾವದಲ್ಲಿರುವಾಗ ವಿವಾಹ ಮಾಡಿದರೆ ಮೃತ್ಯುವಾಗುತ್ತದೆ. ವರನ ರಾಶಿಯಿಂದ ಸೂರ್ಯ 1,2,5,7, 9ನೆಯ ಭಾವದಲ್ಲಿದ್ದರೆ ಸೂರ್ಯನ ಪೂಜೆ, ಜಪ, ದಾನಗಳನ್ನು ಮಾಡುವುದರಿಂದ ವಿವಾಹ ಶುಭವಾಗುತ್ತದೆ. 11,3, 6, 10ನೆಯ ಭಾವದಲ್ಲಿದ್ದರೆ ವಿವಾಹವು ಶುಭವಾಗುತ್ತದೆ. ಕನ್ಯೆಯ ರಾಶಿಯಿಂದ 4,8,12ರಲ್ಲಿ ಗುರುವಿರುವಾಗ ವಿವಾಹ ಮಾಡಿದರೆ ಕನ್ಯೆಯ ಪ್ರಾಣಹಾನಿಯಾಗುತ್ತದೆ. ಗುರುವು 1,3,6,10ರಲ್ಲಿರುವಾಗ ಪೂಜೆ, ಜಪ, ದಾನಗಳನ್ನು ಮಾಡಿ ವಿವಾಹ ಮಾಡಿದರೆ ಶುಭವಾಗುತ್ತದೆ. ಗುರುವು 11, 2, 5, 7, 9ರಲ್ಲಿರುವಾಗ ವಿಶೇಷ ಫಲ ಉಂಟಾಗುತ್ತದೆ. ಕನ್ಯೆ ಮತ್ತು ವರ ಈರ್ವರಿಗೂ ಚಂದ್ರಬಲ ಹೇಳಲಾಗಿದ್ದು, ಅದರ ಫಲಗಳು ಹೀಗಿರುತ್ತವೆ. 1ರಲ್ಲಿ ಲಕ್ಷ್ಮಿ ಪ್ರಾಪ್ತಿ, 2ರಲ್ಲಿ ಮನಸ್ಸಂತೋಷ, 3ರಲ್ಲಿ ಧನಸಂಪತ್ತು, 4ರಲ್ಲಿ ಕಲಹ, 5ರಲ್ಲಿ ಜ್ಞಾನವೃದ್ಧಿ, 6ರಲ್ಲಿ ಸಂಪತ್ತು, 7ರಲ್ಲಿ ರಾಜ ಸನ್ಮಾನ, 8ರಲ್ಲಿ ಮೃತ್ಯು, 9ರಲ್ಲಿ ಧರ್ಮಲಾಭ, 10ರಲ್ಲಿ ಮನೋಭಿಲಾಷೆ ಪ್ರಾಪ್ತಿ, ಏಕಾದಶದಲ್ಲಿ ಸರ್ವಲಾಭ ಮತ್ತು ದ್ವಾದಶದಲ್ಲಿ ಹಾನಿಯುಂಟಾಗುತ್ತದೆ. ಜ್ಯೋತಿಷ ಶಾಸ್ತ್ರದ ಪ್ರಕಾರ ಗುರು ಜೀವರಕ್ಷಕ, ಚಂದ್ರ ಧನ ಪ್ರದಾತ, ಸೂರ್ಯ ತೇಜವನ್ನು, ಮಂಗಲ ಭೂ ಸಂಪತ್ತನ್ನು ಕೊಡುತ್ತಾನೆ. ಗುರುವು ಹೀನಬಲನಾಗಿದ್ದರೆ ಕನ್ಯೆಯು ಮೃತ್ಯು, ಸೂರ್ಯ ಹೀನನಾಗಿದ್ದರೆ ವರನ ಮೃತ್ಯುವಾಗುತ್ತದೆ. ಚಂದ್ರ ಹೀನನಾಗಿದ್ದರೆ ಲಕ್ಷ್ಮಿ ಕ್ಷೀಣವಾಗುತ್ತಾಳೆ. ಮಂಗಲ ಹೀನನಾಗಿದ್ದರೆ ಸ್ಥಾನ ಹಾನಿಯಾಗುತ್ತದೆ. ಗ್ರಹಗಳ ಬಲ ವಿಚಾರ : ಲಗ್ನ, ಚತುರ್ಥ, ಸಪ್ತಮ, ದಶಮ ಈ ನಾಲ್ಕು ಕೇಂದ್ರ ಸ್ಥಾನಗಳಲ್ಲಿ ಶುಭಗ್ರಹವಿದ್ದರೆ ಶ್ರೇಷ್ಠವು. ಸಪ್ತಮ ಸ್ಥಾನದಲ್ಲಿ ಗ್ರಹವಿರದಿದ್ದರೆ ಅಶುಭ. ಶುಕ್ಲಪಕ್ಷ ದಶಮಿಯಿಂದ ಕೃಷ್ಣಪಕ್ಷದ ಪಂಚಮಿಯವರೆಗೆ ಚಂದ್ರನು ಶ್ರೇಷ್ಠನಾಗಿರುತ್ತಾನೆ. ಸೂರ್ಯ ರಾಹುಗಳು ಶುಕ್ಲಪಕ್ಷ ದ್ವಿತಿಯಾದಿಂದ ದಶಮಿಯವರೆಗೆ ಶುಭರಾಗಿರುತ್ತಾರೆ. ಭೌಮ, ಶನಿ, ಕೇತುಗಳು ಕೃಷ್ಣ ಪಂಚಮಿಯಿಂದ, 30ರವರೆಗೆ ಚಂದ್ರ ಪಾಪಗ್ರಹರಾಗಿರುತ್ತಾರೆ. ಲಗ್ನದಿಂದ ದ್ವಿತೀಯ ಭಾವದಲ್ಲಿ ಚಂದ್ರ ಶುಭನಾಗಿರುತ್ತಾನೆ. 3,6ರಲ್ಲಿ ಪಾಪಗ್ರಹನಾಗಿರುತ್ತಾನೆ. 3, 11ರಲ್ಲಿ ಸರ್ವಗ್ರಹಗಳು ಶುಭವಾಗಿರುತ್ತವೆ. ಸಪ್ತಮದಲ್ಲಿ ಸೌಮ್ಯ, ಕ್ರೂರ ಮತ್ತು ಪಾಪಗ್ರಹಗಳು ಮೃತ್ಯುಪ್ರದವಾಗಿವೆ. ಶನಿ ಸೂರ್ಯರು ಲಗ್ನಾತ್‌ ಸಪ್ತಮದಲ್ಲಿದ್ದರೆ ಚಂದ್ರ 1,6,8ರಲ್ಲಿದ್ದರೆ, ಮಂಗಳ 1, 7, 8ರಲ್ಲಿದ್ದರೆ, ಶುಕ್ರನು 8,7,6ರಲ್ಲಿದ್ದರೆ, ಗುರುವು 8ರಲ್ಲಿದ್ದರೆ, ರಾಹು 1, 7, 4ರಲ್ಲಿದ್ದರೆ, ಬುಧ 7,8ರಲ್ಲಿದ್ದ ಸಮಯದಲ್ಲಿ ವಿವಾಹವಾದರೆ ಪ್ರಾಣಹಾನಿಯಾಗುತ್ತದೆ. ಗ್ರಹಗಳ ಮಧ್ಯದಲ್ಲಿ ಚಂದ್ರ ಅಥವಾ ಲಗ್ನವಿದ್ದರೆ ವರನಿಗೆ ಮೃತ್ಯುಕಾರಕನಾಗುವುದರಿಂದ ವಜ್ರ್ಯವಾಗುತ್ತದೆ. ತುಲಾ, ಮಿಥುನ, ಕನ್ಯಾ, ವೃಷಭ ಲಗ್ನಗಳು ಮತ್ತು ಧನುವಿನ ಪೂರ್ವಾರ್ಧ ಶುಭ ಲಗ್ನಗಳಾಗಿವೆ. ಅನ್ಯ ಲಗ್ನಗಳು ಮಧ್ಯಮವಾಗಿವೆ ಜ್ಯೊತಿಷ ಸಾಮಾನ್ಯ ಜ್ಞಾನ ಜನರಲ್‌ ಕಾನೆಲ್ಡ್ಜ್‌ ಸಾಮಾನ್ಯ ಜ್ಯೋತಿಷ್ಯ ಜ್ಞಾನ ಆಯನಗಳು : ಸೂರ್ಯನ ಚಲನೆಗೆ ಅನುಸಾರವಾಗಿ ಎರಡು ಆಯನಗಳಿವೆ ಅದೆಂದರೆ ಉತ್ತರಾಯಣ ಮತ್ತು ದಕ್ಷಿಣಾಯಣ... ಆಯನಗಳು : ಸೂರ್ಯನ ಚಲನೆಗೆ ಅನುಸಾರವಾಗಿ ಎರಡು ಆಯನಗಳಿವೆ. ಅದೆಂದರೆ ಉತ್ತರಾಯಣ ಮತ್ತು ದಕ್ಷಿಣಾಯಣ. ಸೂರ್ಯನು ಮಕರ ರಾಶಿಯಿಂದ ಮಿಥುನ ಮಾಸಾಂತ್ಯದವರೆಗೆ ಸಂಚರಿಸುವಾಗ ಉತ್ತರಾಯಣವಾಗುತ್ತದೆ. ಕರ್ಕಾಟಾದಿ ಧನುರಾಂತ್ಯದವರೆಗೆ ಸೂರ್ಯನು ಸಂಚರಿಸುವಾಗ ದಕ್ಷಿಣಾಯಣವಾಗುತ್ತದೆ. ಮಾಸಗಳು : ಹನ್ನೆರಡು ಮಾಸಗಳಿವೆ. ಅವೆಂದರೆ ವಸಂತ ಋುತು (ಚೈತ್ರ-ವೈಶಾಖ), ಗ್ರೀಷ್ಮ ಋುತು (ಜ್ಯೇಷ್ಠ-ಆಷಾಢ), ವರ್ಷ ಋುತು (ಶ್ರಾವಣ-ಭಾದ್ರಪದ), ಶರದ್ರುತು (ಆಶ್ವಯುಜ-ಕಾರ್ತಿಕ), ಹೇಮಂತ ಋುತು (ಮಾರ್ಗಶಿರ-ಪುಷ್ಯ), ಶಿಶಿರ ಋುತು (ಮಾಘ-ಫಾಲ್ಗುಣ). ಒಂದು ತಿಂಗಳಲ್ಲಿ ಎರಡು ಪಕ್ಷಗಳು. ಶುಕ್ಲ (ಹುಣ್ಣಿಮೆಯಿಂದ ಪಾಡ್ಯದವರೆಗೆ - ವೃದ್ಧಿ ಚಂದ್ರ) ಮತ್ತು ಕೃಷ್ಣ ಪಕ್ಷ (ಪಾಡ್ಯದಿಂದ ಅಮಾವಾಸ್ಯೆಯವರೆಗೆ - ಕ್ಷೀಣ ಚಂದ್ರ). ವೃದ್ಧಿ ಚಂದ್ರ ಕಾಲದಲ್ಲಿ ಶುಭ ಕಾರ್ಯಗಳನ್ನು ಮಾಡಬೇಕೆನ್ನುವುದು ಶಾಸ್ತ್ರಗಳ ಅಭಿಮತ. ಯೋಗಗಳು : ಜ್ಯೋತಿಷ್ಯಶಾಸ್ತ್ರವು 27 ನಕ್ಷತ್ರಗಳನ್ನು ಗುರುತಿಸಿದೆ. ಅದಕ್ಕೆ ಹೊಂದಿಕೊಂಡಂತೆ 27 ಯೋಗಗಳಿವೆ. ಅವೆಂದರೆ, ವಿಷ್ಕಂಭಯೋಗ, ಪ್ರೀತಿಯೋಗ, ಆಯುಷ್ಮಾನ್‌ಯೋಗ, ಸೌಭಾಗ್ಯಯೋಗ, ಶೋಭಾನಯೋಗ, ಅತಿಗಂಡಯೋಗ, ಸುಕರ್ಮಯೋಗ, ಧೃತಿಯೋಗ, ಶೂಲಯೋಗ, ಗಂಡಯೋಗ, ವೃದ್ಧಿಯೋಗ, ಧ್ರುವಯೋಗ, ವ್ಯಾಘಾತಯೋಗ, ಹರ್ಷಣಯೋಗ, ವಜ್ರಯೋಗ, ಸಿದ್ಧಿಯೋಗ, ವೃತೀಪಾತಯೋಗ, ವರೀಯಾನ್‌ಯೋಗ, ಪರಿಘಯೋಗ, ಶಿವನಾಮಯೋಗ, ಸಿದ್ಧಯೋಗ, ಸಾಧ್ಯಯೋಗ, ಶುಭಯೋಗ, ಶುಕ್ಲನಾಮಯೋಗ, ಬ್ರಹ್ಮಯೋಗ, ಐಂದ್ರಯೋಗ ಮತ್ತು ವೈಧೃತಿಯೋಗ. ಕರಣಗಳು : ಹನ್ನೊಂದು ಕರಣಗಳು. ಅವೆಂದರೆ, ಬವ, ಬಾಲವ, ಕೌಲವ, ತೈತಿಲ, ಗರಜ, ವಣಿಕ್‌, ಭದ್ರ, ಶಕುನಿ, ಚತುಷ್ಪಾತ್‌, ನಾಗವಾನ್‌ ಮತ್ತು ಕಿಂಸ್ತುಘ್ನ ಕರಣ. ರಾಶ್ಯಾಧಿಪತಿ ಲೆಕ್ಕಾಚಾರ: ಸಿಂಹರಾಶಿಗೆ ಸೂರ್ಯ, ಕರ್ಕಾಟಕ ರಾಶಿಗೆ ಚಂದ್ರ, ಮೇಷ-ವೃಶ್ಚಿಕ ರಾಶಿಗಳಿಗೆ ಅಂಗಾರಕ, ಕನ್ಯಾ-ಮಿಥುನ ರಾಶಿಗಳಿಗೆ ಬುಧ, ಧನು-ಮೀನ ರಾಶಿಗಳಿಗೆ ಗುರು, ತುಲಾ-ವೃಷಭ ರಾಶಿಗಳಿಗೆ ಶುಕ್ರ, ಮಕರ-ಕುಂಭ ರಾಶಿಗಳಿಗೆ ಶನಿ ಅಧಿಪತಿ. ಲಗ್ನ ಪ್ರಮಾಣ : ಲಗ್ನ ಪ್ರಮಾಣವನ್ನು ಲೆಕ್ಕ ಹಾಕುವಾಗ ಜಾತಕದಲ್ಲಿನ ಆಯಾ ಲಗ್ನಕ್ಕೆ ಅನುಗುಣವಾಗಿ ಲೆಕ್ಕಾಚಾರ ಮಾಡಬೇಕು. ಮೇಷ ಪ್ರಮಾಣವು 4-12, ವೃಷಭ ಪ್ರಮಾಣವು 4-38, ಮಿಥುನ ಪ್ರಮಾಣವು 5-14, ಕರ್ಕಾಟಕ ಪ್ರಮಾಣವು 5-32, ಸಿಂಹ ಪ್ರಮಾಣವು 5-20, ಕನ್ಯಾ ಪ್ರಮಾಣವು 5-4, ತುಲಾ ಪ್ರಮಾಣವು 5-4, ವೃಶ್ಚಿಕ ಪ್ರಮಾಣವು 5-20, ಧನು ಪ್ರಮಾಣವು 5-32, ಮಕರ ಪ್ರಮಾಣವು 5-14, ಕುಂಭ ಪ್ರಮಾಣವು 4-38, ಮೀನ ಪ್ರಮಾಣವು 4-12. ಹೀಗೆ ಮೇಷಾದಿ ಲಗ್ನ ಪ್ರಮಾಣಗಳನ್ನು ಲೆಕ್ಕ ಹಾಕಬೇಕು. ಲಗ್ನ ಪ್ರಮಾಣ ಲೆಕ್ಕ ಹಾಕಿದ ನಂತರ ಲಗ್ನಭುಕ್ತಿಯನ್ನು ನಿರ್ಣಯಿಸ ಬೇಕು. ಶುಭ ಮಹೂರ್ತ ನಿರ್ಣಯ ಒಳ್ಳೆಯ ಮನಸ್ಸಿನಿಂದ ಮಾಡುವ ಯಾವುದೇ ಕಾರ್ಯದಲ್ಲೂ ಗೆಲುವಿರುತ್ತದೆ. ಶುಭ ಮಹೂರ್ತಗಳಲ್ಲಿ ಹೊಸ ಕಾರ್ಯವನ್ನು ಆರಂಭ ಮಾಡುವುದರಿಂದ ಹಿಡಿದ ಕಾರ್ಯದಲ್ಲಿ ಯಶಸ್ಸು ದೊರೆಯುತ್ತದೆ. ಒಳ್ಳೆಯ ಮನಸ್ಸಿನಿಂದ ಮಾಡುವ ಯಾವುದೇ ಕಾರ್ಯದಲ್ಲೂ ಗೆಲುವಿರುತ್ತದೆ. ಶುಭ ಮಹೂರ್ತಗಳಲ್ಲಿ ಹೊಸ ಕಾರ್ಯವನ್ನು ಆರಂಭ ಮಾಡುವುದರಿಂದ ಹಿಡಿದ ಕಾರ್ಯದಲ್ಲಿ ಯಶಸ್ಸು ದೊರೆಯುತ್ತದೆ. ಶುಭ ಮಹೂರ್ತ ನಿರ್ಣಯ ಕುರಿತ ಸಂಕ್ಷೇಪ ಮಾಹಿತಿ. ಜ್ಯೋತಿಷ್ಯಶಾಸ್ತ್ರದಲ್ಲಿ ಮೂರೂವರೆ ಮಹೂರ್ತಗಳನ್ನು (ಯುಗಾದಿಯ ಪಾಡ್ಯ, ಅಕ್ಷಯ ತದಿಗೆ, ವಿಜಯ ದಶಮಿ ಮತ್ತು ಬಲಿ ಪಾಡ್ಯಮಿ) ಅತಿ ಶ್ರೇಷ್ಠವೆನ್ನುತ್ತಾರೆ. ಈ ಮಹೂರ್ತಗಳಿಗೆ ಯಾವುದೇ ದಿನ ದೋಷವಿಲ್ಲ. ಒಂದೊಮ್ಮೆ ಈ ದಿನಗಳಿಗೆ ಹೊಂದಿಕೊಂಡಂತೆ ಗ್ರಹಣವೇನಾದರೂ ಸಂಭವಿಸಿದರೆ ಆಗ ಶುಭ ಕಾರ್ಯಗಳನ್ನು ಮಾಡದಿರುವುದು ಒಳ್ಳೆಯದು. ಧನುರ್ಮಾಸದಲ್ಲಿ ಗೃಹ ಪ್ರವೇಶ, ನೂತನ ಗೃಹ ನಿರ್ಮಾಣ ಕಾರ್ಯಾರಂಭ, ವಿವಾಹ ಮತ್ತಿತರ ಶುಭ ಕಾರ್ಯಗಳನ್ನು ಮಾಡುವುದು ಒಳ್ಳೆಯದಲ್ಲ. ಸೋಮವಾರ, ಬುಧವಾರ, ಗುರುವಾರ ಮತ್ತು ಶುಕ್ರವಾರಗಳನ್ನು ಶುಭವಾರಗಳೆನ್ನುತ್ತಾರೆ. ಶುದ್ಧ ಬಿದಿಗೆ, ತದಿಗೆ, ಪಂಚಮಿ, ಸಪ್ತಮಿ, ದಶಮಿ, ಏಕಾದಶಿ ಮತ್ತು ತ್ರಯೋದಶಿ ಉತ್ತಮ ತಿಥಿಗಳಾಗಿವೆ. ಅಶ್ವಿನಿ, ಮೃಗಶಿರಾ, ರೋಹಿಣಿ, ಪುನರ್ವಸು, ಪುಷ್ಯ, ಮಾಘ, ಪುಬ್ಬ, ಉತ್ತರ, ಹಸ್ತ, ಚಿತ್ತ, ಸ್ವಾತಿ, ಅನುರಾಧ, ಮೂಲ, ಉತ್ತರಾಷಾಢ, ಶ್ರವಣ, ಧನಿಷ್ಠ, ಶತಭಿಷ, ಉತ್ತರಭಾದ್ರ, ರೇವತಿ ಶುಭ ನಕ್ಷತ್ರಗಳಾಗಿವೆ. ಪ್ರೀತಿ, ಸೌಭಾಗ್ಯ, ಶೋಭಾನ, ವೃದ್ಧಿ, ಧೃವ, ಹರ್ಷಣ, ಸಿದ್ಧಿ, ಶಿವ, ಸಾದ್ಯ, ಶುಭ, ಶುಕ್ಲ, ಬ್ರಹ್ಮ ಇವುಗಳನ್ನು ಶುಭ ಯೋಗಗಳೆನ್ನುತ್ತಾರೆ. ಭವ, ಬಾಲವ, ಕೌಲವ, ತೈತುಲ, ಗರಜ, ವಣಿಕ, ಭದ್ರ ಇವು ಶುಭ ಕರಣಗಳಾಗಿವೆ. ವೃಷಭ, ಮಿಥುನ, ಕನ್ಯಾ, ತುಲಾ, ಧನಸ್ಸು, ಮೀನ ಶುಭಲಗ್ನಗಳಾಗಿದ್ದರೆ, ಬುಧ, ಗುರು, ಶುಕ್ರ, ಚಂದ್ರ ಈ ಗ್ರಹಗಳು ಕೇಂದ್ರ ತ್ರಿಕೋಣ ಸ್ಥಾನಗಳಾದ 1-4-7-10-5-9 ರಲ್ಲಿ ಇದ್ದಾಗ ಶುಭ ಗ್ರಹವೆನಿಸುತ್ತದೆ. ರವಿ, ಕುಜ, ಶನಿ ಗ್ರಹಗಳು 3-6-11 ರಲ್ಲಿ ಇದ್ದರೆ ಪಾಪಗ್ರಹಗಳೆಂದು ನಿರ್ಣಯಿಸುವುದು. 11 ನೇ ಸ್ಥಾನದಲ್ಲಿ ಸರ್ವ ಗ್ರಹಗಳು ಇದ್ದರೆ ಶುಭವೆಂದು ತೀರ್ಮಾನಿಸಬೇಕು. ರಾಹು, ಕೇತು ಛಾಯಾ ಗ್ರಹಗಳಾದರೂ ಜನ್ಮ ಕುಂಡಲಿಯಲ್ಲಿ 3-6-11 ರಲ್ಲಿ ಇದ್ದರೆ ಶುಭವೆಂದು ತೀರ್ಮಾನಿಸಬಹುದು.ತಿಥಿ ನಿರ್ಣಯ ಐದು ಬಗೆಯ ತಿಥಿಗಳಿವೆ. ಅವೆಂದರೆ, ನಂದಾ, ಭದ್ರ, ಜಯ, ರಿಕ್ತಾ ಮತ್ತು ಪೂರ್ಣ. ನಂದಾ: ಉತ್ಸವ, ವಾಸ್ತು ಪ್ರತಿಷ್ಠೆ, ಕೃಷಿ ಕಾರ್ಯಾರಂಭ, ಸಂಗೀತಾರಂಭ ಮೊದಲಾದವನ್ನು ಮಾಡಬಹುದು. ಭದ್ರ: ವಿವಾಹ, ಉಪನಯನ, ಪ್ರಯಾಣ, ಶಾಂತಿ ಕರ್ಮಗಳನ್ನು ಮಾಡುವುದು ಜಯ: ಯುದ್ಧಾರಂಭ, ವಿವಾಹ, ಉಪನಯನ, ಷೋಡಷ ಸಂಸ್ಕಾರಗಳನ್ನು ಮಾಡಬಹುದು. ಪೂರ್ಣ: ಮಂಗಳ ಕಾರ್ಯಗಳು, ವಿವಾಹಾದಿ ಶುಭ ಕಾರ್ಯಗಳು, ಯಾತ್ರಾ ಆಗಮನಾದಿ ಶಾಂತಿ ಕರ್ಮಗಳನ್ನು ಮಾಡಬಹುದು. ತಿಥಿ ನಕ್ಷ ತ್ರ ಹಾಗೂ ಲಗ್ನ ಗಂಡಾಂತರಗಳು * ತಿಥಿ ಗಂಡಾಂತರ :- ಪಂಚಮಿ, ದಶಮಿ, ಪೂರ್ಣಿಮ ಮತ್ತು ಅಮವಾಸ್ಯೆ ತಿಥಿಗಳು, ಪಾಡ್ಯ, ಷಷ್ಠಿ, ಏಕಾದಶಿ, ಈ ತಿಥಿಗಳ ಸಂಧಿ ಕಾಲದಲ್ಲಿ 2-2 ಘಳಿಗೆ ತಿಥಿ ಗಂಡಾತರವಾಗುತ್ತದೆ. ಈ ಗಂಡಾಂತರ ಕಾಲದಲ್ಲಿ ಶುಭ ಕೆಲಸ ಮಾಡುವುದು ಶ್ರೇಯಸ್ಕರವಲ್ಲ. * ನಕ್ಷ ತ್ರ ಗಂಡಾಂತರ: ರೇವತಿ, ಆಶ್ಲೇಷ, ಜೇಷ್ಠ ನಕ್ಷ ತ್ರಗಳ ಅಂತ್ಯದಲ್ಲಿ 2-2 ಘಳಿಗೆ ಅಶ್ವಿನಿ ಮಖಾ ಮೂಲಾ ನಕ್ಷ ತ್ರಗಳ ಪ್ರಾರಂಭದ 2-2 ಘಳಿಗೆ ಕಾಲವು ಗಂಡಾಂತರ ದೋಷ ಎನಿಸುತ್ತದೆ. ಈ ಸಮಯದಲ್ಲಿ ಶುಭ ಕಾರ್ಯಗಳನ್ನು ಮಾಡಬಾರದು.* ಲಗ್ನ ಗಂಡಾಂತರ : ಕಟಕ, ಸಿಂಹ, ವೃಶ್ಚಿಕ, ಧನಸ್ಸು, ಮೀನ, ಮೇಷ ಈ ಲಗ್ನಗಳ ಸಂಧಿ ಕಾಲದಲ್ಲಿ ಅರ್ಧ ಘಳಿಗೆ ಗಂಡಾಂತರ ಇದೆ. ಇದು ಸಹ ಶುಭ ಕಾರ್ಯಕ್ಕೆ ನಿಷಿದ್ದ. * ಗುರು ಶುಕ್ರ ಅಸ್ತಂಗತ ದೋಷ: ಗುರು ಶುಕ್ರರು ಸೂರ‍್ಯನೊಂದಿಗಿದ್ದಾಗ ಅಸಮರ್ಥರು ಆಗುವುದನ್ನೇ ಅಸ್ತವೆನ್ನುವರು. ಶುಕ್ರನು ಪೂರ್ವದಲ್ಲಿ ಉದಯಿಸಿದರೆ ಮೂರು ದಿನ ಬಾಲನು. ಪಶ್ಚಿಮದಲ್ಲಿ ಉದಯಿಸಿದರೆ ಹತ್ತು ದಿನ ಬಾಲನು. ಪೂರ್ವದಲ್ಲಿ ಅಸ್ತಮಿಸಿದರೆ ಹನ್ನೊಂದು ದಿನ ವೃದ್ಧನು ಮತ್ತು ಪಶ್ಚಿಮದಲ್ಲಿ ಅಸ್ತಮಿಸಿದರೆ ಹದಿನೈದು ದಿನ ವೃದ್ಧನೆಂದು ತಿಳಿಯಬಹುದು. -SANGRAHA

ನಿವೇಶನದ ಆಯವರ್ಗ, ಹೆಚ್ಚು ಮನೆಗಳನ್ನು ಹೊಂದುವ ಯೋಗ,ಯಾರಿಗಿದೆ ಗೃಹಯೋಗ ಲಾಭ,ವಾಸ್ತು ದೋಷ ನಿವಾರಣೆಗೆ ವೃಕ್ಷಾರಾಧನೆ

ನಿವೇಶನದ ಆಯವರ್ಗ ಆಯವರ್ಗದಲ್ಲಿ ಎಂಟು ವಿಧಗಳಿವೆ ಅವೆಂದರೆ 1.ಧ್ವಜಾಯ, 2.ಧೂಮ್ರಾಯ, 3.ಸಿಂಹಾಯ, 4.ಶ್ವಾನಾಯ, 5.ವೃಷಭಾಯ, 6.ಖರಾಯ, 7.ಗಜಾಯ ಮತ್ತು 8.ಕಾಕಾಯ. ಆಯವರ್ಗದಲ್ಲಿ ಎಂಟು ವಿಧಗಳಿವೆ ಅವೆಂದರೆ ಧ್ವಜಾಯ, ಧೂಮ್ರಾಯ, ಸಿಂಹಾಯ, ಶ್ವಾನಾಯ, ವೃಷಭಾಯ, ಖರಾಯ, ಗಜಾಯ ಮತ್ತು ಕಾಕಾಯ. ಇವುಗಳಲ್ಲಿ ಧ್ವಜಾಯ, ವೃಷಭಾಯ ಅತೀ ಶ್ರೇಷ್ಠ. ಸಿಂಹಾಯ, ಗಜಾಯ ಸಾಧರಣವಾದ ಫಲಯನ್ನು ಕೂಡುವವು, ಉಳಿದ ಆಯಗಳು ಕನಿಷ್ಠವಾದವು. ಈ ಶುಭ ಆಯದ ಜೊತೆಗೆ ವಾರ ತಿಥಿ, ನಕ್ಷ ತ್ರ ಯೋಗ, ಕರಣ, ಆಯಸ್ಸು, ಧನ ಸಂಖ್ಯೆ, ಋುಣ ಸಂಖ್ಯೆ ಅಂಶ ಮತ್ತು ದಿಕ್ಪಾಲಕರು ಇವು ಸಹ ಶುಭವಾಗಿ ಇರಬೇಕು. ಆಯ ವರ್ಗವು ಸೇರಿ ಹನ್ನೊಂದು ವರ್ಗವು ಶುಭವಾಗಿರಬೇಕು. ಎಂಟು ವಿಧ ಆಯಗಳ ಫಲಗಳ ಬಗ್ಗೆ ತಿಳಿಯೋಣ : 1. ಧ್ವಜಾಯದ ಫಲ : ಧ್ವಜಾಯದಲ್ಲಿ ಕಟ್ಟುವ ಮನೆಯಲ್ಲಿ ಸಮಸ್ತ ಸೌಭಾಗ್ಯವನ್ನು, ದ್ರವ್ಯಲಾಭ, ಶತ್ರುನಾಶ,ರಾಜಪೂಜ್ಯತೆಯನ್ನುಂಟು ಮಾಡುವುದು. 2. ಧೂಮ್ರಾಯದ ಫಲ : ಧೂಮ್ರಾಯದಲ್ಲಿ ಕಟ್ಟಿದ ಮನೆಯು ರೋಗ ಪೀಡೆಯು, ಪುತ್ರರಿಗೂ, ಪತ್ನಿಗೂ ನಾನಾ ವಿಧವಾದ ವ್ಯಾದಿಯನ್ನು ಶತೃವೃದ್ಧಿಯನ್ನು ಉಂಟುಮಾಡುವುದು. 3. ಸಿಂಹಾಯದ ಫಲ : ಸಿಂಹಾಯದ ಮನೆಯಲ್ಲಿ ವಾಸಿಸುವವರಿಗೆ ಶರೀರಸೌಖ್ಯ, ರೋಗನಾಶ, ಧನ-ಧಾನ್ಯ ಸಂಪಾದನೆ, ಸರ್ವ ಕಾರ್ಯಗಳಲ್ಲಿ ಜಯ ಉಂಟಾಗುವುದು ಈ ಮನೆಯಲ್ಲಿ ವಾಸಿಸುವವರಿಗೆ ಸಿಟ್ಟುಜಾಸ್ತಿ, ಸಿಂಹಾಯದ ಮನೆಯ ಎದುರಿಗೆ ಗಜಾಯದ ಮನೆಯನ್ನು ಕಟ್ಟಿದರೆ ಗಜಾಯದ ಮನೆಯು ಶೀಘ್ರವಾಗಿ ನಾಶವಾಗುವುದು. 4. ಶ್ವಾನಾಯದ ಫಲ : ಶ್ವಾನಾಯದ ಮನೆಯಲ್ಲಿ ವಾಸಿಸುವವರಿಗೆ ಶ್ವಾನ (ನಾಯಿ)ಗಳ ಬುದ್ಧಿ ಇರುತ್ತದೆ. ಯಾವಾಗಲೂ ಕಲಹ, ಧನ ಧಾನ್ಯ ನಷ್ಠ, ಶತೃವೃದ್ಧಿ, ದೇಹಾಲಸ್ಯ, ಅಗ್ನಿಭಯ, ದಾರಿದ್ರ್ಯ, ಜೀವನದಲ್ಲಿ ಸಂಕಷ್ಠ ಉಂಟಾಗುವುದು. 5. ಖರಾಯದ ಫಲ : ಖರಾಯದಲ್ಲಿ ವಾಸ ಮಾಡುವ ಯಜಮಾನನು ಯಾವಾಗಲು ಪರಸ್ಥಳದಲ್ಲಿ ಕಷ್ಟಪಡುತ್ತಾನೆ. ಆ ಮನೆಗೆ ಯಾವಾಗಲೂ ದಾರಿದ್ರ್ಯತೆ ಉಂಟಾಗಿ ಸದಾ ವೈರತ್ವದಿಂದ ಕೂಡಿರುತ್ತದೆ. 6. ಗಜಾಯದ ಫಲ : ಗಜಾಯದ ಮನೆಯು ವಾಸಕ್ಕೆ ಯೋಗ್ಯವಾಗಿರುತ್ತದೆ. ಆರೋಗ್ಯ, ಐಶ್ವರ್ಯ, ಸಕಲ ಧನ ಧಾನ್ಯಗಳು ಸಂಪತ್ತುಗಳಿಂದ ಕೂಡಿರುತ್ತದೆ. ಈ ಮನೆಯ ಯಜಮಾನನಿಗೆ ಎರಡು ಸಂಸಾರಗಳು ಉಂಟಾಗುವುದು. ಕೆಲಸ ಕಾರ್ಯಗಳು ನಿಧಾನವಾಗಿ ಕೈಗೂಡುವುದು ಇದರ ಎದುರಿಗೆ ಸಿಂಹಾಯದ ಮನೆ ಇದ್ದರೆ ಈ ಮನೆಗೆ ನಾಶ ಉಂಟಾಗುವುದು. 7. ಕಾಕಾಯದ ಫಲ : ಕಾಕಾಯದಲ್ಲಿ ಮನೆಯನ್ನು ನಿರ್ಮಿಸಿದರೆ ಆ ಮನೆಗೆ ಕಾಗೆ ಹೊಕ್ಕ ಫಲ ಉಂಟಾಗುವುದು. ಸದಾ ದುಃಖದಿಂದಲೂ ರೋಗದಿಂದಲೂ ಕೂಡಿರುತ್ತದೆ. ಕಲಹ ಕಷ್ಟಕಾರ್ಪಣ್ಯಗಳು ಮೇಲಿಂದ ಮೇಲೆ ಒದಗಿ ಬರುವುದು. ಒಂದಕ್ಕಿಂತ ಹೆಚ್ಚು ಮನೆಗಳನ್ನು ಹೊಂದುವ ಯೋಗ ಯಾರಿಗಿರುತ್ತದೆ? ಉತ್ತಮ ಗೃಹ ಯೋಗ : ಜಾತಕದಲ್ಲಿ ಚತುರ್ಥಾಧಿಪತಿಯು ಯಾವುದಾದರೊಂದು ಶುಭ ಗ್ರಹದ ಜೊತೆಯಲ್ಲಿ ಇದ್ದು 1-4-7-10-5-9 ನೇ ಭಾವಗಳಲ್ಲಿ ಹಾಗೂ ಚತುರ್ಥಾಧಿಪತಿ ಜೊತೆಯಲ್ಲಿರುವ ಗ್ರಹ ಮಿತ್ರರಾಗಿದ್ದರೆ ಮತ್ತು ಮಿತ್ರ - ಸ್ವ ಕ್ಷೇತ್ರದಲ್ಲಿ ಇದ್ದರೆ ಉತ್ತಮವಾದ ಮನೆಯನ್ನು ಕಟ್ಟಲು ಸಾಧ್ಯವಾಗುತ್ತದೆ ಹಾಗೂ ಆ ಮನೆಯಲ್ಲಿ ಎಲ್ಲಾ ಪ್ರಕಾರದ ಅನುಕೂಲತೆಗಳು ಇರುತ್ತದೆ. ಸ್ವಾರ್ಜಿತ ಮನೆಯ ಯೋಗ : ಲಗ್ನಾಧಿಪತಿ 4ನೇ ಭಾವದಲ್ಲಿದ್ದು 4ನೇ ಅಧಿಪತಿ ಲಗ್ನದಲ್ಲಿದ್ದರೆ ಈ ಯೋಗ ಉಂಟಾಗುತ್ತದೆ. ಈ ಯೋಗದಲ್ಲಿ ಹುಟ್ಟಿದ ಜಾತಕನು ಸ್ವಪ್ರಯತ್ನದಿಂದ, ಪುರುಷಾರ್ಥದಿಂದ. ಸ್ವಂತ ಹಣದಿಂದ ಮನೆಯನ್ನು ಕಟ್ಟಿಕೊಳ್ಳುತ್ತಾನೆ. ವೈಶಿಷ್ಠ ಪೂರ್ಣ ಮನೆಯ ಯೋಗ : 4ನೇ ಅಧಿಪತಿ ಮತ್ತು 10ನೇ ಅಧಿಪತಿ ಹಾಗೂ ಚಂದ್ರನ ಜೊತೆಯಲ್ಲಿ ಇದ್ದು ನಾಲ್ಕನೇ ಸ್ಥಾನದಲ್ಲಿ ಶುಭಗ್ರಹ ಇದ್ದರೆ. ವೈಶಿಷ್ಟ ಪೂರ್ಣ ಮನೆಯ ಯೋಗ ಉಂಟಾಗುತ್ತದೆ. ದೊಡ್ಡ ಬಂಗಲೆಯ ಯೋಗ : ಜಾತಕದ ನಾಲ್ಕನೇ ಭಾವದಲ್ಲಿ ಚಂದ್ರ ಮತ್ತು ಶುಕ್ರ ಇಲ್ಲವೇ ನಾಲ್ಕನೇ ಭಾವದಲ್ಲಿ ಉಚ್ಚರಾಶಿಯ ಯಾವುದಾದರೂ ಒಂದು ಗ್ರಹ ಇದ್ದರೂ ಅದರಂತೆ 4ನೇ ಅಧಿಪತಿಯು ಕೇಂದ್ರ ತ್ರಿಕೋಣ ಸ್ಥಾನದಲ್ಲಿ ಶುಭ ಸ್ಥಾನದಲ್ಲಿ ಇದ್ದರೆ ಈ ಯೋಗ ಉಂಟಾಗುತ್ತದೆ. ಅಕಸ್ಮಾತ್‌ ಮನೆ ಹೊಂದುವ ಯೋಗ : ಜಾತಕದಲ್ಲಿ 4ನೇ ಭಾವಾಧಿಪತಿ ಮತ್ತು ಲಗ್ನಾಧಿಪತಿ ಇಬ್ಬರು ನಾಲ್ಕನೇ ಭಾವದಲ್ಲಿದ್ದರೆ ಈ ಯೋಗ ಉಂಟಾಗುತ್ತದೆ. ಅನಾಯಸ ಮನೆ ಹೊಂದುವ ಯೋಗ : ಜಾತಕದಲ್ಲಿ ಲಗ್ನಾಧಿಪತಿ ಮತ್ತು ಸಪ್ತಮಾಧಿಪತಿ ಲಗ್ನದಲ್ಲಿದ್ದರೆ ಮತ್ತು ನಾಲ್ಕನೇ ಭಾವದ ಮೇಲೆ ಶುಭ ಗ್ರಹಗಳಾದ ಬುಧ, ಗುರು, ಶುಕ್ರ,ಚಂದ್ರರ ದೃಷ್ಟಿ ಇದ್ದರೆ ಈ ಯೋಗ ಇದ್ದವರು ವಿಶೇಷ ಪ್ರಯತ್ನ ಇಲ್ಲದೆಯೇ ಮನೆಯು ದೊರಕುತ್ತದೆ. ಲಗ್ನಾಧಿಪತಿ ಮತ್ತು ಚತುರ್ಥಾಧಿಪತಿ ಲಗ್ನದಲ್ಲಿದ್ದರೆ ಮತ್ತು ಚತುರ್ಥ ಸ್ಥಾನದ ಮೇಲೆ ಶುಭ ಗ್ರಹಗಳ ದೃಷ್ಠಿ ಇದ್ದರೆ ಅನಾಯಾಸದ ಮನೆ ದೊರಕುತ್ತದೆ. ಒಂದಕ್ಕಿಂತ ಹೆಚ್ಚು ಮನೆಗಳನ್ನು ಹೊಂದುವ ಯೋಗ : ಜಾತಕದಲ್ಲಿ 4ನೇ ಸ್ಥಾನ ಮತ್ತು 4ನೇ ಅಧಿಪತಿ ಇಬ್ಬರು ಚರ ರಾಶಿಯಲ್ಲಿ (ಮೇಷ,ಕಟಕ,ತುಲಾ,ಮಕರ) ಇದ್ದು 4ನೇ ಅಧಿಪತಿಯು ಶುಭ ಗ್ರಹದಿಂದ ಕೂಡಿದ್ದು ಇಲ್ಲವೆ ಶುಭ ಗ್ರಹಗಳಾದ ಬುಧ, ಗುರು, ಶುಕ್ರ, ಚಂದ್ರರ ದೃಷ್ಟಿ ಇದ್ದರೆ ಒಂದಕ್ಕಿಂತ ಹೆಚ್ಚು ಮನೆಯನ್ನು ಹೊಂದುವ ಯೋಗ ಇರುತ್ತದೆ. ಉತ್ತಮ ಮನೆಯ ಯೋಗ : ನಿಮ್ಮ ಜಾತಕದಲ್ಲಿ 4ನೇ ಅಧಿಪತಿ ಮತ್ತು 10ನೇ ಅಧಿಪತಿ ಇಬ್ಬರು ಕೇಂದ್ರ ತ್ರಿಕೋಣಗಳಲ್ಲಿದ್ದರೆ ಉತ್ತಮ ಮನೆಯ ಯೋಗ ಇರುತ್ತದೆ. ಯಾರಿಗಿದೆ ಗೃಹಯೋಗ ಲಾಭ? ಋುಣಾನುಬಂಧ ರೂಪೇಣ ಪಶು, ಪತ್ನಿ, ಸುತ, ಆಲಯಚ ಎಂಬ ಉಕ್ತಿಯಂತೆ ಮನೆಯನ್ನು ಹೊಂದಲು ಋುಣವಿರಬೇಕು. ಕೆಲವರ ಬಳಿ ಎಷ್ಟೇ ಹಣವಿದ್ದರೂ ಗೃಹಯೋಗವಿರುವುದಿಲ್ಲ. ಋುಣಾನುಬಂಧ ರೂಪೇಣ ಪಶು, ಪತ್ನಿ, ಸುತ, ಆಲಯಚ ಎಂಬ ಉಕ್ತಿಯಂತೆ ಮನೆಯನ್ನು ಹೊಂದಲು ಋುಣವಿರಬೇಕು. ಕೆಲವರ ಬಳಿ ಎಷ್ಟೇ ಹಣವಿದ್ದರೂ ಗೃಹಯೋಗವಿರುವುದಿಲ್ಲ. ಎಲ್ಲಾ ಸೌಕರ್ಯಗಳಿದ್ದರೂ ಸ್ವಂತ ಮನೆ ಮಾಡಿಕೊಳ್ಳಲು ಆಗುವುದಿಲ್ಲ. ಅದಕ್ಕೆ ಕಾರಣವೇನು? ಜ್ಯೋತಿಷದ ಪ್ರಕಾರ ಜಾತಕದಲ್ಲಿ ಸ್ಥಿರಾಸ್ಥಿ ಯೋಗವಿದೆಯೇ ಎಂದು ನೋಡಬೇಕು. ಯೋಗವಿದ್ದರೆ ವಾಸ್ತು ದೋಷವಿಲ್ಲದ ಗೃಹ ನಿರ್ಮಿಸಲು ಸಾಧ್ಯವೇ ಎಂಬುದನ್ನು ಗಮನಿಸಬೇಕು. ಗ್ರಹಗಳಲ್ಲಿ ಚಂದ್ರ ಗೃಹ ಸೌಖ್ಯಕಾರಕ. ಜಾತಕದಲ್ಲಿ ಚಂದ್ರ ಬಲಿಷ್ಠನಾಗಿದ್ದರೆ ಗೃಹ ಸೌಖ್ಯವಿರುತ್ತದೆ. ಜಾತಕದಲ್ಲಿ ನಾಲ್ಕನೆಯ ಮನೆ ಹಾಗೂ ಗ್ರಹಗಳಲ್ಲಿ ಮಂಗಳ ಗ್ರಹ (ಕುಜ) ಇವುಗಳ ಆಸ್ತಿಯ ಬಗ್ಗೆ ಸೂಚಕವಾದ ಭಾವ ಹಾಗೂ ಗ್ರಹವಾಗಿರುತ್ತವೆ. ಜಾತಕದಲ್ಲಿ 4ರ ಅಧಿಪತಿಯು ನಾಲ್ಕರಲ್ಲಿ ಸ್ಥಿತನಾಗಿದ್ದು ಲಗ್ನಾಧಿಪತಿಯು ಸ್ಥಿತನಾಗಿದ್ದು ಶುಭಗ್ರಹಕ್ಕೆ ದೃಷ್ಟಿಯಿದ್ದರೆ ಗೃಹ ಸೌಖ್ಯವಿರುತ್ತದೆ. ಚತುರ್ಥ ಭಾವದ ಅಧಿಪತಿಯು ಚತುರ್ಥದಲ್ಲಿ ಸ್ಥಿತನಾಗಿದ್ದು ತನ್ನ ಸ್ವಂತ ನವಾಂಶದಲ್ಲಿ ಸ್ಥಿತರಾಗಿದ್ದರೆ ಅಥವಾ ಚತುರ್ಥಾಧಿಪತಿಯು ಉಚ್ಛ ಸ್ಥಾನದಲ್ಲಿದ್ದರೆ ಜಾತಕನಿಗೆ ದೊಡ್ಡ ಬಂಗಲೆ ಕಟ್ಟುವ ಯೋಗ, ವಾಹನ ಸೌಖ್ಯ, ಗೃಹದಲ್ಲಿ ಸಂಗೀತ ವಾದ್ಯಗಳೊಂದಿಗೆ ಸೌಖ್ಯದಿಮದ ಜೀವನ ನಡೆಸುವ ಯೋಗವುಂಟಾಗುತ್ತದೆ ಚತುರ್ಥಾಧಿಪತಿ ಹಾಗೂ ದಶಮಾಧಿಪತಿಗಳು ಕೇಂದ್ರ ತ್ರಿಕೋಣಗಳಲ್ಲಿ ಸ್ಥಿತರಾಗಿದ್ದರೆ ಜಾತಕನು ರಾಜಭವನ-ಅರಮನೆಗಳಂತಹ ವೈಭವ ಪೂರಿತ ಗೃಹಗಳಲ್ಲಿ ವಾಸ ಮಾಡುವ ಯೋಗ ಹೊಂದಿರುತ್ತಾನೆ. ಜಾತಕನಿಗೆ ಚತುರ್ಥ ಭಾವಾಧಿಪತಿಯ ದಶಾ / ಕುಜ ದಶಾ ಕಾಲದಲ್ಲಿ ಗೃಹ ನಿರ್ಮಾಣ ಯೋಗ ಉಂಟಾಗುತ್ತದೆ. ಚತುರ್ಥ ಭಾವದಲ್ಲಿ ಚಂದ್ರಸ್ಥಿತ ಚತುರ್ಥಾಧಿಪತಿ ಚಂದ್ರ ಸ್ಥಿತ / ವೀಕ್ಷಣೆಯೊಂದಿಗೆ ಜಾತಕನು ನೂತನ ಗೃಹ ನಿರ್ಮಿಸುವ ಯೋಗ ಹೊಂದಿರುತ್ತಾನೆ. ಚತುರ್ಥಾಧಿಪತಿಯು ಬುಧನ ಸಂಬಂಧ ಹೊಂದಿದ್ದರೆ ಜಾತಕನು ಸೌಂದರ್ಯಯುತವಾದ ಗೃಹ ನಿರ್ಮಾಣ ಮಾಡುವ ಯೋಗ ಹೊಂದಿರುತ್ತಾನೆ. ಚತುರ್ಥಾಧಿಪತಿಯು ಗುರು ಸಂಬಂಧ ಹೊಂದಿದ್ದರೆ ಜಾತಕನು ಭವ್ಯವಾದ ಗಟ್ಟಿಯಾದ ಗೃಹ ನಿರ್ಮಾಣ ಮಾಡುತ್ತಾನೆ. ಸೂರ್ಯ, ಕೇತು ಗ್ರಹಗಳ ಚತುರ್ಥಾದಿಪತಿಯು ಸಂಬಂಧ ಪಟ್ಟರೆ ದುರ್ಬಲ ಮನೆಯ ನಿರ್ಮಾಣ ಮಾಡುತ್ತಾನೆ. ಶನಿ ಮತ್ತು ರಾಹು ಸಂಬಂಧ ಚತುರ್ಥಾಧಿಪತಿಗೆ ಏರ್ಪಟ್ಟರೆ ಜಾತಕನು ಹಳೆಯ ಮನೆಯನ್ನು ಮತ್ತೆ ಖರೀದಿಸುವ ಯೋಗವನ್ನು ಹೊಂದುತ್ತಾನೆ. ಚತುರ್ಥಾಧಿಪತಿಗೆ ಶುಕ್ರನ ಸಂಬಂಧ ಏರ್ಪಟ್ಟರೆ ಸಾಲಂಕೃತ ಗೃಹವನ್ನು ನಿರ್ಮಿಸುತ್ತಾನೆ. ಚತುರ್ಥಾಧಿಪತಿಗೆ ಕುಜನ ಸಂಬಂಧ ಏರ್ಪಟ್ಟರೆ ಜಾತಕನ ಗೃಹವು ಅಗ್ನಿಯಿಂದ ಭಾದೆಗೆ ಒಳಪಡುತ್ತದೆ. ಚತುರ್ಥಭಾವ ಗೃಹ ವ್ಯಾಜ್ಯ : ಚತುರ್ಥಭಾವದಲ್ಲಿ ಅಥವಾ ಚತುರ್ಥಾಧಿಪತಿಗೆ ಅಥವಾ ಕುಜಗ್ರಹಕ್ಕೆ ಕ್ಷೀಣ ಸೂರ್ಯನ ಸಂಬಂಧ ಏರ್ಪಟ್ಟರೆ ಜಾತಕನ ಸ್ಥಿರಾಸ್ಥಿಯು ಸರ್ಕಾರದಿಂದ ತೊಂದರೆಗೆ ಒಳಗಾಗುತ್ತದೆ. ಚತುರ್ಥ ಭಾವಕ್ಕೆ, ಭಾವಾಧಿಪತಿಗೆ ಅಥವಾ ಕುಜಗ್ರಹಕ್ಕೆ ರಾಹು ಸಂಬಂಧ ಏರ್ಪಟ್ಟರೆ ಜಾತಕನು ಗೃಹ / ನಿವೇಶನ ಖರೀದಿಸುವಲ್ಲಿ ಮೋಸ ಹೋಗುತ್ತಾನೆ ಅಥವಾ ಕಾಗದ ಪತ್ರಗಳಿಂದ ಮೋಸಕ್ಕೆ ಒಳಗಾಗುತ್ತಾನೆ. ಗೃಹ ವಾಸ್ತು : ಜಾತಕನ ಚತುರ್ಥಭಾವದಿಂದ ಗೃಹವಾಸ್ತುವನ್ನು ತಿಳಿದು ನಿರ್ಮಿಸಬೇಕು. ಚತುರ್ಥದಲ್ಲಿ ಶುಭಗ್ರಹಗಳ ಸ್ಥಿತ ಅಥವಾ ವೀಕ್ಷಣೆಯಿದ್ದರೆ ಶುಭಫಲ ಉಂಟಾಗುತ್ತದೆ. ಚತುರ್ಥದಲ್ಲಿ ಅಶುಭ ಗ್ರಹಗಳ ಸ್ಥಿತನಾಗಿದ್ದರೆ (ಶನಿ-ಕುಜ-ರಾಹು-ಕೇತು) ಒಳ್ಳೆಯದಲ್ಲ. ಜಾತಕನು ವಾಸ್ತುವಿಲ್ಲದ ಗೃಹದಲ್ಲಿ ವಾಸನಾಗಿದ್ದು ಕಷ್ಟನಷ್ಟಗಳನ್ನು ಅನುಭವಿಸುತ್ತಾನೆ. ವಾಸ್ತು ದೋಷ ನಿವಾರಣೆಗೆ ವೃಕ್ಷಾರಾಧನೆ ಜ್ಯೋತಿಷ ಶಾಸ್ತ್ರದಲ್ಲಿ ಋುಷಿಮುನಿಗಳು ಒಂದೊಂದು ನಕ್ಷತ್ರ ಹಾಗೂ ಒಂದೊಂದು ಗ್ರಹಕ್ಕೂ ಮರಗಿಡಗಳನ್ನು ಹೆಸರಿಸಿದ್ದಾರೆ. 'ವೃಕ್ಷೋ ರಕ್ಷತಿ ರಕ್ಷಿತಃ' ಎಂಬ ಮಾತಿನಂತೆ ಪರಿಸರದ ಉಳಿವು ಮನುಕುಲದ ಉಳಿವಾಗುತ್ತದೆ. ಜ್ಯೋತಿಷದ ಪ್ರಕಾರ ಮರ, ಗಿಡಗಳ ಪೋಷಣೆ, ಆರಾಧನೆ, ಅರ್ಚನೆ, ರಕ್ಷಣೆಯಿಂದ ದೋಷಗಳು ನಿವಾರಣೆಯಾಗುತ್ತವೆ. ಮನೆಯ ವಾಸ್ತುದೋಷ ನಿವಾರಣೆಗೂ ಪೂರಕವಾಗಿದೆ. ಮನೆಯ ಮೇಲೆ ಕೆಟ್ಟ ದೃಷ್ಟಿ ಬೀಳಬಾರದು, ನಕಾರಾತ್ಮಕ ಅಂಶಗಳು ಮೂಡಣ ದಿಕ್ಕಿನಲ್ಲಿ ಹೆಚ್ಚಬಾರದು ಎಂದರೆ ಪಶ್ಚಿಮ ದಿಕ್ಕಿನಲ್ಲಿ ತೆಂಗಿನ ಗಿಡ, ಉತ್ತರಕ್ಕೆ ಮಾವಿನ ಗಿಡ, ದಕ್ಷಿಣಕ್ಕೆ ಅಡಿಕೆ ಮರ ಮತ್ತು ಪೂರ್ವಕ್ಕೆ ಹಲಸಿನ ಮರವನ್ನು ನೆಡಬೇಕೆನ್ನುತ್ತದೆ ವಾಸ್ತುಶಾಸ್ತ್ರ. ಆದರೆ ಇತ್ತೀಚಿನ ದಿನಗಳಲ್ಲಿ ಕಟ್ಟಡ ನಿರ್ಮಿಸಲೇ ಜಾಗವಿಲ್ಲದ ಸಂದರ್ಭದಲ್ಲಿ ಇಂತಹ ಪರಿಹಾರ ಕ್ರಮಗಳನ್ನು ಕೈಗೊಳ್ಳುವುದಾದರೂ ಹೇಗೆ ಎಂಬ ಪ್ರಶ್ನೆ ಕಾಡುತ್ತದೆ. ಅಂತಹ ಸನ್ನಿವೇಶದಲ್ಲಿ ಮೂಡಣ ಬಾಗಿಲಿದ್ದರೆ ಬಾಗಿಲಿಗೆ ಎದುರಾಗಿ ಮಂತ್ರಪೂರಿತ ಪೂರ್ಣಫಲವನ್ನು ಕಟ್ಟುವುದರಿಂದ, ಉತ್ತರ ದಿಕ್ಕಿನಲ್ಲಿ ಅಡುಕೆಯ ಹೊಂಬಾಳೆಯನ್ನು ಸಿಲುಕಿಸುವುದರಿಂದ ದೋಷ ನಿವಾರಣೆಯಾಗುತ್ತದೆ. ದೈವ ಬಲವಿದ್ದರೂ ಲಕ್ಷ್ಮೇ ಕಟಾಕ್ಷವಿಲ್ಲದಿದ್ದರೆ ಪ್ರಯೋಜನವಿಲ್ಲ. ಲಕ್ಷ್ಮೇ ದೇವಿಯ ಕೃಪೆಗಾಗಿ ಮನೆಯ ಪೂರ್ವದಲ್ಲಿ ಬಿಲ್ವ ವೃಕ್ಷವನ್ನು ಬೆಳೆಸಬೇಕು. ಒಂದೊಮ್ಮೆ ಸ್ಥಳವಿಲ್ಲದಿದ್ದರೆ ಪಾಟ್‌ನಲ್ಲಾದರೂ ಬಿಲ್ವ ಪತ್ರೆಯ ಬೋನ್ಸಾಯ್‌ ವೃಕ್ಷವನ್ನು ಬೆಳೆಸಿ ಪ್ರತಿನಿತ್ಯ ನೀರುಣಿಸಿ ಆರಾಧಿಸಬೇಕು. ಇದರಿಂದ ಮನಸ್ಸಿಗೆ ಶ್ರೇಯಸ್ಸು ಉಂಟಾಗುತ್ತದೆ. ನೆಲ್ಲಿಕಾಯಿ ಮರವನ್ನು ಮನೆಯ ಎದುರು ಬೆಳೆಸಿದರೆ ಮನೆಯಲ್ಲಿ ಶಾಂತಿ, ನೆಮ್ಮದಿ ನೆಲೆಸುತ್ತದೆ. ಒಂದೊಮ್ಮೆ ಬೆಳೆಸಲು ಜಾಗವಿಲ್ಲದವರು ಮನೆಯ ಮುಂದಿನ ತುಳಸಿ ವೃಂದಾವನದಲ್ಲಿ ನೆಲ್ಲಿ ಸಸಿಯನ್ನು ನೆಟ್ಟ ಕೃಷ್ಣನ ಆರಾಧನೆ ಮಾಡುವುದು ಉತ್ತಮ. ಮನೆಯ ಈಶಾನ್ಯ ದಿಕ್ಕಿನಲ್ಲಿ ಔದುಂಬರ ವೃಕ್ಷವನ್ನು ಬೆಳೆಸಿದರೆ ಗುರುವಿನ ಅನುಗ್ರಹ ಹಾಗೂ ವಾಸ್ತುದೋಷ ಪರಿಹಾರ. ಔದುಂಬರ ಶುಕ್ರಗ್ರಹ ಪ್ರಿಯ. ಗುರು ದತ್ತಾತ್ರೇಯರ ಮೂಲಸ್ಥಾನ. ಒಂದೊಮ್ಮೆ ಜಾಗವಿಲ್ಲದಿದ್ದರೆ ಔದುಂಬರ ಕಾಷ್ಟವನ್ನಾದರೂ ಆ ದಿಕ್ಕಿನಲ್ಲಿಟ್ಟು ನಮಸ್ಕರಿಸಿ ಪೂಜಿಸುವುದು. ಶಿವನ ಅನುಗ್ರಹ ಹೊಂದಲು ಬಿಳಿ ತುಂಬೆ ಹೂವಿನ ಗಿಡವನ್ನು ಮನೆಯಲ್ಲಿ ಬೆಳೆಸಿದರೆ ಒಳ್ಳೆಯದು. ತುಂಬೆ ಹೂವಿನ ಗಿಡ ಔಷಧಿಯಾಗೂ ಬಳಕೆಯಾಗುತ್ತದೆ. ಸೋಂಕು ನಿವಾರಕವಾಗಿಯೂ ಕೆಲಸ ಮಾಡುತ್ತದೆ. ಮನೆಯ ಮುಂದೆ ತುಳಸಿ ಗಿಡವನ್ನು ಬೆಳೆಸುವುದರಿಂದ ಆಮ್ಲಜನಕದ ಹರಿವಿನ ಪ್ರಮಾಣ ಹೆಚ್ಚಿ ಮನೆಯೊಳಗೆ ಸಕಾರಾತ್ಮಕ ಶಕ್ತಿ ಸಂಚಲನವಾಗುತ್ತದೆ. ಮನೆಯ ಅಭಿವೃದ್ಧಿಗೆ ವಿಳ್ಯೇದೆಲೆ ಗಿಡ, ಜಾಜಿ ಗಿಡ, ಮಲ್ಲಿಗೆ ಗಿಡ, ಚಂದನ ಅಥವಾ ಶ್ರೀಗಂಧದ ಮರವನ್ನು ಬೆಳೆಸುವುದು ಒಳ್ಳೆಯದು. ಮನಿಪ್ಲಾಂಟ್‌ ನೆರಳಿನಲ್ಲೂ ಬೆಳೆಯುತ್ತದೆ. ಅದನ್ನು ಮನೆಯೊಳಗೆ ಇಟ್ಟು ಬೆಳೆಸಿದರೆ ಸಕಲ ವಾಸ್ತು ದೋಷಗಳು ನಿವಾರಣೆಯಾಗಿ, ಕೌಟುಂಬಿಕ ಶಾಂತಿ ನೆಲೆಸುತ್ತದೆ. ಮನೆಯ ಎದುರು ಬಿಳಿ ಎಕ್ಕದ ಗಿಡವನ್ನು ಬೆಳೆಸಿದರೆ ಅಥವಾ ಮನೆಯ ಸಮೀಪವಿರುವ ಬಿಳಿ ಎಕ್ಕದ ಗಿಡಕ್ಕೆ ಪ್ರತಿನಿತ್ಯ ಪೂಜಿಸುವುದರಿಂದ ಗಣಪತಿಯ ಅನುಗ್ರಹ ಉಂಟಾಗುತ್ತದೆ. ಗಣೇಶ ಮೂಡಿರುವ ಬಿಳಿ ಎಕ್ಕದ ಗಿಡದ ಬೇರನ್ನು ಮನೆಯೊಳಗಿಟ್ಟು ಆರಾಧಿಸುವುದರಿಂದ ಸಕಲ ಇಷ್ಟಾರ್ಥಗಳು ನೆರವೇರುತ್ತವೆ. ಮನೆಯ ಬಲಭಾಗದಲ್ಲಿ ಬನ್ನಿ (ಶಮೀ) ಗಿಡವನ್ನು ಬೆಳೆಸಿದರೆ ಅಥವಾ ಶಮೀ ಪತ್ರೆಯಿಂದ ಹನುಮಂತ ಅಥವಾ ದುರ್ಗಾ ದೇವಿಯನ್ನು ಆರಾಧಿಸಿದರೆ ವಾಸ್ತುದೋಷ ನಿವಾರಣೆಯಾಗುತ್ತದೆ. ಮನೆಯ ಮುಂಬಾಗಿಲಿನ ಹೊಸ್ತಿಲಿಗೆ ಪ್ರತಿನಿತ್ಯ ಗರಿಕೆ ಪೂಜೆ ಮಾಡುವುದು ಅಥವಾ ಮುಂಬಾಗಿಲ ಬಲಬದಿಯಲ್ಲಿ ಗರಿಕೆ ಬೆಳೆಸಿದರೆ ಲಕ್ಷ್ಮೇ ಗಣಪತಿಯ ಅನುಗ್ರಹ ಉಂಟಾಗುತ್ತದೆ. ಅಷ್ಟೇಕೆ ವಾಸ್ತುದೋಷವೂ ನಿವಾರಣೆಯಾಗುತ್ತದೆ. ಬಿಲ್ವ ಪತ್ರೆಯ ತೋರಣವನ್ನು ಮನೆಯ ಮುಂಬಾಗಿಲು ಹಾಗೂ ದೇವರ ಮನೆಗೆ ಕಟ್ಟುವುದರಿಂದಲೂ ವಾಸ್ತುದೋಷ ನಿವಾರಣೆಯಾಗುತ್ತದೆ -SANGRAHA

ಜಾತಕನಿಗೆ ಸಂತಾನಯೋಗ ತಿಳಿಯುವುದೆಂತು?

