Thursday, 10 January 2019

ದೀಕ್ಷಾ ಮಂತ್ರಗಳು

ದೀಕ್ಷಾ ಮಂತ್ರಗಳು ಪಾಪನಾಶಕ್ಕೆ ಓಂ ದಾಮೋದರಾಯ ಮಹಾಪುರುಷಾಯ ಮಮ ಪಾಪಂ ಹನ ಹನ ಸ್ವಾಹಾ ಚಿನ್ಮುದ್ರೆ ಉತ್ತರಾಭಿಮುಖ ೧೦೮ಸಲ ನಿತ್ಯ ೧೦೮ ದಿನಗಳಕಾಲ ಜಪಿಸಿ ಅಮೃತ ಮೃತ್ಯುಂಜಯ ಮಂತ್ರ ಓಂ ಹ್ರೌಂ ಹ್ರೀಂ ಜುಂ ಸಃ ಪಶುಪತಯೇ ಶಿವಾಯ ಮಹದೇವಾಯ ಮೃತ್ಯುಂಜಯಾಯ ಸಃ ಜುಂ ಹ್ರೀಂ ಹ್ರೌಂ ಓಂ ಸ್ವಾಹಾ (ಎಲ್ಲಾರೀತಿಯ ಅಪಮೃತ್ಯು ನಿವಾರಣೆಗಾಗಿ ೧೦೮ಸಲ ಚಿನ್ಮುದ್ರೆಯೊಂದಿಗೆ ಉತ್ತರಾಭಿಮುಖವಾಗಿ ಕುಳಿತು ಜಪಿಸಿರಿ ದೇಹದಲ್ಲಿನ ಎಲ್ಲಾ ಚಕ್ರಗಳಶುದ್ದಿಗಾಗಿ) ಸಪ್ತ ಚಕ್ರಗಳ ಭೀಜಮಂತ್ರಗಳು ಓಂ ಹ್ರೌಂ ಹ್ರೀಂ ಜುಂ ಸಃ ಲಂ ವಂ ರಂ ಯಂ ಹಂ ಶಂ ಸಂ ಕ್ಷಂ ಸೋಹಂ ಶಂಕರಾಯ ಸ್ವಾಹಾ (೧೦೮ಸಲ) ಮೂಲಾದಾರ ಚಕ್ರ-ಲಂ ಸ್ವಾದಿಷ್ಟಾನ ಚಕ್ರ ವಂ ಮಣಿಪುರ ಚಕ್ರ-ರಂ ಅನಾಹತಚಕ್ರ-ಯಂ ವಿಶುದ್ದಚಕ್ರ-ಹಂ ಆಗ್ನಾ ಚಕ್ರ ಶಂ ಸಹಸ್ರಾರಚಕ್ರ-ಸಂ ಕ್ಷಂ ಸಪ್ತ ಚಕ್ರಗಳ ಮುದ್ರೆಗಳು ಬೀಜಾಕ್ಷರ ಮಂತ್ರಗಳು ತಂತ್ರಗಳು: ದೇಹದ ಸರ್ವಾಂಗಗಳಿಗೆ ಸರ್ವರೋಗಕ್ಕೆ ಸಪ ಚಕ್ರಗಳಿಗೆ ಹುಣ್ಣಿಮೆ ಅಥವ ಅಮಾವಾಸ್ಯೆ ಯಂದು ಮದ್ಯರಾತ್ರಿಸಮಯದಲ್ಲಿ ಅಂದರೆ ರಾತ್ರಿ ೧೨ ಗಂಟೆಯಿಂದ ೦೧ ಗಂಟೆಯವರೆಗೆ ಈ ಸ್ಮಯದಲ್ಲಿ ಚೆನ್ನಾಗಿ ಹಣ್ಣಾದ ೩ ನಿಂಬೆಹಣ್ಣುಗಳನ್ನು ತಗೆದುಕೊಂಡು ಒಂದನ್ನು ನಿಮ್ಮ ಗುದದ್ವಾರದಬಳಿ ಇಟ್ಟುಕೊಂಡು ಕುಳಿತುಕೊಳ್ಳಿ ಮತ್ತೆರಡನ್ನು ನಿಮ್ಮ ಎರಡು ತೊಡೆಯಮೇಲೆ ಒಂದೊಂದು ಇಟ್ಟುಕೊಳ್ಳಿ ಜೊತೆಗೆ ಚಿನ್ಮುದ್ರೆಯೊಂದಿಗೆ ಸಪ್ತ ಚಕ್ರಮಂತ್ರವನ್ನು ೧೦೮ಸಲ ಜಪಿಸಿರಿ ನಂತರ ಈ ನಿಂಬೆಹಣ್ಣುಗಳನ್ನು ಹರಿವನೀರಲ್ಲಿ ಬಿಡುವುದು.ಒಂದುವೇಳೆ ಆಗ ನೀರಲ್ಲಿ ಬಿಡಲು ಅನುಕೂಲವಿಲ್ಲದವರು ಅದನ್ನು ಒಂದು ನೀರಿನ ಲೋಟ/ ಪಾತ್ರೆಯಲ್ಲಿ ಹಾಕಿ ಜೋಪಾನವಾಗಿ ಮನೆಯ ಹೊರಗೆ ಇಟ್ಟು ಆದಷ್ಟು ಬೇಗ ಅದನ್ನು ಹರಿವನೀರಿಗೆ ಹಾಕಬೇಕು. ಇದು ಅಮವಾಸ್ಯೆದಿನ ರಾತ್ರಿಯಲ್ಲಿ ಮಾಡಬೇಕಾದ ತಂತ್ರ ಒಂದು ವೇಳೆ ರಾತ್ರಿಯಲ್ಲಿ ಮಾಡಲಾಗದವರು ಬೆಳಗಿನ ಸಮಯದಲ್ಲಿ ಅಮಾವಾಸ್ಯೆ ತಿಥಿ ಇರುವಾಗ ದೀಕ್ಷಾಮಂತ್ರದಿಂದ ಒಂದು ನಿಂಬೆಯನ್ನು ಅಭಿಮಂತ್ರಿಸಿ ಅದನ್ನು ಇಳೆತಗೆದು ಯಾವುದಾದರು ನಿರ್ಜನಪ್ರದೇಶದಲ್ಲಿ ಹಾಕಬೇಕು. ನವನಾಥರ ಮಂತ್ರಗಳು ಓಂ ಚೈತನ್ಯ ದತ್ತಾತ್ರೇಯಾಯ ನಮಃ ಓಂ ಚೈತನ್ಯ ಮತ್ಸೇಂದ್ರ ನಾಥಾಯ ನಮಃ ಓಂ ಚೈತನ್ಯ ಗೋರಕ್ಷ ನಾಥಾಯ ನಮಃ ಓಂ ಚೈತನ್ಯ ಕಾನಿಫ ನಾಥಾಯ ನಮಃ ಓಂ ಚೈತನ್ಯ ಜಾಲಂದರ ನಾಥಾಯ ನಮಃ ಓಂ ಚೈತನ್ಯ ಚರ್ಪಟ ನಾಥಾಯ ನಮಃ ಓಂ ಚೈತನ್ಯ ನಾಗ ನಾಥಾಯ ನಮಃ ಓಂ ಚೈತನ್ಯ ಭರ್ತರಿ ನಾಥಾಯ ನಮಃ ಓಂ ಚೈತನ್ಯ ರೇವಣ್ಣ ನಾಥಾಯ ನಮಃ ಓಂ ಚೈತನ್ಯ ಗಹನಿ ನಾಥಾಯ ನಮಃ ಓಂ ಓಂ ದಂ ವಂ ತಂ ಓಂ ಓಂ ಓಂ ಶ್ರೀ ದತ್ತಗೋರಕ್ಷ ಸರ್ವ ನಾಥಾಯ ನಮಃ ತ್ರಿದೋಷ ನಿವಾರಣೆಗೆ ಆರೋಗ್ಯ ಸಂರಕ್ಷಣ ಸುದರ್ಶನ ಮಂತ್ರ ಓಂ ನಮೋ ಭಗವತೇ ಸುದರ್ಶನಾಯ ಓಂ ನಮೋ ಭಗವತೇ ಮಹಾ ಸುದರ್ಶನಾಯ ಮಹಾಚಕ್ರಾಯ ಮಹಾಜ್ವಾಲಾಯ ಕರ್ಮ ಬಂಧ ವಿಮೋಚನಾಯ ಪಾದೋದಿ ಮಸ್ತಕಂ ಪರಿಹಂತಂ ವಾತ ಜನಿತಂ ರೋಗಾಣಾಂ ಪಿತ್ತ ಜನಿತ ರೋಗಾಣಾಂ ಕಫ ಜನಿತ ರೋಗಾಣಾಂ ಧಾತು ಸಂಕಲಿತ ಉದ್ಬವ ನಾನಾ ವಿಕಾರ ರೋಗಾಣಾಂ ನಾಶಯ ನಾಶಯ ಪ್ರಶಮಯ ಪ್ರಶಮಯ ಆರೋಗ್ಯಂ ದೇಹಿ ದೇಹಿ ಓಂ ಸಹಸ್ರಾರ ಹುಂ ಫಟ್ (೧೦೮ ಸಲ ನಿತ್ಯ ಉತ್ತರಾಭಿಮುಖ ಚಿನ್ಮುದ್ರೆಯೊಂದಿಗೆ ಜಪಿಸಿ ಸತತ ೧೦೮ ದಿನಗಳವರೆಗೆ) ದೇಹದ ಸಕಲ ರೋಗಗಳು ನಿವಾರಣೆಯಾಗುತ್ತಾ ಹೋಗುತ್ತವೆ. ವಿದ್ಯೆ/ಜ್ಞಾನಕ್ಕೆ ಓಂ ಹ್ರೀಂ ಸ್ಸೌಃ ಹಯಗ್ರೀವಾಯ ವಿದ್ಯಾರಾಜಾಯ ವಿಷ್ಣುವೇ ಸ್ವಾಹಾ

ವರಮಹಾಲಕ್ಷ್ಮಿ ವ್ರತ

