Saturday, 1 December 2018
ಜಾತಕದಲ್ಲಿ ವಿದೇಶಯೋಗ ತಿಳಿಯುವುದು ಹೇಗೆ?
ಜಾತಕದಲ್ಲಿ ವಿದೇಶಯೋಗ ತಿಳಿಯುವುದು ಹೇಗೆ?
ವಿದೇಶಕ್ಕೆ ಹೋಗುವ ಆಸೆ ಯಾರಿಗೆ ಇಲ್ಲ ಆದರೆ ಎಲ್ಲದಕ್ಕೂ ಯೋಗವಿರಬೇಕು ಎನ್ನುವುದು ಜ್ಯೋತಿಷ ಶಾಸ್ತ್ರದ ಖಚಿತ ಅಭಿಪ್ರಾಯ ಹಾಗಾದರೆ ವಿದೇಶಯೋಗ ತಿಳಿವ ಬಗೆ ಹೇಗೆ?
ವಿದೇಶಕ್ಕೆ ಹೋಗುವ ಆಸೆ ಯಾರಿಗೆ ಇಲ್ಲ. ಆದರೆ ಎಲ್ಲದಕ್ಕೂ ಯೋಗವಿರಬೇಕು ಎನ್ನುವುದು ಜ್ಯೋತಿಷ ಶಾಸ್ತ್ರದ ಖಚಿತ ಅಭಿಪ್ರಾಯ. ಹಾಗಾದರೆ ವಿದೇಶಯೋಗ ತಿಳಿವ ಬಗೆ ಹೇಗೆ?
ಈಗಿನ ಪೀಳಿಗೆಯಲ್ಲಿ ಎಲ್ಲರಿಗೂ ತಮ್ಮ ಮಕ್ಕಳು ವಿದೇಶದಲ್ಲಿ ನೆಲೆಸಬೇಕು. ಅಲ್ಲಿಯೇ ಉದ್ಯೋಗ ಮಾಡಬೇಕು, ಕೈತುಂಬಾ ಸಂಪಾದಿಸಬೇಕು ಎನ್ನುವಾಸೆ. ಅವರಾಸೆ ಕೈಗೂಡುತ್ತದೆಯೇ ಅಥವಾ ಇಲ್ಲವೇ ಎಂಬುದು ಜಾತಕದಲ್ಲಿನ ಗ್ರಹಗಳ ಸಂಬಂಧದಿಂದ ತಿಳಿಯುತ್ತದೆ. ಜಾತಕ ಕುಂಡಲಿಯ ಮೂರನೆಯ ಸ್ಥಾನದಿಂದ ಚಿಕ್ಕ ಪ್ರಯಾಣಗಳನ್ನು 9 ಮತ್ತು 12 ನೇ ಸ್ಥಾನದಿಂದ ದೂರದ ಪ್ರಯಾಣಗಳನ್ನು ಗುರುತಿಸಬಹುದು.
ತೃತೀಯ ಭಾವ, ತೃತಿಹಯೇಶ ಮತ್ತು ಮಂಗಳನ ಯುತಿ ಲಗ್ನೇಶನೊಡನೆ ಇರುವುದರಿಂದ ಅಥವಾ ಸಮ ಸಪ್ತಕ ಯೋಗವಿದ್ದರೆ ವಿದೇಶ ಪ್ರವಾಸ ಮಾಡುವ ಯೋಗವಿರುತ್ತದೆ.
ತೃತೀಯೇಶ ತೃತೀಯ ಭಾವದಲ್ಲಿ ಅಥವಾ ಮಂಗಳ ಅಥವಾ ಚಂದ್ರನಿರಬೇಕು. ಇವರ ರಾಶಿಯಾದರೂ ತೃತೀಯ ಭಾವವಾಗಿರಬೇಕು. ಲಗ್ನದಲ್ಲಿ ತೃತೀಯೇಶ ಅಥವಾ ಮಂಗಳ ಅಥವಾ ಚಂದ್ರನಿರಬೇಕು. ತೃತೀಯ ಭಾವದಲ್ಲಿ ಮಂಗಳ ಸ್ಥಿತನಿರಬೇಕು. ನವಮೇಶ ನವಮ ಭಾವದಲ್ಲಿದ್ದು ಲಗ್ನೇಶ ಲಗ್ನದಲ್ಲೇ ಇದ್ದರೆ ವಿದೇಶ ಯಾತ್ರೆ ಯೋಗ ಉಂಟಾಗುತ್ತದೆ. ಲಗ್ನೇಶ ನವಮದಲ್ಲೂ ನವಮೇಶ ಲಗ್ನದಲ್ಲಿದ್ದರೂ ವಿದೇಶ ಯೋಗ ನಿಶ್ಚಿತ.
