Saturday, 1 December 2018

ಜನ್ಮಕುಂಡಲಿ ಆಧರಿಸಿ ಯಾರಿಗೆ ಯಾವ ಕೋರ್ಸ್ ಸೂಕ್ತ

ಜನ್ಮಕುಂಡಲಿ ಆಧರಿಸಿ ಯಾರಿಗೆ ಯಾವ ಕೋರ್ಸ್ ಸೂಕ್ತ * ಜ್ಯೋತಿಷ ತತ್ತ್ವ ಸಿದ್ಧಾಂತಗಳನ್ನು ಅನುಸರಿಸಿ, ಗ್ರಹಗಳ ಯೋಗ, ಅವಯೋಗಗಳನ್ನು ಆಧರಿಸಿ ಒಬ್ಬ ವ್ಯಕ್ತಿಯ ವಿದ್ಯೆ- ವ್ಯಾಸಂಗ, ಉನ್ನತ ಶಿಕ್ಷಣ, ಸಂಶೋಧನೆ ಇತ್ಯಾದಿ ವಿಷಯಗಳನ್ನು ಅರಿಯಬಹುದು. ಯಾವುದೇ ವ್ಯಕ್ತಿಯ ಶಿಕ್ಷಣ, ಪಾಂಡಿತ್ಯ, ವಿದ್ವತ್‌ ವಿಚಾರಗಳನ್ನು ಆತನ ಜನ್ಮಕುಂಡಲಿಯ ದ್ವಿತೀಯ, ಚತುರ್ಥ, ಪಂಚಮ ಭಾವಗಳಿಂದ ವಿಮರ್ಶಿಸಲಾಗುತ್ತದೆ. ದ್ವಿತೀಯ ಭಾವದಿಂದ ವಾಣಿ ಅಥವಾ ವಾಕ್‌ ಮತ್ತು ಅಭಿವ್ಯಕ್ತ ಸಾಮರ್ಥ್ಯ‌ವನ್ನು ಅರಿಯಬಹುದು. ದ್ವಿತೀಯ ಭಾವವು ಜಾತಕನ ಪ್ರಾರಂಭಿಕ ವಿದ್ಯಾಭ್ಯಾಸದ ಪ್ರಗತಿ ಹಾಗೂ ಬುದ್ಧಿಮತ್ತೆಯ ದ್ಯೋತಕವೆನಿಸಿದೆ. ಚತುರ್ಥ ಭಾವವು ಗ್ರಹಣ ಶಕ್ತಿ, ವಿಶ್ವವಿದ್ಯಾಲಯ ಮಟ್ಟ ಹಾಗೂ ಪಂಚಮ ಭಾವ ಅದಕ್ಕೂ ಮುಂದಿನ ಜ್ಞಾನಪ್ರಾಪ್ತಿಯನ್ನು ಸೂಚಿಸುವ ಭಾವವಾಗಿದೆ. ಜೊತೆಗೆ ಅಧ್ಯಾತ್ಮ, ಅಂತರ್‌‍ಜ್ಞಾನಕ್ಕೂ ಇದು ಕಾರಣೀಭೂತವಾಗುತ್ತದೆ. ಚತುರ್ಥ ಭಾವ ಸುಖಸ್ಥಾನವಾಗಿದೆ. ಆದ್ದರಿಂದ ಜಾತಕನಿಗೆ ವಿದ್ಯಾರ್ಜನೆಯಿಂದ ಐಹಿಕ ಸುಖ ಹಾಗೂ ಖ್ಯಾತಿ ದೊರೆಯುತ್ತದೆ. ಚತುರ್ಥ ಸ್ಥಾನ ವಿದ್ಯಾಸ್ಥಾನವಾಗಿದೆ. ಇದರ ಭಾವಾಧಿಪತಿಯೂ ಇದರ ಭಾವಸ್ಥಿತ ಗ್ರಹನೂ ದಶಮಭಾವವನ್ನು ಸಂಪೂರ್ಣ ದೃಷ್ಟಿಯಿಂದ ನೋಡುವುದರ ಫಲ ಸ್ವರೂಪವಾಗಿ ಅದು ವೃತ್ತಿ ಅಥವಾ ಕರ್ಮದ ಗ್ರಹ ಚತುರ್ಥವನ್ನು ಸಂಪೂರ್ಣ ದೃಷ್ಟಿಯಿಂದ ನೋಡುವುದರಿಂದ ಶಿಕ್ಷಣದ ವಿಷಯ ಪ್ರಭಾವಿತವಾಗುತ್ತದೆ. ಆದ್ದರಿಂದ ವಿದ್ಯೆಯ ವಿಷಯವನ್ನು ಆಯ್ಕೆ ಮಾಡುವಾಗ ದಶಮಭಾವ ಸ್ಥಿತ ಗ್ರಹವನ್ನು ಪ್ರಗತಿ ಹಾಗೂ ವೃದ್ಧಿಗೆ ವಿದ್ಯಾಸ್ಥಾನಾಧಿಪತಿಯ ಸಹಕಾರ, ಕೃಪಾಗ್ರಹಗಳಿರುವುದು, ಆ ಗ್ರಹನಿಗೆ ಸ್ವಕ್ಷೇತ್ರವೆನಿಸುವುದು, ಮೂಲ ತ್ರಿಕೋಣ ಸ್ಥಿತಿ, ವರ್ಗೋತ್ತಮ ನವಾಂಶಸ್ಥಿತ ಗ್ರಹರು ಬಲಿಷ್ಠರೆನಿಸುತ್ತಾರೆ. ಅಂತಹ ಗ್ರಹಗಳು ಶುಭಸ್ಥಾನದಲ್ಲಿದ್ದರೆ ಶುಭಗ್ರಹದ ದೃಷ್ಟಿಗೆ ಒಳಪಟ್ಟರೆ, ಶುಭ ಫಲಗಳನ್ನು ನೀಡಲು ಸಮರ್ಥನಾಗಿರುತ್ತಾನೆ. ಆಧುನಿಕ ಕಾಲಮಾನಕ್ಕೆ ತಕ್ಕಂತೆ ಜ್ಯೋತಿಷ್ಯದ ಮಾನದಂಡದ ಪ್ರಕಾರ ಮೇಷ, ವೃಶ್ಚಿಕ, ಮಕರ, ಕುಂಭ ಮತ್ತು ಕಟಕ ಲಗ್ನ ಜಾತಕರಿಗೆ ಕುಜಗ್ರಹ ಉಚ್ಛನಾಗಿದ್ದು ಸ್ವಗೃಹೀಯವಾಗಿ ಬಂದಲ್ಲಿ ಇಂಜಿನಿಯರಿಂಗ್‌ನ ಯಾವುದೇ ಕ್ಷೇತ್ರವನ್ನು ಆಯ್ಕೆ ಮಾಡಿಕೊಳ್ಳಬಹುದು. ರವಿ ಯುತಿಯಲ್ಲಿ ಬಂದಲ್ಲಿ ಚಿಕಿತ್ಸಾ ಕ್ಷೇತ್ರ, ಕುಜ-ಬುಧ ಯುತಿ ಇದ್ದರೆ ಎಲೆಕ್ಟ್ರಾನಿಕ್ಸ್‌, ಕಂಪ್ಯೂಟರ್ಸ್‌, ಕುಜ-ಚಂದ್ರ ಯುತಿ ಇದ್ದರೆ ಆರ್ಕಿಟೆಕ್ಚರ್‌, ಔಷಧಿ ತಯಾರಿಕೆ, ಕುಜ-ಶನಿ ಯುತಿ ಇದ್ದರೆ ಮೆಕ್ಯಾನಿಕಲ್‌, ಆಟೋಮೊಬೈಲ್‌ ಇಂಜಿನಿಯರಿಂಗ್‌ ವಿಷಯವನ್ನು ಆಯ್ಕೆ ಮಾಡಿಕೊಳ್ಳುವುದು ಒಳ್ಳೆಯದು. ಜನ್ಮ ಲಗ್ನ, ಕೇಂದ್ರ ತ್ರಿಕೋಣಗಳಲ್ಲಿ ರವಿ-ಶುಕ್ರ ಯುತಿ ಉಂಟಾದಲ್ಲಿ ವೈದ್ಯಕೀಯ ವ್ಯಾಸಂಗ ಉತ್ತಮವೆನಿಸುತ್ತದೆ. ಮಿಥುನ, ಕಟಕ, ಸಿಂಹ, ಕನ್ಯಾ, ತುಲಾ ಮತ್ತು ಕುಂಭ ಲಗ್ನಗಳಲ್ಲಿ ಜನಿಸಿದವರು ವಾಣಿಜ್ಯ ಕ್ಷೇತ್ರದಲ್ಲಿ ಸಫಲರೆನಿಸುತ್ತಾರೆ. ಇದಕ್ಕೆ ಬುಧ, ಶುಕ್ರ, ಶನಿಗ್ರಹಗಳು ಬಲಿಷ್ಠರಾಗಿರಬೇಕು. ಈ ಗ್ರಹಗಳಿಗೆ ಪರಸ್ಪರ ಸಂಬಂಧ ಉಂಟಾದರೆ ಅಧಿಕ ಸಫಲತೆ ದೊರೆಯುತ್ತದೆ. ಗ್ರಹದೆಸೆ: ಯಾವ ಗ್ರಹದವರಿಗೆ ಯಾವ ಶಿಕ್ಷಣ ಸೂಕ್ತ *ಟಿ.