Saturday, 1 December 2018
ದತ್ತಾತ್ರೇಯನು ಶಕ್ತಿ ಕೊಡುವ ಬಗೆ
ದತ್ತಾತ್ರೇಯನು ಶಕ್ತಿ ಕೊಡುವ ಬಗೆ
ಒಂದು ಕತೆಯಿದೆ. ಮಾಹಿಷ್ಮತಿಯ ಅರಸು ಕೃತವೀರ್ಯನ ಮಗ ಕಾರ್ತವೀರ್ಯಾರ್ಜುನ. ಹೈಹಯಸ ರಾಜ ಕೃತವೀರ್ಯನ ಅರಸೊತ್ತಿಗೆಗೆ ಒಳಪಟ್ಟಿದ್ದು ಮಧ್ಯ ಪ್ರದೇಶದಲ್ಲಿ ಹೈಹಯ ರಾಜವಂಶದ ಅರಸರು ನರ್ಮದಾ ನದಿಯ ತೀರದ ಗುಂಟ ತಮ್ಮ ರಾಜ್ಯದ ವ್ಯಾಪ್ತಿಯನ್ನು ವಿಸ್ತರಿಸಿಕೊಂಡು ಕೃತಯುಗದ ಕಾಲಘಟ್ಟದಲ್ಲಿ ಪರಾಕ್ರಮ ದಿಂದಲೂ ಜನರಿಗೆ ಪ್ರಿಯರಾದವರಿಂದಲೂ ಆಡಳಿತ ಅರಸೊತ್ತಿಗೆಯನ್ನು ನಡೆಸಿಕೊಂಡು ಬಂದರು. ಕೃತವೀರ್ಯನಿಗೆ ಮಕ್ಕಳಿಲ್ಲದೆ ಚಿಂತೆಯಾದಾಗ ಸುಕೃತ ಫಲವಾಗಿ ಎಂಬಂತೆ ಕಾರ್ತವೀಯಾರ್ಜುನನ ಜನನವಾಗುತ್ತದೆ. ವಿಳಂಬದಿಂದಲಾದರೂ ಪುತ್ರರತ್ನವೊಂದನ್ನು ಪಡೆದೆವು ಎಂಬ ಸಂತೋಷ ಕೃತವೀರ್ಯ ದಂಪತಿಗಳಿಗೆ ತುಂಬಿಕೊಂಡಿತಾದರೂ ಹುಟ್ಟಿದ ಮಗುವಿಗೆ ಅಂಗ ಊನವಾಗಿತ್ತು. ಕೈಗಳೇ ಇದ್ದಿರದ ಮಗುವನ್ನು ಕಂಡು ಅವರಿಗೆ ಅಪಾರವಾದ ಬೇಸರ ಜಿಗುಪ್ಸೆಗಳು ಮೂಡಿದವು. ಈ ವಿಪ್ಲವಕ್ಕೆ ಪರಿಹಾರವನ್ನು ದತ್ತಾತ್ರೇಯ ಮುನಿಗಳೆ ಒದಗಿಸಿಕೊಡಬೇಕು ಎಂದು ಯೋಚಿಸಿ, ಮುನಿಗಳ ಪಾದ ಕಮಲದ ಬಳಿ ಮಗುವನ್ನು ಇಡುತ್ತಾರೆ.
ದತ್ತ ಗುರುಗಳಿಗೆ ದಂಪತಿಗಳ ದುಃಖ ಅರ್ಥವಾಗುತ್ತದೆ. ಸಾಧಕರಾದ ಅವರಿಗೆ ಪಂಚಭೂತಗಳನ್ನು ನಿಯಂತ್ರಿಸುವ ವಿದ್ಯೆ ಗೊತ್ತಿತ್ತು. ಯಾಕೆಂದರೆ ಅವರು ಬ್ರಹ್ಮ ಜಿಜಾnಸೆಯನ್ನು ಅರಿತವರು. ಸೃಷ್ಟಿ ಸ್ಥಿತಿ-ಲಯಗಳನ್ನು ಪ್ರತ್ಯೇಕವಾಗಿ ನಡೆಸಿ ನಿಯಂತ್ರಿಸುತ್ತಾರೆ. ದತ್ತಾತ್ರೇಯ ಮುನಿಗಳು ಬ್ರಹ್ಮ ವಿಷ್ಣು ಮಹೇಶ್ವರರು ಒಗ್ಗೂಡಿದಾಗ ಒಡಮೂಡಿದ ತ್ರಿಮೂರ್ತಿಗಳ ರೂಪ. ಒಂದೇ ದೇಹವಾಗಿ ಮೂರು ಪ್ರತ್ಯೇಕ ತ್ರಿಮೂರ್ತಿಗಳ ಶಿರಗಳನ್ನು ಪಡೆದು ದತ್ತಾತ್ರೇಯರೆನಿಸಿಕೊಂಡಿದ್ದಾರೆ.
ಈ ಸ್ವರೂಪ ಒದಗುವಾಗ ಅತ್ರಿ ಮುನಿಯ ಪತ್ನಿ ಅನಸೂಯಾ ಎಂಬ ಪತಿವ್ರತಾ ಶಿರೋಮಣಿಯ ಸಂಕಲ್ಪ$ಶಕ್ತಿಯ ಬಲದಿಂದಾಗಿ ತ್ರಿಮೂರ್ತಿಗಳನ್ನು ಜಗತ್ತು ಎಳೆಯ ಕಂದಮ್ಮಗಳ ಸ್ವರೂಪದಲ್ಲಿ ನೋಡುವಂತಾಯಿತು. ತ್ರಿಮೂರ್ತಿಯರ ಪತ್ನಿಯರು ಕಂಗಾಲಾಗಿ ತಂತಮ್ಮ ಗಂಡಂದಿರನ್ನು ಅನಸೂಯಾಳಿಂದ ಬಿಡುಗಡೆಗೊಳಿಸಿಕೊಳ್ಳಲು ಚಡಪಡಿಸಿ ತಮ್ಮ ನಯ ವಿನಯಪೂರ್ವಕ ನಡೆಯಿಂದ ಅನಸೂಯೆಗೆ ಶರಣಾಗತರಾಗಿ ತಮ್ಮ ಗಂಡಂದಿರನ್ನು ವಾಪಸ್ಸು ಪಡೆಯುತ್ತಾರೆ. ಆದರೆ ತ್ರಿಮೂರ್ತಿಗಳ ಅಂಶಗಳು ಸೇರಿ ದತ್ತಾತ್ರೇಯ ರೂಪುಗೊಳ್ಳುತ್ತಾನೆ.
ಮಾಹಿಷ್ಮತಿಯ ಅರಸ ಕೃತವೀರ್ಯ ಮುನಿ ಗಳನ್ನು ಆರಾಧಿಸಿ ಪ್ರಸನ್ನಗೊಳಿಸಿ ಅವರಿಂದ ಕೈಗಳೇ ಇರದ ಮಗ ಕಾರ್ತವೀರ್ಯಾರ್ಜುನನಿಗೆ ಸಾವಿರ ಬಾಹುಗಳನ್ನು ಅನುಗ್ರಹಿಸಿಕೊಳ್ಳುತ್ತಾನೆ. ರಾವಣ ನನ್ನು ಮೀರಿದ ಶಕ್ತಿ ಕಾರ್ತವೀರ್ಯನಿಗೆ ಬರುತ್ತೆ. ಮುಂದೆ, ಸೊಕ್ಕು ಪ್ರದರ್ಶಿಸಿದ ರಾವಣನನ್ನೇ ಕಾರ್ತವೀರ್ಯಾರ್ಜುನ ಹೆಡೆಮುರಿ ಕಟ್ಟುತ್ತಾನೆ.
ದತ್ತಾತ್ರೇಯನಿಂದ ಪರಿಹಾರ ಸಾಧ್ಯ
ವಾಮಾಚಾರ, ಯಕ್ಷಿಣಿ ಕ್ಷುದ್ರ ದೇವತೆಗಳ ವಶೀಕರಣ ಒಂದು ರೀತಿಯ ಶಕ್ತಿ ಒದಗಿಸಬಹುದು. ಆದರೂ ಇವುಗಳಿಗೆ ಇವುಗಳದ್ದೇ ಆದ ಮಿತಿ ಇರುತ್ತದೆ. ಆದರೆ ದತ್ತಾತ್ರೇಯನ ಆರಾಧನೆಯಿಂದ ಕ್ಷುದ್ರ ದೇವತೆಗಳ ಕಾಟದಿಂದ ಮುಕ್ತಿ ಪಡೆಯಲು ಸಾಧ್ಯವಿದೆ. ಕುಂಡಲಿನಿ ಶಕ್ತಿ ಸಂಪ್ರಾಪ್ತಿಯಾದಾಗ ದೇಹ ಮತ್ತು ಆತ್ಮಗಳ ನಡುವಣ ಅಂತರ ಸಮತೋಲನ ತಪ್ಪದ ರೀತಿಯಲ್ಲಿ ಇಚ್ಛಾಶಕ್ತಿಯ ಮೂಲಕ ಪಡೆಯಬೇಕಾದ್ದನ್ನು ಪಡೆಯಲು ಸಾಧ್ಯ. ಹಾಗಂದ ಮಾತ್ರಕ್ಕೆ ನ್ಯಾಯದ ಹಳಿಗಳನ್ನು ಮೀರುವ ಕುಹಕತನಗಳು ಶಕ್ತಿ ಒದಗಿಸಲಾರವು. ಮೂಲಾಧಾರ ಚಕ್ರ, ಸ್ವಾಧಿಷ್ಠಾನ ಚಕ್ರ, ಅನಾಹಾ°ನ ಚಕ್ರ, ಮಣಿಪುರ ಚಕ್ರ, ವಿಶುದ್ಧ ಚಕ್ರ, ಆಜಾn ಚಕ್ರ, ಸಹಸ್ರಾರ ಚಕ್ರ. ಸಹಸ್ರಾರ ಚಕ್ರವು ಮಿಕ್ಕ ಚಕ್ರಗಳನ್ನು ಒಂದು ಗೂಡಿಸುವ ಸ್ಥಳವಾಗಿದೆ. ಅದು ಮೆದುಳನ್ನು ಪೂರ್ತಿಯಾಗಿ ಆವರಿಸಿರುತ್ತದೆ. ಹೃದಯದಷ್ಟೇ ಮುಖ್ಯವಾದ ಅಂಗವಾಗಿ ಮೆದುಳು ರೂಪುಗೊಳ್ಳುವುದೇ ಈ ಕಾರಣಕ್ಕಾಗಿ. ದತ್ತಾತ್ರೇಯನ ಬಗೆಗಿನ ಧ್ಯಾನ ಅವಧೂತ ಶಕ್ತಿಯನ್ನು ಪ್ರಾಪ್ತಿಗೊಳಿಸುತ್ತದೆ.
ಮಾಯೆಯ ಫಲವಾದ ಜಗತ್ತು
ಮೂಲ ಬೀಜಾಕ್ಷರ ಮಂತ್ರಗಳು ನಮಗೆ ಪುಟ್ಟದಾದ ಶಕ್ತಿಕೋಶಗಳನ್ನು ಒದಗಿಸುತ್ತದೆ. ಇಡಿಯಾದ ದೇಹದ ಮೂಲದ ಬಿಂದು ಸ್ವರೂಪದ, ಪುಟ್ಟ ಜೀವಕೋಶ. ಪ್ರತಿಜೀವ ಕೋಶಗಳೂ ಬಲಗೊಂಡಾಗ ದೇಹದಲ್ಲಿ ಹುರುಪು, ಉತ್ಸಾಹ ಹಾಗೂ ಚೈತನ್ಯಗಳು ವೃದ್ಧಿಗೊಳ್ಳುತ್ತವೆ. ಆಸೆಗಳು, ಕಾಮನೆಗಳು ಆತ್ಮವನ್ನು ನೀಚತನಕ್ಕೆ ಒಯ್ಯುತ್ತವೆ. ಆತ್ಮ ಶುದ್ಧ ವಸ್ತುವಾದಾಗ ಪರಮಾತ್ಮ ನೆಲೆಸುತ್ತಾನೆ. ಜಿತೇಂದ್ರಿಯ ಶಕ್ತಿಯಿಂದಾಗಿ ದೇಹ ಸೊರಗಲಾರದು. ಧರ್ಮಾರ್ಥ ಕಾಮ ಮೋಕ್ಷಗಳು ಜೀವನವನ್ನು ಅರ್ಥಪೂರ್ಣವಾಗಿಸುತ್ತವೆ. ಅರಿಷಡ್ವರ್ಗಗಳಾದ ಕಾಮ, ಕ್ರೋಧ, ಲೋಭ, ಮೋಹ, ಮದ, ಮತ್ಸರಾದಿಗಳು ನಮ್ಮನ್ನು ನಾಶಕ್ಕೆ ತಳ್ಳುತ್ತವೆ. ಜಗದಲ್ಲಿನ ಪುರುಷಾರ್ಥಗಳನ್ನು ಸಾಧಿಸಲು ಹಿಂಜರಿಯದೆ ಜಿತೇಂದ್ರಿಯನಾದಾಗ ಚಂ ತತ್ ಸತ್ ಗಳ ಮೂಲಕ ಅತುಲ ಬಲ ಪಡೆಯುತ್ತಾರೆ. ಈ ಮೂರೂ ಅವಿಚ್ಛಿನ್ನವಾದಾಗ ಬೇರೆ ಬೇರೆಯಾದಾಗ ಬ್ರಹ್ಮ ವಿಷ್ಣು ಮಹೇಶ್ವರರಾಗುತ್ತಾರೆ. ಪರಬ್ರಹ್ಮನನ್ನು ಒಗ್ಗೂಡಿಸುವ ಕೆಲಸವನ್ನು ಧ್ಯಾನದಿಂದ ಮಾಡಬೇಕು. ಇದು ಸಾಧ್ಯವಾದಾಗ ಮಾತ್ರ ಬದುಕಿನ ಜಂಜಡ ಖನ್ನತೆ ಸೋಲು ನಿರಾಸೆಗಳಿಂದ ಹೊರಬರಲು ಸಾಧ್ಯ.
ದತ್ತಾತ್ರೇಯನು ಶಕ್ತಿ ಕೊಡುವ ಬಗೆ
ದತ್ತಾತ್ರೇಯನು ಶಕ್ತಿ ಕೊಡುವ ಬಗೆ
ಒಂದು ಕತೆ ಇದೆ. ಮಾಹಿಷ್ಮತಿಯ ಅರಸು ಕೃತವೀರ್ಯನ ಮಗ ಕಾರ್ತವೀರ್ಯಾರ್ಜುನ. ಹೈಹಯಸ ರಾಜ್ಯದ ಅಧಿಪತಿ. ಮಧ್ಯ ಪ್ರದೇಶದಲ್ಲಿ ಹೈಹಯಸ ರಾಜವಂಶ ನರ್ಮದಾ ನದಿ ತೀರೆದ ಗುಂಟ ತಮ್ಮ ರಾಜ್ಯದ ವ್ಯಾಪ್ತಿಯನ್ನು ವಿಸ್ತರಿಸಿಕೊಂಡು ಕೃತಯುಗದ ಕಾಲಘಟ್ಟದಲ್ಲಿ ಪರಾಕ್ರಮದಿಂದಲೂ ಜನರಿಗೆ ಪ್ರಿಯರಾದವರಾಗಿಯೂ ಆಡಳಿತ ನಡೆಸಿಕೊಂಡು ಬಂದಿದ್ದರು. ಕೃತವೀರ್ಯನಿಗೆ ಮಕ್ಕಳಿರದೆ ಚಿಂತೆಯಾದಾಗ ಸುಕೃತ ಫಲವಾಗಿ ಎಂಬಂತೆ ಕಾರ್ತವೀರ್ಯಾರ್ಜುನನ ಜನನವಾಯಿತು. ದುರ್ದೈವವಶಾತ್ ವಿಳಂಬದಿಂದ ಮಗುವಿಗೆ ಅಂಗ ಊನವಾಗಿತ್ತು. ಕೈಗಳೆ ಇದ್ದಿರದ ಮಗುವನ್ನು ಕಂಡು ಕೃತವರ್ಮ ದಂಪತಿಗೆ ಅಪಾರವಾದ ಬೇಸರ, ಜುಗುಪ್ಸೆಗಳು ಮೂಡಿ ಇನ್ನು ಈ ವಿಪ್ಲವಕ್ಕೆ ಪರಿಹಾರವೆಂದರೆ ದತ್ತಾತ್ರೇಯ ಮುನಿಗಳೆ ಪರಿಹಾರ ಮಾಡಿಸಿ ಕೊರತೆಯನ್ನು ದೂರಮಾಡುವ ಅನುಪಮವಾದ ತಂತ್ರಶಕ್ತಿ ಪಡೆದ ಮಹಾದೈವ ಎಂಬುದನ್ನು ಮನಗಂಡು ದತ್ತಾತ್ರೇಯ ಮುನಿಗಳ ಬಳಿ ಮಗುವನ್ನು ಎತ್ತೋಯ್ದರು. ಅವರ ಪಾದಕಮಲದ ಬಳಿ ಇಡುತ್ತಾರೆ.
ದತ್ತ ಗುರುಗಳಿಗೆ ದಂಪತಿಯ ದುಃಖವು ಅರ್ಥವಾಗುತ್ತದೆ. ಸಾಧಕರಾದ ಮುನಿಗಳಿಗೆ ಪಂಚಭೂತಗಳನ್ನು ನಿಯಂತ್ರಿಸುವ ಮಹಾನ್ ವಿದ್ಯೆ ಗೊತ್ತು. ಏಕೆಂದರೆ ಅವರು ಲೀಲಾ ಚರಿತನಾದ ದೇವರು. ಬ್ರಹ್ಮ ಜಿಜಾnಸೆಯನ್ನು ಅರಿತವರು. ಸೃಷ್ಟಿ, ಸ್ಥಿತಿ, ಲಯಗಳನ್ನು ಪ್ರತ್ಯೇಕವಾಗಿ ನಡೆಸಿ ಯಂತ್ರಿಸುತ್ತಾರೆ.
ದತ್ತಾತ್ರೇಯ ಮುನಿಗಳು ಬ್ರಹ್ಮ,ವಿಷ್ಣು ಮಹೇಶ್ವರರು ಒಗ್ಗೂಡಿದಾಗ ಒಡಮೂಡಿದ ರೂಪ. ತ್ರಿಮೂರ್ತಿಗಳು ಒಂದೇ ದೇಹವಾಗಿ ಶಿರೋಭಾಗದಲ್ಲಿ ಮೂರು ಪ್ರತ್ಯೇಕ ಸ್ವರೂಪಗಳನ್ನು ತಳೆದಿದ್ದಾರೆ. ಈ ಸ್ವರೂಪವೇ ದತ್ತಾತ್ರೇಯ ಸ್ವರೂಪ. ಈ ಸ್ವರೂಪವನ್ನು ಪಡೆಯುವುದು ಅವರ ಶಕ್ತಿಯ ಫಲವಾಗಿ ಅಲ್ಲ.
