Saturday, 1 December 2018
ದತ್ತಾತ್ರೇಯನು ಶಕ್ತಿ ಕೊಡುವ ಬಗೆ
ದತ್ತಾತ್ರೇಯನು ಶಕ್ತಿ ಕೊಡುವ ಬಗೆ
ಒಂದು ಕತೆ ಇದೆ. ಮಾಹಿಷ್ಮತಿಯ ಅರಸು ಕೃತವೀರ್ಯನ ಮಗ ಕಾರ್ತವೀರ್ಯಾರ್ಜುನ. ಹೈಹಯಸ ರಾಜ್ಯದ ಅಧಿಪತಿ. ಮಧ್ಯ ಪ್ರದೇಶದಲ್ಲಿ ಹೈಹಯಸ ರಾಜವಂಶ ನರ್ಮದಾ ನದಿ ತೀರೆದ ಗುಂಟ ತಮ್ಮ ರಾಜ್ಯದ ವ್ಯಾಪ್ತಿಯನ್ನು ವಿಸ್ತರಿಸಿಕೊಂಡು ಕೃತಯುಗದ ಕಾಲಘಟ್ಟದಲ್ಲಿ ಪರಾಕ್ರಮದಿಂದಲೂ ಜನರಿಗೆ ಪ್ರಿಯರಾದವರಾಗಿಯೂ ಆಡಳಿತ ನಡೆಸಿಕೊಂಡು ಬಂದಿದ್ದರು. ಕೃತವೀರ್ಯನಿಗೆ ಮಕ್ಕಳಿರದೆ ಚಿಂತೆಯಾದಾಗ ಸುಕೃತ ಫಲವಾಗಿ ಎಂಬಂತೆ ಕಾರ್ತವೀರ್ಯಾರ್ಜುನನ ಜನನವಾಯಿತು. ದುರ್ದೈವವಶಾತ್ ವಿಳಂಬದಿಂದ ಮಗುವಿಗೆ ಅಂಗ ಊನವಾಗಿತ್ತು. ಕೈಗಳೆ ಇದ್ದಿರದ ಮಗುವನ್ನು ಕಂಡು ಕೃತವರ್ಮ ದಂಪತಿಗೆ ಅಪಾರವಾದ ಬೇಸರ, ಜುಗುಪ್ಸೆಗಳು ಮೂಡಿ ಇನ್ನು ಈ ವಿಪ್ಲವಕ್ಕೆ ಪರಿಹಾರವೆಂದರೆ ದತ್ತಾತ್ರೇಯ ಮುನಿಗಳೆ ಪರಿಹಾರ ಮಾಡಿಸಿ ಕೊರತೆಯನ್ನು ದೂರಮಾಡುವ ಅನುಪಮವಾದ ತಂತ್ರಶಕ್ತಿ ಪಡೆದ ಮಹಾದೈವ ಎಂಬುದನ್ನು ಮನಗಂಡು ದತ್ತಾತ್ರೇಯ ಮುನಿಗಳ ಬಳಿ ಮಗುವನ್ನು ಎತ್ತೋಯ್ದರು. ಅವರ ಪಾದಕಮಲದ ಬಳಿ ಇಡುತ್ತಾರೆ.
ದತ್ತ ಗುರುಗಳಿಗೆ ದಂಪತಿಯ ದುಃಖವು ಅರ್ಥವಾಗುತ್ತದೆ. ಸಾಧಕರಾದ ಮುನಿಗಳಿಗೆ ಪಂಚಭೂತಗಳನ್ನು ನಿಯಂತ್ರಿಸುವ ಮಹಾನ್ ವಿದ್ಯೆ ಗೊತ್ತು. ಏಕೆಂದರೆ ಅವರು ಲೀಲಾ ಚರಿತನಾದ ದೇವರು. ಬ್ರಹ್ಮ ಜಿಜಾnಸೆಯನ್ನು ಅರಿತವರು. ಸೃಷ್ಟಿ, ಸ್ಥಿತಿ, ಲಯಗಳನ್ನು ಪ್ರತ್ಯೇಕವಾಗಿ ನಡೆಸಿ ಯಂತ್ರಿಸುತ್ತಾರೆ.
ದತ್ತಾತ್ರೇಯ ಮುನಿಗಳು ಬ್ರಹ್ಮ,ವಿಷ್ಣು ಮಹೇಶ್ವರರು ಒಗ್ಗೂಡಿದಾಗ ಒಡಮೂಡಿದ ರೂಪ. ತ್ರಿಮೂರ್ತಿಗಳು ಒಂದೇ ದೇಹವಾಗಿ ಶಿರೋಭಾಗದಲ್ಲಿ ಮೂರು ಪ್ರತ್ಯೇಕ ಸ್ವರೂಪಗಳನ್ನು ತಳೆದಿದ್ದಾರೆ. ಈ ಸ್ವರೂಪವೇ ದತ್ತಾತ್ರೇಯ ಸ್ವರೂಪ. ಈ ಸ್ವರೂಪವನ್ನು ಪಡೆಯುವುದು ಅವರ ಶಕ್ತಿಯ ಫಲವಾಗಿ ಅಲ್ಲ.
ಅತ್ರಿ ಮುನಿಯ ಪತ್ನಿ ಅನಸೂಯಾ ಎಂಬ ಪತಿವ್ರತಾ ಶಿರೋಮಣೀಯ ಸಂಕಲ್ಪ ಶಕ್ತಿಯ ಬಲದಿಂದಾಗಿ. ತ್ರಿಮೂರ್ತಿಗಳನ್ನು ಎಳೆಯ ಕಂದಮ್ಮಗಳ ಸ್ವರೂಪದಲ್ಲಿ ಪರಿವರ್ತನೆಗೊಳ್ಳುವ ಸ್ಥಿತಿ ಕೂಡಿ ಬರುತ್ತದೆ. ತ್ರಿಮೂರ್ತಿಯರ ಪತ್ನಿಯರು ಕಂಗಾಲಾಗಿ ತಂತಮ್ಮ ಗಂಡಂದಿರನ್ನು ಅನಸೂಯಾಳಿಂದ ಬಿಡಿಸಿಕೊಳ್ಳಬೇಕೆಂದು ಚಡಪಡಿಸಿ ತಮ್ಮ ವಿನಯನಯ ಪೂರ್ವಕ ನಡೆಯಿಂದ ಅನಸೂಯೆಗೆ ಶರಣಾಗಿ, ತಮ್ಮ ಗಂಡಂದಿರನ್ನು ವಾಪಸ್ಸು ಪಡೆಯುತ್ತಾರೆ.
ಆದರೆ ತ್ರಿಮೂರ್ತಿ ಅಂಶಗಳು ಸೇರಿ ದತ್ತಾತ್ರೇಯ ರೂಪುಗೊಳ್ಳುತ್ತಾನೆ. ಕಷ್ಟದಲ್ಲಿರುವವರಿಗೆ ವರ ಕೊಡುವವನೆ ದತ್ತಾತ್ರೇಯ.ಮಾಹಿಷ್ಮತಿಯ ಅರಸ ಕೃತವೀರ್ಯ ದತ್ತಮುನಿಗಳನ್ನು ಆರಾಧಿಸಿ, ಪ್ರಸನ್ನಗೊಳಿಸಿ, ಅವರಿಂದ ತನ್ನ ಕೈಗಳೇ ಇರದ ಮಗನಿಗೆ ಸಾವಿರ ಬಾಹುಗಳನ್ನು ಅನುಗ್ರಹಿಸಿಕೊಳ್ಳುತ್ತಾನೆ . ರಾವಣನನ್ನೂ ಮೀರಿದ ಶಕ್ತಿ ಕಾರ್ತಿವೀರ್ಯಾರ್ಜುನನಿಗೆ ಬರುತ್ತದೆ. ಸೊಕ್ಕು ಪ್ರದರ್ಶಿಸಿದ ರಾವಣನನ್ನೇ ಕಾರ್ತಿವೀರ್ಯಾರ್ಜುನ ಸೆರೆಡಿಯುತ್ತಾನೆ.
ಅನುಪಮವಾದ ಪವಾಡ ಸದೃಶ ಪರಿಹಾರ ದತ್ತಾತ್ರೇಯನಿಂದ ಲಭ್ಯ
ವಾಮಾಚಾರ, ಯಕ್ಷಿಣಿ, ಕ್ಷುದ್ರ ದೇವತೆಗಳ ವಶೀಕರಣ ಒಂದು ರೀತಿಯ ಶಕ್ತಿ ಒದಗಿಸಬಹುದು. ಆದರೂ ಇವುಗಳಿಗೆ ಇವುಗಳದ್ದೇ ಆದ ಒಂದು ಮಿತಿ ಇರಲು ಸಾಧ್ಯ. ಆದರೆ ದತ್ತಾತ್ರೇಯನ ಆರಾಧನೆ ತಂತ್ರ ಸಿದ್ಧಿ, ಧ್ಯಾನ ಏಕಾಗ್ರತೆಗಳು ಒಂದು ನಿರ್ದಿಷ್ಟ ಬಗೆಯಲ್ಲಿ ಸಾಧ್ಯವಾದಾಗ ಮನುಷ್ಯನಲ್ಲಿ ಅಂತರ್ಗತವಾದ ಷಟcಕ್ರಗಳನ್ನು ಜಾಗ್ರತಗೊಳಿಸುವ ಯೋಗ ಸಿದ್ಧಿಗೆ ರೂಪಾಂತರಗೊಳ್ಳುತ್ತದೆ. ಬದುಕಿನ ಸಂದರ್ಭದ ಪೀಡೆಗಳಿಂದ ನಮಗೆ ನಾವೇ ರಕ್ಷಣೆ ಪಡೆದು ಹೊರಬರಲು ಚೈತನ್ಯ ಒದಗುತ್ತದೆ.
Subscribe to:
Post Comments (Atom)
No comments:
Post a Comment