ನವಮ-ದ್ವಾದಶ ಭಾವಗಳು ಚರರಾಶಿಯಾಗಿ ನವಮೇಶ ದ್ವಾದಶಾಧಿಪತಿ ಚರರಾಶಿಯಲ್ಲಿ ಸ್ಥಿತರಿದ್ದಾಗಲೂ ಯೋಗವಿರುತ್ತದೆ. ಹಾಗೆಯೇ ಲಗ್ನೇಶ ಮತ್ತು ಚತುರ್ಥೇಶ ಇಬ್ಬರೂ ದ್ವಾದಶ ಭಾವದಲ್ಲಿದ್ದರೆ, ತೃತೀಯ ಅಥವಾ ನವಮ ಭಾವದಲ್ಲಿ ರಾಹು ಸ್ಥಿತನಾಗಿದ್ದರೆ, ಲಗ್ನೇಶನ ಸ್ಥಿತಿಯಿಂದ ದ್ವಾದಶ ಭಾವದ ಸ್ವಾಮಿ ಲಗ್ನಕ್ಕೆ ಕೇಂದ್ರ ತ್ರಿಕೋಣದಲ್ಲಿ ಸ್ಥಿತನಾಗಿದ್ದರೆ, ಲಗ್ನಾಧಿಪತಿ, ಭಾಗ್ಯಾಧಿಪತಿ, ವ್ಯಯಾಧಿಪತಿ ಲಗ್ನಕ್ಕೆ ಚರರಾಶಿಯಲ್ಲಿ ಸ್ಥಿತನಾಗಿದ್ದರೆ, ಶುಕ್ರನು ಸ್ವಕ್ಷೇತ್ರ ಉಚ್ಛಕ್ಷೇತ್ರದಲ್ಲಿದ್ದು ಅದು ಕೇಂದ್ರ ಅಥವಾ ತ್ರಿಕೋಣವಾಗಿ ಚರರಾಶಿಯಾಗಿದ್ದರೂ ವಿದೇಶಯೋಗ ಪ್ರಾಪ್ತವಾಗುತ್ತದೆ.
ನಿಮ್ಮ ಜಾತಕದಲ್ಲಿ ವಿದೇಶ ಯೋಗ ಇದೆಯೋ ಇಲ್ಲವೋ?
ಎಲ್ಲರಿಗೂ ಜೀವನದಲ್ಲಿ ಒಮ್ಮೆಯಾದರೂ ವಿದೇಶಕ್ಕೆ ಹೋಗುವಾಸೆ. ತಮಗೆ ಸಾಧ್ಯವಾಗದಿದ್ದರೆ ತಮ್ಮ ಮಕ್ಕಳನ್ನಾದರೂ ಕಳುಹಿಸುವ ಆಸೆ. ಆಸೆ, ನಿರೀಕ್ಷೆ ತಪ್ಪಲ್ಲ. ಆದರೆ ಜಾತಕದ ಫಲಾಫಲಗಳು ಹೇಳುವುದೇನು?
ವಿದೇಶಕ್ಕೆ ಹೋಗಬೇಕು ಅಂದ್ರೆ ಜಾತಕ ಏಕೆ ನೋಡಬೇಕು. ಸುಮ್ಮನೆ ಹೋಗಿ ಯಾವುದಾದ್ರೂ ಟ್ರಾವಲ್ ಕಂಪನೀಲಿ ಟಿಕೆಟ್ ಬುಕ್ ಮಾಡಿದ್ರೆ ಆಯ್ತು. ಆರಾಮವಾಗಿ ಯೂರೋಪ್, ಏಷ್ಯಾ, ಸಿಂಗಪೂರ್ ಪ್ರವಾಸ ಮಾಡ್ಕೊಂಡು ಬರಬಹುದು...