ನಮ್ಮ ಪುರಾಣಗಳಲ್ಲಿ ಸಂತಾನಕ್ಕೋಸ್ಕರ ತಪಸ್ಸು ಮಾಡಿ ಸಂತಾನ ಪಡೆದ ಹತ್ತು ಹಲವು ಪ್ರಸಂಗಗಳನ್ನು ನೋಡುತ್ತೇವೆ. ಜ್ಯೋತಿಷವು ಸಂತಾನಕಾರಕ ಗ್ರಹ ಗುರು ಎನ್ನುತ್ತದೆ. ಹಾಗೆಯೇ ವಿಶೇಷವಾಗಿ ಗುರು, ಬುಧ, ರಾಹು ನಂತರ ಕೇತು,ಚಂದ್ರರನ್ನೂ ಗಮನಿಸಲಾಗುತ್ತದೆ. ಅದರ ಆಧಾರದ ಮೇಲೆ ಸಂತಾನ ಯೋಗ ಯಾವಾಗ ಆಗುತ್ತದೆ, ಎಷ್ಟು ಸಂತಾನ ಎಂಬ ಅಂಶವನ್ನು ತಿಳಿಯಬಹುದು. ಸಂತಾನ ವಿಚಾರ ತಿಳಿಯಲು ಲಗ್ನ, ಪಂಚಮ ಭಾಗ್ಯ ಸ್ಥಾನಗಳನ್ನು ಪರಿಶೀಲಿಸಬೇಕು. ಸಂತಾನಯೋಗ ಲೆಕ್ಕಾಚಾರ ಮಾಡಲು ಗಂಡ-ಹೆಂಡಿರ ಜಾತಕವನ್ನು ಲೆಕ್ಕ ಹಾಕಬೇಕು. ಲಗ್ನವು ಜಾತಕನನ್ನೂ, ಪಂಚಮವು ಮುಂದಿನ ಪೀಳಿಗೆಯನ್ನು, ಭಾಗ್ಯವು ಹಿಂದಿನ ಪೀಳಿಗೆಯನ್ನು ಸೂಚಿಸುತ್ತದೆ. ಸಂತಾನಯೋಗದ ನಿಯಮಾವಳಿ : ಲಗ್ನಾಧಿಪತಿ ಪಂಚಮದಲ್ಲಿ ಮತ್ತು ಪಂಚಮಾಧಿಪತಿ ಲಗ್ನದಲ್ಲಿದ್ದು ಪರಿವರ್ತನೆಯಾಗಿದ್ದರೆ ಸಂತಾನ ಸುಖ ಉಂಟಾಗುತ್ತದೆ. ಪಂಚಮಾಧಿಪತಿ ಕೇಂದ್ರ ತ್ರಿಕೋಣದಲ್ಲಿದ್ದು ಗುರುವಿನ ಸಂಬಂಧ ಹೊಂದಿದ್ದರೂ ಸಂತಾನಯೋಗವಿರುತ್ತದೆ. ಪಂಚಮಾಧಿಪತಿ ಬಲಾಢ್ಯನಾಗಿ ಲಗ್ನಾಧಿಪತಿ ಗುರುವಿನಿಂದ ಶುಭ ಸಂಬಂಧವನ್ನು ಹೊಂದ್ದಿದರೆ, ಪಂಚಮ ಭಾವದಲ್ಲಿ ಶುಭಗ್ರಹವಿದ್ದು ಪಂಚಮಕ್ಕೆ ಲಗ್ನ ಪಂಚಮಾಧಿಪತಿಯ ಸಂಬಂಧವಿದ್ದರೆ, ಲಗ್ನ ಅಥವಾ ಚಂದ್ರನಿಂದ ಪಂಚಮಾಧಿಪತಿ ಮತ್ತು ಗುರು ಸುಸ್ಥಿತಿಯಲ್ಲಿರುವ ಜಾತಕರಿಗೆ, ಪಂಚಮ ಭಾವದಲ್ಲಿ ಸ್ವಕ್ಷೇತ್ರದಲ್ಲಿ ಪಾಪಗ್ರಹನಿದ್ದರೆ ಸಂತಾನ ಭಾಗ್ಯವಿರುತ್ತದೆ ಎನ್ನುತ್ತದೆ ಫಲದೀಪಿಕ. ಹೀಗೆ ಸಂತಾನವಿದೆಯೇ ಎಂಬುದನ್ನು ಮೇಲಿನ ನಿಯಮಾವಳಿಗಳಿಂದ ತಿಳಿಯಬಹುದು. ಪರಿಹಾರಗಳು : ಪಂಚಮಾಧಿಪತಿ ದುಸ್ಥಾನದಲ್ಲಿದ್ದಾಗ ಸಂತಾನದೋಷ ಉಂಟಾಗುತ್ತದೆ. ಪಂಚಮ ಭಾವ / ಭಾವಾಧಿಪತಿಗೆ ಶನಿ, ಚಂದ್ರ ಅಥವಾ ಬುಧನ ಸಂಬಂಧವಿದ್ದರೂ ತೊಂದರೆ ಕಾಣುತ್ತದೆ. ಅಂತಹ ಸಂದರ್ಭದಲ್ಲಿ ರಾಮೇಶ್ವರದಲ್ಲಿ ತೀರ್ಥಸ್ನಾನ, ಗಂಗಾಸ್ನಾನ, ಸಂತಾನ ಗೋಪಾಲಸ್ವಾಮಿ ವ್ರತ ಮಾಡುವುದರಿಂದ ದೋಷ ಪರಿಹಾರ ಉಂಟಾಗುತ್ತದೆ. SANGRAHA

Tuesday, 19 February 2019

ವಾಸ್ತು ಸಲಹೆ

ಮನೆಗೆ ಸಾಂಪ್ರದಾಯಿಕ ಬಾವಿ ಅಥವಾ ಕೊಳವೆ ಬಾವಿಯೆಂಬುದು ನೀರು ಒದಗಿಸುವ ಪ್ರಮುಖ ಮೂಲ. ಕೆಲವರು ಸಂಪೂರ್ಣವಾಗಿ ಬಾವಿಯನ್ನೇ ಅವಲಂಬಿಸಿರುತ್ತಾರೆ. ವಾಸ್ತುವಿನಲ್ಲಿ ಬಾವಿಯ ದಿಕ್ಕು ಮತ್ತು ಬಾವಿ ಕೊರೆಯುವ ವಿಧಾನದ ಬಗ್ಗೆ ಕೆಲವೊಂದು ನಿಯಮಗಳಿವೆ. - ಬಾವಿ ಕೊರೆದ ಬಳಿಕ ಹೊಸ ಮನೆಯ ನಿರ್ಮಾಣವನ್ನು ಆರಂಭಿಸಬೇಕು. - ಹೊಸ ಮನೆ ನಿರ್ಮಾಣದಲ್ಲಿ ಆ ಬಾವಿಯ ನೀರನ್ನು ಉಪಯೋಗಿಸಿದರೆ ಒಳಿತಾಗುತ್ತದೆ ಎಂಬ ನಂಬಿಕೆಯಿದೆ. - ಬಾವಿ ಅಥವಾ ನೀರಿನ ಮೂಲ ಮನೆಯ ಉತ್ತರ ಅಥವಾ ಈಶಾನ್ಯ ಭಾಗದಲ್ಲಿರಬೇಕು. - ಒಂದು ವೇಳೆ ನೀರಿನ ಪೈಪ್‌ ಆಗ್ನೇಯ ಅಥವಾ ಈಶಾನ್ಯ ಮೂಲೆಯಲ್ಲಿದ್ದರೆ ಬಾವಿಯು ಅದರ ಎಡ ಅಥವಾ ಬಲಕ್ಕಿದ್ದು ಮಧ್ಯದಲ್ಲಿರಬಾರದು. - ಬಾವಿಯು ಪ್ರಾಪರ್ಟಿಯ ಉತ್ತರ ಅಥವಾ ಪೂರ್ವ ದಿಕ್ಕಿನಲ್ಲಿರಬಹುದು. - ಬಾವಿಯು ವಾಯುವ್ಯ ಅಥವಾ ಆಗ್ನೇಯ ದಿಕ್ಕಿನಲ್ಲಿರಬಾರದು. - ಬಾವಿಯು ವೃತ್ತಾಕಾರವಾಗಿರಬೇಕು. ನೀರಿಗೆ ದಿನಕ್ಕೆ ಕನಿಷ್ಠ ಐದು ಗಂಟೆಯಾದರೂ ಸೂರ್ಯನ ಬೆಳಕು ಬೀಳುವಂತಿರಬೇಕು. -ಬಾವಿ ನೀರನ್ನು ಎರಡು ಮನೆಯವರು ಪಾಲು ಮಾಡಿಕೊಳ್ಳಬಾರದು. - ಗಂಗಾಪ್ರಾಥನಾ,ಕುಲದೇವತಾಪ್ರಾಥನಾ ಪೂಜೆ ಮಾಡಿದ ಬಳಿಕವೇ ಬಾವಿ ತೋಡುವ ಕಾರ್ಯ ಆರಂಭಿಸಬೇಕು. - ಶುಭವಾರಗಳು:ಸೋಮವಾರ, ಬುಧವಾರ, ಗುರುವಾರ ಮತ್ತು ಶುಕ್ರವಾರ ಬಾವಿ ತೋಡಲು ಆರಂಭಕ್ಕೆ ಶುಭ ವಾರಗಳು. -ಶುಭ ನಕ್ಷತ್ರಗಳು: ಕೃತಿಕಾ, ಪೂರ್ವ ಪಲ್ಗುಣಿ, ಮೂಲ, ಭರಣಿ, ಅಶ್ಲೇಷಾ,ಪೂರ್ವಾಭಾದ್ರ ಮತ್ತು ಪೂರ್ವಾಷಾಢ ನಕ್ಷತ್ರದಲ್ಲಿಯೂ ಬಾವಿ ತೋಡಲು ಆರಂಭಿಸಬಹುದು. ಶುಭ ಜಲ ಲಗ್ನಗಳು ಕಟಕ,ವೃಶ್ಚಿಕ,ಮೀನ,(ಮಕರ,ಕುಂಭ.) ಸಂಪೂರ್ಣ ಜಲ ಲಗ್ನಗಳಲ್ಲಿ ಕೊಳವೆಬಾವಿ ತಗೆಸಲು ಪ್ರಾರಂಬಿಸಬೇಕು. ಇನ್ನೊಂದಿಷ್ಟು ವಾಸ್ತು ಟಿಪ್ಸ್ ಸುಖ ಜೀವನಕ್ಕೆ ಮುನ್ನುಡಿ ಬರೆಯುವುದು ಯಾವಾಗಲೂ ಬೆಡ್‌ ರೂಂ.ಹೀಗಾಗಿ ಇಲ್ಲಿನ ವಾಸ್ತು ಬಗ್ಗೆ ಯಾವ ಕಾರಣಕ್ಕೂ ನಿರ್ಲಕ್ಷ್ಯ ವಹಿಸಲೇಬಾರದು. ಈ ಹಿನ್ನೆಲೆಯಲ್ಲಿ ಮಲಗುವ ಕೋಣೆ ಕುರಿತಂತೆ ಕೆಲವು ವಾಸ್ತು ನಿಯಮಗಳ ವಿವರ ಇಲ್ಲಿದೆ. -ನೈರುತ್ಯ ಭಾಗದಲ್ಲಿ ಬೆಡ್‌ ರೂಂ ಇದ್ದರೆ ಉತ್ತಮ ಆರೋಗ್ಯ ಮತ್ತು ಶ್ರೇಯಸ್ಸನ್ನು ತರುತ್ತದೆ. -ಈಶಾನ್ಯ ಅಥವಾ ವಾಯುವ್ಯ ದಿಕ್ಕಿನಲ್ಲಿ ಈ ಕೊಠಡಿ ಇರದಂತೆ ನೋಡಿಕೊಳ್ಳಿ. ಇಲ್ಲವಾದರೆ ದಂಪತಿಯಲ್ಲಿ ಜಗಳ, ಆರೋಗ್ಯ ಸಮಸ್ಯೆಗಳು ಎದುರಾಗಬಹುದು. -ಬೆಡ್‌ ರೂಂನಲ್ಲಿ ಯಾವಾಗಲೂ ಬೆಡ್‌ ನೈರುತ್ಯ ದಿಕ್ಕಿನ ಮೂಲೆಯಲ್ಲಿ ಇರುವಂತೆ ನೋಡಿಕೊಳ್ಳಬೇಕು. -ದಂಪತಿ ದಕ್ಷಿಣ/ ಪಶ್ಚಿಮಕ್ಕೆ ತಲೆ ಹಾಕಿ ಮಲಗುವ ರೀತಿಯಲ್ಲಿ ಮಂಚವನ್ನು ಹಾಕಬೇಕು. ಯಾರಿಗೆ, ಯಾವ ದಿಕ್ಕು ಯೋಗ್ಯ, ಯಾವ ದಿಕ್ಕು ಕ್ಷೇಮ? ಈಗಾಗಲೇ ಹಲವು ವಾಸ್ತು ವಿಚಾರಗಳು, ದಿಕ್ಕುಗಳು ಹಾಗೂ ಪಂಚಭೂತಗಳ ನೆಲೆಯಲ್ಲಿ ಈ ಅಂಕಣದಲ್ಲಿ ವಿವರಿಸಲಾಗಿದೆ. ಮಾನವನ ಸಂಬಂಧವಾಗಿ ಅವನ ಚೈತನ್ಯ ಲವಲವಿಕೆ ಉತ್ಸಾಹಗಳೆಲ್ಲ ವಾಸ್ತುವಿನ ಆವರಣದಲ್ಲಿ ತಮ್ಮ ಶಕ್ತಿ ಅಥವಾ ದೌರ್ಬಲ್ಯಗಳನ್ನು ಪಡೆಯುತ್ತದೆ. ಇಡೀ ವಿಶ್ವವು ಒಂದು ಶಕ್ತಿಯ ನಕಾರಾತ್ಮಕ ಸಕಾರಾತ್ಮಕ ಹೊಯ್ದಾಟಗಳ ನಡುವೆ ಅಳಿವು ಉಳಿವುಗಳನ್ನು ರೂಪಿಸಿಕೊಳ್ಳುತ್ತ ಇರುತ್ತವೆ. ಹೀಗಾಗಿ ವಿಶ್ವವೇ ತನ್ನ ಆಸ್ತಿತ್ವಕ್ಕಾಗಿ ನಿರಂತರವಾಗಿ ತನ್ನನ್ನು ಕಸನ ಗೊಳಿಸುತ್ತಿರುವಾಗ ವಿಶ್ವದ ಭಾಗವೇ ಆದ ನಾವು ಮನುಷ್ಯರು ಸಾಧಕ ಬಾಧಕಗಳ ನಡುವೆ ನಮ್ಮನ್ನು ಸಂರಕ್ಷಿಸಿಕೊಳ್ಳಬೇಕು. ಇದು ಅನಿವಾರ್ಯ. ಉತ್ತರ ದಿಕ್ಕನು ನೀವು ಮಹತ್ವದ ಅಧ್ಯಯನದ ಸಂದರ್ಭದಲ್ಲಿ ಪರಿಣಾಮಕಾರಿ ಯಾದ ಬರಹಗಳ ಸಮಯದಲ್ಲಿ ಅಥವಾ ಹೊಸತೇನನ್ನೋ ಪರಿಶೋಧಿಸುವ ಸಮಯವೇ ಇರಲಿ ಮುಖ ಮಾಡಿರುವುದು ಸೂಕ್ತ. ಪೂರ್ವವೂ ಕೂಡಾ ಇದಕ್ಕೆ ಸೂಕ್ತ. ನಿಮ್ಮ ವ್ಯಾಪಾರ ಅಥವಾ ಇನ್ನೇನೇ ವ್ಯಾವಹಾರಿಕ ವಿಚಾರಗಳನ್ನು ನಿಮ್ಮ ಗ್ರಾಹಕರೊಡನೆ ಮಾತನಾಡುವಾಗಲೂ ಇಷ್ಟಾರ್ಥ ಸಿದ್ಧಿಗಾಗಿ ಉತ್ತರ ಅಥವಾ ಪೂರ್ವ ದಿಕ್ಕುಗಳನ್ನು ಗಮನಿಸಿ ಮುಖ ಮಾಡಿಯೇ ಮಾತಾಡಬೇಕು. ಬೆಳಕಿನ ದಿಕ್ಕು ಪೂರ್ವವಾದುದರಿಂದ ಉತ್ತರದಲ್ಲಿ ಕ್ರಿಯಾಶೀಲತೆಯನ್ನು ಚಿಮ್ಮಿಸುವ ಸ್ಪಂದನವಿರುವುದರಿಂದ ಈ ದಿಕ್ಕುಗಳು ಸಕಾರಾತ್ಮಕ ಫ‌ಲಿತಾಂಶಗಳಿಗೆ ಒಳ್ಳೆಯದು ಎಂದೇ ಅನ್ನಬೇಕು. ಯೋಗೀರ್ಶವರ ಶಕ್ತಿಯ ಸಂಪನ್ನತೆಯು ಒಗ್ಗೂಡಿ ಬರಲು ಉತ್ತರ ಹಾಗೂ ಪೂರ್ವ ದಿಕ್ಕುಗಳ ಫ‌ಲವಂತಿಕೆಯೇ ಉತ್ತಮವಾಗಿದೆ. ಆದರೆ ಅಡುಗೆಯನ್ನು ಮಾಡುವಾಗ ಉತ್ತರ ದಿಕ್ಕನ್ನು ಮುಖಮಾಡಿ ಅಡುಗೆ ಮಾಡಕೂಡದು. ಹೀಗೆನ್ನುವುದಿರಲಿ, ಕುಡಿಯುವುದಿರಲಿ ಉತ್ತರ ದಿಕ್ಕು ನಿಷಿದ್ಧ ಎಂಬುದನ್ನು ಗಮನಿಸಿ. ಪೂರ್ವದತ್ತ ಮುಖ ಮಾಡುವುದು ಉತ್ತಮ. ಆಹಾರ ಸಂವರ್ಧನಾ, ತಯಾರಿಕಾ ಪ್ರಗತಿ, ಸಾಫ‌ಲ್ಯ, ರುಚಿ, ಪ್ರಸನ್ನತೆಗಳು ಪೂರ್ವದಿಕ್ಕಿನ ಕಡೆಯಿಂದಲೇ ಲಭ್ಯ. ಉತ್ತಮ ಜೀರ್ಣಕ್ರಿಯೆ ಆರೋಗ್ಯ ಸಂವರ್ಧನೆಗಳಿಗೆಲ್ಲ ಇದು ಸೂಕ್ತ. ಒಲೆಯೋ, ಸ್ಟೋವ್‌, ಗ್ಯಾಸ್‌ ಬರ್ನರ್‌ ಇತ್ಯಾದಿ ಪೂರ್ವಕ್ಕೆ ಸಂಯೋಜನೆಗೊಂಡ ಆಗ್ನೇಯ ದಿಕ್ಕಿನಲ್ಲಿ ಸ್ಥಿತಗೊಳ್ಳಬೇಕು. ಈ ವಿಚಾರವನ್ನು ಅಳತೆಬದ್ಧವಾಗಿ ರೂಪಗೊಳಿಸಲು ಮನೆಯ ಖುಲ್ಲಾ ಇರುವ ಜಾಗ ಉತ್ತರ ಮತ್ತು ಪೂರ್ವಭಾಗದಲ್ಲಿ ವಿಸ್ತರಿಸಿಕೊಂಡಿರಲಿ. ಹೆಚ್ಚಿನ ಸೂರ್ಯಪ್ರಕಾಶ ಪೂರ್ವದಿಂದ ಒಳಹೊಮ್ಮುವಂತಿದ್ದು ಶಾಖ ಸೂಕ್ತವಾಗಿ ಹೊರಹೋಗುವಂತೆ ನೈಸರ್ಗಿಕ ವಾತಾವರಣದ ವ್ಯವಸ್ಥೆ ಸೂಕ್ತವಾಗಿರಬೇಕು. ದೈಹಿಕ ಸಮೃದ್ಧಿಗೆ ಆರೋಗ್ಯ ಚಟುವಟಿಕೆಗಳ ಗಟ್ಟಿತನಕ್ಕೆ ಇದರಿಂದ ದಾರಿ ಲಭ್ಯ. ಮಾನಸಿಕ ನೆಮ್ಮದಿಗೂ ಇದರಿಂದ ಸಾಧ್ಯ. ಮಲಗುವ ಮನೆಯಲ್ಲಿ ಎಲೆಕ್ಟ್ರಾನಿಕ್‌ ಗೂಡ್ಸ್‌ ಬೇಡ. ಟೀವಿ, ಕಂಪ್ಯೂಟರ್‌ ಲ್ಯಾಪ್‌ ಟ್ಯಾಪ್‌ ಉಪಯೋಗಗಳನ್ನು ಮಲಗುವ ಕೋಣೆಯಲ್ಲಿ ನಿಷೇಧಿಸಿ. ಮಲಗುವ ಕೋಣೆಯು ಒಂದು ಕ್ರಿಯಾ ಶಕ್ತಿಗೆ ಎಲೆಕ್ಟ್ರಾನಿಕ್‌ ಉಪಕರಣಗಳ ಕಿರಣದಿಂದ ತೊಂದರೆಗೆ ದಾರಿ ಇದೆ. ದಯಮಾಡಿ ಇವುಗಳ ಉಪಯೋಗ ಮಲಗುವ ಕೋಣೆಯಲ್ಲಿ ಬೇಡ. ಇದ್ದರೂ ಒಂದು ಮಿತಿ ಇರಲಿ. ಮಿತಿ ಮೀರಿದ ಉಪಯೋಗವೇನೇ ಇದ್ದರೂ ನಿಯಂತ್ರಿಸಿ ಇದರಿಂದ ಕ್ಷೇಮ. ಹಾಸಿಗೆಯ ಎದುರಿಗೆ ಕನ್ನಡಿಯನ್ನು ನಿಷೇಧಿಸಿ. ಇದ್ದರೂ ಕನ್ನಡಿಯನ್ನು ಬಟ್ಟೆಯಿಂದ ರಾತ್ರಿ ಮುಚ್ಚಿಡಿ. ಮನೆಯ ಎಲ್ಲಾ ಗೋಡೆಗಳಿಗೂ ಒಂದೇ ಬಣ್ಣದ ಅಲಂಕಾರ ಬೇಡ. ತುಳಸೀ ಗಿಡಗಳು ಮನೆಯ ವಾಯುಶುದ್ಧಿಗಾಗಿ ಈಶಾನ್ಯ ದಿಕ್ಕಿನಲ್ಲಿ ಬೆಳೆದಿರಲಿ. ಮನೆಯಲ್ಲಿ ಭಾರಿ ತೊಲೆಗಳು ಅಚ್ಚು ಹಾಗೂ ಅಡ್ಡಪಟ್ಟಿಗಳಿರುವ ತಾರಸಿಯ ಕೆಳಗಡೆ ಮಲಗಬೇಡಿ. ಭಯಾನಕ ಕನಸುಗಳಿಗೆ, ಖನ್ನತೆಗಳಿಗೆ ಇದು ದಾರಿ ಮಾಡಿಕೊಡುತ್ತದೆ. ಇದೇ ರೀತಿ ಕಬ್ಬಿಣದ ಮಂಚಗಳೂ ಹಾಸಿಗೆ ಹಾಸಲು ಉಪಯೋಗಿಸಬೇಡಿ. ಹೃದಯವ್ಯಾಧಿ ಹಾಗೂ ಮೆದುಳಿಗೆ ಇದರಿಂದ ಹಾನಿಯಾಗುತ್ತದೆ. ಮಂಚಗಳು ಮರದಿಂದಲೇ ಮಾಡಿರಲಿ. ಈಶಾನ್ಯದ ಕಡೆ ಬಸುರಿ ಹೆಂಗಸರು ಮಲಗಬೇಕು. ಉತ್ತರರದ ಕಡೆ ತಲೆ ಇಡುವುದು ಬೇಡ. ಯಾರೂ ಉತ್ತರ ದಿಕ್ಕಿನೆಡೆ ತಲೆ ಇಟ್ಟು ಮಲಗಬಾರದು. ಕಾಂತೀಯವಾದ ಉದ್ವಿಗ್ನ ತರಂಗಗಳು ಅಶಾಂತಿಗೆ ಅಪ್ರಸನ್ನತೆಗೆ ಉದ್ವಿಗ್ನತೆ ತುಂಬಿದ ಮನೊಸ್ಥಿತಿಗೆ ಕಾರಣವಾತ್ತದೆ. ಉತ್ತರ ಮತ್ತು ಪೂರ್ವ ದಿಕ್ಕಿನ ಕಿಟಕಿಗಳು ತೆರೆದಿರಲಿ ಕಳ್ಳಕಾಕರರ ಕಾಟವಿರದಂತೆ ಜಾಲರಿ ಜೋಡಿಸಿದ್ದರೆ ಉತ್ತಮ. ಮೀನು , ಹಕ್ಕಿಗಳನ್ನು ಮನೆಯಲ್ಲಿ ಸಾಕಬಹುದಾ? ಮನೆಯ ಸೊಬಗಿಗೆ ಎಂದು ನಾವು ಅಕ್ವೇರಿಯಂ ಅಥವಾ ಗಿಣಿ ಪಾರಿವಾಳ ನವಿಲು ಗುಬ್ಬಿ ಇತ್ಯಾದಿ ಹಕ್ಕಿಗಳನ್ನು ಲÊ ಬರ್ಡ್ಸ್‌ಗಳಂಥ ಬಣ್ಣಬಣ್ಣಗಳ ಮೈ ಹೊದಿಕೆಯ ಹಕ್ಕಿಗಳನ್ನು ಇಟ್ಟು ಆರೈಕೆ ಮಾಡುವುದನ್ನು ಗಮನಿಸುತ್ತೇವೆ. ಅಕ್ವೇರಿಯಂ ಇಟ್ಟು ಬಣ್ಣಬಣ್ಣಗಳ, ಅವುಗಳ ಹೊರಮೈ ಚೆಲ್ಲಿ ತೆವಳುತ್ತಾ, ಈಜುತ್ತಾ ತಾವು ಹೊರಬರಲಾಗದ ಗಾಜಿನ ಗೋಡೆಗಳೀಗೆ ಡಿಕ್ಕಿ ಹೊಡೆಯುತ್ತ ಮೂತಿ ಬಡೆಯುತ್ತಾ, ಉರಟುರುಟಾಗಿಸುತ್ತ ಓಡಾಡುವ ಮೀನುಗಳು ಕಣ್ಣಿಗೆ ಆಹ್ಲಾದವನ್ನು ಕೊಡುತ್ತವೆ ಎಂದು ಆನಂದಿಸುತ್ತೇವೆ. ಆದರೆ ಯಾವುದೇ ಕಾರಣಕ್ಕೂ ಮೀನಿನ ತೊಟ್ಟಿಯನ್ನು ಅಥವಾ ಮೀನಿರುವ ನೀರಿನ ಬಟ್ಟಲು ಗಾಜಿನ ಗಿಂಡಿಗಳನ್ನು ಮಲಗುವ ಕೋಣೆಯಲ್ಲಿ ಮಾತ್ರ ಇಟ್ಟುಕೊಳ್ಳಬೇಡಿ. ಮಲಗುವ ಕೋಣೆಯಲ್ಲಿ ಎಡಬಿಡದೆ ಓಡಾಡುತ್ತ ಗಾಜಿನ ಗೋಡೆಗೆ ಮೂತಿ ಬಡಿದುಕೊಳ್ಳುತ್ತ ದಿಕ್ಕು ತಪ್ಪಿದ ಮೀನುಗಳು ಮಲಗಿದ ಮಂದಿಯ ಸ್ವಾಸ್ಥ್ಯಕ್ಕೆ ಶುಭಲಕ್ಷಣವಾಗುವುದಿಲ್ಲ. ಜೊತೆಗೆ ಮಲಗುವ ಕೋಣೆಯಲ್ಲಿ ನೀರನ್ನು ತುಂಬಿಕೊಂಡ ಯಾವುದೇ ಪಾತ್ರೆಗಳು, ತೊಟ್ಟಿಗಳು ಜಾಡಿಗಳು ಗಿಂಡಿಗಳು ಅಶುಭ ಸೂಚಕವಾಗಿದೆ. ಇದಕ್ಕೆ ಕಾರಣ ಮಲಗಿದ ಸಂದರ್ಭದ ಸುಪ್ತಾವಸ್ಥೆಗೂ ನೀರಿನ ಕಾರಣವಾದ ಜಲತತ್ವಕ್ಕೂ ಒಂದು ಇನ್ನೊಂದನ್ನು ಭೇದಿಸಿ ಅಶುಭ ಸ್ಪಂದನಗಳನ್ನು ಮನೆಯ ಯಜಮಾನನಿಗೆ ತಂದಿಡುವ ಅಂಶಗಳಾಗಿವೆ. ಅಕ್ವೇರಿಯಂ ಜಾಡಿಯನ್ನು ಹೊರ ದಿವಾನಖಾನೆಯಲ್ಲಿ ಇರಿಸಬಹುದು. ಹೊಸದಾಗಿ ಮದುವೆಯಾದ ದಂಪತಿಗೆ ಕೂಡಾ ಈ ರೀತಿಯ ಅಕ್ವೇರಿಯಂ ಜೋಡಣೆ ಉತ್ತಮ. ಮದುವೆಯಾಗಬೇಕಾದ ದಾಂಪತ್ಯ ಆಕಾಂಕ್ಷಿಗಳಿಗೂ ಇದು ಒಳ್ಳೆಯದು. ಹೀಗಿರುವ ಅಕ್ವೇರಿಯಂ ನಲ್ಲಿ ಪೂರ್ತಿಯಾಗಿ ಕಡುಗಪ್ಪು ಮೈಬಣ್ಣವಿರುವ ಮೀನುಗಳು ಇರದಂತೆ ನೋಡಿಕೊಳ್ಳಿ. ಬಂಗಾರದ ಬಣ್ಣ, ನಸುನೀಲಿ, ನಸುಗೆಂಪು, ಬಿಳಿಕಪ್ಪು ಪಟ್ಟೆಗಳಿರುವ ಮೀನುಗಳು ಅಲೆ, ಅಲೆಯಾಕಾರದ ವಜ್ರದ ಸ್ವರೂಪದಲ್ಲಿರುವ ಆಕಾರದಿಂದ ಮೀನುಗಳು ಅತ್ಯುತ್ಸಾಹದಿಂದ ಪುಟಿಯುವಂತೆ ಕತ್ತು ಮೂತಿ ಕೊಂಕಿಸುತ್ತಾ ಓಡಾಡುವಂತಿರಲಿ. ಸೂರ್ಯ ಬರುವ ಮುನ್ನ ಆಹಾರವನ್ನು ಹಾಕುವ ಪದ್ಧತಿ ಬೇಡ. ಮುಂಜಾನೆ ಸೂರ್ಯ ಬಂದಾಗಲೇ ಆಹಾರದ ಗೋಲಿಗಳು ಅಕ್ವೇರಿಯಂ ಒಳಗೆ ಮೀನುಗಳಿಗೆ ನೀಡುವ ಅಭ್ಯಾಸಿಟ್ಟುಕೊಳ್ಳಿ. ಒಳಗಿನ ನೀರು ನಸುನೀಲಿಯನ್ನು ಹಳದಿ ಛಾಯೆಯ ಬೆಳಕಲ್ಲಿ ಹೊಂದುವಂತೆ ಪ್ರತಿಫ‌ಲಿಸುವಂತಾಗಲಿ. ಇದರಿಂದ ಮನೆಯೊಳಗಿನ ಸ್ನೇಹಪೂರ್ಣ ಪರಸ್ಪರರನ್ನು ಅರಿಯುವ ನಿಟ್ಟಿನ ವಿಚಾರದಲ್ಲಿ ಒಂದು ಆದ್ರìತೆ ನಿರ್ಮಾಣಗೊಳ್ಳಲು ಸಹಾಯವಾಗುತ್ತದೆ. ಇನ್ನು ಹಕ್ಕಿಗಳ ವಿಷಯಕ್ಕೆ ಬಂದಾಗ ಬಂಧನಕ್ಕೆ ತಳ್ಳಿಕೊಂಡ ಹಕ್ಕಿಗಳು ಮನೆಯೊಳಗಡೆ ಇರಲೇಬಾರದು. ಗುಬ್ಬಿಗಳ ವಿಷಯದಲ್ಲಿ ಬಂಧನವೆಂಬುದು ನಿರ್ಮಾಣವಾಗದಿದ್ದರೂ ಹಾರಾಡಿಕೊಂಡಿರುವ ಗುಬ್ಬಿಗಳು ಕೂಡಾ ಮನೆಯಲ್ಲಿ ಗೂಡು ಕಟ್ಟುವ ವಿಚಾರ ಆಗದಿದ್ದರೆ ಸೂಕ್ತ. ಯಾಕೆಂದರೆ ಗುಬ್ಬಿಗಳು ತಮ್ಮ ಆಹಾರವಾದ ಕೀಟಗಳನ್ನು ಮನೆಯೊಳಗೆ ತಂದು ಕೊಂದು ತಿನ್ನುವ ಅದರ ಭೋಜನ ವಿಶೇಷ ಸಂಭವಿಸಕೂಡದು. ಗುಬ್ಬಿಗಳನ್ನು ಈ ವಿಷಯದಲ್ಲಿ ಮನುಷ್ಯ ಪ್ರಯತ್ನಗಳೊಡನೆ ಈ ನೆಲೆಯಲ್ಲಿ ನಿಯಂತ್ರಿಸಲಾಗದು. ಈ ಕಾರಣದಿಂದಾಗಿ ಗುಬ್ಬಿಗಳು ಮನೆಯೊಳಗಡೆ ನಿದ್ದವೇ ಆಗಿದೆ. ಉಳಿದಂತೆ ಗಿಣಿ , ಲವ್‌ಬರ್ಡ್ಸ್‌, ಪಾರಿವಾಳಗಳು ಸಹಾ ಮನೆಯೊಳಗೆ ತಮ್ಮ ವಸತಿಯನ್ನು ನಿರ್ಮಿಸಿಕೊಳ್ಳುವುದು ಬೇಡ. ಜೊತೆಗೆ ಪಂಜರವೊಂದನ್ನು ನಿರ್ಮಿಸಿ ಕೊಳ್ಳುವುದು ಬೇಡ. ಪಂಜರದಲ್ಲಿ ಇವುಗಳ ಅಸಹಾಯಕ ಪರಿಸ್ಥಿತಿ ಅಥವಾ ಸೆರೆವಾಸ ಅಷ್ಟು ಒಳ್ಳೆಯದಲ್ಲ. ಜಲದುರ್ಗೆ ನಿಮ್ಮ ಮನೆಯಲ್ಲಿರಲಿ ಮನುಷ್ಯನ ಜೀತಾವಧಿಯಲ್ಲಿ ಅನೇಕಾನೇಕ ಏರಿಳಿತಗಳನ್ನು ಎದುರಿಸಲೇ ಬೇಕಾಗುತ್ತದೆ. ಏರುವುದನ್ನು ಮನುಷ್ಯ ಆನಂದಿಸಬಹುದಾದರೂ ಇಳಿತಗಳು ಮಾನಸಿಕವಾದ ದೈಹಿಕವಾದ ತಳಮಳಗಳನ್ನು ಕಿರಿಕಿರಿ ಯಾತನೆಗಳನ್ನು ಒದಗಿಸುವುದು ನೋವಿನ ಸಂಗತಿ. ಸಾಮಾನ್ಯವಾಗಿ ಶನಿಕಾಟದ ಸಂದರ್ಭದಲ್ಲಿನ ಜೀತದ ಇಳಿತಗಳಿಂದಾಗಿ ಅನೇಕ ಬಗೆಯ ಆಘಾತಗಳನ್ನು ಎದುರಿಸುವುದು ಅನಿವಾರ್ಯವಾಗುತ್ತದೆ. ಪ್ರಧಾನವಾಗಿ ಶನಿಕಾಟದ ಕಾಲಘಟ್ಟದಲ್ಲಿ ಜೀವನದ ಸಂದರ್ಭದ ನೋವು ಯಾತನೆ ಪಡಿಪಾಟಲುಗಳು ಅಗಾಧ. ಇವುಗಳು ಮುಖ್ಯವಾಗಿ ಪಂಚಭೂತಾತ್ಮಕ ಅಂಶಗಳಾದ ಮಣ್ಣು , ನೀರು, ಬೆಳಕು, ವಾಯು ಹಾಗೂ ಆಕಾಶ ತತ್ವಗಳಿಗೆ ತೊಂದರೆ ತರುತ್ತವೆ. ಇದರಿಂದಾಗಿ ಆಸ್ತಿ ಜಮೀನು ಸೈಟು ಫ್ಲ್ಯಾಟ್‌ಗಳ ತೊಂದರೆಗಳು ಎದುರಾಗಬಹುದು. ಬೆಂಕಿಯ ತೊಂದರೆಗಳನ್ನು ಎದುರಿಸಬೇಕಾಗಿ ಬರಬಹುದು. ಆರೋಗ್ಯದ ವಿಷಯದಲ್ಲಿ ರಕ್ತದ ಒತ್ತಡ ರಕ್ತ ಧಮನಿಗಳ ಬಿರುಸಾಗುಕೆ ಇತ್ಯಾದಿ ತೊಂದರೆ ಎದುರಾಗಬಹುದು. ಮಾನಸಿಕ ಉನ್ಮಾದಗಳನ್ನು ಕೂಡಾ ಎದುರಿಸಬೇಕಾಗಿ ಬರುವುದು ಸಾಮಾನ್ಯ. ಜಲ ಸಂಬಂಧವಾದ ತಾಪತ್ರಯಗಳನ್ನು ಎದುರಿಸಬೇಕಾಗಿ ಬರಬಹುದು. ಜಲದ ಸಮಸ್ಯೆ ದೈಹಿಕ ಅಸಮತೋಲನಗಳ ವಿಷಯದಲ್ಲಿದ್ದಷ್ಟೇ ಮನೆಯೊಳಗೆ ನೀರಿನ ಸಂಬಂಧವಾದ ಸಮಸ್ಯೆಗಳು ಕೂಡಾ ಅಧಿಕವಾಗಿಯೇ ಇರುತ್ತದೆ. ಒಬ್ಬ ವ್ಯಕ್ತಿಗೆ ಅದ್ಭುತವಾದ ಮನೆ ಇರುತ್ತದೆ. ಆದರೆ ನೀರಿನ ಸಮಸ್ಯೆ ಮಾತ್ರ ಅಪಾರವಾಗಿರುತ್ತದೆ. ನಗರಗಳಲ್ಲಿ ಒಂದು ರೀತಿಯ ನೀರಿನ ಸಮಸ್ಯೆಯಾದರೆ ಹಳ್ಳಿಗಳಲ್ಲಿ ಇನ್ನೊಂದು ರೀತಿಯ ತೊಂದರೆಯಾಗುತ್ತದೆ. ಆ ಜಮೀನು, ಗದ್ದೆ, ಹೊಲಗಳ ವಿಷಯದಲ್ಲಿ ಮತ್ತೂಂದೇ ರೀತಿಯಲ್ಲಿ ಇರುತ್ತದೆ. ಇವೆಲ್ಲಾ ಪ್ರಧಾನವಾಗಿ ಶನಿಕಾಟದ ಸಂದರ್ಭದಲ್ಲಂತೂ ದೊಡ್ಡ ಪ್ರಮಾಣದಲ್ಲಿ ಇರುತ್ತದೆನ್ನಬಹುದು. ಹೀಗಾಗಿ ಶನಿಕಾಟದ ಸಂದರ್ಭದಲ್ಲಿ ನಿರ್ದಿಷ್ಟವಾಗಿ ಯಾವರೀತಿಯಲ್ಲಿ ಶನಿಕಾಟದ ತೀವ್ರತೆ ಇದೆಯೆಂಬುದನ್ನು ಗ್ರಹಿಸಬೇಕು. ನೀರಿನ ತಾಪತ್ರಯವು ಎದುರಾಗುವುದಿದ್ದಲ್ಲಿ ಜಲದುರ್ಗಾ ಸ್ತಿತಿ ಹೆಚ್ಚು ಸೂಕ್ತ. ಆಲದುರ್ಗಾವನ್ನು ಮನೆಯ ಯಜಮಾನ ಮನೆಯ ಎದುರಲ್ಲಿ ಸ್ಥಾಪಿಸುವುದು ಸ್ತುತಿಸುವುದು ಹೆಚ್ಚು ಸೂಕ್ತ. ಇದರಿಂದ ಮನೆಯೊಳಗಿನ ಜಲಕ್ಷೊàಭೆಯನ್ನು ನಿವಾರಿಸುವಲ್ಲಿ ಮನೆಯ ಯಜಮಾನನಿಗೆ ಹೆಚ್ಚಿನ ಶಕ್ತಿ ಒದಗುತ್ತದೆ. ಜಲದುರ್ಗೆಯನ್ನು ಸೂಕ್ತವಾದ ರೀತಿಯಲ್ಲಿ ಕಲಶ ಸ್ಥಾಪನಾ ವಿಧಿಯ ಮೂಲಕವಾಗಿ ಅಥವಾ ಪಂಚಲೋಹ ಬೆಳ್ಳಿ ಅಥವಾ ಬಂಗಾರದ ಮೂರ್ತಿಯ ರೂಪದಲ್ಲಿ ಮನೆಯ ದೇವರ ಪೀಠದಲ್ಲಿ ಕೂಡ್ರಿಸಬಹುದು. ಜಲದುರ್ಗಾ ಸ್ತುತಿಯಿಂದ ಬೆಸ್ತರು ಸಾಗರೋತೊನ್ನ ವಸ್ತು ವಹಿವಾಟಿನ ವ್ಯಾಪಾತರಸ್ಥರು ಉದ್ಯಮಿಗಳು ಅಪಾರವಾದ ಯಶಸ್ಸನ್ನು ಸಂಪಾದಿಸಿಕೊಳ್ಳಬಹುದಾಗಿದೆ. ಆಯಾತ ನಿರ್ಯಾತಗಳ ಸಂಬಂಧವಾಗಿ ಖಂಡಾಂತರ ಮಟ್ಟದ ವಹಿವಾಟುಗಳನ್ನು ಹೊಂದಿದವರು ಕೂಡಾ ಜಲದುರ್ಗೆಯನ್ನು ಆರಾಧಿಸಬೇಕು. ಒಟ್ಟಿನಲ್ಲಿ ಜಲದುರ್ಗಾ ಪೂಜೆ ಅಥವಾ ಸ್ತುತಿ ಮನೆಯಲ್ಲಿ ಅನೇಕ ರೀತಿಯ ನೆಮ್ಮದಿ ಹಾಗೂ ಮಾನಸಿಕ ಶಾಂತಿಯನ್ನು ನಿರ್ಮಿಸಿಕೊಡುತ್ತದೆ. ನವಗ್ರಹಗಳು, ಅಷ್ಟ ದಿಕ್ಪಾಲಕರು ಮತ್ತು ನಿಮ್ಮ ಮನೆ... ಬಾಗಿಲು ಕೂಡ್ರಿಸುವ ವಿಚಾರಗಳಲ್ಲಿ ಸಂಬಂಧಿಸಿದ ದಿಕ್ಕಿನ ಗ್ರಹಗಳು ಹಾಗೂ ಅಷ್ಟ ದಿಕ್ಪಾಲಕರು ಕುರಿತಾದ ಜಪ, ದೈವನ ವಿಶೇಷ ಸಮರ್ಪಣೆ, ಅನುಷ್ಠಾನಾದಿಗಳನ್ನು ಸ್ವತಃ ತಾವೇ ತಮ್ಮ ಅನುಕೂಲ ಸಮಯಾವಕಾಶಗಳನ್ನು ನೋಡಿಕೊಂಡು ಪೂರೈಸಿಕೊಳ್ಳುವುದು ಸೂಕ್ತ. ನಮ್ಮ ಭಾರತೀಯ ವಾಸ್ತು ಶಾಸ್ತ್ರದಲ್ಲಿ ನವಗ್ರಹಗಳಿಗೆ, ಅಷ್ಟ ದಿಕ್ಪಾಲಕರಿಗೆ ಬಹಳಷ್ಟು ಮಹತ್ವವನ್ನು ಒದಗಿಸಿದ ವಿಶ್ಲೇಷಣೆಗಳುಂಟು. ಈ ಅಂಕಣದಲ್ಲಿ ಈ ಮೊದಲೇ ವಿವರಿಸಿದ ಹಾಗೆ ಎಲ್ಲ ಗ್ರಹಗಳು ಹಾಗೂ ಅಷ್ಟ ದಿಕ್ಪಾಲಕರುಗಳು ಕಟ್ಟಡ ಇಮಾರತುಗಳು, ಮನೆ, ಅರಮನೆ, ಗುಡಿ ದೇವಾಲಯಗಳ ವಿಚಾರದಲ್ಲಿ ಒಟ್ಟಾಗಿ ಉಂಟು ಮಾಡುವ ಪ್ರಭಾವ, ಪೂರೈಸುವ ಸ್ಪಂದನಗಳ ಬಗ್ಗೆ ಹೆಚ್ಚಿನ ಅರಿವನ್ನು ನಾವು ಪಡೆದಿರಬೇಕು. ಒಟ್ಟಾರೆಯಾಗಿ ವಾಸ್ತುವಿನ ವಿಷಯದಲ್ಲಿ ಸಂಪೂರ್ಣ ಎಚ್ಚರವನ್ನು ವಹಿಸುವುದು ಹಿಂದಿನ ಕಾಲದಿಂದಲೂ ದುಸ್ತರವಾಗಿಯೇ ಇತ್ತು. ಈಗಂತೂ ಕೇಳುವುದೇ ಬೇಡ. ಪುಟ್ಟ ಪುಟ್ಟ ಉದ್ದಗಲಗಳ ನಿವೇಶನಗಳಲ್ಲಿ ಎಲ್ಲವನ್ನೂ ನಿಭಾಯಿಸುವ ವಿಚಾರ ಅಸಾಧ್ಯವಾದ ಮಾತು. ಹೀಗಾಗಿ ಬಾಗಿಲು ಕೂಡ್ರಿಸುವ ವಿಚಾರಗಳಲ್ಲಿ ಸಂಬಂಧಿಸಿದ ದಿಕ್ಕಿನ ಗ್ರಹಗಳು ಹಾಗೂ ಅಷ್ಟ ದಿಕಾ³ಲಕರ ಕುರಿತಾದ ಜಪ, ದೈವನ ವಿಶೇಷ ಸಮರ್ಪಣೆ, ಅನುಷ್ಠಾನಾದಿಗಳನ್ನು ಸ್ವತಃ ತಾವೇ ತಮ್ಮ ಅನುಕೂಲ ಸಮಯಾವಕಾಶಗಳನ್ನು ನೋಡಿಕೊಂಡು ಪೂರೈಸಿಕೊಳ್ಳುವುದು ಸೂಕ್ತ. ಈ ನಿಟ್ಟಿನಿಂದ ಗೋಧಿ, ಅಕ್ಕಿ, ತೊಗರಿ, ಹೆಸರು, ಕಡಲೆ ಅವರೆ ಎಳ್ಳು ಉದ್ದು ಹುರುಳಿ ಇತ್ಯಾದಿ ನವದಾನ್ಯಗಳನ್ನು ಇಂತಿಂಥಾ ದಿಕ್ಕಿನ ಲೋಪಗಳಿಗೆ ಎಂದು ಗುರುತಿಸಿಕೊಂಡು ನಿಸರ್ಗದಲ್ಲಿನ ಪಕ್ಷಿ, ಕೀಟ ಜಂತುಗಳಿಗೆ ಆಹಾರವಾಗಿ ಸಮರ್ಪಿಸುವುದು ಅತಿ ಮುಖ್ಯವಾಗುತ್ತದೆ. ಹೀಗೆ ಮಾಡುವುದರಿಂದ ವಾಸ್ತುವಿನ ಲೋಪ ದೋಷಾದಿಗಳಿಗೆ ಅಷ್ಟರಮಟ್ಟಿಗಿನ ವಿಮೋಚನೆ ದೊರಕುತ್ತದೆ. ಇದು ಅತ್ಯಂತ ಹೆಚ್ಚು ಗಮನಾರ್ಹ. ಯಾವ ದಿಕ್ಕಿಗೆ ಯಾರು ಅಧಿಪತಿ? ಇಡೀ ಜಗತ್ತು ಪಂಚಭೂತ ತತ್ವದ ಆಧಾರದ ಮೇಲೆ ನಿಂತಿದೆ ಎಂಬುದನ್ನು ನಾವು ಅರಿತಿದ್ದೇವೆ. ಇದರೊಂದಿಗೆ ಸೃಷ್ಟಿ, ಸ್ಥಿತಿ, ಲಯಾದಿ ವಿಷಯಗಳಿಗೂ ಹೆಚ್ಚಿನ ಮಹತ್ವ ಪಡೆದಿದೆ. ಹುಟ್ಟಿದ ಪ್ರತಿಜೀವಿಗೂ ಹುಟ್ಟಿನಷ್ಟೇ ಸಾವೂ ಅನಿವಾರ್ಯವಾದ ಇನ್ನೊಂದು ಧೃವ, ಹೀಗಾಗಿ ನಮ್ಮ ಆಷೇìಯ ವಿಶೇಷಗಳು ಸಂವರ್ದಿಸಿದ ಪುರಾಣಗಳಲ್ಲಿ ಎಲ್ಲವನ್ನೂ ನಿಯಂತ್ರಿಸುವ ಪರಮಾತ್ಮ ಒಬ್ಬನೇ ಆದರೂ ಆ ಪುರುಷ ಶ್ರೇಷ್ಠನನ್ನು ಮಾಯೆಯಿಂದ ಬೇರ್ಪಡಿಸಿ ನಮ್ಮ ಸಂಸ್ಕೃತಿ ನೋಡಲಿಲ್ಲ. ಹೀಗಾಗಿ ಆ ಪುರುಷ ಶ್ರೇಷ್ಠನೇ ಮಾಯೆಯ ಆವರಣಗಳಿಂದಾಗಿ ತನ್ನಲ್ಲೇ ಚೈತನ್ಯವಾದ ಸ್ತ್ರೀಯನ್ನು ಒಳಗೊಂಡಿದ್ದಾನೆ. ಇವತ್ತಿನ ವೈಜಾnನಿಕವಾದ ಬಿಗ್‌ ಬ್ಯಾಂಗ್‌ ಥಿಯರಿ ಏನಿದೆ ಅದು ನಮ್ಮ ಆಷೇìಯವಾದ ನಂಬಿಕೆಯ ಮಾಯೆಯನ್ನು ಪೂರ್ತಿಯಾಗಿ ದೃಢೀಕರಿಸುವಂತಿದೆ. ಈ ಮಾಯೆ ಸ್ತ್ರೀಯಾಗಿದ್ದಾಳೆ. ಪ್ರಕೃತಿಯಾಗಿದ್ದಾಳೆ. ಪುರುಷನನ್ನು ಆಶ್ರಯಿಸಿಕೊಂಡೇ ಇದ್ದಾಳೆ. ಪುರುಷನಿಗೂ ಸ್ತ್ರೀಯನ್ನು ಬಿಟ್ಟರೆ ಚೈತನ್ಯವಿಲ್ಲ. ಪ್ರಕೃತಿಗೂ ಪುರುಷನನ್ನು ತೊರೆದರೆ ಫ‌ಲವಂತಿಕೆಗೆ ಬೆಲೆ ಇಲ್ಲ. ಈ ಮಾಯೆ ಆಚ್ಛಾದಿತ ಪುರುಷನೇ ಸರ್ವಾಂತರ್ಯಾಮಿ ಸರ್ವಶಕ್ತ ಪರಮಾತ್ಮ. ಆ ಪರಮಾತ್ಮನೇ ತನ್ನಿಂದ ತಾನು ಛೇದಿಸಿಕೊಂಡು ತ್ರಿಮೂರ್ತಿಗಳ ಸ್ವರೂಪದಲ್ಲಿ ಬ್ರಹ್ಮ, ವಿಷ್ಣು , ಮಹೇಶ್ವರನಾಗಿ ಸೃಷ್ಟಿ, ಸ್ಥಿತಿ, ಲಯಗಳಿಗೆ ಕಾರಣನಾಗಿದ್ದಾನೆ. ಈ ಮೂರು ಶಕ್ತಿಗಳ ಜೊತೆಗೆ ಸ್ತ್ರೀ ಮಣ್ಣು, ಬೆಂಕಿ, ಆಕಾಶ, ವಾಯು, ಜಲ ತತ್ವಗಳಲ್ಲಿ ಒಡೆದು ಪಂಚಭೂತೆಯಾಗಿದ್ದಾಳೆ. ನೀವು ಮನೆ ಕಟ್ಟುವ ಸೈಟು ಹೇಗಿರಬೇಕು ಗೊತ್ತಾ? ಮನೆಯನ್ನು ಕಟ್ಟಲಿಕ್ಕಾಗಿ ಪಡೆದುಕೊಂಡ ಫ್ಲಾಟ್‌ ಹಲವಾರು ರೀತಿಯಲ್ಲಿ ತನ್ನದೇ ಆದ ಸಂಪನ್ನತೆಗಳನ್ನು ಹೊಂದಿರುವುದು ಮನೆಯ ವಾಸ್ತವ್ಯದ ಸಂದರ್ಭದಲ್ಲಿ ದಕ್ಕಬೇಕಾದ ಒಳಿತುಗಳಿಗೆ ಅವಶ್ಯವಾಗಿದೆ. ಇಂದಿನ ದಿನಗಳು ಹೇಗಿದೆ ಎಂದರೆ ಒಂದು ಫ್ಲಾಟ್‌ ಸಿಕ್ಕಿದರೆ ಸಾಕು ಎಂಬ ವಿಚಾರದಲ್ಲಿ ಹೆಚ್ಚಿನ ಕಾತುರ ಇರುತ್ತದೆ. ಕಾಲ ಸಕಲವನ್ನೂ ಸಂಪನ್ನತೆಯ ದೃಷ್ಟಿಯಿಂದ ಮುಕ್ಕಿ ತಿಂದಿದೆ. ಕಾಲದ ದುಷ್ಟತನವೆಲ್ಲಾ ಇದು. ಹಾಗೆ ನೋಡಿದರೆ ಮನುಷ್ಯನ ಸ್ವಾರ್ಥ ಚಲ್ತಾ ಹೈ ಧೋರಣೆಗಳು ಆಳುವವರ ಉಡಾಫೆ, ಭೂಮಿಗೆ ದಕ್ಕಿದ ಹೆಚ್ಚಿನ ಬೆಲೆ, ಲಂಚ ರುಷುವತ್ತು ಮಸಲ್‌ ಪವರ್‌ ಒಂದು ಸುಂದರ ಮನೆಯನ್ನು ಪಡೆದುಕೊಳ್ಳುವ ಕ್ರಿಯೆಯನ್ನು ಗಗನಕುಸುಮವಾಗಿಸಿದೆ. ಫ್ಲಾಟಿನ ಏರಿಳಿತಗಳು ಆಕಾಶ, ಅಳತೆ, ದಿಕ್ಕು, ಅನುಪಾತ ಇರುವ ಪ್ರದೇಶ, ಫ್ಲಾಟಿಗೆ ಎದುರು ರಸ್ತೆಯ ದಿಕ್ಸೂಚಿ ಸುತ್ತಮುತ್ತಲ ಪರಿಸರದ ವಾಸ್ತವಗಳು ಇತ್ಯಾದಿಗಳೆಲ್ಲಾ ಸಾಮಾಜಿಕ ಪತನಕ್ಕೆ ಕಾರಣವಾಗುವಂತಿರಬಾರದು. ಮನೆ ಕಟ್ಟಿ ವಾಸಿಸ ತೊಡಗಿದವರ ಉತ್ಸಾಹ, ಕ್ರಿಯಾಶೀಲತೆ, ಆರೋಗ್ಯ ಸಂಪತ್ತು ಕುಸಿಯಲು ಕಾರಣವಾಗಬಾರದು. ಯಾವಾಗಲೂ ಮನೆಯ ವಾಯುವ್ಯ ಹಾಗೂ ಆಗ್ನೇಯ ಬಿಂದುವಿಗೆ ಒಂದು ಸರಳ ರೇಖೆ ಹಾಕಿದರೆ ಉತ್ತರ ಹಾಗೂ ಪೂರ್ವ ಭಾಗದಿಂದ ಆಗ್ನೇಯ ಬಿಂದುವ ವರೆಗಿನ ತ್ರಿಕೋನ ಭಾಗ ಸೂರ್ಯನ ಅಧಿಪತ್ಯಕ್ಕೆ ಒಳಗೊಳ್ಳುತ್ತದೆ. ಮಿಕ್ಕುಳಿದ ಭಾಗ ಚಂದ್ರನ ಅಧಿಪತ್ಯಕ್ಕೆ ಒಳಪಟ್ಟಿರುತ್ತದೆ. ಸೂರ್ಯನ ಭಾಗ ಸ್ವಪ್ರಕಾಶಿಸುವುದರಿಂದ ನಿಮ್ಮ ಪ್ರಯತ್ನಗಳಿಂದಲೇ ಜೀವನದಲ್ಲಿ ಗೆಲ್ಲುವ ಶಕ್ತಿಯನ್ನು ಮನೆಯ ಈ ಭೂಭಾಗನಿಮಗೆ ಕರುಣಿಸಿ ಕೊಡುತ್ತದೆ. ಉಳಿದರ್ಧ ಭಾಗ ನಿಮ್ಮ ವಿಚಾರದಲ್ಲಿ ಒದಗಬೇಕಾದ ದೈಹಿಕ ಸಹಾಯ ಅದೃಷ್ಟಗಳನ್ನು ಪ್ರತಿನಿಧಿಸುತ್ತದೆ. ಈ ರೀತಿಯಲ್ಲಿ ವರಿಸಿದ ಚಂದ್ರನ ಭಾಗ ಸ್ವಲ್ಪ ಎತ್ತರವನ್ನು ಕಾಪಾಡಿಕೊಳ್ಳುವುದು ಫ್ಲಾಟ್‌ನ ವಾಸ್ತು ದೃಷ್ಟಿಯಿಂದ ಉತ್ತಮವಾದುದಾಗಿದೆ. ಉತ್ತರ ಮತ್ತು ಪೂರ್ವದತ್ತ ಇಳಿಜಾರು ಇರಬೇಕಾದುದು ವಾಸ್ತು ಸಿದ್ಧಿಗೆ ಸೂಕ್ತ. ಇದರಿಂದಾಗಿ ನೀರಿನ ಹರಿತ ಪಶ್ಚಿಮದಿಂದ ಪೂರ್ವಕ್ಕೂ ದಕ್ಷಿಣದಿಂದ ಉತ್ತರಕ್ಕೂ ಅವಕಾಶ ಒದಗಿಬರುತ್ತದೆ. ಈ ರೀತಿಯ ವಿಚಾರಗಳು ಒಗ್ಗೂಡಿದರೆ ಈ ರೀತಿಯ ಫ್ಲಾಟ್‌ನಲ್ಲಿ ತಲೆ ಎತ್ತಿದ ಮನೆಯ ನಿವಾಸಿಗಳಿಗೆ ಸುಖಕ್ಕೆ ದಾರಿ ಲಭ್ಯ. ಯಾವಾಗಲೂ ತುಸು ತಗ್ಗಿದ ಈಶಾನ್ಯ ಮೂಲೆ ತುಸು ಎತ್ತರಿಸಲ್ಪಟ್ಟ ನೈರುತ್ಯ ಮೂಲೆ ಎಲ್ಲಾ ವಿಚಾರಗಳಲ್ಲಿ ಯಶಸಿಗೆ ದಾರಿ ನಿರ್ಮಿಸುತ್ತದೆ. ದೀರ್ಘಾಯಸ್ಸು ಕೂಡಾ ಕೂಡಿ ಬರಲು ಇದು ಸಹಾಯಕ. ಇಡಿಯಾದ ಪಶ್ಚಿಮ ದಿಕ್ಕು ಎತ್ತರವೂ, ಇಡಿಯಾದ ಪೂರ್ವ ದಿಕ್ಕು ತಗ್ಗಿಕೊಂಡಿದ್ದು ಇದ್ದುದಾದರೆ ಇಂಥ ಫ್ಲಾಟಿನಲ್ಲಿ ಕಟ್ಟಿದ ಮನೆಯಲ್ಲಿ ವಾಸಿಸುವ ಜನರಿಗೆ ಸಾಮಾಜಿಕವಾದ ಮನ್ನಣೆ ಧನವೃದ್ಧಿಯು ಉತ್ತಮ ರೀತಿಯಲ್ಲಿ ಲಭ್ಯವಾಗುತ್ತದೆ. ಮನೆಯ ಮಧ್ಯದ ಸ್ಥಳವು ತುಸು ಏರಿಕೊಂಡಿದ್ದು ವಿಕಸನ ಪಡೆದಿದ್ದರೆ ಇದಕ್ಕೆ ಕೂರ್ಮ ವೃದ್ಧಿ ಎನ್ನುತ್ತಾರೆ. ಇದರಿಂದಾಗಿ ಮನೆಯ ಫ್ಲಾಟ್‌ ತುಂಬಾ ಸಂಪನ್ನತೆಯನ್ನು ಪಡೆದು ಶ್ರೇಷ್ಠತ್ವಕೆ ಒಯ್ಯುವ ಸಾಧನವಾಗುತ್ತದೆ. ಇಂಥ ರೀತಿಯ ಮನೆಯಲ್ಲಿನ ವಾಸವು ವಸತಿಗಾರರ ಸುಖ, ಕ್ಷೇಮ, ಲಾಭ, ಜಯ, ಸಿರಿಗೆ ಸಿದ್ಧಿಗೆ ಅಂಶವಾಗಿದೆ.