ವರಮಹಾಲಕ್ಷ್ಮಿ ವ್ರತ - ಹೆಸರೇ ಸೂಚಿಸುವಂತೆ ವರಗಳನ್ನು ಕೊಡುವ ಲಕ್ಷ್ಮಿ ದೇವಿಯ ವ್ರತ ಇದು.ಈ ವ್ರತವನ್ನು ಶ್ರಾವಣ ಮಾಸದ ಶುಕ್ಲ ಪಕ್ಷದ ಶುಕ್ರವಾರ ಮಾಡುತ್ತಾರೆ. ಪೂರ್ಣಿಮೆಯ ಹಿಂದಿನ ಶುಕ್ರವಾರ ಮಾಡಬೇಕು. ಕೆಲವರ ಮನೆಯಲ್ಲಿ ವ್ರತ ಮಾಡುವ ಪದ್ಧತಿಗೆ ಇರುತ್ತೆ, ವ್ರತ ಮಾಡುವ ಪದ್ಧತಿ ಇಲ್ಲದಿದ್ದರೆ ಲಕ್ಷ್ಮಿ ದೇವಿಗೆ ಪೂಜೆ ಮಾಡಿ. ಈ ದಿನ ಬೆಳಿಗ್ಗೆ ಎದ್ದು ಮಂಗಳ ಸ್ನಾನ ಮಾಡಬೇಕು. ವ್ರತ ಮಾಡುವವರು ಕಲಶ ಸ್ಥಾಪನೆ ಮಾಡಬೇಕು. ಪೂಜೆ ಮಾಡುವ ಸ್ಥಳವನ್ನು ಸ್ವಚ್ಚಗೊಳಿಸಿ, ಬಾಳೆ ಕಂದು, ಮಾವಿನ ಎಲೆಗಳಿಂದ ಸಿಂಗರಿಸಿ. ಅಷ್ಟದಳ ಪದ್ಮದ ರಂಗವಲ್ಲಿ ಸಾಮನ್ಯವಾಗಿ ಎಲ್ಲ ಪೂಜೆಗಳಿಗೂ ಉಪಯೋಗಿಸುವ ಸಾಮಗ್ರಿಗಳು: ರಂಗೋಲಿ, ಮಣೆ / ಮಂಟಪ ದೇವರ ವಿಗ್ರಹ, ದೇವರ ಪಟ ನಂದಾ ದೀಪ, ದೀಪದ ಕಂಭ, ತುಪ್ಪ, ಎಣ್ಣೆ, ದೀಪಕ್ಕೆ ಹಾಕುವ ಹತ್ತಿ ಬತ್ತಿ ಘಂಟೆ, ಪಂಚಪಾತ್ರೆ, ಉದ್ದರಣೆ, ಅರ್ಘ್ಯ ಪಾತ್ರೆ, ನೀರು ಪೂಜಾ ವಿಧಾನ ಇರುವ ಪುಸ್ತಕ /ಕ್ಯಾಸೆಟ್ / ಸಿ.ಡಿ. ಅರಿಶಿನ, ಕುಂಕುಮ, ಮಂತ್ರಾಕ್ಷತೆ ಶ್ರೀಗಂಧ, ಊದಿನ ಕಡ್ಡಿ ಹೂವು, ಪತ್ರೆ, ಗೆಜ್ಜೆ ವಸ್ತ್ರ ಪಂಚಾಮೃತ - ಹಾಲು, ಮೊಸರು, ಸಕ್ಕರೆ, ತುಪ್ಪ, ಜೇನುತುಪ್ಪ ವೀಳ್ಯದ ಎಲೆ, ಅಡಿಕೆ, ಹಣ್ಣು , ತೆಂಗಿನಕಾಯಿ ನೈವೇದ್ಯ - ಪಾಯಸ, ಹುಗ್ಗಿ, ಅನ್ನ, ಕೋಸಂಬರಿ , ಇತ್ಯಾದಿ ಹಲಗಾರತಿ, ಕರ್ಪೂರ, ಮಂಗಳಾರತಿ ಬತ್ತಿ ಆರತಿ ತಟ್ಟೆ, ಸೊಡಲು, ಹೂಬತ್ತಿ, ಕೆಲವು ಪೂಜೆಗಳಲ್ಲಿ ಅಧಿಕವಾಗಿ ಇನ್ನಷ್ಟು ಸಾಮಗ್ರಿಗಳನ್ನು ಉಪಯೋಗಿಸುತ್ತೀವಿ : ಕಳಶ, ಅರಿಶಿನದ ಕೊನೆ, ಜನಿವಾರ, ಅರಿಶಿನ ದಾರ ಮರದ ಜೊತೆ / ಬಾಗಿನ ಬಳೆ, ಬಿಚ್ಚೋಲೆ, ಕನ್ನಡಿ, ಕಪ್ಪು, ರವಿಕೆ ಬಟ್ಟೆ ಸೋಬಲಕ್ಕಿ, ಉಪಾಯನ ದಾನ ನವಗ್ರಹ ಮಂಡಲ ......ಇತ್ಯಾದಿ ಧ್ಯಾನ - ನೀವು ಪೂಜೆ ಮಾಡುತ್ತಿರುವ ದೇವರನ್ನು ಭಕ್ತಿಯಿಂದ ಧ್ಯಾನ ಮಾಡಿ ಆವಾಹನೆ ಮಾಡುವುದು. ಸಾಮಾನ್ಯವಾಗಿ ಷೋಡಶೋಪಚಾರದಿಂದ ಪೂಜೆ ಮಾಡಿ ಅಂತ ನೀವು ಕೇಳಿರಬಹುದು. ಷೋಡಶ ಅಂದರೆ 16. ಹದಿನಾರು ಬಗೆಯಿಂದ ದೇವರಿಗೆ ಉಪಚಾರ ಮಾಡಿ ಎಂದರ್ಥ. ಇವುಗಳ ವಿವರ ಕೆಳಗಿದೆ: 1.ಆವಾಹನೆ - ಅಂದರೆ ಆಹ್ವಾನ . ದೇವರನ್ನು ನಿಮ್ಮ ಮನೆಗೆ ಅಥವಾ ಪೂಜೆ ಮಾಡುತ್ತಿರುವ ಜಾಗಕ್ಕೆ ಆಹ್ವಾನ ಮಾಡುವುದು. 2.ಆಸನ - ಅಂದರೆ ಕುಳಿತುಕೊಳ್ಳುವ ಜಾಗ . ದೇವರ ಪ್ರತಿಮೆಯನ್ನು ಇಡುವ ವೇದಿಕೆ/ ಮಣೆ ಮೇಲೆ ಆಸೀನ ಮಾಡಿಸುವುದು. 3.ಪಾದ್ಯ - ಕಾಲು ತೊಳೆದುಕೊಳ್ಳುವುದಕ್ಕೆ ನೀರು ಕೊಡುವುದು. 4.ಅರ್ಘ್ಯ - ಕೈ ತೊಳೆದುಕೊಳ್ಳುವುದಕ್ಕೆ ನೀರು ಕೊಡುವುದು. 5.ಆಚಮನ - ಕುಡಿಯುವುದಕ್ಕೆ ನೀರು ಕೊಡುವುದು. 6.ಸ್ನಾನ - ಶುದ್ಧೋದಕ (ನೀರು) ಮತ್ತು ಪಂಚಾಮೃತದಿಂದ ಸ್ನಾನ ಮಾಡಿಸುವುದು. 7.ವಸ್ತ್ರ - ಧರಿಸಲು ಉಡುಪು ಕೊಡುವುದು . ಗೆಜ್ಜೆವಸ್ತ್ರಗಳನ್ನೂ ದೇವರಿಗೆ ಇಡುವುದು . ಜೊತೆಗೆ ಉಪವೀತ (ಜನಿವಾರ), ಆಭರಣವನ್ನು (ಬಳೆ-ಬಿಚ್ಚೋಲೆ )ಸಮರ್ಪಿಸುವುದು. 8.ಹರಿದ್ರ, ಕುಂಕುಮ, ಗಂಧ, ಅಕ್ಷತ - ಅರಿಶಿನ , ಕುಂಕುಮ, ಶ್ರೀಗಂಧ , ಮಂತ್ರಾಕ್ಷತೆಯನ್ನು ದೇವರಿಗೆ ಅರ್ಪಿಸುವುದು. 9.ಪುಷ್ಪ ಮಾಲ - ಹೂವು, ಪತ್ರೆಗಳಿಂದ ದೇವರಿಗೆ ಅಲಂಕಾರ ಮಾಡುವುದು. 10. ಅರ್ಚನೆ/ಅಷ್ಟೋತ್ತರ - ನೂರೆಂಟು ನಾಮಗಳಿಂದ ದೇವರನ್ನು ಸ್ಮರಣೆ ಮಾಡುವುದು. 11.ಧೂಪ - ಪರಿಮಳಯುಕ್ತವಾದ ಧೂಪವನ್ನು ಅರ್ಪಿಸುವುದು. 12.ದೀಪ - ದೀಪ ಸಮರ್ಪಣೆ ಮಾಡುವುದು. 13.ನೈವೇದ್ಯ, ತಾಂಬೂಲ - ದೇವರಿಗೆ ವಿಧ ವಿಧ ಭಕ್ಷ್ಯಗಳ ಭೋಜನ ಅರ್ಪಿಸುವುದು . ಊಟದ ನಂತರ ವೀಳೆಯ, ಅಡಿಕೆ, ತೆಂಗಿನಕಾಯಿ ತಾಂಬೂಲ ಕೊಡುವುದು. 14. ನೀರಾಜನ - ಕರ್ಪುರದಿಂದ ಮಂಗಳಾರತಿ ಮಾಡುವುದು. 15. ನಮಸ್ಕಾರ - ಪ್ರದಕ್ಷಿಣೆ ಮಾಡಿ ದೇವರಿಗೆ ಸಾಷ್ಟಾಂಗ ನಮಸ್ಕಾರ ಮಾಡುವುದು. 16. ನಮಸ್ಕಾರ - ನಿಮ್ಮ ಇಷ್ಟಗಳನ್ನು ನಡೆಸಿ ಕೊಡು ಎಂದು ದೇವರಲ್ಲಿ ಅರಿಕೆ / ಪ್ರಾರ್ಥನೆ ಮಾಡುವುದು. ಪೂಜೆಯ ನಂತರದೇವರು ಅನುಗ್ರಹಿಸಿರುವ ಅರಿಶಿನ, ಕುಂಕುಮ, ನೈವೇದ್ಯವನ್ನು ಪ್ರಸಾದ ರೂಪವಾಗಿ ಸ್ವೀಕಾರ ಮಾಡುವುದು. ಹೀಗೆ ಕ್ರಮವಾಗಿ ಪೂಜೆ ಮಾಡಿ ದೇವರನ್ನು ಸಂತೃಪ್ತಿ ಪಡಿಸಿದರೆ, ಭಗವಂತನು ತನ್ನ ಕೃಪೆಯನ್ನು ನಮ್ಮ ಮೇಲೆ ಅಪಾರವಾಗಿ ಅನುಗ್ರಹಿಸುತ್ತಾನೆ :) ಇವುಗಳೊಂದಿಗೆ ಇನ್ನು ಹಲವಾರು ವಸ್ತುಗಳ ಬಳಕೆ ಮಾಡಬಹುದು ಮುಖ್ಯವಾಗಿ ಅಲಂಕಾರ ಮಾಡುವುದಕ್ಕೆ. ಮಾರುಕಟ್ಟೆಯಲ್ಲಿ ಅನೇಕ ವಿಧವಾದ ಅಲಂಕಾರಿಕ ಸಾಮಾನು ದೊರೆಯುತ್ತದೆ . ಇದು ಪ್ರತಿಯೊಬ್ಬರ ಆಸಕ್ತಿ ಮತ್ತು ಅಭಿರುಚಿ ಮೇಲೆ ಅವಲಂಭಿಸಿದೆ. ಹಾಕಬೇಕು. ಇದರ ಮೇಲೆ ಕಲಶ ಸ್ಥಾಪಿಸಬೇಕು. ಒಂದು ಚೊಂಬಿನಲ್ಲಿ ಸ್ವಲ್ಪ ನೀರು/ಅಕ್ಕಿ ಹಾಕಿ, ಜೊತೆಗೆ ಅರಿಶಿನದ ಗೊನೆ, ಅಡಿಕೆ, ಬೆಳ್ಳಿ ನಾಣ್ಯ / ಯಾವುದೇ ನಾಣ್ಯ(coin) ಹಾಕಿ.ಅದರ ಮೇಲೆ ಅರಿಶಿನ ಕುಂಕುಮ ಸವರಿದ ತೆಂಗಿನಕಾಯಿ ಇಟ್ಟು, ಇದರ ಮೇಲೆ ಮುಖದ ಆಕಾರದ ಚಿತ್ರ ಬರೆಯಬಹುದು ಅಥವಾ ಲಕ್ಷ್ಮಿ ದೇವಿಯ ಬೆಳ್ಳಿಯ ಮುಖವಾಡ ಇದ್ದರೆ ಅದನ್ನು ಈ ತೆಂಗಿನಕಾಯಿಗೆ ಜೋಡಿಸಿ. ಕಳಶದ ಬಾಯಿಗೆ ವೀಳ್ಯದ ಎಲೆ , ಮಾವಿನ ಎಲೆಗಳನ್ನು ಇಡಬೇಕು. ಈ ಕಳಶವನ್ನು ಅಕ್ಕಿ ಹರಡಿರುವ ತಟ್ಟೆಯ ಮೇಲೆ ಇಡಬೇಕು. ಈ ತಟ್ಟೆಯನ್ನು ಅಷ್ಟದಳ ರಂಗೋಲಿಯ ಮೇಲೆ ಇಡಬೇಕು. ಈ ಕಲಶಕ್ಕೆ ಹೊಸ ರವಿಕೆ ಬಟ್ಟೆ ಅಥವಾ ಸೀರೆ ಉಡಿಸಿ , ವಡವೆ ಹಾಕಿ ಅಲಂಕಾರ ಮಾಡಬಹುದು. ಈ ಕಲಶಕ್ಕೆ ಶ್ರೀ ಲಕ್ಷ್ಮಿಯನ್ನು ಆವಾಹನೆ ಮಾಡಿ, ಕಲಶವನ್ನು ಪೂಜೆ ಮಾಡಬೇಕು. ಪೂಜೆ ಎಂದರೆ ಹಲವಾರು ವಿಧಿ-ವಿಧಾನಗಳು, ಮಂತ್ರಗಳು ,ಇವುಗಳ ತಲೆ-ಬುಡ ಗೊತ್ತಿಲ್ಲ ಅಂತ ಪೇಚಾಡುತ್ತ ಇದ್ದೀರಾ. ಈ ಗೊಂದಲದಲ್ಲಿ ಸಿಕ್ಕಿ ಹಾಕಿಕೊಳ್ಳ ಬೇಕಿಲ್ಲ. ಪೂಜಾ ವಿಧಾನವನ್ನು ಸರಳವಾಗಿ ವಿವರಿಸಬಹುದು. ದೇವರ ಪೂಜೆಯನ್ನು ಅತಿಥಿ ಸತ್ಕಾರಕ್ಕೆ ಹೋಲಿಸಿಕೊಳ್ಳಿ . ದೇವರು ನಿಮ್ಮ ಮನೆಗೆ ಬಂದಿರುವ ಅತಿಥಿ. ಅತಿಥಿಗಳಿಗೆ ಹೇಗೆ ಉಪಚಾರ ಮಾಡುತ್ತಿರೋ , ಹಾಗೆಯೆ ದೇವರಿಗೆ ಪೂಜೆ ರೂಪದಲ್ಲಿ ಉಪಚಾರ ಮಾಡಬೇಕು ಅಷ್ಟೆ. ಮೊದಲು ಸಂಕಲ್ಪ ಮಾಡಿ, ನಂತರ ಧ್ಯಾನ ಮಾಡಿ ದೇವರನ್ನು ಆಹ್ವಾನ ಮಾಡುವುದು. ಸಂಕಲ್ಪ - ಅಂದರೆ ನಿರ್ಧಾರ, ನಿರ್ಣಯ, ಚಿತ್ತ. ಈ ದಿನ ಈ ಪೂಜೆ ಮಾಡುತ್ತ ಇದ್ದೀನಿ ಅಂತ ನಿರ್ಧಾರ ಮಾಡುವುದೇ ಸಂಕಲ್ಪ. ಸಂಕಲ್ಪ ಮಾಡುವಾಗ ಆ ದಿನದ ಸಂವತ್ಸರ, ಋತು , ಮಾಸ, ಪಕ್ಷ, ವಾರ, ತಿಥಿ, ನಕ್ಷತ್ರವನ್ನು ಹೆಸರಿಸಬೇಕು. ಶುಭೇ ಶೋಭನೇ ಮುಹೂರ್ತೇ ಆದ್ಯ ಬ್ರಹ್ಮಣಃ ದ್ವಿತೀಯ ಪರಾರ್ಧೇ ಶ್ವೇತ ವರಾಹ ಕಲ್ಪೇ ವೈವಸ್ವತ ಮನ್ವಂತರೇ ಕಲಿಯುಗೇ ಪ್ರಥಮ ಪಾದೇ ಜಂಬೋ ದ್ವೀಪೇ ಭರತವರ್ಷೇ ಭರತಖಂಡೇ ಗೋದಾವರ್ಯಾಃ ದಕ್ಷಿಣೇ ತೀರೇ ಶಾಲೇವಾಹನಶಖೇ ಬೌದ್ಧಾವತಾರೇ ರಾಮಕ್ಷೇತ್ರೇ ಅಸ್ಮಿನ್ ವರ್ತಮಾನೇ ವ್ಯಾವಹಾರಿಕೇ ಚಾಂದ್ರಮಾನೇ ಪ್ರಭವಾದಿ ಷಷ್ಟಿ ಸಂವತ್ಸರಾಣಾಂ ಮಧ್ಯೇ .....ನಾಮ ಸಂವತ್ಸರೇ, ಉತ್ತರಾಯನೇ/ದಕ್ಷಿಣಾಯನೇ ,... ಋತೌ , .... ಮಾಸೇ ,ಶುಕ್ಲ/ಕೃಷ್ಣ ಪಕ್ಷೇ , ... ತಿಥಿಯಾಂ , ... ವಾಸರ ಯುಕ್ತಾಯಾಂ , ಶುಭ ನಕ್ಷತ್ರ, ಶುಭಯೋಗ ಶುಭ ಕರಣ ಏವಂ ಗುಣ ವಿಶೇಷಣ ವಿಶಿಷ್ಟಾಯಾಂ ಶುಭತಿಥೌ , ಅಸ್ಮಾಕಂ ಸಹಕುಟುಂಬಾನಾಂ ಕ್ಷೇಮಸ್ಥೈರ್ಯ ವಿಜಯ ವೀರ್ಯ ಅಭಯ ಆಯುರಾರೋಗ್ಯ ಐಶ್ವರ್ಯಾಭಿವೃದ್ಧ್ಯರ್ಥಂ ಸಮಸ್ತ ದುರಿತೋಪಶಾಂತ್ಯರ್ಥಂ ಸಮಸ್ತ ಸನ್ಮಂಗಳಾರ್ಥಂ ಸಮಸ್ತಾಭ್ಯುದಯಾರ್ಥಂ ಚ ಧರ್ಮಾರ್ಥ ಕಾಮಮೋಕ್ಷ ಚತುರ್ವಿಧ ಫಲ ಪುರುಷಾರ್ಥ ಸಿಧ್ಧ್ಯರ್ಥಂ ಶ್ರೀ ....(ದೇವರ ಹೆಸರು) ಪ್ರೀತ್ಯರ್ಥಂ ಯಾವಚ್ಛಕ್ತಿ ಧ್ಯಾನಾವಾಹನಾದಿ ಷೋಡಶೋಪಚಾರ ಪೂಜಾಂ ಕರಿಷ್ಯೇ

ಶ್ರೀ ಪ್ರತ್ಯಂಗೀರಾ ಮಾಲಾ ಮಂತ್ರ

ಓಂ ದ್ರಾಂ ಓಂ ಗುರು ಲಕ್ಷ್ಮಿಶ್ರೀನಿವಾಸದತ್ತಾಯ ನಮಃ ಶ್ರೀ ಪ್ರತ್ಯಂಗೀರಾ ಮಾಲಾ ಮಂತ್ರ ಓಂ ಹ್ರೀಂ ಈಂ ಶ್ರೀಂ ಗ್ಲೌಂ ಸೌಂ ಐಂ ಓಂ ನಮಃ ಕೃಷ್ಣವಾಸಸೇ ಶತ ಸಹಸ್ರ ಸಿಂಹ ವದನೆ ಅಷ್ಟಾದಶಭುಜೆ ಮಹಾಬಲೆ ಶತ ಪರಾಕ್ರಮ ಪೂಜಿತೆ ಅಜಿತೆ ಅಪರಾಜಿತೆ ದೇವಿ ಪ್ರತ್ಯಂಗೀರೇ ಪರಸೈನ್ಯ ಪರಕರ್ಮ ವಿದ್ವಂಸಿನಿ ಪರಮಂತ್ರೋಭೇಧಿನಿ ಪರಮಂತ್ರ ಪರಯಂತ್ರ ಪರತಂತ್ರ ಉಚ್ಚಾಟಿನಿ ಪರವಿದ್ಯಾಗ್ರಾಸಕರೇ ಸರ್ವ ಭೂತಧಮನೆ ಓಂ ಕ್ಷಂ ಸೌಂ ಗ್ಲೌಂ ಈಂ ಹ್ರೀಂ ಕ್ರೀಂ ಕ್ರಾಂ ಏಹಿ ಏಹಿ ಪ್ರತ್ಯಂಗೀರೇ ಚಿದ ಚಿದ್ರೂಪೇ ಸರ್ವ ಉಪದ್ರವೇಭ್ಯಃ ಸರ್ವಗ್ರಹದೋಶೇಭ್ಯಃ ಸರ್ವ ರೋಗೇಭ್ಯಃ ಪ್ರತ್ಯಂಗೀರೇ ಮಾಮ್ ರಕ್ಷ ರಕ್ಷ ಹ್ರಾಂ ಹ್ರೀಂ ಹ್ರೂಂ ಹ್ರೈಂ ಹ್ರೌಂ ಹ್ರಃ ಕ್ಷಾಂ ಕ್ಷೀಂ ಕ್ಷುಂ ಕ್ಷೈಂ ಕ್ಷೌಂ ಕ್ಷಃ ಗ್ಲಾಂ ಗ್ಲೀಂ ಗ್ಲೂಂ ಗ್ಲೈಂ ಗ್ಲೌಂ ಗಃ ಪ್ರತ್ಯಂಗೀರೇ ಪರಬ್ರಹ್ಮ ಮಹಿಷಿ ಪರಮ ಕಾರುಣಿಕೆ ಏಹಿ ಏಹಿ ಮಮ ಶರೀರೆ ಆವೇಶಯ ಆವೇಶಯ ಮಮ ಹೃದಯೇ ಸ್ಪುರ ಸ್ಪುರ ಮಮಾಂಸೆ ಪ್ರಸ್ಕುರ ಪ್ರಸ್ಕುರ ಮಮಾಂಸೆ ರಕ್ಷ ರಕ್ಷ ಮಮ ಸರ್ವ ದುಷ್ಟಾನಾಂ ಪದಂ ವಾಚಂ ಮುಖಂ ಸ್ತಂಭಯ ಸ್ತಂಭಯ ಜಿಹ್ವಾಂ ಕೀಲಯ ಕೀಲಯ ಬುದ್ಧಿಂ ವಿನಾಶಯ ವಿನಾಶಯ ಪ್ರತ್ಯಂಗೀರೇ ಮಹಾ ಕುಂಡಲಿನಿ ಚಂದ್ರಕಳಾವತಂಸಿನಿ ಭೇತಾಳ ವಾಹನೆ ಪ್ರತ್ಯಂಗೀರೇ ಕಪಾಲಮಾಲಾಧಾರಿಣಿ ತ್ರಿಶೂಲ ವಜ್ರಾಂಕುಶ ಬಾಣ ಬಾಣಾಸನ ಪಾಣಿ ಪಾತ್ರ ಪೂರಿತಂ ಮಮ ಶತೃಶ್ರೋಣಿತಂ ಪಿಬ ಪಿಬ ಮಮ ಶತೃ ಮಾಂಸಂ ಖಾದಯ ಖಾದಯ ಮಮ ಶತೃಂ ತಾಡಯ ತಾಡಯ ಮಮ ವೈರಿ ಜನಾನ್ ದಹ ದಹ ಮಮ ವಿದ್ವೇಶ ಕಾರಿಣಿಂ ಶೀಘ್ರಮೇವ ಭಕ್ಷಯ ಭಕ್ಷಯ ಶ್ರೀ ಪ್ರತ್ಯಂಗೀರೇ ಭಕ್ತಕಾರುಣಿಕೆ ಶೀಘ್ರಮೇವ ದಯಾಂ ಕುರುಕುರು ಸದ್ಯೋಜ್ವಲ ಜಾಡ್ಯಂ ಮುಕ್ತಿಂ ಕುರುಕುರು ಭೇತಾಳ ಬ್ರಹ್ಮ ರಾಕ್ಷಸಾದೀನ್ ಜಹಿ ಜಹಿ ಮಮ ಶತೃಂ ತಾಡಯ ತಾಡಯ ಪ್ರಾರಬ್ಧ ಸಂಚಿತ ಕ್ರಿಯಮಾಣಾನ್ ದಹ ದಹ ದೂಷಗಾನ್ ಸದ್ಯೋಧೀರ್ಘರೋಗಾನ್ ಮುಕ್ತಿಂ ಕುರುಕುರು ಪ್ರತ್ಯಂಗೀರೇ ಪ್ರಾಣಶಕ್ತಿಮಯೇ ಮಮ ವೈರಿ ಜನ ಪ್ರಾಣಾನ್ ಹನ ಹನ ಮಮ ವೈರಿಜನಾನ್ ಪ್ರಾಣಾನ್ ಮರ್ಧಯ ಮರ್ಧಯ ಮಮ ವೈರಿಜನಾನ್ ಪ್ರಾಣಾನ್ ನಾಶಯ ನಾಶಯ ಮಮ ಮೃತ್ಯುರ್ ಮೃತ್ಯುಂ ನಾಶಯ ನಾಶಯ ಓಂ ಶ್ರೀಂ ಹ್ರೀಂ ಕ್ಲೀಂ ಗ್ಲೌಂ ಸೌಂ ಪ್ರತ್ಯಂಗೀರೇ ಮಹಾಮಾಯೇ ಮಮ ಮನೋವಾಂಚಿತ ಸರ್ವ ಕಾರ್ಯ ಸಿದ್ದಿಂ ಕುರು ಕುರು ಮಾಮ್ ರಕ್ಷ ರಕ್ಷ ಪ್ರತ್ಯಂಗೀರೇ ಸ್ವಾಹಾಃ ಲಘು ಮಂತ್ರ ಓಂ ಐಂ ಹ್ರೀಂ ಶ್ರೀಂ ಪ್ರತ್ಯಂಗೀರಾಯೈ ನಮಃ ಓಂ ಐಂ ಹ್ರೀಂ ಶ್ರೀಂ ಆಂ ಹ್ರೀಂ ಕ್ರೋಂ ಕ್ಷ್ರೋಂ ಪ್ರತ್ಯಂಗೀರಾಯೈ ನಮಃ

ಗಣೆಶ ಪ್ರಾರ್ಥನೆ (S S B K)

ಗಣೆಶ ಪ್ರಾರ್ಥನೆ ಶುಕ್ಲಂ ಬರದರಂ ಗಣಪತಿ ಮಂತ್ರಂ ನಿತ್ಯಂ ನಿತ್ಯಂ ಜಪೋ ಜಪೋ ವಿಘ್ನವಿನಾಶಕ ವಿದ್ಯಾಪ್ರದಾಯಕ ವೀರಗಣಪತಿ ಬಜೋ ಬಜೋ ಗುರು ಪ್ರಾರ್ಥನೆ ಜೈ ಗುರುದೇವ ಜಯಗುರುದೇವ ನಮೋ ನಮಾಮಿ ಸದ್ಗುರುದೇವ ||ಪ|| ಚ೧ ಬ್ರಹ್ಮ ಸ್ವರೂಪ ಗುರುದೇವ ವಿಷ್ಣು ರೂಪನೆ ಗುರುದೇವ ಶಿವರೂಪ ಗುರುದೇವ ತ್ರಿಮೂರ್ತಿ ಸ್ವರೂಪನೆ ಗುರುದೇವ ||ಜೈ|| ಜ್ಞಾನ ಪ್ರದಾಯಕ ಜ್ಞಾನದೇವ ವಿದ್ಯಪ್ರದಾಯಕ ಗುರುದೇವ ಬುದ್ದಿ ಪ್ರದಾಯಕ ಗುರುದೇವ

ದಾಂಪತ್ಯ ವಿರಸಕ್ಕೆ

ದಾಂಪತ್ಯ ವಿರಸಕ್ಕೆ ಪತಿ ವಶೀಕರಣ ಮಂತ್ರ/ತಂತ್ರ ಸೂಚನೆ:- ಗುರು ಹಿರಿಯರ ಸಮ್ಮುಖದಲ್ಲಿ ವಿವಾಹವಾದ ಪತ್ನಿಯನ್ನು ಬಿಟ್ಟು ಪರಸ್ತ್ರೀ ಸಹವಾಸದಲ್ಲಿರುವ ಪತಿಯನ್ನು ವಶಪಡಿಸಿಕೊಳ್ಳಲು ಮಾತ್ರ ಈ ಮಂತ್ರವನ್ನು ಉಪಯೋಗಿಸಬೇಕು ವಿನಾಕಾರಣ ಸುಮ್ಮನೆ ಈ ಪ್ರಯೋಗ ಮಾಡಿದರೆ ಅನಾಹುತಗಳನ್ನು ಎದುರಿಸಬೇಕಾಗುತ್ತದೆ. ನಿಜವಾಗಿಯು ಪತಿ ಪರಸ್ತ್ರೀ ಸಹವಾಸದಲ್ಲಿದ್ದಾಗ ಮಾತ್ರ ಈ ತಂತ್ರ ಮಂತ್ರ ಪ್ರಯೋಗ ಫಲನೀಡುತ್ತದೆ.ಇಲ್ಲವಾದಲ್ಲಿ ಅನಾಹುತ ನೀವೇ ಅನುಬವಿಸಬೇಕು. ಮಂತ್ರ: ಓಂ ಹ್ರೀಂ ಘ್ರೀಂ ಕ್ಲೀಂ ಶ್ರೀಂ ಠಂ ಪೂರ್ವ / ದಕ್ಷಿಣ ದಿಕ್ಕು ೧.ಪತಿಯ ವಸ್ತ್ರಗಳನ್ನು (ಧರಿಸುವ ಬಟ್ಟೆ) ಕೈಯಲ್ಲಿಡಿದುಕೊಂಡು ೧೦೮ಸಲ ಈ ಮಂತ್ರದಿಂದ ಅಭಿಮಂತ್ರಿಸಿ ಆ ಬಟ್ಟೆಗಳನ್ನು ಧರಿಸಲು ಕೊಡುವುದು. ೨.ಸೇವಿಸಬಹುದಾದ ಅನ್ನ ಆಹಾರಗಳನ್ನು ೧೦೮ಸಲ ಈ ಮಂತ್ರದಿಂದ ಅಭಿಮಂತ್ರಿಸಿ ತಿನ್ನಿಸುವುದು. ೩.ನಿಂಬೆಹಣ್ಣನ್ನು ೧೦೮ಸಲ ಈ ಮಂತ್ರದಿಂದ ಅಭಿಮಂತ್ರಿಸಿ ಅದರ ಜ್ಯೂಸ್ ಮಾಡಿ ಕುಡಿಯಲು ಕೊಡುವುದು. ೪.ಪತಿಯ ಭಾವಚಿತ್ರವನ್ನು ಕೈಯಲ್ಲಿ ಹಿಡಿದುಕೊಂಡು ೧೦೮ಸಲ ಈ ಮಂತ್ರದಿಂದ ಅಭಿಮಂತ್ರಿಸುವುದು. ಈ ತಂತ್ರವನ್ನು ನಿತ್ಯ ೧೦೮ ಸಲದಂತೆ ೪೮ದಿನಗಳಕಾಲ ಮಾಡಬೇಕು ಕ್ರಮೇಣ ನಿಮ್ಮ ಪತಿಯು ನಿಮ್ಮ ಕಡೆಗೆ ಒಲಿದು ಬರುವುದರಲ್ಲಿ ಯಾವ ಸಂದೇಹ ಬೇಡ.

