Friday, 30 August 2019

ಪ್ರಸವ ಮತ್ತು ಆರೋಗ್ಯ

ನಭೋಮಂಡಲದಲ್ಲಿ ಸಂಚರಿಸುತ್ತಿರುವ ಗ್ರಹಗಳ ಶಕ್ತಿಯು ಭೂಮಿಯನ್ನು ಸ್ಪರ್ಶಿಸಿ, ಜೀವಿಗಳ ಜೀವನದಲ್ಲಿ ವ್ಯತ್ಯಾಸವನ್ನು ತರುತ್ತದೆ. ಈ ಗ್ರಹಗಳು ಜನ್ಮಸ್ಥಳದ ಅಕ್ಷಾಂಶ ರೇಖಾಂಶ ಗಳಿಗೆ ತಕ್ಕಂತೆ ಉದಯವಾಗುವ ಲಗ್ನ ಬಿಂದುವಿಗೆ ಯಾವ ಭಾವದಲ್ಲಿ ಸ್ಥಿತರಾಗಿರುತ್ತಾರೋ ಅದರಂತೆ ಶುಭಾಶುಭ ಫಲಗಳನ್ನು ಕೊಡುತ್ತಾರೆ. ಈ ಗ್ರಹಗಳು ಭಚಕ್ರದ ಯಾವ ಯಾವ ರಾಶಿಯಲ್ಲಿ, ಯಾವ ನಕ್ಷತ್ರ ದಲ್ಲಿ, ಸ್ಥಿತರಾಗಿರುತ್ತಾರೋ ಅದರಂತೆ ಫಲಗಳಲ್ಲಿ ವ್ಯತ್ಯಾಸವುಂಟಾಗುತ್ತದೆ. ಪ್ರತಿಯೊಬ್ಬ ವ್ಯಕ್ತಿಯೂ ತನ್ನ ಪೂರ್ವಜನ್ಮ ಕೃತ ಫಲದಂತೆ ಈ ಜನ್ಮವನ್ನು ಪಡೆಯುತ್ತಾರೆ, ಪೂರ್ವಜನ್ಮ ದಲ್ಲಿ ಮಾಡಿದ ಕರ್ಮಫಲವನ್ನು ಈ ಜನ್ಮದಲ್ಲಿ ಅನುಭವಿಸುವುದನ್ನು ಪ್ರಸವಕಾಲದ ಕುಂಡಲಿಯಲ್ಲಿ ನವಗ್ರಹರು ಸ್ಥಿತರಾದ ರೀತಿಯಲ್ಲಿ ತಿಳಿಯಬಹುದು. ಪೂರ್ವಜನ್ಮದ ಪಾಪ ಅಥವಾ ಪುಣ್ಯಫಲದಂತೆ ಮನುಷ್ಯಜನ್ಮ ಪಡೆದಮೇಲೆ ಅತ್ಯಂತ ದುಃಖ, ಸುಖ, ಕಷ್ಟಗಳನ್ನು ಅನುಭವಿಸುತ್ತೇವೆ. ಅದರೆ ಕೆಲವುವೇಳೆ ಜನ್ಮ ತಾಳುವುದಕ್ಕೆ ಅನೇಕ ಕಷ್ಟಗಳನ್ನು ಅನುಭವಿಸುವುದು ಮಾತೃ ಗರ್ಭದಿಂದಲೇ ಪ್ರಾರಂಭವಾಗುತ್ತದೆ. ಪ್ರಸವ ಕಾಲದಲ್ಲಿ ಬದುಕುಳಿದರೆ ಅದು ನಮ್ಮ ಜನ್ಮ, ಜನ್ಮಕೊಟ್ಟ ತಾಯಿ ಬದುಕುಳಿದರೆ ಅದು ಅವರ ಪುನರ್ಜನ್ಮ. ಗರ್ಭಧಾರಣೆಯ ನಂತರ ಗರ್ಭಸ್ರಾವ, ಗರ್ಭದಲ್ಲೇ ಮರಣ (ಮೃತ ಶಿಶು ಜನನ) ಅವಧಿಗೆ ಮೊದಲೇ ಜನನ, ಕಷ್ಟಪ್ರಸವ ಇವು ಜನನ ಪೂರ್ವ ಸಂಕಟಗಳು. ಗುರು, ಶುಕ್ರ, ಚಂದ್ರ, ಬುಧರು ಸುಖ (ಶುಭ) ಪ್ರಸವವನ್ನು ಸೂಚಿಸುತ್ತಾರೆ. ರವಿ, ಶನಿ, ಕುಜ, ರಾಹು ಕೇತುಗಳು ಕಷ್ಟ ( ಅಶುಭ ) ಪ್ರಸವವನ್ನು ಸೂಚಿಸುತ್ತಾರೆ. ರಕ್ತ ಅಥವಾ ಜಲಸ್ರಾವ, ಶಸ್ತ್ರ ಚಿಕಿತ್ಸೆಯ ಮೂಲಕ ಪ್ರಸವವನ್ನು ಕುಜನಿಂದಲೂ, ತಡೆಗಳನ್ನು ಶನಿಯಿಂದಲೂ, ರಕ್ತಸ್ರಾವವನ್ನು ರಾಹುವಿನಿಂದಲೂ ತಿಳಿಯಬಹುದು. ಯಾವುದೇ ಜಾತಕದಲ್ಲಿ ಮುಖ್ಯವಾಗಿ ಕುಜ, ಶನಿಯಿಂದ ನಂತರ ರವಿ ಕೇತುಗಳಿಂದ ಕಷ್ಟಪ್ರಸವವನ್ನು ನಿರ್ಣಯಿಸಬಹುದು. ಯಾವುದೇ ಜಾತಕದಲ್ಲಿ ರವಿ ಚಂದ್ರರು, ಲಗ್ನ, ಲಗ್ನಾಧಿಪತಿ, ಷಷ್ಟ, ಷಷ್ಟಾಧಿಪತಿ, ಅಷ್ಟಮ, ಅಷ್ಠಮಾಧಿಪತಿ, ಪೀಡಿತ - ಪಾಪಕರ್ತರಿಯೋಗ - ನೀಚ - ಅಸ್ತ - ಪಾಪಗ್ರಹಗಳ ಯುತಿ - ದೃಷ್ಟಿಯಿದ್ದರೆ ಆರೋಗ್ಯ ಕೆಡುತ್ತದೆ. ಈ ಭಾವ - ಭಾವಾಧಿಪತಿ ಗಳು ಬಲವಾಗಿದ್ದು, ಸುಸ್ಥಿಯಲ್ಲಿದ್ದರೆ ಜಾತಕರು ಆರೋಗ್ಯವಾಗಿರುತ್ತಾರೆ. ಪುರುಷರ ಆರೋಗ್ಯವನ್ನು ರವಿಯಿಂದಲೂ, ಸ್ತ್ರೀಯರ ಆರೋಗ್ಯವನ್ನು ಚಂದ್ರನಿಂದಲೂ ಅವರುಗಳ ಬಲಾಬಲದಿಂದ ತಿಳಿಯಬಹುದು. ಜಾತಕದಲ್ಲಿ ರವಿ ಪೀಡಿತನಾದ್ರೆ ಪ್ರಕೃತಿದತ್ತವಾದ ರೋಗಗಳು, ಚಂದ್ರನು ಪೀಡಿತನಾಗಿದ್ದರೆ, ಬಲಹೀನನಾಗಿದ್ದರೆ ಮಾನಸಿಕ ರೋಗಿಯಾಗುತ್ತಾರೆ. ಲಗ್ನ - ಲಗ್ನಾಧಿಪತಿ ಪೀಡಿತನಾಗಿದ್ದರೆ ಸದಾ ರೋಗಿಯಾಗಿದ್ದು ಸಣ್ಣಪುಟ್ಟ ರೋಗಗಳು ಕಾಡುತ್ತಿರುತ್ತವೆ. ಷಷ್ಟ - ಷಷ್ಟಾಧಿಪತಿ ಗಳು ಪೀಡಿತರಾಗಿದ್ದರೆ, ಅತೀವ ಬಾಧೆಯ ರೋಗಗಳು ಮೇಲಿಂದ ಮೇಲೆ ಬರುತ್ತಿರುತ್ತದೆ. ಅಷ್ಟಮ - ಅಷ್ಟಮಾಧಿಪತಿಗಳು ಪೀಡಿತರಾಗಿದ್ರೆ ತೀವ್ರ ಮರಣ ಸೂಚಕ ರೋಗಗಳು - ಸಾಂಕ್ರಾಮಿಕ ರೋಗಗಳು, ಭಯಂಕರ ವ್ಯಾಧಿಗಳು, ದುರ್ಮರಣಗಳು ಉಂಟಾಗುತ್ತದೆ. ದ್ವಾದಶ - ದ್ವಾದಶಾಧಿಪತಿಗಳು ಪೀಡಿತರಾದ್ರೆ ಸದಾ ಆಸ್ಪತ್ರೆ ವಾಸ, ಹಾಸಿಗೆ ಹಿಡಿಯುವ ವ್ಯಾಧಿಗಳು ಬರುತ್ತವೆ. -SangrahaMahiti(FB)

ವಿದ್ಯಾಭ್ಯಾಸ (Education in Astrology)

ವಿದ್ಯಾರ್ಜನೆಗೆ ಲಗ್ನದಿಂದ ಚತುರ್ಥ ಸ್ಥಾನವನ್ನೂ, ಜ್ಞಾನಾರ್ಜನೆಗೆ ಪಂಚಮ ಸ್ಥಾನವನ್ನೂ ಪರಿಶೀಲಿಸಬೇಕು. ಆದ್ರೆ ಯಾವುದೇ ವಿದ್ಯೆಗೆ ಪ್ರಾಥಮಿಕ ವಿದ್ಯಾರ್ಜನೆಗೆ 2ನೇ ಮನೆಯನ್ನು ನೋಡಬೇಕು. ಏಕೆಂದರೆ ವಾಕ್ ಸ್ಥಾನವಾದ ಧನಸ್ಥಾನವು ಮಗುವಿನ ತೊದಲ್ನುಡಿಗಳಿಂದಿಡಿದು ಹೇಳಿಕೊಟ್ಟದ್ದನ್ನು ಕಲಿತು ಮತ್ತೆ ನೆನಪಿಸಿಕೊಂಡು ಹೇಳುವುದನ್ನು ಸೂಚಿಸುತ್ತೆ. ಎಲ್ಲಾ ವಿದ್ಯೆಗೂ ಮೂಲ ಸ್ಥಾನ ಧನಭಾವ ( 2ನೇ ಮನೆ ) ವೇ ಆಗಿದೆ. ಅಕ್ಷರದ ಪರಿಚಯವಿಲ್ಲದೆ ವಿದ್ಯಾವಂತನಾಗಲು ಸಾಧ್ಯವಿಲ್ಲ. ಧನಭಾವ ಚನ್ನಾಗಿದ್ದರೆ ಅಕ್ಷರಜ್ಞಾನ ಹೊಂದಿ ಪ್ರಾಥಮಿಕ ಶಿಕ್ಷಣವನ್ನು ಗಳಿಸಿರುತ್ತಾನೆ. ಧನಭಾವ ಬಲವಿಲ್ಲದೆ 5, 9 ನೇ ಸ್ಥಾನಗಳು ಪ್ರಭಲವಾಗಿದ್ದರೂ ವಿದ್ಯಾವಂತರಾಗಲಾರರು, ಧನಭಾವ ಪ್ರಬಲವಾಗಿದ್ದು 5, 9th ಬಲಹೀನವಾಗಿದ್ರೆ ಪೂರ್ಣಪ್ರಮಾಣದಲ್ಲಿ ವಿದ್ಯಾವಂತನಾಗದಿದ್ದರೂ, ಅಕ್ಷರಸ್ಥರಾಗಿ ವ್ಯಾವಹಾರಿಕ ಜ್ಞಾನವನ್ನು ಪಡೆಯಬಹುದು. ಹಾಗಾಗಿ ಜಾತಕದಲ್ಲಿ ವಿದ್ಯಾಭ್ಯಾಸವನ್ನು ಪರಿಶೀಲಿಸಬೇಕಾದರೆ... ಮೊದಲು 2, 5 ನೇ ಭಾವಗಳನ್ನು, ಅದರ ಭಾವಾಧಿಪತಿಗಳನ್ನ, ಮತ್ತವುಗಳ ಬಲಾಬಲಗಳನ್ನು ತಿಳಿಯಬೇಕಾಗುತ್ತದೆ. ■ ಬುಧ, ಗುರು, ಶುಕ್ರರು ವಿದ್ಯಾಕಾರಕರು. ■ ಬುಧ ---- ವಿದ್ಯಾಗ್ರಹಣ ಶಕ್ತಿ ■ ಗುರು ---- ಜ್ಞಾನಾರ್ಜನಾ ಶಕ್ತಿ ■ ಶುಕ್ರ ---- ಮೇಧಾ ಶಕ್ತಿ. ಜಾತಕದಲ್ಲಿ ಈ ವಿದ್ಯಾಸಂಬಂಧ ಗ್ರಹಗಳಾದ ಬುಧ , ಗುರು, ಶುಕ್ರರು ಪೀಡಿತರಾದಾಗ ವಿದ್ಯಾರ್ಜನಗೆ ಅಡಚಣೆ, ತೊಂದರೆಗಳಾಗುತ್ತವೆ. ★ ಧನ(೨), ಚತುರ್ಥ(೪), ಪಂಚಮಭಾವಗಳು(೫) --- ವಿದ್ಯಾಭಾವಗಳು. ★ ಧನಭಾವ ---- ಗ್ರಹಣಶಕ್ತಿ, ಬರವಣಿಗೆ. ★ ಚತುರ್ಥ ಭಾವ ---- ಮನಸ್ಸಿಟ್ಟು ಕಲಿಕೆ, ಮಧ್ಯಮ ಹಾಗೂ ಉನ್ನತ ಶಿಕ್ಷಣ ★ ಪಂಚಮಭಾವ ---- ಬುದ್ಧಿಶಕ್ತಿ, ಜ್ಞಾನ ಸಂಪಾದನಾ ದಾಹ. ★ ನವಮಭಾವ --- ಉನ್ನತವಿದ್ಯೆ. ★ ದಶಮ ಭಾವ ---- ವಿದ್ಯಾವರ್ಗ ( ಶ್ರೇಣಿ). ವಿದ್ಯೆಗೆ ತೊಂದರೆ ಮಾಡುವ ಗ್ರಹಗಳು ★ ಕುಜ, ರವಿ, ಶನಿ, ರಾಹು, ಕೇತು ಮತ್ತು ಬಲಹೀನ ಶುಕ್ರ, ಪೀಡಿತ ಬುಧ. ★ ಕುಜ -- ಮರೆವು ★ ರವಿ -- ವಿದ್ಯಾಕಾಲದಲ್ಲಿ ದೈಹಿಕ ತೊಂದರೆ ★ ಶುಕ್ರ ಹಾಗೂ ಪೀಡಿತ ಬುಧ -- ಬುದ್ಧಿ ಮಾಂದ್ಯತೆ, ಅಲ್ಪಗ್ರಹಣಶಕ್ತಿ. ★ ಶನಿ -- ಸೋಮಾರಿತನ, ನಿಧಾನ, ಗಮನ ನೀಡದೆ ಇರುವುದು. ★ ರಾಹು - ಕೇತುಗಳು -- ವಿಷಯದಲ್ಲಿ ಅಲ್ಪಜ್ಞಾನ ವಿದ್ಯೆ ಪರಿಶೀಲನೆಗೆ ನಿಯಮಗಳು ◆ 2, 5 ನೇ ಅಧಿಪತಿಗಳು ವಕ್ರೀ, ಅಸ್ತ, ನೀಚ, ಪಾಪಕರ್ತರಿ, ಪಾಪಗ್ರಹ ಯುತಿ, ದೃಷ್ಟಿ, ಹಾಗೂ ದುಸ್ಥಾನ ಗಳಲ್ಲಿ ಸ್ಥಿತರಾದಲ್ಲಿ ವಿದ್ಯಾದೋಷ. ◆ ವಿದ್ಯಾಕಾರಕ ಬುಧ, ಗುರುಗಳು ದುಸ್ಥಾನ ಸ್ಥಿತ, ಬಲಹೀನ, ಪಾಪಗ್ರಹಗಳಿಂದ ಪೀಡಿತರಾದಾಗ ವಿದ್ಯೆಯಲ್ಲಿ ಕುಂಠಿತ ( ಬುಧ - ಗ್ರಹಣಶಕ್ತಿ, ಗುರು - ಶ್ರದ್ಧೆ ). ,◆ ವಿದ್ಯಾಸ್ಥಾನದಲ್ಲಿ ರಾಹುಕೇತುಗಳು ಸ್ಥಿತರಾಗಿ ಪಾಪಗ್ರಹಗಳ ಸಂಬಂಧ ಬಂದಾಗ ವಿದ್ಯಾಹೀನ. ◆ ಕೇಂದ್ರಾದಿಪತ್ಯ ದೋಷ, ದುಸ್ಥಾನಾಧಿಪತ್ಯ, ವಕ್ರ, ನೀಚ, ಅಸ್ತ, ರಾಶಿ - ಭಾವ ಸಂಧಿಸ್ಥಿತ ನೈಸರ್ಗಿಕ ಶುಭಗ್ರಹಗಳಾದರೂ ವಿದ್ಯೆಗೆ ಅಡಚಣೆ. ◆ ನೈಸರ್ಗಿಕ ಪಾಪಗ್ರಹನಾದರೂ ಯೋಗಕಾರಕನು ವಿದ್ಯಾಸ್ಥಾನದಲ್ಲಿದ್ದಾಗ ವಿದ್ಯಾಭಿವೃದ್ಧಿ. - SangrahaMahiti(FB)

ಪರಮಾಯುರ್ಯೋಗ

ಬೃಹತ್ಪರಾಶರ ಹೋರಾಶಾಸ್ತ್ರ, ಜಾತಕ ಪಾರಿಜಾತ, ಸರ್ವಾರ್ಥ ಚಿಂತಾಮಣಿ ಮುಂತಾದ ಪ್ರಸಿದ್ಧ ಜ್ಯೋತಿಷ ಗ್ರಂಥಗಳಲ್ಲಿ ವಿಭಿನ್ನ ಪ್ರಮಾಣದ ಆಯಸ್ಸಿನ ಕುರಿತಾದ ವರ್ಣನೆಯಿದ್ದು, ಅವುಗಳಲ್ಲಿ ಶತಾಯುಸ್ಸಿನ ನಂತರ *ಪರಮಾಯು* ಶಬ್ದದ ವರ್ಣನೆಯನ್ನು ಮಾಡಲಾಗಿದೆ. ನೂರು ವರ್ಷಕ್ಕಿಂತಲೂ ಹೆಚ್ಚಿನ ಆಯಸ್ಸಿಗೆ *ಪರಮಾಯು* ಎನ್ನಲಾಗಿದೆ. ಕೆಲವೆಡೆ ಪರಮಾಯುವಿಗೆ *108* ವರ್ಷವೆಂದೂ ಉಲ್ಲೇಖಿಸಲಾಗಿದೆ. ಆದರೆ ಪರಮಾಯು ಅಂದರೆ ನೂರು ವರ್ಷಕ್ಕಿಂತ ಹೆಚ್ಚಿನದು, ಹಾಗೂ ಮನುಷ್ಯನ ಆಯಸ್ಸಿನ ಗರಿಷ್ಠ ಅವಧಿ 120 ವರ್ಷಗಳಾದ್ದರಿಂದ ಇಲ್ಲಿ ಪರಮಾಯುವನ್ನು 100 ರಿಂದ 120 ವರ್ಷ ಎಂದು ತಿಳಿಯಬೇಕಾಗುತ್ತೆ. *ಸರ್ವಾರ್ಥ ಚಿಂತಾಮಣಿ* ಜ್ಯೋತಿಷ ಗ್ರಂಥದಲ್ಲಿ ಪರಮಾಯುವಿನ ಯೋಗಗಳ ಬಗ್ಗೆ ಸವಿಸ್ತಾರವಾಗಿ ತಿಳಿಸಲಾಗಿದೆ, ಇಲ್ಲಿ ಒಂದೆರಡು ಶ್ಲೋಕಗಳನ್ನು ಪ್ರಸ್ತುತಪಡಿಸುತ್ತೇನೆ. *ಸರ್ವಾರ್ಥ ಚಿಂತಾಮಣಿ ಯ 12ನೇ ಅಧ್ಯಾಯದ 43 ನೇ ಶ್ಲೋಕ :----* *ತ್ರಿಭಿಗ್ರರ್ಹೈಃ ಸ್ನೋಚ್ಚಗತೈಃ ವಿಲಗ್ನೇ ವೃಷೇ ಕುಲೀರೇ ಸಗುರೌ ತಥೈವ |* *ಮೃಗೇ ಕುಜೇ ಕರ್ಕಿಣಿ ದೇವಪೂಜ್ಯ ಕೇಂದ್ರೆಷು ಶೇಷಾಃ ಪರಮಾಯುರತ್ರ ||* ಅರ್ಥ :-- ಲಗ್ನದಲ್ಲಿ ಉಚ್ಚ ಗುರುವಿದ್ದು, ಮಕರದಲ್ಲಿ ಕುಜನಿದ್ದು, ಶುಕ್ತನು ಉಚ್ಚನಾಗಿ ಅಥವಾ ವೃಷಭದಲ್ಲಿದ್ದರೆ, ಅಂದರೆ ಮೂರು ಗ್ರಹಗಳು ಉಚ್ಛವಾಗಿದ್ದು , ಉಳಿದ ಗ್ರಹಗಳು ಕೇಂದ್ರದಲ್ಲಿದ್ದರೆ (1. 