ಒಟ್ಟಿನಲ್ಲಿ ಭೂಮಿಯ ವಿವಿಧ ಏರಿಳಿತಗಳಿಂದಾಗಿ ತನ್ನ ಸಂಪನ್ನತೆಯನ್ನು ಪಡೆದುಕೊಳ್ಳುತ್ತದೆ. ಕೆಲವು ಸಲ ಪ್ಲಾಟ್‌ ಯಾವುದೋ ದಿಕ್ಕಲ್ಲಿ ಮೂಲೆಯಲ್ಲಿ ತುಸು ಬೆಳೆದಿರುತ್ತದೆ. ಈ ರೀತಿಯ ಬೆಳವಣಿಗೆಗಳಲ್ಲಿ ಎಲ್ಲವೂ ಒಳಿತಿಗೆ ಪೂರಕವಾಗಿ ವರ್ತಿಸುವುದಿಲ್ಲ. ಫ್ಲಾಟ್‌ಗೆ ಈಶಾನ್ಯದ ಕಡೆ ತುಸು ಬೆಸೆದುಕೊಂಡಿದ್ದರೆ ಇಂಥ ಫ್ಲಾಟ್‌ ನಲ್ಲಿ ಕಟ್ಟಿದ ಮನೆಯಿಂದ ಉತ್ತಮ ಫ‌ಲ ಸಮೃದ್ಧಿಗಳು ಲಭ್ಯವಾಗುವುವು. ಹಾಗೆಯೇ ದಕ್ಷಿಣ, ಪಶ್ಚಿಮ, ಉತ್ತರ, ಪಶ್ಚಿಮ, ದಕ್ಷಿಣ, ಪೂರ್ವ ದಿಕ್ಕುಗಳು ಸರಿಯಾಗಿ ಲಂಬಕೋನಗಳಲ್ಲಿದ್ದರೆ ಕೂಡಾ ಇಲ್ಲಿನ ಮನೆಗಳು ಸಕಾರಾತ್ಮಕ ಗುಣ ಪಡೆಯುತ್ತದೆ ಅನುಮಾನವಿಲ್ಲ. ಆದರೆ ಆಗ್ನೇಯ ದಿಕ್ಕಿಗೆ ಫ್ಲಾಟಿನ ಬೆಳವಣಿಗೆ ಮನೆ ಕಟ್ಟಲು ಉತ್ತಮವಾಗಿರದು. ವಾಯುವ್ಯ ದಿಕ್ಕಿಗೂ ಫ್ಲಾಟ್‌ ಬೆಳೆಯಕೂಡದು. ಇಲ್ಲಿ ಮನೆಯ ಕಟ್ಟುವಿಕೆ ಉತ್ತಮ ಫ‌ಲಾವಳಿಗೆ ಪೂರಕವಾಗಿರುವುದಿಲ್ಲ. ಹಾಗೆಯೇ ನೈರುತ್ಯದ ಕಡೆಯ ದೀರ್ಘ‌ತೆ ಫ್ಲಾಟ್‌ ಗಳಿಗೆ ಉಚಿತವಾದುದಲ್ಲ. ದಯಮಾಡಿ ಗಮನಿಸಿ. ಈ ರೀತಿಯಲ್ಲಿ ವಾಸ್ತುವಿನ ಕುರಿತಾದ ಕೆಲವು ಅಂಶಗಳನ್ನು ಕಡೆಗಣಿಸದೆಯೇ ಪುರಸ್ಕರಿಸಿದರೆ ಒಳ್ಳೆಯದು. ಹೆಚ್ಚಾಗಿ ಜಾತಕದ ದಶಾಕಾಲ ಸರಿ ಇರದಿರುವಾಗ, ಶನಿಕಾಟದ ಕೇಮದ್ರುಮಯೋಗದ ನಕಾರಾತ್ಮಕ ದಿನಗಳಲ್ಲಿ ವಾಸ್ತುವಿನ ಶಿಸ್ತು ಬದ್ಧತೆ ಮನೆಯನ್ನು ಪುಷ್ಟೀಕರಿಸಿದ್ದರೆ ಗ್ರಹಗಳ ದೌರ್ಬಲ್ಯವನ್ನು ನಿಯಂತ್ರಿಸುವ ಶಕ್ತಿ ಒದಗಿಬರುತ್ತದೆ. ಮನೆ ಮತ್ತು ನಿವೇಶನದ ತಾಳಮೇಳ ಹೇಗಿರಬೇಕು? ಬಹಳ ಜನರು ಸೈಟುಗಳ ಬಗೆಗೆ ಮನೆಗಳ ಬಗೆಗೆ ತಿರುತಿರುಗಿ ಅದೇ ಪ್ರಶ್ನೆಯನ್ನು ಕೇಳುತ್ತಿರುತ್ತಾರೆ. ಒಟ್ಟಿನಲ್ಲಿ ಜನರಿಗೆ ತಮ್ಮ ಸೈಟು ಚೆನ್ನಾಗಿದೆ, ವಾಸ್ತುವಿನ ಪ್ರಕಾರ ಸಮರ್ಪಕವಾಗಿದೆ ಎಂಬ ಉತ್ತರ ಬೇಕು. ಒಮ್ಮೊಮ್ಮೆ ತಮ್ಮ ಎಲ್ಲಾ ಕಷ್ಟಗಳಿಗೂ ವಾಸ್ತು ದೋಷಗಳೇ ಕಾರಣ. ಮನೆಯ ವಾಸ್ತು ಅವ್ಯವಸ್ಥೆಗಳನ್ನು ಮುಂದೆ ಮಾಡಿಕೊಂಡು ಕೊರಗುತ್ತಿರುತ್ತಾರೆ. ಸೈಟಿನ ಉತ್ತಮ ಅಥವಾ ದೌರ್ಬಲ್ಯದ ಕುರಿತು ಸೈಟಿನ ಸಂಬಂಧ ರಸ್ತೆಯ ಜೊತೆ ಹೇಗೆ ಹೊಂದಿಕೊಂಡಿದೆ ಎಂಬುದರ ಮೆಲೆ ನಿರ್ಧರಿಸಬಹುದು. ಈ ಕುರಿತಾಗಿ ಸೂಕ್ತವಾದ ವಿಶ್ಲೇಷಣೆಯ ಅವಶ್ಯಕತೆ ಇದೆ. ಜನರು ಒಂದೇ ಸಮನೆ ಸಣ್ಣ ತೊಂದರೆಯ ಬಗೆಗೂ ತಲ್ಲಣಿಸಬಾರದು. ಒಂದು ಫ್ಲಾಟ್‌ ಬೇರೆಬೇರೆ ಕಾರಣಗಳಿಗಾಗಿ ತನ್ನ ಸಂಪನ್ನತೆ ಪಡೆಯುತ್ತದೆ. ಎದುರಾಗುವ ರಸ್ತೆ ಕೂಡಾ ಮುಖ್ಯವಾಗುತ್ತದೆ. ಉದಾಹರಣೆಗೆ ಒಬ್ಬ ಯಜಮಾನ ತನ್ನ ಕುಂಡಲಿಯ ವಿಚಾರದಲ್ಲಿ ಅಸಮತೋಲನ ಎದ್ದೇಳತೊಡಗಿದಾಗ ಮನೆ ಅಥವಾ ಮನೆಯ ನಿವೇಶನದ ಸ್ವರೂಪ ಮನೆಯ ಫ್ಲಾಟ್‌ಗೆ ಎದುರಾದ ರಸ್ತೆಯ ದಿಕ್ಕು ಸೂಕ್ತವಾಗಿದ್ದರೂ ಕಷ್ಟಗಳು ಎದುರಾದೀತು. ತಮ್ಮ ಕಷ್ಟಗಳಿಗೆಲ್ಲಾ ಮನೆಯ ವಾಸ್ತು ದೋಷವೇ ಎಂದು ತಿಳಿಯಬೇಕಿಲ್ಲ. ನಾಲ್ಕು ದಶಕಗಳ ಹಿಂದೆ ರಾಜೇಶ್‌ ಖನ್ನಾ ಕೀರ್ತಿ ಶೀಖರಕ್ಕೆ ಏರತೊಡಗಿದ ಹೊತ್ತು. ಅಂದಿನ ಸೂಪರ್‌ ಸ್ಟಾರ್‌ ಎಂದು ಸುಮಾರಾಗಿ ಕರೆಯಬಹುದಾಗಿದ್ದ ರಾಜೇಂದ್ರ ಕುಮಾರ್‌ ಅವರಿಂದ ರಾಜೇಶ್‌ ಖನ್ನಾ ಅವರು ಆಶೀರ್ವಾದ್‌ ಎಂಬ ಬಂಗಲೆಯೊಂದನ್ನು ಖರೀದಿಸಿದ್ದರು. ಆಶೀರ್ವಾದಕ್ಕೆ ಬಂದ ರಾಜೇಶ್‌ ಖನ್ನಾ ಆಗ ಮುಟ್ಟಿದ್ದೆಲ್ಲಾ ಚಿನ್ನವಾಗತೊಡಗಿದ್ದು ಸುಳ್ಳೆನಲ್ಲ. ಪೂರ್ಣಪ್ರಮಾಣದ ಸೂಪರ್‌ ಸ್ಟಾರ್‌ ಆಗಿ ರಾಜೇಶ್‌ ಖನ್ನಾ ಜನಪ್ರಿಯತೆಯ ಮೌಂಟ್‌ ಎವರೆಸ್ಟ್‌ ಏರಿದ್ದರು. ಆದರೆ ಕಾಲದ ಸಂಪನ್ನತೆ ಅಥವಾ ದಾರುಣತೆ ಒಂದೇ ರೀತಿಯಲ್ಲಿರಲಾರದು ಎಂಬಂತೆ ರಾಜೇಶ್‌ ಮೇಲೇರಿದಷ್ಟೇ ವೇಗದಲ್ಲಿ ಕೆಳಗಿಳಿಯ ತೊಡಗಿದ್ದಾಗಲೂ ಆಶೀರ್ವಾದ್‌ ಬಂಗಲೆಯಲ್ಲಿಯೇ ಇದ್ದರು. ಆದರೆ ಏರಲು ಇಳಿಯಲು ಖ್ಯಾತರಾಗಲು ಕೀರ್ತಿ ಪಡೆಯಲು ಧನಲಾಭ ಹೊಂದಲು ಮನೆಯ ನಿವಾಸದ ವಾಸ್ತು ಒಂದೇ ಕಾರಣವಲ್ಲ ಎಂಬುದನ್ನೂ ಆಶೀರ್ವಾದದಲ್ಲಿ ಇದ್ದೂ ಬಿಕ್ಕಟ್ಟಿಗೆ ಜಾರಿದ ಸೋಲಿಗೆ ಮುಖಮಾಡಿದ ರಾಜೇಶ್‌ ಖನ್ನಾರೇ ದೊಡ್ಡ ಸಾಕ್ಷಿ. ಅವರ ಯಶಸ್ಸಿಗೆ ಕಾರಣವಾದ ಗ್ರಹದ ಚಲಾವಣೆ ಮುಗಿದು ದುರ್ಬಲ ಗ್ರಹವೊಂದರ ಅಧಿಪತ್ಯದ ದಶಾಕಾಲ ಬಂದಾಗ ರಾಜೇಶ್‌ ಖನ್ನಾ ಸೋಲತೊಡಗಿದ್ದರು. ಪತ್ನಿಯ ಜೊತೆಗೂ ಬಿರುಕು ಒಡಮೂಡಿತ್ತು. ಬರೀ ಸುಮ್ಮನೆ ವಾಸ್ತು ದೋಷ ವಾಸ್ತು ದೋಷ ಎಂದನ್ನುತ್ತ ಮನೆಯನ್ನು ದೂಷಿಸುತ್ತಿರಬಾರದು.ನಿಜ ಭಾರತೀಯ ವಾಸ್ತುಶಾಸ್ತ್ರ ಕೆಲವು ವಿಚಾರಗಳನ್ನು ಮನೆಯ ಸೈಟು ಎದುರಿಸುವ ದಿಕ್ಕಿನ ಮೇಲಿಂದ ಸಂಪನ್ನವಾದುದು ಸಂಪನ್ನವಾದುದಲ್ಲ ಎಂದು ಪ್ರತ್ಯೇಕಿಸಿದೆ. ಹಲವು ನಿರ್ದಿಷ್ಟ ಅಂಶಗಳನ್ನು ಈ ನಿಟ್ಟಿನಲ್ಲಿ ಸ್ಪಷ್ಟಪಡಿಸಿದೆ. ಒಂದು ಸೈಟಿಗೆ ರಸ್ತೆ ದಕ್ಷಿಣ ದಿಕ್ಕಿನಲ್ಲಿದ್ದರೆ ಕೆಲವು ತೊಂದರೆಗಳನ್ನು ಇದು ಸೃಷ್ಟಿಸುತ್ತದೆ. ದಕ್ಷಿಣದ ಹಾದಿ ಮನೆಯ ಸೈಟಿಗಿಂತ ತಗ್ಗಿನಲ್ಲಿದ್ದರೆ ಇದು ಸೂಕ್ತವಲ್ಲ. ಪೂರ್ವ ದಿಕ್ಕನ್ನು ಮುಖಮಾಡಿಕೊಂಡ ಸೈಟ್‌ ಸಾಮಾನ್ಯವಾಗಿ ಸಂಪನ್ನವಾದುದು ಎಂದು ಹೇಳಬಹುದು. ಹೀಗೆ ಮುಖಮಾಡಿದ ಮನೆಗಳು ಇತರೆ ಯಾವುದೇ ಅಡೆತಡೆಗಳಿಂದ ತೊಂದರೆಗೆ ಒಳಗಾಗುವುದಿಲ್ಲ. ನೇರವಾಗಿ ಸೂರ್ಯರಶ್ಮಿ ಪೂರ್ವ ದಿಕ್ಕಿನಿಂದ ಮನೆಯೊಳಗಡೆ ಪ್ರವೇಶೀಸುವ ತೀಕ್ಷ್ಣತೆ ಸ್ವಾಗತಾರ್ಹವಾದುದು. ಸೂರ್ಯನ ರಶ್ಮಿಗಳು ಮುತ್ತಿಕ್ಕುವ ಮನೆಯ ಪ್ರಜ್ವಲನಕ್ಕೆ ಒಂದು ರೀತಿಯ ಅನನ್ಯತೆ ಇರುತ್ತದೆ. ಉತ್ತರ ದಿಕ್ಕನ್ನು ದೃಷ್ಟಿಸುವ ಪ್ಲಾಟ್‌/ ಮನೆಗಳು ಉತ್ತಮವೇ. ಖಗೋಲ ಸಂಪನ್ನವಾದ ವಿಶ್ವವನ್ನು/ ವಿಶ್ವದಿಂದ ಸಂವೇದಿಸುವ ಶಕ್ತಿಮೂಲ ಇಂಥ ಮನೆಗಳಿಗೆ ದಕ್ಕುತ್ತದೆ ಎಂಬುದು ಆಷೇìಯ ವಿಷಯವಾಗಿದೆ. ಮುಳುಗುವ ಬಾಗಿಲಿನ ಸೌರಭ ತಟಸ್ಥವಾದ ಶಕ್ತಿಧಾತುವನ್ನು ಪಡೆದಿರುವುದರಿಂದ ನಷ್ಟಗೊಳ್ಳುವುದಾಗಲೀ, ಲಾಭಕ್ಕಾಗಿನ ಅಂಶಗಳಾಗಲೀ ಒಂದು ಇನ್ನೊಂದನ್ನು ಮೀರಿ ನಿಲ್ಲಲಾರದ ರೀತಿಯಲ್ಲಿ ಎರಡೂ ಒಂದೇ ಹದದಲ್ಲಿ ಇರುತ್ತದೆ. ವಾಸ್ತು ಶಾಸ್ತ್ರವನ್ನು ನಾವು ನಿರ್ಲಕ್ಷಿ$ಸಲಾಗದು. ಹಾಗೆಂದು ವಾಸ್ತುವಿಗೆ ವಿರುದ್ಧವಾದುದನ್ನು ಅನುಕೂಲವಾಗಿಸಿಕೊಳ್ಳುವ ಬಗೆ ಹೇಗೆ ಎಂಬುದನ್ನು ಅರಿತುಕೊಳ್ಳಬೇಕು. ಮನೆಯಲ್ಲಿ ನೀರು ಹಿಡಿದಿಟ್ಟರೆ ಏನೆಲ್ಲಾ ಆಗುತ್ತಾ ಎಂದರೆ... ನೀರಿಗೆ ಸಂಬಂಧಿಸಿದ ವಿಚಾರಗಳಲ್ಲಿ ಈಶಾನ್ಯದಿಕ್ಕಿನ ಜಾಗವನ್ನೇ ಲಕ್ಷ್ಯದಲ್ಲಿಟ್ಟುಕೊಳ್ಳಬೇಕು. ನೀರಿನ ಸಂಬಂಧವಾದ ಎಲ್ಲ ಮೂಲಗಳು ಮನೆಯ ವಿಚಾರವಾಗಿ ಈಶಾನ್ಯ ಮೂಲೆಯಿಂದ ಹೊರಹೊಮ್ಮುವ ಅಂಶಗಳನ್ನು ಒಳಗೊಳ್ಳುವಂತಿರಬೇಕು. ಈ ಬಗ್ಗೆ ಗಮನವಿರಲಿ. ಮನೆಯಲ್ಲಿನ ನೀರಿನ ವಿಚಾರದಲ್ಲಿ ಹೆಚ್ಚು ಎಚ್ಚರವಿರಬೇಕು. ಈಗ ಬಾವಿಗಳನ್ನು ತೆಗೆಸುವ ವಿಚಾರದಲ್ಲಿ, ಬೋರ್‌ ಹೊಡೆಸುವ ಸಂದರ್ಭದಲ್ಲಿ, ಬೇಕಾದ ನೀರನ್ನು ಕಾರ್ಪೊರೇಷನ್‌, ನಗರಸಭೆ, ಮುನಸಿಪಾಲಿಟಿ ಅಥವಾ ನಗರ ಪಂಚಾಯಿತಿಗಳು ಬಿಟ್ಟಾಗ ಸಂಗ್ರಹಿಸುವ ರೀತಿಯಲ್ಲಿ ಯುಕ್ತವಾದ ವಿಧಿವಿಧಾನಗಳನ್ನು ಅನುಸರಿಸುವುದಿಲ್ಲ ಜನರು. ಹೇಗೋ ಸಂಗ್ರಹಿಸುತ್ತಾರೆ, ಹೇಗೋ ನೀರಿನ ಪೂರೈಕೆ ಮನೆಯೊಳಗಡೆಗೆ ನಡೆಯುತ್ತಿರುತ್ತದೆ. ಆದರೆ ಇದಕ್ಕೆ ತನ್ನದೇ ಆದ ಸಂವಿಧಾನ ಒಂದು ಇರುವುದರಿಂದ ಮನಸ್ಸಿಗೆ ಬಂದಂತೆ ನೀರಿನ ವ್ಯವಸ್ಥೆ ಮಾಡಿಕೊಳ್ಳಬಾರದು. ಈಗೀಗ ನೀರಿನ ಕೊರತೆಯಿಂದ ಪ್ರತಿ ನಗರ, ಪ್ರತಿ ಹಳ್ಳಿ ನರಳುತ್ತಿದೆ. ಎಲ್ಲೋ ಕೆಲವು ಊರುಗಳ ಜನ ಸುದೈವಿಗಳಾಗಿದ್ದಾರೆ. ಮನೆಯಲ್ಲಿ ಬಾವಿಯನ್ನು ನೋಡುವುದಾದರೆ ಈಶಾನ್ಯ ಮೂಲೆಯಲ್ಲಿ ( ಉತ್ತರ ಹಾಗೂ ಪೂರ್ವ ದಿಕ್ಕುಗಳು ಸಮಾವೇಶವಾಗುವ ಸ್ಥಳ) ಬಾವಿಯನ್ನು ತೋಡಬೇಕು. ಹಾಗೆಯೇ ನೀರಿನ ಬೋರನ್ನು ತೋಡುವುದಾದರೂ ಈಶಾನ್ಯ ಮೂಲೆಯೇ ಪ್ರಾಶಸ್ತ್ಯದ ಜಾಗೆಯಾಗಿದೆ. ಒಳಾಂತರ್ಗತವಾಗಿ ಮನೆಯಲ್ಲಿ ನೀರಿನ ಸಂಪನ್ನು ನಿರ್ಮಾಣ ಮಾಡಿಕೊಳ್ಳುವ ದಿಕ್ಕು ಕೂಡ ಈಶಾನ್ಯ ಮೂಲೆಯಲ್ಲೇ ಇರಬೇಕು. ಹೀಗೆ ನಿರ್ಮಿಸಿಕೊಳ್ಳುವ ಸಂಪು ಈಶಾನ್ಯ ಮೂಲೆಯಲ್ಲಿರಬೇಕು ಎಂಬುದು ಮುಖ್ಯವೇ ವಿನಾ ಕಾಂಪೌಂಡ್‌ ಗೋಡೆಗಳಿಗೆ ಹೊಂದಿರಬೇಕೋ, ಮೂಲೆಗೇ ನಿರ್ದಿಷ್ಟವಾಗಿ ಸಮಾವೇಶವಾಗಬೇಕೋ ಎಂಬುದೆಲ್ಲ ತಲೆಕೆಡಿಸಿಕೊಳ್ಳುವ ವಿಚಾರವಲ್ಲ. ಮನೆಯ ಸುಮಾರು ಒಟ್ಟೂ ವಿಸ್ತ್ರೀರ್ಣದ ಶೇಕಡ ಒಂದು ಭಾಗದಷ್ಟು ಉದ್ದಗಲಗಳು ಸಂಪಿಗೆ ಒದಗಿರಲಿ ಎಂಬುದನ್ನು ಗಮನಿಸಿ. ಸಂಪಿನ ಆಳ ಆರಡಿಯನ್ನು ಮೀರದಂತಿರಲಿ. ಇನ್ನಿಷ್ಟು ಆಳ ತುಸು ಅಪಾಯಕಾರಿ ಹಾಗೂ ಸ್ವತ್ಛಗೊಳಿಸುವ ಕಾರ್ಯಕ್ಕೆ ಸಹಕಾರಿಯಾಗುವುದಿಲ್ಲ. ಸಂಪ್‌ ಅನ್ನು ಆಗಾಗ ಸ್ವತ್ಛಗೊಳಿಸುವುದು ನಡೆಯಬೇಕಲ್ಲ? ಆರೋಗ್ಯಕ್ಕೆ ಇದು ಮುಖ್ಯ. ಮಳೆ ನೀರಿನ ಕೊಯ್ಲನ್ನು ಅಳವಡಿಸಿಕೊಳ್ಳುವುದಾದರೆ ಯುಕ್ತವಾಗಿ ತೆರೆಯಲ್ಪಟ್ಟ ಬಾವಿಯ ರೀತಿಯ ಕ್ರಮವನ್ನು ಅನುಸರಿಸುವುದೇ ಸೂಕ್ತ. ಈ ರೀತಿಯ ಬಾವಿ ಕೂಡ ಈಶಾನ್ಯ ಮೂಲೆಗೆ ಸ್ಥಾಯಿಗೊಳ್ಳಲಿ. ಇನ್ನು ಮನೆಯ ಲಕ್ಷಣಗಳಿಗೆ ಅಂದವನ್ನು ಹೆಚ್ಚಿಸುವ ಅಂಶವಾಗಿ ಕಿರುಗಾತ್ರದ ಸುಂದರ ಕೊಳವನ್ನೋ, ಚಿಮ್ಮುವ ಕಾರಂಜಿಯನ್ನೋ ನಿರ್ಮಿಸಿಕೊಳ್ಳುವ ಅಪೇಕ್ಷೆ ಹಲವರದ್ದಿರುತ್ತದೆ. ಈಜುಗೊಳವನ್ನು ಕೂಡ ನಿರ್ಮಿಸುವ ವಿಚಾರ ಇಟ್ಟುಕೊಂಡಿರುತ್ತಾರೆ. ಈ ಏನೇ, ಇತರ, ನೀರಿಗೆ ಸಂಬಂಧಿಸಿದ ವಿಚಾರಗಳಲ್ಲಿ ಈಶಾನ್ಯದಿಕ್ಕಿನ ಜಾಗವನ್ನೇ ಲಕ್ಷ್ಯದಲ್ಲಿಟ್ಟುಕೊಳ್ಳಬೇಕು. ನೀರಿನ ಸಂಬಂಧವಾದ ಎಲ್ಲ ಮೂಲಗಳು ಮನೆಯ ವಿಚಾರವಾಗಿ ಈಶಾನ್ಯ ಮೂಲೆಯಿಂದ ಹೊರಹೊಮ್ಮುವ ಅಂಶಗಳನ್ನು ಒಳಗೊಳ್ಳುವಂತಿರಬೇಕು. ಗಮನವಿರಲಿ. ಹೇಗೆಂದರೆ, ಮನೆಯ ಮೇಲಿನ ಓವರ್‌ಹೆಡ್‌ ಟ್ಯಾಂಕ್‌ಗಳು ಮಾತ್ರ ನೈಋತ್ಯ ದಿಕ್ಕಿನಲ್ಲಿ ಇರಬೇಕು. ದಕ್ಷಿಣ ಹಾಗೂ ಪಶ್ಚಿಮ ದಿಕ್ಕುಗಳು ಒಗ್ಗೂಡುವ ಜಾಗದಲ್ಲಿರುವುದು ಸೂಕ್ತ. ಇದರಿಂದ ಕ್ಷೇಮವೂ ಹೌದು. ಹಾಗೆಯೇ ಮನೆಯ ಈಶಾನ್ಯ ಮೂಲೆಯ ಸಂಪಿನಿಂದ, ಪ್ರದಕ್ಷಿಣಾಕಾರದಲ್ಲಿ ಓವರ್‌ಹೆಡ್‌ ಟ್ಯಾಂಕಿಗೆ ನೀರು ಪೂರೈಕೆಗೊಳ್ಳುವಂತಿರಲಿ. ಈ ವಿಷಯವನ್ನು ಅವಶ್ಯವಾಗಿ ಗಮನಿಸಬೇಕು. ಉದಾಸೀನತೆ ಖಂಡಿತ ಬೇಡ. ಪ್ರಾಣಿಕ್‌ ಹೀಲಿಂಗ್‌ ಅನ್ನುವ ವಿಚಾರದ ಸಕಾರಾತ್ಮಕ ಬಲ ಈ ರೀತಿಯ ಪ್ರದಕ್ಷಿಣಾತ್ಮಕವಾದ ನೀರಿನ ಓಡಾಟದಿಂದಾಗಿ ದೊರಕುತ್ತಿರುತ್ತದೆ. ಅಪ್ರದಕ್ಷಿಣಾ ರೂಪದಲ್ಲಿ ನೀರು ಸರಬರಾಜಾಗುವ ವಿಚಾರ ಒಳ್ಳೆಯ ಫ‌ಲ ನೀಡಲಾರದು. ಆರೋಗ್ಯದ ವಿಚಾರದಲ್ಲಿ ಇದು ತುಂಬಾ ಮುಖ್ಯ ತಿಳಿದಿರಿ. ವಾಸ್ತು ನಿಯಮಗಳೂ, ಸರಳ ಪರಿಹಾರಗಳೂ ನಿಮ್ಮ ನಕ್ಷತ್ರ ರಾಶಿಗಳ ಕಲ್ಪನೆ ಕೂಡಾ ಮಾಡದೆ ಯಾವುದೋ ನಿವೇಶನ ಖರೀದಿ ಮಾಡಿಬಿಡುತ್ತೀರಿ. 'ವಿಷ್ಣು ಪತ್ನಿ ನಮಸ್ತುಭ್ಯಂ ಪಾದಸ್ಪರ್ಷಂ ಕ್ಷಮಸ್ವಮೇ' ಎಂದು ಯಾಂತ್ರಿಕವಾಗಿ ಅಂದು ಮುಗಿಸುತ್ತೀರಿ. ಅತಿಥಿಗಳನ್ನು ಎಲ್ಲ ವಾಸ್ತವ್ಯಕ್ಕೆ ಬಿಡಬೇಕು ಎಂಬುದನ್ನು ಯೋಚಿಸದೆ ಅತಿಥಿಗಳಿಂದ ಕೆಲವು ಸಲ ಬರುವ ನಕಾರಾತ್ಮಕ ಶಕ್ತಿಯನ್ನು ಮನೆಯಲ್ಲಿ ನಿಮಗೇ ತಿಳಿಯದಂತೆ ವಿಸ್ತರಿಸಿಕೊಳ್ಳುತ್ತೀರಿ... ಮನೆಯನ್ನು ಕಟ್ಟುವಾಗಿನ ವಾಸ್ತು ನಿಯಮಗಳನ್ನು ಪ್ರಮುಖವಾಗಿ ಪಡಸಾಲೆ, ಅಡುಗೆ ಮನೆ, ಬಚ್ಚಲುಮನೆ, ಮಲಗುವ ಕೋಣೆ, ಸಂಡಾಸು, ಸ್ಟೋರ್‌ ರೂಂ. ಕಿಟಕಿ ಬಾಗಿಲು, ದೇವರ ಕೋಣೆ ಮುಂತಾದವುಗಳೆಲ್ಲ ಸೂಕ್ತವಾಗಿಯೇ ಮಾಡಿರುತ್ತೀರಿ ಎಂದುಕೊಳ್ಳೋಣ. ಇವನ್ನು ಅಚ್ಚುಕಟ್ಟಾಗಿ ಮಾಡಿ ಮುಗಿಸುವುದು ಅಷ್ಟು ಸುಲಭವಲ್ಲ ಎಂಬ ಮಾತು ಬೇರೆ. ಏನೋ ಒಂದು ದೋಷ ಹಾಗೆ ಸುಮ್ಮನೆ ಉಳಿದೇಬಿಡುತ್ತದೆ. ಸರಿಯಾದ ಶಕ್ತಿ ಧಾತುಗಳನ್ನು ಸಂಪಾದಿಸಿಕೊಂಡರೆ ಉಳಿದಿರುವ ಕಿಂಚತ್‌ ಲೋಪಗಳನ್ನು ಸುಧಾರಿಸಿಕೊಳ್ಳಬಹುದಾಗಿದೆ. ವಿವೇಚನೆಯೊಂದಿಗೆ ಇಂದಿನ ಕೆಲವು ಸರಳ ಪರಿಹಾರಗಳನ್ನು ನೀವು ನಡೆಸಿ, ಉಳಿದುಹೋದ ದೋಷಗಳನ್ನು ಸಮತೋಲನಗೊಳಿಸಿ, ಉಂಟಾಗಲಿರುವ ತೊಂದರೆಗಳನ್ನು ತಪ್ಪಿಸಿಕೊಳ್ಳುವುದು ಸೂಕ್ತ. ಸಾಧಕ ಶಕ್ತಿಗಾಗಿನ ಜಾಗ್ರತ ಕೋಶಗಳು ನಿಮ್ಮಲ್ಲಿ ಕ್ರಿಯಾಶೀಲವಾಗಬೇಕು. ದೇವಿ ಆರಾಧನೆ, ದತ್ತಾತ್ರೇಯ ಆರಾಧನೆ, ಗಣಪತಿ, ರಾಮರಕ್ಷಾ, ಮಾರುತಿ ಆರಾಧನೆಗಳು ಎಷ್ಟು ಪ್ರಾಬಲ್ಯವನ್ನು ತಡೆಯಲು ಸಾಧ್ಯ? ಎಂಬುದು ಇಲ್ಲಿ ಮುಖ್ಯ. ಜೀವ ಧಾತುಗಳಾದ ಗಾಳಿ, ನೀರು, ಬೆಂಕಿ, ಮಣ್ಣುಗಳ ಜೊತೆ ಆಕಾಶ ತತ್ವ ಒಂದು ಸುಲಲಿತವಾದ ಧಾಟಿಯಲ್ಲಿ ನಿಮ್ಮ ನಿಯಂತ್ರಣಕ್ಕೆ ಸಿಕ್ಕಿದರೆ ಅದರಿಂದ ಇಂದ್ರಾದಿ ದೇವತೆಗಳ, ತ್ರಿಮೂರ್ತಿಗಳ ಕುರಿತಾದ ಸಿದ್ಧಿ ಸೂತ್ರಗಳ, ಆದಿ ಶಕ್ತಿ ಮಹಾಮಾಯ ಆ ಶ್ರೀಪೀಠ ಶೋಭಿತಳಾದ ಕ್ಷೀರ ಸಮುದ್ರ ತನಯೆ ಲಕ್ಷ್ಮಿಯ, ಬುದ್ಧಿಬಲ ನೀಡುವ ಕಾಮರೂಪಿಣಿ ಮಂಗಳಮಯ ಶ್ರೀಶಾರದೆಯ ಅಭಯ, ರಕ್ಷೆ ಸಿಗಲು ಸಾಧ್ಯ. ಪರಾತ್ಪರವಾದ ಶಕ್ತಿಯನ್ನು ಧ್ಯಾನಿಸುವ ಏಕಾಗ್ರತೆಯನ್ನು ಮಂತ್ರಶಕ್ತಿಯಿಂದ, ಧಾರ್ಢ್ಯತೆ ಪಡೆದ ಧಾತುಗಳಿಂದ, ವಾಸ್ತುಪುರುಷನ ಅಭಿವ್ಯಕ್ತಿ ವೃದ್ಧಿಸುವ ಚೈತನ್ಯ ಪಡೆಯಬೇಕು. ಇದು ಸುಲಭದ ಕೆಲಸವಲ್ಲ. ಸಾಧನೆಯಿಂದ ಸಾಧಿಸಬೇಕು. ಭಕ್ತಿಯಿಂದ ಗೆಲ್ಲಬೇಕು. ಮನೆಯಲ್ಲಿ ಪ್ರತಿನಿತ್ಯವೂ ಬೇಕಾದ ಸಲಕರಣೆಗಳ ಆಯ್ಕೆಯ ವಿಚಾರದಲ್ಲಿ ಏನನ್ನೂ ಯೋಚಿಸದೆಯೇ ವಾಸ್ತು ನಾಡಿಯನ್ನು ಅಸ್ತವ್ಯಸ್ತಗೊಳಿಸುವ ಕೆಲಸ ಮಾಡಬೇಡಿ. ಪ್ರತಿ ದಿನವೂ ಬಹಳ ಅಮೂಲ್ಯವಾದದ್ದು. ಪ್ರತಿಕ್ಷಣವೂ ಬಾರದಿರುವಂಥದ್ದು. ಸುಮ್ಮನೇ ಕ್ಷಣಗಳು ಜಾರುತ್ತಿರುತ್ತದೆ. ನಾಳೆ ಮಾಡಿದರಾಯ್ತು ಎಂದು ಶುದ್ಧತೆಯನ್ನು ತುಂಬಿಕೊಂಡ ಪ್ರಕೃತಿ ಅಲೆಗಳನ್ನು ಸುಮ್ಮನೆ ವ್ಯರ್ಥ ಗೊಳಿಸಿಕೊಳ್ಳುತ್ತೀರಿ. ಮನೆಯ ದಿಕ್ಕು ಪೂರ್ವ, ಉತ್ತರ ಎಂದು ಗಾಬರಿ ಹುಟ್ಟುವಷ್ಟು ಗಡಿಬಿಡಿಯೊಂದಿಗೆ ಧಾವಿಸಿ ಕೈವಶ ಪಡೆಯಲು ಮುಂದಾಗುತ್ತೀರಿ. ನಿಮ್ಮ ನಕ್ಷತ್ರ ರಾಶಿಗಳ ಕಲ್ಪನೆ ಕೂಡಾ ಮಾಡದೆ ಯಾವುದೋ ನಿವೇಶನ ಖರೀದಿ ಮಾಡಿಬಿಡುತ್ತೀರಿ. 'ವಿಷ್ಣು ಪತ್ನಿ ನಮಸ್ತುಭ್ಯಂ ಪಾದಸ್ಪರ್ಷಂ ಕ್ಷಮಸ್ವಮೇ' ಎಂದು ಯಾಂತ್ರಿಕವಾಗಿ ಅಂದು ಮುಗಿಸುತ್ತೀರಿ. ಅತಿಥಿಗಳನ್ನು ಎಲ್ಲ ವಾಸ್ತವ್ಯಕ್ಕೆ ಬಿಡಬೇಕು ಎಂಬುದನ್ನು ಯೋಚಿಸದೆ ಅತಿಥಿಗಳಿಂದ ಕೆಲವು ಸಲ ಬರುವ ನಕಾರಾತ್ಮಕ ಶಕ್ತಿಯನ್ನು ಮನೆಯಲ್ಲಿ ನಿಮಗೇ ತಿಳಿಯದಂತೆ ವಿಸ್ತರಿಸಿಕೊಳ್ಳುತ್ತೀರಿ. ಸ್ಟೋರ್‌ ರೂಮಿನಲ್ಲಿ ಇಡಬೇಕಾದ ಸರಕುಗಳೇನು ಎಂಬುದನ್ನು ಯೋಚಿಸದೆಯೇ ಎಲ್ಲವನ್ನೂ ರಾಶಿ ಮಾಡಿ ತುಂಬುತ್ತೀರಿ. ಪಶ್ಚಿಮ ದಿಕ್ಕಿಗೆ ಬೆಡ್‌ ರೂಮ್‌ ಗಳಿರಲಿ ಎಂಬ ವಿಚಾರ ಸರಿ. ಆದರೆ ಮುಕ್ತ ಹಜಾರಕ್ಕೂ ಬೆಡ್‌ ರೂಮಿಗೂ ಹೊಂದಿಸಿಕೊಳ್ಳಬೇಕಾದ ಅಗಲ ಉದ್ದಗಳನ್ನು ಸೂಕ್ತವಾಗಿ ಇರಿಸಿಕೊಳ್ಳಲು ಯೋಚಿಸುವುದಿಲ್ಲ. ಮುಖ್ಯವಾಗಿ ಅಪಾರ್ಟ್ಮೆಂಟ್ ನಲ್ಲಿ ಮಕ್ಕಳನ್ನು ಎಲ್ಲೆಂದರಲ್ಲಿ ಆಡಲು ಕಳುಹಿಸುತ್ತೀರಿ. ಅವರ ಬಳಿ ಎಲೆಕ್ಟ್ರಾನಿಕ್‌ ಸರಕುಗಳಾದ ಮೊಬೈಲ್‌ ಡಿಜಿಟಲ್‌ ವಾಚ್‌ ಇನ್ನೇನೋ ಆಟಿಕೆ ಇರುತ್ತದೆ. ದಕ್ಷಿಣ ದಿಕ್ಕಿನ ಆಘಾತಗಳು ಎಂಥದಿರಬಹುದು ಇದರಿಂದಾಗಿ ಎಂಬುದನ್ನು ಯೋಚಿಸುವುದಿಲ್ಲ. ಇವನ್ನೆಲ್ಲ ಸೂಕ್ತವಾದ ಸುವಸ್ತುಗಳು, ಹರಳುಗಳು, ಸ್ವಸ್ತಿಕ್‌, ಶಂಖು ಚಕ್ರ, ಗದಾ ಪದ್ಮ ತ್ರಿಶೂಲ ಧಾತುಗಳ ಮೂಲಕ ಒಂದು ಸಮತೋಲನ ಪಡೆಯಲು ಸುಲಭವಾದ ದಾರಿ ಏನೆಂಬುದನ್ನು ಅರಿಯಲು ಮುಂದಾಗುವುದಿಲ್ಲ. ಬದಲಾದ ಕಾಲಘಟ್ಟದಲ್ಲಿ ಉಂಟಾಗುವ ವಿಕಿರಣಗಳಿಂದಾಗುವ ಅಪಾಯಗಳನ್ನು ತಪ್ಪಿಸಿಕೊಳ್ಳಲು ರಕ್ಷಣೆಯನ್ನು ಬಯಸುತ್ತದೆ. ಸುಲಭವಾದ ದಾರಿಯಿಂದ, ಸಾಧನಗಳಿಂದ ರಕ್ಷೆ ಸಾಧ್ಯ. ಪಶ್ಚಿಮದ ದಿಕ್ಕಿನ ಅಂಗಡಿಯ ವ್ಯಾಪಾರ, ವ್ಯವಹಾರ ಚೆನ್ನಾಗಿರುತ್ತಾ? ಅಂಗಡಿಗಳು ಎಂದರೆ ವ್ಯಾಪಾರದ ಅಥವಾ ಬ್ಯುಸಿನೆಸ್‌ ಸ್ಥಳ. ರೆಸ್ಟೋರೆಂಟಿನಿಂದ ಹಿಡಿದು ಕೈಗಾರಿಕಾ ಘಟಕವಾಗಿ ಪುಟ್ಟ ವಿಸ್ತಾರ ಪಡೆದಿದ್ದರೂ ಸರಿಯೇ. ಡಿಸ್ಟ್ರಿಬ್ಯೂಶನ್‌ ಕೇವಲ ಫೋನ್‌ ಕರೆ, ಇಂಟರ್‌ ನೆಟ್‌ಗಳ ಮೂಲಕ ವ್ಯವಹಾರ ವಹಿವಾಟು ನಡೆಸುವುದಾದರೂ ಸರಿಯೇ. ನೈಋತ್ಯವೇ ಯಜಮಾನನಿಗೆ ಪ್ರಧಾನವಾದ ಸಂಪನ್ನತೆಗಾಗಿನ ಭಾಗ. ಕನಕೋತ್ತಮ ಕಾಂತಿಃ ಕನಕಭೂಷಣಃ ಇತ್ಯಾದಿ - ದುರ್ಗಾಳ ಕುರಿತಾಗಿ ದುರ್ಗಾ ಸಪ್ತಶತಿಯಲ್ಲಿ ಇದು ಬರುತ್ತದೆ. ದೇವಿಯ ಸುವರ್ಣ ಕಾಂತಿಯ ಮೂರ್ತಿ ವಿವರಣೆಯ ಸಂದರ್ಭದಲ್ಲಿ ಉಲ್ಲೇಖವಾಗುತ್ತದೆ. ಪಶ್ಚಿಮ ದಿಕ್ಕನ್ನು ದೃಷ್ಟಿಸುವ ಅಂಗಡಿಯ ವ್ಯಾಪಾರವು ಅಂಬಾಳಿಂದಲೇ ಜಗದಂಬಾ ಎಂದು ಆರಾಧಿಸುವ ದುರ್ಗಾಳಿಂದಲೇ ಒದಗಿಬರಬೇಕು. ಸರ್ವತ್ರ ಭೂತಳಾದ ದೇವಿಯು ಸಜ್ಜನನ ಪಾಲಿಗೆ ವರ ಕೊಡುವ ಕಾಮಧೇನು. ಅಂಗಡಿಯಲ್ಲಿ ನೈಋತ್ಯ ಮೂಲೆಯಲ್ಲಿ ಯಜಮಾನ ಅಥವಾ ಯಜಮಾನತಿ ಕುಳಿತಿರಬೇಕು. ಈ ಮೂಲೆ ಕೊಂಚ ಎತ್ತರವಾಗಿರಬೇಕು. ಉಳಿದ ಯಾವ ದಿಕ್ಕುಗಳೂ ಅಂಗಡಿಯ ಮಾಲೀಕ ಜನಕ್ಕೆ ಉಪಯೋಗಕ್ಕೆ ಬರುವಂಥದ್ದಲ್ಲ. ವಾಯುವ್ಯ ಮೂಲೆಯನ್ನು ಅನೇಕರು ಆಯ್ಕೆ ಮಾಡಿಕೊಳ್ಳುತ್ತಾರೆ. ಆದರಿದು ಸೂಕ್ತ ವಿಚಾರವಲ್ಲ. ಇಲ್ಲಿ ಅಂಗಡಿಗಳು ಎಂದರೆ ವ್ಯಾಪಾರದ ಅಥವಾ ಬ್ಯುಸಿನೆಸ್‌ ಸ್ಥಳ. ರೆಸ್ಟೋರೆಂಟಿನಿಂದ ಹಿಡಿದು ಕೈಗಾರಿಕಾ ಘಟಕವಾಗಿ ಪುಟ್ಟ ವಿಸ್ತಾರ ಪಡೆದಿದ್ದರೂ ಸರಿಯೇ. ಡಿಸ್ಟ್ರಿಬ್ಯೂಶನ್‌ ಕೇವಲ ಫೋನ್‌ ಕರೆ ಇಂಟರ್‌ನೆಟ್‌ಗಳ ಮೂಲಕ ವ್ಯವಹಾರ ವಹಿವಾಟು ನಡೆಸುವುದಾದರೂ ಸರಿಯೇ. ನೈಋತ್ಯವೇ ಯಜಮಾನನಿಗೆ ಪ್ರಧಾನವಾದ ಸಂಪನ್ನತೆಗಾಗಿನ ಭಾಗ. ಅದೇ ರೀತಿ ಯಜಮಾನ ಅಥವಾ ಒಡತಿಗೆ ಪೂರ್ವ ಅಥವಾ ಉತ್ತರ ದಿಕ್ಕನ್ನು ನೋಡುತ್ತಾ ಜವಾಬ್ದಾರಿ ನಿರ್ವಹಿಸಬೇಕು. ಶಟರ್ಸ್‌ಗಳ ವಿಚಾರದಲ್ಲೂ ಕೆಲವು ಅಗತ್ಯವಾದ ಚಿಂತನ ಗಮನಗಳ ಔಚಿತ್ಯ ಸೂಕ್ತವಾಗಿರಲಿ. ಎರಡು ಶಟರ್ಸ್‌ಗಳನ್ನು ಹೊಂದಿರುವರಾದರೂ ಎರಡನ್ನೂ ಉಪಯೋಗಿಸುವುದಕ್ಕೆ ತೊಂದರೆ ಇಲ್ಲ. ಆದರೆ ವಾಯುವ್ಯ ಮೂಲೆಯ ಶಟರ್‌ ಮಾತ್ರ ಪ್ರಧಾನವಾದ ಆಯ್ಕೆಯನ್ನು ಉಪಯೋಗದ ವಿಷಯದಲ್ಲಿ ಪಡೆದಿರಲಿ. ಪ್ರಾಶಸ್ತ್ಯವಂತೂ ವಾಯುವ್ಯ ದಿಕ್ಕಿನ ಶಟರ್‌ಗೇ ದೊರಕುವಂತಾಗಲಿ. ಯಾವುದೇ ದೈವಿಕ ಪೂಜಾ ಕೆಲಸಗಳಿಗಾಗಿ ಸಂಬಂಧಿಸಿದ ಮೂರ್ತಿ ಅಥವಾ ಸ್ತುತಿ ಈಶಾನ್ಯದಲ್ಲೇ ನಡೆಯಲಿ. ಕಸಬರಿಗೆ ಒರೆಸುವ ವಸ್ತ್ರ, ಟಾಯ್ಲೆಟ್‌ ಸಲಕರಣೆಗಳು ನ್ಯಾಪ್‌ಕಿನ್‌, ಪೇಪರ್‌ ಕಬ್ಬಿಣದ ತ್ಯಾಜ್ಯಗಳನ್ನು ಈಶಾನ್ಯ ಅಥವಾ ವಾಯುವ್ಯ ನೈಋತ್ಯ ವಹಿವಾಟಿನ ಜಾಗೆಯಲ್ಲಿ ಇಡಬೇಡಿ. ದೇವರನ್ನಿಡುವ ಜಾಗದಲ್ಲಿ ಚಿಕ್ಕದೊಂದು ಕ್ರಿಷ್ಟಲ್‌ ಪಿರಮಿಡ್‌ ಅಥವಾ ಅಭಿಮಂತ್ರಿಸಿದ ಶಂಖ, ಗದಾ, ಧಾತು, ಸಮಷ್ಟಿ ಸಂಪುಟಗಳು ಇದ್ದಿರಲಿ. ಸಮಸ್ಯೆಗಳೇನೂ ಇಲ್ಲ. ಅತಿಯಾದ ಅಲಂಕಾರಗಳು ಬೇಡ. ಯಜಮಾನ / ಒಡತಿಯ ಹಿಂದಗಡೆಯ ದಕ್ಷಿಣ ದಿಕ್ಕಿಗೋ ವಿಸ್ತರಿಸಿದ ಜಾಗೆಯಲ್ಲಿ ಕನ್ನಡಿಯ ಜೋಡಣೆ ಅಥವಾ ದೇವರ ಮೂರ್ತಿ ಅಥವಾ ಚಿತ್ರಗಳು ಬೇಡ. ನಿಮ್ಮ ನಿಮ್ಮ ಜಾತಕದ ಆಧಾರದಲ್ಲಿ ದೇವರ ಸಲುವಾಗಿನ ಆರಾಧನೆಗಾಗಿನ ಹೂವುಗಳ ಬಣ್ಣ ಇರಲಿ. ನೈಋತ್ಯ ದಿಕ್ಕಿನಲ್ಲಿ ಸಿಮೆಂಟಿನ ಕಟ್ಟೆ ಸಮಾವೇಶಗೊಳಿಸಿ, ಅಲ್ಲಿ ಆರಾಧನೆಗಾಗಿನ ಸಲಕರಣೆಗಳು ಇಡಲ್ಪಟ್ಟರೆ ತೊಂದರೆಗಳಿಲ್ಲ. ವಾಯುವ್ಯ ಮೂಲೆಯಲ್ಲಿನ ಪಶ್ಚಿಮದ ಭಾಗದಲ್ಲಿ ಮೆಟ್ಟಿಲುಗಳು ಇದ್ದು ಅಂಗಡಿಯ ಒಳಬರಲು ಸಾಧ್ಯವಾಗುವ ಹಾಗೆ ರಚನೆ ಇರಲಿ. ವ್ಯಾಪಾರದ ವಾಣಿಜ್ಯದ ವಿಚಾರಗಳಿಗೆ ಸಂಬಂಧಿಸಿದಂತೆ ನಡೆಯುವ ಮಾತುಕತೆಗಳ ಕಾಲದಲ್ಲಿ ಹೊರರಸ್ತೆಯ ಧೂಳು ಬರದಂತೆ ಬಾಗಿಲು ಮುಚ್ಚಿರಲಿ. ರೆಸ್ಟೋರಂಟ್‌ಗಳಾದರೆ ಸ್ಪಾಂಜ್‌ ಬಳಸಿದ ದ್ರಾವಣ, ಪ್ಲಾಸ್ಟಿಕ್‌ ಕಸಬರಿಕೆ, ಉದ್ದನೆಯ ಕೋಲಿಗೆ ಕಟ್ಟಿದ ನೆಲ ಒರೆಸುವ ಮಾಪು ನಡೆಯಲಿ. ಗ್ರಾಹಕರಿಗೆ ದ್ರಾವಣ ಸಿಡಿಯದಂತೆ, ಕಸಬರಿಕೆ ಸೋರದಂತೆ ಎಚ್ಚರಿಕೆ ವಹಿಸಿ. ಕೆಲಸಗಾರರಿಗೆ ಈ ಕುರಿತು ಸರಳವಾದ ಬೋಧನೆ ಮಾಡಿ. ಯಜಮಾನನ ಜಾತಕಕ್ಕೆ ಹೊಂದುವ ಬಣ್ಣದ ಅನುಸಾರ ಕೆಲಸಗಾರರ ಸಮವಸ್ತ್ರವಿರಲಿ. ಎಲ್ಲವೂ ಸರಿಯಾಗಿದ್ದರೆ ಲಕ್ಷ್ಮೀಯ ಚಿತ್ತ ಆನಂದವಾಗಿರುತ್ತದೆ. ಮನೆಯ ಬಾವಿ ಯಾವ ಮೂಲೆಯಲ್ಲಿ ಇರಬೇಕು ಅನ್ನೋದು ಗೊತ್ತಾ? ನೀರಿನ ಪೂರೈಕೆ ಮನೆಯೊಳಗಡೆ ಹೇಗೋ ನಡೆಯುತ್ತಿರುತ್ತದೆ. ಆದರೆ ಇದಕ್ಕೆ ತನ್ನದೇ ಆದ ಸಂವಿಧಾನ ಒಂದು ಇರುವುದರಿಂದ ಮನಸ್ಸಿಗೆ ಬಂದಂತೆ ನೀರಿನ ವ್ಯವಸ್ಥೆ ಮಾಡಿಕೊಳ್ಳಬಾರದು. ಈಗೀಗ ನೀರಿನ ಕೊರತೆಯಿಂದ ಪ್ರತಿನಗರ, ಪ್ರತಿಹಳ್ಳಿ ನರಳುತ್ತಿದೆ. ಎಲ್ಲೋ ಕೆಲವು ಊರುಗಳ ಜನ ಸುದೈವಿಗಳಾಗಿದ್ದಾರೆ. ಮನೆಯಲ್ಲಿ ಬಾವಿಯನ್ನು ತೋಡುವುದಾದರೆ ಈಶಾನ್ಯ ಮೂಲೆಯಲ್ಲಿ ತೋಡಬೇಕು. ಹಾಗೆಯೇ ನೀರಿನ ಬೋರ್‌ ಅನ್ನು ತೋಡುವುದಾದರೂ ಈಶಾನ್ಯವೇ ಪ್ರಶಸ್ತ ಜಾಗ. ಮನೆಯಲ್ಲಿನ ನೀರಿನ ವಿಚಾರದಲ್ಲಿ ಹೆಚ್ಚು ಎಚ್ಚರವಿರಬೇಕು. ಈಗ ಬಾವಿಗಳನ್ನು ತೆಗೆಸುವ ವಿಚಾರದಲ್ಲಿ, ಬೋರ್‌ ಕೊರೆಸುವ ಸಂದರ್ಭದಲ್ಲಿ, ಬೇಕಾದ ನೀರನ್ನು ಕಾರ್ಪೊರೇಷನ್‌ ನಗರಸಭೆ ಮುನಿಸಿಪಾಲ್ಟಿ ಅಥವಾ ನಗರ ಪಂಚಾಯಿತಿಗಳು ಬಿಟ್ಟಾಗ ಸಂಗ್ರಹಿಸುವ ವಿಧಿ ವಿಧಾನಗಳನ್ನು ಜನರು ಅನುಸರಿಸುವುದಿಲ್ಲ. ಹೇಗೋ ಸಂಗ್ರಹಿಸುತ್ತಾರೆ. ಹೇಗೋ ನೀರಿನ ಪೂರೈಕೆ ಮನೆಯೊಳಗಡೆ ನಡೆಯುತ್ತಿರುತ್ತದೆ. ಆದರೆ ಇದಕ್ಕೆ ತನ್ನದೇ ಆದ ಸಂವಿಧಾನ ಒಂದು ಇರುವುದರಿಂದ ಮನಸ್ಸಿಗೆ ಬಂದಂತೆ ನೀರಿನ ವ್ಯವಸ್ಥೆ ಮಾಡಿಕೊಳ್ಳಬಾರದು. ಈಗೀಗ ನೀರಿನ ಕೊರತೆಯಿಂದ ಪ್ರತಿನಗರ, ಪ್ರತಿಹಳ್ಳಿ ನರಳುತ್ತಿದೆ. ಎಲ್ಲೋ ಕೆಲವು ಊರುಗಳ ಜನ ಸುದೈವಿಗಳಾಗಿದ್ದಾರೆ. ಮನೆಯಲ್ಲಿ ಬಾವಿಯನ್ನು ತೋಡುವುದಾದರೆ ಈಶಾನ್ಯ ಮೂಲೆಯಲ್ಲಿ ತೋಡಬೇಕು. ಹಾಗೆಯೇ ನೀರಿನ ಬೋರನ್ನು ತೋಡುವುದಾದರೂ ಈಶಾನ್ಯವೇ ಪ್ರಶಸ್ತ ಜಾಗವಾಗಿದೆ. ಒಳಾಂತರ್ಗತವಾಗಿ ಮನೆಯಲ್ಲಿ ನೀರಿನ ಸಂಪನ್ನು ನಿರ್ಮಾಣ ಮಾಡಿಕೊಳ್ಳುವ ದಿಕ್ಕು ಕೂಡಾ ಈಶಾನ್ಯವೇ ಆಗಿರಬೇಕು. ಹೀಗೆ ನಿರ್ಮಿಸುವ ಸಂಪು ಈಶಾನ್ಯ ಮೂಲೆಯಲ್ಲಿರಬೇಕು ಎಂಬುದು ಮುಖ್ಯವೇ ವಿನಾ ಕಾಂಪೌಂಡ್‌ ಗೋಡೆಗಳಿಗೆ ಹೊಂದಿರಬೇಕೋ, ಮೂಲೆಗೆ ನಿರ್ದಿಷ್ಟವಾಗಿ ಸಮಾವೇಶವಾಗಬೇಕೋ ಎಂಬುದೆಲ್ಲಾ ತೆಲೆಕೆಡಿಸಿಕೊಳ್ಳುವ ವಿಚಾರವಲ್ಲ. ಸುಮಾರಿ ಒಟ್ಟು ವಿಸ್ತೀರ್ಣದ ಶೇ. ಒಂದುರಷ್ಟು ಭಾಗದ ಉದ್ದಗಲಗಳನ್ನು ಸಂಪಿಗೆ ಒದಗಿಸಿರಬೇಕು. ಸಂಪಿನ ಆಳ ಆರಡಿಗಳನ್ನು ಮೀರದಂತಿರಲಿ. ಇನ್ನಿಷ್ಟು ಆಳ ತುಸು ಅಪಾಯಕಾರಿ ಹಾಗೂ ಸ್ವತ್ಛಗೊಳಿಸುವ ಕಾರ್ಯಕ್ಕೆ ಸಹಕಾರಿಯಾಗುವುದಿಲ್ಲ. ಸಂಪನ್ನು ಆಗಾಗ ಸ್ವತ್ಛಗೊಳಿಸುವುದು ಆರೋಗ್ಯಕ್ಕೆ ಒಳ್ಳೆಯದು. ಮಳೆನೀರಿನ ಕೊಯ್ಲು ಮತ್ತು ವಾಸ್ತು ಕೊಯ್ಲು ಇರುವುದಾದರೆ ಮುಕ್ತವಾಗಿ ತೆರೆಯಲ್ಪಟ್ಟ ಬಾವಿಯ ರೀತಿಯ ಕ್ರಮವನ್ನು ಅನುಸರಿಸುವುದೇ ಸೂಕ್ತ. ಈ ರೀತಿಯ ಬಾವಿ ಕೂಡಾ ಈಶಾನ್ಯ ಮೂಲೆಯಲ್ಲೇ ಇರಬೇಕು. ಇನ್ನು ಮನೆಯ ಲಕ್ಷಣಗಳಿಗೆ ಅಂದವನ್ನು ಹೆಚ್ಚಿಸುವ ಅಂಶವಾಗಿ ಕಿರುಗಾತ್ರದ ಸುಂದರ ಕೊಳವನ್ನೋ, ಚಿಮ್ಮುವ ಕಾರಂಜಿಯನ್ನೋ ನಿರ್ಮಿಸಿಕೊಳ್ಳುವ ಅಪೇಕ್ಷೆ ಹಲವರದ್ದಿರುತ್ತದೆ. ಈಜುಕೊಳವನ್ನು ಕೂಡಾ ನಿರ್ಮಿಸುವ ವಿಚಾರವಿರುತ್ತದೆ. ಈ ಏನೇ ಇತರ ನೀರಿಗೆ ಸಂಬಂಧಿಸಿದ ವಿಚಾರಗಳಿದ್ದರೂ, ಈಶಾನ್ಯ ದಿಕ್ಕಿನ ಜಾಗವನ್ನೇ ಲಕ್ಷ್ಯದಲ್ಲಿಟ್ಟುಕೊಳ್ಳಬೇಕು. ನೀರಿನ ಸಂಬಂಧವಾದ ಎಲ್ಲಾ ಮೂಲಗಳೂ ಮನೆಯ ವಿಚಾರವಾಗಿ ಈಶಾನ್ಯ ಮೂಲೆಯಿಂದ ಹೊರಹೊಮ್ಮುವ ಅಂಶಗಳನ್ನು ಒಳಗೊಂಡಿರಬೇಕು. ಹೀಗೆಂದು ಮನೆಯ ಮೇಲಿನ ಓವರ್‌ ಹೆಡ್‌ ಟ್ಯಾಂಕ್‌ಗಳು ಈಶಾನ್ಯದಲ್ಲಿರಬಾರದು. ಇವು ಕಡ್ಡಾಯವಾಗಿ ನೈಋತ್ಯದಿಕ್ಕಿನಲ್ಲಿ ಇರಬೇಕು. ದಕ್ಷಿಣ ಹಾಗೂ ಪಶ್ಚಿಮ ದಿಕ್ಕುಗಳು ಸೇರುವ ಮೂಲೆಗೆ ನೈಋತ್ಯವೆನ್ನುತ್ತಾರೆ. ನೈರುತ್ಯದಲ್ಲಿ ಟ್ಯಾಂಕ್‌ ಇಡುವುದು ಕ್ಷೇಮವೂ ಹೌದು. ಹಾಗೆಯೇ ಮನೆಯ ಈಶಾನ್ಯ ಮೂಲೆಯ ಸಂಪಿನಿಂದ ಪ್ರದಕ್ಷಿಣಾಕಾರದಲ್ಲಿ ಓವರ್‌ ಹೆಡ್‌ ಟ್ಯಾಂಕಿಗೆ ನೀರು ಪೂರೈಕೆಯಾಗುವಂತಿರಲಿ. ಈ ವಿಷಯವನ್ನು ಅವಶ್ಯವಾಗಿ ಗಮನಿಸಿ. ಪ್ರಾಣಿಕ್‌ ಹೀಲಿಂಗ್‌ ಎನ್ನುವ ವಿಚಾರದ ಸಕಾರಾತ್ಮಕ ಬಲ ರೀತಿಯ ಪ್ರದಕ್ಷಿಣಾತ್ಮಕವಾದ ನೀರಿನ ಓಡಾಟದಿಂದ ದೊರೆಯುತ್ತದೆ. ಅಪ್ರದಕ್ಷಿಣಾ ರೂಪದಲ್ಲಿದ್ದರೆ ನಕಾರಾತ್ಮಕ ಬಲ ದೊರೆಯುತ್ತದೆ. ಇದು ಒಳ್ಳೆಯ ಫ‌ಲ ನೀಡಲಾರದು. ಆರೋಗ್ಯದ ವಿಚಾರದಲ್ಲಿ ಈ ಬಲಗಳು ಬಹು ಪರಿಣಾಮಕಾರಿಯಾಗಿದೆ. ಮನೆ ಕಟ್ಟುವಾಗ ವಾಸ್ತು ನೋಡಿ ಮನೆಯನ್ನು ಕಟ್ಟುವಾಗ ಅನೇಕ ಸಣ್ಣ ಸಂಗತಿಗಳನ್ನು ನೆನಪಿನಲ್ಲಿಡಬೇಕಾದದ್ದು ಅವಶ್ಯವಾಗಿದೆ. ಮನೆಯ ಈಶಾನ್ಯ ಮೂಲೆ ಅಗ್ನಿಮೂಲೆ, ವಾಯು ಮೂಲೆಗಳಲ್ಲಿ ಅಡುಗೆ ಮನೆ, ಮಲಗುವ ಕೋಣೆ, ಬಚ್ಚಲು ಮನೆ, ಪಡಸಾಲೆ. ದೇವರ ಮನೆ, ಇತ್ಯಾದಿಗಳನ್ನೆಲ್ಲ ಮೀಸಲಿಡಬೇಕೆಂಬ ಸಂಗತಿ ಬೇರೆ. ಆದರೆ ಈ ಎಲ್ಲಾ ವಿಚಾರಗಳ ಹೊರತಾಗಿ ಕೆಲವು ಅನುಸರಿಸಬೇಕಾದ ವಿಚಾರಗಳು ಕೂಡಾ ಮುಖ್ಯವಾಗಿದೆ. ಇದರಿಂದ ಮನೆಯೊಳಗಿನ ಶಾಂತಿ, ಸಮಾಧಾನ, ಸಮೃದ್ಧಿ, ಆರೋಗ್ಯ, ನಗು, ಕೇಕೆ, ಸುಖ, ಸಂತೋಷಗಳೆಲ್ಲ ವೃದ್ಧಿಗೊಳ್ಳಲು ಅವಕಾಶ ಒದಗಿ ಬರುತ್ತದೆ. ಇಲ್ಲದಿದ್ದರೆ ಅನೇಕ ಕಿರಿಕಿರಿಗಳು ಎಲ್ಲಾ ವಿಚಾರಗಳಲ್ಲೂ ಮೂಡಿಬಂದು ಅನೇಕ ಅಶಾಂತಿ, ಅಸಮಾಧಾನಗಳಿಗೆ ದಾರಿ ಮಾಡಿಕೊಡುತ್ತದೆ. ಮನೆಯಲ್ಲಿ ರಸ್ತೆಯಿಂದ ಮನೆಯೊಳಗಿನ ಕಾಂಪೌಂಡ್‌ ಒಳಗೆ ಕಾಲಿಡಲು, ಇರುವ ಗೇಟ್‌ ಯಾವಾಗಲೂ ಮನೆಯ ಹೆಬ್ಟಾಗಿಲಿಗಿಂತ ಚಿಕ್ಕದಿರಬೇಕು ಹಾಗೂ ಹೆಬ್ಟಾಗಿಲು ಎತ್ತರದಲ್ಲಿರಬೇಕು. ಇತ್ತೀಚೆಗೆ, ಕೇಂದ್ರ ಸರ್ಕಾರಿ ಕೆಲಸದಲ್ಲಿದ್ದು ನಿವೃತ್ತಿ ಹೊಂದಿದವರೊಬ್ಬರು ಇದ್ದ ತಮ್ಮ ಮನೆಯನ್ನು ಹಳೆ ರೀತಿಯಿಂದ ಹೊಸಮಾದರಿಗೆ ನವೀಕರಣಗೊಳಿಸುವ ಸಂದರ್ಭದಲ್ಲಿ ಕಾಪೌಂಡ್‌ ಗೇಟನ್ನು ತುಸು ಎತ್ತರಿಸಿ ನವೀನ ಕುಸುರಿಯಲ್ಲಿ ನಿಯೋಜಿಸಿ ಹೆಬ್ಟಾಗಿಲಿಗಿಂತ ದೊಡ್ಡದಾಗಿಸಿದರು. ಆದರೆ ಕೆಲವೇ ದಿನಗಳಲ್ಲಿ ಚೆನ್ನಾಗಿದ್ದ ಅವರ ಆರೋಗ್ಯ ಹದಗೆಡಲು ಪ್ರಾರಂಭವಾಯಿತು. ಈ ಅಸಮತೋಲನ ಅಳತೆಗಳು ಸರಿಹೋದ ಮೇಲೆ ಮತ್ತೆ ಅವರ ಆರೋಗ್ಯದಲ್ಲಿ ಚೇತರಿಕೆ ಕಂಡಿತು. ಮನೆಯ ಟೆರೆಸ್‌ ಅಥವಾ ಮಹಡಿ ಮೆಟ್ಟಿಲುಗಳನ್ನು ನಿರ್ಮಿಸುವಾಗ ಪೂರ್ವದಿಂದ ಪಶ್ಚಿಮಕ್ಕೆ ಮುಖವಿರಿಸಿ ಏರುವಂತಿದ್ದರೆ ಸೂಕ್ತ. ಉತ್ತರದಿಂದ ದಕ್ಷಿಣ ದಿಕ್ಕಿಗೆ ಮುಖವಾಗುವಂತೆ ಇದ್ದರೂ ಸರಿಯೆ. ಈ ಅಂಶವನ್ನು ಪರಿಪಾಲಿಸಿದಲ್ಲಿ ಉತ್ತಮ ಅದೃಷ್ಟವು ಶೀಘ್ರವಾಗಿ ಒದಗಿಬರಲು ಅವಕಾಶವಾಗುತ್ತದೆ. ಮನೆಯ ಸೈಟಿನಲ್ಲಿ ಗುದ್ದಲಿ ಪೂಜೆ ಕೂಡ ಪ್ರಮುಖವಾದದ್ದು. ದಕ್ಷಿಣ ಹಾಗೆಯೇ ಪೂರ್ವ ದಿಕ್ಕುಗಳು ಈ ಸಂದರ್ಭದಲ್ಲಿ ಪ್ರಥಮವಾಗಿ ಅಗೆಯಬಾರದು. ಪೂರ್ವ ದಿಕ್ಕಿನಲ್ಲಿ ಅಗೆಯುವ ವಿಚಾರ ಕೈಗೊಂಡಾಗ ಉತ್ತರ ದಿಕ್ಕಿನಲ್ಲೂ ಅಗೆತ ಪ್ರಾರಂಭಿಸಬೇಕು. ಇದರಿಂದ ಮನೆಯ ಎಲ್ಲಾ ವಿಚಾರಗಳಲ್ಲೂ ತೊಂದರೆ ಇಲ್ಲದೆ ಸುಸೂತ್ರವಾಗಿ ಮುಂದುವರೆಯುತ್ತದೆ. ದಕ್ಷಿಣ ದಿಕ್ಕಿಗೆ ಪೂರಕವಾಗಿ ಹೊರಗಿನ ವರಾಂಡ ಕಟ್ಟುವ ನಿರ್ಣಯ ನಡೆಸಿದಲ್ಲಿ ಆಗ್ನೇಯ ದಿಕ್ಕಿನಲ್ಲಿ (ಪೂರ್ವ ದಕ್ಷಿ$ಣ ಮೂಲೆಯ ಭಾಗ) ಕೋಣೆ ಇದ್ದು ಉತ್ತರ ದಿಕ್ಕಿಗೆ ಮುಖ ಮಾಡಿದ ಬಾಗಿಲನ್ನು ಕೂಡಿಸಬೇಕು. ಮನೆಯ ಯಜಮಾನನ ಆರೋಗ್ಯ ಲವಲವಿಕೆ ಉತ್ಸಾಹಗಳಿಗೆ ಇದು ಉತ್ತಮ ವಿಚಾರವಾಗುತ್ತದೆ. ಮನೆಯ ಮುಂಬಾಗಿಲು ವಿಷಯದಲ್ಲಿ ಎಚ್ಚರವಿರಲಿ. ನೇರ ಮುಂಬಾಗಿಲ ಎದುರಲ್ಲಿ ಒಂದು ಕಟ್ಟೆಯನ್ನೋ ಗೋಡೆಯನ್ನೋ ನಿರ್ಮಿಸಕೂಡದು. ಇದರಿಂದ ಮನೆಯ ಒಳಗೆ ಆಗಮಿಸುವ ಉತ್ತಮ ಸ್ಪಂದನಗಳು, ಸೌಭಾಗ್ಯ ಅಂಶಗಳು ಬರುವ ಅದೃಷ್ಟಕ್ಕೆ ತಡೆ ನಿರ್ಮಿಸಿದಂತಾಗಿ ಬಿಡುತ್ತದೆ. ಹೀಗಾಗಿ ತಾನಾಗಿ ಬರುವ ಒಳ್ಳೆ, ಸೌಭಾಗ್ಯದ ವಿಚಾರಗಳನ್ನು ನಾವಾಗಿ ಗೋಡೆ ಅಥವಾ ಕಟ್ಟೆ ಕಟ್ಟಿ ತಡೆಯಲು ಹೋಗಬೇಡಿ. ಕಟ್ಟೆ ಇರುವುದನ್ನು ಬಯಸಿ, ಕಟ್ಟುವುದಾದಲ್ಲಿ ಮುಂಬಾಗಿಲ ಅಕ್ಕಪಕ್ಕ ಬರುವಂತೆ ಕಟ್ಟಿ. ಮುಂಬಾಗಿಲಿಗೆ ಯಾವರೀತಿ ತಡೆಯೂ ಆಗದಂತೆ ನೋಡಿಕೊಳ್ಳಿ. ಮನೆಯ ಸುರಕ್ಷಿತಗಾಗಿನ ಗೋಡೆಯೂ ಕೂಡ, ಇದ್ದರೂ, ಕಟ್ಟಲ್ಪಟ್ಟರೂ ಮುಂಬಾಗಿಲ ಉದ್ದ, ಅಡ್ಡ ಅಗಲಗಳಿಗೆ ಯಾವುದೇ ರೀತಿ ತೊಂದರೆ ಆಗದೇ ಇರುವಂತೆ ಇರಲಿ. ಈವಿಚಾರವನ್ನು ಮರೆಯದೇ ಗಮನ ಹರಿಸುವುದು ಸೂಕ್ತ. ಮನೆಯ ಸೊಗಸು ಹಾಗೂ ಭದ್ರತೆಯ ವಿಚಾರಗಳನ್ನು ಯಾವಾಗಲೂ ಮರೆಯಬಾರದು. ವಾಸ್ತು ಸಲಹೆ: ವಾಯುವ್ಯ ದಿಕ್ಕಿನಲ್ಲಿ ಲಕ್ಷ್ಮೀ ಓಡಾಟ ಸಲೀಸು ಶ್ರೀಮಂತಿಕೆಯ ಅಹಂಕಾರ ಎಂದು ನಾವು ಎಷ್ಟೇ ಮೂಗು ಮುರಿದರೂ, ಶ್ರೀಮಂತಿಕೆ ಒಂದು ದೇವರ ಕೃಪೆ. ಪಾಪ, ಪುಣ್ಯದ ವಿಚಾರ ಎಂಬುದನ್ನು ಪ್ರತ್ಯೇಕವಾಗಿ ವಿಶ್ಲೇಷಿಸೋಣ. ಆದರೆ ಸ್ತಯ ಮಾರ್ಗದಲ್ಲಿ ಕೂಡಿ ಬಂದ ಶ್ರೀಮಂತಿಕೆಗೆ ದಿವ್ಯದ ಬೆಳಕಿದೆ. ಹೀಗಾಗಿಯೇ ಶ್ರೀ ಮನ್ಮಹಾಲಕ್ಷ್ಮೀಯನ್ನು ಲೋಕದ ಏಕೈಕ ಬೆಳಕಿನ ಶಕ್ತಿ, ಬೆಳಕಿನ ಬೀಜ ಗರ್ಭವೇ ಮಹಾಲಕ್ಷ್ಮೀ ಎಂಬ ಮಾತಿದೆ ನಮ್ಮಲ್ಲಿ. ಹೀಗಾಗಿ ಮನೆಯ ವಾಯುವ್ಯ ದಿಕ್ಕಿನ ಮಹತ್ವ, ಸ್ವಚ್ಛತೆಯಿಂದ ಒಗ್ಗೂಡಿದ್ದರೆ ಸಂಪತ್ತಿಗೆ ಪ್ರೇರಕನಾದ ಚೈತನ್ಯ ಮನೆಯೊಡೆಯನಿಗೆ ನಿಶ್ಚಿತ. ಮನೆಯ ವ್ಯಾಪ್ತಿಗೆ ಸ್ಥಾವರ (ನಿಂತಲ್ಲಿಯೇ ನಿಂತ) ಸ್ಥಿತಿ ಒದಗಿದ್ದರೂ, ಅದು ತನ್ನೊಳಗಿನ ಜೀವಗಳನ್ನ ಚಲನಶೀಲತೆಗೆ ಒಳಪಡಿಸಿ ಚೈತನ್ಯದ ಸೆಲೆಯನ್ನು ತುಂಬಿ ತುಳುಕಿಸುವ ಕೆಲಸ ಮಾಡುತ್ತದೆ. ಯಾವುದೇ ಕೆಲಸದ ಬಗೆಗಿನ ಮೊದಲ ಹೆಜ್ಜೆ ನಿಮ್ಮ ಮನೆಯೊಳಗಿನಿಂದಲೇ ಪ್ರಾರಂಭಗೊಳ್ಳಬೇಕು. ಬಾಡಿಗೆ ಮನೆಯಾಗಿದ್ದರೂ ಸದ್ಯ ಅದು ನಿಮ್ಮದೇ ಮನೆ. ನಿಮ್ಮ ಉತ್ಸಾಹ, ನಿರಾಸೆ, ಅಸಹಾಯಕತೆ, ಕೇಕೆ, ಚಾತುರ್ಯ ಅದು ಒಟ್ಟಾಗಿ ಸೇರಿ ಮನೆಯ ಮೇಲೂ ಪ್ರಭಾವ ಬೀರುತ್ತದೆ. ಬೇಡವಾದುದನ್ನು ಹೊರತಳ್ಳಿ ಮನೆಯಲ್ಲಿನ ಕಿಟಕಿ ಬಾಗಿಲುಗಳೆಲ್ಲ ತೆರೆದಿರಲಿ. ಒಳಗಿನ ಗಾಳಿ ಹೊರಗೆ (ಇರುವ ಕಲ್ಮಷಗಳನ್ನು ಒಗ್ಗೂಡಿಸಿಕೊಂಡು) ಹೋಗಲು ಸಹಾಯಕವಾಗುತ್ತದೆ. ವಾಯುವ್ಯ ದಿಕ್ಕಿನ ಸ್ವಚ್ಛತೆ, ನೈರ್ಮಲ್ಯಗಳಿಂದ ಅಲ್ಲಿನ ಗಾಳಿ ಕಿಟಿಕಿ ಬಾಗಿಲುಗಳ ಮೂಲಕ ಮನೆಯೊಳಗೆ ಬರಲೂ ಸಹಾಯವಾಗುತ್ತದೆ. ಒಳ ಬರುವ ಹೊಸಗಳಿಗೆ ಲಕ್ಷ್ಮೀಯ ಕೃಪೆಯನ್ನು ಉದ್ದೀಪಿಸುವ ಸಿಗ್ನತೆ ಕೂಡಿಕೊಂಡಿರುತ್ತದೆ. ಧಾನ್ಯಕ್ಕೆ ಮನಸ್ಸನ್ನು ಸ್ಥೈರ್ಯಗೊಳಿಸುವ ಶಕ್ತಿ ಇದೆ. ಮನಸ್ಸು ಮತ್ತು ಸ್ವಚ್ಛ ಹೊಸಗಾಳಿ ಪರಸ್ಪರ ಬಂಧುಗಳಂತೆ ಒಂದು ಇನ್ನೊಂದನ್ನು ಶಕ್ತಿ ಸ್ಪಂದನಗಳೊಡನೆ ಸಕಾರಾತ್ಮಕಗೊಳಿಸುತ್ತದೆ. ಬೇಕಾದ ವಸ್ತುಗಳು ಮಾತ್ರ ಮನೆಯೊಳಗೆ ಇರಲಿ. ಬೇಡವಾದುದನ್ನು ನಿರ್ದಾಕ್ಷಿಣ್ಯವಾಗಿ ಹೊರತಳ್ಳಿ ಇಲ್ಲದಿದ್ದರೆ ಒಂದು ಸುಸಂಬದ್ಧ ಚಕ್ರಮಯ ಪ್ರಕೃತಿ ಹಾರಕ್ಕೆ ಧಕ್ಕೆ ಬರುತ್ತದೆ. ಜ್ಞಾನವೂ, ಸಂಪತ್ತು ಎರಡೂ ಹದವಾಗಿ ಸೇರಿಕೊಂಡಾಗ ಕುಟುಂಬ ಕ್ಷೇಮಕರವಾಗಿ ಇರುತ್ತದೆ. ಬಾಗಿಲುಗಳನ್ನೆಲ್ಲ ಹಾಕಿ ಒಳಗಿನ ಗಾಳಿ ಯನ್ನು ಹೊರ ಹೋಗದಂತೆ ಕಟ್ಟಿಡ ಬೇಡಿ. ಮನೆಯ ವಾಯುವ್ಯ ದಿಕ್ಕಿನಲ್ಲಿ ಒಂದೆಡೆಯಿಂದ ಶುದ್ಧ ಗಾಳಿ ಹರಿಯುವಂತಾದರೆ ಲಕ್ಷ್ಮೀಯ ಬರುವಿಕೆಗೆ ಹೆದ್ದಾರಿಯೊಂದನ್ನು ನಿರ್ಮಿಸಿದ ಸೌಭಾಗ್ಯ ನಿಮ್ಮದಾಗುತ್ತದೆ. ಶೌಚ ಗೃಹವಾಗಲೀ, ವಿಸರ್ಜನಾ ಘಟಕಗಳಾಗಲೀ ಅವು ಮುಚ್ಚಿರಬೇಕು. ಬಾಗಿಲು ತೆರೆದಿಡಬೇಡಿ. ಅದನ್ನು ಜಾಗೃತೆಯಿಂದ ಮುಚ್ಚಿ, ಮತ್ತೂಂದೆಡೆಯ ಪ್ರತ್ಯೇಕ ಕಿಟಕಿಯೋ, ಇನ್ನೇನೋ ಒಂದು ತೆರೆದ ಭಾಗದಿಂದ ಗಾಳಿ ಒಳಬರುವಂತಾಗುವುದು ಕ್ಷೇಮ. ಗಂಧದ ಪರಿಮಳ, ಹಾವಿನ ಪರಿಮಳ, ದೇವ ನೀಲಾಂಜನದೆದುರಿನ ಸುವಾಸನಾ ದ್ರವ್ಯಗಳ ಹಿತಮಿತವಾದ ಸುವಾಸನೆ ಪಸರಿಸಿದ್ದರೆ ಅದು ಮನೆಯ ಕ್ರಿಯಾಶೀಲತೆಗೆ, ಸಕಾರಾತ್ಮಕ ಸ್ಪಂದನಗಳಿಗೆ ಸಹಾಯಕಾರಿ. ಹಾಲಕ್ಷ್ಮೀಯು ಅನಿಲ ಸ್ವರೂಪದಲ್ಲಿಯೇ ಇದ್ದಾಳೆಂಬುದು ಅರ್ಥವಲ್ಲ. ವಾಯುವ್ಯ ದಿಕ್ಕಿನ ಪರಿಪಕ್ವ ನಿರ್ಮಲತೆ ಮನೆಯೊಳಗಿನ ಮನಸ್ಸುಗಳನ್ನು ಕಾಯಕದಿಂದ ಕೈಲಾಸ ನಿರ್ಮಿಸುವತ್ತ ಶಕ್ತಿಯುತಗೊಳಿಸುತ್ತದೆ. ಈ ನಿರ್ಮಾಣಕ್ಕಾಗಿನ ದ್ರವ್ಯ(ಲಕ್ಷ್ಮೀ)ವನ್ನು ಚೈತನ್ಯಪೂರ್ಣವಾಗಿ ಓಡಾಡಿಸುವ, ದಾಸರು ಹೇಳಿದಂತೆ ಮಜ್ಜಿಗೆಯೊಳಗಿನ ಬೆಣ್ಣೆಯಂತೆ ಭಾಗ್ಯವನ್ನು ಚಿಗುರಿಸಲು ಶಕ್ತಿಯುತ ಮನಸ್ಸುಗಳು ನಿಸ್ಸಂದೇಹವಾಗಿ ಗೆಲ್ಲುತ್ತವೆ. ಹೀಗಾಗಿ ನಿಮ್ಮ ಮನೆಯ ಒಳಗಿನ ಗಾಳಿ ಹಿತವೆನಿಸುವ ಗಾಳಿಯಾಗಿ, ಸ್ಫೂರ್ತಿಯಾಗಿ ತುಂಬಿಕೊಂಡಿರಲಿ. ಮನೆಯಲ್ಲಿ ಗಣೇಶ, ಲಕ್ಷ್ಮೀ, ಸರಸ್ವತಿ ಇರಬೇಕು... ಯಾವಾಗಲೂ ಮನೆಯಲ್ಲಿ ಗಣೇಶ, ಲಕ್ಷ್ಮೀ ಹಾಗೂ ಸರಸ್ವತಿಯರ ಫೋಟೋ ಒಂದು ಇರಲೇಬೇಕು. ಮುಖ್ಯವಾಗಿ ಪೂರೈಸಬೇಕಾದ ಕೆಲಸಗಳಿಗೆ ವಿಘ್ನಗಳು ಎದುರಾಗದಂತೆ ಗಣೇಶನ ಕೃಪೆ ಆವಶ್ಯಕವಾಗಿದೆ. ಹಾಗೆಯೇ ನಿರ್ವಿಘ್ನದಾಯಕವಾಗಿ ನಡೆಸುವ ಕೆಲಸಗಳಿಂದ ನಿರ್ವಿಘ್ನದಾಯಕವಾದ ನಿರಂತರವಾದ ಅರ್ಥ ವ್ಯವಸ್ಥೆ ಒಂದು ಸಂಪನ್ನತೆಗೆ ಸಾಗಬೇಕು. ಇದಕ್ಕೆ ಲಕ್ಷ್ಮೀ ಕಟಾಕ್ಷ ಬೇಕು. ಅದಕ್ಕಾಗಿ ಶ್ರೀ ಲಕ್ಷ್ಮೀ ಮನೆಯಲ್ಲಿ ಸ್ಥಿರಗೊಂಡಿರಬೇಕು. ಸ್ಥಿರಗೊಳ್ಳುವ ಆರ್ಥಿಕತೆ ಕೇವಲ ನಿರ್ವಿಘ್ನತೆಗಳು ಹಾಗೂ ಲಕ್ಷ್ಮೀ ಕಟಾಕ್ಷದಿಂದ ಒದಗಲಾರದು. ಒದಗಿದ ಆರ್ಥಿಕ ಸೌಲಭ್ಯ ಗಟ್ಟಿಯಾಗಿ ನೆಲೆಯೂರಲು ಉತ್ತಮ ಜ್ಞಾನ, ಚಾಣಾಕ್ಷತೆ ಪ್ರಬುದ್ಧತೆ ವ್ಯಾವಹಾರಿಕತೆಗಳ ಆವಶ್ಯಕತೆ ಇದ್ದೇ ಇದೆ. ಇಲ್ಲದಿದ್ದಲ್ಲಿ ಚಂಚಲೆಯಾದ ಲಕ್ಷ್ಮೀಯನ್ನು ದೋಚಿಕೊಂಡು ಹೋಗುವ ದುಷ್ಟರಿದ್ದಾರೆ. ಪ್ರಾಣಕ್ಕೂ ಕೂಡ ಅಪಾಯ ಕಟ್ಟಿಟ್ಟ ಬುತ್ತಿ. ಹೀಗಾಗಿ ಜ್ಞಾನವನ್ನು ಹೊಂದಬೇಕಾದರೆ ಸರಸ್ವತಿಯ ಕೃಪೆ ತುಂಬಾ ಆವಶ್ಯಕವಾಗಿದೆ. ಗಣೇಶನ ಆರಾಧನೆಯಿಂದಾಗಿ ಈತನ ತಂದೆ ತಾಯಿಯರಾದ ಶಿವ ಪಾರ್ವತಿಯರು ಪ್ರಸನ್ನಗೊಳ್ಳುತ್ತಾರೆ. ಶ್ರೀ ಲಕ್ಷ್ಮೀಯ ಪ್ರಸನ್ನತೆ ಇದ್ದಲ್ಲಿ ವಿಷ್ಣುವಿನ ಆಶೀರ್ವಾದ ಕಟ್ಟಿಟ್ಟ ಬುತ್ತಿ. ಸರಸ್ವತಿಯೇ ಪ್ರಜಾಪಿತನಾದ ಬ್ರಹ್ಮನ ಪತ್ನಿಯಾಗಿರುವುದರಿಂದ ಶ್ರೀವಾಣಿಯ ಕೃಪೆಯಿಂದಾಗಿ ಬ್ರಹ್ಮನ ಅನುಗ್ರಹ ಕೂಡ ಪ್ರಾಪ್ತಿಯಾಗುತ್ತದೆ. ಅನುಮಾನವೇ ಇಲ್ಲ. ಅಂತೂ ಗಣೇಶ ಲಕ್ಷ್ಮೀ ಸರಸ್ವತಿಯರಿಂದಾಗಿ ನಿರ್ವಿಘ್ನತೆ ಸಂಪತ್ತು ಹಾಗೂ ಜ್ಞಾನದ ಕೊಡಗಳು ತುಂಬಿರುತ್ತವೆೆ. ಬದುಕು ಹಸನಾಗಿರುತ್ತದೆ. ಸೃಷ್ಟಿ ಸ್ಥಿತಿ ಹಾಗೂ ಲಯಗಳಿಗೆ ಅಧಿಪತಿಗಳಾದ ಬ್ರಹ್ಮ ವಿಷ್ಣು ಮಹೇಶ್ವರರ ಕೃಪಾಶೀರ್ವಾದಗಳು ಕೂಡ ನಿಸ್ಸಂಶಯ ಆಸ್ತಿ. ಇದರಿಂದಾಗಿ ಮೂವತ್ಮೂರು ಕೋಟಿ ದೇವತೆಗಳ ರಕ್ಷಣಾತ್ಮಕ ನಿಲುವು ಅಷ್ಟ ದಿಗ್ಗಜಗಳು ಅಷ್ಟಾಂಗಗಳು, ಅಷ್ಟ ಸಿದ್ಧಿಗಳು ಅಷ್ಟ ಶೋಭೆಗಳು, ಅಷ್ಟ ಭೋಗಗಳು ಅಷ್ಟ ಮಂಗಲಾವೃತ ಸುಸ್ಥಿತಿಗಳು, ಅಷ್ಟ ದಿಕ್ಕುಗಳಿಂದ ಉತ್ತಮ ಫ‌ಲಗಳು, ಅಷ್ಟ ಐಶ್ವರ್ಯಗಳು, ಪ್ರಸನ್ನತೆ ತೇದಿಯೊಂದಿಗೆ ಒದಗಿಬರುತ್ತದೆ. ಇವನ್ನೆಲ್ಲ ಮುಖ್ಯವಾಗಿ ಗಮನಿಸಬೇಕು. ಒಟ್ಟಿನಲ್ಲಿ ಮೂಲಭೂತವಾದ ಪ್ರತಿ ಆಂಶಗಳು ಗಣೇಶ ಲಕ್ಷ್ಮೀ ಹಾಗೂ ಸರಸ್ವತಿಯರಿಂದಲೇ ಲಭ್ಯ. ನಮ್ಮ ಸಂಸ್ಕೃತಿಯು ನಿಯೋಜಿಸಿದ ಷೋಡಶ ಸಂಸ್ಕಾರಗಳು ಮೂಲಭೂತವಾಗಿ ನಿರ್ವಿಘ್ನತೆಯಿಂದ ಜ್ಞಾನಾರ್ಜನೆಯೊಡನೆ ಸಂಪತ್ತನ್ನು ಗಳಿಸಿ ಜೀವನ ಧರ್ಮವನ್ನು ರೂಪಿಸಿಕೊಂಡು ಹೋಗಲೆಂದೇ ಮುಖ್ಯವಾದ ಮಾನವೀಯತೆಯನ್ನು ಚಿನ್ನದಂತೆ ಪುಟಗೊಳಿಸುತ್ತದೆ. ದುರ್ಬುದ್ಧಿಗಳಿಂದ ರಕ್ಷಿಸುತ್ತದೆ. ಈ ಎಲ್ಲಾ ವಿಷಯಗಳನ್ನೂ ಗ್ರಹಿಸಿದಾಗ ಮನೆಯಲ್ಲಿ ಸಕಲ ಕಾರ್ಯ ಸಿದ್ಧಿಗೆ ಗಣೇಶ ಲಕ್ಷ್ಮೀ ಹಾಗೂ ಸರಸ್ವತಿಗಳ ದಿವ್ಯ ಉಪಸ್ಥಿತಿ ಸದಾ ಆತ್ಮ ಪರಿಶುದ್ಧತೆಗಳೊಡನೆ ವಸ್ತು ಸ್ಥಿತಿಯಾಗಿರಲಿ. ಮನೆಯಲ್ಲಿ ಸಾಕು ಪ್ರಾಣಿಗಳು ಎಲ್ಲಿರಬೇಕು? ಹಸುಗಳನ್ನು ನಿರ್ದಿಷ್ಟವಾದ ಸ್ಥಳದಲ್ಲಿ ಕಟ್ಟಿ ಹಾಲು, ಹೈನು ಇತ್ಯಾದಿಗಳಿಗಾಗಿ ಪ್ರತ್ಯೇಕ ಕೊಟ್ಟಿಗೆ ದೊಡ್ಡಿಗಳನ್ನು ರೂಪಿಸಿ, ಯುಕ್ತ, ಮುಕ್ತ ಸ್ಥಳಾವಕಾಶ ರೂಪಿಸಿದರೆ ಅದು ಒಳ್ಳೆಯದೇ ಆಗಿದೆ. ಈ ಕೊಟ್ಟಿಗೆಗಳು ದಕ್ಷಿಣ ದಿಕ್ಕಿನಲ್ಲಿ ಕಟ್ಟುವುದು ಸರಿ ಅಲ್ಲ. ಹಾಗೆಯೇ ಕುರಿ, ಕೋಳಿ, ಹಂದಿ ಸಾಕಣಿಕೆ ನಿಷಿದ್ಧವಲ್ಲ. ಆದರೆ ಪರಿಶುದ್ಧವಾದ ಪರಿಸರ ಕಾಪಾಡಲ್ಪಡಲಿ ಮನೆಯ ವಾಸ್ತುವಿಗೆ ಪಂಚ ಭೂತ ತತ್ವಾಧಾರಿತ ಬೆಳಕು, ಗಾಳಿ, ನೀರು, ಮಣ್ಣು ಹಾಗೂ ಆಕಾಶ ಧಾತುಗಳು ಪ್ರಾಮುಖ್ಯವಾದವು ಎಂಬದುನಾವೆಲ್ಲಾ ತಿಳಿದ ವಿಚಾರ. ಆದರೆ ಈ ಪಂಚ ಭೂತ ತತ್ವಗಳು ನಿರಂತರವಾಗಿ ಮಲಿನವಾಗಲೂ ತೊಡಗುತ್ತವೆ ಕ್ಷಿಪ್ರವಾಗಿ. ಹೀಗಾಗಿ ಈ ಪಂಚ ಭೂತಾತ್ಮಕ ಘಟಕಗಳು ಒಂದು ಸಾವಯವ ಚಕ್ರದ ನಿಯಂತ್ರಣಕ್ಕೆ ಒಳಗೊಂಡಾಗ ತಂತಾನೆ ಇವು ಅಶುದ್ಧತೆಯಿಂದ ಶುದ್ಧತೆಗೆ ಪರಿವರ್ತನೆಗೊಳ್ಳುತ್ತವೆ. ಮನುಷ್ಯ ಮಿದುಳಿನ ವಿಕಾಸದಿಂದಾಗಿ ಪರಿಸರವನ್ನು ಮಲಿನಗೊಳಿಸದ ಹಾಗೆ ಹೇಗೆ ರಕ್ಷಿಸಬೇಕೆಂಬುದನ್ನು ತಿಳಿದಿರುತ್ತಾನೆ. ಆದರೆ ಸಾಕು ಪ್ರಾಣಿಗಳಿಗೆ ಬುದ್ಧಿ ವಿಕಸನ ಇರುವುದಿಲ್ಲ. ತಮ್ಮನ್ನೇ ತಾವು ಶುದ್ಧಿಕರಿಸಿಕೊಳ್ಳುವ ವಿಚಾರದಲ್ಲಿ ಅವು ಹಿಂದೆ ಬೀಳುತ್ತವೆ. ಕಟ್ಟಿಕೊಂಡ ಮನೆಯಲ್ಲಿ ಸ್ವಾಭಾವಿಕವಾಗಿ ಅವು ಶುದಟಛಿವಾಗಿರಲು ಸಾಧ್ಯವಾಗದು. ಹೀಗಾಗಿ ಮನೆಯೊಳಗಡೆ ಪ್ರಾಣಿಗಳನ್ನು ಸಾಧ್ಯವಾದಷ್ಟು ದೂರವಿಡಲು ಪ್ರಯತ್ನಿಸಬೇಕು. ಕೆಲವರು ಸಾಕು ಪ್ರಾಣಿಗಳನ್ನು ತಮ್ಮ ಹಾಸಿಗೆಯ ಮೇಲೆ ಮಲಗಿಸಿಕೊಳ್ಳುವ,ಅವುಗಳೊಂದಿಗೆ ಆಟವಾಡುವ, ಮನೆಯಲ್ಲೇ ಒಂದೆಡೆ ಚೈನಿಗೆ ಕಟ್ಟಿ ಈ ಪ್ರಾಣಿಗಳ ಸ್ವಾತಂತ್ರ್ಯಕ್ಕೆ ಮೊಟಕು ಹಾಕುವ ಕಾಯಕವನ್ನ ನಿರಂತರವಾಗಿ ಮುಂದುವರಿಸಿಕೊಂಡು ಬರುತ್ತಾರೆ. ಹಲವರನ್ನು ಗಮನಿಸಿರಬಹುದು. ಎಲ್ಲೋ ಮನೆಯಿಂದ ಹೊರಗೆಳೆದು ತಂದು ಸಾರ್ವಜನಿಕ ಸ್ಥಳದಲ್ಲಿ (ಉದಾ-ನಾಯಿಗಳನ್ನು) ಕಕ್ಕಸು, ಮೂತ್ರ ಇತ್ಯಾದಿ ವಿಸರ್ಜನೆಗಳನ್ನು ನೆರವೇರಿಸುತ್ತಾರೆ. ಇದು ಸಾಕು ಪ್ರಾಣಿಗಳು ಬೇಕು, ಆದರೆ ಅವುಗಳ ಜವಾಬ್ದಾರಿಯುಕ್ತವಾಗಿ ನಡೆಸಬೇಕೆಂಬ ಯೋಚನೆಯಲ್ಲಿ ಇವರು ಇರಲಾರರು. ಹಾಗೆಂದು ಒಂದು ರೀತಿಯ ಪ್ರೀತಿ ಹಾಗೂ ವಾತ್ಸಲ್ಯವನ್ನ ಈ ಪ್ರಾಣಿಗಳ ಕುರಿತು ತೋರಿಸುತ್ತಾರೆ. ಆದರೂ ಸ್ವಾತಂತ್ರ್ಯ ಹರಣ ನಡೆದಿರುತ್ತದೆ. ಎಷ್ಟೋ ಮನೆಗಳಲ್ಲಿ ಗಿಣಿ, ಬಣ್ಣದ ಪಕ್ಷಿ, ಲವ್‌ ಬರ್ಡ್ಸ್‌ ಇತ್ಯಾದಿ ಸಾಕುತ್ತಾರೆ. ಆದರೆ ಈ ಮೂಕ ಜೀವಿಗಳನ್ನು ಬಂಧಿಸಿರುತ್ತಾರೆ. ಸ್ವತ್ಛಂದ ಹಾರಾಟಗಳಿಗೂ ತಡೆ ತರುತ್ತಾರೆ. ಇದು ಮನೆಯೊಳಗಿನ ಮೂಕ ರೋದನಕ್ಕೆ ಸಾಕ್ಷಿಯಾಗುತ್ತವೆ. ಜೀವಗಳು ಪರಿತಪಿಸುವ ವರ್ತಮಾನ ಮನೆಯಲ್ಲಿ ನಡೆಯುವುದು ಸಹಾ ಸರಿಯಾದುದಲ್ಲ. ತಿಳಿದಿರಲಿ.