ಅತ್ರಿ ಮುನಿಯ ಪತ್ನಿ ಅನಸೂಯಾ ಎಂಬ ಪತಿವ್ರತಾ ಶಿರೋಮಣೀಯ ಸಂಕಲ್ಪ ಶಕ್ತಿಯ ಬಲದಿಂದಾಗಿ. ತ್ರಿಮೂರ್ತಿಗಳನ್ನು ಎಳೆಯ ಕಂದಮ್ಮಗಳ ಸ್ವರೂಪದಲ್ಲಿ ಪರಿವರ್ತನೆಗೊಳ್ಳುವ ಸ್ಥಿತಿ ಕೂಡಿ ಬರುತ್ತದೆ. ತ್ರಿಮೂರ್ತಿಯರ ಪತ್ನಿಯರು ಕಂಗಾಲಾಗಿ ತಂತಮ್ಮ ಗಂಡಂದಿರನ್ನು ಅನಸೂಯಾಳಿಂದ ಬಿಡಿಸಿಕೊಳ್ಳಬೇಕೆಂದು ಚಡಪಡಿಸಿ ತಮ್ಮ ವಿನಯನಯ ಪೂರ್ವಕ ನಡೆಯಿಂದ ಅನಸೂಯೆಗೆ ಶರಣಾಗಿ, ತಮ್ಮ ಗಂಡಂದಿರನ್ನು ವಾಪಸ್ಸು ಪಡೆಯುತ್ತಾರೆ.
ಆದರೆ ತ್ರಿಮೂರ್ತಿ ಅಂಶಗಳು ಸೇರಿ ದತ್ತಾತ್ರೇಯ ರೂಪುಗೊಳ್ಳುತ್ತಾನೆ. ಕಷ್ಟದಲ್ಲಿರುವವರಿಗೆ ವರ ಕೊಡುವವನೆ ದತ್ತಾತ್ರೇಯ.ಮಾಹಿಷ್ಮತಿಯ ಅರಸ ಕೃತವೀರ್ಯ ದತ್ತಮುನಿಗಳನ್ನು ಆರಾಧಿಸಿ, ಪ್ರಸನ್ನಗೊಳಿಸಿ, ಅವರಿಂದ ತನ್ನ ಕೈಗಳೇ ಇರದ ಮಗನಿಗೆ ಸಾವಿರ ಬಾಹುಗಳನ್ನು ಅನುಗ್ರಹಿಸಿಕೊಳ್ಳುತ್ತಾನೆ . ರಾವಣನನ್ನೂ ಮೀರಿದ ಶಕ್ತಿ ಕಾರ್ತಿವೀರ್ಯಾರ್ಜುನನಿಗೆ ಬರುತ್ತದೆ. ಸೊಕ್ಕು ಪ್ರದರ್ಶಿಸಿದ ರಾವಣನನ್ನೇ ಕಾರ್ತಿವೀರ್ಯಾರ್ಜುನ ಸೆರೆಡಿಯುತ್ತಾನೆ.
ಅನುಪಮವಾದ ಪವಾಡ ಸದೃಶ ಪರಿಹಾರ ದತ್ತಾತ್ರೇಯನಿಂದ ಲಭ್ಯ
ವಾಮಾಚಾರ, ಯಕ್ಷಿಣಿ, ಕ್ಷುದ್ರ ದೇವತೆಗಳ ವಶೀಕರಣ ಒಂದು ರೀತಿಯ ಶಕ್ತಿ ಒದಗಿಸಬಹುದು. ಆದರೂ ಇವುಗಳಿಗೆ ಇವುಗಳದ್ದೇ ಆದ ಒಂದು ಮಿತಿ ಇರಲು ಸಾಧ್ಯ. ಆದರೆ ದತ್ತಾತ್ರೇಯನ ಆರಾಧನೆ ತಂತ್ರ ಸಿದ್ಧಿ, ಧ್ಯಾನ ಏಕಾಗ್ರತೆಗಳು ಒಂದು ನಿರ್ದಿಷ್ಟ ಬಗೆಯಲ್ಲಿ ಸಾಧ್ಯವಾದಾಗ ಮನುಷ್ಯನಲ್ಲಿ ಅಂತರ್ಗತವಾದ ಷಟcಕ್ರಗಳನ್ನು ಜಾಗ್ರತಗೊಳಿಸುವ ಯೋಗ ಸಿದ್ಧಿಗೆ ರೂಪಾಂತರಗೊಳ್ಳುತ್ತದೆ. ಬದುಕಿನ ಸಂದರ್ಭದ ಪೀಡೆಗಳಿಂದ ನಮಗೆ ನಾವೇ ರಕ್ಷಣೆ ಪಡೆದು ಹೊರಬರಲು ಚೈತನ್ಯ ಒದಗುತ್ತದೆ.
ಪಿತೃ ದೋಷ; ಹೀಗಂದರೇನು ಗೊತ್ತಾ?
ಪಿತೃ ದೋಷ; ಹೀಗಂದರೇನು ಗೊತ್ತಾ?
ಪಿತೃದೋಷದ ಬಗೆಗೆ ಒಬ್ಬ ವ್ಯಕ್ತಿಯ ಜಾತಕದಲ್ಲಿ ಸುಳಿವುಗಳು ಸಿಗುತ್ತದೆ. ಬ್ರಹ್ಮ ಪುರಾಣ, ಗರುಡ ಪುರಾಣ ಮುಂತಾದ ಪುರಾಣಗಳಲ್ಲಿ ದೊರಕುವ ಪಿತೃದೋಷದ ವಿಚಾರಗಳನ್ನು, ಜಾತಕದಲ್ಲಿ ಕೆನೆಗಟ್ಟುವ ಪಿತೃ ದೋಷ ವಿಚಾರ ಸ್ಥಿತಿಗತಿಗಳನ್ನು ಒಟ್ಟಂದದಲ್ಲಿ ಸೂಕ್ಷ್ಮವಾಗಿ ಅರಿಯಬೇಕು. ಮಾನವನ ಸಂಬಂಧವಾಗಿ (ಇತರ ಪ್ರಾಣಿಗಳಿಗಿಂತಲೂ ಬೇರೆಯೇ ಆಗಿ ದೇವರೂ ಆಗಲು ಸಾಧ್ಯವಿಲ್ಲದ, ರಾಕ್ಷಸನಾಗಬಾರದ ಮಾನವೀಯತೆಯ ಅಪ್ಪಟ ಗುಣ ಧರ್ಮಗಳಿಂದ, ನಾಕರೀಕತೆಯ ಕಟ್ಟುಪಾಡುಗಳೊಂದಿಗೆ) ಒಂದು ಜಾತಕ ಕುಂಡಲಿ ತನ್ನ ಗರ್ಭದಲ್ಲಿ ಅವನ ವ್ಯಕ್ತಿತ್ವ ಸಿದ್ಧಿ ಏನು, ವಾಕ್ ಚಾತುರ್ಯವೇನು, ಆರ್ಥಿಕ ಬಲವೇನು,ಸ್ಥೈರ್ಯ ಧೈರ್ಯಗಳೇನು, ಸುಖೀದ ವಿಚಾರವಾದ ಒಟ್ಟೂ ಶಕ್ತಿ ಅಥವಾ ಮತಿಗಳೇನು, ಸಂತಾನದ ವಿಷಯದ ಏರಿಳಿತಗಳೇನು, ದರಿದ್ರಾದಿ ಸಕಲ ದುರಾದೃಷ್ಟಗಳ ವಿಚಾರಗಳೇನು, ವೈವಾಹಿಕ ಜೀವನದ ಪಾಲೇನು, ಮರಣ ಯಾವಾಗ, ಹೇಗೆ ಮತ್ತು ಏಕೆ ಸಂಬಂಧಿಸಬಹುದು ಎಂಬುದರ ಚೌಕಟ್ಟುಗಳು ಯಾವ ಬಗೆಯದು, ಭಾಗ್ಯದ ವಿಚಾರವಾಗಿ ಏನು ಪಡೆದು ಬಂದಿರುವುದು, ಮಾಡುವ ಕಾಯಕ ಯಾವುದಾಗಿರುತ್ತದೆ. ಭಾಗ್ಯದ ನಿಕ್ಷೇಪ ಒಳಿತಿನ ಮೊತ್ತ ಕಟ್ಟಿಕೊಟ್ಟಿದೆಯೇ ವಿಧಿ, ನಷ್ಟಗಳ ಯಾದಿ ಹೇಗಿರುತ್ತದೆ ಇತ್ಯಾದಿ ಇತ್ಯಾದಿಗಳ ಬಗೆಗಿನ ಸೂಕ್ಷ್ಮಗಳನ್ನು ಕೆನೆಗಟ್ಟಿಸಿರುತ್ತದೆ. ಇಲ್ಲಾ ಹರಳು ಗಟ್ಟಿಸಿರುತ್ತ¨ ಎಂದೂ ಅನ್ನಬಹುದು. ಜಾತಕ ಕುಂಡಲಿಯ ಗ್ರಹಗಳು ಸೂರ್ಯ, ಚಂದ್ರಾದಿ ನವ ಗ್ರಹಗಳು, ( ರಾಹು ಕೇತುಗಳ ಅಸ್ತಿತ್ವದಲ್ಲಿ ಇರದ ಗ್ರಹಗಳಾದರೂ ಅವು ಸೂರ್ಯ ಹಾಗೂ ಚಂದ್ರರ ಪರಿಭ್ರಮಣದ ವೇಗದ ಛೇದವನೇ ಕಾರಣವಾಗಿ ಅಪಾರವಾದ ಕಂಡು ಕತ್ತಲ ಹೊತ್ತು ಶಕ್ತಿ ಮೂಲವಾಗಿ ಹೊರ ಹೊಮ್ಮುತ್ತವೆ) ತಂತಮ್ಮದೇ ಆದ ರೀತಿಯಲ್ಲಿ ಲೋಕದ ಜೀವಿಗಳ ಮೇಲೆ ತಮ್ಮ ಪ್ರಬಾವ ನೀಡುತ್ತಿರುತ್ತವೆ. ಪ್ರಭಾವದ ಕಾರಣಗಳಿಂದಾಗಿ ಅದೃಷ್ಟ ದುರಾದೃಷ್ಟಗಳು ಕೂಡಿ ಬರುತ್ತವೆ. ಇದನ್ನು ನಂಬಿದವನು ತನ್ನ ದೃಢವಾದ ನಂಬಿಗೆಯಿಂದ ಹೊರಬರಲಾರ. ನಂಬದೇ ಹೋದವನೂ ಎಂದೋ ಒಂದು ದಿನ "ಹೌದು, ನಿಜ. ಏನೋ ಒಂದು ಇದೆ. ತನ್ನನ್ನು ಮೀರಿದ ಅಗೋಚರ ಶಕ್ತಿ ' ನಂಬಿಗೆಗೆ ಬಂದು ತಲುಪುತ್ತಾನೆ. ಕೆಲವೇ ಕೆಲವು ಮಂದಿ ಅದೇನು ಅದೃಷ್ಟ, ಥೂ ಇಂಥದ್ದನ್ನು ನಂಬಲಾರೆ ಎಂಬ ನಂಬಿಗೆಯೊಂದಿಗೇ ನಾಸ್ತಿಕರಾಗಿ ಇರುತ್ತಾರೆ. ನಾಸ್ತಿಕರನ್ನು ನಾವು ಅಗೌರವಿಸಬೇಕಾಗಿಲ್ಲ. ಅವರ ರೀತಿ ಅವರದ್ದು. ಆದರೆ ಅವರು ಆಸ್ತಿಕರನ್ನು ಅಣಕಿಸಿದಿದ್ದರೆ ಸೂಕ್ತ. ಆಸ್ತಿಕರು ನಾಸ್ತಿಕರನ್ನು ದ್ವೇಷಿಸದಿದ್ದರೆ ಸೂಕ್ತ.
ಜಾತಕ ಕುಂಡಲಿಯಲ್ಲಿ ಪ್ರೀತಿ, ಪ್ರೇಮದ ವಿಚಾರ
ಜಾತಕ ಕುಂಡಲಿಯಲ್ಲಿ ಪ್ರೀತಿ, ಪ್ರೇಮದ ವಿಚಾರ
ಜೀವನದಲ್ಲಿ ತಂದೆ ತಾಯಿಗಳ ಪ್ರೀತಿ ಬೇರೆ, ಅಣ್ಣ ತಮ್ಮಂದಿರ ಪ್ರೀತಿ ಬೇರೆ. ಗೆಳೆತನದ ಪ್ರೀತಿ ವಿಶ್ವಾಸ ಬೇರೆ. ಸತಿಪತಿಗಳ ವಿಚಾರದಲ್ಲಿನ ಪ್ರೀತಿಯ ಬಗೆಯೇ ಬೇರೆ. ಇಲ್ಲಿಂದಾಚೆಗೆ ಸಲ್ಲುವ ಪ್ರೀತಿಗಳೂ ಬೇರೆ ಬೇರೆ. ಮದುವೆಗಿಂತ ಮುಂಚಿನ ಸಂಬಂಧ, ಮದುವೆಯ ನಂತರದ ಸಂಬಂಧ, ಜೀವನದಲ್ಲಿ ದಾರಿ ತಪ್ಪಿ ನಡೆಯುವ ಲೈಂಗಿಕ ವಿಚಾರ ಇತ್ಯಾದಿ ಎಲ್ಲವೂ ಬಗೆಬಗೆಯ ವಿಧಾನಗಳಿಂದಾಗಿ ವಿಚಿತ್ರವಾದ ಸಂಗತಿಗಳನ್ನು ಹೊರಚೆಲ್ಲುತ್ತಿರುತ್ತವೆ. ಕೆಲವರಿಗೆ ಸಲಿಂಗ ಪ್ರೇಮವೇ ಅನನ್ಯವಾದುದು. ಉಭಯ ರೀತಿಯ ಪ್ರೇಮ ವ್ಯವಹಾರಗಳಲ್ಲಿ ತೊಡಗಿಕೊಂಡವರೂ ಇದ್ದಾರೆ.
ಯಾಕೆ ಮದುವೆಗಳು ಭದ್ರವಾಗುವುದು ಅಪರೂಪ?
ಮದುವೆ ಎನ್ನುವುದು ಮಾನವನ ಜೀವನದಲ್ಲಿ ಉದಯವಾದ ವಿಧವಿಧವಾದ ನಾಗರಿಕತೆಗಳು ಬೆಳೆದಾದ ಮೇಲೆ ಹುಟ್ಟಿಕೊಂಡ ಸಂಸ್ಕಾರ. ಒಂದು ಗಂಡು ಜೀವನದ ಸಂದರ್ಭದಲ್ಲಿ ಮಧುರವಾದ ಜೀವನವನ್ನು ಪ್ರಾರಂಭಿಸಲು ಮಂಗಲಕಾರ್ಯದ ಚೌಕಟ್ಟಿನಲ್ಲಿ ಹೆಣ್ಣುಗಂಡುಗಳನ್ನು ಅಧಿಕೃತವಾಗಿ ಒಗ್ಗೂಡಿಸುವ ವಿಧಾನವೇ ಮದುವೆ. ಇಲ್ಲಿ ಪ್ರತಿ ಹೆಣ್ಣಿನ, ಗಂಡಿನ ನಕ್ಷತ್ರರಾಶಿಗಳ ಹೊಂದಾಣಿಕೆ ಹಾಗೂ ಹೆಣ್ಣು ಗಂಡಿನ ಜಾತಕ ಕುಂಡಲಿಯಲ್ಲಿ ಕಳತ್ರ ಸ್ಥಾನಗಳ (ಬಾಳ ಸಂಗಾತಿ ಸ್ಥಾನಗಳ) ಬಲಾಬಲಗಳ ಮೇಲಿಂದ ಮದುವೆ ಎಂಬ ಬಾಳಿನ ಮಧುರ ಪಲ್ಲವಿಯನ್ನು ಪ್ರಾರಂಭಿಸಬೇಕಾಗುತ್ತದೆ. ಶುಕ್ರ ಹಾಗೂ ಕುಜರು ತಂತಮ್ಮ ಶಕ್ತಿ ಹಾಗೂ ವಿನಾಶಕ ಶಕ್ತಿಯನ್ನು ಒಬ್ಬನ ಅಥವಾ ಒಬ್ಬಳ ಜಾತಕದಲ್ಲಿ ಸಕಾರಾತ್ಮಕವಾಗಿ ಮಿಡಿಸುವಂತಾದರೆ ಮದುವೆಯ ಬಂಧಕ್ಕೆ ಅನನ್ಯತೆಯ ಸಿದ್ಧಿ ದೊರಕುತ್ತದೆ. ಆದರೆ ಕಳತ್ರ ಸ್ಥಾನದ ಶಕ್ತಿ ಒದಗುವುದು, ಕುಜ ಅಥವಾ ಶುಕ್ರರು ದೋಷಕರಾಗದೇ ಇರುವುದು, ನಕ್ಷತ್ರ ಹಾಗೂ ರಾಶಿಗಳು ಹೆಣ್ಣು ಗಂಡಿನ ಸಂಬಂಧವಾಗಿ ಮುಕ್ತವಾಗಿ ಕೂಡಿ ಬರುವುದು ಸುಲಭದ ಮಾತಲ್ಲ. ಕಷ್ಟದ ವಿಚಾರವಿದು.
ಹೆಣ್ಣು ಗಂಡಿನ ಹೊಂದಾಣಿಕೆ ಹಾಗೂ ಆಯ್ಕೆಗಳು ಸ್ವರ್ಗಭಾಗ್ಯ ಸಿದ್ಧಿಯೇ?
ಸಾಮಾನ್ಯವಾಗಿ ಮದುವೆಗಳು ಸ್ವರ್ಗದಲ್ಲಿ ನಿಶ್ಚಯಿಸಲ್ಪಟ್ಟಿರುತ್ತವೆ ಎಂಬ ಮಾತಿದೆ. ನಮ್ಮ ಜೀವನದಲ್ಲಿ ಈ ಮಾತು ಹೌದು ಎಂಬುದನ್ನು ಯಾರೇ ಆಗಲಿ ಒಪ್ಪಿಕೊಳ್ಳಬೇಕು. ಸಿನಿಮಾ ಜೀವನ ಯಾರಿಗೂ ಆದರ್ಶವಾಗಬಾರದು. ಆದರೂ ಉದಾಹರಣೆಗೆ ಸಿನಿಮಾರಂಗದ ವಿಚಾರವನ್ನು ನಾವು ವಿಶ್ಲೇಷಿಸಲೇಬೇಕು. ಸಿನಿಮಾ ವಲಯದಲ್ಲಿ ಯಾರು ಯಾರನ್ನೋ ಮದುವೆಯಾಗುವ ವಿಚಾರವನ್ನು ನಾವು ಕೇಳುತ್ತಿರುತ್ತೇವೆ. ಆದರೆ, ನಂಬಿದ ವಿಚಾರವೇ ಬೇರಾಗಿ, ಒಬ್ಬ ಇನ್ನೊಬ್ಬಳಾÂರನ್ನೋ, ಒಬ್ಬಳು ಇನ್ಯಾರೋ ಒಬ್ಬನನ್ನು ವರಿಸುತ್ತಾರೆ. ಇದಕ್ಕೆ ನೂರಾರು ಉದಾಹರಣೆಗಳನ್ನು ಕೊಡಬಹುದು. ತಿಳಿದದ್ದು ಬೇರೆ ಕತೆ ಇರುತ್ತದೆ. ನಿಜವಾದ ಕತೆ ಹೊಸ ತಿರುವಿಗೆ ಶೀಘ್ರವಾಗಿ ಬದಲಾಗಿ, ತಿಳಿದಿರುವ ಎರಡು ಜೀವಗಳು ಸತಿಪತಿಗಳಾಗಿ ಸಪ್ತಪದಿ ಎಣಿಸುತ್ತಾರೆ.