4. 7. 10 ) ಇಂಥ ಜಾತಕರು 108 ವರ್ಷದಿಂದ 120 ವರ್ಷಗಳ ಆಯಸ್ಸನ್ನು ಅನುಭವಿಸುತ್ತಾರೆ. *ಸರ್ವಾರ್ಥ ಚಿಂತಾಮಣಿ ಯ 12 ನೇ ಅಧ್ಯಾಯದ 45 ನೇ ಶ್ಲೋಕ :--* *ಲಗ್ನೇ ಮೃಗಾಪರಾರ್ದ್ಧೆ ತು ಪೂರ್ವಾರ್ದ್ಧೆ ಭೌಮ ಸಂಯುತೇ |* *ಲಗ್ನೇ ಶಶಾಂಕ ಸಹಿತೇ ಗುರೌ ಕೇಂದ್ರೆ ಪರಂವಯಃ ||* ಅರ್ಥ :--- ಮಕರ ಲಗ್ನ 15 ಅಂಶಗಳಲ್ಲಿದ್ದು, ಚತುರ್ಥ ಭಾವದಲ್ಲಿ ಕುಜನಿದ್ದು, ಲಗ್ನದಲ್ಲಿ ಚಂದ್ರನಿದ್ದು ಉಚ್ಚ ಗುರುವಿದ್ದರೆ ಇಂಥ ಜಾತಕರು ಪರಮಾಯುಷ್ಯವನ್ನು ಹೊಂದಿ 108 ರಿಂದ 120 ವರ್ಷಗಳ ವರೆಗೆ ಜೀವಿಸುತ್ತಾರೆ. *ಭೃಗೌ ಚತುರ್ಥೇ ಸಗುರೌ ವಿಲಗ್ನೇ ಸೇಂದೌ ಶನೌ ಕರ್ಮಣಿ ಪಾಪಹೀನೆ|* *ಜಾತೋ ನರೋಸ್ಮಿನ್ ಸಮುಪೈತಿ ಧೀರ್ಘಯಾಯುಷ್ಯ ವಿದ್ಯಾo ಯಶಸಾ ಸಮತಾಂ ||* ಅರ್ಥ :--- ಗುರುವು ಲಗ್ನದಲ್ಲಿದ್ದು, ಚತುರ್ಥದಲ್ಲಿ ಶುಕ್ರನಿದ್ದು, .ಶನಿಯೊಡನೆ ಚಂದ್ರನು ಶುಭಸ್ಥಾನದಲ್ಲಿ ಸ್ಥಿತನಿದ್ದು, ದಶಮ ಸ್ಥಾನದಲ್ಲಿ ಯಾವುದೇ ಪಾಪ ಗ್ರಹವಿರದಿದ್ದರೆ... ಈ ಜಾತಕರು ವಿದ್ವಾಂಸರಾಗಿ ಪರಮಾಯುಷ್ಯವನ್ನು ಹೊಂದಿ ಯಶಸ್ವೀ ಜೀವನ ನಡೆಸುತ್ತಾರೆ. -Sangraha Mahiti(FB)

*ಜಾತಕನ ಕುಂಡಲಿಯಲ್ಲಿ ಗ್ರಹಗಳು ಬಲಹೀನರಾಗಿದ್ದರೆ ಉಂಟಾಗುವ ತೊಂದರೆಗಳು* *ಮತ್ತು ಇವುಗಳ ಪರಿಹಾರಗಳು* ( ಲಾಲ್ ಕಿತಾಬ್ ಪರಿಹಾರಗಳು)

*ಗ್ರಹಗಳು* ೧)ನೀಚತ್ವದಲ್ಲಿ ೨)ಶತೃಕ್ಷೇತ್ರಗಳಲ್ಲಿ ೩)ದುಸ್ಥಾನಗಳಲ್ಲಿ ಅಶುಭರ ಸಂಪರ್ಕದಲ್ಲಿದ್ದರೆ ೪)ಅಸ್ತಂಗತ 5) ೬, ೮೧೨ನೇ ಸ್ಥಾನಗಳಲ್ಲಿದ್ದರೆ. ೬)ಕೇಂದ್ರಾದಿಪತಿಯಾಗಿ ತನ್ನದಲ್ಲದ ಮತ್ತೊಂದು ಕೇಂದ್ರದಲ್ಲಿದ್ದರೆ. ೭)ಗ್ರಹ ಯುದ್ದದಲ್ಲಿ ಪರಾಜಿತ ಈ ರೀತಿ ಇದ್ದಾಗ ಗ್ರಹಗಳು ಬಲಹೀನರೆಂದು ಪರಿಗಣಿಸಲಾಗುತ್ತದೆ. *ರವಿಯಿಂದ ಉಂಟಾಗುವ ತೊದರೆಗಳು ಮತ್ತು ಅದಕ್ಕೆ ಪರಿಹಾರಗಳು* *ತೊಂದರೆಗಳು* :- ಆತ್ಮ ವಿಶ್ವಾಸದ ಗೌರವದ ಕೊರತೆ,ದೈರ್ಯ,ಉತ್ಸಾಹಗಳು ಇಲ್ಲದಿರುವಿಕೆ,ಇತರರ ಬಗ್ಗೆ ಹೆದರಿಕೆ. ಮುನ್ನುಗ್ಗುವವರಲ್ಲ. ಎಲ್ಲದಕ್ಕೂ ಇತರರ ಮೇಲೆ ಸದಾ ಅವಲಂಬನೆ ಜೀವನದಲ್ಲಿ ಸೋಲು,ಮೇಲಾಧಿಕಾರಿಗಳಲ್ಲಿ ಸದಾವಿರಸ,ತಂದೆಯ ಅಸಹಕಾರ,ಮಗನಿಂದ ಮಾನಸಿಕ ಹಿಂಸೆ,ಬಲಗಣ್ಣಿನಲ್ಲಿ ತೊಂದರೆ,ಜೀವನದಲ್ಲಿ ಸಮಸ್ಯೆಗಳಿಂದ ನೊಂದು ಸಂಸಾರದಲ್ಲಿ ಯಾರಾದರು ಸನ್ಯಾಸಿಯಾಗುತ್ತಾರೆ,ಕಳ್ಳ ತನ ಅಥವ ಸರ್ಕಾರದಿಂದ ಶಿಕ್ಷೆ, ಪತ್ನಿಯ ಸಮಸ್ಯೆ,ಇದರಿಂದಾಗಿ ಮಾನಸಿಕನೋವು, ಉತ್ಸಾಹಹೀನತೆ,ಅಶಕ್ತತೆ, ಹಸಿವು ಇಲ್ಲದಿರುವಿಕೆ,ಹಾಗು ಅಜೀರ್ಣತೆ ಕ್ಷೀಣನಾಡಿಬಡಿತ,ಹೃದಯದೌರ್ಬಲ್ಯತೆ,ರಕ್ತ ಚಲನೆಯಲ್ಲಿ ಕೊರತೆ,ನರದೌರ್ಬಲ್ಯ,ದೃಷ್ಟಿದೋಷ,ಸಂದಿವಾತ ಮತ್ತು ಮೂಳೆಗಳು ದುರ್ಬಲವಾಗಿರುತ್ತವೆ. *ಪರಿಹಾರಗಳು:-* ಶಿವಮತ್ತು ರವಿಯನ್ನು ಆರಾಧಿಸಿ, ೨೩ರಿಂದ೨೪ನೇ ವಯಸ್ಸಿನೊಳಗೆ ವಿವಾಹವಾಗಿ, ರವಿಗೆ ಸಂಬಂದಿಸಿದ ಇತರರು ನೀಡಿದ ವಸ್ತುಗಳನ್ನು ದೇವಸ್ಥಾನಕ್ಕೆ ದಾನಮಾಡಿ, ಬಿಳಿ ಅಥವ ಗುಲಾಬಿಬಣ್ಣದ ವಸ್ತುಗಳನ್ನು ಉಪಯೋಗಿಸಿ, ಸಕ್ಕರೆನೀರನ್ನು ಗುಲಾಬಿ ಪುಷ್ಪಗಳೊಂದಿಗೆ ಉದಯಿಸುತ್ತಿರುವ ರವಿಗೆ ಅರ್ಪಿಸಿ. ಸರ್ಕಾರದಲ್ಲಿನ ಉದ್ಯೋಗಿಯನ್ನು ಅಥವ ವೈದ್ಯರನ್ನು ಆದರಿಸಿ. ಕುರುಡರಿಗೆ,ಕೋತಿ,ಅಥವ ಹುಂಜಕ್ಕೆ ಆಹಾರವನ್ನು ನೀಡಿ. ಸಂಜೆ ಇರುವೆಗಳಿಗೆ ಅಕ್ಕಿ,ಸಕ್ಕರೆ ಎಳ್ಲನ್ನು ಕೊಡಿ. ಆಹಾರ ತೆಗೆದುಕೊಳ್ಲುವುದಕ್ಕೆ ಮುಂಚೆ ಅಗ್ನಿಗೆ ಸ್ವಲ್ಪ ಅರ್ಪಿಸಿ. ಬೆಲ್ಲ,ತಾಮ್ರ,ಚಿನ್ನವನ್ನು ದಾನಮಾಡಿ. ತಾಮ್ರದ ಅಥವ ಲೋಹದ ನಾಣ್ಯವನ್ನು ಹರಿಯುವ ನೀರಿನಲ್ಲಿ ಹಾಕಿ ಸೂರ್ಯಗ್ರಹಣದ ದಿನ ಹರಿಯುವ ನೀರಲ್ಲಿ ಇದ್ದಿಲು,ಸಾಸಿವೆಕಾಳು ಅಥವ ಬಾರ್ಲಿಯನ್ನು ಹಾಕಿ. ಕೆಲಸವನ್ನು ಆರಂಬಿಸುವ ಮೊದಲು ಸ್ವಲ್ಪ ಸಿಹಿಯನ್ನು ತಿಂದು ನೀರುಕುಡಿಯಿರಿ. ಮನೆಯಲ್ಲಿ ಅಡುಗೆ ಮನೆ ಪೂರ್ವದ ಗೋಡೆಯ ಕಡೆ ಇರಲಿ. ಸುಳ್ಳು ಸಕ್ಷ್ಯ ಹೇಳದಿರಿ,ಮಾಂಸ ಮತ್ತು ಮದ್ಯಗಳನ್ನು ಬಿಡಿ. ಉಪ್ಪನ್ನು ಕಡಿಮೆ ಉಪಯೋಗಿಸಿ ಮತ್ತು ಭಾನುವಾರಗಳಂದು ಉಪವಾಸಮಾಡಿ. ವಿಷ್ಣುವನ್ನು ಆರಾಧಿಸಿ ಮತ್ತು ಹರಿವಂಶವನ್ನು ಓದಿ. -Sangra Mahiti(FB)

ಕೋಪ :--ಜ್ಯೋತಿಷ್ಯದ ಕಾರಣಗಳು :---

ಕೋಪ ಅಥವಾ ಕ್ರೋಧ ವ್ಯಕ್ತ ಪಡಿಸುವಿದು ಮನುಷ್ಯನ ಅಸಾಮಾನ್ಯ ನಡತೆ. ಈ ಅಸಾಮಾನ್ಯ ನಡತೆ ಕೆಲವರಲ್ಲಿ ಹೆಚ್ಚಾಗಿದ್ದರೆ ಕೆಲವರಲ್ಲಿ ಸಾಧಾರಣವಾಗಿರುತ್ತದೆ. ಕೆಲವರಲ್ಲಂತೂ ಕೋಪಬಂದರೆ ಮುಖ ಕೆಂಪಾಗಿ ಮುಖದ ಆಕಾರವೇ ಬದಲಾಗಿ ನೋಡಲು ತುಂಬಾ ವ್ಯಗ್ರ ರಂತೆ ಕಾಣುತ್ತಾರೆ ಇಂಥವರನ್ನು " ಕೋಪಿಷ್ಟ " ಎಂದೇ ಗುರುತಿಸುತ್ತಾರೆ. ಜ್ಯೋತಿಷ್ಯ ದ ದೃಷ್ಟಿಯಿಂದ ಈ ಅಧಿಕ ಸಿಟ್ಟಿಗೆ ಕಾರಣವೇನು ಎಂಬುದನ್ನು ತಿಳಿಯೋಣ. ಜ್ಯೋತಿಷ್ಯದಲ್ಲಿ ಮನುಷ್ಯನ ಪ್ರವೃತ್ತಿಯ ಅಧ್ಯಯನವನ್ನು ಸಾಮಾನ್ಯವಾಗಿ ಲಗ್ನ, ಲಗ್ನಾಧಿಪತಿ, ಸೂರ್ಯ, ಚಂದ್ರ ಹಾಗೂ ಕುಜನ ಆಧಾರದ ಮೇಲೆ ಮಾಡಲಾಗುತ್ತದೆ. ಮನುಷ್ಯನ ಪ್ರವೃತ್ತಿ ತುಂಬಾ ಕ್ಲಿಷ್ಟವಾದುದು, ಹಾಗೆ ನೋಡಿದರೆ ಇದರ ಅಧ್ಯಯನವನ್ನು ಒಂದೆರಡು ಭಾವ ಅಥವಾ ಒಂದೆರಡು ಗ್ರಹಗಳ ಆಧಾರದಿಂದ ಮಾಡಲಾಗದು. ಇದನ್ನು ಹನ್ನೆರಡು ಭಾವಗಳು ಹಾಗೂ ಒಂಬತ್ತು ಗ್ರಹಗಳ ಸಂಯೋಗದಿಂದ ಅರ್ಥೈಸಬಹುದು, ಯಾವುದೇ ವ್ಯಕ್ತಿಗೆ ಅಧಿಕ ಕೋಪ ಬರಲು ಈ ಕೆಲವು ಜ್ಯೋತಿಷ್ಯ ಕಾರಣಗಳಿರುತ್ತವೆ.ಅವುಗಳು ಯಾವುವು ಎಂಬುದನ್ನು ನೋಡೋಣ 1. ಮೇಷ, ಸಿಂಹ, ವೃಶ್ಚಿಕ ಲಗ್ನದ ಜಾತಕರಿಗೆ ಸಾಮಾನ್ಯ ಕೋಪ ಹೆಚ್ಚು. 2. ಲಗ್ನದಲ್ಲಿ ಕುಜ ಅಥವಾ ರವಿ ಸ್ಥಿತರಿದ್ದರೆ ಜಾತಕ ರಿಗೆ ಅಧಿಕ ಕೋಪ, ಇಂಥವರನ್ನು ಕೋಪ ಪ್ರವೃತ್ತಿಯವರೆಂದೇ ಪರಿಗಣಿಸಲಾಗುತ್ತೆ. 