ಇನ್ನು ಹಸುಗಳನ್ನು ನಿರ್ದಿಷ್ಟವಾದ ಸ್ಥಳದಲ್ಲಿ ಕಟ್ಟಿ ಹಾಲು, ಹೈನು ಇತ್ಯಾದಿಗಳಿಗಾಗಿ ಪ್ರತ್ಯೇಕ ಕೊಟ್ಟಿಗೆ ದೊಡ್ಡಿಗಳನ್ನು ರೂಪಿಸಿ, ಯುಕ್ತ, ಮುಕ್ತಸ್ಥಳಾವಕಾಶ ರೂಪಿಸಿದರೆ ಅದು ಒಳ್ಳೆಯದೇ ಆಗಿದೆ. ಈ ಕೊಟ್ಟಿಗೆಗಳುದಕ್ಷಿಣ ದಿಕ್ಕಿನಲ್ಲಿ ಕಟ್ಟಲ್ಪಡುವುದು ಸರಿ ಅಲ್ಲ. ಹಾಗೆಯೇ ಕುರಿ, ಕೋಳಿ, ಹಂದಿಸಾಕಣಿಕೆಗಳು ನಿಷಿದಟಛಿವಲ್ಲ. ಆದರೆ ಪರಿಶುದ್ಧವಾದ ಪರಿಸರ ಕಾಪಾಡಲ್ಪಡಲಿ. ಜೀವೋ ಜೀವಸ್ಯ ಜೀವನಂ ಎಂಬ ಮಾತು ರೂಢಿಯಲ್ಲಿದೆ. ಜೀವಕ್ಕೆ ಜೀವವೇ ಆಹಾರವಾಗಿದೆ ವಿನಾ ಅನ್ಯ ಮಾರ್ಗಗಳಿಲ್ಲ. ಆದರೆ ಈ ಜೀವ ಜೀವದ ಆಹಾರದ ಬಗೆಗಿನ ಸಂಬಂಧ ಹಿಂಸಾ ಸ್ವರೂಪದ ಆವರಣಗಳನ್ನು ಸಾಧ್ಯವಾದಷ್ಟು ಕಡಿಮೆಯಾಗಿರುವಂತೆ ಜಾಗ್ರತೆವಹಿಸಬೇಕು. ಈ ಜಾಗ್ರತೆಯು ಅಜಾಗ್ರತೆಯಾದಲ್ಲಿ ಕೆಟ್ಟ ಪರಿಣಾಮಗಳಿಗೆ ದಾರಿಯಾಗದೇ ಇರದು. ಪ್ರಕೃತಿಗೆ ಬದುಕೂ ಬೇಕು. ನಾಶವೂ ಬೇಕು. ಅನಿವಾರ್ಯವಾಗುವ ಅಳತೆಯಲ್ಲಿ ನಾಶವಿದ್ದಾಗ, ಕ್ರೌರ್ಯಕ್ಕೆ ಸ್ಥಳವಿರದು. ಪೂರ್ತಿ ಕ್ರೌರ್ಯವೇ ತುಂಬಿ ಹೋದರೆ, ಜಗದ್ರಕ್ಷಕ ಸ್ವರೂಪಿಯಾದ ಪ್ರಕೃತಿ ಮುನಿಯದಿರಲಾರಳು. ಮಲಗುವ ಕೋಣೆಗಿರಲಿ ಸರಳ ಸಂಪನ್ನ ಗುಣ ಆಧುನಿಕ ಜೀವನ ಕ್ರಮ ವಿವಿಧ ಕಾರಣಗಳಿಂದಾಗಿ ಮನೆಯ ಯಜಮಾನ ವಿಶೇಷ ಹಾಗೂ ಜರೂರು ಕೆಲಸ ಕಾರ್ಯಗಳಿಗಾಗಿ ಮಲಗು ಕೋಣೆಯನ್ನು ಉಪಯೋಗಿಸುತ್ತಾನೆ. ಮನೆಯಲ್ಲಿ ಪ್ರತ್ಯೇಕ ಕಚೇರಿ ಎಂಬ ಒಂದು ಸ್ಥಳವನ್ನು ರೂಪಿಸಿ ಕೊಳ್ಳುವುದು ತುಂಬಾ ಕಷ್ಟದ ಕೆಲಸ. ವಿರಾಮಕ್ಕೆ, ನಿದ್ದೆಗೆ ಉಪಯೋಗಿಸುವುದಲ್ಲದೇ, ಮನೆಯಲ್ಲೇ ಪೂರೈಸಬೇಕಾದ ತನ್ನ ಹೊರ ವಹಿವಾಟುಗಳ ಮುಂಚಿನ ತಯಾರಿಗಳು ಬೆಡ್‌ ರೂಮಿನಲ್ಲೇ ಅವುಗಳ ಆವರಣಗಳನ್ನ ಯಜಮಾನ ನಿಯೋಜಿಸುತ್ತಾನೆ. ಹೀಗಾಗಿ ಬೆಡ್‌ರೂಂ ಸಂಯೋಜನೆ ಈ ಎಲ್ಲಾ ನಿಟ್ಟಿನಿಂದ ಸೂಕ್ತ ರೂಪವನ್ನು ವಾಸ್ತು ದೃಷ್ಟಿಯಿಂದ ಪಡೆಯಲೇ ಬೇಕಾದ್ದು ಅನಿವಾರ್ಯವಾಗಿದೆ. ಜೀವನದ ಶೈಲಿಯಲ್ಲಿನ ಶಾಂತಿ, ನೆಮ್ಮದಿಗೆ ಬೆಡ್‌ರೂಮ್‌ ಪ್ರಧಾನವಾಗಿದೆ. ಶಾಂತಿ, ನೆಮ್ಮದಿಯ ವಿಚಾರದಲ್ಲಿ ಏರುಪೇರುಗಳಾದ ಬೆಡ್‌ ರೂಮ್‌ ವಿನ್ಯಾಸಕ್ಕೆ ಕೆಲವು ಚಾಲನೆಗಳನ್ನು ನೀಡಲೇಬೇಕು. ಮಲಗುವ ಕೋಣೆಯ ಕಿಟಕಿಗಳ ಸ್ವರೂಪ, ಬಾಗಿಲು, ಕನ್ನಡಿಗಳ ಹೊಂದಾಣಿಕೆಯಲ್ಲಿ, ಗೋಡೆಗಳ ಬಣ್ಣ, ಅಲಂಕಾರಕ್ಕಾಗಿ ಇರಿಸಲ್ಪಟ್ಟ ಚಿತ್ರಗಳು, ಅಂದ ಹೆಚ್ಚಿಸುವ ಕೆತ್ತನೆಗಳಲ್ಲಿ ಯಾವಾ ಯಾವ ಚಿತ್ರಗಳು ಮೂಡಿವೆ ಎಂಬಿತ್ಯಾದಿ ಅಂಶಗಳತ್ತ ಗಮನಹರಿಸಿ. ಮಲಗುವ ಕೋಣೆಯಲ್ಲೇ ದೇವರ ಪೀಠ, ಪೂಜಾ ಸ್ಥಳ ಒಳಗೊಳ್ಳಕೂಡದು. ಕಸ, ತ್ಯಾಜ್ಯಗಳು ಬೆಡ್‌ರೂಮಿನಲ್ಲಿ ಪೇರಿಸಲ್ಪಡುವ ಅಂಶವನ್ನ ಸರಿಪಡಿಸಿ. ನಿಮ್ಮ ಜನ್ಮ ಕುಂಡಲಿಯ ಆಧಾರದಲ್ಲಿ ಬಹು ಮುಖ್ಯವಾದ ವರ್ಣಗಳನ್ನು ಗೋಡೆಯ ಬಣ್ಣಗಳ ವಿಷಯದಲ್ಲಿ ಆಯ್ಕೆ ಮಾಡಿಕೊಳ್ಳಿ. ಜೀವನದ ಸುಗಮತೆಗೂ, ಹಗಲಿನ ಆಕಾಶದ ನೀಲ ಛಾಯೆಗೂ ಒಂದು ಸುಸಂಬದ್ಧ ಹೊಂದಾಣಿಕೆ ಇರುವುದರಿಂದ ಆಕಾಶ ನೀಲಿಯು ಮಲಗುವ ಕೋಣೆಗೆ ಸೂಕ್ತವಾದ ಬಣ್ಣ ಬಹುತೇಕವಾಗಿ ಮನುಷ್ಯನ ಮನಸ್ಸಿನ ಮೂಲೆಯ ಬುದ್ಧಿ ಚೇತನವನ್ನು ಸ್ಪಂದಿಸಲಾರದು ಕಪ್ಪು ಬಣ್ಣವನ್ನು ಮಲಗುವ ಮಂಚದೆದುರಿಗೆ ದೃಷ್ಟಿಗೆ ಬೀಳುವಂತೆ ಇರದಿರುವಂತೆ ನೋಡಿಕೊಳ್ಳಿ. ಕಿಟಕಿಗಳನ್ನು ತೆರೆದಾಗ, ಮುಚ್ಚಿದಾಗ ಯಾವ ಕಾಲದಲ್ಲಿ ಯಾವುದು ಸೂಕ್ತ ಎಂಬುದನ್ನರಿತು. ಎಷ್ಟೆಷ್ಟು ಹೊರಗಿನ ಗಾಳಿ ಒಳಗೆ ಬರುತ್ತಿರಬೇಕು ಎಂಬುದನ್ನು ನಿರ್ಧರಿಸಿ. ಆ ರೀತಿಯಲ್ಲಿ ಕಿಟಕಿಗಳನ್ನು ತೆರೆಯುವ, ಮುಚ್ಚುವ ವ್ಯವಸ್ಥೆ ಇರಲಿ. ಗಾಳಿ ಜೋರಾಗಿ ಬಂದಾಗ ಡಬ್‌ ಎಂದು ಕಿಟಿಕಿಗಳು ಬಡಿದು ಕೊಳ್ಳುವಂತೆ ಇರಲಿ. ಕಿಟಕಿಗಳಿಗೆ ಉಜ್ಜಿದ ಹುರುಬುರುಕು ಗಾಜು ಇರಲಿ. ಪೂರ್ತಿ ಪಾರದರ್ಶಕವಾದ ಗಾಜುಗಳು ಬೇಡ. ನೀಲಿ, ಕೇಸರಿ, ಚಾಕಲೇಟ್‌, ಹಸಿರು ಬಣ್ಣಗಳ ಚಿತ್ತಾರದ ಡೊಂಕು ಗೆರೆಗಳು ಗಾಜುಗಳ ಮೇಲೆ ಉಬ್ಬಿದ ಸ್ವರೂಪದಲ್ಲಿ ಮೂಡಿರುವುದು ಸೂಕ್ತ. ಪ್ರಖರ ಬೆಳಕು ರಾಚದಿರಲಿ ಬೆಡ್‌ರೂಮಿನಲ್ಲಿ. ಮಂದ ಸ್ವರೂಪದಿಂದ, ಓದಲು ಖುಷಿ ಇರುವಷ್ಟೇ ಬೆಳಕಿದ್ದರೆ ಉತ್ತಮ. ಮಲಗುವ ಮಂಚದ ನೇರ ಎತ್ತರಕ್ಕೆ ದೀಪದ ಗೊಂಚಲು ತೂಗಿಕೊಂಡಿರುವುದು ಬೇಡ. ಭಾರವಾದ ಕಬ್ಬಿಣದ ತೊಲೆಗಳು ಮಲಗುವ ಸ್ಥಳದ ನೇರಕ್ಕೆ ಛಾವಣಿಗೆ ಬೇಡ. ಹಾಗೆಯೇ ತಲೆ ದಿಂಬುಗಳ ಕಡೆಗೆ ಒರಟು ವಸ್ತುಗಳನ್ನು ಇಡಬೇಡಿ. ಮಂಚದ ಅವಶ್ಯಕತೆ ಮಲಗುವುದಕ್ಕೆ ಮಾತ್ರ ಸೀಮಿತವಿರಲಿ. ಎಲ್ಲಾ ದಿಕ್ಕುಗಳಿಂದ ಮಂಚವನ್ನು ತಲುಪುವ ಹಾಗೆ ಅಂತರ ಇರಲಿ. ಒಂದು ಕಡೆ ಇಳಿ ಜಾರಿರುವಂತೆ ಮಲಗುವ ಕೋಣೆಯ ಛಾವಣಿಯ ವಿನ್ಯಾಸವನ್ನು ರೂಪಿಸಬೇಡಿ. ತಲೆಯ ಕಡೆಯಿಂದ ತುಸು ದೂರಕ್ಕೆ ಇಳಿ ಬಿಟ್ಟ ಫ್ಯಾನ್‌ಗಳಿರಲಿ. ಕಿಟಕಿಗಳ ಒಮ್ಮೆಗೇ ತೀರಾ ಹತ್ತಿರಕ್ಕೆ ಮಲಗುವ ಮಂಚ ಇರದಿರಲಿ. ಅಂತೂ ಮಲಗುವ ರೂಮು ನಿಮ್ಮ ದಿವ್ಯವಾದ ದಿನವೊಂದನ್ನು ಮುಗಿಸಿ ಮಗದೊಂದು ದಿವ್ಯತೆಯನ್ನು ಸ್ವಾಗತಿಸುವ ವರ್ತಮಾನಕ್ಕೆ ಹೊಂದಿಕೊಳ್ಳುವಂತೆ ಶುಚಿಯಾಗಿರಲಿ. ಅಕ್ವೇರಿಯಂ, ಸಾಕು ಹಕ್ಕಿಗಳು ಮನೆಯಲ್ಲಿ ಇರಬಹುದೇ? ಯಾವುದೇ ಕಾರಣಕ್ಕೂ ಮೀನಿನ ತೊಟ್ಟಿಯನ್ನು ಅಥವಾ ಮೀನಿರುವ ನೀರಿನ ಬಟ್ಟಲು, ಗಾಜಿನ ಗಿಂಡಿಗಳನ್ನು ಮಲಗುವ ಕೋಣೆಯಲ್ಲಿ ಮಾತ್ರ ಇಟ್ಟುಕೊಳ್ಳಬೇಡಿ. ಮಲಗುವ ಕೋಣೆಯಲ್ಲಿ ಎಡಬಿಡದೆ ಓಡಾಡುತ್ತಾ, ಗಾಜಿನ ಗೋಡೆಗೆ ಮೂತಿ ಬಡಿದುಕೊಳ್ಳುತ್ತ ದಿಕ್ಕು ತಪ್ಪುವ ಮೀನುಗಳು ಮಲಗಿದ ಮಂದಿಯ ಸ್ವಾಸ್ಥ್ಯಕ್ಕೆ ಶುಭ ಲಕ್ಷಣವಾಗುವುದಿಲ್ಲ. ಮನೆಯ ಸೊಬಗಿದೆ ಎಂದು ನಾವು ಅಕ್ವೇರಿಯಂ ಅಥವಾ ಗಿಣಿ, ಪಾರಿವಾಳ, ನವಿಲು ಗುಬ್ಬಿ ಇತ್ಯಾದಿ ಹಕ್ಕಿಗಳನ್ನು, ಲವ್‌ ಬರ್ಡ್ಸ್‌ ಗಳಂಥ ಬಣ್ಣದ ಮೈ ಹೊದಿಕೆಯ ಹಕ್ಕಿಗಳನ್ನುಇಟ್ಟು ಆರೈಕೆ ಮಾಡುವುದನ್ನು ಗಮನಿಸುತ್ತೇವೆ. ಅಕ್ವೇರಿಯಂ ಇಟ್ಟು ಬಣ್ಣಬಣ್ಣದ ಅವುಗಳ ಹೊರ ಮೈ ಮಿಂಚಲ್ಲಿ ತೆವಳುತ್ತಾ, ಈಜುತ್ತಾ ತಾವು ಹೊರಬರಲಾರದ ಗಾಜಿನ ಗೋಡೆಗಳಿಗೆ ಢೀ ಕೊಡುತ್ತ, ಮೂತಿ ಬಡಿಯುತ್ತ, ಮೂತಿ ಉರುಟುರುಟಾಗಿಸುತ್ತಾ ಓಡಾಡುವ ಮೀನುಗಳು ಕಣ್ಣಿಗೆ ಆಹ್ಲಾದವನ್ನು ಕೊಡುತ್ತವೆಂಬುದನ್ನು ಆನಂದಿಸುತ್ತೇವೆ. ಆದರೆ ಯಾವುದೇ ಕಾರಣಕ್ಕೂ ಮೀನಿನ ತೊಟ್ಟಿಯನ್ನು ಅಥವಾ ಮೀನಿರುವ ನೀರಿನ ಬಟ್ಟಲು, ಗಾಜಿನ ಗಿಂಡಿಗಳನ್ನು ಮಲಗುವ ಕೋಣೆಯಲ್ಲಿ ಮಾತ್ರ ಇಟ್ಟುಕೊಳ್ಳಬೇಡಿ. ಮಲಗುವ ಕೋಣೆಯಲ್ಲಿ ಎಡಬಿಡದೆ ಓಡಾಡುತ್ತಾ, ಗಾಜಿನ ಗೋಡೆಗೆ ಮೂತಿ ಬಡಿದುಕೊಳ್ಳುತ್ತ ದಿಕ್ಕು ತಪ್ಪುವ ಮೀನುಗಳು ಮಲಗಿದ ಮಂದಿಯ ಸ್ವಾಸ್ಥ್ಯಕ್ಕೆ ಶುಭ ಲಕ್ಷಣವಾಗುವುದಿಲ್ಲ. ಜೊತೆಗೆ ಮಲಗುವ ಕೋಣೆಯಲ್ಲಿ ನೀರನ್ನು ತುಂಬಿಕೊಂಡ ಯಾವುದೇ ಪಾತ್ರೆಗಳು, ತೊಟ್ಟಿಗಳು, ಜಾಡಿಗಳು, ಗಿಂಡಿಗಳು ಅಶುಭಸೂಚಕವಾಗಿದೆ. ಇದಕ್ಕೆ ಕಾರಣ ಮಲಗಿರುವ ಸಂದರ್ಭದ ಸುಪ್ತಾವಸ್ಥೆಗೂ ನೀರಿನ ಕಾರಣವಾದ ಜಲತತ್ವಕ್ಕೂ ಒಂದು ಇನ್ನೊಂದನ್ನು ಭೇದಿಸಿ ಅಶುಭ ಸ್ಪಂದನಗಳನ್ನು ಮನೆಯ ಯಜಮಾನನಿಗೆ ತಂದಿಡುವ ಅಂಶಗಳಾಗಿವೆ. ಅಕ್ವೇರಿಯಂ ಜಾಡಿಯನ್ನು ಹೊರ ದಿವಾನಖಾನೆಯಲ್ಲಿ ಇರಿಸಬಹುದು. ಹೊಸದಾಗಿ ಮದುವೆಯಾದ ದಂಪತಿಗೆ ಕೂಡಾ ಈ ರೀತಿಯ ಅಕ್ವೇರಿಯಂ ಜೋಡಣೆ ಉತ್ತಮ. ಮದುವೆಯಾಗಬೇಕಾದ ದಾಂಪತ್ಯ ಆಕಾಂಕ್ಷಿಗಳಿಗೂ ಇದು ಒಳ್ಳೆಯದು. ಹೀಗಿರುವ ಅಕ್ವೇರಿಯಂನಲ್ಲಿ ಕಡುಗಪ್ಪು ಪೂರ್ತಿಯಾಗಿ ಮೈಬಣ್ಣವಾಗಿರುವ ಮೀನುಗಳಿರದಂತೆ ನೋಡಿಕೊಳ್ಳಿ. ಬಂಗಾರದ ಬಣ್ಣ, ನಸು ನೀಲಿ, ನಸುಗೆಂಪು, ಬಿಳಿಕಪ್ಪುಗಳು ಪಟ್ಟೆಯಾದ ಮೀನುಗಳು ಆಲೆಯಾಕಾರದ ವಜ್ರದ ಸ್ವರೂಪದಲ್ಲಿರುವ ಮೀನುಗಳು ಅತ್ಯುತ್ಸಾಹದಿಂದ ಪುಟಿಯುವಂತೆ, ಕತ್ತು, ಮೂತಿ ಕೊಂಕಿಸುತ್ತಾ ಓಡಾಡುತ್ತಿರಲಿ. ಸೂರ್ಯ ಬರುವ ಮುನ್ನ ಆಹಾರವನ್ನು ಹಾಕುವ ಪದ್ಧತಿ ಮಾಡಬೇಡಿ. ಮುಂಜಾನ ಸೂರ್ಯ ಬಂದಾಗಲೇ ಆಹಾರದ ಗೋಲಿಗಳು ಅಕ್ವೇರಿಯಂ ಒಳಗೆ ಮೀನುಗಳಿಗೆ ನೀಡುವ ಅಭ್ಯಾಸ ನೆರವೇರಲಿ. ಒಳಗಿನ ನೀರು ನಸು ನೀಲಿಯನ್ನು ಹಳದಿ ಛಾಯೆಯ ಬೆಳಕಲ್ಲಿ ಹೊಂದುವಂತೆ ಪ್ರತಿಫ‌ಲಿಸುವಂತಾಗಲಿ. ಹೊರಸೂಸುವಂಥ ರೀತಿಯಲ್ಲಿ ಇರಲಿ. ಇದರಿಂದ ಮನೆಯೊಳಗೆ ಪರಸ್ಪರರನ್ನು ಅರಿಯುವ ನಿಟ್ಟಿನ ವಿಚಾರದಲ್ಲಿ ಒಂದು ಆದ್ರìತೆ ನಿರ್ಮಾಣಗೊಳ್ಳಲು ಸಹಾಯವಾಗುತ್ತದೆ. ಇನ್ನು ಹಕ್ಕಿಗಳ ವಿಷಯಕ್ಕೆ ಬಂದಾಗ, ಬಂಧನಕ್ಕೆ ತಳ್ಳಿಕೊಂಡ ಹಕ್ಕಿಗಳು ಮನೆಯೊಳಗಡೆ ಇರಲೇ ಬಾರದು. ಗುಬ್ಬಿಗಳ ವಿಷಯದಲ್ಲಿ ಬಂಧನವೆಂಬುದು ನಿರ್ಮಾಣವಾಗದಿದ್ದರೂ ಹಾರಾಡಿಕೊಂಡಿರುವ ಗುಬ್ಬಿಗಳು ಕೂಡಾ ಮನೆಯಲ್ಲಿ ಗೂಡು ಕಟ್ಟದಿದ್ದರೆ ಒಳ್ಳೆಯದು. ಯಾಕೆಂದರೆ ಗುಬ್ಬಿಗಳು ತಮ್ಮ ಆಹಾರವಾದ ಕೀಟಗಳನ್ನು ಮನೆಯೊಳಗೆ ತಂದುಕೊಂದು ತಿನ್ನುವ ಅದರ ಭೋಜನ ವಿಶೇಷ ಸಂಭವಿಸಕೂಡದು. ಗುಬ್ಬಿಗಳನ್ನು ಈ ವಿಷಯದಲ್ಲಿ ಮನುಷ್ಯ ಪ್ರಯತ್ನಗಳೊಡನೆ ಈ ನೆಲೆಯಲ್ಲಿ ನಿಯಂತ್ರಿಸಲಾಗದು. ಈ ಕಾರಣದಿಂದಾಗಿ ಗುಬ್ಬಿಗಳು ಮನೆಯೊಳಗಡೆ ನಿಷಿದ್ಧವೇ ಆಗಿವೆ. ಉಳಿದಂತೆ ಗಿಣಿ ಲವ್‌ , ಬರ್ಡ್ಸ್‌ ಪಾರಿವಾಳಗಳು ಸಹಾ ಮನೆಯೊಳಗೆ ನಿಷಿದ್ಧವೇ ಆಗಿವೆ. ಇವು ಮನೆಯೊಳಗೆ ತನ್ನಿಂತಾನೆ ವಸತಿ ನಿರ್ಮಿಸಿಕೊಳ್ಳುವುದು ಬೇಡ. ಜೊತೆಗೆ ಪಂಜರವೊಂದನ್ನು ನಿರ್ಮಿಸಿ ರೆಕ್ಕೆಗಳನ್ನು ಸಂಯೋಜಿಸಿಕೊಂಡ ಇವುಗಳಅಸಹಾಯಕ ಸೆರೆವಾಸವೂ ಬೇಡ. -ಸಂಗ್ರಹ

Wednesday, 13 February 2019

ದಾಂಪತ್ಯದಲ್ಲಿ ಅಡೆತಡೆಗಳ ನಿವಾರಣೆಗಾಗಿ ಜ್ಯೋತಿಷ್ಯದಲ್ಲಿನ ಪರಿಹಾರೋಪಾಯಗಳು

ದಾಂಪತ್ಯದಲ್ಲಿ ಅಡೆತಡೆಗಳ ನಿವಾರಣೆಗಾಗಿ ಜ್ಯೋತಿಷ್ಯದಲ್ಲಿನ ಪರಿಹಾರೋಪಾಯಗಳು ಸ್ವರ್ಗದಲ್ಲಿ ಮದುವೆ ನಿಶ್ಚಯವಾಗಿರುತ್ತವೆ ಎಂದು ಹೇಳುತ್ತಾರೆ ನಂಬಬಹುದು.ಆದರೆ ಕಲಹವನ್ನು ಅಲ್ಲಿಂದಲೇ ತಂದಿರುತ್ತಾರೋ ಏನೋ ಎಂದು ಒಂದೋಂದುಸಲ ಅನ್ನಿಸುತ್ತದೆ.ಸುಕಕರವಾದ ದಾಂಪತ್ಯ ಜೀವನ ಯಾರದಾಗಿರುತ್ತದೋ ಅವರೇ ಪುಣ್ಯವಂತರು.ಅಲವಾರು ಸಂಸಾರಗಳಲ್ಲಿ ಪತಿ ಹೊಂದಾಣಿಕೆಯಿದ್ದರೆ ಸತಿ ಇರುವುದಿಲ್ಲ.ಸತಿ ಇದ್ದಲ್ಲಿ ಪತಿ ಇರುವುದಿಲ್ಲ. ಸತಿ-ಪತಿಯಲ್ಲಿ ಯಾವುದಾದರು ವಿಚಾರಕ್ಕೆ ಜಗಳವಿಲ್ಲದೆ ದಿನವೊಂದು ಕಳೆದರೆ ಅದರಂಥ ಶುಭ ದಿನವೇ ಇನ್ನೊಂದಿಲ್ಲ ಎನ್ನಬೇಕಾಗುತ್ತದೆ. ಸತಿ-ಪತಿಯರಲ್ಲಿ ಚಿಕ್ಕಪುಟ್ಟ ಮಾತುಗಳಿಗು ಜಗಳವಾಗಬುದು.ಗಂಡ ಹೆಂಡಿರ ಜಗಳ ಉಂಡುಮಲಗುವತನಕ ಇದ್ದರೆ ಚೆಂದ ಜಗಳ ವಿಕೋಪಕ್ಕೆ ಹೋದರೆ ಸಂಸಾರಜೀವನ ಅಧೋಗತಿ. ಸಾಮಾನ್ಯವಾಗಿ ಸತಿ-ಪತಿಗಳಲ್ಲಿ ಉಂಟಾಗುವ ಸಮಸ್ಯೆಗಳು ಮತ್ತು ಅವುಗಳಿಗೆ ಪರಿಹಾರಗಳನ್ನು ಇಲ್ಲಿ ಸೂಚಿಸಲಾಗಿದೆ ಓದುಗರು ತಮಗೆ ಆಗಬಹುದಾದ ತೊಂದರೆಯಾನುಸಾರ ಯತಾಶಕ್ತಿ ಸೂಚಿಸಿದಂತೆ ಪರಿಹಾರಮಾಡಿಕೊಂಡರೆ ತಾವು ನೆಮ್ಮದಿಯ ಜೀವನಮಾಡಬಹುದು. ೧.ಗಂಡ ಶ್ರೀರಾಮನಂತಿದ್ದರೂ ಹೆಂಡತಿ ಆತನನ್ನು ಅನುಮಾನದಿಂದನೋಡುವುದು.ಮನೆಗೆ ಬಂದರೆ ಆತನಿಗೆ ಮನೆ ನರಕವೆಂದೆನಿಸುದು,ಹಾಸಿಗೆ ಮುಳ್ಳಿನಂತಾಗುವುದು.ಜೀವನವೇ ಬೇಸರವೆನಿಸುವುದು. ಪರಿಹಾರ:-ಪತಿಯು ೯ ಶುಕ್ರವಾರ ಹಸುವಿಗೆ ಹಸಿಹುಲ್ಲನ್ನು ತಿನ್ನಿಸುವುದು. ೨.ಪತಿ ಸಮಾದಾನಿಯಿದ್ದರೂ ಪತ್ನಿಗೆ ತಾಳ್ಮೆ ಇರುವುದಿಲ್ಲ ಪ್ರತಿಮಾತಿಗು ಜಗಳ ಪತಿಯು ತನ್ನ ಪತ್ನಿಗೆ ಹೆದರುವಂತ ಪರಿಸ್ಥಿತಿ ಇದ್ದರೆ. ಪರಿಹಾರ:-ಪತಿಯು ಯಾವುದೇ ಸೋಮವಾರ ಹೆಂಡತಿಗೆ ಬಿಳಿ ವಸ್ತ್ರ,ವಡವೆ,ಬಳೆ ಇತ್ಯಾದಿಗಳನ್ನು ಕೊಡಿಸಬೇಕು. ೩.ಗಂಡ ಹೆಂಡತಿ ಇಬ್ಬರೂ ಯಾವಾಗಲೂ ಜಗಳ ಆಡುವುದಿಲ್ಲ ಮುನಿಸಿಕೊಳ್ಳುವುದಿಲ್ಲ ಆದರೂ ಇಬ್ಬರಲ್ಲು ಬಿನ್ನಾಬಿಪ್ರಾಯ ಉಂಟಾಗಿ ಇಬ್ಬರು ಮಾತಾಡುವುದನ್ನು ನಿಲ್ಲಿಸಿರುತ್ತಾರೆ ಮಲಗಿದಾಗ ಇಬ್ಬರ ಮುಖಗಳು ಪರಸ್ಪರ ವಿರುದ್ದದಿಕ್ಕಿನತ್ತ ತಿರುಗುತ್ತವೆ. ಪರಿಹಾರ: ಬಿಳಿವಸ್ತುವೊಂದರಲ್ಲಿ ಹಿಡಿಯಷ್ಟು ಗೋಧಿ,ಉಪ್ಪು,ಬೆಲ್ಲ,ಮತ್ತು ಬೆಳ್ಳಿಯ ೨ ನಾಣ್ಯಗಳನ್ನು ಸೇರಿಸಿ ಮಲಗುವ ಕೋಣೆಯಲ್ಲಿ ಕಟ್ಟಿಡಬೇಕು,ಕೋಪ,ತಾಪ.ಮುನಿಸು ದೂರ ಸರಿಯುತ್ತವೆ. ೪.ದಾಂಪತ್ಯ ಜೀವನದಲ್ಲಿ ಸುಖವೆಂಬುದೇ ಇಲ್ಲ ದಂಪತಿಗಳು ವಿರೋಧ ಸಾದಿಸುತ್ತಾರೆ ಪರಸ್ಪರ ಕಂಡರು ಆಗದು.ಹಾವುಮುಂಗುಸಿಯಂತೆ ವರ್ತಿಸುತ್ತಾರೆ. ಪರಿಹಾರ:ಶಿವ-ಪಾರ್ವತಿ,ಗಣೇಶ ಇರುವ ಪ್ರತಿಮೆ ಅಥವ ಭಾವಚಿತ್ರಕ್ಕೆ ಪ್ರತಿ ಸೋಮವಾರ ಬಿಲ್ವಪತ್ರೆ ಏರಿಸಿ ಪೂಜಿಸುವುದರಿಂದ ದಾಂಪತ್ಯಜೀವನದಲ್ಲಿನ ತೊಡಕು ನಿವಾರಣೆಯಾಗಿ ಸಂತೋಷಕರವಾಗುತ್ತದೆ. ೫.ಬಿರು ಅಥವ ಕಟುನುಡಿ ಯಾರಿಗೂ ಒಳಿತಲ್ಲ ಮಡದಿ ಪೇಟೆಯಲ್ಲಿ ಕೊಂಡುತಂದ ವಸ್ತುವಲ್ಲ ಹೆಂಡತಿಯನ್ನು ಕೀಳಾಗಿ ಕಾಣುವುದು ಮನುಷ್ಯತ್ವವಲ್ಲ ಹೆಂಡತಿಯಾದವಳಿಗೆ ಇದು ಒಂದು ರೀತಿಯ ಮುಜುಗರವನ್ನು ಉಂಟುಮಾಡುತ್ತದೆ. ಪರಿಹಾರ:ಮಡದಿಯಾದವಳು ಯಾವುದೇ ಬುದವಾರ ದಿಂದ ಆರಂಭಿಸಿ ಮುಂದಿನ ಬುಧವಾರದ ವರೆಗೆ ಒಂದೊತ್ತು ಉಪವಾಸವಿದ್ದು ಮೌನವ್ರತ ಆಚರಿಸಿದರೆ ಈ ಸಮಸ್ಯೆಯಿಂದ ಬಿಡುಗಡೆ ಹೊಂದಬಹುದು. ೬.ಚಿಕ್ಕ ಪುಟ್ಟ ಮಾತಿಗೆ ದಂಪತಿಗಳಲ್ಲಿ ವಿರಸ ಉಂಟಾಗಿರಬಹುದು ಬಹುಕಾಲದವರೆಗೂ ಮಾತು ನಿಲ್ಲಬಹುದು.ಪರಸ್ಪರ ಒಬ್ಬರಿಗೊಬ್ಬರು ತಾನಾಗಿಯೇ ಮಾತಾಡಲಿ ಅಂತ ಮಾತು ಬಿಟ್ಟಿರುತಾರೆ.ನಾಲಿಗೆ ತುದಿವರೆಗೂ ಮಾತು ಬಂದರು ತಾನೇಕೆ ಮಾತಾಡಲಿ ಎಂಬ ಯೋಚನೆ ಬರುತ್ತಿರುತ್ತದೆ. ಪರಿಹಾರ: ೧) ೧೦೮ ಭುಜಪತ್ರೆಗಳನ್ನು ತಗೆದುಕೊಂಡು ಅದರೊಂದಿಗೆ ಜೇನುಡಬ್ಬವನ್ನು ತಗೆದುಕೊಂಡು ಹರಿಯುವನೀರಿನಬಳಿ ಬಂದು ಇಬ್ಬರು ತಮ್ಮ ತಮ್ಮ ಹೆಸರನ್ನು ಭುಜಪತ್ರೆಯಲ್ಲಿ ಬರೆದು ಜೇನಿನಲ್ಲಿ ಅದ್ದಿ ನೀರಿಗೆ ಭುಜಪತ್ರೆಎಲೆಯನ್ನು ಬಿಡಬೇಕು ಇದರಿಂದ ಇಬ್ಬರಲ್ಲು ಪ್ರೀತಿ ಹುಟ್ಟುತ್ತದೆ. ಅಥವ ಬಿಳಿಸಾಸಿವೆಗಳನ್ನು ಅಗ್ನಿಗೆ ಆಹುತಿ ನೀಡುವುದರಿಂದ ಸಂಸಾರದ ತೊಡಕು ದೂರಾಗುತ್ತವೆ. ೨) ಶುಕ್ರವಾರದಂದು ಸುಗಂಧಎಣ್ಣೆಯನ್ನು ಮೈಗೆ ಸಿಂಪಡಿಸಿಕೊಂಡು ಮಲಗುವುದರಿಂದಲೂ ತೊಂದರೆ ದೂರಾಗುತ್ತದೆ. ೩) ಗುರುವಾರ ಪುಷ್ಯ ನಕ್ಷತ್ರವಿರುವ ದಿನದಂದು ಹಸಿರು ರತ್ನವನ್ನು(ಪಚ್ಚೆ)ಗೋಮೊತ್ರದಲ್ಲಿ ತೊಳೆದು ಧರಿಸುವುದರಿಂದ ಸತಿ-ಪತಿಗಳಲ್ಲಿ ಪ್ರೇಮತ್ವ ಚಿಗುರುತ್ತದೆ. ೪) ಪ್ರತಿ ಗುರುವಾರ ಪತಿ-ಪತ್ನಿ ಸೇರಿಕೊಂಡು ಶ್ರೀ ರಾಮ ಮಂಡಿರದಲ್ಲಿ ಪೂಜೆ ನಡೆಸುವುದರಿಂದ ಸಂಸಾರದಲ್ಲಿ ಸುಖವು ಅಧಿಕವಾಗುತ್ತದೆ. ೭.ಮಾತಿನಲ್ಲಿ ವ್ಯತ್ಯಾಸವಾಗಿ ಗಂಡ-ಹೆಂಡತಿಯರಲ್ಲಿ ಜಗಳ ಉಂಟಾಗಿದ್ದರೆ ಹೆಚ್ಚಿನ ಮಾತುಗಳೇ ಜಗಳಕ್ಕೆ ಕಾರಣವಾಗಿರುತ್ತದೆ.ಯಾರಮಾತಿಗೂ ಮಣಿಯದ ಸ್ವಭಾವ ಇಬ್ಬರದೂ ಆಗಿರುತ್ತದೆ. ಪರಿಹಾರ:ಸತಿ -ಅಪತಿ ಇಬ್ಬರು ಅಥವ ಯಾರಾದರು ಒಬ್ಬರು ಕಂಚಿನ ಪಾತ್ರೆಯಲ್ಲಿ ತುಪ್ಪವನ್ನು ತುಂಬಿ ಅದನ್ನು (ತುಪ್ಪವನ್ನು ಮಾತ್ರ)ದೇವಾಲಯದ ದೀಪಕ್ಕೆ ನೀದಿದರೆ ವಾದ-ವಿವಾದ ದೂರ ಸರಿಯುತ್ತದೆ.೯ಸೋಮವಾರ ಸಿಹಿ-ಹಾಲನ್ನು ಶಿವಲಿಂಗಕ್ಕೆ ಅಭಿಷೇಕಕ್ಕೆ ನೀಡುವುದರಿಂದ ಸತಿ-ಪತಿಯರಲ್ಲಿ ಅನ್ಯೋನ್ಯತೆ ಹೆಚ್ಚುತ್ತದೆ. ೮.ಮದುವೆಯ ನಂತರ ಕನ್ಯೆಯು ಗಂಡನ ಮನೆ ಪ್ರವೇಶಿಸ ಬೇಕಾಗಿರುತ್ತದೆ.ಅತ್ತೆ ಮಾವಂದಿರನ್ನೇ ತನ್ನ ತಂದೆ ತಾಯಿ ಎಂದು ತಿಳಿಯಬೇಕಾಗುತ್ತದೆ.ಹಲವು ಕನ್ಯೆಯರು ಅತ್ತೆ ಮಾವಂದಿರ ಉಪದ್ರವದಿಂದ ಬೇಸತ್ತಿರುತ್ತಾರೆ. ಪರಿಹಾರ:ವೃಕ್ಷಗಳಿಗೆ ನೀರು ಗೊಬ್ಬರದ ವ್ಯವಸ್ಥೆ ಮಾಡಬೇಕು ಭಾನುವಾರ ಭೈರವನನ್ನು ಪೂಜಿಸಬೇಕು ರೊಟ್ಟಿಯೊಂದಿಗೆ ಬೆಲ್ಲವನ್ನು ಸೇರಿಸಿ ಆಕಳುಗಳಿಗೆ ತಿನ್ನಿಸುವುದು.ಬೆಳ್ಳಿಯ ಆಭರಣ ದೇವಾಲಯಗಳಿಗೆ ದಾನನೀದುವುದು.ಮತ್ತು ತಾವು ಬೆಳ್ಳಿಯ ಆಭರಣ ಯಾವಾಗಲು ಹಾಕಿಕೊಂಡಿರಬೇಕು.ನಾಯಿಗೆ ಆಹಾರ ಒದಗಿಸಬೇಕು. ಇರುವೆಗಳಿಗೆ ಸಕ್ಕರೆ ಹಾಕಬೇಕು. ೯.ಗಂಡ ಹೆಂಡತಿ ಎಷ್ಟೇ ಹೊಂದಾಣಿಕೆಯಿಂದಿದ್ದರು ಮನಸ್ಥಾಪವಾಗುತ್ತಿರುತ್ತದೆ.ಕುಟುಂಬದಲ್ಲಿ ಒಬ್ಬರಿಗೊಬ್ಬರು ಸೇರುವುದಿಲ್ಲ ಕಲಹಗಳು ಅಧಿಕವಾಗುತ್ತಿರುತ್ತವೆ. ಪರಿಹಾರ:ರಾತ್ರಿ ಮಲಗುವಾಗ ಪತಿಯ ತಲೆದಿಂಬಿನ ಕೆಳಗೆ ಸಿಂದೂರ.ಸತಿಯ ತಲೆದಿಂಬಿನಕೆಳಗೆ ಕರ್ಪೂರ ಇಟ್ತುಕೊಂಡು ಮಲಗಬೇಕು ಮುಂಜಾನೆ ಅವುಗಳನ್ನು ಯಾವುದಾದರು ಮರದ ಬುಡಕ್ಕೆ ಹಾಕುವುದು.ಮಂಗಳವಾರ ಬೆಲ್ಲ ರೊಟ್ಟಿನಾಯಿಗೆ ನೀಡಬೇಕು. ೧೦.ಹಲವು ಕಾಲದವರೆಗೆ ಸರಿಯಾಗಿ ಸಂಸಾರ ನಡೆಸಿ,ಮದ್ಯೆದಲ್ಲಿ ಸತಿ-ಪತಿ ಒಬ್ಬರಿಗೊಬ್ಬರು ಸಂಶಯ ಮನೋಭಾವತಾಳುತ್ತಾರೆ. ಪರಿಹಾರ:ಮಲಗುವಕೋಣೆಯಲ್ಲಿ ನವಿಲುಗರಿಯನ್ನು ಇಡುವುದು. ೧೧.ಸತಿ-ಪತಿಯರ ಜಾತಕದಲ್ಲಿ ಶನಿದೋಷವಿದ್ದಾಗ ಕಲಹಗಳು ಅಧಿಕವಾಗುತ್ತವೆ. ಪರಿಹಾರ:ನದಿಯಲ್ಲಿ ಖಾದ್ಯ ಪದಾರ್ಥಗಳನ್ನು ಹರಿಯಬಿಡಬೇಕು. ೧೨.ಯಾವುದೇ ಕಾರಣದಿಂದ ಸತಿ-ಪತಿಯರಲ್ಲಿ ವಿರಸ ಉಂಟಾಗಿದ್ದರೆ ಅದೇ ದೊಡ್ಡದಾಗುತ್ತದೆ. ಪರಿಹಾರ:ತಾಮ್ರದ ತಂಬಿಗೆಯಲ್ಲಿ ನೀರು ಮತ್ತು ಜೇನು ತುಂಬಿ ರಾತ್ರಿ ಮಲಗುವಾಗ ತಲೆದಿಂಬುನ ಹತ್ತಿರ ಇಡಬೇಕು ಬೆಳಗ್ಗೆ ಅದನ್ನು ಸತಿ-ಪತಿ ಇಬ್ಬರು ಸೇವಿಸಬೇಕು. ೧೩.ದೃಷ್ಟಿ ದೋಷ ಅಥವ ದುರ್ಬುದ್ದಿಯವರ ಕೈಚಳಕ(ಮಾಟ,ಮರೆವು,ಮಂತ್ರ)ದಿಂದ ಸತಿ-ಪತಿಯರು ಸದಾ ಜಗಳ ಕಾಯುತ್ತಾರೆ.ಕದನ ವಿವಾಹ ವಿಚ್ಚೇದನದ ವರೆಗೂ ಹೋಗುತ್ತದೆ. ಪರಿಹಾರ:೭ತಾಂತ್ರಿಕ ತೆಂಗು,೭ಮುತ್ತು,೭ಚಿಟಿಕೆ ಉಪ್ಪು,ಒಂದು ಬಟ್ಟೆಯಲ್ಲಿ ಸೇರಿಸಿ ಕಟ್ಟಬೇಕು ಅದನ್ನು ಪತಿ ಅಥವ ಪತ್ನಿ ಮಲಗಿ ನಿದ್ರಿಸುವಾಗ ೭ಬಾರಿ ಇಳೆತಗೆದು ಬೆಳಗ್ಗೆ ಮೂರುದಾರಿ ಕೂಡುವಲ್ಲಿ ಇಟ್ಟುಬರಬೇಕು. ೧೪.ಯಾವುದೇ ಶನಿವಾರದಿಂದ ಸತಿ-ಪತಿಯರಲ್ಲಿ ಕ್ಲೇಷ ಉಂಟಾಗಿದ್ದರೆ ಇಬ್ಬರಲ್ಲು ಮಾತುನಿಂತು ಮೌನವಾಗಿದ್ದರೆ. ಪರಿಹಾರ: ಎಣ್ಣೆ, ಲೋಹದ ಪಾತ್ರ, ಉಪ್ಪು ಕಪ್ಪುವಸ್ತ್ರ ದಾನನೀಡಬೇಕು. ೧೫.ವೈವಾಹಿಕ ಜೀವನದಲ್ಲಿ ಆಕಸ್ಮಾತ್ ಅಸಂತೋಷದ ಛಾಯೆ ಮೊಡಿ ಬರುತ್ತದೆ. ಪರಿಹಾರ:ಶುಕ್ಲಪಕ್ಷದ ಯಾವುದೇ ಬುಧವಾರ ನಪುಂಸಕರಿಗೆ ಸಾದ್ಯವಿರುವ ವಸ್ತುಗಳನ್ನು ದಾನಮಾಡಬೇಕು. ೧೬.ಪತಿಯು ಪತ್ನಿಯ ಜೊತೆ ಸರಿಯಾಗಿ ವರ್ತಿಸುವುದಿಲ್ಲ ಆತನು ಪರಸ್ತ್ರೀ ಜೊತೆಯಲ್ಲಿರುತ್ತಾನೆ. ಪರಿಹಾರ:ಪ್ರತಿನಿತ್ಯ ಸಂಜೆ ಮನೆಯ ಹೊಸ್ತಿಲ ಬಳಿ ಎಳ್ಳೆಣ್ಣೆದೀಪ ಉರಿಸಿ ಹೊಸ್ತಿಲನ್ನು ಪೂಜಿಸಿ. ೧೭.ಪತಿಯು ಎಷ್ಟೇ ಪ್ರೀತಿಯಿಂದಿದ್ದರು ಸತಿಯು ಆತನನ್ನು ತಿರಸ್ಕರಿಸುತ್ತಾಳೆ.ಪತಿಯೊಂದಿಗೆ ಪ್ರೀತಿಯಿಂದ ವ್ಯವಹರಿಸುವುದಿಲ್ಲ. ಪರಿಹಾರ:ಶುಕ್ಲಪಕ್ಷದ ಅಷ್ಟಮಿಯಂದು ಗಂಡ ಸ್ವತಃ ತನ್ನ ಕೈಯಾರ ಹೆಂಡತಿಗೆ ಸಿಂಧೂರ ಹಚ್ಚಬೇಕು. * ಮದುವೆಗೆ ಮುಂಚೆ ಬರುವ ಅಡೆತಡೆಗಳಿಗೆ ಮಾಡಬೇಕಾದ ಪರಿಹಾರಗಳು: ಮದುವೆಗೆ ಮುನ್ನ ಸುಖ ಸಂಸಾರಕ್ಕೆ ವಿಶಿಷ್ಟ ಸೂತ್ರಗಳಿರುತ್ತವೆ.ಇವನ್ನು ಆಚರ‍ಣೆಯಲ್ಲಿ ತರಬೇಕು. * ವಿವಾಹಕ್ಕೆ ಮುನ್ನ ಶ್ರೀ ಕೃಷ್ಣ ಪರಮಾತ್ಮನ ಸೇವೆ ಮಾಡುತ್ತಿರಬೇಕು.ವಿವಾಹದ ನಂತರ ಎಲ್ಲಕ್ಕೂಮೊದಲು ಶ್ರೀಕೃಷ್ಣನ ದೇವಾಲಯದಲ್ಲಿ ದಂಪತಿ ಸಮೇತ ಪೂಜೆ ಸಲ್ಲಿಸಬೇಕು.ಇದರಿಂದ ವಿವಾಹ ಪರ್ಯಂತ ಸುಖ ಜೀವನ ನಡೆಸುವಿರಿ. *ವಿವಾಹಕ್ಕೆ ಒಂದು ವಾರ ಮುಂಚೆ ೭ಅರಿಸಿನಕೊಂಬು ೩ಹಿತ್ತಾಳೆತ ನಾಣ್ಯ,ಚಿಟಿಕೆ ಕೇಸರಿ,ಕರಣೆಬೆಲ್ಲ,ಕಡಲೇಬೇಳೆ ಇವೆಲ್ಲವುಗಳನ್ನು ಹಳದಿ ಬಟ್ಟೆಯಲ್ಲಿ ಕಟ್ಟಿ ಗಂಡನ ಮನೆಯತ್ತ ಮುಖಮಾಡಿ ಅಥವ ಆ ದಾರಿಗೆ ಇಡಬೇಕು.ಇದರಿಂದ ಅತ್ತೆ ಮಾವರ ಮುದ್ದಿನಸೊಸೆಯಾಗಿ ಆನಂದದಿಂದ ಜೀವನಕಳೆಯುವಂತಾಗುತ್ತದೆ. * ಪ್ರತಿ ತಿಂಗಳು ಯಾವುದೇ ಸೋಮವಾರದಂದು ನಿಯಮಿತವಾಗಿ ಶಿವಲಿಂಗಕ್ಕೆ ಅಥವ ಹುತ್ತಗಳಿಗೆ ಹನಿಹಾಲು ಅರ್ಪಿಸಿ ಬರುವುದರಿಂದ ಉತ್ತಮ ಜೋಡಿ ದೊರೆತು ದಾಂಪತ್ಯ ಜೀವನದಲ್ಲಿ ಸುಖವಾಗಿರುತ್ತದೆ. * ಶಿವ ಪಾರ್ವತಿ,ಗಣೇಶರ ಬಾವಚಿತ್ರವನ್ನು ನಿಯಮಿತವಾಗಿ ಪೂಜಿಸುವುದರಿಂದ ದಾಂಪತ್ಯಜೀವನದಲ್ಲಿ ಯಾವುದೇ ತೊಂದರೆಗಳು ಬರುವುದಿಲ್ಲ. * ಯೋಗ್ಯ ಪತಿ ದೊರಕಲು ಕನ್ಯೆಯು ನಿಯಮಿತವಾಗಿ ಪಾರ್ವತಿ ದೇವಿಯನ್ನು ಪೂಜಿಸುತ್ತಾ ಈ ಕೆಳಗಿನ ಮಂತ್ರವನ್ನು ನಿತ್ಯ ೯ಸಲ ಜಪಿಸಬೇಕು. "ಗೌರೀ ಶಂಕರಾರ್ಧಾಂಗಿ ಯಥಾತ್ರಂ ಶಂಕರಪ್ರಿಯಾ ತಥಾಮಾಂ ಕುರು ಕಲ್ಯಾಣಿ ಕಾಂತಿ ಕಾಂತಾ ಸುದುರ್ಲಭಂ" * ನವರಾತ್ರಿಯ ಪಂಚಮಿಯಂದು ಕನಿಷ್ಟ ೩ಬಾಲೆಯರನ್ನು ಕರೆದು ಅವರಿಗೆ ಕೆಂಪುವಸ್ತ್ರ ಉಡುಗೋರೆಯಾಗಿ ನೀಡುವುದರಿಂದ ದಾಂಪತ್ಯಜೀವನ ಸುಖಕರವಾಗಿರುತ್ತದೆ. * ಹಳದಿ ವರ್ಣವುಳ್ಳ ಸ್ವಲ್ಪ ದಪ್ಪನೆಯ ದಾರಕ್ಕೆ ಮದ್ಯದಲ್ಲಿ ೫ಗಂಟುಗಳನ್ನು ಮಾಡಿ ಅದನ್ನು ಬಲಗೈಗೆ ಬಳೆಯಂತೆ ಧರಿಸುವುದರಿಂದ ಮತ್ತದು ಧರಿಸಿರುವ ಬಳೆಗಳಿಗೆ ಸ್ಪರ್ಶಿಸುತ್ತಿರಬೇಕು.ಮದುವೆಯಾದಬಳಿಕ ಆ ದಾರವನ್ನು ಬಿಚ್ಚಿ ಯಾವುದಾದರು ಗಿಡದಕೊಂಬೆಗೆ ಕಟ್ಟಿಬರುವುದರಿಂದ ದಾಂಪತ್ಯಜೀವನ ಸುಖಮಯದಿಂದ ಕೂಡಿರುತ್ತದೆ. * ಶುಕ್ಲಪಕ್ಷದ ಸಪ್ತಮಿ ಮತ್ತು ಕೃಷ್ಣಪಕ್ಷದಅಷ್ಟಮಿಯಂದು ವಟವೃಕ್ಷಕ್ಕೆ ಬೆಲ್ಲ, ಕೇಸರಿ,ಇಟ್ಟು ಪೂಜಿಸಿ ಬರಲು ದಾಂಪತ್ಯಜೀವನ ಸುಖಮಯದಿಂದ ಕೂಡಿರುತ್ತದೆ. * ಪ್ರತಿ ಹುಣ್ಣಿಮೆಯಂದು ಮುಂಜಾನೆ ಗಂಗಾಜಲದೊಂದಿಗೆ ವಟವೃಕ್ಷಕ್ಕೆ ಪೂಜಿಸಿ ಬರಲು ದಾಂಪತ್ಯಜೀವನ ಸುಖಮಯದಿಂದ ಕೂಡಿರುತ್ತದೆ. * ಪ್ರತಿ ನಿತ್ಯ ತಂದೆ-ತಾಯಿ/ಅತ್ತೆ-ಮಾವಂದಿರಿಗೆ ನಮಸ್ಕರಿಸುವುದರಿಂದ ಒಳ್ಳೆಯ ವರ/ವಧು ದೊರೆತು ಪೂರ್ಣ ದಾಂಪತ್ಯ ಸುಖವನ್ನು ಅನುಭವಿಸುವಿರಿ. *ಚಿತ್ರಮೊಲಹೂಗಳನ್ನು(ಬಿಳಿಮತ್ತು ಹಳದಿ)ಪುಷ್ಯ ನಕ್ಷತ್ರ ವಿರುವದಿವಸ ತಂದು ಅದನ್ನು ದಿಂಬಿನ ಕೆಳಗೆ ಇಟ್ಟುಕೊಂಡು ಮಲಗುವುದು(೨೧ ದಿನಗಳವರೆಗೆ ಸತತವಾಗಿ ಇಟ್ಟುಕೊಳ್ಳುವುದು)ಆದರೆ ಯಾವುದೇ ಕಾರಣಕ್ಕೂ ಇವುಗಳು ದಂಪತಿಗಳ ಕೆಳಕ್ಕೆ ಅಂದರೆ ಬೆನ್ನಿಗೆ ಈ ಹೂವುಗಳು ಸಿಕ್ಕಿಕೊಳ್ಳಬಾರದು)ಇದು ಕಷ್ಟವೆನಿಸಿದರೆ ಎರಡು ತುಂಡು ಈ ಕಡ್ಡಿಯನ್ನು ಅಥವ ಎರಡು ಹೂಗಳನ್ನು ದಂಪತಿಗಳು ಮಲಗುವ ಕೋಣೆಯಲ್ಲಿ ತಮ್ಮದೇ ಬಾವಚಿತ್ರದ ಹಿಂಬಾಗದಲ್ಲಿ ಇಟ್ಟು ೨೧ ದಿನದ ನಂತರ ಹರಿಯುವ ನೀರಲ್ಲಿ ಬಿಡುವುದು. -ಸಂಗ್ರಹ

ಹಸಿರು ಸೊಪ್ಪುಗಳ ಉಪಯೋಗ