ಜೇನುಗಣ್ಣಿನ ಹುಡುಗಿ ಐಶ್ವರ್ಯಾ ರೈ, ಅಭಿಷೇಕ್ ಬಚ್ಚನ್‌ನನ್ನು ಮದುವೆಯಾದದ್ದು
ಐಶ್ವರ್ಯಾ ಹಾಗೂ ಅಭಿಷೇಕ್ ಬಚ್ಚನ್‌ರ ಮದುವೆಯ ವಿಚಾರವನ್ನು ವಿವರವಾಗಿ ವಿಶ್ಲೇಷಿಸಲಾರೆ. ವೈಯಕ್ತಿಕ ವಿಚಾರಗಳು ಇಲ್ಲಿ ಕಗ್ಗಂಟಾಗಿದೆ. ಅದೇನೇ ಇರಲಿ, ಐಶ್ವರ್ಯಾ ರೈ, ಬಚ್ಚನ್ ಕುಟುಂಬದ ಸೊಸೆಯಾದಳು. ಕರ್ನಾಟಕದ ಐಶ್ವರ್ಯಾ ಯಾರು? ಅಲಹಾಬಾದ್ ಮೂಲದ ಅಭಿಷೇಕ್ ಬಚ್ಚನ್ ಯಾರು? ಎತ್ತಣಿಂದೆತ್ತ ಸಂಬಂಧವಯ್ನಾ ಎಂಬ ಅಲ್ಲಮನ ಮಾತು ಇಲ್ಲಿ ನೆನಪಾಗದಿರದು. ಯಾರು ಸೋನಿಯಾ? ಯಾರು ರಾಜೀವ್ ಗಾಂಧಿ? ಆದರೂ ಅವರು ಸತಿಪತಿಗಳಾದರು. ಸ್ವತಃ ಸೋದರಮಾವನ, ಸೋದರತ್ತೆಯ ಮಕ್ಕಳು ಮದುವೆಯಾಗುತ್ತಾರೆ. ಇದೂ ಚೋದ್ಯವೇ. ಅಂತೂ ಸಲ್ಮಾನ್ ಖಾನ್ ಇನ್ನೂ ಒಬ್ಬ ಮಾತ್ರ ಅಧಿಕೃತ, ಅನೇಕ ಹುಡುಗಿಯರು ಮದುವೆಯಾಗಲು ಕಾತರದಲ್ಲಿರುವ ಬೇಡಿಕೆಯ ನಟ. ಸು#ರದ್ರೂಪಿ. ವಯಸ್ಸು ಈಗಾಗಲೇ 51 ನಿಜ. ಆದರೂ ಅವನನ್ನು ಮದುವೆಯಾಗಲು ಕ್ಯೂ ನಿಂತಿರುವವರಿಗೆ ಬರವಿಲ್ಲ. ಹೆಚ್ಚೇಕೆ, ನಮ್ಮ ರಾಹುಲ್ ಗಾಂಧಿ ಕೂಡ ಬಹುಬೇಡಿಕೆಯಲ್ಲಿರುವ ಯುವಕನೇ. ಇವರಿಗೆ ಈಗ 42 ವಯಸ್ಸು. 54 ವಯಸ್ಸಾದಾಗ ಖ್ಯಾತಿ ಪಡೆದ ಸಲ್ಮಾನ್ ರಷಿª ತನಗಿಂತ 33 ವರ್ಷ ಕಿರಿಯಳಾದ ಪದ್ಮಾಲಕ್ಷಿ$¾ಯನ್ನು ಮದುವೆಯಾಗಿದ್ದರು. ವಯೋವೃದ್ಧ ಎನ್.ಟಿ. ರಾಮರಾವ್, ತಮ್ಮ ಮಗಳ ವಯಸ್ಸಿನ ಲಕ್ಷಿ$¾ ಸರಸ್ವತಿ ಎಂಬ ಹೆಣ್ಣುಮಗಳನ್ನು ಆರಾಧಿಸಿದರು. ಇನ್ನಿಷ್ಟು ಹೆಸರುಗಳು, ರಾಜ್ಯದ, ಅನ್ಯರಾಜ್ಯದ ಹೆಚ್ಚಿನ ಪ್ರಮಾಣದಲ್ಲಿ ಹಾಲೀ ಚಾಲ್ತಿಯಲ್ಲಿನ ರಾಜಕಾರಣಿಗಳು, ಕಟ್ಟಿಕೊಂಡವರನ್ನು ಬಿಟ್ಟು ಇನ್ನೆಲ್ಲಿಗೋ ದಾರಿ ಮಾಡಿಕೊಂಡ ವ್ಯಕ್ತಿಗಳು... ಇತ್ಯಾದಿ ಇತ್ಯಾದಿ ಹೇಳುತ್ತ ಹೋದರೆ ಈ ಯಾದಿ ಮುಗಿಯುವುದೇ ಇಲ್ಲ. ಮೀನಾಕುಮಾರಿ, ನರ್ಗಿಸ್, ರೇಖಾ, ದೀಪಿಕಾ ಪಡುಕೋಣೆ, ಕರೀನಾ, ಅಜರುದ್ದೀನ್, ಫ್ರಾನ್ಸ್ ಅಧ್ಯಕ್ಷ ಸರ್ಕೋಜಿ, ಸೈಫ್ ಅಲಿ ಖಾನ್, ಮಾಜಿ ಕ್ರಿಕೆಟಿಗ ಸೌರವ್ ಗಂಗೂಲಿ, ಇವರೆಲ್ಲ ನೀಗಿಕೊಂಡ, ಬಾಳಸಂಗಾತಿಗಳ ವಿಷಯದಲ್ಲಿನ ತಳಮಳ ಗಮನಾರ್ಹ.
ಬದಲಾಗಿರುವ ಕಾಲ ಧರ್ಮ
"ಸಾವಿರ ಸುಳ್ಳು ಹೇಳಿ ಒಂದು ಲಗ್ನ ಮಾಡು' ಎಂಬ ನಾಣ್ಣುಡಿ ನಮ್ಮಲ್ಲಿ ಚಾಲ್ತಿಯಲ್ಲಿದೆ. ಇದಕ್ಕೆ ಕಾರಣ ವಾಸ್ತವವಾಗಿ ಜಾತಕ ಕುಂಡಲಿಯನ್ನು ಹೊಂದಾಣಿಕೆ ಮಾಡಿ, ನೂರಕ್ಕೆ ನೂರು ಹೆಣ್ಣು ಗಂಡುಗಳು ಸತಿಪತಿಗಳಾಗುವಂತೆ ಜಾತಕ ಜೋಡಿಸುವುದೆಂದರೆ ನೂರರಲ್ಲಿ ಕೇವಲ 40ರಿಂದ 45 ಶೇಕಡಾ ಮಂದಿಗೆ ಮಾತ್ರ ಮದುವೆ ಯೋಗ, ಸಂಸಾರವನ್ನು ಶಾಂತಿಯುತವಾಗಿ ನಡೆಸಿಕೊಂಡು ಹೋಗುವ ಯೋಗ ಇರುತ್ತಿತ್ತು. ಉಳಿದಂತೆ ನೂರಕ್ಕೆ 55ರಿಂದ 60ರಷ್ಟು ಮಂದಿಗೆ ಹಿರಿಯರು, ದಲ್ಲಾಳಿಗಳು, ಇನ್ಯಾರೋ ಸಂಬಂಧಿಸಿದವರು ಸಾವಿರ ಸುಳ್ಳು ಹೇಳಿ ಒಂದು ಮದುವೆ ಮಾಡಲ್ಪಡುತ್ತಿತ್ತು. ನಂತರ ಅವರ ಹಣೆಬರಹ, ನಾವಂತೂ ಮಾಡಿದ್ದೇವೆ ಎಂದು ಹಿರಿಯರು ಕೈತೊಳೆದುಕೊಳ್ಳುತ್ತಿದ್ದರು.
ಇಂದು ಕಾಲ ಬದಲಾಗಿದೆ. ಸತಿಪತಿಯರಾದ ಮೇಲೆ ಬಹಳಷ್ಟು ದಾಂಪತ್ಯಗಳು ವಿಚ್ಛೇದನದಲ್ಲಿ ಅಂತ್ಯ ಕಾಣುತ್ತಿವೆ. ಸಾಮಾನ್ಯವಾಗಿ ಜಾತಕ ಕುಂಡಲಿಯಲ್ಲಿ ಬಾಳಸಂಗಾತಿಯ ಮನೆಯ ಅಧಿಪತಿ ಅಂದರೆ ಜಾತಕದಲ್ಲಿನ ಏಳನೇ ಮನೆ ಅಧಿಪತಿಯು ಪ್ರತಿಯೊಬ್ಬರ ಜಾತಕದಲ್ಲಿಯೂ ಮಾರಕ ಶಕ್ತಿ ಪಡೆದಿರುತ್ತಾನೆ. ಈ ಮಾರಕ ಶಕ್ತಿಯು ವಿಕೃತ ಸ್ವರೂಪಕ್ಕೆ ಸಂಬಂಧಿಸಿದ ವಿಚಾರ ಹೆಚ್ಚು ಬಲ ಪಡೆದಾಗ ದಾಂಪತ್ಯ ಕುಸಿಯುವ ಮಟ್ಟಕ್ಕೆ ಹೋಗುತ್ತಿರುತ್ತದೆ. ಹಿಂದಿನ ಸಮಾಜ ಹೆಣ್ಣನ್ನು ಅಬಲೆ ಎಂದು ಕರೆಯಿತು. ಇಂದು ಅಬಲೆ ಎಂಬ ವಿಚಾರ ನಿಧಾನವಾಗಿ ತನ್ನ ಅರ್ಥದ ವ್ಯಾಪ್ತಿಯನ್ನು ಮೀರಿ, ಸ್ವತಂತ್ರವಾಗಿ ತನ್ನನ್ನು ತಾನೇ ರಕ್ಷಿಸಿಕೊಳ್ಳುವ ವಿಚಾರಕ್ಕೆ ಕಾಲಿರಿಸಿದೆ. ಜಾತಕ ಕುಂಡಲಿಯಲ್ಲಿನ ಪ್ರೀತಿ, ಪ್ರೇಮದ, ಸತ್ಪತಿಗಳ ಸಂಬಂಧದ ಮಗ್ಗುಲುಗಳು ಹೊಸತೊಂದು ಆಯಾಮ ಸೃಷ್ಟಿಗೆ ಮುಂದಾಗಿವೆ. ಬದಲಾಗುತ್ತಿರುವ ಸಂಸ್ಕೃತಿಯ ಚೌಕಟ್ಟು ಸಂಸ್ಕಾರದ, ಉತ್ತಮ ಕುಟುಂಬ ವ್ಯವಸ್ತೆಯ ಬೇರುಗಳನ್ನು ಕಿತ್ತೆಸೆದಿದೆ. ಈಗಲೂ ಜಾತಕ ಕುಂಡಲಿಗಳ ಸಂಯೋಜನೆ ಬೇರೆ ಬೇರೆ ಅಂಶಗಳ ನೆಲೆಯಲ್ಲಿ ಸಂಭವಿಸುವಂತಾದರೆ ಮುರಿದು ಬೀಳುತ್ತಿರುವ ಸಂಸಾರದ, ಕುಟುಂಬ ವ್ಯವಸ್ಥೆಯನ್ನು ಸರಿಪಡಿಸಬಹುದು. ಸಾವಿರ ಸುಳ್ಳುಗಳನ್ನು ಹೇಳಿ ಮದುವೆ ಮಾಡಬೇಕಾಗಿಲ್ಲ. ಮನಸ್ಸುಗಳ ಹೊಂದಾಣಿಕೆ ಮಾಡಲು ಜನ್ಮಕುಂಡಲಿಗಳ ಜೋಡಣೆಯೇ ರಾಮಬಾಣ. ಆದರೆ ಸರಿಯಾಗಿ ಆಗಬೇಕು.
ಜಾತಕದಲ್ಲಿ ವಿದೇಶಯೋಗ ತಿಳಿಯುವುದು ಹೇಗೆ?
ಜಾತಕದಲ್ಲಿ ವಿದೇಶಯೋಗ ತಿಳಿಯುವುದು ಹೇಗೆ?
ವಿದೇಶಕ್ಕೆ ಹೋಗುವ ಆಸೆ ಯಾರಿಗೆ ಇಲ್ಲ ಆದರೆ ಎಲ್ಲದಕ್ಕೂ ಯೋಗವಿರಬೇಕು ಎನ್ನುವುದು ಜ್ಯೋತಿಷ ಶಾಸ್ತ್ರದ ಖಚಿತ ಅಭಿಪ್ರಾಯ ಹಾಗಾದರೆ ವಿದೇಶಯೋಗ ತಿಳಿವ ಬಗೆ ಹೇಗೆ?
ವಿದೇಶಕ್ಕೆ ಹೋಗುವ ಆಸೆ ಯಾರಿಗೆ ಇಲ್ಲ. ಆದರೆ ಎಲ್ಲದಕ್ಕೂ ಯೋಗವಿರಬೇಕು ಎನ್ನುವುದು ಜ್ಯೋತಿಷ ಶಾಸ್ತ್ರದ ಖಚಿತ ಅಭಿಪ್ರಾಯ. ಹಾಗಾದರೆ ವಿದೇಶಯೋಗ ತಿಳಿವ ಬಗೆ ಹೇಗೆ?
ಈಗಿನ ಪೀಳಿಗೆಯಲ್ಲಿ ಎಲ್ಲರಿಗೂ ತಮ್ಮ ಮಕ್ಕಳು ವಿದೇಶದಲ್ಲಿ ನೆಲೆಸಬೇಕು. ಅಲ್ಲಿಯೇ ಉದ್ಯೋಗ ಮಾಡಬೇಕು, ಕೈತುಂಬಾ ಸಂಪಾದಿಸಬೇಕು ಎನ್ನುವಾಸೆ. ಅವರಾಸೆ ಕೈಗೂಡುತ್ತದೆಯೇ ಅಥವಾ ಇಲ್ಲವೇ ಎಂಬುದು ಜಾತಕದಲ್ಲಿನ ಗ್ರಹಗಳ ಸಂಬಂಧದಿಂದ ತಿಳಿಯುತ್ತದೆ. ಜಾತಕ ಕುಂಡಲಿಯ ಮೂರನೆಯ ಸ್ಥಾನದಿಂದ ಚಿಕ್ಕ ಪ್ರಯಾಣಗಳನ್ನು 9 ಮತ್ತು 12 ನೇ ಸ್ಥಾನದಿಂದ ದೂರದ ಪ್ರಯಾಣಗಳನ್ನು ಗುರುತಿಸಬಹುದು.
ತೃತೀಯ ಭಾವ, ತೃತಿಹಯೇಶ ಮತ್ತು ಮಂಗಳನ ಯುತಿ ಲಗ್ನೇಶನೊಡನೆ ಇರುವುದರಿಂದ ಅಥವಾ ಸಮ ಸಪ್ತಕ ಯೋಗವಿದ್ದರೆ ವಿದೇಶ ಪ್ರವಾಸ ಮಾಡುವ ಯೋಗವಿರುತ್ತದೆ.
ತೃತೀಯೇಶ ತೃತೀಯ ಭಾವದಲ್ಲಿ ಅಥವಾ ಮಂಗಳ ಅಥವಾ ಚಂದ್ರನಿರಬೇಕು. ಇವರ ರಾಶಿಯಾದರೂ ತೃತೀಯ ಭಾವವಾಗಿರಬೇಕು. ಲಗ್ನದಲ್ಲಿ ತೃತೀಯೇಶ ಅಥವಾ ಮಂಗಳ ಅಥವಾ ಚಂದ್ರನಿರಬೇಕು. ತೃತೀಯ ಭಾವದಲ್ಲಿ ಮಂಗಳ ಸ್ಥಿತನಿರಬೇಕು. ನವಮೇಶ ನವಮ ಭಾವದಲ್ಲಿದ್ದು ಲಗ್ನೇಶ ಲಗ್ನದಲ್ಲೇ ಇದ್ದರೆ ವಿದೇಶ ಯಾತ್ರೆ ಯೋಗ ಉಂಟಾಗುತ್ತದೆ. ಲಗ್ನೇಶ ನವಮದಲ್ಲೂ ನವಮೇಶ ಲಗ್ನದಲ್ಲಿದ್ದರೂ ವಿದೇಶ ಯೋಗ ನಿಶ್ಚಿತ.
ನವಮ-ದ್ವಾದಶ ಭಾವಗಳು ಚರರಾಶಿಯಾಗಿ ನವಮೇಶ ದ್ವಾದಶಾಧಿಪತಿ ಚರರಾಶಿಯಲ್ಲಿ ಸ್ಥಿತರಿದ್ದಾಗಲೂ ಯೋಗವಿರುತ್ತದೆ. ಹಾಗೆಯೇ ಲಗ್ನೇಶ ಮತ್ತು ಚತುರ್ಥೇಶ ಇಬ್ಬರೂ ದ್ವಾದಶ ಭಾವದಲ್ಲಿದ್ದರೆ, ತೃತೀಯ ಅಥವಾ ನವಮ ಭಾವದಲ್ಲಿ ರಾಹು ಸ್ಥಿತನಾಗಿದ್ದರೆ, ಲಗ್ನೇಶನ ಸ್ಥಿತಿಯಿಂದ ದ್ವಾದಶ ಭಾವದ ಸ್ವಾಮಿ ಲಗ್ನಕ್ಕೆ ಕೇಂದ್ರ ತ್ರಿಕೋಣದಲ್ಲಿ ಸ್ಥಿತನಾಗಿದ್ದರೆ, ಲಗ್ನಾಧಿಪತಿ, ಭಾಗ್ಯಾಧಿಪತಿ, ವ್ಯಯಾಧಿಪತಿ ಲಗ್ನಕ್ಕೆ ಚರರಾಶಿಯಲ್ಲಿ ಸ್ಥಿತನಾಗಿದ್ದರೆ, ಶುಕ್ರನು ಸ್ವಕ್ಷೇತ್ರ ಉಚ್ಛಕ್ಷೇತ್ರದಲ್ಲಿದ್ದು ಅದು ಕೇಂದ್ರ ಅಥವಾ ತ್ರಿಕೋಣವಾಗಿ ಚರರಾಶಿಯಾಗಿದ್ದರೂ ವಿದೇಶಯೋಗ ಪ್ರಾಪ್ತವಾಗುತ್ತದೆ.
ನಿಮ್ಮ ಜಾತಕದಲ್ಲಿ ವಿದೇಶ ಯೋಗ ಇದೆಯೋ ಇಲ್ಲವೋ?
ಎಲ್ಲರಿಗೂ ಜೀವನದಲ್ಲಿ ಒಮ್ಮೆಯಾದರೂ ವಿದೇಶಕ್ಕೆ ಹೋಗುವಾಸೆ. ತಮಗೆ ಸಾಧ್ಯವಾಗದಿದ್ದರೆ ತಮ್ಮ ಮಕ್ಕಳನ್ನಾದರೂ ಕಳುಹಿಸುವ ಆಸೆ. ಆಸೆ, ನಿರೀಕ್ಷೆ ತಪ್ಪಲ್ಲ. ಆದರೆ ಜಾತಕದ ಫಲಾಫಲಗಳು ಹೇಳುವುದೇನು?
ವಿದೇಶಕ್ಕೆ ಹೋಗಬೇಕು ಅಂದ್ರೆ ಜಾತಕ ಏಕೆ ನೋಡಬೇಕು. ಸುಮ್ಮನೆ ಹೋಗಿ ಯಾವುದಾದ್ರೂ ಟ್ರಾವಲ್ ಕಂಪನೀಲಿ ಟಿಕೆಟ್ ಬುಕ್ ಮಾಡಿದ್ರೆ ಆಯ್ತು. ಆರಾಮವಾಗಿ ಯೂರೋಪ್, ಏಷ್ಯಾ, ಸಿಂಗಪೂರ್ ಪ್ರವಾಸ ಮಾಡ್ಕೊಂಡು ಬರಬಹುದು...