ನವಗ್ರಹ ಪೂಜಾವಿಧಿ

ಓಂ ದ್ರಾಂ ಓಂ ಗುರುದತ್ತಾಯ ನಮಃ ಓಂ ನಮೋ ಭಗವತೇ ಲಕ್ಷ್ಮಿಶ್ರೀನಿವಾಸಾಯ ನಮಃ ನವಗ್ರಹ ಪೂಜಾವಿಧಿ ಸೂಚನೆ:- ಮಂತ್ರೋಕ್ತವಾಗಿ ನವಗ್ರಹ ಆರಾಧನೆ ಮಾಡಲು ಸಾದ್ಯವಾಗದಿದ್ದಲ್ಲಿ ಸ್ತೋತ್ರರೂಪವಾಗಿ ಆಯಾ ಗ್ರಹಗಳ ಅಷ್ಟೋತ್ತರ ಶತನಾಮಾವಳಿಗಳಿಂದ ಆರಾಧಿಸಬಹುದು. ಆಯಾ ಗ್ರಹಗಳು ಮತ್ತು ದೇವತೆಗಳಿಗೆ ಅಷ್ಟೋತ್ತರ ಶತನಾಮಾವಳಿಯನ್ನು ಹೇಳಿಕೊಳ್ಳಲು ಕಾಲಾವಕಾಶವಿಲ್ಲದಿದ್ದಲ್ಲಿ ಸಂಕ್ಷಿಪ್ತವಾಗಿ ಶ್ಲೋಕಗಳನ್ನೇ ಸ್ತುತಿಸಬಹುದು. ಋಗ್ವೇಧ ಮತ್ತು ಯಜುರ್ವೇಧ ರೀತ್ಯ ಗ್ರಹ ಸ್ಥಾಪನೆ ಪೂರ್ವ ಪಶ್ಶಿಮ ಉತ್ತರ ದಕ್ಷಿಣ ಈಶಾನ್ಯ ಆಗ್ನೇಯ ನೈರುತ್ಯ ವಾಯುವ್ಯ ಸೂರ್ಯ ಗೋಧಿ ಚಂದ್ರ ಅಕ್ಕಿ ಕುಜ ತುಗರಿ ಬುಧ ಹೆಸರು ಗುರು ಕಡಲೆ ಶುಕ್ರ ಅವರೆ ಶನಿ ಎಳ್ಳು ರಾಹು ಉದ್ದು ಕೇತು ಹುರುಳಿ ಈ ಕೆಳಗೆ ನೀಡಿರುವಂತೆ ಸಂಕಲ್ಪ ಮಾಡಿ ಪ್ರತಿಯೊಂದು ಗ್ರಹದ ಆವಾಹನೆಯನ್ನು ಮಾಡಿ ಷೋಡಶೋಪಚಾರ ಪೂಜೆ ಮಾಡಬೇಕು.ಸಂಕಲ್ಪ ಮಾಡುವಾಗ ಅವರವರ ನಕ್ಷತ್ರಮತ್ತು ರಾಶಿಯನ್ನು ಹೇಳಿಕೊಳ್ಳಬೇಕು. ಪ್ರಾರ್ಥನೆ ನಮಸೂರ್ಯಾಯ ಚಂದ್ರಾಯ ಮಂಗಳಾಯ ಬುಧಾಯಚ ಗುರು ಶುಕ್ರ ಶನಿಭ್ಯಶ್ಚ ರಾಹವೇ ಕೇತವೇ ನಮಃ ಆಚಮನ,ಪ್ರಾಣಾಯಾಮಾನಂತರ ಸಂಕಲ್ಪಮಾಡಬೇಕು. ಸಂಕಲ್ಪ ಪೂರ್ವೋಕ್ತ ಏವಂಗುಣ ವಿಶೇಷಣ ವಿಶಿಷ್ಟಾಯಾಂ ಶುಭತಿಥೌ.................. ನಕ್ಷತ್ರೇ..............ರಾಶೌ...................ಶರ್ಮಣಃ ಮಮ ಸಮಸ್ತ ಗ್ರಹಚಾರ ಪೀಡಾ ಪರಿಹಾರಾರ್ಥಂ ಸಕುಟುಂಬಾನಾಂ ಅಸ್ಮಾಕಂ ಕ್ಷೇಮ ಸ್ಥೈರ್ಯ ವಿಜಯ ವೀರ್ಯ ಆಯುರಾರೋಗ್ಯಭಿವೃದ್ಯರ್ಥಂ ಆದಿತ್ಯಾನಾಂ ನವಾನಾಂ ಗ್ರಹಣಾಂ ಶುಭಸ್ಥಾನೇಷು ಸ್ಥಿತಾಃ ತೇಷಾಂ ಗ್ರಹಣಾಂ ಅತಿಶಯ ಶುಭಸ್ಥಾನ ಫಲಾಪ್ರಾಪ್ಯರ್ಥಂ ಯೇ ಯೇ ಗಹಾಃ ಶುಭೇತರಸ್ಥಾನೇಷು ಸ್ಥಿತಾಃತೇಷಾಂ ಗ್ರಹಾಣಾಂ ಅತಿಶಯ ಶುಭಸ್ಥಾನ ಫಲಾಪ್ರಾಪ್ಯರ್ಥಂ ಅಪಮೃತ್ಯು ಅಪಕಂಟಕ ಅಂತರ್ಧಶಾ ಮಹರ್ಧಶ ಅಂತರಾಂತರ್ಧಶ ಪ್ರಾಣದಶಾಬುಕ್ತಿ ಕ್ಷುದ್ರ ಪೀಡಾ ಪರಿಹಾರಾರ್ಥಂ ಆಯುರಾರೋಗ್ಯ ಐಶ್ವರ್ಯಭಿವೃದ್ಯರ್ಥಂ ಸರ್ವರೋಗ ಪರಿಹಾರಾರ್ಥಂ ಆದಿತ್ಯಾದಿ ನವಗ್ರಹ ದೇವತಾ ಪ್ರೀತ್ಯರ್ಥಂ ಆದಿತ್ಯಾದಿ ನವಗ್ರಹ ದೇವತಾ ಪೂಜಾ ಕರಿಷ್ಯೇ ಆವಾಹನಂ ೧.ಸೂರ್ಯ ಕರ್ಣಿಕಾಯಂ ಮದ್ಯೇ ಪ್ರಸನ್ನ ವದನಂ ಸೌಮ್ಯಂ ವರದಾಭಯ ಪಾಣಿಕಂ ರಕ್ತವರ್ಣಂ ಕಳಿಂಗದೇಶಜಂ ಕಾಶ್ಯಪಗೋತ್ರಜಂ ಅಗ್ನೀಶ್ವರ ಸಹಿತಂ ಸಾಂಗಂ ಸಾಯುಧಂ ಸವಾಹನಂ ಸಪರಿವಾರಂ ಸಶಕ್ತಿ ಸಪುತ್ರ ಸರ್ವಾಲಂಕಾರ ಭೂಷಿತಂ ಅದಿದೇವತಾ ಪ್ರತ್ಯಧಿದೇವತಾ ಸಹಿತಂ ಉದುತ್ಯಂ ಜಾತವೇದಸಮಿತಿ ಕಣ್ವಪುತ್ರಃ ಪ್ರಸ್ಕಣ್ವ ಋಷಿಃ ಸೂರ್ಯೋ ದೇವತಾ ಗಾಯತ್ರೀ ಛಂಧಃ ಸೂರ್ಯಗ್ರಹ ಪ್ರೀತ್ಯರ್ಥೇ ಸೂರ್ಯಗ್ರಹಾರಾಧನೇ ವಿನಿಯೋಗಃ ಉದುತ್ಯಂಜಾತ ವೇದಸಂ ದೇವಂವಹಂತಿ ಕೇತವಃ ದೃಶೇವಿಶ್ವಾಯ ಸೂರ್ಯಂ|ಮದ್ಯೇ ಗೋಧಾಮಧಾನ್ಯ ಸ್ಕೋಪರಿ(ಗೋಧಿ) ವಕ್ತಾರ ಮಂಡಲೇ ಓಂ ಭೂರ್ಭುವಸ್ವಃ ಸೂರ್ಯಗ್ರಹಮಾವಾಹಯಾಮಿ| ಸ್ಥಾಪಯಾಮಿ ಪೂಜಯಾಮಿ|| ಚಂದ್ರ:- ಆಗ್ನೇಯಪತ್ರ‍ೇ / ಪೂರ್ವ ಪತ್ರೇ ಸೋಮಾಯ ನಮಃ ಪ್ರಸನ್ನಪಾಣಿಕಂ ಗೋಕ್ಷೀರ ದವಳ ವರ್ಣಂ ಯಮುನ ದೇಶಜಂ ಅತ್ರೇಯ ಗೋತ್ರಜಂ ಅಪಃ ಪಾರ್ವತೀ ಸಹಿತಂ ಸಾಂಗಂ ಸಾಯುಧಂ ಸವಾಹನಂ ಸಪರಿವಾರಂ ಸಶಕ್ತಿ ಸಪುತ್ರ ಸರ್ವಾಲಂಕಾರ ಭೂಷಿತಂ ಅಧಿದೇವತಾ ಪ್ರತ್ಯಧಿದೇವತಾ ಸಹಿತಂ ಅಪ್ಯಾಯಸ್ವೇತಿ ಗೌತಮಋಷಿಃ ಸೋಮದೇವತಾ ಗಾಯತ್ರಿಛಂಧಃ ಸೋಮಗ್ರಹ ಪ್ರೀತ್ಯರ್ಥೇ ಸೋಮಗ್ರಹಾರಾಧನೇ ವಿನಿಯೋಗಃ ಅಪ್ಯಾಯ ಸ್ವಸಮೇತುತೇ ವಿಶ್ವತಸ್ಸೋಮವೃಷ್ಣಂ|ಭವಾವಾಜಸ್ಯ ಸಂಗಥೇ|ಸೂರ್ಯಸ್ಯ ಆಗ್ನೇಯ ಪೂರ್ವ ದಿಗ್ಬಾಗೇ ತಂಡುಲ ಧಾನ್ಯ ಸ್ಕೋಪರಿ(ಅಕ್ಕಿ)ಚತುರಸ್ರಾಕಾರ ಮಂಡಲೇ ಓಂ ಭೂರ್ಭುವಸ್ವಃ ಚಂದ್ರಗ್ರಹ ಆವಾಹಮಾವಾಹಯಾಮಿ ಸ್ಥಾಪಯಾಮಿ ಪೂಜಯಾಮಿ|| ೩.