3. ಕುಂಡಲಿಯ ಸಪ್ತಮಭಾವದಲ್ಲಿ ಕುಜ ಅಥವಾ ರವಿ ಸ್ಥಿತವಾಗಿದ್ದರೂ ಕೋಪ ಜಾಸ್ತಿ. 4. ಷಷ್ಟ ಭಾವದಲ್ಲಿ ಕುಜ ಸ್ಥಿತನಾಗಿದ್ದರೂ ಕೋಪ ಜಾಸ್ತಿ. 5. ಲಗ್ನಾಧಿಪತಿ ದುರ್ಬಲನಾಗಿದ್ದು ಮತ್ತು ಕುಜನ ಯುತಿ ಅಥವಾ ದೃಷ್ಟಿಯಿದ್ದರೆ ಸಾಮಾನ್ಯಕ್ಕಿಂತ ಅಧಿಕ ಕೋಪ. 6. ಜಾತಕದಲ್ಲಿ ಚಂದ್ರನಿಗೆ ಕುಜನ ಸಂಬಂಧ ಬಂದರೂ ( ದೃಷ್ಟಿ ಅಥವಾ ಯುತಿ) ಜಾತಕನಿಗೆ ಅಧಿಕ ಕೋಪ. 7. ಕುಜನ ನಕ್ಷತ್ರ ದಲ್ಲಿ ಲಗ್ನಾಧಿಪತಿ ಸ್ಥಿತನಿದ್ದರೆ, ಅಥವಾ ಕುಜನೊಂದಿಗೆ ಯುತಿ ಪಡೆದ ಗ್ರಹದ ನಕ್ಷತ್ರ ದಲ್ಲಿ ಲಗ್ನಾಧಿಪತಿ ಇದ್ದರೂ ಜಾತಕನಿಗೆ ಕೋಪ ಬರುವ ಸಂಭವ ಜಾಸ್ತಿ. 8. ಚಂದ್ರನು ಷಷ್ಟ ಅಥವಾ ಅಷ್ಟಮದಲ್ಲಿದ್ದರೆ ಅಥವಾ ಷಷ್ಟಾಷ್ಟಮ ಭಾವಾಧಿಪತಿಗಳ ಯುತಿಯಲ್ಲಿದ್ದರೆ ಜಾತಕನಿಗೆ ಕೋಪ ಬರುತ್ತದೆ, ಈ ಕೋಪ ಅಲ್ಪಕಾಲವಿದ್ದರೂ... ಇದರ ತೀವ್ರತೆ ಮಾತ್ರ ಅಧಿಕವಾಗಿರುತ್ತದೆ. 9. ಜಾತಕದಲ್ಲಿ ಶುಭ ಯೋಗಗಳಿಗಿಂತ ಅಶುಭಯೋಗಗಳು ಜಾಸ್ತಿಯಿದ್ದರೂ ಕೂಡ ಜಾತಕನು ಕೋಪಾವಿಷ್ಟನಾಗುತ್ತಾನೆ. 10. ಜಾತಕದಲ್ಲಿ ಲಗ್ನಾಧಿಪತಿಯೊಂದಿಗೆ 2, 9, 10 ನೇ ಅಧಿಪತಿಗಳು ದುರ್ಬಲರಾಗಿದ್ದರೂ ಕೂಡ ಜಾತಕನಿಗೆ ಕೋಪ. 11. ಜನ್ಮ ಕುಂಡಲಿಯ ಸಪ್ತಮ ಭಾವದಲ್ಲಿ ಪಾಪಗ್ರಹಗಳು ಸ್ಥಿತರಾಗಿದ್ದರೆ, ಜಾತಕನಿಗೆ ಕುಜದೋಷವಿದ್ದರೂ ಸಹ ಅಧಿಕ ಕೋಪ. 12. ಸಪ್ತಮಾಧಿಪತಿ ದುರ್ಬಲನಾಗಿದ್ದರೂ, ಸಪ್ತಮಾಧಿಪತಿ ಪಂಚಮದಲ್ಲಿದ್ದರೂ ಅಥವಾ ಪಾಪ ಗ್ರಹಗಳ ಸಂಪರ್ಕ ಪಡೆದಿದ್ದರೂ ಜಾತಕನಿಗೆ ಕೋಪವಿರುತ್ತದೆ. 13. ಲಗ್ನಾಧಿಪತಿ 6, 8 ರಲ್ಲಿ ಸ್ಥಿತರಾದರೂ ಜಾತಕನಿಗೆ ಕೋಪ ಬರುವ ಸಂಭವ ಹೆಚ್ಚು. 14. ರಾಹುವಿನ ನಕ್ಷತ್ರ ದಲ್ಲಿ ಲಗ್ನಾಧಿಪತಿ ಇದ್ದರೆ ಅಧಿಕ ಕೋಪ. 15. ಒಂದು ವೇಳೆ ಷಷ್ಟಾಧಿಪತಿ, ಅಷ್ಟಮಾಧಿಪತಿ, ಅಥವಾ ಮಾರಕ ಗ್ರಹಗಳಿಂದ ಜಾತಕನು ಪೀಡಿತನಾಗಿದ್ದರೂ ಕೂಡ ಜಾತಕನಿಗೆ ಅಧಿಕ ಕೋಪವಿರುತ್ತದೆ. 16. ಗೋಚಾರ ದಲ್ಲಿ ರವಿಯು ಲಗ್ನ, ಷಷ್ಟ, ಸಪ್ತಮ, ಅಷ್ಟಮ, ದ್ವಾದಶ ಭಾವದಲ್ಲಿ ಸಂಚರಿಸುತ್ತಿದ್ದರೆ ಮತ್ತು ಲಗ್ನದ ಮೇಲೆ ಕುಜನ, ರಾಹುವಿನ ಅಥವಾ ಶನಿಯ ಗೋಚಾರದ ಪ್ರಭಾವವಿದ್ದರೆ, ಆ ಸಮಯದಲ್ಲಿ ಜಾತಕನಿಗೆ ಅಧಿಕ ಕೋಪವಿರುತ್ತದೆ. 17. ಗೋಚಾರದಲ್ಲಿ ಕುಜನು 1, 4, 6, 7, 8, 12 ನೇ ಮನೆಯಲ್ಲಿ ಸಂಚರಿಸುತ್ತಿದ್ದರೆ. ಮತ್ತು ಜಾತಕನಿಗೆ ಸಾಡೇಸಾತಿ ನಡೆಯುವಾಗ ಅಧಿಕ ಕೋಪ ಬರುತ್ತದೆ. 18. ಲಗ್ನಾಧಿಪತಿ ದುರ್ಬಲನಾಗಿದ್ದು, ಗೋಚಾರದಲ್ಲಿ ಚಂದ್ರನು 4, 8, 12 ನೇ ಭಾವದ ಮೇಲೆ ಪರಿಭ್ರಮಣ ಮಾಡುವಾಗ ಜಾತಕನಿಗೆ ಅಧಿಕ ಕೋಪ ಬರುತ್ತದೆ. ಕೋಪವು ಪ್ರಗತಿಯನ್ನು ಕುಂಠಿತಗೊಳಿಸುತ್ತದೆ. ಹಾಗಾಗಿ ಯಾವ ಜಾತಕರು ಪ್ರತೀಕೂಲ ಗ್ರಹಗಳ ದೆಸೆಯಿಂದ ಕೋಪಾವಿಷ್ಟರಾಗುತ್ತಾರೋ ಆಗ ಅದರಿಂದ ಆಗುವ ಹಾನಿಯಿಂದ ರಕ್ಷಣೆ ಪಡೆಯಲು ಈ ಕೆಳಗಂಡ ಪರಿಹಾರವನ್ನು ಮಾಡಬಹುದು. ◆ ಲಗ್ನಾಧಿಪತಿಯ ರತ್ನ ಧರಿಸಬಹುದು. ◆ ಏಕಮುಖಿ ರುದ್ರಾಕ್ಷಿ ಧಾರಣೆ ಮಾಡಬಹುದು ◆ ಯಾವ ಗ್ರಹದ ಕಾರಣದಿಂದ ಕೋಪ ಉತ್ಪನ್ನಗೊಳ್ಳುತ್ತಿದೆಯೋ ಆ ಗ್ರಹದ ಮಂತ್ರಜಪ ಮಾಡಬೇಕು. -SangrahaMahiti

