Sunday, 10 February 2019

ರಥ ಸಪ್ತಮಿ: ಸೂರ್ಯನ ಆರಾಧನೆಗೆ ಪ್ರಮುಖ ದಿನ

ಮಾಘಮಾಸ ಶುಕ್ಲ ಪಕ್ಷದ ಸಪ್ತಮಿ ತಿಥಿಯಂದು ಸೂರ್ಯನ ಜನ್ಮದಿನ. ಅಲ್ಲದೆ ಸಪ್ತಮಿ ತಿಥಿಯ ಅದಿದೇವತೆಯು ಸೂರ್ಯ ಆಗಿರುವುದರಿಂದ, ಫೆಬ್ರವರಿ 12.2019 ರಂದು ಸೂರ್ಯ ಆರಾಧನೆಯ ‘ರಥ ಸಪ್ತಮಿ’ ದಿನವೆಂದು ಆಚರಿಸಲಾಗುತ್ತದೆ. ನಿಯಮಬದ್ಧವಾದ ಉದಯ ಹಾಗೂ ಅಸ್ತಗಳ ಮೂಲಕ ನಮಗೆ ಶಿಸ್ತು ಬದ್ಧವಾದ ಕರ್ತವ್ಯ ಪ್ರಜ್ಞೆ, ಚೈತನ್ಯವನ್ನು ತುಂಬುವ ಸೂರ್ಯನ ಪೂಜೆಯೇ ಈ ದಿವಸದ ಮುಖ್ಯ ಆಚರಣೆಯಾಗಿದೆ. ಈ ದಿನದಲ್ಲಿ ನಡೆಯುವ ಕೆಲಸ ಕಾರ್ಯಗಳು, ಕೋರಿಕೆಗಳು ಫಲಪ್ರದವಾಗಿರುತ್ತವೆ. ಸೂರ್ಯನ ಪ್ರಕಾಶ ಹೆಚ್ಚುತ್ತಿರುವುದರಿಂದ ಚಳಿಗಾಲದ ಚಳಿ ಮುದುಡಿಕೊಂಡು ಮೈಯಲ್ಲಿ ನವಚೇತನ ತುಂಬಿದಂತೆ ಅನಿಸುತ್ತದೆ. ಅಂಗಾಂಗಗಳಲ್ಲಿ ಕಾರ್ಯಕ್ಷಮವಾಗುತ್ತಿವೆ. ಈ ಉಪಕಾರಕ್ಕಾಗಿ ಸೂರ್ಯನನ್ನು ಪೂಜಿಸುವುದು ರೂಢಿಯಲ್ಲಿದೆ. ಆಹಾರಕ್ಕಾಗಿ, ರೋಗ ನಿವಾರಣೆಗಾಗಿ ಸೂರ್ಯೋಪಾಸನೆ ಮಾಡಬೇಕೆಂದು ಸ್ಕಂದ, ವರಾಹ ಪುರಾಣಗಳಲ್ಲಿ ಹೇಳಿವೆ. ವೈವಸ್ವತ ಮನ್ವಂತರದ ಆರಂಭದ ದಿನ. ಸೂರ್ಯನು ಉತ್ತರಾಯಣನಾಗಿ ಸಪ್ತಾಶ್ವಗಳ ರಥವನ್ನೇರಿ, ಉತ್ತರದಿಕ್ಕಿನ ಮಾರ್ಗದಲ್ಲಿ ಹೊರಟ ದಿನ. ರಥ ಸಪ್ತಮಿ ದಿವಸ ರೋಗ ನಿವಾರಣೆ, ದೇಹದಾರ್ಡ್ಯ ಹಾಗೂ ಉತ್ತಮ ಆರೋಗ್ಯವನ್ನು ಬಯಸುವವರು ಸೂರ್ಯನ ಆರಾಧನೆ ಮಾಡಬೇಕೆಂಬ ನಿಯಮವಿದೆ. ರೋಗಾಣುಗಳನ್ನು ನಾಶ ಪಡಿಸುವ ಶಕ್ತಿ ಸೂರ್ಯನ ಕಿರಣಗಳಲ್ಲಿವೆ. ಬೆಳಗಿನ ಹಾಗೂ ಸಂಜೆಯ ಸೂರ್ಯ ಕಿರಣಗಳಿಂದ ಆರೋಗ್ಯ ವರ್ಧನೆಯಾಗುತ್ತದೆ. ರೋಗದಿಂದ ನರಳುವವರು ಈ ದಿವಸ ಸೂರ್ಯಾರಾಧನೆಯನ್ನು ಮಾಡಿದರೆ ಬೇಗ ಗುಣಮುಖರಾಗುತ್ತಾರೆ. ಯೋಗಾಸನಗಳಲ್ಲಿ ಮೊದಲ ಪ್ರಾಶಸ್ತ್ಯ ಸೂರ್ಯ ನಮಸ್ಕಾರಕ್ಕೆ ನೀಡಬಹುದು. ಏಕೆಂದರೆ ಈ ಅಭ್ಯಾಸವು ಮನಸು, ದೇಹ ಮತ್ತು ಉಸಿರಾಟ ವ್ಯವಸ್ಥೆಗಳಿಗೆ ಪರಿಣಾಮಕಾರಿಯಾಗಿದೆ. ಭೂಮಿಯಲ್ಲಿನ ಸಕಲ ಜೀವರಾಶಿಗಳ ಚಟುವಟಿಕೆಗಳು ಸೂರ್ಯನಿಂದ ನಡೆಯುತ್ತಿದೆ. ರಥಸಪ್ತಮಿ ದಿನದಂದು ಸೂರ್ಯೋದಯಕ್ಕೆ ಸರಿಯಾಗಿ ನದಿ, ಸಮುದ್ರ, ಸರೋವರ, ಸಂಗಮ ಮುಂತಾದೆಡೆ ಸ್ನಾನ ಮಾಡಿ ಸೂರ್ಯನಿಗೆ ‘ಅರ್ಘ್ಯ’ ನೀಡಿದರೆ ಪೂರ್ವ ಜನ್ಮದ ಪಾಪಗಳು ಹಾಗೂ ಈ ಜನ್ಮದ ಸಕಲ ದುಃಖಗಳು ಪರಿಹಾರವಾಗುತ್ತವೆ. ಸೂರ್ಯೋದಯಕ್ಕೆ ಮಾಡುವ ಮಾಘಸ್ನಾನ ಪುಣ್ಯಪ್ರದವಾದುದು. ಆಯುಷ್ಯ, ಆರೋಗ್ಯ ಸಂಪತ್ತು ಲಭಿಸುವುದಲ್ಲದೆ, ಸೂರ್ಯನ ಅನುಗ್ರಹ ಪ್ರಾಪ್ತಿಯಾಗುತ್ತದೆಂದು ಪುರಾಣದಲ್ಲಿದೆ. ಸೂರ್ಯನ ಆರಾಧನೆ ಋಗ್ವೇದದ ಕಾಲದಿಂದಲೂ ಪ್ರಚಲಿತದಲ್ಲಿದೆ. ಪ್ರಾಚೀನ ವೈದಿಕ ಧರ್ಮದಲ್ಲಿ ಸೂರ್ಯನಿಗೆ ಅತ್ಯಂತ ಪ್ರಾಮುಖ್ಯತೆ ಇತ್ತು. ಆತನ ಆರಾಧನೆಯಿಂದಲೇ ಸೌರ ಪಂಥ ಹುಟ್ಟಿದ್ದು. ಕಾಲ ಗಣನೆಯಲ್ಲಿ ಸೌರಮಾನ ಎಣಿಕೆ ಇಂದಿಗೂ ಇದೆ. ಗಾಯತ್ರಿ ಮಂತ್ರದಲ್ಲಿನ ಪ್ರತಿಶಬ್ದವು ಸೂರ್ಯನ ಸಾಮಥ್ಯಗಳನ್ನು ಕೊಂಡಾಡುವ ಉದ್ದೇಶದಿಂದಲೇ ಬಳಸಲಾಗಿದೆ. ದ್ವಾಪರಾಯುಗದಲ್ಲಿ ಶ್ರೀ ಕೃಷ್ಣನು ಧರ್ಮರಾಜನಿಗೆ ರಥಸಪ್ತಮಿ ಬಗ್ಗೆ ಹೇಳಿದ ಕಥೆಯಿದೆ. ಯಶೋವರ್ಮನೆಂಬ ರಾಜನ ಮಗ ಹುಟ್ಟಿನಿಂದಲೇ ರೋಗಿಷ್ಠನಾಗಿದ್ದ. ಈ ಬಗ್ಗೆ ಜ್ಯೋತಿಷಿಗಳಿಂದ ವಿವರ ಪಡೆದು ಸಂಚಿತಕರ್ಮದಿಂದ ಬಂದಿರುವ ಈ ಕಾಯಿಲೆಗೆ ರಥಸಪ್ತಮಿ ವ್ರತ ಆಚರಿಸಲು ಹೇಳಿದ್ದರು. ಅದರಂತೆ ರಥಸಪ್ತಮಿಯ ದಿನ ಸೂರ್ಯಾರಾದನೆ ಮಾಡಲಾಗಿ ರಾಜ ಪುತ್ರನು ಆರೋಗ್ಯವಂತನೂ, ಪ್ರಭಾವಶಾಲಿಯೂ ಆದ. ಅಲ್ಲದೆ ಪಾಂಡವರು ವನವಾಸದ ಅವಧಿಯಲ್ಲಿ ಕೃಷ್ಣನ ಆದೇಶದಂತೆ ಸೂರ್ಯಾರಾಧನೆ ಮಾಡಿ ಸೂರ್ಯನಿಂದ ಅಕ್ಷಯ ಪಾತ್ರೆ ಪಡೆದಿದ್ದರು. ಅಲ್ಲದೆ ರಾವಣನ್ನು ಗೆಲ್ಲಬೇಕಾದರೆ ಶ್ರೀರಾಮನು ಕೂಡ ಅಗಸ್ತ್ಯರ ಉಪದೇಶದಂತೆ ‘ಆದಿತ್ಯ ಹೃದಯ’ ದ ಮೂಲಕ ಸೂರ್ಯನ ಆರಾಧನೆ ಮಾಡಿದನೆಂದು ರಾಮಾಯಣದಲ್ಲಿ ಹೇಳಿದೆ. ಸೂರ್ಯಾರಾಧನೆ ಮಾಡಿ, ಚಿನ್ನ ನೀಡುವ ‘ಶಮಂಥಕಮಣಿ’ ಪಡೆದ ಸತ್ರಾಜಿತ ಕಥೆ ಹರಿವಂಶದಲ್ಲಿ ಬಂದಿದೆ. ಮಯೂರನೆಂಬ ಕವಿ ‘ಸೂರ್ಯಶತಕ’ವೆಂಬ ಗ್ರಂಥ ಬರೆದು ಕಳೆದುಕೊಂಡ ಕಣ್ಣನ್ನು ಮತ್ತೆ ಪಡೆದನೆಂದು ಹೇಳುತ್ತಾರೆ. ಶ್ರೀರಾಮ ಸೂರ್ಯವಂಶದವನಾದರೆ ಕರ್ಣ, ಸುಗ್ರೀವ, ನವಗ್ರಹಗಳಲ್ಲಿ ಶನಿ ಹಾಗೂ ಯಮ ಸೂರ್ಯನ ಪುತ್ರರಾಗಿದ್ದಾರೆ. ವ್ಯಕ್ತಿಯ ಜನ್ಮ ಕುಂಡಲಿಯಲ್ಲಿ ಸೂರ್ಯನು ಬಲಹೀನನಾಗಿದ್ದರೆ ಅಥವಾ ಷಡ್ಬಲವಿರದಿದ್ದರೆ ರಥಸಪ್ತಮಿಯಂದು ಸೂರ್ಯಾರಾಧನೆ ಮಾಡಿದರೆ ದೋಷ ಪರಿಹಾರವಾಗುತ್ತದೆ. ಮಾಣಿಕ್ಯದ ಹರಳು ಧರಿಸಲು ಶುಭ ದಿನವಾಗಿದೆ. ಈ ಸೂರ್ಯರಾಧನೆ ಮುಖ್ಯವಾಗಿ ಭಾರತ, ಮಧ್ಯ ಆಫ್ರಿಕಾ, ಈಜಿಪ್ತ್, ಗ್ರೀಸ್ ಹಾಗೂ ಮಧ್ಯ ಏಷ್ಯಾಗಳಲ್ಲಿ ಆಚರಿಸಲಾಗುತ್ತಿದೆ. || ಶ್ರೀ ಸೂರ್ಯಾಷ್ಟೋತ್ತರ ಶತನಾಮಾವಳಿಃ || ಧ್ಯೇಯಃಸ್ಸದಾ ಸವಿತೃಮಂಡಲ ಮಧ್ಯವರ್ಥೀ | ನಾರಾಯಣ ಸರಸಿಜಾಸನ ಸನ್ನಿವಿಷ್ಠಾಃ | ಕೇಯೂರವಾನ್‌ ಮಕರಕುಂಡಲವಾನ್‌ ಕಿರೀಟಿ | ಹಾರಿ ಹಿರಣ್ಮಯ ವಪುಧೃತ ಶಂಖಚಕ್ರಾ || ಓಂ ಅರುಣಾಯ ನಮಃ | ಓಂ ಶರಣ್ಯಾಯ ನಮಃ | ಓಂ ಕರುಣಾರಸಸಿಂಧವೇ ನಮಃ | ಓಂ ಅಸಮಾನಬಲಾಯ ನಮಃ | ಓಂ ಆರ್ತರಕ್ಷಣಾಯ ನಮಃ | ಓಂ ಆದಿತ್ಯಾಯ ನಮಃ ಓಂ ಆದಿಭೂತಾಯ ನಮಃ | ಓಂ ಅಖಿಲಾಗಮವೇದಿನೇ ನಮಃ | ಓಂ ಅಚ್ಯುತಾಯ ನಮಃ | ಓಂ ಅಖಿಲಜ್ಞಾಯ ನಮಃ || ೧೦ || ಓಂ ಅನಂತಾಯ ನಮಃ | ಓಂ ಇನಾಯ ನಮಃ | ಓಂ ವಿಶ್ವರೂಪಾಯ ನಮಃ | ಓಂ ಇಜ್ಯಾಯ ನಮಃ | ಓಂ ಇಂದ್ರಾಯ ನಮಃ | ಓಂ ಭಾನವೇ ನಮಃ | ಓಂ ಇಂದಿರಾಮಂದಿರಾಪ್ತಾಯ ನಮಃ | ಓಂ ವಂದನೀಯಾಯ ನಮಃ | ಓಂ ಈಶಾಯ ನಮಃ | ಓಂ ಸುಪ್ರಸನ್ನಾಯ ನಮಃ || ೨೦ || ಓಂ ಸುಶೀಲಾಯ ನಮಃ | ಓಂ ಸುವರ್ಚಸೇ ನಮಃ | ಓಂ ವಸುಪ್ರದಾಯ ನಮಃ | ಓಂ ವಸವೇ ನಮಃ | ಓಂ ವಾಸುದೇವಾಯ ನಮಃ | ಓಂ ಉಜ್ವಲಾಯ ನಮಃ | ಓಂ ಉಗ್ರರೂಪಾಯ ನಮಃ | ಓಂ ಊರ್ಧ್ವಗಾಯ ನಮಃ | ಓಂ ವಿವಸ್ವತೇ ನಮಃ | ಓಂ ಉದ್ಯತ್ಕಿರಣಜಾಲಾಯ ನಮಃ || ೩೦ || ಓಂ ಹೃಷಿಕೇಶಾಯ ನಮಃ | ಓಂ ಊರ್ಜಸ್ವಲಾಯ ನಮಃ | ಓಂ ವೀರಾಯ ನಮಃ | ಓಂ ನಿರ್ಜರಾಯ ನಮಃ | ಓಂ ಜಯಾಯ ನಮಃ | ಓಂ ಊರುದ್ವಯಾಭಾವರೂಪಯುಕ್ತಸಾರಥಯೇ ನಮಃ | ಓಂ ಋಷಿವಂದ್ಯಾಯ ನಮಃ | ಓಂ ರುಗ್ಫ್ರಂತೇ ನಮಃ | ಓಂ ಋಕ್ಷಚಕ್ರಾಯ ನಮಃ | ಓಂ ಋಜುಸ್ವಭಾವಚಿತ್ತಾಯ ನಮಃ || ೪೦ || ಓಂ ನಿತ್ಯಸ್ತುತಾಯ ನಮಃ | ಓಂ ಋಕಾರ ಮಾತೃಕಾವರ್ಣರೂಪಾಯ ನಮಃ | ಓಂ ಉಜ್ಜಲತೇಜಸೇ ನಮಃ | ಓಂ ಋಕ್ಷಾಧಿನಾಥಮಿತ್ರಾಯ ನಮಃ | ಓಂ ಪುಷ್ಕರಾಕ್ಷಾಯ ನಮಃ | ಓಂ ಲುಪ್ತದಂತಾಯ ನಮಃ | ಓಂ ಶಾಂತಾಯ ನಮಃ | ಓಂ ಕಾಂತಿದಾಯ ನಮಃ | ಓಂ ಘನಾಯ ನಮಃ | ಓಂ ಕನತ್ಕನಕಭೂಷಾಯ ನಮಃ || ೫೦ || ಓಂ ಖದ್ಯೋತಾಯ ನಮಃ | ಓಂ ಲೂನಿತಾಖಿಲದೈತ್ಯಾಯ ನಮಃ | ಓಂ ಸತ್ಯಾನಂದಸ್ವರೂಪಿಣೇ ನಮಃ | ಓಂ ಅಪವರ್ಗಪ್ರದಾಯ ನಮಃ | ಓಂ ಆರ್ತಶರಣ್ಯಾಯ ನಮಃ | ಓಂ ಏಕಾಕಿನೇ ನಮಃ | ಓಂ ಭಗವತೇ ನಮಃ | ಓಂ ಸೃಷ್ಟಿಸ್ಥಿತ್ಯಂತಕಾರಿಣೇ ನಮಃ | ಓಂ ಗುಣಾತ್ಮನೇ ನಮಃ | ಓಂ ಘೃಣಿಭೃತೇ ನಮಃ || ೬೦ || ಓಂ ಬೃಹತೇ ನಮಃ | ಓಂ ಬ್ರಹ್ಮಣೇ ನಮಃ | ಓಂ ಐಶ್ವರ್ಯದಾಯ ನಮಃ | ಓಂ ಶರ್ವಾಯ ನಮಃ | ಓಂ ಹರಿದಶ್ವಾಯ ನಮಃ | ಓಂ ಶೌರಯೇ ನಮಃ | ಓಂ ದಶದಿಕ್‌ ಸಂಪ್ರಕಾಶಾಯ ನಮಃ | ಓಂ ಭಕ್ತವಶ್ಯಾಯ ನಮಃ | ಓಂ ಓಜಸ್ಕರಾಯ ನಮಃ | ಓಂ ಜಯಿನೇ ನಮಃ || ೭೦ || ಓಂ ಜಗದಾನಂದಹೇತವೇ ನಮಃ | ಓಂ ಜನ್ಮಮೃತ್ಯುಜರಾವ್ಯಾಧಿ ವರ್ಜಿತಾಯ ನಮಃ | ಓಂ ಔನ್ನತ್ಯಪದಸಂಚಾರರಥಸ್ಥಾಯ ನಮಃ | ಓಂ ಅಸುರಾರಯೇ ನಮಃ | ಓಂ ಕಮನೀಯಕರಾಯ ನಮಃ | ಓಂ ಅಬ್ಜವಲ್ಲಭಾಯ ನಮಃ | ಓಂ ಅಂತರ್ಬಹಿಃ ಪ್ರಕಾಶಾಯ ನಮಃ | ಓಂ ಅಚಿಂತ್ಯಾಯ ನಮಃ | ಓಂ ಆತ್ಮರೂಪಿಣೇ ನಮಃ | ಓಂ ಅಚ್ಯುತಾಯ ನಮಃ || ೮೦ || ಓಂ ಅಮರೇಶಾಯ ನಮಃ | ಓಂ ಪರಸ್ಮೈಜೋತಿಷೇ ನಮಃ | ಓಂ ಅಹಸ್ಕರಾಯ ನಮಃ | ಓಂ ರವಯೇ ನಮಃ | ಓಂ ಹರಯೇ ನಮಃ | ಓಂ ಪರಮಾತ್ಮನೇ ನಮಃ | ಓಂ ತರುಣಾಯ ನಮಃ | ಓಂ ವರೇಣ್ಯಾಯ ನಮಃ | ಓಂ ಗ್ರಹಾಣಾಂಪತಯೇ ನಮಃ | ಓಂ ಭಾಸ್ಕರಾಯ ನಮಃ || ೯೦ || ಓಂ ಆದಿಮಧ್ಯಾಂತರಹಿತಾಯ ನಮಃ | ಓಂ ಸೌಖ್ಯಪ್ರದಾಯ ನಮಃ | ಓಂ ಸಕಲ ಜಗತಾಂಪತಯೇ ನಮಃ | ಓಂ ಸೂರ್ಯಾಯ ನಮಃ | ಓಂ ಕವಯೇ ನಮಃ | ಓಂ ನಾರಾಯಣಾಯ ನಮಃ | ಓಂ ಪರೇಶಾಯ ನಮಃ | ಓಂ ತೇಜೋರೂಪಾಯ ನಮಃ | ಓಂ ಶ್ರೀಂ ಹಿರಣ್ಯಗರ್ಭಾಯ ನಮಃ | ಓಂ ಹ್ರೀಂ ಸಂಪತ್ಕರಾಯ ನಮಃ || ೧೦೦|| ಓಂ ಐಂ ಇಷ್ಟಾರ್ಥದಾಯ ನಮಃ | ಓಂ ಸುಪ್ರಸನ್ನಾಯ ನಮಃ | ಓಂ ಶ್ರೀಮತೇ ನಮಃ | ಓಂ ಶ್ರೇಯಸೇ ನಮಃ | ಓಂ ಭಕ್ತಕೋಟಿಸೌಖ್ಯಪ್ರದಾಯಿನೇ ನಮಃ | ಓಂ ನಿಖಿಲಾಗಮವೇದ್ಯಾಯ ನಮಃ | ಓಂ ನಿತ್ಯಾನಂದಾಯ ನಮಃ | ಓಂ ಶ್ರೀ ಸೂರ್ಯನಾರಾಯಣ ಸ್ವಾಮಿನೇ ನಮಃ || ೧೦೮ || || ಶ್ರೀ ಸೂರ್ಯಾಷ್ಟೋತ್ತರ ಶತನಾಮಾವಳಿಃ ಸಂಪೂರ್ಣಮ್‌ || Sangraha