ಕುಜ(ಅಂಗಾರಕ,ಬೌಮ) ದಕ್ಷಿನಪತ್ರೇ/ಆಗ್ನೇಯಪತ್ರ‍ೇ ಅಂಗಾರಕಾಯ ನಮಃ ಪ್ರಸನ್ನಪಾಣಿಕಂ ರಕ್ತವರ್ಣಂ ವಿಂದ್ಯಾದೇಶಜಂ ಭಾರದ್ವಜಗೋತ್ರಜಂ ಭೂಮಿಸ್ಕಂದ ಸಹಿತಂ ಸಾಂಗಂ ಸಾಯುಧಂ ಸವಾಹನಂ ಸಪರಿವಾರಂ ಸಶಕ್ತಿ ಸಪುತ್ರ ಸರ್ವಾಲಂಕಾರ ಭೂಷಿತಂ ಅದಿದೇವತಾ ಪ್ರತ್ಯಧಿದೇವತಾ ಸಹಿತಂ ಅಗ್ನಿಮೂರ್ಧೇತಿ ವಿರೂಪ ಋಷಿಃ ಅಂಗಾರಕೋ ದೇವತಾ ಗಾಯತ್ರಿ ಛಂಧಃ ಅಂಗಾರಕಗ್ರಹ ಪ್ರೀತ್ಯರ್ಥೇ ಅಂಗಾರಕ ಗ್ರಹರಾಧನೇ ವಿನಿಯೋಗಃ ಅಗ್ನಿರ್ಮಾದಿವಃ ಕಕುತ್ಪತಿಃ ಪೃಥಿವ್ಯಾ ಆಯುಂ| ಅಪಾಂರೇತಾಂಸಿಜಿನ್ವತಿ||ಸೂರ್ಯಾಸ್ಯ ದಕ್ಷಿಣ|ಆಗ್ನೇಯ ದಿಗ್ಬಾಗೇ ಅದಕಧಾನ್ಯಸ್ಕೋಪರಿ(ತುಗರಿ)ತ್ರಿಕೋಣಾಕಾರ ಮಂಡಲೇ ಮದ್ಯೇ ಓಂ ಭೂರ್ಭುವಸ್ವಃ ಅಂಗಾರಕ ಗ್ರಹಮಾವಾಹಯಾಮಿ|ಸ್ಥಾಪಯಾಮಿ ಪೂಜಯಾಮಿ| ೪.ಬುಧ(ಸೌಮ್ಯ) ಈಶಾನ್ಯಪತ್ರ‍ೇ/ದಕ್ಷಿಣಪತ್ರೇ ಬುಧಾಯ ನಮಃ ಪ್ರಸನ್ನಪಾಣಿಕಂ ಪೀತವರ್ಣಂ ಮಗಧ ದೇಶಜಂ ಅತ್ರೇಯ ಗೋತ್ರಜಂ ವಿಷ್ಣುನಾರಾಯಣ ಸಹಿತಂ ಸಾಂಗಂ ಸಾಯುಧಂ ಸವಾಹನಂ ಸಪರಿವಾರಂ ಸಶಕ್ತಿ ಸಪುತ್ರ ಸರ್ವಾಲಂಕಾರ ಭೂಷಿತಂ ಅಧಿದೇವತಾ ಪ್ರತ್ಯಧಿದೇವತಾ ಸಹಿತಂ ಬ್ರಹ್ಮಜ್ಞಾನಮಿತಿಜಜ್ಞಾನ ಋಷಿಃ ಬುಧೋದೇವತಾ ತ್ರಿಷ್ಟುಪ್ ಛಂಧಃ ಬುಧಗ್ರಹ ಪ್ರೀತ್ಯರ್ಥೇ ಬುಧಗ್ರಹಾರಾಧನೇ ವಿನಿಯೋಗಃ ಬ್ರಹ್ಮಜಜ್ಞಾನಂ ಪ್ರಥಮಂ ಪುರಸ್ತಾದ್ವಿಸೀಮತಸ್ಸುರುಚೋವೇನ ಅವಃ|ಸಬುಧ್ರ್ಯಾ ಉಪಮಾ ಅಸ್ಯ ವಿಷ್ಠಾಸ್ವತಶ್ಚಯೋನಿ ಮಸತಶ್ಚವಿವಃ|| ಸೂರ್ಯಸ್ಯ ಈಶಾನ್ಯ/ದಕ್ಷಿಣದಿಗ್ಬಾಗೇ ಮುದ್ಗಧಾನ್ಯಸ್ಕೋಪರಿ(ಹೆಸರು)ಬಾಣಾಕಾರ ಮಂಡಲೇ ಓಂ ಭೂರ್ಭುವಸ್ವಃ ಬುಧಗ್ರಹ ಆವಾಹಯಾಮಿ|ಸ್ಥಾಪಯಾಮಿ ಪೂಜಯಾಮಿ| ೫.ಗುರು(ಬೃಹಸ್ಪತಿ) ಉತ್ತರ ಪತ್ರೇ ಬೃಹಸ್ಪತಯೇ ನಮಃ ಪ್ರಸನ್ನ ಪಾಣಿಕಂ ಹೇಮ ವರ್ಣಂ ಸಿಂಧುದೇಶಜಂ ಅಂಗೀರಸಗೋತ್ರಜಂ ಇಂದ್ರ ಬ್ರಹ್ಮಸಹಿತಂ ಸಾಂಗಂ ಸಾಯುಧಂ ಸವಾಹನಂ ಸಪರಿವಾರಂ ಸಶಕ್ತಿ ಸಪುತ್ರ ಸರ್ವಾಲಂಕಾರ ಭೂಷಿತಂ ಅದಿದೇವತಾ ಪ್ರತ್ಯಧಿದೇವತಾ ಸಹಿತಂ ಬೃಹಸ್ಪತೇ ಪರಿದೀಯೋತ್ಯ ಪ್ರತಿ ಋಷಿಃ ಬೃಹಸ್ಪತಿದೇವತಾ ತ್ರಿಷ್ಟುಪ್ ಛಂಧಂ ಬೃಹಸ್ಪತಿ ಗ್ರಹ ಪ್ರೀತ್ಯರ್ಥೇ ಬೃಹಸ್ಪತಿ ಗ್ರಹಾರಾಧನೇ ವಿನಿಯೋಗಃ ಬೃಹಸ್ಪತೇ ಪರಿದೀಯಾರಾಧೇನರಕ್ಷೋಹಾಮಿತ್ರಾಃ ಅಪಚಾಧಮನಃ |ಪ್ರಭಂಜಸ್ಸೀನಾಃ ಪ್ರಮೃಣೋಯುಥಾಜಯನ್ನಸ್ಮಾಕ ಮೇದ್ಯ ವಿತಾರಥಾನುಂ|| ಸೂರ್ಯಸ್ಯ ಉತ್ತರ ದಿಗ್ಬಾಗೇ ಚಣಕಧಾನ್ಯಸ್ಕೋಪರಿ(ಕಡಲೆ)ದೀರ್ಘ ಚತುರಾಕಾರ ಮಂದಲೇ ಓಂ ಭೂರ್ಭುವಸ್ವಃ ಬೃಹಸ್ಪತಿ ಗ್ರಹಮಾವಾಹಯಾಮಿ |ಸ್ಥಾಪಯಾಮಿ ಪೂಜಯಾಮಿ

ಗುರುಜಿಯವರ ಕೆಲವು ಮುದ್ರೆ ಮಂತ್ರಗಳು

ಹೊಟ್ಟೇನೋವಿಗಾಗಿ ಮಂತ್ರ ತಂತ್ರಗಳು ದಿಕ್ಕು: ಉತ್ತರ ದಿಕ್ಕು ಸಿದ್ದಿಮಾಡಿಕೊಳ್ಳಲು ೧೦ಸಾವಿರ ಜಪ ಅವಶ್ಯಕ ಸಿದ್ದಿಗಾಗಿ ಅಮಾವಾಸ್ಯೆ/ಹುಣ್ಣಿಮೆ/ಗ್ರಹಣಕಾಲ ಸೂಕ್ತ ಮಂತ್ರ: ಓಂ ನಮೋ ಭಗವತೇ ಓಂ ನಮೋ ರೂಪಿಣಿ ನಾಗಾಣಿ ನಾಗಾತಾಕಿ ರಕ್ಷಿಣೀ ಪಿಶಾಚಿ ಭಸ್ಮಾಂಗೀ ಹೃತಂತು ವಿರಾಣಿ ಹೃಂ ಹೃಂ ಫಟ್ ಸ್ವಾಹಾ ನಿತ್ಯ ೧೦೮ಸಲ ಜಪಿಸ ಬಹುದು ತಂತ್ರ: ಒಂದು ಚಂಬಲ್ಲಿ ನೀರು ಸ್ವಲ್ಪ ಅಡಿಗೆ ಅರಿಸಿಣ ಹಾಕಿ ಈ ಮಂತ್ರದಿಂದ ಅಭಿಮಂತ್ರಿಸಿ ಉದರನೋವು,ಉದರ ಉಬ್ಬರ,ಮಾಸಿಕಋತುವಿನಹೊಟ್ಟೇನೋವು,ಬೇಧಿ,ಅಜೀರ್ಣಹೊಟ್ಟೇನೋವು,ಮಾಟದಿಂದ ಹೊಟ್ಟೇನೋವು,ಹೊಟ್ಟೇ ಉರಿ ಇವೆಲ್ಲವುಗಳು ೧೦ನಿಮಿಷದಲ್ಲಿ ನಿವಾರಣೆಯಾಗುತ್ತವೆ.