ಆರ್‌.ವಿಜಯ ಕುಮಾರ್‌ ವೃಕ್ತಿಯ ಜಾತಕದ ಪ್ರಕಾರ ಯಾವ ಗ್ರಹ ವಿದ್ಯಾಭ್ಯಾಸಕ್ಕೆ ಸಂಬಂಧಿಸಿದೆ ಎಂದು ತಿಳಿದು ಆ ಗ್ರಹ ಸೂಚಿಸುವ ವಿದ್ಯೆಗಳನ್ನು ಅಭ್ಯಾಸ ಮಾಡುವುದರಿಂದ, ವಿದ್ಯಾಭ್ಯಾಸವು ಸರಾಗವಾಗಿ ಸಾಗಿ ಉತ್ತಮ ಫಲಿತಾಂಶವನ್ನು ಕೊಡುವುದು. ಜ್ಯೋತಿಷ್ಯವು ಸೂಚನಾತ್ಮಕ ವಿಜ್ಞಾನ (Astrology is Indicative Science) ಇದರಿಂದ ಜೀವನದ ಎಲ್ಲ ಆಗುಹೋಗುಗಳನ್ನು ತಿಳಿದುಕೊಂಡು, ಅದಕ್ಕೆ ತಕ್ಕಂತೆ ನಮ್ಮ ಜೀವನವನ್ನು ರೂಪಿಸಿಕೊಂಡಲ್ಲಿ ಉತ್ತಮವಾದ ಜೀವನವನ್ನು ನಡೆಸಬಹುದು. ಜೀವನದ ಪ್ರಮುಖ ವಿಷಯಗಳು ಆರೋಗ್ಯ, ವಿದ್ಯಾಭ್ಯಾಸ, ಉದ್ಯೋಗ, ವೈವಾಹಿಕ ಜೀವನ, ಸಂತಾನ, ಸುಖ ಜೀವನವಾಗಿದ್ದು ಈ ಪೈಕಿ ವಿದ್ಯಾಭ್ಯಾಸವೂ ಒಂದು ಪ್ರಮುಖವಾದ ಅಂಶ. ವ್ಯಕ್ತಿಯು ಆತನ ಜಾತಕಕ್ಕೆ ಅನುಗ್ರಹಿಸಿದ ವಿದ್ಯಾಭ್ಯಾಸವನ್ನು ಮಾಡಿದರೆ, ವಿದ್ಯಾಭ್ಯಾಸ ಮಾಡಿದರೆ, ಸುಗಮವಾಗಿ ಸಾಗುತ್ತದೆ. ಇಲ್ಲವಾದರೆ ಎಡರು-ತೊಡರುಗಳನ್ನು ಅನುಭವಿಸಬೇಕಾಗುತ್ತದೆ. ಅನುಭವದಲ್ಲಿ ಕಂಡಂತೆ ಕೆಲವು ವಿದ್ಯಾರ್ಥಿಗಳು ತಮಗೆ ಇಷ್ಟಬಂದ ವಿಷಯವನ್ನು ಆರಿಸಿಕೊಂಡು, ನಂತರ ಅರ್ಧದಲ್ಲಿ ವಿದ್ಯಾಭ್ಯಾಸವನ್ನು ನಿಲ್ಲಿಸುವುದು ಅಥವಾ ಬೇರೆ ವಿಷಯಕ್ಕೆ ಬದಲಾವಣೆ ಮಾಡಿಕೊಳ್ಳುವುದನ್ನು ನೋಡಿದ್ದೇವೆ. ಆದ್ದರಿಂದ ಜ್ಯೋತಿಷ್ಯದ ಪ್ರಕಾರ ಸೂಚಿಸುವ ಶಿಕ್ಷಣವನ್ನು ಆರಿಸಿಕೊಂಡು ಮುಂದುವರಿಯುವುದು ಸೂಕ್ತ. ಎಸ್‌ಎಸ್‌ಎಲ್‌ಸಿ, ಪಿಯುಸಿ ಮತ್ತು ಪದವಿ ಹಂತದ ವಿದ್ಯಾಭ್ಯಾಸಕ್ಕೆ ವ್ಯಕ್ತಿಯ ಜಾತಕದ 4ನೇ ಭಾವ, ವಿದ್ಯಾಕಾರಕರಾದ ಬುಧ, ಗುರು ಮತ್ತು 4ನೇ ಭಾವಸ್ಥಿತ ಗ್ರಹರು ದಶಾಭುಕ್ತಿ ಹಾಗೂ ಇತರೆ ಅಂಶಗಳನ್ನು ಗಮನಿಸಿ ನಿರ್ಣಯ ತೆಗೆದುಕೊಳ್ಳಬೇಕಾಗುತ್ತದೆ. ದಶಾಭುಕ್ತಿ, ಚತುರ್ಥಾಧಿಪತಿ ಸ್ಥಿತಗ್ರಹ, ಕಾರಕರು ನಿರ್ಬಲ ಅಥವಾ ಅಶುಭರಾಗಿದ್ದಾಗ ಕೆಲವೊಂದು ಪರಿಹಾರಗಳನ್ನು ಆಚರಿಸಬೇಕಾಗುತ್ತದೆ ಮತ್ತು ರತ್ನಗಳನ್ನು ಸಹ ಧರಿಸಬೇಕಾಗುತ್ತದೆ. ಉದಾಹರಣೆಗೆ ಕೆಲವೊಮ್ಮೆ ಎಸ್‌ಎಸ್‌ಎಲ್‌ಸಿಯಲ್ಲಿ ಶೇ.90 ಪಡೆದ ವಿದ್ಯಾರ್ಥಿ ಪಿಯುಸಿಯಲ್ಲಿ ಕಡಿಮೆ ಅಂಕ ಗಳಿಸುವುದು ಅಥವಾ ಅನುತ್ತೀರ್ಣವಾಗುವುದು. ಜ್ಯೋತಿಷ್ಯಶಾಸ್ತ್ರದ ಪ್ರಕಾರ ಗ್ರಹಗಳು ವಿದ್ಯಾಭ್ಯಾಸದ ವಿಷಯಗಳನ್ನು ಸೂಚಿಸುತ್ತವೆ. ರವಿ: ವೈದ್ಯಶಾಸ್ತ್ರ, ಐಎಎಸ್‌, ಕೆಎಎಸ್‌ ಇತ್ಯಾದಿ. ಚಂದ್ರ: ಮನಃಶಾಸ್ತ್ರ, ಆಯುರ್ವೇದ ವೈದ್ಯಶಾಸ್ತ್ರ, ಸಸ್ಯಶಾಸ್ತ್ರ ಇತ್ಯಾದಿ. ಕುಜ: ತಾಂತ್ರಿಕ ವಿದ್ಯೆ, ರಸಾಯನಶಾಸ್ತ್ರ, ಪಾಕಶಾಸ್ತ್ರ ಇತ್ಯಾದಿ. ಬುಧ: ವಾಣಿಜ್ಯಶಾಸ್ತ್ರ, ಸಂಪರ್ಕ ವಿಜ್ಞಾನ, ನರವಿಜ್ಞಾನ ಇತ್ಯಾದಿ. ಗುರು: ಹಣಕಾಸು ವಿದ್ಯೆ, ಕಾನೂನು, ಆಧ್ಯಾತ್ಮಿಕ ವಿದ್ಯೆ, ವೈದಿಕ ವಿದ್ಯೆ ಇತ್ಯಾದಿ. ಶುಕ್ರ: ಕಲೆ, ಕಾನೂನು, ಸಂಗೀತ, ವೃತ್ತ, ನಾಟಕ, ಪಾಕ ವಿದ್ಯೆ ಇತ್ಯಾದಿ. ಶನಿ: ಗಣಿ ವಿಜ್ಞಾನ, ಭೂವಿಜ್ಞಾನ, ವ್ಯವಸಾಯಶಾಸ್ತ್ರ ಇತ್ಯಾದಿ. ರಾಹು: ವೈದ್ಯ, ಸಂಶೋಧನೆ, ಖಗೋಳ ಇತ್ಯಾದಿ. ಕೇತು: ಆಧ್ಯಾತ್ಮಿಕ ವಿದ್ಯೆ, ಗಿಡಮೂಲಿಕೆ ಶಾಸ್ತ್ರ ಇತ್ಯಾದಿ ವೃಕ್ತಿಯ ಜಾತಕದ ಪ್ರಕಾರ ಯಾವ ಗ್ರಹ ವಿದ್ಯಾಭ್ಯಾಸಕ್ಕೆ ಸಂಬಂಧಿಸಿದೆ ಎಂದು ತಿಳಿದು ಆ ಗ್ರಹ ಸೂಚಿಸುವ ವಿದ್ಯೆಗಳನ್ನು