ಬದಲಾದ ಕಾಲಮಾನದಲ್ಲಿ ವಿದೇಶ ಪ್ರವಾಸ ಪಕ್ಕದಮನೆಗೆ ಹೋದಷ್ಟೇ ಸುಲಭವಾಗಿದೆ. ಪ್ರವಾಸ, ಮೋಜಿಗೆ, ಕಾರ್ಪೊರೇಟ್ ಮೀಟಿಂಗ್ ಅಥವಾ ಗೆಟ್ ಟುಗೆದರ್ ಅಂತ ವಿದೇಶ ಪ್ರವಾಸ ಮಾಡೋದು ಒಂದು ಕಡೆಯಾದರೆ ಹೆಚ್ಚಿನ ವ್ಯಾಸಂಗದ ನಿರೀಕ್ಷೆ ಇಟ್ಕೊಂಡಿರೋರು, ಕೈತುಂಬಾ ಸಂಪಾದಿಸಬೇಕು ಅಂತ ಆಸೆ ಇಟ್ಕೊಂಡಿರೋರು, ಈ ಜಂಜಾಟ ಬೇಡಪ್ಪಾ ಗ್ರೀನ್‌ಕಾರ್ಡ್ ಸಿಕ್ಕು ಅಲ್ಲೇ ಸೆಟ್ಲ್ ಆದ್ರೆ ಸಾಕು ಅಂತ ಬಯಸೋರು ಮತ್ತೊಂದು ಕಡೆ. ಆಸೆ, ನಿರೀಕ್ಷೆ, ಕನಸುಗಳಿಗೇನು ಕಡಿವಾಣವಿಲ್ಲ. ಹಾಗಂತ ಕನಸು ಕಾಣೋರೆಲ್ಲಾ ವಿದೇಶಕ್ಕೆ ಹೋಗಬೇಕು ಅಂದ್ಕೊಂಡ್ರು ಆಗೋಲ್ಲ. ಕೆಲವೊಮ್ಮೆ ಕೈಯಲ್ಲಿ ದುಡ್ಡಿದ್ದರೂ ತಿನ್ನೋಕೆ ಆಹಾರವಿಲ್ಲ ಅಂತಾರಲ್ಲ ಹಾಗೆ... ಹಾಗಾದರೆ ವಿದೇಶಯೋಗ ಇದೆಯೋ, ಇಲ್ಲವೋ ಅನ್ನೋ ವಿಷಯದಲ್ಲಿ ಜಾತಕ ಹೇಳೋದೇನು?
ಜಾತಕದಲ್ಲಿ ತೃತೀಯ ಭಾವ ಅಂದರೆ ಮೂರನೆಯ ಸ್ಥಾನ ಸಮೀಪ ಸ್ಥಳದ ಪ್ರಯಾಣವನ್ನು ಸೂಚಿಸಿದರೆ, ಹನ್ನೆರಡನೆಯ ಮನೆ ದೂರದ ಅರ್ಥಾತ್ ವಿದೇಶ ಪ್ರಯಾಣವನ್ನು ಸಂಕೇತಿಸುತ್ತದೆ.