ಸಿದ್ದಿಮಾಡಿಕೊಳ್ಳಬೇಕಾದ್ದು ಅಗತ್ಯ. ಅಥವ ವಿಳೇದೆಲೆಯನ್ನು ಈ ಮಂತ್ರದಿಂದ ಅಭಿಮಂತ್ರಿಸಿ ನೋವಿರುವವರಿಗೆ ಎಲೆಯನ್ನು ಮೂರು ಕಡೆ ತೂತು ಮಾಡಿ ತಿನ್ನಿಸಿದರೆ ಮೇಲಿನ ಎಲ್ಲಾರೀತಿಯ ಉದರನೋವುಗಳು ಐದು ನಿಮಿಷದಲ್ಲಿ ನಿವಾರಣೆಯಾಗುತ್ತವೆ. ಮದ್ದೀಡಿನ ತಂತ್ರ: ಯಾಲಕ್ಕಿ/ ನಿಂಬೆಹಣ್ಣು ಈ ಮಂತ್ರದಿಂದ ಅಭಿಮಂತ್ರಿಸಿ ತಿನ್ನಿಸಲು ಈ ಸಮಸ್ಯೆಯಿಂದ ಪರಿಹಾರ ಅಥವ ಗರಡ ಅಥವ ಗರುಡಗಂಬವನ್ನು ಈ ಮಂತ್ರಜಪಿಸುತ್ತಾ ಪ್ರದಕ್ಷಿಣೆ ಮಾಡಿದರೆ ಈ ಸಮಸ್ಯೆಯ ನಿವಾರಣೆಯಾಗುತ್ತದೆ. ಪತಿ ಪತ್ನಿ ವಶೀಕರಣಕ್ಕೆ ಮಂತ್ರ ತಂತ್ರ: ಭಸ್ಮವನ್ನು ಈ ಮಂತ್ರದಿಂದ ಅಭಿಮಂತ್ರಿಸಿ ಹಣೆಗೆ ಹಚ್ಚಲು ಕೊಡುವುದರಿಂದಲು ಈ ಸಮಸ್ಯೆ ನಿವಾರಣೆಸಾದ್ಯ ಅಥವ ತಿನ್ನಬಹುದಾದ ಹಣ್ಣು ಅಭಿಮಂತ್ರಿಸಿ ತಿನ್ನಿಸಬಹುದು. ವಿಶಾಖ ನಕ್ಷತ್ರ ದಿನ ಅರಿಸಿನಕೊಂಬು ತಂದು ೧೦೦೮ಸಲ ಈ ಮಂತ್ರ ಜಪಿಸಿ ಮನೆಯಲ್ಲಿ ಇರುವವರ ಕೈಯಲ್ಲಿ ಮುಟ್ಟಿಸಿ ದೇವರಮುಂದೆ ಇಡುವುದರಿಂದ ಮನೆ ನೆಮ್ಮದಿ ಶಾಂತಿಯುಂಟಾಗುತ್ತದೆ. ತಂತ್ರ: ಕೊಬ್ಬರಿ ಎಣ್ಣೆ / ನಿಂಬೆಹಣ್ಣು ಈ ಮಂತ್ರದಿಂದ ಅಭಿಮಂತ್ರಿಸಿ ಎಣ್ಣೆ ತಲೆಗೆ ಹಾಕುವುದು ನಿಂಹಣ್ಣನ್ನು ಜೂಸ್ ಮಾಡಿ ಕುಡಿಸುವುದು ಅಥವ ಒಂದು ಚಮಚ ಕರಿಮೆಣಸು ೨ಚಮಚ ಕಲ್ಲುಪ್ಪು ಇವುಗಳನ್ನು ಈ ಮಂತ್ರದಿಂದ ೧೦೮ಸಲ ಅಭಿಮಂತ್ರಿಸಿ ಶನಿದೇವಾಲಯದಲ್ಲಿ ಶನಿದೇವರ ದೇವಾಲಯದ ಹಿಂಬಾಗದಲ್ಲಿ ಇಟ್ತುಬರುವುದು ನಿಮ್ಮ ಸಮಸ್ಯೆಗಳು ನಿವಾರಣೆಯಾಗುತ್ತವೆ. ವ್ಯಾಪಾರ ವೃದ್ದಿ ಯಂತ್ರ ತಂತ್ರ ಮಂತ್ರ: ಬುಜ ಪತ್ರ ರಕ್ತಚಂದನ ದಲ್ಲಿ ಈ ಯಂತ್ರ ಬರೆದು ತುಳಸಿಕಡ್ದಿಯಿಂದ ಬರೆಯಬೇಕು ಅಥವ ಬಿಳಿ ಹಾಳೆಯಲ್ಲಿ ಬರೆದು ಈ ಮಂತ್ರದಿಂದ ೧೦೮ಸಲ ಜಪಿಸಿ ಯತಾಶಕ್ತಿ ಧೂಪ ದೀಪಗಳಿಂದ ಪೂಜಿಸಿ ನಿಮ್ಮ ತಿಜೋರಿಯಲ್ಲಿ ಹಾಕಿ ಇಟ್ಟುಕೊಳ್ಳಿ ನಿಮ್ಮ ವ್ಯಾಪಾರದಲ್ಲಿ ಅಭಿವೃದ್ದಿಯುಂಟಾಗುತ್ತದೆ. ಸ್ವಂತ ಮನೆಗಾಗಿ ಮಂತ್ರ ತಂತ್ರ: ಭುಜಪತ್ರೆ/ಗಟ್ಟಿಯಾದ ಹಾಳೆಯಲ್ಲಿ ಅಷ್ಟಗಂಧವನ್ನು ನೀರಲ್ಲಿ ಕಲೆಸಿಕೊಂಡು ತುಳಸಿಕಡ್ಡಿಯಿಂದ ಈ ಯಂತ್ರಬರೆದು ಮೇಲಿನ ಮಂತ್ರದಿಂದ ಯತಾಶಕ್ತಿ ಪೂಜೆಮಾಡಿ ೧೦೮ಸಲ ೧೦೮ಹೂವುಗಳಿಂದ ಅರ್ಚಿಸುವುದು ದಿನ ಬೆಳಗ್ಗೆ ೭ದಿನಗಳು ಸತತವಾಗಿ ಪೂಜಿಸಿ ೮ನೇ ದಿನ ಹರಿಯುವ ನೀರಲ್ಲಿ ಬಿಟ್ಟು ಬರುವುದು ನಂತರ ೯ನೇ ದಿನ ಇದೇರೀತಿ ಯಂತ್ರ ಬರೆದು ಮತ್ತೆ ೭ದಿನ ೧೦೮ಹೂಗಳಿಂದ ಪೂಜಿಸಿ ೮ದಿನ ಪೂಜಿಸಿ ೯ನೇದಿನ ಹರಿವ ನೀರಲ್ಲಿ ಬಿಡುವುದು ಭರಣಿ ನಕ್ಷತ್ರ ಇರುವ ದಿನ ಅಥವ ಶನಿವಾರ ರಾಹುಕಾಲ ಬಿಟ್ಟು ಈ ತಂತ್ರವನ್ನು ಮಾಡುವುದು ಶತೃ ನಾಶಕ್ಕೆ ಸ್ತಂಬನ ಯಂತ್ರ ಮಂತ್ರ ತಂತ್ರ: ಬುಜಪತ್ರೆಯಲ್ಲಿ ಅಥವ ಬಿಳಿಹಾಳೆ ಅಥವ ತಾಮ್ರದ ತಗಡಿನಲ್ಲಿ ಈ ಯಂತ್ರವನ್ನು ಪೆನ್ನಿಂದ/ದಬ್ಬಳದಿಂದ ಬರೆಯುವುದು ಬೆಳಗ್ಗೆ ಸಂಜೆ ನಿತ್ಯ ೧೦೮ಸಲ ಮಂತ್ರ ಹೇಳಿ ಪೂಜಿಸುವುದು.೨೧ದಿನ ೪೧ದಿನ ಪೂಜಿಸಿ ಯಾವುದಾದರು ನಿರ್ಜನ ಪ್ರದೇಶದಲ್ಲಿ ನೆಲದಲ್ಲಿ ಹಳ್ಳತೆಗೆದು ಮುಚ್ಚಿಬಿಟ್ಟರೆ ನಿಮ್ಮ ಶತೃ ನಿಮ್ಮ ತಂಟೆಗೆ ಬರಲಾರನು. ಎಲೆ ತಗೆದುಕೊಂಡು ಅದರಲ್ಲಿ ರಕ್ತಚಂದನವನ್ನು ಶಾಹಿ ಮಾಡಿಕೊಂಡು ತುಳಸಿಕಡ್ಡಿ/ದಾಳಿಂಬೆ ಕಡ್ಡಿಯಿಂದ ಮಂತ್ರ ಬರೆದು ಮದ್ಯದಲ್ಲಿ ಶತೃವಿನ ಹೆಸರು ಬರೆದು ಪೂಜಿಸಿ ನಿರ್ಜನ ಪ್ರದೇಶದಲ್ಲಿ ಅಥವ ಹುಣಸೇಮರದ ಬುಡದಲ್ಲಿ ಅಥವ ಸ್ಮಶಾನದಲ್ಲಿ ಹೂತು ಬರುವುದರಿಂದ ನಿಮ್ಮ ಬಹಿರಂಗಶತೃವು ನೀವು ಬದುಕಿರುವವರೆಗೂ ನಿಮಗೆ ಅವನಿಂದ ಯಾವುದೇ ತೊಂದರೆ ಆಗುವುದಿಲ್ಲ (ಸೂಚನೆ: ನಿಮಗೆ ನಿಜವಾಗಲು ಶತೃವಾಗಿದ್ದಲ್ಲಿ ಮಾತ್ರ ಮಾಡುವುದು ಇಲ್ಲವಾದಲ್ಲಿ ಈ ತಂತ್ರದ ಪರಿಣಾಮ ನಿಮಗೇ ಆಗುವುದು ಎಚ್ಚರವಾಗಿರಿ) ಪುಷ್ಯನಕ್ಷತ್ರ ಅಥವ ಅಮಾವಾಸ್ಯೆ/ಹುಣ್ಣಿಮೆ ಯಲ್ಲಿ ಬರೆದು ೭ದಿನ ಪೂಜಿಸಿ ನಿರ್ಜನ ಪ್ರದೇಶದಲ್ಲಿ ಹೂತು ಬರುವುದು (ರಕ್ತಚಂದನ ಸಿಗದಿದ್ದಲ್ಲಿ ಕಪ್ಪು ಕಾಡಿಗೆಯನ್ನು ಬರೆಯಲು ಉಪಯೋಗಿಸಬಹುದು) ರಕ್ತ ಚಂದನ ಬುಜಪತ್ರೆಯಲ್ಲಿ ತಾಮ್ರದ ತಗಡಲ್ಲಿ ದಬ್ಬಳದಿಂದ /ಬಿಳಿ ಹಾಳೆಯಲ್ಲಿ ಬರೆದು ನಿತ್ಯ ಬೆಳಗೆ ಸಂಜೆ ಪೂಜೆಮಾಡುವುದು ದಿನಕಳೆದಂತೆ ನಿಮ್ಮ ಶತೃ ವಶವಾಗುತ್ತಾನೆ.