ರಥಸಪ್ತಮಿ: 12.02.2019

ಸರ್ವಚೇತನ ಸ್ವರೂಪಿ ಸೂರ್ಯನಿಗೆ ನಮೋ ಭಾರತೀಯರು ಆಚರಿಸುವ ಹಬ್ಬ ಹರಿದಿನಗಳಲ್ಲಿ ಅತಿ ಮುಖ್ಯವಾದ ಒಂದು ಪರ್ವ ರಥಸಪ್ತಮಿ. ಮಾಘ ಮಾಸದ ಶುಕ್ಲ ಪಕ್ಷದ ಸಪ್ತಮಿ ತಿಥಿಯಂದು ಇದನ್ನು ಆಚರಿಸಲಾಗುತ್ತದೆ. ಶೈವ, ವೈಷ್ಣವ ಮುಂತಾದ ಎಲ್ಲಾ ವೈದಿಕ ಸಂಪ್ರದಾಯಗಳ ಜನರೂ ಇದನ್ನು ಆಚರಿಸುತ್ತಾರೆ. ಇದಕ್ಕೆ ಕಾರಣ ಈ ಹಬ್ಬದ ಆರಾಧ್ಯ ದೇವತೆಯಾದ 'ಸೂರ್ಯ'. ಆತನು ಎಲ್ಲಾ ವರ್ಗದವರ ಪೂಜಿಸುವ ವಿಷಯವಾಗಿದ್ದಾನೆ. ಸೌರ ಎಂದು ಕರೆಯಲಾಗುವ ಭಕ್ತಿ ದರ್ಶನಗಳಲ್ಲಿ ಸೂರ್ಯನೇ ಪರಾ ದೇವತೆ. ಪಂಚಾಯತನ ಎಂದು ಕರೆಯಲಾಗುವ ಒಂದು ಪೂಜಾಕಲ್ಪದಲ್ಲಿಯೂ ಸೂರ್ಯನು ಆರಾಧ್ಯ ದೇವತೆಗಳಲ್ಲಿ ಒಬ್ಬನಾಗಿ ಪರಿಗಣಿತನಾಗಿದ್ದಾನೆ. ಇದಲ್ಲದೆ ಸೂರ್ಯ ಬಿಂಬವೂ ಹರಿಹರರಿಬ್ಬರಿಗೂ ಸಾಲಿಗ್ರಾಮ, ಶಿವಲಿಂಗಗಳಂತೆ ಪೂಜಾ ಮಾಧ್ಯಮವಾಗಿದೆ. ಧ್ಯೇಯಸ್ಸದಾ ಸವಿತೃ ಮಂಡಲ ಮಧ್ಯವರ್ಶೇ ನಾರಾಯಣಸ್ಸರಸಿಜಾಸನ ಸನ್ನಿವಿಷ್ಟಃ | ಅರ್ಕಮಂಡಲ ಮಧ್ಯಸ್ಥಂ ಸೂರ್ಯಕೋಟಿ ಸಮಪ್ರಭಂ ಬ್ರಹ್ಮಾದಿ ಸೇವೈ ಪಾದಾಬ್ಜಂ ನೌಮಿ ಬ್ರಹ್ಮ ರಮಾಸಖಂ || ನಾರಾಯಣನು ಸೂರ್ಯಮಂಡಲದಲ್ಲಿ ಮಧ್ಯದಲ್ಲಿ ಧ್ಯಾನಿಸ್ಪಡುತ್ತಾನೆ. 'ಸೂರ್ಯನಾರಾಯಣ' ಎಂಬ ಹೆಸರು ಪ್ರಸಿದ್ಧಿಯಾಗಿದೆ. ಗಾಯತ್ರ್ಯರ್ಕಾಗ್ನಿಗೋಚರಃ ಶಂಭುಃ ಎಂಬ ಶ್ಲೋಕವು ಸೂರ್ಯಮಂಡಲದಲ್ಲಿ ಶಿವನನ್ನು ಧ್ಯಾನ ಮೂರ್ತಿಯನ್ನಾಗಿ ಹೇಳುತ್ತಿದೆ. ಉಪನಿಷತ್ತುಗಳು ಪರಮಾತ್ಮನನ್ನು ಆದಿತ್ಯ ಮಂಡಲದಲ್ಲಿ ಉಪಾಸನೆ ಮಾಡಬೇಕೆಂದು ಸಾರುತ್ತವೆ. ತ್ರಿಕಾಲಸಂಧ್ಯಾವಂದನೆಯಲ್ಲಿ ಜಪಿಸಲಾಗುವ ಗಾಯತ್ರೀ ಮಂತ್ರವು ಸವಿತೃದೇವತಾಕವಾಗಿದೆ. ಸರ್ವಪ್ರಿಯ ದೇವತೆಯಾಗಿರುವ ಸೂರ್ಯ ದೇವನನ್ನು ಕುರಿತ ಹಬ್ಬವಾಗಿರುವುದರಿಂದ ಇದು ಎಲ್ಲಾ ಆಸ್ತಿಕರಿಂದಲೂ ಆಚರಣೆಗೊಳಗಾಗುತ್ತಿರುವುದು ಸಹಜವೇ ಆಗಿದೆ. ಪರ್ವದ ನಾಮಧೇಯಗಳು ರಥಸಪ್ತಮಿ ಮತ್ತು ಅಚಲಾ ಸಪ್ತಮಿ ಎಂಬ ಹೆಸರುಗಳಿಂದ ಇದು ಶಾಸ್ತ್ರಗಳಲ್ಲಿ ಪ್ರಸಿದ್ಧಿಯಾಗಿದೆ. ರಥಸಪ್ತಮಿ ಎಂಬ ಹೆಸರಿಗೆ ಕಾರಣ ಈ ವಿಶಿಷ್ಟವಾದ ಸಪ್ತಮಿ ತಿಥಿಯಂದು 'ರಥವರ' ಎಂದು ಕರೆಯಲಾಗುವ ಸೂರ್ಯನು ಆರಾಧಿಧಿಸಲ್ಪಡುವುದು. ಏವಂ ವಿಧಂ ರಥವರಂ ರಥವಾಜಿಯುಕ್ತಂ ಸೂರ್ಯನನ್ನು ಪ್ರತ್ಯೇಕವಾಗಿ ಕರೆದಿರುವುದರಿಂದ ರಥವರ ಶಬ್ದವು ಸೂರ್ಯನ ರಥಕ್ಕೆ ಅನ್ವಯಿಸುತ್ತದೆಯೇ ಹೊರತು ಸೂರ್ಯನಿಗಲ್ಲ. ಪ್ರಸಿದ್ಧವಾದ ಸೂರ್ಯರಥದ ಉತ್ತರಗತಿಯ ನಿಮಿತ್ತವಾಗಿ ದೇವರನ್ನು ಆರಾಧಿಧಿಸುವ ಸಪ್ತಮಿ ತಿಥಿ ಎಂದು ರಥಸಪ್ತಮಿ ಶಬ್ದಕ್ಕೆ ಅರ್ಥ ವಿವರಣೆ ನೀಡುವುದು ಹೆಚ್ಚು ಉಚಿತವಾಗಿದೆ. ದೇವಾಲಯದಲ್ಲಿ ಉತ್ತರಾಯಣದಲ್ಲಿ ರಥೋತ್ಸವಗಳು ಸಾಮಾನ್ಯವಾಗಿ ಪ್ರಾರಂಭವಾಗುವುದು ಸಪ್ತಮಿ ತಿಥಿ ದಿವಸವಾದ್ದರಿಂದ ಸ್ಥಿರವಾದ ಫಲವನ್ನು ಕೊಡುತ್ತದೆ. ಅಕ್ಷಯ ತೃತೀಯ ಅಕ್ಷಯ ಫಲವನ್ನು ಕೊಡುವಂತೆ, ರಥ ಸಪ್ತಮಿ ಕೂಡ ಆರೋಗ್ಯ ಭಾಗ್ಯವನ್ನು ಕರುಣಿಸುತ್ತದೆ. ರಥಸಪ್ತಮಿ ಆಚರಣೆಯು ನಿತ್ಯವೇ? ಅಥವಾ ಕಾಮ್ಯವೇ? ಎಂದರೆ ಎರಡೂ ಆಗುತ್ತದೆ. ನಿತ್ಯ ಅವಶ್ಯ ಎಂಬ ಶಬ್ದಗಳನ್ನು ವಿಷ್ಣು ಸ್ಮೃತಿಯು ಹೇಳುವುದರಿಂದ ನಿಷ್ಕಾಮವಾಗಿ ಆಚರಿಸಿದರೆ ನಿತ್ಯ ವ್ರತವಾಗುತ್ತದೆ. ಆರೋಗ್ಯ, ಐಶ್ವರ್ಯ ಎಂಬುದು ಲಾಭವಾಗುತ್ತದೆ. ರಥಸಪ್ತಮಿಯಂದು ಸಕಾಲದಲ್ಲಿ ಸ್ನಾನ ಮಾಡಿದರೆ ಅಕ್ಷಯ ಫಲ ಸಿದ್ಧಿಸುತ್ತದೆ. ಮಾಘ ಮಾಸ ಪ್ರಾತಃಕಾಲ ಸ್ನಾನಕ್ಕೆ ಪ್ರಶಸ್ತ. ವಾಡಿಕೆಯಲ್ಲಿ 'ಬಲವಂತ ಮಾಘಸ್ನಾನ'ದಿಂದ ಅಧ್ಯಾತ್ಮ ಫಲ ದೊರೆಯುವುದಿಲ್ಲ. ಕೋಟಿ ಸೂರ್ಯ ಗ್ರಹಣ ಪುಣ್ಯಕಾಲದ ಆಚರಣೆಗೆ ಸಮಾನ ಮಂತ್ರ ಜಪ ದೇವತಾ ಆರಾಧನೆ ವಿಶೇಷ ನೀರಿನಲ್ಲಿ ಪೂರ್ಣವಾಗಿ ಮುಳುಗಿ ಮಾಡುವ ಸ್ನಾನ ತುಂಬಾ ಪ್ರಶಸ್ತ. ಸಪ್ತಾಶ್ವಾ ಸಪ್ತಲೋಕಾಶ್ವಾ ಸಪ್ತ ದ್ವೀಪಾ ವಸುಂಧರಾ | ಸಪ್ತಾರ್ಕ ಪರ್ಣಾನೈದಾಯ ಸಪ್ತಮ್ಯಾಂ ಸ್ನಾನ ಮಾಚಕೇತ್ || ಸೂರ್ಯನು ಪ್ರಸಾದದಿಂದ ಬೆಳಿಗ್ಗೆ ಮಾಡುವ ಸ್ನಾನದಿಂದ ಕಷ್ಟಗಳು ನಿವಾರಣೆಯಾಗಿ ಸುಖ, ಸೌಭಾಗ್ಯ ವೃದ್ಧಿಯಾಗಲೆಂದು ಭಗವಂತನಲ್ಲಿ ಪ್ರತಿದಿನ ಕಣ್ಣಿಗೆ ಕಾಣುವ ಸೂರ್ಯನನ್ನು ನಮಸ್ಕರಿಸೋಣ. ಎಕ್ಕದ ಎಲೆ ಜಳಕ ರಥಸಪ್ತಮಿ ಎಂದ ಕೂಡಲೇ ಗ್ರಾಮಾಂತರ ಪ್ರದೇಶಗಳಲ್ಲಿ ಹಿರಿಯರು ಎಕ್ಕದ ಗಿಡ ಹುಡುಕಿಕೊಂಡು ಹೋಗುವುದು, ಎಲೆಗಳನ್ನು ತರುವುದು ಸಾಮಾನ್ಯ. ಗಣಪತಿಯ ಪತ್ರ ಪೂಜೆಯಲ್ಲಿ ಎಕ್ಕೆ ಎಲೆಗಳು ಪವಿತ್ರವಾಗಿವೆ. ಸೂರ್ಯನಿಗೆ ಪ್ರಿಯಕರವಾದ ಪತ್ರೆ ಇದಾಗಿದೆ. ರಥ ಸಪ್ತಮಿಯಂದು ಬಿಳಿ ಎಕ್ಕೆಯ ಎಲೆಗಳನ್ನು ಬೆಳಗಿನ ಜಾವದಲ್ಲಿ ತಲೆ, ಭುಜ, ಕತ್ತು, ಕಂಕುಳು, ತೊಡೆ, ಪಾದಗಳ ಮೇಲೆ ಎಕ್ಕದ ಎಲೆಯನ್ನು ಇಟ್ಟುಕೊಂಡು ಸ್ನಾನ ಮಾಡಿ, ಪೂರ್ವಾಭಿಮುಖವಾಗಿ ಸೂರ್ಯನಿಗೆ ನಮಸ್ಕರಿಸಿದರೆ ಆರೋಗ್ಯ ಮತ್ತು ಶ್ರೇಯಸ್ಸು. ಎಕ್ಕದ ಎಲೆಗಳಿಗೆ ಚರ್ಮಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು, ರೋಗಗಳನ್ನು ನಿವಾರಿಸುವ ಸಾಮರ್ಥ್ಯವಿದೆ, ಅಷ್ಟೇ ಅಲ್ಲದೇ, ದೇಹದಲ್ಲಿನ ಕೀಲು ನೋವು, ಹಲ್ಲು ನೋವು, ಹೊಟ್ಟೆ ನೋವುಗಳಿಗೂ ಸಹ ಎಕ್ಕದ ಗಿಡ, ಅದರ ಎಲೆಗಳಲ್ಲಿರುವ ಔಷಧ ಅಂಶಗಳಿಂದ ಪರಿಹಾರ ಕಂಡುಕೊಳ್ಳಬಹುದು. ಕಾಲಿಗೆ ಮುಳ್ಳು ಚುಚ್ಚಿದ್ದರೆ ಎಕ್ಕದ ಹಾಲು ಹಾಕಿದರೆ ಬಾವು ಆಗುವುದಿಲ್ಲ; ಮುಳ್ಳು ಸುಲಭವಾಗಿ ಹೊರಕ್ಕೆ ಬರುತ್ತದೆ. ಕೆಲವು ಹಿರಿಯರು || ಶ್ರೀ ಸೂರ್ಯಾಷ್ಟೋತ್ತರ ಶತನಾಮಾವಳಿಃ ||. ಧ್ಯೇಯಃಸ್ಸದಾ ಸವಿತೃಮಂಡಲ ಮಧ್ಯವರ್ಥೀ | ನಾರಾಯಣ ಸರಸಿಜಾಸನ ಸನ್ನಿವಿಷ್ಠಾಃ | ಕೇಯೂರವಾನ್‌ ಮಕರಕುಂಡಲವಾನ್‌ ಕಿರೀಟಿ | ಹಾರಿ ಹಿರಣ್ಮಯ ವಪುಧೃತ ಶಂಖಚಕ್ರಾ || ಓಂ ಅರುಣಾಯ ನಮಃ | ಓಂ ಶರಣ್ಯಾಯ ನಮಃ | ಓಂ ಕರುಣಾರಸಸಿಂಧವೇ ನಮಃ | ಓಂ ಅಸಮಾನಬಲಾಯ ನಮಃ | ಓಂ ಆರ್ತರಕ್ಷಣಾಯ ನಮಃ | ಓಂ ಆದಿತ್ಯಾಯ ನಮಃ ಓಂ ಆದಿಭೂತಾಯ ನಮಃ | ಓಂ ಅಖಿಲಾಗಮವೇದಿನೇ ನಮಃ | ಓಂ ಅಚ್ಯುತಾಯ ನಮಃ | ಓಂ ಅಖಿಲಜ್ಞಾಯ ನಮಃ || ೧೦ || ಓಂ ಅನಂತಾಯ ನಮಃ | ಓಂ ಇನಾಯ ನಮಃ | ಓಂ ವಿಶ್ವರೂಪಾಯ ನಮಃ | ಓಂ ಇಜ್ಯಾಯ ನಮಃ | ಓಂ ಇಂದ್ರಾಯ ನಮಃ | ಓಂ ಭಾನವೇ ನಮಃ | ಓಂ ಇಂದಿರಾಮಂದಿರಾಪ್ತಾಯ ನಮಃ | ಓಂ ವಂದನೀಯಾಯ ನಮಃ | ಓಂ ಈಶಾಯ ನಮಃ | ಓಂ ಸುಪ್ರಸನ್ನಾಯ ನಮಃ || ೨೦ || ಓಂ ಸುಶೀಲಾಯ ನಮಃ | ಓಂ ಸುವರ್ಚಸೇ ನಮಃ | ಓಂ ವಸುಪ್ರದಾಯ ನಮಃ | ಓಂ ವಸವೇ ನಮಃ | ಓಂ ವಾಸುದೇವಾಯ ನಮಃ | ಓಂ ಉಜ್ವಲಾಯ ನಮಃ | ಓಂ ಉಗ್ರರೂಪಾಯ ನಮಃ | ಓಂ ಊರ್ಧ್ವಗಾಯ ನಮಃ | ಓಂ ವಿವಸ್ವತೇ ನಮಃ | ಓಂ ಉದ್ಯತ್ಕಿರಣಜಾಲಾಯ ನಮಃ || ೩೦ || ಓಂ ಹೃಷಿಕೇಶಾಯ ನಮಃ | ಓಂ ಊರ್ಜಸ್ವಲಾಯ ನಮಃ | ಓಂ ವೀರಾಯ ನಮಃ | ಓಂ ನಿರ್ಜರಾಯ ನಮಃ | ಓಂ ಜಯಾಯ ನಮಃ | ಓಂ ಊರುದ್ವಯಾಭಾವರೂಪಯುಕ್ತಸಾರಥಯೇ ನಮಃ | ಓಂ ಋಷಿವಂದ್ಯಾಯ ನಮಃ | ಓಂ ರುಗ್ಫ್ರಂತೇ ನಮಃ | ಓಂ ಋಕ್ಷಚಕ್ರಾಯ ನಮಃ | ಓಂ ಋಜುಸ್ವಭಾವಚಿತ್ತಾಯ ನಮಃ || ೪೦ || ಓಂ ನಿತ್ಯಸ್ತುತಾಯ ನಮಃ | ಓಂ ಋಕಾರ ಮಾತೃಕಾವರ್ಣರೂಪಾಯ ನಮಃ | ಓಂ ಉಜ್ಜಲತೇಜಸೇ ನಮಃ | ಓಂ ಋಕ್ಷಾಧಿನಾಥಮಿತ್ರಾಯ ನಮಃ | ಓಂ ಪುಷ್ಕರಾಕ್ಷಾಯ ನಮಃ | ಓಂ ಲುಪ್ತದಂತಾಯ ನಮಃ | ಓಂ ಶಾಂತಾಯ ನಮಃ | ಓಂ ಕಾಂತಿದಾಯ ನಮಃ | ಓಂ ಘನಾಯ ನಮಃ | ಓಂ ಕನತ್ಕನಕಭೂಷಾಯ ನಮಃ || ೫೦ || ಓಂ ಖದ್ಯೋತಾಯ ನಮಃ | ಓಂ ಲೂನಿತಾಖಿಲದೈತ್ಯಾಯ ನಮಃ | ಓಂ ಸತ್ಯಾನಂದಸ್ವರೂಪಿಣೇ ನಮಃ | ಓಂ ಅಪವರ್ಗಪ್ರದಾಯ ನಮಃ | ಓಂ ಆರ್ತಶರಣ್ಯಾಯ ನಮಃ | ಓಂ ಏಕಾಕಿನೇ ನಮಃ | ಓಂ ಭಗವತೇ ನಮಃ | ಓಂ ಸೃಷ್ಟಿಸ್ಥಿತ್ಯಂತಕಾರಿಣೇ ನಮಃ | ಓಂ ಗುಣಾತ್ಮನೇ ನಮಃ | ಓಂ ಘೃಣಿಭೃತೇ ನಮಃ || ೬೦ || ಓಂ ಬೃಹತೇ ನಮಃ | ಓಂ ಬ್ರಹ್ಮಣೇ ನಮಃ | ಓಂ ಐಶ್ವರ್ಯದಾಯ ನಮಃ | ಓಂ ಶರ್ವಾಯ ನಮಃ | ಓಂ ಹರಿದಶ್ವಾಯ ನಮಃ | ಓಂ ಶೌರಯೇ ನಮಃ | ಓಂ ದಶದಿಕ್‌ ಸಂಪ್ರಕಾಶಾಯ ನಮಃ | ಓಂ ಭಕ್ತವಶ್ಯಾಯ ನಮಃ | ಓಂ ಓಜಸ್ಕರಾಯ ನಮಃ | ಓಂ ಜಯಿನೇ ನಮಃ || ೭೦ || ಓಂ ಜಗದಾನಂದಹೇತವೇ ನಮಃ | ಓಂ ಜನ್ಮಮೃತ್ಯುಜರಾವ್ಯಾಧಿ ವರ್ಜಿತಾಯ ನಮಃ | ಓಂ ಔನ್ನತ್ಯಪದಸಂಚಾರರಥಸ್ಥಾಯ ನಮಃ | ಓಂ ಅಸುರಾರಯೇ ನಮಃ | ಓಂ ಕಮನೀಯಕರಾಯ ನಮಃ | ಓಂ ಅಬ್ಜವಲ್ಲಭಾಯ ನಮಃ | ಓಂ ಅಂತರ್ಬಹಿಃ ಪ್ರಕಾಶಾಯ ನಮಃ | ಓಂ ಅಚಿಂತ್ಯಾಯ ನಮಃ | ಓಂ ಆತ್ಮರೂಪಿಣೇ ನಮಃ | ಓಂ ಅಚ್ಯುತಾಯ ನಮಃ || ೮೦ || ಓಂ ಅಮರೇಶಾಯ ನಮಃ | ಓಂ ಪರಸ್ಮೈಜೋತಿಷೇ ನಮಃ | ಓಂ ಅಹಸ್ಕರಾಯ ನಮಃ | ಓಂ ರವಯೇ ನಮಃ | ಓಂ ಹರಯೇ ನಮಃ | ಓಂ ಪರಮಾತ್ಮನೇ ನಮಃ | ಓಂ ತರುಣಾಯ ನಮಃ | ಓಂ ವರೇಣ್ಯಾಯ ನಮಃ | ಓಂ ಗ್ರಹಾಣಾಂಪತಯೇ ನಮಃ | ಓಂ ಭಾಸ್ಕರಾಯ ನಮಃ || ೯೦ || ಓಂ ಆದಿಮಧ್ಯಾಂತರಹಿತಾಯ ನಮಃ | ಓಂ ಸೌಖ್ಯಪ್ರದಾಯ ನಮಃ | ಓಂ ಸಕಲ ಜಗತಾಂಪತಯೇ ನಮಃ | ಓಂ ಸೂರ್ಯಾಯ ನಮಃ | ಓಂ ಕವಯೇ ನಮಃ | ಓಂ ನಾರಾಯಣಾಯ ನಮಃ | ಓಂ ಪರೇಶಾಯ ನಮಃ | ಓಂ ತೇಜೋರೂಪಾಯ ನಮಃ | ಓಂ ಶ್ರೀಂ ಹಿರಣ್ಯಗರ್ಭಾಯ ನಮಃ | ಓಂ ಹ್ರೀಂ ಸಂಪತ್ಕರಾಯ ನಮಃ || ೧೦೦|| ಓಂ ಐಂ ಇಷ್ಟಾರ್ಥದಾಯ ನಮಃ | ಓಂ ಸುಪ್ರಸನ್ನಾಯ ನಮಃ | ಓಂ ಶ್ರೀಮತೇ ನಮಃ | ಓಂ ಶ್ರೇಯಸೇ ನಮಃ | ಓಂ ಭಕ್ತಕೋಟಿಸೌಖ್ಯಪ್ರದಾಯಿನೇ ನಮಃ | ಓಂ ನಿಖಿಲಾಗಮವೇದ್ಯಾಯ ನಮಃ | ಓಂ ನಿತ್ಯಾನಂದಾಯ ನಮಃ | ಓಂ ಶ್ರೀ ಸೂರ್ಯನಾರಾಯಣ ಸ್ವಾಮಿನೇ ನಮಃ || ೧೦೮ || || ಶ್ರೀ ಸೂರ್ಯಾಷ್ಟೋತ್ತರ ಶತನಾಮಾವಳಿಃ ಸಂಪೂರ್ಣಮ್‌ || ಸೂರ್ಯನ 108 ಹೆಸರುಗಳನ್ನು ಹೇಳಿ ಸೂರ್ಯ ನಮಸ್ಕಾರ ಮಾಡುವ ಪದ್ಧತಿಯೂ ಇದೆ. ಒಂದು ವೇಳೆ 108 ನಾಮಗಳನ್ನು ಹೇಳಿಕೊಳ್ಳಲು ಸಾಧ್ಯವಾಗದೇ ಇದ್ದರೆ ಇಂದ್ರ, ವಿಧಾತ, ಪರ್ಜನ್ಯ, ತ್ವಷ್ಟ, ಪುಷ, ಆರ್ಯಮ, ಭಾಗ, ವಿವಸ್ವನ, ವಿಷ್ಣು, ಅಂಶುಮಾನ, ವರುಣ ಮತ್ತು ಮಿತ್ರ ಎಂಬ ಸೂರ್ಯನ 12 ನಾಮಗಳನ್ನು ಜಪಿಸಿ ನಮಸ್ಕಾರ ಮಾಡಬಹುದಾಗಿದೆ. ಸೂರ್ಯ ಶಕ್ತಿ ಸೂರ್ಯಾರಾಧನೆಗೆ ರಥಸಪ್ತಮಿ ವಿಶೇಷ ಕಾಲ. ಅಂದು ಸೂರ್ಯನ ಕಿರಣಗಳಲ್ಲಿ 'ಡಿ' ಜೀವಸತ್ವ ಹೆಚ್ಚಿರುವುದರಿಂದ ವೈಜ್ಞಾನಿಕವಾಗೂ ಮಹತ್ವ ಪಡೆದುಕೊಂಡಿದೆ. ಸೂರ್ಯನ ಪಥ ಬದಲಾವಣೆಯಾಗುವುದರಿಂದ ಮಾಘಮಾಸದಿಂದ ಮುಂದಕ್ಕೆ ಚಳಿ ಗಣನೀಯವಾಗಿ ಕಡಿಮೆಯಾಗುತ್ತದೆ. ಪೃಥ್ವಿಯಿಂದ 149.6 ಮಿಲಿಯ ಕಿ.ಮೀ.ಗಳ ದೂರದಲ್ಲಿರುವ ಮಹಾನಕ್ಷ ತ್ರವೇ ಸೂರ್ಯ. ಸೂರ್ಯನಿಂದ ಹೊರ ಹೊಮ್ಮುವ ಬೆಳಕು ಒಂದು ಸೆಕೆಂಡಿಗೆ 299,792 ಕಿ.ಮೀ. ವೇಗದಲ್ಲಿ ಚಲಿಸುತ್ತದೆ. ಪೃಥ್ವಿಯನ್ನು ತಲುಪಲು 8 ನಿಮಿಷ 30 ಸೆಕೆಂಡುಗಳನ್ನು ತೆಗೆದುಕೊಳ್ಳುತ್ತದೆ. ಸೂರ್ಯನ ಚಲನ ಸಿದ್ಧಾಂತದಿಂದಲೇ ಅಯನ ಮತ್ತು ಋುತುಗಳು ಸಂಭವಿಸುತ್ತವೆ. ಸೂರ್ಯಾರಾಧನೆ ಏಕೆ? ಮಾಘಮಾಸ ಶುಕ್ಲ ಪಕ್ಷ ದ ಸಪ್ತಮಿ ತಿಥಿಯಂದು ಸೂರ್ಯನ ಜನ್ಮದಿನ. ಅಲ್ಲದೆ ಸಪ್ತಮಿ ತಿಥಿಯ ಅಧಿದೇವತೆಯು ಸೂರ್ಯ ಆಗಿರುವುದರಿಂದ, ಇಂದು ಸೂರ್ಯ ಆರಾಧನೆಯ 'ರಥ ಸಪ್ತಮಿ' ದಿನವೆಂದು ಆಚರಿಸಲಾಗುತ್ತದೆ. ನಿಯಮಬದ್ಧವಾದ ಉದಯ ಹಾಗೂ ಅಸ್ತಗಳ ಮೂಲಕ ನಮಗೆ ಕರ್ತವ್ಯ ಪ್ರಜ್ಞೆ, ಚೈತನ್ಯವನ್ನು ತುಂಬುವ ಸೂರ್ಯನ ಪೂಜೆಯೇ ಈ ದಿವಸದ ಮುಖ್ಯ ಆಚರಣೆಯಾಗಿದೆ. ಈ ದಿನದಲ್ಲಿ ನಡೆಯುವ ಕೆಲಸ ಕಾರ್ಯಗಳು, ಕೋರಿಕೆಗಳು ಫಲಪ್ರದವಾಗಿರುತ್ತವೆ. ಸೂರ್ಯನ ಪ್ರಕಾಶ ಹೆಚ್ಚುತ್ತಿರುವುದರಿಂದ ಚಳಿಗಾಲದ ಚಳಿ ಮುದುಡಿಕೊಂಡು ಮೈಯಲ್ಲಿ ನವಚೇತನ ತುಂಬಿದಂತೆ ಅನಿಸುತ್ತದೆ. ಅಂಗಾಂಗಗಳಲ್ಲಿ ಕಾರ್ಯಕ್ಷ ಮವಾಗುತ್ತಿವೆ. ಈ ಉಪಕಾರಕ್ಕಾಗಿ ಸೂರ್ಯನನ್ನು ಪೂಜಿಸುವುದು ರೂಢಿಯಲ್ಲಿದೆ. ಆಹಾರಕ್ಕಾಗಿ, ರೋಗ ನಿವಾರಣೆಗಾಗಿ ಸೂರ್ಯೋಪಾಸನೆ ಮಾಡಬೇಕೆಂದು ಸ್ಕಂದ, ವರಾಹ ಪುರಾಣಗಳಲ್ಲಿ ಹೇಳಿವೆ. - ಸೂರ್ಯಪೂಜೆಯಿಂದ ಅಕ್ಷಯ ಪಾತ್ರೆ ದ್ವಾಪರಾಯುಗದಲ್ಲಿ ಶ್ರೀಕೃಷ್ಣನು ಧರ್ಮರಾಜನಿಗೆ ರಥಸಪ್ತಮಿ ಬಗ್ಗೆ ಹೇಳಿದ ಕಥೆಯಿದೆ. ಯಶೋವರ್ಮನೆಂಬ ರಾಜನ ಮಗ ಹುಟ್ಟಿನಿಂದಲೇ ರೋಗಿಷ್ಟನಾಗಿದ್ದ. ಈ ಬಗ್ಗೆ ಜ್ಯೋತಿಷಿಗಳಿಂದ ವಿವರ ಪಡೆದು ಸಂಚಿತಕರ್ಮದಿಂದ ಬಂದಿರುವ ಈ ಕಾಯಿಲೆಗೆ ರಥಸಪ್ತಮಿ ವ್ರತ ಆಚರಿಸಲು ಹೇಳಿದ್ದರು. ಅದರಂತೆ ರಥಸಪ್ತಮಿಯ ದಿನ ಸೂರ್ಯಾರಾದನೆ ಮಾಡಲಾಗಿ ರಾಜಪುತ್ರನು ಆರೋಗ್ಯವಂತನೂ, ಪ್ರಭಾವಶಾಲಿಯೂ ಆದ. ಅಲ್ಲದೆ ಪಾಂಡವರು ವನವಾಸದ ಅವಧಿಧಿಯಲ್ಲಿ ಕೃಷ್ಣನ ಆದೇಶದಂತೆ ಸೂರ್ಯಾರಾಧನೆ ಮಾಡಿ ಸೂರ್ಯನಿಂದ ಅಕ್ಷ ಯ ಪಾತ್ರೆ ಪಡೆದಿದ್ದರು. -SANGRAHA

Wednesday, 6 February 2019

ವಿದೇಶಯೋಗ

ಜಾತಕದಲ್ಲಿ ವಿದೇಶಯೋಗ ತಿಳಿಯುವುದು ಹೇಗೆ? ವಿದೇಶಕ್ಕೆ ಹೋಗುವ ಆಸೆ ಯಾರಿಗೆ ಇಲ್ಲ. ಆದರೆ ಎಲ್ಲದಕ್ಕೂ ಯೋಗವಿರಬೇಕು ಎನ್ನುವುದು ಜ್ಯೋತಿಷ ಶಾಸ್ತ್ರದ ಖಚಿತ ಅಭಿಪ್ರಾಯ. ಹಾಗಾದರೆ ವಿದೇಶಯೋಗ ತಿಳಿವ ಬಗೆ ಹೇಗೆ? ಈಗಿನ ಪೀಳಿಗೆಯಲ್ಲಿ ಎಲ್ಲರಿಗೂ ತಮ್ಮ ಮಕ್ಕಳು ವಿದೇಶದಲ್ಲಿ ನೆಲೆಸಬೇಕು. ಅಲ್ಲಿಯೇ ಉದ್ಯೋಗ ಮಾಡಬೇಕು, ಕೈತುಂಬಾ ಸಂಪಾದಿಸಬೇಕು ಎನ್ನುವಾಸೆ. ಅವರಾಸೆ ಕೈಗೂಡುತ್ತದೆಯೇ ಅಥವಾ ಇಲ್ಲವೇ ಎಂಬುದು ಜಾತಕದಲ್ಲಿನ ಗ್ರಹಗಳ ಸಂಬಂಧದಿಂದ ತಿಳಿಯುತ್ತದೆ. ಜಾತಕ ಕುಂಡಲಿಯ ಮೂರನೆಯ ಸ್ಥಾನದಿಂದ ಚಿಕ್ಕ ಪ್ರಯಾಣಗಳನ್ನು 9 ಮತ್ತು 12 ನೇ ಸ್ಥಾನದಿಂದ ದೂರದ ಪ್ರಯಾಣಗಳನ್ನು ಗುರುತಿಸಬಹುದು. ತೃತೀಯ ಭಾವ, ತೃತಿಹಯೇಶ ಮತ್ತು ಮಂಗಳನ ಯುತಿ ಲಗ್ನೇಶನೊಡನೆ ಇರುವುದರಿಂದ ಅಥವಾ ಸಮ ಸಪ್ತಕ ಯೋಗವಿದ್ದರೆ ವಿದೇಶ ಪ್ರವಾಸ ಮಾಡುವ ಯೋಗವಿರುತ್ತದೆ. ತೃತೀಯೇಶ ತೃತೀಯ ಭಾವದಲ್ಲಿ ಅಥವಾ ಮಂಗಳ ಅಥವಾ ಚಂದ್ರನಿರಬೇಕು. ಇವರ ರಾಶಿಯಾದರೂ ತೃತೀಯ ಭಾವವಾಗಿರಬೇಕು. ಲಗ್ನದಲ್ಲಿ ತೃತೀಯೇಶ ಅಥವಾ ಮಂಗಳ ಅಥವಾ ಚಂದ್ರನಿರಬೇಕು. ತೃತೀಯ ಭಾವದಲ್ಲಿ ಮಂಗಳ ಸ್ಥಿತನಿರಬೇಕು. ನವಮೇಶ ನವಮ ಭಾವದಲ್ಲಿದ್ದು ಲಗ್ನೇಶ ಲಗ್ನದಲ್ಲೇ ಇದ್ದರೆ ವಿದೇಶ ಯಾತ್ರೆ ಯೋಗ ಉಂಟಾಗುತ್ತದೆ. ಲಗ್ನೇಶ ನವಮದಲ್ಲೂ ನವಮೇಶ ಲಗ್ನದಲ್ಲಿದ್ದರೂ ವಿದೇಶ ಯೋಗ ನಿಶ್ಚಿತ. ನವಮ-ದ್ವಾದಶ ಭಾವಗಳು ಚರರಾಶಿಯಾಗಿ ನವಮೇಶ ದ್ವಾದಶಾಧಿಪತಿ ಚರರಾಶಿಯಲ್ಲಿ ಸ್ಥಿತರಿದ್ದಾಗಲೂ ಯೋಗವಿರುತ್ತದೆ. ಹಾಗೆಯೇ ಲಗ್ನೇಶ ಮತ್ತು ಚತುರ್ಥೇಶ ಇಬ್ಬರೂ ದ್ವಾದಶ ಭಾವದಲ್ಲಿದ್ದರೆ, ತೃತೀಯ ಅಥವಾ ನವಮ ಭಾವದಲ್ಲಿ ರಾಹು ಸ್ಥಿತನಾಗಿದ್ದರೆ, ಲಗ್ನೇಶನ ಸ್ಥಿತಿಯಿಂದ ದ್ವಾದಶ ಭಾವದ ಸ್ವಾಮಿ ಲಗ್ನಕ್ಕೆ ಕೇಂದ್ರ ತ್ರಿಕೋಣದಲ್ಲಿ ಸ್ಥಿತನಾಗಿದ್ದರೆ, ಲಗ್ನಾಧಿಪತಿ, ಭಾಗ್ಯಾಧಿಪತಿ, ವ್ಯಯಾಧಿಪತಿ ಲಗ್ನಕ್ಕೆ ಚರರಾಶಿಯಲ್ಲಿ ಸ್ಥಿತನಾಗಿದ್ದರೆ, ಶುಕ್ರನು ಸ್ವಕ್ಷೇತ್ರ ಉಚ್ಛಕ್ಷೇತ್ರದಲ್ಲಿದ್ದು ಅದು ಕೇಂದ್ರ ಅಥವಾ ತ್ರಿಕೋಣವಾಗಿ ಚರರಾಶಿಯಾಗಿದ್ದರೂ ವಿದೇಶಯೋಗ ಪ್ರಾಪ್ತವಾಗುತ್ತದೆ. ಜಾತಕದಲ್ಲಿ ವಿದೇಶ ಯೋಗ ಇದೆಯೋ ಇಲ್ಲವೋ? ವಿದೇಶಕ್ಕೆ ಹೋಗಬೇಕು ಅಂದ್ರೆ ಜಾತಕ ಏಕೆ ನೋಡಬೇಕು. ಸುಮ್ಮನೆ ಹೋಗಿ ಯಾವುದಾದ್ರೂ ಟ್ರಾವಲ್‌ ಕಂಪನೀಲಿ ಟಿಕೆಟ್‌ ಬುಕ್‌ ಮಾಡಿದ್ರೆ ಆಯ್ತು. ಆರಾಮವಾಗಿ ಯೂರೋಪ್‌, ಏಷ್ಯಾ, ಸಿಂಗಪೂರ್‌ ಪ್ರವಾಸ ಮಾಡ್ಕೊಂಡು ಬರಬಹುದು... ಬದಲಾದ ಕಾಲಮಾನದಲ್ಲಿ ವಿದೇಶ ಪ್ರವಾಸ ಪಕ್ಕದಮನೆಗೆ ಹೋದಷ್ಟೇ ಸುಲಭವಾಗಿದೆ. ಪ್ರವಾಸ, ಮೋಜಿಗೆ, ಕಾರ್ಪೊರೇಟ್‌ ಮೀಟಿಂಗ್‌ ಅಥವಾ ಗೆಟ್‌ ಟುಗೆದರ್‌ ಅಂತ ವಿದೇಶ ಪ್ರವಾಸ ಮಾಡೋದು ಒಂದು ಕಡೆಯಾದರೆ ಹೆಚ್ಚಿನ ವ್ಯಾಸಂಗದ ನಿರೀಕ್ಷೆ ಇಟ್ಕೊಂಡಿರೋರು, ಕೈತುಂಬಾ ಸಂಪಾದಿಸಬೇಕು ಅಂತ ಆಸೆ ಇಟ್ಕೊಂಡಿರೋರು, ಈ ಜಂಜಾಟ ಬೇಡಪ್ಪಾ ಗ್ರೀನ್‌ಕಾರ್ಡ್‌ ಸಿಕ್ಕು ಅಲ್ಲೇ ಸೆಟ್ಲ್‌ ಆದ್ರೆ ಸಾಕು ಅಂತ ಬಯಸೋರು ಮತ್ತೊಂದು ಕಡೆ. ಆಸೆ, ನಿರೀಕ್ಷೆ, ಕನಸುಗಳಿಗೇನು ಕಡಿವಾಣವಿಲ್ಲ. ಹಾಗಂತ ಕನಸು ಕಾಣೋರೆಲ್ಲಾ ವಿದೇಶಕ್ಕೆ ಹೋಗಬೇಕು ಅಂದ್ಕೊಂಡ್ರು ಆಗೋಲ್ಲ. ಕೆಲವೊಮ್ಮೆ ಕೈಯಲ್ಲಿ ದುಡ್ಡಿದ್ದರೂ ತಿನ್ನೋಕೆ ಆಹಾರವಿಲ್ಲ ಅಂತಾರಲ್ಲ ಹಾಗೆ... ಹಾಗಾದರೆ ವಿದೇಶಯೋಗ ಇದೆಯೋ, ಇಲ್ಲವೋ ಅನ್ನೋ ವಿಷಯದಲ್ಲಿ ಜಾತಕ ಹೇಳೋದೇನು? ಜಾತಕದಲ್ಲಿ ತೃತೀಯ ಭಾವ ಅಂದರೆ ಮೂರನೆಯ ಸ್ಥಾನ ಸಮೀಪ ಸ್ಥಳದ ಪ್ರಯಾಣವನ್ನು ಸೂಚಿಸಿದರೆ, ಹನ್ನೆರಡನೆಯ ಮನೆ ದೂರದ ಅರ್ಥಾತ್‌ ವಿದೇಶ ಪ್ರಯಾಣವನ್ನು ಸಂಕೇತಿಸುತ್ತದೆ. ತೃತೀಯ ಭಾವ, ತೃತೀಯೇಶ ಮತ್ತು ಮಂಗಳನ ಯುತಿ ಲಗ್ನದ ಜೊತೆ ಇದ್ದಾಗ ವಿದೇಶ ಯೋಗವಿದೆ ಎಂದು ಹೇಳಬಹುದು. ತೃತೀಯೇಶ ತೃತೀಯ ಭಾವದಲ್ಲಿ ಮಂಗಳ ಅಥವಾ ಚಂದ್ರನಿದ್ದರೂ ಯೋಗವಿರುತ್ತದೆ. ನವಮೇಶ ನವಮ ಭಾವದಲ್ಲಿದ್ದು ಲಗ್ನೇಶ ಲಗ್ನದಲ್ಲೇ ಇದ್ದರೂ ವಿದೇಶ ಯೋಗ ಉಂಟಾಗುತ್ತದೆ. ಲಗ್ನೇಶ ನವಮದಲ್ಲೂ ನವಮೇಶ ಲಗ್ನದಲ್ಲಿದ್ದರೂ, ನವಮ - ದ್ವಾದಶ ಭಾವಗಳು ಚರ ರಾಶಿಯಾಗಿ ನವಮೇಶ ದ್ವಾದಶಾಧಿಪತಿ ಚರ ರಾಶಿಯಲ್ಲಿ ಸ್ಥಿತರಿದ್ದರೂ, ಚಂದ್ರ ಚರ ರಾಶಿಯಲ್ಲಿದ್ದು ಮತ್ತು ನವಮ - ದ್ವಾದಶ ಭಾವಗಳೊಡನೆ ಸಂಬಂಧ ಹೊಂದಿದ್ದರೂ ವಿದೇಶ ಯೋಗ ಉಂಟಾಗುತ್ತದೆ. ಲಗ್ನ ಚರರಾಶಿಯಾಗಿ ಲಗ್ನೇಶ ಕೂಡ ಚರರಾಶಿಯಲ್ಲಿ ಸ್ಥಿತನಾಗಿ ಮತ್ತು ಯಾವುದಾದರೂ ಒಂದು ಗ್ರಹ ಚರ ರಾಶಿಯಲ್ಲಿ ಸ್ಥಿತವಾಗಿ ಗ್ರಹದ ದೃಷ್ಟಿ ಲಗ್ನೇಶನ ಮೇಲಿದ್ದರೂ, ಲಗ್ನೇಶ ಅಷ್ಟಮ ಭಾವದಲ್ಲಿದ್ದರೆ ಮತ್ತು ಚತುರ್ಥ ನವಮ ಅಥವಾ ದ್ವಾದಶ ಭಾವದಲ್ಲಿ ರಾಹು ಅಥವಾ ಕೇತುವಿದ್ದರೂ ಜಾತಕನಿಗೆ ವಿದೇಶ ಯೋಗವಿರುತ್ತದೆ. ಜಾತಕನ ಉಚ್ಛ ರಾಶಿಯಲ್ಲಿ ಸ್ಥಿತ ದ್ವಾದಶೇಷನು ಅಷ್ಟಮ ಭಾವದಲ್ಲಿ ಚರರಾಶಿಯಲ್ಲಿ ಸ್ಥಿತನಿದ್ದರೆ, ಲಗ್ನೇಶ ಚತುರ್ಥೇಶ ಇಬ್ಬರೂ ದ್ವಾದಶ ಭಾವದಲ್ಲಿದ್ದರೆ, ತೃತೀಯ ಅಥವಾ ನವಮ ಭಾವದಲ್ಲಿ ರಾಹು ಸ್ಥಿತನಾಗಿದ್ದರೆ, ಲಗ್ನೇಶನ ಸ್ಥಿತನಿಂದ ದ್ವಾದಶ ಭಾವದ ಸ್ವಾಮಿ ಲಗ್ನಕ್ಕೆ ಕೇಂದ್ರ ತ್ರಿಕೋಣದಲ್ಲಿ ಸ್ಥಿತನಾಗಿದ್ದರೂ ಯೋಗವಿರುತ್ತದೆ. ಲಗ್ನಾಧಿಪತಿ, ಭಾಗ್ಯಾಧಿಪತಿ, ವ್ಯಯಾಧಿಪತಿ ಲಗ್ನಕ್ಕೆ ಚರರಾಶಿಯಲ್ಲಿ ಸ್ಥಿತನಾಗಿದ್ದರೆ, ಶುಕ್ರನು ಸ್ವಕ್ಷೇತ್ರ, ಉಚ್ಛಕ್ಷೇತ್ರದಲ್ಲಿದ್ದು ಅದು ಕೇಂದ್ರ ಅಥವಾ ತ್ರಿಕೋನವಾಗಿ ಚರರಾಶಿಯಾಗಿದ್ದರೂ ವಿದೇಶ ಯೋಗವಿರುತ್ತದೆ -ಸಂಗ್ರಹ (ಕೃಪೆ ದಿನ ಪತ್ರಿಕೆ)