ತೃತೀಯ ಭಾವ, ತೃತೀಯೇಶ ಮತ್ತು ಮಂಗಳನ ಯುತಿ ಲಗ್ನದ ಜೊತೆ ಇದ್ದಾಗ ವಿದೇಶ ಯೋಗವಿದೆ ಎಂದು ಹೇಳಬಹುದು. ತೃತೀಯೇಶ ತೃತೀಯ ಭಾವದಲ್ಲಿ ಮಂಗಳ ಅಥವಾ ಚಂದ್ರನಿದ್ದರೂ ಯೋಗವಿರುತ್ತದೆ. ನವಮೇಶ ನವಮ ಭಾವದಲ್ಲಿದ್ದು ಲಗ್ನೇಶ ಲಗ್ನದಲ್ಲೇ ಇದ್ದರೂ ವಿದೇಶ ಯೋಗ ಉಂಟಾಗುತ್ತದೆ. ಲಗ್ನೇಶ ನವಮದಲ್ಲೂ ನವಮೇಶ ಲಗ್ನದಲ್ಲಿದ್ದರೂ, ನವಮ - ದ್ವಾದಶ ಭಾವಗಳು ಚರ ರಾಶಿಯಾಗಿ ನವಮೇಶ ದ್ವಾದಶಾಧಿಪತಿ ಚರ ರಾಶಿಯಲ್ಲಿ ಸ್ಥಿತರಿದ್ದರೂ, ಚಂದ್ರ ಚರ ರಾಶಿಯಲ್ಲಿದ್ದು ಮತ್ತು ನವಮ - ದ್ವಾದಶ ಭಾವಗಳೊಡನೆ ಸಂಬಂಧ ಹೊಂದಿದ್ದರೂ ವಿದೇಶ ಯೋಗ ಉಂಟಾಗುತ್ತದೆ.
ಲಗ್ನ ಚರರಾಶಿಯಾಗಿ ಲಗ್ನೇಶ ಕೂಡ ಚರರಾಶಿಯಲ್ಲಿ ಸ್ಥಿತನಾಗಿ ಮತ್ತು ಯಾವುದಾದರೂ ಒಂದು ಗ್ರಹ ಚರ ರಾಶಿಯಲ್ಲಿ ಸ್ಥಿತವಾಗಿ ಗ್ರಹದ ದೃಷ್ಟಿ ಲಗ್ನೇಶನ ಮೇಲಿದ್ದರೂ, ಲಗ್ನೇಶ ಅಷ್ಟಮ ಭಾವದಲ್ಲಿದ್ದರೆ ಮತ್ತು ಚತುರ್ಥ ನವಮ ಅಥವಾ ದ್ವಾದಶ ಭಾವದಲ್ಲಿ ರಾಹು ಅಥವಾ ಕೇತುವಿದ್ದರೂ ಜಾತಕನಿಗೆ ವಿದೇಶ ಯೋಗವಿರುತ್ತದೆ.
ಜಾತಕನ ಉಚ್ಛ ರಾಶಿಯಲ್ಲಿ ಸ್ಥಿತ ದ್ವಾದಶೇಷನು ಅಷ್ಟಮ ಭಾವದಲ್ಲಿ ಚರರಾಶಿಯಲ್ಲಿ ಸ್ಥಿತನಿದ್ದರೆ, ಲಗ್ನೇಶ ಚತುರ್ಥೇಶ ಇಬ್ಬರೂ ದ್ವಾದಶ ಭಾವದಲ್ಲಿದ್ದರೆ, ತೃತೀಯ ಅಥವಾ ನವಮ ಭಾವದಲ್ಲಿ ರಾಹು ಸ್ಥಿತನಾಗಿದ್ದರೆ, ಲಗ್ನೇಶನ ಸ್ಥಿತನಿಂದ ದ್ವಾದಶ ಭಾವದ ಸ್ವಾಮಿ ಲಗ್ನಕ್ಕೆ ಕೇಂದ್ರ ತ್ರಿಕೋಣದಲ್ಲಿ ಸ್ಥಿತನಾಗಿದ್ದರೂ ಯೋಗವಿರುತ್ತದೆ. ಲಗ್ನಾಧಿಪತಿ, ಭಾಗ್ಯಾಧಿಪತಿ, ವ್ಯಯಾಧಿಪತಿ ಲಗ್ನಕ್ಕೆ ಚರರಾಶಿಯಲ್ಲಿ ಸ್ಥಿತನಾಗಿದ್ದರೆ, ಶುಕ್ರನು ಸ್ವಕ್ಷೇತ್ರ, ಉಚ್ಛಕ್ಷೇತ್ರದಲ್ಲಿದ್ದು ಅದು ಕೇಂದ್ರ ಅಥವಾ ತ್ರಿಕೋನವಾಗಿ ಚರರಾಶಿಯಾಗಿದ್ದರೂ ವಿದೇಶ ಯೋಗವಿರುತ್ತದೆ.
Subscribe to:
Post Comments (Atom)
No comments:
Post a Comment