ನೀವು ಸಹಿ ಮಾಡುವ ಶೈಲಿಯಿಂದ ನಿಮ್ಮ ವಕ್ತಿತ್ವದ ಬಗ್ಗೆ ತಿಳಿದುಕೊಳ್ಳಿ

ಫೇಸ್ ಈಸ್ ದ ಇಂಡೆಕ್ಸ್ ಆಫ್ ಮೈಂಡ್ ಅಂದರೆ ಮುಖ ಮನಸ್ಸಿನ ಸೂಚಕ.ಒಬ್ಬರ ಮುಖವನ್ನು ನೋಡಿ ಅವರ ಮನಸ್ಸು ಎಂತಹುದೆಂದು ಸುಲಭವಾಗಿ ತಿಳಿದುಕೊಳ್ಳಬಹುದಂತೆ.ಅದೇ ರೀತಿ ನೀವು ಮಾಡುವ ಸಹಿಯನ್ನು ನೋಡಿ ನಿಮ್ಮ ವ್ಯಕ್ತಿತ್ವ ಎಂತಹುದೆಂದು ಹೇಳಬಹುದಂತೆ.ಅದೇ ಗ್ರಾಫಾಲಜಿ.ನಿಮ್ಮ ಸಹಿಯ ಶೈಲಿಯಿಂದ ನಿಮ್ಮ ಮನಸ್ತತ್ವ,ನೀವು ಮಾಡುವ ಕೆಲಸಗಳು,ನಿಮ್ಮ ಮನೋವೃತ್ತಿ ಹೇಗಿರುತ್ತದೆಂದು ಕರಾರುವಾಕ್ಕಾಗಿ ಹೇಳಬಹುದಂತೆ.ಇದರ ಕುರಿತಾಗಿ ಎಲ್ಲರಿಗೂ ಅಲ್ಪ ಸ್ವಲ್ಪ ತಿಳಿದೇಯಿರುತ್ತದೆ.ಆದರೆ,ನಾವು ಸಾಮಾನ್ಯವಾಗಿ ಹಲವು ರೀತಿಯಾಗಿ ಸಹಿ ಮಾಡುತ್ತಿರುತ್ತೇವೆ. ಅವುಗಳನ್ನೇ ಆಧಾರವನ್ನಾಗಿರಿಸಿಕೊಂಡು ನಮ್ಮ ವ್ಯಕ್ತಿತ್ವ ಹೇಗಿರುತ್ತದೆಂದು ಪರಿಶೀಲಿಸೋಣ. *ಸಹಿ ಮಾಡಿ ಕೆಳಗೆ ಗೆರೆ ಎಳೆಯುವವರು:* ಇಂತಹವರಿಗೆ ವಿಶ್ವಾಸ ಹೆಚ್ಚಾಗಿರುತ್ತದೆ.ಆದರೂ ಸಹ ಇವರು ಕೆಲವು ವಿಷಯಗಳನ್ನು ಕುರುಡಾಗಿ ನಂಬುತ್ತಿರುತ್ತಾರೆ.ನನಗೆ ತಿಳಿದಿರುವುದೇ ಸರಿ ಎನ್ನುವ ವಿಧದವರು.ಮನುಷ್ಯರನ್ನು ಅಷ್ಟು ಬೇಗನೆ ನಂಬಲಾರರು.ನಂಬಿದರೆ ಮಾತ್ರ ಪ್ರಾಣ ಕೊಡಲೂ ತಯಾರಿರುತ್ತಾರೆ. *ಸಹಿಯು ಕೈ ಬರವಣಿಗೆಗಿಂತಾ ದೊಡ್ಡದಾಗಿದ್ದರೆ:* ಸಮಾಜದಲ್ಲಿ ಗೌರವ,ಮರ್ಯಾದೆಗಳನ್ನು ಗಳಿಸುತ್ತಾರೆ.ಶೇಕಡಾವರು ವಿಶ್ವಾಸ ಅಧಿಕವಿರುತ್ತದೆ.ಎಲ್ಲ ವಿಷಯಗಳಿಗೂ ಮುಂದಿರುತ್ತಾರೆ.ದೈರ್ಯವಂತರು. *ಸಹಿ ಕೆಳಮುಖವಾಗಿದ್ದರೆ:* ಸ್ವಾರ್ಥ ಹೆಚ್ಚಾಗಿರುತ್ತದಂತೆ. *ಸಹಿ ಮೇಲ್ಮುಖವಾಗಿದ್ದರೆ:* ನಿಮಗೆ ತೀಕ್ಷ್ಣ ಬುದ್ಧಿಯಿರುತ್ತದೆ.ಧನಾತಕ ವ್ಯಕ್ತಿತ್ವ, ಯಾವುದೆ ವಿಷಯವನ್ನಾಗಲಿ ಬೇಗನೆ ಅರ್ಥ ಮಾಡಿಕೊಳ್ಳುತ್ತಿರ. ಅಭಿವೃದ್ಧಿ ಪಥದಕಡೆ ನಿಮ್ಮ ಪಯಣ. *ಸಹಿಯ ಮೊದಲ ಅಕ್ಷರ ದೊಡ್ಡದಿದ್ದರೆ:* ಹೆಚ್ಚಾಗಿ ನಾಯಕತ್ವದ ಲಕ್ಷಣಗಳನ್ನು ಹೊಂದಿರುತ್ತೀರಿ(ಮಹಾತ್ಮ ಗಾಂಧಿ ಸಹಿಯಲ್ಲಿ ಮೊದಲ ಅಕ್ಷರದ ಗಾತ್ರ ದೊಡ್ಡದಾಗಿತ್ತು) *ಸಹಿಯ ಮೊದಲ ಅಕ್ಷರಕ್ಕೆ ಸುತ್ತಿಹಾಕಿದ್ದರೆ:* ಎಂದೆಂದಿಗೂ ನಿಮಗೆ ಜಯ ಲಭಿಸುತ್ತದೆ. *ಸಹಿಯ ಕೊನೆ ಅಕ್ಷರದಿಂದ ಗೆರೆಯನ್ನು ಹಿಂದೆ ಎಳೆದಿದ್ದರೆ;* ಗತಕಾಲವನ್ನು ಕುರಿತು ಹೆಚ್ಚಾಗಿ ಆಲೋಚಿಸುತ್ತಿರುತ್ತೀರಿ. ವರ್ತಮಾನದ ಬಗ್ಗೆ ಗಮನ ಹರಿಸುವುದಿಲ್ಲ. *ಸಹಿಯಲ್ಲಿ ಚುಕ್ಕೆಗಳಿದ್ದರೆ:* ನಾನು ಯಾವಾಗಲೂ ಕಾರ್ಯನಿರತನಾಗಿರುತ್ತೇನೆ ಎನ್ನುವ ಸ್ವಭಾವದವರು. *ಸಹಿಯಲ್ಲಿ ಅಂತರ ಹೆಚ್ಚಾಗಿದ್ದರೆ:* ಆರಂಭ ಶೂರತ್ವ ಹೆಚ್ಚಾಗಿರುತ್ತದೆ.ಒಳ್ಳೆಯ ಐಡಿಯಾ ಗಳಿರುತ್ತವೆ.ಆದರೆ,ಆಚರಣೆಗೆ ತರುವುದರಲ್ಲಿ ಮಾತ್ರ ವಿಫಲರಾಗುತ್ತೀರ. -Sangraha Mahiti