ಅಭ್ಯಾಸ ಮಾಡುವುದರಿಂದ, ವಿದ್ಯಾಭ್ಯಾಸವು ಸರಾಗವಾಗಿ ಸಾಗಿ ಉತ್ತಮ ಫಲಿತಾಂಶವನ್ನು ಕೊಡುವುದು. ವ್ಯಕ್ತಿಯ ಜಾತಕವು ಸೂಚಿಸುವ (ಅಷ್ಟಕ ವರ್ಗ ಪ್ರಕಾರ) ದಿಕ್ಕಿಗೆ ಮುಖ ಮಾಡಿ ಅಭ್ಯಾಸ ಮಾಡುವುದು ಶ್ರೇಯಸ್ಕರ. ಸಾಮಾನ್ಯವಾಗಿ ಅಭ್ಯಾಸದ ದಿಕ್ಕು ಉತ್ತರ ಅಥವಾ ಪೂರ್ವವೆಂದು ಪರಿಗಣಿಸುತ್ತಾರೆ. ಆದರೆ ಕೆಲವು ಬಾರಿ ವ್ಯಕ್ತಿಯ ವೈಯಕ್ತಿಕ ಶುಭ ದಿನಕ್ಕೆ ದಕ್ಷಿಣ ಅಥವಾ ಪಶ್ಚಿಮವು ಆಗಿರುತ್ತದೆ. ಆದ್ದರಿಂದ ವೈಯಕ್ತಿಕ ಶುಭ ದಿಕ್ಕನ್ನು ಅಳವಡಿಸಿಕೊಳ್ಳುವುದು ಶುಭಕರ. ವಿದ್ಯಾಭ್ಯಾಸ ಸ್ವದೇಶದಲ್ಲೋ ಅಥವಾ ವಿದೇಶದಲ್ಲೋ ಎನ್ನುವ ಸಂಗತಿಯನ್ನು ಸಹ ಜ್ಯೋತಿಷಶಾಸ್ತ್ರ ತಿಳಿಸುತ್ತದೆ. ಆದ್ದರಿಂದ ಎಸ್ಸೆಸ್ಸೆಲ್ಸಿ ಮುಗಿಸಿ ಪಿಯುಸಿ, ಡಿಪ್ಲೊಮಾ, ಜೆಒಸಿ ಇತರೆ ಕೋರ್ಸ್‌ಗಳಿಗೆ ಹೋಗುವ ಮೊದಲು ವಿಜ್ಞಾನ, ವಾಣಿಜ್ಯ ಮತ್ತು ಕಲಾ ವಿಭಾಗವನ್ನು ಜ್ಯೋತಿಷಶಾಸ್ತ್ರ ಪ್ರಕಾರ ಆಯ್ಕೆ ಮಾಡಿಕೊಳ್ಳುವುದು ಸೂಕ್ತ. ಯಾವುದೇ ವಿಷಯದಲ್ಲಾದರೂ ಜ್ಯೋತಿಷಶಾಸ್ತ್ರದ ಸೂಚನೆಯಂತೆ ಉನ್ನತ ವಿದ್ಯಾಭ್ಯಾಸವನ್ನು ಮುಂದುವರಿಸಿಕೊಂಡು ಹೋಗುವುದು ಸರಿಯಾದ ಕ್ರಮ. ಕರಿಯರ್‌ ಗೈಡ್‌ ರವಿ : ರಾಜನೀತಿ ಶಾಸ್ತ್ರ, ಪ್ರಶಾಸನ, ರಾಜಭಾಷೆ, ಚಿಕಿತ್ಸಾ, ಶರೀರ ವಿಜ್ಞಾನ. ಚಂದ್ರ : ಮನೋವಿಜ್ಞಾನ, ವನಸ್ಪತಿ ವಿಜ್ಞಾನ, ನಿಸರ್ಗ ಶಾಸ್ತ್ರ, ಹೋಟೆಲ್‌ ಮ್ಯಾನೇಜ್‌ಮೆಂಟ್‌, ಪತ್ರಿಕೋದ್ಯಮ. ಕುಜ : ಭೂಗೋಳ ಶಾಸ್ತ್ರ, ಖನಿಜ ಶಾಸ್ತ್ರ, ಇತಿಹಾಸ, ಇಂಜಿನಿಯರಿಂಗ್‌, ಐಪಿಎಸ್‌, ಆರ್ಕಿಟೆಕ್ಚರ್‌. ಬುಧ : ಗಣಿತಶಾಸ್ತ್ರ, ವ್ಯಾಕರಣ, ಅಕೌಂಟೆನ್ಸಿ, ಸಿ.ಎ., ಸಂಖ್ಯಾಶಾಸ್ತ್ರ. ಗುರು : ಅರ್ಥಶಾಸ್ತ್ರ, ಸಾಹಿತ್ಯ, ಉಚ್ಛ ಶಿಕ್ಷಣಗಳಾದ ಎಂ.ಲಿಟ್‌, ಡಿ.ಲಿಟ್‌, ಪಿಎಚ್‌ಡಿ. ಶುಕ್ಲ : ಲಲಿತಕಲೆ, ಫ್ಯಾಷನ್‌ ಡಿಸೈನಿಂಗ್‌, ಬ್ಯೂಟೀಷಿಯನ್‌, ಸಾಹಿತ್ಯ. ಶನಿ :ಯಂತ್ರಶಾಸ್ತ್ರ, ಸಿವಿಲ್‌ ಇಂಜಿನಿಯರಿಂಗ್‌, ಮುದ್ರಣಾಲಯ ಜ್ಞಾನ. ರಾಹು : ಕಂಪ್ಯೂಟರ್‌ ವಿಜ್ಞಾನ, ತರ್ಕಶಾಸ್ತ್ರ, ಹಿಪ್ನಾಟಿಸಂ, ಮೆಸ್ಮರಿಸಂ. ಕೇತು : ಅಧ್ಯಾತ್ಮ, ಯಂತ್ರ-ಮಂತ್ರ-ತಂತ್ರ, ವೈಜ್ಞಾನಿಕ ಸಂಶೋಧನೆ. ಕುಂಡಲಿಯಲ್ಲಿದೆ ವಿದ್ಯಾಭ್ಯಾಸ ಪ್ರತಿ ವರ್ಷ ಎಸ್ಸೆಸ್ಸೆಲ್ಸಿ ಹಾಗೂ ಪಿಯುಸಿ ವಿದ್ಯಾರ್ಥಿಗಳ ಫಲಿತಾಂಶ ಹೊರ ಬಂದಾಗ ಮಕ್ಕಳಿಗೆ ಯಾವ ವಿಭಾಗದ ವಿದ್ಯಾಭ್ಯಾಸ ಆಯ್ಕೆ ಮಾಡಿಕೊಳ್ಳಬೇಕೆಂಬ ಚಿಂತೆ. ಪ್ರತಿ ವರ್ಷ ಎಸ್ಸೆಸ್ಸೆಲ್ಸಿ ಹಾಗೂ ಪಿಯುಸಿ ವಿದ್ಯಾರ್ಥಿಗಳ ಫಲಿತಾಂಶ ಹೊರ ಬಂದಾಗ ಮಕ್ಕಳಿಗೆ ಯಾವ ವಿಭಾಗದ ವಿದ್ಯಾಭ್ಯಾಸ ಆಯ್ಕೆ ಮಾಡಿಕೊಳ್ಳಬೇಕೆಂಬ ಚಿಂತೆ. ಇತ್ತೀಚೆಗಂತೂ ಕಲಿಕೆಗೆ ಸಾಕಷ್ಟು ಕೋರ್ಸ್‌ಗಳು ಕೂಡ ಲಭ್ಯ ಇವೆ. ಆದರೆ ಜ್ಯೋತಿಷ್ಯಶಾಸ್ತ್ರದ ಪ್ರಕಾರ ಅವರವರ ರಾಶಿ ಪ್ರಕಾರ ವಿದ್ಯಾಭ್ಯಾಸವನ್ನು ಆಯ್ಕೆ ಮಾಡಿಕೊಂಡು ಮುಂದುವರಿದರೆ ಆ ವಿದ್ಯೆ ಆತನಿಗೆ ಅಥವಾ ಆಕೆಗೆ ಹೆಚ್ಚಿನ ಫಲಕಾರಿ ಕೊಡುತ್ತವೆ ಎಂದು ಒಂಬತ್ತು ಗ್ರಹಗಳಿಂದ ಹಾಗೂ ಗ್ರಹಕ್ಕೆ ತಕ್ಕಂತೆ ಗುರುತಿಸಬಹುದು. ಯಾವ ರಾಶಿಗೆ ಯಾವ ಕೋರ್ಸ್‌ ಸೂಕ್ತ ಎಂಬ ವಿವರ ಇಲ್ಲಿದೆ. ಮೇಷ: ಈ ರಾಶಿಯ ಅಧಿಪತಿ ಕುಜ. ಇದು ಅಗ್ನಿತತ್ವ ರಾಶಿ. ಈ ರಾಶಿಯವರು ಭೂಗರ್ಭಶಾಸ, ಖಗೋಳಶಾಸ, ಕಂಪ್ಯೂಟರ್‌, ಬಣ್ಣಗಳ ತರಬೇತಿ, ಇತಿಹಾಸ ವಿಷಯವನ್ನು ಆರಿಸಿಕೊಳ್ಳಬಹುದು. ವೃಷಭ:ಈ ರಾಶಿಯ ಅಧಿಪತಿ ಶುಕ್ರ. ಇದು ಭೂತತ್ವ ರಾಶಿ. ಈ ರಾಶಿಯವರು ಫ್ಯಾಷನ್‌ ಡಿಸೈನ್‌ನಿಂಗ್‌, ಡಿಪ್ಲೊಮಾ ಅಥವಾ ಎಂಜಿನಿಯರಿಂಗ್‌, ಇಂಟೀರಿಯರ್‌ ಡಿಸೈನಿಂಗ್‌, ಡಿಪ್ಲೊಮಾ, ಕಾಲ್‌ಸೆಂಟರ್‌, ಜರ್ನಲಿಸಂ, ವಿಜ್ಞಾನ (ಸಸ್ಯ) ವಿಭಾಗ, ವೈದ್ಯಕೀಯ ವಿಭಾಗವನ್ನು ಆರಿಸಿಕೊಳ್ಳಬಹುದು. ಮಿಥುನ: ಈ ರಾಶಿಯ ಅಧಿಪತಿ ಬುಧ. ಇದು ವಾಯುತತ್ವ ರಾಶಿ. ಲೆಕ್ಕಪತ್ರಗಳ ಬಗ್ಗೆ, ಬಿಸ್ನೆಸ್‌ ಮ್ಯಾನೇಜ್‌ಮೆಂಟ್‌, ಎಂಕಾಮ್‌, ಬಿಎಡ್‌, ಜರ್ನಲಿಸಂ, ಗಗನಸಖಿ, ವಿಮಾನಯಾನ ವಿಭಾಗವನ್ನು ಆರಿಸಿಕೊಳ್ಳಬಹುದು. ಕಟಕ:ಈ ರಾಶಿಯ ಅಧಿಪತಿ ಚಂದ್ರ. ಇದು ಜಲತತ್ವ ರಾಶಿ. ಸಮುದ್ರಯಾನ ತರಬೇತಿ, ಜಲ ಸಂಶೋಧನೆ, ಫ್ಯಾಷನ್‌ ಡಿಸೈನರ್‌, ವಿಜ್ಞಾನದ ವಿಭಾಗ, ಟಿಸಿಎಚ್‌, ಬಿಎಡ್‌, ಹೋಟೆಲ್‌ ಮ್ಯಾನೇಜ್‌ಮೆಂಟ್‌ ವಿಭಾಗವನ್ನು ಆರಿಸಿಕೊಳ್ಳಬಹುದು. ಸಿಂಹ:ಈ ರಾಶಿಯ ಅಧಿಪತಿ ರವಿ ಗ್ರಹ. ಇದು ಅಗ್ನಿತತ್ವ ರಾಶಿ. ರಾಜಕೀಯಶಾಸ, ಗಣಕಶಾಸ, ಸಿನಿಮಾ ರಂಗ, ಖಗೋಳಶಾಸ, ಮಾಹಿತಿ ತಂತ್ರಜ್ಞಾನ, ವೃತ್ತಿಪರ ಕೋರ್ಸ್‌, ಪಬ್ಲಿಕ್‌ ರಿಲೇಷನ್‌ ಮ್ಯಾನೇಜ್‌ಮೆಂಟ್‌ ವಿಭಾಗವನ್ನು ಆರಿಸಿಕೊಳ್ಳಬಹುದು. ಕನ್ಯಾ:ಈ ರಾಶಿಯ ಅಧಿಪತಿ ಬುಧ. ಇದು ಭೂತತ್ವ ರಾಶಿ. ವಾದ ವಿವಾದ ತರಬೇತಿ, ಭೌತಶಾಸ, ಸಂಶೋಧನೆ, ನಾಟ್ಯ, ಚಲನಚಿತ್ರ, ಬಿಸ್ನೆಸ್‌ ಮ್ಯಾನೇಜ್‌ಮೆಂಟ್‌, ಬಿಕಾಮ್‌, ಸಿಎ, ಸಾಫ್ಟ್‌ವೇರ್‌ ವಿಭಾಗವನ್ನು ಆರಿಸಿಕೊಳ್ಳಬಹುದು. ತುಲಾ:ಈ ರಾಶಿಯ ಅಧಿಪತಿ ಶುಕ್ರ. ಇದು ವಾಯುತತ್ವ ರಾಶಿ. ಹೋಟೆಲ್‌ ಮ್ಯಾನೇಜ್‌ಮೆಂಟ್‌, ಗಣಕಶಾಸ, ಕಲಾರಂಗ, ಚಿತ್ರಕಲೆ, ಸಸ್ಯ ವಿಜ್ಞಾನ, ಮಲ್ಟಿ ಮೀಡಿಯಾ ಕೋರ್ಸ್‌, ಗ್ರಾಫಿಕ್‌ ಡಿಸೈನರ್‌ ವಿಭಾಗವನ್ನು ಆರಿಸಿಕೊಳ್ಳಬಹುದು. ವೃಶ್ಚಿಕ:ಈ ರಾಶಿಯ ಅಧಿಪತಿ ಕುಜ. ಇದು ಜಲತತ್ವ ರಾಶಿ. ಆರ್ಕಿಟೆಕ್‌, ರಸಾಯನಶಾಸ, ರಾಜಕೀಯ ಸಂಬಂಧ ವಿದ್ಯೆ, ಖನಿಜಶಾಸ, ಕಾಲ್‌ಸೆಂಟರ್‌, ವಿದೇಶಿ ಭಾಷೆ ಕಲಿಕೆ, ಹಾರ್ಡ್‌ವೇರ್‌ ವಿಭಾಗವನ್ನು ಆರಿಸಿಕೊಳ್ಳಬಹುದು. ಧನಸ್ಸು:ಈ ರಾಶಿಯ ಅಧಿಪತಿ ಗುರು. ಇದು ಅಗ್ನಿತತ್ವ ರಾಶಿ. ಉಪನ್ಯಾಸ, ಜ್ಯೋತಿಷ, ಮಂತ್ರಶಾಸ, ಗಣಿತಶಾಸ, ತಾಂತ್ರಿಕ ವಿದ್ಯೆ, ವಾಯುಯಾನ, ಸೈನಿಕ ವಿಭಾಗ, ಸಾಫ್ಟ್‌ವೇರ್‌ ವಿದ್ಯೆ ವಿಭಾಗವನ್ನು ಆರಿಸಿಕೊಳ್ಳಬಹುದು. ಮಕರ:ಈ ರಾಶಿಯ ಅಧಿಪತಿ ಶನಿ. ಇದು ಭೂತತ್ವ ರಾಶಿ. ರಹಸ್ಯ ವಿದ್ಯೆ, ವಾಹನ ವಿದ್ಯೆ, ಖಗೋಳಶಾಸ, ರಾಸಾಯನಿಕ, ಮಲ್ಟಿ ಮೀಡಿಯಾ ಕೋರ್ಸ್‌, ಕೈಗಾರಿಕಾ ತರಬೇತಿ, ಚರ್ಮಕ್ಕೆ ಸಂಬಂಧಪಟ್ಟ ವಿದ್ಯೆ, ವೈದ್ಯಕೀಯ ವಿಭಾಗವನ್ನು ಆರಿಸಿಕೊಳ್ಳಬಹುದು. ಕುಂಭ:ಈ ರಾಶಿಯ ಅಧಿಪತಿ ಶನಿ. ಇದು ವಾಯುತತ್ವ ರಾಶಿ. ತರ್ಕಶಾಸ, ಜರ್ನಲಿಸಂ, ಲೈಬ್ರರಿಯನ್‌, ಸೈನಿಕ ವಿಭಾಗ, ಕಲಾ ವಿಭಾಗ, ಸಂಶೋಧನೆ, ಶಿಕ್ಷಣ ವಿದ್ಯೆ ವಿಭಾಗವನ್ನು ಆರಿಸಿಕೊಳ್ಳಬಹುದು. ಮೀನ:ಈ ರಾಶಿಯ ಅಧಿಪತಿ ಗುರು. ಇದು ಜಲತತ್ವ ರಾಶಿ. ವಾಯುಯಾನ, ಉಪನ್ಯಾಸ, ಪಿ.ಟಿ ಟೀಚರ್‌, ಸಿನಿಮಾ ರಂಗ, ಹೋಟೆಲ್‌ ಮ್ಯಾನೇಜ್‌ಮೆಂಟ್‌, ಮೆಡಿಕಲ್‌, ಎಂಜಿನಿಯರಿಂಗ್‌, ಸಾಫ್ಟ್‌ವೇರ್‌, ಈವೆಂಟ್‌ ಮ್ಯಾನೇಜ್‌ಮೆಂಟ್‌, ಡಿಪ್ಲೊಮಾ, ಜರ್ನಲಿಸಂ ಉಪನ್ಯಾಸ, ವಿದೇಶಿ ಭಾಷೆ ಕಲಿಕೆ, ಡಿಸೈನರ್‌ ವಿಭಾಗವನ್ನು ಆರಿಸಿಕೊಳ್ಳಬಹುದು.

No comments:

Post a Comment