ಯೋಗ

ಯಾವ ಲಗ್ನದವರಿಗೆ ಯಾವಾಗ ರಾಜಯೋಗ? ಜಾತಕದಲ್ಲಿನ ಕೆಲವು ಗ್ರಹಗಳ ಸಂಯೋಗ ಮತ್ತು ಸ್ಥಿತಿಗಳ ಆಧಾರದಲ್ಲಿ ವ್ಯಕ್ತಿಯ ರಾಜಯೋಗಗಳನ್ನು ಕಂಡುಹಿಡಿಯಬಹುದು. ರಾಜಯೋಗ ಎಂದರೆ ಈಗಿನ ಪರಿಸ್ಥಿತಿಯಲ್ಲಿ ರಾಜ್ಯಸರ್ಕಾರದ ಐ.ಎ.ಎಸ್‌., ಐ.ಪಿ.ಎಸ್‌. ಸರಿಸಮಾನರಾದ ಉನ್ನತ ಅಧಿಕಾರಿಗಳು, ನಗರಸಭಾ ಸದಸ್ಯರು, ವಿಧಾನಸಭಾ ಸದಸ್ಯರು, ಲೋಕಸಭಾ ಸದಸ್ಯರು, ಮಂತ್ರಿಗಳು, ಮುಖ್ಯಮಂತ್ರಿಗಳು ಹಾಗೂ ಪ್ರಧಾನಮಂತ್ರಿಗಳನ್ನು ರಾಜ ಅಥವಾ ರಾಜಸಮಾನರೆಂದು ಗುರುತಿಸಬಹುದು. ಮೇಷಲಗ್ನ : ಗುರು, ಶನಿ, ಕಟಕ, ತುಲಾರಾಶಿಯಲ್ಲಿದ್ದು ಯಾವುದೇ ಪಾಪಗ್ರಹಗಳ ಸಂಬಂಧವಿಲ್ಲದೆ ಇದ್ದು ಅವುಗಳ ದೆಶೆಯೇ ನಡೆಯುತ್ತಿದ್ದರೆ ರಾಜಯೋಗವಿರುತ್ತದೆ. ವೃಷಭ ಲಗ್ನ : ಲಗ್ನದಲ್ಲಿ ಕುಜ, ಸಿಂಹರಾಶಿಯಲ್ಲಿ ಚಂದ್ರ, ಕುಂಭದಲ್ಲಿ ಗುರು, ಮಕರದಲ್ಲಿ ರವಿ, ಮೀನದಲ್ಲಿ ಶನಿ ಇದ್ದರೆ ಆ ಜಾತಕನು ರಾಜಯೋಗ ಪಡೆಯುತ್ತಾನೆ. ಮಿಥುನ ಲಗ್ನ : ಬುಧ, ಶುಕ್ರ 1, 4, 5, 7, 9, 10 ಸ್ಥಾನದಲ್ಲಿದ್ದರೆ ರಾಜಯೋಗ ಉಂಟಾಗುತ್ತದೆ. ಬುಧ, ಶುಕ್ರ, ಶನಿ, ಚಂದ್ರ ಕಲೆತಿದ್ದರೆ ಆದು ಕೇಂದ್ರ ತ್ರಿಕೋನವಾದರೆ ರಾಜಯೋಗ ಲಭಿಸುತ್ತದೆ. ಕಟಕ ಲಗ್ನ : ಶುಕ್ರ, ಶನಿ, 4, 5, 7, 9, 10 ಸ್ಥಾನದಲ್ಲಿದ್ದರೆ ಕಲೆತಿದ್ದರೆ ರಾಜಯೋಗ ಪ್ರಾಪ್ತಿಯಾಗುತ್ತದೆ. ದ್ವಿತೀಯದಲ್ಲಿ ಚಂದ್ರ, ಕುಜ, ಗುರು, ಪಂಚಮದಲ್ಲಿ ರವಿ, ಶುಕ್ರರಿದ್ದರೆ ರಾಜಯೋಗ ಬರುತ್ತದೆ. ಸಿಂಹ ಲಗ್ನ : ಲಗ್ನದಲ್ಲಿ ಕುಜ, ಚತುರ್ಥದಲ್ಲಿ ಶನಿ, ಪಂಚಮ ರಾಹು, ಭಾಗ್ಯದಲ್ಲಿ ಚಂದ್ರ, ಶುಕ್ರ, ರಾಜ್ಯದಲ್ಲಿ ರವಿ, ಬುಧರಿದ್ದರೆ ಉನ್ನತ ರಾಜಯೋಗ ಉಂಟಾಗುತ್ತದೆ. ಕನ್ಯಾ ಲಗ್ನ : ದ್ವಿತೀಯ ಸ್ಥಾನದಲ್ಲಿ ರವಿ, ಶುಕ್ರರ ಸಂಬಂಧವಿದ್ದರೆ ರಾಜಯೋಗ ಬರುತ್ತದೆ. ಮೇಷದಲ್ಲಿ ರವಿ, ಸಿಂಹದಲ್ಲಿ ಕುಜನಿದ್ದರೆ ರಾಜಯೋಗ ಲಭಿಸುತ್ತದೆ. ತುಲಾ ಲಗ್ನ : ಲಗ್ನದಲ್ಲಿ ಚಂದ್ರ, ಶುಕ್ರ, ದ್ವಿತೀಯದಲ್ಲಿ ರವಿ, ಬುಧ, ತೃತೀಯದಲ್ಲಿ ಗುರು, ಪಂಚಮದಲ್ಲಿ ಕುಜನಿದ್ದರೆ ರಾಜಯೋಗ ಪ್ರಾಪ್ತಿಯಾಗುತ್ತದೆ. ವೃಶ್ಚಿಕ ಲಗ್ನ : ಸಪ್ತಮ ಸ್ಥಾನದಲ್ಲಿ ರವಿ, ಬುಧ, ಶುಕ್ರ ಕಲೆತರೆ ರಾಜಯೋಗ ಬರುತ್ತದೆ. ಜನ್ಮದಲ್ಲಿ ಗುರು ಇದ್ದು ಗುರುದೆಸೆ ಪ್ರಾಪ್ತಿಯಾದರೆ ರಾಜಯೋಗ ಉಂಟಾಗುತ್ತದೆ. ಧನು ಲಗ್ನ: ಗುರು ಒಬ್ಬನೇ ಷಷ್ಟಮ ಸ್ಥಾನದಲ್ಲಿ ಅಥವಾ 8, 12ರ ಸ್ಥಾನದಲ್ಲಿದ್ದರೆ ರಾಜಯೋಗ ಬರುತ್ತದೆ. ಚಂದ್ರನು ರಾಹು ಅಥವಾ ಕೇತುವಿನೊಂದಿಗೆ ಮೇಷ, ಸಿಂಹ ರಾಶಿಯಲ್ಲಿದ್ದರೆ ರಾಜಯೋಗ ಪ್ರಾಪ್ತಿಯಾಗುತ್ತದೆ. ಮಕರ ಲಗ್ನ : ಲಗ್ನದಲ್ಲಿ ಬುಧ, ಶುಕ್ರ, ಚತುರ್ಥದಲ್ಲಿ ಚಂದ್ರ, ಭಾಗ್ಯದಲ್ಲಿ ಗುರು ಇದ್ದರೆ ಒಳ್ಳೆಯ ರಾಜಯೋಗ ಬರುತ್ತದೆ. ಕುಂಭ ಲಗ್ನ : ಲಗ್ನದಲ್ಲಿ ರವಿ, ಶುಕ್ರ, ದಶಮದಲ್ಲಿ ರಾಹು ಇದ್ದರೆ ಶುಕ್ರ ರಾಹು ಕಲೆತು ಲಗ್ನ ಅಥವಾ ಅಷ್ಟಮ ಸ್ಥಾನದಲ್ಲಿದ್ದರೆ ರಾಹು ದೆಸೆಯಲ್ಲಿ ರಾಜಯೋಗ ಪ್ರಾಪ್ತಿಯಾಗುತ್ತದೆ. ಮೀನ ಲಗ್ನ : ಚಂದ್ರ ಗುರು ಕೇಂದ್ರ ಕೋನದಲ್ಲಿ ಕಲೆತಿದ್ದರೂ ಆ ದಿಸೆಯಲ್ಲಿ ರಾಜಯೋಗವಿರುತ್ತದೆ. ಮೀನದಲ್ಲಿ ಚಂದ್ರನಿದ್ದು ಗುರು ದೃಷ್ಟಿಗೆ ಒಳಗಾದರೆ ರಾಜಯೋಗ ಬರುತ್ತದೆ. ಜೀವನದಲ್ಲಿ ನವಗ್ರಹ ಪ್ರಭಾವ ದೈನಂದಿನ ಬದುಕಿನ ಆಗುಹೋಗುಗಳಿಗೂ ನವಗ್ರಹ ಪ್ರಭಾವಕ್ಕೂ ಸಂಬಂಧವಿದೆಯೇ? ದಿನಚರಿಯನ್ನು ಅರ್ಥಾತ್‌ ಜೀವನಶೈಲಿಯನ್ನು ಸರಿಪಡಿಸಿಕೊಂಡರೆ ನವಗ್ರಹಗಳ ಪ್ರಭಾವ ಶಮನವಾಗುತ್ತದೆಯೇ? ಇಂತಹ ಪ್ರಶ್ನೆಗಳಿಗೆ ಜ್ಯೋತಿಷ್ಯಶಾಸ್ತ್ರ ಹೌದೆನ್ನುತ್ತದೆ. ಆರೋಗ್ಯಕರ ಜೀವನಶೈಲಿಯನ್ನು ರೂಢಿಸಿಕೊಂಡಾಗ ದೈವಕೃಪೆ ತಾನಾಗೇ ಲಭಿಸುತ್ತದೆ. ಅದು ಹೇಗೆ ಎಂದು ನೋಡೋಣ. ರವಿಯ ಅನುಗ್ರಹ : ಬೆಳಗಿನ ಜಾವ ಬೇಗನೆದ್ದು ಮನೆಯನ್ನು ಶುಚಿರ್ಭೂತವನ್ನಾಗಿ ಮಾಡಿ ಸೂರ್ಯನಿಗೆ ನಮಸ್ಕಾರ ಮಾಡುವುದರಿಂದ ಸಾಕಷ್ಟು ಉತ್ತಮ ಪರಿಣಾಮಗಳು ಉಂಟಾಗುತ್ತದೆ. ಸೂರ್ಯನ ಕಿರಣದಲ್ಲಿರುವ 'ಡಿ' ಮತ್ತು 'ಇ' ಪ್ರೋಟೀನ್‌ನಿಂದಾಗಿ ಚರ್ಮವು ಕಾಂತಿಯುತವಾಗುತ್ತದೆ. ದಿನವಿಡೀ ಮನಸ್ಸೂ ಉಲ್ಲಸಿತವಾಗಿರುತ್ತದೆ. ಚಂದ್ರನ ಅನುಗ್ರಹ : ಚಂದ್ರನೆಂದರೆ ನೀರು. ಮನೆಯಲ್ಲಿ ಅಶೌಚ ಇರಬಾರದು. ಎಂಜಲು, ಮುಸುರೆ ಪಾತ್ರೆಗಳಿರಬಾರದು. ತಿಂದ ತಟ್ಟೆಗಳನ್ನು ಕೂಡಲೇ ತೊಳದಿಡುವ ಅಭ್ಯಾಸವನ್ನು ರೂಢಿಸಿಕೊಳ್ಳಬೇಕು. ಮನೆಯ ವಾತಾವರಣ ಶುಭ್ರವಾಗಿದ್ದರೆ ಮನಸ್ಸೂ ಶುಭ್ರವಾಗಿರುತ್ತದೆ. ಕುಜನ ಅನುಗ್ರಹ : ರಕ್ತಕ್ಕೆ ಅಧಿಪತಿ ಕುಜ. ಅನ್ನಾದಿ ಆಹಾರಗಳ ಸೇವನೆಯಿಂದ ರಕ್ತ ವೃದ್ಧಿಯಾಗುತ್ತದೆ. ಆ ಕಾರಣ 'ಅನ್ನಂ ಬ್ರಹ್ಮ' ಎಂಬ ವೇದವಾಕ್ಯವನ್ನು ಗೌರವಿಸಬೇಕು. ಆಹಾರ ಪದಾರ್ಥವನ್ನು ವೇಸ್ಟ್‌ ಮಾಡದಂತೆ ಜಾಗ್ರತೆ ವಹಿಸಬೇಕು. ನಿಯಮಿತವಾಗಿ ರಕ್ತ ದಾನವನ್ನು ಮಾಡಬೇಕು. ಅಶಕ್ತರಿಗೆ ಸಹಾಯ ಮಾಡಬೇಕು. ಬುಧನ ಅನುಗ್ರಹ : ಬುಧ ಬುದ್ದಿಕಾರಕ. ಬುದ್ಧಿ ಹೀನನಾದರೆ ಮಾಡುವ ಕೆಲಸದಲ್ಲೂ ತೊಂದರೆ ಉಂಟಾಗುತ್ತದೆ. ಹಾಗಾಗಿ ಆಡುವ ಮಾತಿನಲ್ಲಿ, ಮಾಡುವ ಕೆಲಸದಲ್ಲಿ ವಿವೇಕವಿರಬೇಕು. ಗುರುವಿನ ಅನುಗ್ರಹ : ಗುರು ಸಕಲ ದೋಷ ನಿವಾರಕ. ಮಾರ್ಗಸೂಚಕ. ನಮ್ಮಲ್ಲೊಂದು ಲೋಕೋಕ್ತಿಯಿದೆ. 'ಕೋಶ ಓದಬೇಕು ಲೋಕ ಸುತ್ತಬೇಕು' ಅಂತ. ಅರಿವೇ ಗುರು ಎನ್ನುವಂತೆ ಸುತ್ತಣ ಪರಿಸರವನ್ನು ನೋಡಿ ಕಲಿಯಬೇಕು. ಗಿಡ, ಮರಗಳಿಗೆ ನೀರೆಯುವ ಮೂಲಕ ಅವುಗಳನ್ನು ಪೋಷಿಸಬೇಕು. ಶುಕ್ರನ ಅನುಗ್ರಹ : ಶುಕ್ರನೆಂದರೆ ವೀರ್ಯ. ಪೌಷ್ಟಿಕದಾಯಕ ಆಹಾರ ಸೇವನೆಗೆ ಅಗತ್ಯವಾದ ಹಣ್ಣು, ತರಕಾರಿಗಳನ್ನು ಮನೆಗೆ ತರಬೇಕು. ಕುಟುಂಬ ಸೌಖ್ಯಕ್ಕೆ ಅಗತ್ಯವಾದ ಕಾರ್ಯಗಳನ್ನು ಮಾಡಬೇಕು. ಶನಿಯ ಅನುಗ್ರಹ : ಶನಿ ಕರ್ಮಾಧಿಪತಿ. ಕರ್ಮಸೂಚಕವಾದ ಪಾದರಕ್ಷೆಗಳನ್ನು ಮನೆಯಾಚೆಯೇ ಬಿಡಬೇಕು. ಮನೆಯನ್ನು ಶುಭ್ರವಾಗಿಟ್ಟುಕೊಳ್ಳಬೇಕು. ರಾಹುವಿನ ಅನುಗ್ರಹ : ಹೊರಗಿನ ಪಾಪ ಮನೆಯೊಳಗೆ ಎನ್ನುವ ಮಾತಿನಂತೆ ಹೊರಗಿನಿಂದ ಮನೆಯೊಳಗೆ ಪ್ರವೇಶಿಸಿದ ಕೂಡಲೇ ಕೈಕಾಲುಗಳನ್ನು ತೊಳೆದುಕೊಳ್ಳಿ. ಮೂತ್ರ ಅಥವಾ ಮಲ ವಿಸರ್ಜನೆಯ ನಂತರ ಶುದ್ಧಾಚಮನ ಮಾಡಿ. ಕೈಕಾಲುಗಳನ್ನು ತೊಳೆಯಿರಿ. ಕೇತುವಿನ ಅನುಗ್ರಹ : ಅತಿಥಿ ದೇವೋ ಭವ ಎನ್ನುವುದು ಶಾಸ್ತ್ರೊಕ್ತಿ. ಮನೆಗೆ ಬಂದ ಅತಿಥಿಗಳನ್ನು ಗೌರವಿಸುವುದರಿಂದ ಉತ್ತಮ ಫಲಗಳನ್ನು ಕಾಣಬಹುದು. ಹಂಸ ಯೋಗ ಮತ್ತು ಭದ್ರಕ ಯೋಗದಲ್ಲಿ ಜನಿಸಿದವರ ವ್ಯಕ್ತಿತ್ವ ಹೇಗಿರುತ್ತದೆ? ಹಂಸ ಯೋಗ ಗುರುವು ತನ್ನ ಉಚ್ಛ ಕ್ಷೇತ್ರವಾದ ಕರ್ಕಾಟಕದಲ್ಲಾಗಲೀ, ಸ್ವ ಕ್ಷೇತ್ರಗಳಾದ ಧನು, ಮೀನದಲ್ಲಾಗಲೀ ಇದ್ದು ಈ ಸ್ಥಾನಗಳು ಲಗ್ನಕ್ಕೆ ಕೇಂದ್ರ ಸ್ಥಾನಗಳಾದರೆ 'ಹಂಸಕ' ವೆಂಬ ಯೋಗ ಉಂಟಾಗುತ್ತದೆ. ಈ ಹಂಸಕ ಅಥವಾ ಹಂಸ ಯೋಗದಲ್ಲಿ ಜನಿಸಿದವರು ಸ್ವಲ್ಪ ಕೆಂಪಾದ ಶರೀರ ಕಾಂತಿಯುಳ್ಳವರೂ, ಉನ್ನತವಾದ ಮೂಗು ಸವಿೂಚೀನವಾದ ಮುಖ, ಪಾದ, ಹಸ್ತಗಳು ಗಂಭೀರವಾದ ಧ್ವನಿ, ಕಫ ಪ್ರಕೃತಿ ಕಮಲದೋಪಾದಿಯಲ್ಲಿರುವ ಕಣ್ಣುಗಳು ಉಳ್ಳವರೂ ಆಗಿರುತ್ತಾರೆ. ಇವರಿಗೆ ನೀರಿನಲ್ಲಿ ಪ್ರೀತಿಯೂ, ಸ್ತ್ರೀ ವಿಷಯದಲ್ಲಿ ಆಸಕ್ತಿಯೂ, ಇವರು ಬಹುಕಾಲ ಯಶಸ್ವಿಯಾಗಿ ತಮ್ಮ ರಾಜ್ಯಭಾರ ಅಧಿಕಾರವನ್ನು ಮಾಡಿ ಸುಮಾರು ತೊಂಬತ್ತೈದು ವರ್ಷ ಆಯುಷ್ಯ ಇರುತ್ತಾರೆ. ಭದ್ರಕ ಯೋಗ - ಬುಧ ತನ್ನ ಸ್ವ ಕ್ಷೇತ್ರಗಳಾದ ಮಿಥುನ, ಕನ್ಯಾಗಳಲ್ಲಿದ್ದು ಈ ಸ್ಥಾನಗಳು ಲಗ್ನಕ್ಕೆ ಕೇಂದ್ರಗಳಾದರೆ ಭದ್ರಕವೆಂಬ ಯೋಗ ಉಂಟಾಗುತ್ತದೆ. ಈ ಭದ್ರಕ ಯೋಗದಲ್ಲಿ ಹುಟ್ಟಿದವರು, ಸಿಂಹ ಸಧೃಶವಾದ ಪರಾಕ್ರಮವುಳ್ಳವರೂ ವಿಶಾಲವಾದ ಎದೆ, ಬಾಯಿಗಳುಳ್ಳವರೂ, ಸಮಾಕೃತಿಯುಳ್ಳವರೂ ಆಗಿರುತ್ತಾರೆ. ಇವರು ಸುರೂಪಿಗಳೂ, ಬುದ್ಧಿವಂತರೂ ಶಾಸ್ತ್ರಾರ್ಥ ತಿಳಿದವರೂ, ಧರ್ಮದಲ್ಲಿ ಆಸಕ್ತಿಯುಳ್ಳವರೂ, ಧೈರ್ಯಶಾಲಿಗಳೂ, ಭೋಗಶಾಲಿಗಳೂ, ಮಾನವೇ ಮುಖ್ಯವಾಗಿಳ್ಳುವರು ಆಗಿರುತ್ತಾರೆ. ಇವರು ತಾವು ಮಾಡುವ ಕಾರ‍್ಯದಲ್ಲಿ ಸ್ವತಂತ್ರರೂ, ಆ ಕಾರ್ಯ ಮಾಡಿದವರೂ ಸ್ವಜನವಾದರೂ ಅವರನ್ನು ಕ್ಷ ಮಿಸದೆ ಇರತಕ್ಕವರೂ, ಕೇಳಿದವರಿಗೆ ಧನ ಸಹಾಯ ಮಾಡುತ್ತಾರೆ. ಪತ್ನಿ ಪುತ್ರರುಗಳಿಂದ ಅತಿಶಯ ಸೌಖ್ಯವನ್ನು ಅನುಭವಿಸಿ ಸುಮಾರು ಎಂಬತ್ತು ವರ್ಷ ಕಾಲ ಆಯಸ್ಸುಳ್ಳವರೂ ಆಗಿರುತ್ತಾರೆ. ರುಚಿಕಾ,ಭದ್ರ,ಮಾಲವೀಯ ಯೋಗಿಗಳು:ನಿಮಗೆ ಯಾವ ರೀತಿಯ ಯೋಗವಿದೆ? ಕಳೆದ ವಾರದಲ್ಲಿ ಹಂಸ ಯೋಗ, ಶಶಯೋಗದ ಬಗ್ಗೆ ತಿಳಿದುಕೊಂಡೆವು. ಈವಾರ ರುಚಿಕಾ ಯೋಗ, ಭದ್ರಯೋಗ ಹಾಗೂ ಮಾಲವೀಯ ಯೋಗದ ಬಗ್ಗೆ ತಿಳಿಯೋಣ. ಕುಜನು ಅಧಿಪತಿಯಾಗಿರುವ ಯೋಗವೇ ರುಚಿಕಾ ಯೋಗ. ಮೇಷ ಲಗ್ನವಾಗಿ ಕುಜನು ಲಗ್ನದಲ್ಲಿರಬೇಕು. ವೃಶ್ಚಿಕ ಲಗ್ನವಾದಾರೂ ಕುಜನು ಲಗ್ನದಲ್ಲಿರಬೇಕು. ಮಕರ ಲಗ್ನವಾಗಿ ಕುಜನು ಲಗ್ನದಲ್ಲಿರಬೇಕು. ಇದು ರುಚಿಕಾಯೋಗದ ನಿಯಮ. ಕುಜನಿಗೆ ಮೇಷ-ವೃಶ್ಚಿಕ ಸ್ವಂತ ಮನೆಯಾದರೆ ಮಕರ ರಾಶಿ ಉತ್ಛಸ್ಥಾನವಾಗುತ್ತದೆ. ಕುಜ ಭಾತೃಕಾರಕ. ಕುಜನ ಬಣ್ಣ: ಕೆಂಪು. ಲೋಹ: ತಾಮ್ರ. ರತ್ನ: ಹವಳ. ಸಂಖ್ಯೆ: 9. ದೇವತೆ: ಸುಬ್ರಹ್ಮಣ್ಯ. ಧಾನ್ಯ: ತೊಗರಿ. ವಾರ: ಮಂಗಳವಾರ. ಸಾಮಾನ್ಯವಾಗಿ ರುಚಿಕಾ ಯೋಗದಲ್ಲಿ ಹುಟ್ಟಿದವರು ಎತ್ತರವಾಗಿರುತ್ತಾರೆ. ಸದೃಢ ಶರೀರಿಯಾಗಿರುತ್ತಾರೆ. ಭಾವುಕತೆ ಇವರಲ್ಲಿ ಕಡಿಮೆ. ದೃಢಮನಸ್ಕರಾಗಿರುತ್ತಾರೆ. ಕೆಲವೊಮ್ಮೆ ಕ್ರೂರಿಗಳಾಗುವ ಸಾಧ್ಯತೆಗಳೂ ಇವೆ. ಏಕ್‌ ಮಾರ್‌ ದೋ ತುಕುಡಾ ಎಂಬಂತೆ ಇರುತ್ತಾರೆ. ಮಾತೂ ಸಹ ಕತ್ತಿಯಂತೆ ಹರಿತ. ಹೃದಯ ಬೆಟ್ಟದ ಹಾಗೆ ಅಲುಗಾಡುವುದಿಲ್ಲ. ಚಿಕ್ಕಪುಟ್ಟ ವಿಷಯಕ್ಕೆ ಮನಸ್ಸು ಕಸಿವಿಸಿ ಮಾಡಿಕೊಳ್ಳುವುದಿಲ್ಲ. ಒಂದು ದೊಡ್ಡ ಸಂಸ್ಥೆಯನ್ನು ಹುಟ್ಟು ಹಾಕಿ ಮುನ್ನಡೆಸುವ ಛಾತಿ ಇರುತ್ತದೆ. ರಾಜಕೀಯವಾಗಿ ಉನ್ನತ ಸ್ಥಾನದಲ್ಲಿ ಇರುತ್ತಾರೆ. ಯಾವುದೇ ದೊಡ್ಡ ಸಂಸ್ಥೆಯ ಉನ್ನತಾಧಿಕಾರಿಯಾಗಬಹುದು. ಏಕೆಂದರೆ ದೊಡ್ಡ ಸ್ಥಾನದಲ್ಲಿ ಇರುವವರು ಭಾವುಕತೆಗೆ ಪಕ್ಕಾಗದೆ ಕೆಲವು ಬಾರಿ ದೃಢ ನಿರ್ಧಾರಗಳನ್ನು ಮಾಡಬೇಕಾಗುತ್ತದೆ. ಕೆಲವು ನಿರ್ಣಯಗಳನ್ನು ತೆಗೆದುಕೊಳ್ಳುವಾಗ ಅಣ್ಣ, ತಮ್ಮ ಚಿಕ್ಕಪ್ಪ ಸೋದರಮಾವ ಎಂದು ಮೃದು ಧೋರಣೆ ತೋರಿಸಲಾಗುವುದಿಲ್ಲ. ರುಚಿಕಾ ಯೋಗದವರು ಯಾವ ಮುಲಾಜನ್ನೂ ನೋಡದೆ ಆ ಸಂದರ್ಭಕ್ಕೆ ಯೋಗ್ಯವಾದ ನಿರ್ಧಾರವನ್ನು ತೆಗೆದುಕೊಳ್ಳುವುದರಲ್ಲಿ ನಿಸ್ಸೀಮರು. ಇದು ಆ ಸಮಯಕ್ಕೆ ಹರಿತ ಎನಿಸಿದರೂ ದೂರದೃಷ್ಟಿಯಿಂದ ಒಳ್ಳೆಯದೇ ಆಗಿರುತ್ತದೆ. ರುಚಿಕಾ ಯೋಗವರು ಪೊಲೀಸ್‌, ಮಿಲಿಟರಿ ಹುದ್ದೆಗೆ ಹೆಚ್ಚು ಸೂಕ್ತರು. ಉಳಿದ ಗ್ರಹಗತಿಗಳೂ ಶುಭಸ್ಥಾನದಲ್ಲಿದ್ದರೆ ಪೊಲೀಸ್‌ ಅಥವಾ ಮಿಲಿಟರಿ ಅಥವಾ ರಾಜಕೀಯವಾಗಿ ಉನ್ನತ ಸ್ಥಾನದಲ್ಲಿ ಇರುತ್ತಾರೆ. ಸುಪ್ರಸಿದ್ಧರಾಗುತ್ತಾರೆ. ಗ್ರಹಚಾರವಶಾತ್‌ ಕುಜನಿಗೆ ಶನಿಯ ದೃಷ್ಟಿಯೋ, ರಾಹುವಿನ ದೃಷ್ಟಿಯೋ ಬಿದ್ದಿದ್ದರೆ ಅಂಥವರು ಕುಪ್ರಸಿದ್ಧರೂ ಆಗಿಬಿಡುತ್ತಾರೆ. ಇಂಥವರು ಕಳ್ಳರು, ದರೋಡೆಕೋರರು, ಕೊಲೆಗಡುಕರು, ಅತ್ಯಾಚಾರಿಗಳು, ಆಗಿಬಿಡಬಹುದು. ಪೊಲೀಸ್‌ ಇಲಾಖೆಯಲ್ಲಿ ಕ್ರೂರಿಯಾದ ಆಫೀಸರ್‌ ಆಗಬಹುದು. ಒಬ್ಬ ಹೆಸರಾಂತ ವೈದ್ಯ ಆಗಬಹುದು. ಸದಾ ರಕ್ತ ಮಾಂಸ ಇಂಥವುಗಳ ಸಹವಾಸಗಳಲ್ಲೇ ಇರುವಂತವನಾಗಬಹುದು. ಲ್ಯಾಬ್‌ ಟೆಕ್ನಿಷಿಯನ್‌ ಕೂಡಾ ಆಗಬಹುದು. ಭೂಗತ ಪಾತಕಿಯಾಗಬಹುದು. ಇವರು ಸಾವಿಗೆ ಅಂಜುವುದಿಲ್ಲ. ದೇಶಕ್ಕಾಗಿಯೂ ಪ್ರಾಣ ಕೊಡಬಹುದು, ದೇಶದ್ರೋಹ ಮಾಡಲೂ ಆತ್ಮಾಹುತಿ ಮಾಡಿಕೊಳ್ಳಬಹುದು. ರುಚಿಕಾ ಯೋಗದವರಿಗೆ ಹೊಡೆತ, ಬೀಳುವುದು, ಏಳುವುದು, ಗಾಯ ರಕ್ತ, ಅಪಘಾತ, ಮೂಳೆಮುರಿತ, ಪ್ರಾಣಾಂತಿಕ ಅಪಾಯಗಳು ಇವರಿಗೆ ಲೆಕ್ಕವೇ ಇಲ್ಲ. ಯಾವುದಕ್ಕೂ ಕೇರೇ ಮಾಡರು. ಸಾಹಸ ವೃತ್ತಿಗಳಲ್ಲಿ ಇವರಿಗೆ ಬಹಳ ಆಸಕ್ತಿ. ರಿವರ್‌ ರ್ಯಾಫ್ಟಿಂಗ್‌ ಮಾಡುವುದು, ಪರ್ವತಾರೋಹಣ, ಮಾರ್ಷಲ್‌ ಆರ್ಟ್‌ನಲ್ಲಿ ಪರಿಣಿತಿ, ಕುದುರೆ ಸವಾರಿ, ಕತ್ತಿವರಸೆ, ಫ‌ುಟ್‌ಬಾಲ್‌ ಕ್ರಿಕೆಟ್‌ ನಂಥ ಕ್ರೀಡೆಗಳಲ್ಲಿ ಆಸಕ್ತಿ, ಅದನ್ನೇ ವೃತ್ತಿಯನ್ನಾಗಿಸಿಕೊಂಡವರೂ ಆಗಿರಬಹುದು. ಒಟ್ಟಿನಲ್ಲಿ ಸಾಹಸ ಮತ್ತು ಧೈರ್ಯ ಇವರ ಜೀವನದ ಅವಿಭಾಜ್ಯ ಅಂಗವಾಗಿರುತ್ತದೆ. ಕೋಪಿಷ್ಠರೂ ಆಗಿರುತ್ತಾರೆ. ಪ್ರಾಣವನ್ನು ಕೊಡಲೂ, ಪ್ರಾಣವನ್ನು ತೆಗೆಯಲೂ ಹಿಂದೆಮುಂದೆ ನೋಡುವುದಿಲ್ಲ. ಎರಡರಲ್ಲೂ ಮಿತಿ ಇಲ್ಲ. ಇವರಿಗೆ ಒಳ್ಳೆಯ ಶಿಕ್ಷಣ ಸಂಸ್ಕಾರವಂತ ವಾತಾವರಣ ದೊರೆತರೆ ದೇಶಕ್ಕೆ ಇವರೊಂದು ಆಸ್ತಿಯಾಗಿಯೂ ಆಗುತ್ತಾರೆ. ತಮ್ಮ ಕುಟುಂಬಕೂ,R ಹುಟ್ಟೂರಿಗೂ ದೇಶಕ್ಕೂ ಹೆಸರು ತರುತ್ತಾರೆ. ಮಾಜಿ ವಿಶ್ವಸುಂದರಿ ಹಾಗೂ ಖ್ಯಾತ ಬಾಲಿವುಡ್‌ ನಟಿ ಐಶ್ವರ್ಯಾ ರೈ ರುಚಿಕಾ ಯೋಗದಲ್ಲಿ ಹುಟ್ಟಿದವರು. ಭದ್ರಯೋಗ ಇನ್ನು ಭದ್ರಯೋಗಕ್ಕೆ ಬುಧ ಅಧಿಪತಿ. ಮಿಥುನ ಲಗ್ನವಾಗಿ, ಬುಧನು ಮಿಥುನದಲ್ಲಾಗಲೀ ಕನ್ಯಾದಲ್ಲಾಗಲೀ ಇರಬೇಕು ಅಥವಾ ಕನ್ಯಾಲಗ್ನವಾಗಿ ಬುಧನು ಕನ್ಯಾದಲ್ಲಾಗಲೀ ಮಿಥುನದಲ್ಲಾಗಲಿ ಇರಬೇಕು. ಇದು ಭದ್ರಯೋಗವೆನಿಸಿಕೊಳ್ಳುತ್ತದೆ. ಭದ್ರಯೋಗದಲ್ಲಿ ಜನಿಸಿದವರು ಬಹಳ ಬುದ್ಧಿಬಂತರು. ಬುಧನು ಬಂಧುಕಾರಕ. ಬುದ್ಧಿಕಾರಕ. ಭದ್ರಯೋಗದವರು ಬಂಧು ಬಾಂಧವರೊಡನೆ ಉತ್ತಮ ಸಂಬಂಧ ಹೊಂದಿರುತ್ತಾರೆ. ಇವರ ಐಕ್ಯೂ ತುಂಬಾ ಹರಿತ. ನೆನಪಿನ ಶಕ್ತಿಯೂ ಬಹಳ ತೀಕ್ಷ್ಣ. ಬ್ಯಾಂಕಿಂಗ್‌ ಕ್ಷೇತ್ರ, ಚಾರ್ಟೆಡ್‌ ಅಕೌಂಟೆಂಟ್‌, ಕಂಪ್ಯೂಟರ್‌ ಕ್ಷೇತ್ರ ಇವರಿಗೆ ಹೇಳಿ ಮಾಡಿಸಿದ ಕ್ಷೇತ್ರಗಳು. ಈಗಿನ ಮೊಬೈಲ್‌ ಕ್ಷೇತ್ರದ ದೊರೆಯಾಗಬಹುದು. ಬುದ್ಧಿವಂತಿಕೆ ಎನ್ನುವುದು ಇವರ ಕಣಕಣದಲ್ಲೂ ಹರಿಯುತ್ತಿರುತ್ತದೆ.ಕ್ವಿಜ್‌ ಕಾರ್ಯಕ್ರಮಗಳಲ್ಲಿ ಇವರು ಭಾಗವಸಿದರೆ ಮೊದಲ ಬಹುಮಾನ ಗ್ಯಾರಂಟಿ. ಕ್ವಿಜ್‌ ಕಾರ್ಯಕ್ರಮಗಳ ಆಯೋಜಕರೂ ಆಗಿರುತ್ತಾರೆ. ವಿಜಾnನ, ಗಣಿತ, ಅಕೌಂಟ್ಸ್‌ ಮತ್ತು ತಂತ್ರಜಾnನ ಇವರಿಗೆ ಅಚ್ಚುಮೆಚ್ಚಾದ ಕ್ಷೇತ್ರ. ಈ ಕ್ಷೇತ್ರಗಳಲ್ಲಿ ಇವರನ್ನು ಮೀರಿಸುವವರು ಯಾರೂಇಲ್ಲ. ಕ್ರೀಡೆಯಲ್ಲೂ ಇವರು ಗಮನ ಸೆಳೆಯುತ್ತಾರೆ. ಇದಕ್ಕೆ ಉದಾಹರಣೆ ಭಾರತೀಯ ಕ್ರಿಕೆಟ್‌ನ ಮಾಜಿ ನಾಯಕ, ಹಾಲಿ ಆಟಗಾರ ಮಹೇಂದ್ರ ಸಿಂಗ್‌ ಧೋನಿ. ಧೋನಿ ಭದ್ರಯೋಗದ ಜಾತಕದವರು. ಒಮ್ಮೊಮ್ಮೆ ನೆಲಕ್ಕೆ ಬಿದ್ದರೂ ಅಷ್ಟೇ ವೇಗವಾಗಿ ಎದ್ದು ನಿಲ್ಲುತ್ತಾರೆ. ಇಂಥವರಿಗೆ ದೌರ್ಬಲ್ಯಗಳು ಕಡಿಮೆ. ಭದ್ರಯೋಗದವರ ಮಾತೂ ಸಹ ಅತಿ ಬುದ್ಧಿವಂತಿಕೆಯಿಂದ ಕೂಡಿರುತ್ತದೆ. ಬೆಣ್ಣೆಯಲ್ಲಿ ಕೂದಲು ತೆಗೆದಂತೆ ಅತಿ ನಾಜೂಕಾದ ಮಾತುಕತೆಗೆ ಇವರು ಸಿದ್ಧಹಸ್ತರು. ಯಾರನ್ನಾದರೂ ಕನ್‌ವಿನ್ಸ್‌ ಮಾಡುವುದು ಇವರಿಗೆ ಸುಲಭ. ಹೀಗಾಗಿ ಇವರು ಇನುÒರೆನ್ಸ್‌ ಕೇತ್ರದಲ್ಲೂ ಹೆಸರು ಮಾಡುತ್ತಾರೆ. ಒಳ್ಳೆಯ ಎಂಜಿನಿಯರ್‌ಗಳು ಆಗಿರುತ್ತಾರೆ. ಅಣೆಕಟ್ಟು ಕಟ್ಟುವುದು, ಕಟ್ಟಡಗಳ ಸಂಕೀರ್ಣಗಳನ್ನು ನಿರ್ಮಿಸುವುದು ವಿಮಾನ ಕ್ಷೇತ್ರ, (ಏರೋನಾಟಿಕ್‌ ಎಂಜಿನಿಯರ್‌) ದೊಡ್ಡ ದೊಡ್ಡ ಮೆನುಗಳನ್ನು ತಯಾರಿಸುವುದು, ಯಂತ್ರಮಾನವವನ್ನು ನಿರ್ಮಿಸುವುದು ಇಂಥವೆಲ್ಲಾ ಭದ್ರಯೋಗದವರಿಗೆ ಸುಲಭ. ದೈಹಿಕ ಶಕ್ತಿಯಿಂದ ಮಾಡಲಾಗದ್ದನ್ನು ಬುದ್ಧಿವಂತಿಕೆಯಿಂದ ಸುಲಭ ಮಾಡಿಕೊಳ್ಳುತ್ತಾರೆ. ಶಕ್ತಿಗಿಂತ ಯುಕ್ತಿ ಮೇಲು ಎನ್ನುವ ನಾಣ್ನುಡಿ ಇವರಿಗೆ ತುಂಬಾ ಅನ್ವಯವಾಗುತ್ತದೆ. ವ್ಯಾಪಾರ ಕ್ಷೇತ್ರದಲ್ಲೂ ಇವರದ್ದು ಎತ್ತಿದ ಕೈ. ಬಹುದೊಡ್ಡ ಅಂಗಡಿ ಮಳಿಗೆಗಳನ್ನು ಹೊಂದಿರುತ್ತಾರೆ. ಬುದ್ಧಿಗೆ ಕಸರತ್ತು ಕೊಡುವ ಯಾವುದೇ ಕೆಲಸವಾಗಲೀ ಇವರು ಚಾಲೆಂಜಾಗಿ ತೆಗೆದುಕೊಂಡು ಲೀಲಾಜಾಲವಾಗಿ ಮಾಡಿ ಮುಗಿಸುತ್ತಾರೆ. ತಮ್ಮ ಬುದ್ಧಿವಂತಿಕೆ ಸೃಜನಶೀಲತೆಯಿಂದ ಬಲು ಬೇಗ ಪ್ರಸಿದ್ಧಿಗೆ ಬರುತ್ತಾರೆ. ಅವಕಾಶಗಳು ಇವರನ್ನು ಹುಡುಕಿಕೊಂಡು ಬರುತ್ತವೆ. ಇವರು ಸುಲಭದಲ್ಲಿ ಸೋಲೊಪ್ಪುವುದೂ ಇಲ್ಲ. ಎಲ್ಲ ವಿಷಯದಲ್ಲೂ ಅಚ್ಚುಕಟ್ಟು ಶುಚಿ ಬಯಸುವ ಜನ. ಬುಧನ ಬಣ್ಣ ಹಸಿರು. ವಾರ: ಬುಧವಾರ. ರತ್ನ: ಪಚ್ಚೆ. ಸಂಖ್ಯೆ: ಐದು. ಧಾನ್ಯ: ಹೆಸರು. ಅಧಿದೇವತೆ: ವಿಷ್ಣು. ಮಾಲವೀಯ ಯೋಗ ಮಾಲವೀಯ ಯೋಗಕ್ಕೆ ಶುಕ್ರ ಅಧಿಪತಿ. ವೃಷಭ, ತುಲಾ ಶುಕ್ರನಿಗೆ ಸ್ವಂತ ಮನೆಗಳು. ಮೀನ ರಾಶಿ ಶುಕ್ರನಿಗೆ ಉತ್ಛ ಸ್ಥಾನ. ಹೀಗಾಗಿ ಈ ಮೂರೂ ರಾಶಿಗಳಲ್ಲಿ ಯಾವುದಾದರೂ ರಾಶಿ ಲಗ್ನವಾಗಿ ಅದರಲ್ಲಿ ಶುಕ್ರನಿರಬೇಕು. ಶುಕ್ರ ಸುಖಕಾರಕ. ಲಲಿತ ಕಲೆಗಳ ಅಧಿದೇವತೆ. ಶುಕ್ರನು ದಾನವ ಗುರುವಾಗಿದ್ದರೂ ಸುಂಕುಚಿತ ಸ್ವಭಾವದವನು. ಸೌಮ್ಯಗ್ರಹ. ಮಾಲವೀಯ ಯೋಗದ ಜಾತಕರು ಬಹಳ ನಾಜೂಕಿನವರು. ಸೂಕ್ಷ್ಮಜೀವಿಗಳು. ಸುಂದರಾಂಗರು. ಮಾಲವೀಯ ಯೋಗದವರು ಹುಟ್ಟಿನಿಂದಲೇ ಅದೃಷ್ಟವಂತರು. ಇವರಿರುವ ಕಡೆ ಐಶ್ವರ್ಯ ಕಾಲುಮುರಿದು ಬಿದ್ದಿರುತ್ತದೆ. ಮಾಲವೀಯ ಯೋಗದವರು ಚಿಕ್ಕಂದಿನಿಂದಲೇ ಸುಖವಾಗಿ ಬೆಳೆಯುತ್ತಾರೆ. ತಂದೆ ಎಷ್ಟು ಬಡವನಾದರೂ ಇವರು ಹುಟ್ಟಿದ ನಂತರ ಶ್ರೀಮಂತನಾಗುತ್ತಾನೆ. ಮಾಲವೀಯ ಯೋಗದವರು ಅಲಂಕಾರಪ್ರಿಯರು. ಶುಕ್ರ ಕಲೋಪಾಸಕ. ಹೀಗಾಗಿ ಈ ಯೋಗದವರು ಕಲೆಗಳ ಆರಾಧಕರಾಗಿರುತ್ತಾರೆ. ಸಂಗೀತ, ಸಾಹಿತ್ಯ, ನೃತ್ಯ ಸಂಗೀತವಾದ್ಯಗಳ ವಾದನ, ಕಸೂತಿ, ಟೈಲರಿಂಗ್‌, ಶಿಲ್ಪಕಲೆ, ವಾಸ್ತುಕಲೆ, ವಾಸ್ತುಶಾಸ್ತ್ರ, ಕಟ್ಟಡ ವಿನ್ಯಾಸ, ಕುಸುರಿ ಕೆಲಸ, ಆಭರಣಗಳನ್ನು ತಯಾರುಮಾಡುವುದು, ಆಭರಣಗಳ ಕುಸುರಿ ಕಲೆ ವಿನ್ಯಾಸ ಮಾಡುವುದು, ಮೂರ್ತಿ ಕೆತ್ತುವುದು, ಕುಂದನ್‌ ವರ್ಕì ಬಾಟಿಕ್‌ ವರ್ಕ್‌ ಹೀಗೆ ಯಾವುದಾದರೂ ಒಂದು ಕಲೆಯಲ್ಲಿÉ ಪರಿಣಿತರಾಗಿರುತ್ತಾರೆ. ಮಾಲವೀಯ ಯೋಗದವರು ಬಹುದೊಡ್ಡ ಕಲಾವಿದರೂ ಆಗಿರುತ್ತಾರೆ. ಮಾಲವೀಯ ಯೋಗದವರು ಆಹ್ಲಾದಕರ ಪ್ರವೃತ್ತಿಯವರು. ತಾವೂ ಖುಷಿಯಾಗಿದ್ದು ತಮ್ಮ ಸುತ್ತಲಿನವರನ್ನೂ ಖುಷಿಯಾಗಿಡುತ್ತಾರೆ. ಕಷ್ಟವೆನ್ನುವುದು ಇವರ ಜೀವನದಲ್ಲಿ ಕಡಿಮೆ. ರಾಜಯೋಗವನ್ನು ಅನುಭವಿಸುತ್ತಾರೆ. ತಮ್ಮ ಸುಖ ಐಷಾರಾಮಕ್ಕೆ ಯಾವುದೇ ಕೊರತೆ ಮಾಡಿಕೊಳ್ಳುವುದಿಲ್ಲ. ಮಾಲವೀಯ ಯೋಗದವರು ಸೃಜನಶೀಲರು. ಕಲ್ಪನಾಶೀಲರು. ಭಾವುಕರು.ಶೃಂಗಾರ ಪ್ರಿಯರು. ರಸಿಕರು. ಜಿಹ್ವಾಚಾಪಲ್ಯ ಹೆಚ್ಚು. ಒಳ್ಳೊಳ್ಳೆಯ ಊಟ ತಿಂಡಿಗಳನ್ನು ಬಯಸುತ್ತಾರೆ. ಹೇಗೋ ಜೀವನ ಮಾಡುವುದಿಲ್ಲ. ಆ ಹೊತ್ತಿಗೆ ಏನಿದ್ದರೆ ಅದು ತಿನ್ನುವುದು, ಯಾವುದೋ ಒಂದು ಬಟ್ಟೆ ಧರಿಸುವುದು ಹೇಗೋ ಇದ್ದು ಬಿಡುವುದು ಇವರ ಜಾಯಮಾನವಲ್ಲ. ಇವರು ಎಲ್ಲದರಲ್ಲೂ ಅಚ್ಚುಕಟ್ಟು ಬಯಸುವವರು. ರುಚಿಕಟ್ಟಾದ ಊಟ, ಅಚ್ಚುಕಟ್ಟಾದ ಮನೆ, ವೇಷಭೂಷಣಗಳಲ್ಲಿ ನಾಜೂಕು ಎಲ್ಲವೂ ಇರಬೇಕು. ಇವರಿದ್ದ ಕಡೆ ಎಲ್ಲವೂ ನೀಟಾಗಿ ಶುಚಿಯಾಗಿ ಇರಬೇಕು. ಆಯಾ ವಸ್ತುಗಳು ಎಲ್ಲಿರಬೇಕೋ ಅಲ್ಲಿ ಇರಬೇಕು. ತಮ್ಮ ದೇಹದ ಮೇಲೆ ಒಂದು ಸಣ್ಣ ಗೀರು ಉಂಟಾದರೂ ತಮ್ಮ ಸೌದರ್ಯಕ್ಕೆಲ್ಲಿ ಧಕ್ಕೆ ಬರುವುದೋ ಎಂದು ಭಯ ಪಡುತ್ತಾರೆ. ಅಷ್ಟು ಸೂಕ್ಷ್ಮಜೀವಿಗಳು. ಹೆಚ್ಚು ಬಿಸಿಲಾದರೂ ಸಹಿಸರು. ಶುಕ್ರನ ದೇವತೆ ಲಕ್ಷಿ$¾à ಪಾರ್ವತಿ ಅಥವಾ ಸರಸ್ವತಿ. ಯಾವ ಶಕ್ತಿದೇವತೆಯಾದರೂ ಶುಕ್ರ ಅವರಿಗೆ ಅಧೀನ. ಶುಕ್ರನ ರತ್ನ: ವಜ್ರ. ಧಾನ್ಯ: ಅವರೆ. ಸಂಖ್ಯೆ: 6. ಬಣ್ಣ: ಬಿಳಿ. ಲೋಹ: ಬೆಳ್ಳಿ. ಹಂಸಯೋಗ, ಶಶಯೋಗ, ಮಾಲವೀಯ ಯೋಗ, ಭದ್ರಯೋಗ, ರುಚಿಕಾ ಯೋಗ ಈ ಯಾವ ಯೋಗದಲ್ಲಿ ಜನಿಸಿದರೂ ಅವರು ಅದೃಷ್ಟವಂತರು. ಪ್ರಖ್ಯಾತರು, ಸುಪ್ರಸಿದ್ಧರೂ ಆಗುತ್ತಾರೆ. ದೊಡ್ಡ ಸ್ಥಾನಮಾನಗಳು ಇವರಿಗೆ ಸಿಗುತ್ತವೆ. ಸಾಮಾಜಿಕ ಗೌರವ, ಜನಾನುರಾಗ, ಎಲ್ಲವೂ ಇವರಾದಾಗಿರುತ್ತದೆ. ಯಾವುದೇ ಕ್ಷೇತ್ರದಲ್ಲಾದರೂ ಇವರು ಉನ್ನತ ಸ್ಥಾನದಲ್ಲಿ ಇರುತ್ತಾರೆ. ವೀಣಾ ಚಿಂತಾಮಣಿ -ಸಂಗ್ರಹ (ಕೃಪೆ ದಿನ ಪತ್ರಿಕೆ)

