Saturday 1 December 2018

ಪಿತೃ ದೋಷ; ಹೀಗಂದರೇನು ಗೊತ್ತಾ?

ಪಿತೃ ದೋಷ; ಹೀಗಂದರೇನು ಗೊತ್ತಾ? ಪಿತೃದೋಷದ ಬಗೆಗೆ ಒಬ್ಬ ವ್ಯಕ್ತಿಯ ಜಾತಕದಲ್ಲಿ ಸುಳಿವುಗಳು ಸಿಗುತ್ತದೆ. ಬ್ರಹ್ಮ ಪುರಾಣ, ಗರುಡ ಪುರಾಣ ಮುಂತಾದ ಪುರಾಣಗಳಲ್ಲಿ ದೊರಕುವ ಪಿತೃದೋಷದ ವಿಚಾರಗಳನ್ನು, ಜಾತಕದಲ್ಲಿ ಕೆನೆಗಟ್ಟುವ ಪಿತೃ ದೋಷ ವಿಚಾರ ಸ್ಥಿತಿಗತಿಗಳನ್ನು ಒಟ್ಟಂದದಲ್ಲಿ ಸೂಕ್ಷ್ಮವಾಗಿ ಅರಿಯಬೇಕು. ಮಾನವನ ಸಂಬಂಧವಾಗಿ (ಇತರ ಪ್ರಾಣಿಗಳಿಗಿಂತಲೂ ಬೇರೆಯೇ ಆಗಿ ದೇವರೂ ಆಗಲು ಸಾಧ್ಯವಿಲ್ಲದ, ರಾಕ್ಷಸನಾಗಬಾರದ ಮಾನವೀಯತೆಯ ಅಪ್ಪಟ ಗುಣ ಧರ್ಮಗಳಿಂದ, ನಾಕರೀಕತೆಯ ಕಟ್ಟುಪಾಡುಗಳೊಂದಿಗೆ) ಒಂದು ಜಾತಕ ಕುಂಡಲಿ ತನ್ನ ಗರ್ಭದಲ್ಲಿ ಅವನ ವ್ಯಕ್ತಿತ್ವ ಸಿದ್ಧಿ ಏನು, ವಾಕ್‌ ಚಾತುರ್ಯವೇನು, ಆರ್ಥಿಕ ಬಲವೇನು,ಸ್ಥೈರ್ಯ ಧೈರ್ಯಗಳೇನು, ಸುಖೀದ ವಿಚಾರವಾದ ಒಟ್ಟೂ ಶಕ್ತಿ ಅಥವಾ ಮತಿಗಳೇನು, ಸಂತಾನದ ವಿಷಯದ ಏರಿಳಿತಗಳೇನು, ದರಿದ್ರಾದಿ ಸಕಲ ದುರಾದೃಷ್ಟಗಳ ವಿಚಾರಗಳೇನು, ವೈವಾಹಿಕ ಜೀವನದ ಪಾಲೇನು, ಮರಣ ಯಾವಾಗ, ಹೇಗೆ ಮತ್ತು ಏಕೆ ಸಂಬಂಧಿಸಬಹುದು ಎಂಬುದರ ಚೌಕಟ್ಟುಗಳು ಯಾವ ಬಗೆಯದು, ಭಾಗ್ಯದ ವಿಚಾರವಾಗಿ ಏನು ಪಡೆದು ಬಂದಿರುವುದು, ಮಾಡುವ ಕಾಯಕ ಯಾವುದಾಗಿರುತ್ತದೆ. ಭಾಗ್ಯದ ನಿಕ್ಷೇಪ ಒಳಿತಿನ ಮೊತ್ತ ಕಟ್ಟಿಕೊಟ್ಟಿದೆಯೇ ವಿಧಿ, ನಷ್ಟಗಳ ಯಾದಿ ಹೇಗಿರುತ್ತದೆ ಇತ್ಯಾದಿ ಇತ್ಯಾದಿಗಳ ಬಗೆಗಿನ ಸೂಕ್ಷ್ಮಗಳನ್ನು ಕೆನೆಗಟ್ಟಿಸಿರುತ್ತದೆ. ಇಲ್ಲಾ ಹರಳು ಗಟ್ಟಿಸಿರುತ್ತ¨ ಎಂದೂ ಅನ್ನಬಹುದು. ಜಾತಕ ಕುಂಡಲಿಯ ಗ್ರಹಗಳು ಸೂರ್ಯ, ಚಂದ್ರಾದಿ ನವ ಗ್ರಹಗಳು, ( ರಾಹು ಕೇತುಗಳ ಅಸ್ತಿತ್ವದಲ್ಲಿ ಇರದ ಗ್ರಹಗಳಾದರೂ ಅವು ಸೂರ್ಯ ಹಾಗೂ ಚಂದ್ರರ ಪರಿಭ್ರಮಣದ ವೇಗದ ಛೇದವನೇ ಕಾರಣವಾಗಿ ಅಪಾರವಾದ ಕಂಡು ಕತ್ತಲ ಹೊತ್ತು ಶಕ್ತಿ ಮೂಲವಾಗಿ ಹೊರ ಹೊಮ್ಮುತ್ತವೆ) ತಂತಮ್ಮದೇ ಆದ ರೀತಿಯಲ್ಲಿ ಲೋಕದ ಜೀವಿಗಳ ಮೇಲೆ ತಮ್ಮ ಪ್ರಬಾವ ನೀಡುತ್ತಿರುತ್ತವೆ. ಪ್ರಭಾವದ ಕಾರಣಗಳಿಂದಾಗಿ ಅದೃಷ್ಟ ದುರಾದೃಷ್ಟಗಳು ಕೂಡಿ ಬರುತ್ತವೆ. ಇದನ್ನು ನಂಬಿದವನು ತನ್ನ ದೃಢವಾದ ನಂಬಿಗೆಯಿಂದ ಹೊರಬರಲಾರ. ನಂಬದೇ ಹೋದವನೂ ಎಂದೋ ಒಂದು ದಿನ "ಹೌದು, ನಿಜ. ಏನೋ ಒಂದು ಇದೆ. ತನ್ನನ್ನು ಮೀರಿದ ಅಗೋಚರ ಶಕ್ತಿ ' ನಂಬಿಗೆಗೆ ಬಂದು ತಲುಪುತ್ತಾನೆ. ಕೆಲವೇ ಕೆಲವು ಮಂದಿ ಅದೇನು ಅದೃಷ್ಟ, ಥೂ ಇಂಥದ್ದನ್ನು ನಂಬಲಾರೆ ಎಂಬ ನಂಬಿಗೆಯೊಂದಿಗೇ ನಾಸ್ತಿಕರಾಗಿ ಇರುತ್ತಾರೆ. ನಾಸ್ತಿಕರನ್ನು ನಾವು ಅಗೌರವಿಸಬೇಕಾಗಿಲ್ಲ. ಅವರ ರೀತಿ ಅವರದ್ದು. ಆದರೆ ಅವರು ಆಸ್ತಿಕರನ್ನು ಅಣಕಿಸಿದಿದ್ದರೆ ಸೂಕ್ತ. ಆಸ್ತಿಕರು ನಾಸ್ತಿಕರನ್ನು ದ್ವೇಷಿಸದಿದ್ದರೆ ಸೂಕ್ತ.

No comments:

Post a Comment