Friday, 30 August 2019
ಪ್ರಸವ ಮತ್ತು ಆರೋಗ್ಯ
ನಭೋಮಂಡಲದಲ್ಲಿ ಸಂಚರಿಸುತ್ತಿರುವ ಗ್ರಹಗಳ ಶಕ್ತಿಯು ಭೂಮಿಯನ್ನು ಸ್ಪರ್ಶಿಸಿ, ಜೀವಿಗಳ ಜೀವನದಲ್ಲಿ ವ್ಯತ್ಯಾಸವನ್ನು ತರುತ್ತದೆ. ಈ ಗ್ರಹಗಳು ಜನ್ಮಸ್ಥಳದ ಅಕ್ಷಾಂಶ ರೇಖಾಂಶ ಗಳಿಗೆ ತಕ್ಕಂತೆ ಉದಯವಾಗುವ ಲಗ್ನ ಬಿಂದುವಿಗೆ ಯಾವ ಭಾವದಲ್ಲಿ ಸ್ಥಿತರಾಗಿರುತ್ತಾರೋ ಅದರಂತೆ ಶುಭಾಶುಭ ಫಲಗಳನ್ನು ಕೊಡುತ್ತಾರೆ. ಈ ಗ್ರಹಗಳು ಭಚಕ್ರದ ಯಾವ ಯಾವ ರಾಶಿಯಲ್ಲಿ, ಯಾವ ನಕ್ಷತ್ರ ದಲ್ಲಿ, ಸ್ಥಿತರಾಗಿರುತ್ತಾರೋ ಅದರಂತೆ ಫಲಗಳಲ್ಲಿ ವ್ಯತ್ಯಾಸವುಂಟಾಗುತ್ತದೆ.
ಪ್ರತಿಯೊಬ್ಬ ವ್ಯಕ್ತಿಯೂ ತನ್ನ ಪೂರ್ವಜನ್ಮ ಕೃತ ಫಲದಂತೆ ಈ ಜನ್ಮವನ್ನು ಪಡೆಯುತ್ತಾರೆ, ಪೂರ್ವಜನ್ಮ ದಲ್ಲಿ ಮಾಡಿದ ಕರ್ಮಫಲವನ್ನು ಈ ಜನ್ಮದಲ್ಲಿ ಅನುಭವಿಸುವುದನ್ನು ಪ್ರಸವಕಾಲದ ಕುಂಡಲಿಯಲ್ಲಿ ನವಗ್ರಹರು ಸ್ಥಿತರಾದ ರೀತಿಯಲ್ಲಿ ತಿಳಿಯಬಹುದು. ಪೂರ್ವಜನ್ಮದ ಪಾಪ ಅಥವಾ ಪುಣ್ಯಫಲದಂತೆ ಮನುಷ್ಯಜನ್ಮ ಪಡೆದಮೇಲೆ ಅತ್ಯಂತ ದುಃಖ, ಸುಖ, ಕಷ್ಟಗಳನ್ನು ಅನುಭವಿಸುತ್ತೇವೆ. ಅದರೆ ಕೆಲವುವೇಳೆ ಜನ್ಮ ತಾಳುವುದಕ್ಕೆ ಅನೇಕ ಕಷ್ಟಗಳನ್ನು ಅನುಭವಿಸುವುದು ಮಾತೃ ಗರ್ಭದಿಂದಲೇ ಪ್ರಾರಂಭವಾಗುತ್ತದೆ. ಪ್ರಸವ ಕಾಲದಲ್ಲಿ ಬದುಕುಳಿದರೆ ಅದು ನಮ್ಮ ಜನ್ಮ, ಜನ್ಮಕೊಟ್ಟ ತಾಯಿ ಬದುಕುಳಿದರೆ ಅದು ಅವರ ಪುನರ್ಜನ್ಮ.
ಗರ್ಭಧಾರಣೆಯ ನಂತರ ಗರ್ಭಸ್ರಾವ, ಗರ್ಭದಲ್ಲೇ ಮರಣ (ಮೃತ ಶಿಶು ಜನನ) ಅವಧಿಗೆ ಮೊದಲೇ ಜನನ, ಕಷ್ಟಪ್ರಸವ ಇವು ಜನನ ಪೂರ್ವ ಸಂಕಟಗಳು.
ಗುರು, ಶುಕ್ರ, ಚಂದ್ರ, ಬುಧರು ಸುಖ (ಶುಭ) ಪ್ರಸವವನ್ನು ಸೂಚಿಸುತ್ತಾರೆ. ರವಿ, ಶನಿ, ಕುಜ, ರಾಹು ಕೇತುಗಳು ಕಷ್ಟ ( ಅಶುಭ ) ಪ್ರಸವವನ್ನು ಸೂಚಿಸುತ್ತಾರೆ.