ರಾಜಯೋಗದೊಂದಿಗೆ ಸಕಲ ಗ್ರಹದೋಷಗಳು ಧೂಳೀಪಟ

ರಾಜಯೋಗದೊಂದಿಗೆ ಸಕಲ ಗ್ರಹದೋಷಗಳು ಧೂಳೀಪಟ ಜ್ಞಾನ, ಬಲ, ಶಕ್ತಿ, ತೇಜಸ್ಸು, ಐಶ್ವರ್ಯ, ಸಿರಿಸಂಪತ್ತುಗಳು ಸರ್ವತೋಮುಖ ಅಭಿವೃದ್ಧಿ ಹೊಂದಲು ಸರ್ವಚೇತನ ಜ್ಞಾನ, ಧ್ಯಾನ, ಭಕ್ತಿ ಮತ್ತು ಕರ್ಮಯೋಗಗಳಿಂದ ಪಡೆಯಬಹುದು. ಮೇಷ : ಸರ್ವಕಾರ್ಯಚತುರತೆ. ಹಣದ ಲೇವಾದೇವಿ ಬಂಡವಾಳ ಹೂಡಿಕೆಯಲ್ಲಿ ಪ್ರಗತಿ. ಬೆಳ್ಳಿ ಬಂಗಾರ ಮತ್ತು ರತ್ನ ವ್ಯಾಪಾರಗಳಲ್ಲಿ ಅಧಿಕಲಾಭ. ವಿದೇಶ ಪ್ರವಾಸ. ಸಂಶೋಧನೆ ಮತ್ತು ವಿಜ್ಞಾನದಲ್ಲಿ ಪ್ರಗತಿ ಉಂಟಾಗುತ್ತದೆ. ವೃಷಭ : ಡಿಸೆಂಬರ್‌ 24ರಿಂದ ಶುಭಯೋಗ. ರಾಜಕೀಯ ಮತ್ತು ಸಮಾಜ ಸೇವೆಯಲ್ಲಿ ಪಟ್ಟಾಭಿಷೇಕ. ಚಂದ್ರದೆಸೆಯಲ್ಲಿ ಜನನವಾಗಿದ್ದರೆ, ಅವಘಡ, ಅಘಾತ, ಸಾಲದ ಭಾದೆ ದೂರವಾಗುತ್ತದೆ. ವಿದ್ಯಾ ಕ್ಷೇತ್ರದಲ್ಲಿ ಪ್ರಗತಿ. ಮಿಥುನ : ಆಗಸ್ಟ್‌ 29 ರಿಂದ ಶುಕ್ರ ಪಂಚಮ ಸ್ಥಾನದಲ್ಲಿ ಇರುವುದರಿಂದ ರಾಜಯೋಗ, ಅಮೃತಸಿದ್ಧಯೋಗ, ಗಜಕೇಸರಿಯೋಗಗಳು ಆರಂಭ. ಕೈಗೊಳ್ಳುವ ಎಲ್ಲಾ ಯೋಜನೆಗಳು ಕಾರ್ಯರೂಪಕ್ಕೆ ಬರುತ್ತವೆ. ಸಾಲಗಳಿಂದ ವಿಮುಕ್ತಿ. ಕಟಕ : ಸೆಪ್ಟೆಂಬರ್‌ 23 ರಿಂದ ರಾಜಯೋಗ ಆರಂಭ. ವಾಹನ ನಿವೇಶನ ಮತ್ತು ಭೂ ಖರೀದಿ. ಕಾಲ ಗಣನಾಚಕ್ರದಲ್ಲಿ ಶನಿ, ಕುಜ ಮತ್ತು ಕಾಳ ಸರ್ಪದೋಷಗಳು ನಿವಾರಣೆಯಾಗಲಿದೆ. ದೇವಾಲಯ ಹಾಗೂ ಪ್ರೇಕ್ಷ ಣೀಯ ಸ್ಥಳಗಳ ದರ್ಶನ. ಸಿಂಹ : ಕಳೆದ ಡಿಸೆಂಬರ್‌ 24ರಿಂದಲೇ ರಾಜಯೋಗ ಆರಂಭವಾಗಿದ್ದು ಮುಂದಿನ ಮೂರು ವರ್ಷಗಳು ಅದೃಷ್ಟದ ವರ್ಷಗಳಾಗಿರುತ್ತವೆ. ಆರ್ಥಿಕ, ಸಾಮಾಜಿಕ, ರಾಜಕೀಯ ಮತ್ತು ವಿದ್ಯಾಕ್ಷೇತ್ರಗಳಲ್ಲಿ ಪ್ರಗತಿ. ವಿದೇಶ ಪ್ರವಾಸ ಉಂಟಾಗುತ್ತದೆ. ಕನ್ಯಾ : ಬೆಳ್ಳಿ ಬಂಗಾರ ಮತ್ತು ರತ್ನ ವ್ಯಾಪಾರದಲ್ಲಿ ಪ್ರಗತಿ, ದಿನಸಿ ವ್ಯಾಪಾರಗಳಲ್ಲಿ ಅಧಿಕಲಾಭ, ಶನಿ ಅಲ್ಪ ನೀಚನಾಗಿರುವುದರಿಂದ ಸದಾ ಮಾನಸಿಕ ಚಿಂತೆ, ಸಾಲದ ಬಾಧೆ, ನಿವಾಸದಲ್ಲಿ ಅಶಾಂತಿ ಉಂಟಾಗುತ್ತದೆ. ತುಲಾ : ರವಿ ದೆಸೆ ಸದಾ ಇರುವುದರಿಂದ ಜೀವನದಲ್ಲಿ ಅವಘಡ ಮತ್ತು ಆಘಾತಗಳು ಸಂಭವಿಸಲಾರವು. ಸೆಪ್ಟೆಂಬರ್‌ 23ರಂದು ರಾಜಯೋಗ ಆರಂಭದಿಂದಲೇ ಗ್ರಹದೋಷಗಳು ಧೂಳಿಪಟ ಆಗಲಿವೆ. ವೃಶ್ಚಿಕ : ಗುರು ಪಂಚಮ ಸ್ಥಾನದಲ್ಲಿ ಸಂಚರಿಸುವುದರಿಂದ ಮಿತ್ರರು ಮತ್ತು ಬಂಧುವರ್ಗದವರಿಂದ ಸಹಾಯದ ಹಸ್ತ ದೊರೆಯುತ್ತದೆ. ಮಾರ್ಚಿ 21ರಿಂದಲೇ ರಾಜಯೋಗ ಆರಂಭವಾಗಿರುವುದರಿಂದ ಜ್ಞಾಪಕ ಶಕ್ತಿ ಅಧಿಕವಾಗುತ್ತದೆ. ಧನಸ್ಸು : ಸೆಪ್ಟೆಂಬರ್‌ 23 ರಿಂದ ರಾಜಯೋಗ ಪ್ರಾರಂಭ. ಕೋರ್ಟ್‌ ಕಚೇರಿಗಳ ವ್ಯಾಜ್ಯ ಇತ್ಯರ್ಥ. ಆಕಸ್ಮಿಕ ಚರಾಸ್ಥಿಗಳ ಆಗಮನ. ವಾಹನ ಖರೀದಿ, ನಿವೇಶನ ಕೊಳ್ಳುವಿಕೆ, ಗೃಹ ನಿರ್ಮಾಣಗಳು ಸಂಭವವಿದೆ. ಮಕರ : ಆಗಸ್ಟ್‌ 29ರಿಂದ ರಾಜಯೋಗ ಆರಂಭ. ಚಂದ್ರದೆಸೆ ಸದಾ ಇರುವುದರಿಂದ ಕಾರ್ಯಸಿದ್ಧಿ. ಆಕಸ್ಮಿಕ ಧನಲಾಭ. ಸಾಲಗಳಿಂದ ಮುಕ್ತಿ. ಕಾಳಸರ್ಪದೋಷಗಳು ಧೂಳಿಪಠ ಆಗಲಿವೆ. ಕುಂಭ : ಮೇ 19ರಂದೇ ರಾಜಯೋಗ ಬಂದಿರುವುದರಿಂದ ಉನ್ನತ ಪದವಿ, ರಾಜಕೀಯ ಪಟ್ಟಾಭಿಷೇಕ. ವಿದ್ಯಾಬುದ್ಧಿಯಲ್ಲಿ ಪ್ರಗತಿ. ಚಿತ್ರ ನಿರ್ಮಾಪಕರು, ರೇಷ್ಮೆ ಉದ್ದಿಮೆದಾರರು, ಸಾಗರ ಸಂಶೋಧಕರಿಗಿದು ಸಕಾಲ. ಮೀನ : ಮಾರ್ಚಿ 21ರಿಂದಲೇ ರಾಜಯೋಗ, ಅಮೃತಸಿದ್ಧಯೋಗ, ಗಜಕೇಸರಿಯೋಗ ಮತ್ತು ಶುಕ್ರದೆಸೆಗಳು ಮರುಕಳಿಸುತ್ತಲೇ ಇರುತ್ತವೆ. ನವಗ್ರಹಗಳ ಅನುಗ್ರಹ. ಜ್ಞಾನ, ಛಲ, ಕೀರ್ತಿ ಸಂಭವ. ಶುಕ್ರನು ಉಚ್ಛ ಸ್ಥಾನದಲ್ಲಿದ್ದರೆ ಸಂಗೀತಗಾರನಾಗುವ ಯೋಗ ನಾದಮಯ ಈ ಜಗವೆಲ್ಲಾ ನಾದಮಯ. ಹೌದು, ನಾದದ ಮೂಲವೇ ಸಂಗೀತ. ಸಂಗೀತ ಕಲೆ ಎಲ್ಲರಿಗೂ ಸಿದ್ಧಿಸುವುದಿಲ್ಲ. ಜ್ಯೋತಿಷ ಶಾಸ್ತ್ರದ ಪ್ರಕಾರ ಯಾರ ಜಾತಕದಲ್ಲಿ ಶುಕ್ರ, ಚಂದ್ರರ ಸಂಯೋಗವಿರುತ್ತದೆಯೋ ಅವರಲ್ಲಿ ಸಂಗೀತಜ್ಞಾನ ಅಪಾರವಾಗಿರುತ್ತದೆ. ಮನೋಹ್ಲಾದಕ್ಕೆ ಸಂಗೀತವೇ ಮೂಲ. ಕುಂಡಲಿಯಲ್ಲಿ ಶುಕ್ರಗ್ರಹವು ಉಚ್ಚಸ್ಥಾನದಲ್ಲಿದ್ದರೆ ಆ ವ್ಯಕ್ತಿಗೆ ಸಂಗೀತಗಾರನಾಗುವ ಯೋಗವಿರುತ್ತದೆ. ಒಂದೊಮ್ಮೆ ಶುಕ್ರ ಚಂದ್ರನೊಂದಿಗೆ ಕಟಕ ರಾಶಿಯಲ್ಲಿದ್ದರೆ ಸಂಗೀತಗಾರನಾಗುತ್ತಾನೆ. ಶುಕ್ರ ಗ್ರಹಕ್ಕೆ ಚಂದ್ರನ ದೃಷ್ಟಿ ಇದ್ದರೆ ಅವರು ಸಂಗೀತ ವಾದ್ಯವನ್ನು ನುಡಿಸುತ್ತಾರೆ. ಶುಕ್ರನ ಮನೆಯಲ್ಲಿ ಗುರುವಿದ್ದರೆ ಸಂಗೀತ ಭೋದಕರಾಗುತ್ತಾರೆ. ಜನನದ ಸಮಯದಲ್ಲಿ ಶುಕ್ರದೆಶೆ ಇದ್ದರೆ ಚಿಕ್ಕ ವಯಸ್ಸಿನಲ್ಲಿಯೇ ಸಂಗೀತಗಾರನಾಗಿ ಬಲು ಬೇಗ ಪ್ರಸಿದ್ಧಿಗೆ ಬರುತ್ತಾರೆ. ಕುಂಡಲಿಯಲ್ಲಿ ಶುಕ್ರನ ಜೊತೆ ಕುಜಗ್ರಹವಿದ್ದು ಚಂದ್ರನ ದೃಷ್ಟಿ ಇದ್ದರೆ ಚರ್ಮವಾದಕರಾಗಿ ಪ್ರಖ್ಯಾತರಾಗುತ್ತಾರೆ. ಶುಕ್ರನು ಕುಂಡಲಿಯಲ್ಲಿ 10ನೇ ಮನೆಯಲ್ಲಿದ್ದು ಅದಕ್ಕೆ ಗುರುವಿನ ದೃಷ್ಟಿ ಇದ್ದರೆ ಸಂಗೀತ ಸಂಬಂಧ ಪುಸ್ತಕ ರಚಿಸುತ್ತಾರೆ. ಶುಕ್ರನು ನೀಚಸ್ಥಾನದಲ್ಲಿದ್ದರೆ ಸಂಗೀತ ಅಭ್ಯಾಸ ಅರ್ಧಕ್ಕೇ ನಿಲ್ಲುತ್ತದೆ. ಶುಕ್ರ ಭುಕ್ತಿ ಅಥವಾ ಚಂದ್ರ ಭುಕ್ತಿ ನಡೆಯುತ್ತಿದ್ದಾಗ ಸಂಗೀತದಲ್ಲಿ ಆಸಕ್ತಿ ಹೆಚ್ಚಾಗಿ ಇರುತ್ತದೆ. ವೃಷಭ, ತುಲಾ, ಕಟಕ, ಮೀನರಾಶಿಯವರಿಗೆ ಹಾಗೂ ಮೂಲ ನಕ್ಷತ್ರದವರಿಗೆ ಸಂಗೀತದಲ್ಲಿ ಆಸಕ್ತಿ ಹೆಚ್ಚಿಗೆ ಇರುತ್ತದೆ. ಗ್ರಹಗಳ ಕಾರಕತ್ವ ಭಾವ ಜ್ಯೋತಿಷ ಶಾಸ್ತ್ರದ ಪ್ರಕಾರ 9 ಗ್ರಹಗಳಿಗೂ ಅವುಗಳದೇ ಆದ ಕಾರಕತ್ವವಿದೆ. ರವಿ-ಪಿತೃಕಾರಕ, ಚಂದ್ರ-ಮಾತೃಕಾರಕ, ಕುಜ-ಶಕ್ತಿಕಾರಕ, ಬುಧ-ಬುದ್ಧಿಕಾರಕ, ಗುರು-ಜ್ಞಾನಕಾರಕ, ಶುಕ್ರ-ಕಳತ್ರಕಾರಕ, ಶನಿ-ಕರ್ಮಕಾರಕ, ರಾಹು-ಸರ್ವದೋಷ ನಿವಾರಕ, ಕೇತು-ಮೋಕ್ಷಕಾರಕ ಸಂಗ್ರಹ (ಕೃಪೆ ದಿನ ಪತ್ರಿಕೆ)