ಬದಲಾದ ಕಾಲಮಾನದಲ್ಲಿ ವಿದೇಶ ಪ್ರವಾಸ ಪಕ್ಕದಮನೆಗೆ ಹೋದಷ್ಟೇ ಸುಲಭವಾಗಿದೆ. ಪ್ರವಾಸ, ಮೋಜಿಗೆ, ಕಾರ್ಪೊರೇಟ್ ಮೀಟಿಂಗ್ ಅಥವಾ ಗೆಟ್ ಟುಗೆದರ್ ಅಂತ ವಿದೇಶ ಪ್ರವಾಸ ಮಾಡೋದು ಒಂದು ಕಡೆಯಾದರೆ ಹೆಚ್ಚಿನ ವ್ಯಾಸಂಗದ ನಿರೀಕ್ಷೆ ಇಟ್ಕೊಂಡಿರೋರು, ಕೈತುಂಬಾ ಸಂಪಾದಿಸಬೇಕು ಅಂತ ಆಸೆ ಇಟ್ಕೊಂಡಿರೋರು, ಈ ಜಂಜಾಟ ಬೇಡಪ್ಪಾ ಗ್ರೀನ್‌ಕಾರ್ಡ್ ಸಿಕ್ಕು ಅಲ್ಲೇ ಸೆಟ್ಲ್ ಆದ್ರೆ ಸಾಕು ಅಂತ ಬಯಸೋರು ಮತ್ತೊಂದು ಕಡೆ. ಆಸೆ, ನಿರೀಕ್ಷೆ, ಕನಸುಗಳಿಗೇನು ಕಡಿವಾಣವಿಲ್ಲ. ಹಾಗಂತ ಕನಸು ಕಾಣೋರೆಲ್ಲಾ ವಿದೇಶಕ್ಕೆ ಹೋಗಬೇಕು ಅಂದ್ಕೊಂಡ್ರು ಆಗೋಲ್ಲ. ಕೆಲವೊಮ್ಮೆ ಕೈಯಲ್ಲಿ ದುಡ್ಡಿದ್ದರೂ ತಿನ್ನೋಕೆ ಆಹಾರವಿಲ್ಲ ಅಂತಾರಲ್ಲ ಹಾಗೆ... ಹಾಗಾದರೆ ವಿದೇಶಯೋಗ ಇದೆಯೋ, ಇಲ್ಲವೋ ಅನ್ನೋ ವಿಷಯದಲ್ಲಿ ಜಾತಕ ಹೇಳೋದೇನು?
ಜಾತಕದಲ್ಲಿ ತೃತೀಯ ಭಾವ ಅಂದರೆ ಮೂರನೆಯ ಸ್ಥಾನ ಸಮೀಪ ಸ್ಥಳದ ಪ್ರಯಾಣವನ್ನು ಸೂಚಿಸಿದರೆ, ಹನ್ನೆರಡನೆಯ ಮನೆ ದೂರದ ಅರ್ಥಾತ್ ವಿದೇಶ ಪ್ರಯಾಣವನ್ನು ಸಂಕೇತಿಸುತ್ತದೆ.
ತೃತೀಯ ಭಾವ, ತೃತೀಯೇಶ ಮತ್ತು ಮಂಗಳನ ಯುತಿ ಲಗ್ನದ ಜೊತೆ ಇದ್ದಾಗ ವಿದೇಶ ಯೋಗವಿದೆ ಎಂದು ಹೇಳಬಹುದು. ತೃತೀಯೇಶ ತೃತೀಯ ಭಾವದಲ್ಲಿ ಮಂಗಳ ಅಥವಾ ಚಂದ್ರನಿದ್ದರೂ ಯೋಗವಿರುತ್ತದೆ. ನವಮೇಶ ನವಮ ಭಾವದಲ್ಲಿದ್ದು ಲಗ್ನೇಶ ಲಗ್ನದಲ್ಲೇ ಇದ್ದರೂ ವಿದೇಶ ಯೋಗ ಉಂಟಾಗುತ್ತದೆ. ಲಗ್ನೇಶ ನವಮದಲ್ಲೂ ನವಮೇಶ ಲಗ್ನದಲ್ಲಿದ್ದರೂ, ನವಮ - ದ್ವಾದಶ ಭಾವಗಳು ಚರ ರಾಶಿಯಾಗಿ ನವಮೇಶ ದ್ವಾದಶಾಧಿಪತಿ ಚರ ರಾಶಿಯಲ್ಲಿ ಸ್ಥಿತರಿದ್ದರೂ, ಚಂದ್ರ ಚರ ರಾಶಿಯಲ್ಲಿದ್ದು ಮತ್ತು ನವಮ - ದ್ವಾದಶ ಭಾವಗಳೊಡನೆ ಸಂಬಂಧ ಹೊಂದಿದ್ದರೂ ವಿದೇಶ ಯೋಗ ಉಂಟಾಗುತ್ತದೆ.
ಲಗ್ನ ಚರರಾಶಿಯಾಗಿ ಲಗ್ನೇಶ ಕೂಡ ಚರರಾಶಿಯಲ್ಲಿ ಸ್ಥಿತನಾಗಿ ಮತ್ತು ಯಾವುದಾದರೂ ಒಂದು ಗ್ರಹ ಚರ ರಾಶಿಯಲ್ಲಿ ಸ್ಥಿತವಾಗಿ ಗ್ರಹದ ದೃಷ್ಟಿ ಲಗ್ನೇಶನ ಮೇಲಿದ್ದರೂ, ಲಗ್ನೇಶ ಅಷ್ಟಮ ಭಾವದಲ್ಲಿದ್ದರೆ ಮತ್ತು ಚತುರ್ಥ ನವಮ ಅಥವಾ ದ್ವಾದಶ ಭಾವದಲ್ಲಿ ರಾಹು ಅಥವಾ ಕೇತುವಿದ್ದರೂ ಜಾತಕನಿಗೆ ವಿದೇಶ ಯೋಗವಿರುತ್ತದೆ.
ಜಾತಕನ ಉಚ್ಛ ರಾಶಿಯಲ್ಲಿ ಸ್ಥಿತ ದ್ವಾದಶೇಷನು ಅಷ್ಟಮ ಭಾವದಲ್ಲಿ ಚರರಾಶಿಯಲ್ಲಿ ಸ್ಥಿತನಿದ್ದರೆ, ಲಗ್ನೇಶ ಚತುರ್ಥೇಶ ಇಬ್ಬರೂ ದ್ವಾದಶ ಭಾವದಲ್ಲಿದ್ದರೆ, ತೃತೀಯ ಅಥವಾ ನವಮ ಭಾವದಲ್ಲಿ ರಾಹು ಸ್ಥಿತನಾಗಿದ್ದರೆ, ಲಗ್ನೇಶನ ಸ್ಥಿತನಿಂದ ದ್ವಾದಶ ಭಾವದ ಸ್ವಾಮಿ ಲಗ್ನಕ್ಕೆ ಕೇಂದ್ರ ತ್ರಿಕೋಣದಲ್ಲಿ ಸ್ಥಿತನಾಗಿದ್ದರೂ ಯೋಗವಿರುತ್ತದೆ. ಲಗ್ನಾಧಿಪತಿ, ಭಾಗ್ಯಾಧಿಪತಿ, ವ್ಯಯಾಧಿಪತಿ ಲಗ್ನಕ್ಕೆ ಚರರಾಶಿಯಲ್ಲಿ ಸ್ಥಿತನಾಗಿದ್ದರೆ, ಶುಕ್ರನು ಸ್ವಕ್ಷೇತ್ರ, ಉಚ್ಛಕ್ಷೇತ್ರದಲ್ಲಿದ್ದು ಅದು ಕೇಂದ್ರ ಅಥವಾ ತ್ರಿಕೋನವಾಗಿ ಚರರಾಶಿಯಾಗಿದ್ದರೂ ವಿದೇಶ ಯೋಗವಿರುತ್ತದೆ.
ಜನ್ಮಕುಂಡಲಿ ಆಧರಿಸಿ ಯಾರಿಗೆ ಯಾವ ಕೋರ್ಸ್ ಸೂಕ್ತ
ಜನ್ಮಕುಂಡಲಿ ಆಧರಿಸಿ ಯಾರಿಗೆ ಯಾವ ಕೋರ್ಸ್ ಸೂಕ್ತ *
ಜ್ಯೋತಿಷ ತತ್ತ್ವ ಸಿದ್ಧಾಂತಗಳನ್ನು ಅನುಸರಿಸಿ, ಗ್ರಹಗಳ ಯೋಗ, ಅವಯೋಗಗಳನ್ನು ಆಧರಿಸಿ ಒಬ್ಬ ವ್ಯಕ್ತಿಯ ವಿದ್ಯೆ- ವ್ಯಾಸಂಗ, ಉನ್ನತ ಶಿಕ್ಷಣ, ಸಂಶೋಧನೆ ಇತ್ಯಾದಿ ವಿಷಯಗಳನ್ನು ಅರಿಯಬಹುದು.
ಯಾವುದೇ ವ್ಯಕ್ತಿಯ ಶಿಕ್ಷಣ, ಪಾಂಡಿತ್ಯ, ವಿದ್ವತ್ ವಿಚಾರಗಳನ್ನು ಆತನ ಜನ್ಮಕುಂಡಲಿಯ ದ್ವಿತೀಯ, ಚತುರ್ಥ, ಪಂಚಮ ಭಾವಗಳಿಂದ ವಿಮರ್ಶಿಸಲಾಗುತ್ತದೆ. ದ್ವಿತೀಯ ಭಾವದಿಂದ ವಾಣಿ ಅಥವಾ ವಾಕ್ ಮತ್ತು ಅಭಿವ್ಯಕ್ತ ಸಾಮರ್ಥ್ಯವನ್ನು ಅರಿಯಬಹುದು. ದ್ವಿತೀಯ ಭಾವವು ಜಾತಕನ ಪ್ರಾರಂಭಿಕ ವಿದ್ಯಾಭ್ಯಾಸದ ಪ್ರಗತಿ ಹಾಗೂ ಬುದ್ಧಿಮತ್ತೆಯ ದ್ಯೋತಕವೆನಿಸಿದೆ. ಚತುರ್ಥ ಭಾವವು ಗ್ರಹಣ ಶಕ್ತಿ, ವಿಶ್ವವಿದ್ಯಾಲಯ ಮಟ್ಟ ಹಾಗೂ ಪಂಚಮ ಭಾವ ಅದಕ್ಕೂ ಮುಂದಿನ ಜ್ಞಾನಪ್ರಾಪ್ತಿಯನ್ನು ಸೂಚಿಸುವ ಭಾವವಾಗಿದೆ. ಜೊತೆಗೆ ಅಧ್ಯಾತ್ಮ, ಅಂತರ್‌ಜ್ಞಾನಕ್ಕೂ ಇದು ಕಾರಣೀಭೂತವಾಗುತ್ತದೆ. ಚತುರ್ಥ ಭಾವ ಸುಖಸ್ಥಾನವಾಗಿದೆ. ಆದ್ದರಿಂದ ಜಾತಕನಿಗೆ ವಿದ್ಯಾರ್ಜನೆಯಿಂದ ಐಹಿಕ ಸುಖ ಹಾಗೂ ಖ್ಯಾತಿ ದೊರೆಯುತ್ತದೆ.
ಚತುರ್ಥ ಸ್ಥಾನ ವಿದ್ಯಾಸ್ಥಾನವಾಗಿದೆ. ಇದರ ಭಾವಾಧಿಪತಿಯೂ ಇದರ ಭಾವಸ್ಥಿತ ಗ್ರಹನೂ ದಶಮಭಾವವನ್ನು ಸಂಪೂರ್ಣ ದೃಷ್ಟಿಯಿಂದ ನೋಡುವುದರ ಫಲ ಸ್ವರೂಪವಾಗಿ ಅದು ವೃತ್ತಿ ಅಥವಾ ಕರ್ಮದ ಗ್ರಹ ಚತುರ್ಥವನ್ನು ಸಂಪೂರ್ಣ ದೃಷ್ಟಿಯಿಂದ ನೋಡುವುದರಿಂದ ಶಿಕ್ಷಣದ ವಿಷಯ ಪ್ರಭಾವಿತವಾಗುತ್ತದೆ. ಆದ್ದರಿಂದ ವಿದ್ಯೆಯ ವಿಷಯವನ್ನು ಆಯ್ಕೆ ಮಾಡುವಾಗ ದಶಮಭಾವ ಸ್ಥಿತ ಗ್ರಹವನ್ನು ಪ್ರಗತಿ ಹಾಗೂ ವೃದ್ಧಿಗೆ ವಿದ್ಯಾಸ್ಥಾನಾಧಿಪತಿಯ ಸಹಕಾರ, ಕೃಪಾಗ್ರಹಗಳಿರುವುದು, ಆ ಗ್ರಹನಿಗೆ ಸ್ವಕ್ಷೇತ್ರವೆನಿಸುವುದು, ಮೂಲ ತ್ರಿಕೋಣ ಸ್ಥಿತಿ, ವರ್ಗೋತ್ತಮ ನವಾಂಶಸ್ಥಿತ ಗ್ರಹರು ಬಲಿಷ್ಠರೆನಿಸುತ್ತಾರೆ. ಅಂತಹ ಗ್ರಹಗಳು ಶುಭಸ್ಥಾನದಲ್ಲಿದ್ದರೆ ಶುಭಗ್ರಹದ ದೃಷ್ಟಿಗೆ ಒಳಪಟ್ಟರೆ, ಶುಭ ಫಲಗಳನ್ನು ನೀಡಲು ಸಮರ್ಥನಾಗಿರುತ್ತಾನೆ.
ಆಧುನಿಕ ಕಾಲಮಾನಕ್ಕೆ ತಕ್ಕಂತೆ ಜ್ಯೋತಿಷ್ಯದ ಮಾನದಂಡದ ಪ್ರಕಾರ ಮೇಷ, ವೃಶ್ಚಿಕ, ಮಕರ, ಕುಂಭ ಮತ್ತು ಕಟಕ ಲಗ್ನ ಜಾತಕರಿಗೆ ಕುಜಗ್ರಹ ಉಚ್ಛನಾಗಿದ್ದು ಸ್ವಗೃಹೀಯವಾಗಿ ಬಂದಲ್ಲಿ ಇಂಜಿನಿಯರಿಂಗ್‌ನ ಯಾವುದೇ ಕ್ಷೇತ್ರವನ್ನು ಆಯ್ಕೆ ಮಾಡಿಕೊಳ್ಳಬಹುದು. ರವಿ ಯುತಿಯಲ್ಲಿ ಬಂದಲ್ಲಿ ಚಿಕಿತ್ಸಾ ಕ್ಷೇತ್ರ, ಕುಜ-ಬುಧ ಯುತಿ ಇದ್ದರೆ ಎಲೆಕ್ಟ್ರಾನಿಕ್ಸ್, ಕಂಪ್ಯೂಟರ್ಸ್, ಕುಜ-ಚಂದ್ರ ಯುತಿ ಇದ್ದರೆ ಆರ್ಕಿಟೆಕ್ಚರ್, ಔಷಧಿ ತಯಾರಿಕೆ, ಕುಜ-ಶನಿ ಯುತಿ ಇದ್ದರೆ ಮೆಕ್ಯಾನಿಕಲ್, ಆಟೋಮೊಬೈಲ್ ಇಂಜಿನಿಯರಿಂಗ್ ವಿಷಯವನ್ನು ಆಯ್ಕೆ ಮಾಡಿಕೊಳ್ಳುವುದು ಒಳ್ಳೆಯದು.
ಜನ್ಮ ಲಗ್ನ, ಕೇಂದ್ರ ತ್ರಿಕೋಣಗಳಲ್ಲಿ ರವಿ-ಶುಕ್ರ ಯುತಿ ಉಂಟಾದಲ್ಲಿ ವೈದ್ಯಕೀಯ ವ್ಯಾಸಂಗ ಉತ್ತಮವೆನಿಸುತ್ತದೆ. ಮಿಥುನ, ಕಟಕ, ಸಿಂಹ, ಕನ್ಯಾ, ತುಲಾ ಮತ್ತು ಕುಂಭ ಲಗ್ನಗಳಲ್ಲಿ ಜನಿಸಿದವರು ವಾಣಿಜ್ಯ ಕ್ಷೇತ್ರದಲ್ಲಿ ಸಫಲರೆನಿಸುತ್ತಾರೆ. ಇದಕ್ಕೆ ಬುಧ, ಶುಕ್ರ, ಶನಿಗ್ರಹಗಳು ಬಲಿಷ್ಠರಾಗಿರಬೇಕು. ಈ ಗ್ರಹಗಳಿಗೆ ಪರಸ್ಪರ ಸಂಬಂಧ ಉಂಟಾದರೆ ಅಧಿಕ ಸಫಲತೆ ದೊರೆಯುತ್ತದೆ.
ಗ್ರಹದೆಸೆ: ಯಾವ ಗ್ರಹದವರಿಗೆ ಯಾವ ಶಿಕ್ಷಣ ಸೂಕ್ತ *ಟಿ.ಆರ್.ವಿಜಯ ಕುಮಾರ್
ವೃಕ್ತಿಯ ಜಾತಕದ ಪ್ರಕಾರ ಯಾವ ಗ್ರಹ ವಿದ್ಯಾಭ್ಯಾಸಕ್ಕೆ ಸಂಬಂಧಿಸಿದೆ ಎಂದು ತಿಳಿದು ಆ ಗ್ರಹ ಸೂಚಿಸುವ ವಿದ್ಯೆಗಳನ್ನು ಅಭ್ಯಾಸ ಮಾಡುವುದರಿಂದ, ವಿದ್ಯಾಭ್ಯಾಸವು ಸರಾಗವಾಗಿ ಸಾಗಿ ಉತ್ತಮ ಫಲಿತಾಂಶವನ್ನು ಕೊಡುವುದು.
ಜ್ಯೋತಿಷ್ಯವು ಸೂಚನಾತ್ಮಕ ವಿಜ್ಞಾನ (Astrology is Indicative Science) ಇದರಿಂದ ಜೀವನದ ಎಲ್ಲ ಆಗುಹೋಗುಗಳನ್ನು ತಿಳಿದುಕೊಂಡು, ಅದಕ್ಕೆ ತಕ್ಕಂತೆ ನಮ್ಮ ಜೀವನವನ್ನು ರೂಪಿಸಿಕೊಂಡಲ್ಲಿ ಉತ್ತಮವಾದ ಜೀವನವನ್ನು ನಡೆಸಬಹುದು. ಜೀವನದ ಪ್ರಮುಖ ವಿಷಯಗಳು ಆರೋಗ್ಯ, ವಿದ್ಯಾಭ್ಯಾಸ, ಉದ್ಯೋಗ, ವೈವಾಹಿಕ ಜೀವನ, ಸಂತಾನ, ಸುಖ ಜೀವನವಾಗಿದ್ದು ಈ ಪೈಕಿ ವಿದ್ಯಾಭ್ಯಾಸವೂ ಒಂದು ಪ್ರಮುಖವಾದ ಅಂಶ.
ವ್ಯಕ್ತಿಯು ಆತನ ಜಾತಕಕ್ಕೆ ಅನುಗ್ರಹಿಸಿದ ವಿದ್ಯಾಭ್ಯಾಸವನ್ನು ಮಾಡಿದರೆ, ವಿದ್ಯಾಭ್ಯಾಸ ಮಾಡಿದರೆ, ಸುಗಮವಾಗಿ ಸಾಗುತ್ತದೆ. ಇಲ್ಲವಾದರೆ ಎಡರು-ತೊಡರುಗಳನ್ನು ಅನುಭವಿಸಬೇಕಾಗುತ್ತದೆ.