ಯಂತ್ರದ ಮದ್ಯದಲ್ಲಿ ಶತೃವಿನ ಹೆಸರು ಬರೆದು ಪೂಜಿಸಿರಿ. ಕತ್ತೆಯ ಮೂತ್ರವನ್ನು ತಗೆದುಕೊಂಡು ಮೂರು ಅಥವ ನಾಲ್ಕುದಾರಿ ಕೂಡಿರುವ ಕಡೆ ಮಣ್ಣಿನಲ್ಲಿ ಯಾವುದಾದರು ಕಡ್ಡಿಯಿಂದ ಈ ಯಂತ್ರವನ್ನು ಬರೆದು ಯಂತ್ರದ ಕೆಳಗೆ ನಿಮ್ಮ ವೈರಿಯ ಹೆಸರನ್ನು ಬರೆದು ನಿಮ್ಮ ಎಡಕಾಲಿನ ಎಕ್ಕಡದಿಂದ(ಚಪ್ಪಲಿ)ನಿಮ್ಮವೈರಿಯನ್ನು ಮನಸಲ್ಲಿ ಕಲ್ಪಿಸಿಕೊಂಡು ನಿಮ್ಮ ಮನಸಿಗೆ ಸಮಾದಾನವಾಗುವವರೆಗೂ ನೀವು ಬರೆದಿರುವ ಯಂತ್ರಕ್ಕೆ ನಿಮ್ಮ ಚಪ್ಪಲಿಯಿಂದ ಹೊಡೆಯುವುದು ನೀವು ಯಂತ್ರ ಬರೆಯುವ ಮುನ್ನ ಕತ್ತೆಯ ಮೂತ್ರವನ್ನು ನೀವು ಯಂತ್ರಬರೆಯುವ ಮಣ್ಣಿನಲ್ಲಿ ಹಾಕಿ ನಂತರ ಯಂತ್ರವನ್ನು ಬರೆಯಬೇಕು ಈ ತಂತ್ರ ಬರೆಯುವುದರಿಂದ ನಿಮ್ಮ ಶತೃ ನೀವು ಬದುಕಿರುವವರೆಗೂ ನಿಮಗೆ ತೊಂದರೆ ನೀಡಲಾಗುವುದಿಲ್ಲ. ಸರ್ವ ರೋಗ ನಿವಾರಕ ಮಂತ್ರ ಓಂ ನಮೋ ಭಗವತೇ ಚಿಂತಾಮಣಿ ಹನುಮಾನ ಅಂಗಶೂಲ,ಅಕ್ಷಿಶೂಲ,ಕಟಿಶೂಲ,ಕುಕ್ಷಿಶೂಲ,ಗುದಶೂಲ,ಮಸ್ತಕಶೂಲ,ಸರ್ವಶೂಲ ನಿರ್ಮೂಲಾಯ ನಿರ್ಮೂಲಾಯ ಕುರು ಕುರು ಸ್ವಾಹಾ ಸೌಭಾಗ್ಯಕರ ಮಂತ್ರ ಓಂ ನಮೋ ಶ್ರೀ ಸೂರ್ಯಾಯ ಸಹಸ್ರ ಕಿರಣಾಯ ಇಷ್ಟಾರ್ಥ ಸಿದ್ದಿಕರಾಯ ಮನೋವಾಂಚಿತ ಪೂರಯ ಕಷ್ಟಂ ಚೂರಯ ಚೂರಯ ಓಂ ಶ್ರೀಂ ಸೂರ್ಯಾಯ ನಮಃ ಸರ್ವ ಸೌಭಾಗ್ಯಂ ದೇಹಿ ದೇಹಿ ಸಕಲ ದರಿದ್ರ ನಿವಾರಣೆಗಾಗಿ ಯಂತ್ರ ಗಂಧವನ್ನು ಶಾಹಿಯಾಗಿ ಉಪಯೋಗಿಸಿ ತುಳಸಿಕಡ್ಡಿ ಅಥವ ದಾಳಿಂಬೆ ಕಡ್ಡಿಯಿಂದ ಶ್ರವಣ ನಕ್ಷತ್ರ ಭಾನುವಾರ ಇರುವ ದಿವಸ ನೀವು ನಿತ್ಯ ಊಟಮಾಡುವ ಊಟದತಟ್ಟೆಯಲ್ಲಿ(ಕಂಚು,ತಾಮ್ರ,ಹಿತ್ತಾಳೆ,ಬೆಳ್ಳಿ,ಸಾಮಾನ್ಯವಾಗಿ ನೀವು ಬಳಸುವ ಊಟದ ತಟ್ಟೆ) ಈ ಯಂತ್ರವನ್ನು ಬರೆದು ಬರಿಯ ಹೂಗಳಿಂದ ಮಾತ್ರ ನಿಮಗೆ ತಿಳಿದಂತೆ ಪೂಜಿಸಿ (ಕುಂಕುಮ ಅರಿಸಿಣ ಬಳಸಬೇಡಿ)ನಂತರ ಅದೇ ಯಂತ್ರ ಇರುವ ತಟ್ಟೆಯಲ್ಲಿ ಊಟವನ್ನು ಮಾಡಿ ತಟ್ಟೆಯನ್ನು ತಗೆದಿಡಿ ಈ ತಂತ್ರವನ್ನು ೩ ಸಲ ಮಾಡಿದರೆ ನಿಮ್ಮ ಎಲ್ಲರೀತಿಯ ದರಿದ್ರವು ನಿವಾರಣೆಯಾಗುತ್ತದೆ. ಸಕಲ ವಿಷಯಗಳಲ್ಲಿ ಜಯಕ್ಕಾಗಿ (ಕೋರ್ಟ್ ಕೇಸ್ ನಲ್ಲಿ ಜಯಕ್ಕಾಗಿ)ಈ ಮಂತ್ರವನ್ನು ಈ ಮುದ್ರೆಯೊಂದಿಗೆ ಅಮಾವಾಸ್ಯೆ ಹುಣ್ಣಿಮೆಯಂದು ೧೦ಸಲ ಜಪಿಸಿ ತಂತ್ರ: ಸಂಪಿಗೆ ಹೂವು ಅಥವ ಹಸಿರು ಹೂವು ಅಥವ ಬಿಳಿಹೂವು ಅಥವ ಯಾವುದಾದರೂ ಹೂವು ನಿಮ್ಮ ವಯಸ್ಸಿನಷ್ಟು ತಗೆದುಕೊಂಡು ನಿಮ್ಮ ಬೊಗಸೆಯಲ್ಲಿ ಇಟ್ಟುಕೊಂಡು ಉತ್ತರಕ್ಕೆ ಮುಖಮಾಡಿಕೊಂಡು ೧೦೮ಸಲ ಈ ಮಂತ್ರವನ್ನು ಹೇಳುತ್ತಾ ಅಭಿಮಂತ್ರಿಸಿ ಆ ಹೂವುಗಳನ್ನು ಯಾವುದಾದರು ಪದ್ಮಾವತಿ/ಲಕ್ಷ್ಮಿ/ಅಥವ ದೇವಿ ದೇವಾಲಯದಲ್ಲಿ ದೇವರ ಪಾದಗಳಿಗೆ ಸಮರ್ಪಿಸಬೇಕು ಅಥವ ನಿಮ್ಮ ಮನೆಯಲ್ಲೇ ಇರುವ ಸ್ತ್ರೀ ದೇವತಾ ಪಾದಗಳಿಗೆ ಅರ್ಪಿಸಬೇಕು. ವಾಸಮಾಡುವ ಮನೆಯಲ್ಲಿ ಮತ್ತು ಪರಿಸರದಲ್ಲಿ ಶತೃಗಳ ನಿವಾರಣೆ ದೋಷನಿವಾರಣೆಗಾಗಿ ಈ ಮುದ್ರೆ ಶತೃಗಳ ನಿವಾರಣೆಗಾಗಿ ತಂತ್ರ ತುಳಸಿ ೫.೧೦.೧೫.೧೧.೨೧ ಚಂಬಲ್ಲಿ ನೀರಲ್ಲಿ ತುಲಸಿ ಹಾಕಿ ಈ ಮಂತ್ರವನ್ನು ೧೦೮ಸಲ ಜಪಿಸಿ ಈ ನೀರನ್ನು ಮನೆಗೆಲ್ಲಾ ಪ್ರೋಕ್ಷಣೆಮಾಡಿದರೆ ಮತ್ತು ಈ ನೀರನ್ನು ಸೇವನೆ ಮಾಡುವುದು.ಇದರಿಂದ ಶತೃಗಳು ನಿವಾರಣೆಯಾಗುತ್ತವೆ. ಪ್ರತ್ಯಂಗಿರಾ ಮಂತ್ರ ವಾಸ್ತು ದೋಷಕ್ಕೆ ಸಮಸ್ತ ವಾಸ್ತು ದೋಷಗಳು ಪಾಪಗಳು ಜಾತಕ ದೋಷಗಳು ನಿವಾರಣೆಗಾಗಿ ಪ್ರತಿ ಅಮಾವಾಸ್ಯೆ ಹುಣ್ಣಿಮೆ ಗ್ರಹಣಕಾಲದಲ್ಲಿ ಅಥವ ಜನ್ಮದಿನ ದಂದು ಪ್ರತ್ಯಂಗಿರಾ ಮಾಲಾ ಮಂತ್ರ ಅಥವ ಲಘುಮಂತ್ರವನ್ನು ೧೦೮ಸಲ ಮುದ್ರೆಯೊಂದಿಗೆ ಜಪಿಸಿದರೆ ಎಲ್ಲಾ ಸಮಸ್ಯೆಯಿಂದ ಪರಿಹಾರ ದೊರೆಯುತ್ತದೆ.