ವಿದ್ಯೆಯ ಆಯ್ಕೆ ವಿದ್ಯಾಪ್ರಾಪ್ತಿ ಯೋಗ

ಯಾವ ಗ್ರಹದವರಿಗೆ ಯಾವ ಶಿಕ್ಷಣ ಸೂಕ್ತ ಜ್ಯೋತಿಷ್ಯವು ಸೂಚನಾತ್ಮಕ ವಿಜ್ಞಾನ (Astrology is Indicative Science) ಇದರಿಂದ ಜೀವನದ ಎಲ್ಲ ಆಗುಹೋಗುಗಳನ್ನು ತಿಳಿದುಕೊಂಡು, ಅದಕ್ಕೆ ತಕ್ಕಂತೆ ನಮ್ಮ ಜೀವನವನ್ನು ರೂಪಿಸಿಕೊಂಡಲ್ಲಿ ಉತ್ತಮವಾದ ಜೀವನವನ್ನು ನಡೆಸಬಹುದು. ಜೀವನದ ಪ್ರಮುಖ ವಿಷಯಗಳು ಆರೋಗ್ಯ, ವಿದ್ಯಾಭ್ಯಾಸ, ಉದ್ಯೋಗ, ವೈವಾಹಿಕ ಜೀವನ, ಸಂತಾನ, ಸುಖ ಜೀವನವಾಗಿದ್ದು ಈ ಪೈಕಿ ವಿದ್ಯಾಭ್ಯಾಸವೂ ಒಂದು ಪ್ರಮುಖವಾದ ಅಂಶ. ವ್ಯಕ್ತಿಯು ಆತನ ಜಾತಕಕ್ಕೆ ಅನುಗ್ರಹಿಸಿದ ವಿದ್ಯಾಭ್ಯಾಸವನ್ನು ಮಾಡಿದರೆ, ವಿದ್ಯಾಭ್ಯಾಸ ಮಾಡಿದರೆ, ಸುಗಮವಾಗಿ ಸಾಗುತ್ತದೆ. ಇಲ್ಲವಾದರೆ ಎಡರು-ತೊಡರುಗಳನ್ನು ಅನುಭವಿಸಬೇಕಾಗುತ್ತದೆ. ಅನುಭವದಲ್ಲಿ ಕಂಡಂತೆ ಕೆಲವು ವಿದ್ಯಾರ್ಥಿಗಳು ತಮಗೆ ಇಷ್ಟಬಂದ ವಿಷಯವನ್ನು ಆರಿಸಿಕೊಂಡು, ನಂತರ ಅರ್ಧದಲ್ಲಿ ವಿದ್ಯಾಭ್ಯಾಸವನ್ನು ನಿಲ್ಲಿಸುವುದು ಅಥವಾ ಬೇರೆ ವಿಷಯಕ್ಕೆ ಬದಲಾವಣೆ ಮಾಡಿಕೊಳ್ಳುವುದನ್ನು ನೋಡಿದ್ದೇವೆ. ಆದ್ದರಿಂದ ಜ್ಯೋತಿಷ್ಯದ ಪ್ರಕಾರ ಸೂಚಿಸುವ ಶಿಕ್ಷಣವನ್ನು ಆರಿಸಿಕೊಂಡು ಮುಂದುವರಿಯುವುದು ಸೂಕ್ತ. ಎಸ್‌ಎಸ್‌ಎಲ್‌ಸಿ, ಪಿಯುಸಿ ಮತ್ತು ಪದವಿ ಹಂತದ ವಿದ್ಯಾಭ್ಯಾಸಕ್ಕೆ ವ್ಯಕ್ತಿಯ ಜಾತಕದ 4ನೇ ಭಾವ, ವಿದ್ಯಾಕಾರಕರಾದ ಬುಧ, ಗುರು ಮತ್ತು 4ನೇ ಭಾವಸ್ಥಿತ ಗ್ರಹರು ದಶಾಭುಕ್ತಿ ಹಾಗೂ ಇತರೆ ಅಂಶಗಳನ್ನು ಗಮನಿಸಿ ನಿರ್ಣಯ ತೆಗೆದುಕೊಳ್ಳಬೇಕಾಗುತ್ತದೆ. ದಶಾಭುಕ್ತಿ, ಚತುರ್ಥಾಧಿಪತಿ ಸ್ಥಿತಗ್ರಹ, ಕಾರಕರು ನಿರ್ಬಲ ಅಥವಾ ಅಶುಭರಾಗಿದ್ದಾಗ ಕೆಲವೊಂದು ಪರಿಹಾರಗಳನ್ನು ಆಚರಿಸಬೇಕಾಗುತ್ತದೆ ಮತ್ತು ರತ್ನಗಳನ್ನು ಸಹ ಧರಿಸಬೇಕಾಗುತ್ತದೆ. ಉದಾಹರಣೆಗೆ ಕೆಲವೊಮ್ಮೆ ಎಸ್‌ಎಸ್‌ಎಲ್‌ಸಿಯಲ್ಲಿ ಶೇ.90 ಪಡೆದ ವಿದ್ಯಾರ್ಥಿ ಪಿಯುಸಿಯಲ್ಲಿ ಕಡಿಮೆ ಅಂಕ ಗಳಿಸುವುದು ಅಥವಾ ಅನುತ್ತೀರ್ಣವಾಗುವುದು. ಜ್ಯೋತಿಷ್ಯಶಾಸ್ತ್ರದ ಪ್ರಕಾರ ಗ್ರಹಗಳು ವಿದ್ಯಾಭ್ಯಾಸದ ವಿಷಯಗಳನ್ನು ಸೂಚಿಸುತ್ತವೆ. ರವಿ: ವೈದ್ಯಶಾಸ್ತ್ರ, ಐಎಎಸ್‌, ಕೆಎಎಸ್‌ ಇತ್ಯಾದಿ. ಚಂದ್ರ: ಮನಃಶಾಸ್ತ್ರ, ಆಯುರ್ವೇದ ವೈದ್ಯಶಾಸ್ತ್ರ, ಸಸ್ಯಶಾಸ್ತ್ರ ಇತ್ಯಾದಿ. ಕುಜ: ತಾಂತ್ರಿಕ ವಿದ್ಯೆ, ರಸಾಯನಶಾಸ್ತ್ರ, ಪಾಕಶಾಸ್ತ್ರ ಇತ್ಯಾದಿ. ಬುಧ: ವಾಣಿಜ್ಯಶಾಸ್ತ್ರ, ಸಂಪರ್ಕ ವಿಜ್ಞಾನ, ನರವಿಜ್ಞಾನ ಇತ್ಯಾದಿ. ಗುರು: ಹಣಕಾಸು ವಿದ್ಯೆ, ಕಾನೂನು, ಆಧ್ಯಾತ್ಮಿಕ ವಿದ್ಯೆ, ವೈದಿಕ ವಿದ್ಯೆ ಇತ್ಯಾದಿ. ಶುಕ್ರ: ಕಲೆ, ಕಾನೂನು, ಸಂಗೀತ, ವೃತ್ತ, ನಾಟಕ, ಪಾಕ ವಿದ್ಯೆ ಇತ್ಯಾದಿ. ಶನಿ: ಗಣಿ ವಿಜ್ಞಾನ, ಭೂವಿಜ್ಞಾನ, ವ್ಯವಸಾಯಶಾಸ್ತ್ರ ಇತ್ಯಾದಿ. ರಾಹು: ವೈದ್ಯ, ಸಂಶೋಧನೆ, ಖಗೋಳ ಇತ್ಯಾದಿ. ಕೇತು: ಆಧ್ಯಾತ್ಮಿಕ ವಿದ್ಯೆ, ಗಿಡಮೂಲಿಕೆ ಶಾಸ್ತ್ರ ಇತ್ಯಾದಿ ವೃಕ್ತಿಯ ಜಾತಕದ ಪ್ರಕಾರ ಯಾವ ಗ್ರಹ ವಿದ್ಯಾಭ್ಯಾಸಕ್ಕೆ ಸಂಬಂಧಿಸಿದೆ ಎಂದು ತಿಳಿದು ಆ ಗ್ರಹ ಸೂಚಿಸುವ ವಿದ್ಯೆಗಳನ್ನು ಅಭ್ಯಾಸ ಮಾಡುವುದರಿಂದ, ವಿದ್ಯಾಭ್ಯಾಸವು ಸರಾಗವಾಗಿ ಸಾಗಿ ಉತ್ತಮ ಫಲಿತಾಂಶವನ್ನು ಕೊಡುವುದು. ವ್ಯಕ್ತಿಯ ಜಾತಕವು ಸೂಚಿಸುವ (ಅಷ್ಟಕ ವರ್ಗ ಪ್ರಕಾರ) ದಿಕ್ಕಿಗೆ ಮುಖ ಮಾಡಿ ಅಭ್ಯಾಸ ಮಾಡುವುದು ಶ್ರೇಯಸ್ಕರ. ಸಾಮಾನ್ಯವಾಗಿ ಅಭ್ಯಾಸದ ದಿಕ್ಕು ಉತ್ತರ ಅಥವಾ ಪೂರ್ವವೆಂದು ಪರಿಗಣಿಸುತ್ತಾರೆ. ಆದರೆ ಕೆಲವು ಬಾರಿ ವ್ಯಕ್ತಿಯ ವೈಯಕ್ತಿಕ ಶುಭ ದಿನಕ್ಕೆ ದಕ್ಷಿಣ ಅಥವಾ ಪಶ್ಚಿಮವು ಆಗಿರುತ್ತದೆ. ಆದ್ದರಿಂದ ವೈಯಕ್ತಿಕ ಶುಭ ದಿಕ್ಕನ್ನು ಅಳವಡಿಸಿಕೊಳ್ಳುವುದು ಶುಭಕರ. ವಿದ್ಯಾಭ್ಯಾಸ ಸ್ವದೇಶದಲ್ಲೋ ಅಥವಾ ವಿದೇಶದಲ್ಲೋ ಎನ್ನುವ ಸಂಗತಿಯನ್ನು ಸಹ ಜ್ಯೋತಿಷಶಾಸ್ತ್ರ ತಿಳಿಸುತ್ತದೆ. ಆದ್ದರಿಂದ ಎಸ್ಸೆಸ್ಸೆಲ್ಸಿ ಮುಗಿಸಿ ಪಿಯುಸಿ, ಡಿಪ್ಲೊಮಾ, ಜೆಒಸಿ ಇತರೆ ಕೋರ್ಸ್‌ಗಳಿಗೆ ಹೋಗುವ ಮೊದಲು ವಿಜ್ಞಾನ, ವಾಣಿಜ್ಯ ಮತ್ತು ಕಲಾ ವಿಭಾಗವನ್ನು ಜ್ಯೋತಿಷಶಾಸ್ತ್ರ ಪ್ರಕಾರ ಆಯ್ಕೆ ಮಾಡಿಕೊಳ್ಳುವುದು ಸೂಕ್ತ. ಯಾವುದೇ ವಿಷಯದಲ್ಲಾದರೂ ಜ್ಯೋತಿಷಶಾಸ್ತ್ರದ ಸೂಚನೆಯಂತೆ ಉನ್ನತ ವಿದ್ಯಾಭ್ಯಾಸವನ್ನು ಮುಂದುವರಿಸಿಕೊಂಡು ಹೋಗುವುದು ಸರಿಯಾದ ಕ್ರಮ. ರಾಶಿಗೆ ಅನುಗುಣವಾಗಿ ವಿದ್ಯೆಯ ಆಯ್ಕೆ ಜ್ಯೋತಿಷ್ಯಶಾಸ್ತ್ರದ ಪ್ರಕಾರ ಅವರವರ ರಾಶಿ ಪ್ರಕಾರ ವಿದ್ಯಾಭ್ಯಾಸವನ್ನು ಆಯ್ಕೆ ಮಾಡಿಕೊಂಡು ಮುಂದುವರಿದರೆ ಆ ವಿದ್ಯೆ ಆತನಿಗೆ ಅಥವಾ ಆಕೆಗೆ ಹೆಚ್ಚಿನ ಫಲಕಾರಿ ಕೊಡುತ್ತವೆ. ಯಾವ ರಾಶಿಗೆ ಯಾವ ಕೋರ್ಸ್‌ ಸೂಕ್ತ ಎಂಬ ವಿವರ ಇಲ್ಲಿದೆ. ಮೇಷ: ಈ ರಾಶಿಯ ಅಧಿಪತಿ ಕುಜ. ಇದು ಅಗ್ನಿತತ್ವ ರಾಶಿ. ಇವರು ಭೂಗರ್ಭಶಾಸ್ತ್ರ, ಖಗೋಳಶಾಸ್ತ್ರ, ಕಂಪ್ಯೂಟರ್‌, ಬಣ್ಣಗಳ ತರಬೇತಿ, ಇತಿಹಾಸ ವಿಷಯವನ್ನು ಆರಿಸಿಕೊಳ್ಳಬಹುದು. ವೃಷಭ:ಈ ರಾಶಿಯ ಅಧಿಪತಿ ಶುಕ್ರ. ಇದು ಭೂತತ್ವ ರಾಶಿ. ಇವರು ಫ್ಯಾಷನ್‌ ಡಿಸೈನಿಂಗ್‌, ಡಿಪ್ಲೊಮಾ ಅಥವಾ ಎಂಜಿನಿಯರಿಂಗ್‌, ಇಂಟೀರಿಯರ್‌ ಡಿಸೈನಿಂಗ್‌, ಡಿಪ್ಲೊಮಾ, ಕಾಲ್‌ಸೆಂಟರ್‌, ಜರ್ನಲಿಸಂ, ವಿಜ್ಞಾನ (ಸಸ್ಯ) ವಿಭಾಗ, ವೈದ್ಯಕೀಯ ವಿಭಾಗವನ್ನು ಆರಿಸಿಕೊಳ್ಳಬಹುದು. ಮಿಥುನ: ಈ ರಾಶಿಯ ಅಧಿಪತಿ ಬುಧ. ಇದು ವಾಯುತತ್ವ ರಾಶಿ. ಲೆಕ್ಕಪತ್ರಗಳ ಬಗ್ಗೆ, ಬಿಸ್ನೆಸ್‌ ಮ್ಯಾನೇಜ್ಮೆಂಟ್‌, ಎಂಕಾಂ, ಬಿಎಡ್‌, ಜರ್ನಲಿಸಂ, ಗಗನಸಖಿ, ವಿಮಾನಯಾನ ವಿಭಾಗವನ್ನು ಆರಿಸಿಕೊಳ್ಳಬಹುದು. ಕಟಕ:ಈ ರಾಶಿಯ ಅಧಿಪತಿ ಚಂದ್ರ. ಇದು ಜಲತತ್ವ ರಾಶಿ. ಸಮುದ್ರಯಾನ ತರಬೇತಿ, ಜಲ ಸಂಶೋಧನೆ, ಫ್ಯಾಷನ್‌ ಡಿಸೈನರ್‌, ವಿಜ್ಞಾನದ ವಿಭಾಗ, ಟಿಸಿಎಚ್‌, ಬಿಎಡ್‌, ಹೋಟೆಲ್‌ ಮ್ಯಾನೇಜ್ಮೆಂಟ್‌ ವಿಭಾಗವನ್ನು ಆರಿಸಿಕೊಳ್ಳಬಹುದು. ಸಿಂಹ:ಈ ರಾಶಿಯ ಅಧಿಪತಿ ರವಿ ಗ್ರಹ. ಇದು ಅಗ್ನಿತತ್ವ ರಾಶಿ. ರಾಜಕೀಯಶಾಸ್ತ್ರ, ಗಣಕಶಾಸ್ತ್ರ, ಸಿನಿಮಾ ರಂಗ, ಖಗೋಳಶಾಸ್ತ್ರ, ಮಾಹಿತಿ ತಂತ್ರಜ್ಞಾನ, ವೃತ್ತಿಪರ ಕೋರ್ಸ್‌, ಪಬ್ಲಿಕ್‌ ರಿಲೇಷನ್‌ ಮ್ಯಾನೇಜ್ಮೆಂಟ್‌ ವಿಭಾಗವನ್ನು ಆರಿಸಿಕೊಳ್ಳಬಹುದು. ಕನ್ಯಾ:ಈ ರಾಶಿಯ ಅಧಿಪತಿ ಬುಧ. ಇದು ಭೂತತ್ವ ರಾಶಿ. ವಾದ ವಿವಾದ ತರಬೇತಿ, ಭೌತಶಾಸ್ತ್ರ, ಸಂಶೋಧನೆ, ನಾಟ್ಯ, ಚಲನಚಿತ್ರ, ಬಿಸ್ನೆಸ್‌ ಮ್ಯಾನೇಜ್ಮೆಂಟ್‌, ಬಿಕಾಂ, ಸಿಎ, ಸಾಫ್ಟ್‌ವೇರ್‌ ವಿಭಾಗವನ್ನು ಆರಿಸಿಕೊಳ್ಳಬಹುದು. ತುಲಾ:ಈ ರಾಶಿಯ ಅಧಿಪತಿ ಶುಕ್ರ. ಇದು ವಾಯುತತ್ವ ರಾಶಿ. ಹೋಟೆಲ್‌ ಮ್ಯಾನೇಜ್ಮೆಂಟ್‌, ಗಣಕಶಾಸ್ತ್ರ, ಕಲಾರಂಗ, ಚಿತ್ರಕಲೆ, ಸಸ್ಯ ವಿಜ್ಞಾನ, ಮಲ್ಟಿ ಮೀಡಿಯಾ ಕೋರ್ಸ್‌, ಗ್ರಾಫಿಕ್‌ ಡಿಸೈನರ್‌ ವಿಭಾಗವನ್ನು ಆರಿಸಿಕೊಳ್ಳಬಹುದು. ವೃಶ್ಚಿಕ:ಈ ರಾಶಿಯ ಅಧಿಪತಿ ಕುಜ. ಇದು ಜಲತತ್ವ ರಾಶಿ. ಆರ್ಕಿಟೆಕ್‌, ರಸಾಯನಶಾಸ್ತ್ರ, ರಾಜಕೀಯ ಸಂಬಂಧ ವಿದ್ಯೆ, ಖನಿಜಶಾಸ್ತ್ರ, ಕಾಲ್‌ ಸೆಂಟರ್‌, ವಿದೇಶಿ ಭಾಷೆ ಕಲಿಕೆ, ಹಾರ್ಡ್‌ವೇರ್‌ ವಿಭಾಗವನ್ನು ಆರಿಸಿಕೊಳ್ಳಬಹುದು. ಧನಸ್ಸು:ಈ ರಾಶಿಯ ಅಧಿಪತಿ ಗುರು. ಇದು ಅಗ್ನಿತತ್ವ ರಾಶಿ. ಉಪನ್ಯಾಸ, ಜ್ಯೋತಿಷ, ಮಂತ್ರಶಾಸ್ತ್ರ, ಗಣಿತಶಾಸ್ತ್ರ, ತಾಂತ್ರಿಕ ವಿದ್ಯೆ, ವಾಯುಯಾನ, ಸೈನಿಕ ವಿಭಾಗ, ಸಾಫ್ಟ್‌ವೇರ್‌ ವಿದ್ಯೆ ವಿಭಾಗವನ್ನು ಆರಿಸಿಕೊಳ್ಳಬಹುದು. ಮಕರ:ಈ ರಾಶಿಯ ಅಧಿಪತಿ ಶನಿ. ಇದು ಭೂತತ್ವ ರಾಶಿ. ರಹಸ್ಯ ವಿದ್ಯೆ, ವಾಹನ ವಿದ್ಯೆ, ಖಗೋಳಶಾಸ್ತ್ರ, ರಾಸಾಯನಿಕ, ಮಲ್ಟಿ ಮೀಡಿಯಾ ಕೋರ್ಸ್‌, ಕೈಗಾರಿಕಾ ತರಬೇತಿ, ಚರ್ಮಕ್ಕೆ ಸಂಬಂಧಪಟ್ಟ ವಿದ್ಯೆ, ವೈದ್ಯಕೀಯ ವಿಭಾಗವನ್ನು ಆರಿಸಿಕೊಳ್ಳಬಹುದು. ಕುಂಭ:ಈ ರಾಶಿಯ ಅಧಿಪತಿ ಶನಿ. ಇದು ವಾಯುತತ್ವ ರಾಶಿ. ತರ್ಕಶಾಸ್ತ್ರ, ಜರ್ನಲಿಸಂ, ಲೈಬ್ರರಿಯನ್‌, ಸೈನಿಕ ವಿಭಾಗ, ಕಲಾ ವಿಭಾಗ, ಸಂಶೋಧನೆ, ಶಿಕ್ಷ ಣ ವಿದ್ಯೆ ವಿಭಾಗವನ್ನು ಆರಿಸಿಕೊಳ್ಳಬಹುದು. ಮೀನ:ಈ ರಾಶಿಯ ಅಧಿಪತಿ ಗುರು. ಇದು ಜಲತತ್ವ ರಾಶಿ. ವಾಯುಯಾನ, ಉಪನ್ಯಾಸ, ಪಿ.ಟಿ ಟೀಚರ್‌, ಸಿನಿಮಾ ರಂಗ, ಹೋಟೆಲ್‌ ಮ್ಯಾನೇಜ್ಮೆಂಟ್‌, ಮೆಡಿಕಲ್‌, ಎಂಜಿನಿಯರಿಂಗ್‌, ಸಾಫ್ಟ್‌ವೇರ್‌, ಈವೆಂಟ್‌ ಮ್ಯಾನೇಜ್ಮೆಂಟ್‌, ಡಿಪ್ಲೊಮಾ, ಜರ್ನಲಿಸಂ ಉಪನ್ಯಾಸ, ವಿದೇಶಿ ಭಾಷೆ ಕಲಿಕೆ, ಡಿಸೈನರ್‌ ವಿಭಾಗವನ್ನು ಆರಿಸಿಕೊಳ್ಳಬಹುದು. ಜಾತಕದಲ್ಲಿ ವಿದ್ಯಾಪ್ರಾಪ್ತಿ ಯೋಗ ಒಂದು ಜಾತಕ ಕುಂಡಲಿಯಿಂದ ವ್ಯಕ್ತಿಯ ವಿದ್ವತ್ತು ಹಾಗೂ ಕಲ್ಪನಾ ಶಕ್ತಿಯನ್ನು ಬುದ್ದಿ ಹಾಗೂ ಶುಕ್ರನ ಸ್ಥಿತಿಯಿಂದ ವಿದ್ಯೆಯ ವಿಕಸನದ ವಿಮರ್ಶೆಯನ್ನು ಗುರುವಿನಿಂದ ಮಾಡಬಹುದು. ಹಾಗೂ ದ್ವಿತೀಯ ಭಾವದಿಂದ ವಿದ್ಯೆಯಲ್ಲಿ ನಿಪುಣತೆ, ಪ್ರವೀಣತೆಯನ್ನು ವಿಮರ್ಶಿಸಬಹುದು. ಚತುರ್ಥ ಸ್ಥಾನದಿಂದ ವಿದ್ಯೆಯ ಮತ್ತು ಪಂಚಮ ಸ್ಥಾನದಿಂದ ಬುದ್ಧಿಯ ವಿಮರ್ಶೆಯನ್ನು ಮಾಡಬಹುದು. ಲಗ್ನ, ಲಗ್ನಾಧಿಪತಿ ಹಾಗೂ ಚತುರ್ಥ, ಚತುರ್ಥಾಧಿಪತಿ ಪರಿವರ್ತನೆ ಹೊಂದಿದ್ದವರಿಗೆ ಉನ್ನತ ಶಿಕ್ಷಣ ಯೋಗವಿದೆ. ಲಗ್ನದಲ್ಲಿ ಗುರು, ಬುಧನಿದ್ದು ಅದರ ಮೇಲೆ ಪಾಪಗ್ರಹದ ದೃಷ್ಟಿ ಇರಬಾರದು. ಆಗ ಜಾತಕನಿಗೆ ಉನ್ನತ ಮಟ್ಟದ ಶಿಕ್ಷಣ ದೊರೆಯುತ್ತದೆ. ಒಂದು ವೇಳೆ ಬುಧ, ಗುರು, ಶುಕ್ರ ಜೊತೆಯಾಗಿ ನವಮದಲ್ಲಿದ್ದರೆ ಜಾತಕನಿಗೆ ಉನ್ನತ ಶಿಕ್ಷಣ ದೊರೆಯುತ್ತದೆ. ಬುಧ, ಗುರುವಿನೊಟ್ಟಿಗೆ ಶನಿಯು ನವಮದಲ್ಲಿದ್ದರೆ ಜಾತಕನು ವಿದ್ವಾಂಸನಾಗುತ್ತಾನೆ. ದ್ವಿತೀಯ, ತೃತೀಯ, ಚತುರ್ಥ ಮತ್ತು ನವಮ ಭಾವಗಳ ಸಂಬಂಧ ಬುಧನೊಟ್ಟಿಗೆ ಇದ್ದರೆ ಉನ್ನತ ಶಿಕ್ಷಣ ಪ್ರಾಪ್ತಿಯಾಗುತ್ತದೆ. ನವಮದಲ್ಲಿ ಶನಿ, ದ್ವಾದಶದಲ್ಲಿ ಸ್ಥಿತ ಆಧಾರದಿಂದ ಜ್ಞಾನ ವಿಚಾರ ಮಾಡಬಹುದು. ಜನ್ಮ ರಾಶಿ, ಜನ್ಮ ಲಗ್ನದಿಂದ ಪಂಚಮ ಸ್ಥಾನದ ಅಧಿಪತಿಯು ಬುಧ, ಗುರು ಅಥವಾ ಶುಕ್ರನ ಯುತಿಯಲ್ಲಿ ಕೇಂದ್ರ ತ್ರಿಕೋಣ ಅಥವಾ ಏಕಾದಶದಲ್ಲಿನ ಸ್ಥಿತಿಯಿಂದ ಜಾತಕನು ಯಾವ ಪ್ರಕಾರ ಶಿಕ್ಷಣದಲ್ಲಿ ಆಸಕ್ತಿ ಇರುವನು ಎಂದು ಹೇಳಬಹುದು. ಒಂದು ವೇಳೆ ಚತುರ್ಥ ಭಾವದ ಅಧಿಪತಿ ಆರು, ಎಂಟು, ಹನ್ನೆರಡನೇ ಭಾವದಲ್ಲಿದ್ದರೆ ಅಥವಾ ನೀಚ ರಾಶಿ ಸ್ಥಿತ, ಅಸ್ತ ಅಥವಾ ಶತ್ರುರಾಶಿ ಸ್ಥಿತನಾಗಿದ್ದರೆ ಅಥವಾ ಕಾರಕಗ್ರಹ ಪೀಡಿತನಾಗಿದ್ದರೆ ಜಾತಕನಿಗೆ ವಿದ್ಯಾಭ್ಯಾಸದಲ್ಲಿ ಆಸಕ್ತಿ ಇರುವುದಿಲ್ಲ. ಜನ್ಮ ಕುಂಡಲಿಯ ನವಮ ಭಾಗ ತ್ರಿಕೋಣ ಸ್ಥಾನವಾಗಿದ್ದು ಅದರ ಅಧಿಪತಿ ಗುರುವಾಗಿದ್ದರೆ ಆ ಜಾತಕನು ಉನ್ನತ ಶಿಕ್ಷಣ ಹಾಗೂ ಅದರ ಸ್ಥಿರತ್ವವನ್ನು ಪಡೆಯುತ್ತಾನೆ. ಒಂದು ವೇಳೆ ಇದರ ಸಂಬಂಧವು ಪಂಚಮ ಭಾವದೊಡನೆ ಆಗಿದ್ದರೆ ಜಾತಕನ ಶಿಕ್ಷಣ ಉನ್ನತ ಮಟ್ಟದಲ್ಲಿ ಇರುತ್ತದೆ. ದ್ವಿತೀಯ ಸ್ಥಾನಾಧಿಪತಿ ಗುರುವಿನ ಕೇಂದ್ರ ಅಥವಾ ತ್ರಿಕೋನದಲ್ಲಿ ಸ್ಥಿತನಾಗಿರುತ್ತದೆ. ಬುಧನು ಪಂಚಮದಲ್ಲಿ ಸ್ಥಿತನಾಗಿದ್ದರೆ ಅಥವಾ ಪಂಚಮ ಸ್ಥಾನವನ್ನು ದೃಷ್ಟಿಸುತ್ತಿದ್ದರೆ ಅಥವಾ ಗುರು ಮತ್ತು ಶುಕ್ರನ ಯುತಿ ಪಂಚಮಾಧಿಪತಿಯು ಪಂಚಮ ಭಾವದಲ್ಲಿ ಗುರು ಅಥವಾ ಶುಕ್ರನ ಜೊತೆ ಇರುತ್ತದೆ. ರಾಹುವಿನ ಮಹಾದೆಸೆ ಸಂದರ್ಭದಲ್ಲಿ ವಿದ್ಯಾಭ್ಯಾಸಕ್ಕೆ ಅಡೆತಡೆ ಉಂಟಾಗುತ್ತದೆ. ಕುಂಡಲಿಯಲ್ಲಿದೆ ವಿದ್ಯಾಭ್ಯಾಸ ಪ್ರತಿ ವರ್ಷ ಎಸ್ಸೆಸ್ಸೆಲ್ಸಿ ಹಾಗೂ ಪಿಯುಸಿ ವಿದ್ಯಾರ್ಥಿಗಳ ಫಲಿತಾಂಶ ಹೊರ ಬಂದಾಗ ಮಕ್ಕಳಿಗೆ ಯಾವ ವಿಭಾಗದ ವಿದ್ಯಾಭ್ಯಾಸ ಆಯ್ಕೆ ಮಾಡಿಕೊಳ್ಳಬೇಕೆಂಬ ಚಿಂತೆ. ಇತ್ತೀಚೆಗಂತೂ ಕಲಿಕೆಗೆ ಸಾಕಷ್ಟು ಕೋರ್ಸ್‌ಗಳು ಕೂಡ ಲಭ್ಯ ಇವೆ. ಆದರೆ ಜ್ಯೋತಿಷ್ಯಶಾಸ್ತ್ರದ ಪ್ರಕಾರ ಅವರವರ ರಾಶಿ ಪ್ರಕಾರ ವಿದ್ಯಾಭ್ಯಾಸವನ್ನು ಆಯ್ಕೆ ಮಾಡಿಕೊಂಡು ಮುಂದುವರಿದರೆ ಆ ವಿದ್ಯೆ ಆತನಿಗೆ ಅಥವಾ ಆಕೆಗೆ ಹೆಚ್ಚಿನ ಫಲಕಾರಿ ಕೊಡುತ್ತವೆ ಎಂದು ಒಂಬತ್ತು ಗ್ರಹಗಳಿಂದ ಹಾಗೂ ಗ್ರಹಕ್ಕೆ ತಕ್ಕಂತೆ ಗುರುತಿಸಬಹುದು. ಯಾವ ರಾಶಿಗೆ ಯಾವ ಕೋರ್ಸ್‌ ಸೂಕ್ತ ಎಂಬ ವಿವರ ಇಲ್ಲಿದೆ. ಮೇಷ: ಈ ರಾಶಿಯ ಅಧಿಪತಿ ಕುಜ. ಇದು ಅಗ್ನಿತತ್ವ ರಾಶಿ. ಈ ರಾಶಿಯವರು ಭೂಗರ್ಭಶಾಸ, ಖಗೋಳಶಾಸ, ಕಂಪ್ಯೂಟರ್‌, ಬಣ್ಣಗಳ ತರಬೇತಿ, ಇತಿಹಾಸ ವಿಷಯವನ್ನು ಆರಿಸಿಕೊಳ್ಳಬಹುದು. ವೃಷಭ:ಈ ರಾಶಿಯ ಅಧಿಪತಿ ಶುಕ್ರ. ಇದು ಭೂತತ್ವ ರಾಶಿ. ಈ ರಾಶಿಯವರು ಫ್ಯಾಷನ್‌ ಡಿಸೈನ್‌ನಿಂಗ್‌, ಡಿಪ್ಲೊಮಾ ಅಥವಾ ಎಂಜಿನಿಯರಿಂಗ್‌, ಇಂಟೀರಿಯರ್‌ ಡಿಸೈನಿಂಗ್‌, ಡಿಪ್ಲೊಮಾ, ಕಾಲ್‌ಸೆಂಟರ್‌, ಜರ್ನಲಿಸಂ, ವಿಜ್ಞಾನ (ಸಸ್ಯ) ವಿಭಾಗ, ವೈದ್ಯಕೀಯ ವಿಭಾಗವನ್ನು ಆರಿಸಿಕೊಳ್ಳಬಹುದು. ಮಿಥುನ: ಈ ರಾಶಿಯ ಅಧಿಪತಿ ಬುಧ. ಇದು ವಾಯುತತ್ವ ರಾಶಿ. ಲೆಕ್ಕಪತ್ರಗಳ ಬಗ್ಗೆ, ಬಿಸ್ನೆಸ್‌ ಮ್ಯಾನೇಜ್‌ಮೆಂಟ್‌, ಎಂಕಾಮ್‌, ಬಿಎಡ್‌, ಜರ್ನಲಿಸಂ, ಗಗನಸಖಿ, ವಿಮಾನಯಾನ ವಿಭಾಗವನ್ನು ಆರಿಸಿಕೊಳ್ಳಬಹುದು. ಕಟಕ:ಈ ರಾಶಿಯ ಅಧಿಪತಿ ಚಂದ್ರ. ಇದು ಜಲತತ್ವ ರಾಶಿ. ಸಮುದ್ರಯಾನ ತರಬೇತಿ, ಜಲ ಸಂಶೋಧನೆ, ಫ್ಯಾಷನ್‌ ಡಿಸೈನರ್‌, ವಿಜ್ಞಾನದ ವಿಭಾಗ, ಟಿಸಿಎಚ್‌, ಬಿಎಡ್‌, ಹೋಟೆಲ್‌ ಮ್ಯಾನೇಜ್‌ಮೆಂಟ್‌ ವಿಭಾಗವನ್ನು ಆರಿಸಿಕೊಳ್ಳಬಹುದು. ಸಿಂಹ:ಈ ರಾಶಿಯ ಅಧಿಪತಿ ರವಿ ಗ್ರಹ. ಇದು ಅಗ್ನಿತತ್ವ ರಾಶಿ. ರಾಜಕೀಯಶಾಸ, ಗಣಕಶಾಸ, ಸಿನಿಮಾ ರಂಗ, ಖಗೋಳಶಾಸ, ಮಾಹಿತಿ ತಂತ್ರಜ್ಞಾನ, ವೃತ್ತಿಪರ ಕೋರ್ಸ್‌, ಪಬ್ಲಿಕ್‌ ರಿಲೇಷನ್‌ ಮ್ಯಾನೇಜ್‌ಮೆಂಟ್‌ ವಿಭಾಗವನ್ನು ಆರಿಸಿಕೊಳ್ಳಬಹುದು. ಕನ್ಯಾ:ಈ ರಾಶಿಯ ಅಧಿಪತಿ ಬುಧ. ಇದು ಭೂತತ್ವ ರಾಶಿ. ವಾದ ವಿವಾದ ತರಬೇತಿ, ಭೌತಶಾಸ, ಸಂಶೋಧನೆ, ನಾಟ್ಯ, ಚಲನಚಿತ್ರ, ಬಿಸ್ನೆಸ್‌ ಮ್ಯಾನೇಜ್‌ಮೆಂಟ್‌, ಬಿಕಾಮ್‌, ಸಿಎ, ಸಾಫ್ಟ್‌ವೇರ್‌ ವಿಭಾಗವನ್ನು ಆರಿಸಿಕೊಳ್ಳಬಹುದು. ತುಲಾ:ಈ ರಾಶಿಯ ಅಧಿಪತಿ ಶುಕ್ರ. ಇದು ವಾಯುತತ್ವ ರಾಶಿ. ಹೋಟೆಲ್‌ ಮ್ಯಾನೇಜ್‌ಮೆಂಟ್‌, ಗಣಕಶಾಸ, ಕಲಾರಂಗ, ಚಿತ್ರಕಲೆ, ಸಸ್ಯ ವಿಜ್ಞಾನ, ಮಲ್ಟಿ ಮೀಡಿಯಾ ಕೋರ್ಸ್‌, ಗ್ರಾಫಿಕ್‌ ಡಿಸೈನರ್‌ ವಿಭಾಗವನ್ನು ಆರಿಸಿಕೊಳ್ಳಬಹುದು. ವೃಶ್ಚಿಕ:ಈ ರಾಶಿಯ ಅಧಿಪತಿ ಕುಜ. ಇದು ಜಲತತ್ವ ರಾಶಿ. ಆರ್ಕಿಟೆಕ್‌, ರಸಾಯನಶಾಸ, ರಾಜಕೀಯ ಸಂಬಂಧ ವಿದ್ಯೆ, ಖನಿಜಶಾಸ, ಕಾಲ್‌ಸೆಂಟರ್‌, ವಿದೇಶಿ ಭಾಷೆ ಕಲಿಕೆ, ಹಾರ್ಡ್‌ವೇರ್‌ ವಿಭಾಗವನ್ನು ಆರಿಸಿಕೊಳ್ಳಬಹುದು. ಧನಸ್ಸು:ಈ ರಾಶಿಯ ಅಧಿಪತಿ ಗುರು. ಇದು ಅಗ್ನಿತತ್ವ ರಾಶಿ. ಉಪನ್ಯಾಸ, ಜ್ಯೋತಿಷ, ಮಂತ್ರಶಾಸ, ಗಣಿತಶಾಸ, ತಾಂತ್ರಿಕ ವಿದ್ಯೆ, ವಾಯುಯಾನ, ಸೈನಿಕ ವಿಭಾಗ, ಸಾಫ್ಟ್‌ವೇರ್‌ ವಿದ್ಯೆ ವಿಭಾಗವನ್ನು ಆರಿಸಿಕೊಳ್ಳಬಹುದು. ಮಕರ:ಈ ರಾಶಿಯ ಅಧಿಪತಿ ಶನಿ. ಇದು ಭೂತತ್ವ ರಾಶಿ. ರಹಸ್ಯ ವಿದ್ಯೆ, ವಾಹನ ವಿದ್ಯೆ, ಖಗೋಳಶಾಸ, ರಾಸಾಯನಿಕ, ಮಲ್ಟಿ ಮೀಡಿಯಾ ಕೋರ್ಸ್‌, ಕೈಗಾರಿಕಾ ತರಬೇತಿ, ಚರ್ಮಕ್ಕೆ ಸಂಬಂಧಪಟ್ಟ ವಿದ್ಯೆ, ವೈದ್ಯಕೀಯ ವಿಭಾಗವನ್ನು ಆರಿಸಿಕೊಳ್ಳಬಹುದು. ಕುಂಭ:ಈ ರಾಶಿಯ ಅಧಿಪತಿ ಶನಿ. ಇದು ವಾಯುತತ್ವ ರಾಶಿ. ತರ್ಕಶಾಸ, ಜರ್ನಲಿಸಂ, ಲೈಬ್ರರಿಯನ್‌, ಸೈನಿಕ ವಿಭಾಗ, ಕಲಾ ವಿಭಾಗ, ಸಂಶೋಧನೆ, ಶಿಕ್ಷಣ ವಿದ್ಯೆ ವಿಭಾಗವನ್ನು ಆರಿಸಿಕೊಳ್ಳಬಹುದು. ಮೀನ:ಈ ರಾಶಿಯ ಅಧಿಪತಿ ಗುರು. ಇದು ಜಲತತ್ವ ರಾಶಿ. ವಾಯುಯಾನ, ಉಪನ್ಯಾಸ, ಪಿ.ಟಿ ಟೀಚರ್‌, ಸಿನಿಮಾ ರಂಗ, ಹೋಟೆಲ್‌ ಮ್ಯಾನೇಜ್‌ಮೆಂಟ್‌, ಮೆಡಿಕಲ್‌, ಎಂಜಿನಿಯರಿಂಗ್‌, ಸಾಫ್ಟ್‌ವೇರ್‌, ಈವೆಂಟ್‌ ಮ್ಯಾನೇಜ್‌ಮೆಂಟ್‌, ಡಿಪ್ಲೊಮಾ, ಜರ್ನಲಿಸಂ ಉಪನ್ಯಾಸ, ವಿದೇಶಿ ಭಾಷೆ ಕಲಿಕೆ, ಡಿಸೈನರ್‌ ವಿಭಾಗವನ್ನು ಆರಿಸಿಕೊಳ್ಳಬಹುದು. ಜನ್ಮಕುಂಡಲಿ ಆಧರಿಸಿ ಯಾರಿಗೆ ಯಾವ ಕೋರ್ಸ್ ಸೂಕ್ತ ಯಾವುದೇ ವ್ಯಕ್ತಿಯ ಶಿಕ್ಷಣ, ಪಾಂಡಿತ್ಯ, ವಿದ್ವತ್‌ ವಿಚಾರಗಳನ್ನು ಆತನ ಜನ್ಮಕುಂಡಲಿಯ ದ್ವಿತೀಯ, ಚತುರ್ಥ, ಪಂಚಮ ಭಾವಗಳಿಂದ ವಿಮರ್ಶಿಸಲಾಗುತ್ತದೆ. ದ್ವಿತೀಯ ಭಾವದಿಂದ ವಾಣಿ ಅಥವಾ ವಾಕ್‌ ಮತ್ತು ಅಭಿವ್ಯಕ್ತ ಸಾಮರ್ಥ್ಯ‌ವನ್ನು ಅರಿಯಬಹುದು. ದ್ವಿತೀಯ ಭಾವವು ಜಾತಕನ ಪ್ರಾರಂಭಿಕ ವಿದ್ಯಾಭ್ಯಾಸದ ಪ್ರಗತಿ ಹಾಗೂ ಬುದ್ಧಿಮತ್ತೆಯ ದ್ಯೋತಕವೆನಿಸಿದೆ. ಚತುರ್ಥ ಭಾವವು ಗ್ರಹಣ ಶಕ್ತಿ, ವಿಶ್ವವಿದ್ಯಾಲಯ ಮಟ್ಟ ಹಾಗೂ ಪಂಚಮ ಭಾವ ಅದಕ್ಕೂ ಮುಂದಿನ ಜ್ಞಾನಪ್ರಾಪ್ತಿಯನ್ನು ಸೂಚಿಸುವ ಭಾವವಾಗಿದೆ. ಜೊತೆಗೆ ಅಧ್ಯಾತ್ಮ, ಅಂತರ್‌‍ಜ್ಞಾನಕ್ಕೂ ಇದು ಕಾರಣೀಭೂತವಾಗುತ್ತದೆ. ಚತುರ್ಥ ಭಾವ ಸುಖಸ್ಥಾನವಾಗಿದೆ. ಆದ್ದರಿಂದ ಜಾತಕನಿಗೆ ವಿದ್ಯಾರ್ಜನೆಯಿಂದ ಐಹಿಕ ಸುಖ ಹಾಗೂ ಖ್ಯಾತಿ ದೊರೆಯುತ್ತದೆ. ಚತುರ್ಥ ಸ್ಥಾನ ವಿದ್ಯಾಸ್ಥಾನವಾಗಿದೆ. ಇದರ ಭಾವಾಧಿಪತಿಯೂ ಇದರ ಭಾವಸ್ಥಿತ ಗ್ರಹನೂ ದಶಮಭಾವವನ್ನು ಸಂಪೂರ್ಣ ದೃಷ್ಟಿಯಿಂದ ನೋಡುವುದರ ಫಲ ಸ್ವರೂಪವಾಗಿ ಅದು ವೃತ್ತಿ ಅಥವಾ ಕರ್ಮದ ಗ್ರಹ ಚತುರ್ಥವನ್ನು ಸಂಪೂರ್ಣ ದೃಷ್ಟಿಯಿಂದ ನೋಡುವುದರಿಂದ ಶಿಕ್ಷಣದ ವಿಷಯ ಪ್ರಭಾವಿತವಾಗುತ್ತದೆ. ಆದ್ದರಿಂದ ವಿದ್ಯೆಯ ವಿಷಯವನ್ನು ಆಯ್ಕೆ ಮಾಡುವಾಗ ದಶಮಭಾವ ಸ್ಥಿತ ಗ್ರಹವನ್ನು ಪ್ರಗತಿ ಹಾಗೂ ವೃದ್ಧಿಗೆ ವಿದ್ಯಾಸ್ಥಾನಾಧಿಪತಿಯ ಸಹಕಾರ, ಕೃಪಾಗ್ರಹಗಳಿರುವುದು, ಆ ಗ್ರಹನಿಗೆ ಸ್ವಕ್ಷೇತ್ರವೆನಿಸುವುದು, ಮೂಲ ತ್ರಿಕೋಣ ಸ್ಥಿತಿ, ವರ್ಗೋತ್ತಮ ನವಾಂಶಸ್ಥಿತ ಗ್ರಹರು ಬಲಿಷ್ಠರೆನಿಸುತ್ತಾರೆ. ಅಂತಹ ಗ್ರಹಗಳು ಶುಭಸ್ಥಾನದಲ್ಲಿದ್ದರೆ ಶುಭಗ್ರಹದ ದೃಷ್ಟಿಗೆ ಒಳಪಟ್ಟರೆ, ಶುಭ ಫಲಗಳನ್ನು ನೀಡಲು ಸಮರ್ಥನಾಗಿರುತ್ತಾನೆ. ಆಧುನಿಕ ಕಾಲಮಾನಕ್ಕೆ ತಕ್ಕಂತೆ ಜ್ಯೋತಿಷ್ಯದ ಮಾನದಂಡದ ಪ್ರಕಾರ ಮೇಷ, ವೃಶ್ಚಿಕ, ಮಕರ, ಕುಂಭ ಮತ್ತು ಕಟಕ ಲಗ್ನ ಜಾತಕರಿಗೆ ಕುಜಗ್ರಹ ಉಚ್ಛನಾಗಿದ್ದು ಸ್ವಗೃಹೀಯವಾಗಿ ಬಂದಲ್ಲಿ ಇಂಜಿನಿಯರಿಂಗ್‌ನ ಯಾವುದೇ ಕ್ಷೇತ್ರವನ್ನು ಆಯ್ಕೆ ಮಾಡಿಕೊಳ್ಳಬಹುದು. ರವಿ ಯುತಿಯಲ್ಲಿ ಬಂದಲ್ಲಿ ಚಿಕಿತ್ಸಾ ಕ್ಷೇತ್ರ, ಕುಜ-ಬುಧ ಯುತಿ ಇದ್ದರೆ ಎಲೆಕ್ಟ್ರಾನಿಕ್ಸ್‌, ಕಂಪ್ಯೂಟರ್ಸ್‌, ಕುಜ-ಚಂದ್ರ ಯುತಿ ಇದ್ದರೆ ಆರ್ಕಿಟೆಕ್ಚರ್‌, ಔಷಧಿ ತಯಾರಿಕೆ, ಕುಜ-ಶನಿ ಯುತಿ ಇದ್ದರೆ ಮೆಕ್ಯಾನಿಕಲ್‌, ಆಟೋಮೊಬೈಲ್‌ ಇಂಜಿನಿಯರಿಂಗ್‌ ವಿಷಯವನ್ನು ಆಯ್ಕೆ ಮಾಡಿಕೊಳ್ಳುವುದು ಒಳ್ಳೆಯದು. ಜನ್ಮ ಲಗ್ನ, ಕೇಂದ್ರ ತ್ರಿಕೋಣಗಳಲ್ಲಿ ರವಿ-ಶುಕ್ರ ಯುತಿ ಉಂಟಾದಲ್ಲಿ ವೈದ್ಯಕೀಯ ವ್ಯಾಸಂಗ ಉತ್ತಮವೆನಿಸುತ್ತದೆ. ಮಿಥುನ, ಕಟಕ, ಸಿಂಹ, ಕನ್ಯಾ, ತುಲಾ ಮತ್ತು ಕುಂಭ ಲಗ್ನಗಳಲ್ಲಿ ಜನಿಸಿದವರು ವಾಣಿಜ್ಯ ಕ್ಷೇತ್ರದಲ್ಲಿ ಸಫಲರೆನಿಸುತ್ತಾರೆ. ಇದಕ್ಕೆ ಬುಧ, ಶುಕ್ರ, ಶನಿಗ್ರಹಗಳು ಬಲಿಷ್ಠರಾಗಿರಬೇಕು. ಈ ಗ್ರಹಗಳಿಗೆ ಪರಸ್ಪರ ಸಂಬಂಧ ಉಂಟಾದರೆ ಅಧಿಕ ಸಫಲತೆ ದೊರೆಯುತ್ತದೆ. ಕರಿಯರ್‌ ಗೈಡ್‌ ರವಿ : ರಾಜನೀತಿ ಶಾಸ್ತ್ರ, ಪ್ರಶಾಸನ, ರಾಜಭಾಷೆ, ಚಿಕಿತ್ಸಾ, ಶರೀರ ವಿಜ್ಞಾನ. ಚಂದ್ರ : ಮನೋವಿಜ್ಞಾನ, ವನಸ್ಪತಿ ವಿಜ್ಞಾನ, ನಿಸರ್ಗ ಶಾಸ್ತ್ರ, ಹೋಟೆಲ್‌ ಮ್ಯಾನೇಜ್‌ಮೆಂಟ್‌, ಪತ್ರಿಕೋದ್ಯಮ. ಕುಜ : ಭೂಗೋಳ ಶಾಸ್ತ್ರ, ಖನಿಜ ಶಾಸ್ತ್ರ, ಇತಿಹಾಸ, ಇಂಜಿನಿಯರಿಂಗ್‌, ಐಪಿಎಸ್‌, ಆರ್ಕಿಟೆಕ್ಚರ್‌. ಬುಧ : ಗಣಿತಶಾಸ್ತ್ರ, ವ್ಯಾಕರಣ, ಅಕೌಂಟೆನ್ಸಿ, ಸಿ.ಎ., ಸಂಖ್ಯಾಶಾಸ್ತ್ರ. ಗುರು : ಅರ್ಥಶಾಸ್ತ್ರ, ಸಾಹಿತ್ಯ, ಉಚ್ಛ ಶಿಕ್ಷಣಗಳಾದ ಎಂ.ಲಿಟ್‌, ಡಿ.ಲಿಟ್‌, ಪಿಎಚ್‌ಡಿ. ಶುಕ್ಲ : ಲಲಿತಕಲೆ, ಫ್ಯಾಷನ್‌ ಡಿಸೈನಿಂಗ್‌, ಬ್ಯೂಟೀಷಿಯನ್‌, ಸಾಹಿತ್ಯ. ಶನಿ :ಯಂತ್ರಶಾಸ್ತ್ರ, ಸಿವಿಲ್‌ ಇಂಜಿನಿಯರಿಂಗ್‌, ಮುದ್ರಣಾಲಯ ಜ್ಞಾನ. ರಾಹು : ಕಂಪ್ಯೂಟರ್‌ ವಿಜ್ಞಾನ, ತರ್ಕಶಾಸ್ತ್ರ, ಹಿಪ್ನಾಟಿಸಂ, ಮೆಸ್ಮರಿಸಂ. ಕೇತು : ಅಧ್ಯಾತ್ಮ, ಯಂತ್ರ-ಮಂತ್ರ-ತಂತ್ರ, ವೈಜ್ಞಾನಿಕ ಸಂಶೋಧನೆ.