ರಕ್ತ ಅಥವಾ ಜಲಸ್ರಾವ, ಶಸ್ತ್ರ ಚಿಕಿತ್ಸೆಯ ಮೂಲಕ ಪ್ರಸವವನ್ನು ಕುಜನಿಂದಲೂ, ತಡೆಗಳನ್ನು ಶನಿಯಿಂದಲೂ, ರಕ್ತಸ್ರಾವವನ್ನು ರಾಹುವಿನಿಂದಲೂ ತಿಳಿಯಬಹುದು. ಯಾವುದೇ ಜಾತಕದಲ್ಲಿ ಮುಖ್ಯವಾಗಿ ಕುಜ, ಶನಿಯಿಂದ ನಂತರ ರವಿ ಕೇತುಗಳಿಂದ ಕಷ್ಟಪ್ರಸವವನ್ನು ನಿರ್ಣಯಿಸಬಹುದು.
ಯಾವುದೇ ಜಾತಕದಲ್ಲಿ ರವಿ ಚಂದ್ರರು, ಲಗ್ನ, ಲಗ್ನಾಧಿಪತಿ, ಷಷ್ಟ, ಷಷ್ಟಾಧಿಪತಿ, ಅಷ್ಟಮ, ಅಷ್ಠಮಾಧಿಪತಿ, ಪೀಡಿತ - ಪಾಪಕರ್ತರಿಯೋಗ - ನೀಚ - ಅಸ್ತ - ಪಾಪಗ್ರಹಗಳ ಯುತಿ - ದೃಷ್ಟಿಯಿದ್ದರೆ ಆರೋಗ್ಯ ಕೆಡುತ್ತದೆ. ಈ ಭಾವ - ಭಾವಾಧಿಪತಿ ಗಳು ಬಲವಾಗಿದ್ದು, ಸುಸ್ಥಿಯಲ್ಲಿದ್ದರೆ ಜಾತಕರು ಆರೋಗ್ಯವಾಗಿರುತ್ತಾರೆ.
ಪುರುಷರ ಆರೋಗ್ಯವನ್ನು ರವಿಯಿಂದಲೂ, ಸ್ತ್ರೀಯರ ಆರೋಗ್ಯವನ್ನು ಚಂದ್ರನಿಂದಲೂ ಅವರುಗಳ ಬಲಾಬಲದಿಂದ ತಿಳಿಯಬಹುದು.
ಜಾತಕದಲ್ಲಿ ರವಿ ಪೀಡಿತನಾದ್ರೆ ಪ್ರಕೃತಿದತ್ತವಾದ ರೋಗಗಳು, ಚಂದ್ರನು ಪೀಡಿತನಾಗಿದ್ದರೆ, ಬಲಹೀನನಾಗಿದ್ದರೆ ಮಾನಸಿಕ ರೋಗಿಯಾಗುತ್ತಾರೆ. ಲಗ್ನ - ಲಗ್ನಾಧಿಪತಿ ಪೀಡಿತನಾಗಿದ್ದರೆ ಸದಾ ರೋಗಿಯಾಗಿದ್ದು ಸಣ್ಣಪುಟ್ಟ ರೋಗಗಳು ಕಾಡುತ್ತಿರುತ್ತವೆ. ಷಷ್ಟ - ಷಷ್ಟಾಧಿಪತಿ ಗಳು ಪೀಡಿತರಾಗಿದ್ದರೆ, ಅತೀವ ಬಾಧೆಯ ರೋಗಗಳು ಮೇಲಿಂದ ಮೇಲೆ ಬರುತ್ತಿರುತ್ತದೆ. ಅಷ್ಟಮ - ಅಷ್ಟಮಾಧಿಪತಿಗಳು ಪೀಡಿತರಾಗಿದ್ರೆ ತೀವ್ರ ಮರಣ ಸೂಚಕ ರೋಗಗಳು - ಸಾಂಕ್ರಾಮಿಕ ರೋಗಗಳು, ಭಯಂಕರ ವ್ಯಾಧಿಗಳು, ದುರ್ಮರಣಗಳು ಉಂಟಾಗುತ್ತದೆ. ದ್ವಾದಶ - ದ್ವಾದಶಾಧಿಪತಿಗಳು ಪೀಡಿತರಾದ್ರೆ ಸದಾ ಆಸ್ಪತ್ರೆ ವಾಸ, ಹಾಸಿಗೆ ಹಿಡಿಯುವ ವ್ಯಾಧಿಗಳು ಬರುತ್ತವೆ.
-SangrahaMahiti(FB)
Subscribe to:
Post Comments (Atom)
Baby Health & care is very important at the time of birth. At the time of birth of baby it is important to have a good and experienced doctor. Rana Hospital is the best mother & child care center in Ludhiana.
ReplyDeleteNJ Gambling Commission - Promo Code 2021 (COGRAID)
ReplyDeleteRead NJ Gambling Commission review 충청남도 출장안마 including 충청북도 출장안마 the NJ gambling NJ 진주 출장안마 Gambling Commission, December 2021, Review 시흥 출장안마 & 순천 출장안마 Bonus Code.