ಅನುಭವದಲ್ಲಿ ಕಂಡಂತೆ ಕೆಲವು ವಿದ್ಯಾರ್ಥಿಗಳು ತಮಗೆ ಇಷ್ಟಬಂದ ವಿಷಯವನ್ನು ಆರಿಸಿಕೊಂಡು, ನಂತರ ಅರ್ಧದಲ್ಲಿ ವಿದ್ಯಾಭ್ಯಾಸವನ್ನು ನಿಲ್ಲಿಸುವುದು ಅಥವಾ ಬೇರೆ ವಿಷಯಕ್ಕೆ ಬದಲಾವಣೆ ಮಾಡಿಕೊಳ್ಳುವುದನ್ನು ನೋಡಿದ್ದೇವೆ. ಆದ್ದರಿಂದ ಜ್ಯೋತಿಷ್ಯದ ಪ್ರಕಾರ ಸೂಚಿಸುವ ಶಿಕ್ಷಣವನ್ನು ಆರಿಸಿಕೊಂಡು ಮುಂದುವರಿಯುವುದು ಸೂಕ್ತ.
ಎಸ್‌ಎಸ್‌ಎಲ್‌ಸಿ, ಪಿಯುಸಿ ಮತ್ತು ಪದವಿ ಹಂತದ ವಿದ್ಯಾಭ್ಯಾಸಕ್ಕೆ ವ್ಯಕ್ತಿಯ ಜಾತಕದ 4ನೇ ಭಾವ, ವಿದ್ಯಾಕಾರಕರಾದ ಬುಧ, ಗುರು ಮತ್ತು 4ನೇ ಭಾವಸ್ಥಿತ ಗ್ರಹರು ದಶಾಭುಕ್ತಿ ಹಾಗೂ ಇತರೆ ಅಂಶಗಳನ್ನು ಗಮನಿಸಿ ನಿರ್ಣಯ ತೆಗೆದುಕೊಳ್ಳಬೇಕಾಗುತ್ತದೆ.
ದಶಾಭುಕ್ತಿ, ಚತುರ್ಥಾಧಿಪತಿ ಸ್ಥಿತಗ್ರಹ, ಕಾರಕರು ನಿರ್ಬಲ ಅಥವಾ ಅಶುಭರಾಗಿದ್ದಾಗ ಕೆಲವೊಂದು ಪರಿಹಾರಗಳನ್ನು ಆಚರಿಸಬೇಕಾಗುತ್ತದೆ ಮತ್ತು ರತ್ನಗಳನ್ನು ಸಹ ಧರಿಸಬೇಕಾಗುತ್ತದೆ.
ಉದಾಹರಣೆಗೆ ಕೆಲವೊಮ್ಮೆ ಎಸ್‌ಎಸ್‌ಎಲ್‌ಸಿಯಲ್ಲಿ ಶೇ.90 ಪಡೆದ ವಿದ್ಯಾರ್ಥಿ ಪಿಯುಸಿಯಲ್ಲಿ ಕಡಿಮೆ ಅಂಕ ಗಳಿಸುವುದು ಅಥವಾ ಅನುತ್ತೀರ್ಣವಾಗುವುದು.
ಜ್ಯೋತಿಷ್ಯಶಾಸ್ತ್ರದ ಪ್ರಕಾರ ಗ್ರಹಗಳು ವಿದ್ಯಾಭ್ಯಾಸದ ವಿಷಯಗಳನ್ನು ಸೂಚಿಸುತ್ತವೆ.
ರವಿ: ವೈದ್ಯಶಾಸ್ತ್ರ, ಐಎಎಸ್, ಕೆಎಎಸ್ ಇತ್ಯಾದಿ.
ಚಂದ್ರ: ಮನಃಶಾಸ್ತ್ರ, ಆಯುರ್ವೇದ ವೈದ್ಯಶಾಸ್ತ್ರ, ಸಸ್ಯಶಾಸ್ತ್ರ ಇತ್ಯಾದಿ.
ಕುಜ: ತಾಂತ್ರಿಕ ವಿದ್ಯೆ, ರಸಾಯನಶಾಸ್ತ್ರ, ಪಾಕಶಾಸ್ತ್ರ ಇತ್ಯಾದಿ.
ಬುಧ: ವಾಣಿಜ್ಯಶಾಸ್ತ್ರ, ಸಂಪರ್ಕ ವಿಜ್ಞಾನ, ನರವಿಜ್ಞಾನ ಇತ್ಯಾದಿ.
ಗುರು: ಹಣಕಾಸು ವಿದ್ಯೆ, ಕಾನೂನು, ಆಧ್ಯಾತ್ಮಿಕ ವಿದ್ಯೆ, ವೈದಿಕ ವಿದ್ಯೆ ಇತ್ಯಾದಿ.
ಶುಕ್ರ: ಕಲೆ, ಕಾನೂನು, ಸಂಗೀತ, ವೃತ್ತ, ನಾಟಕ, ಪಾಕ ವಿದ್ಯೆ ಇತ್ಯಾದಿ.
ಶನಿ: ಗಣಿ ವಿಜ್ಞಾನ, ಭೂವಿಜ್ಞಾನ, ವ್ಯವಸಾಯಶಾಸ್ತ್ರ ಇತ್ಯಾದಿ.
ರಾಹು: ವೈದ್ಯ, ಸಂಶೋಧನೆ, ಖಗೋಳ ಇತ್ಯಾದಿ.
ಕೇತು: ಆಧ್ಯಾತ್ಮಿಕ ವಿದ್ಯೆ, ಗಿಡಮೂಲಿಕೆ ಶಾಸ್ತ್ರ ಇತ್ಯಾದಿ
ವೃಕ್ತಿಯ ಜಾತಕದ ಪ್ರಕಾರ ಯಾವ ಗ್ರಹ ವಿದ್ಯಾಭ್ಯಾಸಕ್ಕೆ ಸಂಬಂಧಿಸಿದೆ ಎಂದು ತಿಳಿದು ಆ ಗ್ರಹ ಸೂಚಿಸುವ ವಿದ್ಯೆಗಳನ್ನು ಅಭ್ಯಾಸ ಮಾಡುವುದರಿಂದ, ವಿದ್ಯಾಭ್ಯಾಸವು ಸರಾಗವಾಗಿ ಸಾಗಿ ಉತ್ತಮ ಫಲಿತಾಂಶವನ್ನು ಕೊಡುವುದು.
ವ್ಯಕ್ತಿಯ ಜಾತಕವು ಸೂಚಿಸುವ (ಅಷ್ಟಕ ವರ್ಗ ಪ್ರಕಾರ) ದಿಕ್ಕಿಗೆ ಮುಖ ಮಾಡಿ ಅಭ್ಯಾಸ ಮಾಡುವುದು ಶ್ರೇಯಸ್ಕರ. ಸಾಮಾನ್ಯವಾಗಿ ಅಭ್ಯಾಸದ ದಿಕ್ಕು ಉತ್ತರ ಅಥವಾ ಪೂರ್ವವೆಂದು ಪರಿಗಣಿಸುತ್ತಾರೆ. ಆದರೆ ಕೆಲವು ಬಾರಿ ವ್ಯಕ್ತಿಯ ವೈಯಕ್ತಿಕ ಶುಭ ದಿನಕ್ಕೆ ದಕ್ಷಿಣ ಅಥವಾ ಪಶ್ಚಿಮವು ಆಗಿರುತ್ತದೆ. ಆದ್ದರಿಂದ ವೈಯಕ್ತಿಕ ಶುಭ ದಿಕ್ಕನ್ನು ಅಳವಡಿಸಿಕೊಳ್ಳುವುದು ಶುಭಕರ.
ವಿದ್ಯಾಭ್ಯಾಸ ಸ್ವದೇಶದಲ್ಲೋ ಅಥವಾ ವಿದೇಶದಲ್ಲೋ ಎನ್ನುವ ಸಂಗತಿಯನ್ನು ಸಹ ಜ್ಯೋತಿಷಶಾಸ್ತ್ರ ತಿಳಿಸುತ್ತದೆ.
ಆದ್ದರಿಂದ ಎಸ್ಸೆಸ್ಸೆಲ್ಸಿ ಮುಗಿಸಿ ಪಿಯುಸಿ, ಡಿಪ್ಲೊಮಾ, ಜೆಒಸಿ ಇತರೆ ಕೋರ್ಸ್‌ಗಳಿಗೆ ಹೋಗುವ ಮೊದಲು ವಿಜ್ಞಾನ, ವಾಣಿಜ್ಯ ಮತ್ತು ಕಲಾ ವಿಭಾಗವನ್ನು ಜ್ಯೋತಿಷಶಾಸ್ತ್ರ ಪ್ರಕಾರ ಆಯ್ಕೆ ಮಾಡಿಕೊಳ್ಳುವುದು ಸೂಕ್ತ.
ಯಾವುದೇ ವಿಷಯದಲ್ಲಾದರೂ ಜ್ಯೋತಿಷಶಾಸ್ತ್ರದ ಸೂಚನೆಯಂತೆ ಉನ್ನತ ವಿದ್ಯಾಭ್ಯಾಸವನ್ನು ಮುಂದುವರಿಸಿಕೊಂಡು ಹೋಗುವುದು ಸರಿಯಾದ ಕ್ರಮ.
ಕರಿಯರ್ ಗೈಡ್
ರವಿ : ರಾಜನೀತಿ ಶಾಸ್ತ್ರ, ಪ್ರಶಾಸನ, ರಾಜಭಾಷೆ, ಚಿಕಿತ್ಸಾ, ಶರೀರ ವಿಜ್ಞಾನ.
ಚಂದ್ರ : ಮನೋವಿಜ್ಞಾನ, ವನಸ್ಪತಿ ವಿಜ್ಞಾನ, ನಿಸರ್ಗ ಶಾಸ್ತ್ರ, ಹೋಟೆಲ್ ಮ್ಯಾನೇಜ್‌ಮೆಂಟ್, ಪತ್ರಿಕೋದ್ಯಮ.
ಕುಜ : ಭೂಗೋಳ ಶಾಸ್ತ್ರ, ಖನಿಜ ಶಾಸ್ತ್ರ, ಇತಿಹಾಸ, ಇಂಜಿನಿಯರಿಂಗ್, ಐಪಿಎಸ್, ಆರ್ಕಿಟೆಕ್ಚರ್.
ಬುಧ : ಗಣಿತಶಾಸ್ತ್ರ, ವ್ಯಾಕರಣ, ಅಕೌಂಟೆನ್ಸಿ, ಸಿ.ಎ., ಸಂಖ್ಯಾಶಾಸ್ತ್ರ.
ಗುರು : ಅರ್ಥಶಾಸ್ತ್ರ, ಸಾಹಿತ್ಯ, ಉಚ್ಛ ಶಿಕ್ಷಣಗಳಾದ ಎಂ.ಲಿಟ್, ಡಿ.ಲಿಟ್, ಪಿಎಚ್‌ಡಿ.
ಶುಕ್ಲ : ಲಲಿತಕಲೆ, ಫ್ಯಾಷನ್ ಡಿಸೈನಿಂಗ್, ಬ್ಯೂಟೀಷಿಯನ್, ಸಾಹಿತ್ಯ.
ಶನಿ :ಯಂತ್ರಶಾಸ್ತ್ರ, ಸಿವಿಲ್ ಇಂಜಿನಿಯರಿಂಗ್, ಮುದ್ರಣಾಲಯ ಜ್ಞಾನ.
ರಾಹು : ಕಂಪ್ಯೂಟರ್ ವಿಜ್ಞಾನ, ತರ್ಕಶಾಸ್ತ್ರ, ಹಿಪ್ನಾಟಿಸಂ, ಮೆಸ್ಮರಿಸಂ.
ಕೇತು : ಅಧ್ಯಾತ್ಮ, ಯಂತ್ರ-ಮಂತ್ರ-ತಂತ್ರ, ವೈಜ್ಞಾನಿಕ ಸಂಶೋಧನೆ.
ಕುಂಡಲಿಯಲ್ಲಿದೆ ವಿದ್ಯಾಭ್ಯಾಸ
ಪ್ರತಿ ವರ್ಷ ಎಸ್ಸೆಸ್ಸೆಲ್ಸಿ ಹಾಗೂ ಪಿಯುಸಿ ವಿದ್ಯಾರ್ಥಿಗಳ ಫಲಿತಾಂಶ ಹೊರ ಬಂದಾಗ ಮಕ್ಕಳಿಗೆ ಯಾವ ವಿಭಾಗದ ವಿದ್ಯಾಭ್ಯಾಸ ಆಯ್ಕೆ ಮಾಡಿಕೊಳ್ಳಬೇಕೆಂಬ ಚಿಂತೆ.
ಪ್ರತಿ ವರ್ಷ ಎಸ್ಸೆಸ್ಸೆಲ್ಸಿ ಹಾಗೂ ಪಿಯುಸಿ ವಿದ್ಯಾರ್ಥಿಗಳ ಫಲಿತಾಂಶ ಹೊರ ಬಂದಾಗ ಮಕ್ಕಳಿಗೆ ಯಾವ ವಿಭಾಗದ ವಿದ್ಯಾಭ್ಯಾಸ ಆಯ್ಕೆ ಮಾಡಿಕೊಳ್ಳಬೇಕೆಂಬ ಚಿಂತೆ. ಇತ್ತೀಚೆಗಂತೂ ಕಲಿಕೆಗೆ ಸಾಕಷ್ಟು ಕೋರ್ಸ್‌ಗಳು ಕೂಡ ಲಭ್ಯ ಇವೆ.
ಆದರೆ ಜ್ಯೋತಿಷ್ಯಶಾಸ್ತ್ರದ ಪ್ರಕಾರ ಅವರವರ ರಾಶಿ ಪ್ರಕಾರ ವಿದ್ಯಾಭ್ಯಾಸವನ್ನು ಆಯ್ಕೆ ಮಾಡಿಕೊಂಡು ಮುಂದುವರಿದರೆ ಆ ವಿದ್ಯೆ ಆತನಿಗೆ ಅಥವಾ ಆಕೆಗೆ ಹೆಚ್ಚಿನ ಫಲಕಾರಿ ಕೊಡುತ್ತವೆ ಎಂದು ಒಂಬತ್ತು ಗ್ರಹಗಳಿಂದ ಹಾಗೂ ಗ್ರಹಕ್ಕೆ ತಕ್ಕಂತೆ
ಗುರುತಿಸಬಹುದು. ಯಾವ ರಾಶಿಗೆ ಯಾವ ಕೋರ್ಸ್ ಸೂಕ್ತ ಎಂಬ ವಿವರ ಇಲ್ಲಿದೆ.
ಮೇಷ: ಈ ರಾಶಿಯ ಅಧಿಪತಿ ಕುಜ. ಇದು ಅಗ್ನಿತತ್ವ ರಾಶಿ. ಈ ರಾಶಿಯವರು ಭೂಗರ್ಭಶಾಸ, ಖಗೋಳಶಾಸ, ಕಂಪ್ಯೂಟರ್, ಬಣ್ಣಗಳ ತರಬೇತಿ, ಇತಿಹಾಸ ವಿಷಯವನ್ನು ಆರಿಸಿಕೊಳ್ಳಬಹುದು.
ವೃಷಭ:ಈ ರಾಶಿಯ ಅಧಿಪತಿ ಶುಕ್ರ. ಇದು ಭೂತತ್ವ ರಾಶಿ. ಈ ರಾಶಿಯವರು ಫ್ಯಾಷನ್ ಡಿಸೈನ್‌ನಿಂಗ್, ಡಿಪ್ಲೊಮಾ ಅಥವಾ ಎಂಜಿನಿಯರಿಂಗ್, ಇಂಟೀರಿಯರ್ ಡಿಸೈನಿಂಗ್, ಡಿಪ್ಲೊಮಾ, ಕಾಲ್‌ಸೆಂಟರ್, ಜರ್ನಲಿಸಂ, ವಿಜ್ಞಾನ (ಸಸ್ಯ) ವಿಭಾಗ, ವೈದ್ಯಕೀಯ ವಿಭಾಗವನ್ನು ಆರಿಸಿಕೊಳ್ಳಬಹುದು.
ಮಿಥುನ: ಈ ರಾಶಿಯ ಅಧಿಪತಿ ಬುಧ. ಇದು ವಾಯುತತ್ವ ರಾಶಿ. ಲೆಕ್ಕಪತ್ರಗಳ ಬಗ್ಗೆ, ಬಿಸ್ನೆಸ್ ಮ್ಯಾನೇಜ್‌ಮೆಂಟ್, ಎಂಕಾಮ್, ಬಿಎಡ್, ಜರ್ನಲಿಸಂ, ಗಗನಸಖಿ, ವಿಮಾನಯಾನ ವಿಭಾಗವನ್ನು ಆರಿಸಿಕೊಳ್ಳಬಹುದು.
ಕಟಕ:ಈ ರಾಶಿಯ ಅಧಿಪತಿ ಚಂದ್ರ. ಇದು ಜಲತತ್ವ ರಾಶಿ. ಸಮುದ್ರಯಾನ ತರಬೇತಿ, ಜಲ ಸಂಶೋಧನೆ, ಫ್ಯಾಷನ್ ಡಿಸೈನರ್, ವಿಜ್ಞಾನದ ವಿಭಾಗ, ಟಿಸಿಎಚ್, ಬಿಎಡ್, ಹೋಟೆಲ್ ಮ್ಯಾನೇಜ್‌ಮೆಂಟ್ ವಿಭಾಗವನ್ನು ಆರಿಸಿಕೊಳ್ಳಬಹುದು.
ಸಿಂಹ:ಈ ರಾಶಿಯ ಅಧಿಪತಿ ರವಿ ಗ್ರಹ. ಇದು ಅಗ್ನಿತತ್ವ ರಾಶಿ. ರಾಜಕೀಯಶಾಸ, ಗಣಕಶಾಸ, ಸಿನಿಮಾ ರಂಗ, ಖಗೋಳಶಾಸ, ಮಾಹಿತಿ ತಂತ್ರಜ್ಞಾನ, ವೃತ್ತಿಪರ ಕೋರ್ಸ್, ಪಬ್ಲಿಕ್ ರಿಲೇಷನ್ ಮ್ಯಾನೇಜ್‌ಮೆಂಟ್ ವಿಭಾಗವನ್ನು ಆರಿಸಿಕೊಳ್ಳಬಹುದು.
ಕನ್ಯಾ:ಈ ರಾಶಿಯ ಅಧಿಪತಿ ಬುಧ. ಇದು ಭೂತತ್ವ ರಾಶಿ. ವಾದ ವಿವಾದ ತರಬೇತಿ, ಭೌತಶಾಸ, ಸಂಶೋಧನೆ, ನಾಟ್ಯ, ಚಲನಚಿತ್ರ, ಬಿಸ್ನೆಸ್ ಮ್ಯಾನೇಜ್‌ಮೆಂಟ್, ಬಿಕಾಮ್, ಸಿಎ, ಸಾಫ್ಟ್‌ವೇರ್ ವಿಭಾಗವನ್ನು ಆರಿಸಿಕೊಳ್ಳಬಹುದು.
ತುಲಾ:ಈ ರಾಶಿಯ ಅಧಿಪತಿ ಶುಕ್ರ. ಇದು ವಾಯುತತ್ವ ರಾಶಿ. ಹೋಟೆಲ್ ಮ್ಯಾನೇಜ್‌ಮೆಂಟ್, ಗಣಕಶಾಸ, ಕಲಾರಂಗ, ಚಿತ್ರಕಲೆ, ಸಸ್ಯ ವಿಜ್ಞಾನ, ಮಲ್ಟಿ ಮೀಡಿಯಾ ಕೋರ್ಸ್, ಗ್ರಾಫಿಕ್ ಡಿಸೈನರ್ ವಿಭಾಗವನ್ನು ಆರಿಸಿಕೊಳ್ಳಬಹುದು.
