Friday, 30 August 2019

ಪರಮಾಯುರ್ಯೋಗ

ಬೃಹತ್ಪರಾಶರ ಹೋರಾಶಾಸ್ತ್ರ, ಜಾತಕ ಪಾರಿಜಾತ, ಸರ್ವಾರ್ಥ ಚಿಂತಾಮಣಿ ಮುಂತಾದ ಪ್ರಸಿದ್ಧ ಜ್ಯೋತಿಷ ಗ್ರಂಥಗಳಲ್ಲಿ ವಿಭಿನ್ನ ಪ್ರಮಾಣದ ಆಯಸ್ಸಿನ ಕುರಿತಾದ ವರ್ಣನೆಯಿದ್ದು, ಅವುಗಳಲ್ಲಿ ಶತಾಯುಸ್ಸಿನ ನಂತರ *ಪರಮಾಯು* ಶಬ್ದದ ವರ್ಣನೆಯನ್ನು ಮಾಡಲಾಗಿದೆ. ನೂರು ವರ್ಷಕ್ಕಿಂತಲೂ ಹೆಚ್ಚಿನ ಆಯಸ್ಸಿಗೆ *ಪರಮಾಯು* ಎನ್ನಲಾಗಿದೆ. ಕೆಲವೆಡೆ ಪರಮಾಯುವಿಗೆ *108* ವರ್ಷವೆಂದೂ ಉಲ್ಲೇಖಿಸಲಾಗಿದೆ. ಆದರೆ ಪರಮಾಯು ಅಂದರೆ ನೂರು ವರ್ಷಕ್ಕಿಂತ ಹೆಚ್ಚಿನದು, ಹಾಗೂ ಮನುಷ್ಯನ ಆಯಸ್ಸಿನ ಗರಿಷ್ಠ ಅವಧಿ 120 ವರ್ಷಗಳಾದ್ದರಿಂದ ಇಲ್ಲಿ ಪರಮಾಯುವನ್ನು 100 ರಿಂದ 120 ವರ್ಷ ಎಂದು ತಿಳಿಯಬೇಕಾಗುತ್ತೆ. *ಸರ್ವಾರ್ಥ ಚಿಂತಾಮಣಿ* ಜ್ಯೋತಿಷ ಗ್ರಂಥದಲ್ಲಿ ಪರಮಾಯುವಿನ ಯೋಗಗಳ ಬಗ್ಗೆ ಸವಿಸ್ತಾರವಾಗಿ ತಿಳಿಸಲಾಗಿದೆ, ಇಲ್ಲಿ ಒಂದೆರಡು ಶ್ಲೋಕಗಳನ್ನು ಪ್ರಸ್ತುತಪಡಿಸುತ್ತೇನೆ. *ಸರ್ವಾರ್ಥ ಚಿಂತಾಮಣಿ ಯ 12ನೇ ಅಧ್ಯಾಯದ 43 ನೇ ಶ್ಲೋಕ :----* *ತ್ರಿಭಿಗ್ರರ್ಹೈಃ ಸ್ನೋಚ್ಚಗತೈಃ ವಿಲಗ್ನೇ ವೃಷೇ ಕುಲೀರೇ ಸಗುರೌ ತಥೈವ |* *ಮೃಗೇ ಕುಜೇ ಕರ್ಕಿಣಿ ದೇವಪೂಜ್ಯ ಕೇಂದ್ರೆಷು ಶೇಷಾಃ ಪರಮಾಯುರತ್ರ ||* ಅರ್ಥ :-- ಲಗ್ನದಲ್ಲಿ ಉಚ್ಚ ಗುರುವಿದ್ದು, ಮಕರದಲ್ಲಿ ಕುಜನಿದ್ದು, ಶುಕ್ತನು ಉಚ್ಚನಾಗಿ ಅಥವಾ ವೃಷಭದಲ್ಲಿದ್ದರೆ, ಅಂದರೆ ಮೂರು ಗ್ರಹಗಳು ಉಚ್ಛವಾಗಿದ್ದು , ಉಳಿದ ಗ್ರಹಗಳು ಕೇಂದ್ರದಲ್ಲಿದ್ದರೆ (1. 4. 7. 10 ) ಇಂಥ ಜಾತಕರು 108 ವರ್ಷದಿಂದ 120 ವರ್ಷಗಳ ಆಯಸ್ಸನ್ನು ಅನುಭವಿಸುತ್ತಾರೆ. *ಸರ್ವಾರ್ಥ ಚಿಂತಾಮಣಿ ಯ 12 ನೇ ಅಧ್ಯಾಯದ 45 ನೇ ಶ್ಲೋಕ :--* *ಲಗ್ನೇ ಮೃಗಾಪರಾರ್ದ್ಧೆ ತು ಪೂರ್ವಾರ್ದ್ಧೆ ಭೌಮ ಸಂಯುತೇ |* *ಲಗ್ನೇ ಶಶಾಂಕ ಸಹಿತೇ ಗುರೌ ಕೇಂದ್ರೆ ಪರಂವಯಃ ||* ಅರ್ಥ :--- ಮಕರ ಲಗ್ನ 15 ಅಂಶಗಳಲ್ಲಿದ್ದು, ಚತುರ್ಥ ಭಾವದಲ್ಲಿ ಕುಜನಿದ್ದು, ಲಗ್ನದಲ್ಲಿ ಚಂದ್ರನಿದ್ದು ಉಚ್ಚ ಗುರುವಿದ್ದರೆ ಇಂಥ ಜಾತಕರು ಪರಮಾಯುಷ್ಯವನ್ನು ಹೊಂದಿ 108 ರಿಂದ 120 ವರ್ಷಗಳ ವರೆಗೆ ಜೀವಿಸುತ್ತಾರೆ. *ಭೃಗೌ ಚತುರ್ಥೇ ಸಗುರೌ ವಿಲಗ್ನೇ ಸೇಂದೌ ಶನೌ ಕರ್ಮಣಿ ಪಾಪಹೀನೆ|* *ಜಾತೋ ನರೋಸ್ಮಿನ್ ಸಮುಪೈತಿ ಧೀರ್ಘಯಾಯುಷ್ಯ ವಿದ್ಯಾo ಯಶಸಾ ಸಮತಾಂ ||* ಅರ್ಥ :--- ಗುರುವು ಲಗ್ನದಲ್ಲಿದ್ದು, ಚತುರ್ಥದಲ್ಲಿ ಶುಕ್ರನಿದ್ದು, .ಶನಿಯೊಡನೆ ಚಂದ್ರನು ಶುಭಸ್ಥಾನದಲ್ಲಿ ಸ್ಥಿತನಿದ್ದು, ದಶಮ ಸ್ಥಾನದಲ್ಲಿ ಯಾವುದೇ ಪಾಪ ಗ್ರಹವಿರದಿದ್ದರೆ... ಈ ಜಾತಕರು ವಿದ್ವಾಂಸರಾಗಿ ಪರಮಾಯುಷ್ಯವನ್ನು ಹೊಂದಿ ಯಶಸ್ವೀ ಜೀವನ ನಡೆಸುತ್ತಾರೆ. -Sangraha Mahiti(FB)

No comments:

Post a Comment