ಹರಿವೆ ಸೊಪ್ಪು ಹರಿವೆ ಅಥವಾ ಕೀರೆ ದಂಟಿನ ಜಾತಿಗೆ ಸೇರಿದ ಸೊಪ್ಪು ತರಕಾರಿಯದರೂ ಅದರಷ್ಟು ಎತ್ತರಕ್ಕೆ ಬೆಳೆಯುವುದಿಲ್ಲ. ಹರಿವೆಯ ಕಾಂಡಭಾಗ ಸಣಕಲು; ಎಲೆಗಳೂ ಸಣ್ಣವೇ, ಕಾಂಡ ಹಾಗೂ ಎಲೆಗಳ ಬಣ್ಣ ತಿಳಿ ಹಸುರು ಇಲ್ಲವೇ ಕೆಂಪು. ತಿಳಿ ಹಸುರು ಬಗೆಯ ಸೊಪ್ಪು ಹೆಚ್ಚು ರುಚಿಯಾಗಿರುತ್ತದೆ. ದೇಶದ ಎಲ್ಲಾ ಭಾಗಗಳಲ್ಲಿ ಇದರ ಬೇಸಾಯ ಕಂಡುಬರುತ್ತದೆ. ಪೌಷ್ಟಿಕ ಗುಣಗಳು: ಹರಿವೆ ದಂಟುಸೊಪ್ಪಿನಷ್ಟೇ ಪೌಷ್ಟಿಕ. ಅದರಲ್ಲಿ ಅಧಿಕ ಪ್ರಮಾಣದ ನಾರು, ಖನಿಜ ಪದಾರ್ಥ ಹಾಗೂ ಜೀವಸತ್ವಗಳಿರುತ್ತವೆ. ಔಷಧೀಯ ಗುಣಗಳು : ಈ ಸೊಪ್ಪಿನಲ್ಲಿ ಅಧಿಕ ಪ್ರಮಾಣದ ಕಬ್ಬಿಣ ಹಾಗೂ ಇತರ ಖನಿಜ ಪದಾರ್ಥಗಳಿದ್ದು ರಕ್ತದ ಉತ್ಪಾದನೆಗೆ ನೆರವಾಗುತ್ತವೆ. ಅದೇ ರೀತಿ ಇದರಲ್ಲಿನ ನಾರಿನ ಅಂಶ ಮಲಬದ್ಧತೆಯನ್ನು ದೂರ ಮಾಡಬಲ್ಲದು. ಕ್ರಮವರಿತು ತಿನ್ನುತ್ತಿದ್ದಲ್ಲಿ ಅದರ ಸಂಪೂರ್ಣ ಲಾಭ ಸಿಗುತ್ತದೆ. ಉಗಮ ಮತ್ತು ಹಂಚಿಕೆ : ಇದು ಬಹುಶಃ ಸ್ವದೇಶೀ ಎನಿಸಿದ್ದು ದಕ್ಷಿಣದ ರಾಜ್ಯಗಳಲ್ಲಿ ಹೆಚ್ಚಾಗಿ ಕಂಡುಬರುತ್ತದೆ. ಸಸ್ಯ ವರ್ಣನೆ : ಹರಿವೆ ಅಮರಾಂಥೇಸೀ ಕುಟುಂಬಕ್ಕೆ ಸೇರಿದ ಮೂಲಿಕೆ ಸಸ್ಯ. ಸಣಕಲಾದ ಕಾಂಡಗಳನ್ನು ಹೊಂದಿರುತ್ತದೆ. ಎಲೆಗಳೂ ಸಹ ಸಣ್ಣವಿರುತ್ತವೆ. ಬುಡಭಾಗದಲ್ಲಿ ಹಲವಾರು ಕವಲು ರೆಂಬೆಗಳಿದ್ದು ಸ್ವಲ್ಪ ಮಟ್ಟಿಗೆ ಪೊದರೆಯಂತೆ ಹರಡಿ ಬೆಳೆದಿರುತ್ತದೆ. ಒಟ್ಟಾಗಿ ಸೇರಿಸಿ ಕುಡುಗೋಲಿನಿಂದ ನೆಲಮಟ್ಟಕ್ಕೆ ಕೊಯ್ದು ತೆಗೆಯಬೇಕು. ಮೊದಲ ಕೊಯ್ಲಿನ ನಂತರ ಮತ್ತಷ್ಟು ಚಿಗುರು ಮೂಡಿ ಬೆಳೆಯುತ್ತವೆ. ಬೇರು ಸಮೂಹ ನೆಲೆದಲ್ಲಿ ಬಹಳಷ್ಟು ಹರಡಿರುತ್ತದೆ. ಹವಾಗುಣ : ಇದು ಉಷ್ಣವಲಯದ ಸೊಪ್ಪಿನ ಬೆಳೆ. ವರ್ಷದ ಯಾವ ಕಾಲದಲ್ಲಾದರೂ ಬೆಳೆಯಬಹುದು. ಆದರೆ ಮಳೆಗಾಲ ಹೆಚ್ಚು ಸೂಕ್ತ. ಭೂಗುಣ : ಈ ಬೆಳೆಗೆ ಮರಳುಗೋಡು ಇಲ್ಲವೇ ಕೆಂಪುಗೋಡು ಮಣ್ಣಿನ ಭೂಮಿ ಬಹುವಾಗಿ ಹಿಡಿಸುತ್ತದೆ. ನೀರು ನಿಲ್ಲದೆ ಬಸಿದುಹೋಗಬೇಕು. ಸ್ವಲ್ಪ ಇಳಿಜಾರಿರುವ ಭೂಮಿಯಾದರೆ ಉತ್ತಮ. ತಳಿಗಳು : ಹರಿವೆಯಲ್ಲಿ ತಳಿಗಳಂತೇನೂ ಇಲ್ಲ. ಗ್ರಾಮಾಂತರ ಪ್ರದೇಶಗಳಲ್ಲಿ ಗೊದ್ದರಿವೆ, ಚಿಲಕರಿವೆ, ಮುಳ್ಳರಿವೆ ಮುಂತಾದ ಬಗೆಗಳನ್ನು ಕಾಣಬಹುದು. ಬೇಸಾಯದಲ್ಲಿನ ಬಗೆಯಲ್ಲಿ ಮುಳ್ಳುಗಳೇನೂ ಇರುವುದಿಲ್ಲ. ಭೂಮಿ ಸಿದ್ಧತೆ ಮತ್ತು ಬಿತ್ತನೆ : ಅನುಕೂಲಕ್ಕೆ ತಕ್ಕಂತೆ ಮಡಿಗಳನ್ನು ತಯಾರಿಸಿ, ತಿಪ್ಪೆ ಗೊಬ್ಬರ ಹರಡಿ ಮಣ್ಣಿನಲ್ಲಿ ಚೆನ್ನಾಗಿ ಬೆರೆಸಬೇಕು. ಸಾಮಾನ್ಯವಾಗಿ ೧ ಮೀಟರ್ ಉದ್ದ ಮತ್ತು ೧ಮೀಟರ್ ಅಗಲದ ಮಡಿಗಳನ್ನು ಮಾಡುವುದೇ ಹೆಚ್ಚು. ಕೆಲವರು ಮಡಿಗಳ ಉದ್ದ ೧.೫ ಮೀಟರ್ ಅಗಲ ಇರುವಂತೆ ತಯಾರಿಸುತ್ತಾರೆ. ಈ ರೀತಿಯಲ್ಲಿ ಸಿದ್ಧಗೊಳಿಸಿದ ಮಡಿಗಳನ್ನು ನೀರು ಕಾಲುವೆಗಳು ಉದ್ದಕ್ಕೂ ಬೇರ್ಪಡಿಸುತ್ತವೆ. ಬೀಜ ಅತೀ ಸಣ್ಣ. ಅವು ಸಮನಾಗಿ ಹಾಗೂ ತೆಳ್ಳಗೆ ಬೀಳುವಂತೆ ಮಾಡಲು ಪುಡಿ ಮಾಡಿದ ತಿಪ್ಪೆಗೊಬ್ಬರದೊಂದಿಗೆ ಬೆರೆಸಿಕೊಳ್ಳಬೇಕು. ಮಡಿಗಳಲ್ಲಿ ಅಡ್ಡಲಾಗಿ ಅಥವಾ ಉದ್ದಕ್ಕೆ ಸಣ್ಣದಾದ ಗೀರು ಸಾಲು ಕಾಲುವೆಗಳನ್ನು ಮಾಡಿ, ಅವುಗಳಲ್ಲಿ ಬೀಜ ಬಿತ್ತಬೇಕು. ಬೀಜ ಬಹುಮೇಲೆಯೇ ಬೀಳುವುದರಿಂದ ಇರುವೆಗಳು ಅವುಗಳನ್ನು ಹೊತ್ತುಕೊಂಡು ಹೋಗಿ ತಿಂದು ಹಾಳುಮಾಡಬಹುದು ಅಥವಾ ನೀರು ಹಾಯಿಸಿದಾಗ ಅವೆಲ್ಲವೂ ತಗ್ಗಿರುವ ಕಡೆ ತೇಲಿಬರಬಹುದು. ಆದ್ದರಿಂದ ಬಿತ್ತಿದ ಕೂಡಲೇ ಅವುಗಳ ಮೇಲೆ ಮರಳು, ಪುಡಿಗೊಬ್ಬರ ಮುಂತಾಗಿ ತೆಳ್ಳಗೆ ಉದುರಿಸಬೇಕು. ಪ್ರಾರಂಭದಲ್ಲಿ ಒಂದೆರಡು ಸಾರಿ ಕೈ ನೀರು ಕೊಡುವುದು ಒಳ್ಳೆಯದು. ನೀರು ಹನಿಸುವ ಡಬ್ಬಿ ಇದ್ದರೆ ಅನುಕೂಲ. ಹೆಕ್ಟೇರಿಗೆ ೨.೫-೫.೦ ಕಿ.ಗ್ರಾಂ ಬೀಜ ಬೇಕಾಗುತ್ತದೆ. ಗೊಬ್ಬರ : ಹೆಕ್ಟೇರಿಗೆ ೧೦ ರಿಂದ ೧೫ ಟನ್ ತಿಪ್ಪೆಗೊಬ್ಬರ ಕೊಡಬೇಕು. ಅದು ಚೆನ್ನಾಗಿ ಕೊಳೆತಿರಬೇಕು. ಪ್ರತಿ ಕಟಾವಿನ ನಂತರ ಸ್ವಲ್ಪ ಪ್ರಮಾಣದ ಯೂರಿಯಾದಂತಹ ರಾಸಾಯನಿಕ ಗೊಬ್ಬರ ಕೊಡುವುದು ಲಾಭದಾಯಕ. ನೀರಾವರಿ : ಇದಕ್ಕೆ ಹದವರಿತು ನೀರುಕೊಡಬೇಕು. ತೇವ ಜಾಸ್ತಿಯೂ ಇರಬಾರದು ಹಾಗೆಯೇ ಕಡಿಮೆಯೂ ಇರಬಾರದು. ಬೇಸಿಗೆಯಲ್ಲಿ ನಾಲ್ಕೈದು ದಿನಗಳಿಗೊಮ್ಮೆ ಮತ್ತು ಇತರ ದಿನಗಳಲ್ಲಿ ವಾರಕ್ಕೊಮ್ಮೆ ನೀರು ಹಾಯಿಸಿದರೆ ಸಾಕು. ಮಳೆಗಾಲದಲ್ಲಿ ಹೆಚ್ಚು ನೀರು ಬೇಕಾಗಿಲ್ಲ. ಅಂತರ ಬೇಸಾಯ ಮತ್ತು ಕಳೆ ಹತೋಟಿ : ಆಗಿಂದಾಗ್ಗೆ ಕಳೆಗಳನ್ನು ಕಿತ್ತು ಹಾಕುವುದು ಅಗತ್ಯ. ಪ್ರತಿ ಸಾರಿ ಸೊಪ್ಪನ್ನು ಕೊಯ್ಲು ಮಾಡಿದ ನಂತರ ಮಣ್ಣನ್ನು ಹಗುರವಾಗಿ ಕೆದಕಿ, ತಿಪ್ಪೆಗೊಬ್ಬರ ಹರಡಿ ನೀರು ಹಾಯಿಸಿದರೆ ಹೊಸ ಚಿಗುರು ಪುಟಿದು, ದೃಢವಾಗಿ ಬೆಳೆಯುತ್ತದೆ. ಕೊಯ್ಲು ಮತ್ತು ಇಳುವರಿ : ಬಿತ್ತನೆ ಮಾಡಿದ ೨೦-೨೫ ದಿನಗಳಲ್ಲಿ ಸೊಪ್ಪನ್ನು ಕಿತ್ತು ಬಳಸಬಹುದು ಅಥವಾ ಕುಡುಗೋಲಿನಿಂದ ನೆಲಮಟ್ಟಕ್ಕೆ ಹಿಡಿಹಿಡಿಯಾಗಿ ಸೇರಿಸಿ ತಿಂಗಳಿಗೊಮ್ಮೆ ಕೊಯ್ಲು ಮಾಡಬಹುದು. ಪ್ರಾರಂಭದಲ್ಲಿ ಎಲೆಗಳು ದೊಡ್ಡವಿರುತ್ತವೆಯಾದರೂ ದಿನಕಳೆದಂತೆ ಅವುಗಳ ಗಾತ್ರ ಕುಸಿಯುತ್ತದೆ. ಒಮ್ಮೆ ಬಿತ್ತಿದರೆ ಸುಮಾರು ಎಳೆಂಟು ತಿಂಗಳುಗಳವರೆಗೆ ಸೊಪ್ಪು ಸಿಗುತ್ತಿರುತ್ತದೆ. ಅನಂತರ ಬೇರುಗಳ ಸಮೇತ ಕಿತ್ತು ತೆಗೆದು, ಅವುಗಳನ್ನೂ ಸಹ ತರಕಾರಿಯಾಗಿ ಬಳಸಬಹುದು. ಹೆಕ್ಟೇರಿಗೆ ೨೦-೨೫ ಟನ್ನುಗಳಷ್ಟು ಸೊಪ್ಪು ಸಾಧ್ಯ. ಕಡೆಯಲ್ಲಿ ಕಿತ್ತು ತೆಗೆದ ಬೇರುಗಳು ಸುಮಾರು ೨-೩ ಟನ್ನುಗಳಷ್ಟಿರುತ್ತವೆ. ಅಧ್ಯಾಯ ೪: ಕೈತೋಟದ ನಕ್ಷೆ ಮತ್ತು ಬೆಳೆಗಳು – ತರಕಾರಿ ಬೆಳೆಗಳು ಕೈತೋಟದಲ್ಲಿ ತರಕಾರಿಗಳು ಬಹುಪಾಲು ಸ್ಥಳವನ್ನು ಆಕ್ರಮಿಸಿಕೊಳ್ಳುತ್ತವೆ. ’ತರಕಾರಿಗಳಿಲ್ಲದೇ ಕೈತೋಟವಿಲ್ಲ’ ಎನ್ನಬಹುದು. ಪ್ರತಿನಿತ್ಯ ಬೇಕಾಗುವ ವಿವಿಧ ತರಕಾರಿಗಳನ್ನು ಸುಲಭವಾಗಿ ಮತ್ತು ಅತಿ ಕಡಿಮೆ ಖರ್ಚಿನಲ್ಲಿ ಬೆಳೆಯಬಹುದು. ಸ್ವಲ್ಪ ತಾಂತ್ರಿಕತೆ ತಿಳಿದುಕೊಂಡಿದ್ದರೆ ಕೈತೋಟದ ತರಕಾರಿ ಬೆಳೆಗಳನ್ನು ಲಾಭದಾಯಕವಾಗಿ ಬೆಳೆದು ಹಣಗಳಿಕೆ ಮಾಡಬಹುದಾಗಿದೆ. ತರಕಾರಿಗಳನ್ನು ವಿವಿಧ ರೀತಿಯಲ್ಲಿ ವಿಂಗಡಿಸಬಹುದು. ಮುಖ್ಯವಾಗಿ, ಸಸ್ಯ ಶಾಸ್ತ್ರೀಯವಾಗಿ, ಬೆಳೆಯುವ ಕಾಲಕ್ಕನುಗುಣವಾಗಿ ಮತ್ತು ಉಪಯೋಗಿಸುವ ತರಕಾರಿ ಬೆಳೆಗಳ ಭಾಗಗಳನ್ನು ಅವಲಂಬಿಸಿ ಗುಂಪುಗಳನ್ನಾಗಿ ಮಾಡಲಾಗಿದೆ. ಸಸ್ಯ ಶಾಸ್ತ್ರೀಯವಾಗಿ ತರಕಾರಿಗಳನ್ನು ೧೮ ಕುಟುಂಬಗಳಾಗಿ ವಿಂಗಡಿಸಲಗಿದೆ. ಲ್ಯಾಟಿನ್ ಭಾಷೆಯಲ್ಲಿ ಕುಟುಂಬಗಳನ್ನು ಹೆಸರಿಸಲಾಗಿದ್ದು, ಪ್ರತಿ ಕುಟುಂಬದಲ್ಲಿ ಹಲವಾರು ತರಕಾರಿಗಳ ಗುಂಪುಗಳು ಜೋಡಣೆಯಾಗುವುವು. ತರಕಾರಿಗಳ ಸಾಮಾನ್ಯ ಹೆಸರಿಗೆ ಸಸ್ಯಶಾಸ್ತ್ರೀಯ ಹೆಸರುಗಳೂ ಉಂಟು. ಇವು ಎಲ್ಲೆಡೆ ತರಕಾರಿಗಳನ್ನು ಗುರುತಿಸಲು ಅನುಕೂಲ. ಬೆಳೆಯುವ ಕಾಲವನ್ನು ಪರಿಗಣಿಸಿದಾಗ ಮಳೆಗಾಲ, ಚಳಿಗಾಲ ಮತ್ತು ಬೇಸಿಗೆಕಾಲದ ತರಕಾರಿ ಬೆಳೆಗಳೆಂದು ವಿಂಗಡಿಸಲಾಗಿದೆ. ಈ ಮೂರು ಕಾಲಗಳಲ್ಲಿ ಹವಾಮಾನವು ವ್ಯತ್ಯಾಸವಾಗುವುದರಿಂದ ಕೆಲವು ತರಕಾರಿಗಳು ಒಂದು ಕಾಲಕ್ಕೆ ಹೊಂದಿಕಂಡರೆ, ಮತ್ತೆ ಕೆಲವು ಮತ್ತೊಂದು ಕಾಲದಲ್ಲಿ ಹೊಂದಿಕೊಳ್ಳುತ್ತವೆ. ನೀರಾವರಿ ವ್ಯವಸ್ಥೆಯಿದ್ದಲ್ಲಿ ಹಲವು ತರಕಾರಿಗಳನ್ನು ವರ್ಷವಿಡೀ ಬೆಳೆಯಬಹುದು. ೧. ಮಳೆಗಾಲದ ತರಕಾರಿಗಳು : ಟೊಮೊಟೊ, ಬೆಂಡೆ, ಬದನೆ, ಹುರುಳಿ, ತಿಂಗಳ ಹುರಳಿ, ಗೆಣಸು, ಸೌತೇ, ಕಲ್ಲಂಗಡಿ, ಕರಬೂಜ, ಕುಂಬಳ, ಹಾಗಲ, ಮೂಲಂಗಿ ಮುಂತಾದುವುಗಳು. ೨. ಚಳಿಗಾಲದ ತರಕಾರಿಗಳು : ಕ್ಯಾಬೇಜ್, ಹೂವುಕೋಸು, ಗಜ್ಜರಿ, ಬಟಾಣಿ, ಈರುಳ್ಳಿ, ಆಲೂಗಡ್ಡೆ, ಮೂಲಂಗಿ, ಟರ್ನಿಪ್, ಸೊಪ್ಪು ತರಕಾರಿ ಮುಂತಾದುವುಗಳು. ೩. ಬೇಸಿಗೆ ತರಕಾರಿಗಳು : ಸೌತೇ, ಕಲ್ಲಂಗಡಿ, ಕರಬೂಜ, ಕುಂಬಳ, ಬೆಂಡೆ, ಬದನೆ ಮುಂತಾದವುಗಳು. ತರಕಾರಿಗಳನ್ನು ಉಪಯೋಗಿಸುವಾಗ ಒಂದು ಮುಖ್ಯ ಅಂಶವನ್ನು ಗಮನದಲ್ಲಿಟ್ಟುಕೊಳ್ಳಬೇಕು. ಇಲ್ಲಿ ಕೆಲವು ಬಗೆಯ ತರಕಾರಿಗಳಲ್ಲಿ ಹಣ್ಣು-ಕಾಯಿಗಳನ್ನು ಉಪಯೋಗಿಸಿದರೆ, ಮತ್ತೆ ಕೆಲವಲ್ಲಿ ಕಾಂಡ, ಎಲೆ, ಬೇರು, ಹೂವು, ಮೊಗ್ಗುಗಳನ್ನು ಸೇವನೆಗೆ ಉಪಯೋಗಿಸುತ್ತೇವೆ. ೧. ಹಣ್ಣು (ಕಾಯಿ) ತರಕಾರಿಗಳು : ಟೊಮೊಟೊ, ಬದನೆ, ಚವಳೆ, ಬೆಂಡೆ, ತೊಂಡೆ, ಸೌತೇ, ಹಾಗಲ, ಕರಬೂಜ ಇತ್ಯಾದಿ. ೨. ಸೊಪ್ಪು ತರಕಾರಿಗಳು : ಮೆಂತೆ, ರಾಜಗಿರಿ, ಪಾಲಕ್, ಕರಿಬೇವು, ಬಸಳೆ, ಕೊತ್ತಂಬರಿ, ಹರಿವೆ, ಸಬ್ಬಸಿಗೆ ಇತ್ಯಾದಿ. ೩. ಬೇರು ತರಕಾರಿಗಳು : ಆಲೂಗೆಡ್ಡೆ, ಮೂಲಂಗಿ, ಗಜ್ಜರಿ, ಬೀಟ್‌ರೂಟ್ ಇತ್ಯಾದಿ. ೪. ಗೆಡ್ಡೆ ತರಕಾರಿಗಳು ; ಬೆಳ್ಳುಳ್ಳಿ, ಈರುಳ್ಳಿ ಇತ್ಯಾದಿ. ಹೀಗೆ ತರಕಾರಿ ಬೆಳೆಗಳನ್ನು ಹಲವು ಗುಂಪು ಮಾಡಲಾಗಿದೆ. ಇವುಗಳಲ್ಲದೇ ಮಾರಾಟದ ದೃಷ್ಟಿಯಿಂದ ಹಣಕಾಸಿನ ಉದ್ದೇಶ ಗಮನದಲ್ಲಿಟ್ಟುಕೊಂಡು ಗುಂಪುಗಳನ್ನು ಮಾಡಬಹುದು. ಹೆಚ್ಚು ಬೇಡಿಕೆ ಹಾಗೂ ಕಡಿಮೆ ಬೇಡಿಕೆ ಇರುವ ತರಕಾರಿಗಳೆಂದು ಹಾಗೂ ಸಮೀಪ ಮತ್ತು ದೂರದ ಮಾರುಕಟ್ಟೆಗೆ ಸಾಗಿಸುವ ತರಕಾರಿಗಳೆಂದು ಮತ್ತೊಂದು ಗುಂಪನ್ನು ಮಾಡಬಹುದಾಗಿದೆ. ಬೇಸಾಯ ಕ್ರಮಗಳು : ಭೂಮಿ ಸಿದ್ಧಪಡಿಸುವ ಕಾರ್ಯದಿಂದ ಬೇಸಾಯ ಪ್ರಾರಂಭವಾಗುವುದು. ಕೈತೋಟದಲ್ಲಿ ತರಕಾರಿ ಬೆಳೆಯಲು ಸೂಕ್ತವಾದ ಮಣ್ಣು ಇರದೇ ಇದ್ದಲ್ಲಿ ಬೇರೆಡೆಯ ಹೊಸ ಮಣ್ಣನ್ನು ಉಪಯೋಗಿಸಬಹುದು. ಭೂಮಿಯನ್ನು ಸಾಧ್ಯವಾದ ಮಟ್ಟಿಗೆ ಚೆನ್ನಾಗಿ ಉಳುಮೆ ಮಾಡಿ ಸಮತಟ್ಟು ಮಾಡಿ ಮಣ್ಣನ್ನು ಸಡಿಲಗೊಳಿಸಬೇಕು. ಕಲ್ಲು ಮತ್ತಿತರೆ ನಿರುಪಯೋಗಿ ವಸ್ತುಗಳನ್ನು ಆರಿಸಿ ಹೊರಗೆ ಹಾಕಬೇಕು. ಹೆಂಟೆಗಳನ್ನು ಒಡೆದು ಪುಡಿ ಮಾಡಿ ಸರಿಯಾಗಿ ಕೊಚ್ಚಣೆ ಮಾಡಬೇಕು. ನಂತರ ಕೊಟ್ಟಿಗೆ ಅಥವಾ ಇನ್ನಾವುದೇ ಸಾವಯವ ಗೊಬ್ಬರವನ್ನು ಮಣ್ಣಿನಲ್ಲಿ ಸರಿಯಾಗಿ ಬೆರೆಸಬೇಕು. ಮಣ್ಣಿನ ಫಲವತ್ತತೆ ನೋಡಿಕೊಂಡು ಗೊಬ್ಬರ ಮಿಶ್ರ ಮಾಡುವ ಪ್ರಮಾಣವನ್ನು ನಿರ್ಧರಿಸಬೇಕು. ಮಿಶ್ರ ಮಾಡುವ ಗೊಬ್ಬರದಲ್ಲಿ ಮಣ್ಣಿನಲ್ಲಿ ಕರಗದ ವಸ್ತುಗಳು ಸೇರಿರಬಾರದು. ಸಾಮಾನ್ಯವಾಗಿ ಮಳೆಗಾಲ ಪ್ರಾರಂಭವಾಗುವ ಮುನ್ನವೇ ಭೂಮಿಯ ಸಿದ್ಧತೆ ಮಾಡಿಕೊಂಡಿರುವುದು ಅವಶ್ಯಕ. ಸಸಿಮಡಿ ತಯಾರಿಕೆ : ಮೆಣಸಿನಕಾಯಿ, ಬದನೆ, ಟೊಮೊಟೊದಂತಹ ಬೆಳೆಗಳಲ್ಲಿ ಮೊದಲು ಸಸಿಗಳನ್ನು ಪ್ರತ್ಯೇಕವಾಗಿ ಎಬ್ಬಿಸಿ, ನಂತರ ಅವುಗಳನ್ನು ನಾಟಿ ಮಾಡಬಹುದಾಗಿದೆ. ಈ ರೀತಿ ಸಸಿಗಳನ್ನು ತಯಾರಿಸಲು ’ಏರು ಸಸಿ ಮಡಿ’ಗಳನ್ನು ಉಪಯೋಗಿಸುವರು. ಚಿತ್ರ ೧೧ ರಲ್ಲಿ ತೋರಿಸಿರುವಂತೆ ಒಂದು ಮಾದರಿ ಅಳತೆಯಾಗಿ ೮ ಮೀ. ಉದ್ದ, ೧.೨ ಮೀ. ಅಗಲ ಮತ್ತು ೧೦ ಸೆಂ.ಮೀ. ಎತ್ತರದ ಮಡಿಗಳನ್ನು ತಯಾರಿಸಬೇಕು. ಇವುಗಳಲ್ಲಿ ಮಣ್ಣನ್ನು ಸರಿಯಾಗಿ ಪುಡಿ ಮಾಡಿ ಹದಗೊಳಿಸಿರಬೇಕು. ಎರಡು ಮಡಿಗಳ ಮಧ್ಯೆ ನೀರು ಹರಿದು ಹೋಗಲು ಮತ್ತು ವಿವಿಧ ಕೆಲಸಗಳಿಗಾಗಿ ಓಡಾಡಲು ೬೦-೭೫ ಸೆಂ.ಮೀ. ಸ್ಥಳ ಬಿಡಬೇಕು. ನಂತರ ಪುಡಿ ಮಾಡಿದ ಕೊಟ್ಟಿಗೆ ಗೊಬ್ಬರ (ಎರಡು ಬುಟ್ಟಿ) ದೊಂದಿಗೆ ಯಾವುದಾದರೂ ಒಂದು ಸಂಯುಕ್ತ ರಸಗೊಬ್ಬರ (೫೦೦ ಗ್ರಾಂ) ವನ್ನು ಸೇರಿಸಿ ಮಡಿಗಳಲ್ಲಿ ಮಣ್ಣಿನೊಂದಿಗೆ ಚೆನ್ನಾಗಿ ಬೆರೆಸಿ ಉಪಯೋಗಿಸಬೇಕು. ಅಧಿಕೃತ ಕಂಪನಿಗಳಿಂದ ಬೀಜೋಪಚಾರ ಮಾಡಿದ ಬೀಜಗಳನ್ನು ಖರೀದಿಸಿಟ್ಟುಕೊಂಡಿರಬೇಕು. ಬೇರೆ ಬೀಜಗಳನ್ನು ಉಪಯೋಗಿಸುವುದಾದರೆ ಬಿತ್ತನೆಗೆ ಮುಂಚೆ ಬೀಜೋಪಚಾರ ಮಾಡಬೇಕಾಗುವುದು. ಬೀಜೋಪಚಾರಕ್ಕಾಗಿ ಕ್ಯಾಪ್ಟಾನ್ ಅಥವಾ ಥೈರಾಮ್‌ಗಳನ್ನು ಸುಮಾರು ೦.೫ ಗ್ರಾಂ ನಷ್ಟನ್ನು ಪ್ರತಿ ಕಿ.ಗ್ರಾಂ. ಬೀಜಕ್ಕೆ ಉಪಚರಿಸಬೇಕು. ಈ ರೀತಿ ಬೀಜೋಪಚಾರ ಮಾಡಿದ ಬೀಜಗಳನ್ನು ಮಡಿಗಳಲ್ಲಿ ೭.೫ ಸೆಂ.ಮೀ. ಅಂತರದ ಸಾಲುಗಳಲ್ಲಿ ತೆಳುವಾಗಿ ಬಿತ್ತನೆ ಮಾಡಿ ಮಣ್ಣಿನ ಮೇಲೆ ತೆಳುಪದರವಾಗಿ ಮುಚ್ಚಬೇಕು. ಆಮೇಲೆ ತರಗೆಲೆ ಇಲ್ಲವೇ ತೆಂಗಿನ ಗರಿಗಳು ಅಥವಾ ಬೇವಿನ ಮರದ ಟೊಂಗೆಗಳನ್ನು ಮಡಿಗಳ ಮೇಲೆ ಹಾಕಬಹುದು. ಪ್ರತಿ ದಿನ ನೀರು ಹನಿಸುವ ಡಬ್ಬಿಯಿಂದ ನೀರು ಪೂರೈಕೆ ಮಾಡಬೇಕು. ಸುಮಾರು ೪-೬ ವಾರಗಳಲ್ಲಿ ಸಸಿಗಳು ನಾಟಿಗೆ ಸಿದ್ಧವಾಗುತ್ತವೆ. (ಮಡಿಗಳಲ್ಲಿ ಬೀಜ ಮೊಳಕೆಯೊಡೆದು ಮುಂದೆ ಎಲೆಗಳಾಗುತ್ತಿದ್ದಂತೆ ಮಡಿಗಳ ಮೇಲೆ ಹಾಕಿದ ಹೊದಿಕೆಯನ್ನು ತೆಗೆಯಬೇಕು.) ಅತಿ ಸಣ್ಣ ಗಾತ್ರದ ಬೀಜಗಳನ್ನು ಬಿತ್ತನೆ ಮಾಡುವಾಗ ಪುಡಿಗೊಬ್ಬರ ಮರಳಿನೊಂದಿಗೆ ಮಿಶ್ರ ಮಾಡಿ ಬಿತ್ತನೆ ಮಾಡಿದರೆ ಆ ಬೀಜಗಳು ಒಂದೆಡೆ ಗುಂಪು ಗುಂಪಾಗಿ ಸೇರುವುದನ್ನು ತಪ್ಪಿಸಬಹುದು ಮತ್ತು ಮಡಿಗಳನ್ನು ತಗ್ಗು ಪ್ರದೇಶಗಳಲ್ಲಿ ಮಾಡಬಾರದು. ಮಡಿಗಳಲ್ಲಿ ಉಪಯೋಗಿಸುವ ಮಣ್ಣು ಮರಳು ಮಿಶ್ರಿತ ಗೋಡು ಮಣ್ಣಾಗಿದ್ದರೆ ಉತ್ತಮ. ಮರಳು ಮಿಶ್ರಿತ ಕಪ್ಪು ಮಣ್ಣು ಮಡಿ ತಯಾರಿಕೆಗೆ ಸೂಕ್ತವಾಗಿದೆ. ಮಡಿಗಳಿಂದ ಸಸಿಗಳನ್ನು ಕೀಳುವಾಗ ಮೊದಲು ಮಡಿಗೆ ನೀರು ಪೂರೈಸಿ ಬೇರುಗಳಿಗೆ ಧಕ್ಕೆಯಾಗದಂತೆ ಕೀಳಬೇಕು. ನಾಟಿ ಮಾಡುವಾಗಲೂ ಗುಣಿಗಳಿಗೆ ನೀರು ಪೂರೈಸಿ ನಂತರ ನಾಟಿ ಮಾಡಬೇಕು. ಮಡಿಗಳಿಂದ ಸಸಿಗಳನ್ನು ಹೊರ ತೆಗೆದ ಮೇಲೆ ಸಾಧ್ಯವಾದಷ್ಟು ಬೇಗನೆ ನಾಟಿ ಮಾಡಬೇಕು. ದೂರ ಸಾಗಿಸಬೇಕಾದರೆ ಬಟ್ಟೆ ಅಥವಾ ಗೋಣಿ ಚೀಲವನ್ನು ನೀರಿನಿಂದ ನೆನಸಿ ಸಸಿಗಳ ಮೇಲೆ ಹಾಕಿಕೊಂಡು ಹೋಗಬೇಕು. ಮುಖ್ಯವಾದ ತರಕಾರಿ ಬೆಳೆಗಳು ೧. ಟೊಮೊಟೊ ಹೆಚ್ಚಾಗಿ ಬೆಳೆಯುವ ಹಾಗೂ ಬಳಸುವ ಕೆಲವೇ ತರಕಾರಿ ಬೆಳೆಗಳಲ್ಲಿ ಟೊಮೊಟೊ ಒಂದು ಜನಪ್ರಿಯ ತರಕಾರಿಯಾಗಿದೆ. ಇದನ್ನು ಹಸಿರು ಬಣ್ಣದ ಕಾಯಿ ಇದ್ದಾಗಿನಿಂದ ಪೂರ್ಣವಾಗುವ ಹಂತದವರೆಗೂ ಬಳಸುವರು. ಇದರಿಂದ ’ಕೆಚಪ್’ ಎಂಬ ಸಂಸ್ಕರಿಸಿದ ಪದಾರ್ಥವನ್ನೂ ತಯಾರಿಸುವರು. ಇದು ’ಎ’, ’ಬಿ’ ಮತ್ತು ’ಸಿ’ ಜೀವಸತ್ವಗಳನ್ನು ಪೂರೈಸುತ್ತದೆ. ನಮ್ಮ ರಾಜ್ಯದಲ್ಲಿ ಟೊಮೊಟೊ ಬೆಳೆಯಲು ಸೂಕ್ತವಾದ ವಾತಾವರಣವಿದೆ. ಒಣ ಭೂಮಿಯಲ್ಲಿ ಬೆಳೆಯಲು ಸಾಧ್ಯವಿದೆಯಾದರೂ ನೀರಾವರಿ ಪ್ರದೇಶದಲ್ಲಿ ಲಾಭದಾಯಕವಾಗಿ ಬೆಳೆಯಬಹುದು. ಜನವರಿ-ಫೆಬ್ರುವರಿ, ಜೂನ್-ಜುಲೈ ಮತ್ತು ಅಕ್ಟೋಬರ್‌‌ನವೆಂಬರ್‌ತಿಂಗಳುಗಳಲ್ಲಿ ಬೆಳೆಯಬಹುದು. ಇತ್ತೀಚೆಗೆ ಹಲವು ಹೈಬ್ರಿಡ್ ತಳಿಗಳು ಬಂದಿವೆ. ಇವು ದೊಡ್ಡ ಗಾತ್ರದ ಕಾಯಿಗಳನ್ನು ಕೊಡುವುದು. ’ಪೂಸಾರೂಬಿ’ ಒಂದು ಉತ್ತಮ ಹಾಗೂ ಅಲ್ಪಾವಧಿ ತಳಿ. ಇದು ಮಧ್ಯಮ ಗಾತ್ರದ ಕಾಯಿಗಳನ್ನು ಕೊಡುವುದು. ವರ್ಷದ ಮೂರೂ ಕಾಲಗಳಲ್ಲೂ ಇದನ್ನು ಯಶಸ್ವಿಯಾಗಿ ಬೆಳೆಯಬಹುದಾಗಿದೆ. ಇನ್ನಿತರ ತಳಿಗಳೆಂದರೆ, ರೋಮ್, ವೈಶಾಲಿ, ರಜನಿ, ನವೀನ್, ಎಸ್-೨೨ ಮುಂತಾದುವುಗಳು. ಹೈಬ್ರಿಡ್ ತಳಿಗಳಾದರೆ ೧.೨ ಮೀ. X ೧. ಮೀ., ಸುಧಾರಿತ ತಳಿಗಳಾದರೆ ೭೫ ಸೆಂ.ಮೀ. X ೬೦ ಸೆಂ.ಮೀ. ಮತ್ತು ೧ ಮೀ. X ೬೦ ಸೆಂ.ಮೀ. ಅಂತರದಲ್ಲಿ ನಾಟಿ ಮಾಡಬೇಕು. ರಸಗೊಬ್ಬರಗಳಲ್ಲಿ ಶೇ. ೫೦ ರಷ್ಟು ಸಾರಜನಕ, ಪೂರ್ಣ ಪ್ರಮಾಣದ ರಂಜಕ ಮತ್ತು ಪೊಟ್ಯಾಷ್‌ಗಳನ್ನು ನೀಡಿ, ನಾಟಿ ಮಾಡಿದ ಆರು ವಾರಗಳ ನಂತರ ಉಳಿದ ಶೇ. ೫೦ ರಷ್ಟು ಸಾರಜನಕ ಕೊಡಬೇಕು ಮತ್ತು ಆ ಸಮಯದಲ್ಲಿ ಗಿಡಗಳಿಗೆ ಮಣ್ಣೇರಿಸಬೇಕು. ಹವಾಗುಣ ಮತ್ತು ಮಣ್ಣಿನ ಗುಣಧರ್ಮಗಳನ್ನನುಸರಿಸಿ ೫-೬ ದಿನಗಳಿಗೊಮ್ಮೆ ನೀರು ಕೊಡಬೇಕು. ನಾಟಿ ಮಾಡಿದ ಎರಡೂವರೆ ತಿಂಗಳ ನಂತರ ಫಲ ಬರಲು ಆರಂಭವಾಗುವುದು. ಮುಂದೆ ಸುಮಾರು ಎರಡು ತಿಂಗಳವರೆಗೆ ಹಂತ ಹಂತವಾಗಿ ಕೊಯ್ಲು ಮಾಡಬಹುದು. ೨. ಮೆಣಸಿನಕಾಯಿ ಮೆಣಸಿನ ಕಾಯಿಯಲ್ಲಿ ಹಲವಾರು ತಳಿಗಳಿವೆ. ಚಿಕ್ಕಗಾತ್ರದ (ಪರಂಗಿ ಮೆಣಸಿನಕಾಯಿ), ದುಂಡನೆ (ದೊಣ್ಣೆ ಮೆಣಸಿನಕಾಯಿ), ಮತ್ತು ಉದ್ದನೆ ಕಾಯಿಗಳು ಇತ್ಯಾದಿ. ಚಿಕ್ಕ ಗಾತ್ರದ ಕಾಯಿಗಳು ತುಂಬಾ ಖಾರವಿದ್ದು ಬಳಕೆ ಕಡಿಮೆ. ದುಂಡು ಮೆಣಸಿನಕಾಯಿಗಳನ್ನು ಪಲ್ಯ ಮಾಡಲು ಮತ್ತು ಉದ್ದನೆ ಕಾಯಿಗಳನ್ನು ಒಗ್ಗರಣೆ ಪದಾರ್ಥಗಳಿಗೆ ಬಳಸುವರು. ಉದ್ದನೆಯ ಕಾಯಿಗಳು ಪೂರ್ಣ ಹಣ್ಣಾಗುವವರೆಗೆ ಗಿಡದಲ್ಲಿ ಬಿಟ್ಟು ಕೊಯ್ಲು ಮಾಡಿ, ಒಣಗಿಸಿ, ಖಾರದಪುಡಿ ಮಾಡಿ ಸಂಬಾರು ಮತ್ತು ಇತರ ಖಾರದ ತಿಂಡಿಗಳಿಗೆ ಉಪಯೋಗಿಸುವುದರಿಂದ ಮಾರುಕಟ್ಟೆಯಲ್ಲಿ ಬೇಡಿಕೆ ಹೆಚ್ಚು. ಮೆಣಸಿನಕಾಯಿ ಎಲ್ಲ ರೀತಿಯ ಮಣ್ಣುಗಳಲ್ಲಿ ಬೆಳೆಯಬಹುದಾದರೂ ಕಪ್ಪು ಮಣ್ಣು ಸೂಕ್ತ. ಜೂನ್-ಜುಲೈ ತಿಂಗಳುಗಳಲ್ಲಿ ಸಸಿಗಳನ್ನು ನಾಟಿ ಮಾಡಬಹುದು. ಕೆಲವು ತಳಿಗಳನ್ನು ಕುಂಡಗಳಲ್ಲಿಯೂ ನಾಟಿ ಮಾಡಿ ಬೆಳೆಯಬಹುದಾಗಿದೆ. ಮೆಣಸಿನಕಾಯಿ ತಳಿಗಳಲ್ಲಿ ಹಲವಾರು ಜನಪ್ರಿಯವಾಗಿವೆ. ಈ ತಳಿಗಳು ರಾಜ್ಯದ ಹಲವೆಡೆ ಸ್ಥಳೀಯವಾಗಿ ಬೆಳೆಯುತ್ತಿದ್ದು, ಅವುಗಳಿಗೆ ಆ ಪ್ರದೇಶದ ಹೆಸರುಗಳನ್ನು ಕೊಡಲಾಗಿದೆ. ಅವುಗಳೆಂದರೆ, ಬ್ಯಾಡಗಿ, ಮೈಸೂರು, ಗೌರೀಬಿದನೂರು, ಸಂಕೇಶ್ವರ ಇತ್ಯಾದಿ. ದುಂಡು ಮೆಣಸಿನಕಾಯಿ ತಳಿಗಳಲ್ಲಿ ಸೆಲೆಕ್ಷನ್-೧೩, ಸೆಲೆಕ್ಷನ್-೧೬, ಕ್ಯಾಲಿಪೋರ್ನಿಯಾ ವಂಡರ್‌‌‌, ಭಾರತ್‌, ರೂಬಿಕಿಂಗ್ ಇತ್ಯದಿಗಳು ಪ್ರಮುಖವಾದುವುಗಳು. ಬ್ಯಾಡಗಿ ತಳಿಯನ್ನು ಖಾರದಪುಡಿ ತಯಾರಿಸಲು ಉಪಯೋಗಿಸುವರು, ಕಾಯಿಗಳು ಹೆಚ್ಚು ಉದ್ದವಾಗಿರುತ್ತವೆ. ಹೆಚ್ಚು ಖಾರದಂಶ ಪಡೆಯಲು ’ಸಂಕೇಶ್ವರ’ ತಳಿ ಪ್ರಯೋಜನಕಾರಿ. ಮಳೆಯಾಶ್ರಯದಲ್ಲಿ ಈ ತಳಿಯನ್ನು ಬೆಳೆಸುವುದು ಸೂಕ್ತ. ಮೈಸೂರು ತಳಿಯ ಗಿಡಗಳು ಎತ್ತರವಾಗಿ ಬೆಳೆಯುವುವು. ಕೆಂಪು ಕಾಯಿಗಳನ್ನು ಬಿಡುತ್ತವೆ. ಗೌರೀ ಬಿದನೂರು ತಳಿಯ ಗಿಡಗಳೂ ಎತ್ತರವಾಗಿ ಬೆಳೆಯುತ್ತವೆ. ಕಾಯಿಗಳು ಸುಮಾರು ಐದು ಸೆಂ.ಮೀ. ಉದ್ದವಿರುತ್ತವೆ. ಕ್ಯಾಲಿಪೋರ್ನಿಯಾ ವಂಡರ್‌‌‌ತಳಿ ಅಧಿಕ ಇಳುವರಿ ನೀಡುವುದು. ಇದನ್ನು ಇಡೀ ವರ್ಷ ಬೆಳೆಯಬಹುದು. ಕಾಯಿಯ ತೊಗಟೆ ದಪ್ಪ. ಬೀಜಗಳ ಸಂಖ್ಯೆ ಕಡಿಮೆ. ಭಾರತ್ ತಳಿಯನ್ನು ಬೆಂಗಳೂರಿನ ಇಂಡೋ ಅಮೆರಿಕನ್ ಸಂಸ್ಥೆ ಬಿಡುಗಡೆ ಮಾಡಿದೆ. ಇದು ತಂಬಾಕು ನಂಜು ನಿರೋಧಕ ಶಕ್ತಿ ಹೊಂದಿದೆ. ಅಧಿಕ ಇಳುವರಿ ನೀಡುವುದು. ರೂಬಿ ಕಿಂಗ್ ತುಂಬಾ ಜನಪ್ರಿಯ ತಳಿಯಾಗಿದೆ. ಕಾಯಿಗಳು ೩-೪ ಅಂಚುಗಳನ್ನು ಹೊಂದಿರುತ್ತವೆ. ತಿರುಳು ದಪ್ಪ. ಸಿದ್ಧಪಡಿಸಿದ ಭೂಮಿಯಲ್ಲಿ ೭೫ ಸೆಂ.ಮೀ. X ೪೫ ಸೆಂ.ಮೀ. (ನೀರಾವರಿ), ೯೦ ಸೆಂ.ಮೀ. X ೯೦ ಸೆಂ.ಮೀ. (ಖುಷ್ಕಿ) ಅಂತರದಲ್ಲಿ ಪ್ರತಿ ಗುಣಿಗೆ ಎರಡು ಸಸಿಗಳನ್ನು ನೆಡಬೇಕು. ದುಂಡು ಮೆಣಸಿನಕಾಯಿ ೬೦ ಸೆಂ.ಮೀ. X ೪೫ ಸೆಂ.ಮೀ. ಅಂತರದಲ್ಲಿ ನೆಡಬೇಕು. ಹವಾಮಾನವನ್ನನುಸರಿಸಿ ೪-೫ ದಿನಗಳಿಗೊಮ್ಮೆ ನೀರು ಪೂರೈಸಬೇಕು. ಉದ್ದನೆಯ ಕಾಯಿ ಗಿಡನೆಟ್ಟ ೭೫ ದಿನಗಳ ನಂತರ, ದುಂಡು ಮೆಣಸಿನಕಾಯಿ ಗಿಡನೆಟ್ಟ ೬೦ ದಿನಗಳ ನಂತರ ಫಸಲಿಗೆ ಬರುತ್ತವೆ. ಒಣ ಮೆಣಸಿನಕಾಯಿ ಪಡೆಯಲು ಕಾಯಿ ಪೂರ್ಣ ಹಣ್ಣಾಗುವವರೆಗೆ ಗಿಡಗಳಲ್ಲೇ ಬಿಟ್ಟು ನಂತರ ಕೊಯ್ಲು ಮಾಡಿ ಚೆನ್ನಾಗಿ ಒಣಗಿಸಬೇಕು. ೩. ಬದನೆ ಬದನೆ ಎಲ್ಲರಿಗೂ ಬೇಕಾದ ತರಕಾರಿ. ಇದು ಒಂದು ಸತ್ವವುಳ್ಳ ತರಕಾರಿಯೂ ಹೌದು. ವರ್ಷದ ಎಲ್ಲ ಕಾಲಗಳಲ್ಲೂ ಬೆಳೆಯಬಹುದಾದ ಬದನೆಯ ಕೆಲವು ಗಿಡಗಳಾದರೂ ಕೈತೋಟದಲ್ಲಿ ಇದ್ದರೆ ಚೆನ್ನ. ಬದನೆ ಉಷ್ಣವಲಯದ ಬೆಳೆ. ವಿವಿಧ ರೀತಿಯ ಮಣ್ಣುಗಳಲ್ಲಿ ವರ್ಷವಿಡೀ ಬೆಳೆಯಬಹುದಾಗಿದೆ. ಬೆಳೆಯಲು ಜೂನ್-ಜುಲಯ, ಸೆಪ್ಟೆಂಬರ್‌‌ಅಕ್ಟೋಬರ್‌‌ಮತ್ತು ಜನವರಿ-ಫೆಬ್ರುವರಿ ತಿಮಗಳುಗಳು ಸೂಕ್ತ. ತಳಿಗಳಲ್ಲಿ ’ಪೂಸಾಕ್ರಾಂತಿ’ ಪ್ರಮುಖವಾದುದು. ಇದೊಂದು ಸುಧಾರಿತ ತಳಿ. ದುಂಡನೆಯ ಕಾಯಿ, ಅಧಿಕ ಇಳುವರಿ ನೀಡುವ ತಳಿ. ’ಅರ್ಕಾಕುಸುಮಾಕರ್‌‌‌’ ತಳಿ ಗೊಂಚಲು ರೂಪದಲ್ಲಿ ಕಾಯಿಗಳನ್ನು ಬಿಡುವುದು. ’ಅರ್ಕಾಶಿರೀಫ್‌’ ತಳಿ ಸ್ವಲ್ಪ ಉದ್ದನೆ ಕಾಯಿಗಳನ್ನು ಬಿಡುವುದು. ಇವಲ್ಲದೆ ಈರನಗೆರೆ, ಕೆಂಗೇರಿ, ರಾಮದುರ್ಗ, ಮಾಳಾಪುರ, ಪೂಸ ಪರ್ಪಲ್, ಪರ್ಪಲ್ ರೌಂಡ್, ಅರ್ಕಾನವನೀತ್ ಇತರ ತಳಿಗಳಾಗಿವೆ. ಸಸಿಗಳನ್ನು ನೆಡುವಾಗ ೭೫ ಸೆಂ.ಮೀ. X ೬೦ ಸೆಂ.ಮೀ. ಅಂತರವನ್ನು (ಸಾಲಿನಿಂದ ಸಾಲು X ಗಿಡದಿಂದ ಗಿಡ) ನೀಡಬೇಕು. ಮಳೆಗಾಲವಿರುವಾಗ ಹೆಚ್ಚು ನೀರು ಪೂರೈಸುವ ಅಗತ್ಯತೆ ಇರುವುದಿಲ್ಲ. ಆದರೆ ಬೇಸಿಗೆಯಲ್ಲಿ ಎರಡರಿಂದ ಮೂರು ದಿನಗಳಿಗೊಮ್ಮೆ ನೀರು ಕೊಡಬೇಕಾಗುವುದು. ಸತತವಾಗಿ ಒಂದೇ ಸ್ಥಳದಲ್ಲಿ ಬದನೆ ಬೆಳೆಯುವುದು ಸೂಕ್ತವಲ್ಲ. ಆಗಾಗ ಬೆಳೆಗಳನ್ನು ಬದಲಾಯಿಸಬೇಕು. ಸಸಿಗಳನ್ನು ನೆಟ್ಟ ಮೇಲೆ ಸುಮಾರು ಮೂರು ತಿಂಗಳಲ್ಲಿ ಕೊಯ್ಲು ಮಾಡಬಹುದು. ಕಾಯಿಗಳನ್ನು ವಾರದಲ್ಲಿ ಎರಡು ಬಾರಿ ಕೊಯ್ಲು ಮಾಡುವುದು ಒಳ್ಳೆಯದು. ಮೂರು ತಿಂಗಳು ಕಾಲ ಕೊಯ್ಲು ಮುಂದುವರೆಸಬಹುದು. ಸುಧಾರಿತ ತಳಿಗಳು ಹೆಚ್ಚಿಗೆ ಇಳುವರಿ ನೀಡುವುವು. ಕಾಯಿ ಇನ್ನೂ ಎಳಸಿರುವಾಗಲೇ ಕೊಯ್ಲು ಮಾಡಬೇಕು. ಇಲ್ಲವಾದರೆ ಬಲಿತು ಹಣ್ಣಾದರೆ ಮಾರುಕಟ್ಟೆಯಲ್ಲಿ ಬೇಡಿಕೆ ಕಡಿಮೆಯಾಗುತ್ತದೆ. ೪. ಸೌತೇಕಾಯಿ ಸೌತೆಯನ್ನು ನೇರವಾಗಿ ಸೇವನೆ ಮಾಡಬಹುದು. ಇದು ದೇಹಕ್ಕೆ ತಂಪು ಒದಗಿಸುತ್ತದೆ ಮತ್ತು ಆರೋಗ್ಯಕರವೂ ಹೌದು. ಇದನ್ನು ಪಲ್ಯ ಹಾಗೂ ಉಪ್ಪಿನಕಾಯಿ ತಯಾರಿಕೆಯಲ್ಲಿ ಹೇರಳವಾಗಿ ಬಳಸುವರು. ಇದು ಉಷ್ಣ ಪ್ರದೇಶದಲ್ಲಿ ಫಲಕಾರಿಯಾಗಿ ಬೆಳೆಯುವುದು. ಅತಿ ಉಷ್ಣಾಂಶವಿರುವ ಪ್ರದೇಶ ಸೂಕ್ತವಲ್ಲ. ಜೂನ್-ಜುಲೈ ಮತ್ತು ಜನವರಿ-ಫೆಬ್ರುವರಿ ತಿಂಗಳುಗಳು ಬಿತ್ತನೆಗೆ ಸೂಕ್ತ ಸಮಯ. ’ಜಪಾನೀಸ್ ಲಾಂಗ್ ಗ್ರೀನ್’ ಎಂಬುದು ಸೌತೆಯ ಎಂದು ಉತ್ತಮ ತಳಿ. ಅದು ಅಲ್ಪಾವಧಿ ತಳಿ. ತಳಿಯ ಹೆಸರೇ ಸೂಚಿಸುವಮತೆ ಕಾಯಿಗಳು ಉದ್ದವಾಗಿರುವುವು. ’ಚೈನಾ’ ತಳಿ ಉತ್ತಮ ಗುಣಮಟ್ಟ ಹೊಂದಿದ್ದು, ದೀರ್ಘಾವಧಿಯ ತಳಿಯಾಗಿದೆ. ಸೌತೆಯು ಬಳ್ಳಿ ಸಸ್ಯ. ಸುಮಾರು ೨ ಮೀ. ಅಂತರದ ಸಾಲುಗಳಲ್ಲಿ ೭೫ ಸೆಂ.ಮೀ.ಗೆ ಒಂದರಂತೆ ಬಳ್ಳಿ ಬೆಳೆಸಬಹುದು. ೪-೫ ದಿನಗಳಿಗೊಮ್ಮೆ ನೀರು ಪೂರೈಕೆ ಮಾಡಬೇಕಾಗುವುದು. ನೀರು ಪೂರೈಕೆ ಮಣ್ಣು ಮತ್ತು ಹವಾಗುಣವನ್ನವಲಂಬಿಸಿರುತ್ತದೆ. ಬೀಜ ಬಿತ್ತಿದ ಒಂದೂವರೆಯಿಂದ ಎರಡು ತಿಂಗಳಲ್ಲಿ ಬಳ್ಳಿಗಳು ಕಾಯಿ ಬಿಡಲು ಪ್ರಾರಂಭಿಸುತ್ತವೆ. ಎಳೆಯ ಕಾಯಿಗಳು ಒಂದು ಹಂತ ತಲುಪಿದ ಕೂಡಲೇ ಕೊಯ್ಲು ಮಾಡಬೇಕು. ಇಲ್ಲವಾದರೆ ಬಳ್ಳಿಗಳಲ್ಲೇ ಬಲಿತು ಹಣ್ಣಾಗಿ ಮಾರುಕಟ್ಟೆಯಲ್ಲಿ ಬೇಡಿಕೆ ಇರುವುದಿಲ್ಲ. ೫. ಹಾಗಲಕಾಯಿ ಹಾಗಲಕಾಯಿ ಕಹಿಯಾಗಿದ್ದರೂ ಆರೋಗ್ಯಕ್ಕೆ ಒಳ್ಳೆಯದು. ಇದು ಔಷಧೀಯ ಗುಣಗಳನ್ನು ಹೊಂದಿದೆ. ವಿಶೇಷವಾಗಿ ಮಧುಮೇಹ ರೋಗಿಗಳು ಇದನ್ನುಪಯೋಗಿಸುವರು. ಇದಕ್ಕೆ ಆಶ್ರಯವಾಗಿ ಹಬ್ಬಲು ಅವಕಾಶ ಮಾಡಿದರೆ ಉತ್ತಮ ಇಳುವರಿ ನೀಡುವುದು. ಹಾಗಲಕಾಯಿ ಅಧಿಕ ಉಷ್ಣ ಮತ್ತು ಶೀತವಲಯದ ಪ್ರದೇಶಗಳನ್ನು ಹೊರತು ಪಡಿಸಿದರೆ, ಉಳಿದೆಡೆ ಚೆನ್ನಾಗಿ ಬೆಳೆಯಬಹುದು. ಬೆಳೆ ಆರಂಭಿಸಲು ಜೂನ್-ಜುಲೈ ಮತ್ತು ಜನವರಿ – ಫೆಬ್ರುವರಿ ತಿಂಗಳುಗಳು ಸೂಕ್ತವಾಗಿವೆ. ’ಅರ್ಕಾಹರಿತ್’ ತಳಿಯು ಚಿಕ್ಕಗಾತ್ರದ ಕಾಯಿಗಳನ್ನು ಮತ್ತು ’ಕೊಯಂಬತ್ತೂರ್‌‌ಲಾಂಗ್’ ತಳಿಯು ಉದ್ದನೆಯ ಕಾಯಿಗಳನ್ನು ಬಿಡುತ್ತವೆ. ’ಪೂಸಾದೋ ಮೌಸಮಿ’ ಮತ್ತೊಂದು ಉತ್ತಮ ತಳಿ. ಇದು ಮಳೆ ಮತ್ತು ಬೇಸಿಗೆ ಕಾಲಗಳೆರಡರಲ್ಲೂ ಯಶಸ್ವಿಯಾಗಿ ಫಲ ನೀಡುವುದು. ಬೀಜಗಳನ್ನು ಸುಮಾರು ೧೨ ಗಂಟೆಗಳ ಕಾಲ ನೀರಿನಲ್ಲಿ ನೆನಸಿ ಬಿತ್ತನೆಗೆ ಉಪಯೋಗಿಸಬೇಕು. ೬೦ ಘನ ಸೆಂ.ಮೀ. ಅಳತೆಯ ಗುಂಡಿಗಳಲ್ಲಿ ಗೊಬ್ಬರ ಮಿಶ್ರಣ ತುಂಬಿ ನಾಟಿ ಮಾಡಬಹುದು. ೪-೫ ದಿನಗಳಿಗೊಮ್ಮೆ ನೀರು ಪೂರೈಸುತ್ತಿರಬೇಕು. ಇದು ಮಣ್ಣು ಮತ್ತು ಹವಾಮಾನವನ್ನು ಅವಲಂಬಿಸಿರುತ್ತದೆ. ಎಳೆಯ ಕಾಯಿಗಳನ್ನು ಮಾತ್ರ ಕೊಯ್ಲು ಮಾಡಿ ಉಪಯೋಗಿಸಬೇಕು. ಕಾಯಿಗಳು ಬಲಿತು ಹಣ್ಣಾಗುವ ಹಂತ ತಲುಪಿದರೆ ರುಚಿ ಕಳೆದುಕೊಳ್ಳುತ್ತವೆ. ಬೀಜ ಬಿತ್ತಿದೆ ಎರಡು ತಿಂಗಳ ನಂತರ ಫಸಲು ಆರಂಭವಾಗುವುದು. ೬. ತಿಂಗಳ ಹುರುಳಿ ಇದನ್ನು ’ತಿಂಗಳ ಅವರೆ’ ಎಂತಲೂ ಕರೆಯುವರು. ಇದು ದ್ವಿದಳ ಧಾನ್ಯ ಗುಂಪಿಗೆ ಸೇರಿದ ಅಲ್ಪಾವಧಿ ತರಕಾರಿ ಬೆಳೆ. ಎಳೆಯದಾಗಿರುವಾಗ ಕಾಯಿಗಳನ್ನು ತುಂಡಿರಿಸಿ ಮತ್ತು ಬಲಿತ ಮೇಲೆ ಕಾಳುಗಳನ್ನು ಬೇರ್ಪಡಿಸಿ ತರಕಾರಿಯಾಗಿ ಉಪಯೋಗಿಸುತ್ತಾರೆ. ರಾಜ್ಯದ ಬಹುತೇಕ ಭಾಗಗಳಲ್ಲಿ ಬೆಳೆಯುತ್ತಾರೆ. ೨೫ ಸೆ. ರಿಂದ ೩೦ ಸೆ. ಉಷ್ಣಾಂಶ ಸೂಕ್ತ. ಜೂನ್-ಜುಲೈ ತಿಂಗಳು ಬೆಳೆಯ ಆರಂಭಕ್ಕೆ ಒಳ್ಳೆಯ ಸಮಯ. ಬೇಸಿಗೆಯಲ್ಲೂ ಬೆಳೆಯಬಹುದಾಗಿದೆ. ತಳಿಗಳಲ್ಲಿ ’ಪೊದೆ’ ಮತ್ತು ’ಹಬ್ಬುವ’ ವಿಧಗಳಿವೆ. ಪೊದೆ ಜಾತಿಯಲ್ಲಿ ’ಅರ್ಕಾಕೋಯಲ್’, ’ಬೆಂಗಳೂರ್‌ಬೀನ್ಸ್’, ’ಕಂಟೆಂಡರ್‌‌’, ’ಟೆಂಡರ್‌‌ಗ್ರೀನ್’ ಇತ್ಯಾದಿಗಳು. ’ಕೆಂಟುಕಿ ವಂಡರ್‌’ ಮತ್ತು ’ಬ್ಲೂಲೇಕ್’ ತಳಿಗಳು ಹಬ್ಬುವ ಜಾತಿಗೆ ಸೇರಿದವುಗಳಾಗಿವೆ. ಇದು ಅಧಿಕ ಇಳುವರಿ ನೀಡುವ ತಳಿಯಾಗಿದ್ದು, ಕಾಯಿಗಳಲ್ಲಿ ಹೆಚ್ಚಿಗೆ ನಾರು ಇರುವುದಿಲ್ಲ. ಪೊದೆ ತಳಿಗಳಿಗೆ ೩೦ ಸೆಂ.