ವೃಶ್ಚಿಕ:ಈ ರಾಶಿಯ ಅಧಿಪತಿ ಕುಜ. ಇದು ಜಲತತ್ವ ರಾಶಿ. ಆರ್ಕಿಟೆಕ್, ರಸಾಯನಶಾಸ, ರಾಜಕೀಯ ಸಂಬಂಧ ವಿದ್ಯೆ, ಖನಿಜಶಾಸ, ಕಾಲ್‌ಸೆಂಟರ್, ವಿದೇಶಿ ಭಾಷೆ ಕಲಿಕೆ, ಹಾರ್ಡ್‌ವೇರ್ ವಿಭಾಗವನ್ನು ಆರಿಸಿಕೊಳ್ಳಬಹುದು.
ಧನಸ್ಸು:ಈ ರಾಶಿಯ ಅಧಿಪತಿ ಗುರು. ಇದು ಅಗ್ನಿತತ್ವ ರಾಶಿ. ಉಪನ್ಯಾಸ, ಜ್ಯೋತಿಷ, ಮಂತ್ರಶಾಸ, ಗಣಿತಶಾಸ, ತಾಂತ್ರಿಕ ವಿದ್ಯೆ, ವಾಯುಯಾನ, ಸೈನಿಕ ವಿಭಾಗ, ಸಾಫ್ಟ್‌ವೇರ್ ವಿದ್ಯೆ ವಿಭಾಗವನ್ನು ಆರಿಸಿಕೊಳ್ಳಬಹುದು.
ಮಕರ:ಈ ರಾಶಿಯ ಅಧಿಪತಿ ಶನಿ. ಇದು ಭೂತತ್ವ ರಾಶಿ. ರಹಸ್ಯ ವಿದ್ಯೆ, ವಾಹನ ವಿದ್ಯೆ, ಖಗೋಳಶಾಸ, ರಾಸಾಯನಿಕ, ಮಲ್ಟಿ ಮೀಡಿಯಾ ಕೋರ್ಸ್, ಕೈಗಾರಿಕಾ ತರಬೇತಿ, ಚರ್ಮಕ್ಕೆ ಸಂಬಂಧಪಟ್ಟ ವಿದ್ಯೆ, ವೈದ್ಯಕೀಯ ವಿಭಾಗವನ್ನು ಆರಿಸಿಕೊಳ್ಳಬಹುದು.
ಕುಂಭ:ಈ ರಾಶಿಯ ಅಧಿಪತಿ ಶನಿ. ಇದು ವಾಯುತತ್ವ ರಾಶಿ. ತರ್ಕಶಾಸ, ಜರ್ನಲಿಸಂ, ಲೈಬ್ರರಿಯನ್, ಸೈನಿಕ ವಿಭಾಗ, ಕಲಾ ವಿಭಾಗ, ಸಂಶೋಧನೆ, ಶಿಕ್ಷಣ ವಿದ್ಯೆ ವಿಭಾಗವನ್ನು ಆರಿಸಿಕೊಳ್ಳಬಹುದು.
ಮೀನ:ಈ ರಾಶಿಯ ಅಧಿಪತಿ ಗುರು. ಇದು ಜಲತತ್ವ ರಾಶಿ. ವಾಯುಯಾನ, ಉಪನ್ಯಾಸ, ಪಿ.ಟಿ ಟೀಚರ್, ಸಿನಿಮಾ ರಂಗ, ಹೋಟೆಲ್ ಮ್ಯಾನೇಜ್‌ಮೆಂಟ್, ಮೆಡಿಕಲ್, ಎಂಜಿನಿಯರಿಂಗ್, ಸಾಫ್ಟ್‌ವೇರ್, ಈವೆಂಟ್ ಮ್ಯಾನೇಜ್‌ಮೆಂಟ್, ಡಿಪ್ಲೊಮಾ, ಜರ್ನಲಿಸಂ ಉಪನ್ಯಾಸ, ವಿದೇಶಿ ಭಾಷೆ ಕಲಿಕೆ, ಡಿಸೈನರ್ ವಿಭಾಗವನ್ನು ಆರಿಸಿಕೊಳ್ಳಬಹುದು.
Wednesday, 3 October 2018
ಗರುಡ ಪುರಾಣ – ಅಧ್ಯಾಯ 01 – ಭಾಗ 03
ಗರುಡ ಪುರಾಣ – ಅಧ್ಯಾಯ 01 – ಭಾಗ 03
ಸತ್ಸಂಗ ಬಯಸದ, ದೈವೀ ಸಂಪತ್ತಿಲ್ಲಿ ಆಸಕ್ತಿಯಿಲ್ಲದ್ದ, ದುಷ್ಟರ ಸಹವಾಸಲ್ಲಿಪ್ಪ, ಆಶಾಮೋಹಕಾಮಭೋಗಾಸಕ್ತಿಲಿ ಜೀವನ ನಡೆಶುವ ಜೀವಿ, ಪೂರ್ವಕೃತಕರ್ಮದ ಫಲವ ಅನುಭವಿಸ್ಯೊಂಡು ಇಪ್ಪ ಒಂದು ಹಂತಲ್ಲಿ ಯಾವುದೋ ಆಧಿವ್ಯಾಧಿ ರೋಗಕ್ಕೆ ಬಲಿಯಾಗಿ ಹಸೆ ಹಿಡುದು, ಯಮಪಾಶ ಅವನ ಮೇಲೆ ಬಿದ್ದು, ವಿಲಪಿಸುವ ಬಂಧುಜನರ ನಡುಕೆ ತುಚ್ಛೀಕಾರ ದೃಷ್ಟಿಗೆ ತುತ್ತಾಗಿ, ವೇದನೆಂದ ನರಳಿಯೊಂಡು, ಬಾಯಿಲಿ ಜೊಲ್ಲು ಹರುಸಿ, ದೊಂಡೆಲಿ ಕಫಗಟ್ಟಿ, ಶ್ವಾಸೋಚ್ಛಾಸಕ್ಕೇ ಕಷ್ಟ ಪಟ್ಟುಗೊಂಡಿಪ್ಪಗ, ದಿವ್ಯದೃಷ್ಟಿ ಒಂದರಿ ಗೋಚರಿಸಿ, ಏಕಕಾಲಕ್ಕೆ ಇಹಪರ ಲೋಕವ ನೋಡಿ ಬೆರಗಾಗಿ, ಮಾತು ಬಾರದ್ದೆ, ಅಕೇರಿಗೆ ಅಧೋದ್ವಾರಲ್ಲಿ ಪ್ರಾಣವಾಯು ಹೋವ್ತು, ಜೀವಿ ಆ ಶರೀರವ ಬಿಟ್ಟು ಹೆರ ಬತ್ತ° ಹೇದು ಕಳುದ ವಾರದ ಭಾಗಲ್ಲಿ ಓದಿದ್ದದು. ಮುಂದೆ-
ಗರುಡ ಪುರಾಣ – ಅಧ್ಯಾಯ 01 – ಭಾಗ 03
ಯಮದೂತೌ ತದಾ ಪ್ರಾಪ್ತೌ ಭೀಮೌ ಸರಭಸೇಕ್ಷಣೌ ।images6
ಪಾಶದಂಡಧರೌ ನಗ್ನೌ ದಂತೈಃ ಕತಕತಾಯತೌ ॥೩೦॥
ಅಂಬಗ ಭಯಂಕರ ಸ್ವರೂಪರಾದ ತೀಕ್ಷ್ಣವಾದ ಕಣ್ಣುಗಳಿಪ್ಪ, ಪಾಶ ಮತ್ತೆ ದಂಡವ ಧರಿಸಿಪ್ಪ ನಗ್ನರಾದ, ಹಲ್ಲುಗಳ ಕಟಕಟನೆ ಕಚ್ಚಿಗೊಂಡಿಪ್ಪ ಇಬ್ರು ಯಮದೂತರುಗೊ ಹತ್ರೆ ಬತ್ತವು.
ಊರ್ಧ್ವಕೇಶೌ ಕಾಕಕೃಷ್ಟೌ ವಕ್ರತುಂಡೌ ನಖಾಯುಧೌ ।
ಸ ದೃಷ್ಟ್ವಾ ತ್ರಸ್ತಹೃದಯಃ ಶಕೃನ್ಮೂತ್ರಂ ವಿಮುಂಚತಿ ॥೩೧॥
ಕೇಶವ ಮೇಗಂತಾಗಿ ನೆಗ್ಗಿ ಕಟ್ಟಿಗೊಂಡಿಪ್ಪ, ಕಾಕೆ ಕಪ್ಪು ಬಣ್ಣದವರಾದ, ವಕ್ರಮೋರೆಯ, ಉಗುರುಗಳನ್ನೇ ಆಯುಧವಾಗಿರಿಸಿಪ್ಪ ಯಮದೂತರ ನೋಡಿ ಅಂವ° ಹೃದಯಂದ ಹೆದರಿ ಮಲಮೂತ್ರ ವಿಸರ್ಜಿಸುತ್ತ°.
ಅಂಗುಷ್ಟಮಾತ್ರಃ ಪುರುಷೋ ಹಾಹಾಕುರ್ವನ್ಕಲೇವರಾತ್ ।
ತದೈವ ಗೃಹ್ಯತೇ ದೂತೈರ್ಯಾಮ್ಯೈ ಪಶ್ಯನ್ಸ್ವಕಂ ಗೃಹಮ್ ॥೩೨॥
ಹಾಹಾಕಾರ ಮಾಡುತ್ತಿಪ್ಪ, ಹೆಬ್ಬೆರಳಗಾತ್ರದ ಪುರುಷ°, ತನ್ನ ಸ್ಥೂಲದೇಹವ ನೋಡುತ್ತಿಪ್ಪಗಳೇ ಯಮದೂತರಿಂದ ಆ ದೇಹಂದ ಎಳೆಯಲ್ಪಡುತ್ತ°.
ಯಾತನಾದೇಹ ಆವೃತ್ಯ ಪಾಶೈರ್ಬದ್ಧ್ವಾ ಗಲೇಬಲಾತ್ ।
ನಯತೋ ದೀರ್ಘಮಧ್ವಾನಂ ದಂಡ್ಯಂ ರಾಜಭಟಾ ಯಥಾ ॥೩೩॥
ಯಾತನಾದೇಹಂದ ಒಡಗೂಡಿದ ಅವನ ಕೊರಳ ಪಾಶಂದ ಬಲವಾಗಿ ಬಂಧಿಸಿ, ರಾಜಭಟರುಗೊ ಅಪರಾಧಿಯ ಎಳಕ್ಕೊಂಡು ಹೋವ್ತಾಂಗೆ ಯಮದೂತರು ದೀರ್ಘವಾದ ಮಾರ್ಗಲ್ಲಿ ಎಳಕ್ಕೊಂಡು ಹೋವ್ತವು.
ತಸ್ಯೈವಂ ನೀಯಮಾನಸ್ಯ ದೂತಾಃ ಸತರ್ಜಯಂತಿ ಚ ।
ಪ್ರವದಂತಿ ಭಯಂ ತೀವ್ರಂ ನರಕಾಣಾಂ ಪುನಃ ಪುನಃ ॥೩೪॥
ಈ ರೀತಿ ಕರಕ್ಕೊಂಡು ಹೋಪಗ ಯಮದೂತರುಗೊ ಅವನ ಹೆದರುಸುತ್ತವು ಹಾಂಗೂ ಹೆದರಿಕೆಯಪ್ಪ ನರಕದ ವರ್ಣನೆಯ ಪುನಃ ಪುನಃ ಮಾಡುತ್ತವು.
ಶೀಘ್ರಂ ಪ್ರಚಲ ದುಷ್ಟಾತ್ಮಾನ್ಯಾಸ್ಯಸಿ ತ್ವಂ ಯಮಾಲಯಮ್ ।
ಕುಂಭೀಪಾಕಾದಿ ನರಕಾಂಸ್ತ್ವಾಂ ನಯಾವಾದ್ಯ ಮಾ ಚಿರಮ್ ॥೩೫॥
“ನೀನು ದುಷ್ಟ°, ಬೇಗ ನೆಡೆ, ಈಗ ನೀನು ಯಮನಾಲಯಕ್ಕೆ ಹೋವ್ತಾ ಇದ್ದೆ. ಕುಂಭೀಪಾಕ ಮೊದಲಾದ ನರಕಂಗೊಕ್ಕೆ ಈಗ ನಿನ್ನ ಕರಕ್ಕೊಂಡು ಹೋವ್ತೆಯೋ°. ತಡವು ಮಾಡೆಡ ಬೇಗ ನಡೆ”
ಏವಂ ವಾಚಸ್ತದಾ ಶೃಣ್ವನ್ಬಂಧೂನಾಂ ರುದಿತಂ ತಥಾ ।
ಉಚ್ಚೈರ್ಹಾಹೇತಿ ವಿಲಪಂಸ್ತಾಡ್ಯತೇ ಯಮಕಿಂಕರೈಃ ॥೩೬॥
ಈ ನಮೂನೆಯ ಮಾತುಗಳನ್ನೂ ಬಂಧುಗಳ ರೋದನವನ್ನೂ ಕೇಳಿಗೊಂಡು, ಗಟ್ಟಿ ಸ್ವರಲ್ಲಿ ಹಾಹಾಕಾರ ಮಾಡ್ಯೊಂಡು ಕೂಗ್ಯೋಂಡಿಪ್ಪಗ ಯಮಕಿಂಕರುಗಳಿಂದ ಜೆಪ್ಪಲ್ಪಡುತ್ತ°.
ತಯೋರ್ನಿರ್ಭಿನ್ನಹೃದಯಸ್ತರ್ಜನೈರ್ಜಾತವೇಪಥುಃ ।
ಪಥಿ ಶ್ವಭಿರ್ಭಕ್ಷ್ಯಮಾಣ ಆರ್ತೋsಘಂ ಸ್ವಮನುಸ್ಮರನ್ ॥೩೭॥
ಹೆದರಿಕೆಂದ ವಿಕೀರ್ಣ ಹೃದಯನಾಗಿ ಹೋಗ್ಯೊಂಡಿಪ್ಪಗ ಮಾರ್ಗಲ್ಲಿ ನಾಯಿಗಳಿಂದ ತಿನ್ನಲ್ಪಡುತ್ತ ಆರ್ತನಾಗಿ ತನ್ನ ಪಾಪಂಗಳ ಸ್ಮರಿಸಿಗೊಂಡು ಮುಂದೆ ಹೋವ್ತ°.
ಕ್ಷುತ್ತೃಟ್ ಪರೀತೋsರ್ಕದವಾನಲಾನಿಲೈಃ ಸಂತಪ್ಯಮಾನಃ ಪಥಿ ತಪ್ತವಾಲುಕೇ ।
ಕೃಚ್ಛ್ರೇಣ ಪೃಷ್ಠೇ ಕಶಯಾ ಚ ತಾಡಿತಶ್ಚಲತ್ಯಶಕ್ತೋsಪಿ ನಿರಾಶ್ರಮೋದಕೇ ॥೩೮॥
ಹಶು ಆಸರಂದ ಕಂಗಾಲಾಗಿ, ಸುಡುವ ಸೂರ್ಯ°, ಕಾಡ್ಗಿಚ್ಚು, ಬೆಶಿಗಾಳಿಂದ ಬೆಂದುಗೊಂಡು, ಬೆನ್ನಮೇಗೆ ಬೀಳುವ ಛಾಟಿಯೇಟುಗಳಿಂದ ಕಡುನೊಂದು, ನೀರು ನೆರಳಿಲ್ಲದೆ, ಕಾದ ಹೊಯಿಗೆ ಮಾರ್ಗಲ್ಲಿ ಅಂವ° ನಿತ್ರಾಣಿಯಾದರೂ ಪ್ರಯಾಸಂದ ನಡೆತ್ತ°.
ತತ್ರ ತತ್ರ ಪತನ್ ನಿಶ್ರಾಂತೋ ಮೂರ್ಛಿತಃ ಪುನರುತ್ಥಿತಃ ।
ಯಥಾ ಪಾಪೀಯಸಾ ನೀತಸ್ತಮಸಾ ಯಮಸಾದನಂ ॥೩೯॥
ಆಯಾಸಂದ ಅಲ್ಲಲ್ಲಿ ಮೂರ್ಛಿತನಾಗಿ ಬಿದ್ದುಗೊಂಡು ಕಷ್ಟಪಟ್ಟುಗೊಂಡು ಎದ್ದುಗೊಂಡು ನಡವ ಅವನ ಈ ರೀತಿಯಾಗಿ ಪಾಪಿಯಾದವನ ಕಸ್ತಲೆಯ ದಾರಿಲಿ ಯಮನ ಮನಗೆ ಕರೆದೊಯ್ಯಲಾವ್ತು°.
ತ್ರಿಭಿರ್ಮುಹೂರ್ತೈರ್ದ್ವಾಭ್ಯಾಂ ವಾ ನೀಯತೇ ತತ್ರ ಮಾನವಃ ।
ಪ್ರದರ್ಶಯಂತಿ ದೂತಾಸ್ತಾ ಘೋರಾ ನರಕಯಾತನಾಃ ॥೪೦॥
ಆ ಜೀವಿಯ (ಮನುಷ್ಯನ) ಎರಡು ವಾ ಮೂರು ಮುಹೂರ್ತಲ್ಲಿ (ಒಂದುವರೆ ಯಾ ಎರಡು ಕಾಲು ಗಂಟೆಲಿ) ಕರಕ್ಕೊಂಡು ಹೋವ್ತವು. ಅಲ್ಲಿ ಘೋರನರಕ ಯಾತನೆಯ ಅವಂಗೆ ಯಮದೂತರುಗೊ ತೋರುಸುತ್ತವು. (1ಮುಹೂರ್ತ = 45 ನಿಮಿಷ)
ಮುಹೂರ್ತಮಾತ್ರಾತ್ತ್ವರಿತಂ ಯಮಂ ವೀಕ್ಷ್ಯಭಯಂ ಪುಮಾನ್ ।
ಯಮಾಜ್ಞಯಾ ಸಮಂ ದೂತೈಃ ಪುನರಾಯಾತಿ ಖೇಚರಃ ॥೪೧॥
ಕೇವಲ ಒಂದು ಮುಹೂರ್ತಲ್ಲಿ ಬೇಗಂದ ಯಮನನ್ನೂ, ಭಯಪ್ರದವಾದ ಯಾತನೆಯನ್ನೂ ನೋಡಿದ ಆ ಜೀವಿ (ಮನುಷ್ಯ) ಯಮನ ಆಜ್ಞಾನುಸಾರವಾಗಿ ದೂತರಿಂದೊಡಗೂಡಿ ಆಕಾಶಮಾರ್ಗಲ್ಲಿ ಹಿಂತುರುಗುತ್ತ°.
ಆಗಮ್ಯ ವಾಸನಾಬದ್ಧೋ ದೇಹಮಿಚ್ಛನ್ಯಮಾನುಗೈಃ ।
ಧೃತಃ ಪಾಶೇನ ರುದತಿ ಕ್ಷುತ್ತೃಡ್ಭ್ಯಾಂ ಪರಿಪೀಡಿತಃ ॥೪೨॥
ಬಂದಪ್ಪದ್ದೇ ತನ್ನ ಸ್ಥೂಲದೇಹವ ಆಶಿಸಿಗೊಂಡು ಆದರೆ ಯಮನ ಪಾಶಂದ ಹಿಂದೆಳೆಯಲ್ಪಟ್ಟು ಹಶು ಆಸರು ಪೀಡಿತನಾಗಿ ಕೂಗುತ್ತ°.