ವಿವಾಹಯೋಗ

ಜಾತಕದಲ್ಲಿ ಲಗ್ನ, ಚಂದ್ರ, ಕಲತ್ರಕಾರಕನಾದ ಶುಕ್ರ ಪ್ರಬಲವಾಗಿದ್ದರೆ ಉತ್ತಮ ವಿವಾಹಯೋಗ. ವಿವಾಹಯೋಗಕ್ಕೆ ಪ್ರಮುಖವಾಗಿ ವಿವಾಹ ಸ್ಥಾನಗಳಾದ 1, 2, 4, 7, 8, 12 ಭಾವಗಳನ್ನು ಲಗ್ನ, ಚಂದ್ರ ಹಾಗೂ ಶುಕ್ರರಿಂದ ನಿರ್ಣಯ ಮಾಡಬೇಕು. 1. ಲಗ್ನಭಾವ - ಜಾತಕನ ಗುಣ, ಆತನ ಸುಖವನ್ನು ಸೂಚಿಸುತ್ತದೆ. 2. ಕುಟುಂಬ ಭಾವ - ಜಾತಕನ ಕುಟುಂಬ ಸೌಖ್ಯವನ್ನು ಸೂಚಿಸುತ್ತದೆ. 4. ಸುಖಭಾವ - ವೈವಾಹಿಕ ಸುಖವನ್ನು ಸೂಚಿಸುತ್ತದೆ. 7. ಕಳತ್ರಭಾವ - ಸಂಗಾತಿಯ ಗುಣ, ಅವರಿಂದ ಸಿಗುವ ಸುಖ ದುಃಖಗಳನ್ನು ಸೂಚಿಸುತ್ತದೆ. 8. ಮಾಂಗಲ್ಯ ಭಾವ - ಸಂಗಾತಿಯ ಆಯುಷ್ಯವನ್ನು ಸೂಚಿಸುತ್ತದೆ. 12. ಪತಿ - ಪತ್ನಿಯರಲ್ಲಿ ಪರಸ್ಪರ ಪ್ರೀತಿ, ಶಯನಸುಖವನ್ನು ಸೂಚಿಸುತ್ತದೆ. ಈ ಎಲ್ಲಾ ಭಾವಗಳಲ್ಲಿ ಶುಭಗ್ರಹರು ಸ್ಥಿತರಾದಾಗ ಉತ್ತಮ ವೈವಾಹಿಕ ಜೀವನ. ಅಶುಭ, ಪೀಡಿತ, ಅಸ್ತ, ನೀಚ ಗ್ರಹಗಳೇನಾದರೂ ಸ್ಥಿತವಾಗಿದ್ರೆ, ಆಯಾ ಗ್ರಹಗಳ ಪ್ರಭಾವಕ್ಕನುಗುಣವಾಗಿ ಜೀವನದಲ್ಲಿ ಏರುಪೇರುಗಳು ಇರುತ್ತದೆ. ವಿವಾಹ ಜೀವನಕ್ಕೆ ಶುಭಗ್ರಹರು - ಚಂದ್ರ, ಶುಕ್ರ, ಗುರು. ವಿವಾಹ ಜೀವನಕ್ಕೆ ಅಶುಭರು- ರವಿ, ರಾಹು, ಶನಿ. ಸಂದರ್ಭಕ್ಕೆ ತಕ್ಕಂತೆ ವರ್ತಿಸುವವರು ಕುಜ, ಕೇತು ಬುಧ ( ಶುಭಗ್ರಹರ ಸಂಪರ್ಕ ವಿದ್ದರೆ ಶುಭ, ಅಶುಭರ ಸಂಪರ್ಕ ವಾದರೆ ಅಶುಭ ) ವಿವಾಹವಾಗಲು ಕುಟುಂಬ,.ಸಪ್ತಮ, ಮತ್ತು ಲಾಭ ಸ್ಥಾನ ಹಾಗೂ ಆ ಸ್ಥಾನಾಧಿಪತಿಗಳು ಅತ್ಯಂತ ಮುಖ್ಯವಾಗುತ್ತೆ, ಹಾಗೂ ವಿವಾಹ ಕಾರಕನ ಸ್ಥಿತಿಯೂ ಸಹ ಉತ್ತಮವಿರಬೇಕು. ಯಾವುದೇ ಜಾತಕದಲ್ಲಿ 2, 7, 11 ನೇ ಭಾವಾಧಿಪತಿಗಳು ಬಲಿಷ್ಠರಾಗಿ ವಿವಾಹ ಸೂಚಕ ಗ್ರಹರಾದ ಶುಕ್ರ, ಗುರು, ಚಂದ್ರರು ಬಲಿಷ್ಠರಾಗಿದ್ದರೆ ಉತ್ತಮ ವಿವಾಹ ಯೋಗ. ಜಾತಕದಲ್ಲಿ ಸಪ್ತಮಾಧಿಪತಿ ಬಲಯುತನಾಗಿ ಉಚ್ಚ, ಸ್ವಕ್ಷೇತ್ರ, ಮಿತ್ರಕ್ಷೇತ್ರ ದಲ್ಲಿದ್ದರೆ ವಿವಾಹಯೋಗ ಹಾಗೂ ಉತ್ತಮ ಸಂಗಾತಿ. ಸಪ್ತಮಾಧಿಪತಿ ಯು ಬಲಯುತನಾಗಿ ಶುಭಗ್ರಹರ ದೃಷ್ಟಿಯಲ್ಲಿದ್ದರೆ ಶುಭ ವಿವಾಹ ಯೋಹ. ಕಲತ್ರಕಾರಕನಾದ ಶುಕ್ರನು ಶುಭ ಗುರು ದೃಷ್ಟಿಯಲ್ಲಿದ್ದರೆ ಉತ್ತಮ ಸಂಗಾತಿಯೊಡನೆ ಶುಭವಿವಾಹ ಯೋಗ. ಪುರುಷರ ಜಾತಕದಲ್ಲಿ. ಚಂದ್ರ 2 ಅಥವಾ 4 ನೇ ಸ್ಥಾನದಲ್ಲಿದ್ದಾರೆ ತಡ (ಆಲಸ್ಯ )ವಿವಾಹಯೋಗ ಸ್ತ್ರೀಯರ ಜಾತಕನಿಗೆ ರವಿಯು 2 ಅಥವಾ 4 ರಲ್ಲಿದ್ದರೆ ಆಲಸ್ಯ ವಿವಾಹಯೋಗ. ಮೇಷ, ಸಿಂಹ, ಕನ್ಯಾ, ಧನಸ್ಸು, ಮಕರ ಲಗ್ನದಲ್ಲಿ ಶುಕ್ರನಿದ್ದರೆ ( ಸ್ತ್ರೀ ಪುರುಷರ ಜಾತಕಗಳೆರಡರಲ್ಲೂ ) ಆಲಸ್ಯ ವಿವಾಹಯೋಗ. Sangraha maahiti