ಮೀ. X ೧೫ ಸೆಂ.ಮೀ. ಮತ್ತು ಹಬ್ಬುವ ತಳಿಗಳಿಗೆ ೬೦ ಸೆಂ.ಮೀ. X ೩೦ ಸೆಂ.ಮೀ. ಅಂತರ ಕೊಟ್ಟು ಬೀಜ ಬಿತ್ತನೆ ಮಾಡಬಹುದು. ಗಿಡಗಳಿಗೆ ಮಣ್ಣೇರಿಸಬೇಕು. ಹಬ್ಬುವ ತಳಿಗಳಿಗೆ ಕೋಲಿನಾಸರೆ ಕೊಟ್ಟು ಹಬ್ಬಲು ಅವಕಾಶ ಮಾಡಬೇಕು. ಹದ ನೋಡಿಕೊಂಡು ವಾರದಲ್ಲಿ ಎರಡು ಬಾರಿ ನೀರು ಪೂರೈಸಬೇಕು. ಬಿತ್ತನೆ ಮಾಡಿದ ನಂತರ ಪೊದೆ ತಳಿಗಳು ಹಬ್ಬುವ ಪೊದೆ ತಳಿಗಳಿಗಿಂತ ಎರಡು ತಿಂಗಳು ತಡವಾಗಿ ಕೊಯ್ಲಿಗೆ ಬರುತ್ತವೆ. ಕಾಯಿ ಬಲಿಯುವ ಮುನ್ನವೇ ಕೊಯ್ಲು ಮಾಡಬೇಕು. ೭. ಗೋರಿಕಾಯಿ ಇದಕ್ಕೆ ಚೌಳೀಕಾಯಿ ಎಂಬ ಹೆಸರಿದೆ. ಗಿಡವಾಗಿ ಬೆಳೆಯುವ ಇದರ ಕಾಯಿಗಳನ್ನು ಪಲ್ಯ ಮಾಡಲು ಹೆಚ್ಚಾಗಿ ಉಪಯೋಗಿಸುವರು. ಇದು ಗೊಂಚಲು ಗೊಂಚಲಾಗಿ ಕಾಯಿ ಬಿಡುವ ಒಂದು ರುಚಿಕರವಾದ ತರಕಾರಿ. ಖುಷ್ಕಿ ಪ್ರದೇಶದಲ್ಲೂ ಯಶಸ್ವಿಯಾಗಿ ಬೆಳೆಯುವ ಶಕ್ತಿ ಹೊಂದಿರುವುದರಿಂದ ನಮ್ಮ ರಾಜ್ಯದ ವಿವಿಧೆಡೆ ಬೆಳೆಯಬಹುದಾಗಿದೆ. ಇದನ್ನು ಬೆಳೆಯಲು ಅಧಿಕ ಉಷ್ಣಾಂಶ ಬೇಕು. ಜೂನ್-ಜುಲೈ ತಿಂಗಳುಗಳು ಬಿತ್ತನೆಗೆ ಸೂಕ್ತ. ಬೇಸಿಗೆಯಲ್ಲೂ ಬೆಳೆಯಬಹುದಾಗಿದೆ. ಗೋರಿಕಾಯಿಯಲ್ಲಿ ’ಪೂಸಾ ಮೌಸಮಿ’ ಮತ್ತು ’ಪೂಸಾ ನವಬಹಾರ್‌‌’ ಎಂಬ ಎರಡು ಉತ್ತಮ ತಳಿಗಳಿದ್ದು ಅಧಿಕ ಇಳುವರಿ ನೀಡುವುವು. ಗುಣಿಗಳಲ್ಲಿ ಬೀಜ ಬಿತ್ತನೆ ಮಾಡುವುದು ಒಳ್ಳೆಯದು. ಇದರಿಂದ ಅಧಿಕ ಇಳುವರಿ ಪಡೆಯಲು ಸಾಧ್ಯವಾಗುವುದು. ೪೫ ಸೆಂ.ಮೀ. ಅಂತರದಲ್ಲಿ ಸಾಲುಗಳನ್ನು ಬಿಟ್ಟು ಸಾಲಿನಲ್ಲಿ ೨೨ ಸೆಂ.ಮೀ. ಗೆ ಒಂದರಂತೆ ಗುಣಿಗಳನ್ನು ಮಾಡಿ ಬೀಜ ಬಿತ್ತಬೇಕು. ವಿಶೇಷವಾಗಿ ಕಾಳಜಿ ವಹಿಸುವ ಅವಶ್ಯಕತೆಯಿಲ್ಲ. ಗಿಡಗಳಿಗೆ ಮಣ್ಣೇರಿಸಬೇಕು. ಹವಾಮಾನವನ್ನವಲಂಬಿಸಿ ಎಂಟು ದಿನಗಳಿಗೊಮ್ಮೆ ನೀರು ಪೂರೈಸಬೇಕು. ಬಿತ್ತನೆ ಮಾಡಿದ ಒಂದೂವರೆ ತಿಂಗಳಿಗೆ ಕೊಯ್ಲು ಪ್ರಾರಂಭವಾಗುತ್ತದೆ. ಎಳೆಯವಾದ ಕಾಯಿಗಳನ್ನು ಮಾತ್ರ ಕೊಯ್ಲು ಮಾಡಬೇಕು. ಗೋರಿಕಾಯಿ ಸಹ ದ್ವಿದಳ ಧಾನ್ಯ ಗುಂಪಿಗೆ ಸೇರಿದ ತರಕಾರಿಯಾಗಿದೆ. ೮. ಮೂಲಂಗಿ ಮೂಲಂಗಿ ಬೇರು ತರಕಾರಿ. ಮಣ್ಣಿನಲ್ಲಿ ಬೆಳೆದ ಗೆಡ್ಡೆ ಭಾಗ ಮತ್ತು ಮೇಲೆ ಬೆಳೆದ ಸೊಪ್ಪು (ಎಲೆಗಳು) ಎರಡನ್ನೂ ತರಕಾರಿಯಾಗಿ ಉಪಯೋಗಿಸಲಾಗುವುದು. ಮೂಲಂಗಿ ಔಷಧೀಯ ಗುಣಗಳನ್ನು ಹೊಂದಿದೆ. ಮೂಲಂಗಿ ಯಶಸ್ವಿಯಾಗಿ ಬೆಳೆಯಲು ತಂಪಿನಿಂದ ಕೂಡಿದ ವಾತಾವರಣ ಮತ್ತು ಮರಳು ಮಿಶ್ರಿತ ಗೋಡು ಮಣ್ಣು ಉತ್ತಮ. ಬಿತ್ತನಗೆ ಜೂನ್-ಜುಲೈ, ಅಕ್ಟೋಬರ್‌‌ನವೆಂಬರ್‌‌ಮತ್ತು ಜನವರಿ-ಫೆಬ್ರುವರಿ ತಿಂಗಳುಗಳು ಸೂಕ್ತ. ತಳಿಗಳಲ್ಲಿ ’ಜಪಾನೀಸ್ ವೈಟ್’ ಸುಮಾರು ೨೨ ಸೆಂ.ಮೀ. ಉದ್ದದ ಗೆಡ್ಡೆಗಳನ್ನು ಕೊಡುವುದು ಮತ್ತು ಇದರ ಬಿತ್ತನೆಗೆ ಅಕ್ಟೋಬರ್‌ನವೆಂಬರ್‌ತಿಂಗಳುಗಳು ಸೂಕ್ತ ಕಾಲ. ಇತರ ತಳಿಗಳೆಂದರೆ ’ಅರ್ಕಾ ನಿಶಾಂತ್’ ’ವೈಟ್ ಐಸಿಕಲ್’ ಇತ್ಯಾದಿ. ಬೀಜ ಬಿತ್ತಲು ೩ ಸೆಂ.ಮೀ. ಅಂತರದಲ್ಲಿ ಬೋದುಗಳನ್ನು ಮಾಡಿ ಪ್ರತಿ ೧೦ ಸೆಂ.ಮೀ. ಗೊಂದರಂತೆ ಬೀಜಗಳನ್ನು ಬಿತ್ತಬೇಕು. ಹವಾಗುಣವನ್ನನುಸರಿಸಿ ನೀರು ಪೂರೈಕೆ ಮಾಡಬೇಕು. ಎಳೆಯ ಮೂಲಂಗಿ ತಿನ್ನಲು ರುಚಿಕರ. ಬೀಜ ಬಿತ್ತಿದ ಸುಮಾರು ೫-೬ ವಾರಗಳಲ್ಲಿ ಕೊಯ್ಲು ಮಾಡಬಹುದು. ೯. ಗಜ್ಜರಿ (ಗಾಜು ಗಡ್ಡೆ) ಗಜ್ಜರಿ ಬೇರು ತರಕಾರಿ. ಮೂಲಂಗಿ ಗೆಡ್ಡೆಯ ಆಕಾರ ಹೊಂದಿರುವ ಇದು ಗಾತ್ರದಲ್ಲಿ ಚಿಕ್ಕದು. ಅಡುಗೆಯಲ್ಲಿ ಬಹುಬಗೆಯಾಗಿ ಗಜ್ಜರಿಯನ್ನು ಉಪಯೋಗಿಸುವುದುಂಟು. ಗಜ್ಜರಿಯನ್ನು ಹೆಚ್ಚಿಗೆ ಉಪಯೋಗಿಸುವುದರಿಂದ ಕಣ್ಣಿನ ಆರೋಗ್ಯ ಹಾಗೂ ದೃಷ್ಟಿ ಉತ್ತಮವಾಗುವುದು ಮತ್ತು ದಂತ ರಕ್ಷಣೆಗೂ ಒಳ್ಳೆಯದು. ಮೂಲಂಗಿಯಂತೆ ಗಜ್ಜರಿ ಬೆಳೆಗೂ ತಂಪಿನಿಂದ ಕೂಡಿದ ವಾತಾವರಣ ಬೇಕು. ಮರಳು ಮಿಶ್ರಿತ ಗೋಡು ಮಣ್ಣು ಉತ್ತಮ. ವರ್ಷವಿಡೀ ಬೆಳೆಯಬಹುದು. ಜೂನ್-ಜುಲೈ, ಅಕ್ಟೋಬರ್‌‌ನವೆಂಬರ್‌ಮತ್ತು ಜನವರಿ-ಫೆಬ್ರುವರಿ ತಿಂಗಳುಗಳು ಬೆಳೆ ಬೆಳೆಯಲು ಸೂಕ್ತ. ಗಜ್ಜರಿಯಲ್ಲಿ ಕೆಲವು ಉತ್ತಮ ತಳಿಗಳಿವೆ. ಅವುಗಳಲ್ಲಿ ’ಪೂಸಾ ಕೇಸರ್‌’, ’ಚೆಂಟನಿ’ ಮುಖ್ಯವಾದುವುಗಳು. ’ಪೂಸಾ ಕೇಸರ್‌‌’ ತಳಿ ಅಧಿಕ ಇಳುವರಿ ನೀಡುವುದು ಹಾಗೂ ಕೆರೋಟಿನ್ ಅಂಶ ಹೆಚ್ಚಾಗಿರುತ್ತದೆ. ’ಚೆಂಟನಿ’ ತಳಿ ಸಹ ಉತ್ತಮವಾದುದು. ಇದು ದೊಡ್ಡ ಗಾತ್ರದ ಗೆಡ್ಡೆಗಳನ್ನು ಬಿಡುವುದು. ಮಡಿಗಳಲ್ಲಿ ಗಜ್ಜರಿ ಬೆಳೆಸಬಹುದು. ಹದಗೊಳಿಸಿದ ಮಡಿಗಳಲ್ಲಿ ೨೦ ಸೆಂ.ಮೀ. ಅಂತರದ ಸಾಲುಗಳಲ್ಲಿ ಬೀಜ ತೆಳುವಾಗಿ ಬಿತ್ತನೆ ಮಾಡಬೇಕು. ಸಸಿಗಳು ಮೇಲೇಳುತ್ತಿದ್ದಂತೆ. ೧೦ ಸೆಂ.ಮೀ. ಅಂತರದಲ್ಲಿ ಒಂದೊಂದು ಸಸಿಯನ್ನು ಉಳಿಸಿಕೊಂಡು ಉಳಿದವುಗಳನ್ನು ಕಿತ್ತುಹಾಕಬೇಕು. ಅವಶ್ಯವೆನಿಸಿದಾಗ ನೀರು ಪೂರೈಸಬೇಕು. ಎಲೆಗಳು ಹಳದಿ ಬಣ್ಣಕ್ಕೆ ತಿರುಗುವುದು ಕೊಯ್ಲಿನ ಸೂಚನೆ, ಬಿತ್ತನೆ ಮಾಡಿದ ಸುಮಾರು ಮೂರು ತಿಂಗಳಿಗೆ ಕೊಯ್ಲು ಮಾಡಬಹುದು. ೧೦. ಈರುಳ್ಳಿ ಪ್ರಮುಖ ಗೆಡ್ಡೆ ತರಕಾರಿಗಳಲ್ಲಿ ಈರುಳ್ಳಿ ಮುಖ್ಯವಾದುದು. ಪ್ರತಿ ದಿನ ಎಲ್ಲರೂ ಉಪಯೋಗಿಸುವ ತರಕಾರಿ ಎಂದರೆ ಈರುಳ್ಳಿ. ಇದರ ಮೇಲ್ಭಾಗದ ಸೊಪ್ಪು ಮತ್ತು ಗೆಡ್ಡೆಗಳ ಎರಡೂ ಭಾಗಗಳನ್ನು ಉಪಯೋಗಿಸುತ್ತಾರೆ. ಈರುಳ್ಳಿಯನ್ನು ವರ್ಷವಿಡೀ ಬೆಳೆಯಬಹುದು. ಜೂನ್-ಜುಲೈ, ಸೆಪ್ಟೆಂಬರ್‌‌ಅಕ್ಟೋಬರ್‌ಮತ್ತು ಜನವರಿ-ಫೆಬ್ರವರಿ ತಿಂಗಳುಗಳು ಬೇಸಾಯ ಆರಂಭಿಸಲು ಸೂಕ್ತವಾದ ಸಮಯ. ತಳಿಗಳಲ್ಲಿ ’ಬಳ್ಳಾರಿ ರೆಡ್’ ಉತ್ತಮ ಗುಣಗಳನ್ನು ಹೊಂದಿದೆ. ಗೆಡ್ಡೆಗಳ ಬಣ್ಣ ಕೆಂಪು. ಮತ್ತೊಂದು ’ಅರ್ಕಾಪ್ರಗತಿ’ ತಳಿಯನ್ನು ಹಲವಾರು ದಿನಗಳವರೆಗೆ ಕೆಡದಂತೆ ಇಡಬಹುದು. ಇವಲ್ಲದೇ ’ಅರ್ಕಾನಿಕೇತನ್’, ’ಅರ್ಕಾಕಲ್ಯಾಣ್‌’ ಬೇಸಾಯದಲ್ಲಿವೆ. ಚೌಕಾಕಾರದ ಮಡಿಗಳಲ್ಲಿ ಬೀಜ ಬಿತ್ತನೆ ಮಾಡಿ ಸಸಿಗಳು ಮೇಲೇಳಾಗುತ್ತಿದ್ದಂತೆ ಹೆಚ್ಚುವರಿ ಸಸಿಗಳನ್ನು ತೆಗೆದು ತೆಳುಗೊಳಿಸಬೇಕು. ಕೈತೋಟದಲ್ಲಿನ ಮಡಿಗಳಲ್ಲಿ ಬಿತ್ತನೆಯ ಈ ಕ್ರಮ ಅನುಕೂಲಕರ. ಅವಶ್ಯಕತೆ ನೋಡಿಕೊಂಡು ನೀರು ಪೂರೈಕೆ ಮಾಡಬೇಕು. ಎಲೆಗಳು ಬಾಡುತ್ತ ಹಳದಿ ಬಣ್ಣಕ್ಕೆ ತಿರುಗುತ್ತಿದ್ದಂತೆ ಕೊಯ್ಲು ಆರಂಭಿಸಬಹುದು. ನಂತರ ನೆರಳಿನಲ್ಲಿ ಕೆಲವು ದಿನಗಳವರೆಗೆ ಒಣಗಿಸಿದರೆ ಶೇಖರಣಾ ಸಾಮರ್ಥ್ಯ ಹೆಚ್ಚುವುದು. ಮೊಳಕೆ ಬಂದ ಗೆಡ್ಡೆಗಳು ಮತ್ತು ಗಾಯಗಳಾದುವುಗಳನ್ನು ಪ್ರತ್ಯೇಕಿಸಬೇಕು. ೧೧. ಬೆಳ್ಳುಳ್ಳಿ ದಿನ ನಿತ್ಯದ ಅಡುಗೆಯಲ್ಲಿ ಬೆಳ್ಳುಳ್ಳಿ ಬೇಕೇ ಬೇಕು. ಬೆಳ್ಳುಳ್ಳಿ ಒಂದು ಉತ್ತಮ ಗೆಡ್ಡೆ ತರಕಾರಿ. ಇದು ಔಷಧೀಯ ಗುಣಗಳನ್ನು ಹೊಂದಿದೆ. ಈರುಳ್ಳಿಯಂತೆ ಇದನ್ನು ನೀರು ಬಸಿದುಹೋಗುವ ಮಣ್ಣಿನಲ್ಲಿ ಬೆಳೆಯುವರು. ಸೆಪ್ಟೆಂಬರ್‌ಅಕ್ಟೋಬರ್‌ತಿಂಗಳುಗಳು ಬಿತ್ತನೆಗೆ ಸೂಕ್ತ ಸಮಯ. ಬೆಳ್ಳುಳ್ಳಿಯಲ್ಲಿ ’ರಾಜೆಲ್ಲೆ ಗೆಡ್ಡೆ’ ಎಂಬ ತಳಿ ಜನಪ್ರಿಯವಾಗಿದೆ. ಅನುಕೂಲಕರ ರೀತಿಯಲ್ಲಿ ಮಡಿಗಳನ್ನು ತಯಾರಿಸಿ ಗೆಡ್ಡೆಗಳನ್ನು ಬಿಡಿಸಿ ನೆಡಬಹುದು. ಅವಶ್ಯಕತೆ ನೋಡಿಕೊಂಡು ನೀರು ಪೂರೈಕೆ ಮಾಡಬೇಕು. ಮೇಲಿನ ಎಲೆಗಳು ಬಾಡುತ್ತಾ ಹಳದಿ ಬಣ್ಣಕ್ಕೆ ತಿರುಗಿದಾಗ ಕೊಯ್ಲು ಮಾಡಬಹುದು. ನಂತರ ಗೆಡ್ಡೆಗಳನ್ನು ನೆರಳಿನಲ್ಲಿ ಹರಡಿ ಒಣಗಿಸಬೇಕು. ೧೨. ಕೋಸು ತರಕಾರಿಗಳು ಕೋಸು ತರಕಾರಿಗಳಲ್ಲಿ ’ಎಲೆಕೋಸು’, ’ಹೂವು ಕೋಸು’ ಮತ್ತು ’ಗೆಡ್ಡೆ ಕೋಸು’ ಎಂಬ ಮೂರು ಬಗೆ ಬೆಳೆಗಳು. ವಿಶೇಷವಾಗಿ ನಗರ ಪ್ರದೇಶಗಳಲ್ಲಿ ಈ ತರಕಾರಿಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಬಳಸುವರು. ಆದರೆ ಇತ್ತೀಚೆಗೆ ಗ್ರಾಮೀಣ ಪ್ರದೇಶಗಳಲ್ಲೂ ಇವುಗಳ ಉಪಯೋಗ ಹೆಚ್ಚಾಗುತ್ತಿದೆ. ಕೋಸು ತರಕಾರಿಗಳನ್ನು ಬೆಳೆಯಲು ತಂಪಾದ ವಾತಾವರಣ ಬೇಕು. ಹೀಗಾಗಿ ಚಳಿಗಾಲದಲ್ಲಿ ಈ ಬೆಳೆಗಳನ್ನು ಯಶಸ್ವಿಯಾಗಿ ಬೆಳೆಯಬಹುದು. ಈ ಬಳೆಗೆ ಚೆನ್ನಾಗಿ ನೀರು ಬಸಿದು ಹೋಗುವ ಮರಳು ಮಿಶ್ರಿತ ಗೋಡು ಮಣ್ಣು ಉತ್ತಮ. ಎಲೆಕೋಸು : ಇದರಲ್ಲಿ ಅಲ್ಪಾವಧಿ ಮತ್ತು ದೀರ್ಘಾವಧಿ ತಳಿಗಳಿವೆ. ’ಪ್ರೈಡ್ ಆಪ್ ಇಂಡಿಯಾ’ ಮತ್ತು ’ಗೋಲ್ಡನ್ ಏಕರ್‌‌’ ಅಲ್ಪಾವಧಿ ತಳಿಗಳು. ಇವು ಎರಡರಿಂದ ಎರಡೂವರೆ ತಿಂಗಳಿಗೆ ಕೊಯ್ಲಿಗೆ ಬರುತ್ತವೆ ಹಾಗೂ ’ಲೇಟ್ ಡ್ರಮ್ ಹೆಡ್’ ಮತ್ತು ’ಡ್ಯಾನಿಷ್ ಬಾಲ್ ಹೆಡ್’ ದೀರ್ಘಾವಧಿ ತಳಿಗಳು. ಇವು ಸುಮಾರು ನಾಲ್ಕು ತಿಂಗಳಲ್ಲಿ ಕೊಯ್ಲಿಗೆ ಬರುತ್ತವೆ. ೪೫ ಸೆಂ.ಮೀ. X ೧೫ ಸೆಂ.ಮೀ. ಅಂತರದಲ್ಲಿ ಬೋದುಗಳ ಮೇಲೆ ನಾಲ್ಕು ವಾರಗಳ ಸಸಿಗಳನ್ನು ನಾಟಿ ಮಾಡಬಹುದು. ಅವಶ್ಯಕತೆಗನುಸಾರವಾಗಿ ನೀರು ಪೂರೈಕೆ ಮಾಡಬಹುದಾಗಿದೆ ಮತ್ತು ತಳಿಗಳ ಅವಧಿಗನುಸಾರವಾಗಿ ಕೊಯ್ಲು ಮಾಡಬೇಕಾಗುವುದು. ಹೂವು ಕೋಸು : ಹೂವು ಕೋಸು ಬೆಳೆಯಲ್ಲಿ ಮೂರು ಬಗೆಯ ತಳಿಗಳಿವೆ. ಕೊಯ್ಲು ಅವಧಿಗನುಸರಿಸಿ ವಿಂಗಡಣೆ ಮಾಡಲಾಗಿದೆ. (i) ಅಲ್ಪಾವಧಿ ತಳಿಗಳು : ೬೦-೮೦ ದಿನಗಳಲ್ಲಿ ಕೊಯ್ಲಿಗೆ ಬರುತ್ತವೆ. ಉದಾ| ಅರ್ಲಿ ಮತ್ತು ಸ್ನೋಬಾಲ್. (ii) ಮಧ್ಯಮಾವಧಿ ತಳಿಗಳು : ೮೦-೧೦೦ ದಿನಗಳಲ್ಲಿ ಕೊಯ್ಲಿಗೆ ಬರುತ್ತವೆ. ಉದಾ|| ಸ್ನೋ ಬಾಲ್. (iii) ದೀರ್ಘಾವಧಿ ತಳಿಗಳು : ೧೦೦-೧೨೦ ದಿನಗಳಲ್ಲಿ ಕೊಯ್ಲಿಗೆ ಬರುತ್ತವೆ. ಉದಾ|| ಸ್ನೋ ಬಾಲ್ -೧೬. ನಾಟಿಗೆ ಬೋದುಗಳನ್ನು ತಯಾರಿಸಬೇಕು. ಅಲ್ಪಾವಧಿ ತಳಿಗಳಿಗೆ ೪೫ X ೪೨ ಸೆಂ.ಮೀ. ಅಂತರ ನೀಡಿ ಸಸಿಗಳನ್ನು ನಾಟಿ ಮಾಡಬೇಕು. ಮಧ್ಯಮಾವಧಿ ಮತ್ತು ದೀರ್ಘಾವಧಿ ತಳಿಗಳಿಗೆ ೬೦ X ೪೫ ಸೆಂ.ಮೀ. ಅಂತರ ನೀಡಿ ಸಸಿಗಳನ್ನು ನಾಟಿ ಮಾಡಬೇಕು. ಅವಶ್ಯಕತೆಯನ್ನನುಸರಿಸಿ ನೀರು ಪೂರೈಕೆ ಮಾಡಬೇಕು ಮತ್ತು ತಳಿಗಳ ಅವಧಿಗನುಸಾರವಾಗಿ ಕೊಯ್ಲು ಮಾಡಬೇಕು. ಗೆಡ್ಡೆಕೋಸು : ಗೆಡ್ಡೆಕೋಸಿನಲ್ಲಿ ’ವೈಚ್ ವೆಯೆನ್ನಾ’ ಮತ್ತು ’ಪರ್ಪಲ್ ವಿಯೆನ್ನಾ’ ಪ್ರಮುಖವಾದ ತಳಿಗಳು. ಜೂನ್-ಜುಲೈ ತಿಂಗಳಲ್ಲಿ ಬೆಳೆಯಬಹುದು. ಬೋದುಗಳನ್ನು ತಯಾರಿಸಿ ೩೦ ಸೆಂ.ಮೀ. X ೨೨ ಸೆಂ.ಮೀ. ಅಂತರದಲ್ಲಿ ಸಸಿಗಳನ್ನು ನಾಟಿ ಮಾಡಬೇಕು. ೩-೪ ವಾರಗಳ ಸಸಿಗಳನ್ನು ನಾಟಿಗೆ ಬಳಸಬಹುದು. ನಾಟಿ ಮಾಡಿದ ನಂತರ ೨-೩ ತಿಂಗಳಲ್ಲಿ ಕೊಯ್ಲು ಮಾಡಬಹುದು. ೧೩. ಸೊಪ್ಪು ತರಕಾರಿಗಳು ಸೊಪ್ಪು ತರಕಾರಿಗಳು ಸತ್ವಭರಿತವಾಗಿವೆ. ಮಕ್ಕಳು, ಗರ್ಭಿಣೆಯರು, ವಯಸ್ಸಾದವರು ಹೆಚ್ಚಾಗಿ ಸೊಪ್ಪಿನ ತರಕಾರಿಗಳನ್ನು ಬಳಸುವುದು ಆರೋಗ್ಯಕ್ಕೆ ಹಿತಕರ. ಸೊಪ್ಪುಗಳಿಂದ ಸಾಕಷ್ಟು ಪ್ರಮಾಣದಲ್ಲಿ ಕೆರೋಟಿನ್ ಹಾಗೂ ಅನೇಕ ಜೀವಸತ್ವಗಳು ಸಿಗುತ್ತವೆ. ಇವು ಕಣ್ಣುಗಳ ಆರೋಗ್ಯ ಕಾಪಾಡುವುವು. ಕೈತೋಟದಲ್ಲಿ ಸೊಪ್ಪು ತರಕಾರಿಗಳನ್ನು ಬೆಳೆಯುವುದು ಸುಲಭ. ಸಮತೋಲನ ಆಹಾರದಲ್ಲಿ ಸೊಪ್ಪುಗಳ ಪಾತ್ರ ಬಹಳ ಮಹತ್ವದ್ದು. ಕೊತ್ತಂಬರಿ ಸೊಪ್ಪು : ಅಡುಗೆಗೆ ಕೊತ್ತಂಬರಿ ಸೊಪ್ಪು ನಿತ್ಯವೂ ಬೇಕು. ಇದು ಅಡುಗೆಗೆ ವಿಶಿಷ್ಟವಾದ ರುಚಿ ಕೊಡುವುದಲ್ಲದೇ ತಯಾರಿಸಿದ ಪದಾರ್ಥಗಳು ಸುವಾಸನೆ ಬೀರುತ್ತವೆ. ಶಾಖಾಹಾರಿ ಮತ್ತು ಮಾಂಸದ ಹಲವಾರು ಬಗೆಯ ತಯಾರಿಕೆಗಳಲ್ಲಿ ಕೊತ್ತಂಬರಿಯ ಉಪಯೋಗ ಹೆಚ್ಚು. ಕೊತ್ತಂಬರಿ ಸಸ್ಯದ ಕಾಂಡ, ಎಲೆ ಮತ್ತು ಬೀಜ ಮೂರನ್ನೂ ಸಂಪೂರ್ಣವಾಗಿ ಉಪಯೋಗಿಸುತ್ತಾರೆ. ತಂಪು ಹವಾಮಾನದಲ್ಲಿ ಈ ಬೆಳೆ ಚೆನ್ನಾಗಿ ಬೆಳೆಯುವುದು ಹಾಗೂ ವರ್ಷದ ಎಲ್ಲ ಕಾಲಗಳಲ್ಲಿ ಬೆಳೆಯಬಹುದು. ಮರಳು ಮಿಶ್ರಿತ ಕೆಂಪು ಮಣ್ಣು ಮತ್ತು ಕಪ್ಪು ಮಣ್ಣಿನಲ್ಲಿ ಬೆಳೆಯುವುದು ಸೂಕ್ತ. ಗ್ವಾಲಿಯರ್‌‌, ಸಿ.ಎಸ್.-೬, ಸಿ.ಬಿ.-೨ ಎಂಬ ಕೆಲವು ಉತ್ತಮ ತಳಿಗಳಿವೆ. ಸಿಂಪೋ ಎಸ್-೩೩ ಎಂಬ ತಳಿ ಅತ್ಯುತ್ತಮ ಗುಣಗಳನ್ನು ಹೊಂದಿದೆ. ಈ ತಳಿಯಿಂದ ದೊಡ್ಡ ಗಾತ್ರದ ಸಸ್ಯಗಳನ್ನು ಬೆಳೆಯಬಹುದಲ್ಲವೇ ಸೊಪ್ಪಿನ ಪ್ರಮಾಣ ಕೂಡಾ ಹೆಚ್ಚು. ಬಿತ್ತನೆಗೆ ಮೊದಲು ಬೀಜಗಳನ್ನು ಹೋಳು ಮಾಡಿ ಒಂದು ರಾತ್ರಿ ನೀರಿನಲ್ಲಿ ನೆನೆ ಹಾಕಿ, ನಂತರ ನೆರಳಿನಲ್ಲಿ ಒಣಗಿಸಿ, ಬೀಜೋಪಚಾರ ಮಾಡುವುದು ಒಳ್ಳೆಯದು. ಒಂದು ಕಿ.ಗ್ರಾಂ ಬೀಜಕ್ಕೆ ೨.೫ ಗ್ರಾಂ ಥೈರಾಮ್ ಔಷಧಿ ಬೆರೆಸಿ ಉಪಚರಿಸಬೇಕು. ನಂತರ ಮಡಿಗಳಲ್ಲಿ ಹರಡಿ, ಮೇಲೆ ತೆಳು ಮಣ್ಣಿನ ಪದರ ಹಾಕಿ ನೀರು ಪೂರೈಸುತ್ತಿರಬೇಕು. ಮೆಣಸಿನಕಾಯಿ ಹಾಗೂ ಇನ್ನಿತರ ಕೆಲವು ತರಕಾರಿ ಬೆಳೆಗಳಲ್ಲಿ ಮಿಶ್ರ ಬೆಳೆಯಾಗಿಯೂ ಕೊತ್ತಂಬರಿಯನ್ನು ಬೆಳೆಯಬಹುದು. ಮಣ್ಣು ಮತ್ತು ಹವಾಮಾನವನ್ನನುಸರಿಸಿ ನೀರು ಪೂರೈಕೆ ಮಾಡಬೇಕಾಗುವುದು. ಕೊತ್ತಂಬರಿಯನ್ನು ಸೊಪ್ಪು ಮತ್ತು ಬೀಜ ಇವೆರಡಕ್ಕೂ ಬೆಳೆಯುವರು. ಸೊಪ್ಪಿಗಾಗಿ ಬೆಳೆದರೆ ಮಡಿಗಳಿಗೆ ನೀರು ಪೂರೈಕೆ ಮಾಡಿ ಸಸಿಗಳನ್ನು ಕಿತ್ತು ಕಟ್ಟುಗಳನ್ನಾಗಿ ಮಾಡಿ ಮಾರಾಟ ಮಾಡಬಹುದು. ಬೀಜಕ್ಕಾಗಿ ಬೆಳೆಯುತ್ತಿದ್ದರೆ ಹೂವು ಕಾಯಿ ಕಚ್ಚಿ ಬಲಿತಾದ ನಂತರ ಕೊಯ್ಲು ಮಾಡಬಹುದು. ಮೆಂತ್ಯ ಸೊಪ್ಪು : ಬಹು ಜನರು ಇಷ್ಟ ಪಡುವ ಸೊಪ್ಪು ತರಕಾರಿಯಾಗಿದ್ದು ಪಲ್ಯ, ಸಾರು, ಪಚ್ಚಡಿ ಮುಂತಾದವುಗಳಿಗೆ ಉಪಯೋಗಿಸುತ್ತಾರೆ. ಇದು ಔಷಧೀಯ ಗುಣಗಳನ್ನೂ ಹೊಂದಿದೆ. ಸಾಕಷ್ಟು ಸತ್ವಗಳನ್ನು ಹೊಂದಿರುವ ಮೆಂತ್ಯ ಸೊಪ್ಪು ಬೆಳೆಯುವುದೂ ಸುಲಭ. ಮಂಜು ವಾತಾವರಣ ಬಿಟ್ಟರೆ, ಉಳಿದೆಲ್ಲ ಕಾಲಗಳಲ್ಲಿ ಬೆಳೆಯಬಹುದು. ಗೋಡು ಮಣ್ಣು ಹೆಚ್ಚು ಸೂಕ್ತ. ವರ್ಷದ ಎಲ್ಲ ಕಾಲಗಳಲ್ಲೂ ಬೆಳೆಯಬಹುದು. ಮೆಂತ್ಯ ಸೊಪ್ಪಿನಲ್ಲಿ ಹಲವಾರು ಜನಪ್ರಿಯ ತಳಿಗಳಿವೆ. ಅವುಗಳಲ್ಲಿ ಕಸೂರಿ, ಇ.ಸಿ. ೪೯೧೧, ಮಾರ್ಗರೇಟ್ ಮುಂತಾದವುಗಳು ಮುಖ್ಯವಾದವುಗಳು. ಅನುಕೂಲಕ್ಕೆ ತಕ್ಕಂತೆ ಮಡಿಗಳನ್ನು ತಯಾರಿಸಿ ಬೀಜಗಳನ್ನು ಸಮನಾಗಿ ಬಿತ್ತನೆ ಮಾಡಬೇಕು. ಮೇಲೆ ಮಣ್ಣು ಹರಡಿ, ಹಗುರವಾಗಿ ನೀರು ಪೂರೈಕೆ ಮಾಡಬೇಕು. ಬೀಜಗಳು ಗಟ್ಟಿಯಾಗಿರುವುದರಿಂದ ಬೇಗನೆ ಮೊಳಕೆಯೊಡೆಯುವುದಿಲ್ಲವಾದ ಕಾರಣ ಬಿತ್ತನೆ ಮಾಡುವ ಹಿಂದಿನ ದಿನ ರಾತ್ರಿ ನೀರಿನಲ್ಲಿ ನೆನೆಹಾಕಿ ನಂತರ ಬಿತ್ತನೆಗೆ ಉಪಯೋಗಿಸಬಹುದು ಹಾಗೂ ಈ ಬೆಳೆಯನ್ನು ತರಕಾರಿ ತೋಟದಲ್ಲಿ ಮಿಶ್ರ ಬೆಳೆಯಾಗಿಯೂ ಬೆಳೆಯಬಹುದು. ಬಿತ್ತನೆ ಮಾಡಿದ ೩೦-೪೫ ದಿನಗಳಲ್ಲಿ ಸೊಪ್ಪು ಕೊಯ್ಲಿಗೆ ಸಿದ್ಧವಾಗುವುದು. ಬೀಜ ಬೇಕೆನ್ನುವುದಾದರೆ, ಬೆಳೆ ಬಲಿತು ಒಣಗಿದ ಮೇಲೆ ಕೊಯ್ಲು ಮಾಡಬೇಕಾಗುವುದು. ಇದರಲ್ಲಿ ಕೂಳೆ ಬೆಳೆ ಸಾಧ್ಯ. ಭೂಮಿಯ ಮಟ್ಟಕ್ಕೆ ಕತ್ತರಿಸಿ ಸೊಪ್ಪು ಪಡೆದುಕೊಂಡ ಮೇಲೆ ರಸಗೊಬ್ಬರ ಮತ್ತು ನೀರು ಪೂರೈಕೆ ಮಾಡಬೇಕು. ಒಂದೇ ಬಿತ್ತನೆಯಿಂದ ಸುಮಾರು ನಾಲ್ಕು ಬೆಳೆ ಪಡೆಯಬಹುದು. ಪಾಲಕ್ : ಪಾಲಕ್ ವಾರ್ಷಿಕ ಬೆಳೆ. ಇದರ ಕಾಂಡ ಮತ್ತು ಎಲೆಗಳನ್ನು ತರಕಾರಿಯಾಗಿ ಬಳಸುವರು. ಸೊಪ್ಪಿನಲ್ಲಿ ಪೋಷಕಾಂಶಗಳು ಹೇರಳವಾಗಿವೆ. ಇದನ್ನು ಇಡೀ ವರ್ಷ ಬೆಳೆಯಬಹುದು. ಆದರೆ ಚಳಿಗಾಲ ಹೆಚ್ಚು ಸೂಕ್ತ. ಈ ಬೆಳಗೆ ನೀರು ಬಸಿದು ಹೋಗುವ ಭೂಮಿ ಉತ್ತಮ. ತಳಿಗಳಲ್ಲಿ ’ಆಲ್‌ಗ್ರೀನ್’ ಉತ್ತಮವಾದುದು ದೊಡ್ಡ ಎಲೆಗಳಿಂದ ಕೂಡಿದ ’ಜಾಬ್ನರ್‌‌ಗ್ರೀನ್’ ತಳಿಯನ್ನು ಉದಯಪುರ ವಿಶ್ವವಿದ್ಯಾನಿಲಯ ಬಿಡುಗಡೆ ಮಾಡಿದೆ. ’ಪೂಸಾ ಜ್ಯೋತಿ’, ’ಪೂಸಾ ಹರಿತ್’ ಇತರ ಪ್ರಮುಖ ತಳಿಗಳು. ಇವನ್ನು ಮಡಿಗಳಲ್ಲಿ ಬಿತ್ತನೆ ಮಾಡಬಹುದು ಸುಮಾರು ೨೦ ಸೆಂ.ಮೀ. ಅಂತರದ ಸಾಲುಗಳಲ್ಲಿ ೧೦ ಸೆಂ.ಮೀ. ಅಂತರದಲ್ಲಿ ಬಿತ್ತಬೇಕು. ಬೇಸಿಗೆಯಲ್ಲಿ ನೀರಿನ ಪೂರೈಕೆ ಹೆಚ್ಚು ಬೇಕಾಗುವುದು. ಚಳಿಗಾಲದಲ್ಲಿ ಹವಾಮಾನವನ್ನನುಸರಿಸಿ ನೀರು ಪೂರೈಸಬೇಕು. ಬಿತ್ತನೆ ಮಾಡಿದ ೩೦-೪೦ ದಿನಗಳಲ್ಲಿ ಕಟಾವು ಮಾಡಬಹುದು. ಆಮೇಲೆ ೨-೩ ವಾರಗಳಿಗೊಮ್ಮೆ ಕೊಯ್ಲು ಮಾಡಬೇಕು. ಹೀಗೆ ಸುಮಾರು ೩-೪ ಕೊಯ್ಲು ಮಾಡಬಹುದು. ತಂಪಾದ ಸಮಯದಲ್ಲಿ ಕೊಯ್ಲು ಮಾಡುವುದು ಒಳ್ಳೆಯದು. ಚಳಿಗಾಲದಲ್ಲಿ ಬೆಳೆಸಿದ ಬೆಳೆಯಿಂದ ಅಧಿಕ ಇಳುವರಿ ಪಡೆಯಬಹುದು. ದಂಟು : ದಂಟು ಬಹುವಾರ್ಷಿಕ ಸೊಪ್ಪು. ವರ್ಷದಲ್ಲಿ ೫-೬ ಬೆಳೆ ಪಡೆಯಲು ಸಾಧ್ಯ. ಇದರಲ್ಲಿ ಅನೇಕ ಪೋಷಕಾಂಶಗಳಿವೆ. ಔಷಧಿಯಾಗಿಯೂ ದಂಟನ್ನು ಬಳಸುವುದುಂಟು. ಕೈತೋಟದಲ್ಲಿ ಚೆನ್ನಾಗಿ ಬೆಳೆಸಲು ಸಾಧ್ಯ. ದಂಟು ಉಷ್ಣ ಪ್ರದೇಶದಲ್ಲಿ ಚೆನ್ನಾಗಿಯೂ ಮಳೆಗಾಲದಲ್ಲಿ ಸಮೃದ್ಧಿಯಾಗಿಯೂ ಬೆಳೆಯುವುದು. ಮಳೆಗಾಲ ಹೊರತುಪಡಿಸಿ ಇನ್ನುಳಿದ ದಿನಗಳಲ್ಲೂ ಬೇಸಾಯ ಸಾಧ್ಯ. ನೀರು ಬಸಿದು ಹೋಗುವ ಗೋಡು ಮಣ್ಣು ಸೂಕ್ತ. ಪೂಸಾ ಚೌಲಾಯ್, ಪಾಲಿಗ್ಯಾಮಸ್, ಕೊ-೧, ಕೊ-೨, ಕೊ-೩ ದಂಟಿನ ಮುಖ್ಯ ತಳಿಗಳು. ಪೂಸಾ ಚೌಲಾಯ್ ತಳಿಯನ್ನು ದೆಹಲಿಯ ಭಾರತೀಯ ಕೃಷಿ ಸಂಶೋಧನಾ ಸಂಸ್ಥೆ ಮತ್ತು ಕೊ-೧, ಕೊ-೨ ಮತ್ತು ಕೊ-೩ ಈ ತಳಿಗಳನ್ನು ಕೊಯಮತ್ತೂರ (ತಮಿಳುನಾಡು) ಕೃಷಿ ಕಾಲೇಜು ಬಿಡುಗಡೆ ಮಾಡಿವೆ. ಕೈತೋಟದಲ್ಲಿ ಸಿದ್ಧಪಡಿಸಿದ ಡಿಗಳಲ್ಲಿ ಬೀಜ ಬಿತ್ತಬೇಕು. ಬೀಜ ಗಾತ್ರದಲ್ಲಿ ತುಂಬಾ ಸಣ್ಣದಾಗಿರುವುದರಿಂದ ಮರಳಿನೊಂದಿಗೆ ಬೆರೆಸಿ ಬಿತ್ತನೆ ಮಾಡಬೇಕು. ಸಸಿಯಾಗಿ ಸ್ವಲ್ಪ ಎತ್ತರಕ್ಕೆ ಬೆಳೆದ ಮೇಲೆ ಹೆಚ್ಚುವರಿ ಸಸಿಗಳನ್ನು ಕಿತ್ತು ಹಾಕಿ, ತೆಳುಗೊಳಿಸಬೇಕು. ಇದರಿಂದ ಸಸಿಗಳು ಸದೃಢವಾಗಿ ಬೆಳೆಯಲು ಸಾಧ್ಯವಾಗುವುದು. ಅವಶ್ಯಕತೆ ನೋಡಿಕೊಂಡು ನೀರು ಪೂರೈಸಬೇಕು. ತರಕಾರಿ ತೋಟದಲ್ಲಿ ದಂಟನ್ನು ಮಿಶ್ರ ಬೆಳೆಯಾಗಿಯೂ ಬೆಳೆಯಬಹುದು. ಬೀಜಗಳನ್ನು ಬಿತ್ತನೆ ಮಾಡಿದ ಮೇಲೆ ೪-೬ ವಾರಗಳಲ್ಲಿ ಸುಮಾರು ೪೫ ಸೆಂ.ಮೀ. ಎತ್ತರದವರೆಗೆ ದಂಟಿನ ಸೊಪ್ಪು ಬೆಳೆಯುವುದು. ಬೆಳೆಯನ್ನು ಭೂಮಿಯ ಮಟ್ಟಕ್ಕೆ ಕತ್ತರಿಸಿ ನೀರು ಮತ್ತು ಪೋಷಕಾಂಶಗಳನ್ನು ಪೂರೈಸಿದರೆ ಕೂಳೆಬೆಳೆಯನ್ನೂ ಪಡೆಯಬಹುದು. ಪುದೀನ : ಪುದೀನ ಸೊಪ್ಪಿನಿಂದ ವಿಶೇಷವಾಗಿ ಚಟ್ನಿ ಮತ್ತು ಸೂಪ್ ತಯಾರಿಸುವರು. ಇದು ಅಡುಗೆ ಪದಾರ್ಥಗಳಿಗೆ ಹೆಚ್ಚಿನ ಕಂಪನ್ನು ನೀಡುವುದಲ್ಲದೇ ಔಷಧೀಯ ಗುಣಗಳನ್ನೂ ಹೊಂದಿದೆ. ಇದೊಂದು ಸಸ್ಯ ಮೂಲಿಕೆ. ಎಲೆಗಳಿಂದ ತೈಲ ತೆಗೆದು ಕೆಲವು ಪದಾರ್ಥಗಳಲ್ಲಿ ಉಪಯೋಗಿಸುವರು. ಉದಾ: ಕ್ರೀಮ್, ಮಧ್ಯ (ಪಾನೀಯ) ಮುಂತಾಗಿ. ಇದು ತಂಪು ಹವೆಯಲ್ಲಿ ಚೆನ್ನಾಗಿ ಬೆಳೆಯುತ್ತದೆ. ಈ ಬೆಳೆಗೆ ಮರಳು ಮಿಶ್ರಿತ ಗೋಡು ಮಣ್ಣು ಉತ್ತಮ. ವರ್ಷವಿಡೀ ಯಾವ ಋತುಮಾನದಲ್ಲಾದರೂ ಬೆಳೆಯಬಹುದು. ಪುದೀನ ಸೊಪ್ಪು ಬೆಳೆಯಲು ಸಾಕಷ್ಟು ನೀರು ಬೇಕಾಗುವುದು. ಕಾಂಡ ಮತ್ತು ಬೇರು ತುಂಡುಗಳಿಂದ ಸಸ್ಯಾಭಿವೃದ್ಧಿ ಮಾಡಬಹುದು. ಕಾಂಡದ ತುಂಡುಗಳನ್ನು ನಾಟಿಗೆ ಉಪಯೋಗಿಸುವುದು ಸೂಕ್ತ. ೨೦ ಸೆಂ.ಮೀ. X ೧೫ ಸೆಂ.ಮೀ. ಅಂತರದಲ್ಲಿ ನಾಟಿ ಮಾಡಬಹುದು. ಸೊಪ್ಪನ್ನು ಭೂಮಿಯ ಮಟ್ಟಕ್ಕೆ ಕೊಯ್ಲು ಮಾಡುತ್ತಿದ್ದರೆ ಮುಂದೆ ಮೂರರಿಂದ ನಾಲ್ಕು ವರ್ಷಗಳವರೆಗೆ ಬೆಳೆ ಬರುತ್ತಿರುತ್ತದೆ. ನುಗ್ಗೆ : ನುಗ್ಗೇಕಾಯಿ ಮತ್ತು ಸೊಪ್ಪನ್ನು ತರಕಾರಿಯಾಗಿ ಉಪಯೋಗಿಸುತ್ತಾರೆ. ಇದೊಂದು ಬಹುವಾರ್ಷಿಕ ಬೆಳೆ. ನುಗ್ಗೆ ಎಲ್ಲರೂ ಇಷ್ಟಪಡುವ ತರಕಾರಿ. ಕಾಯಿಗಳಲ್ಲಿ ಮಾತ್ರವಲ್ಲದೇ ಸೊಪ್ಪು ಮತ್ತು ಹೂವುಗಳಲ್ಲೂ ಸಾಕಷ್ಟು ಪೌಷ್ಠಿಕಾಂಶಗಳಿವೆ. ಕೈತೋಟದಲ್ಲೊಂದು ನುಗ್ಗೆ ಮರವಿದ್ದರೆ ಹಲವಾರು ವರ್ಷಗಳವರೆಗೆ ಅದರ ಪ್ರಯೋಜನ ಪಡೆಯಬಹುದು. ಉಷ್ಣವಲಯದಲ್ಲಿ ನುಗ್ಗೆ ಚೆನ್ನಾಗಿ ಬೆಳೆಯುತ್ತದೆ. ಹೆಚ್ಚು ಮಳೆಯಾಗುವ ಪ್ರದೇಶ ಅಷ್ಟೊಂದು ಯೋಗ್ಯವಲ್ಲ. ಬಿರುಗಾಳಿಗೆ ಮರ ಮುರಿದು ಬೀಳುವ ಸಂಭವವಿರುತ್ತದೆ. ಜೂನ್-ಜುಲೈ ತಿಂಗಳುಗಳು ಬೀಜ ಬಿತ್ತಲು ಸೂಕ್ತವಾದ ಕಾಲ. ತಳಿಗಳಲ್ಲಿ ಜಾಫ್ನಾ, ಸಿ.ಓ.-೧, ಪಿ.ಕೆ.ಎಂ.-೧, ಜಿ.ಕೆ.ವಿ.ಕೆ.-೧ ಇತ್ಯಾದಿ ಜನಪ್ರಿಯವಾಗಿವೆ. ತಳಿಗಳಿಗನುಸಾರವಾಗಿ ಕಾಯಿಗಳು ೩೦ ರಿಂದ ೧೦೦ ಸೆಂ.ಮೀ. ವರೆಗೆ ಉದ್ದವಾಗಿರುತ್ತವೆ. ಬಿತ್ತಿದ ಬೀಜದಿಂದ ಅಥವಾ ರೆಂಬೆ ತುಂಡುಗಳಿಂದ ಸಸ್ಯಾಭಿವೃದ್ಧಿ ಮಾಡಬಹುದು. ಬೀಜದಿಂದ ಬೆಳೆಸುವುದಾದರೆ ಪಾಲಿಥೀನ್ ಚೀಲಗಳಲ್ಲಿ ಬೀಜ ಬಿತ್ತಿ ಸಸಿ ಬೆಳೆದ ಮೇಲೆ ನಾಟಿ ಮಾಡಬಹುದು. ಇನ್ನು ರೆಂಬೆಯ ತುಂಡುಗಳಿಂದ ಅಭಿವೃದ್ಧಿಪಡಿಸುವುದಾದರೆ ಸುಮಾರು ೯೦-೧೨೦ ಸೆಂ.ಮೀ. ಉದ್ದ ಮತ್ತು ೧೫-೧೮ ಸೆಂ.ಮೀ. ದಪ್ಪ ಇರುವ ರೆಂಬೆಗಳನ್ನು ಆಯ್ಕೆ ಮಾಡಿ ೯೦ ಚದರ ಸೆಂ.ಮೀ. ಅಳತೆಯ ಗುಂಡಿಗಳಲ್ಲಿ ಗೊಬ್ಬರ ಮಿಶ್ರಣ ತುಂಬಿ ನಾಟಿ ಮಾಡಬೇಕು. ನಂತರ ಅವಶ್ಯಕತೆಗೆ ತಕ್ಕಂತೆ ನೀರು ಪೂರೈಕೆ ಮಾಡಬೇಕು. ಗಾಳಿಯಿಂದ ರಕ್ಷಿಸಲು ಸುಮಾರು ೬೦ ಸೆಂ.ಮೀ. ಎತ್ತರದವರೆಗೆ ಗಿಡಗಳಿಗೆ ಮಣ್ಣೇರಿಸಬೇಕು. ಆರಂಭದ ದಿನಗಳಲ್ಲಿ ನೀರು ಕಡಿಮೆ ಪೂರೈಕೆ ಬೆಳವಣಿಗೆಗೆ ಅನುಕೂಲ ಮತ್ತು ಬೇಸಿಗೆಯಲ್ಲಿ ವಾರಕ್ಕೊಮ್ಮೆ ನೀರು ಕಡುವುದು ಅವಶ್ಯಕ. ಹೂವು ಬಿಡುವ ಸಮಯದಲ್ಲಿ ಬೇಕಾಗುವಷ್ಟು ನೀರು ಪೂರೈಕೆ ಮಾಡಿದರೆ ಗಿಡದಲ್ಲಿ ಕಾಯಿ ಕಚ್ಚುವ ಸಂಖ್ಯೆ ಹೆಚ್ಚಾಗುವುದು. ರೆಂಬೆ ತುಂಡು ನಾಟಿ ಮಾಡಿದ ಒಂದು ವರ್ಷದಲ್ಲಿ ಮತ್ತು ಸಸಿಗಳು ನೆಟ್ಟ ಎರಡು ವರ್ಷಗಳಲ್ಲಿ ಹೂವು ಬಿಟ್ಟು ಫಲ ಬಿಡಲು ಪ್ರಾರಂಭಿಸುತ್ತವೆ. ಕರಿಬೇವು : ಕರಿಬೇವು ಪರಿಮಳಕ್ಕೆ ಹೆಸರುವಾಸಿ. ಕರಿಬೇವಿಲ್ಲದೆ ಒಗ್ಗರಣೆ ಇಲ್ಲ. ಪ್ರತಿದಿನವೂ ಉಪಯೋಗವಾಗುವ ಅಡುಗೆಮನೆಯ ಸಸ್ಯ ’ಕರಿಬೇವು’. ಇದು ಕೆಲವು ಔಷಧೀಯ ಗುಣಗಳನ್ನು ಹೊಂದಿದೆ. ಬಹುವಾರ್ಷಿಕ ಬೆಳೆಯಾದ ಇದು ಸುಮಾರು ೩೦ ವರ್ಷಗಳವರೆಗೆ ಉತ್ತಮ ಇಳುವರಿ ಕೊಡಬಲ್ಲದು. ಮನೆ ಉಪಯೋಗಕ್ಕೆ ದಿನವೂ ತಾಜಾ ಸೊಪ್ಪು ಉಪಯೋಗಿಸಬಹುದು. ಮಾರಾಟ ಮಾಡುವುದಾದರೆ ಒಂದು ವರ್ಷದಲ್ಲಿ ಎರಡು ಬಾರಿ ಕೊಯ್ಲು ಮಾಡಬಹುದು. ಕರಿಬೇವಿನ ಗಿಡ ಕೈತೋಟಕ್ಕೊಂದು ಶೋಭೆ. ಇದನ್ನು ಬೆಳೆಯಲು ಒಣ ಹವೆ ಸೂಕ್ತ. ಭೂಮಿಯಲ್ಲಿ ನೀರು ಬಸಿದು ಹೋಗುವಂತಿರಬೇಕು. ಮಳೆಗಾಲದ ಆರಂಭದಲ್ಲಿ ನಾಟಿ ಮಾಡಬಹುದು. ತಳಿಗಳಲ್ಲಿ ’ಸುವಾಸಿನಿ’ ಮತ್ತು ’ಧಾರವಾಡ-೨’ ಎಂಬ ತಳಿಗಳನ್ನು ಬಿಡುಗಡೆ ಮಾಡಲಾಗಿದ್ದು ಉತ್ತಮ ಗುಣಮಟ್ಟ ಹೊಂದಿವೆ. ಇವಲ್ಲದೆ ಅನೇಕ ಸ್ಥಳೀಯ ತಳಿಗಳು ಬೇಸಾಯದಲ್ಲಿವೆ. ಬೀಜ ಬಿತ್ತಿದ ಸಸಿಯನ್ನು ನಾಟಿಗೆ ಉಪಯೋಗಿಸಬಹುದು. ಬಲಿತು ಪೂರ್ಣ ಮಾಗಿದ ಆರೋಗ್ಯಕರ ಬೀಜಗಳನ್ನು ಸಂಗ್ರಹಿಸಿ ಅವುಗಳ ಮೇಲಿನ ಸಿಪ್ಪೆ ತೆಗೆದು ನೀರಿನಿಂದ ತೊಳೆದು, ನಂತರ ಬೀಜಗಳನ್ನು ನೆರಳಿನಲ್ಲಿ ಒಣಗಿಸಿ, ಗೊಬ್ಬರ ಮಿಶ್ರಣ ತುಂಬಿದ ಪಾಲಿಥೀನ್ ಚೀಲಗಳಲ್ಲಿ ಊರಿ ಸಸಿಗಳನ್ನು ಬೆಳೆಸಬಹುದು. ಎರಡು ತಿಂಗಳ ವಯಸ್ಸಿನ ಸಸಿಗಳನ್ನು ನಾಟಿಗೆ ಬಳಸಬಹುದು. ಒಂದು ಘನ ಮೀ. ಅಳತೆಯ ಗುಂಡಿಗಳನ್ನು ತೋಡಿ ಗೊಬ್ಬರ ಮಿಶ್ರಣ ತುಂಬಬೇಕು. ನಂತರ ಸಸಿಗಳನ್ನು ಗುಂಡಿಯ ಮಧ್ಯಭಾಗದಲ್ಲಿ ನೆಟ್ಟು ನೀರು ಪೂರೈಕೆ ಮಾಡಬೇಕು. ಸಸಿಗಳಿಗೆ ಆಸರೆಯಾಗಿ ಕೋಲು ಕೊಟ್ಟು ನಿಲ್ಲಿಸಬಹುದು. ಸಕಾಲಕ್ಕೆ ನೀರು ಪೂರೈಸುತ್ತಿರಬೇಕು. ಇದರಿಂದ ಸೊಪ್ಪು ಚೆನ್ನಾಗಿ ಬೆಳೆಯಲೂ ಪ್ರೋತ್ಸಾಹಿಸಿದಂತಾಗುತ್ತದೆ. ಬೇಸಿಗೆಯಲ್ಲಿ ವಾರಕ್ಕೊಮ್ಮೆ ನೀರು ಒದಗಿಸುವುದು ಅವಶ್ಯ. ಮುಖ್ಯ ಕಾಂಡದ ಮೇಲೆ ಬರುವ ರೆಂಬೆಗಳನ್ನು ಭೂಮಟ್ಟದಿಂದ ಸುಮಾರು ೬೦ ಸೆಂ.ಮೀ. ಎತ್ತರದವರೆಗೆ ಬರದಂತೆ ಕಟಾವು ಮಾಡುತ್ತಿರಬೇಕು. ಸಸಿಗಳನ್ನು ನಾಟಿ ಮಾಡಿದ ೪-೫ ತಿಂಗಳ ನಂತರ ಸೊಪ್ಪನ್ನು ಕೊಯ್ಲು ಮಾಡಬಹುದು. ಮರ ದೊಡ್ಡದಾಗುತ್ತಿದ್ದಂತೆ ಇಳುವರಿಯೂ ಹೆಚ್ಚಾಗುವುದು. ಬಲಿತ ಕರಿಬೇವಿನ ಎಲೆಗಳು ಹೆಚ್ಚಿನ ಪರಿಮಳದಿಂದ ಕೂಡಿರುತ್ತವೆ. ಒಂದು ಮರದಿಂದ ಆರು ತಿಂಗಳಿಗೊಮ್ಮೆ ಸುಮಾರು ೨೫-೫೦ ಕಿ.ಗ್ರಾಂ ಸೊಪ್ಪನ್ನು ಪಡೆಬಹುದು. -SANGRAHA