ಭುಂಕ್ತೇ ಪಿಂಡಂ ಸುತೈರ್ದತ್ತಂ ದಾನಂ ಚಾತುರಕಾಲಿಕಂ ।
ತಥಾಪಿ ನಾಸ್ತಿ ಕಸ್ತಾರ್ಕ್ಷ್ಯತೃಪ್ತಿಂ ಯಾತಿ ನ ಪಾತಕೀ ॥೪೩॥
ತನ್ನ ಮಕ್ಕಳಿಂದ ಕೊಡಲ್ಪಟ್ಟ ಪಿಂಡವನ್ನೂ, ದಾನವನ್ನೂ ತಿಂತ°. ಅಂದರೂ ನಾಸ್ತೀಕನಾದ ಆ ಪಾಪಿ ಅದರಿಂದ ತೃಪ್ತಿ ಹೊಂದುತ್ತನಿಲ್ಲೆ.
ಪಾಪಿನಾಂ ನೋಪತಿಷ್ಠಂತಿ ದಾನಂ ಶ್ರಾದ್ಧಂ ಜಲಾಂಜಲಿಃ ।
ಅತಃ ಕ್ಷುದ್ವ್ಯಾಕುಲಾ ಯಾಂತಿ ಪಿಂಡದಾನಭುಜೋsಪಿ ತೇ ॥೪೪॥
ಪಾಪಿಗೊಕ್ಕೆ ದಾನ, ಶ್ರಾದ್ಧ, ಜಲಾಂಜಲಿಗಳಿಂದ ತೃಪ್ತಿಯುಂಟಾವ್ತಿಲ್ಲೆ. ಹಾಂಗಾಗಿ ಪಿಂಡವ ಭುಂಜಿಸಿರೂ ಅವ್ವು ಹಶುವಿಂದ ವ್ಯಾಕುಲರಾಗಿರುತ್ತವು.
ಭವಂತಿ ಪ್ರೇತರೂಪಾಸ್ತೇ ಪಿಂಡದಾನ ವಿವರ್ಜಿತಾಃ ।
ಆಕಲ್ಪಂ ನಿರ್ಜನಾರಣ್ಯೇ ಭ್ರಮಂತಿ ಬಹುದುಃಖಿತಾಃ ॥೪೫॥
ಪಿಂಡದಾನವ ಪಡೆಯದ್ದೆ ಇಪ್ಪವ್ವು ಪ್ರೇತರೂಪವ ಹೊಂದಿ, ಒಂದು ಕಲ್ಪದವರೇಂಗೆ ನಿರ್ಜನವಾದ ಅರಣ್ಯಲ್ಲಿ ಬಹುದುಃಖಿತರಾಗಿ ಅಲೆದಾಡುತ್ತಿರುತ್ತವು.
ನಾಭುಕ್ತಂ ಕ್ಷೀಯತೇ ಕರ್ಮ ಕಲ್ಪಕೋಟಿಶತೈರಪಿ ।
ಅಭುಕ್ತ್ವಾ ಯಾತನಾಂ ಜಂತುರ್ಮಾನುಷ್ಯಂ ಲಭತೇ ನಹಿ ॥೪೬॥
ನೂರು ಕೋಟಿ ಕಲ್ಪಂಗಳಾದರೂ ಕರ್ಮಫಲವ ಅನುಭವುಸದ್ದೆ ಕ್ಷಯವಾವ್ತಿಲ್ಲೆ. ಯಾತನೆಯ ಅನುಭವುಸದ್ದೆ ಜೀವಿಗೆ ಮನುಷ್ಯ ಜನ್ಮವು ಲಭಿಸುತ್ತಿಲ್ಲೆ.
ಅತೋ ದದ್ಯಾತ್ಸುತಃ ಪಿಂಡಾನ್ ದಿನೇಷು ದಶಸು ದ್ವಿಜ ।
ಪ್ರತ್ಯಹಂ ತೇ ವಿಭಜ್ಯಂತೇ ಚತುರ್ಭಾಗೈಃ ಖಗೋತ್ತಮ ॥೪೭॥
ಹಾಂಗಾಗಿ, ಏ ‘ದ್ವಿಜ’ನಾದವನೇ!, ಪಕ್ಷಿಶ್ರೇಷ್ಠನೇ!, ಮಗನಾದಂವ° ಹತ್ತು ದಿನಂಗಳ ಪಿಂಡವ ಕೊಡೆಕು. ಅವ್ವು ಪ್ರತಿದಿನವೂ ನಾಲ್ಕು ಭಾಗವಾಗಿ ವಿಭಜಿತವಾವ್ತು. (ಅಬ್ಬೆಯ ಹೊಟ್ಟೆಂದ ಒಂದರಿ, ಮೊಟ್ಟೆಂದ ಒಂದರಿ ಹೀಂಗೆ ಎರಡು ಸರ್ತಿ ಹುಟ್ಟುತ್ತರಿಂದ ಪಕ್ಷಿಗೊಕ್ಕೆ ‘ದ್ವಿಜ’ ಹೇಳಿ ಹೆಸರು)
ಭಾಗದ್ವಯಂ ತು ದೇಹಸ್ಯ ಪುಷ್ಟಿದಂ ಭೂತಪಂಚಕೇ ।
ತೃತೀಯಂ ಯಮದೂತಾನಾಂ ಚತುರ್ಥಂ ಸೋಪಜೀವತಿ ॥೪೮॥
(ಅದರಲ್ಲಿ) ಎರಡು ಭಾಗ ದೇಹದ ಪಂಚಭೂತಂಗಳ ಪುಷ್ಟಿದಾಯಕವಾವ್ತು. ಮೂರನೇದು ಯಮದೂತರಿಂಗೆ, ನಾಲ್ಕನೇದರಿಂದ ತಾನು ಜೀವಿಸುತ್ತ°.
ಅಹೋರಾತ್ರೈಶ್ಚ ನವಭಿ ಪ್ರೇತಃ ಪಿಂಡಮವಾಪ್ನುಯಾತ್ ।
ಜಂತುರ್ನಿಷ್ಟನ್ನ ದೇಹಶ್ಚ ದಶಮೇ ಬಲಮಾಪ್ನುಯಾತ್ ॥೪೯॥
ಒಂಬತ್ತು ದಿನ ಹಗಲು ಇರುಳು ಪ್ರೇತವು ಪಿಂಡವ ಪಡೆತ್ತು. ಹತ್ತನೇ ದಿನ ಪೂರ್ಣವಾದ ಅದರ ದೇಹಲ್ಲಿ ಬಲವುಂಟಾವ್ತು.
ದಗ್ಧೇ ದೇಹೇ ಪುನರ್ದೇಹಃ ಪಿಂಡೈರುತ್ಪದ್ಯತೇ ಖಗ ।
ಹಸ್ತಮಾತ್ರಃ ಪುಮಾನ್ಯೇನ ಪಥಿ ಭುಂಕ್ತೇ ಶುಭಾಶುಭಮ್ ॥೫೦॥
ಏ ಪಕ್ಷಿಯೇ!, ಹಿಂದಾಣ ದೇಹ ದಗ್ಧವಾದ ಮತ್ತೆ ಪುನಃ ಕೈಯಷ್ಟು ಗಾತ್ರದ ದೇಹವು ಪಿಂಡಂಗಳಿಂದ ಉಂಟಾವ್ತು. ಅದರ ಸಹಾಯಂದ ಮಾರ್ಗಲ್ಲಿ ಅಂವ ಶುಭಾಶುಭಂಗಳ ಅನುಭವುಸುತ್ತ°.
ಪ್ರಥಮೇsಹನಿ ಯಃ ಪಿಂಡಸ್ತೇನ ಮೂರ್ಧಾ ಪ್ರಜಾಯತೇ ।
ಗ್ರೀವಾಸ್ಕಂಧೌದ್ವಿತೀಯೇನ ತೃತೀಯಾದ್ಧೃದಯಂ ಭವೇತ್ ॥೫೧॥
ಸುರೂವಾಣ ದಿನ ಕೊಡಲ್ಪಟ್ಟ ಪಿಂಡಂದ ತಲೆ ಹುಟ್ಟುತ್ತು. ಎರಡ್ನೇ ದಿನದ್ದರಿಂದ ಕೊರಳು ಮತ್ತು ಭುಜವೂ, ಮೂರ್ನೇ ದಿನದ್ದರಿಂದ ಹೃದಯವು ಉಂಟಾವ್ತು.
ಚತುರ್ಥೇನ ಭವೇತ್ಪೃಷ್ಠಂ ಪಂಚಮಾನ್ನಾಭಿರೇವ ಚ ।
ಷಷ್ಠೇನ ಚ ಕಟೀ ಗುಹ್ಯಂ ಸಪ್ತಮಾತ್ಸಕ್ಥಿನೀ ಭವೇತ್ ॥ ೫೨॥
ನಾಲ್ಕನೇದರಿಂದ ಬೆನ್ನೂ, ಐದನೇದರಿಂದ ಹೊಕ್ಕುಳೂ ಉಂಟಾವ್ತು. ಆರನೇದರಿಂದ ಕಟಿಪ್ರದೇಶ ಮತ್ತೆ ಗುಪ್ತಾಂಗಂಗೊ, ಏಳನೇದರಿಂದ ತೊಡೆಯೂ ಉಂಟಾವ್ತು.
ಜಾನು ಪಾದೌ ತಥಾ ದ್ವಾಭ್ಯಾಂ ದಶಮೇsಹ್ನಿಕ್ಷುಧಾತೃಷಾ ॥೫೩॥
ಹಾಂಗೇ ಇನ್ನೆರಡು ದಿನಗಳ ಪಿಂಡಂದ ಮೊಣಕಾಲು ಮತ್ತೆ ಪಾದಂಗಳೂ ಹತ್ತನೇ ದಿನದ ಪಿಂಡಂದ ಹಶು ಆಸರವೂ ಉಂಟಾವ್ತು.
ಪಿಂಡಜಂ ದೇಹಮಾಶ್ರಿತ್ಯ ಕ್ಷುಧಾವಿಷ್ಟಸ್ತೃಷಾರ್ದಿತಃ ।
ಏಕಾದಶಂ ದ್ವಾದಶಂ ಚ ಪ್ರೇತೋ ಭುಂಕ್ತೇ ದಿನದ್ವಯಮ್ ॥
ಪಿಂಡಂಗಳಿಂದ ಉಂಟಾದ ಈ ದೇಹವ ಆಶ್ರಯಿಸಿ ಹಶುವಿಂದ ಕೂಡಿ, ಆಸರಂದ ಬಳಲಿ ಆ ಜೀವ ಹನ್ನೊಂದು ಮತ್ತೆ ಹನ್ನೆರಡ್ನೇ ದಿನಂಗಳಲ್ಲಿ ಉಣ್ತ°.
ತ್ರಯೋದಶೇsಹನಿ ಪ್ರೇತೋ ಯಂತ್ರಿತೋ ಯಮಕಿಂಕರೈಃ ।
ತಸ್ಮಿನ್ ಮಾರ್ಗೇ ವ್ರಜತ್ಯೇಕೋ ಗೃಹೀತ ಇವ ಮರ್ಕಟ ॥೫೫॥
ಹದಿಮೂರ್ನೇ ದಿನ ಜೀವ ಯಮಕಿಂಕರನ ಹಿಡಿತಲ್ಲಿ ಬಂಧಿಸಲ್ಪಟ್ಟು ಮಂಗನಾಂಗೆ ಆ ಮಾರ್ಗಲ್ಲಿ ತಾನೊಬ್ಬನೇ ಹೋವ್ತ°.
ಷಡಶೀತಿಸಹಸ್ರಾಣಿ ಯೋಜನಾನಾಂ ಪ್ರಮಾಣತಃ ।
ಯಮಮಾರ್ಗಸ್ಯ ವಿಸ್ತಾರೋ ವಿನಾ ವೈತರಿಣೀಂ ಖಗ ॥೫೬॥
ಎಲೈ ಪಕ್ಷಿಯೇ!, ವೈತರಿಣೀ ನದಿಯ ಬಿಟ್ಟು ಯಮಮಾರ್ಗದ ಪ್ರಮಾಣವು (ಅಳತೆ) 86000 ಯೋಜನ ದೂರ ಆಗಿದ್ದು.
(1 ಯೋಜನ = ಸುಮಾರು 8 – 9 ಮೈಲಪ್ಪಷ್ಟು ದೂರ. ನಿಖರವಾದ ಅಳತೆ ಯಾವ ದಾಖಲೆಲಿಯೂ ಉಲ್ಲೇಖ ಆಯ್ದಿಲ್ಲೆ )
ಅಹನ್ಯಹನಿ ವೈ ಪ್ರೇತೋ ಯೋಜನಾನಾಂ ಶತದ್ವಯಮ್ ।
ಚತ್ವಾರಿಂಶತ್ತಥಾ ಸಪ್ತ ದಿವಾರಾತ್ರೇಣ ಗಚ್ಛತಿ ॥೫೭॥
ಪ್ರತಿದಿನವೂ ಆ ಜೀವಿ ನಿಶ್ಚಯವಾಗಿಯೂ 247 ಯೋಜನಂಗಳಷ್ಟು ದೂರವ ಹಗಲಿರುಳು ನಡಕ್ಕೊಂಡು ಹೋವ್ತ°.
ಅತೀತ್ಯ ಕ್ರಮಶೋ ಮಾರ್ಗೇ ಪುರಾಣೀಮಾನಿ ಷೋಡಶ ।
ಪ್ರಯಾತಿ ಧರ್ಮರಾಜಸ್ಯ ಭವನಂ ಪಾತಕೀ ಜನಃ ॥೫೮॥
ಮಾರ್ಗಲ್ಲಿ ಕ್ರಮವಾಗಿ 16 ಊರುಗಳ ದಾಂಟಿ ಪಾಪಿ ಧರ್ಮರಾಜನ ಭವನಕ್ಕೆ ಹೋಗಿ ಸೇರುತ್ತ°.
ಸೌಮ್ಯಂ ಸೌರಿಪುರಂ ನಗೇಂದ್ರಭವನಂ ಗಂಧರ್ವ ಶೈಲಾಗಮೌ ।
ಕ್ರೌಂಚಂ ಕ್ರೂರಪುರಂ ವಿಚಿತ್ರಭವನಂ ಬಹ್ವಾಪದಂ ದುಃಖದಮ್ ॥
ನಾನಾಕ್ರಂದಪುರಂ ಸುತಪ್ತಭವನಂ ರೌದ್ರಂ ಪಯೋವರ್ಷಣಮ್ ।
ಶೀತಾಢ್ಯಂ ಬಹುಭೀತಿ ಧರ್ಮಭವನಂ ಯಾಮ್ಯಂಪುರಂ ಚಾಗ್ರತಃ ॥೫೯॥
ಸೌಮ್ಯ, ಸೌರಿಪುರ, ನಗೇಂದ್ರಭವನ, ಗಂಧರ್ವ, ಶಿಲಾಗಮ, ಕ್ರೌಂಚ, ಕ್ರೂರಪುರ, ವಿಚಿತ್ರಭವನ, ಬಹ್ವಾಪದ, ದುಃಖದ, ನಾನಾಕ್ರಂದಪುರ, ಸುತಪ್ತಭವನ, ರೌದ್ರ, ಪಯೋವರ್ಷಣ, ಶೀತಾಢ್ಯ, ಬಹುಭೀತಿ ಇವುಗೊ ಆದಮತ್ತೆ ಯಮನ ಊರಾದ ಧರ್ಮಭವನ ಇದ್ದು.
ಯಾಮ್ಯಪಾಶೈರ್ಧೃತಃ ಪಾಪೀ ಹಾಹೇತಿ ಪ್ರರುದನ್ಪಥಿ ।
ಸ್ವಗೃಹಂ ತು ಪರಿತ್ಯಜ್ಯ ಪುರಂ ಯಾಮ್ಯಮನುವ್ರಜೇತ್ ॥೬೦॥
ಯಮದೂತರ ಪಾಶಂದ ಬಂಧಿಸಲ್ಪಟ್ಟ ಪಾಪಿ ‘ಹಾಹಾ’ ಹೇದು ರೋದಿಸ್ಯೊಂಡು, ತನ್ನ ಮನೆಯ ಬಿಟ್ಟಿಕ್ಕಿ, ಯಮಪುರಿಯ ದಾರಿಲ್ಲಿ ಹೋವುತ್ತ°.
ಇತಿ ಶ್ರೀಗರುಡ ಪುರಾಣೇ ಸಾರೋದ್ಧಾರೇ ಪಾಪಿನಾ ಮೈಹಿಕಾಮುಷ್ಮಿಕದುಃಖನಿರೂಪಣಂ ನಾಮ ಪ್ರಥಮೋsಧ್ಯಾಯಃ ॥
ಇಲ್ಲಿಗೆ ಗರುಡ ಪುರಾಣಲ್ಲಿ ಸಕಲ ಶಾಸ್ತ್ರಂಗಳ ಸಾರವಾದ ‘ಸಾರೋದ್ಧಾರ’ ವಿಭಾಗಲ್ಲಿ ‘ಪಾಪಿಗಳ ಇಹಪರ ದುಃಖಂಗಳ ನಿರೂಪಣೆ’ ಹೇಳ್ವ ಒಂದನೇ ಅಧ್ಯಾಯ ಮುಗುದತ್ತು.
ಗದ್ಯರೂಪಲ್ಲಿ –
ಪಾಪಿಯ ಅಧೋದ್ವಾರದ ಮೂಲಕ ಪ್ರಾಣವಾಯು ಹೆರಹೋಪಗ ಎರಡೂಕೈಗಳಲ್ಲಿ ಪಾಶ ಹಾಂಗೂ ದಂಡ ಧಾರಣೆ ಮಾಡಿದ, ನಗ, ಮಸವ ಹಲ್ಲುಗಳಿಂದ, ಕ್ರೋಧಪೂರ್ಣ ಕಣ್ಣುಗಳಿಪ್ಪ ಭಯಾನಕವಾಗಿ ಕಾಂಬ ಯಮನ ಇಬ್ರು ದೂತರು ಹತ್ರೆ ಬತ್ತವು. ಅವರ ಕೇಶ ಮೇಲ್ಮುಖವಾಗಿ ಎದ್ದು ನಿಂದೊಂಡಿರುತ್ತು, ಕಾಕಗಳಾಂಗೆ ಕಪ್ಪು ವರ್ಣದವರಾಗಿದ್ದು, ವಕ್ರಮುಖಂದ ಭಯಾನಕ ರೂಪ/ಆಕಾರವುಳ್ಳವುಳಾಗಿರುತ್ತವು. ಅವರ ಉಗುರುಗೊ ಆಯುಧಂಗಳ ಹಾಂಗೆ ಇರುತ್ತು. ಅದರ ನೋಡಿ ಮರಣಸನ್ನ ಜೀವಿ ಹೇಲುಚ್ಚು ಮಾಡ್ಳೆಸುರುಮಾಡುತ್ತ°. ಹಾಹಾಕಾರಂದ ಆರ್ಭಟಿಸಿ ಬಪ್ಪ ಅವರ ಕಂಡು ಅವರ ಹೆಬ್ಬೆರಳ ಗಾತ್ರಕ್ಕೆ ಸಮಾನನಾಗಿಪ್ಪ ಕಂಡು ತನ್ನ ಸ್ಥೂಲ ದೇಹವ ಯಾತನೆಂದ ಆ ಜೀವಿ ನೋಡುತ್ತಿಪ್ಪಂತೆಯೇ ಯಮದೂತರಿಂದ ಅವನ ಕೊರಳಿಂಗೆ ಪಾಶವ ಬಿಗಿಯಲ್ಪಟ್ಟು ರಾಜಭಟರುಗೊ ಅಪರಾಧಿಗಳ ಎಳಕ್ಕೊಂಡು ಹೋವ್ತಾಂಗೆ ಆ ಜೀವಿ ಆ ಶರೀರಂದ ದೂರದ ಯಮನಾಲಯದ ಮಾರ್ಗಕ್ಕೆ ಎಳೆಯಲ್ಪಡುತ್ತ°. ಹೆದರಿ ಕಂಗಾಲಾಗಿಪ್ಪ ಅವನ ಈ ರೀತಿ ಬಲುಗಿ ಹೆದರಿಸಿ ಎಳಕ್ಕೊಂಡು ಹೋಪಗ ದಾರಿಲಿ ಯಮದೂತರು ಅವಂಗೆ ನರಕದ ಕಠಿಣ ಕಷ್ಟವ ಪುನಃ ಪುನಃ ಹೇಳುತ್ತವು.