ಕುಂಡಲಿಯಲ್ಲಿ ಪ್ರೀತಿ, ಪ್ರೇಮದ ವಿಚಾರ

ಜೀವನದಲ್ಲಿ ತಂದೆ ತಾಯಿಗಳ ಪ್ರೀತಿ ಬೇರೆ, ಅಣ್ಣ ತಮ್ಮಂದಿರ ಪ್ರೀತಿ ಬೇರೆ. ಗೆಳೆತನದ ಪ್ರೀತಿ ವಿಶ್ವಾಸ ಬೇರೆ. ಸತಿಪತಿಗಳ ವಿಚಾರದಲ್ಲಿನ ಪ್ರೀತಿಯ ಬಗೆಯೇ ಬೇರೆ. ಇಲ್ಲಿಂದಾಚೆಗೆ ಸಲ್ಲುವ ಪ್ರೀತಿಗಳೂ ಬೇರೆ ಬೇರೆ. ಮದುವೆಗಿಂತ ಮುಂಚಿನ ಸಂಬಂಧ, ಮದುವೆಯ ನಂತರದ ಸಂಬಂಧ, ಜೀವನದಲ್ಲಿ ದಾರಿ ತಪ್ಪಿ ನಡೆಯುವ ಲೈಂಗಿಕ ವಿಚಾರ ಇತ್ಯಾದಿ ಎಲ್ಲವೂ ಬಗೆಬಗೆಯ ವಿಧಾನಗಳಿಂದಾಗಿ ವಿಚಿತ್ರವಾದ ಸಂಗತಿಗಳನ್ನು ಹೊರಚೆಲ್ಲುತ್ತಿರುತ್ತವೆ. ಕೆಲವರಿಗೆ ಸಲಿಂಗ ಪ್ರೇಮವೇ ಅನನ್ಯವಾದುದು. ಉಭಯ ರೀತಿಯ ಪ್ರೇಮ ವ್ಯವಹಾರಗಳಲ್ಲಿ ತೊಡಗಿಕೊಂಡವರೂ ಇದ್ದಾರೆ. ಯಾಕೆ ಮದುವೆಗಳು ಭದ್ರವಾಗುವುದು ಅಪರೂಪ? ಮದುವೆ ಎನ್ನುವುದು ಮಾನವನ ಜೀವನದಲ್ಲಿ ಉದಯವಾದ ವಿಧವಿಧವಾದ ನಾಗರಿಕತೆಗಳು ಬೆಳೆದಾದ ಮೇಲೆ ಹುಟ್ಟಿಕೊಂಡ ಸಂಸ್ಕಾರ. ಒಂದು ಗಂಡು ಜೀವನದ ಸಂದರ್ಭದಲ್ಲಿ ಮಧುರವಾದ ಜೀವನವನ್ನು ಪ್ರಾರಂಭಿಸಲು ಮಂಗಲಕಾರ್ಯದ ಚೌಕಟ್ಟಿನಲ್ಲಿ ಹೆಣ್ಣುಗಂಡುಗಳನ್ನು ಅಧಿಕೃತವಾಗಿ ಒಗ್ಗೂಡಿಸುವ ವಿಧಾನವೇ ಮದುವೆ. ಇಲ್ಲಿ ಪ್ರತಿ ಹೆಣ್ಣಿನ, ಗಂಡಿನ ನಕ್ಷತ್ರರಾಶಿಗಳ ಹೊಂದಾಣಿಕೆ ಹಾಗೂ ಹೆಣ್ಣು ಗಂಡಿನ ಜಾತಕ ಕುಂಡಲಿಯಲ್ಲಿ ಕಳತ್ರ ಸ್ಥಾನಗಳ (ಬಾಳ ಸಂಗಾತಿ ಸ್ಥಾನಗಳ) ಬಲಾಬಲಗಳ ಮೇಲಿಂದ ಮದುವೆ ಎಂಬ ಬಾಳಿನ ಮಧುರ ಪಲ್ಲವಿಯನ್ನು ಪ್ರಾರಂಭಿಸಬೇಕಾಗುತ್ತದೆ. ಶುಕ್ರ ಹಾಗೂ ಕುಜರು ತಂತಮ್ಮ ಶಕ್ತಿ ಹಾಗೂ ವಿನಾಶಕ ಶಕ್ತಿಯನ್ನು ಒಬ್ಬನ ಅಥವಾ ಒಬ್ಬಳ ಜಾತಕದಲ್ಲಿ ಸಕಾರಾತ್ಮಕವಾಗಿ ಮಿಡಿಸುವಂತಾದರೆ ಮದುವೆಯ ಬಂಧಕ್ಕೆ ಅನನ್ಯತೆಯ ಸಿದ್ಧಿ ದೊರಕುತ್ತದೆ. ಆದರೆ ಕಳತ್ರ ಸ್ಥಾನದ ಶಕ್ತಿ ಒದಗುವುದು, ಕುಜ ಅಥವಾ ಶುಕ್ರರು ದೋಷಕರಾಗದೇ ಇರುವುದು, ನಕ್ಷತ್ರ ಹಾಗೂ ರಾಶಿಗಳು ಹೆಣ್ಣು ಗಂಡಿನ ಸಂಬಂಧವಾಗಿ ಮುಕ್ತವಾಗಿ ಕೂಡಿ ಬರುವುದು ಸುಲಭದ ಮಾತಲ್ಲ. ಕಷ್ಟದ ವಿಚಾರವಿದು. ಹೆಣ್ಣು ಗಂಡಿನ ಹೊಂದಾಣಿಕೆ ಹಾಗೂ ಆಯ್ಕೆಗಳು ಸ್ವರ್ಗಭಾಗ್ಯ ಸಿದ್ಧಿಯೇ? ಸಾಮಾನ್ಯವಾಗಿ ಮದುವೆಗಳು ಸ್ವರ್ಗದಲ್ಲಿ ನಿಶ್ಚಯಿಸಲ್ಪಟ್ಟಿರುತ್ತವೆ ಎಂಬ ಮಾತಿದೆ. ನಮ್ಮ ಜೀವನದಲ್ಲಿ ಈ ಮಾತು ಹೌದು ಎಂಬುದನ್ನು ಯಾರೇ ಆಗಲಿ ಒಪ್ಪಿಕೊಳ್ಳಬೇಕು. ಸಿನಿಮಾ ಜೀವನ ಯಾರಿಗೂ ಆದರ್ಶವಾಗಬಾರದು. ಆದರೂ ಉದಾಹರಣೆಗೆ ಸಿನಿಮಾರಂಗದ ವಿಚಾರವನ್ನು ನಾವು ವಿಶ್ಲೇಷಿಸಲೇಬೇಕು. ಸಿನಿಮಾ ವಲಯದಲ್ಲಿ ಯಾರು ಯಾರನ್ನೋ ಮದುವೆಯಾಗುವ ವಿಚಾರವನ್ನು ನಾವು ಕೇಳುತ್ತಿರುತ್ತೇವೆ. ಆದರೆ, ನಂಬಿದ ವಿಚಾರವೇ ಬೇರಾಗಿ, ಒಬ್ಬ ಇನ್ನೊಬ್ಬಳಾÂರನ್ನೋ, ಒಬ್ಬಳು ಇನ್ಯಾರೋ ಒಬ್ಬನನ್ನು ವರಿಸುತ್ತಾರೆ. ಇದಕ್ಕೆ ನೂರಾರು ಉದಾಹರಣೆಗಳನ್ನು ಕೊಡಬಹುದು. ತಿಳಿದದ್ದು ಬೇರೆ ಕತೆ ಇರುತ್ತದೆ. ನಿಜವಾದ ಕತೆ ಹೊಸ ತಿರುವಿಗೆ ಶೀಘ್ರವಾಗಿ ಬದಲಾಗಿ, ತಿಳಿದಿರುವ ಎರಡು ಜೀವಗಳು ಸತಿಪತಿಗಳಾಗಿ ಸಪ್ತಪದಿ ಎಣಿಸುತ್ತಾರೆ. ಜೇನುಗಣ್ಣಿನ ಹುಡುಗಿ ಐಶ್ವರ್ಯಾ ರೈ, ಅಭಿಷೇಕ್‌ ಬಚ್ಚನ್‌ನನ್ನು ಮದುವೆಯಾದದ್ದು ಐಶ್ವರ್ಯಾ ಹಾಗೂ ಅಭಿಷೇಕ್‌ ಬಚ್ಚನ್‌ರ ಮದುವೆಯ ವಿಚಾರವನ್ನು ವಿವರವಾಗಿ ವಿಶ್ಲೇಷಿಸಲಾರೆ. ವೈಯಕ್ತಿಕ ವಿಚಾರಗಳು ಇಲ್ಲಿ ಕಗ್ಗಂಟಾಗಿದೆ. ಅದೇನೇ ಇರಲಿ, ಐಶ್ವರ್ಯಾ ರೈ, ಬಚ್ಚನ್‌ ಕುಟುಂಬದ ಸೊಸೆಯಾದಳು. ಕರ್ನಾಟಕದ ಐಶ್ವರ್ಯಾ ಯಾರು? ಅಲಹಾಬಾದ್‌ ಮೂಲದ ಅಭಿಷೇಕ್‌ ಬಚ್ಚನ್‌ ಯಾರು? ಎತ್ತಣಿಂದೆತ್ತ ಸಂಬಂಧವಯ್ನಾ ಎಂಬ ಅಲ್ಲಮನ ಮಾತು ಇಲ್ಲಿ ನೆನಪಾಗದಿರದು. ಯಾರು ಸೋನಿಯಾ? ಯಾರು ರಾಜೀವ್‌ ಗಾಂಧಿ? ಆದರೂ ಅವರು ಸತಿಪತಿಗಳಾದರು. ಸ್ವತಃ ಸೋದರಮಾವನ, ಸೋದರತ್ತೆಯ ಮಕ್ಕಳು ಮದುವೆಯಾಗುತ್ತಾರೆ. ಇದೂ ಚೋದ್ಯವೇ. ಅಂತೂ ಸಲ್ಮಾನ್‌ ಖಾನ್‌ ಇನ್ನೂ ಒಬ್ಬ ಮಾತ್ರ ಅಧಿಕೃತ, ಅನೇಕ ಹುಡುಗಿಯರು ಮದುವೆಯಾಗಲು ಕಾತರದಲ್ಲಿರುವ ಬೇಡಿಕೆಯ ನಟ. ಸು#ರದ್ರೂಪಿ. ವಯಸ್ಸು ಈಗಾಗಲೇ 51 ನಿಜ. ಆದರೂ ಅವನನ್ನು ಮದುವೆಯಾಗಲು ಕ್ಯೂ ನಿಂತಿರುವವರಿಗೆ ಬರವಿಲ್ಲ. ಹೆಚ್ಚೇಕೆ, ನಮ್ಮ ರಾಹುಲ್‌ ಗಾಂಧಿ ಕೂಡ ಬಹುಬೇಡಿಕೆಯಲ್ಲಿರುವ ಯುವಕನೇ. ಇವರಿಗೆ ಈಗ 42 ವಯಸ್ಸು. 54 ವಯಸ್ಸಾದಾಗ ಖ್ಯಾತಿ ಪಡೆದ ಸಲ್ಮಾನ್‌ ರಷಿª ತನಗಿಂತ 33 ವರ್ಷ ಕಿರಿಯಳಾದ ಪದ್ಮಾಲಕ್ಷಿ$¾ಯನ್ನು ಮದುವೆಯಾಗಿದ್ದರು. ವಯೋವೃದ್ಧ ಎನ್‌.ಟಿ. ರಾಮರಾವ್‌, ತಮ್ಮ ಮಗಳ ವಯಸ್ಸಿನ ಲಕ್ಷಿ$¾ ಸರಸ್ವತಿ ಎಂಬ ಹೆಣ್ಣುಮಗಳನ್ನು ಆರಾಧಿಸಿದರು. ಇನ್ನಿಷ್ಟು ಹೆಸರುಗಳು, ರಾಜ್ಯದ, ಅನ್ಯರಾಜ್ಯದ ಹೆಚ್ಚಿನ ಪ್ರಮಾಣದಲ್ಲಿ ಹಾಲೀ ಚಾಲ್ತಿಯಲ್ಲಿನ ರಾಜಕಾರಣಿಗಳು, ಕಟ್ಟಿಕೊಂಡವರನ್ನು ಬಿಟ್ಟು ಇನ್ನೆಲ್ಲಿಗೋ ದಾರಿ ಮಾಡಿಕೊಂಡ ವ್ಯಕ್ತಿಗಳು... ಇತ್ಯಾದಿ ಇತ್ಯಾದಿ ಹೇಳುತ್ತ ಹೋದರೆ ಈ ಯಾದಿ ಮುಗಿಯುವುದೇ ಇಲ್ಲ. ಮೀನಾಕುಮಾರಿ, ನರ್ಗಿಸ್‌, ರೇಖಾ, ದೀಪಿಕಾ ಪಡುಕೋಣೆ, ಕರೀನಾ, ಅಜರುದ್ದೀನ್‌, ಫ್ರಾನ್ಸ್‌ ಅಧ್ಯಕ್ಷ ಸರ್ಕೋಜಿ, ಸೈಫ್ ಅಲಿ ಖಾನ್‌, ಮಾಜಿ ಕ್ರಿಕೆಟಿಗ ಸೌರವ್‌ ಗಂಗೂಲಿ, ಇವರೆಲ್ಲ ನೀಗಿಕೊಂಡ, ಬಾಳಸಂಗಾತಿಗಳ ವಿಷಯದಲ್ಲಿನ ತಳಮಳ ಗಮನಾರ್ಹ. ಬದಲಾಗಿರುವ ಕಾಲ ಧರ್ಮ "ಸಾವಿರ ಸುಳ್ಳು ಹೇಳಿ ಒಂದು ಲಗ್ನ ಮಾಡು' ಎಂಬ ನಾಣ್ಣುಡಿ ನಮ್ಮಲ್ಲಿ ಚಾಲ್ತಿಯಲ್ಲಿದೆ. ಇದಕ್ಕೆ ಕಾರಣ ವಾಸ್ತವವಾಗಿ ಜಾತಕ ಕುಂಡಲಿಯನ್ನು ಹೊಂದಾಣಿಕೆ ಮಾಡಿ, ನೂರಕ್ಕೆ ನೂರು ಹೆಣ್ಣು ಗಂಡುಗಳು ಸತಿಪತಿಗಳಾಗುವಂತೆ ಜಾತಕ ಜೋಡಿಸುವುದೆಂದರೆ ನೂರರಲ್ಲಿ ಕೇವಲ 40ರಿಂದ 45 ಶೇಕಡಾ ಮಂದಿಗೆ ಮಾತ್ರ ಮದುವೆ ಯೋಗ, ಸಂಸಾರವನ್ನು ಶಾಂತಿಯುತವಾಗಿ ನಡೆಸಿಕೊಂಡು ಹೋಗುವ ಯೋಗ ಇರುತ್ತಿತ್ತು. ಉಳಿದಂತೆ ನೂರಕ್ಕೆ 55ರಿಂದ 60ರಷ್ಟು ಮಂದಿಗೆ ಹಿರಿಯರು, ದಲ್ಲಾಳಿಗಳು, ಇನ್ಯಾರೋ ಸಂಬಂಧಿಸಿದವರು ಸಾವಿರ ಸುಳ್ಳು ಹೇಳಿ ಒಂದು ಮದುವೆ ಮಾಡಲ್ಪಡುತ್ತಿತ್ತು. ನಂತರ ಅವರ ಹಣೆಬರಹ, ನಾವಂತೂ ಮಾಡಿದ್ದೇವೆ ಎಂದು ಹಿರಿಯರು ಕೈತೊಳೆದುಕೊಳ್ಳುತ್ತಿದ್ದರು. ಇಂದು ಕಾಲ ಬದಲಾಗಿದೆ. ಸತಿಪತಿಯರಾದ ಮೇಲೆ ಬಹಳಷ್ಟು ದಾಂಪತ್ಯಗಳು ವಿಚ್ಛೇದನದಲ್ಲಿ ಅಂತ್ಯ ಕಾಣುತ್ತಿವೆ. ಸಾಮಾನ್ಯವಾಗಿ ಜಾತಕ ಕುಂಡಲಿಯಲ್ಲಿ ಬಾಳಸಂಗಾತಿಯ ಮನೆಯ ಅಧಿಪತಿ ಅಂದರೆ ಜಾತಕದಲ್ಲಿನ ಏಳನೇ ಮನೆ ಅಧಿಪತಿಯು ಪ್ರತಿಯೊಬ್ಬರ ಜಾತಕದಲ್ಲಿಯೂ ಮಾರಕ ಶಕ್ತಿ ಪಡೆದಿರುತ್ತಾನೆ. ಈ ಮಾರಕ ಶಕ್ತಿಯು ವಿಕೃತ ಸ್ವರೂಪಕ್ಕೆ ಸಂಬಂಧಿಸಿದ ವಿಚಾರ ಹೆಚ್ಚು ಬಲ ಪಡೆದಾಗ ದಾಂಪತ್ಯ ಕುಸಿಯುವ ಮಟ್ಟಕ್ಕೆ ಹೋಗುತ್ತಿರುತ್ತದೆ. ಹಿಂದಿನ ಸಮಾಜ ಹೆಣ್ಣನ್ನು ಅಬಲೆ ಎಂದು ಕರೆಯಿತು. ಇಂದು ಅಬಲೆ ಎಂಬ ವಿಚಾರ ನಿಧಾನವಾಗಿ ತನ್ನ ಅರ್ಥದ ವ್ಯಾಪ್ತಿಯನ್ನು ಮೀರಿ, ಸ್ವತಂತ್ರವಾಗಿ ತನ್ನನ್ನು ತಾನೇ ರಕ್ಷಿಸಿಕೊಳ್ಳುವ ವಿಚಾರಕ್ಕೆ ಕಾಲಿರಿಸಿದೆ. ಜಾತಕ ಕುಂಡಲಿಯಲ್ಲಿನ ಪ್ರೀತಿ, ಪ್ರೇಮದ, ಸತ್ಪತಿಗಳ ಸಂಬಂಧದ ಮಗ್ಗುಲುಗಳು ಹೊಸತೊಂದು ಆಯಾಮ ಸೃಷ್ಟಿಗೆ ಮುಂದಾಗಿವೆ. ಬದಲಾಗುತ್ತಿರುವ ಸಂಸ್ಕೃತಿಯ ಚೌಕಟ್ಟು ಸಂಸ್ಕಾರದ, ಉತ್ತಮ ಕುಟುಂಬ ವ್ಯವಸ್ತೆಯ ಬೇರುಗಳನ್ನು ಕಿತ್ತೆಸೆದಿದೆ. ಈಗಲೂ ಜಾತಕ ಕುಂಡಲಿಗಳ ಸಂಯೋಜನೆ ಬೇರೆ ಬೇರೆ ಅಂಶಗಳ ನೆಲೆಯಲ್ಲಿ ಸಂಭವಿಸುವಂತಾದರೆ ಮುರಿದು ಬೀಳುತ್ತಿರುವ ಸಂಸಾರದ, ಕುಟುಂಬ ವ್ಯವಸ್ಥೆಯನ್ನು ಸರಿಪಡಿಸಬಹುದು. ಸಾವಿರ ಸುಳ್ಳುಗಳನ್ನು ಹೇಳಿ ಮದುವೆ ಮಾಡಬೇಕಾಗಿಲ್ಲ. ಮನಸ್ಸುಗಳ ಹೊಂದಾಣಿಕೆ ಮಾಡಲು ಜನ್ಮಕುಂಡಲಿಗಳ ಜೋಡಣೆಯೇ ರಾಮಬಾಣ. ಆದರೆ ಸರಿಯಾಗಿ ಆಗಬೇಕು. ಜಾತಕ ಕುಂಡಲಿಗಳು ಪ್ರೀತಿ,ಪ್ರೇಮ ವಿಚಾರದ ಬಗ್ಗೆ ಏನು ಹೇಳುತ್ತವೆ ? ಜೀವನದಲ್ಲಿ ತಂದೆತಾಯಿ ಪ್ರೀತಿ ಬೇರೆ, ಅಣ್ಣತಮ್ಮಂದಿರ ಪ್ರೀತಿ ಬೇರೆ. ಗೆಳೆತನದ ಪ್ರೀತಿ ವಿಶ್ವಾಸ ಬೇರೆ. ಸತಿಪತಿ ವಿಚಾರದಲ್ಲಿನ ಪ್ರೀತಿಯ ಬಗೆಯೇ ಬೇರೆ. ಇಲ್ಲಿಂದಾಚೆಗೆ ಸಲ್ಲುವ ಪ್ರೀತಿಗಳೂ ಬೇರೆ ಬೇರೆ. ಮದುವೆಗಿಂತ ಮುಂಚಿನ ಸಂಬಂಧ, ಮದುವೆಯ ನಂತರದ ಸಂಬಂಧ, ಜೀವನದಲ್ಲಿ ದಾರಿ ತಪ್ಪಿ ನಡೆವ ಲೈಂಗಿಕ ವಿಚಾರ ಇತ್ಯಾದಿ ಎಲ್ಲವೂ ಬಗೆಬಗೆಯ ವಿಧಾನಗಳಿಂದಾಗಿ ವಿಚಿತ್ರವಾದ ಸಂಗತಿಗಳನ್ನು ಹೊರಚೆಲ್ಲುತ್ತವೆ. ಕೆಲವರಿಗೆ ಸಲಿಂಗ ಪ್ರೇಮವೇ ಅನನ್ಯ. ಉಭಯ ರೀತಿಯ ಪ್ರೇಮವ್ಯವಹಾರಗಳಲ್ಲಿ ತೊಡಗಿಕೊಂಡವರೂ ಇದ್ದಾರೆ. ಇದಕ್ಕೆಲ್ಲಾ ಕುಂಡಲಿ ಹೀಗೆ ಹೇಳುತ್ತದೆ. ಮದುವೆಗಳು ಭದ್ರವಾಗುವುದು ಅಪರೂಪ ಮದುವೆ ಎನ್ನುವುದು ಮಾನವನ ಜೀವನದಲ್ಲಿ ಉದಯವಾದ ವಿಧವಿಧವಾದ ನಾಗರೀಕತೆಗಳು ಬೆಳೆದಾದ ಮೇಲೆ ಹುಟ್ಟಿಕೊಂಡ ಒಂದು ಸಂಸ್ಕಾರ. ಒಂದು ಗಂಡು ಜೀವನದ ಸಂದರ್ಭದಲ್ಲಿ ಮಧುರವಾದೊಂದು ಜೀವನವನ್ನು ಪ್ರಾರಂಭಿಸಲು ಮಂಗಳಕಾರ್ಯದ ಚೌಕಟ್ಟಿನಲ್ಲಿ ಹೆಣ್ಣುಗಂಡುಗಳನ್ನು ಅಧಿಕೃತವಾಗಿ ಒಗ್ಗೂಡಿಸುವ ವಿಧಾನವಾಗಿದೆ. ಇಲ್ಲಿ ಪ್ರತಿ ಹೆಣ್ಣಿನ ಗಂಡಿನ ನಕ್ಷತ್ರ ರಾಶಿಗಳ ಹೊಂದಾಣೀಕೆ ಹಾಗೂ ಹೆಣ್ಣು ಗಂಡಿನ ಜಾತಕ ಕುಂಡಲಿಗಳ ಕಳತ್ರ ಸ್ಥಾನಗಳ ಬಲಾಬಲಗಳ ಮೇಲಿಂದ ಮದುವೆ ಎಂಬ ಬಾಳಿನ ಮಧುರಪಲ್ಲವಿಯನ್ನು ಪ್ರಾರಂಭಿಸಬೇಕಾಗುತ್ತದೆ. ಶುಕ್ರ ಹಾಗೂ ಕುಜರು ತಂತಮ್ಮ ಶಕ್ತಿ ಹಾಗೂ ವಿನಾಶಕ ಶಕ್ತಿಯನ್ನು ಒಬ್ಬನ ಅಥವಾ ಒಬ್ಬಳ ಆತಂಕದಲ್ಲಿ ಸಕಾರಾತ್ಮಕವಾಗಿ ಮಿಡಿಸುವಂತಾದರೆ ಮದುವೆಯ ಬಂಧಕ್ಕೆ ಅನನ್ಯತೆಯ ಸಿದ್ಧಿ ದೊರಕುತ್ತದೆ. ಅದರ ಕಳತ್ರಸ್ಥಾನ ಶಕ್ತಿ ಒದಗುವುದು ಕುಜ ಅಥವಾ ಶುಕ್ರರು ದೋಷಕರಾಗದೇ ಇರುವುದು. ನಕ್ಷತ್ರ ಹಾಗೂ ರಾಶಿಗಳು ಹೆಣ್ಣು ಗಂಡಿನ ಸಂಬಂಧವಾಗಿ ಯುಕ್ತವಾಗಿ ಕೂಡಿ ಬರುವುದು ಸುಲಭದ ಮಾತಲ್ಲ. ಕಷ್ಟದ ವಿಚಾರ ಇದು. ಹೊಂದಾಣಿಕೆ, ಆಯ್ಕೆಗಳು ಸ್ವರ್ಗ ಭಾಗ್ಯದ ಸಿದ್ಧಿಯೆ ? ಸಾಮಾನ್ಯವಾಗಿ ಹೆಣ್ಣು ಗಂಡಿನ ನಿಶ್ಚಿತಾರ್ಥ ಸ್ವರ್ಗದಲ್ಲಿ ನಿಶ್ಚಯಿಸಲ್ಪಟ್ಟಿರುತ್ತದೆ ಎಂದು ರೂಢಿಯಲ್ಲಿ ಕೇಳಿ ಬರುವ ಒಂದು ಮಾತಿದೆ. ನಮ್ಮ ಜೀವನದ ಸಂದರ್ಭದಲ್ಲಿ ಈ ಮಾತು ಹೌದು ಎಂಬುದನ್ನು ಯಾರೇ ಆಗಲಿ ಒಪ್ಪಿಕೊಳ್ಳಬೇಕು. ಸಿನಿಮಾ ಜೀವನ ಆದರ್ಶವಾಗಬಾರದು. ಆದರೂ ಉದಾಹರಣೆಗೆ ಸಿನಿಮಾ ರಂಗದ ವಿಚಾರವನ್ನು ನಾವು ವಿಶ್ಲೇಷಿಸಲೇ ಬೇಕು. ಯಾರು ಯಾರನ್ನೋ ಮದುವೆಯಾಗ ಬೇಕೆಂಬ ವಿಚಾರ ನಾವು ಕೇಳುತ್ತಿರುತ್ತೇವೆ. ಆದರೆ ನಂಬಿದ ವಿಚಾರವೇ ಬೇರೆ. ಒಬ್ಬರು ಇನ್ನೊಬ್ಬರಾರನ್ನೋ ಇನ್ನೊಬ್ಬರು ಮತ್ತೂಬ್ಬರ್ಯಾರನ್ನೋ ವರಿಸುತ್ತಾರೆ. ಇದಕ್ಕೆ ನೂರಾರು ಉದಾಹರಣೆಗಳನ್ನು ಕೊಡಬಹುದು. ತಿಳಿದದ್ದು ಬೇರೆ ಕತೆ ಇರುತ್ತದೆ. ನಿಜವಾದ ಕತೆ ಹೊಸತಿರುವಿಗೆ ಶೀಘ್ರವಾಗಿ ಬದಲಾಗಿ ತಿಳಿದಿರದ ಎರಡು ಜೀವಗಳು ಸತಿಪತಿಗಳಾಗುತ್ತಾರೆ. ಐಶ್ವರ್ಯ ರೈ, ಅಭಿಷೇಕ್‌ಬಚ್ಚನ್‌ ಮದುವೆ ನಿಜ, ಸ್ವರ್ಗದಲ್ಲಿ ಸತಿಪತಿಗ ಳಾಗಿರಬೇಕೆಂಬ ನಿರ್ಧಾರವಾದದ್ದು ಐಶ್ವರ್ಯ ಹಾಗೂ ಅಭಿಷೇಕ್‌ ಹೆಸರುಗಳಾಗಿದ್ದವು. ಇವರ ವಿಚಾರವನ್ನು ವಿವರವಾಗಿ ವಿಶ್ಲೇಷಿಸಲಾರೆ. ವೈಯುಕ್ತಿಕ ವಿಚಾರಗಳು ಇಲ್ಲಿ ಅಪ್ರಸ್ತುತ. ಅವೇನೇ ಇರಲಿ ಐಶ್ವರ್ಯ ರೈ ಬಚ್ಚನ್‌ ಕುಟುಂಬದ ಸೊಸೆಯಾದಳು. ಕರ್ನಾಟಕದ ಐಶ್ವರ್ಯ ಯಾರು? ಮೂಲ ಅಲಹಾಬಾದ್‌ ಕಡೆಯ ಅಭಿಷೇಕ್‌ ಯಾರು? ಎತ್ತಣಿಂದೆತ್ತ ಸಂಬಂಧ? ಎಂಬ ಅಲ್ಲಮನ ಮಾತು ಇಲ್ಲಿ ನೆನಪಾಗದಿರದು. ಯಾರು ಸೋನಿಯಾ, ಯಾರು ರಾಜೀವ್‌ ಗಾಂಧಿ? ಆದರೆ ಸತಿಪತಿಗಳಾದರು. ಸ್ವತಃ ಸೋದರಮಾವನ ಸೋದರತ್ತೆಯ ಮಕ್ಕಳು ಸತಿಪತಿಗಳಾಗುತ್ತಾರೆ. ಇದುಕೂಡಾ ಚೋದ್ಯವೇ. ಅಂತೂ ಸಲ್ಮಾನ್‌ಖಾನ್‌ ಇನ್ನೂ ಒಬ್ಬ ಅಧಿಕೃತ ಬೇಡಿಕೆಯಲ್ಲಿರುವ ನಟ. ಸುರದ್ರೂಪಿ ವಯಸ್ಸು ಇನ್ನೂ 46 ಅಷ್ಟೇ. ಹೆಚ್ಚೇಕೆ ನಮ್ಮ ರಾಹುಲ್‌ಗಾಂಧಿ ಕೂಡಾ. ಇವರಿಗೆ ಈಗ 41. 54 ವಯಸ್ಸಾದಾಗ ಖ್ಯಾಥಿ ಪಡೆದ ಅಂತಾರಾಷ್ಟ್ರೀಯ ಮಟ್ಟದ ಬರಹಗಾರ ಸಲ್ಮಾನ್‌ರಶಿª ತನಗಿಂತ 22 ವರ್ಷ ಕಿರಿಯಳಾದ ಪದ್ಮಾಲಕ್ಷ್ಮೀ ಯನ್ನು ಮದುವೆಯಾದರು. ವಯೋವೃದ್ಧ ಎನ್‌ ಟಿ ರಾಮರಾವ್‌ ಲಕ್ಷ್ಮೀ ಪಾರ್ವ ತಿಯೆಂಬ ಹೆಣ್ಣುಮಗಳನ್ನು ಆರಾಧಿಸಿದರು. ಇನ್ನಿಷ್ಟು ಹೆಸರುಗಳು ರಾಜ್ಯದ ಅನ್ಯರಾಜ್ಯದ ಹೆಚ್ಚಿನ ಪ್ರಮಾ ಣದಲ್ಲಿವೆ. ಹಾಲಿ ಚಾಲ್ತಿಯಲ್ಲಿರುವ ರಾಜಕಾರಣಿಗಳು ಕಟ್ಟಿಕೊಂಡವರನ್ನು ಬಿಟ್ಟು ಇನ್ನೆಲ್ಲಿಗೋ ದಾರಿಮಾಡಿಕೊಂಡ ಪ್ರಮುಖ ವ್ಯಕ್ತಿಗಳು ಇತ್ಯಾದಿ ಇತ್ಯಾದಿ ಯಾದಿ ಮುಗಿಯುವುದೇ ಇಲ್ಲ. ಮೀನಾಕುಮಾರಿ, ನರ್ಗೀಸ್‌ ರೇಖಾ, ದೀಪಿಕಾ ಪಡುಕೋಣೆ, ಕರೀನಾ ಅಜರುದ್ದೀನ್‌, ಫ್ರಾನ್ಸಿನ ಅಧ್ಯಕ್ಷ ಸರ್ಕೋಜಿ. ಸೈಫ್ ಅಲಿ ಖಾನ್‌ ಇಟಲಿಯ ಹಾಲಿ ಅಧ್ಯಕ್ಷ, ಮಾಜಿ ಕ್ರಿಕೆಟ್‌ ಕಫ್ತಾನ್‌ ಸೌರವ್‌ ಗಂಗೂಲಿ ಇವರೆಲ್ಲ ನೀಗಿಕೊಂಡ ಬಾಳಸಂಗಾತಿಗಳ ವಿಷಯದಲ್ಲಿನ ತಳಮಳ ಗಮನಾರ್ಹ. ಭಾರತದಲ್ಲಿ ಬದಲಾಗಿರುವ ಕಾಲಧರ್ಮ ಸಾವಿರ ಸುಳ್ಳು ಹೇಳಿ ಒಂದು ಲಗ್ನಮಾಡು ಎಂಬ ನಾಣ್ನುಡಿ ನಮ್ಮ ಸಮಾಜದಲ್ಲಿತ್ತು. ಇದಕ್ಕೆ ಕಾರಣ ವಾಸ್ತವವಾಗಿ ಜಾತಕ ಕುಂಡಲಿಯನ್ನು ಹೊಂದಾಣಿಕೆ ಮಾಡಿ ನೂರಕ್ಕೆ ನೂರು ಹೆಣ್ಣುಗಂಡುಗಳು ಸತಿಪತಿಗಳಾಗುವಂತೆ ಜಾತಕ ಜೋಡಿಸುವುದೆಂದರೆ ನೂರರಲ್ಲಿ ಕೇವಲ 40 ರಿಂದ 45 ಶೇ. ಮಂದಿಗೆ ಮಾತ್ರ ಮದುವೆ ಯೋಗ. ಸಂಸಾರವನ್ನು ಶಾಂತಯುತವಾಗಿ ನಡೆಸಿಕೊಂಡು ಹೋಗುವ ಯೋಗ ಇರುತ್ತಿತ್ತು. ಉಳಿದಂತೆ ನೂರಕ್ಕೆ ಶೇ 55 ರಿಂದ 60 ಮಂದಿಗೆ ಹಿರಿಯರು, ದಲ್ಲಾಳಿಗಳು ಇನ್ಯಾರೋ ಸಂಬಂಧಿಸಿದವರು ಸಾವಿರ ಸುಳ್ಳೂ ಹೇಳಿ ಒಂದು ಮದುವೆ ಮಾಡುತ್ತಿದ್ದರು. ನಂತರ ಅವರ ಹಣೆಬರಹ. ನಾವಂತೂ ಮದುವೆ ಮಾಡಿದ್ದೇವೆ ಎಂದು ಹಿರಿಯರು ಕೈತೊಳೆದುಕೊಳ್ಳುವ ಸ್ಥಿತಿ ತುಂಬಾ ಇತ್ತು. ಇಂದು ಕಾಲ ಬದಲಾಗಿದೆ. ಹೆಣ್ಣುಗಂಡುಗಳು ಸತಿಪತಿಯರಾದ ಮೇಲೆ ಬಹಳಷ್ಟು ದಾಂಪತ್ಯಗಳು ವಿಚ್ಛೇದನಕ್ಕಾಗಿ ಬಯಸುವವರ ಸಂಖ್ಯೆ ಜಾಸ್ತಿ ಇದೆ. ಸಾಮ, ಆನ್ಯವಾಗಿ ಜಾತಕ ಕುಂಡಲಿಯಲ್ಲಿ ಬಾಳ ಸಂಗಾತಿಯ ಮನೆಯ ಅಧಿಪತಿ ಅಂದರೆ ಜಾತಕದಲ್ಲಿನ ಏಳನೇ ಮನೆಯ ಅಧಿಪತಿ ಪ್ರತಿಯೊಬ್ಬನ ಜಾತಕದಲ್ಲೂ ಮಾರಕ ಶಕ್ತಿ ಪಡೆದಿರುತ್ತಾನೆ. ಈ ಮಾರಕ ಶಕ್ತಿಯ ಕೃತಕ ಸ್ವರೂಪಕ್ಕೆ ಸಂಬಂಧಿಸಿದ ವಿಚಾರ ಹೆಚ್ಚು ಬಲಪಡೆದಾಗ ದಾಂಪತ್ಯ ಕುಸಿಯುವ ಮಟ್ಟಕ್ಕೆ ಹೋಗುತ್ತದೆ. ಹಿಂದಿನ ಸಮಾಜ ಹೆಣ್ಣನ್ನು ಅಬಲೆ ಎಂದು ಕರೆಯಿತು. ಇಂದು ಅಬಲೆ ಎಂಬ ವಿಚಾರ ನಿಧಾನವಾಗಿ ತನ್ನ ಅರ್ಥದ ವ್ಯಾಪ್ತಿಯನ್ನು ಮೀರಿ ಸ್ವತಂತ್ರತೆಗೆ ಸ್ವತಂತ್ರವಾಗಿ ತನ್ನನ್ನು ತಾನೇ ರಕ್ಷಿಸಿಕೊಳ್ಳುವ ವಿಚಾರಕ್ಕೆ ಕಾಲಿರಿಸಿದೆ. ಜಾತಕ ಕುಂಡಲಿಯಲ್ಲಿನ ಪ್ರೀತಿ ಪ್ರೇಮದ ಸತಿಪತಿಗಳ ಸಂಬಂಧದ ವಿಚಾರದ ಮಗ್ಗಲುಗಳು ಹೊಸದೊಂದು ಆಯಾಮವನ್ನು ಸೃಷ್ಟಿಸುವುದಕ್ಕೆ ಮುಂದಾಗಿದೆ ಎಂದು ಇದರರ್ಥವಲ್ಲ. ಜಾತಕ ತನ್ನ ಪಾಡಿಗೆ ಯುಕ್ತವಾದ ಹೊಂದಾಣಿಕೆ ಮಾಡಬಲ್ಲುದಾದರೂ ಬದಲಾಗುತ್ತಿರುವ ಸಂಸ್ಕೃತಿಯ ಚೌಕಟ್ಟು ಸಂಸ್ಕಾರದ ಉತ್ತಮ ಕುಟುಂಬದ ವ್ಯವಸ್ಥೆಯ ಬೇರುಗಳನ್ನು ಕಿತ್ತೆಸೆದಿದೆ. ಜಾತಕ ಸೋತಿಲ್ಲ ಮನುಷ್ಯ ಸೋತಿದ್ದಾನೆ. ಈಗಲೂ ಜಾತಕ ಕುಂಡಲಿಗಳ ಸಂಯೋಜನೆ ಬೇರೆ ಬೇರೆ ಅಂಶಗಳ ನೆಲೆಯಲ್ಲಿ ಸಂಭವಿಸುವಂತಾದರೆ ಮುರಿದು ಬೀಳುತ್ತಿರುವ ಸಂಸಾರದ, ಕೌಟುಂಬಿಕ ವ್ಯವಸ್ಥೆಯನ್ನು ಸರಿಪಡಿಸಬಹುದು. ಸಾವಿರ ಸುಳ್ಳುಗಳನ್ನು ಹೇಳಿ ಮದುವೆ ಮಾಡಬೇಕಾಗಿಲ್ಲ. ಮನಸ್ಸುಗಳ ಹೊಂದಾಣಿಕೆ ಮಾಡಲು ಜನ್ಮಕುಂಡಲಿಗಳ ಜೋಡಣೆಯೇ ರಾಮಬಾಣ. ಆದರೆ ಅದು ಸರಿಯಾಗಿ ಆಗಬೇಕು. ಪ್ರೀತಿ ಪ್ರೇಮ ಪರಸ್ಪರ ಹೊಂದಾಣಿಕೆ ಈಗಲೂ ಸಾಧ್ಯ. -ಸಂಗ್ರಹ (ಕೃಪೆ ದಿನ ಪತ್ರಿಕೆ)