ಜಾತಕದಲ್ಲಿ ಸಂತಾನ ಯೋಗ

ಜಾತಕದಲ್ಲಿ ಸಂತಾನ ಯೋಗ * ಈಗಿನ ಕಾಲದಲ್ಲಿ ಸಂತಾನದ ಸಂಖ್ಯೆ ಕಡಿಮೆ ಮಾಡಿಕೊಂಡು ಜೀವನ ಮಾಡುತ್ತಾರೆ. ಆದರೆ ಸಂತತಿ ಇಲ್ಲದವರು ವೈದ್ಯರಿಂದ ಚಿಕಿತ್ಸೆ ಪಡೆಯುವುದು, ಜ್ಯೋತಿಷ್ಯರ ಸಲಹೆ ಪಡೆಯುವುದು, ಸಂತಾನಕ್ಕಾಗಿ ಪೂಜೆ ಮಾಡಿಸುವುದು ಹೀಗೆ ಎಲ್ಲ ಪ್ರಯತ್ನ ಮಾಡುತ್ತಾರೆ. ಸಂತತಿಯ ಯೋಗವನ್ನು ಅವರವರ ಜಾತಕದಿಂದ ನೋಡಬಹುದು. ಜನ್ಮ ಲಗ್ನದಿಂದ ಅಥವಾ ಚಂದ್ರ ರಾಶಿಯಿಂದ ಪಂಚಮ ಸಪ್ತಮಗಳನ್ನು ಭಾಗ್ಯಾಧಿಪತಿಯು ನೋಡಿದರೆ ಸಂತಾನ ಮತ್ತು ದಾಂಪತ್ಯವು ಸುಖಮಯವಾಗುತ್ತದೆ. ಲಗ್ನ ಅಥವಾ ಚಂದ್ರನಿಂದ ಪಂಚಮಾಧಿಪತಿ ಮತ್ತು ಸಪ್ತಮಾಪತಿಯು ನವಮದಲ್ಲಿ ಇದ್ದರೆ ಅತ್ಯಂತ ಸುಖಮಯ ದಾಂಪತ್ಯ ಜೀವನ ಹಾಗೂ ಸಂತತಿ ಸುಖ ಇರುತ್ತದೆ. ಪಂಚಮದ ಅಧಿಪತಿಯು ಪಂಚಮದಲ್ಲಿ ಸಪ್ತಮಾಧಿಪತಿಯು ನವಮದಲ್ಲಿ ಇದ್ದರೆ ಇಂತಹ ಜಾತಕದವರು ಸುಖಮಯ ದಾಂಪತ್ಯ ಜೀವನ ಮಾಡುತ್ತಾರೆ. ಪಂಚಮ, ಸಪ್ತಮ ಮತ್ತು ನವಮದಲ್ಲಿ ಶುಭ ಗ್ರಹಗಳು ಇದ್ದರೆ ಅಥವಾ ಈ ಮನೆಯನ್ನು ಶುಭ ಗ್ರಹಗಳು ನೋಡಿದರೆ ಇಂತಹ ಜಾತಕದರಿಗೆ ಪುತ್ರ ಸಂತತಿ ಇರುವುದಲ್ಲದೆ ಇವರು ಸುಖಮಯ ದಾಂಪತ್ಯ ಜೀವನವನ್ನು ಅನುಭವಿಸುತ್ತಾರೆ. ಪಂಚಮ, ಸಪ್ತಮ ಮತ್ತು ನವಮಾಧಿಪತಿಗಳು ಷಷ್ಠ, ಅಷ್ಟಮ ಮತ್ತು ದ್ವಾದಶದಲ್ಲಿ ಇದ್ದರೆ ದಾಂಪತ್ಯ ಜೀವನ ಸುಖಮಯವಾಗಿರುವುದಿಲ್ಲ. ಜಾತಕದಲ್ಲಿ ಬೇರೆ ಬೇರೆ ಭಾವಗಳಲ್ಲಿ ಪಂಚಮ, ಸಪ್ತಮ ಮತ್ತು ನವಮಾಧಿಪತಿ ಇದ್ದರೆ ದಾಂಪತ್ಯ ಜೀವನವು ಮಧ್ಯಮ ಇರುತ್ತದೆ. ಶುಕ್ರ - ಕುಜರ ಯತಿಯು ಇದ್ದರೆ ದಾಂಪತ್ಯ ಜೀವನವು ಸುಖಮಯವಾಗಿರುವುದಿಲ್ಲ. ಸ್ತ್ರೀ ಜಾತಕದಲ್ಲಿ ಶುಕ್ರನು ಅಸ್ತನಾಗದೆ ಅಷ್ಟಮ ಭಾವದಲ್ಲಿ ಇದ್ದರೆ ಅತ್ಯಂತ ಸುಖಮಯ ದಾಂಪತ್ಯ ಜೀವನ ಇರುತ್ತದೆ. ಸಪ್ತಮ, ಅಷ್ಟಮದಲ್ಲಿರುವ ಕುಜ ದೋಷವು ಕೈ ಹಿಡಿಯುವ ಗಂಡಿನ ಜಾತಕದಲ್ಲಿ ಇದ್ದರೆ ಇವರಿಗೆ ಸುಖಮಯ ಜೀವನ ಇರುತ್ತದೆ. ಪಂಚಮದಲ್ಲಿ ಶನಿ ಇದ್ದರೆ ಬಹಳ ವಿಳಂಬವಾಗಿ ಸಂತತಿಯಾಗುತ್ತದೆ. ಕುಂಭ ರಾಶಿಯು ಪಂಚಮವಾಗಿದ್ದು, ಇಲ್ಲಿ ಶನಿ ಇದ್ದರೆ ಇವರಿಗೆ ಸಂತತಿ ಆಗುವುದು ಕಡಿಮೆ. ಪಂಚಮ ಸ್ಥಾನವು ಅಗ್ನಿ ರಾಶಿಯಾಗಿ ಅಲ್ಲಿ ಶನಿ ಇದ್ದರೆ ಇವರಿಗೆ ಮಕ್ಕಳಾಗುವುದಿಲ್ಲ. ಪಂಚಮ ಸ್ಥಾನದಲ್ಲಿ ಕುಜನಿದ್ದರೆ ಇವರಿಗೆ ಸಂತತಿಗೆ ತಡೆಯಾಗುವುದು. ಪಂಚಮದಲ್ಲಿ ಶುಕ್ರನಿದ್ದರೆ ಇವರಿಗೆ ಕನ್ಯಾ ಸಂತತಿ ಜಾಸ್ತಿ ಇರುತ್ತದೆ. ಪಂಚಮದಲ್ಲಿ ಕೇತು ಇದ್ದರೆ ಇವರ ಮಕ್ಕಳಿಂದ ಸುಖ ಸಿಗುವುದಿಲ್ಲ. ದಶಮದಲ್ಲಿ ಚಂದ್ರ ಇದ್ದರೆ ಕನ್ಯಾ ಸಂತತಿ ಜಾಸ್ತಿ ಇರುತ್ತದೆ. ಪಂಚಮ ಸ್ಥಾನವು ಅಗ್ನಿ ರಾಶಿಯಾಗಿದ್ದು, ಇಲ್ಲಿ ಮಂಗಳನಿದ್ದರೆ ಇವರಿಗೆ ಸಂತತಿ ಆಗುವುದೇ ಇಲ್ಲ. ಲಗ್ನದಿಂದ ಪಂಚಮ ಸ್ಥಾನದಲ್ಲಿಯೂ ಮತ್ತು ಗುರು ಚಂದ್ರರಿದ್ದ ರಾಶಿಯಿಂದ ಪಂಚಮದಲ್ಲಿ ಪಾಪ ಗ್ರಹ ಇದ್ದು, ಇದಕ್ಕೆ ಶುಭ ಗ್ರಹ ದೃಷ್ಟಿ ಇಲ್ಲದಿದ್ದರೆ ಇಂತಹ ಜಾತಕದವರಿಗೆ ಮಕ್ಕಳಾಗುವುದಿಲ್ಲ. ಸಂತಾನಕ್ಕೆ ಮಂತ್ರ ಜಾತಕದ ದ್ವಾದಶ ಭಾವಗಳಲ್ಲಿ ಮನುಷ್ಯನ ಜೀವಿತದ ಆಗು ಹೋಗುಗಳೂ ಅಡಕವಾಗಿರುತ್ತವೆ. ಲಗ್ನತ್ ಪಂಚಮಭಾಮ, ಪೂರ್ವಪುಣ್ಯ ಹಾಗೂ ಸಂತಾನ ಭಾಗ್ಯವನ್ನು ಸೂಚಿಸುತ್ತದೆ. ಗಂಡ-ಹೆಂಡಿರ ಎರಡೂ ಜಾತಕಗಳನ್ನು ಪರೀಕ್ಷಿಸಿದ್ದಲ್ಲದೆ, ಯಾವುದೇ ರೀತಿಯ ಸಂತಾನ ದೋಷವೆಂಬ ತೀರ್ಮಾನಕ್ಕೆ ಬರಲಾಗದು. ತೃತೀಯ ಭಾವ ವೀರ್ಯ ಸ್ಥಾನವೆಂದು ಕರೆಯಲ್ಪಟ್ಟಿದ್ದು, ಶನಿ, ಬುಧ, ಕೇತು ಗ್ರಹಗಳು ನಪುಂಸಕ ಗ್ರಹಗಳೆಂದು ಹೇಳಲಾಗಿದೆ. ಪಂಚಮದಲ್ಲಿ ಶುಭಗ್ರಹಗಳಾದ ಗುರು, ಶುಕ್ರ ಹಾಗೂ ಬುಧ ಇದ್ದಲ್ಲಿ ಸತ್ಸಂತಾನವೂ, ವ್ಯತಿರಿಕ್ತ್ಯವಾಗಿ ಪಾಪಗ್ರಹಗಳಾದ ಶನಿ, ರಾಹು-ಕೇತು, ಕುಜ ರವಿಗಳಿದ್ದಲ್ಲಿ ದೃಷ್ಟ ಸಂತಾನವೂ ಮತ್ತು ಪಂಚಮಭಾವಕ್ಕೆ ಸಂಬಂಧಿಸಿದಂತೆ ಸರ್ಪ ದೋಷವಿದ್ದಾಗ, (ರಾಹು ಕೇತುಗಳ ಮಧ್ಯೆ ಎಲ್ಲ ಗ್ರಹಗಳು ಇದ್ದರೆ ಸರ್ಪ ದೋಷ ಎನ್ನಲಾಗಿದೆ. ಪ್ರತಿಷ್ಠ ಮಂದಾರ ಎಂಬ ಗ್ರಂಥದಲ್ಲಿ ಮಾರಣ ಮಾಲಾ ಕಾಳ ಸರ್ಪ ದೋಷ ನಿವಾರಣ ಮಂತ್ರವೆಂದು :'ಓಂ ನವೋ ಭಗವತೇ ಮಹಾ ಸುದರ್ಶನಾಯ! ಮಹಾ ಚಕ್ರಾಯ! ದಗ್ಧಹಿತರಾಂತರ! ಪ್ರಜ್ವಲ! ಪ್ರಜ್ವಲ! ಪ್ರಜ್ವಲ!! ದೃಷ್ಟದಾನವ, ಭಯಂಕರ ಬ್ರಹ್ಮರಾಕ್ಷಸ, ಭೂಚರ, ಖೇಚರ, ಅಂತರಿಕ್ಷ ನಿಶಾಚಾರ, ಕಾಲ ಸರ್ವಕಾನ್ ಸ್ವಾಹ! ಓಂ ಫಟ್!! ಎಂದು 108 ಸಾರಿ ಪ್ರತಿದಿನ ಜಪಿಸುವುದರಿಂದ ದೋಷ ನಿವಾರಣೆಯಾಗುವುದು ಎನ್ನಲಾಗಿದೆ. ಆದರೆ ಸರ್ಪ ದೋಷವು ಹಲವಾರು ವಿಧವಾಗಿರಬಹುದು. ಸರ್ಪ ಸಂಸ್ಕಾರ ಹಾಗೂ ರಾಹು ದೋಷ ಪೂಜಾ ವಿಧಾನಗಳನ್ನು ಮಾಡುವರು. ಅಂತೆಯೇ ಇತರ ಸಂತಾನ ದೋಷಗಳಿಗೆ, ಸಂತಾನ ಗೋಪಾಲ ಯಂತ್ರ ಮಂತ್ರಗಳನ್ನು ಹೇಳಬಹುದು. (ಸಂತಾನ ಗೋಪಾಲ ಮೂಲಮಂತ್ರ ಹೀಗಿದೆ: ಓಂ ಶ್ರೀ ಹ್ರೀಂ ಕ್ಲೀಂ ಕ್ಲೌಂ ದೇವಕಿಸುತ ಗೋವಿಂದ ವಾಸುದೇವ ಜಗತ್ಪತೇ! ದೇಹಿಮೆತನಯಾಂ ಕೃಷ್ಣ ತ್ವಾಮಹಂ ಶರಣಾಗತ!!). ನವನೀತ ನೈವೇದ್ಯದೊಂದಿಗೆ ಪೂಜಿಸುವುದು ಸಾಮಾನ್ಯ. ಸಂತಾನ ಗೋಪಾಲ ಮಂತ್ರದಷ್ಟೇ ಶಕ್ತಿಯುತವಾದ ಇನ್ನೊಂದು ನಿಗೂಢ ಮಂತ್ರವೊಂದು, 'ದೇವಿ ಭಾಗವತದ' 9ನೇ ಸ್ಕಂದ, 46ನೇ ಅಧ್ಯಾಯದ ಷಷ್ಠಿ ದೇವಿಯನ್ನು ಪೂಜಿಸಬೇಕು. ಬಾಲಕರ ಅಧಿಷ್ಠಾತ್ರಿಯಾಗಿ ಹಾಗೂ ವಿಷ್ಣು ಮಾಯ ಎಂದು ಕರೆಯಲಾಗುವ ಷಷ್ಠಿ ದೇವಿಯು ದೇವತೆಗಳ ಯುದ್ಧದಲ್ಲಿ ದೈತ್ಯರನ್ನು ಪರಾಭವಗೊಳಿಸಿದ ಕಾರಣ ದೇವಸೇನ ಎಂದು ಕರೆಯಲಾಗುವ ದೇವಿಯು ಕಾರ್ತಿಕೇಯನ ಧರ್ಮಪತ್ನಿ. ಮೂಲಮಂತ್ರವು 'ಶ್ರೀಂ ಹ್ರೀಂ ಷಷ್ಠಿ ದೇವ್ಯೈ ಸ್ವಾಹ.' ಇದನ್ನು ಒಂದು ಲಕ್ಷ ಜಪಿಸಿದರೆ ಸಿದ್ಧಿಯಾಗುವುದೆಂದು ನಮೂದಿಸಲಾಗಿದೆ. ಇದರೊಂದಿಗೆ ಷಷ್ಠಿದೇವಿಯ ಸ್ತೋತ್ರವು ಭಕ್ತಿಪೂರ್ವಕವಾಗಿ ಅನುಷ್ಠಾನ ಮಾಡಿದಲ್ಲಿ ಮಹಾವಂಧ್ಯೆಯೂ ಸತ್ಪುತ್ರರನ್ನು ಪಡೆಯುವರೆಂದು ಹೇಳಲಾಗಿದೆ. ಸಂತಾನ ಯೋಗ ಜಾತಕ ಮತ್ತು ದೋಷ ಪರಿಹಾರ ಕುಂಡಲಿಯಲ್ಲಿ ಪಂಚಮ ಸ್ಥಾನವನ್ನು ಕೂಲಂಕಷವಾಗಿ ಪರಿಶೀಲಿಸಿ, ಸಂತಾನ ಯೋಗವನ್ನು ಹೇಳಬಹುದು. ಪಂಚಮ ಸ್ಥಾನದ ಅಧಿಪತಿಯನ್ನು ಶುಭಗ್ರಹಗಳು ನೋಡಬೇಕು. ಲಗ್ನಾಧಿಪತಿ ಮತ್ತು ಪಂಚಮಾಧಿಪತಿಯು ಒಂದೇ ರಾಶಿಯಲ್ಲಿ ಕೂಡಿಕೊಂಡಿರಬೇಕು. ಇವರು ಪರಸ್ಪರ ಒಳ್ಳೆಯ ದಷ್ಟಿಯಿಂದ ನೋಡಬೇಕು. ಲಗ್ನಾಧಿಪತಿ ಮತ್ತು ಪಂಚಮಾಧಿಪತಿಗಳು ಪರಿವರ್ತನೆಯಾಗಿದ್ದಲ್ಲಿ ಇವರಿಗೆ ಸಂತತಿ ಯೋಗ ಇರುತ್ತದೆ. ಲಗ್ನ ಮತ್ತು ಪಂಚಮಕ್ಕೆ ಗುರುಬಲ ಇದ್ದರೆ ಸಂತತಿ ಯೋಗ ಇರುತ್ತದೆ. ಪಂಚಮ ಗ್ರಹವು ಪಾಪಕರ್ತರಿ ಯೋಗದಲ್ಲಿ ಇದ್ದರೆ, ಪಂಚಮಾಧಿಪತಿ ಅಬಲನಾಗಿ, ದುಸ್ಥಾನದಲ್ಲಿದ್ದರೆ, ಲಗ್ನ, ಚಂದ್ರ, ಗುರುವಿನಿಂದ ಪಂಚಮ ಭಾವದಲ್ಲಿ ಪಾಪ ಗ್ರಹಗಳು ಇದ್ದರೆ, ಇಂತಹವರಿಗೆ ಸಂತಾನ ಆಗುವುದಿಲ್ಲ. ವೃಶ್ಚಿಕ, ವೃಷಭ, ಕನ್ಯಾ ಮತ್ತು ಸಿಂಹ ರಾಶಿಗಳು ಅಲ್ಪ ಸಂತಾನ ರಾಶಿಗಳು. ಈ ರಾಶಿಗಳು ಜಾತಕನಿಗೆ ಪಂಚಮ ಭಾವವಾದರೆ, ಇಂತಹ ಜಾತಕರಿಗೆ ಅಲ್ಪ ಸಂತಾನ ಯೋಗ ಇರುತ್ತದೆ. ಪಂಚಮ ಭಾವದಲ್ಲಿ ಆ ಭಾವದ ಅಧಿಪತಿ ಪಾಪ ಗ್ರಹ ಇದ್ದರೂ, ಅಂತಹವರಿಗೆ ಸಂತಾನ ಯೋಗ ಇರುತ್ತದೆ. ಪಂಚಮದ ಅಧಿಪತಿಯು ಪಾಪಗ್ರಹವಾಗಿ, ಅದರೊಂದಿಗೆ ಇನ್ನೊಂದು ಪಾಪ ಗ್ರಹ ಇದ್ದರೆ, ಅಂತಹವರಿಗೆ ಬಹು ಸಂತಾನ ಫಲ ಇರುತ್ತದೆ. ಪಂಚಮದಲ್ಲಿ ಅದರ ಅಧಿಪತಿ ಸ್ವಂತ ಮನೆಯಲ್ಲಿ ಅಥವಾ ಉಚ್ಚನಾಗಿದ್ದರೆ, ಇಂತಹವರಿಗೆ ಸಂತಾನ ನಷ್ಟವಾಗುತ್ತದೆ. ರವಿಯು ವೃಶ್ಚಿಕ, ವೃಷಭ, ಕನ್ಯಾ ಮತ್ತು ಸಿಂಹ ರಾಶಿಯಲ್ಲಿರುವಾಗ ಇದು ಪಂಚಮ ಭಾವವಾಗಿ, ಅಷ್ಟಮದಲ್ಲಿ ಶನಿ, ಲಗ್ನದಲ್ಲಿ ಕುಜನಿದ್ದರೆ, ಇವರಿಗೆ ಬಹಳ ತಡವಾಗಿ ಸಂತಾನವಾಗುತ್ತದೆ. ರವಿಯು ಕರ್ಕಾಟಕ ರಾಶಿಯಲ್ಲಿ ಅಥವಾ ಬೇರೆ ಗ್ರಹಗಳೊಂದಿಗೆ ಇದ್ದು, ಇದು ಪಂಚಮ ಭಾವವಾದರೆ, ಇವರಿಗೆ ಎರಡನೆಯ ಹೆಂಡತಿಯಿಂದ ಮಕ್ಕಳಾಗುತ್ತದೆ. ಚಂದ್ರ, ಬುಧರು ಕರ್ಕಾಟಕ ರಾಶಿಯಲ್ಲಿದ್ದು, ಅದು ಪಂಚಮ ಭಾವವಾದರೆ, ಇವರಿಗೆ ಅಲ್ಪ ಸಂತಾನ ಯೋಗವಾಗುತ್ತದೆ. ಗುರು ಕರ್ಕಾಟಕ ರಾಶಿಯಲ್ಲಿದ್ದು, ಅದು ಪಂಚಮ ಭಾವವಾದರೆ, ಆಗ ಹೆಚ್ಚು ಸ್ತ್ರೀ ಸಂತಾನವಾಗುತ್ತದೆ. ನಾಲ್ಕನೇ ಮನೆಯಲ್ಲಿ ಪಾಪಗ್ರಹ ಇದ್ದು, ದಶಮದಲ್ಲಿ ಚಂದ್ರ, ಸಪ್ತಮದಲ್ಲಿ ಶುಕ್ರ ಇರುವವರಿಗೆ ಮಕ್ಕಳಾಗುವುದಿಲ್ಲ. ಲಗ್ನದಲ್ಲಿ ಪಂಚಮ, ಅಷ್ಟಮ, ವ್ಯಯದಲ್ಲಿ ಪಾಪಗ್ರಹವಿದ್ದರೆ ಇವರಿಗೆ ಮಕ್ಕಳ ಯೋಗ ಇರುವುದಿಲ್ಲ. ಪಾಪಗ್ರಹಗಳು ನಾಲ್ಕನೇ ಮನೆಯಲ್ಲಿ ಗುರು, ಪಂಚಮದಲ್ಲಿ ಶುಕ್ರ, ಬುಧರು ಸಪ್ತಮದಲ್ಲಿದ್ದರೆ, ಇವರಿಗೆ ಮಕ್ಕಳಾಗುವುದಿಲ್ಲ. ಲಗ್ನ ಪಾಪಗ್ರಹ, ಚಂದ್ರನು ಪಂಚಮದಲ್ಲಿ, ಅಷ್ಟಮ ದ್ವಾದಶದಲ್ಲಿ ಪಾಪಗ್ರಹಗಳಿದ್ದರೆ ಅಂತಹವರಿಗೆ ಮಕ್ಕಳಾಗುವುದಿಲ್ಲ. ಲಗ್ನದಲ್ಲಿ ಪಾಪಗ್ರಹ ಇದ್ದರೆ, ಪಂಚಮಾಧಿಪತಿಯು ತತೀಯದಲ್ಲಿ ಮತ್ತು ಚತುರ್ಥದಲ್ಲಿ ಚಂದ್ರನೊಂದಿಗೆ ಇದ್ದರೆ, ಲಗ್ನಾಧಿಪತಿಯು ಪಂಚಮದಲ್ಲಿದ್ದರೆ, ಇಂತಹವರಿಗೆ ಮಕ್ಕಳಾಗುವುದಿಲ್ಲ. ಪಂಚಮಾಧಿಪತಿಯು ಬಲಿಷ್ಠನಾಗಿದ್ದರೆ, ಅವರಿಗೆ ಒಳ್ಳೆಯ ಪುತ್ರರು ಜನಿಸುತ್ತಾರೆ. ರವಿ, ಗುರು ಮತ್ತು ಚಂದ್ರ ವಿಷಮ ರಾಶಿಯಲ್ಲಿ ಪುರುಷ ನವಾಂಶ ಬಲಿಷ್ಠನಾಗಿದ್ದರೆ ಇವರಿಗೆ ಗಂಡು ಸಂತಾನವಾಗುತ್ತದೆ. ಗುರು ಮತ್ತು ರವಿಯು ಲಗ್ನದಿಂದ ವಿಷಮ ಭಾಗದಲ್ಲಿ ಇದ್ದರೆ ಗಂಡು ಮಗುವಿನ ಜನನವಾಗುತ್ತದೆ. ಲಗ್ನದಿಂದ ವಿಷಮ ಭಾವದಲ್ಲಿ ಚಂದ್ರ, ಶುಕ್ರ ಮತ್ತು ಕುಜನಿದ್ದರೆ, ಹೆಣ್ಣು ಸಂತಾನವಾಗುತ್ತದೆ. ಪಂಚಮಾಧಿಪತಿಯು ಪುರುಷ ರಾಶಿ,ಪುರುಷ ನವಾಂಶದಲ್ಲಿದ್ದರೆ ಪುರುಷ ಗ್ರಹದೊಂದಿಗೆ ಮತ್ತು ಪುರುಷ ಗ್ರಹಗಳ ದಷ್ಟಿ ಇದ್ದರೆ, ಎಲ್ಲಾ ಸಂತಾನವೂ ಗಂಡು ಸಂತಾನವಾಗುತ್ತದೆ. ಪಂಚಮಾಧಿಪತಿಯು ಪುರುಷ ನವಾಂಶದಲ್ಲಿದ್ದರೆ, ಪುರುಷ ಗ್ರಹಗಳೊಂದಿಗೆ ಮತ್ತು ಪುರುಷ ಗ್ರಹಗಳ ದಷ್ಟಿ ಇದ್ದರೆ, ಎಲ್ಲಾ ಸಂತಾನವೂ ಗಂಡು ಸಂತಾನವಾಗುತ್ತದೆ. ಪಂಚಮಾಧಿಪತಿಯು ಸ್ತ್ರೀ ರಾಶಿ ಮತ್ತು ಸ್ತ್ರೀ ನವಾಂಶದಲ್ಲಿದ್ದು, ಸ್ತ್ರೀ ಗ್ರಹಗಳೊಂದಿಗೆ ಇದ್ದರೆ ಅಥವಾ ಪುರುಷ ಗ್ರಹದ ದಷ್ಟಿಯಲ್ಲಿದ್ದರೆ, ಇವರಿಗೆ ಹೆಣ್ಣು ಸಂತಾನವಾಗುತ್ತದೆ. ಸಂತಾನ ದೋಷಕ್ಕೆ ಪರಿಹಾರ * ಸಂತಾನ ದೋಷ ಇರುವ ತಿಥಿಗೆ ಅನುಗುಣವಾಗಿ, ದೋಷ ಪರಿಹಾರ ಮಾಡಬೇಕು. ಸಂತಾನ ದೋಷ ಇರುವವರ ತಿಥಿಯು, * ಷಷ್ಠಿಯಾದರೆ ಸುಬ್ರಮಣ್ಯ ದೇವರ ಆರಾಧನೆ ಮಾಡಬೇಕು. * ಚತುರ್ಥ ತಿಥಿಯಾದರೆ, ನಾಗದೇವತೆಯ ಆರಾಧನೆ ಮಾಡಬೇಕು * ನವಮಿಯಾದರೆ, ರಾಮಾಯಣ ಪುರಾಣ ಶ್ರವಣ ಮಾಡಬೇಕು. * ಅಷ್ಟಮಿ ತಿಥಿಯಾದರೆ ಶ್ರವಣೋಪವಾಸ ಮಾಡಬೇಕು. * ಚತುರ್ದಶಿಯಾದರೆ, ರುದ್ರಪೂಜೆ ಮಾಡಬೇಕು. * ದ್ವಾದಶಿಯಾದರೆ ಅನ್ನದಾನ ಮಾಡಬೇಕು. * ಅಮಾವಾಸ್ಯೆ ಅಥವಾ ಹುಣ್ಣಿಮೆಯಾದರೆ, ಪಿತ ಕಾರ್ಯವನ್ನು ಅತ್ಯಂತ ಶ್ರದ್ಧಾಭಕ್ತಿಗಳಿಂದ ಮಾಡಬೇಕು. * ಸಂತಾನ ದೋಷ ಇರುವವರು ಸಂಬಂಧಿಸಿದ ಗ್ರಹಗಳ ವಕ್ಷ ಪೂಜೆ ಮಾಡಿದರೆ ಒಳ್ಳೆಯದಾಗುತ್ತದೆ. ಸಂತಾನ ಫಲವೂ ಸಿದ್ಧಿಸುತ್ತದೆ. ಮಕ್ಕಳ ಫಲವಿಲ್ಲದ್ದಕ್ಕೆ ಹಲವು ಕಾರಣಗಳು * ಡಾ. ಎಸ್.ಎನ್. ಶೈಲೇಶ್ ಬಾಣಾವರ ಸ್ನೇಹಿತರು ಅಥವಾ ಸಂಬಂಧಿಕರು ಜೊತೆ ಸೇರಿದಾಗ ಲೋಕರೂಢಿಯಂತೆ ನಿಮಗೆ ಮಕ್ಕಳೆಷ್ಟು? ಏನು ಮಾಡುತ್ತಿದ್ದಾರೆ? ಎನ್ನುವ ಪ್ರಶ್ನೆ ಹಾಕುವುದು ಸಾಮಾನ್ಯವಾಗಿದೆ. ಆದರೆ ಹೆಚ್ಚಿನ ಸಂದರ್ಭದಲ್ಲಿ ಇದಕ್ಕೆ ಉತ್ತರ ಇನ್ನೂ ಆಗಿಲ್ಲ ಎನ್ನುವುದಾಗಿರುತ್ತದೆ. ಕೆಲವಕು ಕಣ್ಣೀರಿಂದಲೇ ಉತ್ತರಿಸುತ್ತಾರೆ. 'ನೋಡಿ ನಮಗೆ ಮದುವೆಯಾಗಿ 8 ವರ್ಷವಾಯಿತು. ಇನ್ನೂ ಕೂಡಾ ಮಕ್ಕಳಾಗಿಲ್ಲ ಎಂದು ಹೇಳಿದರೆ, ಕೆಲವರು ದೇವರ ಮೊರೆ ಹೋದೆವು, ಹಲವಾರು ವೈದ್ಯರುಗಳನ್ನು ಭೇಟಿಯಾಗಿ ಅವರು ಹೇಳಿದ ಎಲ್ಲ ಪರೀಕ್ಷೆಗಳನ್ನು ಮಾಡಿಸಿದೆವು. ಆದರೂ ಮಕ್ಕಳಾಗಲಿಲ್ಲ . ಕೆಲವರು ಜ್ಯೋತಿಷಿಗಳ ಬಳಿ ಕುಂಡಲಿಗಳನ್ನು ಪರಿಶೀಲಿಸಿ, ಅವರು ಹೇಳಿದ ಪೂಜೆ ಪುನಸ್ಕಾರಗಳನ್ನೆಲ್ಲಾ ಮಾಡಿದರೂ ಮಕ್ಕಳಾಗಲಿಲ್ಲ ಎನ್ನುವುದ ಹತ್ತು ಹಲವಾರು ಸಮಸ್ಯೆಗಳನ್ನು ತಿಳಿಸುತ್ತಾರೆ. ಇತ್ತೀಚಿನ ದಿನಗಳಲ್ಲಿ ಮದುವೆ ಮೊದಲು ಸಾಲಾವಳಿ ಕೇಳುವುದು ಕಡಿಮೆಯಾಗಿದೆ. ಹಿಂದಿನ ದಿನಗಳಲ್ಲಿ ತಂದೆ ತಾಯಿಗಳು ತಮ್ಮ ಮಗಳ ಅಥವಾ ಮಗನ ಜಾತಕವನ್ನು ಜ್ಯೋತಿಷಿಗಳ ಬಳಿ ತೋರಿಸುತ್ತಿದ್ದರು. ಜಾತಕ ಇಲ್ಲದವರು ಹೆಸರು ಬಲದ ಮೇಲೆ ಸಾಲಾವಳಿ ಬರುವುದು ಇಲ್ಲವೋ ಎಂದು ಪರೀಕ್ಷಿಸುತ್ತಿದ್ದರು. ಇನ್ನು ಕೆಲವರು ದೇವರ ಅಪ್ಪಣೆ ಕೇಳಿ ವಿವಾಹ ಕಾರ್ಯ ನೆರವೇರಿಸುತ್ತಿದ್ದರು. ಕೆಲವರು ಈ ಪದ್ಧತಿಯನ್ನು ಈಗಲೂ ಮುಂದುವರಿಸಿದ್ದಾರೆ. ಆದರೆ, ಹೆಚ್ಚಿನವರು ಅದರಿಂದ ದೂರ ಹೋಗಿದ್ದಾರೆ. ದೋಷಗಳ ಪರಿಹಾರ ಜಾತಕದಲ್ಲಿ ಕುಜ ದೋಷ ಹಾಗೂ ಬೇರೆ ಇನ್ನೇನಾದರೂ ತೊಂದರೆ ಇದ್ದರೆ ಅದಕ್ಕೆ ಪರಿಹಾರ ಸೂಜಿಗೆ ಸಾಲಾವಳಿ ವಿಚಾರದಲ್ಲಿ 18 ಗುಣ ಮೇಲ್ಪಟ್ಟು ಬಂದಾಗ ವಿವಾಹ ನಡೆಸಬಹುದೆಂದು ಎಲ್ಲಾ ತರಹದ ವಿಚಾರ ವಿನಿಮಯ ಮಾಡಿದರೂ ಕೂಡ ಒಂದೊಂದು ಸಲ ಮಕ್ಕಳ ಫಲ ಆಗುವುದಿಲ್ಲ. ಕಾರಣಗಳೇನು ಎಂಬ ಪ್ರಶ್ನೆಗೆ ಉತ್ತರ. ಮೊದಲನೆಯದು ಹಿಂದಿನ ಜನ್ಮದಲ್ಲಿ ಮಾಡಿದ ಪಾಪದ ಫಲಗಳು. ಅದರ ಜೊತೆ ಪ್ರೇತಶಾಪ, ಗುರುಶಾಪ, ಪಿತೃಶಾಪ, ಸರ್ಪಶಾಪ, ಮಾತೃಶಾಪ ಹೀಗೆ ಮುಂತಾದ ಶಾಪಗಳನ್ನು ಮಾಡಿದ ತಪ್ಪಿಗೆ ಹಾಗೂ ಈ ಯಾವುದಾದರೂ ಶಾಪಗಳ ಪಾಪದಿಂದ ಮಕ್ಕಳ ಫಲಗಳಾಗುವುದಿಲ್ಲ. ಈ ವಿಚಾರವನ್ನು ಕುಂಡಲಿಯಲ್ಲಿ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ವಿಚಾರಗಳನ್ನು ತಿಳಿದುಕೊಳ್ಳಬಹುದು. ಹೀಗೆ ಪೂರ್ವಜನ್ಮದ ಪಾಪದ ಫಲದಿಂದ ಮಕ್ಕಳ ಭಾಗ್ಯವಿಲ್ಲವೆಂದು ಅನುಭವಿ ಜ್ಯೋತಿಷಿಗಳಿಂದ ತಿಳಿದುಕೊಂಡ ನಂತರ ಸಂಬಂಧ ಪಟ್ಟ ಶಾಪದ ಫಲಗಳನ್ನು ಪೂಜೆ, ಹೋಮ ಮುಂತಾದವುಗಳನ್ನು ಕ್ರಮಬದ್ಧವಾಗಿ ಆಚರಣೆ ಮಾಡಿ ಮಕ್ಕಳ ಭಾಗ್ಯ ಪಡೆಯಬಹುದು. ಇನ್ನು ಎರಡನೆಯ ಕಾರಣವೇನೆಂದರೆ ಕೆಲವು ವೈಜ್ಞಾನಿಕ ರೀತಿಯ ಮಕ್ಕಳ ಭಾಗ್ಯ ದೊರಕದೇ ಇರಬಹುದು ಅದು ಜ್ಯೋತಿಷ್ಯ ಶಾಸ್ತ್ರದ ಮೂಲಕ ಇದೇನು ವೈಜ್ಞಾನಿಕಕ್ಕೂ ಜ್ಯೋತಿಷ್ಯಕ್ಕೂ ಏನು ಸಂಬಂಧ ಎಂಬ ಪ್ರಶ್ನೆ ಇಲ್ಲಿ ಬರುತ್ತದೆ. ಅಲ್ಲದೆ ಅದಕ್ಕೆ ಉತ್ತರ ಜ್ಯೋತಿಷ್ಯ ಶಾಸ್ತ್ರವೂ ಕೂಡ ವಿಜ್ಞಾನವಾಗಿದೆ. ಇನ್ನು ವೈಜ್ಞಾನಿಕವಾಗಿ ಎರಡು ಭಾಗಗಳಾಗಿ ವಿಂಗಡಿಸಿದಾಗ ಪಕ್ಷ ಪಾತದ ಬಂಜೆತನ ಹಾಗೂ ನಪುಂಸಕತ್ವದಿಂದ ಮಕ್ಕಳ ಫಲ ದೊರಕದೆ ಇರಬಹುದು. ವೈದ್ಯಕೀಯ ಪರೀಕ್ಷೆಗೆ ಒಳಗಾದ ನಂತರ ಹೆಣ್ಣಿನಲ್ಲಿ ತೊಂದರೆ ಇರಬಹುದು ಅಥವಾ ಗಂಡಿನಲ್ಲಿ ತೊಂದರೆ ಇರಬಹುದು ಅಂತಹ ಸಂದರ್ಭಗಳಲ್ಲಿ ಕೆಲವು ಔಷಧಿಗಳಿಂದ ಮಕ್ಕಳಾಗುವ ಸಂಭವ ಇರುತ್ತದೆ. ಒಂದು ವೇಳೆ ಔಷಧಿಯಿಂದಲೂ ಸಂತಾಲ ಫಲ ದೊರಕದೆ ಇದ್ದಾಗ ದತ್ತು ಪಡೆದುಕೊಳ್ಳಬೇಕಾದ ಪ್ರಸಂಗವು ಬರಬಹುದು. ಕುಂಡಲಿಗಳಲ್ಲಿ ಗೋಚರ ಈಗ ಜ್ಯೋತಿಷ್ಯ ಶಾಸ್ತ್ರದಲ್ಲಿ ಮಕ್ಕಳ ಫಲವನ್ನು ನವಾಂಶ ಮತ್ತು ಸಪ್ತಾಂಶ ಕುಂಡಲಿಗಳನ್ನು ನೋಡಿದಾಗ ಮಕ್ಕಳ ಭಾಗ್ಯದ ವಿಚಾರ ಗೋಚರವಾಗುತ್ತದೆ. 1. ಐದನೆಯ ಭಾವಾಧಿಪತಿ ಪುರುಷ ರಾಶಿ ಹಾಗೂ ಪುರುಷ ನವಾಂಶದಲ್ಲಿದ್ದರೆ ಗಂಡು ಮಗುವಿನ ಫಲ ದೊರಕುತ್ತದೆ. 2. ಐದನೆಯ ಭಾವಾಧಿಪತಿ ನಪುಂಸಕ ರಾಶಿ ಹಾಗೂ ನಪುಂಸಕ ನವಾಂಶದಲ್ಲಿದ್ದರೆ ಅಂತವರಿಗೆ ನಪುಂಸಕ ಮಗುವಿನ ಫಲ ದೊರೆಯುತ್ತದೆ. 3. ಐದನೆಯ ಭಾವಾಧಿಪತಿ ಸ್ತ್ರೀ ರಾಶಿ ಹಾಗೂ ಸ್ತ್ರೀ ನವಾಂಶದಲ್ಲಿದ್ದರೆ ಅಂತವರಿಗೆ ಹೆಣ್ಣು ಮಗುವಿನ ಫಲ ದೊರೆಯುತ್ತದೆ. 4. ಐದನೆಯ ಭಾವಾಧಿಪತಿ ದ್ವಿಸ್ವಭಾವ ರಾಶಿ ಹಾಗೂ ದ್ವಿಸ್ವಭಾವ ನವಾಂಶದಲ್ಲಿದ್ದರೆ ಅಂತವರಿಗೆ ಅವಳಿ ಜವಳಿ ಮಕ್ಕಳ ಫಲ ಪ್ರಾಪ್ತಿಯಾಗುತ್ತದೆ. ಇನ್ನೂ ಅನೇಕ ಗ್ರಂಥಗಳಾದ ಸತ್ಯ ಜಾತಕ, ಪಲಾಧಿಪತಿ, ಸರ್ವಧ ಚಿಂತಾಮಣಿ ಬೃಹತ್ ಪರಾಶರ ಹೋರಾ ಶಾಸ್ತ್ರ, ಜಾತಕ ಪಾರಿಜಾತಕ, ಮಂತ್ರೇಶ್ವರ ಕೃತಿ, ಸಂಕೇತ ನಿಧಿ, ಹೀಗೆ ಹಲವು ಗ್ರಂಥಗಳಲ್ಲಿ ಮಕ್ಕಳು ನಿಧಾನವಾಗಿ ಆಗುವುದಕ್ಕೆ ಹಾಗೂ ಮಕ್ಕಳ ಫಲ ಇಲ್ಲದಿರುವುದಕ್ಕೆ ಕಾರಣಗಳೂ ಹಾಗೂ ಹೇಗೆ ಗ್ರಹಗತಿಗಳಿಂದ ಆಗುತ್ತಿದೆ ಎಂಬ ವಿಚಾರಗಳನ್ನು ತಿಳಿಸಿದೆ. 1. ಐದನೆಯ ಭಾವದಲ್ಲಿ ಅಂಗಾರಕನ ಜೊತೆ (ಕುಜ) ಪಾಪಗ್ರಹಗಳಿದ್ದರೆ ಮಕ್ಕಳು ಮರಣ ಹೊಂದುತ್ತವೆ ಹಾಗೂ ಗರ್ಭನಿಲ್ಲುವುದಿಲ್ಲ. 2. ಐದನೆಯ ಭಾವವು ಶನೇಶ್ವರ (ಶನಿ)ನಿಂದ ದೃಷ್ಟಿ ಹೊಂದಿದ್ದರೆ ಮಕ್ಕಳಾಗುವುದಿಲ್ಲ. 3. ಐದನೆಯ ಭಾವದಲ್ಲಿ ರಾಹು ಇದ್ದರೆ ಹಾಗೂ ಅಂಗಾರಕನ (ಕುಜ) ದೃಷ್ಟಿ ಇದ್ದರೆ ಸಂತಾನಫಲವಿಲ್ಲ. 4. ಐದನೆಯ ಭಾವ ಹಾಗೂ ಅಧಿಪತಿ ಗ್ರಹದ ತೊಂದರೆಗೆ ಒಳಗಾಗಿದ್ದಾಗ ಸಂತಾನ ಫಲವಿಲ್ಲ. 5. ಐದನೆಯ ಭಾವದಲ್ಲಿ ಪಾಪ ಗ್ರಹಗಳು ಹಾಗೂ ಭಾವಾಧಿಪತಿ ಪಾಪಗ್ರಹಗಳೊಡನೆ ಇದ್ದರೆ ಸಂತಾನಕಾರಕ ಗುರು ಐದನೆಯ ಭಾವದಲ್ಲಿದ್ದಾಗ ಪುತ್ರಶೋಕ ನಿರಂತರಂ. 6. ಅಂಗಾರಕ (ಕುಜ) ಹಾಗೂ ಶನೇಶ್ವರ (ಶನಿ) ಐದನೆಯ ಬಾವದಲ್ಲಿದ್ದರೆ ಹಾಗೂ ಐದನೆಯ ಭಾವದಿಂದ 6, 8, 12ರಲ್ಲಿ ಪಾಪಗ್ರಹಗಳಿದ್ದರೆ ಎದನೇಯ ಭಾವಾಧಿಪತಿ ಪಾಪಗ್ರಹಗಳೊಡನೆ ಅಥವಾ ಶತ್ರುಗಳೊಂದಿಗೆ ಇದ್ದರೆ ಸಂತಾನಫಲವಿರುವುದಿಲ್ಲ. 7. ಪಂಚಮಾಧಿಪತಿ ಹಾಗೂ ಸಪ್ತಮಾಧಿಪತಿ ಯುತಿಯಲ್ಲಿದ್ದರೆ ಅಥವಾ ರಾಶಿ ಪರಿವರ್ತನೆ ಹೊಂದಿದ್ದರೆ ಮಕ್ಕಳ ಫಲವಿಲ್ಲ. 8. ಐದನೆಯ ಭಾವ ಮತ್ತು ಲಗ್ನ ಅಗ್ನಿರಾಶಿಯಾಗಿದ್ದು ಐದನೆಯ ಬಾವಾಧಿಪತಿ 6, 8, 12ರಲ್ಲಿದ್ದರೆ ಸಂತಾನ ಫಲವಿಲ್ಲ. 9. ಸಂತಾನ ಭಾಗ್ಯ ಕೊಡುವ ಭಾವಾಧಿಪತಿಗಳು ಶತ್ರುಸ್ಥಾನ, ನೀಚಸ್ಥಾನ, ದ್ವಿಸ್ಥಾನದಲ್ಲಿ ಬಲಹೀನರಾಗಿದ್ದರೆ ಸಂತಾನಫಲವಿಲ್ಲ. ಸರ್ಪಶಾಪ ಐದನೆಯ ಭಾವದಲ್ಲಿ ಕುಜನ ರಾಶಿಯಾಗಿದ್ದು ಅದರಲ್ಲಿ ರಾಹು ಸ್ಥಿತನಿದ್ದರೆ ಹಾಗೂ ಅಂಗಾರಕನ ದೃಷ್ಠಿಗೆ ಒಳಗಾಗಿದ್ದರೆ ಮಕ್ಕಳಾಗುವುದಿಲ್ಲ. ಪಿತೃಶಾಪ ಐದನೇ ಭಾವವು ನೀಚ ಸೂರ‌್ಯನಾಗಿದ್ದು (ರವಿ) ಹಾಗೂ ಸೂರನ್ಯನು (ರವಿ) ಪಾಪಕೃರ್ತ ಯೋಗದಲ್ಲಿದ್ದರೆ ಹಾಗೂ ಆ ಸೂರ‌್ಯನು (ರವಿ) ಶನಿಯ ನವಾಂಶದಲ್ಲಿದ್ದರೆ, ರಾಹು ಶನಿ ಯುತಿಯಲ್ಲಿದ್ದರೆ ಮಕ್ಕಳಾಗುವುದಿಲ್ಲ. ಮಾತೃಶಾಪ ಐದನೇ ಭಾವವು ನೀಚ ಚಂದ್ರನಾಗಿದ್ದು ಹಾಗೂ ಚಂದ್ರನು ಪಾಪ ಕರ್ತರಿಯೋಗದಲ್ಲಿದ್ದು ಶನಿಯ ನವಾಂಶದಲ್ಲಿ ಆ ಚಂದ್ರನಿದ್ದರೆ ಹಾಗೂ ಶನಿ ಅಥವಾ ರಾಹು ಯತಿಯಲ್ಲಿದ್ದರೆ ಮಕ್ಕಳಾಗುವುದಿಲ್ಲ. ಭ್ರಾತೃಶಾಪ ಮೂರನೆಯ ಭಾವದಲ್ಲಿ ಲಗ್ನಾಧಿಪತಿಯಿದ್ದು ಅಂಗಾರಕ ರಾಹು ಎದನೆಯ ಭಾವದಲ್ಲಿದ್ದರೆ ಮೂರನೆಯ ಭಾವದಲ್ಲಿ ಎಂಟರ ಭಾವಾಧಿಪತಿಯಿದ್ದು ಹಾಗೂ ಐದನೆಯ ಭಾವದಲ್ಲಿ ರಾಹು ಅಂಗಾರಕನೊಡನೆ ಇದ್ದರೆ ಮಕ್ಕಳಾಗುವುದಿಲ್ಲ. ಪ್ರೇತಶಾಪ ಲಗ್ನದಿಂದ ಐದನೇ ಶನಿಗೂ ಹಾಗೂ ಸ್ಥಾನಾಧಿಪತಿಗೂ ಕೂಡಾ ಮಾಂದ್ಯ ದೃಷ್ಠಿಯಿದ್ದು ಲಗ್ನದಿಂದ ಐದನೇ ಸ್ಥಾನದಲ್ಲಿ ಶನಿ ಮಾಂದ್ಯರು ಕೂಡಿದ್ದರೂ ಮಕ್ಕಳಾಗುವುದಿಲ್ಲ. ಬ್ರಹ್ಮಶಾಪ ಗುರು, ಶನಿ, ಅಂಗಾರಕ ನವಾಂಶದಲ್ಲಿದ್ದರೆ ಲಗ್ನದಿಂದ ಐದನೇ ಸ್ಥಾನಾಧಿಪನು ಅಂಗಾರಕ, ಗುರು, ಶನಿ, ರಾಹುವಿನಿಂದ ಕೂಡಿ ಲಗ್ನದಿಂದ 6, 8, 12ನೇ ಸ್ಥಾನದಲ್ಲಿ ದುರ್ಬಲರಾಗಿದ್ದರೆ ಮಕ್ಕಳಾಗುವುದಿಲ್ಲ. ಗುರುಶಾಪ ಶನಿ ಅಥವಾ ರಾಹು ಯತಿಯಲ್ಲಿದ್ದರೆ ನವಾಂಶದಲ್ಲಿ ಗುರು, ಶನಿಯಿದ್ದರೆ ಲಗ್ನದಿಂದ ಐದನೇ ಭಾವವು ನೀಚ ಗುರುವುನದ್ದು ಆಗಿದ್ದ ಗುರು ಪಾಪಕರ್ತರಿ ಯೋಗದಲ್ಲಿದ್ದರೆ ಮಕ್ಕಳಾಗುವುದಿಲ್ಲ. ಆದ್ದರಿಂದ ಯಾರೇ ಆಗಲಿ ಮಕ್ಕಳ ಫಲವಿಲ್ಲದಿದ್ದಾಗ ಅನುಭವಿ ಜ್ಯೋತಿಷ್ಯರಿಂದ ಜಾತಕವನ್ನು ಪರಿಶೀಲಿಸಿ ಸಂಬಂಧ ಪಟ್ಟ ತೊಂದರೆ ಹಾಗೂ ಶಾಪದ ಫಲಗಳನ್ನು ತಿಳಿದು ಅದಕ್ಕೆ ಸಂಬಂಧಿಸಿದ ಪೂಜೆ, ಹೋಮ, ಜಪತಪಗಳಿಂದ ಮಕ್ಕಳ ಫಲ ಪಡೆದು ಸುಖ ಸಂತೋಷದಿಂದ ಬಾಳಬಹುದು. -SANGRAHA