‘ಏಯ್ ದುಷ್ಟ! ಬೇಗ ನಡೆ, ನೀನು ಯಮಲೋಕಕ್ಕೆ ಹೋಗಿ ಎತ್ತೆಕು. ನಿನ್ನ ಬೇಗ ಕುಂಭೀಪಾಕಾದಿ ನರಕಕ್ಕೆ ಕರಕ್ಕೊಂಡು ಹೋಪಲಿದ್ದು. ತಡವು ಮಾಡೇಡ, ಬೇಗ ನಡೆ’ ಹೇಳಿ ಅವನ ಯಮದೂತರು ಬೈಯ್ಕೊಂಡು, ಛಾಟಿಲಿ ಬಡುಕ್ಕೊಂಡು ಎಳಕ್ಕೊಂಡು ಹೋವ್ತವು. ಒಂದೊಡೆಲಿ ಈ ಪ್ರಕಾರದ ಯಮದೂತರ ಗರ್ಜನೆಯ ಕೇಳಿಯೊಂಡು ಮತ್ತೊಂದೆಡೆಲಿ ತನ್ನ ಬಂಧುಗಳ ರೋದನವನ್ನೂ ಕೇಳಿಗೊಂಡು ಒಳ್ಳೆತ ಯಾತನೆಯ ಅನುಭವಿಸಿಯೊಂಡು ಪೀಡನೆಲಿ ಯಮದೂತರೊಟ್ಟಿಂಗೆ ಯಮಮಾರ್ಗಲ್ಲಿ ನಡಕ್ಕೊಂಡು ಹೋವ್ತ°. ಯಮಭಟರ ಛಾಟಿಯೇಟಿಂದ ಅವನ ಹೃದಯ ಛಿದ್ರ ಆವ್ತು. ದಾರಿಲ್ಲಿಪ್ಪ ನಾಯಿಗೊ ಅವನ ಮೇಲೆ ಹಾರಿ ಕಚ್ಚುತ್ತವು. ತನ್ನ ಪಾಪಂಗಳ ನೆಂಪುಮಾಡಿ ದುಃಖಿಸಿ ಪರಿತಪಿಸ್ಯೊಂಡು ಯಮದೂತರ ಬಲುಗಾಣದೊಟ್ಟಿಂಗೆ ನಡೆತ್ತ°. ಪೀಡಿತನಾದ ಈ ಜೀವಿ ಹಶು ಆಸರಂದ ಬಳಲಿ ಸುಡು ಬೆಶಿಲು, ಕಾಡ್ಗಿಚ್ಚು, ಬೆಶಿಗಾಳಿಲಿ ಬೆಂದವನಾಂಗಾಗಿ, ಬೀಳ್ವ ಪೆಟ್ಟಿಂದ ಬಸವಳಿದು, ಕೊದಿವ ಹೊಯಿಗೆ ಮಾರ್ಗಲ್ಲಿ ವಿಶ್ರಾಂತಿ ಇಲ್ಲದ್ದೆ ನಡದು, ನೀರಿಲ್ಲದ್ದೆ ಆಸರಾಗಿ ದಣುದು ತತ್ತರಿಸಿ, ಬಹು ಕಠಿಣತೆಂದ ಮುಂದೆ ಮುಂದೆ ಹೋವ್ತ°. ಮಾರ್ಗಲ್ಲಿ ಅಲ್ಲಲ್ಲಿ ಮುಗ್ಗರಿಸಿ ಮೂರ್ಛಿತನಾಗಿ ಬಿದ್ದು ಎದ್ದು ನಡವ ಅವನ ಅಂಧಕಾರಯುಕ್ತ ಯಮನಾಲಯಕ್ಕೆ ಕರೆದೊಯ್ಯಲಾವ್ತು.
ಎರಡು ಅಥವಾ ಮೂರು ಮುಹೂರ್ತದಷ್ಟು ಸಮಯಲ್ಲಿ ಆ ಜೀವಿಯ ಅಲ್ಲಿಗೆ ಕರೆದೊಯ್ಯಲಾವ್ತು. ಅಲ್ಲಿ ಅವಂಗೆ ಯಮದೂತರು ಘೋರ ನರಕಯಾತೆನೆಯ ತೋರುಸುತ್ತವು. ಮುಹೂರ್ತ ಮಾತ್ರಲ್ಲಿ ಯಮನನ್ನೂ ನರಕಯತೆನೆಯ ಭಯವನ್ನೂ ದೃಷ್ಟಿಸಿ ನೋಡಿಕ್ಕಿ, ಮತ್ತೆ ಯಮನಾಜ್ಞೆಯಂತೆ ಅವನ ಮತ್ತೆ ಯಮದೂತರೊಟ್ಟಿಂಗೆ ಈ ಲೋಕಕ್ಕೆ ಹಿಂತುರುಗುತ್ತ°. ಮನುಷ್ಯಲೋಕದ ಒಂದು ವಾಸನೆಂದ ಬದ್ಧನಾದ ಆ ಜೀವಿ ಇನ್ನೊಂದು ದೇಹವ ಆಶಿಸುವಾಗಲೇ ಯಮದೂತರಿಂದ ಹಿಂದಂಗೆ ಎಳೆಯಲ್ಪಡುತ್ತ°. ಹಶು ಆಸರಿಂದ ಬಳಲಿಪ್ಪ ಆ ಜೀವಿ ತನ್ನ ಮಕ್ಕಳಿಂದ ಕೊಡಲ್ಪಟ್ಟ ಪಿಂಡ, ದಾನಂಗಳ ತಿಂತನಾದರೂ ಅದರಿಂದ ತೃಪ್ತಿ ಹೊಂದುತ್ತನಿಲ್ಲೆ. ಪುತ್ರಾದಿಗಳಿಂದ ಪಾಪಿಗಳ ಉದ್ದೇಶಕ್ಕಾಗಿ ಮಾಡಿದ ಶ್ರಾದ್ಧ, ದಾನ, ತರ್ಪಣ ಜೀವಿಯ ಬಳಿ ಉಳಿತ್ತಿಲ್ಲೆ. ಹಾಂಗಾಗಿ ಪಿಂಡದಾನ ಮಾಡಿರೂ ಕೂಡ ಜೀವಿಯು ಹಶುವಿಂದ ವ್ಯಾಕುಲನಾಗಿ ಯಮಮಾರ್ಗಲ್ಲಿ ಹೋವುತ್ತ°. ಆರಿಂಗೆ ಪಿಂಡದಾನ ಆವುತ್ತಿಲ್ಯೋ ಅವ್ವು ಪ್ರೇತರೂಪದ ಧಾರಣೆ ಮಾಡಿ ಕಲ್ಪಪರ್ಯಂತ ನಿರ್ಜನ ವನಲ್ಲಿ ದುಃಖಿಗಳಾಗಿ ತಿರಿಗ್ಯೊಂಡಿರುತ್ತವು. ನೂರಾರು ಕೋಟಿ ಕಲ್ಪಂಗೊ ಸಂದುಹೋದರೂ ಕೂಡ ಅನುಭವುಸದ್ದೆ ಕರ್ಮಫಲಂಗೊ ನಾಶ ಆವ್ತಿಲ್ಲೆ, ಎಲ್ಲಿ ವರೇಂಗೆ ಆ ಜೀವಿಗೆ ಅದರ ಅನುಭವಿಸಿ ಮುಗಿತ್ತಿಲ್ಯೋ ಅಲ್ಲಿವರೇಂಗೆ ಆ ಜೀವಿಗೆ ಮನುಷ್ಯ ಶರೀರ ಪ್ರಾಪ್ತಿಯಾವುತ್ತಿಲ್ಲೆ. ಹಾಂಗಾಗಿ ಮಕ್ಕಳಾದವು ನಿಯಮಿತವಾಗಿ ಹತ್ತು ದಿನಂಗಳವರೇಂಗೆ ಪಿಂಡದಾನ ಮಾಡೆಕು. ಆ ಪಿಂಡ ಪ್ರತಿನಿತ್ಯ ನಾಲ್ಕು ಭಾಗಗಳಾಗಿ ವಿಂಗಡನೆ ಆವುತ್ತು. ಅದರಲ್ಲಿ ಎರಡು ಭಾಗ ಪ್ರೇತದೇಹದ ಪಂಚಭೂತಗಳ ಪುಷ್ಟಿಗಾಗಿ ಇರುತ್ತು. ಮೂರನೇ ಭಾಗ ಯಮದೂತರಿಂಗೆ ಹೋವ್ತು, ನಾಲ್ಕನೇ ಭಾಗಂದ ಆ ಜೀವಿಗೆ ಆಹಾರ ಪ್ರಾಪ್ತಿಯಾವ್ತು. ಒಂಬತ್ತು ದಿನ ಹಗಲು ಇರುಳು ಪಿಂಡಪ್ರಾಪ್ತಿಯಾಗಿ ಪ್ರೇತದ ಶರೀರ ನಿರ್ಮಾಣ ಆವ್ತು. ಹತ್ತನೇ ದಿನ ಅದರಲ್ಲಿ ಬಲಪ್ರಾಪ್ತಿಯಾವ್ತು. ಮೃಕ್ತಿವ್ಯಕ್ತಿಯ ದೇಹ ದಹನವಾದ ಮತ್ತೆ ಪಿಂಡದ ಮೂಲಕ ಪುನಃ ಒಂದು ಮೊಳ ಉದ್ದದ ಶರೀರ ಪ್ರಾಪ್ತಿಯಾವ್ತು. ಅದರ ಮೂಲಕ ಈ ಜೀವಿಯು ಯಮಲೋಕದ ದಾರಿಲಿ ಶುಭ ಮತ್ತೆ ಅಶುಭ ಕರ್ಮಂಗಳ ಫಲವ ಭೋಗಿಸುತ್ತ°.
ಸುರುವಾಣ ದಿನ ಕೊಟ್ಟ ಪಿಂಡಂದ ಜೀವಿಯ ತಲೆ ನಿರ್ಮಾಣ ಆವ್ತು. ಎರಡ್ನೇ ದಿನದ ಪಿಂಡಂದ ಕೊರಳು ಮತ್ತೆ ಹೆಗಲು ನಿರ್ಮಾಣ ಆವ್ತು, ಮೂರನೇ ದಿನದ ಪಿಂಡಂದ ಹೃದಯ ನಿರ್ಮಾಣ ಆವ್ತು, ನಾಲ್ಕನೇ ದಿನದ ಪಿಂಡಂದ ಬೆನ್ನು, ಐದನೇದರಿಂದ ನಾಭಿ, ಆರು ಮತ್ತೆ ಏಳನೇದರಿಂದ ಸೊಂಟ ಮತ್ತೆ ಗುಹ್ಯಾಂಗ, ಎಂಟನೇದರಿಂದ ತೊಡೆ ಮತ್ತೆ ಒಂಬತ್ತೇನದರಿಂದ ಕಾಲುಗೊ ಪಾದಂಗೊ ನಿರ್ಮಾಣ ಆವ್ತು. ಈ ಪ್ರಕಾರವಾಗಿ ಒಂಬತ್ತು ಪಿಂಡಂಗಳಿಂದ ಶರೀರ ಪ್ರಾಪ್ತಿಹೊಂದಿ ಚೈತನ್ಯವ ಪಡೆತ್ತು. ಹತ್ತನೇ ಪಿಂಡಂದ ಶರೀರದ ಹಶು ಆಸರ ಜಾಗೃತ ಆವ್ತು. ಈ ಪಿಂಡಜ ಶರೀರವ ಹೊಂದಿ ಹಶು ಆಸರು ಪೀಡಿತನಾಗಿ ಹನ್ನೊಂದು ಮತ್ತೆ ಹನ್ನೆರಡನೇ ದಿನ ಭೋಜನವ ಉಣ್ತ°. ಹದಿಮೂರನೇ ದಿನ ಯಮದೂತರಿಂದ ಮಂಗನಾಂಗೆ ಬಂಧನಕ್ಕೊಳಪ್ಪಟ್ಟು ಆ ಜೀವಿ ಏಕಾಂಗಿಯಾಗಿ ಆ ಯಮ ಮಾರ್ಗಲ್ಲಿ ಹೋವ್ತ°.
ಮಾರ್ಗಲ್ಲಿ ಎದುರು ಸಿಕ್ಕುವ ವೈತರಿಣೀ ನದಿಯ ಹೊರತುಪಡುಸಿ ಯಮಲೋಕದ ದೂರ 86000 ಯೋಜನಗಳಷ್ಟಿದ್ದು. ಆ ಪ್ರೇತ ಪ್ರತಿನಿತ್ಯ ಹಗಲು ಇರುಳು 247 ಯೋಜನದಷ್ಟು ದೂರ ನಡೆತ್ತು. ಮಾರ್ಗಲ್ಲಿ ಬಪ್ಪ ಸೌಮ್ಯ, ಸೌರಿಪುರ, ನಗೇಂದ್ರಭವನ, ಗಂಧರ್ವ, ಶಿಲಾಗಮ, ಕ್ರೌಂಚ, ಕ್ರೂರಪುರ, ವಿಚಿತ್ರಭವನ, ಬಹ್ವಾಪದ, ದುಃಖದ, ನಾನಾಕ್ರಂದಪುರ, ಸುತಪ್ತಭವನ, ರೌದ್ರ, ಪಯೋವರ್ಷಣ, ಶೀತಾಢ್ಯ, ಬಹುಭೀತಿ ಇವುಗೊ ಆದಮತ್ತೆ ಯಮನ ಊರಾದ ಧರ್ಮಭವನ ಇದ್ದು. ಯಮರಾಜನ ದೂತರ ಪಾಶಂದ ಬಂಧಿಸಲ್ಪಟ್ಟಾ ಪಾಪಿ ಜೀವಿ ಮಾರ್ಗಲ್ಲಿ ಹಾಹಾಕಾರ ಮಾಡಿಗೊಂಡು ರೋದಿಸ್ಯೊಂಡು ತನ್ನ ಮನೆಯ ಬಿಟ್ಟಿಕ್ಕಿ ಯಮಪುರಿಗೆ ಹೋವುತ್ತ°.
ಈ ರೀತಿಯಾಗಿ ಗರುಡಂಗೆ ಭಗವಂತ° ಶ್ರೀ ಮಹಾವಿಷ್ಣು ಹೇಳಿದಲ್ಯಂಗೆ – ಗರುಡ ಪುರಾಣಲ್ಲಿ ಸಕಲ ಶಾಸ್ತ್ರಂಗಳ ಸಾರವಾದ ‘ಸಾರೋದ್ಧಾರ’ ವಿಭಾಗಲ್ಲಿ ‘ಪಾಪಿಗಳ ಇಹಪರ ದುಃಖಂಗಳ ನಿರೂಪಣೆ’ ಹೇಳ್ವ ಒಂದನೇ ಅಧ್ಯಾಯ ಮುಗುದತ್ತು.
[ಚಿಂತನೀಯಾ –
‘ಪ್ರಪಂಚ’ ಹೇಳ್ವದು ಭಗವಂತನ ಸೃಷ್ಟಿ. ಇಲ್ಲಿ ಜೀವಿಗೊ ಅವನಿಂದ ಕಳುಹಿಸಲ್ಪಟ್ಟದು ಅವನ ಲೀಲೆ. ಜೀವಿಗೊ ಈ ಪ್ರಪಂಚಲ್ಲಿ ಹುಟ್ಟಿ ‘ಧರ್ಮಾರ್ಥಕಾಮಮೋಕ್ಷ’ ಕರ್ಮವ / ಸಿದ್ಧಿಯ ಸಾಧಿಸಿ ಪುನಃ ಭಗವಂತನ ಹೋಗಿ ಸೇರೆಕು. ಹುಟ್ಟಿದ ಕೂಡ್ಳೆ ಮೋಕ್ಷಸಾಧನೆ ಅಲ್ಲ. ಧರ್ಮ ಅರ್ಥ ಕಾಮ ಮೋಕ್ಷ ಹೇಳಿ ಜೀವನದ ನಾಲ್ಕ ಹಂತ. ಇದರ ನಿಯಮಿತವಾಗಿ ಪರಿಶುದ್ಧವಾಗಿ ಭಗವದ್ಪ್ರಜ್ಞೆಂದ ಆಚೆರಿಸಿಗೊಂಡು ಹೋಯೆಕು. ಎಲ್ಲಿಯಾರು ರಜಾರು ತಪ್ಪು ಆತು ಹೇಳಿರೆ ಅದು ಭಗವಂತಂಗೇ ಮಾಡಿದ ಅಪಚಾರವಾವ್ತು. ಅಷ್ಟಪ್ಪಗ ಜೀವಿ ಅಪವಿತ್ರನಾವ್ತ°. ಪವಿತ್ರನಾಗದ್ದೆ ಮೋಕ್ಷ ಸಿದ್ಧಿ ಇಲ್ಲೆ. ಅಪವಿತ್ರನಪ್ಪದರಿಂದ ಪಾಪಾತ್ಮರಾವ್ತವು. ಪಾಪಿಗೊಕ್ಕೆ ಭಗವಂತನಲ್ಲಿ ಹೋಗಿ ಸೇರುವ ಅರ್ಹತೆ ಇಲ್ಲೆ. ತಾನು ಮಾಡಿದ ಪಾಪಕ್ಕೆ ಶಿಕ್ಷೆ ಅನುಭವುಸಲೇ ಬೇಕು. ಆ ನ್ಯಾಯಾನ್ಯಯವ ವಿಚಾರ್ಸುವದು ಯಮಧರ್ಮರಾಯನ ಜವಾಬ್ದಾರಿ. ಹಾಂಗಾಗಿ ಪಾಪಿಗೊ ಮರಣಾನಂತರ ಮದಾಲು ಯಮನಲ್ಲಿಗೇ ಹೋಪದು. ಅಲ್ಲಿ ಅಂವ ಮಾಡಿದ ಪ್ರತಿಯೊಂದು ಕರ್ಮವೂ ವಿಚಾರಣೆಗೆ ಒಳಪ್ಪಡುತ್ತು. ಪುಣ್ಯ ಕಾರ್ಯವು ಮನ್ನಣೆಯಾಗಿ ಪಾಪಕ್ಕೆ ಅಪರಾಧ ಅಲ್ಲಿ ವಿಧಿಸಲ್ಪಡುತ್ತು. 13ನೇ ದಿನಂದ ಜೀವಿ ಯಮಲೋಕಕ್ಕೆ ಪ್ರಯಾಣ ಸುರುಮಾಡುತ್ತ°, ದಿನವೊಂದಕ್ಕೆ ಹಗಲು ಇರುಳು ನಡದು ಸುಮಾರು 247 ಯೋಜನದಷ್ಟು ದೂರವ ಕ್ರಮಿಸುತ್ತ°. ದಾರೀಲಿ ಬಪ್ಪ ವೈತರಿಣಿ ಬಗ್ಗೆ ಆ ಸಂದರ್ಭಲ್ಲಿ ವಿವರ ನೋಡಿಗೊಂಬೊ°. ಇಲ್ಲಿಗೆ ಗರುಡಪುರಾಣ ಉತ್ತರಖಂಡ (‘ಸಾರೋದ್ಧಾರ’)ದ ಒಂದನೇ ಅಧ್ಯಾಯ ಮುಗುದತ್ತು. ಹರೇ ರಾಮ.]
Subscribe to:
Posts (Atom)